Tag: terrorism

  • ಭಯೋತ್ಪಾದನೆ ವಿರುದ್ಧ ಕ್ರಮ ಕೈಗೊಳ್ಳಿ: ಭಾರತ ನೆಲದಿಂದ ಪಾಕ್‌ಗೆ ತಾಲಿಬಾನ್‌ ಸಚಿವ ಸಲಹೆ

    ಭಯೋತ್ಪಾದನೆ ವಿರುದ್ಧ ಕ್ರಮ ಕೈಗೊಳ್ಳಿ: ಭಾರತ ನೆಲದಿಂದ ಪಾಕ್‌ಗೆ ತಾಲಿಬಾನ್‌ ಸಚಿವ ಸಲಹೆ

    – ಉಗ್ರರ ಗುಂಪುಗಳನ್ನು ಅಫ್ಘಾನಿಸ್ತಾನ ನಿರ್ನಾಮ ಮಾಡಿದೆ ಎಂದ ಮುತ್ತಕಿ

    ನವದೆಹಲಿ: ಭಯೋತ್ಪಾದಕ ಗುಂಪುಗಳನ್ನು ಅಫ್ಘಾನಿಸ್ತಾನ ನಿರ್ನಾಮ ಮಾಡಿದೆ. ಪಾಕಿಸ್ತಾನ ಕೂಡ ಅದೇ ಶಾಂತಿಯ ಮಾರ್ಗವನ್ನು ಅನುಸರಿಸಬೇಕು ಎಂದು ಭಾರತದ ನೆಲದಿಂದ ಪಾಕ್‌ಗೆ ತಾಲಿಬಾನ್‌ (Taliban) ಸಲಹೆ ನೀಡಿದೆ.

    ಅಫ್ಘಾನಿಸ್ತಾನದ ತಾಲಿಬಾನ್‌ ವಿದೇಶಾಂಗ ಸಚಿವ ಅಮೀರ್‌ ಖಾನ್‌ ಮುತ್ತಕಿ ಅವರು ಶುಕ್ರವಾರ ಭಾರತಕ್ಕೆ ಭೇಟಿ ನೀಡಿದ್ದರು. ಇದೇ ವೇಳೆ, ಲಷ್ಕರ್-ಎ-ತೈಬಾ ಮತ್ತು ಜೈಶ್-ಎ-ಮೊಹಮ್ಮದ್ ನಂತಹ ಭಯೋತ್ಪಾದಕ ಗುಂಪುಗಳು ಅಫ್ಘಾನ್ ನೆಲದಿಂದ ದೀರ್ಘಕಾಲದಿಂದ ಕಾರ್ಯನಿರ್ವಹಿಸುತ್ತಿವೆ. ಆದರೆ, ಕಳೆದ ನಾಲ್ಕು ವರ್ಷಗಳಲ್ಲಿ ತಾಲಿಬಾನ್ ಎಲ್ಲಾ ಭಯೋತ್ಪಾದಕರನ್ನು ನಿರ್ನಾಮ ಮಾಡಿದೆ ಎಂದು ಮುತ್ತಕಿ ತಿಳಿಸಿದ್ದಾರೆ. ಇದನ್ನೂ ಓದಿ: ಕಾಬೂಲ್ ರಾಯಭಾರ ಕಚೇರಿ 4 ವರ್ಷದ ಬಳಿಕ ಪುನಾರಂಭಕ್ಕೆ ಭಾರತ ನಿರ್ಧಾರ – ಎಸ್.ಜೈಶಂಕರ್ ಘೋಷಣೆ

    ಭಯೋತ್ಪಾದಕರಲ್ಲಿ ಒಬ್ಬರೂ ಅಫ್ಘಾನಿಸ್ತಾನದಲ್ಲಿಲ್ಲ. ಅಫ್ಘಾನಿಸ್ತಾನದಲ್ಲಿ ಒಂದು ಇಂಚು ಭೂಮಿಯೂ ಅವರ ನಿಯಂತ್ರಣದಲ್ಲಿಲ್ಲ. ನಾವು (2021 ರಲ್ಲಿ) ಕಾರ್ಯಾಚರಣೆ ನಡೆಸಿದ ಅಫ್ಘಾನಿಸ್ತಾನವು ಬದಲಾಗಿದೆ ಎಂದು ಪಾಕಿಸ್ತಾನಿ ಭಯೋತ್ಪಾದಕ ಗುಂಪುಗಳು ಈ ಹಿಂದೆ ಅಫ್ಘಾನ್ ಮಣ್ಣನ್ನು ಕಾರ್ಯಾಚರಣೆಗೆ ಬಳಸುತ್ತಿದ್ದ ಬಗ್ಗೆ ಕೇಳಿದ ಪ್ರಶ್ನೆಗೆ ಮುತ್ತಕಿ ಪ್ರತಿಕ್ರಿಯಿಸಿದ್ದಾರೆ.

    ಗಡಿಯಾಚೆಗಿನ ಭಯೋತ್ಪಾದನೆಯ ಬಲಿಪಶುವಾಗಿರುವ ಭಾರತೀಯ ನೆಲದಿಂದ ಅವರು ಪಾಕಿಸ್ತಾನಕ್ಕೆ ಮುತ್ತಕಿ ಒಂದು ಸಂದೇಶವನ್ನು ನೀಡಿದ್ದಾರೆ. ‘ಶಾಂತಿಗಾಗಿ ಅಫ್ಘಾನಿಸ್ತಾನ ಮಾಡಿದಂತೆ ಇತರ ದೇಶಗಳು ಸಹ ಅಂತಹ ಭಯೋತ್ಪಾದಕ ಗುಂಪುಗಳ ವಿರುದ್ಧ ಕ್ರಮ ಕೈಗೊಳ್ಳಲಿ’ ಎಂದು ಕರೆ ನೀಡಿದ್ದಾರೆ.

    ಭಾರತಕ್ಕೆ ಮುತ್ತಕಿ ಅವರ ಭೇಟಿಯು ಉಭಯ ದೇಶಗಳ ರಾಜತಾಂತ್ರಿಕ ಸಂಬಂಧಗಳನ್ನು ಪುನಸ್ಥಾಪಿಸಲು ಸಹಕಾರಿಯಾಗಿದೆ. ಭಾರತವು ಕಾಬೂಲ್‌ನಲ್ಲಿರುವ ತನ್ನ ತಾಂತ್ರಿಕ ಮಿಷನ್‌ ಅನ್ನು ರಾಯಭಾರ ಕಚೇರಿಯಾಗಿ ಮೇಲ್ದರ್ಜೆಗೇರಿಸಲಿದೆ ಎಂದು ಮುತ್ತಕಿ ಅವರೊಂದಿಗಿನ ಭೇಟಿಯ ಸಂದರ್ಭದಲ್ಲಿ ಜೈಶಂಕರ್‌ ತಿಳಿಸಿದ್ದಾರೆ.

  • ಪಾಕ್‌ ಭಯೋತ್ಪಾದನೆ ವೈಭವೀಕರಿಸುತ್ತಿದೆ, ವಿಶ್ವವೇದಿಕೆಯಲ್ಲಿ ಸುಳ್ಳು ಹರಡುತ್ತಿದೆ – ವಿಶ್ವಸಂಸ್ಥೆಯಲ್ಲಿ ಭಾರತ ತಿರುಗೇಟು

    ಪಾಕ್‌ ಭಯೋತ್ಪಾದನೆ ವೈಭವೀಕರಿಸುತ್ತಿದೆ, ವಿಶ್ವವೇದಿಕೆಯಲ್ಲಿ ಸುಳ್ಳು ಹರಡುತ್ತಿದೆ – ವಿಶ್ವಸಂಸ್ಥೆಯಲ್ಲಿ ಭಾರತ ತಿರುಗೇಟು

    – ಪಾಕ್‌ ಪ್ರಧಾನಿಗೆ ಮತ್ತೆ ಮುಖಭಂಗ; ಟ್ರಂಪ್‌ಗೆ ಪರೋಕ್ಷ ತಿರುಗೇಟು

    ಲಂಡನ್‌: ಪಾಕಿಸ್ತಾನ ಭಯೋತ್ಪಾದನೆಯನ್ನು (Terrorism) ವೈಭವೀಕರಿಸುತ್ತಿದೆ, ವಿಶ್ವವೇದಿಕೆಯಲ್ಲಿ ಸುಳ್ಳುಗಳನ್ನೇ ಹರಡುತ್ತಿದೆ ಎಂದು ಭಾರತದ ರಾಜತಾಂತ್ರಿಕ ಪೆಟಲ್ ಗೆಹ್ಲೋಟ್ (Petal Gahlot) ಪಾಕ್‌ ಪ್ರಧಾನಿಯನ್ನ ತೀವ್ರ ತರಾಟೆಗೆ ತೆಗೆದುಕೊಂಡರು.

    ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕ್‌ ಪ್ರಧಾನಿ ಶೆಹಬಾಜ್‌ ಷರೀಫ್‌ಗೆ (Shehbaz Sharif) ಭಾಷಣದ ನಂತರ ಪ್ರತ್ಯುತ್ತರ ನೀಡುವ ಹಕ್ಕು ಚಲಾಯಿಸುತ್ತಾ ಅವರು ಮಾತನಾಡಿದರು. ಪಾಕಿಸ್ತಾನ ಭಯೋತ್ಪಾದನೆಯನ್ನ ವೈಭವೀಕರಿಸುತ್ತಿದೆ. ವಿಶ್ವವೇದಿಕೆಯಲ್ಲಿ ಸುಳ್ಳುಗಳನ್ನೇ ಬಿತ್ತರಿಸುತ್ತಿದೆ ಎಂದು ತರಾಟೆಗೆ ತೆಗೆದುಕೊಂಡರು.

    ಭಯೋತ್ಪಾದನೆ ವೈಭವೀಕರಣ
    ನಾನು ಪ್ರಧಾನಿ ಷರೀಫ್‌ ಅವರ ಭಾಷಣ ಕೇಳಿದೆ. ಅವರು ಮತ್ತೊಮ್ಮೆ ತಮ್ಮ ವಿದೇಶಾಂಗ ನೀತಿಯ ಭಾಗವಾದ ಭಯೋತ್ಪಾದನೆಯನ್ನು ವೈಭವೀಕರಿಸಿದರು. ಆದ್ರೆ ಯಾವುದೇ ಸುಳ್ಳು, ನಾಟಕಗಳು ಸತ್ಯವನ್ನು ಮರೆಮಾಚಲು ಸಾಧ್ಯವಿಲ್ಲ ಎಂದು ಕುಟುಕಿದರು. ಅಲ್ಲದೇ ಏಪ್ರಿಲ್‌ 22ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರವಾಸಿಗರ ಹತ್ಯಾಕಾಂಡಕ್ಕೆ ಕಾರಣವಾದ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದಕ ಸಂಘಟನೆ ರೆಸಿಸ್ಟೆನ್ಸ್‌ ಫ್ರಂಟ್‌ (TRF) ಅನ್ನು ಪಾಕಿಸ್ತಾನ ಸಮರ್ಥಿಸಿಕೊಂಡಿದೆ ಎಂಬುದನ್ನು ನೆನಪಿಸಿದ್ರು.

    ಒಸಾಮಾ ಬಿಲ್‌ ಲಾಡೆನ್‌ಗೆ ವರ್ಷಗಳಿಂದ ಆಶ್ರಯ ನೀಡಿದ್ದ ಹಾಗೂ ಭಯೋತ್ಪಾದನೆ ವಿರುದ್ಧ ಹೋರಾಡುವಂತೆ ನಟಿಸಿದ ಅದೇ ಪಾಕಿಸ್ತಾನ ಇದಾಗಿದೆ. ಏಕೆಂದ್ರೆ ದಶಕಗಳಿಂದ ಭಯೋತ್ಪಾದನಾ ಶಿಬಿರಗಳನ್ನ ನಡೆಸುತ್ತಿದೆ ಎಂಬುದನ್ನು ಖುದ್ದು ಅಲ್ಲಿನ ಸಚಿವರೇ ಒಪ್ಪಿಕೊಂಡಿದ್ದಾರೆ ಎಂದು ಜ್ಞಾಪಿಸುತ್ತಾ ಪಾಕ್‌ ಪ್ರಧಾನಿಗೆ ಮುಖಭಂಗ ಮಾಡಿದರು.

    ಧ್ವಂಸವಾದ ವಾಯುನೆಲೆ ತೋರಿಸಿ ಗೆಲುವು ಅಂದ್ರು
    ಇನ್ನೂ ಆಪರೇಷನ್‌ ಸಿಂಧೂರ ಕಾರ್ಯಾಚರಣೆ ವೇಳೆ ಭಾರತದ ಪರಾಕ್ರಮ ನೆನಪಿಸಿದ ಪೆಟಲ್‌ ಗೆಹ್ಲೋಟ್‌, ಸಂಘರ್ಷದಲ್ಲಿ ಪಾಕಿಸ್ತಾನ ಗೆಲುವು ಎಂದು ಹೇಳಿಕೊಳ್ಳುತ್ತಿದೆ. ಭಾರತ ನಡೆಸಿದ ದಾಳಿಗೆ ಈಗಲೂ ಕುರುಹುಗಳಿವೆ, ಮೇ 9ರ ವರೆಗೆ ಪಾಕಿಸ್ತಾನವು ಭಾರತದ ಮೇಲೆ ಹೆಚ್ಚಿನ ದಾಳಿಗಳ ಬೆದರಿಕೆ ಹಾಕುತ್ತಿತ್ತು. ಆದರೆ ಮೇ 10 ರಂದು, ಅದರ ಸೇನೆಯು ಹೋರಾಟವನ್ನು ನಿಲ್ಲಿಸುವಂತೆ ನೇರವಾಗಿ ನಮ್ಮೊಂದಿಗೆ ಮನವಿ ಮಾಡಿತು. ಭಯೋತ್ಪಾದನೆಯನ್ನು ಹುಟ್ಟು ಹಾಕುವಲ್ಲಿ ಮತ್ತು ರಪ್ತು ಮಾಡುವಲ್ಲಿ ನಿರತವಾಗಿರುವ ಪಾಕಿಸ್ತಾನ ಅಸಂಬದ್ಧ ಹೇಳಿಕೆಗಳನ್ನ ನೀಡುತ್ತಿದೆ. ವಾಸ್ತವವಾಗಿ ಅದೆಲ್ಲವೂ ಭಾರತದ ದಾಳಿಯಿಂದ ಧ್ವಂಸವಾದ ವಾಯುನೆಲೆಗಳು ಹಾಗೂ ಸುಟ್ಟುಹೋದ ಹ್ಯಾಂಗರ್‌, ಹಾನಿಗೊಳಗಾದ ರನ್‌ವೇಗಳ ಚಿತ್ರಗಳಾಗಿವೆ. ಇದು ಸಾರ್ವಜನಿಕವಾಗಿಯೂ ಲಭ್ಯವಿದೆ. ಇದನ್ನ ಗೆಲುವು ಅಂತ ಹೇಳಿಕೊಳ್ಳೋದಕ್ಕೆ ನಾಚಿಕೆ ಆಗೋದಿಲ್ಲವೇ ಎಂದು ಜಾಡಿಸಿದರು.

    ಟ್ರಂಪ್‌ಗೆ ಪರೋಕ್ಷವಾಗಿ ತಿರುಗೇಟು
    ಭಾರತದಲ್ಲಿ ಅಮಾಯಕ ನಾಗರಿಕರ ಮೇಲೆ ನಡೆದ ಭಯೋತ್ಪಾದಕ ದಾಳಿಗಳಿಗೆ ಪಾಕಿಸ್ತಾನ ಕಾರಣವಾಗಿದೆ. ಜೊತೆಗೆ ಭಾರತ ತನ್ನ ಜನರನ್ನ ರಕ್ಷಿಸಿಕೊಳ್ಳೋದಕ್ಕೆ ಪ್ರತೀಕಾರದ ಕ್ರಮ ತೆಗೆದುಕೊಳ್ಳುತ್ತದೆ ಎಂಬುದೂ ಸತ್ಯ. ಇದರ ಹೊರತಾಗಿ ಭಾರತ ಮತ್ತು ಪಾಕಿಸ್ತಾನ ನಡುವಿನ ಎಲ್ಲಾ ಸಮಸ್ಯೆಗಳನ್ನ ದ್ವಿಪಕ್ಷೀಯ ಮಟ್ಟದಲ್ಲೇ ಪರಿಹರಿಸಲಾಗುವುದು. ಇದರಲ್ಲಿ 3ನೇ ವ್ಯಕ್ತಿಗೆ ಯಾವುದೇ ಅವಕಾಶವಿರುವುದಿಲ್ಲ ಎಂದು ಟ್ರಂಪ್‌ ಹೆಸರು ಉಲ್ಲೇಖಿಸದೇ ಪರೋಕ್ಷವಾಗಿ ತಿರುಗೇಟು ನೀಡಿದರು.

    ಮೇ ತಿಂಗಳಲ್ಲಿ ಭಾರತದೊಂದಿಗಿನ ಸಂಕ್ಷಿಪ್ತ ಮಿಲಿಟರಿ ಉಲ್ಬಣದಲ್ಲಿ ಪಾಕಿಸ್ತಾನವನ್ನು ವಿಜೇತ ಎಂದು ಬಿಂಬಿಸಲು ಷರೀಫ್ ತಮ್ಮ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಭಾಷಣವನ್ನು ಬಳಸಿಕೊಂಡಿದ್ದರು. ನಾವು ಯುದ್ಧವನ್ನು ಗೆದ್ದಿದ್ದೇವೆ, ಮತ್ತು ಈಗ ನಾವು ನಮ್ಮ ಭಾಗದಲ್ಲಿ ಶಾಂತಿಯನ್ನು ಗೆಲ್ಲಲು ಪ್ರಯತ್ನಿಸುತ್ತಿದ್ದೇವೆ. ಪಾಕಿಸ್ತಾನವು ಎಲ್ಲಾ ಬಾಕಿ ಇರುವ ವಿಷಯಗಳ ಕುರಿತು ಭಾರತದೊಂದಿಗೆ ಸಂಯೋಜಿತ, ಸಮಗ್ರ ಮತ್ತು ಫಲಿತಾಂಶ-ಆಧಾರಿತ ಸಂವಾದಕ್ಕೆ ಸಿದ್ಧವಾಗಿದೆ ಎಂದು ಹೇಳಿದ್ದರು.

  • ಭಯೋತ್ಪಾದನೆ ವಿಚಾರದಲ್ಲಿ ಡಬಲ್ ಸ್ಟ್ಯಾಂಡರ್ಡ್‌ ಸರಿಯಲ್ಲ: ಪಾಕ್ ಪ್ರಧಾನಿ ಮುಂದೆಯೇ ಪಹಲ್ಗಾಮ್ ದಾಳಿ ವಿಚಾರ ಪ್ರಸ್ತಾಪಿಸಿದ ಮೋದಿ

    ಭಯೋತ್ಪಾದನೆ ವಿಚಾರದಲ್ಲಿ ಡಬಲ್ ಸ್ಟ್ಯಾಂಡರ್ಡ್‌ ಸರಿಯಲ್ಲ: ಪಾಕ್ ಪ್ರಧಾನಿ ಮುಂದೆಯೇ ಪಹಲ್ಗಾಮ್ ದಾಳಿ ವಿಚಾರ ಪ್ರಸ್ತಾಪಿಸಿದ ಮೋದಿ

    – ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಖಂಡನೆ; ಪಾಕ್‌ಗೆ ಕಪಾಳಮೋಕ್ಷ
    – ಭಾರತಕ್ಕೆ ಮತ್ತೊಂದು ರಾಜತಾಂತ್ರಿಕ ಗೆಲುವು

    ಬೀಜಿಂಗ್‌: ಭಯೋತ್ಪಾದನೆ (Terrorism) ವಿರುದ್ಧ ಭಾರತ ನಡೆಸುತ್ತಿರುವ ಹೋರಾಟಕ್ಕೆ ಈಗ ಬಹುದೊಡ್ಡ ರಾಜತಾಂತ್ರಿಕ ಯಶಸ್ಸು ಸಿಕ್ಕಂತಾಗಿದೆ. ಚೀನಾದ ಟಿಯಾಂಜಿನ್‌ನಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಒಕ್ಕೂಟ (SCO)ದ ಶೃಂಗ ಸಭೆಯಲ್ಲಿ ಸದಸ್ಯ ರಾಷ್ಟ್ರಗಳು ಒಮ್ಮತವಾಗಿ ಪಹಲ್ಗಾಮ್‌ ಭಯೋತ್ಪಾದಕ ದಾಳಿಯನ್ನ ಖಂಡಿಸಿವೆ. ಜೊತೆಗೆ ಭಯೋತ್ಪಾದನೆ ತಡೆಯುವ ಭಾರತದ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿವೆ.

    ಪ್ರಧಾನಿ ಮೋದಿ ಭಾಷಣದ ಬಳಿಕ ಎಸ್‌ಸಿಒ ಪಹಲ್ಗಾಮ್‌ ದಾಳಿ (Pahalgam Terror Attack) ಖಂಡಿಸಿ ಹೇಳಿಕೆ ಬಿಡುಗಡೆ ಮಾಡಿತು. ದಾಳಿಯನ್ನು ಒಕ್ಕೊರಲಿನಿಂದ ಖಂಡಿಸಿದ್ದು, ಭಾರತಕ್ಕೆ ಬೆಂಬಲ ಸೂಚಿಸಿತು. 26 ಮಂದಿ ಅಮಾಯಕರ ಸಾವಿಗೆ ಕಾರಣವಾದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು, ಎಸ್‌ಸಿಒ ಸದಸ್ಯ ರಾಷ್ಟ್ರಗಳು ಬಲವಾಗಿ ಖಂಡಿಸಿದವು. ಮೃತರು ಮತ್ತು ಗಾಯಗೊಂಡವರ ಕುಟುಂಬಗಳಿಗೆ ತಮ್ಮ ಆಳವಾದ ಸಂತಾಪ ವ್ಯಕ್ತಪಡಿಸಿದವು. ಅಮಾನವೀಯ ದಾಳಿಯ ಅಪರಾಧಿಗಳು ಮತ್ತು ಪ್ರಾಯೋಜಕರನ್ನ ನ್ಯಾಯದ ಕಟಕಟೆಗೆ ತರಬೇಕು ಎಂದು ಒತ್ತಾಯಿಸಿದವು.

    ಶೆಹಬಾಜ್‌ ಷರೀಫ್‌ ಸಭೆಯಲ್ಲಿ ಪಾಲ್ಗೊಂಡಿದ್ದಾಗಲೇ ಈ ಬೆಳವಣಿಗೆ ನಡೆದಿರುವುದು ಪಾಕಿಸ್ತಾನದ ಪ್ರಧಾನಿಗೆ (Pakistan PrimeMinister) ಕಪಾಳಮೋಕ್ಷ ಮಾಡಿದಂತಾಗಿದೆ. ಇದನ್ನೂ ಓದಿ: ರಷ್ಯಾದಿಂದ ತೈಲ ಖರೀದಿಸಿ ಬ್ರಾಹ್ಮಣರು ಶ್ರೀಮಂತರಾಗುತ್ತಿದ್ದಾರೆ: ಭಾರತದ ವಿರುದ್ಧ ಟ್ರಂಪ್‌ ಆಪ್ತನಿಂದ ಜಾತಿ ಅಸ್ತ್ರ

    ಡಬಲ್ ಸ್ಟ್ಯಾಂಡರ್ಡ್‌ ಸರಿಯಲ್ಲ; ಮೋದಿ
    ಇನ್ನೂ ಎಸ್‌ಸಿಒ ಸಭೆಯಲ್ಲಿ ಪಾಕ್‌ ಪ್ರಧಾನಿ ಎದುರಲ್ಲೇ ಪಹಲ್ಗಾಮ್‌ ಭಯೋತ್ಪಾದಕ ದಾಳಿ ಪ್ರಸ್ತಾಪಿಸಿದ ನರೇಂದ್ರ ಮೋದಿ (Narendra Modi), ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಬೆಂಬಲ ಕೋರಿದರು. ಅಲ್ಲದೇ ಭಯೋತ್ಪಾದನೆಯ ವಿಚಾರದಲ್ಲಿ ಡಬಲ್ ಸ್ಟ್ಯಾಂಡರ್ಡ್‌ ಸ್ವೀಕಾರಾರ್ಹವಲ್ಲ, ಎಸ್‌ಸಿಒ ಸದಸ್ಯ ರಾಷ್ಟ್ರಗಳು ಒಂದೇ ಧ್ವನಿಯಲ್ಲಿ ಹೇಳಬೇಕು ಎಂದು ಪ್ರಧಾನಿ ಮೋದಿ ಒತ್ತಿ ಹೇಳಿದರು. ಇದನ್ನೂ ಓದಿ: ರಾಜತಾಂತ್ರಿಕ ಯಶಸ್ಸು – ಗಡಿಯಾಚೆಗಿನ ಭಯೋತ್ಪಾದನೆ ತಡೆಗೆ ಭಾರತಕ್ಕೆ ಚೀನಾ ಬೆಂಬಲ

    ಇದಕ್ಕೂ ಮುನ್ನ, ಕಳೆದ 4 ದಶಕಗಳಿಂದಲೂ ಭಾರತ ಭಯೋತ್ಪಾದನೆಯಿಂದ ಬಳಲುತ್ತಿದೆ. ಈ ಭಯೋತ್ಪಾದನಾ ಪಿಡುಗಿಗೆ ಅನೇಕ ತಾಯಂದಿರು ತಮ್ಮ ಮಕ್ಕಳನ್ನ ಕಳೆದುಕೊಂಡಿದ್ದಾರೆ. ಇತ್ತೀಚಿನ ಪಹಲ್ಗಾಮ್‌ ದಾಳಿಯಲ್ಲಿ ನಾವು ಈ ಭಯೋತ್ಪಾದನೆಯ ಕೊಳಕು ಮನಸ್ಥಿತಿಯನ್ನ ನೋಡಿದ್ದೇವೆ. ಈ ಬಿಕ್ಕಟ್ಟಿನ ಸಮಯದಲ್ಲಿ ನಮ್ಮೊಟ್ಟಿಗೆ ನಿಂತ ಸ್ನೇಹಿತರಿಗೆ ನಾನು ಧನ್ಯವಾದ ಹೇಳುತ್ತೇನೆ. ಇದು ಕೇವಲ ಭಾರತದ ಆತ್ಮದ ಮೇಲಿನ ದಾಳಿಯಾಗಿರಲಿಲ್ಲ. ಬದಲಾಗಿ ಮಾನವೀಯತೆ ಮೇಲೆ ನಂಬಿಕೆಯಿಟ್ಟಿರುವ ಪ್ರತಿಯೊಂದು ದೇಶಕ್ಕೂ ಬಹಿರಂಗ ಸವಾಲಾಗಿತ್ತು. ಆದಾಗ್ಯೂ ಕೆಲ ದೇಶಗಳು ಭಯೋತ್ಪಾದನೆಗೆ ಬಹಿರಂಗ ಬೆಂಬಲ ನೀಡಿದವು, ಇದು ಎಷ್ಟು ಸರಿ? ಎಂದು ಬೇಸರ ಹೊರಹಾಕಿದರು. ಇದನ್ನೂ ಓದಿ: ಪಾಕಿಸ್ತಾನ ಮ್ಯಾಪ್‌ ವಿಚಾರಕ್ಕೆ ಸಿಟ್ಟಾಗಿ SCO ಸಭೆಯಿಂದ ಎದ್ದು ಹೊರಬಂದಿದ್ದ ಅಜಿತ್‌ ದೋವಲ್‌

    ಪ್ರತಿಯೊಂದು ದೇಶದ ಅಭಿವೃದ್ಧಿಗೆ ಭದ್ರತೆ, ಶಾಂತಿ ಮತ್ತು ಸ್ಥಿರತೆ ನಿರ್ಣಾಯಕವಾದದ್ದು. ಆದ್ರೆ ಈ ಬೆಳವಣಿಗೆಗೆ ಭಯೋತ್ಪಾದನೆ ಒಂದು ದೊಡ್ಡ ಸವಾಲಾಗಿದೆ. ಅದಕ್ಕಾಗಿಯೇ ಭಾರತ ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ತೊಡಗಿದ್ದು, ನಾವೆಲ್ಲರೂ ಒಟ್ಟಾಗಿ ನಿಲ್ಲಬೇಕೆಂದು ಬಯಸುತ್ತದೆ ಎಂದು ಒತ್ತಿ ಹೇಳಿದರು. ಇದನ್ನೂ ಓದಿ: ಚೀನಾದಲ್ಲಿ ಪುಟಿನ್‌ ಜೊತೆ ಒಂದೇ ಕಾರಿನಲ್ಲಿ ಮೋದಿ ಪ್ರಯಾಣ

  • ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಕ್‌ ವಿರುದ್ಧ ಮೋದಿ ಕಟು ವಾಗ್ದಾಳಿ – ಬುದ್ಧನ ಶಾಂತಿ ತತ್ವ ಪ್ರತಿಪಾದಿಸಿದ ಪ್ರಧಾನಿ

    ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಕ್‌ ವಿರುದ್ಧ ಮೋದಿ ಕಟು ವಾಗ್ದಾಳಿ – ಬುದ್ಧನ ಶಾಂತಿ ತತ್ವ ಪ್ರತಿಪಾದಿಸಿದ ಪ್ರಧಾನಿ

    ಬ್ರೆಸಿಲಿಯಾ: ರಿಯೊ ಡಿ ಜನೈರೊದಲ್ಲಿ ನಡೆದ 17ನೇ ಬ್ರಿಕ್ಸ್ ಶೃಂಗಸಭೆಯಲ್ಲಿ (BRICS Summit) ಪ್ರಧಾನಿ ನರೇಂದ್ರ ಮೋದಿ (Narendra Modi) ಭಯೋತ್ಪಾದನೆ ಬೆಂಬಲಿಸುತ್ತಿರುವ ಪಾಕಿಸ್ತಾನದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

    ಭಯೋತ್ಪಾದನೆ (Terrorism) ಮಾನವೀಯತೆಗೆ ಅತಿ ದೊಡ್ಡ ಬೆದರಿಕೆ ಎಂದು ಕರೆದ ಮೋದಿ, ಇದೇ ವೇಳೆ ಜಮ್ಮು ಮತ್ತು ಕಾಶ್ಮೀರದ (Jammu Kashmir) ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸುವಲ್ಲಿ ಭಾರತದ ಜೊತೆ ನಿಂತ ಎಲ್ಲಾ ರಾಷ್ಟ್ರಗಳಿಗೆ ಧನ್ಯವಾದ ಅರ್ಪಿಸಿದ್ದಾರೆ. ಇದನ್ನೂ ಓದಿ: ಯೋಗಿ ಮಾತಿಗೂ ಕಿಮ್ಮತ್ತಿಲ್ಲ – ವಿದ್ಯಾರ್ಥಿನಿಗೆ ಶುಲ್ಕ ವಿನಾಯ್ತಿ ಕೊಡಲು ನಿರಾಕರಿಸಿ‌ದ RSS ಮೂಲದ ಶಿಕ್ಷಣ ಸಂಸ್ಥೆ

    ಶೃಂಗಸಭೆ ಉದ್ದೇಶಿಸಿ ಭಾಷಣ ಮಾಡಿದ ಮೋದಿ, ಭಾರತ ಭಯೋತ್ಪಾದನೆಯ ಬಲಿಪಶು ರಾಷ್ಟ್ರವಾಗಿದ್ದರೆ, ಪಾಕಿಸ್ತಾನ ಅದರ ಬೆಂಬಲಿಗ ರಾಷ್ಟ್ರವಾಗಿದೆ ಎಂದು ಬ್ರಿಕ್ಸ್‌ ಶೃಂಗಸಭೆಯಲ್ಲಿ ವಿಶ್ವ ನಾಯಕರಿಗೆ ಮನವರಿಕೆ ಮಾಡಿಕೊಟ್ಟ ಪ್ರಧಾನಿ ಮೋದಿ, ಬಲಿಪಶುಗಳು ಮತ್ತು ಬೆಂಬಲಿಗರನ್ನು ಒಂದೇ ತಕ್ಕಡಿಯಲ್ಲಿ ತೂಗಲು ಸಾಧ್ಯವಿಲ್ಲ ಎಂದು ಒತ್ತಿ ಹೇಳಿದ್ದಾರೆ.

    ಭಯೋತ್ಪಾದನೆಗೆ ಬೆಂಬಲ ನೀಡುವುದು, ಭಯೋತ್ಪಾದಕರಿಗೆ ಮೌನ ಒಪ್ಪಿಗೆ ನೀಡುವುದನ್ನು ಸಹಿಸಲಾಗುವುದಿಲ್ಲ. ಈ ಬಗ್ಗೆ ನಿರ್ಣಾಯಕ ನಿರ್ಧಾರ ತೆಗೆದುಕೊಳ್ಳುವಂತೆ ಎಲ್ಲಾ ರಾಷ್ಟ್ರಗಳಿಗೆ ಮನವಿ ಮಾಡಿದ್ರು. ಅಲ್ಲದೇ ಭಾರತ ಮಹಾತ್ಮ ಗಾಂಧಿ, ಗೌತಮ ಬುದ್ಧರಿಂದ ಪ್ರೇರಿತರಾಗಿ ಶಾಂತಿಯ ಹಾದಿಯಲ್ಲಿ ಮುಂದುವರಿಯುತ್ತಿದೆ. ಎಷ್ಟೇ ಕಠಿಣ ಪರಿಸ್ಥಿತಿ ಬಂದರೂ, ಮಾನವಕುಲದ ಕಲ್ಯಾಣಕ್ಕೆ ಶಾಂತಿಯೇ ಅತ್ಯುತ್ತಮ ಮಾರ್ಗವಾಗಿದೆ ಎಂದು ಪ್ರತಿಪಾದಿಸಿದ್ರು. ಇದನ್ನೂ ಓದಿ: ಅಧಿಕೃತ ನಿವಾಸದಿಂದ ತಕ್ಷಣವೇ ಚಂದ್ರಚೂಡ್ ತೆರವಿಗೆ ಕೇಂದ್ರಕ್ಕೆ ಸುಪ್ರೀಂ ಪತ್ರ

    ಪಾಕಿಸ್ತಾನವು ತನ್ನ ನೆಲದಲ್ಲಿ ಭಯೋತ್ಪಾದಕರಿಗೆ ಆಶ್ರಯ ನೀಡುವ ಮೂಲಕ ಭಯೋತ್ಪಾದನೆಯನ್ನ ರಾಜ್ಯ ನೀತಿಯಾಗಿ ಹೇಗೆ ಬಳಸುತ್ತಿದೆ ಎಂಬುದನ್ನು ಭಾರತವು 17ನೇ ಬಾರಿಗೆ ಸ್ಪಷ್ಟ ಪುರಾವೆಗಳೊಂದಿಗೆ ತೋರಿಸಿದೆ. ಇತ್ತೀಚಿಗೆ ಚೀನಾದ ರಾಜಧಾನಿ ಬೀಜಿಂಗ್‌ನಲ್ಲಿ ನಡೆದ ಶಾಂಘೈ ಸಹಕಾರ ಒಕ್ಕೂಟದ ರಕ್ಷಣಾ ಸಚಿವರ ಸಭೆಯಲ್ಲಿ, ಪಹಲ್ಗಾಮ್‌ ದಾಳಿ ಉಲ್ಲೇಖವಿರದ ಜಂಟಿ ಹೇಳಿಕೆಗೆ ಸಹಿ ಮಾಡಲು, ಭಾರತ ನಿರಾಕರಿಸಿತ್ತು. ಇದನ್ನೂ ಓದಿ: ಭಾಷೆ ಹೆಸರಲ್ಲಿ ಜನರನ್ನು ವಿಭಜಿಸಬಾರದು: ಮರಾಠಿ-ಹಿಂದಿ ಸಂಘರ್ಷ ಬಗ್ಗೆ ಕಂಗನಾ ಪ್ರತಿಕ್ರಿಯೆ

    ಉಗ್ರವಾದಕ್ಕೆ ಖಂಡನೆ
    ಇನ್ನೂ ಪ್ರಧಾನಿ ಮೋದಿ ಅವರ ಭಾಷಣದ ಬಳಿಕ ಬ್ರಿಕ್ಸ್‌ ಸದಸ್ಯ ರಾಷ್ಟ್ರಗಳು ಜಂಟಿ ಹೇಳಿಕೆ ಅಥವಾ ʻರಿಯೊ ಡಿ ಜನೈರೊ ಘೋಷಣೆʼಯನ್ನು ಹೊರಡಿಸಿದವು. ಯಾವುದೇ ರೀತಿಯ ಭಯೋತ್ಪಾದಕ ಕೃತ್ಯಗಳನ್ನು ಖಂಡಿಸುವುದಾಗಿ ಸ್ಪಷ್ಟಪಡಿಸಿರುವ ಬ್ರಿಕ್ಸ್‌ ನಾಯಕರು, ಭಯೋತ್ಪಾದನೆಗೆ ಯಾರೇ ಬೆಂಬಲ ನೀಡಿದರೂ ಅದನ್ನು ಉಗ್ರವಾಗಿ ಖಂಡಿಸುವುದಾಗಿ ಹೇಳಿದ್ದಾರೆ.

    ನೆನಪಿದೆಯಾ ಪಹಲ್ಗಾಮ್‌ ಉಗ್ರರ ದಾಳಿ
    ಕಳೆದ ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಬೈಸರನ್‌ ಕಣಿವೆ ಪ್ರದೇಶದಲ್ಲಿರುವ ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿ ನಡೆದಿತ್ತು. ಇದರಲ್ಲಿ ಓರ್ವ ವಿದೇಶಿ ಸೇರಿ 26 ಮಂದಿ ಸಾವನ್ನಪ್ಪಿದ್ದರು. ನೇಕರು ಗಾಯಗೊಂಡರು. ಇದಕ್ಕೆ ಪ್ರತೀಕಾರವಾಗಿ ಭಾರತ ಆಪರೇಷನ್‌ ಸಿಂಧೂರ ಕಾರ್ಯಾಚರಣೆ ನಡೆಸಿತ್ತು. ಇದನ್ನೂ ಓದಿ:  ಹಾವಿನ ದ್ವೇಷ 12 ವರುಷ – ಹಾಗೇ ಪ್ರೀತಿಯೂ ಪುರಾಣದಿಂದಲೇ ಹುಟ್ಟಿದ್ದಾ?

  • ಭಯೋತ್ಪಾದನೆ, ಶಾಂತಿ ಒಟ್ಟಿಗೆ ಇರಲು ಸಾಧ್ಯವಿಲ್ಲ: ರಾಜನಾಥ್ ಸಿಂಗ್ ಗುಡುಗು

    ಭಯೋತ್ಪಾದನೆ, ಶಾಂತಿ ಒಟ್ಟಿಗೆ ಇರಲು ಸಾಧ್ಯವಿಲ್ಲ: ರಾಜನಾಥ್ ಸಿಂಗ್ ಗುಡುಗು

    ನವದೆಹಲಿ/ಬೀಜಿಂಗ್: ಕೆಲವು ದೇಶಗಳು ತಮ್ಮ ನೀತಿಗಳಲ್ಲಿ ಗಡಿಯಾಚೆಗಿನ ಭಯೋತ್ಪಾದನೆಯನ್ನು (Terrorism) ಅಸ್ತ್ರವಾಗಿ ಬಳಸುತ್ತಿವೆ ಮತ್ತು ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿವೆ. ಅಂತಹ ದ್ವಿಮುಖ ನೀತಿಗಳನ್ನು ಕೊನೆಗೊಳಿಸುವುದು ಬಹಳ ಮುಖ್ಯ ಮತ್ತು SCOನಂತಹ ವೇದಿಕೆಯು ಅಂತಹ ಶಕ್ತಿಗಳನ್ನು ಬಹಿರಂಗವಾಗಿ ಟೀಕಿಸಬೇಕು ಎಂದು ರಕ್ಷಣಾ ರಾಜನಾಥ್ ಸಿಂಗ್ (Rajnath Singh) ಹೇಳಿದರು.

    ಚೀನಾದಲ್ಲಿ ನಡೆದ ಶಾಂಘೈ ಸಹಕಾರ ಸಂಸ್ಥೆ (SCO) ರಕ್ಷಣಾ ಸಚಿವರ ಸಭೆಯಲ್ಲಿ ಮಾತನಾಡಿದ ರಾಜನಾಥ್ ಸಿಂಗ್, ಪಾಕಿಸ್ತಾನದ ಮೇಲೆ ಪರೋಕ್ಷ ದಾಳಿ ನಡೆಸಿದರು. ಭಯೋತ್ಪಾದನೆ ಮತ್ತು ಶಾಂತಿ ಒಟ್ಟಿಗೆ ಇರಲು ಸಾಧ್ಯವಿಲ್ಲ ಎಂದು ಹೇಳಿದರು. ಇದೇ ವೇಳೆ ಭಾರತದ ಭಯೋತ್ಪಾದನೆಯ ವಿಷಯದ ಬಗ್ಗೆ ತನ್ನ ಕಠಿಣ ನಿಲುವನ್ನು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಹಾಸನ | 22 ವರ್ಷದ ಪದವೀಧರೆ ಹೃದಯಾಘಾತಕ್ಕೆ ಬಲಿ

    ಭಯೋತ್ಪಾದನೆಯ ವಿರುದ್ಧ ಒಂದಾಗಲು ಕರೆ ನೀಡಿದ ರಾಜನಾಥ್ ಸಿಂಗ್, ಆಪರೇಷನ್ ಸಿಂಧೂರದ ಮೂಲಕ ಭಾರತ ಭಯೋತ್ಪಾದನೆಯ ಮೇಲೆ ಯಾವುದೇ ಒತ್ತಡ ಅಥವಾ ರಾಜಿಗೆ ಸಿದ್ಧವಾಗಿಲ್ಲ ಎಂದು ಮತ್ತೊಮ್ಮೆ ತೋರಿಸಿದೆ. ನಮ್ಮ ಹೋರಾಟಕ್ಕೆ ಇತರೆ ದೇಶಗಳು ಬೆಂಬಲ ನೀಡಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಹೇಮಾವತಿ ಲಿಂಕ್ ಕೆನಾಲ್ ಸಭೆ ಮುಂದೂಡಿಕೆ: ಡಿಸಿಎಂ ಡಿ.ಕೆ.ಶಿವಕುಮಾರ್

    SCOಯಲ್ಲಿ ಭಾರತ, ಚೀನಾ, ಪಾಕಿಸ್ತಾನ, ರಷ್ಯಾ ಸೇರಿದಂತೆ ಒಟ್ಟು ಹತ್ತು ಸದಸ್ಯ ರಾಷ್ಟ್ರಗಳಿದೆ. ಈ ಬಾರಿ  SCO ಅಧ್ಯಕ್ಷರಾಗಿರುವ ಚೀನಾ ಮತ್ತು ಅದರ ಆಪ್ತ ಮಿತ್ರ ಪಾಕಿಸ್ತಾನ ಇಬ್ಬರೂ ಒಟ್ಟಾಗಿ SCO ದಾಖಲೆಯಲ್ಲಿ ಭಯೋತ್ಪಾದನೆಯ ಮೇಲಿನ ಗಮನವನ್ನು ಕಡಿಮೆ ಮಾಡಲು ಪ್ರಯತ್ನಿಸಿದರು. ಆದರೆ ಭಾರತ ಇದಕ್ಕೆ ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿತು ಮತ್ತು ತನ್ನ ನಿಲುವಿನಲ್ಲಿ ರಾಜಿ ಮಾಡಿಕೊಳ್ಳಲಿಲ್ಲ. ವಿಶೇಷವಾಗಿ ಕಾಶ್ಮೀರದ ಪಹಲ್ಗಾಮ್‌ನಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಯ ಬಗ್ಗೆ, ಭಯೋತ್ಪಾದನೆಯ ಮೇಲೆ ಯಾವುದೇ ದಯೆಯನ್ನು ಸಹಿಸುವುದಿಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಬಾಹ್ಯಾಕಾಶದಲ್ಲಿ ಮೊಳಕೆ ಒಡೆಯಲಿವೆ ಧಾರವಾಡ ಕೃಷಿ ವಿವಿಯ ಮೆಂತೆ, ಹೆಸರು ಕಾಳು!

  • ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಪಾಕ್‌ ಮಹಾನ್‌ ಪಾಲುದಾರ; ಪಾಕ್‌ ಹೊಗಳಿದ ಅಮೆರಿಕ

    ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಪಾಕ್‌ ಮಹಾನ್‌ ಪಾಲುದಾರ; ಪಾಕ್‌ ಹೊಗಳಿದ ಅಮೆರಿಕ

    – ಭಾರತ – ಪಾಕಿಸ್ತಾನ ಎರಡರೊಂದಿಗೂ ಸಂಬಂಧ ಕಾಪಾಡಿಕೊಳ್ಳುವುದಾಗಿ ಪ್ರತಿಪಾದನೆ

    ವಾಷಿಂಗ್ಟನ್‌: ಭಯೋತ್ಪಾದನೆ (Terrorism) ವಿರುದ್ಧದ ಹೋರಾಟದಲ್ಲಿ ಪಾಕಿಸ್ತಾನ ಅದ್ಭುತ ಪಾಲುದಾರ ಎಂದು ಸೆಂಟ್ರಲ್ ಕಮಾಂಡ್ (ಸೆಂಟ್‌ಕಾಮ್) ನ ಕಮಾಂಡರ್ ಜನರಲ್ ಮೈಕೆಲ್ ಕುರಿಲ್ಲಾ (Michael Kurilla) ಬಣ್ಣಿಸಿದ್ದಾರೆ.

    ಪಾಕಿಸ್ತಾನ ಸೇನಾ ಮುಖ್ಯಸ್ಥ ಫೀಲ್ಡ್‌ ಮಾರ್ಷಲ್‌ ಅಸೀಮ್‌ ಮುನೀರ್‌ (Asim Munir) ಅವರನ್ನು ಆಹ್ವಾನಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮುಂದಾಗಿದ್ದಾರೆ. ಈ ನಡುವೆ ಇಸ್ಲಾಮಿಕ್‌ ಸ್ಟೇಟ್‌ (ಐಸಿಸ್-ಖೋರಾಸನ್) ಉಗ್ರರನ್ನು ಸದೆಬಡಿಯುವಲ್ಲಿ ಪಾಕಿಸ್ತಾನ (Pakistan) ನೀಡಿದ ಸಹಕಾರವನ್ನು ಅಮೆರಿಕ ಮಿಲಿಟರಿ ಕಮಾಂಡರ್‌ ಹಾರಿ ಹೊಗಳಿದ್ದಾರೆ.

    ಅಮೆರಿಕದ ಸಂಸತ್ತಿನಲ್ಲಿ ಸಶಸ್ತ್ರ ಸೇವೆಗಳ ಸಮಿತಿ ವಿಚಾರಣೆ ಸಂದರ್ಭದಲ್ಲಿ ಕುರಿಲ್ಲಾ ಮಾತನಾಡಿದ್ದು, ಇಸ್ಲಾಮಾಬಾದ್‌ ಪಾತ್ರವನ್ನು ಹಾಡಿಹೊಗಳಿದ್ದಾರೆ. ಆಪರೇಷನ್‌ ಸಿಂಧೂರ ಕಾರ್ಯಾಚರಣೆ ಬಳಿಕ ಭಯೋತ್ಪಾದನೆ ಪ್ರಾಯೋಜಿತ ಪಾಕ್‌ ಮುಖವಾಡವನ್ನು ಬಯಲುಮಾಡಲು ಭಾರತ ಸರ್ವಪಕ್ಷ ನಿಯೋಗವನ್ನು ವಿದೇಶಗಳಿಗೆ ಕಳುಹಿಸಿದೆ. ಈ ಹೊತ್ತಿನಲ್ಲೇ ಪಾಕಿಸ್ತಾನವನ್ನು ಅಮೆರಿಕ ಮಿಲಿಟರಿ ಅಧಿಕಾರಿ ಹಾಡಿಹೊಗಳಿದ್ದಾರೆ. ಅಲ್ಲದೇ ನಾವು ಪಾಕಿಸ್ತಾನ ಮತ್ತು ಭಾರತ ಎರಡೂ ದೇಶಗಳೊಂದಿಗೆ ಉತ್ತಮ ಸಂಬಂಧ ಬೆಳೆಸಿಕೊಳ್ಳುವುದಾಗಿಯೂ ಪ್ರತಿಪಾದಿಸಿದ್ದಾರೆ.

    ಪಾಕಿಸ್ತಾನ ಪ್ರಸ್ತುತ ಭಯೋತ್ಪಾದನೆ ವಿರುದ್ಧ ಹೋರಾಡುತ್ತಿದೆ, ಹಾಗೂ ಭಯೋತ್ಪಾದನೆ ನಿಗ್ರಗದಲ್ಲಿ ಅಭೂತಪೂರ್ವ ಪಾಲುದಾರನಾಗಿದೆ ಎಂದರಲ್ಲದೇ ನವದೆಹಲಿ ಮತ್ತು ಇಸ್ಲಾಮಾಬಾದ್/ರಾವಲ್ಪಿಂಡಿ ಎರಡರೊಂದಿಗೂ ವಾಷಿಂಗ್ಟನ್ ಬಲವಾದ ಸಂಬಂಧ ಹೊಂದಿರಬೇಕು. ಭಯೋತ್ಪಾದನೆಯ ವಿರುದ್ಧದ ಅಮೆರಿಕದ ಹೋರಾಟಕ್ಕೆ ಭಾರತ, ಪಾಕಿಸ್ತಾನ ಎರಡೂ ರಾಷ್ಟ್ರಗಳ ನೆರವು ಬೇಕೆಂದು ಮನವಿ ಮಾಡಿದ್ದಾರೆ.

    ಅಫ್ಘಾನಿಸ್ತಾನದಿಂದ ಕಾರ್ಯನಿರ್ವಹಿಸುತ್ತಿರುವ ಐಸಿಸ್-ಖೋರಾಸನ್, ಅಮೆರಿಕದಲ್ಲಿ ಮಾತ್ರವಲ್ಲದೇ ವಿಶ್ವದಾದ್ಯಂತ ವಿವಿಧೆಡೆ ಭಯೋತ್ಪಾದಕ ದಾಳಿ ನಡೆಸುತ್ತಿರುವ ಸಕ್ರೀಯ ಸಂಘಟನೆಗಳಲ್ಲಿ ಒಂದಾಗಿದೆ. ಆದ್ರೆ ಇಸ್ಲಾಮಾಬಾದ್ ಐಸಿಸ್ ಹೋರಾಟಗಾರರನ್ನು ಗುರಿಯಾಗಿಸಲು ಅಫ್ಘಾನಿಸ್ತಾನ-ಪಾಕಿಸ್ತಾನ ಗಡಿಯಲ್ಲಿ ಡಜನ್ಗಟ್ಟಲೆ ಕಾರ್ಯಾಚರಣೆ ನಡೆಸಿದೆ ಎಂದು ಶ್ಲಾಘಿಸಿದ್ದಾರೆ.

    ಗಡಿಯಾಚೆಗಿನ ಭಯೋತ್ಪಾದನೆಗೆ ಬೆಂಬಲ ನೀಡುತ್ತಿರುವ ಪಾಕಿಸ್ತಾನವನ್ನು ಹೊಣೆಗಾರರನ್ನಾಗಿ ಮಾಡಲು ಭಾರತವು ರಾಜತಾಂತ್ರಿಕ ದಾಳಿ ನಡೆಸುತ್ತಿರುವ ಹೊತ್ತಿನಲ್ಲಿ ಕುರಿಲ್ಲಾ ಅವರ ಹೇಳಿಕೆಗಳು ಬಂದಿವೆ.

  • ಭಯೋತ್ಪಾದನೆ ನಿರ್ಮೂಲನೆ ಮಾಡಿ, ಜೈಶ್‌ ಉಗ್ರ ಸಂಘಟನೆ ವಿರುದ್ಧ ಕ್ರಮ ತಗೊಳ್ಳಿ – ಪಾಕ್‌ಗೆ ಅಮೆರಿಕ ವಾರ್ನಿಂಗ್‌

    ಭಯೋತ್ಪಾದನೆ ನಿರ್ಮೂಲನೆ ಮಾಡಿ, ಜೈಶ್‌ ಉಗ್ರ ಸಂಘಟನೆ ವಿರುದ್ಧ ಕ್ರಮ ತಗೊಳ್ಳಿ – ಪಾಕ್‌ಗೆ ಅಮೆರಿಕ ವಾರ್ನಿಂಗ್‌

    ಇಸ್ಲಾಮಾಬಾದ್‌/ವಾಷಿಂಗ್ಟನ್‌: ಜೈಶ್‌ ಎ ಮೊಹಮ್ಮದ್‌ (Jaish-e-Mohammed) ಭಯೋತ್ಪಾದಕ ಸಂಘಟನೆ ವಿರುದ್ಧ ನಿರ್ಣಾಯಕ ಕ್ರಮ ಕೈಗೊಳ್ಳುವಂತೆ ಅಮೆರಿಕ ಸಂಸದ ಬ್ರಾಡ್‌ ಶೆರ್ಮನ್ (Brad Sherman) ಪಾಕಿಸ್ತಾನಕ್ಕೆ ಬಲವಾದ ಸಂದೇಶ ನೀಡಿದ್ದಾರೆ. ಅಲ್ಲದೇ ಜೈಶ್‌ ಸಂಘಟನೆಯ ನೀಚ ಕೃತ್ಯಗಳನ್ನು ಪಾಕಿಸ್ತಾನದ ಮಾಜಿ ಸಚಿವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ವರದಿಯಾಗಿದೆ.

    ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ನೇತೃತ್ವದ ಪಾಕಿಸ್ತಾನಿ ನಿಯೋಗವನ್ನು (Pakistani delegation) ವಾಷಿಂಗ್ಟನ್‌ನಲ್ಲಿ ಭೇಟಿಯಾದ ಶೆರ್ಮನ್, ಜೆಇಎಂನ ನೀಚ ಕೃತ್ಯಗಳ ಬಗ್ಗೆ ತಿಳಿಸಿದ್ದಾರೆ. 2002 ರಲ್ಲಿ ವಾಲ್ ಸ್ಟ್ರೀಟ್ ಜರ್ನಲ್‌ನ ಪತ್ರಕರ್ತ ಡೇನಿಯಲ್ ಪರ್ಲ್ (Daniel Pearl) ಅವರ ಹತ್ಯೆ ಸೇರಿದಂತೆ ಅನೇಕ ಘೋರ ಅಪರಾಧಗಳಿಗೆ ಈ ಗುಂಪು ಕಾರಣವಾಗಿದೆ. ಹಾಗಾಗಿ ಈ ಉಗ್ರ ಸಂಘಟನೆಯನ್ನು ಬುಡಸಮೇತ ನಿರ್ಮೂಲನೆ ಮಾಡಬೇಕು. ಭಯೋತ್ಪಾದನೆ ವಿರುದ್ಧ ಬಲವಾದ ಹೋರಾಟ ನಡೆಸಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ಪಾಕಿಸ್ತಾನ ತೆಗೆದುಕೊಳ್ಳಬೇಕು ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಪಹಲ್ಗಾಮ್‌ ದಾಳಿಗೆ ಖಂಡನೆ – ಭಯೋತ್ಪಾದನೆ ವಿರುದ್ಧ ಭಾರತದ ಹೋರಾಟಕ್ಕೆ ʻಬ್ರಿಕ್ಸ್‌ʼ ಸದಸ್ಯ ರಾಷ್ಟ್ರಗಳ ಬೆಂಬಲ

    Bilawal Bhutto Zardari

    ಪಾಕ್‌ ಮುಖವಾಡ ಬಯಲು ಮಾಡಲು ಭಾರತ ಕಳುಹಿಸಿರುವ ಸಂಸದ ಶಶಿ ತರೂರ್‌ ನೇತೃತ್ವದ ಸರ್ವಪಕ್ಷ ನಿಯೋಗ ಸಹ ವಾಷಿಂಗ್ಟನ್‌ನಲ್ಲಿದ್ದು, ಆಪರೇಷನ್‌ ಸಿಂಧೂರ ಕಾರ್ಯಾಚರಣೆ ಹಾಗೂ ಪಾಕ್‌ ಭಯೋತ್ಪಾದಕ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡುತ್ತಿದೆ. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತದ ನಿಲುವನ್ನು ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಹಫೀಜ್ ಅಬ್ದುರ್ ರೌಫ್ ಉಗ್ರನಲ್ಲ, ಧರ್ಮಗುರು – ವಿಶ್ವಸಂಸ್ಥೆಯಲ್ಲಿ ಪಾಕ್‌ ಮಾಜಿ ಸಚಿವನ ಮೊಂಡುವಾದ

    ಈ ನಡುವೆ ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿರುವ ಬ್ರಾಡ್‌ ಶೆರ್ಮನ್‌, ಭಯೋತ್ಪಾದನೆ ವಿರುದ್ಧದ ಹೋರಾಟದ ಮಹತ್ವದನ್ನು ನಾನು ಪಾಕಿಸ್ತಾನಿ ನಿಯೋಗಕ್ಕೆ ತಿಳಿಸಿದ್ದೇನೆ. ಅದರಲ್ಲೂ ಮುಖ್ಯವಾಗಿ ಜೈಶ್‌ ಎ ಮೊಹಮ್ಮದ್‌ ಉಗ್ರ ಸಂಘಟನೆ ವಿರುದ್ಧ ನಿರ್ಣಾಯಕ ಕ್ರಮಕ್ಕೆ ಸೂಚಿಸಿದ್ದೇನೆ. 2002ರಲ್ಲಿ ಜೈಶ್ ಉಗ್ರರು ನನ್ನ ಕ್ಷೇತ್ರದ ನಿವಾಸಿಯೂ ಆಗಿರುವ ಪತ್ರಕರ್ತ ಡೇನಿಯಲ್ ಪರ್ಲ್‌ರನ್ನ ಹತ್ಯೆಗೈದಿದ್ದರು. ಅವರ ಕುಟುಂಬ ಇನ್ನೂ ಕ್ಯಾಲಿಫೋರ್ನಿಯಾದಲ್ಲಿ ವಾಸಿಸುತ್ತಿದೆ. ಡೇನಿಯಲ್ ಪರ್ಲ್ ಅಪಹರಣ ಮತ್ತು ಕೊಲೆಯಲ್ಲಿ ಭಯೋತ್ಪಾದಕ ಒಮರ್ ಸಯೀದ್ ಶೇಖ್ ಶಿಕ್ಷೆಗೊಳಗಾಗಿದ್ದಾನೆ ಎಂದು ವಿವರಿಸಿದ್ದಾರೆ.

    ಜೈಶ್ ಸಂಘಟನೆ ಪಾತ್ರ ಏನು?
    ಜೈಶ್-ಎ-ಮೊಹಮ್ಮದ್ ಅನ್ನು ವಿಶ್ವಸಂಸ್ಥೆ ಈಗಾಗಲೇ ನಿಷೇಧಿತ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದೆ. 2019ರ ಪುಲ್ವಾಮಾ ದಾಳಿಯಂತಹ ಅನೇಕ ದಾಳಿಗಳಿಗೆ ಈ ಸಂಘಟನೆ ಕಾರಣವಾಗಿದೆ ಎಂದು ನಂಬಲಾಗಿದೆ. ಇದನ್ನೂ ಓದಿ: ಟ್ರಂಪ್‌ ಉಚ್ಚಾಟನೆಗೆ ಕರೆ ಕೊಟ್ಟ ಬೆನ್ನಲ್ಲೇ ಮಸ್ಕ್‌ ಕಂಪನಿಗಳಿಗೆ ಶಾಕ್‌!

    ಅಲ್ಪಸಂಖ್ಯಾತರ ಬಗ್ಗೆ ಕಳವಳ
    ಭಯೋತ್ಪಾದನೆಯ ನಿರ್ಮೂಲನೆ ಬಗ್ಗೆ ಬಲವಾದ ಸಂದೇಶ ನೀಡಿರುವ ಶೆರ್ಮನ್‌, ಪಾಕಿಸ್ತಾನದಲ್ಲಿನ ಅಲ್ಪಸಂಖ್ಯಾತರ ಸ್ಥಿತಿಯ ಬಗ್ಗೆಯೂ ಕಳವಳ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನದಲ್ಲಿರುವ ಕ್ರಿಶ್ಚಿಯನ್ನರು, ಹಿಂದೂಗಳು ಮತ್ತು ಅಹ್ಮದೀಯ ಮುಸ್ಲಿಮರು ತಮ್ಮ ನಂಬಿಕೆಯನ್ನು ಆಚರಿಸಲು ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಯವಿಲ್ಲದಂತೆ ಸ್ವತಂತ್ರರಾಗಿರುವಂತೆ ನೋಡಿಕೊಳ್ಳಬೇಕು ಅಂತಲೂ ಸೂಚಿಸಿದ್ದಾರೆ. ಇದನ್ನೂ ಓದಿ: ಭಾರತ ಭಾರೀ ನಷ್ಟದಲ್ಲಿರೋದ್ರಿಂದ ಮತ್ತೆ ಸಂಘರ್ಷ ಮರುಕಳಿಸೋ ಸಾಧ್ಯತೆ ಕಡಿಮೆ: ಪಾಕ್‌ ಸಚಿವ ಇಶಾಕ್‌ ದಾರ್‌

  • ಭಾರತ ಭಾರೀ ನಷ್ಟದಲ್ಲಿರೋದ್ರಿಂದ ಮತ್ತೆ ಸಂಘರ್ಷ ಮರುಕಳಿಸೋ ಸಾಧ್ಯತೆ ಕಡಿಮೆ: ಪಾಕ್‌ ಸಚಿವ ಇಶಾಕ್‌ ದಾರ್‌

    ಭಾರತ ಭಾರೀ ನಷ್ಟದಲ್ಲಿರೋದ್ರಿಂದ ಮತ್ತೆ ಸಂಘರ್ಷ ಮರುಕಳಿಸೋ ಸಾಧ್ಯತೆ ಕಡಿಮೆ: ಪಾಕ್‌ ಸಚಿವ ಇಶಾಕ್‌ ದಾರ್‌

    ಇಸ್ಲಾಮಾಬಾದ್‌: ಭಾರತ ಭಾರೀ ನಷ್ಟ ಅನುಭವಿಸುತ್ತಿರುವುದರಿಂದ 2 ರಾಷ್ಟ್ರಗಳ ನಡುವೆ ಪೂರ್ಣ ಪ್ರಮಾಣದ ಯುದ್ಧ ಸಂಭವಿಸುವ ಸಾಧ್ಯತೆಗಳು ತೀರಾ ಕಡಿಮೆ ಅಂತ ಪಾಕಿಸ್ತಾನದ (Pakistan) ಸಚಿವ ಇಶಾಕ್‌ ದಾರ್‌ (Ishaq Dar) ಹೇಳಿದ್ದಾರೆ.

    ಗಡಿಯಲ್ಲಿ ಭಾರತದಿಂದ ಉಂಟಾದ ಭಾರೀ ನಷ್ಟಗಳ ಬಗ್ಗೆ ವರದಿಯಾಗುತ್ತಿದ್ದಂತೆ ಇಸ್ಲಾಮಾಬಾದ್‌ನಲ್ಲಿ (Islamabad) ಮಾಧ್ಯಮಗಳೊಂದಿಗೆ ಅವರು ಮಾತನಾಡಿ, ಪಾಕಿಸ್ತಾನ ಶಾಂತಿ ಮಾತುಕತೆಗೆ ಸಿದ್ಧವಾಗಿದ್ದರೂ ಭಾರತ ಆಸಕ್ತಿ ತೋರುತ್ತಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಕೃಷಿ ಬೆಳೆಯನ್ನೇ ಧ್ವಂಸ ಮಾಡೋ ಅಪಾಯಕಾರಿ ಶಿಲೀಂಧ್ರ ಕಳ್ಳ ಸಾಗಾಣೆ-ಅಮೆರಿಕದಲ್ಲಿ ಇಬ್ಬರು ಚೀನಿಯರು ಅರೆಸ್ಟ್‌

    ಸಿಂಧೂ ಜಲ ಒಪ್ಪಂದ ಸೇರಿದಂತೆ ಬಹು ವಿವಾದಾತ್ಮಕ ವಿಷಯಗಳನ್ನೊಳಗೊಂಡ ಸಮಗ್ರ ಚರ್ಚೆಗೆ ಪಾಕಿಸ್ತಾನ ಮುಕ್ತವಾಗಿದೆ. ಆದ್ರೆ ಭಾರತ ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಮಾತ್ರ ತೊಡಗಿಕೊಂಡಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಉಗ್ರ ಪ್ರೇಮಿ ಪಾಕ್‌ಗೆ ಮಿಲಿಟರಿ ಬಜೆಟ್ಟೇ ಭಸ್ಮಾಸುರ!?

    ಮುಂದುವರಿದು.. ಭಾರತದ ಎಲ್‌ಒಸಿ ಬಳಿ ಗಡಿಯಾಚೆಗಿನ ಭಯೋತ್ಪಾದನೆ ಕಾರ್ಯಾಚರಣೆ ವೇಳೆ ಭಾರೀ ನಷ್ಟ ಅನುಭವಿಸಿದೆ ಅನ್ನೋ ಮಾಹಿತಿಗಳು ಬಂದಿವೆ ಎಂದಿದ್ದಾರೆ. ಆದ್ರೆ ಪಾಕಿಸ್ತಾನದ ಉತ್ತನ ಅಧಿಕಾರಿಗಳು ಈ ಬಗ್ಗೆ ಎಲ್ಲಿಯೂ ಅಧಿಕೃತ ಹೇಳಿಕೆಗಳನ್ನ ನೀಡಿಲ್ಲ. ಇದನ್ನೂ ಓದಿ: ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ಉಪ್ಪಿನ ಬಿಕ್ಕಟ್ಟು – ಕಾರಣ ಏನು?

    ಕಳೆದ ಏಪ್ರಿಲ್‌ 22ರಂದು ಪಹಲ್ಗಾಮ್‌ನಲ್ಲಿ ನಡೆದಿದ್ದ ಭಯೋತ್ಪಾದಕ ದಾಳಿ ಬಳಿಕ ನಡೆದ ಭದ್ರತಾ ಸಂಪುಟ ಸಮಿತಿಯಲ್ಲಿ ಭಾರತ ಸಿಂಧೂ ಜಲಒಪ್ಪಂದವನ್ನು ರದ್ದುಗೊಳಿಸುವ ತೀರ್ಮಾನ ಕೈಗೊಂಡಿತ್ತು. ಆದ್ರೆ ಪಾಕಿಸ್ತಾನದ ಶೇ.80 ರಷ್ಟು ಕೃಷಿ ಭೂಮಿಗೆ ಈ ನೀರಿನ ಮೂಲವೇ ಆಧಾರವಾಗಿದೆ. ಸದ್ಯ ಭಾರತದಿಂದ ನೀರಿನ ಪ್ರಮಾಣ ಇಳಿಕೆ ಮಾಡಿರೋದ್ರಿಂದ ಕೃಷಿಯಲ್ಲೂ ಪಾಕಿಸ್ತಾನ ನಷ್ಟ ಅನುಭವಿಸುವ ಆತಂಕದಲ್ಲಿದೆ ಎಂದು ತಿಳಿದುಬಂದಿದೆ.

  • ಭಯೋತ್ಪಾದನೆ ವಿರುದ್ಧ ಭಾರತದ ದಿಟ್ಟ ಹೋರಾಟಕ್ಕೆ ಬೆಂಬಲ – ಸ್ಲೊವೇನಿಯಾದಲ್ಲಿ ಸಂಸದ ಕ್ಯಾ. ಚೌಟ ಒಳಗೊಂಡ ಸರ್ವಪಕ್ಷ ನಿಯೋಗ

    ಭಯೋತ್ಪಾದನೆ ವಿರುದ್ಧ ಭಾರತದ ದಿಟ್ಟ ಹೋರಾಟಕ್ಕೆ ಬೆಂಬಲ – ಸ್ಲೊವೇನಿಯಾದಲ್ಲಿ ಸಂಸದ ಕ್ಯಾ. ಚೌಟ ಒಳಗೊಂಡ ಸರ್ವಪಕ್ಷ ನಿಯೋಗ

    – ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತದ ನಿಲುವು ಸ್ಪಷ್ಟ

    ಸ್ಲೊವೇನಿಯಾ: ಭಯೋತ್ಪಾದನೆ (Terrorism) ವಿರುದ್ಧ ಭಾರತದ ದೃಢ ಸಂಕಲ್ಪವನ್ನು ಜಾಗತಿಕವಾಗಿ ಎತ್ತಿ ಹಿಡಿಯುವ ಮೂಲಕ ಪಾಕಿಸ್ತಾನದ ನಿಜಬಣ್ಣ ಬಯಲು ಮಾಡುವುದಕ್ಕೆ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌ ಚೌಟ (Brijesh Chowta) ಅವರನ್ನು ಒಳಗೊಂಡ ಸಂಸದೆ ಕನಿಮೋಳಿ (Kanimozhi ನೇತೃತ್ವದ ಸರ್ವಪಕ್ಷಗಳ ನಿಯೋಗವು ರಷ್ಯಾ ಭೇಟಿ ಬಳಿಕ ಇದೀಗ ಸ್ಲೊವೇನಿಯಾ ದೇಶದಲ್ಲಿದೆ. ಇಂದು ಹಲವು ಕಡೆ ಉನ್ನತ ಮಟ್ಟದ ಸಭೆ ಹಾಗೂ ಅಂತಾರಾಷ್ಟ್ರೀಯ ಮಟ್ಟದ ವೇದಿಕೆಗಳಲ್ಲಿ ಭಾರತದ ನಿಲುವನ್ನು ಸ್ಪಷ್ಟಪಡಿಸಿದೆ.

    ಸ್ಲೊವೇನಿಯಾ ದೇಶಕ್ಕೆ ಆಗಮಿಸಿದ ನಿಯೋಗವನ್ನು ಅಲ್ಲಿನ ಭಾರತೀಯ ರಾಯಭಾರಿ ಅಧಿಕಾರಿ ಅಮಿತ್ ನಾರಂಗ್ ಅವರು ಬರಮಾಡಿಕೊಂಡಿದ್ದರು. ನಂತರ ಅವರು ಸರ್ವಪಕ್ಷಗಳ ಸಂಸದೀಯ ನಿಯೋಗದ ಜತೆಗೆ ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಸ್ಲೊವೇನಿಯಾ ದೇಶವು ಭಾರತದೊಂದಿಗೆ ಬೆಂಬಲವಾಗಿ ನಿಂತಿದ್ದು, ಉಭಯ ದೇಶಗಳ ನಡುವೆ ವೃದ್ದಿಸುತ್ತಿರುವ ಬಾಂಧವ್ಯದ ಕುರಿತು ಸಮಗ್ರ ಮಾಹಿತಿ ಹಂಚಿಕೊಂಡರು.

    ಇದಾದ ಬಳಿಕ ಸರ್ವಪಕ್ಷದ ನಿಯೋಗವು ರಾಷ್ಟ್ರೀಯ ಅಸೆಂಬ್ಲಿಯ ವಿದೇಶಾಂಗ ನೀತಿ ಸಮಿತಿಯ ಅಧ್ಯಕ್ಷರಾದ ಹೆಚ್.ಇ ಪ್ರೆಡ್ರಾಗ್ ಬಕೋವಿಕ್ ಮತ್ತು ಭಾರತ-ಸ್ಲೊವೇನಿಯಾ ಪಾರ್ಲಿಮೆಂಟರಿ ಫ್ರೆಂಡ್ ಶಿಪ್ ಗ್ರೂಪ್‌ನ ಮಿರ್ಸ್ಲಾವ್ ಗ್ರೆಗೋರಿಕ್ ಅವರೊಂದಿಗೆ ಸಭೆ ನಡೆಸಿ ಭಯೋತ್ಪಾದನೆಯ ವಿರುದ್ಧ ಶೂನ್ಯ ಸಹಿಷ್ಣುತೆಯ ಕುರಿತ ಭಾರತದ ಬಲವಾದ ಬದ್ಧತೆ ಕುರಿತು ಮನವರಿಕೆ ಮಾಡಿಕೊಟ್ಟಿದೆ. ಭಯೋತ್ಪಾದನೆಯನ್ನ ಪೋಷಿಸುತ್ತಿರುವ ಪಾಕಿಸ್ತಾನದ ಇಬ್ಬಗೆಯ ನೀತಿಯ ಕುರಿತು ಭಾರತದ ಕಳವಳವನ್ನ ಸ್ಲೊವೇನಿಯಾದ ಜನಪ್ರತಿನಿಧಿಗಳು ಹಾಗೂ ಚಿಂತಕರಿಗೆ ಸ್ಪಷ್ಟವಾಗಿ ತಿಳಿಹೇಳಲಾಯಿತು.

    ಇದಾದ ಬಳಿಕ ಸ್ಲೊವೇನಿಯಾದ ಪ್ರಧಾನ ಮಂತ್ರಿ ಕಚೇರಿಯ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಭದ್ರತಾ ಕಾರ್ಯದರ್ಶಿ ಮತ್ತು ರಾಷ್ಟ್ರೀಯ ಸಂಯೋಜಕರಾದ ಎಚ್.ಇ ವೋಜ್ಕೊ ವೋಲ್ಕ್ ಅವರೊಂದಿಗೆ ನಿಯೋಗವು ಮಹತ್ವದ ಸಭೆ ನಡೆಸಿದೆ. ನಂತರ ಸ್ಲೊವೇನಿಯಾದ ವಿದೇಶಾಂಗ ಮತ್ತು ಯುರೋಪಿಯನ್ ವ್ಯವಹಾರಗಳ ಸಚಿವಾಲಯದ ಪ್ರಧಾನ ಕಾರ್ಯದರ್ಶಿ ಬಾರ್ಬರಾ ಜ್ವೊಕೆಲ್ಜ್ ಅವರನ್ನು ನಿಯೋಗ ಭೇಟಿ ಮಾಡಿತು. ಈ ವೇಳೆ ಪಹಲ್ಗಾಮ್ ದಾಳಿಯನ್ನು ಸ್ಲೊವೇನಿಯಾ ಸ್ಪಷ್ಟವಾಗಿ ಖಂಡಿಸುವುದರ ಜೊತೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಭಾರತವು ಭಯೋತ್ಪಾದನೆ ವಿರುದ್ಧದ ತಳೆದಿರುವ ನಿಲುವಿಗೆ ತನ್ನ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ. ಆ ಮೂಲಕ ಭಯೋತ್ಪಾದನೆ ವಿರುದ್ಧದ ಭಾರತದ ದಿಟ್ಟ ಹೋರಾಟದಲ್ಲಿ ಎಲ್ಲ ರೀತಿಯ ಸಹಕಾರದ ಭರವಸೆಯನ್ನು ನೀಡಿದೆ..

  • ಶಾಂತಿಯುತವಾಗಿ ಬದುಕಬೇಕಾದ್ರೆ ರೊಟ್ಟಿ ತಿನ್ನಿ, ಇಲ್ಲದಿದ್ರೆ ನನ್ನ ಬುಲೆಟ್‌ಗಳು ಯಾವಾಗಲೂ ರೆಡಿ ಇರುತ್ತೆ: ಮೋದಿ ವಾರ್ನಿಂಗ್‌

    ಶಾಂತಿಯುತವಾಗಿ ಬದುಕಬೇಕಾದ್ರೆ ರೊಟ್ಟಿ ತಿನ್ನಿ, ಇಲ್ಲದಿದ್ರೆ ನನ್ನ ಬುಲೆಟ್‌ಗಳು ಯಾವಾಗಲೂ ರೆಡಿ ಇರುತ್ತೆ: ಮೋದಿ ವಾರ್ನಿಂಗ್‌

    – ನಮ್ಮ ರಕ್ತ ಚೆಲ್ಲಲು ಯತ್ನಿಸುವವರಿಗೆ ಅವರದ್ದೇ ಭಾಷೆಯಲ್ಲಿ ಉತ್ತರಿಸಲು ಭಾರತ ಸಿದ್ಧ
    – ಭಯೋತ್ಪಾದನೆ ಕೈಬಿಡದಿದ್ದರೆ ನಿಮ್ಮ ಮಕ್ಕಳ ಭವಿಷ್ಯ ಕತ್ತಲಲ್ಲಿ ಮುಳುಗುತ್ತೆ; ಪಾಕ್‌ಗೆ ಎಚ್ಚರಿಕೆ

    ಗಾಂಧಿನಗರ (ಭುಜ್‌): ನೀವು ಶಾಂತಿಯುತ ಜೀವನ ಬಯಸಿದ್ರೆ ನಿಮ್ಮ ಬ್ರೆಡ್‌ (ರೊಟ್ಟಿ) ತಿನ್ನಿ ಇಲ್ಲದಿದ್ದರೆ ನನ್ನ ಬುಲೆಟ್‌ಗಳು ಯಾವಾಗಲೂ ಸಿದ್ಧವಾಗಿರುತ್ತೆ. ಭಯೋತ್ಪಾದನೆಯನ್ನ ಕೈಬಿಡದಿದ್ರೆ ನಿಮ್ಮ ಮಕ್ಕಳ ಭವಿಷ್ಯ ಕತ್ತಲಲ್ಲಿ ಮುಳುಗುತ್ತೆ ಅಂತ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಪಾಕಿಸ್ತಾನ ಸರ್ಕಾರ , ಪಾಕ್‌ ಸೇನೆಗೆ (Pakistan’s Govt, Army) ದೊಡ್ಡ ಎಚ್ಚರಿಕೆ ನೀಡಿದರು.

    ರೋಡ್‌ ಶೋ ಬಳಿಕ ಗುಜರಾತ್‌ನ ಭುಜ್‌ನಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಅಬ್ಬರದ ಭಾಷಣ ಮಾಡಿದರು. ಪಾಕಿಸ್ತಾನ ಸರ್ಕಾರ ಮತ್ತು ಸೇನೆಗೆ ತೀಕ್ಷ್ಣ ಎಚ್ಚರಿಕೆ ನೀಡಿದರು. ʻನೀವು ಶಾಂತಿಯುತ ಜೀವನ ಬಯಸಿದ್ರೆ ನಿಮ್ಮ ಬ್ರೆಡ್‌ (ರೊಟ್ಟಿ) ತಿಂದು ಸುಮ್ಮನಿರಿ, ಇಲ್ಲದಿದ್ರೆ ನನ್ನ ಬುಲೆಟ್‌ಗಳು (Bullet) ಯಾವಾಗಲೂ ಸಿದ್ಧವಾಗಿರುತ್ತೆ. ಯಾವುದು ಬೇಕು ನೀವೇ ಆಯ್ಕೆ ಮಾಡಿಕೊಳ್ಳಿ ಅಂತ ಪಾಕ್‌ಗೆ ವಾರ್ನಿಂಗ್‌ ಕೊಟ್ಟರು.

    ಭಾಷಣದ ವೇಳೆ ಭಯೋತ್ಪಾದನೆಯ ವಿರುದ್ಧ ಭಾರತದ ಶೂನ್ಯ ಸಹಿಷ್ಣುತಾ ನೀತಿ ಉಲ್ಲೇಖಿಸಿದ ಪ್ರಧಾನಿ, ʻನಮ್ಮ ರಕ್ತ ಚೆಲ್ಲಲು ಪ್ರಯತ್ನಿಸುವವರಿಗೆ ಅವರದ್ದೇ ಭಾಷೆಯಲ್ಲಿ ಉತ್ತರಿಸಲು ಭಾರತ ಸಿದ್ಧವಿದೆ. ಭಾರತದ ಮೇಲೆ ಕಣ್ಣುಹಾಕುವವರು ಬೆಲೆ ತೆರಲೇಬೇಕಾಗುತ್ತದೆ ಎಂದರಲ್ಲದೇ, ಭಯೋತ್ಪಾದನೆಯನ್ನ ಬುಡಸಮೇತ ನಿರ್ಮೂಲನೆ ಮಾಡುವುದು ಮತ್ತು ಮಾನವೀಯತೆಯನ್ನ ರಕ್ಷಿಸುವುದು ಆಪರೇಷನ್‌ ಸಿಂಧೂರ (Operation Sindoor) ಕಾರ್ಯಾಚರಣೆಯ ಉದ್ದೇಶವಾಗಿದೆ ಎಂದು ಹೇಳಿದರು.

    ಮುಂದುವರಿದು.. ಭಯೋತ್ಪಾದನೆಯನ್ನ (Terrorism ಕೈಬಿಡದಿದ್ದರೆ ನಿಮ್ಮ ಮಕ್ಕಳ ಭವಿಷ್ಯ ಕತ್ತಲೆಯಲ್ಲಿ ಮುಳುಗುತ್ತದೆ ಎಂದು ಪಾಕ್‌ ಜನತೆಗೆ ಮೋದಿ ಮನವಿ ಮಾಡಿದರಲ್ಲದೇ ಭಯೋತ್ಪಾದನೆ ಪಾಕಿಸ್ತಾನಕ್ಕೆ ವಿನಾಶಕಾರಿ ಎಂಬುದನ್ನ ಪಾಕ್‌ ನಾಗರಿಕರಿಗೆ ಮತ್ತೊಮ್ಮೆ ಮನವರಿಗೆ ಮಾಡಿಕೊಟ್ಟರು.

    ಪ್ರವಾಸೋದ್ಯಮವು ಜನರನ್ನು ಸಂಪರ್ಕಿಸುತ್ತದೆ, ಬಹುರಾಷ್ಟ್ರೀಯ ಸ್ನೇಹವನ್ನು ಬಲಪಡಿಸುತ್ತದೆ. ಅದಕ್ಕಾಗಿಯೇ ಭಾರಯ ಪ್ರವಾಸೋದ್ಯಮದಲ್ಲಿ ನಂಬಿಕೆಯಿಡುತ್ತದೆ. ಆದ್ರೆ ಪಾಕಿಸ್ತಾನವು ಭಯೋತ್ಪಾದನೆಯನ್ನೇ ಪ್ರವಾಸೋದ್ಯಮವೆಂದು ಪರಿಗಣಿಸಿದೆ. ಇದು ಇಡೀ ವಿಶ್ವಕ್ಕೆ ಮಾರಕ ಹಾಗೂ ದೊಡ್ಡ ಬೆದರಿಕೆಯಾಗಿದೆ. ಆದ್ರೆ ಆಪರೇಷನ್‌ ಸಿಂಧೂರ ಭಯೋತ್ಪಾದನೆಯನ್ನು ಬುಡಸಮೇತ ಕೊನೆಗೊಳಿಸುವ ಧ್ಯೇಯ ಹೊಂದಿದೆ ಎಂದು ಅಬ್ಬರಿಸಿದರು.

    ಇದೇ ವೇಳೆ ಕಚ್ ಅಭಿವೃದ್ಧಿಯ ಬಗ್ಗೆ ಮಾತನಾಡಿದ ಮೋದಿ, ಈ ಹಿಂದೆ ಯಾವುದೇ ಮುಖ್ಯಮಂತ್ರಿ ಅಥವಾ ಕಚ್ ಸಚಿವರ ಭಾಷಣ ಪಾಕಿಸ್ತಾನದಿಂದಲೇ ಆರಂಭವಾಗುತ್ತಿತ್ತು ಮತ್ತು ಕೊನೆಗೊಳ್ಳುತ್ತಿತ್ತು. ಆದರೆ 2001 ರಲ್ಲಿ ಈ ವಿಷಯದ ಬಗ್ಗೆ ಸಮಯ ವ್ಯರ್ಥ ಮಾಡುವುದಿಲ್ಲ ಎಂದು ನಿರ್ಧರಿಸಿದೆವು. ಪಾಕಿಸ್ತಾನ ಅಸೂಯೆ ಪಡುವಂತೆ ಕಚ್‌ನ ಸಾಮರ್ಥ್ಯ ಎತ್ತಿ ತೋರಿಸುವುದಾಗಿ ಹೇಳಿದ್ದೆವು. ಅದರಂತೆ ನಾವಿಂದು ಕಚ್‌ ಜಿಲ್ಲೆಯನ್ನು ಅಭಿವೃದ್ಧಿಪಡಿಸಿದ್ದೇವೆ. ಇದರ ಅಭಿವೃದ್ಧಿ ನೋಡಿ ಶತ್ರುಗಳೂ ಅಸೂಯೆಪಡುತ್ತಿದ್ದಾರೆಂದು ತಿಳಿಸಿದರು.