Tag: Terrorist Activities

  • ಉಗ್ರರ ಸಂಪರ್ಕಕ್ಕೆ ಮೊಬೈಲ್ ಆಪ್ ಬಳಕೆ – 14 ಅಪ್ಲಿಕೇಷನ್ ನಿಷೇಧಿಸಿದ ಕೇಂದ್ರ

    ಉಗ್ರರ ಸಂಪರ್ಕಕ್ಕೆ ಮೊಬೈಲ್ ಆಪ್ ಬಳಕೆ – 14 ಅಪ್ಲಿಕೇಷನ್ ನಿಷೇಧಿಸಿದ ಕೇಂದ್ರ

    ನವದೆಹಲಿ: ಭಯೋತ್ಪಾದಕ ಚಟುವಟಿಕೆಗಳ ವಿರುದ್ಧದ ಹೋರಾಟದಲ್ಲಿ ಕೇಂದ್ರ ಸರ್ಕಾರ (Government of India) ಮಹತ್ವದ ಹೆಜ್ಜೆ ಇಟ್ಟಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ (Jammu and Kashmir) ಭಯೋತ್ಪಾದಕರು ಹಾಗೂ ಅವರ ಬೆಂಬಲಿಗರ ನಡುವೆ ಸಂವಹನ ನಡೆಸಲು ಬಳಕೆಯಾಗುತ್ತಿದ್ದ 14 ಅಪ್ಲಿಕೇಷನ್‍ಗಳನ್ನು ಕೇಂದ್ರ ನಿಷೇಧಿಸಿದೆ.

    ನಿಷೇಧಿಸಲಾದ ಎಲ್ಲಾ ಅಪ್ಲಿಕೇಷನ್‍ಗಳು ಭಯೋತ್ಪಾದಕ ಚಟುವಟಿಕೆಗಳಲ್ಲಿ (Terrorist Activities) ತೊಡಗಿದ್ದ ವ್ಯಕ್ತಿಗಳೊಂದಿಗೆ ಸಂದೇಶ ರವಾನಿಸಲು (Messaging Applications) ಬಳಕೆಯಾಗುತ್ತಿತ್ತು. ಈ ಬಗ್ಗೆ ಭದ್ರತಾ ಮತ್ತು ಗುಪ್ತಚರ ಸಂಸ್ಥೆಗಳು ಸೂಕ್ತ ಮಾಹಿತಿ ನೀಡಿದ್ದವು. ಗುಪ್ತಚರ ಸಂಸ್ಥೆಗಳು (Security and Intelligence Agencies) ಸೂಚಿಸಿದ್ದ ಅಪ್ಲಿಕೇಷನ್‍ಗಳಲ್ಲಿ ಪಾಕಿಸ್ತಾನದಿಂದ (Pakistan) ಸೂಚನೆಗಳು ರವಾನೆಯಾಗುತ್ತಿದ್ದವು ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ದಾಂತೇವಾಡ ಸ್ಫೋಟ ಪ್ರಕರಣ- ಮಾಸ್ಟರ್‌ಮೈಂಡ್‌ ಫೋಟೋ ರಿಲೀಸ್

    ನಿಷೇಧಿತ ಅಪ್ಲಿಕೇಷನ್‍ಗಳು:
    ಕ್ರಿಪ್‍ವೈಸರ್, ಎನಿಗ್ಮಾ, ಸೇಫ್‍ಸ್ವಿಸ್, ವಿಕ್ರಮ್, ಮೀಡಿಯಾಫೈರ್, ಬ್ರಿಯಾರ್, ಬಿಚಾಟ್, ನಂಡ್‍ಬಾಕ್ಸ್, ಕೊನಿಯನ್, ಐಎಂಒ, ಎಲಿಮೆಂಟ್, ಸೆಕೆಂಡ್ ಲೈನ್, ಝಾಂಗಿ ಮತ್ತು ಥ್ರೀಮಾ ನಿಷೇಧಿತ ಅಪ್ಲಿಕೇಷನ್‍ಗಳಾಗಿವೆ.

    ಏ.20 ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರು ಸೇನಾ ವಾಹನದ ಮೇಲೆ ನಡೆಸಿದ್ದ ಗ್ರೇನೆಡ್ ದಾಳಿಯಲ್ಲಿ ಐವರು ಯೋಧರು ಮೃತಪಟ್ಟಿದ್ದರು. ಈ ವೇಳೆ ಉಗ್ರರಿಗೆ ಸ್ಥಳೀಯರು ಮಾಹಿತಿ ನೀಡಿದ್ದರು ಎಂಬುದು ತನಿಖೆ ವೇಳೆ ತಿಳಿದು ಬಂದಿತ್ತು. ಇದನ್ನೂ ಓದಿ: ಕೇವಲ 6-8 ವಾರಗಳಲ್ಲಿ ಮತ್ತೆ ಹಾರಾಟಕ್ಕೆ ಸಿದ್ಧವಾಗಲಿದೆ ಸ್ಟಾರ್‌ಶಿಪ್: ಮಸ್ಕ್

  • ಅಲ್‍ಖೈದಾ ಜೊತೆ ನಂಟು ಶಂಕೆ – ಶಂಕಿತ ಭಯೋತ್ಪಾದಕನ ಸೆರೆ

    ಅಲ್‍ಖೈದಾ ಜೊತೆ ನಂಟು ಶಂಕೆ – ಶಂಕಿತ ಭಯೋತ್ಪಾದಕನ ಸೆರೆ

    ಕೋಲ್ಕತ್ತಾ: ಪಶ್ಚಿಮ ಬಂಗಾಳದ (West Bengal) ವಿಶೇಷ ಕಾರ್ಯಪಡೆ (STF) ಅಲ್‌ಖೈದಾ (Al-Qaeda) ಶಂಕಿತ ಭಯೋತ್ಪಾದಕನನ್ನು ಬಂಧಿಸಿದೆ.

    ಬಂಧಿತ ಕೂಚ್‍ಬಿಹಾರ್‌ನ (Coochbihar) ದಿನ್ಹಟಾದ (Dinhata) ನನ್ನು ಮಿಯಾ (40) ಎಂಬುದಾಗಿ ತಿಳಿದು ಬಂದಿದೆ. ಶನಿವಾರ ಶಂಕಿತ ಉಗ್ರನನ್ನು ಬರಾಸತ್ ಜಿಲ್ಲಾ ನ್ಯಾಯಾಲಯ (Barasat District court) ಪಶ್ಚಿಮ ಬಂಗಾಳ ಪೊಲೀಸರಿಗೆ 11 ದಿನಗಳ ಕಸ್ಟಡಿಗೆ ನೀಡಿದೆ. ಆರೋಪಿಯ ವಿರುದ್ಧ ಭಯೋತ್ಪಾದಕ ಚಟುವಟಿಕೆಗಳಿಗೆ (Terrorist Activities) ಸಂಬಂಧಿಸಿದ ಹಲವಾರು ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಸುಡಾನ್‌ನಿಂದ ಶಿವಮೊಗ್ಗಕ್ಕೆ ವಾಪಸ್‌ – ಕೇಂದ್ರಕ್ಕೆ ಥ್ಯಾಂಕ್ಸ್‌ ಹೇಳಿದ ಸಂತ್ರಸ್ತರು

    ಆರೋಪಿ ಅಲ್-ಖೈದಾ ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದಾನೆ ಎಂಬುದನ್ನು ನಾವು ಈಗಲೇ ಖಚಿತಪಡಿಸಲು ಸಾಧ್ಯವಿಲ್ಲ. ಆದರೆ ಉಗ್ರಗಾಮಿ ಸಂಘಟನೆಯಲ್ಲಿ ಭಾಗಿಯಾಗಿರುವ ಶಂಕೆಯ ಹಿನ್ನೆಲೆಯಲ್ಲಿ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಸೂಕ್ತ ತನಿಖೆಯ ನಂತರ ಸಂಪೂರ್ಣ ಮಾಹಿತಿ ಸಿಗಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

    ಇತ್ತೀಚೆಗೆ ಶಶನ್ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಕರಣವೊಂದರ ತನಿಖೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಎಸ್‍ಟಿಎಫ್ ಆರೋಪಿಯನ್ನು ಬಂಧಿಸಿತ್ತು. ಇದನ್ನೂ ಓದಿ: ಭಾರತದ ಮೊದಲ ಕೇಬಲ್ ರೈಲ್ವೇ ಸೇತುವೆ ಪೂರ್ಣ – ವಿಡಿಯೋ ಹಂಚಿಕೊಂಡ ಕೇಂದ್ರ ಸಚಿವ

  • ಭಯೋತ್ಪಾದಕರಿಗೆ ಹಣ ವರ್ಗವಣೆ – ಮಂಗ್ಳೂರಿನ ದಂಪತಿಗೆ 10 ವರ್ಷ ಕಠಿಣ ಶಿಕ್ಷೆ

    ಭಯೋತ್ಪಾದಕರಿಗೆ ಹಣ ವರ್ಗವಣೆ – ಮಂಗ್ಳೂರಿನ ದಂಪತಿಗೆ 10 ವರ್ಷ ಕಠಿಣ ಶಿಕ್ಷೆ

    ರಾಯಪುರ: ಭಯೋತ್ಪಾದಕ ಚಟುವಟಿಕೆಗೆ ಹಣ ವರ್ಗವಣೆ ಮಾಡಿದ ಆರೋಪದ ಮೇಲೆ ಮಂಗಳೂರು ಮೂಲದ ದಂಪತಿಗೆ ಛತ್ತೀಸ್‌ಗಢ ರಾಯಪುರದ ನ್ಯಾಯಾಲಯ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಯನ್ನು ವಿಧಿಸಿದೆ.

    POLICE JEEP

    ಮಂಗಳೂರು ಮೂಲದ ಜುಬೇರ್ ಹುಸೇನ್(42), ಆತನ ಪತ್ನಿ ಆಯೇಷಾ ಬಾನೋ(39) ಮತ್ತು ಧೀರಜ್ ಸಾವೋ(21), ಪಪ್ಪು ಮಂಡಲ್ ಮೇಲಿನ ಆರೋಪ ಸಾಬೀತಾಗಿದೆ.

    ಉಗ್ರನಿಗ್ರಹ ಕಾಯ್ದೆಯಾಗಿರುವ ಆಕ್ರಮ ಚಟುವಟಿಕೆ(ತಡೆ) ಕಾಯ್ದೆಯ ವಿವಿಧ ಸೆಕ್ಷನ್‍ಗಳಡಿ ಭಯೋತ್ಪಾದಕ ಚಟುವಟಿಕೆಗೆ ಹಣ ವರ್ಗವಣೆ ಮಾಡಿದ ಆರೋಪದ ಮೇಲೆ ಈ ನಾಲ್ವರಿಗೆ ನ್ಯಾಯಧೀಶ ಅಜಯ್ ಸಿಂಗ್ ರಜಪೂತ್ 10 ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನು ವಿಧಿಸಿದ್ದಾರೆ. ಇದನ್ನೂ ಓದಿ: ಕುಮಾರಸ್ವಾಮಿಗೆ ಬಲಿ ಕೊಡೋದಕ್ಕೆ ಅಲ್ಪಸಂಖ್ಯಾತರೇ ಸಿಗೋದಾ: ಜಮೀರ್‌ ಪ್ರಶ್ನೆ

    ಏನಿದು ಪ್ರಕರಣ?
    ಭಯೋತ್ಪಾದಕ ಸಂಘಟನೆಗಳ ಜೊತೆ ಸಂಬಂಧ ಹೊಂದಿದ ಆರೋಪದ ಮೇಲೆ 2013ರಲ್ಲಿ ಧೀರಜ್ ಸಾವೋನನ್ನು ಬಂಧಿಸಲಾಗಿತ್ತು. ಬೀದಿ ಬದಿಯಲ್ಲಿ ಹೋಟೆಲ್ ಮಾಡುತ್ತಿದ್ದ ಈತ ಇಂಡಿಯನ್ ಮುಜಾಹಿದೀನ್, ಸಿಮಿ ಸಂಘಟನೆ ಜೊತೆ ಸಂಬಂಧ ಹೊಂದಿದವರಿಗೆ ಪಾಕಿಸ್ತಾನದ ಖಾಲಿದ್ ಎಂಬವನಿಂದ ಹಣ ಪಡೆದು ಉಗ್ರರ ಖಾತೆಗೆ ರವಾನಿಸುತ್ತಿದ್ದನು. ಜುಬೇರ್ ಹುಸೇನ್ ಮತ್ತು ಆಯೇಷಾ ಬಾನೋ ಬ್ಯಾಂಕ್ ಖಾತೆಗೂ ಸಹ ಈತ ಹಣವನ್ನು ಜಮೆ ಮಾಡುತ್ತಿದ್ದನು.

    ಯಾರಿದು ಆಯೇಷಾ?
    ಈಕೆ ನಿಷೇಧಿತ ಸಿಮಿ ಹಾಗೂ ಇಂಡಿಯನ್ ಮುಜಾಹಿದೀನ್ ಉಗ್ರರ ಜೊತೆ ನಂಟನ್ನು ಹೊಂದಿದ್ದಳು. ಅದು ಅಲ್ಲದೇ ಈಕೆ ಬಿಹಾರದ ಸುಮಾರು 50 ಬ್ಯಾಂಕ್ ಖಾತೆಯ ನೆಟ್ ಬ್ಯಾಂಕಿಂಗ್ ಅನ್ನು ಹೊಂದಿದ್ದಳು. ಈ ಮೂಲಕ ಉಗ್ರರಿಗೆ ಹಣವನ್ನು ಜಮೆ ಮಾಡುತ್ತಿದ್ದಳು. ಯಾರಿಗೂ ಸಂದೇಹ ಬರದಂತೆ ಆದಾಯ ತೆರಿಗೆ ಇಲಾಖೆಯ ಕಣ್ಣನ್ನು ತಪ್ಪಿಸಲು 49 ಸಾವಿರಕ್ಕಿಂತ ಕಡಿಮೆ ಹಣವನ್ನು ವರ್ಗವಣೆ ಮಾಡುತ್ತಿದ್ದಳು. ಭಯೋತ್ಪಾದನೆ ಪ್ರಕರಣದಲ್ಲಿ ನಾಲ್ಪರು ಬಂಧಕ್ಕೊಳಗಾದ ಬಳಿಕ 2013ರಲ್ಲಿ ಈಕೆಯನ್ನು ಬಿಹಾರದ ಪೊಲೀಸರು ಮಂಗಳೂರಿನಲ್ಲಿ ಬಂಧಿಸಿದ್ದರು.