Tag: Terror Groups

  • 24 ಗಂಟೆಯಲ್ಲಿ 300 ನಕ್ಸಲರ ಶರಣಾಗತಿ – ಭಯೋತ್ಪಾದನೆ ಮುಕ್ತ ಪ್ರದೇಶಗಳಲ್ಲಿ ಈ ಬಾರಿ ಶಾಂತಿಯ ದೀಪಾವಳಿ: ಮೋದಿ

    24 ಗಂಟೆಯಲ್ಲಿ 300 ನಕ್ಸಲರ ಶರಣಾಗತಿ – ಭಯೋತ್ಪಾದನೆ ಮುಕ್ತ ಪ್ರದೇಶಗಳಲ್ಲಿ ಈ ಬಾರಿ ಶಾಂತಿಯ ದೀಪಾವಳಿ: ಮೋದಿ

    – ವಿಶ್ವದ ಮುಂದೆ ನನ್ನ ನೋವು ಹೇಳಿಕೊಳ್ತಿರೋದು ಇದೇ ಮೊದಲು; ಭಾವುಕ

    ಬೆಂಗಳೂರು: 24 ಗಂಟೆಯಲ್ಲಿ 300 ಮಾವೋವಾದಿಗಳು (Maoists Surrendered) ಶರಣಾಗಿದ್ದಾರೆ. ಒಂದು ಕಾಲದಲ್ಲಿ ಬಾಂಬ್‌ ಸ್ಫೋಟಿಸಿ ಹತ್ಯೆಗೈಯುತ್ತಿದ್ದ ಸ್ಥಳದಲ್ಲಿ ಈಗ ʻಒಲಿಂಪಿಕ್ಸ್‌ ಕ್ರೀಡಾಕೂಟʼದ ತಯಾರಿ ನಡೆಯುತ್ತಿದೆ. ಇದು ಅತಿದೊಡ್ಡ ಬೆಳವಣಿಗೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ನಕ್ಸಲರ ಶರಣಾಗತಿ ಬಗ್ಗೆ ಹೇಳಿದರು.

    ಖಾಸಗಿ ಸುದ್ದಿವಾಹಿನಿಯ ಜಾಗತಿಕ ಶೃಂಗಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, 24 ಗಂಟೆಗಳಲ್ಲಿ 300 ಮಾವೋವಾದಿಗಳು ಸೇರಿ 75 ಗಂಟೆಗಳಲ್ಲಿ ಒಟ್ಟು 303 ನಕ್ಷಲರು ಶರಣಾಗಿದ್ದಾರೆ ಎಂದು ತಿಳಿಸಿದರು. ಇದೇ ವೇಳೆ ನಕ್ಸಲ್‌ (Naxals) ಕಾರ್ಯಾಚರಣೆ ವಿರುದ್ಧ ತಮ್ಮ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ತಿಳಿಸಿದರು.

    ಇದೇ ಮೊದಲು ನನ್ನ ನೋವು ಹೇಳಿಕೊಳ್ತಿದ್ದೇನೆ
    ಮಾವೋವಾದಿಗಳು ಕಳೆದ 50-55 ವರ್ಷಗಳಲ್ಲಿ ಸಾವಿರಾರು ಜನರನ್ನ ಕೊಂದಿದ್ದಾರೆ. ಅಲ್ಲದೇ ಶಾಲೆಗಳನ್ನಾಗಲಿ, ಆಸ್ಪತ್ರೆಗಳನ್ನಾಗಲಿ ನಿರ್ಮಿಸಲು ಬಿಡಲಿಲ್ಲ. ವೈದ್ಯರನ್ನ ಚಿಕಿತ್ಸಾಲಯಗಳಿಗೆ ಹೋಗದಂತೆ ತಡೆದರು. ಹಲವು ಸಂಸ್ಥೆಗಳ ಮೇಲೆ ದಾಳಿ ಮಾಡ್ತಿದ್ದರು. ಮಾವೋವಾದಿಗಳ ಭಯೋತ್ಪಾದನೆಯಿಂದ ಯುವಜನರಿಗೆ ಅನ್ಯಾಯವಾಗಿತ್ತು. ಇದೆಲ್ಲದರಿಂದ ನಾನು ಬಹಳ ಕೋಪಗೊಂಡಿದ್ದೆ ಎನ್ನುತ್ತಾ. ಇದೇ ಮೊದಲಬಾರಿಗೆ ಜಗತ್ತಿನ ಮುಂದೆ ನನ್ನ ನೋವನ್ನ ಹೇಳಿಕೊಳ್ಳುತ್ತಿದ್ದೇನೆ ಎಂದು ಭಾವುಕರಾದರು.

    303 ಮಂದಿ ಶರಣಾಗತಿ
    ನಮ್ಮ ಸರ್ಕಾರ ಅನ್ಯಾಯಕ್ಕೆ ಒಳಗಾದ ಹಾಗೂ ದಾರಿ ತಪ್ಪಿದ ಯುವಜನರನ್ನ ತಲುಪಿ, ಮತ್ತೆ ಅವರನ್ನ ಮುಖ್ಯವಾಹಿನಿಗೆ ತರಲು ವಿಶೇಷ ಪ್ರಯತ್ನಗಳನ್ನ ನಡೆಸಿದೆ. ಇಡೀ ದೇಶ ಇಂದು ಈ ಪ್ರಯತ್ನಗಳ ಫಲಿತಾಂಶ ನೋಡುತ್ತಿದೆ. ಈಗ 303 ನಕ್ಸಲರು ಶರಣಾಗಿದ್ದಾರೆ. ಛತ್ತೀಸ್‌ಗಢದಲ್ಲಿ ಗುರುವಾರ ಒಂದೇ ದಿನ 170 ನಕ್ಸಲರು ಶರಣಾಗಿದ್ದಾರೆ. ಇವರು ಸಾಮಾನ್ಯ ಜನರಾಗಿರಲಿಲ್ಲ. ಇವರ ತಲೆಗೆ ಬಹುಮಾನ ನಿಗದಿ ಮಾಡಲಾಗಿತ್ತು. ಈಗ ಅವರೇ ಮುಕ್ತವಾಗಿ ಶರಣಾಗಿದ್ದು, ಅವರಿಂದ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರಗಳನ್ನ ವಶಪಡಿಸಿಕೊಳ್ಳಲಾಗಿದೆ ಎಂದು ವಿವರಿಸಿದರು.

    ಸಾಮೂಹಿಕ ಶರಣಾಗತಿಯ ಪರಿಣಾಮವಾಗಿ ನಕ್ಸಲ್‌ ಪೀಡಿತ ಜಿಲ್ಲೆಗಳ ಸಂಖ್ಯೆ ಇಳಿಕೆಯಾಗಿದೆ. ಹಿಂದೆ 125 ಇದ್ದ ನಕ್ಸಲ್‌ ಪೀಡಿತ ಜಿಲ್ಲೆಗಳು ಈಗ 11ಕ್ಕೆ ಇಳಿಕೆಯಾಗಿದೆ. ನಕ್ಸಲ್‌ ಚಟುವಟಿಕೆಗಳನ್ನ ತಡೆಯುವಲ್ಲಿ ನಮ್ಮ ಸರ್ಕಾರ ಯಶಸ್ವಿಯಾಗಿದೆ. ಈ ಹಿಂದೆ ಬಸ್ತಾರ್‌ನಲ್ಲಿ (ತೀವ್ರವಾಗಿ ಬಾಧಿತವಾದ ಜಿಲ್ಲೆ) ಮಾವೋಗಳು ವಾಹನಗಳನ್ನ ಸ್ಫೋಟಿಸಿ ಭದ್ರತಾ ಸಿಬ್ಬಂದಿಗಳನ್ನ ಹತ್ಯೆಗೈದಿದ್ದರು. ಇಂದು ಅಲ್ಲಿನ ಯುವಕರು ʻಬಸ್ತಾರ್‌ ಒಲಿಂಪಿಕ್ಸ್‌ʼ ಆಯೋಜಿಸುತ್ತಿದ್ದಾರೆ. ಇದು ಅತಿದೊಡ್ಡ ಬದಲಾವಣೆ. ಈಗ ಶಾಂತಿಯ ದೀಪಾವಳಿ ಆಚರಿಸಲು ಸಾಧ್ಯವಾಗುತ್ತದೆ ಎಂದು ಹರ್ಷವ್ಯಕ್ತಪಡಿಸಿದರು ಮೋದಿ.

    ಕಾಂಗ್ರೆಸ್‌ ಅವರನ್ನ ಗಮನಿಸಲಿಲ್ಲ. ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ, ಈ ಪರಿಸರ ವ್ಯವಸ್ಥೆಯ ಕುರಿತು ಚರ್ಚೆಸೋದನ್ನೇ ಸಂಪೂರ್ಣವಾಗಿ ನಿಗ್ರಹಿಸಲಾಗಿತ್ತು ಎಂದು ವಾಗ್ದಾಳಿ ನಡೆಸಿದರು.

  • ಮದರಸಾಗಳು ಹಣಕಾಸಿನ ಮೂಲವನ್ನು ಬಹಿರಂಗಪಡಿಸುವಂತೆ ಪೊಲೀಸರ ಸೂಚನೆ

    ಮದರಸಾಗಳು ಹಣಕಾಸಿನ ಮೂಲವನ್ನು ಬಹಿರಂಗಪಡಿಸುವಂತೆ ಪೊಲೀಸರ ಸೂಚನೆ

    ದಿಸ್ಪುರ್: ಮದರಸಾಗಳು ತಮ್ಮ ಹಣಕಾಸಿನ ಮೂಲಗಳನ್ನು ಬಹಿರಂಗಪಡಿಸುವಂತೆ ಅಸ್ಸಾಂ ಪೊಲೀಸರು ಇಂದು ಸೂಚಿಸಿದ್ದಾರೆ.

    ರಾಜ್ಯದಲ್ಲಿ ಜಿಹಾದಿ ಚಟುವಟಿಕೆಗಳ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳುತ್ತಿರುವ ಭಾಗವಾಗಿ ಈ ನಿರ್ದೇಶನ ನೀಡಲಾಗಿದೆ. ಕಾನೂನುಬಾಹಿರ ಚಟುವಟಿಕೆ ತಡೆಯುವ ಸಲುವಾಗಿ ಶೀಘ್ರದಲ್ಲೇ ಆನ್‌ಲೈನ್ ಪೋರ್ಟಲ್ ತೆರೆಯಲಾಗುತ್ತಿದೆ. ಈ ಪೂರ್ಟಲ್‌ನಲ್ಲೇ ಹಣಕಾಸಿನ ಮೂಲ ಹಾಗೂ ಮದರಸಾದ ವಿವರಗಳನ್ನು ಬಹಿರಂಗಪಡಿಸುವಂತೆ ಸೂಚಿಸಿದ್ದಾರೆ. ಇದನ್ನೂ ಓದಿ: ಪ್ರಧಾನಿ ಮೋದಿ ತಿಂಗಳಿಗೊಮ್ಮೆ ಗೊಂಬೆ ಕುಣಿಸಲು ಬರ್ತಾರ – ಹೆಚ್‌ಡಿಕೆ ವ್ಯಂಗ್ಯ 

    ASSAM MADARASA MADRASA

    ಭಯೋತ್ಪಾದಕ ಸಂಘಟನೆಗಳಿಗೆ ಸಹಾಯ ಮಾಡಿದ ಆರೋಪದ ಮೇಲೆ ಇತ್ತೀಚೆಗೆ ಮೂರು ಮದರಸಾಗಳನ್ನು ನೆಲಸಮಗೊಳಿಸಲಾಯಿತು. ಈ ಸಂಬಂಧವಾಗಿ ಡಿಜಿಪಿ ಭಾಸ್ಕರ್ ಜ್ಯೋತಿ ಮಹಂತ ಇಂದು ಮುಸ್ಲಿಂ ಸಾಮಾಜಿಕ-ಧಾರ್ಮಿಕ ಸಂಸ್ಥೆಗಳೊಂದಿಗೆ ಸಭೆ ನಡೆಸಿದರು. ಇದನ್ನೂ ಓದಿ: CPI(M) ಪಕ್ಷ ವಿರೋಧ ಹಿನ್ನೆಲೆ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ನಿರಾಕರಿಸಿದ ಕೆ.ಕೆ ಶೈಲಜಾ

    ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಹಿತಿ ಪ್ರಕಾರ ರಾಜ್ಯದಲ್ಲಿ 1 ಸಾವಿರ ಖಾಸಗಿ ಮದರಸಾಗಳಿವೆ. ಅವುಗಳಲ್ಲಿ ಕೆಲವು ನೋಂದಾಯಿಸಿಲ್ಲ. ಹಾಗಾಗಿ ಮುಸ್ಲಿಂ ಸಂಘಟನೆಗಳ ಪ್ರತಿನಿಧಿಗಳನ್ನು ಹೊಂದಿರುವ ಸಮಿತಿ ರಚಿಸಲು ನಿರ್ಧರಿಸಲಾಗಿದೆ. ಈ ಸಮಿತಿ ಮದರಸಾಗಳು ತಮ್ಮ ವಿವರ, ಜಮೀನು, ಶಿಕ್ಷಕರು ಮತ್ತು ಹಣಕಾಸಿನ ಮೂಲಗಳ ವಿವರಗಳನ್ನು ಬಹಿರಂಗಪಡಿಸುವಂತೆ ನೋಡಿಕೊಳ್ಳಲಿದೆ. ಇನ್ನು 6 ತಿಂಗಳಲ್ಲಿ ಈ ಕಾರ್ಯ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಅವರು ಹೇಳಿದ್ದಾರೆ.

    madrasas

    ಈ ಹಿಂದೆಯೂ ಬಿಜೆಪಿ ನೇತೃತ್ವದ ಸರ್ಕಾರ ಇಸ್ಲಾಮಿಕ್ ಭಯೋತ್ಪಾದಕ ಗುಂಪುಗಳೊಂದಿಗೆ ಸಂಪರ್ಕ ಹೊಂದಿದ ಆರೋಪದ ಮೇಲೆ 800 ಮದರಸಾಗಳನ್ನು ಮುಚ್ಚಿಸಿತ್ತು. ಕಳೆದ ಮಾರ್ಚ್ ತಿಂಗಳಿನಿಂದ 37 ಮಂದಿ ಮದರಸಾ ಶಿಕ್ಷಕರನ್ನು ಪೊಲೀಸರು ಬಂಧಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]