Tag: Tennis Krishna

  • ಬ್ಯಾಂಕ್‌ ಜನಾರ್ಧನ್ ನಿಧನಕ್ಕೆ ಟೆನ್ನಿಸ್ ಕೃಷ್ಣ, ನಟಿ ಅಭಿನಯ ಭಾವುಕ

    ಬ್ಯಾಂಕ್‌ ಜನಾರ್ಧನ್ ನಿಧನಕ್ಕೆ ಟೆನ್ನಿಸ್ ಕೃಷ್ಣ, ನಟಿ ಅಭಿನಯ ಭಾವುಕ

    ಹಾಸ್ಯ ನಟ ಬ್ಯಾಂಕ್ ಜನಾರ್ಧನ್ (Bank Janardhan) ಇಂದು (ಏ.14) ಇಹಲೋಕ ತ್ಯಜಿಸಿದ್ದಾರೆ. ಅವರ ನಿಧನಕ್ಕೆ ಹಲವು ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ್ದ ಆತ್ಮೀಯ ಗೆಳೆಯ ಟೆನ್ನಿಸ್ ಕೃಷ್ಣ (Tennis Krishna) ಹಾಗೂ ನಟಿ ಅಭಿನಯ (Abhinaya) ಸಂತಾಪ ಸೂಚಿಸಿದ್ದಾರೆ. ಅವರೊಂದಿಗಿನ ಒಡನಾಟದ ಬಗ್ಗೆ ಅವರು ಸ್ಮರಿಸಿದ್ದಾರೆ.

    ಬ್ಯಾಂಕ್ ಜನಾರ್ಧನ್ ಅವರಿಗೆ ಬಹಳಷ್ಟು ವರ್ಷಗಳಿಂದ ಆರೋಗ್ಯ ಸಮಸ್ಯೆಯಿತ್ತು. ಈ ಹಿಂದೆ ಆದಿಚುಂಚನಗಿರಿ ಒಂದು ಕಾರ್ಯಕ್ರಮಕ್ಕೆ ಹೋಗುವಾಗ ಅವರಿಗೆ ಹಾರ್ಟ್ ಅಟ್ಯಾಕ್ ಆಗಿತ್ತು. ವೇದಿಕೆಗೆ ಹೋಗುವ ಮುಂಚೆ ಈ ಘಟನೆ ನಡೆದಿತ್ತು. ಆ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದೇವು, ಅಂದು ಬೇಗನೇ ಟ್ರೀಟ್‌ಮೆಂಟ್ ಕೊಡಿಸಿದ್ದಕ್ಕೆ ಅವರು ಉಳಿದುಕೊಂಡಿದ್ದರು.

    ಕಳೆದ ವರ್ಷವೂ ಅವರಿಗೆ ಮತ್ತೊಮ್ಮೆ ಹಾರ್ಟ್ ಅಟ್ಯಾಕ್ ಆಯ್ತು. ಇನ್ನೇನು ಚೇತರಿಸಿಕೊಳ್ಳುತ್ತಿದ್ದರು. ನಾನು ಅವರನ್ನು ಕಡೆಯದಾಗಿ ನೋಡಿದ್ದು, ಲೀಲಾವತಿ ಅವರು ನಿಧನರಾದ ಸಂದರ್ಭದಲ್ಲಿ ಅಂತಿಮ ದರ್ಶನಕ್ಕೆ ಜನಾರ್ಧನ್ ಬಂದಿದ್ದರು. ಅಲ್ಲಿ ನಾನು ಅವರನ್ನು ಕೊನೆಯದಾಗಿ ಭೇಟಿ ಮಾಡಿದ್ದು, ಎಂದಿದ್ದಾರೆ. ಈ ಸಾವಿನ ಸುದ್ದಿ ಕೇಳುವ ಮುನ್ನ ಅರ್ಧ ಗಂಟೆ ಮುಂಚೆ ಅವರನ್ನು ನೆನೆಸಿಕೊಂಡೆ ಎಂದು ಗೆಳೆಯನ ಬಗ್ಗೆ ನಟ ಭಾವುಕರಾಗಿದ್ದಾರೆ. ಇದನ್ನೂ ಓದಿ:ನಟ ಬ್ಯಾಂಕ್ ಜನಾರ್ಧನ್ ವಿಧಿವಶ – ನಿವಾಸದಲ್ಲೇ ಸಂಜೆ 4 ಗಂಟೆವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ

    ನಾವು ಸ್ನೇಹಿತರು ಅನ್ನೋದಕ್ಕಿಂತ ಅಣ್ಣ ತಮ್ಮಂದಿರಂತೆ ಇದ್ವಿ. ಅವರಿಗೆ ಹೀಗೆ ಆಗಿರೋದು ತುಂಬಾ ನೋವು ಆಗ್ತಿದೆ. ಈ ಚಿತ್ರರಂಗದಲ್ಲಿ ಹಿರಿಯ ಕಲಾವಿದರಿಗೆ ಅವಕಾಶಗಳನ್ನು ಕೊಡೋದು ಬಿಟ್ಟು ಹೊಸ ಕಲಾವಿದರಿಗೆ ಅವಕಾಶ ಕೊಡುತ್ತಾರೆ. ಹಿರಿಯ ಕಲಾವಿದರಲ್ಲಿ ಇಬ್ಬರಿಗಾದ್ರೂ ಅವಕಾಶ ಕೊಡಬೇಕು ಅಲ್ವಾ ಎಂದು ಟೆನ್ನಿಸ್ ಕೃಷ್ಣ ಹೇಳಿದ್ದಾರೆ. ಇದನ್ನೂ ಓದಿ:ಕನ್ನಡ ಚಿತ್ರರಂಗದ ಹಿರಿಯ ಪೋಷಕ ನಟ ಬ್ಯಾಂಕ್ ಜನಾರ್ಧನ್ ವಿಧಿವಶ

    ತುಂಬಾ ಒಳ್ಳೆಯ ಹಾಸ್ಯನಟನಾಗಿದ್ದರು. ಈ ಹಿಂದೆ ‘ಹಿಟ್ಲರ್ ಕಲ್ಯಾಣ’ ಎಂಬ ಸೀರಿಯಲ್‌ನಲ್ಲಿ ಒಟ್ಟಿಗೆ ನಟಿಸಿದ್ದೇವೆ. ಹಲವು ಸಿನಿಮಾಗಳಲ್ಲಿ ಅವರೊಟ್ಟಿಗೆ ತೆರೆಹಂಚಿಕೊಂಡಿದ್ದೇನೆ. ಪುಟ್ಟಿ ಪುಟ್ಟಿ ಅಂತ ಮಗು ರೀತಿ ನನ್ನನ್ನು ಮಾತನಾಡಿಸುತ್ತಿದ್ದರು. ತುಂಬಾ ಸರಳ ವ್ಯಕ್ತಿತ್ವದವರಾಗಿದ್ದರು. ತೆರೆಯ ಮೇಲೆ ಮಾತ್ರ ಅಲ್ಲ, ತೆರೆಹಿಂದೆಯೂ ಕೂಡ ಸಿಂಪಲ್ ಆಗಿರುತ್ತಿದ್ದರು. ನಿಜ ಜೀವನದಲ್ಲಿ ತುಂಬಾ ಹಾಸ್ಯ ಮಾಡುತ್ತಿದ್ದರು.

    ಹಿಂದೊಮ್ಮೆ ಸಿನಿಮಾ ಕಾರ್ಯಕ್ರಮವೊಂದರಲ್ಲಿ ಭೇಟಿ ಮಾಡಿದ್ದೇವೆ. ಆಗ ಅವರ ಕಾಲು ಊದಿತ್ತು. ಯಾಕೆ ಅಂತ ಕೇಳಿದ್ದಕ್ಕೆ, ವಯಸ್ಸಾಯ್ತಲ್ಲ ಪುಟ್ಟ ಎಂದಿದ್ದರು. ಮತ್ತೆ ಬ್ಯಾಂಕ್ ಜೊತೆಗೆ ಸಿನಿಮಾ ಹೇಗೆ ಮಾಡ್ತೀರಾ ಎಂದು ಕೇಳಿದ್ದೆ ಅದಕ್ಕೆ ಅವರು ಮಾಡಬೇಕಲ್ಲ ಪುಟ್ಟಿ ಮಾಡ್ತೀನಿ ಎಂದರು. ‘ಶ್’ ಎಂಬ ಸಿನಿಮಾದಲ್ಲಿ ನಾವು ಮೊದಲ ಬಾರಿಗೆ ಜೊತೆಯಾಗಿ ನಟಿಸಿದ್ದೇವೆ.

    ಅಂದಹಾಗೆ, ಇಂದು ಸಂಜೆ 4 ಗಂಟೆಯ ಬಳಿಕ ಹೆಬ್ಬಾಳದ ಚಿತಾಗಾರದಲ್ಲಿ ಬ್ಯಾಂಕ್‌ ಜನಾರ್ಧನ್‌ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

  • ಸಾಧುಕೋಕಿಲ ನನ್ನನ್ನು ಆಹ್ವಾನಿಸಿಲ್ಲ, ಮಾತು ಸರಿಯಾಗಿ ಆಡಲ್ಲ: ಟೆನ್ನಿಸ್ ಕೃಷ್ಣ

    ಸಾಧುಕೋಕಿಲ ನನ್ನನ್ನು ಆಹ್ವಾನಿಸಿಲ್ಲ, ಮಾತು ಸರಿಯಾಗಿ ಆಡಲ್ಲ: ಟೆನ್ನಿಸ್ ಕೃಷ್ಣ

    ಬೆಂಗಳೂರು: ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಸಾಧುಕೋಕಿಲ ನನಗೆ ಆಹ್ವಾನ ನೀಡಿಲ್ಲ ಎಂದು ಹಿರಿಯ ಹಾಸ್ಯನಟ ಟೆನ್ನಿಸ್ ಕೃಷ್ಣ (Tennis Krishna) ಅಸಮಾಧಾನ ಹೊರಹಾಕಿದ್ದಾರೆ.

    ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಆಹ್ವಾನದ ಕುರಿತು ಮಾತನಾಡಿದ ಅವರು, ಚಲನಚಿತ್ರೋತ್ಸವಕ್ಕೆ ಆಹ್ವಾನ ಸರಿಯಾಗಿ ಬಂದಿಲ್ಲ. ಕಲಾವಿದರು ಯಾರು ಬರಬೇಕಿತ್ತು? ಸರಿಯಾಗಿ ಆಹ್ವಾನ ಕೊಟ್ಟಿದ್ದಾರೋ ಗೊತ್ತಿಲ್ಲ ಎಂದರು. ಇದನ್ನೂ ಓದಿ: ಕುಂಭಮೇಳ: ಯುಪಿಯ ಮೂರು ಹೆದ್ದಾರಿಗಳಲ್ಲಿ 40 ಲಕ್ಷ ದಾಖಲೆಯ ವಾಹನಗಳ ಸಂಚಾರ

    ನನ್ನನ್ನು ಚಲನಚಿತ್ರೋತ್ಸವಕ್ಕೆ ಕರೆದಿಲ್ಲ. ಪಾಸ್ ಕೂಡ ನೀಡಿಲ್ಲ. ಸಾಧುಕೋಕಿಲ ಅವರನ್ನೇ ಕೇಳಿ ಎಂದು ಹೇಳುತ್ತಾರೆ. ಯಾರ ಹತ್ತಿರ ಪಾಸ್ ಕೊಟ್ಟಿದ್ದಾರೋ ಗೊತ್ತಿಲ್ಲ. ಸಾಧುಕೋಕಿಲ ಅವರು ಸಭೆ ಕರೆಯಬೇಕಿತ್ತು. ನಿಗಮಮಂಡಳಿ ಅಧ್ಯಕ್ಷ ಸಭೆ ನಡೆಸಬೇಕಿತ್ತು. ನನ್ನ ಜೊತೆಯೇ ಅವರು ಸರಿಯಾಗಿ ಮಾತನಾಡಲ್ಲ. ಆಹ್ವಾಸ ಸಹ ಕೊಟ್ಟಿಲ್ಲ. ಸಾಧುಕೋಕಿಲ ಫೋನ್ ನಂಬರ್ ನನ್ನ ಬಳಿ ಇಲ್ಲ ಎಂದು ಹೇಳಿದರು. ಇದನ್ನೂ ಓದಿ: ಸರ್ಕಾರಿ ಕಾಮಗಾರಿಗಳ ಗುತ್ತಿಗೆಯಲ್ಲಿ ಮುಸ್ಲಿಮರಿಗೆ 4% ಮೀಸಲಾತಿಗೆ ಗ್ರೀನ್ ಸಿಗ್ನಲ್?

    ನಾನು ಸರ್ಕಾರದ ಅನೇಕ ಹೋರಾಟದಲ್ಲಿ ಭಾಗಿಯಾಗಿದ್ದೆ. ಕಾಲು ನೋವಿನ ಕಾರಣದಿಂದ ಮೇಕೆದಾಟು ಹೋರಾಟಕ್ಕೆ ಬರಲು ಸಾಧ್ಯವಾಗಿರಲಿಲ್ಲ ಎಂದು ಹೇಳಿದರು. ಇದನ್ನೂ ಓದಿ: ನಿದ್ರೆ ಮಾತ್ರೆ ಸೇವಿಸಿ ಖ್ಯಾತ ಗಾಯಕಿ ಆತ್ಮಹತ್ಯೆಗೆ ಯತ್ನ

  • ದರ್ಶನ್ ನೆನೆದು ಕಣ್ಣೀರಿಟ್ಟ ಹಿರಿಯ ನಟ ಟೆನ್ನಿಸ್ ಕೃಷ್ಣ

    ದರ್ಶನ್ ನೆನೆದು ಕಣ್ಣೀರಿಟ್ಟ ಹಿರಿಯ ನಟ ಟೆನ್ನಿಸ್ ಕೃಷ್ಣ

    ರೇಣುಕಾಸ್ವಾಮಿ (Renuka swamy) ಹತ್ಯೆ ಕೇಸ್ ನಲ್ಲಿ ಜೈಲು ಪಾಲಾಗಿರೋ ನಟ ದರ್ಶನ್ (Darshan) ನೆನೆದು ಕಣ್ಣೀರಿಟ್ಟಿದ್ದಾರೆ ಹಿರಿಯ ನಟ ಟೆನ್ನಿಸ್ ಕೃಷ್ಣ (Tennis Krishna). ಪಬ್ಲಿಕ್ ಟಿವಿ ಜೊತೆ ಎಕ್ಸ್ ಕ್ಲೂಸಿವ್ ಆಗಿ ಮಾತನಾಡಿದ ಟೆನ್ನಿಸ್ ಕೃಷ್ಣ, ದರ್ಶನ್ ಜೊತೆಗಿನ ಒಡನಾಟವನ್ನೂ ಹಂಚಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ‘ದರ್ಶನ್ ಚಿತ್ರರಂಗಕ್ಕೆ ಬರುವ ಮುನ್ನ ಪರಿಚಯ. ಅದಾದ ಬಳಿಕ ಪಿಠೀಲು ಚೌಡಯ್ಯ ಮೆಮೊರಿಯಲ್ ಹಾಲ್ ನಲ್ಲಿ ನೋಡಿದೆ. ನಂತರ ಕತ್ರಿಗುಪ್ಪೆಲಿ ಶೂಟಿಂಗ್ ಟೈಂ ನೋಡಿದ್ದೆ. ದರ್ಶನ್ ನನ್ನ ಪಕ್ಕ ಕೈ ಕಟ್ಕೊಂಡು ನಿಂತಿದ್ರು. ಹಿರಿಯ ಕಲಾವಿದರಿಗೆ ಗೌರವ ಕೊಡ್ತಿದ್ರು. ನನ್ಗೆ ತುಂಬಾ ಅವಮಾನ ಮಾಡ್ತಿದ್ದಾರೆ ಅಂತಾ ದರ್ಶನ್ ಹೇಳಿದ್ರು. ನಾನು ಅವತ್ತು ಒಂದು ಮಾತ್ ಹೇಳಿದೆ. ಈವಾಗ ಕೈಕಟ್ಕೊಂಡು ನಿಲ್ಲಿ.. ಇವತ್ತು ಅವಮಾನ ಮಾಡಿದವ್ರು ನಿಮ್ಮುಂದೆ ಕೈಕಟ್ಕೊಂಡು ನಿಲ್ಲುವ ಟೈಂ ಬರುತ್ತೆ’ ಎಂದಿದ್ದರು.

     

    ಮುಂದುವರೆದು ಮಾತನಾಡಿದ ಕೃಷ್ಣ, ‘ಸ್ಟಾರ್ ಗಿರಿ ಬಂದ ಮೇಲೂ ದರ್ಶನ್ ಬದಲಾಗಲಿಲ್ಲ. ಈ ಕೇಸ್ ನಲ್ಲಿ ಯಾಕಾಯ್ತು ಏನಾಯ್ತು ನನ್ಗೆ ಗೊತ್ತಿಲ್ಲ. ದರ್ಶನ್ ಬಹಳಷ್ಟು ಜನಕ್ಕೆ ಸಹಾಯ ಮಾಡಿದ್ದಾರೆ. ವಿಷ್ಣು ಸರ್, ರಾಜಣ್ಣ ನೆನಿಸ್ಕೊತೀನಿ. ಅವ್ರಿಬ್ಬರು ಚಿತ್ರರಂಗಕ್ಕೆ ಎರಡು ಕಣ್ಣು ಇದ್ದಂಗೆ. ದರ್ಶನ್ ಆ ಇಬ್ಬರು ನಟರ ಮಟ್ಟಕ್ಕೆ ಬೆಳೆದಿದ್ರು. ದರ್ಶನ್ ಜೊತೆ ಬುಲ್ ಬುಲ್ ಸಿನಿಮಾದಲ್ಲಿ ಒಳ್ಳೆ ಪಾತ್ರ ಮಾಡಿದೆ. ದರ್ಶನ್ ಜೊತೆ ಮತ್ತೆ ಸಿನಿಮಾ ಮಾಡುವ ಟೈಂ ಬರಲಿಲ್ಲ’ ಎಂದು ನೆನಪಿನ ಸುರುಳಿಯನ್ನು ಬಿಚ್ಚಿಟ್ಟಿದ್ದಾರೆ.

     

    ‘ಬಂಡವಾಳ ಹೂಡಿದ ನಿರ್ಮಾಪಕರು ಉಳಿಬೇಕು. ಕಾನೂನು ವ್ಯವಸ್ಥೆಯಲ್ಲಿ ಏನಾಗುತ್ತೆ ಆಗ್ಲಿ. ಅವ್ರು ತಪ್ಪು ಮಾಡಿದ್ರೆ ಶಿಕ್ಷೆ ಆಗ್ಲಿ. ತಪ್ಪು ಮಾಡಿಲ್ಲ ಅಂದ್ರೆ ಆಚೆ ಬಂದು ದರ್ಶನ್ ಸಿನಿಮಾ ಮಾಡಲಿ. ರೇಣುಕಾಸ್ವಾಮಿ ಕುಟುಂಬಸ್ಥರು ತುಂಬಾ ಅಮಾಯಕರು. ದರ್ಶನ್ ಜೊತೆ ಇದ್ದವರು ಒಳ್ಳೆಯವ್ರಲ್ಲ.. ಅದು ದರ್ಶನ್ ಗೂ ಗೊತ್ತಿರಲಿಲ್ಲ. ಈಗ್ಲೂ ಪರಪ್ಪನ ಅಗ್ರಹಾರಕ್ಕೆ ಜೈಲಿಗೆ ಮೀಟ್ ಮಾಡೋಕೆ ಹೋಗಿ ವಾಪಾಸ್ ಬಂದಿದ್ದೀನಿ. ಅಭಿಮಾನಿಗಳಿಗೆ ಒಂದು ಮಾತು ಸಿನಿಮಾ ಮಾಡಿದಾಗ ಜೈ ಅನ್ನೋದಲ್ಲ.. ಉಪವಾಸ ಸತ್ಯಾಗ್ರಹ ಮಾಡ್ಲಿ.. ಮೌನ ವ್ರತ ಮಾಡಲಿ.. ಇದಕ್ಕೆ ನಾವು ರೆಡಿ ಇದ್ದೀವಿ ಈ ಕೇಸ್ ನಿಂದ ದರ್ಶನ್ ಆಚೆ ಬರ್ತಾರೆ. ದರ್ಶನ್ ಒಳ್ಳೆಯವ್ರು ಅವ್ರ ಬಗ್ಗೆ ಮಾತಾಡುವಾಗ ಮಾತೇ ಬರೊಲ್ಲ ಎನ್ನುವುದು ಕೃಷ್ಣ ಮಾತು.

  • ಕಿರುತೆರೆಗೆ ಕಾಲಿಟ್ಟ ಹಾಸ್ಯ ನಟ ಟೆನ್ನಿಸ್ ಕೃಷ್ಣ

    ಕಿರುತೆರೆಗೆ ಕಾಲಿಟ್ಟ ಹಾಸ್ಯ ನಟ ಟೆನ್ನಿಸ್ ಕೃಷ್ಣ

    ಕಿರುತೆರೆ ಕೂಡ ಹಿರಿತೆರೆಗೆ ಠಕ್ಕರ್ ಕೊಡುವ ಹಾಗೆ ಪೈಪೋಟಿ ನೀಡುತ್ತಿದೆ. ಕಿರಿಯ ಕಲಾವಿದರ ಸಾಹಸಕ್ಕೆ ಹಿರಿಯ ಕಲಾವಿದರು ಕೂಡ ಟಿವಿ ಪರದೆಗೆ ಎಂಟ್ರಿ ಕೊಡುವ ಮೂಲಕ ಸಾಥ್ ನೀಡುತ್ತಿದ್ದಾರೆ. ಆ ಸಾಲಿಗೆ ಟೆನ್ನಿಸ್ ಕೃಷ್ಣ ಸೇರ್ಪಡೆ ಆಗಿದ್ದಾರೆ. ‘ಲಕ್ಷ್ಮಿ ಟಿಫನ್ ರೂಮ್’ (Lakshmi Tiffin Room) ಸೀರಿಯಲ್‌ಗೆ ನಟ ಟೆನ್ನಿಸ್ ಕೃಷ್ಣ (Tennis Krishna) ಬಣ್ಣ ಹಚ್ಚಿದ್ದಾರೆ.

    ಕನ್ನಡದ ಚಿತ್ರರಂಗದ ಖ್ಯಾತ ಹಾಸ್ಯ ನಟ ಟೆನ್ನಿಸ್ ಕೃಷ್ಣ ಅವರು 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ನಟಿ ರೇಖಾ ದಾಸ್ ಮತ್ತು ಟೆನ್ನಿಸ್ ಕೃಷ್ಣ ಅವರ ಕಾಂಬಿನೇಷನ್ ಪ್ರೇಕ್ಷಕರಿಗೆ ಮೋಡಿ ಮಾಡಿತ್ತು. ಅವರೊಂದಿಗೆ 90ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಜೊತೆಯಾಗಿ ಟೆನ್ನಿಸ್ ಕೃಷ್ಣ ನಟಿಸಿದ್ದಾರೆ.

    ಈಗ ಕಿರುತೆರೆಗೆ ಹೊಸ ಧಾರಾವಾಹಿ ‘ಲಕ್ಷ್ಮಿ ಟಿಫನ್ ರೂಮ್’ ಪ್ರಾಜೆಕ್ಟ್‌ನಲ್ಲಿ ಬಹುಮುಖ್ಯ ಪಾತ್ರಕ್ಕೆ ಟೆನ್ನಿಸ್ ಕೃಷ್ಣ ಬಣ್ಣ ಹಚ್ಚಿದ್ದಾರೆ. ಅವರ ಪಾತ್ರಕ್ಕೆ ಭಾರೀ ಪ್ರಾಮುಖ್ಯತೆ ಇದ್ದು, ಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

    ಹೊಸ ಅಲೆಯ ವಿನೂತನ ಧಾರಾವಾಹಿಗಳನ್ನು ಕನ್ನಡಿಗರಿಗೆ ನೀಡುವಲ್ಲಿ ದಿಟ್ಟ ಹೆಜ್ಜೆ ಇಡುತ್ತಿರುವ  ವಾಹಿನಿಯು ಇದೀಗ ‘ಲಕ್ಷ್ಮಿ ಟಿಫನ್ ರೂಮ್’ ಎಂಬ ಹೊಸ ಧಾರಾವಾಹಿಯನ್ನು ಪ್ರಸಾರ ಮಾಡಲು ಸಜ್ಜಾಗಿದೆ. ಇದನ್ನೂ ಓದಿ:ಸದ್ದಿಲ್ಲದೇ ಹಸೆಮಣೆ ಏರಿದ ‘ಬಿಗ್ ಬಾಸ್’ ಖ್ಯಾತಿಯ ದೀಪಿಕಾ ದಾಸ್

    ಕಥಾ ನಾಯಕಿ ವರಲಕ್ಷ್ಮಿ ನೇರ ನುಡಿಯನ್ನು ಹೊಂದಿರೋಳು, ಎಂತಹ ಸಂದರ್ಭದಲ್ಲೂ ಈಕೆ ನ್ಯಾಯದ ಪರ ನಿಲ್ಲುವ ಗಟ್ಟಿಗಿತ್ತಿ. ಐಎಎಸ್ ಮಾಡಬೇಕೆಂಬ ಕನಸನ್ನು ಕಂಡಿರುತ್ತಾಳೆ. ಆದರೆ ಪರಿಸ್ಥಿತಿಯ ಕೈಗೊಂಬೆಯಾಗಿ, ಹೆಣ್ಣು ಮಕ್ಕಳು ಕೇವಲ ಅಡುಗೆ ಮನೆಗೆ ಸೀಮಿತ ಎಂಬ ಮನಸ್ಥಿತಿಯಿರುವ ಮನೆತನಕ್ಕೆ ಸೊಸೆಯಾಗಿ ಹೋಗುತ್ತಾಳೆ. ಆ ಮನೆಯ ರೀತಿ ರಿವಾಜುಗಳು, ಕಟ್ಟುಪಾಡುಗಳನ್ನು ಭೇಧಿಸಿ ತನ್ನ ಗಂಡನ ಮನೆಯಲ್ಲಿರುವ ಎಲ್ಲಾ ಸವಾಲುಗಳನ್ನು ಎದುರಿಸಿ, ವರಲಕ್ಷ್ಮಿ ತನ್ನ ಐಎಎಸ್ ಕನಸನ್ನು ನನಸಾಗಿಸುತ್ತಾಳಾ? ಈ ಮೂರುಗಂಟಿನ ಬಂಧ, ವರು ಕನಸುಗಳನ್ನು ಕಟ್ಟಿಹಾಕುತ್ತಾ? ಎಂಬುದು ಈ ಧಾರಾವಾಹಿಯ ಮುಖ್ಯ ಕಥಾ ಹಂದರ.

    ಹೆಣ್ಣೊಬ್ಬಳು ಕೂಡು ಕುಟುಂಬಕ್ಕೆ ಸೊಸೆಯಾಗಿ ಹೋದಾಗ ತನ್ನ ಕನಸನ್ನು ನನಸಾಗಿಸಲು ಏನೆಲ್ಲಾ ಕಷ್ಟಗಳನ್ನು ಎದುರಿಸಬೇಕಾಗುತ್ತೆ ಎಂಬುದನ್ನು ಈ ಕಥೆಯಲ್ಲಿ ಅತ್ಯದ್ಭುತವಾಗಿ ತೋರಿಸಲಾಗಿದೆ. ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯ ನಟ ಟೆನ್ನಿಸ್ ಕೃಷ್ಣ ಜೊತೆಗೆ ಸುನೇತ್ರ ಪಂಡಿತ್, ಅನಂತವೇಲು, ವಚನ್, ಮಧುಮಿತಾ, ವಿಜಯಲತಾ, ಕಾವ್ಯ, ಪ್ರೀತಮ್ ಮಕ್ಕಿಹಾಳಿ, ಭಗತ್ ಸೇರಿದಂತೆ ಇನ್ನು ಅನೇಕ ಕಲಾವಿದರು ಈ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ.

    ಶುರುವಾಗ್ತಿದೆ ಪ್ರೀತಿ, ಆಕಾಂಕ್ಷೆಯನ್ನೊಳಗೊಂಡ ವರಲಕ್ಷ್ಮಿಯ ಕಥೆ ‘ಲಕ್ಷ್ಮಿ ಟಿಫನ್ ರೂಮ್’ ಇದೇ ಮಾರ್ಚ್‌ 4ರಿಂದ ಸಂಜೆ 6.30ಕ್ಕೆ ಪ್ರಸಾರವಾಗಲಿದೆ.

  • ಆಮ್ ಆದ್ಮಿ ಪಕ್ಷದಿಂದ ಯುವ ನಿರ್ದೇಶಕ, ನಟನಿಗೆ ಟಿಕೆಟ್ ಘೋಷಣೆ

    ಆಮ್ ಆದ್ಮಿ ಪಕ್ಷದಿಂದ ಯುವ ನಿರ್ದೇಶಕ, ನಟನಿಗೆ ಟಿಕೆಟ್ ಘೋಷಣೆ

    ರ್ನಾಟಕ ವಿಧಾನಸಭಾ ಚುನಾವಣೆ (Election) ಎದುರಿಸಲು ಆಮ್ ಆದ್ಮಿ ಪಕ್ಷ (Aam Aadmi Party) ಹಲವು ತಿಂಗಳಿನಿಂದ ಸಿದ್ಧತೆ ನಡೆಸಿತ್ತು. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳಿಗೆ ತೀವ್ರ ಪೈಪೋಟಿ ನೀಡುವುದಕ್ಕಾಗಿಯೇ ಹಲವು ರೀತಿಯಲ್ಲಿ ಕಸರತ್ತು ಕೂಡ ನಡೆಸಿದೆ. ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳಿಗಿಂತ ಮುಂದೆ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಆಮ್ ಆದ್ಮಿ ಪಾರ್ಟಿ ಬಿಡುಗಡೆ ಮಾಡಿದೆ. ಅದರಲ್ಲಿ ಇಬ್ಬರು ಸಿನಿಮಾ ರಂಗದವರು ಇದ್ದಾರೆ ಎನ್ನುವುದು ವಿಶೇಷ.

    ಮುಂದಿನ ವಿಧಾನಸಭಾ ಚುನಾವಣೆಯನ್ನು ಗುರಿಯಾಗಿರಿಸಿಕೊಂಡು ಈಗಾಗಲೇ ಹಲವು ಕ್ಷೇತ್ರಗಳಲ್ಲಿ ಕಾರ್ಯಕರ್ತರು ಚುನಾವಣಾ ತಯಾರಿ ಆರಂಭಿಸಿದ್ದರು. ಕೆಲವರಿಗೆ ಆಗಲೇ ಟಿಕೆಟ್ ಕನ್ಫರ್ಮ್ ಕೂಡ ಮಾಡಲಾಗಿತ್ತು ಎಂದು ಹೇಳಲಾಗುತ್ತಿದೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿ 80 ಕ್ಷೇತ್ರಗಳ ಮೊದಲ ಪಟ್ಟಿಯನ್ನು ಆಮ್ ಆದ್ಮಿ ಪಾರ್ಟಿ ರಿಲೀಸ್ ಮಾಡಿದೆ.

    ಪಕ್ಷ ರಿಲೀಸ್ ಮಾಡಿರುವ ಪಟ್ಟಿಯಲ್ಲಿ ಏಳು ಜನ ರೈತ ಹೋರಾಟಗಾರರು. ಏಳು ಜನ ಮಹಿಳೆಯರು, 5 ಮಂದಿ ಸಮಾಜಸೇವಕರು, ಮೂರು ಜನ ಡಾಕ್ಟರೇಟ್, 15 ಜನ ಮಾಸ್ಟರ್ಸ್ ಮುಗಿಸಿರುವವರು , 3 ಜನ ಎಂಬಿಬಿಎಸ್ ಮುಗಿಸಿರುವವರು, 13 ಜನ ಲಾಯರ್ಸ್,  ಪತ್ರಕರ್ತರು ಇದ್ದಾರೆ ಹಾಗೂ ಕಲಾವಿದರು ಇದ್ದಾರೆ.

    ಹಲವು ದಶಕಗಳಿಂದ ಸಿನಿಮಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ, ನೂರಾರು ಚಿತ್ರಗಳನ್ನು ಮಾಡಿರುವ ಟೆನ್ನಿಸ್ ಕೃಷ್ಣಗೆ (Tennis Krishna) ಆಮ್ ಆದ್ಮಿ ಪಾರ್ಟಿ ಟಿಕೆಟ್ ಘೋಷಣೆ ಮಾಡಿದ್ದು, ಇವರು ತುರುವೇಕರೆ ಕ್ಷೇತ್ರದಿಂದ ಕಣಕ್ಕೆ ಇಳಿಯುತ್ತಿದ್ದಾರೆ. ಹಾಸ್ಯ ಪಾತ್ರದ ಮೂಲಕ ಗುರುತಿಸಿಕೊಂಡಿರುವ ಟೆನ್ನಿಸ್ ಕೃಷ್ಣ, ಕನ್ನಡದ ಅನೇಕ ಹೆಸರಾಂತ ತಾರೆಯರ ಜೊತೆ ತೆರೆ ಹಂಚಿಕೊಂಡಿದ್ದಾರೆ.

    ನಿರ್ದೇಶಕರಾಗಿ, ನಿರ್ಮಾಪಕರಾಗಿ, ನಟರಾಗಿ ಹಲವಾರು ಚಿತ್ರಗಳನ್ನು ಮಾಡಿರುವ ಸ್ಮೈಲ್ ಶ್ರೀನು (Smile Srinu)  (ಶ್ರೀನಿವಾಸ್ ಎನ್) (Srinivas N) ಅವರಿಗೆ ಕೂಡ್ಲಿಗಿ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ನೀಡಲಾಗಿದೆ. ಈಗಾಗಲೇ ಹಲವು ತಿಂಗಳಿಂದ ಕೂಡ್ಲಿಗಿ ಕ್ಷೇತ್ರದಲ್ಲಿ ಶ್ರೀನಿವಾಸ್ ಪ್ರಚಾರವನ್ನೂ ಆರಂಭಿಸಿದ್ದರು. ಹಲವಾರು ಜನಪರ ಹಾಗೂ ಸಮಾಜಮುಖಿ ಕೆಲಸಗಳಲ್ಲೂ ತಮ್ಮನ್ನು ತಾವು ಗುರುತಿಸಿಕೊಂಡಿದ್ದರು. ನಟ ಶಶಿಕುಮಾರ್ ಪುತ್ರನನ್ನು ಸಿನಿಮಾ ರಂಗಕ್ಕೆ ಪರಿಚಯಿಸಿದ ಕೀರ್ತಿ ಶ್ರೀನಿವಾಸ್ ಇವರದ್ದು.

  • ಆಮ್ ಆದ್ಮಿಯಿಂದ ತುರುವೇಕೆರೆಯಲ್ಲಿ ಟೆನ್ನಿಸ್ ಕೃಷ್ಣ ಸ್ಪರ್ಧೆ

    ಆಮ್ ಆದ್ಮಿಯಿಂದ ತುರುವೇಕೆರೆಯಲ್ಲಿ ಟೆನ್ನಿಸ್ ಕೃಷ್ಣ ಸ್ಪರ್ಧೆ

    ತುಮಕೂರು: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ (Election) ತುರುವೇಕೆರೆ (Turuvekere) ಕ್ಷೇತ್ರದಿಂದ ಆಮ್‌ ಆದ್ಮಿ ಪಕ್ಷದ (Aam Aadmi Party) ಅಭ್ಯರ್ಥಿಯಾಗಿ ಹಾಸ್ಯ ನಟ ಟೆನ್ನಿಸ್ ಕೃಷ್ಣ (Tennis Krishna) ಸ್ಪರ್ಧಿಸಲಿದ್ದಾರೆ.

    ಕಳೆದ ವರ್ಷದ ಆಗಸ್ಟ್‌ನಲ್ಲಿ ಟೆನ್ನಿಸ್ ಕೃಷ್ಣ ಎಎಪಿ ಸೇರ್ಪಡೆಯಾಗುವ ಮೂಲಕ ರಾಜಕೀಯ ಪ್ರವೇಶಿಸಿದ್ದರು. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಚುನಾವಣೆ ಸಮಯದಲ್ಲಿ ತುರುವೇಕೆರೆ ಕ್ಷೇತ್ರದಲ್ಲಿ ಪ್ರಚಾರ ಮಾಡಿದ ಅನುಭವ ಇದೆ. ಕಾಂಗ್ರೆಸ್ (Congress), ಬಿಜೆಪಿಯಿಂದ (BJP) ಆಹ್ವಾನ ಬಂದರೂ ನಾನು ಹೋಗಲಿಲ್ಲ. ಎಎಪಿ (AAP) ಮೂಲಕ ಬಡ ಕಲಾವಿದರ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಹೇಳಿದರು.

    ರಂಗಭೂಮಿ ಕಲಾವಿದರು ಮತ್ತು ಸಿನಿಮಾದಲ್ಲಿನ ಪೋಷಕ ನಟರು ಅಗತ್ಯ ಸೌಲಭ್ಯಗಳು ಇಲ್ಲದೇ ಪರದಾಡುತ್ತಿದ್ದಾರೆ. ವಾಸಕ್ಕೆ ಯೋಗ್ಯವಾದ ನಿವಾಸ, ಶೌಚಾಲಯಗಳ ವ್ಯವಸ್ಥೆಯೂ ಇಲ್ಲ. ಎಎಪಿ ಮೂಲಕ ಅಗತ್ಯ ಸೌಕರ್ಯಗಳನ್ನು ಒದಗಿಸುವ ಉದ್ದೇಶವಿದೆ. ಕಷ್ಟದಲ್ಲಿರುವ ರಂಗಭೂಮಿ ಕಲಾವಿದರ ಮಕ್ಕಳ ವಿದ್ಯಾಭ್ಯಾಸ, ಕಲಾವಿದರ ಆರೋಗ್ಯಕ್ಕೆ ಇಲ್ಲಿಯವರೆಗೆ ನಮ್ಮಿಂದ ಸಾಧ್ಯವಾದಷ್ಟು ಸಹಾಯ ಮಾಡಿದ್ದೇವೆ ಎಂದರು.

    ಜೆಡಿಎಸ್‌ (JDS), ಕಾಂಗ್ರೆಸ್‌, ಬಿಜೆಪಿ ಸರ್ಕಾರಗಳಿಂದ ಕಲಾವಿದರಿಗೆ ಯಾವುದೇ ನೆರವು ದೊರೆಯುತ್ತಿಲ್ಲ. ಎಲ್ಲ ಪಕ್ಷಗಳಲ್ಲಿ ಇರುವ ಸಿನಿಮಾ ನಟರೂ ಕೂಡ ಉಳಿದ ಕಲಾವಿದರಿಗೆ ಅಗತ್ಯ ಸೌಲಭ್ಯ ನೀಡಲು ಆಸಕ್ತಿ ತೋರುತ್ತಿಲ್ಲ. ಕಷ್ಟದಲ್ಲಿರುವ ಕಲಾವಿದರಿಗೆ ನೆರವಾಗುವ ನಿಟ್ಟಿನಲ್ಲಿ ಮುಂದಡಿ ಇಡಲಾಗುವುದು ಎಂದು ತಿಳಿಸಿದರು. ಇದನ್ನೂ ಓದಿ: ಶಿಂಧೆ ಬಣಕ್ಕೆ ಶಿವಸೇನೆ ಹೆಸರು – ಉದ್ಧವ್‌ಗೆ ಭಾರೀ ಹಿನ್ನಡೆ

    ಎಎಪಿ ಜಿಲ್ಲಾ ಘಟಕದ ಅಧ್ಯಕ್ಷ ಪ್ರೇಮ್‌ಕುಮಾರ್‌, ನಗರ ಘಟಕದ ಅಧ್ಯಕ್ಷ ಮುನೀರ್‌ಅಹ್ಮದ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಜಾಮುದ್ದೀನ್‌ ಇದ್ದರು. ಇದನ್ನೂ ಓದಿ: ಕರ್ನಾಟಕ ತಲಾ ಆದಾಯ: 2.65 ಲಕ್ಷದಿಂದ 3.01 ಲಕ್ಷಕ್ಕೆ ಏರಿಕೆ

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕಾದಂಬರಿ ಆಧಾರಿತ ಸಿನಿಮಾದಲ್ಲಿ ಬಹುಭಾಷಾ ನಟ ಕಿಶೋರ್ ವಿಶೇಷ ಪಾತ್ರ

    ಕಾದಂಬರಿ ಆಧಾರಿತ ಸಿನಿಮಾದಲ್ಲಿ ಬಹುಭಾಷಾ ನಟ ಕಿಶೋರ್ ವಿಶೇಷ ಪಾತ್ರ

    ಭಾಗ್ಯ ಕೃಷ್ಣಮೂರ್ತಿ ಅವರ ಕಾದಂಬರಿ ಆಧಾರಿತ “ಶಾನುಭೋಗರ ಮಗಳು” (Shanubhogara magalu) ಚಿತ್ರದ ವಿಶೇಷ ಪಾತ್ರದಲ್ಲಿ ಬಹುಬಾಷಾ ನಟ ಕಿಶೋರ್ (Kishore) ಅಭಿನಯಿಸಲಿದ್ದಾರೆ. ರಾಗಿಣಿ ಪ್ರಜ್ವಲ್ (Ragini Prajwal) “ಶಾನುಭೋಗರ ಮಗಳಾ”ಗಿ ಕಾಣಿಸಿಕೊಳ್ಳುತ್ತಿದ್ದು, ಮೇಘಶ್ರೀ, ನಿರಂಜನ್ ಶೆಟ್ಟಿ, ರಮೇಶ್ ಭಟ್, ಸುಧಾ ಬೆಳವಾಡಿ, ಭಾಗ್ಯಶ್ರೀ,ಟಿ.ಎನ್.ಶ್ರೀನಿವಾಸಮೂರ್ತಿ, ಟೆನ್ನಿಸ್ ಕೃಷ್ಣ  (Tennis Krishna)  ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

    ಈ ಚಿತ್ರದ ಚಿತ್ರೀಕರಣ ಅಕ್ಟೋಬರ್ 5ರ ವಿಜಯದಶಮಿ ಶುಭದಿನದಂದು ಚನ್ನಪಟ್ಟಣದ ಅರಳಾಳು ಸಂದ್ರದಲ್ಲಿ ಆರಂಭವಾಗಲಿದೆ.  ಆನಂತರ ಶ್ರೀರಂಗಪಟ್ಟಣ, ಮೇಲುಕೋಟೆ, ಕುಂತಿ ಬೆಟ್ಟ, ಬೆಂಗಳೂರು, ಮೈಸೂರು ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ. ಭುವನ್ ಫಿಲಂಸ್ ಲಾಂಛನದಲ್ಲಿ ನಾರಾಯಣ್ ಅವರು ನಿರ್ಮಿಸುತ್ತಿರುವ ಈ ಚಿತ್ರವನ್ನು ಕೋಡ್ಲು ರಾಮಕೃಷ್ಣ ನಿರ್ದೇಶಿಸುತ್ತಿದ್ದಾರೆ. ಇದು ಕೋಡ್ಲು ರಾಮಕೃಷ್ಣ ನಿರ್ದೇಶನದ ಹದಿನಾಲ್ಕನೇ ಕಾದಂಬರಿ ಆಧಾರಿತ ಚಿತ್ರ. ಇದನ್ನೂ ಓದಿ:ಜನಾರ್ಧನ ರೆಡ್ಡಿ ಪುತ್ರ ಕಿರೀಟಿ ಸಿನಿಮಾದ ಟೈಟಲ್ ಲಾಂಚ್ ಗೆ ಮುಹೂರ್ತ ಫಿಕ್ಸ್

    ಬಿ.ಎ.ಮಧು ಚಿತ್ರಕಥೆ ಹಾಗೂ ಸಂಭಾಷಣೆ ಬರೆಯುತ್ತಿರುವ ಈ ಚಿತ್ರಕ್ಕೆ ಜೈ ಆನಂದ್ ಛಾಯಾಗ್ರಹಣ, ಶಮಿತಾ ಮಲ್ನಾಡ್ ಸಂಗೀತ ನಿರ್ದೇಶನ ಹಾಗೂ ವಸಂತ್ ರಾವ್ ಕುಲಕರ್ಣಿ ಅವರ ಕಲಾ ನಿರ್ದೇಶನವಿದೆ.

    Live Tv
    [brid partner=56869869 player=32851 video=960834 autoplay=true]

  • ಪೊರಕೆ ಹಿಡಿದ ಮತ್ತೋರ್ವ ಕನ್ನಡದ ನಟ : ‘ಆಮ್ ಆದ್ಮಿ ಪಾರ್ಟಿ’ಗೆ ಸೇರ್ಪಡೆಯಾದ ಟೆನ್ನಿಸ್ ಕೃಷ್ಣ

    ಪೊರಕೆ ಹಿಡಿದ ಮತ್ತೋರ್ವ ಕನ್ನಡದ ನಟ : ‘ಆಮ್ ಆದ್ಮಿ ಪಾರ್ಟಿ’ಗೆ ಸೇರ್ಪಡೆಯಾದ ಟೆನ್ನಿಸ್ ಕೃಷ್ಣ

    ಕೆಲ ತಿಂಗಳ ಹಿಂದೆಯಷ್ಟೇ ಕನ್ನಡದ ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಅವರು ಆಮ್ ಆದ್ಮಿ ಪಾರ್ಟಿ ಸೇರಿಕೊಂಡಿದ್ದರು. ಇದೀಗ ಮತ್ತೋರ್ವ ನಟ ಪೊರೆಕೆ ಹಿಡಿದಿದ್ದು, ಖ್ಯಾತ ಹಾಸ್ಯನಟ ಟೆನ್ನಿಸ್‌ ಕೃಷ್ಣ ಕೂಡ ಆಮ್‌ ಆದ್ಮಿ ಪಾರ್ಟಿಗೆ ಗುರುವಾರ ಸೇರ್ಪಡೆಯಾದರು. ಖಾಸಗೀ ಹೊಟೇಲ್ ನಲ್ಲಿ ನಡೆದ ಸಮಾರಂಭದಲ್ಲಿ ಪಕ್ಷದ ರಾಜ್ಯಾಧ್ಯಕ್ಷರಾದ ಪೃಥ್ವಿ ರೆಡ್ಡಿಯವರು ಕೃಷ್ಣರವರನ್ನು ಪಕ್ಷಕ್ಕೆ ಬರಮಾಡಿಕೊಂಡರು.

    ಎಎಪಿ ಸೇರ್ಪಡೆ ಬಳಿಕ ಮಾತನಾಡಿದ ಟೆನ್ನಿಸ್‌ ಕೃಷ್ಣ, ದೇಶದ ರಾಜಕೀಯದಲ್ಲಿ ಬದಲಾವಣೆ ತರುವ ಪ್ರಯತ್ನದಲ್ಲಿ ಆಮ್‌ ಆದ್ಮಿ ಪಾರ್ಟಿ ಯಶಸ್ವಿಯಾಗುತ್ತಿದೆ. ದೆಹಲಿಯಲ್ಲಿ ಶಿಕ್ಷಣ, ಆರೋಗ್ಯ,ಕ್ರೀಡೆ ಮುಂತಾದ ಕ್ಷೇತ್ರಗಳಲ್ಲಿ ಸಾಧಿಸಿ ತೋರಿಸಿರುವ ಎಎಪಿಯು ಈಗ ಪಂಜಾಬ್‌ನಲ್ಲೂ ಮೋಡಿ ಮಾಡುತ್ತಿದೆ ಎಂದರು. ಇದನ್ನೂ ಓದಿ:ಸಿಂಪಲ್ ಸುನಿ `ಗತವೈಭವ’ದಲ್ಲಿ ದೇವಕನ್ಯೆಯಾಗಿ ಆಶಿಕಾ ರಂಗನಾಥ್‌

    ಭ್ರಷ್ಟ ಪಕ್ಷಗಳನ್ನು ಬದಿಗೊತ್ತಿ ದೇಶವನ್ನು ಕಾಪಾಡಲು ಎಎಪಿಯಿಂದ ಮಾತ್ರ ಸಾಧ್ಯ.ಸಾಮಾನ್ಯ ಜನರ ಬಗ್ಗೆ ಅಪಾರ ಕಾಳಜಿಯುಳ್ಳ ಆಮ್‌ ಆದ್ಮಿ ಪಾರ್ಟಿಯ ಮೂಲಕ ರಾಜಕೀಯ ಪ್ರವೇಶಿಸುತ್ತಿರುವುದಕ್ಕೆ ಹೆಮ್ಮೆಯಾಗುತ್ತಿದೆ. ಎಎಪಿಯನ್ನು ಬಳಸಿಕೊಂಡು ದೇಶದ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ರಾಜಕೀಯ ಪ್ರವೇಶಿಸಬೇಕು ಎಂದು ಹೇಳಿದರು.

    ಆಮ್‌ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಮಾತನಾಡಿ,ಕರ್ನಾಟಕದಲ್ಲಿ ಆಮ್‌ ಆದ್ಮಿ ಪಾರ್ಟಿಯು ಭದ್ರವಾಗಿ ಬೇರೂರುತ್ತಿದೆ. ಸಿನಿಮಾ ಸಾಧಕರು,ದಕ್ಷ ಅಧಿಕಾರಿಗಳು,ರೈತ ನಾಯಕರು,ಸಮಾಜಸೇವಕರು, ವಕೀಲರು, ಉಪನ್ಯಾಸಕರು ಮುಂತಾದ ವಿವಿಧ ಕ್ಷೇತ್ರದ ಗಣ್ಯರು ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ ಎಂದರು.

    ದೇಶಕ್ಕೆ ಆಮ್‌ ಆದ್ಮಿ ಪಾರ್ಟಿಯೊಂದೇ ಆಶಾಕಿರಣ ಎಂಬುದು ಯುವಜನತೆಗೆ ಮನವರಿಕೆಯಾಗುತ್ತಿದೆ. ಜನಪ್ರಿಯ ನಟರಾದ ಟೆನಿಸ್ ಕೃಷ್ಣರವರ ಸೇರ್ಪಡೆಯಿಂದ ಪಕ್ಷಕ್ಕೆ ಇನ್ನಷ್ಟು ಬಲ ಬಂದಿದೆ. ಸ್ವಚ್ಛ ರಾಜಕೀಯ ಹಾಗೂ ಪಾರದರ್ಶಕ ಆಡಳಿತವೇ ನಮ್ಮೆಲ್ಲರ ಧ್ಯೇಯವಾಗಿದ್ದು, ಇದನ್ನು ಸಾಧಿಸಲು ಒಗ್ಗಟ್ಟಿನಿಂದ ಶ್ರಮಿಸಲಿದ್ದೇವೆ‌ ಎಂದು ಹೇಳಿದರು.

    Live Tv
    [brid partner=56869869 player=32851 video=960834 autoplay=true]

  • ‘ಬಿಗ್ ಬಾಸ್’ ಮನೆಗೆ ಇವರಿಗಿದೆಯಂತೆ ಎಂಟ್ರಿ: ಸಂಭವನೀಯ ಪಟ್ಟಿ ರಿಲೀಸ್

    ‘ಬಿಗ್ ಬಾಸ್’ ಮನೆಗೆ ಇವರಿಗಿದೆಯಂತೆ ಎಂಟ್ರಿ: ಸಂಭವನೀಯ ಪಟ್ಟಿ ರಿಲೀಸ್

    ನ್ನಡದ ಬಿಗ್ ಬಾಸ್ 9ನೇ ಆವೃತ್ತಿ ಇನ್ನೇನು ಶುರುವಾಗಲಿದೆ. ಮೊನ್ನೆಯಿಂದ ಬಿಗ್ ಬಾಸ್ ಪ್ರೊಮೋ ಶೂಟಿಂಗ್ ನಲ್ಲಿ ಕಿಚ್ಚ ಸುದೀಪ್ ಭಾಗಿಯಾಗಿದ್ದಾರೆ. ಈಗಾಗಲೇ ಸುದೀಪ್ ಅವರ ಗೆಟಪ್ ಬಗ್ಗೆ ಪಬ್ಲಿಕ್ ಟಿವಿ ಡಿಜಿಟಲ್ ಎಕ್ಸಕ್ಲೂಸಿವ್ ಆದ ಮಾಹಿತಿ ನೀಡಿತ್ತು. ಇದೀಗ ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಯಾರೆಲ್ಲ ಇರಲಿದ್ದಾರೆ ಎನ್ನುವ ಸಂಭವನೀಯ ಪಟ್ಟಿಯೂ ಸಿಕ್ಕಿದೆ. ಇವರ ಹೆಸರು ಸದ್ಯ ಸೋಷಿಯಲ್ ಮೀಡಿಯಾದಲ್ಲೂ ಓಡಾಡುತ್ತಿದೆ.

    ಪ್ರತಿ ಸಲವೂ ಬಿಗ್ ಬಾಸ್ ಶುರುವಾದಾಗ ಕೆಲವು ಹೆಸರುಗಳು ಕೇಳಿ ಬರುತ್ತವೆ. ಈ ವರ್ಷವೂ ಅವರು ಸಂಭವನೀಯ ಯಾದಿಯಲ್ಲಿದ್ದಾರೆ. ನಂಬರ್ ಮೂಲಕ ಫೇಮಸ್ ಆಗಿರುವ ಜ್ಯೋತಿಷಿ ಆರ್ಯವರ್ಧನ್, ಹಾಸ್ಯ ಕಲಾವಿದ ಟೆನ್ನಿಸ್ ಕೃಷ್ಣ, ನಟ ಕಂ ನಿರ್ದೇಶಕ ನವೀನ್ ಕೃಷ್ಣ ಹಾಗೂ ನಟಿ ಪವಿತ್ರಾ ಲೋಕೇಶ್ ಹೆಸರು ಕೇಳಿ ಬಂದಿದೆ. ಇದನ್ನೂ ಓದಿ: ರಾಕ್ಷಸರ ರೂಪದಲ್ಲಿ ಬರುತ್ತಿದ್ದಾರೆ ಡೈಲಾಂಗ್ ಕಿಂಗ್ ಸಾಯಿಕುಮಾರ್

    ಹೊಸ ಸೇರ್ಪಡೆ ಎನ್ನುವಂತೆ ನಾಗಿನಿ 2 ಧಾರಾವಾಹಿ ಖ್ಯಾತಿಯ ನಮ್ರತಾ ಗೌಡ, ನ್ಯೂಸ್ ರೀಡರ್ ದಿವ್ಯಾ ವಸಂತ್, ಸರಿಗಮಪ ಶೋನಲ್ಲಿ ಫೇಮಸ್ ಆಗಿರುವ ಹನುಮಂತ, ಖ್ಯಾತ ಗಾಯಕ ರಘು ದೀಕ್ಷಿತ್, ಪತ್ರಕರ್ತ ಇಂದ್ರಜಿತ್ ಲಂಕೇಶ್ ಅವರು ಹೆಸರು ಈ ಬಾರಿ ಮುಂಚೂಣೆಯಲ್ಲಿ ಕೇಳಿ ಬರುತ್ತಿದೆ. ರೂರಲ್ ಸ್ಟಾರ್ ಎಂದೇ ಖ್ಯಾತರಾಗಿರುವ ಅಂಜನ್ ಕೂಡ ಈ ಬಾರಿ ದೊಡ್ಮನೆಗೆ ಹೋಗುವಂತಹ ಅವಕಾಶವನ್ನೂ ಪಡೆದುಕೊಳ್ಳಲಿದ್ದಾರೆ ಎಂದೂ ಹೇಳಲಾಗುತ್ತಿದೆ.

    ಈ ಲಿಸ್ಟ್ ನಲ್ಲಿರುವ ಕೆಲವರನ್ನೂ ಈಗಾಗಲೇ ವಾಹಿನಿಯು ಸಂಪರ್ಕ ಮಾಡಿದೆ ಎಂದೂ ಹೇಳಲಾಗಿದ್ದು, ಅಂತಿಮ ಪಟ್ಟಿಯು ಶೋ ಶುರುವಾದಾಗಲೇ ವಾಹಿನಿಯು ರಿಲೀಸ್ ಮಾಡಲಿದೆ. ಅದಕ್ಕೂ ಮುನ್ನ ಕೆಲ ಕಲಾವಿದರಿಗೆ ಗಾಳ ಹಾಕಿದ್ದು, ಹೆಚ್ಚು ಸುದ್ದಿಯಲ್ಲಿರುವವರನ್ನೇ ಟಾರ್ಗೆಟ್ ಮಾಡಲಾಗಿದೆ ಎನ್ನುವ ಮಾಹಿತಿ ಇದೆ.

    Live Tv
    [brid partner=56869869 player=32851 video=960834 autoplay=true]

  • ಚಿತ್ರರಂಗದ ಕೆಲವರ ಬಗ್ಗೆ ಸಿದ್ದುಗೆ ದೂರು ಹೇಳಿದ ಟೆನ್ನಿಸ್ ಕೃಷ್ಣ

    ಚಿತ್ರರಂಗದ ಕೆಲವರ ಬಗ್ಗೆ ಸಿದ್ದುಗೆ ದೂರು ಹೇಳಿದ ಟೆನ್ನಿಸ್ ಕೃಷ್ಣ

    ಮೈಸೂರು: ಕನ್ನಡದ ಹಿರಿಯ ಹಾಸ್ಯ ಕಲಾವಿದ ಟೆನ್ನಿಸ್ ಕೃಷ್ಣ, ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿ ಚಿತ್ರರಂಗದಲ್ಲಿರುವ ಎರಡು ಬಣಗಳ ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ.

    ಮೈಸೂರಿನ ರಾಮಕೃಷ್ಣ ನಗರದಲ್ಲಿರುವ ನಿವಾಸದಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಟೆನ್ನಿಸ್ ಕೃಷ್ಣ ಚಿತ್ರರಂಗದ ಸದ್ಯದ ಪರಿಸ್ಥಿತಿಯನ್ನು ವಿವರಿಸಿದರು. ಸಿದ್ದು ಭೇಟಿ ಬಳಿಕ ಮಾತನಾಡಿದ ಅವರ, ಇಷ್ಟು ದಿನ ನಾನು ಸಿನಿಮಾದಲ್ಲಿ ಬ್ಯುಸಿಯಿದ್ದೆ. ಹಾಗಾಗಿ ಎಲ್ಲಿಯೂ ಕಾಣಿಸಿಕೊಳ್ಳುವುದಿಲ್ಲ. ಈಗ ಪಕ್ಕದ ರೋಡಿನಲ್ಲಿ ಶೂಟಿಂಗ್ ನಡೆಯುತ್ತಿತ್ತು. ಹಾಗಾಗಿ ನಾನು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದೆ. ಎಷ್ಟೋ ಬಾರಿ ಅವರು ನನಗೆ ಕರೆದುಕೊಂಡು ಬಂದು ಊಟ ಮಾಡಿಸಿದ್ದಾರೆ ಎಂದರು.

    ಇದೇ ವೇಳೆ, ಈ ನಡುವೆ ಜನ ಸಿನಿಮಾ ನೋಡುವುದು ಕಡಿಮೆ ಆಗಿದೆ. ಒಳ್ಳೆಯ ಸಿನಿಮಾ ಬರುತ್ತೆ, ಜನರು ಅದನ್ನು ನೋಡಿ ಪ್ರೋತ್ಸಾಹಿಸಬೇಕು. ಇತ್ತೀಚಿನ ದಿನಗಳಲ್ಲಿ ಹಿರಿಯ ಕಲಾವಿದರಿಗೆ ಸಿನಿಮಾ ಅವಕಾಶಗಳು ಕಡಿಮೆ ಆಗುತ್ತಿದೆ. ಈ ಮೊದಲು ನಾನು ಮಾಧ್ಯಮಗಳಲ್ಲಿ ಈ ಬಗ್ಗೆ ಮಾತನಾಡಿದ್ದೆ. ಹಾಗಾಗಿ ಈಗ ಹಿರಿಯ ನಟರಿಗೆ ಅವಕಾಶ ಸಿಗುತ್ತಿದೆ. ತುಂಬಾ ಜನ ಈ ಬಗ್ಗೆ ಮಾತನಾಡಲು ಹೆದರುಕೊಳ್ಳುತ್ತಿದ್ದರು. ನಾನು ಎಷ್ಟು ದಿನ ಕಾಯಲಿ ಎಂದು ಮಾತನಾಡಿದೆ, ಮಾತನಾಡಿದಕ್ಕೆ ಅವಕಾಶ ಸಿಕ್ತು ಎಂದರು.

    ನನಗೆ ಈಗ ಅನ್ನ ಇದೆ. ನಾನು ಈಗಲೂ ಉತ್ತರ ಕರ್ನಾಟಕಕ್ಕೆ ಹೋಗಿ ನಾಟಕದಲ್ಲಿ ಪಾತ್ರ ಮಾಡಿದ್ರೆ, 35 ಅಡಿ ಕಟೌಟ್ ಹಾಕುತ್ತಾರೆ. ನಾಟಕದಲ್ಲಿ ಪಾತ್ರ ಮಾಡಿದರೆ ನನಗೆ ಅನ್ನ ಸಿಗುತ್ತೆ. ಆದರೆ ಅಭಿಮಾನಿಗಳು ನೀವು ಯಾವಾಗ ಸಿನಿಮಾ ಮಾಡುತ್ತೀರಾ ಎಂದು ಕೇಳುತ್ತಿದ್ದಾರೆ. ಚಿತ್ರರಂಗದಲ್ಲಿ ಪ್ರತ್ಯೇಕ ಗುಂಪೊಂದು ಇದನ್ನು ನಿಯಂತ್ರಿಸುತ್ತಿತ್ತು. ಈಗ ಆ ಗುಂಪು ಒಡೆದು ಹೋಗಿದೆ. ಹಾಗಾಗಿ ನಮಗೆ ಅವಕಾಶಗಳು ಸಿಗುತ್ತಿದೆ ಎಂದು ಟೆನ್ನಿಸ್ ಕೃಷ್ಣ ಹೇಳಿದ್ದಾರೆ.

    ಅಲ್ಲದೆ ಸಿದ್ದರಾಮಯ್ಯ ಅವರ ಮಾತನ್ನು ಚಿತ್ರರಂಗದ ಹಲವರು ಕೇಳುತ್ತಾರೆ. ಹಾಗಾಗಿ ಸಿದ್ದರಾಮಯ್ಯ ಭೇಟಿಗೆ ಬಂದಿದ್ದೆ ಎಂದು ತಿಳಿಸಿದರು.