Tag: Tenant

  • ಮನೆ ಓನರ್‌ ಹೆಂಡ್ತಿ ಜೊತೆಗೇ ಕಳ್ಳಸಂಬಂಧ – ಬಾಡಿಗೆದಾರನನ್ನ 7 ಅಡಿ ಗುಂಡಿಯಲ್ಲಿ ಜೀವಂತವಾಗಿ ಹೂತುಹಾಕಿದ ಪತಿ!

    ಮನೆ ಓನರ್‌ ಹೆಂಡ್ತಿ ಜೊತೆಗೇ ಕಳ್ಳಸಂಬಂಧ – ಬಾಡಿಗೆದಾರನನ್ನ 7 ಅಡಿ ಗುಂಡಿಯಲ್ಲಿ ಜೀವಂತವಾಗಿ ಹೂತುಹಾಕಿದ ಪತಿ!

    ಚಂಡೀಗಢ: ತನ್ನ ಪತ್ನಿಯೊಂದಿಗೆ ಕಳ್ಳ ಸಂಬಂಧ (Affair) ಹೊಂದಿದ್ದ ವ್ಯಕ್ತಿಯನ್ನ ಪತ್ತೆಹಚ್ಚಿ, ಸ್ನೇಹಿತರ ಸಹಾಯದಿಂದ ಅಪಹರಿಸಿ ಬಳಿಕ ಹೊಲದಲ್ಲಿ 7 ಅಡಿ ಆಳದ ಗುಂಡಿಯಲ್ಲಿ ಜೀವಂತವಾಗಿ ಹೂತುಹಾಕಿದ ಘಟನೆ ಹರಿಯಾಣದ ರೋಹ್ಟಕ್‌ನಲ್ಲಿ (Haryana’s Rohtak) ನಡೆದಿದೆ.

    ಹೌದು. ಚಂಡೀಗಢ ಮೂಲದ ವ್ಯಕ್ತಿ ತನ್ನ ಮನೆಯ ಬಾಡಿಗೆದಾರನು (Tenant) ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿರುವುದನ್ನು ಪತ್ತೆಹಚ್ಚಿದ ಬಳಿಕ 7 ಅಡಿ ಗುಂಡಿ ತೆಗೆದು ಆತನನ್ನ ಸಜೀವವಾಗಿ ಹೂತುಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಹತ್ಯೆ ಮಾಡಿದ ವ್ಯಕ್ತಿ ಓರ್ವ ಯೋಗ ಶಿಕ್ಷಕನಾಗಿದ್ದಾನೆ. ಇದನ್ನೂ ಓದಿ: ವಿಜಯೇಂದ್ರ, ಯತ್ನಾಳ್ ಟೀಂಗೆ ‘ಹೈ’ ಶಾಕ್ – ಐವರು ನಾಯಕರಿಗೆ ಶಿಸ್ತು ಸಮಿತಿಯಿಂದ ಶೋಕಾಸ್ ನೋಟಿಸ್

    ಕಳೆದ ವರ್ಷ ಡಿಸೆಂಬರ್‌ನಲ್ಲಿ ಘಟನೆ ನಡೆದಿತ್ತು. ಪೊಲೀಸರು ಸುದೀರ್ಘ ತನಿಖೆ ಬಳಿಕ ಆರೋಪಿಯನ್ನ ಬಂಧಿಸಿದ್ದು, ಇದೀಗ ಶವವನ್ನ ಹೊರ ತೆಗೆದಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ದೇಶ ಭ್ರಷ್ಟ ವಜ್ರೋದ್ಯಮಿ ಮೆಹುಲ್ ಚೋಕ್ಸಿ ಬೆಲ್ಜಿಯಂನಲ್ಲಿರುವುದು ದೃಢ

    ಏನಿದು ಕೇಸ್‌?
    ರೋಹ್ಟಕ್‌ನ ಬಾಬಾ ಮಸ್ತನಾಥ್ ವಿಶ್ವವಿದ್ಯಾನಿಲಯದಲ್ಲಿ ಯೋಗ ಕಲಿಸುತ್ತಿದ್ದ ಜಗದೀಪ್ ತನ್ನ ಮನೆಯ ಒಂದು ಭಾಗವನ್ನು ಹರ್ದೀಪ್ ಎಂಬಾತನಿಗೆ ಬಾಡಿಗೆ ನೀಡಿದ್ದ. ಆದ್ರೆ ಬಾಡಿಗೆ ಮನೆಯಲ್ಲಿದ್ದ ಹರ್ದೀಪ್‌ ಆತನ ಹೆಂಡತಿಯೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ. ಇದನ್ನು ಪತ್ತೆಹಚ್ಚಿದ ಜಗದೀಪ್‌, ತನ್ನ ಸ್ನೇಹಿತರ ಸಹಾಯ ಪಡೆದು ಕೊಲೆ ಮಾಡುವ ಸ್ಕೆಚ್‌ ಹಾಕಿದ್ದಾನೆ. ಚರ್ಖಿ ದಾದ್ರಿಯ ಪಂತವಾಸ್ ಗ್ರಾಮದಲ್ಲಿ 7 ಅಡಿ ಆಳದ ಗುಂಡಿ ತೆಗೆಸಿದ್ದಾನೆ. ಗುಂಡಿ ತೆಗೆಯುವವರು ಮೊದಲು ಕಾರಣ ಕೇಳಿದಾಗ ಇದು ಬೋರ್‌ವೆಲ್‌ಗೆ ಅಂದಿದ್ದಾನೆ. ಬಳಿಕ ಸ್ನೇಹಿತರ ಸಹಾಯದಿಂದ ಹರ್ದೀಪ್‌ನ ಕೈಕಾಲುಗಳನ್ನು ಕಟ್ಟಿಹಾಕಿ, ಬಾಯಿಗೆ ಟೇಪ್‌ ತುರುಕಿ ಜೀವಂತವಾಗಿ ಹೂತುಹಾಕಿದ್ದಾನೆ.

    ಕೊಲೆಯಾದ 10 ದಿನಗಳ ಬಳಿಕ ಜ.3ರಂದು ಶಿವಾಜಿ ಕಾಲೋನಿ ಪೊಲೀಸ್‌ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಈ ಸಂಬಂದ ತನಿಖೆ ಕೈಗೊಂಡಿದ್ದ ಪೊಲೀಸರು ಜದೀಪ್‌ ದೂರವಾಣಿ ಕರೆಗಳನ್ನು ಪರಿಶೀಲಿಸಿದ ಬಳಿಕ ನಿಜಾಂಶ ಬಯಲಾಗಿದೆ. ಬಳಿಕ ಜಗದೀಪ್‌ನನ್ನ ಕೋರ್ಟ್‌ಗೆ ಹಾಜರುಪಡಿಸಿ ಕಸ್ಟಡಿಗೆ ಪಡೆದಿದ್ದಾರೆ. ಸದ್ಯ ಪ್ರಕರಣದ ತನಿಖೆ ಮುಂದುವರಿಸಿರುವ ಪೊಲೀಸರು, ಕೊಲೆಗೆ ಸಹಕಾರ ನೀಡಿದ ಉಳಿದ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ ಎಂದು ಅಪರಾಧ ತನಿಖಾ ಘಟಕದ ಉಸ್ತುವಾರಿ ಕುಲದೀಪ್ ಸಿಂಗ್ ಹೇಳಿದ್ದಾರೆ.

  • ಬೀಗದ ಕೈ ಸಂಬಂಧ ಗಲಾಟೆ- ಮನೆ ಮಾಲೀಕನನ್ನೇ ಕೊಂದ ಬಾಡಿಗೆದಾರ

    ಬೀಗದ ಕೈ ಸಂಬಂಧ ಗಲಾಟೆ- ಮನೆ ಮಾಲೀಕನನ್ನೇ ಕೊಂದ ಬಾಡಿಗೆದಾರ

    ಚಿಕ್ಕಬಳ್ಳಾಪುರ: ಮನೆಯ ಮಾಲೀಕ ಹಾಗೂ ಬಾಡಿಗೆದಾರನ ನಡುವೆ ಗಲಾಟೆ ನಡೆದಿದ್ದು, ಈ ವೇಳೆ ಮನೆ ಮಾಲೀಕ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಚಿಂತಾಮಣಿ ನಗರದಲ್ಲಿ ನಡೆದಿದೆ.

    ನಗರದ ಎನ್.ಆರ್.ಬಡಾವಣೆಯ ನಿವೃತ್ತ ಇಂಜನಿಯರ್ 61 ವರ್ಷದ ಶಂಕರಾಚಾರಿ ಮೃತ ಮನೆ ಮಾಲೀಕ. ನಾರಾಯಣಸ್ವಾಮಿ ಕೊಲೆ ಮಾಡಿದ ಬಾಡಿಗೆದಾರ.

    ಮೃತ ಶಂಕರಾಚಾರಿಯವರದ್ದು ಒಂದು ಅಂತಸ್ತಿನ ಮನೆ ಇದ್ದು, ಕೆಳಭಾಗದ ಮನೆಯನ್ನು ನಾರಾಯಣಸ್ವಾಮಿ ಹಾಗೂ ಅರುಣಾ ದಂಪತಿಗೆ ಭೋಗ್ಯಕ್ಕೆ ನೀಡಿದ್ದರು. ಮನೆ ಮಾಲೀಕ ಶಂಕರಾಚಾರಿ ಮೊದಲ ಅಂತಸ್ತಿನ ಮನೆಯಲ್ಲಿ ವಾಸವಾಗಿದ್ದರು. ಆದರೆ ಮನೆ ಮಾಲೀಕ ಶಂಕರಾಚಾರಿ ಹಾಗೂ ನಾರಾಯಣಸ್ವಾಮಿ ಕುಟುಂಬಗಳ ನಡುವಿನ ಕ್ಷುಲ್ಲಕ ಕಾರಣಗಳಿಗೆ ವೈಮನಸ್ಸು ಮೂಡಿ ಸಣ್ಣ ಪುಟ್ಟ ವಿಚಾರಗಳಿಗೂ ಗಲಾಟೆ ಮಾಡಿಕೊಳ್ಳುತ್ತಿದ್ದರು. ಈ ವಿಚಾರ ಪೊಲೀಸ್ ಠಾಣೆ ಮೆಟ್ಟಿಲು ಸಹ ಏರಿ ಭೋಗ್ಯದ ಅವಧಿ ಮುಗಿದ ಕೂಡಲೇ ಮನೆ ಖಾಲಿ ಮಾಡುವುದಾಗಿ ತಿಳಿಸಿದ್ದರಂತೆ.

    ಬೀಗದ ಕೈ ಸಂಬಂಧ ಕಲಾಟೆ
    ಮನೆಯ ಪಕ್ಕದಲ್ಲಿ ವಾಹನಗಳ ನಿಲುಗಡೆ ಶೆಡ್ ಇದ್ದು ಶೆಡ್ ನ ಬೀಗದ ಕೈ ಮನೆ ಮಾಲೀಕರ ಬಳಿ ಇತ್ತು. ಬೆಳಗ್ಗೆ ಎಷ್ಟು ಹೊತ್ತಾದರೂ ಶೆಡ್ ಬೀಗ ತೆಗೆಯಲ್ಲ ಬೀಗದ ಕೀ ಕೊಡುವಂತೆ ಶಂಕರಾಚಾರಿ ಜೊತೆ ನಾರಾಯಣಸ್ವಾಮಿ ಗಲಾಟೆ ಮಾಡಿಕೊಂಡಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆರು ಕೀ ಕೊಡಲ್ಲ ಅಂದಾಗ ಬಲವಂತವಾಗಿ ಕೀ ಕಸಿದುಕೊಳ್ಳಲು ಅರುಣಾ ಮುಂದಾಗಿದ್ದಾರೆ. ಈ ವೇಳೆ ಮನೆ ಮಾಲೀಕ ಶಂಕರಾಚಾರಿ ಕೆಳಗೆ ಬಿದ್ದು, ತಲೆಗೆ ಗಾಯವಾಗಿದೆ.

    ಕೂಡಲೇ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗೆ ಹೊಸಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶಂಕರಾಚಾರಿ ಮೃತಪಟ್ಟಿದ್ದಾರೆ. ಸದ್ಯ ಮನೆಯ ಬಾಡಿಗೆದಾರರಾದ ನಾರಾಯಣಸ್ವಾಮಿ ಹಾಗೂ ಅರುಣಾರನ್ನು ಕೊಲೆ ಪ್ರಕರಣದಡಿ ಚಿಂತಾಮಣಿ ನಗರ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಗದಗದಲ್ಲಿ ಬೆಳ್ಳಂಬೆಳಗ್ಗೆ ಜೆಸಿಬಿಗಳ ಘರ್ಜನೆ

    ಗದಗದಲ್ಲಿ ಬೆಳ್ಳಂಬೆಳಗ್ಗೆ ಜೆಸಿಬಿಗಳ ಘರ್ಜನೆ

    ಗದಗ: ಜಿಲ್ಲೆಯಲ್ಲಿ ಬೆಳ್ಳಂಬೆಳಗ್ಗೆ ಜೆಸಿಬಿಗಳ ಘರ್ಜನೆ ಜೋರಾಗಿದೆ. ಕಾರಣ ಗದಗ-ಬೆಟಗೇರಿ ನಗರ ಸಭೆಯ ವ್ಯಾಪ್ತಿಯ ಆಸ್ತಿಯನ್ನು ಖಾಸಗಿ ಭೂ ಬಾಡಿಗೆದಾರರಿಂದ ಜಪ್ತಿ ಮಾಡಲಾಗುತ್ತಿದೆ. ಗದಗ ನಗರಸಭೆಗೆ ಸೇರಿದ ಕೋಟ್ಯಂತರ ಮೌಲ್ಯದ 54 ವಕಾರಸಾಲು (ಗೋಡೌನ್) ಗಳನ್ನು ವಾಪಸ್ ಪಡೆಯಲು ನಗರಸಭೆ ಬೆಳಗ್ಗೆ ತೆರವು ಕಾರ್ಯಾಚರಣೆ ನಡೆಸಿದೆ.

    ನ್ಯಾಯಾಲಯದ ಆದೇಶದಂತೆ ಸ್ಥಳ ತೆರವು ಮಾಡುವಂತೆ ಈಗಾಗಲೇ ವಕಾರಸಾಲುಗಳ ನಿವಾಸಿಗಳಿಗೆ ನೋಟಿಸ್ ನೀಡಲಾಗಿತ್ತು. ನಗರದ ಹೃದಯಭಾಗದಲ್ಲಿರುವ ಈ ವಕಾರಸಾಲುಗಳನ್ನು ಹತ್ತಿ, ಅರಳಿ, ಶೇಂಗಾ, ಮೆಣಸಿನಕಾಯಿ ವ್ಯಾಪಾರ ಮಾಡುವ ಸಲುವಾಗಿ 1889 ರಲ್ಲಿ ನೂರು ವರ್ಷಗಳ ಒಪ್ಪಂದದ ಮೇರೆಗೆ ವರ್ತಕರಿಗೆ ಬಾಡಿಗೆಗೆ ನೀಡಲಾಗಿತ್ತು.

    ಲೀಜ್ ಅವಧಿ ಪೂರ್ಣಗೊಂಡು 25 ವರ್ಷ ಕಳೆದಿದ್ದರೂ ಬಾಡಿಗೆದಾರರು ಆಸ್ತಿಯನ್ನು ನಗರಸಭೆಗೆ ವಾಪಸ್ ನೀಡಿರಲಿಲ್ಲ. ಈ ವಿಷಯವಾಗಿ ನಗರಸಭೆ ಮತ್ತು ಬಾಡಿಗೆದಾರರ ನಡುವೆ ದಶಕಗಳಿಂದ ಹಗ್ಗ ಜಗ್ಗಾಟ ಮುಂದುವರಿದಿತ್ತು. ಇಂದಿನಿಂದ 2 ದಿನಗಳ ಕಾಲ ಕಾರ್ಯಾಚರಣೆ ನಡೆಯಲಿದೆ.

    ಕಾರ್ಯಾಚರಣೆ ಹಿನ್ನೆಲೆಯಲ್ಲಿ ನಗರದ ಎಪಿಎಂಸಿಯಿಂದ ಕೆ.ಎಚ್ ಪಾಟೀಲ ವೃತ್ತ, ಗಾಂಧಿ ವೃತ್ತದಿಂದ ಹಳೆಯ ಜಿಲ್ಲಾಧಿಕಾರಿ ಕಚೇರಿ ವೃತ್ತದವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಭದ್ರತೆಗೆ 500 ಪೊಲೀಸರು, 400 ಜನ ಪೌರಕಾರ್ಮಿಕರ ನೆರವು ಪಡೆಯಲಾಗಿದೆ. ಸುಮಾರು 40 ಜೆಸಿಬಿ, 5 ಇಟಾಚಿ, 70ಕ್ಕೂ ಅಧಿಕ ಟ್ರ್ಯಾಕ್ಟರ್ ಗಳನ್ನು ಬಳಸಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಎಮ್. ಜಿ ಹಿರೇಮಠ ಹೇಳಿದರು.

  • ಹೆಂಡತಿಯೊಂದಿಗೆ ಅಕ್ರಮ ಸಂಬಂಧವಿದೆ ಎಂದು ಶಂಕಿಸಿ ಬಾಡಿಗೆದಾರನನ್ನ ಹೆಲ್ಮೆಟ್‍ನಿಂದ ಹೊಡೆದು ಕೊಂದೇಬಿಟ್ಟ

    ಹೆಂಡತಿಯೊಂದಿಗೆ ಅಕ್ರಮ ಸಂಬಂಧವಿದೆ ಎಂದು ಶಂಕಿಸಿ ಬಾಡಿಗೆದಾರನನ್ನ ಹೆಲ್ಮೆಟ್‍ನಿಂದ ಹೊಡೆದು ಕೊಂದೇಬಿಟ್ಟ

    ಹೈದರಾಬಾದ್: ತನ್ನ ಹೆಂಡತಿಯೊಂದಿಗೆ ಅಕ್ರಮ ಸಂಬಂಧವಿದೆ ಎಂದು ಶಂಕಿಸಿ ಬಾಡಿಗೆದಾರನನ್ನು ಕೊಂದ ವ್ಯಕ್ತಿಯನ್ನು ಹೈದರಾಬಾದ್‍ನಲ್ಲಿ ಪೊಲೀಸರು ಬಂಧಿಸಿದ್ದಾರೆ.

    ಓಮನ್ ನಲ್ಲಿ ಸಿಸಿಟಿವಿ ತಂತ್ರಜ್ಞನಾಗಿ ಕೆಲಸ ಮಾಡುತ್ತಿದ್ದ 32 ವರ್ಷದ ಕನ್ಹೈಯ್ಯ ಗುಪ್ತಾ ಬಂಧಿತ ಆರೋಪಿ. ಈತ ಪೂರ್ವ ಕಂಡಿವಲಿಯ ಅಪ್ಪಾ ಪಾಡಾ ನಿವಾಸಿಯಾಗಿದ್ದ. ತನ್ನ ಹೆಂಡತಿಯೊಂದಿಗೆ ಬಾಡಿಗೆದಾರ ರಮೇಶ್ ಚೆನಾರಾ ಅಕ್ರಮ ಸಂಬಂಧ ಹೊಂದಿದ್ದಾನೆಂದು ಕನ್ಹೈಯ್ಯ ಅನುಮಾನಿಸಿದ್ದ. ಇಬ್ಬರನ್ನೂ ಬೇರ್ಪಡಿಸುವ ಸಲುವಾಗಿ ಕಳೆದ ವರ್ಷ ತನ್ನ ಹೆಂಡತಿಗೆ ಏನೋ ಸುಳ್ಳು ಹೇಳಿ ಆಕೆಯನ್ನ ಬಿಹಾರದ ತವರುಮನೆಗೆ ಕಳಿಸಿ, ತಾನು ಕೆಲಸ ಮಾಡುತ್ತಿದ್ದ ಓಮನ್‍ಗೆ ಹಿಂದಿರುಗಿದ್ದ.

    ಆರೋಪಿ ತನ್ನ ಕೆಲಸ ಮುಂದುವರೆಸಿ, ಮಾರ್ಚ್ 7ರಂದು ಮುಂಬೈಗೆ ವಾಪಸ್ಸಾಗಿದ್ದ. ಮುಂಬೈಗೆ ಬಂದ ಮೇಲೆ ರಮೇಶ್ ಜೊತೆ ಮನೆ ಭೋಗ್ಯದ ಒಪ್ಪಂದದ ಬಗ್ಗೆ ಮಾತನಾಡಬೇಕೆಂದು ಹೇಳಿ, ಆತನೊಂದಿಗೆ ಭೇಟಿ ಮಾಡಿಸುವಂತೆ ಅದೇ ಏರಿಯಾದಲ್ಲಿ ವಾಸವಿದ್ದ ತನ್ನ ಸಹೋದರ ಪ್ರಭು ಕುಮಾರ್ ಗೆ ಕೇಳಿದ್ದ. ಮಾರ್ಚ್ 9ರಂದು ರಮೇಶ್ ಮಲಾಡ್ ನಲ್ಲಿ ಕನ್ಹೈಯ್ಯ ನನ್ನು ಭೇಟಿ ಮಾಡಿದ್ದ. ಅಲ್ಲಿಂದ ಇಬ್ಬರೂ ಆಟೋದಲ್ಲಿ ಮೀರಾ ರೋಡ್‍ಗೆ ಹೋಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.

    ಕೊಲೆಯಾದ ರಮೇಶ್

    ನಂತರ ಕನ್ಹೈಯ್ಯ ರಮೇಶ್‍ನನ್ನು ಕಾಶಿಮಿರಾದಲ್ಲಿ ಕಾಡಿನೊಳಗೆ ಕರೆದುಕೊಂಡು ಹೋಗಿದ್ದ. ತನ್ನ ಹೆಂಡತಿಯೊಂದಿಗೆ ಅಕ್ರಮ ಸಂಬಂಧವಿರುವ ಬಗ್ಗೆ ಕನ್ಹೈಯ್ಯ ರಮೇಶ್‍ನನ್ನು ಪ್ರಶ್ನಿಸಿದ್ದ. ಬಳಿಕ ಇಬ್ಬರ ಮಧ್ಯೆ ವಾಗ್ವಾದ ನಡೆದಿದ್ದು, ಜಗಳ ವಿಕೋಪಕ್ಕೇರಿ ಕನ್ಹೈಯ್ಯ ಕಾಡಿನಲ್ಲಿ ಬಿದ್ದಿದ್ದ ಹೆಲ್ಮೆಟ್ ತೆಗೆದುಕೊಂಡು ರಮೇಶ್ ತಲೆ ಮೇಲೆ ಹೊಡೆದಿದ್ದ. ಇದರಿಂದ ರಮೇಶ್ ಕುಸಿದು ಬಿದ್ದಿದ್ದು, ಆತ ಸಾಯುವವರೆಗೆ ಕನ್ಹೈಯ್ಯ ಪದೇ ಪದೇ ತಲೆ ಮೇಲೆ ಹೆಲ್ಮೆಟ್‍ನಿಂದ ಹೊಡೆದಿದ್ದ ಎಂದು ತನಿಖಾ ತಂಡದ ಭಾಗವಾಗಿರುವ ಕಾಶಿಮಿರಾ ಕ್ರೈಂ ಬ್ರಾಂಚ್‍ನ ಅಧಿಕಾರಿಯೊಬ್ಬರು ಹೇಳಿದ್ದಾರೆ.

    ಮಾರ್ಚ್ 12ರಂದು ಸ್ಥಳೀಯರು ರಮೇಶ್ ಮೃತದೇಹದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ನಂತರ ಪೊಲೀಸರು ತನಿಖೆ ಆರಂಭಿಸಿದ್ದು, ಮಾರ್ಚ್ 10ರಂದು ಕುರಾರ್ ಪೊಲೀಸ್ ಠಾಣೆಯಲ್ಲಿ ರಮೇಶ್ ಕಾಣೆಯಾಗಿದ್ದಾನೆಂದು ದೂರು ದಾಖಲಾಗಿರುವುದು ಗೊತ್ತಾಗಿತ್ತು. ನಂತರ ಪೊಲೀಸರು ಆತನ ಕಾಲ್ ರೆಕಾಡ್ರ್ಸ್ ಪರಿಶೀಲಿಸಿದ್ದು, ಕೊನೆಯದಾಗಿ ರಮೇಶ್‍ಗೆ ಪ್ರಭು ಗುಪ್ತಾನಿಂದ ಕರೆ ಬಂದಿರುವುದು ಗೊತ್ತಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಪ್ರಭು ಗುಪ್ತನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದರು. ನಂತರ ಪ್ರಭು ಕನ್ಹೈಯ್ಯ ಬಗ್ಗೆ ಪೊಲೀಸರಿಗೆ ತಿಳಿಸಿದ್ದ.

    ಪೊಲೀಸರು ಕನ್ಹೈಯ್ಯ ನ ಕಾಲ್ ರೆಕಾಡ್ರ್ಸ್ ಪರಿಶೀಲಿಸಿದಾಗ ಆತ ಹೈದರಾಬಾದ್‍ನಲ್ಲಿರುವುದು ಗೊತ್ತಾಗಿತ್ತು. ಬಳಿಕ ಪೊಲೀಸ್ ತಂಡ ಅಲ್ಲಿಗೆ ಹೋಗಿದ್ದು, ಕನ್ಹೈಯ್ಯ ಓಮನ್‍ಗೆ ಹೋಗಲು ವಿಮಾನವೇರುವ ಮುನ್ನವೇ ಆತನನ್ನು ವಶಕ್ಕೆ ಪಡೆದಿದ್ದಾರೆ.

    ಕನ್ಹೈಯ್ಯ ಓಮನ್‍ಗೆ ಹೋಗಲು ಟಿಕೆಟ್ ಗಾಗಿ ಕಾಯುತ್ತಾ ತನ್ನ ಸ್ನೇಹಿತನ ಮನೆಯಲ್ಲಿದ್ದ. ದೇಶವನ್ನ ಬಿಟ್ಟು ಹೋಗುವ ಮುನ್ನವೇ ಆರೋಪಿಯನ್ನ ಬಂಧಿಸಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

  • ಬಾಡಿಗೆದಾರರಿಗೆ ಎಲೆಕ್ಟ್ರಿಸಿಟಿ, ನೀರು ಕಟ್ ಮಾಡಿ ಅಪ್ಪ-ಮಗನಿಂದ ನಿತ್ಯ ಕಿರುಕುಳ

    ಬಾಡಿಗೆದಾರರಿಗೆ ಎಲೆಕ್ಟ್ರಿಸಿಟಿ, ನೀರು ಕಟ್ ಮಾಡಿ ಅಪ್ಪ-ಮಗನಿಂದ ನಿತ್ಯ ಕಿರುಕುಳ

    ಬೆಂಗಳೂರು: ಅಪ್ಪ-ಮಗ ಸೇರಿ ಬಾಡಿಗೆದಾರರಿಗೆ ಎಲೆಕ್ಟ್ರಿಸಿಟಿ, ನೀರು ಕಟ್ ಮಾಡಿ ನಿತ್ಯ ಕಿರುಕುಳ ನೀಡುತ್ತಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ಬೆಂಗಳೂರಿನ ಹೊಸಕೆರೆಹಳ್ಳಿಯ ರವೀಶ್ ಕುಟುಂಬಕ್ಕೆ ದಿನನಿತ್ಯ ಕಾಟ ತಪ್ಪಿದ್ದಿಲ್ಲ. ಬಸವೇಗೌಡರ ಮನೆಯಲ್ಲಿ 10 ಲಕ್ಷ ರೂ. ಭೋಗ್ಯಕ್ಕೆ ರವೀಶ್ ಕುಟುಂಬ ವಾಸವಾಗಿದ್ದಾರೆ. ಈ ಹಿಂದೆ ಮನೆಗೆ ನುಗ್ಗಿ ಹೆಣ್ಮಕ್ಕಳ ಮೇಲೆ ಹಲ್ಲೆ ನಡೆಸಿ ಮನೆ ಸಾಮಾನುಗಳನ್ನು ಮಗ ಮಹೇಶ್ ಹೊರಗೆ ಹಾಕಿದ್ದನು. ಇಂದು ಬಸವೇಗೌಡ ಹೆಲ್ಮೆಟ್ ಹಾಕಿಕೊಂಡು ಬಂದು ನೀರಿನ ಮೋಟರ್ ತೆಗೆದುಕೊಂಡು ಹೋಗಿದ್ದಾನೆ.

    ಬಸವೇಗೌಡರ ಮಗ ಮಹೇಶ ಸೆ.3 ರಂದು 30 ರಿಂದ 40 ಜನರನ್ನು ಮನೆಗೆ ನುಗ್ಗಿಸಿ ಮನೆ ಖಾಲಿ ಮಾಡುವಂತೆ ದಾಂಧಲೆ ಎಬ್ಬಿಸಿದ್ದನು ಹಾಗೂ ರವೀಶ್‍ರ ಗರ್ಭಿಣಿ ಪತ್ನಿ ಲಕ್ಷ್ಮೀ ಹಾಗು ಅಜ್ಜಿ ಲಿಂಗಮ್ಮರಿಗೆ ಥಳಿಸಿ ಮನೆ ಸಾಮಾನುಗಳನ್ನು ಹೊರಗೆ ಹಾಕಿದ್ದನು.

    ನಮ್ಮ ಹಣ ಕೊಡಿ ನಾವು ಖಾಲಿ ಮಾಡುತ್ತೀವಿ ಎಂದರೆ ಹಣ ಕೊಡದೆ ಬಸವೇಗೌಡ ವಂಚಿಸುತ್ತಿದ್ದಾನೆ. ಪಬ್ಲಿಕ್ ಟಿವಿಯಲ್ಲಿ ಈ ಬಗ್ಗೆ ವರದಿಯಾದ ನಂತರ ಮಹೇಶನನ್ನು ಅರೆಸ್ಟ್ ಮಾಡಲಾಗಿತ್ತು. ತಲೆ ಮರೆಸಿಕೊಂಡಿದ್ದ ಬಸವೇಗೌಡ ನಿರೀಕ್ಷಣಾ ಜಾಮೀನು ಪಡೆದು, ಅಂದಿನಿಂದ ಒಂದಿಲ್ಲೊಂದು ಕಾಟ ಕೋಡುತ್ತಿದ್ದಾನೆ ಎನ್ನಲಾಗಿದೆ.

    ವಾರದ ಹಿಂದೆ ನೀರಿನ ಮೋಟರ್ ಫ್ಯೂಸ್ ಕಿತ್ತುಕೊಂಡು ಹೋಗಿದ್ದ. ಆದರೆ ಇಂದು ಬೆಳಗಿನ ಜಾವ ಹೆಲ್ಮೆಟ್ ಹಾಕಿಕೊಂಡು ಬಂದು ನೀರಿನ ಮೋಟರ್ ಕಿತ್ತುಕೊಂಡು ಹೋಗಿದ್ದಾನೆ. ಬಸವೇಗೌಡನ ಈ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಬಸವೇಗೌಡ ಎಲೆಕ್ಟ್ರಿಸಿಟಿ ಹಾಗೂ ನೀರು ನೀಡದೆ ಬಾಡಿಗೆದಾರರಿಗೆ ಕಿರುಕುಳ ನೀಡ್ತಿದ್ದಾನೆ. ಈ ಮೂಲಕ ಭೋಗ್ಯಕ್ಕೆ ಕೊಟ್ಟಿರೋ ಹಣ ಹೊಡೆಯೊ ಪ್ಲಾನ್ ಮಾಡಿದ್ದಾನೆ. ಗಿರಿನಗರ ಪೊಲೀಸರು ಎಲ್ಲಾ ಗೊತ್ತಿದ್ದೂ ಕಣ್ಮುಚ್ಚಿ ಕುಳಿತು ಬಸವೇಗೌಡನಿಗೆ ಸಹಕಾರ ನೀಡುತ್ತಿದ್ದಾರೆ. ನಮ್ಮ ಹಣ ವಾಪಸ್ ಕೊಡಿಸಿ ಮನೆ ಖಾಲಿ ಮಾಡುತ್ತೀವಿ ಎಂದು ಹೇಳಿದರೂ ಪೊಲೀಸರು ಕ್ಯಾರೆ ಎನ್ನುತ್ತಿಲ್ಲ.