Tag: terrorists

  • ಭಾರತದ ಹಾನಿಯ ಒಂದೇ ಒಂದು ಫೋಟೋ ತೋರಿಸಿ – ವಿದೇಶಿ ಮಾಧ್ಯಮಗಳ ವಿರುದ್ಧ ದೋವಲ್‌ ಕೆಂಡಾಮಂಡಲ

    ಭಾರತದ ಹಾನಿಯ ಒಂದೇ ಒಂದು ಫೋಟೋ ತೋರಿಸಿ – ವಿದೇಶಿ ಮಾಧ್ಯಮಗಳ ವಿರುದ್ಧ ದೋವಲ್‌ ಕೆಂಡಾಮಂಡಲ

    ಚೆನ್ನೈ: ಭಾರತದ ಯಾವುದೇ ರಚನೆಗೆ ಹಾನಿಯಾಗಿರುವ ಬಗ್ಗೆ ಒಂದೇ ಒಂದು ಫೋಟೋವನ್ನ ತೋರಿಸಲಿ. ವಿದೇಶಿ ಮಾಧ್ಯಮಗಳು (Foreign Media) ಪಾಕಿಸ್ತಾನ ಹೇಳಿದ್ದನ್ನೇ ಮಾಡಿ ಬರೀ ಸುಳ್ಳು ಸುದ್ದಿಗಳನ್ನೇ ಬಿತ್ತರಿಸಿವೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್‌ (Ajit Doval) ಕಿಡಿಕಾರಿದ್ದಾರೆ.

    ತಮಿಳುನಾಡಿನ ಐಐಟಿ ಮದ್ರಾಸ್‌ನಲ್ಲಿ (IIT Madras) ನಡೆದ 62ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ದೋವಲ್, ಆಪರೇಷನ್ ಸಿಂಧೂರ (Operation Sindoor) ಕಾರ್ಯಾಚರಣೆಯ ಬಗ್ಗೆ ವಿದೇಶಿ ಮಾಧ್ಯಮಗಳು ಮಾಡಿದ ವರದಿಯನ್ನ ತೀವ್ರವಾಗಿ ಖಂಡಿಸಿದರು. ವಿದೇಶಿ ಮಾಧ್ಯಮಗಳು ಭಾರತೀಯ ಯಾವುದೇ ರಚನೆಗೆ ಹಾನಿಯಾಗಿರುವುದನ್ನು ತೋರಿಸುವಲ್ಲಿ ವಿಫಲವಾಗಿವೆ. ಬರೀ ಸುಳ್ಳು ಸುದ್ದಿಗಳನ್ನೇ ಹರಡಿವೆ ಎಂದು ವಾಗ್ದಾಳಿ ನಡೆಸಿದರಲ್ಲೇ ಭಾರತಕ್ಕೆ (India) ಯಾವುದೇ ಹಾನಿಯಾಗಿಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಕೊನೆಗೂ ಭಾರತಕ್ಕೆ ಬಂತು ಟೆಸ್ಲಾ| ಮುಂದಿನ ವಾರ ಶೋರೂಂ ಓಪನ್‌ – EV ಕಾರಿನ ಬೆಲೆ ಎಷ್ಟು?

    ಮೇ 7ರ ಮಧ್ಯರಾತ್ರಿ ಭಾರತೀಯ ಸೇನಾಪಡೆಗಳ (Indian Armed Force) ಕಾರ್ಯಾಚರಣೆಯನ್ನು ಶ್ಲಾಘಿಸಿದ ದೋವಲ್‌, ನಮ್ಮ ಸಶಸ್ತ್ರ ಪಡೆಗಳು ನಿಖರ ಗುರಿಗಳನ್ನು ಹೊರತುಪಡಿಸಿ ಬೇರೆಲ್ಲಿಯೂ ದಾಳಿ ಮಾಡಲಿಲ್ಲ. ಶತ್ರು ಪ್ರದೇಶದಲ್ಲಿರುವ ಭಯೋತ್ಪಾದಕ ಶಿಬಿರಗಳ ಮೇಲಷ್ಟೇ ದಾಳಿ ಮಾಡಿದವು. ಭಾರತದ ಈ ಪ್ರತೀಕಾರದ ದಾಳಿಯಲ್ಲಿ 100ಕ್ಕೂ ಹೆಚ್ಚು ಉಗ್ರರು ಹತರಾದರು. 23 ನಿಮಿಷಗಳ ಕಾಲ ಸಂಪೂರ್ಣ ಕಾರ್ಯಾಚರಣೆ ನಡೆದಿತ್ತು ಎಂದು ತಿಳಿಸಿದರು. ಇದನ್ನೂ ಓದಿ: ಟೆನ್ನಿಸ್‌ ತಾರೆಯ ಕೊಲೆಗೆ ಸ್ಫೋಟಕ ಟ್ವಿಸ್ಟ್‌ – ಮ್ಯೂಸಿಕ್‌ ಆಲ್ಬಂಗೆ ಸಿಟ್ಟಾಗಿ ಮಗಳ ಹತ್ಯೆ?

    ವಿದೇಶಿ ಮಾಧ್ಯಮಗಳು ಪಾಕಿಸ್ತಾನ (Pakistan) ಹೇಳಿದ ಹಾಗೆ ಮಾಡಿವೆ. ಭಾರತ ರಚನೆಗಳಿಗೆ ಹಾನಿಯಾಗಿರುವ ಬಗ್ಗೆ ಒಂದೇ ಒಂದು ಫೋಟೋ ನನಗೆ ತೋರಿಸಲಿ. ಒಂದೇ ಒಂದು ಗಾಜನ್ನು ಸಹ ಒಡೆದಿಲ್ಲ. ವಿದೇಶಿ ಮಾಧ್ಯಮಗಳು ಹಲವು ವಿಷಯಗಳನ್ನ ಪ್ರಕಟಿಸಿವೆ. ಕೆಲವು ಆಯ್ದ ಚಿತ್ರಗಳ ಆಧಾರದ ಮೇಲೆ ಅವರು ಪಾಕಿಸ್ತಾನದ 13 ವಾಯುನೆಲೆಗಳ ಬಗ್ಗೆ ಹಲವು ವಿಷಯಗಳನ್ನ ಹೇಳಿದ್ದಾರೆ. ಆದ್ರೆ ಮೇ 10ರ ಮೊದಲು ಮತ್ತು ನಂತರ ಪಾಕಿಸ್ತಾನದ ಸರ್ಗೋಧಾ, ರಹೀಮ್ ಯಾರ್ ಖಾನ್, ಚಕ್ಲಾಲಾ ಸೇರಿದಂತೆ 13 ವಾಯುನೆಲೆಗಳ ಉಪಗ್ರಹ ಚಿತ್ರಗಳನ್ನು ನೋಡಿದ್ರೆ ಎಲ್ಲವೂ ಸ್ಪಷ್ಟವಾಗುತ್ತದೆ. ಈ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ವಾಯುನೆಲೆಗಳಿಗೆ ಹಾನಿಯಾಗಿರೋದು ಸ್ಪಷ್ಟವಾಗಿದೆ ಎಂದು ಅವರು ವಿವರಿಸಿದರು.

    ಮೇ 14 ರಂದು ಪ್ರಕಟವಾದ ಲೇಖನದಲ್ಲಿ ಭಾರತೀಯ ಕ್ಷಿಪಣಿ ದಾಳಿಯಲ್ಲಿ ಪಾಕಿಸ್ತಾನದ ವಾಯುನೆಲೆಗಳು ಹಾನಿಗೊಳಗಾಗಿವೆ ಎಂಬುದನ್ನು ನ್ಯೂಯಾರ್ಕ್ ಟೈಮ್ಸ್ ಒಪ್ಪಿಕೊಂಡಿದೆ. ದಾಳಿಯ ಮೊದಲು ಮತ್ತು ನಂತರದ ಹೈ-ರೆಸಲ್ಯೂಶನ್ ಉಪಗ್ರಹ ಚಿತ್ರಗಳು ಇದಕ್ಕೆ ಕನ್ನಡಿ ಹಿಡಿದಿವೆ ಎಂದು ಹೇಳಿದರು. ಇದನ್ನೂ ಓದಿ:  ಕೆನಡಾ ಮೇಲೆ 35% ಸುಂಕ ವಿಧಿಸಿದ ಟ್ರಂಪ್ – ಪ್ರತೀಕಾರಕ್ಕೆ ಮುಂದ್ರಾದ್ರೆ ಇನ್ನಷ್ಟು ಸುಂಕ ವಿಧಿಸುವುದಾಗಿ ವಾರ್ನಿಂಗ್‌

    ಮುಂದುವರಿದು… ತಂತ್ರಜ್ಞಾನ ಮತ್ತು ಯುದ್ಧದ ನಡುವಿನ ಸಂಬಂಧ ಯಾವಾಗಲೂ ಮುಖ್ಯ. ಆಪರೇಷನ್ ಸಿಂಧೂರದ ಬಗ್ಗೆ ನಮಗೆ ಹೆಮ್ಮೆ ಇದೆ. ಈ ಕಾರ್ಯಾಚರಣೆಯ ಸಮಯದಲ್ಲಿ ನಾವು ಸ್ಥಳೀಯ ತಂತ್ರಜ್ಞಾನವನ್ನೇ ಬಳಸಿದ್ದೇವೆ ಅನ್ನೋದು ಮತ್ತೊಂದು ಹೆಮ್ಮೆ. ಗಡಿಯಾಚೆಗಿನ 9 ಉಗ್ರ ನೆಲೆಗಳ ಮೇಲೆ ದಾಳಿ ಮಾಡಲು ನಾವು ನಿರ್ಧರಿಸಿದ್ದೆವು. ಅದರಂತೆ ನಮ್ಮ ಎಲ್ಲಾ ಗುರಿಗಳು ನಿಖರವಾಗಿದ್ದವು ಎಂದು ಶ್ಲಾಘಿಸಿದರಲ್ಲದೇ, ಭಾರತವು ಅಂತಹ ತಂತ್ರಜ್ಞಾನವನ್ನು ಇನ್ನಷ್ಟು ಅಭಿವೃದ್ಧಿಪಡಿಸಬೇಕಾಗಿದೆ ಎಂದು ಸಲಹೆ ನೀಡಿದರು.

  • ಉಗ್ರರಿಗೆ ನೆರವು ನೀಡಿದ್ದ ಕೇಸ್‌ – ಎಎಸ್‌ಐ ಚಾಂದ್ ಪಾಷಾ ವಿರುದ್ಧ ಇಲಾಖೆ ಹಂತದ ತನಿಖೆಗೆ ಆದೇಶ

    ಉಗ್ರರಿಗೆ ನೆರವು ನೀಡಿದ್ದ ಕೇಸ್‌ – ಎಎಸ್‌ಐ ಚಾಂದ್ ಪಾಷಾ ವಿರುದ್ಧ ಇಲಾಖೆ ಹಂತದ ತನಿಖೆಗೆ ಆದೇಶ

    – ವಿದೇಶದಿಂದಲೇ ಸ್ಕೇಚ್ ರೆಡಿ ಮಾಡಿದ್ದ ಶಂಕಿತ ಝನೈದ್
    – ಪ್ಲಾನ್-ಬಿ ಟೀಂ ಬೆನ್ನುಬಿದ್ದ ಎನ್‌ಐಎ ಅಧಿಕಾರಿಗಳು

    ಬೆಂಗಳೂರು: ರಾಷ್ಟ್ರೀಯ ತನಿಖಾ ದಳದ (NIA) ಅಧಿಕಾರಿಗಳು ಮೂವರು ಶಂಕಿತರನ್ನು ಬಂಧನ ಮಾಡಿದ ಬೆನ್ನಲ್ಲೇ ಹಲವು ವಿಚಾರಗಳು ಒಂದೊಂದೇ ಹೊರಗೆ ಬರ್ತಿವೆ.

    ಪರಪ್ಪನ ಅಗ್ರಹಾರ (Parappana Agrahara) ಜೈಲಿನಲ್ಲಿರುವ ಉಗ್ರ (Terrorist) ನಾಸೀರ್‌ನನ್ನ ಜೈಲಿನಿಂದ ಎಸ್ಕೇಪ್ ಮಾಡಿಸಲು ಪ್ಲ್ಯಾನ್‌ ಮಾಡಿದ್ದ ಟೀಂ, ಕಳೆದ ಎರಡು ವರ್ಷಗಳ ಹಿಂದೆ ಸಿಸಿಬಿ ಕೈಗೆ ಸಿಕ್ಕಿಬಿದ್ದಿದ್ರು. ಈ ವೇಳೆ ಕೃತ್ಯಕ್ಕೆ ಬಳಸಲು ರೆಡಿ ಮಾಡಿದ್ದ ಹಲವು ಸ್ಟೋಟಕಗಳನ್ನ ಬಯಲಿಗೆಳೆದಿದ್ದರು. ಇದರಿಂದ ಶಾಕ್‌ಗೆ ಒಳಗಾದ ಝನೈದ್, ನಾಸೀರ್ ನನ್ನು ಏನಾದ್ರು ಮಾಡಿ ಹೊರಗೆ ತರಲೇಬೇಕು ಅಂತ ವಿದೇಶದಿಂದಲೇ ಪ್ಲಾನ್-ಬಿ ತಯಾರು ಮಾಡಿದ್ನಂತೆ.

    ಎಎಸ್‌ಐ ಚಾಂದ್ ಪಾಷ, ಸೇರಿದಂತೆ ಹಲವರನ್ನ ಬಳಸಿಕೊಂಡು ಆಸಕ್ತ ಮುಸ್ಲಿಂ ಯುವಕರ ಟೀಂ ಕಟ್ಟುವಂತೆ ಸೂಚಿಸಿದ್ದ. ಅಷ್ಟೇ ಅಲ್ದೇ ಅದಕ್ಕೆ ಬೇಕಾದ ಹಣಕಾಸಿನ ನೆರವು ಕೂಡ ಅಲ್ಲಿಂದಲೇ ಮಾಡ್ತಿದ್ದ ಅನ್ನೋದು ಗೊತ್ತಾಗಿದೆ. ಅಷ್ಟರಲ್ಲಿ ಎನ್‌ಐಎ ಅಧಿಕಾರಿಗಳ ಕೈಗೆ ಮೂವರು ಸಿಕ್ಕಿಬಿದ್ದಿದ್ದಾರೆ, ಕೆಲವರು ಮಾತ್ರ ಎಸ್ಕೇಪ್‌ ಆಗಿದ್ದಾರೆ. ಝನೈದ್‌ನ ಹುಡುಗರೆಲ್ಲಾ ಬಹುತೇಕ ಪರಪ್ಪನ ಅಗ್ರಹಾರ ಜೈಲಿನಲ್ಲೇ ಇರೋದರಿಂದ ಹೊಸದಾಗಿ ಆಸಕ್ತ ಯುವಕರನ್ನು ಒಟ್ಟುಗೂಡಿಸಿರೋ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಸಿಕ್ಕಿದೆ. ಹಾಗಾಗಿ ಇವರ ಪ್ಲ್ಯಾನ್‌-ಬಿ ಏನಾಗಿತ್ತು? ಇದರಲ್ಲಿ ಯರ‍್ಯಾರು ಇದ್ರು, ಯಾರ ಪಾತ್ರ ಏನಾಗಿತ್ತು? ಅನ್ನೋದರ ತೀವ್ರ ತನಿಖೆಗೆ ಇಳಿದಿದ್ದಾರೆ ಎನ್‌ಐಎ ಅಧಿಕಾರಿಗಳು..

    ಎಎಸ್‌ಐ ಚಾಂದ್ ಪಾಷಾ ವಿರುದ್ಧ ತನಿಖೆಗೆ ಆದೇಶ:
    ಇನ್ನೂ ಉಗ್ರರಿಗೆ ನೆರವು ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಆರ್ ಎಎಸ್‌ಐ ಚಾಂದ್ ಪಾಷಾ (ASI Chand Pasha) ವಿರುದ್ಧ ತನಿಖೆಗೆ ಪೊಲೀಸ್‌ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಆದೇಶಿಸಿದ್ದಾರೆ. ಇಲಾಖಾ ಹಂತದಲ್ಲಿ ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಿದ್ದಾರೆ.

    ಎನ್‌ಐಎ ಈಗಾಗಲೇ ತನಿಖೆ ನಡೆಸುತ್ತಿದೆ, ಮುಂದೆ ನಾವು ಕೂಡ ತನಿಖೆ ಮಾಡಿ ರಿಪೋರ್ಟ್‌ ಪಡೆಯುತ್ತೇವೆ. ಬಳಿಕ ಪೊಲೀಸ್ ಇಲಾಖೆಯಲ್ಲಿ ಏನ್ ಕ್ರಮ ಇದೆ ಅದನ್ನ ಕೈಗೊಳ್ತೀವಿ ಎಂದು ಪೊಲೀಸ್‌ ಆಯುಕ್ತರು ತಿಳಿಸಿದ್ದಾರೆ.

  • ʻಆಪರೇಷನ್‌ ಸಿಂಧೂರʼ ವೇಳೆ ಭಾರತ ಧ್ವಂಸಗೊಳಿಸಿದ್ದ ಮುರಿಡ್ಕೆ ಮಸೀದಿಯಲ್ಲಿ ಮತ್ತೆ ತಲೆಎತ್ತಿದ ಲಷ್ಕರ್‌ ಗುಂಪು; ವಿಡಿಯೋ ವೈರಲ್‌

    ʻಆಪರೇಷನ್‌ ಸಿಂಧೂರʼ ವೇಳೆ ಭಾರತ ಧ್ವಂಸಗೊಳಿಸಿದ್ದ ಮುರಿಡ್ಕೆ ಮಸೀದಿಯಲ್ಲಿ ಮತ್ತೆ ತಲೆಎತ್ತಿದ ಲಷ್ಕರ್‌ ಗುಂಪು; ವಿಡಿಯೋ ವೈರಲ್‌

    – ಮೋಸ್ಟ್‌ ವಾಂಟೆಡ್‌ಗಳನ್ನ ತಯಾರಿಸುತ್ತಿದ್ದ ಲಷ್ಕರ್‌ ಕೇಂದ್ರ

    ಇಸ್ಲಾಮಾಬಾದ್‌: ಆಪರೇಷನ್‌ ಸಿಂಧೂರ (Operation Sindoor) ಕಾರ್ಯಾಚರಣೆ ವೇಳೆ ಭಾರತ ಧ್ವಂಸಗೊಳಿಸಿದ್ದ ಲಷ್ಕರ್‌ ಪ್ರಧಾನ ಕಚೇರಿಯಾಗಿದ್ದ ಮುರಿಡ್ಕೆ ಮಸೀದಿಯಲ್ಲಿ (Muridke Headquarters) ಮತ್ತೆ ಉಗ್ರ ಚಟುವಟಿಕೆ ಸಕ್ರಿಯವಾಗಿದೆ ಎಂದು ತಿಳಿದುಬಂದಿದೆ. ಲಷ್ಕರ್-ಎ-ತೈಬಾ (LeT) ಗುಂಪಿನ ಕೆಲ ಉಗ್ರರು ಹಾನಿಗೊಳಗಾದ ಮಸೀದಿಯಲ್ಲೇ ನಮಾಜ್‌ ಮಾಡುತ್ತಿರುವ ವಿಡಿಯೋ ಇದಕ್ಕೆ ಸಾಕ್ಷಿಯಾಗಿದೆ.

    Operation Sindoor 1 1

    ಧಾರ್ಮಿಕ ಕಾರ್ಯಾಚರಣೆಯ ನೆಪದಲ್ಲಿ ಲಷ್ಕರ್‌ ಉಗ್ರರ ಕಾರ್ಯತಂತ್ರಗಳು ಮತ್ತೆ ಸಕ್ರಿಯಗೊಂಡಿವೆ ಎಂದು ಉನ್ನತ ಗುಪ್ತಚರ ಮೂಲಗಳು ಎಚ್ಚರಿಕೆ ನೀಡಿರುವುದಾಗಿ ವರದಿಯಾಗಿದೆ. ಎಲ್‌ಇಟಿ ಗುಂಪು ತನ್ನ ಮುರಿಡ್ಕೆ ಪ್ರಧಾನ ಕಚೇರಿಯಲ್ಲಿ ಕಳೆದ ಶುಕ್ರವಾರ ಪ್ರಾರ್ಥನೆ ಸಲ್ಲಿಸಿದೆ. ಈ ಮಂದಿರವು ಭಾರತದ ದಾಳಿಯಿಂದ ಹಾನಿಯಾಗಿರುವುದು ಕಂಡುಬಂದಿದೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲೂ ಸದ್ದು ಮಾಡುತ್ತಿದೆ. ಇದನ್ನೂ ಓದಿ: ಉತ್ತರ ಸಿಕ್ಕಿಂನಲ್ಲಿ ಭಾರೀ ಭೂಕುಸಿತ – ದುರ್ಘಟನೆಯಲ್ಲಿ ಮೂವರು ಸೈನಿಕರು ಬಲಿ, 6 ಸೈನಿಕರು ಮಿಸ್ಸಿಂಗ್

    ಎಲ್‌ಇಟಿ ಸಂಸ್ಥಾಪಕ ಹಫೀಜ್ ಸಯೀದ್ ಹಾಗೂ ಅವನ ಮಗ ತಲ್ಹಾ ಸಯೀದ್‌, ಸೋದರ ಮಾವ ಅಬ್ದುಲ್ ರೆಹಮಾನ್ ಮಕ್ಕಿ ನಿಯಮಿತವಾಗಿ ಧರ್ಮೋಪದೇಶ, ಜಿಗಾದಿ ಪ್ರವಚನಗಳನ್ನು ನೀಡುತ್ತಿದ್ದ ಅದೇ ಸಭಾಂಗಣ ಇದಾಗಿದೆ ಎಂದು ಗುಪ್ತಚರ ಮೂಲಗಳು ಹೇಳಿವೆ. ಇದನ್ನೂ ಓದಿ: ಪಂಜಾಬ್ ಪೊಲೀಸರ ಭರ್ಜರಿ ಕಾರ್ಯಾಚರಣೆ – 113 ಡ್ರಗ್ ಪೆಡ್ಲರ್‌ಗಳು ಅರೆಸ್ಟ್

    ಮುಜಫರಾಬಾದ್‌ನಲ್ಲಿ ದಾಳಿಯಲ್ಲಿ ಮೃತಪಟ್ಟ ವ್ಯಕ್ತಿಗೆ ಜನರು ಅಂತ್ಯಕ್ರಿಯೆಯ ಪ್ರಾರ್ಥನೆ ಸಲ್ಲಿಸುತ್ತಿರುವುದು

    ಏಪ್ರಿಲ್‌ 22ರ ಪಹಲ್ಗಾಮ್‌ ದಾಳಿಗೆ ಪ್ರತೀಕಾರವಾಗಿ ಮೇ 7ರ ತಡರಾತ್ರಿ ಭಾರತ ಆಪರೇಷನ್‌ ಸಿಂಧೂರ ಕಾರ್ಯಾಚರಣೆ ನಡೆಸಿತ್ತು. ರಾತ್ರೋ ರಾತ್ರಿ ನಡೆಸಿದ್ದ ದಾಳಿಯಲ್ಲಿ ನಿಷೇಧಿತ ಮೂರು ಉಗ್ರ ಸಂಘಟನೆಗಳಾದ ಜೈಶ್‌ ಎ ಮೊಹಮ್ಮದ್‌, ಲಷ್ಕರ್‌ ಎ ತೈಬಾ (LET) ಮತ್ತು ಹಿಜ್ಬುಲ್‌ ಮುಜಾಹಿದ್ದೀನ್‌ ಉಗ್ರರ ಪ್ರಧಾನ ಕಚೇರಿಗಳು ಧ್ವಂಸವಾಗಿದ್ದವು. ಪಾಕಿಸ್ತಾನ ಮತ್ತು ಪಾಕ್ ಅಕ್ರಮಿತ ಕಾಶ್ಮೀರದಲ್ಲಿರುವ 9 ಅಡಗುತಾಣಗಳ ಮೇಲೆ ಭಾರತೀಯ ವಾಯು ಸೇನೆ (IAF) ದಾಳಿ ನಡೆಸಿತ್ತು. ಭಾರತ ಧ್ವಂಸ ಮಾಡಿರುವ ಈ ಉಗ್ರರ (Terrorist) ನೆಲೆಗಳು ಮೋಸ್ಟ್‌ ಡೇಂಜರಸ್‌ ತಾಣಗಳು ಎಂದೇ ಗುರುತಿಸಿಕೊಂಡಿದ್ದು, ಇಡೀ ವಿಶ್ವಕ್ಕೆ ಕಂಟಕವಾಗಿದ್ದವು. ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಇಲ್ಲಿ ಅಡಗಿಸಿಡಲಾಗಿತ್ತು. ಜೊತೆಗೆ ವಿಶ್ವಾದ್ಯಂತ ವಿವಿಧೆಡೆಗೆ ಕಳುಹಿಸಲು ಇಲ್ಲಿ ತರಬೇತಿ ನೀಡಲಾಗುತ್ತಿತ್ತು ಅನ್ನೋ ಸ್ಫೋಟಕ ಮಾಹಿತಿ ಬೆಳಕಿಗೆ ಬಂದಿತ್ತು. ಅದಕ್ಕಾಗಿ ಭಾರತೀಯ ಸೇನೆಯು ನಾಗರಿಕರು ಮತ್ತು ಸೇನೆಯನ್ನ ಗುರಿಯಾಗಿಸದೇ ಕೇವಲ ಉಗ್ರರ ನೆಲೆಗಳನ್ನ ಗುರಿಯಾಗಿಸಿ ದಾಳಿ ನಡೆಸಿತ್ತು. ಇದನ್ನೂ ಓದಿ: ಟೆಸ್ಲಾಗೆ 2 ಶೋ ರೂಂ ತೆರೆಯುವ ಆಸಕ್ತಿ ಇದೆ, ಆದ್ರೆ ಭಾರತದಲ್ಲೇ ಕಾರು ಉತ್ಪಾದಿಸುವ ಆಸಕ್ತಿ ಇಲ್ಲ: ಹೆಚ್‌ಡಿಕೆ

  • ಉಗ್ರರು ಮತ್ತೆ ಹೆಡೆ ಬಿಚ್ಚಿದರೆ, ಹುತ್ತದಿಂದ ಎಳೆದು ತುಳಿಯುತ್ತೇವೆ: ಮೋದಿ ಖಡಕ್‌ ಸಂದೇಶ

    ಉಗ್ರರು ಮತ್ತೆ ಹೆಡೆ ಬಿಚ್ಚಿದರೆ, ಹುತ್ತದಿಂದ ಎಳೆದು ತುಳಿಯುತ್ತೇವೆ: ಮೋದಿ ಖಡಕ್‌ ಸಂದೇಶ

    – ಭಯೋತ್ಪಾದನೆ ವಿರುದ್ಧದ ಯುದ್ಧ ಇನ್ನೂ ನಿಂತಿಲ್ಲ:‌ ಪಾಕ್‌ಗೆ ಎಚ್ಚರಿಕೆ ಸಂದೇಶ

    ಪಾಟ್ನಾ: ಭಯೋತ್ಪಾದನೆ ವಿರುದ್ಧದ ಯುದ್ಧ ಇನ್ನೂ ನಿಂತಿಲ್ಲ ಎಂದು ಪಾಕಿಸ್ತಾನಕ್ಕೆ (Pakistan) ಪ್ರಧಾನಿ ನರೇಂದ್ರ ಮೋದಿ (PM Modi) ಎಚ್ಚರಿಕೆ ನೀಡಿದ್ದಾರೆ.

    ಶತ್ರುಗಳು ಆಪರೇಷನ್ ಸಿಂಧೂರ ಶಕ್ತಿಯನ್ನು ನೋಡಿದ್ದಾರೆ. ‘ಆಪರೇಷನ್‌ ಸಿಂಧೂರ’ ಭಾರತದ ಬತ್ತಳಿಕೆಯಿಂದ ಬಿಟ್ಟ ಕೇವಲ ಒಂದು ಬಾಣ ಅಷ್ಟೇ. ಭಯೋತ್ಪಾದನೆ ವಿರುದ್ಧದ ಯುದ್ಧ ಇನ್ನೂ ಮುಗಿದಿಲ್ಲ ಎಂದು ಮೋದಿ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಪ್ರಧಾನಿ ಮೋದಿ ಪಾದ ಮುಟ್ಟಿ ನಮಸ್ಕರಿಸಿದ ವೈಭವ್ ಸೂರ್ಯವಂಶಿ

    ಭಯೋತ್ಪಾದನೆ ಮತ್ತೆ ತನ್ನ ಹೆಡೆಯನ್ನು ಎತ್ತಿದರೆ, ಹುತ್ತದಿಂದ ಎಳೆದು ತುಳಿಯುತ್ತೇವೆ ಎಂದು ಹಾವಿಗೆ ಹೋಲಿಸಿ ಪ್ರಧಾನಿ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಕರಕಟ್‌ನಲ್ಲಿ ಸುಮಾರು 50,000 ಕೋಟಿ ಮೌಲ್ಯದ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದ ನಂತರ ರ‍್ಯಾಲಿಯನ್ನು ಉದ್ದೇಶಿಸಿ ಮೋದಿ ಈ ಮಾತುಗಳನ್ನಾಡಿದ್ದಾರೆ.

    ಪಹಲ್ಗಾಮ್‌ನಲ್ಲಿ ನಡೆದ ಭೀಕರ ದಾಳಿಯ ಒಂದು ದಿನದ ನಂತರ ನಾನು ಬಿಹಾರಕ್ಕೆ ಬಂದಿದ್ದೆ. ಅಲ್ಲಿ ನಮ್ಮ ಅನೇಕ ಸಹೋದರಿಯರು ತಮ್ಮ ಗಂಡಂದಿರನ್ನು ಕಳೆದುಕೊಂಡಿದ್ದರು. ಅಪರಾಧಿಗಳಿಗೆ ಅವರು ಕನಸಿನಲ್ಲಿಯೂ ಊಹಿಸಲಾಗದ ಶಿಕ್ಷೆಯನ್ನು ನೀಡಲಾಗುವುದು ಎಂದು ನಾನು ಭರವಸೆ ನೀಡಿದ್ದೆ. ಇಂದು, ಭರವಸೆಯನ್ನು ಈಡೇರಿಸಿದ ನಂತರ ನಾನು ಬಿಹಾರಕ್ಕೆ ಮತ್ತೆ ಬಂದಿದ್ದೇನೆಂದು ತಿಳಿಸಿದ್ದಾರೆ. ಇದನ್ನೂ ಓದಿ: ನಾನು ಬೆದರಿಕೆಗೆ ಹೆದರಲ್ಲ, ಕ್ಷಮೆ ಕೇಳಲ್ಲ- ಕಮಲ್ ಹಾಸನ್ ಉದ್ಧಟತನ

    ಪಾಕಿಸ್ತಾನ ಮತ್ತು ಜಗತ್ತು ಭಾರತದ ಹೆಣ್ಣುಮಕ್ಕಳ ‘ಸಿಂಧೂರ’ (ಆಪರೇಷನ್‌ ಸಿಂಧೂರ) ಶಕ್ತಿಯನ್ನು ನೋಡಿದೆ. ಪಾಕಿಸ್ತಾನ ಸೇನೆಯ ರಕ್ಷಣೆಯಲ್ಲಿ ಭಯೋತ್ಪಾದಕರು ಸುರಕ್ಷಿತ ಭಾವನೆ ಹೊಂದಿದ್ದರು. ಆದರೆ ಭಾರತೀಯ ಪಡೆಗಳು ಅವರನ್ನು ಬಲಿಹಾಕಿದ್ದಾರೆ ಎಂದು ಹೇಳಿದ್ದಾರೆ.

    ನಾವು ಪಾಕಿಸ್ತಾನದ ವಾಯುನೆಲೆಗಳು ಮತ್ತು ಅದರ ಮಿಲಿಟರಿ ಸ್ಥಾಪನೆಗಳನ್ನು ಸಹ ನಾಶಪಡಿಸಿದ್ದೇವೆ. ಇದು ನವ ಭಾರತ ಮತ್ತು ಅದರ ಶಕ್ತಿ ಎಲ್ಲರೂ ನೋಡುವುದಕ್ಕಾಗಿ ಎಂದಿದ್ದಾರೆ.

  • ಉಗ್ರರು ಪಾಕಿಸ್ತಾನದಲ್ಲೇ ಅಡಗಿದ್ರೂ ನುಗ್ಗಿ ಹೊಡೆಯುತ್ತೇವೆ: ಜೈಶಂಕರ್‌

    ಉಗ್ರರು ಪಾಕಿಸ್ತಾನದಲ್ಲೇ ಅಡಗಿದ್ರೂ ನುಗ್ಗಿ ಹೊಡೆಯುತ್ತೇವೆ: ಜೈಶಂಕರ್‌

    ನವದೆಹಲಿ: ಉಗ್ರರು ಪಾಕಿಸ್ತಾನದಲ್ಲೇ (Pakistan) ಇರಲಿ, ಎಲ್ಲೇ ಇರಲಿ ಅವರಿರುವ ಜಾಗಕ್ಕೆ ನುಗ್ಗಿ ಹೊಡೆಯುತ್ತೇವೆ ಎಂದು ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ (S.Jaishankar) ತಿಳಿಸಿದ್ದಾರೆ.

    ನೆದರ್ಲ್ಯಾಂಡ್ಸ್ ಮೂಲದ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಜೈಶಂಕರ್, ವಿಶ್ವಸಂಸ್ಥೆ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಹೆಸರಿಸಲಾದ ಭಯೋತ್ಪಾದಕ ತಾಣಗಳ ಮೇಲೆ ಭಾರತ ದಾಳಿ ಮಾಡಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ನಿಯಮಿತವಾಗಿ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ಇದರಲ್ಲಿ ಪ್ರಮುಖ ಭಯೋತ್ಪಾದಕರು, ಅವರ ವಾಸಸ್ಥಳ ಮತ್ತು ಅವರು ಎಲ್ಲಿಂದ ಕಾರ್ಯನಿರ್ವಹಿಸುತ್ತಾರೆ ಎಂಬುದರ ಕುರಿತು ವಿವರಗಳನ್ನು ನೀಡಲಾಗುವುದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಜಮ್ಮು & ಕಾಶ್ಮೀರದ ಕಿಶ್ತ್ವಾರ್‌ನಲ್ಲಿ ಉಗ್ರರೊಂದಿಗೆ ಗುಂಡಿನ ಚಕಮಕಿ – ಓರ್ವ ಯೋಧ ಹುತಾತ್ಮ

    ಏಪ್ರಿಲ್ 22 ರಂದು (ಪಹಲ್ಗಾಮ್‌ ದಾಳಿ) ನಾವು ನೋಡಿದ ರೀತಿಯ ಕೃತ್ಯಗಳು ನಡೆದರೆ, ತಕ್ಕ ಉತ್ತರ ನೀಡುತ್ತಾರೆ. ನಾವು ಭಯೋತ್ಪಾದಕರ ಮೇಲೆ ದಾಳಿ ಮಾಡುತ್ತೇವೆ ಎಂಬ ಸ್ಪಷ್ಟ ಸಂದೇಶ ಆ ಕಾರ್ಯಾಚರಣೆಯಲ್ಲಿ ಇದೆ. ಹೀಗಾಗಿ, ಆಪರೇಷನ್‌ ಸಿಂಧೂರ ಮುಂದುವರೆದಿದೆ. ಭಯೋತ್ಪಾದಕರು ಪಾಕಿಸ್ತಾನದಲ್ಲಿದ್ದರೆ, ಅವರು ಇರುವ ಸ್ಥಳದಲ್ಲಿಯೇ ನಾವು ಅವರನ್ನು ಹೊಡೆಯುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.

    ಕಾಶ್ಮೀರದ ಆರ್ಥಿಕತೆಯ ಆಧಾರಸ್ತಂಭವಾಗಿರುವ ಪ್ರವಾಸೋದ್ಯಮಕ್ಕೆ ಹಾನಿ ಮಾಡುವ ಮತ್ತು ಧಾರ್ಮಿಕ ವೈಷಮ್ಯವನ್ನು ಸೃಷ್ಟಿಸುವ ಗುರಿಯನ್ನು ಈ ದಾಳಿ ಹೊಂದಿದೆ ಎಂದು ಪಹಲ್ಗಾಮ್‌ ಭಯೋತ್ಪಾದಕ ದಾಳಿ ಕುರಿತು ಮಾತನಾಡಿದ್ದಾರೆ. ಇದನ್ನೂ ಓದಿ: ಪಾಕ್‌ನ ಉಗ್ರವಾದದ ನಿಜ ಬಣ್ಣ ಬಯಲು ಮಾಡಲು ವಿದೇಶಕ್ಕೆ ಹೊರಟ ಸರ್ವಪಕ್ಷಗಳ ನಿಯೋಗ

    ಭಾರತ ಮತ್ತು ಪಾಕಿಸ್ತಾನದ ನಡುವೆ ಸಂಘರ್ಷವಾಯಿತು. ಅದು ಏನೆಂದು ನೀವು ಅರ್ಥ ಮಾಡಿಕೊಳ್ಳಬೇಕು. ಪಹಲ್ಗಾಮ್‌ ಭಯೋತ್ಪಾದಕ ದಾಳಿಗೆ 26 ಪ್ರವಾಸಿಗರು ಬಲಿಯಾದರು. ಧಾರ್ಮಿಕ ವೈಷಮ್ಯ ಸೃಷ್ಟಿಸುವ ಉದ್ದೇಶದಿಂದ ಈ ಕೃತ್ಯ ಎಸಗಲಾಯಿತು. ಅಲ್ಲಿನ ಸೇನಾ ಮುಖ್ಯಸ್ಥರು ಧಾರ್ಮಿಕ ದೃಷ್ಟಿಕೋನದಲ್ಲೇ ನಡೆಸಲ್ಪಡುತ್ತಾರೆ ಎಂದು ಪಾಕ್‌ ವಿರುದ್ಧ ಕಿಡಿಕಾರಿದ್ದಾರೆ.

  • ಪುಣೆಯ ಐಸಿಸ್‌ ಮಾಡ್ಯೂಲ್‌ ಕೇಸ್‌ – ಇಬ್ಬರು ಉಗ್ರರ ಬಂಧನ

    ಪುಣೆಯ ಐಸಿಸ್‌ ಮಾಡ್ಯೂಲ್‌ ಕೇಸ್‌ – ಇಬ್ಬರು ಉಗ್ರರ ಬಂಧನ

    ನವದೆಹಲಿ: ಪುಣೆಯ ಐಸಿಸ್( ISIS) ಮಾಡ್ಯೂಲ್ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಇಬ್ಬರು ಭಯೋತ್ಪಾದಕರನ್ನು ಬಂಧಿಸಿದೆ.

    ಅಬ್ದುಲ್ಲಾ ಫಯಾಜ್ ಶೇಖ್ ಮತ್ತು ತಲ್ಹಾ ಲಿಯಾಕತ್ ಖಾನ್ ಇಬ್ಬರನ್ನೂ ಇಂಡೋನೇಷ್ಯಾದಲ್ಲಿ ಬಂಧಿಸಲಾಗಿದೆ. ಇಬ್ಬರನ್ನು ಭಾರತಕ್ಕೆ ಕಳುಹಿಸಲಾಗಿದ್ದು, ಮುಂಬೈನಲ್ಲಿ ಬಂಧಿಸಲಾಗಿದೆ. ಅವರನ್ನು ಶೀಘ್ರದಲ್ಲೇ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಇದನ್ನೂ ಓದಿ: ಖಂಡಾಂತರ ಕ್ಷಿಪಣಿ ದಾಳಿಗೆ ನೂರ್‌ ಖಾನ್‌ ವಾಯುನೆಲೆ ಧ್ವಂಸ – ʻಆಪರೇಷನ್ ಸಿಂಧೂರʼದ ಯಶಸ್ಸು ಒಪ್ಪಿಕೊಂಡ ಪಾಕ್ ಪ್ರಧಾನಿ

    ಮಹಾರಾಷ್ಟ್ರ, ಗುಜರಾತ್ ಮತ್ತು ಭಾರತದ ಇತರ ಭಾಗಗಳಲ್ಲಿ ಭಯೋತ್ಪಾದಕ ದಾಳಿಗಳನ್ನು ನಡೆಸಲು ಐಸಿಸ್ ಮೂಲಕ ಪ್ರಾಯೋಜಿತ ಪಿತೂರಿಯಲ್ಲಿ ಇಬ್ಬರೂ ತೊಡಗಿದ್ದರು. ತನಿಖೆಯಲ್ಲಿ ಈ ಬಂಧನವು ಪ್ರಮುಖ ಹಂತವೆಂದು ಪರಿಗಣಿಸಲಾಗಿದೆ.

    ಎನ್‌ಐಎ ಪ್ರಕಾರ, ಆರೋಪಿಗಳು ಐಇಡಿಗಳಿಗಾಗಿ ಕಾರ್ಯಾಗಾರಗಳನ್ನು ಆಯೋಜಿಸುವುದು, ಗುಂಡು ಹಾರಿಸುವ ಅಭ್ಯಾಸಕ್ಕಾಗಿ ಸ್ಥಳಗಳನ್ನು ಹುಡುಕುವುದು ಮತ್ತು ಕಾಡುಗಳಲ್ಲಿ ಅಡಗಿಕೊಳ್ಳುವುದು, ಹಾಗೆಯೇ ಸಶಸ್ತ್ರ ದರೋಡೆ ಮತ್ತು ಕಳ್ಳತನದ ಮೂಲಕ ಹಣವನ್ನು ಸಂಗ್ರಹಿಸುವುದು ಮುಂತಾದ ಅನೇಕ ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗವಹಿಸಿದ್ದರು. ಇದನ್ನೂ ಓದಿ: ಪಾಕ್‌ಗೆ ಡ್ರೋನ್ ಸಪ್ಲೈ ಮಾಡಿದ ಟರ್ಕಿಗೆ ಕಂಟಕ – ಟರ್ಕಿ ಮಾರ್ಬಲ್‌ಗೆ ಬೆಂಗಳೂರಲ್ಲಿ ಬಹಿಷ್ಕಾರ

    ಅಬ್ದುಲ್ಲಾ ಫಯಾಜ್ ಶೇಖ್ ಅಲಿಯಾಸ್ ‘ದಿಯಾಪರ್‌ವಾಲಾ’ ಪುಣೆಯ ಕೊಂಡವದಲ್ಲಿರುವ ಮಿತಾನಗರ ನಿವಾಸಿಯಾಗಿದ್ದರೆ, ತಲ್ಹಾ ಲಿಯಾಕತ್ ಖಾನ್ ವನ್ವಾಡಿ (ಪುಣೆ)ಯಲ್ಲಿ ವಾಸಿಸುತ್ತಿದ್ದರು. ಇಬ್ಬರೂ ಸ್ವಲ್ಪ ಸಮಯದಿಂದ ತಲೆಮರೆಸಿಕೊಂಡಿದ್ದಾರೆ. ಅವರ ಬಂಧನಕ್ಕಾಗಿ, ಎನ್‌ಐಎ 3 ಲಕ್ಷ ರೂ. ಬಹುಮಾನವನ್ನು ಘೋಷಿಸಿತ್ತು.

  • ಜಮ್ಮು & ಕಾಶ್ಮೀರದಲ್ಲಿ 2 ಎನ್‌ಕೌಂಟರ್‌ – ಭಾರತೀಯ ಸೇನೆ 6 ಉಗ್ರರನ್ನು ಹೊಡೆದುರುಳಿಸಿದ್ದು ಹೇಗೆ?

    ಜಮ್ಮು & ಕಾಶ್ಮೀರದಲ್ಲಿ 2 ಎನ್‌ಕೌಂಟರ್‌ – ಭಾರತೀಯ ಸೇನೆ 6 ಉಗ್ರರನ್ನು ಹೊಡೆದುರುಳಿಸಿದ್ದು ಹೇಗೆ?

    ನವದೆಹಲಿ: ಜಮ್ಮು & ಕಾಶ್ಮೀರದಲ್ಲಿ (Jammu & Kashmir) ನಡೆದ ಎರಡು ಎನ್‌ಕೌಂಟರ್‌ಗಳಲ್ಲಿ 6 ಉಗ್ರರನ್ನು ಭಾರತೀಯ ಸೇನೆ ಯಶಸ್ವಿಯಾಗಿ ಹೊಡೆದುರುಳಿಸಿತು. ಭಯೋತ್ಪಾದಕರನ್ನು ಮಟ್ಟ ಹಾಕಿದ್ದೇ ರಣರೋಚಕ.

    ಜಮ್ಮು ಮತ್ತು ಕಾಶ್ಮೀರದ ವಿವಿಧ ಪ್ರದೇಶಗಳಲ್ಲಿ 48 ಗಂಟೆಗಳ ಒಳಗೆ ಎರಡು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಆರು ಭಯೋತ್ಪಾದಕರನ್ನು ಭಾರತೀಯ ಸೇನೆ ಯಶಸ್ವಿಯಾಗಿ ಹೊಡೆದುರುಳಿಸಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: IMF ಸಾಲವನ್ನು ಪಾಕ್ ಪರೋಕ್ಷವಾಗಿ ಭಯೋತ್ಪಾದನೆಗೆ ಬಳಸ್ತಿದೆ – ರಾಜನಾಥ್ ಸಿಂಗ್

    ಮಾರ್ಚ್‌ನಲ್ಲಿ ಕೇಂದ್ರಾಡಳಿತ ಪ್ರದೇಶದಲ್ಲಿ ನಡೆದ ಸರ್ಪಚ್ ಹತ್ಯೆಯಲ್ಲಿ, ಎನ್‌ಕೌಂಟರ್‌ ಆದ ಭಯೋತ್ಪಾದಕರಲ್ಲಿ ಒಬ್ಬ ಭಾಗಿಯಾಗಿದ್ದ. ಭಯೋತ್ಪಾದಕರು ಎಲ್ಲೇ ಅಡಗಿಕೊಂಡರೂ, ನಾವು ಅವರನ್ನು ಪತ್ತೆಹಚ್ಚಿ ನಾಶಪಡಿಸುತ್ತೇವೆ ಎಂದು ಜಿಒಸಿ ವಿ ಫೋರ್ಸ್‌ನ ಮೇಜರ್ ಜನರಲ್ ಧನಂಜಯ್ ಜೋಶಿ ಹೇಳಿದ್ದಾರೆ.

    ಉಗ್ರರ ಎನ್‌ಕೌಂಟರ್‌ ನಡೆದಿದ್ಹೇಗೆ?‌
    ಆಪರೇಷನ್‌ ಕೆಲ್ಲಾರ್‌
    ಕೆಲ್ಲಾರ್‌ನ ಎತ್ತರದ ಪ್ರದೇಶಗಳಲ್ಲಿ ಭಯೋತ್ಪಾದಕ ಗುಂಪು ಇರುವ ಬಗ್ಗೆ ಮೇ 12 ರಂದು ಸೇನೆಗೆ ಮಾಹಿತಿ ಸಿಕ್ಕಿತ್ತು. ಮರುದಿನ ಬೆಳಗ್ಗೆ, ಕೆಲವು ಚಲನವಲನಗಳನ್ನು ಕಂಡ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿದವು. ಆದರೆ, ಉಗ್ರರು ಗುಂಡು ಹಾರಿಸುವ ಮೂಲಕ ಪ್ರತಿಕ್ರಿಯಿಸಿದರು. ಟ್ರಾಲ್‌ನಲ್ಲಿ ಎರಡನೇ ಕಾರ್ಯಾಚರಣೆಯನ್ನು ಗಡಿ ಗ್ರಾಮದಲ್ಲಿ ನಡೆಸಲಾಯಿತು. ಇದನ್ನೂ ಓದಿ: ಆಪರೇಷನ್‌ ಸಿಂಧೂರ ಬಳಿಕ ಭಾರತೀಯ ಸೇನೆಗೆ ಬೂಸ್ಟ್‌ – ರಕ್ಷಣಾ ಇಲಾಖೆಗೆ 50,000 ಕೋಟಿ ಹೆಚ್ಚುವರಿ ಬಜೆಟ್

    ನಾವು ಈ ಹಳ್ಳಿಯನ್ನು ಸುತ್ತುವರೆದಾಗ, ಭಯೋತ್ಪಾದಕರು ಬೇರೆ ಬೇರೆ ಮನೆಗಳಲ್ಲಿ ನೆಲೆಸಿ ನಮ್ಮ ಮೇಲೆ ಗುಂಡು ಹಾರಿಸಿದರು. ಈ ಸಮಯದಲ್ಲಿ ನಾಗರಿಕ ಗ್ರಾಮಸ್ಥರನ್ನು ರಕ್ಷಿಸುವುದು ನಮಗೆ ಸವಾಲಾಗಿತ್ತು. ಕೊನೆಗೂ ಭಯೋತ್ಪಾದಕರನ್ನು ಎನ್‌ಕೌಂಟರ್‌ ಮಾಡಿದೆವು. ಹತ್ಯೆಗೀಡಾದ ಭಯೋತ್ಪಾದಕರಲ್ಲಿ ಒಬ್ಬ ಶಾಹಿದ್ ಕುಟ್ಟೆ, ಜರ್ಮನ್ ಪ್ರವಾಸಿಯ ಮೇಲಿನ ದಾಳಿ ಸೇರಿದಂತೆ ಎರಡು ಪ್ರಮುಖ ದಾಳಿಗಳಲ್ಲಿ ಭಾಗಿಯಾಗಿದ್ದ. ಹಣಕಾಸು ಚಟುವಟಿಕೆಗಳಲ್ಲಿಯೂ ಕೈಜೋಡಿಸಿದ್ದ ಎಂದು ಮೇಜರ್ ಜನರಲ್ ಜೋಶ್‌ಜಿ ಹೇಳಿದ್ದಾರೆ.

    ಆಪರೇಷನ್ ಟ್ರಾಲ್‌
    ಕಠಿಣ ಭೂಪ್ರದೇಶದಲ್ಲಿ ನಡೆದ ಟ್ರಾಲ್ ಕಾರ್ಯಾಚರಣೆಯಲ್ಲಿ ಸೇನೆಯು ಮೂವರು ಭಯೋತ್ಪಾದಕರನ್ನು ಹೊಡೆದುರುಳಿಸಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ಅಧಿಕಾರಿಗಳು ಇಂದು ನಡೆದ ಬ್ರೀಫಿಂಗ್‌ನಲ್ಲಿ ತಿಳಿಸಿದ್ದಾರೆ.

    ಪುಲ್ವಾಮಾದಲ್ಲಿ ಒಂದು ಹಳ್ಳಿಯಲ್ಲಿ ಮೂವರು ಭಯೋತ್ಪಾದಕರು ಅಡಗಿಕೊಂಡಿರುವ ಬಗ್ಗೆ ಸೇನೆಗೆ ಮಾಹಿತಿ ಸಿಕ್ಕಿತು. ಸೇನೆಯು ಮೊದಲು ಎಲ್ಲಾ ನಾಗರಿಕರನ್ನು ಸ್ಥಳಾಂತರಿಸಿ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಟ್ರಾಲ್ ಕಾರ್ಯಾಚರಣೆ ಅರಣ್ಯದ ಎತ್ತರದ ಪ್ರದೇಶದಲ್ಲಿ ನಡೆದರೆ, ಪುಲ್ವಾಮಾ ಕಾರ್ಯಾಚರಣೆ ಗ್ರಾಮದಲ್ಲಿ ತುಲನಾತ್ಮಕವಾಗಿ ಸಮತಟ್ಟಾದ ಭೂಪ್ರದೇಶದಲ್ಲಿ ನಡೆಯಿತು. ಪುಲ್ವಾಮಾ ಗ್ರಾಮದಲ್ಲಿ ಮೂವರು ಭಯೋತ್ಪಾದಕರನ್ನು ಸೇನೆ ಬಗ್ಗುಬಡಿಯಿತು. ಇದನ್ನೂ ಓದಿ: ಪಾಕಿಸ್ತಾನದ ಮೇಲೆ ಭಾರತದ ಬ್ರಹ್ಮೋಸ್ ದಾಳಿಯಾಗಿದೆ: ಪಾಕ್ ನಿವೃತ್ತ ಏರ್ ಮಾರ್ಷಲ್ ಮಸೂದ್ ಅಕ್ತರ್

    ಪುಲ್ವಾಮಾದಲ್ಲಿ ಹತ್ಯೆಗೀಡಾದ ಮೂವರು ಭಯೋತ್ಪಾದಕರು ಜೈಶ್-ಎ-ಮೊಹಮ್ಮದ್ (ಜೆಇಎಂ) ಗೆ ಸೇರಿದವರು. ಉಗ್ರರನ್ನು ಆಸಿಫ್ ಅಹ್ಮದ್ ಶೇಖ್, ಅಮೀರ್ ನಜೀರ್ ವಾನಿ ಮತ್ತು ಯಾವರ್ ಅಹ್ಮದ್ ಭಟ್ ಎಂದು ಗುರುತಿಸಲಾಗಿದೆ.

  • ಪುಲ್ವಾಮಾದಲ್ಲಿ ಭದ್ರತಾಪಡೆಗಳೊಂದಿಗೆ ಗುಂಡಿನ ಚಕಮಕಿ – ಮೂವರು ಜೈಶ್‌ ಉಗ್ರರು ಮಟಾಶ್‌

    ಪುಲ್ವಾಮಾದಲ್ಲಿ ಭದ್ರತಾಪಡೆಗಳೊಂದಿಗೆ ಗುಂಡಿನ ಚಕಮಕಿ – ಮೂವರು ಜೈಶ್‌ ಉಗ್ರರು ಮಟಾಶ್‌

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ಪಾಮಾದಲ್ಲಿ (Pulwama) ನಡೆದ ಭಾರೀ ಗುಂಡಿನ ಚಕಮಕಿಯಲ್ಲಿ ಭದ್ರತಾ ಪಡೆಗಳು ಮೂವರು ಜೈಶ್‌ ಉಗ್ರರನ್ನು (JEM Terrorists) ಹತ್ಯೆ ಮಾಡಿರುವುದಾಗಿ ಹಿರಿಯ ಸೇನಾಧಿಕಾರಿಗಳು ತಿಳಿಸಿದ್ದಾರೆ.

    ಪುಲ್ವಾಮಾ ಜಿಲ್ಲೆಯ ಉಪನಗರವಾದ ಅವಂತಿಪೋರಾದ (Awantipora) ನಾಡರ್‌ ಮತ್ತು ಟ್ರಾಲ್‌ ಪ್ರದೇಶಗಳಲ್ಲಿ ಇಂದು ಬೆಳಗ್ಗೆ ನಡೆದ ಗುಂಡಿನ ಚಕಮಕಿಯಲ್ಲಿ ಭಾರತೀಯ ಸೇನೆ ಉಗ್ರರನ್ನು ಹೊಡೆದುರುಳಿಸಿದೆ. ಕಳೆದ ಮೂರು ದಿನಗಳಲ್ಲಿ ನಡೆದ 2ನೇ ಎನ್‌ಕೌಂಟರ್‌ ಇದಾಗಿದೆ. ಹತ್ಯೆಗೀಡಾದ ಮೂವರು ಜೈಶ್‌ ಎ ಮೊಹಮ್ಮದ್‌ ಸಂಘಟನೆಗೆ ಸೇರಿದವರು ಎಂದು ಉನ್ನತ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ. ಇದನ್ನೂ ಓದಿ: ಮಣಿಪುರದ ಚಾಂದೆಲ್‌ನಲ್ಲಿ ಎನ್‌ಕೌಂಟರ್‌ – 10 ಉಗ್ರರನ್ನು ಹತ್ಯೆ ಮಾಡಿದ ಭಾರತೀಯ ಸೇನೆ

    ಇದಕ್ಕೂ ಮುನ್ನ ಮಂಗಳವಾರ (ಮೇ 13) ಶೋಪಿಯಾನ್ (Shopian) ಜಿಲ್ಲೆಯ ಶುಕ್ರೂ ಕೆಲ್ಲರ್ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳೊಂದಿಗೆ ಗುಂಡಿನ ಚಕಮಕಿ ನಡೆದಿತ್ತು. ಈ ವೇಳೆ ಉನ್ನತ ಭಯೋತ್ಪಾದಕ ಕಮಾಂಡರ್ ಶಾಹಿದ್ ಕುಟ್ಟಯ್, ಹರಿಸ್ ನಜೀರ್, ಅದ್ನಾನ್ ಶಫಿ ಎಂಬ ಮೂವರು ಉಗ್ರರನ್ನ ಹತ್ಯೆಗೈಯಲಾಗಿತ್ತು. ಇದನ್ನೂ ಓದಿ: ಚೀನಿ ಏರ್‌ ಡಿಫೆನ್ಸ್‌ ಜಾಮ್‌ ಮಾಡಿ 23 ನಿಮಿಷದಲ್ಲಿ ಮುಗಿಯಿತು ಕಾರ್ಯಾಚರಣೆ – ಭಾರತದ ದಾಳಿಯ ರೋಚಕ ಕಥೆ ಓದಿ

    ದಕ್ಷಿಣ ಕಾಶ್ಮೀರ ಜಿಲ್ಲೆಯ ಶುಕ್ರೂ ಕೆಲ್ಲರ್ ಪ್ರದೇಶದಲ್ಲಿ ಭಯೋತ್ಪಾದಕರು ಇರುವ ಬಗ್ಗೆ ನಿರ್ದಿಷ್ಟ ಮಾಹಿತಿಯ ಆಧಾರದ ಮೇಲೆ ಭದ್ರತಾ ಪಡೆಗಳು ಅಲ್ಲಿ ಸುತ್ತುವರಿದು ಶೋಧ ಕಾರ್ಯಾಚರಣೆ ಪ್ರಾರಂಭಿಸಿದ್ದವು. ಭಯೋತ್ಪಾದಕರು ಪ್ರತಿದಾಳಿ ನಡೆಸಿದ್ದರು. ಇದು ಪರಸ್ಪರರ ನಡುವೆ ಗುಂಡಿನ ಚಕಮಕಿಗೆ ಕಾರಣವಾಗಿತ್ತು. ಇದನ್ನೂ ಓದಿ: ಉಗ್ರರ ವಿರುದ್ಧ ಸಿಡಿದೆದ್ದ ಭಾರತ – ‘ಆಪರೇಷನ್‌ ಸಿಂಧೂರ’ಗೆ ಜೈ ಎಂದ ಬ್ರಿಟಿಷ್‌ ಸಂಸದ

    ಇಂದು ಮತ್ತೆ ಗುಂಡಿನ ಚಕಮಕಿ ನಡೆದಿದ್ದು, ಮೂವರು ಜೈಶ್‌ ಉಗ್ರರನ್ನ ಹತ್ಯೆಗೈಯಲಾಗಿದೆ. ಇದನ್ನೂ ಓದಿ: ಮೇಲುಕೋಟೆ | ಮಗಳ ಸಾವಿಗೆ ಸೇಡು ತೀರಿಸಿಕೊಂಡ ಅಪ್ಪ – ಭೀಕರ ಹತ್ಯೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆ!

  • ಛತ್ತೀಸ್‌ಗಢದಲ್ಲಿ ಎನ್‌ಕೌಂಟರ್ – 31 ಉಗ್ರರನ್ನು ಹೊಡೆದುರುಳಿಸಿದ ಭದ್ರತಾ ಪಡೆ

    ಛತ್ತೀಸ್‌ಗಢದಲ್ಲಿ ಎನ್‌ಕೌಂಟರ್ – 31 ಉಗ್ರರನ್ನು ಹೊಡೆದುರುಳಿಸಿದ ಭದ್ರತಾ ಪಡೆ

    – ಐತಿಹಾಸಿಕ  ಸಾಧನೆ ಎಂದು ಬಣ್ಣಿಸಿದ ಅಮಿತ್ ಶಾ

    ರಾಯ್ಪುರ: ಛತ್ತೀಸ್‌ಗಢ-ತೆಲಂಗಾಣ ಗಡಿಯಲ್ಲಿ 21 ದಿನಗಳ ಕಾಲ ನಡೆಸಿದ ಕಾರ್ಯಾಚರಣೆಯಲ್ಲಿ 31 ಉಗ್ರರನ್ನು ಭದ್ರತಾ ಪಡೆ (Security Forces) ಹೊಡೆದುರುಳಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ತಿಳಿಸಿದ್ದಾರೆ.

    ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ನಕ್ಸಲ್ ಮುಕ್ತ ಭಾರತ ಕಾರ್ಯಾಚರಣೆಯಲ್ಲಿ ಇದು ಐತಿಹಾಸಿಕ ಸಾಧನೆ ಎಂದು ಕರೆದಿದ್ದಾರೆ. ಅಲ್ಲದೇ ಒಂದು ಕಾಲದಲ್ಲಿ ಕೆಂಪು ಉಗ್ರರಿಂದ ಆಳಲ್ಪಟ್ಟಿದ್ದ ಕರೆಗುಟ್ಟಾದಲ್ಲಿ (Karregutta Hill) ಭದ್ರತಾ ಪಡೆ ಅತಿದೊಡ್ಡ ಕಾರ್ಯಾಚರಣೆ ನಡೆಸಿದ್ದು, ಈಗ ಹೆಮ್ಮೆಯಿಂದ ತ್ರಿವರ್ಣ ಧ್ವಜ ಹಾರಿಸಬಹುದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.  ಇದನ್ನೂ ಓದಿ: ಪಾಕ್‌ಗೆ ಮತ್ತೆ ಶಾಕ್ – ಸ್ವಾತಂತ್ರ್ಯ ಘೋಷಿಸಿಕೊಂಡ ಬಲೂಚಿಸ್ತಾನ

    ಕರೆಗುಟ್ಟಾ ಬೆಟ್ಟವು PLGA ಬೆಟಾಲಿಯನ್ 1, DKSZC, TSC ಮತ್ತು CRC ನಂತಹ ಪ್ರಮುಖ ನಕ್ಸಲ್ ಸಂಘಟನೆಗಳ ಪ್ರಧಾನ ಕಚೇರಿಯಾಗಿತ್ತು. ಅಲ್ಲಿ ನಕ್ಸಲ್ ತರಬೇತಿ, ತಂತ್ರ ಮತ್ತು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸಲಾಗುತ್ತಿತ್ತು. ಕೇವಲ 21 ದಿನಗಳಲ್ಲಿ ಪೂರ್ಣಗೊಂಡ ಈ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಯ ಸಿಬ್ಬಂದಿಗೆ ಯಾವುದೇ ಸಾವುನೋವು ಸಂಭವಿಸಿಲ್ಲ ಎಂದು ತಿಳಿಸಿದರು.   ಇದನ್ನೂ ಓದಿ: ಸೋಫಿಯಾ‌ ವಿರುದ್ಧ ಅವಹೇಳನಕಾರಿ ಹೇಳಿಕೆ – ಮಧ್ಯಪ್ರದೇಶದ ಮಂತ್ರಿ ವಿರುದ್ಧ ಎಫ್‌ಐಆರ್‌ಗೆ ಸೂಚನೆ

    ಎಕ್ಸ್‌ನಲ್ಲಿ ಏನಿದೆ?
    ಪ್ರತಿಕೂಲ ಹವಾಮಾನ ಮತ್ತು ಸವಾಲಿನ ಗುಡ್ಡಗಾಡು ಪ್ರದೇಶದ ಹೊರತಾಗಿಯೂ ಧೈರ್ಯ ಮತ್ತು ಶೌರ್ಯದಿಂದ ನಕ್ಸಲರನ್ನು ಎದುರಿಸಿದ ಧೈರ್ಯಶಾಲಿ  CRPF, STF, and DRG ಸಿಬ್ಬಂದಿಯನ್ನು ನಾನು ಅಭಿನಂದಿಸುತ್ತೇನೆ. ಇಡೀ ರಾಷ್ಟ್ರವು ನಿಮ್ಮ ಬಗ್ಗೆ ಹೆಮ್ಮೆಪಡುತ್ತದೆ. ಮುಂದಿನ ವರ್ಷ ಮಾರ್ಚ್ 31ರ ವೇಳೆಗೆ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಭಾರತ ನಕ್ಸಲ್ ಮುಕ್ತವಾಗಲಿದೆ.   ಇದನ್ನೂ ಓದಿ: ರಾಯಚೂರಿನಲ್ಲಿ ವರುಣನ ಆರ್ಭಟ – ಲಕ್ಷಾಂತರ ರೂ.ಮೌಲ್ಯದ ಭತ್ತ ನಾಶ

    ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ, ಭಯೋತ್ಪಾದನೆಯನ್ನು ಅದರ ಬೇರು ಸಮೇತ ನಿರ್ಮೂಲನೆ ಮಾಡಲು ನಾವು ಬದ್ಧರಾಗಿದ್ದೇವೆ. 2026ರ ಮಾರ್ಚ್ 31ರ ವೇಳೆಗೆ ನಕ್ಸಲ್ ಮುಕ್ತ ಭಾರತ ಖಚಿತ ಎಂದು ನಾನು ಮತ್ತೊಮ್ಮೆ ಭರವಸೆ ನೀಡುತ್ತೇನೆ ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.   ಇದನ್ನೂ ಓದಿ: Boycott Turkey – ಸೇಬು, ಚೆರ‍್ರಿ, ಮಾರ್ಬಲ್‌ಗಳ ಆಮದು ಬ್ಯಾನ್‌ಗೆ ನಿರ್ಧಾರ

    ಕಾರ್ಯಾಚರಣೆಯಲ್ಲಿ ದೊಡ್ಡ ಪ್ರಮಾಣದ ಮದ್ದುಗುಂಡುಗಳು, ಡಿಟೋನೇಟರ್‌ಗಳು ಮತ್ತು ಸ್ಫೋಟಕ ಸಾಧನಗಳು, ಔಷಧ ಮತ್ತು ವಿದ್ಯುತ್ ಉಪಕರಣಗಳಂತಹ 12,000 ಕೆಜಿ ಇತರ ವಸ್ತುಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಅಲ್ಲದೇ 450 ಐಇಡಿಗಳು ಮತ್ತು 40 ಶಸ್ತ್ರಾಸ್ತ್ರಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಹತ್ಯೆಗೈದ 31 ಉಗ್ರರ ಪೈಕಿ 28 ಮಂದಿಯನ್ನು ಗುರುತಿಸಲಾಗಿದೆ ಎಂದು  ಸಿಆರ್‌ಪಿಎಫ್ ಮುಖ್ಯಸ್ಥ ಜನರಲ್ ಜಿಪಿ ಸಿಂಗ್ ತಿಳಿಸಿದ್ದಾರೆ.  ಇದನ್ನೂ ಓದಿ: ಪ್ಲೀಸ್‌ ನೀರು ಹರಿಸಿ – ಸಿಂಧೂ ಜಲ ಒಪ್ಪಂದವನ್ನು ಪರಿಶೀಲಿಸುವಂತೆ ಪಾಕ್‌ ಪತ್ರ

  • ಶೋಪಿಯಾನ್‌ನಲ್ಲಿ ಭದ್ರತಾ ಪಡೆಯೊಂದಿಗೆ ಗುಂಡಿನ ಚಕಮಕಿ – ಮೂವರು ಉಗ್ರರು ಮಟಾಶ್‌

    ಶೋಪಿಯಾನ್‌ನಲ್ಲಿ ಭದ್ರತಾ ಪಡೆಯೊಂದಿಗೆ ಗುಂಡಿನ ಚಕಮಕಿ – ಮೂವರು ಉಗ್ರರು ಮಟಾಶ್‌

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ (Shopian) ಜಿಲ್ಲೆಯ ಶುಕ್ರೂ ಕೆಲ್ಲರ್ ಅರಣ್ಯ ಪ್ರದೇಶದಲ್ಲಿ ಮಂಗಳವಾರ ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಹತನಾಗಿದ್ದಾರೆ.

    ಎನೌಕೌಂಟರ್‌ನಲ್ಲಿ ಉನ್ನತ ಭಯೋತ್ಪಾದಕ ಕಮಾಂಡರ್ ಸೇರಿ ಮೂವರು ಉಗ್ರರು ಹತ್ಯೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಸ್ತುತ ಕಾರ್ಡನ್ ಮತ್ತು ಶೋಧ ಕಾರ್ಯಾಚರಣೆ (ಸಿಎಎಸ್ಒ) ನಡೆಯುತ್ತಿರುವ ಸ್ಥಳದಲ್ಲಿ ಭಯೋತ್ಪಾದಕರು ಸಿಕ್ಕಿಬಿದ್ದಿದ್ದರು ಎಂದು ಭದ್ರತಾ ಪಡೆಗಳು ತಿಳಿಸಿವೆ. ಇದನ್ನೂ ಓದಿ: INS ವಿಕ್ರಾಂತ್ ಎಲ್ಲಿದೆ ಹೇಳಿ – ಪಿಎಂ ಕಚೇರಿ ಅಧಿಕಾರಿಯಂತೆ ಕರೆ ಮಾಡಿದ್ದವ ಅರೆಸ್ಟ್‌

    ದಕ್ಷಿಣ ಕಾಶ್ಮೀರ ಜಿಲ್ಲೆಯ ಶುಕ್ರೂ ಕೆಲ್ಲರ್ ಪ್ರದೇಶದಲ್ಲಿ ಭಯೋತ್ಪಾದಕರು ಇರುವ ಬಗ್ಗೆ ನಿರ್ದಿಷ್ಟ ಮಾಹಿತಿಯ ಆಧಾರದ ಮೇಲೆ ಭದ್ರತಾ ಪಡೆಗಳು ಅಲ್ಲಿ ಸುತ್ತುವರಿದು ಶೋಧ ಕಾರ್ಯಾಚರಣೆ ಪ್ರಾರಂಭಿಸಿದವು. ಭಯೋತ್ಪಾದಕರು ಪ್ರತಿದಾಳಿ ನಡೆಸಿದರು. ಇದು ಪರಸ್ಪರರ ನಡುವೆ ಗುಂಡಿನ ಚಕಮಕಿಗೆ ಕಾರಣವಾಯಿತು.

    ಏ.22 ರ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆಂದು ಶಂಕಿಸಲಾಗಿರುವ ಮೂವರು ಪಾಕಿಸ್ತಾನಿ ಭಯೋತ್ಪಾದಕರಾದ ಆದಿಲ್ ಹುಸೇನ್ ಥೋಕರ್, ಅಲಿ ಭಾಯ್ ಮತ್ತು ಹಾಶಿಮ್ ಮೂಸಾ ಪೋಸ್ಟರ್‌ಗಳನ್ನು ಭದ್ರತಾ ಪಡೆಗಳು ಪೋಸ್ಟ್ ಮಾಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಇದನ್ನೂ ಓದಿ: ಪಹಲ್ಗಾಮ್ ದಾಳಿಯ 3 ಉಗ್ರರ ಫೋಟೋ ರಿಲೀಸ್ – ಸುಳಿವು ಕೊಟ್ಟವರಿಗೆ 20 ಲಕ್ಷ ಬಹುಮಾನ