Tag: Teppotsava

  • 50 ವರ್ಷಗಳ ಬಳಿಕ ದಂಡಿ ಮಾರಮ್ಮನ ಅದ್ಧೂರಿ ತೆಪ್ಪೋತ್ಸವ – ವೈಭವ ಕಣ್ತುಂಬಿಕೊಂಡ ಭಕ್ತಗಣ

    50 ವರ್ಷಗಳ ಬಳಿಕ ದಂಡಿ ಮಾರಮ್ಮನ ಅದ್ಧೂರಿ ತೆಪ್ಪೋತ್ಸವ – ವೈಭವ ಕಣ್ತುಂಬಿಕೊಂಡ ಭಕ್ತಗಣ

    ತುಮಕೂರು: ಬರೊಬ್ಬರಿ 50 ವರ್ಷಗಳಿಂದ ಕೈಬಿಟ್ಟಿದ್ದ ತುಮಕೂರು (Tumakuru) ಜಿಲ್ಲೆ ಮಧುಗಿರಿಯ (Madhugiri) ಆದಿದೇವತೆ ಶ್ರೀ ದಂಡಿನ ಮಾರಮ್ಮ (Dandina Maramma)  ದೇವಿಯ ತೆಪ್ಪೋತ್ಸವ ವೈಭವೋಪೇತವಾಗಿ ನೆರವೇರಿದೆ. ಸಹಸ್ರಾರು ಭಕ್ತರು ತೆಪ್ಪೋತ್ಸವವನ್ನು ಕಣ್ತುಂಬಿಕೊಂಡು ಧನ್ಯರಾಗಿದ್ದಾರೆ.

    ಮಾರಮ್ಮನ ತೆಪ್ಪೋತ್ಸವ ಮಾಡದೇ ಇದ್ದುದರಿಂದ ಕೆರೆಗಳಪಾಳ್ಯದ ರಾಜ್ಯದ ಹೆದ್ದಾರಿಯಲ್ಲಿ ಅಪಘಾತಗಳು ಮಿತಿಮೀರಿತ್ತು. ನೂರಾರು ಜನರು ಅಸುನೀಗಿದ್ದಾರೆ. ಮಾರಮ್ಮಳ ಮುನಿಸೇ ಇದಕ್ಕೆ ಕಾರಣ ಎನ್ನಲಾಗಿತ್ತು. ಈ ಹಿನ್ನೆಲೆ ಅದ್ಧೂರಿಯಾಗಿ ತೆಪ್ಪೋತ್ಸವ ನಡೆಸಲಾಗಿದೆ. ಇದನ್ನೂ ಓದಿ: Republic Day | ನಾಳೆ ಬೆಳಗ್ಗೆ 6 ರಿಂದಲೇ ಮೆಟ್ರೋ ಸಂಚಾರ

    ಚೋಳನಹಳ್ಳಿ ಕೆರೆಯಲ್ಲಿ ತೆಪ್ಪದಲ್ಲಿ ಶೃಂಗಾರಗೊಂಡ ಮಾರಮ್ಮ ಸಂಚರಿಸಿದ್ದಾಳೆ. ಸುತ್ತಲೂ ನೆರೆದಿದ್ದ ಭಕ್ತರಿಗೆ ದರ್ಶನ ನೀಡಿದ್ದಾಳೆ. 50 ವರ್ಷದಿಂದ ಈ ಕ್ಷಣಕ್ಕಾಗಿ ಕಾಯುತಿದ್ದ ಮಧುಗಿರಿ ತಾಲೂಕಿನ ಜನ ನಮಿಸಿ ಕೃತಾರ್ಥರಾದರು. ಗೋಧೂಳಿ ಮುಹೂರ್ತದಲ್ಲಿ ಆರಂಭವಾದ ತೆಪ್ಪೋತ್ಸವ ಮಂತ್ರ ಘೋಷಗಳ ಮೂಲಕ ಸಾಗಿತ್ತು. ಬಳಿಕ ಇಡೀ ಕೆರೆಯ ಸುತ್ತ ತೆಪ್ಪದಲ್ಲಿ ಮಾರಮ್ಮಳ ಮೆರವಣಿಗೆ ಮಾಡಲಾಯಿತು. ಕಾಶಿಯಿಂದ ಬಂದ ಪಂಡಿತರು ಕಾರ್ಯಕ್ರಮಕ್ಕೆ ಮೆರಗು ತುಂಬಿದರು. ಈ ಅಪರೂಪದ ಕ್ಷಣಕ್ಕೆ ಸಚಿವ ಕೆ.ಎನ್ ರಾಜಣ್ಣ, ಗೃಹ ಸಚಿವ ಪರಮೇಶ್ವರ್, ಡಿಸಿ ಶುಭಾ ಕಲ್ಯಾಣ್, ಹಾಸನ ಡಿಸಿ ಸತ್ಯಭಾಮಾ, ಹಾಸನ ಎಸ್ಪಿ ಸುಜಿತಾ, ಶ್ರೀ ಸಿದ್ದಲಿಂಗಸ್ವಾಮಿಜಿಗಳು, ಸಿದ್ದರಬೆಟ್ಟ ಶ್ರೀಗಳು ಸಾಕ್ಷಿಯಾದರು. ಇದನ್ನೂ ಓದಿ: ಭಾರತಕ್ಕೆ ಜಯ – ಮುಂಬೈ ದಾಳಿಕೋರ ತಹಾವೂರ್ ರಾಣಾ ಹಸ್ತಾಂತರಕ್ಕೆ ಅಮೆರಿಕ ಸುಪ್ರೀಂ ಅನುಮತಿ

    ಕೆರೆ ಮಧ್ಯದಲ್ಲಿ ತೇಲುವ ತೆಪ್ಪದಲ್ಲಿ ಭಕ್ತಿಯ ಗಾನಸುಧೆ ಮೊಳಗಿತ್ತು. ವಿವಿಧ ಧಾರ್ಮಿಕ ನೃತ್ಯ ದೇವಲೋಕವನ್ನೇ ಸೃಷ್ಟಿಸಿತ್ತು. ಬಾನಂಗಳದಲ್ಲಿ ಬಾಣ ಬಿರುಸುಗಳ ಚಿತ್ತಾರ ಕಣ್ಮನ ಸೆಳೆದಿತ್ತು. ಕೆರೆಯ ತುಂಬೆಲ್ಲಾ ಮಾಡಿದ ದೀಪಾಲಂಕಾರ ಕಣ್ಣಿಗೆ ಹಬ್ಬವಾಗಿತ್ತು. ಇದನ್ನೂ ಓದಿ: ಇನ್ಸ್ಟಾದಲ್ಲಿ ಯುವತಿಗೆ ಲೈಕ್, ನಿಶ್ಚಿತಾರ್ಥ ಮಾಡಿಕೊಂಡಿದ್ದ ಹುಡುಗಿಯಿಂದ ತರಾಟೆ – ಯುವಕ ಆತ್ಮಹತ್ಯೆ

  • 16 ವರ್ಷಗಳ ಬಳಿಕ ತುಂಬಿದ ಕೆರೆಯ ಮಧ್ಯೆ ಬೃಹತ್ ತೆಪ್ಪೋತ್ಸವ

    16 ವರ್ಷಗಳ ಬಳಿಕ ತುಂಬಿದ ಕೆರೆಯ ಮಧ್ಯೆ ಬೃಹತ್ ತೆಪ್ಪೋತ್ಸವ

    ಚಿಕ್ಕಮಗಳೂರು: ಕಳೆದ 16 ವರ್ಷಗಳ ನಂತರ ಕೆರೆಗೆ ಕೋಡಿ ಬಿದ್ದಿದ್ದರಿಂದ ಗ್ರಾಮದ ಕಲ್ಲೇಶ್ವರ ಸ್ವಾಮಿಗೆ ಅದ್ಧೂರಿಯಾಗಿ ತೆಪ್ಪೋತ್ಸವ ಆಚರಿಸಿ ಗ್ರಾಮಸ್ಥರು ತಮ್ಮ ಭಕ್ತಿಯನ್ನು ಮೆರೆದರು.

    ಜಿಲ್ಲೆಯ ಕಡೂರು ತಾಲೂಕಿನ ಸಿಂಗಟಗೆರೆ ಗ್ರಾಮದ ಕೆರೆ ಭರ್ತಿಯಾಗಿದೆ. ಈ ಹಿನ್ನೆಲೆಯಲ್ಲಿ 7 ಗ್ರಾಮದ ಗ್ರಾಮಸ್ಥರು ಸೇರಿ ಅದ್ಧೂರಿಯಾಗಿ ತೆಪ್ಪೋತ್ಸವ ನಡೆಸಿದರು. ತೆಪ್ಪದಲ್ಲಿ ಕಲ್ಲೇಶ್ವರ ಸ್ವಾಮಿ ಮತ್ತು ಆಂಜನೇಯ ಸ್ವಾಮಿ ಉತ್ಸವ ಮೂರ್ತಿಯನ್ನು ಕೂರಿಸಿ 7 ಹಳ್ಳಿ ಫಿರ್ಕಾ ಗ್ರಾಮಸ್ಥರಲ್ಲಿ ಎಲ್ಲಾ ಕೋಮಿನ ಒಬ್ಬರನ್ನು ತೆಪ್ಪದಲ್ಲಿ ಕೂರಿಸಿದ್ದು, ಜಾತ್ಯಾತೀತ ಮನೋಭಾವನೆಗೆ ಸಾಕ್ಷಿಯಾಯಿತು.

    ತೆಪ್ಪೋತ್ಸವ ನಡೆಸುವ ಮುನ್ನ ತೆಪ್ಪವು ದಡದಲ್ಲಿ ಗಟ್ಟಿಯಾಗಿ ಹೂತುಕೊಂಡಿದ್ದ ಪರಿಣಾಮ ಗಂಟೆಗೂ ಹೆಚ್ಚು ಹೊತ್ತು ಭಕ್ತರು ಹರಸಾಹಸಪಟ್ಟರು. ನಂತರ ತೆಪ್ಪವನ್ನು ಚಲಿಸುವಂತೆ ಮಾಡಿದರು. ಈ ವೇಳೆ ಭಕ್ತರಿಂದ ದೇವರ ನಾಮಸ್ಮರಣೆ ಎಲ್ಲೆಡೆ ಹಬ್ಬಿತ್ತು. ಇದನ್ನೂ ಓದಿ: ಕೊರೊನಾದೊಂದಿಗೆ ಪ್ರತಿಪಕ್ಷಗಳು ಸ್ನೇಹ ಬೆಳೆಸುತ್ತಿದೆ: ಯೋಗಿ ಆದಿತ್ಯನಾಥ್

    ಕಡೂರು ಶಾಶ್ವತ ಬರಗಾಲಕ್ಕೆ ತುತ್ತಾದ ತಾಲೂಕು. ಇಲ್ಲಿ ವಾರ್ಷಿಕ ವಾಡಿಕೆ ಮಳೆಯೂ ಬೀಳುವುದು ತುಂಬಾ ಕಡಿಮೆ. ಆದರೆ, ಈ ವರ್ಷ ಇತಿಹಾಸದಲ್ಲಿ ಕಂಡು-ಕೇಳರಿಯದಷ್ಟು ಮಳೆಯಾಗಿದೆ. ವರ್ಷಗಳಿಂದ ನಿಂತಿದ್ದ ಬೋರ್‌ಗಳಿಗೆ ಮರುಜೀವ ಬಂದಿದೆ. ಕೆರೆ-ಕಟ್ಟೆ ತುಂಬಿ ಜನ-ಜಾನುವಾರುಗಳಿಗೆ ಸಮೃದ್ಧ ನೀರಾಗಿದೆ.

    ಈ ಹಿನ್ನೆಲೆಯಲ್ಲಿ ಸಿಂಗಟಗೆರೆ ಮತ್ತು ಫಿರ್ಕಾ 7 ಹಳ್ಳಿ ಗ್ರಾಮಸ್ಥರು ಕಳೆದೊಂದು ತಿಂಗಳಿನಿಂದ ತೆಪ್ಪೋತ್ಸವಕ್ಕೆ ಸಿದ್ಧತೆ ಮಾಡಿದ್ದರು. ಕೆರೆ ಕೋಡಿ ಬಿದ್ದ ವೇಳೆ ಈ ರೀತಿ ತೆಪ್ಪೋತ್ಸವ ನಡೆಸುವುದು ವಾಡಿಕೆ. 2005ರಲ್ಲಿ ತೆಪ್ಪೋತ್ಸವ ನಡೆದಿತ್ತು. 16 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಕೆರೆ ಕೋಡಿ ಬಿದ್ದಿದೆ. ಇದರಿಂದಾಗಿ ತೆಪ್ಪೋತ್ಸವವನ್ನು ಅದ್ಧೂರಿಯಾಗಿ ಆಚರಿಸಿದರು. ಇದನ್ನೂ ಓದಿ:  ಓಮಿಕ್ರಾನ್ ಆತಂಕ – ಇಂದಿನಿಂದ ದೆಹಲಿಯಲ್ಲಿ ನೈಟ್ ಕರ್ಫ್ಯೂ

    ಇದನ್ನು ನೋಡಲು ಸಿಂಗಟಗೆರೆ ಸುತ್ತಮುತ್ತಲಿನ ನೂರಾರು ಹಳ್ಳಿಗರ ಜೊತೆ ಚಿತ್ರದುರ್ಗ, ದಾವಣಗೆರೆ, ತುಮಕೂರು, ಶಿವಮೊಗ್ಗ, ಹಾಸನ, ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಿಂದ ಅಸಂಖ್ಯಾತ ಭಕ್ತರು ಆಗಮಿಸಿದ್ದರು. ಇದನ್ನೂ ಓದಿ: ಪ್ರಧಾನಿ ಮೋದಿ ಕ್ಷಮೆ ಕೇಳುವುದು ಬೇಡ: ರಾಕೇಶ್ ಟಿಕಾಯತ್

    ತೆಪ್ಪೋತ್ಸವವನ್ನು ನೋಡಲು ಬೆಳಗ್ಗೆಯಿಂದಲೂ ಸಾವಿರಾರು ಜನ ಕಾದು ಕೂತಿದ್ದರು. ಕೆರೆ ಏರಿ ಸುತ್ತಲು ಮರದಿಂದ ತಡೆಗೋಡೆ ನಿರ್ಮಿಸಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಸಿಂಗಟಗೆರೆ, ಪಂಚನಹಳ್ಳಿ, ಯಗಟಿ, ಬೀರೂರು, ಕಡೂರು ಪೊಲೀಸರು ಬಂದೋಬಸ್ತ್ ಕಲ್ಪಿಸಿದ್ದರು.

  • ಮಂತ್ರಾಲಯದಲ್ಲಿ ತೆಪ್ಪೋತ್ಸವ ಸಂಭ್ರಮ- ಸಾವಿರಾರು ಭಕ್ತರು ಭಾಗಿ

    ಮಂತ್ರಾಲಯದಲ್ಲಿ ತೆಪ್ಪೋತ್ಸವ ಸಂಭ್ರಮ- ಸಾವಿರಾರು ಭಕ್ತರು ಭಾಗಿ

    ರಾಯಚೂರು: ಗುರುರಾಯರ ಸನ್ನಿಧಿ ಮಂತ್ರಾಲಯದಲ್ಲಿ ಇಂದು ತುಂಗಾರತಿ ಸಂಭ್ರಮ ಮನೆ ಮಾಡಿತ್ತು. ಕಾರ್ತಿಕ ಪೂರ್ಣಮೆ ಹಿನ್ನೆಲೆ ತುಂಗಭದ್ರಾ ನದಿಯಲ್ಲಿ ತೆಪ್ಪೋತ್ಸವ ನೆರವೇರಿಸಲಾಯಿತು.

    ಉತ್ಸವಮೂರ್ತಿ ಪ್ರಹ್ಲಾದ ರಾಜರಿಗೆ ಮಂತ್ರಾಲಯ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮೀಜಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ತುಂಗಭದ್ರಾ ನದಿಯಲ್ಲಿ ಪ್ರಹ್ಲಾದರಾಜರ ತೆಪ್ಪೋತ್ಸವ ಜರುಗಿತು.

    ಕಾರ್ತಿಕ ಪೂರ್ಣಮೆ ಹಿನ್ನೆಲೆ ನದಿ ದಡದಲ್ಲಿ ಭಕ್ತರಿಂದ ದೀಪೋತ್ಸವ ನಡೆದಿದೆ. ಈ ವರ್ಷ ತುಂಗಭದ್ರಾ ನದಿಯಲ್ಲೆ ಪುಷ್ಕರ ಇರುವುದರಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು. ನವೆಂಬರ್ 20 ರಿಂದ ಆರಂಭವಾದ ಪುಷ್ಕರ ನಾಳೆ ಅಂತ್ಯವಾಗಲಿದ್ದು, ಮಂತ್ರಾಲಯ ಶ್ರೀ ಮಠದಲ್ಲಿ ಶ್ರೀನಿವಾಸ ಕಲ್ಯಾಣ ಕಾರ್ಯಕ್ರಮ ನಡೆಯಲಿದೆ.

  • ಕೆರೆ ತುಂಬಿದ ಖುಷಿಗೆ 70 ವರ್ಷದ ಬಳಿಕ ಸುಂದರ ತೆಪ್ಪೋತ್ಸವ

    ಕೆರೆ ತುಂಬಿದ ಖುಷಿಗೆ 70 ವರ್ಷದ ಬಳಿಕ ಸುಂದರ ತೆಪ್ಪೋತ್ಸವ

    ಚಿಕ್ಕಮಗಳೂರು: ಶಾಶ್ವತ ಬರದ ತವರಲ್ಲಿ 12 ವರ್ಷಗಳ ಬಳಿಕ ಕೆರೆ ತುಂಬಿದ ಖುಷಿಗೆ ಗ್ರಾಮಸ್ಥರು ಅದ್ಧೂರಿ ಹಾಗೂ ಸುಂದರ ತೆಪ್ಪೋತ್ಸವ ಮಾಡಿ ಬಸವೇಶ್ವರ ಸ್ವಾಮಿಗೆ ಉಘೇ ಅಂದಿದ್ದಾರೆ.

    ಕಡೂರು ತಾಲೂಕು ಸಿಂಗಟಗೆರೆ ಹೋಬಳಿಯ ಶೆಟ್ಟಿಹಳ್ಳಿ ಗ್ರಾಮದ ಕೆರೆ 12 ವರ್ಷಗಳಿಂದ ತುಂಬಿರಲಿಲ್ಲ. 70 ವರ್ಷಗಳಿಂದ ತೆಪ್ಪೋತ್ಸವ ನಿಂತಿದರಿಂದ ಈ ತಲೆಮಾರಿನ ಜನ ಗ್ರಾಮದ ತೆಪ್ಪೋತ್ಸವವನ್ನೇ ಕಂಡಿರಲಿಲ್ಲ. 75 ವರ್ಷಗಳ ಅವಧಿಯಲ್ಲಿ ಹತ್ತಾರು ಬಾರಿ ಕೆರೆ ತುಂಬಿದ್ರು ಹಣದ ಸಮಸ್ಯೆ ಸೇರಿದಂತೆ ವಿವಿಧ ಕಾರಣಗಳಿಂದ ತೆಪ್ಪೋತ್ಸವ ನಡೆದಿರಲಿಲ್ಲ. ಈ ವರ್ಷ ಕೆರೆ ತುಂಬಿದ ಪರಿಣಾಮ ವೃದ್ಧರು, ಯುವಕ-ಯುವತಿಯರೆಲ್ಲಾ ಸೇರಿ ತೆಪ್ಪೋತ್ಸವ ನಡೆಸಿದ್ದಾರೆ.

    ಜಿಲ್ಲೆಯ ಕಡೂರು ತಾಲೂಕು ಶಾಶ್ವತ ಬರಗಾಲಕ್ಕೆ ತುತ್ತಾದ ಕ್ಷೇತ್ರ. ಕಡೂರು ತಾಲೂಕಿನ ಜನ-ಜಾನುವಾರಗಳಿಗೆ ಕುಡಿಯೋ ನೀರಿಗೂ ಹಾಹಾಕಾರವಿತ್ತು. ಎಷ್ಟು ಹಾಹಾಕಾರವಂದರೆ ಗುಡ್ಡಕ್ಕೆ ಮೇವಿಗೆ ಹೊಡೆದ ದನಕರುಗಳನ್ನ ಅಲ್ಲೆ ಬಿಟ್ಟು ಬರುವಷ್ಟು ಮತ್ತು ಹೋದ ಬೆಲೆಗೆ ಮಾರುವಷ್ಟು ಇವರನ್ನು ಬರಗಾಲ ಕಾಡುತ್ತಿತ್ತು. ಆದರೆ ಈ ವರ್ಷ ಮಳೆಯಿಂದ ಕೆರೆ ತುಂಬಿದ್ದು, ಹಳ್ಳಿಗರ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ. ಅದೇ ಖುಷಿಯಲ್ಲಿ ಈ ವರ್ಷ ವಿಧ-ವಿಧದ ಹೂವುಗಳಿಂದ ಅಲಂಕಾರ ಮಾಡಿ ತೆಪ್ಪೋತ್ಸವ ನಡೆಸಿ ಖುಷಿ ಪಟ್ಟಿದ್ದಾರೆ.

    ಹಾಸನ-ಚಿತ್ರದುರ್ಗ-ಚಿಕ್ಕಮಗಳೂರಿನ ಗಡಿಗ್ರಾಮವಾದ ಈ ಹಳ್ಳಿಯ ತೆಪ್ಪೋತ್ಸವದಲ್ಲಿ ಹೊಸದುರ್ಗ, ಕಡೂರು, ಅರಸೀಕೆರೆ ತಾಲೂಕಿನ ಹತ್ತಾರು ಹಳ್ಳಿಯ ಜನ ಒಗ್ಗೂಡಿ ತೆಪ್ಪೋತ್ಸವ ನಡೆಸಿದರು. ಜಾತ್ರೆಯಲ್ಲಿ ಐದು ಸಾವಿರಕ್ಕೂ ಅಧಿಕ ಜನ ಭಾಗವಹಿಸಿದ್ದರು.