Tag: terror

  • 2 ನಿಮಿಷ ಬಿಟ್ಟು ಕರೆ ಮಾಡ್ತೀನಿ ಅಂದೋನು ಮಾಡ್ಲೇ ಇಲ್ಲ- ಗುರು ಗೆಳೆಯ ಯೋಧ ಕಣ್ಣೀರು

    2 ನಿಮಿಷ ಬಿಟ್ಟು ಕರೆ ಮಾಡ್ತೀನಿ ಅಂದೋನು ಮಾಡ್ಲೇ ಇಲ್ಲ- ಗುರು ಗೆಳೆಯ ಯೋಧ ಕಣ್ಣೀರು

    ಮಂಡ್ಯ: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರನ ಆತ್ಮಾಹುತಿ ದಾಳಿಯಲ್ಲಿ ಮಂಡ್ಯದ ಯೋಧ ಗುರು ಹುತಾತ್ಮರಾಗಿದ್ದು, ಇದೀಗ ಜಿಲ್ಲೆಯಲ್ಲಿ ನೀರವ ಮೌನ ಆವರಿಸಿದೆ. ಗುರು ಪೋಷಕರು, ಪತ್ನಿ ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದ್ರೆ, ಇತ್ತ ಗೆಳೆಯರು ಕಣ್ಣೀರು ಹಾಕುತ್ತಿದ್ದಾರೆ.

    ಗುರು ಗೆಳೆಯರು ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಉಗ್ರ ಕೃತ್ಯವನ್ನು ಖಂಡಿಸಿ, ಪ್ರತೀಕಾರ ತೀರಿಸಿಕೊಳ್ಳಲೇ ಬೇಕು ಎಂದು ಆಗ್ರಹಿಸಿದ್ದಾರೆ. ಗೆಳೆಯರಾಗಿದ್ದ ಯೋಧರೊಬ್ಬರು ಮಾತನಾಡಿ, ಗುರು ಭಾಯ್ ಓರ್ವ ಯೋಧ. ಅವನು ತುಂಬಾ ನಿಯತ್ತಿನಿಂದ ಕೆಲಸ ಮಾಡುತ್ತಿದ್ದನು. ಒಳ್ಳೆಯ ವ್ಯಕ್ತಿತ್ವ ಹೊಂದಿದ್ದನು. ಆದ್ರೆ ಉಗ್ರರು ಈ ರೀತಿ ಮಾಡಿರುವುದು ತುಂಬಾನೇ ನೋವಾಗಿದೆ. ನಾನು ಕೂಡ ಓರ್ವ ಯೋಧನಾಗಿದ್ದೇನೆ. ಉಗ್ರರು ಈ ರೀತಿ ಮಾಡಿದ್ದಕ್ಕೆ ತಕ್ಕ ಉತ್ತರ ಕೊಡುತ್ತೇವೆ. ಬುಧವಾರವಷ್ಟೇ ಗುರು ನನ್ನ ಜೊತೆ ಫೋನಿನಲ್ಲಿ ಮಾತನಾಡಿ, ಡ್ಯೂಟಿಗೆ ಹೋಗ್ತಾ ಇದ್ದೀನಿ. 2 ನಿಮಿಷದ ಬಳಿಕ ಕರೆ ಮಾಡ್ತೀನಿ ಎಂದು ಹೇಳಿದ್ದನು. ಆದ್ರೆ ಮತ್ತೆ ಆತನ ಕರೆ ಬಂದೇ ಇಲ್ಲ ಎಂದು ಗುರವಿನ ಗೆಳೆಯ ಯೋದರೊಬ್ಬರು ಬೇಸರ ವ್ಯಕ್ತಪಡಿಸಿದ್ರು. ಇದನ್ನೂ ಓದಿ: ನಂಗೆ ಅವರು ಬೇಕು ಅಮ್ಮಾ..- ಮುಗಿಲು ಮುಟ್ಟಿದೆ ಹುತಾತ್ಮ ಗುರು ಪತ್ನಿಯ ಆಕ್ರಂದನ

    ಒಂದು ವಾರದ ಹಿಂದೆಯಷ್ಟೇ ಗುರು ಊರಿಗೆ ಬಂದು ಮೂರು ದಿನಗಳ ಹಿಂದೆಯಷ್ಟೇ ತೆರಳಿ ಮತ್ತೆ ಕೆಲಸಕ್ಕೆ ಸೇರಿಕೊಂಡಿದ್ದರು. ಆದ್ರೆ ಇದೀಗ ಅವರು ಉಗ್ರನ ಕೃತ್ಯದಿಂದ ಹುತಾತ್ಮರಾಗಿದ್ದಾರೆ. ಈ ವಿಚಾರ ಸ್ನೇಹಿತರ ಬಳಗಕ್ಕೆ ತುಂಬಾ ಬೇಸರವಾಗುತ್ತದೆ. ಇದಕ್ಕೆ ಪ್ರತಿಫಲವಾಗಿ ನಮ್ಮ ಸರ್ಕಾರ ಸೇಡು ತೀರಿಸಿಕೊಳ್ಳಲೇ ಬೇಕು ಎಂದು ಗೆಳೆಯರೊಬ್ಬರು ಒತ್ತಾಯಿಸಿದ್ರು. ಇದನ್ನೂ ಓದಿ: 44 ಯೋಧರನ್ನು ಬಲಿ ಪಡೆದುಕೊಂಡ ಉಗ್ರನೂ ಭಾರತೀಯ..!

    ನನ್ನ ಗೆಳೆಯ ನಂದೀಶ್ ಎಂಬವರು ಜಾರ್ಖಂಡ್ ನಲ್ಲಿ ಸಿಆರ್‍ಪಿಎಫ್ ಯೋಧರಾಗಿ ಕೆಲಸ ಮಾಡುತ್ತಿದ್ದಾರೆ. ಅವರು ನನಗೆ ಕರೆ ಮಾಡಿ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಪಟ್ಟಿಯಲ್ಲಿ ಗುರು ಹೆಸರಿದೆ ಎಂಬ ಮಾಹಿತಿ ನೀಡಿದ್ರು. ಆದ್ರೆ ಈ ಬಗ್ಗೆ ಇನ್ನೂ ನಿಖರ ಮಾಹಿತಿಯಿಲ್ಲ. ಹೀಗಾಗಿ ªಅವರ ಮನೆಯವರಿಗೆ ವಿಷಯ ತಿಳಿಸಬೇಡ ಎಂದಿದ್ದರು. ಇನ್ನೊಬ್ಬರು ಚೆಲುರಾಜು ಎಂಬವರು ಕೂಡ ಅಲ್ಲೇ ಕೆಲಸ ನಿರ್ವಹಿಸುತ್ತಿಒದ್ದರು. ಅವರು ಕೂಡ 12 ಗಂಟೆ ಸುಮಾರಿಗೆ ಅದೇ ರಸ್ತೆಯಲ್ಲಿ ಪಾಸ್ ಆಗಿದ್ದರು. ಅವರು ಕೂಡ ಗುರು ಹುತಾತ್ಮರಾಗಿದ್ದಾರೆ ಎಂದು ಹೇಳಿದ್ರು ಎಂದು ಮತ್ತೋರ್ವ ಗೆಳೆಯ ಕಣ್ಣೀರು ಹಾಕಿದ್ರು. ಇದನ್ನೂ ಓದಿ: ಪುಲ್ವಾಮಾದಲ್ಲಿ ಮಂಡ್ಯದ ಯೋಧ ಹುತಾತ್ಮ – ಫೆ.10ಕ್ಕೆ ರಜೆ ಮುಗಿಸಿ ಊರಿಂದ ಹೊರಟಿದ್ದರು

    https://www.youtube.com/watch?v=5JqTWRx0JWA

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹೊಸವರ್ಷ ಸ್ವಾಗತಕ್ಕೆ ಭರ್ಜರಿ ಸಿದ್ಧತೆ- ಮೊದಲ ಬಾರಿಗೆ ನಗರದೆಲ್ಲೆಡೆ ಖಾಕಿ ಪರೇಡ್

    ಹೊಸವರ್ಷ ಸ್ವಾಗತಕ್ಕೆ ಭರ್ಜರಿ ಸಿದ್ಧತೆ- ಮೊದಲ ಬಾರಿಗೆ ನಗರದೆಲ್ಲೆಡೆ ಖಾಕಿ ಪರೇಡ್

    ಬೆಂಗಳೂರು: ಹೊಸವರ್ಷದ ಸ್ವಾಗತಕ್ಕೆ ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಈ ಮಧ್ಯೆ ಭಯೋತ್ಪಾದಕರ ಹಳೆಯ ವಿಡಿಯೋಗಳು ವೈರಲ್ ಆಗಿದ್ದು, ಯಾವುದೇ ಸಮಯದಲ್ಲಿ ಯಾವ ಪ್ರದೇಶದಲ್ಲಿ ಬೇಕಾದ್ರೂ ದಾಳಿ ನಡೆಯಬಹುದು ಅಂತಾ ಗುಪ್ತಚರ ಇಲಾಖೆ ಮಾಹಿತಿ ರವಾನಿಸಿದೆ.

    ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಬೆಂಗಳೂರಿನ ಪ್ರಮುಖ ರಸ್ತೆಗಾಳಾದ ಎಂಜಿ ರೋಡ್, ಬ್ರಿಗೇಡ್ ರೋಡ್‍ಗಳಲ್ಲಿ ಇದೇ ಮೊದಲ ಬಾರಿಗೆ ಪೊಲೀಸರು ಪರೇಡ್ ನಡೆಸ್ತಿದ್ದಾರೆ.

    ಪಬ್‍ಗಳು ಸೇರಿದಂತೆ ಎಲ್ಲಾ ಸಂಭ್ರಮಾಚರಣೆಯ ಸ್ಥಳಗಳಲ್ಲಿ ಸಿಸಿಟಿವಿಗಳನ್ನು ಅಳವಡಿಸಿ, ಕ್ಷಣ ಕ್ಷಣದ ಮಾಹಿತಿ ಪಡೆಯುತ್ತಿದ್ದಾರೆ. ಜೊತೆಗೆ ಅನುಮಾನಾಸ್ಪದ ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸ್ತಿದ್ದಾರೆ. ಇನ್ನು ಇಂದು ರಾತ್ರಿ 2 ಗಂಟೆವರೆಗೆ ಪಬ್ ಮತ್ತು ಬಾರ್‍ಗಳ ಓಪನ್‍ಗೆ ಅವಕಾಶ ನೀಡಿದ್ದು, ಎಂಜಿ ರೋಡ್ ಮತ್ತು ಬ್ರಿಗೇಡ್ ರೋಡ್‍ನಲ್ಲಿ ಸಂಜೆ 8 ಗಂಟೆಯ ನಂತ್ರ ವಾಹನಗಳ ಓಡಾಟ ನಿಷೇಧಿಸಲಾಗಿದೆ. ಇದನ್ನೂ ಓದಿ: ಹೊಸ ವರ್ಷಕ್ಕೆ BMTC ವೋಲ್ವೋ ಬಸ್ ಪ್ರಯಾಣಿಕರಿಗೊಂದು ಸಿಹಿಸುದ್ದಿ

    ಹೊಸ ವರ್ಷಾಚರಣೆಗೆ ಬರುವ ವಾಹನ ಸವಾರರಿಗೆ, ಕಬ್ಬನ್ ರೋಡ್, ಎಂಜಿ ರೋಡ್, ಬ್ರಿಗೇಡ್ ರೋಡ್‍ಗಳ ಪಾರ್ಲರ್ ರೋಡ್ ಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ 9 ಗಂಟೆಯ ನಂತರ ಬಳ್ಳಾರಿ ರೋಡ್‍ನ ಫ್ಲೈ ಓವರ್ ಹೊರತುಪಡಿಸಿ, ನಗರದ ಎಲ್ಲಾ ಫ್ಲೈಓವರ್‍ಗಳ ಮೇಲೆ ವಾಹನ ಓಡಾಟ ನಿಷೇಧಿಲಾಗಿದೆ.

    ಇನ್ನು ಚಿಕ್ಕಬಳ್ಳಾಪುರದ ನಂದಿ ಬೆಟ್ಟ, ಆವಲಬೆಟ್ಟ ಮತ್ತು ಕಬ್ಬನ್ ಪಾರ್ಕ್‍ನಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್ ಬಿದ್ದಿದೆ. ಕಬ್ಬನ್ ಪಾರ್ಕ್, ನಂದಿ ಬೆಟ್ಟ ಮತ್ತು ಆವಲಬೆಟ್ಟಕ್ಕೆ ಇಂದು ಸಂಜೆ 4 ಗಂಟೆಯಿಂದ ನಾಳೆ ಬೆಳಗ್ಗೆ 8 ಗಂಟೆಯವರೆಗೆ ಎಂಟ್ರಿ ನಿಷೇಧಿಸಿ ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ.

    ಮಡಿಕೇರಿ, ಮಂಗ್ಳೂರಲ್ಲೂ ಬಿಗಿ ಭದ್ರೆತೆ: ಪ್ರವಾಸಿಗರ ಹಾಟ್ ಫೇವರಿಟ್ ತಾಣ ಮಡಿಕೇರಿಯಲ್ಲೂ ನ್ಯೂ ಇಯರ್ ಆಚರಣೆಗೆ ಭರ್ಜರಿ ಸಿದ್ಧತೆಗಳು ನಡೆದಿವೆ. ಈಗಾಗಲೇ ಸಾವಿರಾರು ಪ್ರವಾಸಿಗರು ಮಡಿಕೇರಿಗೆ ಲಗ್ಗೆಯಿಟ್ಟಿದ್ದಾರೆ. ಹೋಂ ಸ್ಟೇ ಹಾಗೂ ರೆಸಾರ್ಟ್‍ಗಳು ಕಂಪ್ಲೀಟ್ ಆಗಿ ಬುಕ್ ಆಗಿವೆ. ಹೊಸ ವರ್ಷದ ಸಂಭ್ರಮದ ಹೆಸರಲ್ಲಿ ಯಾವುದೇ ಹುಚ್ಚಾಟ ನಡೀಬಾರ್ದು ಅನ್ನೋ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕೆಲವೊಂದು ಕಟ್ಟುನಿಟ್ಟಿನ ಕ್ರಮಗಳನ್ನ ಕೈಗೊಂಡಿದೆ.

    ರಾತ್ರಿ 12.30ರ ನಂತ್ರ ಮಡಿಕೇರಿಯಲ್ಲಿ ಎಲ್ಲಿಯೂ ನ್ಯೂಇಯರ್ ಸೆಲಬ್ರೇಷನ್ ಮಾಡುವಂತಿಲ್ಲ. ಅಲ್ಲದೇ ರಸ್ತೆಗಳಲ್ಲಿ ವಿಶ್ ಮಾಡೋ ಹೆಸರಲ್ಲಿ ಯಾರಿಗೂ ತೊಂದರೆ ನೀಡುವಂತಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಸೆಲಬ್ರೇಷನ್ ಮಾಡುವಂತಿಲ್ಲ. ಮುಖ್ಯವಾಗಿ ಹೋಂಸ್ಟೇಗಳಲ್ಲಿ ಲಿಕ್ಕರ್ ಸಪ್ಲೇ ಮಾಡುವಂತಿಲ್ಲವೆಂದು ಖಡಕ್ ಸೂಚನೆ ನೀಡಿದೆ. ರೆಸಾರ್ಟ್ ಹಾಗೂ ಹೋಂಸ್ಟೇಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ. ಎಲ್ಲೆಡೆ ಕಟ್ಟೆಚ್ಚರ ವಹಿಸಲು ಖಾಕಿ ಪಡೆ ನಿಯೋಜಿಸಿದೆ.

    ಮಂಗಳೂರಲ್ಲಿ ವರ್ಷಾಚರಣೆ ವೇಳೆ ತಡರಾತ್ರಿ ರೆಸ್ಟೋರೆಂಟ್, ಅಂಗಡಿ ಮುಂಗಟ್ಟುಗಳು ತೆರೆಯದಂತೆ ಪೊಲೀಸ್ ಕಮೀಷನರ್ ಸೂಚಿಸಿದ್ದಾರೆ. ಈ ಮಧ್ಯೆ ತಡರಾತ್ರಿ ರೆಸ್ಟೋರೆಂಟ್ ಓಪನ್ ಇದ್ರೆ ರೇಡ್ ಮಾಡೋದಾಗಿ ಹಿಂದೂ ಸಂಘಟನೆಗಳು ಎಚ್ಚರಿಸಿದೆ.