Tag: tempo

  • ನಾಯಿಮರಿಯಿಂದಾಗಿ 40 ವರ್ಷದ ವ್ಯಕ್ತಿಯ ಪ್ರಾಣವೇ ಹೋಯ್ತು!

    ನಾಯಿಮರಿಯಿಂದಾಗಿ 40 ವರ್ಷದ ವ್ಯಕ್ತಿಯ ಪ್ರಾಣವೇ ಹೋಯ್ತು!

    ಸಾಂದರ್ಭಿಕ ಚಿತ್ರ

    ನವದೆಹಲಿ: ನಾಯಿಮರಿಯಿಂದಾಗಿ 40 ವರ್ಷದ ವ್ಯಕ್ತಿಯೊಬ್ಬರು ಪ್ರಾಣವನ್ನೇ ಕಳೆದುಕೊಂಡ ಆಘಾತಕಾರಿ ಘಟನೆಯೊಂದು ದೆಹಲಿಯ ಉತ್ತಮ್ ನಗರ ಪ್ರದೇಶದಲ್ಲಿ ಶನಿವಾರ ನಡೆದಿದೆ.

    ವಿಜೇಂದರ್ ರಾಣಾ ಮೃತ ದುರ್ದೈವಿ ವ್ಯಕ್ತಿ. ರಾಣಾ ಅವರ ಟೆಂಪೋ ನಾಯಿಮರಿಗೆ ತಾಗಿತ್ತೆಂದು ಸಿಟ್ಟುಗೊಂಡ ನಾಯಿಯ ಮಾಲೀಕ ಈ ಕೃತ್ಯ ಎಸಗಿದ್ದಾನೆ.

    ಏನಿದು ಘಟನೆ?:
    ರಾಣಾ ಅವರ ಟಾಟಾ ಏಸ್ ಟೆಂಪೋ ಆಕಸ್ಮತ್ತಾಗಿ ನಾಯಿಗೆ ಟಚ್ ಆಗಿದೆ. ಈ ವೇಳೆ ನಾಯಿಯ ಮಾಲೀಕ ತಗಾದೆ ತೆಗೆದಿದ್ದಾನೆ. ಇಷ್ಟು ಮಾತ್ರವಲ್ಲದೇ ಸ್ಥಳೀಯರನ್ನು ಸ್ಥಳದಲ್ಲಿ ಜಮಾಯಿಸುವಂತೆ ಮಾಡಿದ್ದಾನೆ. ಈ ವೇಳೆ ರಾಣಾ ಸಹೋದರ ಕೂಡ ಸ್ಥಳಕ್ಕೆ ದೌಡಾಯಿಸಿ ಮಾತಿನ ಚಕಮಕಿ ನಡೆಸಿದ್ದಾರೆ. ಬಳಿಕ ಅಂದರೆ ಮಧ್ಯರಾತ್ರಿ 12.50ರ ಸುಮಾರಿಗೆ ರಾಣಾ ಸಹೋದರಿ ಪೊಲೀಸರಿಗೆ ಕರೆ ಮಾಡಿ ನಡೆದ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ ಅಂತ ಪೊಲೀಸರು ತಿಳಿಸಿದ್ದಾರೆ.

    ಮಾತಿನ ಚಕಮಕಿ ಮುಂದುವರೆದು ತಾರಕಕ್ಕೇರಿ ಟೆಂಪೋ ಚಾಲಕ ವಿಜೇಂದರ್ ರಾಣಾ ಅವರಿಗೆ ಚಾಕುವಿನಿಂದ ಇರಿದಿದ್ದಾರೆ. ಕೂಡಲೇ ಅವರನ್ನು ಮಟ ರೂಪ್ ರಾಣಿ ಮಾಗ್ಗೋ ಆಸ್ಪತ್ರೆಗೆ ದಾಖಲಿಸಲು ಕರೆದೊಯ್ಯುವ ವೇಳೆ ಗಂಭೀರ ಗಾಯವಾಗಿದ್ದರಿಂದ ತೀವ್ರ ರಕ್ತಸ್ರಾವವಾಗಿ ದಾರಿ ಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ. ಅಲ್ಲದೇ ಇವರ ಸಹೋದರ ರಾಜೇಶ್ ಅವರಿಗೂ ಚಾಕು ಇರಿತವಾಗಿದ್ದು, ಗಾಯಗಳಾಗಿವೆ. ಸದ್ಯ ರಾಜೇಶ್ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಘಟನೆಯ ಮೂವರು ಆರೋಪಿಗಳಾದ ಅಂಕಿತ್, ಪರಸ್ ಹಾಗೂ ಅವರ ಮನೆ ಮಾಲೀಕ ದೇವ್ ಚೋಪ್ರಾ ಇದೀಗ ತಲೆಮರೆಸಿಕೊಂಡಿದ್ದು, ಪತ್ತೆಗೆ ಬಲೆ ಬೀಸಲಾಗಿದೆ. ಅಲ್ಲದೇ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಅಂತ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಟೆಂಪೋ-ಟ್ಯಾಂಕರ್ ಮುಖಾಮುಖಿ ಡಿಕ್ಕಿ – ತಾಯಿ, ಮಗು ಸೇರಿ ಐವರ ದುರ್ಮರಣ

    ಟೆಂಪೋ-ಟ್ಯಾಂಕರ್ ಮುಖಾಮುಖಿ ಡಿಕ್ಕಿ – ತಾಯಿ, ಮಗು ಸೇರಿ ಐವರ ದುರ್ಮರಣ

    -ವೇಗದ ತೀವ್ರತೆಗೆ ನಜ್ಜುಗುಜ್ಜಾದ ಟೆಂಪೋ, 15 ಜನರಿಗೆ ಗಂಭೀರ ಗಾಯ

    ಕಾರವಾರ: ವೇಗವಾಗಿ ಬಂದ ಟೆಂಪೋ ಹಾಗೂ ಟ್ಯಾಂಕರ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ, ಟೆಂಪೋ ನಜ್ಜುಗುಜ್ಜಾಗಿ ಸ್ಥಳದಲ್ಲಿಯೇ ತಾಯಿ ಮಗು ಸೇರಿ ಐವರು ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕರ್ಕಿ ಬಳಿ ನಡೆದಿದೆ.

    ಕುಮಟಾದ ಬಗ್ಗೋಣ ಕಮಲಾಕರ ಭಂಡಾರಿ (50), ಹೊನ್ನಾವರ ಕರ್ಕಿಯ ಮೋಹನ ಮೇಸ್ತಾ (50), ಕುಮಟಾ ನಾಗೂರಿನ ಸಮಂತ ಮಡಿವಾಳ (34), ಸಿಂಚನಾ ಮಡಿವಾಳ (6) ಹಾಗೂ ಹೊನ್ನಾವರ ನಗರೆಯ ನಾಗರಾಜ ನಾಯ್ಕ (26) ಮೃತ ದುರ್ದೈವಿಗಳು.

    ಕರ್ಕಿ ಬಳಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಈ ಅವಘಡ ಸಂಭವಿಸಿದೆ. ಟೆಂಪೋದಲ್ಲಿ 30ಕ್ಕೂ ಹೆಚ್ಚು ಜನರು ಪ್ರಯಾಣಿಸುತ್ತಿದ್ದರು. ವೇಗವಾಗಿದ್ದ ಟೆಂಪೋ ಕರ್ಕಿ ಬಳಿಕೆ ಬರುತ್ತಿದ್ದಂತೆ ಎದುರಿಗೆ ವೇಗವಾಗಿ ಬರುತ್ತಿದ್ದ ಟ್ಯಾಂಕರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಟೆಂಪೋ ನಜ್ಜುಗುಜ್ಜಾಗಿದ್ದು, ಮುಂಭಾಗದಲ್ಲಿ ಕುಳಿತ್ತಿದ್ದ ಕೆಲವರು ಹೊರ ಹಾರಿಬಿದ್ದಾರೆ. ಅಪಘಾತದಲ್ಲಿ ಐವರು ಸ್ಥಳದಲ್ಲಿಯೇ ಮೃಟ್ಟಿದ್ದು, 15 ಜನರ ಸ್ಥಿತಿ ಗಂಭಿರವಾಗಿದ್ದು, ಅವರನ್ನು ಹೊನ್ನಾವರ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ಘಟನಾ ಸ್ಥಳಕ್ಕೆ ಹೊನ್ನಾವರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಶಾಲಾ ಕ್ರೀಡಾಕೂಟಕ್ಕೆ ತೆರಳುತ್ತಿದ್ದ ಟೆಂಪೋ ಪಲ್ಟಿ – 15 ವಿದ್ಯಾರ್ಥಿಗಳಿಗೆ ಗಾಯ

    ಶಾಲಾ ಕ್ರೀಡಾಕೂಟಕ್ಕೆ ತೆರಳುತ್ತಿದ್ದ ಟೆಂಪೋ ಪಲ್ಟಿ – 15 ವಿದ್ಯಾರ್ಥಿಗಳಿಗೆ ಗಾಯ

    ಚಿತ್ರದುರ್ಗ: ಶಾಲಾ ಕ್ರೀಡಾಕೂಟದಲ್ಲಿ ಭಾಗವಹಿಸಲು ವಿದ್ಯಾರ್ಥಿಗಳು ತೆರಳುತ್ತಿದ್ದ ಟೆಂಪೋ ಪಲ್ಟಿಯಾಗಿ 15ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ಜಿಲ್ಲೆಯ ಚಳ್ಳಕೆರೆ ಸಮೀಪ ನಡೆದಿದೆ.

    ಚಳ್ಳಕೆರೆ ತಾಲೂಕಿನ ಚೌಳೂರು ಸರ್ಕಾರಿ ಪ್ರಾಥಮಿಕ ಶಾಲೆಯ ಶಾಲಾ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಲು ತೆರಳುತ್ತಿದ್ದ ವೇಳೆ ಅವಘಡ ಸಂಭವಿಸಿದೆ. ಘಟನೆಯಲ್ಲಿ 15 ವಿದ್ಯಾರ್ಥಿಗಳಿಗೆ ಗಂಭೀರ ಗಾಯವಾಗಿದ್ದು, ತಕ್ಷಣ ಚಳ್ಳಕೆರೆ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ಕರೆತರಲಾಯಿತು. ಆದರೆ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯದಿಂದ ಗಂಭೀರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿಗಳನ್ನು ವಾರ್ಡ್ ನಿಂದ ಶಿಪ್ಟ್ ಮಾಡಲು ಸ್ಟ್ರಚ್ಚರ್ ಕೂಡ ಇಲ್ಲದೇ ನಡೆಸಿಕೊಂಡೆ ಹೋದ ಅಮಾನವೀಯ ಘಟನೆ ಕೂಡ ನಡೆದಿದೆ.

    ಕಾರ್ಯಕ್ರಮದಲ್ಲಿ ಭಾಗವಹಿಸಲು ವಿದ್ಯಾರ್ಥಿಗಳನ್ನು ಖಾಸಗಿ ಟೆಂಪೋವೊಂದರಲ್ಲಿ ಚೌಳೂರಿನಿಂದ ಟಿ.ಎನ್.ಕೋಟೆ ಗ್ರಾಮಕ್ಕೆ ಕರೆತರಲಾಗುತ್ತಿತ್ತು. ಆದರೆ ಟೆಂಪೋ ಪಲ್ಟಿಯಾಗಲು ಕಾರಣವೇನು ಎಂದು ತಿಳಿದು ಬಂದಿಲ್ಲ. ಪರಶುರಾಂಪುರ ಠಾಣೆ ವ್ಯಾಪ್ತಿಯಲ್ಲಿ ಅಪಘಾತ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ  www.instagram.com/publictvnews

  • ಡಿವೈಡರ್ ದಾಟಿ ಟೆಂಪೋ ಮೇಲೆ ಬಿದ್ದ ಕಾರ್- ಇಬ್ಬರು ಚಾಲಕರ ದುರ್ಮರಣ

    ಡಿವೈಡರ್ ದಾಟಿ ಟೆಂಪೋ ಮೇಲೆ ಬಿದ್ದ ಕಾರ್- ಇಬ್ಬರು ಚಾಲಕರ ದುರ್ಮರಣ

    ಉಡುಪಿ: ಕಾರು ಮತ್ತು ಟೆಂಪೋ ಡಿಕ್ಕಿಯಾದ ಪರಿಣಾಮ ಚಾಲಕರಿಬ್ಬರು ಮೃತಪಟ್ಟ ಘಟನೆ ಉಡುಪಿಯಲ್ಲಿ ನಡೆದಿದೆ.

    ಉಡುಪಿಯ ಸಂತೆಕಟ್ಟೆಯಲ್ಲಿ ನಡೆದ ಅಪಘಾತದಲ್ಲಿ ಟೆಂಪೋ ಚಾಲಕ ಅಶೋಕ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರು ಚಾಲಕ ಅನೂಪ್ ಗಂಭೀರ ಗಾಯಕ್ಕೆ ಒಳಗಾಗಿದ್ದು ಕೆಎಂಸಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

    ರಾಷ್ಟ್ರೀಯ ರಸ್ತೆಯಲ್ಲಿದ್ದ ಗುಂಡಿ ತಪ್ಪಿಸಲು ಹೋಗಿ ಕಾರು ಡಿವೈಡರ್ ದಾಟಿ, ಉಡುಪಿಯಿಂದ ಕುಂದಾಪುರ ಕಡೆ ಬರುತ್ತಿದ್ದ ಟೆಂಪೋ ಮೇಲೆ ಬಿದ್ದಿದೆ. ಪರಿಣಾಮ ಟೆಂಪೋ ಚಾಲಕ ಅಶೋಕ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಟೆಂಪೋದಲ್ಲಿದ್ದ ಇಬ್ಬರಿಗೆ ಗಾಯವಾಗಿದ್ದು, ಕೆಎಂಸಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

    ಈ ಸಂಬಂಧ ಉಡುಪಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಕೆಲಕಾಲ ಸ್ಥಗಿತವಾಗಿದ್ದು ಪೊಲೀಸರು ಟ್ರಾಫಿಕ್ ಜಾಮ್ ಕ್ಲೀಯರ್ ಮಾಡಿದರು.

  • ನೀರು ನಿಂತಿದ್ದ ರಸ್ತೆಯಲ್ಲಿ ಟೆಂಪೋ ನುಗ್ಗಿಸಿದ ಚಾಲಕ – ಸೈಡ್ ಸಿಗದೇ ಡಿವೈಡರ್ ಮೇಲೆ ಹೋದ

    ನೀರು ನಿಂತಿದ್ದ ರಸ್ತೆಯಲ್ಲಿ ಟೆಂಪೋ ನುಗ್ಗಿಸಿದ ಚಾಲಕ – ಸೈಡ್ ಸಿಗದೇ ಡಿವೈಡರ್ ಮೇಲೆ ಹೋದ

    ಬೆಂಗಳೂರು: ನೀರು ನಿಂತಿದ್ದ ರಸ್ತೆಯಲ್ಲಿ ಟೆಂಪೋವೊಂದು ವೇಗವಾಗಿ ಬಂದಿದ್ದು, ಭಾರೀ ಅನಾಹುತವೊಂದು ತಪ್ಪಿದ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲದಲ್ಲಿ ನಡೆದಿದೆ.

    ನೆಲಮಂಗಲ ತಾಲೂಕಿನ ದೊಡ್ಡೇರಿ ಬಳಿ ಈ ಭಯಾನಕ ಅಪಘಾತ ಸಂಭವಿಸಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ವಿಡಿಯೋದಲ್ಲೇನಿದೆ?: ನೀರು ನಿಂತಿದ್ದ ರಸ್ತೆಯಲ್ಲಿ ಟೆಂಪೋ ಚಾಲಕ ಅತಿ ವೇಗದಿಂದ ಬಂದಿದ್ದಾನೆ. ಟೆಂಪೋ ಮುಂದೆಯೊಂದು ಕಾರು ಚಲಿಸುತ್ತಿದ್ದು, ಕಾರನ್ನು ಹಿಂದಿಕ್ಕುವ ಭರದಲ್ಲಿ ರಸ್ತೆ ಬದಿಯ ತಡೆಗೋಡೆಯ ಮೇಲೆಯೇ ತನ್ನ ಟೆಂಪೋವನ್ನು ಚಲಾಯಿಸಿದ್ದಾನೆ. ಪರಿಣಾಮ ಕಾರಿಗೆ ಡಿಕ್ಕಿ ಹೊಡೆದು, ಅಡ್ಡಾದಿಡ್ಡಿಯಾಗಿ ಚಲಿಸಿ ಟೆಂಪೋ ಮುಂದೆ ಹೋಗಿ ನಿಂತಿದೆ.

    ಘಟನೆಯಲ್ಲಿ ಕಾರು ಚಾಲಕ ಮತ್ತು ಅದರಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ. ಚಾಲಕನ ನಿಯಂತ್ರಣ ತಪ್ಪಿ ಈ ಅವಘಡ ಸಂಭವಿಸಿರಬಹುದು ಎನ್ನಲಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಹರಿದಾಡುತ್ತಿದ್ದು, ದೃಶ್ಯ ನೋಡಿದ್ರೆ ಮೈ ಜುಂ ಅನ್ನುತ್ತೆ.

    ಘಟನೆಯ ಬಗ್ಗೆ ಇದೂವರೆಗೆ ಯಾವುದೇ ದೂರು ದಾಖಲಾಗಿಲ್ಲ.

  • ಕೂಲಿ ಕಾರ್ಮಿಕರನ್ನು ಕರೆದುಕೊಂಡು ಹೋಗ್ತಿದ್ದ ಟೆಂಪೋ ಪಲ್ಟಿ- ಇಬ್ಬರ ದುರ್ಮರಣ

    ಕೂಲಿ ಕಾರ್ಮಿಕರನ್ನು ಕರೆದುಕೊಂಡು ಹೋಗ್ತಿದ್ದ ಟೆಂಪೋ ಪಲ್ಟಿ- ಇಬ್ಬರ ದುರ್ಮರಣ

    ಯಾದಗಿರಿ: ಕೂಲಿ ಕಾರ್ಮಿಕರನ್ನು ಕರೆದುಕೊಂಡು ಹೋಗುತ್ತಿದ್ದ ಟೆಂಪೋ ವಾಹನವೊಂದು ಪಲ್ಟಿಯಾಗಿ ಇಬ್ಬರು ಮೃತಪಟ್ಟ ಜಿಲ್ಲೆಯ ಗುರುಮಿಟ್ಕಲ್ ತಾಲೂಕಿನ ಸಿದ್ದಾಪುರ ಹತ್ತಿರ ನಡೆದಿದೆ.

    ಸಾಬಣ್ಣ, ನಾಗಮ್ಮ ಮೃತಪಟ್ಟ ಇಬ್ಬರು ಕಾರ್ಮಿಕರು. ಮೃತರು ಗಾಜರಕೋಟ್ ಗ್ರಾಮದ ನಿವಾಸಿಗಳಾಗಿದ್ದು, ಗಾಜರಕೋಟ್ ಗ್ರಾಮದಿಂದ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ದುಗನೂರ ಗ್ರಾಮದ ಕಡೆ ಕೂಲಿ ಕೆಲಸಕ್ಕಾಗಿ ತೆರಳುತ್ತಿದ್ದರು. ಘಟನೆಯಲ್ಲಿ ನಾಲ್ವರಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ಗುರುಮಠಕಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಸ್ಥಳಕ್ಕೆ ಗುರುಮಿಟ್ಕಲ್ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಚೇಸಿಂಗ್ ವೇಳೆ ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಣೆ ಮಾಡುತ್ತಿದ್ದ ಟೆಂಪೋ ಪಲ್ಟಿ

    ಚೇಸಿಂಗ್ ವೇಳೆ ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಣೆ ಮಾಡುತ್ತಿದ್ದ ಟೆಂಪೋ ಪಲ್ಟಿ

    ಕೋಲಾರ: ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಣೆ ಮಾಡುತ್ತಿದ್ದ ಟೆಂಪೋ ಪಲ್ಟಿಯಾಗಿರುವ ಘಟನೆ ಜಿಲ್ಲೆ ಬಂಗಾರಪೇಟೆ ಪಟ್ಟಣದ ಹೊರವಲಯದಲ್ಲಿ ನಡೆದಿದೆ.

    ಅಕ್ರಮವಾಗಿ ಸುಮಾರು 75 ಮೂಟೆ ಪಡಿತರ ಅಕ್ಕಿಯನ್ನು ಚುನಾವಣಾ ಅಧಿಕಾರಿಗಳ ಕಣ್ತಪ್ಪಿಸಿ ಸಾಗಾಣೆ ಮಾಡುತ್ತಿದ್ದರು. ಈ ವೇಳೆ ಚುನಾವಣಾ ಅಧಿಕಾರಿಗಳಿಗೆ ಮಾಹಿತಿ ತಿಳಿದು ಟೆಂಪೋವನ್ನು ಚೇಸಿಂಗ್ ಮಾಡಿದ್ದಾರೆ. ನಂತರ ಬಂಗಾರಪೇಟೆ ಪಟ್ಟಣದ ಹೊರವಲಯದಲ್ಲಿ ಹೋಗುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ಅಕ್ಕಿ ತುಂಬಿದ್ದ ಟೆಂಪೋ ಪಲ್ಟಿಯಾಗಿದೆ.

    ಈ ಸಂಬಂಧ ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಧಿಕಾರಿಗಳು 75 ಅಕ್ಕಿ ಮೂಟೆ ಮತ್ತು ಲಾರಿಯನ್ನು ವಶಕ್ಕೆ ಪಡೆದಿದ್ದಾರೆ. ಆದರೆ ಘಟನೆಯ ಬಳಿಕ ಟೆಂಪೋ ಚಾಲಕ ಪರಾರಿಯಾಗಿದ್ದಾನೆ.

  • ಅಪಘಾತವಾಗಿ ಗಾಯಗೊಂಡು ಸಾವು-ಬದುಕಿನ ನಡುವೆ ಹೋರಾಡ್ತಿದ್ದರೂ ಸಹಾಯಕ್ಕೆ ಬಾರದೆ ಮಾನವೀಯತೆ ಮರೆತ್ರು

    ಅಪಘಾತವಾಗಿ ಗಾಯಗೊಂಡು ಸಾವು-ಬದುಕಿನ ನಡುವೆ ಹೋರಾಡ್ತಿದ್ದರೂ ಸಹಾಯಕ್ಕೆ ಬಾರದೆ ಮಾನವೀಯತೆ ಮರೆತ್ರು

    ಹಾವೇರಿ: ಸಾವು-ಬದುಕಿನ ನಡುವೆ ಹೋರಾಡ್ತಿದ್ದವರನ್ನು ಆಸ್ಪತ್ರೆಗೆ ದಾಖಲಿಸಲು ಜನರು ಹಿಂದೇಟು ಹಾಕಿದ ಘಟನೆ ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಮಾದವನಾರಾಯಣಪುರ ಗ್ರಾಮದಲ್ಲಿ ನಡೆದಿದೆ.

    ಬೈಕ್ ಮತ್ತು ಟೆಂಪೋ ನಡುವೆ ಮುಖಾಮುಖಿ ಡಿಕ್ಕಿಯ ಪರಿಣಾಮ ಓರ್ವ ಮೃತಪಟ್ಟಿದ್ರೆ, ಮತ್ತೋರ್ವ ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತ ವ್ಯಕ್ತಿಯನ್ನು 38 ವರ್ಷ ಗಂಗಪ್ಪ ಭಜಂತ್ರಿ ಎಂದು ಗುರುತಿಸಲಾಗಿದೆ.


    ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡು ನಡುರಸ್ತೆಯಲ್ಲೇ 37 ವರ್ಷ ಸುರೇಶಪ್ಪ ಗೊರವರವರು ಸಾವು-ಬದುಕಿನ ನಡುವೆ ಹೋರಾಡ್ತಿದ್ದರು. ಆದ್ರೆ ಗಾಯಾಳುವನ್ನ ಮುಟ್ಟಿದ್ರೆ ಮೈಮೇಲೆ ಕೇಸ್ ಬರುತ್ತೆ ಜನರು ಮಾತನಾಡಿಕೊಳ್ತಿದ್ದರೇ ವಿನಃ ಯಾರೋಬ್ಬರೂ ಅವರ ಸಹಾಯಕ್ಕೆ ಬರಲಿಲ್ಲ.

    ಬರೋಬ್ಬರಿ ಅರ್ಧ ಗಂಟೆ ನಂತರ ಅಂಬ್ಯುಲೆನ್ಸ್ ಸ್ಥಳಕ್ಕೆ ದೌಡಾಯಿಸಿದ್ದು, ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಗುತ್ತಲ ಪಟ್ಟಣದಿಂದ ರಾಣೇಬೆನ್ನೂರು ನಗರದತ್ತ ತೆರಳ್ತಿದ್ದ ಈ ಘಟನೆ ಸಂಭವಿಸಿದೆ.

    ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

  • ಬೆಂಗ್ಳೂರಲ್ಲಿ ಟೆಂಪೊಗೆ ಮಿನಿ ಬಸ್ ಡಿಕ್ಕಿ- ಮೂವರಿಗೆ ಗಂಭೀರ ಗಾಯ

    ಬೆಂಗ್ಳೂರಲ್ಲಿ ಟೆಂಪೊಗೆ ಮಿನಿ ಬಸ್ ಡಿಕ್ಕಿ- ಮೂವರಿಗೆ ಗಂಭೀರ ಗಾಯ

    ಬೆಂಗಳೂರು: ಚಾಲಕನ ನಿಯಂತ್ರಣ ತಪ್ಪಿ 407 ಟೆಂಪೊಗೆ ಮಿನಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ನವರಂಗ್ ಸಿಗ್ನಲ್ ಬಳಿ ನಡೆದಿದೆ.

    ಡಿಕ್ಕಿ ಹೊಡೆದ ರಭಸಕ್ಕೆ ಟೆಂಪೊ ಪಲ್ಟಿ ಹೊಡೆದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಇನ್ನು ಬಸ್ ಮಲ್ಲೇಶ್ವರಂನಿಂದ ವಿಜಯನಗರಕ್ಕೆ ಹೋಗುತ್ತಿತ್ತು ಎನ್ನಲಾಗಿದೆ.

    ಸದ್ಯ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತ ನಡೆದ ಕಾರಣ ಕೆಲ ಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು.

    ಈ ಸಂಬಂಧ ಮಲ್ಲೇಶ್ವರಂ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಬೈಕ್, ಟೆಂಪೋ ಮುಖಾಮುಖಿ ಡಿಕ್ಕಿ; ಮೂವರ ದುರ್ಮರಣ

    ಬೈಕ್, ಟೆಂಪೋ ಮುಖಾಮುಖಿ ಡಿಕ್ಕಿ; ಮೂವರ ದುರ್ಮರಣ

    ಕಲಬುರಗಿ: ಬೈಕ್ ಮತ್ತು ಟೆಂಪೋ ಮಧ್ಯೆ ಮುಖಾಮುಖಿ ಡಿಕ್ಕಿ ಉಂಟಾದ ಪರಿಣಾಮ ಸ್ಥಳದಲ್ಲೇ ಮೂವರು ಬೈಕ್ ಸವಾರರು ಮೃತಪಟ್ಟಿರುವ ಘಟನೆ ಕಲಬುರಗಿ ತಾಲೂಕಿನ ನಾವದಗಿ ಗ್ರಾಮದ ಬಳಿ ಕಳೆದ ರಾತ್ರಿ ನಡೆದಿದೆ.

    ಶರಣು (25), ಈರಪ್ಪಾ(26) ಹಾಗೂ ರವಿಕುಮಾರ್ ಕುಲಕರ್ಣಿ(28) ಮೃತ ದುರ್ದೈವಿಗಳು. ಮೃತರು ಚಿಂಚೋಳಿ ತಾಲೂಕಿನ ಬುಯ್ಯಾರ್ ಗ್ರಾಮದವರು ಎಂದು ತಿಳಿದುಬಂದಿದೆ. ಕಳೆದ ರಾತ್ರಿ ಕಲಬುರಗಿ ನಗರದಿಂದ ಬುಯ್ಯಾರ್ ಗ್ರಾಮಕ್ಕೆ ತೆರಳುತ್ತಿದ್ದಾಗ ಈ ಅಪಘಾತ ನಡೆದಿದೆ.

    ಈ ಬಗ್ಗೆ ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.