Tag: Tent

  • ಮಹಾ ಕುಂಭಮೇಳಕ್ಕೆ ಟೆಂಟ್‌ ಸಾಮಗ್ರಿ ಪೂರೈಸುತ್ತಿದ್ದ ಕಂಪನಿಯ ಗೊಡೋನ್​ನಲ್ಲಿ ಅಗ್ನಿ ದುರಂತ

    ಮಹಾ ಕುಂಭಮೇಳಕ್ಕೆ ಟೆಂಟ್‌ ಸಾಮಗ್ರಿ ಪೂರೈಸುತ್ತಿದ್ದ ಕಂಪನಿಯ ಗೊಡೋನ್​ನಲ್ಲಿ ಅಗ್ನಿ ದುರಂತ

    ಪ್ರಯಾಗರಾಜ್: ಕೆಲ ದಿನಗಳ ಹಿಂದೆ ಮುಕ್ತಾಯಗೊಂಡ ಮಹಾ ಕುಂಭಮೇಳಕ್ಕೆ (Maha Kumbh) ಟೆಂಟ್‌ ಸಾಮಗ್ರಿಗಳನ್ನು ಪೂರೈಸುತ್ತಿದ್ದ ಕಂಪನಿಯೊಂದರ ಗೊಡೋನ್‌ನಲ್ಲಿ ಶನಿವಾರ (ಇಂದು) ಭಾರೀ ಅಗ್ನಿ ಅವಘಡ ಸಂಭವಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಅದೃಷ್ಟವಶಾತ್‌ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸದ್ಯ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕಾಗಮಿಸಿದ್ದು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. 6 ನೀರಿನ ಟ್ಯಾಂಕರ್‌ಗಳನ್ನ  (Water Tenders) ಸ್ಥಳಕ್ಕೆ ತರಿಸಲಾಗಿದ್ದು, ಮುಖ್ಯ ಅಗ್ನಿಶಾಮಕ ಅಧಿಕಾರಿ ರಾಜೀವ್ ಕುಮಾರ್ ಪಾಂಡೆ ನೇತೃತ್ವದಲ್ಲಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಯುತ್ತಿದೆ. ಇದನ್ನೂ ಓದಿ: ಮೇಲಾಧಿಕಾರಿಗಳ ಕಿರುಕುಳ – ವಿಷ ಸೇವಿಸಿ KSRTC ಬಸ್‌ ಚಾಲಕ ಆತ್ಮಹತ್ಯೆಗೆ ಯತ್ನ

    ಅಗ್ನಿ ಅವಘಡಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಆದ್ರೆ ಗೊಡೋನ್‌ ಕೆಲಸ ಮಾಡ್ತಿದ್ದ ರಾಹುಲ್‌, ಸಿಲಿಂಡರ್‌ಗಳು ಸ್ಫೋಟಗೊಂಡ ಸದ್ದು ಕೇಳಿಸಿತು ಎಂಬುದಾಗಿ ಹೇಳಿದ್ದಾರೆ. ಈ ಕುರಿತು ಪರಿಶೀಲನೆ ನಡೆಯುತ್ತಿದೆ. ಇದನ್ನೂ ಓದಿ: 9 ವರ್ಷವಾದ್ರೂ ಪೂರ್ಣಗೊಳ್ಳದ ಶಿರಾಡಿ ಘಾಟ್ ರಸ್ತೆ – ಅಧಿಕ ಮಳೆಯಾದರೆ ಅನಾಹುತ ಫಿಕ್ಸ್?

    ಬೆಂಕಿ ಬಿದ್ದ ಗೊಡೋನ್‌ನಲ್ಲಿ ಲಾಗ್‌ಗಳು ಮತ್ತು ಟೆಂಟ್ ವಸ್ತುಗಳನ್ನು ಸಂಗ್ರಹಿಸಲಾಗಿತ್ತು. ಇದನ್ನೂ ಓದಿ: ರಿಕ್ಕಿ ರೈ ಮೇಲೆ ಶೂಟೌಟ್‌ ಕೇಸ್‌: ಮುತ್ತಪ್ಪ ರೈ 2ನೇ ಪತ್ನಿ ಅನುರಾಧ ಸೇರಿ ನಾಲ್ವರ ವಿರುದ್ಧ FIR

  • ಬೆಟ್ಟದ ತುದಿಯಲ್ಲಿ ಅತ್ಯಾಧುನಿಕ ಟೆಂಟ್, ನಕ್ಸಲರ ಶಂಕೆ

    ಬೆಟ್ಟದ ತುದಿಯಲ್ಲಿ ಅತ್ಯಾಧುನಿಕ ಟೆಂಟ್, ನಕ್ಸಲರ ಶಂಕೆ

    ಚಿಕ್ಕಮಗಳೂರು: ಬೆಟ್ಟದ ತುದಿಯಲ್ಲಿ ಅತ್ಯಾಧುನಿಕ ಶೆಡ್ ಪತ್ತೆಯಾಗಿದ್ದು, ನಕ್ಸಲರು ಮತ್ತೆ ಮಲೆನಾಡನ್ನು ಅಡಗುದಾಣವನ್ನಾಗಿ ಮಾಡಿಕೊಳ್ಳುತ್ತಿದ್ದಾರಾ ಎಂಬ ಅನುಮಾನ ವ್ಯಕ್ತವಾಗಿದೆ.

    ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರ ಸಮೀಪದ ಹೇರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲೆಮಡಿಲು ಗ್ರಾಮದ ದುರ್ಗದ ಬೆಟ್ಟದ ತುದಿಯಲ್ಲಿ ಶೆಡ್ ಪತ್ತೆಯಾಗಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಸ್ಥಳೀಯರು ಚಾರಣಕ್ಕೆ ಹೋದಾಗ ಈ ಶೆಡ್ ಪತ್ತೆಯಾಗಿದ್ದು, ತಾರ್ಪಲ್‍ನಿಂದ ನಿರ್ಮಿಸಿರುವ ಶೆಡ್ ಕಂಡು ಸ್ಥಳಿಯರು ಆತಂಕಕ್ಕೀಡಾಗಿದ್ದಾರೆ.

    ಶೆಡ್‍ನಲ್ಲಿ ಪೆಟ್ರೋಲ್ ಕ್ಯಾನ್‍ಗಳು, ಗುಣಮಟ್ಟದ ಹಗ್ಗ, ನೀರಿನ ಬಾಟಲ್ ಹಾಗೂ ಕುರ್ಚಿಗಳು ಪತ್ತೆಯಾಗಿದ್ದು, ನಕ್ಸಲರು ಬಂದು ಹೋಗಿರಬಹುದಾ ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಕಳೆದ ಒಂದೆರಡು ವರ್ಷಗಳಿಂದ ಮಲೆನಾಡಲ್ಲಿ ನಕ್ಸಲರ ಸಂಖ್ಯೆ ಸಂಪೂರ್ಣ ಕ್ಷೀಣಿಸಿದೆ. ಇರುವಿಕೆಯ ಬಗ್ಗೆಯೂ ಯಾವುದೇ ಪುರಾವೆಗಳು ಸಿಕ್ಕಿರಲಿಲ್ಲ. ಇದೀಗ ಗುಡ್ಡದಲ್ಲಿ ಶೆಡ್ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

    ನಕ್ಸಲರು ಸಂಘಟನೆಯನ್ನು ಬಲಪಡಿಸಿಕೊಳ್ಳುತ್ತಿದ್ದಾರಾ, ತರಬೇತಿ ನಡೆಸಿದ್ದಾರಾ ಎಂಬ ಅನುಮಾನ ಮೂಡಿದೆ. ಯಾವುದಾದರು ಕೃತ್ಯಕ್ಕೆ ಸಂಚು ರೂಪಿಸಿರಬಹುದಾ ಎಂಬ ಶಂಕೆ ಕೂಡ ಮನೆ ಮಾಡಿದೆ. ವಿಷಯ ತಿಳಿಯುತ್ತಿದ್ದಂತೆ ಜಯಪುರ ಪೊಲೀಸರು ಹಾಗೂ ಕೊಪ್ಪ ಸರ್ಕಲ್ ಇನ್ಸ್‍ಪೆಕ್ಟರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸುತ್ತಲಿನ ಕಾಫಿ ಎಸ್ಟೇಟ್‍ನವರು ಮೋಜು-ಮಸ್ತಿಗಾಗಿಯೂ ನಿರ್ಮಿಸಿರಬಹುದು ಎಂದು ಅಂದಾಜಿಸಲಾಗಿದ್ದು, ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಪೊಲೀಸರು ಸೂಕ್ತ ತನಿಖೆ ನಡೆಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

  • ಕೊಲ್ಲೂರು ಕಾಡಲ್ಲಿ ಸಿಕ್ಕ ಟೆಂಟ್ ಭಕ್ತರದ್ದು – ಎಸ್‍ಪಿ ನಿಶಾ ಜೇಮ್ಸ್ ಸ್ಪಷ್ಟನೆ

    ಕೊಲ್ಲೂರು ಕಾಡಲ್ಲಿ ಸಿಕ್ಕ ಟೆಂಟ್ ಭಕ್ತರದ್ದು – ಎಸ್‍ಪಿ ನಿಶಾ ಜೇಮ್ಸ್ ಸ್ಪಷ್ಟನೆ

    ಉಡುಪಿ: ರಾಜ್ಯದಲ್ಲಿ ಮತ್ತೆ ನಕ್ಸಲ್ ಚಟುವಟಿಕೆ ಚಿಗುರಿತಾ? ಪಕ್ಕದ ಕೇರಳದ ಕೆಂಪು ನಕ್ಸಲರು ತಮ್ಮ ಕ್ಯಾಂಪನ್ನು ಕರಾವಳಿ, ಮಲೆನಾಡು ಕಡೆ ವಿಸ್ತರಿಸಿದ್ರಾ? ಇಂತಹದೊಂದು ಪ್ರಶ್ನೆ ಕರಾವಳಿ ಜಿಲ್ಲೆ ಉಡುಪಿಯಲ್ಲಿ ಓಡಾಡುತ್ತಿದೆ. ಬೈಂದೂರು ತಾಲೂಕು ಕೊಲ್ಲೂರಿನ ಕಾಡಿನಲ್ಲಿ ಸಿಕ್ಕ ತಾತ್ಕಾಲಿಕ ಗುಡಿಸಲು ಇಷ್ಟೆಲ್ಲಾ ಗಾಸಿಪ್ ಗಳಿಗೆ ಕಾರಣವಾಗಿದೆ.

    ಕೊಲ್ಲೂರು ಅಭಯಾರಣ್ಯದ ಗುಡಿಸಲಿನಲ್ಲಿ ಸಿಕ್ಕ ಅಕ್ಕಿ, ಎಣ್ಣೆ, ಛತ್ರಿ, ವಿಭೂತಿ, ಬಟ್ಟೆಗಳು ಪೊಲೀಸ್ ಇಲಾಖೆ, ಎಎನ್‍ಎಫ್, ಅರಣ್ಯ ಇಲಾಖೆಯ ನಿದ್ದೆಗೆಡಿಸಿತ್ತು. ದಿನಪೂರ್ತಿ ತಪಾಸಣೆ ಮಾಡಿದ ಮೂರೂ ಇಲಾಖೆಯ ಸಿಬ್ಬಂದಿಗಳು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ್ದಾರೆ. ಇದೀಗ ನಕ್ಸಲ್ ಚಟುವಟಿಕೆಯನ್ನು ಅಲ್ಲಗಳೆದಿದ್ದಾರೆ.

    ಚಾರಣಿಗರೋ, ಧಾರ್ಮಿಕ ಪ್ರವಾಸದ ಸಂದರ್ಭ ಭಕ್ತರು ತಾತ್ಕಾಲಿಕ ಟೆಂಟ್ ಮಾಡಿರಬಹುದು ಎಂದು ಪೊಲೀಸ್ ತಪಾಸಣೆಯಲ್ಲಿ ತಿಳಿದುಬಂದಿದೆ. ಪಕ್ಕದಲ್ಲೆ ಧ್ಯಾನಕೇಂದ್ರವಿದ್ದು ಭಕ್ತರು ಧ್ಯಾನ ಮಾಡಲು ತಾತ್ಕಾಲಿಕ ಟೆಂಟ್ ಹಾಕಿಕೊಂಡಿರುವ ಸಾಧ್ಯತೆಯಿದೆ ಎಂದು ಉಡುಪಿ ಎಸ್‍ಪಿ ನಿಶಾ ಜೇಮ್ಸ್ ಸ್ಪಷ್ಟನೆ ಕೊಟ್ಟಿದ್ದಾರೆ.

    ಈ ನಡುವೆ ಹೆಬ್ರಿ ತಾಲೂಕಿನ ನಾಡ್ಪಾಲ್ ಲೊಕೇಶನ್ ನಿಂದ ಕರಾಚಿಗೆ ಫೋನ್ ಕರೆಯೊಂದು ಹೋಗಿದೆ. ಹೆಬ್ರಿಗೆ ಮತ್ತು ಕೊಲ್ಲೂರಿಗೆ ಎನ್‍ಐಎ ಅಧಿಕಾರಿಗಳು ಭೇಟಿಕೊಟ್ಟು ಪರಿಶೀಲನೆ ನಡೆಸಿದ್ದಾರೆ ಎಂಬ ಸುದ್ದಿ, ರಾಜ್ಯಮಟ್ಟದ ಪತ್ರಿಕೆಯೊಂದರಲ್ಲಿ ಪ್ರಕಟವಾಗಿದೆ. ನಕ್ಸಲ್ ಸುದ್ದಿ ಮತ್ತು ಭಯೋತ್ಪಾದಕ ಚಲನವಲನದ ವರದಿ ಒಂದಕ್ಕೊಂದು ಲಿಂಕ್ ಆಗಿ, ಜನರಲ್ಲಿ ಆತಂಕ ಮೂಡಿಸಿತ್ತು. ಇದಕ್ಕೂ ಸ್ಪಷ್ಟನೆ ನೀಡಿರುವ ಎಸ್‍ಪಿ ನಿಶಾ ಜೇಮ್ಸ್ ಎನ್‍ಐಎ ಅಧಿಕಾರಿಗಳು ಜಿಲ್ಲೆಗೆ ಆಗಮಿಸಿಲ್ಲ, ಎಲ್ಲೂ ವಿಚಾರಣೆ ನಡೆಸಿಲ್ಲ. ನಕ್ಸಲ್ ಚಲನವಲನ ಕೂಡಾ ಜಿಲ್ಲೆಯಲ್ಲಿ ಇಲ್ಲ ಎಂದು ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

    ಎಸ್‍ಪಿ ನಿಶಾ ಜೇಮ್ಸ್ ಮಾತನಾಡಿ, ದಿನಾಂಕ 16ರಂದು ಅರಣ್ಯಾಧಿಕಾರಿಗಳಿಂದ ನಮಗೆ ಮಾಹಿತಿ ಬಂದಿತ್ತು. ನಮ್ಮ ಮತ್ತು ಶಿವಮೊಗ್ಗ ಜಿಲ್ಲೆಯ ಗಡಿ ಪ್ರದೇಶ ಅದು ಜಂಟಿ ಕಾರ್ಯಾಚರಣೆ ಮಾಡಿದಾಗ ವಿಭೂತಿ ಕುಂಕುಮ ಸಿಕ್ಕಿದೆ. ಧ್ಯಾನಕ್ಕೆ ಬರುವವರು ಟೆಂಟ್ ಹಾಕಿರುವ ಸಾಧ್ಯತೆಯಿದೆ. ಮೇಲ್ನೋಟಕ್ಕೆ ನಕ್ಸಲ್ ಚಟುವಟಿಕೆಯಂತೆ ಕಂಡುಬರುವುದಿಲ್ಲ. ಜಿಲ್ಲೆಗೆ ಎಎನ್‍ಐ ಅಧಿಕಾರಿಗಳು ಭೇಟಿಕೊಟ್ಟಿಲ್ಲ. ಎಎನ್‍ಐ ಅಧಿಕಾರಿಗಳು ಜಿಲ್ಲೆಗೆ ಬಂದರೆ ಸ್ಥಳೀಯ ಪೊಲೀಸರಿಗೆ ಮಾಹಿತಿ ಕೊಡದೆ ಯಾವುದೇ ಕಾರ್ಯಾಚರಣೆ ನಡೆಸುವುದಿಲ್ಲ ಎಂದರು.