Tag: Tennis player

  • ಟೆನ್ನಿಸ್ ಆಟಗಾರ್ತಿಯನ್ನು ಕೊಂದ ಅಪ್ಪನಿಗೆ 14 ದಿನ ನ್ಯಾಯಾಂಗ ಬಂಧನ

    ಟೆನ್ನಿಸ್ ಆಟಗಾರ್ತಿಯನ್ನು ಕೊಂದ ಅಪ್ಪನಿಗೆ 14 ದಿನ ನ್ಯಾಯಾಂಗ ಬಂಧನ

    ಚಂಡೀಗಢ: ಟೆನ್ನಿಸ್ ಆಟಗಾರ್ತಿ (Tennis Player) ಮಗಳನ್ನು ಗುಂಡಿಕ್ಕಿ ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ತಂದೆ ದೀಪಕ್ ಯಾದವ್‌ನನ್ನು (Deepak Yadav) ಗುರುಗ್ರಾಮ ನ್ಯಾಯಾಲಯ (Gurugram Court) 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಿದೆ.

    ದೀಪಕ್‌ನನ್ನು ಬಂಧಿಸಿದ ಗುರುಗ್ರಾಮ ಪೊಲೀಸರು ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದರು. ವಿಚಾರಣೆ ನಡೆಸಿದ ಕೋರ್ಟ್ ದೀಪಕ್ ಯಾದವ್‌ನನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ (Judicial Custody) ಒಪ್ಪಿಸಿತು. ಇದನ್ನೂ ಓದಿ: ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಗಾಯಗೊಂಡಿದ್ದ ಹೆಣ್ಣು ಚೀತಾ ಸಾವು

    ರಾಜ್ಯ ಮಟ್ಟದ ಟೆನ್ನಿಸ್ ಆಟಗಾರ್ತಿ ರಾಧಿಕಾಳನ್ನು (25) ಜುಲೈ 10 ರಂದು ಗುರುಗ್ರಾಮದಲ್ಲಿರುವ ಮನೆಯಲ್ಲಿ ತಂದೆ ದೀಪಕ್ ಯಾದವ್ ರಿವಾಲ್ವರ್‌ನಿಂದ ಗುಂಡು ಹಾರಿಸಿ ಹತ್ಯೆಗೈದಿದ್ದಾರೆ. ಇದನ್ನೂ ಓದಿ: ಏಕಕಾಲದಲ್ಲಿ ಚುನಾವಣೆ ನಡೆಸುವುದು ಸಂವಿಧಾನದ ಮೂಲ ರಚನೆಯನ್ನ ಉಲ್ಲಂಘಿಸುವುದಿಲ್ಲ: ಡಿ.ವೈ ಚಂದ್ರಚೂಡ್

    ಪೊಲೀಸರ ಪ್ರಕಾರ, ದೀಪಕ್ ಯಾದವ್ ಅವರ ಊರಾದ ವಜೀರಾಬಾದ್‌ಗೆ ತೆರಳಿದ್ದ ಸಂದರ್ಭ ಗ್ರಾಮಸ್ಥರು ಮತ್ತು ಗೆಳೆಯರು ಅವರನ್ನು ನಿಂದಿಸಿದ್ದರು. ಇದರಿಂದ ದೀಪಕ್  ಕೋಪಗೊಂಡಿದ್ದರು. ಅವರ ಗೆಳೆಯರು, ಸಂಬಂಧಿಕರು ದೀಪಕ್ ತಮ್ಮ ಮಗಳ ಟೆನಿಸ್ ಅಕಾಡೆಮಿಯಿಂದ ಪಡೆಯುವ ಆದಾಯದಿಂದ ಬದುಕುತ್ತಿದ್ದಕ್ಕಾಗಿ ಅಪಹಾಸ್ಯ ಮಾಡಿದ್ದರು. ಇದರಿಂದ ದೀಪಕ್ ಯಾದವ್ ಮಗಳ ಮೇಲೆ ಕೋಪಗೊಂಡಿದ್ದರು. ಮಗಳಿಗೆ ಟೆನಿಸ್ ಅಕಾಡೆಮಿ ಮುಚ್ಚುವಂತೆ ಅನೇಕ ಬಾರಿ ಹೇಳಿದ್ದರು. ಆದರೆ, ಆಕೆ ಒಪ್ಪಿರಲಿಲ್ಲ. ಇದೇ ವಿಷಯದ ಜಗಳದಿಂದ ಗುಂಡು ಹಾರಿಸಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸಣ್ಣ ವ್ಯಾಪಾರಿಗಳಿಗೆ ಟ್ಯಾಕ್ಸ್ ಗುನ್ನಾ – ವಾರ್ಷಿಕ 40 ಲಕ್ಷ ವಹಿವಾಟು ಮೀರಿದ್ರೆ GST ಫಿಕ್ಸ್

    ತಂದೆ ತನ್ನ ಮಗಳ ವೃತ್ತಿಜೀವನ ಮತ್ತು ಗಳಿಕೆಯ ಬಗ್ಗೆ ಸಾಮಾಜಿಕ ಟೀಕೆಗಳಿಂದಾಗಿ ಕಳೆದ 15 ದಿನಗಳಿಂದ ಖಿನ್ನತೆಯಿಂದ ಬಳಲುತ್ತಿದ್ದರು. ಈ ಹಿನ್ನೆಲೆ ಗುರುವಾರ ಮಗನನ್ನು ಹಾಲು ತರಲೆಂದು ಮನೆಯಿಂದ ಆಚೆ ಕಳುಹಿಸಿ ಅಡುಗೆ ಮಾಡುತ್ತಿದ್ದ ಮಗಳ ಮೇಲೆ ಗುಂಡು ಹಾರಿಸಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: 5 ಹುಲಿಗಳ ಸಾವು ಪ್ರಕರಣ – ಕಾರ್ಬೋಫುರಾನ್ ಕೀಟನಾಶಕ ಬಳಕೆ: ಸಿಸಿಎಫ್ ಹೀರಾಲಾಲ್

  • ಅಕಾಡೆಮಿ ಮುಚ್ಚಲು ನಿರಾಕರಿಸಿದ ಟೆನ್ನಿಸ್ ಆಟಗಾರ್ತಿಯನ್ನ ಗುಂಡಿಕ್ಕಿ ಕೊಂದ ತಂದೆ

    ಅಕಾಡೆಮಿ ಮುಚ್ಚಲು ನಿರಾಕರಿಸಿದ ಟೆನ್ನಿಸ್ ಆಟಗಾರ್ತಿಯನ್ನ ಗುಂಡಿಕ್ಕಿ ಕೊಂದ ತಂದೆ

    – ಮಗಳ ಮೇಲೆ 5 ಸುತ್ತು ಗುಂಡು ಹಾರಿಸಿದ ಅಪ್ಪ

    ಚಂಡೀಗಡ: ಟೆನ್ನಿಸ್ ಅಕಾಡೆಮಿಯನ್ನ ಮುಚ್ಚಲು ನಿರಾಕರಿಸಿದ ಮಗಳನ್ನು ತಂದೆಯೇ ಗುಂಡಿಕ್ಕಿ ಕೊಂದಿರುವ ಘಟನೆ ಹರಿಯಾಣದ ಗುರುಗ್ರಾಮದಲ್ಲಿ (Gurugram) ನಡೆದಿದೆ.

     ಹತ್ಯೆಯಾದ ಟೆನ್ನಿಸ್ ಆಟಗಾರ್ತಿಯನ್ನು (Tennis player) ರಾಧಿಕಾ ಯಾದವ್ (25) ಎಂದು ಗುರುತಿಸಲಾಗಿದೆ. ದೀಪಕ್ ಯಾದವ್ (47) ಆರೋಪಿ ತಂದೆ. ರೀಲ್ಸ್ ನೋಡುತ್ತಿದ್ದಕ್ಕೆ ಟೆನ್ನಿಸ್ ಆಟಗಾರ್ತಿಯನ್ನು ತಂದೆ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಊಹಿಸಲಾಗಿತ್ತು. ಪೊಲೀಸರ ತನಿಖೆ ವೇಳೆ ನಿಜಾಂಶ ಬಯಲಾಗಿದೆ. ಇದನ್ನೂ ಓದಿ: ಮಾಜಿ ಉಪಸಭಾಪತಿ, ಹಿರಿಯ ನ್ಯಾಯವಾದಿ ಡಾ.ಎನ್.ತಿಪ್ಪಣ್ಣ ನಿಧನ

    ಟೆನ್ನಿಸ್ ಆಟಗಾರ್ತಿಯಾಗಿದ್ದ ರಾಧಿಕಾ ಯಾದವ್ ಅವರಿಗೆ ಕೆಲ ದಿನಗಳ ಹಿಂದೆ ಪಂದ್ಯವೊಂದರಲ್ಲಿ ಭುಜದ ಭಾಗಕ್ಕೆ ಗಾಯವಾಗಿತ್ತು. ಇದರಿಂದಾಗಿ ಅವರು ಮಕ್ಕಳಿಗೆ ತರಬೇತಿ ನೀಡಲು ನೂತನ ಟೆನ್ನಿಸ್ ಅಕಾಡೆಮಿಯನ್ನು ಆರಂಭಿಸಿದ್ದರು. ಆದರೆ ಆಕೆಯ ತಂದೆ ದೀಪಕ್ ಯಾದವ್, ಅಕಾಡೆಮಿಯನ್ನು ಮುಚ್ಚಬೇಕೆಂದು ಮಗಳ ಬಳಿ ಹೇಳಿದ್ದರು. ಇದನ್ನೂ ಓದಿ: ಸರ್ಕಾರಿ ಶಾಲಾ ಮಕ್ಕಳಿಗೆ ಬಸ್‌ ಫ್ರೀ – ರಾಜ್ಯ ಸರ್ಕಾರದಿಂದ ಮಹತ್ವದ ಘೋಷಣೆ

    ದೀಪಕ್ ಯಾದವ್ ಬಳಿ ಜನರು ತಮ್ಮ ಮಗಳ ಗಳಿಕೆಯಿಂದ ಬದುಕುತ್ತಿದ್ದೀರಿ ಎಂದು ಹಿಯಾಳಿಸುತ್ತಿದ್ದರು. ಇದರಿಂದ ದೀಪಕ್ ಅವರು ಅಕಾಡೆಮಿಯನ್ನು ಮುಚ್ಚುವಂತೆ ಹೇಳಿದ್ದರು. ಆದರೆ ಮಗಳು ತಂದೆಯ ಈ ಮಾತಿಗೆ ನಿರಾಕರಿಸಿದ್ದಳು. ಹೀಗಾಗಿ ಜು. 10ರಂದು ಮನೆಯಲ್ಲಿ ಅಡುಗೆ ಮಾಡುತ್ತಿದ್ದ ಮಗಳಿಗೆ ಹಿಂದಿನಿಂದ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರ ತನಿಖೆಯಲ್ಲಿ ತಿಳಿದು ಬಂದಿದೆ. ಇದನ್ನೂ ಓದಿ: ಕೌಟುಂಬಿಕ ಸಮಸ್ಯೆ ಬಗೆಹರಿಸಿಕೊಡೋದಾಗಿ ಮೌಲ್ವಿಯಿಂದ ಮಹಿಳೆಗೆ ಲೈಂಗಿಕ ಕಿರುಕುಳ – ಕೇಸ್‌ ದಾಖಲು

    ಗುಂಡಿನ ಸದ್ದು ಕೇಳುತ್ತಿದ್ದಂತೆ ಮೊದಲ ಮಹಡಿಗೆ ರಾಧಿಕಾ ಚಿಕ್ಕಪ್ಪ ಧಾವಿಸಿದ್ದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ರಾಧಿಕಾಳನ್ನು ತಕ್ಷಣ ಗುರುಗ್ರಾಮದಲ್ಲಿರುವ ಏಷ್ಯಾ ಮೊರಿಂಗೊ ಆಸ್ಪತ್ರೆಗೆ ಕರೆದೊಯ್ದಿದ್ದರು. ಅಷ್ಟರಲ್ಲಾಗಲೇ ಆಕೆ ಮೃತಪಟ್ಟಿದ್ದಳು ಎಂದು ವೈದ್ಯರು ದೃಢಪಡಿಸಿದ್ದರು. ಇದನ್ನೂ ಓದಿ: ಹಾಸನ ಹೃದಯಾಘಾತ ವರದಿ ಬಹಿರಂಗ: 8 ಲಕ್ಷ ಚಾಲಕರಿಗೆ ಹೆಲ್ತ್‌ ಕ್ಯಾಂಪ್‌ ಆಯೋಜಿಸಲು ಮುಂದಾದ ಸರ್ಕಾರ

    ಘಟನೆ ಕುರಿತು ಗುರುಗ್ರಾಮ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಆರೋಪಿ ತಂದೆ ದೀಪಕ್ ಯಾದವ್‌ನನ್ನು ಪೊಲೀಸರು ಬಂಧಿಸಿದ್ದಾರೆ.

  • ರೀಲ್ಸ್ ಚಟ – ಟೆನ್ನಿಸ್ ಆಟಗಾರ್ತಿ ಮಗಳನ್ನು ಗುಂಡಿಕ್ಕಿ ಕೊಂದ ತಂದೆ

    ರೀಲ್ಸ್ ಚಟ – ಟೆನ್ನಿಸ್ ಆಟಗಾರ್ತಿ ಮಗಳನ್ನು ಗುಂಡಿಕ್ಕಿ ಕೊಂದ ತಂದೆ

    ಚಂಡೀಗಢ: ಮಗಳ ರೀಲ್ಸ್ (Reels) ಚಟದಿಂದ ಬೇಸತ್ತ ತಂದೆ ಟೆನ್ನಿಸ್ ಆಟಗಾರ್ತಿ (Tennis Player) ಮಗಳನ್ನು ಗುಂಡಿಕ್ಕಿ ಹತ್ಯೆಗೈದ ಘಟನೆ ಗುರುಗ್ರಾಮದ (Gurugram) ಸುಶಾಂತ್ ಲೋಕ್‌ನಲ್ಲಿ ನಡೆದಿದೆ.

    ರಾಧಿಕಾ ಯಾದವ್ (25) ಮೃತ ಟೆನ್ನಿಸ್ ಆಟಗಾರ್ತಿ. ರಾಧಿಕ ಸುಶಾಂತ್ ಲೋಕ್‌ನ ಫೇಸ್-2 ನಿವಾಸಿಯಾಗಿದ್ದು, ರಾಜ್ಯಮಟ್ಟದ ಟೆನ್ನಿಸ್ ಆಟಗಾರ್ತಿಯಾಗಿದ್ದರು. ಅಲ್ಲದೇ ಹಲವಾರು ಸ್ಪರ್ಧೆಗಳಲ್ಲೂ ವಿಜೇತರಾಗಿದ್ದರು. ಇದನ್ನೂ ಓದಿ: ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ – ಕೈ ಕೊಯ್ದುಕೊಂಡ ಲಿವ್‌-ಇನ್‌ ಪಾರ್ಟ್ನರ್‌

    ಮಗಳು ಇನ್ಸ್ಟಾಗ್ರಾಂನಲ್ಲಿ ರೀಲ್ಸ್ ಚಟ ಬೆಳೆಸಿಕೊಂಡಿದ್ದರಿಂದ ಅಸಮಾಧಾನಗೊಂಡಿದ್ದ ತಂದೆ ಇಂದು ಮಧ್ಯಾಹ್ನದ ವೇಳೆಗೆ ರಾಧಿಕಾ ಮೇಲೆ ಐದು ಗುಂಡುಗಳನ್ನು ಹಾರಿಸಿದ್ದಾರೆ. ಈ ಪೈಕಿ ಮೂರು ಗುಂಡುಗಳು ರಾಧಿಕಾಗೆ ತಗುಲಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇದನ್ನೂ ಓದಿ: ʻಕೈʼ ಸರ್ಕಾರದಿಂದ ಬೀದಿ ನಾಯಿಗಳಿಗೂ ಗ್ಯಾರಂಟಿ – ಬಾಡೂಟಕ್ಕಾಗಿ ಬಿಬಿಎಂಪಿಯಿಂದ 2.80 ಕೋಟಿ ಟೆಂಡರ್

    ಸದ್ಯ ಆರೋಪಿ ತಂದೆಯನ್ನು ಪೊಲೀಸರು ಬಂಧಿಸಿದ್ದು, ಗುಂಡು ಹಾರಿಸಿದ್ದ ಬಂದೂಕನ್ನು ವಶಕ್ಕೆ ಪಡೆದಿದ್ದಾರೆ. ಘಟನೆ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ತಾಯಿಯನ್ನು ಬಿಟ್ಟು ವಸತಿ ನಿಲಯದಲ್ಲಿ ಇರಲಾರೆ ಎಂದ ಬಾಲಕ ನೇಣಿಗೆ ಶರಣು!

  • ಮೈಕ್ ಟೈಸನ್‍ರಿಂದ ಬಾಕ್ಸಿಂಗ್ ಕಲಿಯುತ್ತಿದ್ದಾರೆ ಟೆನ್ನಿಸ್ ತಾರೆ ಸೆರೆನಾ

    ಮೈಕ್ ಟೈಸನ್‍ರಿಂದ ಬಾಕ್ಸಿಂಗ್ ಕಲಿಯುತ್ತಿದ್ದಾರೆ ಟೆನ್ನಿಸ್ ತಾರೆ ಸೆರೆನಾ

    ವಾಷಿಂಗ್ಟನ್: ಟೆನ್ನಿಸ್ ತಾರೆ ಸೆರೆನಾ ವಿಲಿಯಮ್ಸ್ ಜನವರಿಯಲ್ಲಿ ನಡೆಯಲಿರುವ ಆಸ್ಟ್ರೇಲಿಯನ್ ಓಪನ್ ಗ್ರ್ಯಾಂಡ್ ಸ್ಲ್ಯಾಮ್‍ಗೆ ಭರ್ಜರಿ ಅಭ್ಯಾಸ ಪ್ರಾರಂಭಿಸಿದ್ದಾರೆ. ಈ ಮಧ್ಯೆ ಅವರು ಅಮೆರಿಕದ ಬಾಕ್ಸಿಂಗ್ ದಿಗ್ಗಜ ಮೈಕ್ ಟೈಸನ್ ಅವರಿಂದ ಬಾಕ್ಸಿಂಗ್ ಕಲಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಅಮೆರಿಕದ ಟೆನ್ನಿಸ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ ವಿವಿಧ ಓಪನ್ ಗ್ರ್ಯಾಂಡ್ ಸ್ಲ್ಯಾಮ್‍ನಲ್ಲಿ ಏಳು ಬಾರಿ ಚಾಂಪಿಯನ್ ಆಗಿದ್ದಾರೆ. ಮುಂದಿನ ವರ್ಷ ಜನವರಿಯಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ಓಪನ್ ಟೆನ್ನಿಸ್‍ನಲ್ಲಿ ಗೆಲುವು ಸಾಧಿಸಲು ಸಿದ್ಧತೆ ನಡೆಸಿದ್ದಾರೆ. ಈ ನಿಟ್ಟಿನಲ್ಲಿ ಅವರಿಗೆ ಪ್ಯಾಟ್ರಿಕ್ ಮೊರಾಟೊಗ್ಲೊ ತರಬೇತಿ ನೀಡುತ್ತಿದ್ದಾರೆ.

    https://twitter.com/MikeTyson/status/1207466348940410880

    ಸೆರೆನಾ ವಿಲಿಯಮ್ಸ್ ಅವರನ್ನು ಈ ಬಾರಿ ವಿಭಿನ್ನವಾಗಿ ಸಿದ್ಧಪಡಿಸುತ್ತಿರುವ ಪ್ಯಾಟ್ರಿಕ್ ಮೊರಾಟೊಗ್ಲೊ, ಬಾಕ್ಸಿಂಗ್ ಕೂಡ ಕಲಿಸುತ್ತಿದ್ದಾರೆ. ಸೆರೆನಾ ಅಮೆರಿಕದ ಶ್ರೇಷ್ಠ ಬಾಕ್ಸರ್ ಮೈಕ್ ಟೈಸನ್ ಅವರೊಂದಿಗೆ ಬಾಕ್ಸಿಂಗ್ ತರಬೇತಿ ಪಡೆದಿದ್ದಾರೆ.

    ಸಾಂಪ್ರದಾಯಿಕ ತರಬೇತಿ ನೀಡಲು ನನಗೆ ಇಷ್ಟವಿಲ್ಲ. ಆದ್ದರಿಂದ ಆಟಗಾರರಿಗಾಗಿ ವಿಶೇಷ ರೀತಿಯಲ್ಲಿ ತರಬೇತಿ ನೀಡುತ್ತಿರುವೆ. ಇದರಲ್ಲಿ ಹಿರಿಯ ಆಟಗಾರರಲ್ಲದೆ ಯುವಕರು ಇದ್ದಾರೆ. ಬಾಕ್ಸಿಂಗ್ ಅಷ್ಟೇ ಅಲ್ಲದೆ ಮನರಂಜನೆ ನೀಡಲಾಗುತ್ತಿದೆ. ಜೊತೆಗೆ ವಿಶ್ವದ ಕ್ರೀಡಾ ದಿಗ್ಗಜರನ್ನು ಕರೆಸಿ ಆಟಗಾರರಿಗೆ ಪ್ರೇರಣೆ ನೀಡಲಾಗುತ್ತಿದೆ ಎಂದು ಪ್ಯಾಟ್ರಿಕ್ ಮೊರಾಟೊಗ್ಲೊ ತಿಳಿಸಿದ್ದಾರೆ.

    ಸೆರೆನಾ ಅತ್ಯಂತ ಯಶಸ್ವಿ ಓಪನ್ ಗ್ರ್ಯಾಂಡ್ ಸ್ಲ್ಯಾಮ್ ಆಟಗಾರ್ತಿ ಆಗಿದ್ದಾರೆ. ಸೆರೆನಾ ಈವರೆಗೂ 7 ಬಾರಿ ಓಪನ್ ಗ್ರ್ಯಾಂಡ್ ಸ್ಲ್ಯಾಮ್‍ನಲ್ಲಿ ಚಾಂಪಿಯನ್ ಆಗಿದ್ದಾರೆ. 2019 ಆಸ್ಟ್ರೇಲಿಯಾ ಓಪನ್ ಗ್ರ್ಯಾಂಡ್ ಸ್ಲ್ಯಾಮ್‍ನಲ್ಲಿ ನವೋಮಿ ಒಸಾಕಾ ಅವರು ಪೆಟ್ರಾ ಕ್ವಿಟೋವಾ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದರು.