Tag: Telugu

  • RRR- ಸ್ಟಾರ್ ವಾರ್ ಬೆಂಕಿಗೆ ತಣ್ಣನೆಯ ನೀರು ಸುರಿದ ನಿರ್ದೇಶಕ ರಾಜಮೌಳಿ

    RRR- ಸ್ಟಾರ್ ವಾರ್ ಬೆಂಕಿಗೆ ತಣ್ಣನೆಯ ನೀರು ಸುರಿದ ನಿರ್ದೇಶಕ ರಾಜಮೌಳಿ

    ಭಾರತೀಯ ಸಿನಿಮಾ ರಂಗದಲ್ಲೇ ಸ್ಟಾರ್ ವಾರ್ ಗೆ ತೆಲುಗು ಸಿನಿಮಾ ರಂಗ ಫೇಮಸ್. ಸಮಯ ಸಿಕ್ಕಾಗೆಲ್ಲ ಒಬ್ಬ ಕಲಾವಿದ ಮತ್ತೊಬ್ಬ ಕಲಾವಿದನಿಗೆ ಕಾಲೆಳೆಯುತ್ತಲೇ ಇರುತ್ತಾರೆ. ಸಿನಿಮಾಗಳಲ್ಲಿ ಡೈಲಾಗ್ ಮೂಲಕ ಟಾಂಗ್ ಕೊಡುವ ಸಂಪ್ರದಾಯ ಮೊದಲಿನಿಂದಲೂ ತೆಲುಗು ಚಿತ್ರೋದ್ಯಮದಲ್ಲಿದೆ. ಕೇವಲ ಕಲಾವಿದರು ಮಾತ್ರವಲ್ಲ ಅಭಿಮಾನಿಗಳು ಕೂಡ ಅದೇ ಸಂಪ್ರದಾಯವನ್ನೇ ಮುಂದುವರೆಸಿಕೊಂಡು ಬಂದಿದ್ದಾರೆ. ಇದನ್ನು ಸೂಕ್ಷ್ಮವಾಗಿ ಗಮನಿಸಿದ್ದ ನಿರ್ದೇಶಕ ರಾಜಮೌಳಿ, ಆ ಜೇನುಗೂಡಿಗೆ ಕೈ ಹಾಕಿ ಕಚ್ಚಿಸಿಕೊಳ್ಳದೇ ಭರಪೂರ್ ತುಪ್ಪವನ್ನೇ ಪಡೆದುಕೊಂಡಿದ್ದಾರೆ. ಇದನ್ನೂ ಓದಿ : RRR ಸಿನೆಮಾ ನೋಡಲು ಬಾಗಿಲು ಮುರಿದು ಚಿತ್ರಮಂದಿರಕ್ಕೆ ನುಗ್ಗಿದ ಪ್ರೇಕ್ಷಕರು

    ಜೂನಿಯರ್ ಎನ್.ಟಿ.ಆರ್ ಮತ್ತು ರಾಮಚರಣ್ ತೇಜ ಸಿನಿಮಾಗಳು ಯಾವತ್ತಿಗೂ ಪೈಪೋಟಿ ಮಾಡುತ್ತಿವೆ. ಇಬ್ಬರೂ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿರುವ ನಟರು. ಈ ಹಿಂದಿನ ಸಿನಿಮಾಗಳಲ್ಲಿ ಪಂಚಿಂಗ್ ಡೈಲಾಗ್ ಮೂಲಕ ಒಬ್ಬರನ್ನೊಬ್ಬರು ಟೀಕಿಸಿಕೊಂಡಿದ್ದಾರೆ. ಕಾಲೆಳೆದಿದ್ದಾರೆ. ಟಾಂಗ್ ಕೊಡುವಂತಹ ಡೈಲಾಗ್ ಹೊಡೆದಿದ್ದಾರೆ. ಇಂತಹ ಇಬ್ಬರು ಸ್ಟಾರ್ ನಟರನ್ನು ಒಟ್ಟಾಗಿಸಿ, ಸಂಭಾಳಿಸಿ ‘ಆರ್.ಆರ್.ಆರ್’ ಸಿನಿಮಾ ಮಾಡಿ ಗೆದ್ದಿದ್ದಾರೆ ರಾಜಮೌಳಿ. ಇದನ್ನೂ ಓದಿ: RRR ಬ್ಯಾನ್ ಮಾಡಿದ್ರೆ ಕೆಜಿಎಫ್‍ಗಿದೆ ಕಂಟಕ

    ಈ ಇಬ್ಬರೂ ಅಭಿಮಾನಿಗಳ ನಾಡಿಮಿಡಿತವನ್ನು ಸರಿಯಾಗಿ ಬಳಸಿಕೊಂಡು, ಹಾಗೆಯೇ ಸಿನಿಮಾದಲ್ಲೂ ದೃಶ್ಯಗಳನ್ನು ಹೆಣೆದಿದ್ದಾರೆ. ಆಯಾ ಪಾತ್ರಕ್ಕೆ ಏನೆಲ್ಲ ಬಿಲ್ಡ್ ಅಪ್ ಬೇಕಿತ್ತೋ ಅಷ್ಟನ್ನೂ ದಯಪಾಲಿಸಿದ್ದಾರೆ. ಯಾರ ಅಭಿಮಾನಿಗೂ ನೋವಾಗದಂತೆ ಚಿತ್ರಿಸಿದ್ದಾರೆ. ಹಾಗಾಗಿ ಇಬ್ಬರೂ ಕಲಾವಿದರ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಇದನ್ನೂ ಓದಿ: ‘ಗಂಗೂಬಾಯಿ’ ಸಿನಿಮಾ ನೋಡಲು ಇಡೀ ಥಿಯೇಟರ್ ಬುಕ್ ಮಾಡಿದ ಪಾಕ್ ನಟ

    ಥಿಯೇಟರ್ ಒಳಗೆ ಹೀಗಿದ್ದರೆ ಚಿತ್ರಮಂದಿರದ ಹೊರಗೆ ಮತ್ತೊಂದು ರೀತಿಯ ವಾತಾವರಣ ಸೃಷ್ಟಿಯಾಗಿದೆ. ತಮ್ಮ ತಮ್ಮ ನೆಚ್ಚಿನ ನಟರ ಪೋಸ್ಟರ್ ಗೆ ಹಾಲು, ಹೂವು ಹಾಕುವುದು, ಪೂಜೆ ಸಲ್ಲಿಸುವುದು ಇದು ಇದ್ದೇ ಇದೆ. ಕೆಲವು ಕಡೆ ರಾಮ್ ಚರಣ್ ತೇಜ ಅವರ ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ಪ್ರಾಮುಖ್ಯತೆ ಕೊಟ್ಟರೆ, ಮತ್ತೊಂದು ಕಡೆ ಜೂನಿಯರ್ ಎನ್.ಟಿ.ಆರ್ ಗೆ ಮಹತ್ವ ನೀಡಿದ್ದಾರೆ. ಆದರೆ, ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಒಟ್ಟಾಗಿಯೇ ಸಿನಿಮಾ ನೋಡುತ್ತಿದ್ದಾರೆ. ಇಂಥದ್ದೊಂದು ಮಹತ್ವದ ಬದಲಾವಣೆಗೆ ‘ಆರ್.ಆರ್.ಆರ್’ ಕಾರಣವಾಗಿದ್ದಂತೂ ಸುಳ್ಳಲ್ಲ.

    ಕೇವಲ ಸಿನಿಮಾ ಮಾಡಿ ಗೆಲ್ಲುವುದಲ್ಲ, ಸ್ಟಾರ್ ಗಳನ್ನು ನಿಭಾಯಿಸಿಕೊಂಡು ಅಭಿಮಾನಿಗಳನ್ನು ಸಮಾಧಾನಿಸುವುದು ಸಿನಿಮಾ ಗೆಲುವಿಗಿಂತ ದೊಡ್ಡದರು. ಅದರಲ್ಲಿ ರಾಜಮೌಳಿ ಭಾರೀ ಅಂತರದಿಂದ ಗೆದ್ದಿದ್ದಾರೆ.

  • ಕನ್ನಡದ ಹುಡುಗನ ಚಿತ್ರಕ್ಕೆ ಹನ್ಸಿಕಾ ಮೊಟ್ವಾನಿ ಹೀರೋಯಿನ್

    ಕನ್ನಡದ ಹುಡುಗನ ಚಿತ್ರಕ್ಕೆ ಹನ್ಸಿಕಾ ಮೊಟ್ವಾನಿ ಹೀರೋಯಿನ್

    ಚಂದನವನದಿಂದ ಗುರುತಿಸಿಕೊಂಡು ನೆರೆಯ ತಮಿಳು, ತೆಲುಗು ಹಾಗೂ ಹಿಂದಿ ಭಾಷೆಗಳಲ್ಲಿ ಮಿಂಚಿರುವ ಕನ್ನಡದ ಅನೇಕ ಪ್ರತಿಭೆಗಳಿವೆ. ಆ ಸಾಲಿಗೆ ನವ ಪ್ರತಿಭೆ ಮೈಸೂರಿನ ಅನಿಲ್‌ ಸಿದ್ದು ಸೇರ್ಪಡೆಯಾಗುತ್ತಾರೆ. ಹಾಗಂತ ಇವರಿಗೆ ತಮಿಳು ಚಿತ್ರರಂಗ ಹೊಸದೇನಲ್ಲ. ಇದಕ್ಕೂ ಮುನ್ನ ಮಣಿರತ್ನಂ ನಿರ್ದೇಶನದ ’ಕಾರ್ಟ್‌ವಿಲಯಾಡು’, ಎ.ಆರ್.ಮುರಗದಾಸ್ ಅವರ ’ಕತ್ತಿ’ ಹಾಗೂ ಶಂಕರ್ ಆಕ್ಷನ್ ಕಟ್ ಹೇಳಿರುವ ’ಐ’ ಚಿತ್ರಗಳಲ್ಲಿ ಸಣ್ಣ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಇದನ್ನೂ ಓದಿ : ಕೃತ್ಯದಲ್ಲಿ ನಾಯಕ ಆಸ್ಕರ್ ಕೃಷ್ಣ ಕೈವಾಡ

    ಅನಿಲ್‌ ಸಿದ್ದು ಮಾಡಲಿಂಗ್‌ ಕ್ಷೇತ್ರದಿಂದ ಬಂದಿರುವ ಇವರು, ’ಮುಮ್ತಾಜ್’ ’ಸಿಲಿಕಾನ್ ಸಿಟಿ’ ಮತ್ತು ’ಪಡ್ಡೆಹುಲಿ’ಸಿನಿಮಾಗಳಲ್ಲಿ ನೆಗಟೀವ್ ಶೇಡ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೆಲ್ಲಾ ಅನುಭವ ಹಾಗೂ ತಮ್ಮದೆ ’ಗಾಡ್ ಕಿಸ್ ಯು’ ಎಂಬ ಯೂನಿಕ್ ಸ್ಟೈಲ್ ಮುಖಾಂತರ ಗುರುತಿಸಿಕೊಂಡಿದ್ದರಿಂದ ’ಎ+’ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದರು. ಹಾಗೆಯೇ ’ವಿರಾಟಪರ್ವ’ದಲ್ಲಿ ನಾಯಕಿ ಅನ್ವಿತಾ ಸಾಗರ್ ಜೋಡಿಯಾಗಿದ್ದು, ಅದು ಇಷ್ಟರಲ್ಲೆ ತೆರೆಗೆ ಬರಲಿದೆ. ಇತ್ತೀಚೆಗೆ ಬಿಡುಗಡೆಗೊಂಡು ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವ ’ವರದ’ದಲ್ಲಿ ವಿನೋದ್ ಪ್ರಭಾಕರ್ ಎದುರು ಭ್ರಷ್ಟ ಶಾಸಕನಾಗಿ ನಟಿಸಿದ್ದರು.

    ವಿಕ್ರಂ, ಸಿಂಬು, ವಿಜಯ್‌ ಸೇತುಪತಿ ಚಿತ್ರಗಳನ್ನು ನಿರ್ದೇಶನ ಮಾಡಿರುವ ವಿಜಯಚಂದರ್ ಈಗ ನಿರ್ಮಾಣ ಸಂಸ್ಥೆಯನ್ನು ತೆರೆದಿದ್ದಾರೆ. ಇವರ ನಟನೆಯನ್ನು ನೋಡಿ, ಕರೆಸಿಕೊಂಡು ತಾವು ನಿರ್ಮಾಣ ಮಾಡುತ್ತಿರುವ ಹೊಸ ಚಿತ್ರಕ್ಕೆ ಕಂಪೆನಿ ಸಿಇಓ ಪಾತ್ರವನ್ನು ನೀಡಿ ಮುಖ್ಯ ಪಾತ್ರಕ್ಕೆ ಆಯ್ಕೆ ಮಾಡಿದ್ದಾರೆ. ಇವರ ಅಧೀನದಲ್ಲಿ ಕೆಲಸ ಮಾಡುವ ಪಾತ್ರದಲ್ಲಿ ಹನ್ಸಿಕಾ ಮೋಟ್ವಾಣಿ ನಟನೆ ಇದೆ. ಇದನ್ನೂ ಓದಿ: ‘ದಿ ಕಾಶ್ಮೀರ್ ಫೈಲ್ಸ್’ ರಿಯಲ್ ಸ್ಟೋರಿ : ಅಕ್ಕಿ ಡ್ರಮ್ ನಲ್ಲಿ ಕೊಲ್ಲಲ್ಪಟ್ಟ ನಿಜವಾದ ಕಾಶ್ಮೀರಿ ಪಂಡಿತ ಇವರು

    ತಮಿಳನಲ್ಲಿ ಸೂಪರ್ ಹಿಟ್ ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿರುವ ಕೆ.ಎಸ್.ರವಿಕುಮಾರ್ ಪುತ್ರರಾದ ಶರವಣ-ಶಬರಿ ಜಂಟಿಯಾಗಿ ನಿರ್ದೇಶನ ಮಾಡುತ್ತಿದ್ದಾರೆ. ಛಾಯಾಗ್ರಹಣ ಶಕ್ತಿ ಅವರದು. ಹೆಸರಾಂತ ತಂತ್ರಜ್ಘರು ಸಿನಿಮಾದಲ್ಲಿ ಕೆಲಸ ಮಾಡುತ್ತಿರುವುದು ವಿಶೇಷ. ಈಗಾಗಲೇ ಒಂದು ಹಂತದ ಚಿತ್ರೀಕರಣ ಮುಗಿದಿದೆ.

  • ಅಪ್ಪುಗೆ ಯಾವುದೇ ರೀತಿಯ Attitude ಇರಲಿಲ್ಲ: ಹಿರಿಯ ನಟ ಸುಮನ್

    ಅಪ್ಪುಗೆ ಯಾವುದೇ ರೀತಿಯ Attitude ಇರಲಿಲ್ಲ: ಹಿರಿಯ ನಟ ಸುಮನ್

    ಬೆಂಗಳೂರು: ಸ್ಯಾಂಡಲ್‍ವುಡ್ ಪವರ್ ಸ್ಟಾರ್ ದಿ.ಪುನೀತ್ ರಾಜ್ ಕುಮಾರ್ ಅವರಿಗೆ ಯಾವುದೇ ರೀತಿಯ ಆಟಿಟ್ಯೂಡ್ ಇರಲಿಲ್ಲ. ಅವರ ಜೀವನ ಶೈಲಿ ಹಲವರಿಗೆ ಮಾರ್ಗದರ್ಶನ ಎಂದು ತೆಲುಗು ಹಿರಿಯ ನಟ ಸುಮನ್ ಹೇಳಿದರು.

    ಅಪ್ಪು ಹುಟ್ಟುಹಬ್ಬದ ಪ್ರಯುಕ್ತ ಇಂದು ಅವರ ಸಮಾಧಿಗೆ ಬೇಟಿ ಕೊಟ್ಟ ಬಳಿಕ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಅಪ್ಪು ಅಗಲಿಕೆ ಸಿನಿಮಾ ಇಂಡಸ್ಟ್ರಿಗೆ ದೊಡ್ಡ ಲಾಸ್ ಆಗಿದೆ. ಇಂದು ಪುನೀತ್ ರಾಜ್ ಕುಮಾರ್ ಅವರ ಜನ್ಮದಿನ. ಅವರ ಸಮಾಜಸೇವೆ ಅವರ ಚಿಂತನೆ ತುಂಬಾ ಮೆಚುರ್ಡ್ ಆಗಿದೆ. ನಟನೆ ಜೊತೆಗೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು ಎಂದು ಭಾವುಕರಾದರು. ಇದನ್ನೂ ಓದಿ: ಅಪ್ಪು ಸಮಾಧಿ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್‍ಕುಮಾರ್

    ಚಿಕ್ಕ ವಯಸ್ಸಿನಲ್ಲೆ ತುಂಬಾ ಮೆಚುರ್ಡ್ ಥಿಂಕಿಂಗ್ ಅವರಲ್ಲಿತ್ತು. ತುಂಬಾ ಚಿಕ್ಕ ವಯಸ್ಸಿನಲ್ಲಿ ಈ ರೀತಿ ಆಗಿರೋದು ನೋವು ತಂದಿದೆ. ಅಪ್ಪುಗೆ ಯಾವುದೇ ರೀತಿಯ ಆಟ್ಯಿಡ್ಯೂಡ್ ಇರಲಿಲ್ಲ. ಅವರ ಜೀವನ ಶೈಲಿ ಹಲವರಿಗೆ ಮಾರ್ಗದರ್ಶನ ಆಗಿದೆ ಎಂದು ಹೇಳುತ್ತಾ ಇಂದು ಜೇಮ್ಸ್ ರಿಲೀಸ್ ಆಗಿದೆ ಶುಭ ಹಾರೈಸುತ್ತೇವೆ ಅಂದ್ರು. ಇದನ್ನೂ ಓದಿ: ಪುನೀತ್ ರಾಜ್‍ಕುಮಾರ್ ಹುಟ್ಟಹುಬ್ಬ- ಬಿಎಸ್‍ವೈ, ಬೊಮ್ಮಾಯಿ ಹೇಳಿದ್ದೇನು..?

    ಇಂದು ಪುನೀತ್‍ಗೆ 47 ವರ್ಷದ ಹುಟ್ಟುಹಬ್ಬವಾಗಿದ್ದು, ಇಂದೇ ಅಪ್ಪು ನಟನೆಯ ಕೊನೆಯ ಸಿನಿಮಾ ಜೇಮ್ಸ್ ಕೂಡ ರಿಲೀಸ್ ಆಗಿದೆ. ಈ ಮೂಲಕ ಅಭಿಮಾನಿಗಳ ಸಂಭ್ರಮ ಇಮ್ಮಡಿಯಾಗಿದೆ. ಆದರೆ ಈ ನಡುವೆ ಅಪ್ಪು ಇಲ್ಲ ಅನ್ನೋ ನೋವು ಕೂಡ ಅಭಿಮಾನಿಗಳಲ್ಲಿದೆ. ರಾಜ್ಯದ ಥಿಯೇಟರ್ ಗಳ್ಲಿ ಜೇಮ್ಸ್ ಜಾತ್ರೆ ಈಗಾಗಲೇ ಆರಂಭವಾಗಿದ್ದು, ಅಪ್ಪು ಚಿತ್ರ ನೋಡಿ ಕರುನಾಡು ಕಣ್ಣಿರಾಗಿದೆ. ಇದನ್ನೂ ಓದಿ: ಡಾ.ಪುನೀತ್ ರಾಜ್‍ಕುಮಾರ್ 47ನೇ ಜನ್ಮದಿನ – ಸಮಾಧಿ ಬಳಿ ಕೇಕ್ ಕತ್ತರಿಸಿದ ದೊಡ್ಮನೆ ಕುಟುಂಬ

  • ಸಮಂತಾ ಯಾಕಿಂಗ್ ಆದೆ? ಗರಂ ಆದ ಅಭಿಮಾನಿಗಳು

    ಸಮಂತಾ ಯಾಕಿಂಗ್ ಆದೆ? ಗರಂ ಆದ ಅಭಿಮಾನಿಗಳು

    ಕ್ಷಿಣದ ಸಿನಿಮಾ ರಂಗದಲ್ಲಿ ಸಮಂತಾ ಅವರದ್ದೇ ಹವಾ. ಕುಂತರೂ, ನಿಂತರೂ ಸುದ್ದಿ ಆಗುತ್ತಾರೆ. ಅದರಲ್ಲೂ ಡಿವೋರ್ಸ್ ಪಡೆದ ನಂತರ ಪದೇ ಪದೇ ಅಕ್ಕಿನೇನ ಕುಟುಂಬದ ಅಭಿಮಾನಿಗಳ ಕಂಗೆಣ್ಣಿಗೆ ಗುರಿಯಾಗುತ್ತಿದ್ದಾರೆ. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ ಸಿನಿಮಾ: ಕ್ಷಮೆ ಕೋರಿದ ಪ್ರಕಾಶ್ ಬೆಳವಾಡಿ

    ಇತ್ತೀಚೆಗಷ್ಟೇ ಅವರು ಸಮಾರಂಭವೊಂದರಲ್ಲಿ ಹಸಿರು ಬಣ್ಣದ ಡಿಸೈನರ್ ಗೌನ್ ಧರಿಸಿ ಭಾಗಿಯಾಗಿದ್ದರು. ಸಖತ್ ಹಾಟ್ ಹಾಟ್ ಆಗಿ ಕಾಣಿಸಿಕೊಂಡಿದ್ದ ಸಮಂತಾ ಅವರು ಅಲ್ಲಿರುವ ಕ್ಯಾಮೆರಾಗಳಿಗೆ ಆಹಾರವಾದರು. ಅವು ಸೋಷಿಯಲ್ ಮೀಡಿಯಾದಲ್ಲೂ ವೈರಲ್ ಆದವು. ಆ ಫೋಟೋಗಳನ್ನು ಕಂಡ ಅಭಿಮಾನಿಗಳು ‘ಏನಾಗಿದೆ ನಿಮಗೆ? ಹಣಕ್ಕಾಗಿ ಏನೇನಲ್ಲ ಮಾಡ್ತಿದ್ದೀರಿ?’ ಎಂದು ಖಾರವಾಗಿಯೇ ಪ್ರಶ್ನಿಸಿದ್ದಾರೆ. ಇಷ್ಟೊಂದು ಗ್ಲಾಮರೆ ಆಗಿ ಕಾಣುವ ಅಗತ್ಯ ಏನಿತ್ತು ಎಂದು ಅವರು ನೇರ ಸವಾಲು ಹಾಕಿದ್ದಾರೆ. ಇದನ್ನೂ ಓದಿ : ‘ಪುಷ್ಪ ಪಾರ್ಟ್ 10’ ಸಿನಿಮಾಗೆ ನಟ ಮಾಸ್ಟರ್ ಆನಂದ್ ಮಗಳು ಹೀರೋಯಿನ್

    ಸಮಂತಾ ತಮ್ಮ ಪಾಡಿಗೆ ತಾವು ಕೆಲಸ ಮಾಡುತ್ತಿದ್ದರೆ ಈ ಅಭಿಮಾನಿಗಳು ಮಾತ್ರ ಅವರನ್ನು ಸುಮ್ಮನೆ ಬಿಡುತ್ತಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಸಮಂತಾ ಕುರಿತಾದ ಯಾವುದೇ ವಿಡಿಯೋ ಅಥವಾ ಫೋಟೋ ಬಂದರೆ ಸಾಕು, ಸಾವಿರ ಸಾವಿರ ಸರದಿಯಲ್ಲಿ ಸಂದೇಶ ರವಾನಿಸುತ್ತಾರೆ. ಹಸಿರು ಬಣ್ಣದ ಡಿಸೈನರ್ ಗೌನ್ ನಲ್ಲಿ ಸಮಂತಾ ಬೋಲ್ಡ್ ಅಂಡ್  ಸೆಕ್ಸಿ ಲುಕ್ ನಲ್ಲಿ ಪೋಸ್ ಕೊಟ್ಟಿದ್ದು ಮತ್ತು ಸಖತ್ ಹಾಟ್ ಹಾಟ್ ಆಗಿಯೂ ಕಾಣಿಸಿಕೊಂಡಿದ್ದು ಸದ್ಯದ ಪಡ್ಡೆಗಳ ಟಾಪಿಕ್ ಆಗಿದೆ. ಇದನ್ನೂ ಓದಿ : ಪುನೀತ್ ಹುಟ್ಟುಹಬ್ಬಕ್ಕೆ ಹೊಸ ಸಾಂಗ್: ಒಂದಾಯಿತು ‘ಗೊಂಬೆ ಹೇಳತೈತೆ’ ಕಾಂಬಿನೇಷನ್

    ಈ ಹಿಂದೆ ಪುಷ್ಪಾ ಸಿನಿಮಾದ ಹಾಡಿಗೆ ಹೆಜ್ಜೆ ಹಾಕಿದಾಗಲೂ ಅಭಿಮಾನಿಗಳು ಹೀಗೆಯೇ ಅಟ್ಯಾಕ್ಟ್ ಮಾಡಿದ್ದರು. ಹೆಸರಾಂತ ನಟಿಯಾಗಿ ಇಂತಹ ಹಾಡುಗಳಲ್ಲಿ ಕಾಣಿಸಿಕೊಳ್ಳುವುದರ ಅಗತ್ಯ ಏನಿದೆ ಎಂದೂ ಮಾತನಾಡಿದ್ದರು. ವಿಚ್ಚೇದನದ ನಂತರ ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ ಎನ್ನುವಲ್ಲಿಗೂ ಜರಿದರು. ಅವರು ಏನೇ ಹೇಳಿದರೂ, ಹಾಡು ಹಿಟ್ ಆಯಿತು. ಸಮಂತಾ ಮತ್ತಷ್ಟು ಫೇಮಸ್ ಆದರು. ಇದನ್ನೂ ಓದಿ : ಕಿರುತೆರೆಯ ನಟ, ನಿರ್ದೇಶಕ ರವಿಕಿರಣ್ ಪುತ್ರ ಸಿನಿಮಾಗೆ ರಂಗಕ್ಕೆ ಎಂಟ್ರಿ

    ಕೆಲ ತಿಂಗಳ ಹಿಂದೆಯಷ್ಟೇ ಗೆಳೆತಿಯರೊಂದಿಗೆ ಪ್ರವಾಸಕ್ಕೆ ಹೋಗಿದ್ದ ಸಮಂತಾ ಸ್ವಿಮ್ ಸೂಟ್‍ ನಲ್ಲಿ ಕಾಣಿಸಿಕೊಂಡಿದ್ದರು. ಆಗಲೂ ಅಭಿಮಾನಿಗಳು ಸುಮ್ಮನೆ ಇರಲಿಲ್ಲ. ಅದಕ್ಕೂ ಕೆಟ್ಟದ್ದಾಗಿ ಕಾಮೆಂಟ್ ಮಾಡಿದರು. ಆ ವೇಳೆಯಲ್ಲಿ ಸಮಂತಾ ದುಃಖದಿಂದಲೇ ಅದಕ್ಕೆ ಪ್ರತಿಕ್ರಿಯಿಸಿದ್ದರು.

  • ತೆಲುಗಿಗೆ ಎಂಟ್ರಿ ಕೊಟ್ಟ ಸಲಗನ ಸಂಗಾತಿ ಸಂಜನಾ ಆನಂದ್

    ತೆಲುಗಿಗೆ ಎಂಟ್ರಿ ಕೊಟ್ಟ ಸಲಗನ ಸಂಗಾತಿ ಸಂಜನಾ ಆನಂದ್

    ದುನಿಯಾ ವಿಜಿ ನಟಿಸಿ, ನಿರ್ದೇಶನ ಮಾಡಿದ್ದ ‘ಸಲಗ’ ಸಿನಿಮಾ ಮೂಲಕ ಸಿನಿಮಾ ದುನಿಯಾಗೆ ಮತ್ತಷ್ಟು ಹತ್ತಿರ ಆದವರು. ಸಂಜನಾ ಆನಂದ್. ಈ ಸಿನಿಮಾದಲ್ಲಿ ಬೋಲ್ಡ್ ಮಾತುಗಳ ಮೂಲಕವೇ ಪ್ರೇಕ್ಷಕರನ್ನು ಸೆಳೆದವರು. ಈ ಚಿತ್ರದ ನಟನೆಗೆ ಭಾರೀ ಮೆಚ್ಚುಗೆ ಕೂಡ ವ್ಯಕ್ತವಾಗಿತ್ತು. ಈ ಸಿನಿಮಾ ಇವರಿಗೆ ದೊಡ್ಡ ಬ್ರೇಕ್ ಕೊಟ್ಟಿದ್ದು, ತೆಲುಗು ಸಿನಿಮಾಗಳಲ್ಲಿಯೂ ಭರ್ಜರಿ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ.

    ದುನಿಯಾ ವಿಜಯ್ ಕೂಡ ತೆಲುಗಿಗೆ ಹಾರಿದ ಬೆನ್ನಲ್ಲೇ ಸಂಜನಾ ಕೂಡ ಅದೇ ಹಾದಿ ಹಿಡಿದಿದ್ದು, ಚಿತ್ರ ಪ್ರೇಮಿಗಳಲ್ಲಿ ಡಬಲ್ ಸಂಭ್ರಮ ತಂದಿದೆ. ದುನಿಯಾ ವಿಜಯ್ ತೆಲುಗಿನ ಸೂಪರ್ ಸ್ಟಾರ್ ಬಾಲಯ್ಯ ಜತೆ ಸಿನಿಮಾ ಮಾಡುತ್ತಿದ್ದರೆ, ಸಂಜನಾ ‘ನೇನು ಮೀಕು ಬಾಗಾ ಕಾವಾಲ್ಸಿ ನಿವಾಡಿನಿ’ ಸಿನಿಮಾದ ಮೂಲಕ ಟಾಲಿವುಡ್ಗೆ ಎಂಟ್ರಿ ಕೊಡುತ್ತಿದ್ದಾರೆ. ಈ ಸಿನಿಮಾದಲ್ಲಿ ಇವರು ‘ತೇಜು’ ಹೆಸರಿನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಪಾತ್ರದ ಫಸ್ಟ್ ಲುಕ್ ಇದೀಗ ರಿಲೀಸಾಗಿದೆ. ಇದನ್ನೂ ಓದಿ: ಕನ್ನಡದ ಎವರ್‌ಗ್ರೀನ್ ಸಾಂಗ್‍ಗೆ ದನಿಯಾದ ರಾಬರ್ಟ್ ರಾಣಿ!

    ಶೀತಲ್ ಶೆಟ್ಟಿ ನಿದೇಶನದ ‘ವಿಂಡೋಸೀಟ್’ ಸಿನಿಮಾದಲ್ಲಿಯೂ ಸಂಜನಾ ನಟಿಸಿದ್ದು, ಈ ಸಿನಿಮಾ ರಿಲೀಸ್ಗೆ ರೆಡಿ ಇದೆ. ಅಲ್ಲದೆ ಸಂಜನಾ, ಅಜಯ್ ರಾವ್ ಜೊತೆ ‘ಶೋಕಿವಾಲ’ ಚಿತ್ರದಲ್ಲೂ ನಟಿಸಿದ್ದು, ಈ ಸಿನಿಮಾ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ.

    Sanjana Anand Ultra HD Images

    ತಬಲಾ ನಾಣಿ ಜೊತೆಗೆ ‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಸಿನಿಮಾ ಮೂಲಕ ಸಿನಿರಂಗಕ್ಕೆ ಪ್ರವೇಶ ಮಾಡಿದವರು ಸಂಜನಾ, ನಂತರ ನಿವೇದಿತಾ ಶಿವರಾಜ್‍ಕುಮಾರ್ ನಿರ್ಮಾಣದ ‘ಹನಿಮೂನ್’ ವೆಬ್ ಸಿರೀಸ್‍ನಲ್ಲಿಯೂ ನಟಿಸಿದ್ದರು. ಈ ವೆಬ್ ವರ್ಷನ್ ತೆಲುಗಿನಲ್ಲೂ ತೆರೆಕಂಡಿರುವುದು ವಿಶೇಷ.

  • ತೆಲುಗು ಭಾಷೆಯನ್ನು ನೀವು ಅನುವಾದಿಸಿದರೆ ಸೆಕ್ಸಿಸ್ಟ್ ಆಗಿ ಕಾಣುತ್ತೆ: ನಾಗಾರ್ಜುನ ಅಕ್ಕಿನೇನಿ

    ತೆಲುಗು ಭಾಷೆಯನ್ನು ನೀವು ಅನುವಾದಿಸಿದರೆ ಸೆಕ್ಸಿಸ್ಟ್ ಆಗಿ ಕಾಣುತ್ತೆ: ನಾಗಾರ್ಜುನ ಅಕ್ಕಿನೇನಿ

    ಚೆನ್ನೈ: ಟಾಲಿವುಡ್ ಸ್ಟಾರ್ ನಾಗಾರ್ಜುನ ಅಕ್ಕಿನೇನಿ ತೆಲುಗು ಚಲನಚಿತ್ರಗಳನ್ನು ಲೈಂಗಿಕತೆ(ಸೆಕ್ಸಿಸ್ಟ್) ಹೆಚ್ಚಿರುತ್ತೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದಾರೆ.

    ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ತೆಲುಗಿನ ಎಲ್ಲ ಸಿನಿಮಾಗಳು ಮತ್ತು ಹಾಡಿನ ಸಾಹಿತ್ಯವು ‘ಸೆಕ್ಸಿಸ್ಟ್’ ಆಗಿರುತ್ತೆ ಎಂಬ ಆರೋಪದ ಮಾತುಗಳು ಸರಿಯಲ್ಲ. ನಮ್ಮ ಭಾಷೆಯನ್ನು ಬೇರೆ ಭಾಷೆಯಲ್ಲಿ ಅನುವಾದಿಸಿದರೆ ಅದು ತನ್ನ ನಿಜವಾದ ಸತ್ವ ಕಳೆದುಕೊಳ್ಳುತ್ತೆ ಎಂದರು.

    ತೆಲುಗು ಭಾಷೆಯನ್ನು ನೀವು ಅಕ್ಷರಶಃ ಇಂಗ್ಲಿಷ್‍ಗೆ ಅನುವಾದಿಸಿದರೆ, ಅದು ತುಂಬಾ ಸೆಕ್ಸಿಸ್ಟ್ ಆಗಿ ಕಾಣುತ್ತದೆ. ನಾನು ಇದನ್ನು ಅನೇಕ ಜನರೊಂದಿಗೆ ಚರ್ಚೆಸಿದ್ದೇನೆ. ಈ ಬಗ್ಗೆ ನಾನು ತುಂಬಾ ಮಾತನಾಡಿದ್ದೇನೆ ಎಂದು ವಿವರಿಸಿದರು.

    ನಮ್ಮ ಸಿನಿಮಾ ‘ಬಂಗಾರರಾಜು’ ಹಾಡುಗಳನ್ನು ನೀವು ತೆಗೆದುಕೊಂಡರೂ ಅದು ಶುದ್ಧ ಜಾನಪದ ರಾಗಗಳೇ. ಆ ಸಾಲುಗಳನ್ನು ಇಂಗ್ಲಿಷಿನಲ್ಲಿ ಅನುವಾದಿಸಿದರೆ ‘ನೀನು ಇಂದು ರಾತ್ರಿ ನನ್ನೊಂದಿಗೆ ಮಲಗುತ್ತೀಯಾ?’ ಎಂಬ ಅರ್ಥದ ಸಾಲು ಬರುತ್ತದೆ. ಅದು ಸೆಕ್ಸಿಸ್ಟ್ ಆಗಿ ಕಾಣುತ್ತದೆ. ಆದರೆ ಆ ಹಾಡನ್ನು ತೆಲುಗು ಮಹಿಳೆಯರು ಹಾಡಿರುವುದನ್ನು ನೀವು ಗಮನಿಸಬಹುದು ಎಂದು ಹೇಳಿದರು. ಇದನ್ನೂ ಓದಿ: ಮಾನಸಿಕವಾಗಿ ಕುಗ್ಗಿ, ಸುಧಾರಿಸಿಕೊಂಡು ಮತ್ತೆ ಯಶಸ್ವಿಯಾಗಿದ್ದರ ಹಿಂದಿನ ಕಾರಣ ಬಿಚ್ಚಿಟ್ಟ ಸಮಂತಾ

    ಕೆಲವೊಂದು ಸಿನಿಮಾಗಳು ನೀವು ಹೇಳಿದ ರೀತಿಯಲ್ಲೇ ಇರುತ್ತೆ ಅದನ್ನು ನಾನು ಒಪ್ಪಿಕೊಳ್ಳುತ್ತೇನೆ. ಪದಗಳನ್ನು ನಾವು ಸರಿಯಾಗಿ ಬಳಸಲಿಲ್ಲ ಎಂದರೆ ಈ ರೀತಿ ತಪ್ಪಾಗುವುದನ್ನು ನಾವು ನೋಡಬಹುದು. ಆದರೆ ಹೆಚ್ಚು ಸಿನಿಮಾಗಳು ಲೈಂಗಿಕತೆಯನ್ನೆ ಹೆಚ್ಚು ಪ್ರಚೋದಿಸುತ್ತದೆ ಎಂಬುದು ಸುಳ್ಳು ಎಂದರು.

    ನಾಗಾರ್ಜುನ ಪ್ರಸ್ತುತ ತೆಲುಗು ಚಿತ್ರ ‘ಬಂಗಾರರಾಜು 2’ ಬಿಡುಗಡೆಗೆ ಕಾಯುತ್ತಿದ್ದಾರೆ. ಈ ಸಿನಿಮಾದಲ್ಲಿ ಅವರು ತಮ್ಮ ಮಗ ‘ನಾಗಚೈತನ್ಯ’ ಅವರೊಂದಿಗೆ ನಟಿಸಿದ್ದಾರೆ. 2016ರಲ್ಲಿ ತೆರೆಕಂಡ ‘ಸೊಗ್ಗಡೆ ಚಿನ್ನಿ ನಾಯನ’ ಸಿನಿಮಾದ ಮುಂದುವರಿದ ಭಾಗ ಈ ‘ಬಂಗಾರರಾಜು’ ಸಿನಿಮಾವಾಗಿದೆ. ಈ ಚಿತ್ರಕ್ಕೆ ಕಲ್ಯಾಣ್ ಕೃಷ್ಣ ಕುರಸಾಲ ಆಕ್ಷನ್ ಕಟ್ ಹೇಳಿದ್ದಾರೆ. ಈ ಸಿನಿಮಾದಲ್ಲಿ ರಮ್ಯಾ ಕೃಷ್ಣನ್ ಮತ್ತು ಕೃತಿ ಶೆಟ್ಟಿ ಕೂಡ ನಟಿಸಿದ್ದಾರೆ.

    ಈ ಸಿನಿಮಾ ಇದೇ ತಿಂಗಳು 14 ರಂದು ಬಿಡುಗಡೆಯಾಗಬೇಕಿತ್ತು. ಆದರೆ ಕೋವಿಡ್-19 ಹಿನ್ನೆಲೆ ಚಿತ್ರದ ಬಿಡುಗಡೆಯನ್ನು ಮುಂದಕ್ಕೆ ಹೋಗಿದೆ. ಇದನ್ನೂ ಓದಿ: ಮನೆಯಲ್ಲಿ ಕ್ವಾರಂಟೈನ್‍ನಲ್ಲಿದ್ದವರಿಗೆ ಆನ್‍ಲೈನ್ ಯೋಗ ಕ್ಲಾಸ್: ಕೇಜ್ರಿವಾಲ್

    ಇದರ ಹೊರತಾಗಿ, ನಾಗಾರ್ಜುನ ಅಯಾನ್ ಮುಖರ್ಜಿ ಅವರ ‘ಬ್ರಹ್ಮಾಸ್ತ್ರ’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ರಣಬೀರ್ ಕಪೂರ್, ಅಲಿಯಾ ಭಟ್, ಅಮಿತಾಬ್ ಬಚ್ಚನ್ ಮತ್ತು ಡಿಂಪಲ್ ಕಪಾಡಿಯಾ ಕೂಡ ನಟಿಸಿದ್ದಾರೆ. ಇದು ಸೆಪ್ಟೆಂಬರ್ 30 ರಂದು ಬೆಳ್ಳಿತೆರೆ ಮೇಲೆ ಬರಲಿದೆ.

  • ವೈರಲ್ ಆಯ್ತು ರಾಬರ್ಟ್ `ಕಣ್ಣೇ ಅದಿರಿಂದಿ’ ಹಾಡು – ಮಂಗ್ಲಿ ಧ್ವನಿಗೆ ಕನ್ನಡಿಗರು ಬೌಲ್ಡ್

    ವೈರಲ್ ಆಯ್ತು ರಾಬರ್ಟ್ `ಕಣ್ಣೇ ಅದಿರಿಂದಿ’ ಹಾಡು – ಮಂಗ್ಲಿ ಧ್ವನಿಗೆ ಕನ್ನಡಿಗರು ಬೌಲ್ಡ್

    ಬೆಂಗಳೂರು: ರಾಬರ್ಟ್ ಸಿನಿಮಾದ `ಕಣ್ಣು ಹೊಡಿಯಾಕ’ ಹಾಡಿನ ತೆಲುಗು ವರ್ಷನ್ `ಕಣ್ಣೇ ಅದಿರಿಂದಿ’ ಸಾಂಗ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

    ಹೈದ್ರಾಬಾದ್‍ನಲ್ಲಿ ರಾಬರ್ಟ್ ಪ್ರೀ ರಿಲೀಸ್ ಇವೆಂಟ್‍ನಲ್ಲಿ ಅಕ್ಷರಶಃ ಮ್ಯಾಜಿಕ್ ಕ್ರಿಯೇಟ್ ಮಾಡಿದ ಧ್ವನಿ ಈಗ ದೇಶವ್ಯಾಪಿ ಕ್ರಶ್ ಆಗಿದೆ. ಆ ಧ್ವನಿಯ ಗಾಯಕಿ ಮಂಗ್ಲಿ ಅವರದ್ದು, ರಾತ್ರೋರಾತ್ರಿ ಕರ್ನಾಟಕದ ಕ್ರಶ್ ಆಗಿರುವ `ಕಣ್ಣೇ ಅದಿರಿಂದಿ’ ಗಾಯಕಿ, ಕಪ್ಪು ಸುಂದರಿ ಮಂಗ್ಲಿಗೆ ಕ್ಲೀನ್‍ಬೋಲ್ಡ್ ಆಗಿದ್ದಾರೆ.

    ಇದೇ ಧ್ವನಿ ಈಗ ಕೋಟಿ ಕೋಟಿ ಮೊಬೈಲ್‍ಗಳ ಖಾಯಂ ಸ್ಟೇಟಸ್ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಶೇರ್ ಆಗುತ್ತಿದೆ. ಈಗಾಗಲೇ ಮಂಗ್ಲಿ ಯಾರು ಎಂದು ತಿಳದುಕೊಳ್ಳಲು ನೆಟ್ಟಿಗರು ಹುಡುಕಾಟ ನಡೆಸಿದ್ದಾರೆ.

    ಈ ಹಾಡು ಹಾಡಿದ ಗಾಯಕಿ ಹಾಡು, ನಟನೆ, ನೃತ್ಯ ನಿರೂಪಣೆಯಲ್ಲಿ ಮಂಗ್ಲಿ ಆಂಧ್ರದದಲ್ಲಿ ಗುರುತಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲೂ ಅನೇಕ ಕಾರ್ಯಕ್ರಮಗಳನ್ನ ಮಾಡಿದ್ದಾರೆ. ಬಂಜಾರಾ ಸಮುದಾಯದ ಮಂಗ್ಲಿ ಶಾಲಾ ದಿನಗಳಲ್ಲೇ ಹಾಡನ್ನು ಹಾಡಿ ಸೈ ಎನಿಸಿಕೊಂಡಿದ್ದರು. ಆರಂಭದಲ್ಲಿ ಆಲ್ಬಂಗಳಲ್ಲಿ ಹಾಡೋಕೆ ಶುರು ಮಾಡಿ ಮುಂದೆ ಲೈವ್ ಪರ್ಫಾಮನ್ಸ್, ಆಂಕರಿಂಗ್, ಡಾನ್ಸ್ ಮಾಡುತ್ತಾ ಫೇಮಸ್ ಆಗಿದ್ದಾರೆ.


    ಕೃಷ್ಣವರ್ಣದ ಈ ಸುಂದರಿ ಮುಖದ ಮೇಲೆ ಹೊಳೆಯುವ ಬೊಟ್ಟು, ಎಲ್ಲಾ ಸೇರಿ ಮಂಗ್ಲಿಗೆ ನೆಟ್ಟಿಗರು ಕ್ಲೀನ್ ಬೌಲ್ಡ್ ಆಗಿದ್ದಾರೆ. ಪ್ರತೀ ಸೀಸನ್‍ಲ್ಲಿ ಒಂದೊಂದು ಕ್ರಶ್ ಹುಟ್ಟುಕೊಳ್ಳುತ್ತೆ ಅಂತಾರಲ್ಲ, ಹಾಗೆ ಸದ್ಯಕ್ಕೆ ಭಾರತದ ಕ್ರಶ್ ಆಗಿದ್ದಾರೆ ಗಾಯಕಿ ಮಂಗ್ಲಿ.

  • ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್ ಚಿತ್ರಕ್ಕೆ 350 ಕೋಟಿ ಆಫರ್!

    ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್ ಚಿತ್ರಕ್ಕೆ 350 ಕೋಟಿ ಆಫರ್!

    ಹೈದರಾಬಾದ್: ಬಾಹುಬಲಿ ಬಳಿಕ ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ಆರ್‌ಆರ್‌ಆರ್ ಸಿನಿಮಾ ಇದೇ ವರ್ಷ ಅಕ್ಟೋಬರ್ 13ಕ್ಕೆ ತೆರೆಕಾಣುವುದಾಗಿ ಈಗಾಗಲೇ ಘೋಷಣೆಯಾಗಿದೆ. ಈ ಮಧ್ಯೆ ಚಿತ್ರದ ಗಳಿಕೆಯ ಬಗ್ಗೆ ಭಾರೀ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಇದೀಗ ಈ ಚಿತ್ರಕ್ಕೆ ಭರ್ಜರಿ ಆಫರ್ ಬಂದಿರುವ ವಿಚಾರವೊಂದು ಬಯಲಾಗಿದೆ.

    ಹೌದು. ಐತಿಹಾಸಿಕ ಕಥೆ ಹೊಂದಿರುವ ಆರ್‌ಆರ್‌ಆರ್ ಚಿತ್ರಕ್ಕೆ ಬಿಡುಗಡೆ ಮುಂಚೆಯೇ 350 ಕೋಟಿ ಆಫರ್ ಬಂದಿದೆಯಂತೆ. ರಾಜಮೌಳಿ ಸಿನಿಮಾಗೆ ದಕ್ಷಿಣ ಭಾರತದ ವಿತರಣೆ ಹಕ್ಕು ಖರೀದಿ ಮಾಡಲು ವಿತರಕರು ಮುಂದಾಗಿದ್ದು, 350 ಕೋಟಿ ನೀಡುವುದಾಗಿ ಹೇಳಿದ್ದಾರೆ. ಇದು ತೆಲುಗು ಚಿತ್ರರಂಗದ ಇತಿಹಾಸದಲ್ಲಿಯೇ ದೊಡ್ಡಮಟ್ಟದ ವ್ಯವಹಾರವಾಗಿದೆ ಎಂಬುದಾಗಿ ಬಾಲಿವುಡ್ ವೆಬ್‍ಸೈಟ್ ಒಂದು ವರದಿ ಮಾಡಿದೆ.

    ಆರ್‌ಆರ್‌ಆರ್ ಚಿತ್ರದ ಹಿಂದಿ ಡಬ್ಬಿಂಗ್ ಹಕ್ಕು ಹಾಗೂ ವಿತರಣೆ ಹಕ್ಕು ಪಡೆಯಲು 100 ಕೋಟಿ ಡೀಲ್ ಆಗಿದೆಯಂತೆ. ಅನಿಲ್ ತಡಾನಿ (ಎಎಫಿಲಂಸ್) ಈಗಾಗಲೇ ಆರ್‌ಆರ್‌ಆರ್ ಚಿತ್ರದ ವಿತರಣೆ ಹಕ್ಕನ್ನು ತೆಕ್ಕೆಗೆ ಹಾಕಿಕೊಂಡಿರುವುದಾಗಿ ವರದಿಗಳು ತಿಳಿಸಿವೆ. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಒಬ್ಬರೇ ವಿತರಣೆ ಮಾಡಲು ತೀರ್ಮಾನಿಸಿದ್ದಾರೆ. ಬಾಲಿವುಡ್‍ನಲ್ಲಿ ಅನಿಲ್ ತಡಾನಿ ವಿತರಿಸುವ ಸಾಧ್ಯತೆ ಹೆಚ್ಚಿದೆ. ಹೊರದೇಶಗಳಿಂದಲೂ ಆರ್‌ಆರ್‌ಆರ್ ಚಿತ್ರಕ್ಕೆ ಭಾರೀ ಬೇಡಿಕೆಯಿದ್ದು, ಸುಮಾರು 70 ಕೋಟಿ ಡೀಲ್ ಆಗಿರುವುದಾಗಿ ತಿಳಿದುಬಂದಿದೆ.

    ಈ ಬಹುನಿರೀಕ್ಷಿತ ಚಿತ್ರದಲ್ಲಿ ತೆಲುಗು ಚಿತ್ರರಂಗದ ಇಬ್ಬರು ಸ್ಟಾರ್ ನಟರಾದ ರಾಮ್ ಚರಣ್, ಜೂನಿಯರ್ ಎನ್‍ಟಿಆರ್ ಒಟ್ಟಿಗೆ ನಟಿಸಿದ್ದಾರೆ. ಅಲ್ಲದೆ ಅಜಯ್ ದೇವ್‍ಗನ್, ಆಲಿಯಾ ಭಟ್, ಸಾಮುತಿಕಾರಣಿ, ಓಲಿವಿಯಾ ಮೋರಿಸ್, ಅಲಿಸನ್ ಡೂಡಿ ಮತ್ತು ರೇ ಸ್ಟೀವನ್‍ಸನ್ ಸೇರಿದಂತೆ ದೊಡ್ಡ ತಾರಾಗಣವೇ ಇದೆ. ಸದ್ಯ ಗಳಿಕೆಯಲ್ಲಿ ದಾಖಲೆ ಬರೆದಿದ್ದ ಬಾಹುಬಲಿ ಚಿತ್ರಗಳನ್ನು ಆರ್‌ಆರ್‌ಆರ್ ಸಿನಿಮಾ ಮೀರಿಸಲಿದೆ ಎಂದು ಅಂದಾಜಿಸಲಾಗುತ್ತಿದೆ. ಬಾಹುಬಲಿ-2 1,800 ಕೋಟಿಗೂ ಹೆಚ್ಚು ಹಣ ಗಳಿಕೆ ಮಾಡಿತ್ತು.

  • ತೆಲುಗು ಇಂಡಸ್ಟ್ರಿ ಮೇಲೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗರಂ!

    ತೆಲುಗು ಇಂಡಸ್ಟ್ರಿ ಮೇಲೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗರಂ!

    ಬೆಂಗಳೂರು: ಸ್ಯಾಂಡಲ್‍ವುಡ್ ನಟ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತೆಲುಗು ಇಂಡಸ್ಟ್ರಿ ಮೇಲೆ ಗರಂ ಆಗಿದ್ದಾರೆ.

    ಮಾರ್ಚ್ 11 ಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ದೇಶದಾದ್ಯಂತ ಬಿಡುಗಡೆಗೆ ಸಿದ್ಧವಾಗಿದೆ. ಈ ವೇಳೆ ತೆಲುಗು ಸಿನಿಮಾ ಇಂಡಸ್ಟ್ರಿ ದರ್ಶನ್ ರಾಬರ್ಟ್ ಸಿನಿಮಾ ತಮ್ಮ ರಾಜ್ಯದಲ್ಲಿ ರಿಲೀಸ್ ಆಗುವುದನ್ನ ತಡೆಯುತ್ತಿದೆ.

    ಕೊರೊನಾ ಬಳಿಕ ತೆಲುಗು ಸಿನಿಮಾ ಇಂಡಸ್ಟ್ರಿ ಹೊಸ ರೂಲ್ಸ್ ಜಾರಿ ಮಾಡಿಕೊಂಡಿದೆ. ಅದರ ಅನ್ವಯ ತೆಲುಗು ಸಿನಿಮಾ ಬಿಡುಗಡೆಯ ದಿನ ಬೇರೆ ಯಾವುದೇ ಪರಿಭಾಷೆಯ ಚಿತ್ರಗಳು ತಮ್ಮ ನಾಡಿನಲ್ಲಿ ಬಿಡುಗಡೆ ಮಾಡುವಂತಿಲ್ಲ ಅನ್ನೋ ನಿಯಮ ತೆಲುಗು ಸಿನಿಮಾ ಇಂಡಸ್ಟ್ರಿ ರೂಢಿಸಿಕೊಂಡಿದೆ. ಹೀಗಾಗಿ ಆಂಧ್ರ ತೆಲಂಗಾಣದಲ್ಲಿ ಮಾರ್ಚ್ 11 ಕ್ಕೆ ತೆಲುಗು ಸಿನಿಮಾ ರಿಲೀಸ್ ಇರುವ ಕಾರಣ ಕನ್ನಡದ ‘ರಾಬರ್ಟ್’ ಬಿಡುಗಡೆಗೆ ಅವಕಾಶ ನೀಡುತ್ತಿಲ್ಲ. ಇದನ್ನ ಪ್ರಶ್ನಿಸಿ ದರ್ಶನ್ ಹಾಗೂ ರಾಬರ್ಟ್ ಟೀಮ್ ಇಂದು ಕನ್ನಡ ಫಿಲ್ಮ್ ಚೇಂಬರ್ ಗೆ ದೂರು ನೀಡುತ್ತಿದೆ.

    ತೆಲುಗಿಗೆ ಡಬ್ ಆಗಿ ಮಾರ್ಚ್ 11ಕ್ಕೆ ‘ರಾಬರ್ಟ್’ ರಿಲೀಸ್ ಆಗುತ್ತಿದೆ. ಇದನ್ನ ತೆಲುಗು ಇಂಡಸ್ಟ್ರಿ ತಡೆದಿದೆ. ನಟ ದರ್ಶನ್, ನಿರ್ಮಾಪಕ ಉಮಾಪತಿ ಹಾಗೂ ನಿರ್ದೇಶಕ ತರುಣ್ ಸುಧೀರ್ ಫಿಲ್ಮ್ ಚೇಂಬರ್ಗೆ ದೂರು ಸಲ್ಲಿಸಲಿದ್ದಾರೆ. ಕನ್ನಡದಲ್ಲಿ ಪರಭಾಷಾ ಚಿತ್ರಗಳಿಗೆ ಅನುಮತಿ ನೀಡಲಾಗುತ್ತದೆ. ಆದರೆ ಅವರು ಇಂಥಹ ಕಠಿಣ ನಿಯಮ ಮಾಡಿಕೊಂಡಿದ್ದು ಎಷ್ಟು ಸರಿ ಎಂದು ಪ್ರಶ್ನಿಸಲಾಗುತ್ತೆ.

  • ಕಾಲಿವುಡ್‍ಗೆ ಬಹದ್ಧೂರ್ ಹುಡುಗನ ಅದ್ಧೂರಿ ಎಂಟ್ರಿ

    ಕಾಲಿವುಡ್‍ಗೆ ಬಹದ್ಧೂರ್ ಹುಡುಗನ ಅದ್ಧೂರಿ ಎಂಟ್ರಿ

    ಬೆಂಗಳೂರು: ನಟ ಧ್ರುವ ಸರ್ಜಾ ಅಭಿನಯದ ಪೊಗರು ಸಿನಿಮಾ ಕಿಕ್ಕೇರಿಸುತ್ತಿದ್ದು, ಬಿಡುಗಡೆಗೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಹೊಸ ವರ್ಷದ ಆರಂಭದಲ್ಲಿಯೇ ಚಿತ್ರ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ. ಹೀಗಾಗಿ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿದೆ. ಇದೇ ಸಂದರ್ಭದಲ್ಲಿ ಧೃವಾ ಸರ್ಜಾ ತಮಿಳಿಗೆ ಕಾಲಿಡಲಿದ್ದಾರೆ ಎಂಬ ಸುದ್ದಿ ಸಹ ವೈರಲ್ ಆಗಿದೆ.

    ಅರೇ ಇದೇನಪ್ಪಾ ಇದ್ದಕ್ಕಿದ್ದಂತೆ ಧೃವ ಸರ್ಜಾ ತಮಿಳು ಇಂಡಸ್ಟ್ರಿಗೆ ಕಾಲಿಟ್ರಾ, ಯಾವ ಸಿನಿಮಾ ಎಂದು ಯೋಚಿಸಬೇಡಿ. ಸ್ಯಾಂಡಲ್‍ವುಡ್‍ನಲ್ಲಿ ಸೆನ್ಸೇಶನ್ ಕ್ರಿಯೇಟ್ ಮಾಡಿರುವ ಪೊಗರು ಸಿನಿಮಾ ತಮಿಳಿಗೆ ಡಬ್ ಆಗುತ್ತಿದೆ. ಈ ಮೂಲಕ ತಮಿಳಿನಲ್ಲೂ ಧೃವ ಸರ್ಜಾ ಘರ್ಜಿಸಲಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಮೂಲಕ ತಿಳಿಸಿರುವ ಧೃವ, ತಮಿಳು ಶೀರ್ಷಿಕೆಯನ್ನು ಬಹಿರಂಗಪಡಿಸಿದ್ದಾರೆ.

    ತಮಿಳಿನಲ್ಲಿ ಸೆಮ್ಮಾ ತಿಮಿರು ಎಂದು ಟೈಟಲ್ ಇಡಲಾಗಿದ್ದು, ಇದರಿಂದ ಅಭಿಮಾನಿಗಳ ಖುಷಿ ಇಮ್ಮಡಿಯಾಗಿದೆ. ಈಗಾಗಲೇ ತೆಲುಗಿಗೆ ಡಬ್ ಆಗುತ್ತಿದ್ದು, ಹಿಂದಿ ಡಬ್ಬಿಂಗ್ ಹಕ್ಕುಗಳು ಸಹ 7.2 ಕೋಟಿ.ರೂ.ಗೆ ಮಾರಾಟ ಆಗಿವೆ. ಹೀಗಾಗಿ ಬಹುಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಆಗುತ್ತಿದೆ ಎಂದೇ ಹೇಳಬಹುದು. ಇದರಿಂದಾಗಿ ಧೃವ ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ.

    ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಸಿನಿಮಾ ಇಷ್ಟೊತ್ತಿಗೆ ತೆರೆ ಕಾಣಬೇಕಿತ್ತು. ಆದರೆ ಕೊರೊನಾ ಹಿನ್ನೆಲೆ ಸಿನಿಮಾ ಕೆಲಸಗಳು ಸ್ಥಗಿತಗೊಂಡಿದ್ದರಿಂದ ಬಿಡುಗಡೆ ತಡವಾಗಿದೆ. ನಂದಕಿಶೋರ್ ನಿರ್ದೇಶನ ಸಿನಿಮಾಗಿದ್ದು, ಧೃವ ಸರ್ಜಾಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಈಗಾಗಲೇ ತೆಲುಗು, ತಮಿಳು ಬಳಿಕ ಇದೀಗ ಬಾಲಿವುಡ್‍ಗೂ ಕಾಲಿಟ್ಟಿದ್ದಾರೆ. ಹೀಗಾಗಿ ಸಿನಿಮಾ ಯಶಸ್ಸು ಕಾಣಲಿದೆ ಎಂಬುದು ಸಿನಿಮಾ ತಂಡದ ವಿಶ್ವಾಸ ಹೀಗಾಗಿ ತಮಿಳು, ತೆಲುಗಿನಲ್ಲೂ ಸಿನಿಮಾ ಡಬ್ ಮಾಡಲಾಗುತ್ತಿದೆ.

    ಹಾಡುಗಳ ಮೂಲಕ ಸಖತ್ ಸದ್ದು ಮಾಡಿರುವ ಪೊಗರು ಸಿನಿಮಾ ಹೇಗಿರಲಿದೆ ಎಂಬುದು ಅಭಿಮಾನಿಗಳ ಕುತೂಹಲವಾಗಿದೆ. ಸಿನಿಮಾದ ಕರಾಬು ಹಾಡು ಸ್ಯಾಂಡಲ್‍ವುಡ್‍ನಲ್ಲಿ ಸಖತ್ ಸದ್ದು ಮಾಡುತ್ತಿದೆ. ಚಿತ್ರಕ್ಕಾಗಿ ಧೃವ ಸರ್ಜಾ ಸಹ ಭಾರೀ ವರ್ಕೌಟ್ ಮಾಡಿದ್ದು, ಚಿತ್ರ ಹೇಗೆ ಮೂಡಿ ಬರಲಿದೆ ಎಂಬುದನ್ನು ಕಾದು ನೋಡಬೇಕಿದೆ.