Tag: teradala

  • ಹೌದಪ್ಪಗಳಿಗೆ ಪಟ್ಟ ಕಟ್ಟುವ ಚಾಳಿ ಬೆಳೆಯುತ್ತಿದೆ: ಶಾಸಕ ಸಿದ್ದು ಸವದಿ

    ಹೌದಪ್ಪಗಳಿಗೆ ಪಟ್ಟ ಕಟ್ಟುವ ಚಾಳಿ ಬೆಳೆಯುತ್ತಿದೆ: ಶಾಸಕ ಸಿದ್ದು ಸವದಿ

    ಬಾಗಲಕೋಟೆ: ಸಂಪುಟ ವಿಸ್ತರಣೆ ಬೆನ್ನಲ್ಲೇ ಬಿಜೆಪಿಯಲ್ಲಿ ಸಚಿವ ಸ್ಥಾನ ವಂಚಿತರು ಬಹಿರಂಗವಾಗಿಯೇ ಸಿಎಂ ಯಡಿಯೂರಪ್ಪ ವಿರುದ್ಧ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಇದೀಗ ತೆರದಾಳ ಕ್ಷೇತ್ರದ ಶಾಸಕ ಸಿದ್ದು ಸವದಿ ಸಹ ಸೋಶಿಯಲ್ ಮೀಡಿಯಾದಲ್ಲಿ ಹೌದಪ್ಪಗಳಿಗೆ ಪಟ್ಟ ಕಟ್ಟುವ ಚಾಳಿ ಬೆಳೆಯುತ್ತಿದೆ ಎಂದು ಬರೆದುಕೊಂಡಿದ್ದಾರೆ.

    ಸಿದ್ದು ಸವದಿ ಪೋಸ್ಟ್: ಹಿರಿತನ, ಪಕ್ಷ ನಿಷ್ಠೆ, ಸಿದ್ಧಾಂತಕ್ಕೆ ಬದ್ಧರಾಗಿ ಪ್ರಾಣ ಹೋದರು ಪಕ್ಷಕ್ಕೆ ದ್ರೋಹ ಮಾಡದೇ ಪಕ್ಷಕ್ಕಾಗಿ ಮತ್ತು ಪಕ್ಷದ ಬಲವರ್ಧನೆಗಾಗಿ ಹಗಲು ರಾತ್ರಿ ದುಡಿಯುತ್ತಿದ್ದೇವೆ. ಯಾವುದೇ ಗಾಡ್ ಫಾದರ್ ಬೆಂಬಲವಿಲ್ಲದೆ ಪಕ್ಷವನ್ನು ಎಲ್ಲಾ ಹಂತದಲ್ಲಿ ಅಧಿಕಾರಕ್ಕೆ ತರುವ ಪಕ್ಷದ ಆದೇಶಗಳನ್ನು ಮನಸಾ ಪೂರ್ವಕ ಪಾಲನೆ ಮಾಡುವ ಮತ್ತು ಪಕ್ಷಕ್ಕಾಗಿ ಯಾವತ್ಯಾಗಕ್ಕೂ ಸಿದ್ಧರಿರುವವರಿಗೆ ಯಾವುದೇ ಸ್ಥಾನಮಾನ ಕೊಡುತ್ತಿಲ್ಲ.

    ಕೇವಲ #ಹೌದಪ್ಪ ಗಳಿಗೆ ಈ ದಿನಗಳಲ್ಲಿ ಪಟ್ಟ ಕಟ್ಟುವ ಚಾಳಿ ಬೆಳೆಯುತ್ತಿದ್ದನು ನೋಡಿ ನೋವಾಗುತ್ತಿದೆ. ಇದು ನಮ್ಮ ದೌರ್ಬಲ್ಯ ಅಂತ ಭಾವಿಸಬಾರದು. ಹೊತ್ತು ಬಂದಂತೆ ಕೊಡೆ ಹಿಡಿಯುವವರಿಗೆ ಮಣೆ ಹಾಕುವುದನ್ನು ಬಿಟ್ಟು ಸ್ವಲ್ಪ ಪಕ್ಷ ನಿಷ್ಟರನ್ನು ಸಹಿತ ಪರಿಗಣಿಸಿದರೆ ನಿಮಗೂ ಗೌರವ ಮತ್ತು ಪಕ್ಷಕ್ಕೂ ಒಳ್ಳೆಯದಾಗುವುದರಲ್ಲಿ ಎರಡು ಮಾತಿಲ್ಲ ಎಂದು ಹೇಳಿ ಕೊನೆಗೆ ಜೈ ಬಿಜೆಪಿ ಅಂತ ಹೇಳಿದ್ದಾರೆ.

  • ಉಮಾಶ್ರೀಗೆ ಯಾವ ಸಮಯದಲ್ಲಿ ಯಾವ ಪಾತ್ರ ಮಾಡ್ಬೇಕು ಅನ್ನೋದು ಗೊತ್ತಿದೆ: ಸಿದ್ದು ಸವದಿ

    ಉಮಾಶ್ರೀಗೆ ಯಾವ ಸಮಯದಲ್ಲಿ ಯಾವ ಪಾತ್ರ ಮಾಡ್ಬೇಕು ಅನ್ನೋದು ಗೊತ್ತಿದೆ: ಸಿದ್ದು ಸವದಿ

    – ಪರಸಭೆ ಸದಸ್ಯೆ ನೂಕಾಟ- ತಳ್ಳಾಟ ಪ್ರಕರಣ
    – ಶಾಸಕ ಸೇರಿ 31 ಮಂದಿ ವಿರುದ್ಧ ಕೇಸ್ ದಾಖಲು

    ಬಾಗಲಕೋಟೆ: ಮಹಾಲಿಂಗಪೂರ ಪುರಸಭೆ ಸದಸ್ಯೆ ತಳ್ಳಾಟ-ನೂಕಾಟ ರಾಜಕೀಯ ದುರುದ್ದೇಶದಿಂದ ನಮ್ಮ ಹೆಸರು ಕೆಡಿಸಲು ನಡೆಸಿದ ಉಮಾಶ್ರೀ ಕುತಂತ್ರವಿದು. ಉಮಾಶ್ರೀಗೆ ಡ್ರಾಮಾ ಬರುತ್ತೆ ಆದರೆ ನನಗೆ ಬರುವುದಿಲ್ಲ ಎಂದು ಮಾಜಿ ಸಚಿವೆ ಉಮಾಶ್ರೀ ವಿರುದ್ಧ ಶಾಸಕ ಸಿದ್ದು ಸವದಿ ವ್ಯಂಗ್ಯವಾಡಿದ್ದಾರೆ.

    ಮಹಾಲಿಂಗಪೂರ ಪುರಸಭೆ ಸದಸ್ಯೆ ತಳ್ಳಾಟ ನೂಕಾಟ ಪ್ರಕರಣವಾಗಿ ಶಾಸಕ ಸಿದ್ದು ಸವದಿ ಸೇರಿ 31 ಜನರ ವಿರುದ್ಧ ಕೇಸ್ ದಾಖಲಾಗಿದೆ. ಈ ಹಿನ್ನೆಲೆ ಬಾಗಲಕೋಟೆ ಜಿಲ್ಲೆಯ ರಬಕವಿ ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ, ರಾಜಕೀಯ ದುರುದ್ದೇಶದಿಂದ ನಮ್ಮ ಹೆಸರು ಕೆಡಿಸಲು ಉಮಾಶ್ರೀ ಕುತಂತ್ರ ಇದಾಗಿದೆ. ಅವರ ನಿರ್ದೆಶನದ ನಾಟಕ ಇದಾಗಿದೆ. ಉಮಾಶ್ರೀಗೆ ಡ್ರಾಮಾ ಬರುತ್ತೆ ಆದರೆ ನನಗೆ ಬರುವುದಿಲ್ಲ. ಯಾವಾಗ ಯಾವ ಪಾತ್ರ ಮಾಡ ಬೇಕೆನ್ನೋದು ಅವರಿಗೆ ಚೆನ್ನಾಗಿ ಗೊತ್ತಿದೆ. ಅಂತಹ ಪಾತ್ರವನ್ನು ಈಗ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

    ಮಹಾಲಿಂಗಪೂರ ಪ್ರಕರಣಕ್ಕೂ ನಮಗೂ ಎಳ್ಳು ಕಾಳಿನಷ್ಟು ಸಂಬಂಧವಿಲ್ಲ. ಕಾಂಗ್ರೆಸ್ಸಿನವರಿಗೆ ದುಡ್ಡು ಹೆಚ್ಚಾಗಿದೆ. ಉಮಾಶ್ರೀ & ನಾಡಗೌಡ ಮಾಡುತ್ತಿರೋ ಕುತಂತ್ರ ಇದಾಗಿದೆ. ನೇರವಾಗಿ ಆಯ್ಕೆಯಾಗಿ ಬರುವಷ್ಟು ಶಕ್ತಿ ಇಲ್ಲ. ಹಿಂಬಾಗಿಲಿನಿಂದ ಅಧಿಕಾರ ಪಡೆಯೋಕೆ ಮುಂದಾಗಿದ್ದರು ಎಂದು ಹೇಳಿದ್ದಾರೆ.

    ಪುರಸಭಾ ಸದಸ್ಯೆಗೆ ಗರ್ಭಪಾತ ಆಗಿದೆ ಅನ್ನೋದೆಲ್ಲಾ ಬೋಗಸ್. ಇದು ಸತ್ಯಕ್ಕೆ ದೂರವಾದ ಸಂಗತಿಯಾಗಿದೆ. ನಾವು ಸಹ ಪ್ರಕರಣ ಸಂಬಂಧ 35 ಜನರ ವಿರುದ್ಧ ಕೇಸ್ ದಾಖಲಿಸ್ತೇವೆ. ಜಾತಿ ನಿಂದನೆ ಸೇರಿದಂತೆ ಅವರಂತೆ ನಾವು ಸಹ ಕೇಸ್ ಹಾಕ್ತೇವೆ. ಈ ಗೊಂದಲ ಸೃಷ್ಟಿ ಆಗಿದ್ದು ನಮ್ಮಿಂದಲ್ಲ, ಕಾಂಗ್ರೆಸ್ ನವರಿಂದಾಗಿದೆ. ನಾನು ವಿಪ್ ಕೊಡಲು ನಿಂತಾಗ ಆಕಸ್ಮಿಕವಾಗಿ ನಡೆದ ಘಟನೆ ಇದಾಗಿದೆ. ಉದ್ದೇಶಪೂರ್ವಕವಾಗಿ ಅಲ್ಲ ಎಂದಿದ್ದಾರೆ.

    ನೂಕು ನುಗ್ಗಲಿನಲ್ಲಿ ಹೆಣ್ಮಕ್ಕಳು, ಗಂಡು ಮಕ್ಕಳು ಅನ್ನೋದೇ ಬರೋಲ್ಲ. ಆ ಘಟನೆಯಲ್ಲಿ ಎಳೆದುಕೊಂಡು ಬಂದಿದ್ದೇ ಕಾಂಗ್ರೆಸ್‍ನವರಾಗಿದ್ದಾರೆ. ಆದರೆ ಯಾವುದೇ ಉದ್ದೇಶಪೂರ್ವಕವಾಗಿ ದುರುದ್ದೇಶದಿಂದ ಮಾಡಿದ ಘಟನೆ ಆಗಿರಲಿಲ್ಲ ಎಂದು ಸಿದ್ದು ಸವದಿ ತಿಳಿಸಿದ್ದಾರೆ.

  • ಬಿಎಸ್‍ವೈ ತೇರದಾಳದಿಂದ ನಿಲ್ತಾರಾ? ಅಲ್ಲೇ ಸ್ಪರ್ಧಿಸಲು ಕಾರಣ ಏನು? ಲಿಂಗಾಯತರು ಎಷ್ಟಿದ್ದಾರೆ?

    ಬಿಎಸ್‍ವೈ ತೇರದಾಳದಿಂದ ನಿಲ್ತಾರಾ? ಅಲ್ಲೇ ಸ್ಪರ್ಧಿಸಲು ಕಾರಣ ಏನು? ಲಿಂಗಾಯತರು ಎಷ್ಟಿದ್ದಾರೆ?

    ಕಲಬುರಗಿ: ಬಿಜೆಪಿ ಅಧ್ಯಕ್ಷ ಬಿಎಸ್ ಯಡಿಯೂರಪ್ಪಗೆ ಹೆದರಿ ಕ್ಷೇತ್ರ ಬದಲಾವಣೆ ಮಾಡೋ ಪ್ರಶ್ನೆಯೇ ಇಲ್ಲ. ತೇರದಾಳ ಕ್ಷೇತ್ರದಿಂದ ಬಿಎಸ್‍ವೈ ಸ್ಪರ್ಧಿಸಿದರೆ ನಾನು ಎದುರಿಸಲು ಸಿದ್ಧನಿದ್ದೇನೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಉಮಾಶ್ರೀ ತಿಳಿಸಿದ್ದಾರೆ.

    ತೇರದಾಳ ಕ್ಷೇತ್ರಕ್ಕೆ ಯಾರೇ ಬಂದು ಸ್ಪರ್ಧಿಸಿದರೂ, ನಾನು ಮಾತ್ರ ಈ ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ. ಜೀವನದಲ್ಲಿ ಸೋಲು ಗೆಲುವು ಇದ್ದಾಗೆ ರಾಜಕೀಯದಲ್ಲೂ ಸೋಲು ಗೆಲುವು ಸಹಜ, ಸೋಲಲಿ ಗೆಲ್ಲಲಿ ಈ ಕ್ಷೇತ್ರದಲ್ಲೇ ಇರುತ್ತೇನೆ. ಈ ಉಮಾಶ್ರೀ ಯಾರಿಗೂ ಹೆದರೋ ಪ್ರಶ್ನೆಯೇ ಇಲ್ಲ ಎಂದು ಹೇಳುವ ಮೂಲಕ ಬಿಎಸ್‍ವೈ ಗೆ ಉಮಾಶ್ರೀ ಟಾಂಗ್ ಕೊಟ್ಟರು.

    ತೇರದಾಳವೇ ಯಾಕೆ?
    ತೇರದಾಳ ಕ್ಷೇತ್ರವನ್ನು ಯಡಿಯೂರಪ್ಪ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿವೆ. ಲಿಂಗಾಯತರ ಪ್ರಾಬಲ್ಯ ಇಲ್ಲದಿದ್ದರೂ, ನೇಕಾರ ಮತದಾರರೇ ಹೆಚ್ಚಾಗಿರುವ ಈ ಕ್ಷೇತ್ರದಿಂದ ಸ್ಪರ್ಧಿಸಲು ತೀರ್ಮಾನಿಸಲಾಗಿದೆ ಎಂದು ಹೇಳಲಾಗುತ್ತಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಲ್ಪ ಮತದಿಂದ ಸೋತಿದ್ದಕ್ಕೆ ಕಾರಣ ಕೆಜೆಪಿ ಸ್ಪರ್ಧೆ ಅನ್ನೋದು ಬಿಜೆಪಿಯ ಲೆಕ್ಕಾಚಾರವಾಗಿದೆ.

    ವಿಧಾನಸಭಾ ಚುನಾವಣೆ ಮತಗಳಿಕೆಯಲ್ಲಿ ಕಾಂಗ್ರೆಸ್ 70,189 ಮತಗಳನ್ನು ಪಡೆದರೆ, ಬಿಜೆಪಿ 67,590 ಮತಗಳನ್ನ, ಕೆಜೆಪಿ 5,558 ಮತಗಳನ್ನ ಪಡೆದುಕೊಂಡಿದ್ದವು. ಈ ಚುನಾವಣೆಯಲ್ಲಿ ಕಾಂಗ್ರೆಸ್ 2,599 ಮತಗಳ ಅಂತರದಿಂದ ಗೆಲವು ಸಾದಿಸಿತ್ತು.

    ಲೋಕಸಭಾ ಚುನಾವಣೆ ಮತಗಳಿಕೆಯಲ್ಲಿ ಬಿಜೆಪಿ 90,154 ಮತಗಳನ್ನು ಪಡೆದಿದ್ದರೆ ಕಾಂಗ್ರೆಸ್ 55,295, ಪಕ್ಷೇತರ 2,189 ಮತಗಳನ್ನು ಪಡೆದುಕೊಂಡಿದ್ದವು. ಈ ಚುನಾವಣೆಯಲ್ಲಿ ಬಿಜೆಪಿ 34, 859 ಮತಗಳ ಅಂತರದಿಂದ ಭಾರಿ ಗೆಲವು ಸಾಧಿಸಿತ್ತು.

    ಯಾರು ಎಷ್ಟಿದ್ದಾರೆ?
    ಈ ಕ್ಷೇತ್ರವು ಸುಮಾರು ಒಟ್ಟು 3 ಲಕ್ಷ ಜನಸಂಖ್ಯೆಯನ್ನು ಹೊಂದಿದ್ದು, ಅದರಲ್ಲಿ ಸುಮಾರು 2 ಲಕ್ಷದ 20 ಸಾವಿರ ಮತದಾರರನ್ನು ಹೊಂದಿದೆ. ಇವರಲ್ಲಿ ನೇಕಾರರು 84 ರಿಂದ 90 ಸಾವಿರ, ಪಂಚಮಸಾಲಿ 35 ಸಾವಿರ, ಪರಿಶಿಷ್ಟರು 30 ಸಾವಿರ, ಕುರುಬರು 18 ಸಾವಿರ, ಮುಸ್ಲಿಮರು 10 ರಿಂದ 15 ಸಾವಿರ, ಬಣಜಿಗರು 10 ರಿಂದ 12 ಸಾವಿರ, ಜೈನರು 12 ಸಾವಿರ, ಗಾಣಿಗರು 8 ರಿಂದ 10 ಸಾವಿರ, ಮಾಳಿ ಸೇರಿದಂತೆ ಇತರೆ ಸಮುದಾಯದವರು 20 ರಿಂದ 25 ಸಾವಿರ ಇದ್ದಾರೆ.

    2013ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ತೊರೆದು ಬಿಎಸ್ ಯಡಿಯೂರಪ್ಪ ಕೆಜೆಪಿ ಕಟ್ಟಿದ್ದರು. ಹೀಗಾಗಿ ಉತ್ತರ ಕರ್ನಾಟಕದಲ್ಲಿ ಲಿಂಗಾಯತರೇ ಹೆಚ್ಚಾಗಿರುವ ಕ್ಷೇತ್ರಗಳಲ್ಲಿ ಬಿಜೆಪಿ ಕಡಿಮೆ ಅಂತರದಲ್ಲಿ ಸೋತಿತ್ತು. ಈ ಕಾರಣಕ್ಕೆ ಉತ್ತರ ಕರ್ನಾಟಕದಲ್ಲಿ ಪಕ್ಷ ಸಂಘಟನೆ ಮತ್ತು ಲಿಂಗಾಯತ ಮತಗಳ ಮೇಲೆ ಕಣ್ಣಿಟ್ಟಿರುವ ಬಿಜೆಪಿ ಹೈಕಮಾಂಡ್ ಬಿಎಸ್‍ವೈ ಅವರನ್ನು ಈ ಭಾಗದಲ್ಲಿ ನಿಲ್ಲಿಸಲು ಮುಂದಾಗುತ್ತಿದೆ ಎಂದು ಹೇಳಲಾಗುತ್ತಿದೆ.