Tag: Telugu

  • ತೆಲುಗು ನಟ ಶ್ರೀವಿಷ್ಣು ಆರೋಗ್ಯ ಗಂಭೀರ : ಐಸಿಯುನಲ್ಲಿ ಚಿಕಿತ್ಸೆ

    ತೆಲುಗು ನಟ ಶ್ರೀವಿಷ್ಣು ಆರೋಗ್ಯ ಗಂಭೀರ : ಐಸಿಯುನಲ್ಲಿ ಚಿಕಿತ್ಸೆ

    ತೆಲುಗಿನ ಹೆಸರಾಂತ ಯುವ ನಟ ಶ್ರೀವಿಷ್ಣು ಆರೋಗ್ಯದಲ್ಲಿ ಏರುಪೇರಾಗಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಿತಿ ಗಂಭೀರವಾಗಿದ್ದು, ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೆಲ ದಿನಗಳಿಂದ ಅವರು ಜ್ವರದಿಂದ ಬಳಲುತ್ತಿದ್ದರು ಎಂದು ಹೇಳಲಾಗುತ್ತಿದೆ. ಸಾಮಾನ್ಯ ಜ್ವರ ಎಂದು ನೆಗ್ಲೆಟ್ ಮಾಡಿದ್ದರಿಂದ ಅವರು ಗಂಭೀರ ಸ್ಥಿತಿಗೆ ತಲುಪಿದ್ದಾರಂತೆ. ಸಾಮಾನ್ಯ ಜ್ವರದಿಂದ ಈಗವರಿಗೆ ಡೆಂಗ್ಯು ಆಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

    ಸಾಮಾನ್ಯ ಜ್ವರವೆಂದು ನಿರ್ಲಕ್ಷ್ಯ ಮಾಡಿದ್ದ ಶ್ರೀವಿಷ್ಣು ಜ್ವರ ಕಡಿಮೆ ಆಗದೇ ಇರುವ ಕಾರಣಕ್ಕಾಗಿ ನೆನ್ನೆಯಷ್ಟೇ ರಕ್ತಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಹಾಗಾಗಿ ಡೆಂಗ್ಯು ಖಾತ್ರಿಯಾಗಿದೆ. ಅವರಿಗೆ ಪ್ಲೇಟ್ ಲೇಟ್ಸ್ ಸಂಖ್ಯೆ ತುಂಬಾ ಕಡಿಮೆ ಆಗಿದ್ದು, ಆರೋಗ್ಯ ಸ್ಥಿತಿ ಸುಧಾರಿಸಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಪ್ರಾಣಕ್ಕೆ ಅಪಾಯವಿಲ್ಲವೆಂದು ವೈದ್ಯರು ಹೇಳಿದ್ದು ಆರೋಗ್ಯ ಸ್ಥಿತಿ ಮಾತ್ರ ಗಂಭೀರವಾಗಿದೆ ಎಂದು ತಿಳಿಸಿದ್ದಾರಂತೆ. ಇದನ್ನೂ ಓದಿ:ಚಿಕ್ಕಣ್ಣನ ಮದುವೆ ಮುಂದಿನ ವರ್ಷ ಫಿಕ್ಸ್: ಕುಟುಂಬದ ಒತ್ತಡಕ್ಕೆ ಕೊನೆಗೂ ಮಣಿದ ನಟ

    ವಸಂತ ರಾಯಲು, ಅರ್ಜುನ ಪಾಲ್ಗುಣ, ರಾಜರಾಜ ಚೋರ, ಮೆಂಟ್ ಮದಿಲೋ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ಶ್ರೀವಿಷ್ಣು, ಈಗಷ್ಟೇ ಅಲ್ಲೂರಿ ಸಿನಿಮಾದಲ್ಲಿ ನಟಿಸಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೇ ಈ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ತೆಲುಗು ಸಿನಿಮಾ ರಂಗದಲ್ಲು ಭರವಸೆಯ ಕಲಾವಿದ ಎಂದೇ ಖ್ಯಾತರಾಗಿರುವ ಇವರು, ಅಲ್ಲೂರಿ ಸಿನಿಮಾ ರಿಲೀಸ್ ಹೊತ್ತಿಗೆ ಆರೋಗ್ಯವನ್ನು ಹದಗೆಡಿಸಿಕೊಂಡಿದ್ದಾರೆ.

     

    Live Tv
    [brid partner=56869869 player=32851 video=960834 autoplay=true]

  • ನರೇಶ್ ಮತ್ತು ಪವಿತ್ರಾ ಲೋಕೇಶ್ ಪ್ರಕರಣ : ಏನಿದು ತೆಲುಗು ಸಿನಿಮಾ ರಂಗದಲ್ಲಿ ಗಾಸಿಪ್

    ನರೇಶ್ ಮತ್ತು ಪವಿತ್ರಾ ಲೋಕೇಶ್ ಪ್ರಕರಣ : ಏನಿದು ತೆಲುಗು ಸಿನಿಮಾ ರಂಗದಲ್ಲಿ ಗಾಸಿಪ್

    ತೆಲುಗು ನಟ ನರೇಶ್ ಮತ್ತು ಪವಿತ್ರಾ ಲೋಕೇಶ್ ಒಂದೇ ಹೋಟೆಲ್ ನಲ್ಲಿ ಸಿಕ್ಕಿಹಾಕಿಕೊಂಡ ನಂತರ ಪವಿತ್ರಾ ಲೋಕೇಶ್ ಚಿತ್ರಣವೇ ಬದಲಾಗಿದೆ ಎನ್ನುವ ಸುದ್ದಿ ತೆಲುಗು ಸಿನಿಮಾ ರಂಗದಲ್ಲಿ ಹರಡಿದೆ. ತಮ್ಮಿಬ್ಬರ ಮಧ್ಯೆ ಅಂಥದ್ದೂ ಏನೂ ಇಲ್ಲ. ತಾವು ಬರೀ ಜಸ್ಟ್ ಫ್ರೆಂಡ್ಸ್ ಎಂದು ಹೇಳಿಕೊಂಡು ಓಡಾಡುತ್ತಿದ್ದವರು ಮೈಸೂರು ಹೋಟೆಲ್ ನಲ್ಲಿ ಒಟ್ಟಿಗೆ ಕಾಣಿಸಿಕೊಂಡ ನಂತರ ಪವಿತ್ರಾ ಮೇಲಿದ್ದ ಇಮೇಜ್ ಬದಲಾಗಿದೆ ಎಂದು ಅಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡುತ್ತಿವೆ. ಪರಿಣಾಮ ಪವಿತ್ರಾ ಅವರನ್ನು ಹಲವು ಸಿನಿಮಾಗಳಿಂದ ಕೈ ಬಿಡಲಾಗುತ್ತಿದೆ ಅಂತೆ.

    ತೆಲುಗು ಮತ್ತು ತಮಿಳಿನ ಹಲವು ಸ್ಟಾರ್ ಸಿನಿಮಾಗಳಿಗೆ ಪವಿತ್ರಾ ಲೋಕೇಶ್ ತಾಯಿ ಪಾತ್ರಕ್ಕಾಗಿ ಆಯ್ಕೆ ಮಾಡಿಕೊಂಡಿದ್ದರಂತೆ. ಆದರೆ, ಈ ಪ್ರಕರಣದ ನಂತರ ಅವರನ್ನು ಕೈ ಬಿಡಲಾಗುತ್ತಿದೆ ಎಂದು ಸುದ್ದಿಗಳು ಹರಿದಾಡುತ್ತಿವೆ. ತಾಯಿ ಪಾತ್ರಕ್ಕೆ ಅವರು ಆಯ್ಕೆಯಾಗಿದ್ದರಿಂದ ಹಾಗಾಗಿ ಇಂಥದ್ದೊಂದು ನಿರ್ಧಾರ ತಗೆದುಕೊಳ್ಳಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ನರೇಶ್, ರಮ್ಯಾ ಮತ್ತು ಪವಿತ್ರಾ ಲೋಕೇಶ್ ಪ್ರಕರಣ ಇದೀಗ ಬೆಂಗಳೂರಿನಿಂದ ಹೈದರಾಬಾದ್ ಗೆ ಶಿಫ್ಟ್ ಆಗಿದೆ. ಇದನ್ನೂ ಓದಿ:ಚಂದ್ರಶೇಖರ್ ಗುರೂಜಿ ಹತ್ಯೆಗೆ ಕಂಬನಿ ಮಿಡಿದ ನಟ ಜಗ್ಗೇಶ್

    ಪ್ರಕರಣ ಬೆಂಗಳೂರಿನಿಂದ ಹೈದರಾಬಾದ್ ಗೆ ಶಿಫ್ಟ್ ಆಗುತ್ತಿದ್ದಂತೆಯೇ ರಮ್ಯಾ ಕೂಡ ಅಲ್ಲೊಂದು ಪತ್ರಿಕಾಗೋಷ್ಠಿ ಮಾಡಲು ಸಿದ್ಧತೆ ನಡೆಸಿದ್ದಾರೆ. ರಮ್ಯಾ ಏನಾದರೂ ಮಾಧ್ಯಮಗೋಷ್ಠಿ ಮಾಡಿದರೆ, ಈ ಪ್ರಕರಣಕ್ಕೆ ಮತ್ತೊಂದು ತಿರುವು ಸಿಗಲಿದೆ. ದಿನಕ್ಕೊಂದು ರೀತಿಯಲ್ಲಿ ಘಟನೆಯು ತಿರುವುದು ಪಡೆದುಕೊಳ್ಳುತ್ತಿರುವುದು ವಿಶೇಷ.

    Live Tv
    [brid partner=56869869 player=32851 video=960834 autoplay=true]

  • ನರೇಶ್ ಮತ್ತು ಪವಿತ್ರಾ ಲೋಕೇಶ್ ಪ್ರಕರಣಕ್ಕೆ ನಟಿ ಶ್ರೀರೆಡ್ಡಿ ಎಂಟ್ರಿ

    ನರೇಶ್ ಮತ್ತು ಪವಿತ್ರಾ ಲೋಕೇಶ್ ಪ್ರಕರಣಕ್ಕೆ ನಟಿ ಶ್ರೀರೆಡ್ಡಿ ಎಂಟ್ರಿ

    ತೆಲುಗು ಮತ್ತು ಕನ್ನಡ ಸಿನಿಮಾ ರಂಗದಲ್ಲಿ ಭಾರೀ ಸಂಚಲನ ಮೂಡಿಸಿರುವ ನರೇಶ್ ಮತ್ತು ಪವಿತ್ರಾ ಲೋಕೇಶ್ ಪ್ರಕರಣ ಇದೀಗ ಹೈದರಾಬಾದ್ ಗೆ ಶಿಫ್ಟ್ ಆಗಿದೆ. ಮೈಸೂರು ಹೋಟೆಲ್ ನಲ್ಲಿ ನರೇಶ್ ಮತ್ತು ಪವಿತ್ರಾ ಲೋಕೇಶ್ ಸಿಕ್ಕಾಕಿಕೊಂಡ ನಂತರ ಅವರು ಹೈದರಾಬಾದ್ ಗೆ ಹೋಗಿದ್ದಾರೆ ಎನ್ನಲಾಗುತ್ತಿದ್ದು, ಇದೀಗ ನರೇಶ್ ಪತ್ನಿ ರಮ್ಯಾ ಕೂಡ ಹೈದರಾಬಾದ್ ನತ್ತ ಪ್ರಯಾಣ ಬೆಳೆಸಿದ್ದಾರೆ. ಅಲ್ಲಿ ಪತ್ರಿಕಾಗೋಷ್ಠಿ ಮಾಡಲಿದ್ದಾರಂತೆ.

    ಈ ಹೈಡ್ರಾಮಾದ ನಡುವೆಯೇ ವಿವಾದಿತ ತಾರೆ, ತೆಲುಗು ನಟಿ ಶ್ರೀರೆಡ್ಡಿ ಎಂಟ್ರಿ ಪಡೆದಿದ್ದಾರೆ. ಈ ಹಿಂದೆ ಮೀಟೂ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರೆಡ್ಡಿ ಬೆತ್ತಲೆ ಪ್ರತಿಭಟನೆ ಮಾಡಿದ್ದರು ಈ ಸಂದರ್ಭವನ್ನು ನೆನಪಿಸಿಕೊಂಡು ಲೈವ್ ಮಾಡಿರುವ ಶ್ರೀರೆಡ್ಡಿ ಮತ್ತೆ ನರೇಶ್ ಹಾಗೂ ಪವಿತ್ರಾ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ‘ನಾನು ಮೀಟೂ ವಿರುದ್ಧ ಪ್ರತಿಭಟನೆ ನಡೆಸಿದಾಗ ನರೇಶ್‌, ಆ್ಯಸಿಡ್‌ನಿಂದ ಕೈ ತೊಳಯಬೇಕು ಎಂದು ಕಾಮೆಂಟ್ ಮಾಡಿದ್ದರು. ಈಗ ಅವರ ಸ್ಥಿತಿ ಏನಾಗಿದೆ ನೋಡಿ’ ಎಂದು ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ:‘ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ 2022’ ಸುಂದರಿ ಸಿನಿ ಶೆಟ್ಟಿಯ ಸಂಪೂರ್ಣ ಪರಿಚಯ : ನಮ್ಮೂರು, ನಮ್ಮೂರು ಹುಡುಗಿ

    ಯಾರ ಬದುಕಿನಲ್ಲೂ ಯಾರು ಬಿರುಗಾಳಿ ಎಬ್ಬಿಸಬಾರದು ಎಂದು ಪರೋಕ್ಷವಾಗಿ ಪವಿತ್ರಾ ಲೋಕೇಶ್ ಕುರಿತಾಗಿಯೂ ಮಾತನಾಡಿರುವ ಶ್ರೀರೆಡ್ಡಿ, ರಮ್ಯಾ ಅವರ ಜೀವನವನ್ನು ಹಾಳು ಮಾಡುವ ಹಕ್ಕು ಯಾರಿಗೂ ಇಲ್ಲ. ಅಲ್ಲದೇ, ಮಹಿಳೆ ಅಂದಾಕ್ಷಣ ಅವರ ಶೀಲವನ್ನು ಶಂಕಿಸಲಾಗುತ್ತದೆ. ರಮ್ಯಾ ಮೇಲೂ ಅದೇ ಆಗಿದೆ. ಆದರೆ, ನಿಜವಾಗಿಯೂ ಜನರ ಮುಂದೆ ಬೆತ್ತಲೆ ಆದವರು ಯಾರು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ನರೇಶ್ ಅವರನ್ನು ಕೇಳಿದ್ದಾರೆ.

    ಶ್ರೀರೆಡ್ಡಿ ಲೈವ್ ಗೆ ಬಂದು ಮತ್ತೆ ಹಲವು ಕಲಾವಿದರ ಹೆಸರುಗಳನ್ನು ಬಹಿರಂಗ ಪಡಿಸಿದ್ದಾರೆ. ಅವರು ಜೀವನವೂ ಇದೇ ಹಾದಿಯಲ್ಲಿದೆ. ಮುಂದೆ ಜನರಿಗೂ ಗೊತ್ತಾಗಲಿದೆ ಎಂದು ಅಬ್ಬರಿಸಿದ್ದಾರೆ. ಶ್ರೀರೆಡ್ಡಿ ಲೈವ್ ಗೆ ಬರುತ್ತಿದ್ದಂತೆಯೇ ಮೀಟೂ ಚಳವಳಿ ಮತ್ತೆ ಆರಂಭವಾಗಲಿದೆಯಾ ಅನ್ನುವ ಅನುಮಾನವನ್ನಂತೂ ಅವರು ಹುಟ್ಟು ಹಾಕಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನಟಿ ಚಾರ್ಮಿಗಾಗಿ ಪತ್ನಿಯನ್ನೇ ಬಿಡ್ತಾರಾ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್

    ನಟಿ ಚಾರ್ಮಿಗಾಗಿ ಪತ್ನಿಯನ್ನೇ ಬಿಡ್ತಾರಾ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್

    ಪುನೀತ್ ರಾಜ್ ಕುಮಾರ್ ಅವರನ್ನು ಕನ್ನಡ ಸಿನಿಮಾ ರಂಗಕ್ಕೆ ಪರಿಚಯಿಸಿದ ನಿರ್ದೇಶಕ ಪುರಿ ಜಗನ್ನಾಥ್ ವೈವಾಹಿಕ ಬದುಕಿನಲ್ಲಿ ಬಿರುಗಾಳಿ ಎದ್ದಿದೆಯಾ? ಅಂಥದ್ದೊಂದು ಸುದ್ದಿ ತೆಲುಗು ಸಿನಿಮಾ ರಂಗದಿಂದ ಬಂದಿದೆ. ಕಳೆದ ಒಂಬತ್ತು ವರ್ಷಗಳಿಂದ ಪುರಿ ಜಗನ್ನಾಥ್ ನಿರ್ದೇಶನದ ಬಹುತೇಕ ಸಿನಿಮಾಗಳಿಗೆ ಬಂಡವಾಳ ಹೂಡುತ್ತಿರುವ ಖ್ಯಾತ ನಟಿ ಚಾರ್ಮಿ ಕೌರ್, ಈ ಬಿರುಗಾಳಿಗೆ ಕಾರಣ ಎನ್ನಲಾಗುತ್ತಿದೆ. ಕಷ್ಟದ ದಿನಗಳಲ್ಲಿ ಪತಿಯೊಂದಿಗೆ ನಿಂತಿರುವ ಪತ್ನಿಯನ್ನು ಪುರಿ ಅಷ್ಟು ಬೇಗ ದೂರ ಮಾಡುತ್ತಾರಾ ಎನ್ನುವ ಪ್ರಶ್ನೆಯೂ ಎದ್ದಿದೆ.

    ಪುರಿ ಜಗನ್ನಾಥ್ ಮತ್ತು ಚಾರ್ಮಿ ಕೌರ್ ಕಾಂಬಿನೇಷನ್ ನಲ್ಲಿ ಅನೇಕ ಸಿನಿಮಾಗಳು ನಿರ್ಮಾಣವಾಗಿದೆ. ಪುರಿ ಮಗನಿಗಾಗಿಯೇ ಚಾರ್ಮಿ ಮೂರು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಅಲ್ಲದೇ, ಪತ್ನಿಗಿಂತ ಹೆಚ್ಚು ಸಮಯವನ್ನು ಚಾರ್ಮಿ ಜೊತೆಯೇ ಪುರಿ ಕಳೆಯುತ್ತಿದ್ದಾರೆ. ಹಾಗಾಗಿ ಪತ್ನಿಯನ್ನು ಚಾರ್ಮಿಗಾಗಿ ತೊರೆಯಲಿದ್ದಾರೆ ಎನ್ನುವ ಸುದ್ದಿ ದಟ್ಟವಾಗಿದೆ. ಈ ಸುದ್ದಿಯು ಎಲ್ಲ ಕಡೆ ಹರಡುತ್ತಿದ್ದಂತೆಯೇ ಪುರಿ ಅವರ ಪುತ್ರ, ನಟ ಆಕಾಶ್ ಪರೋಕ್ಷವಾಗಿ ಕೆಲ ಮಾತುಗಳನ್ನೂ ಆಡಿದ್ದಾರೆ. ಹೀಗಾಗಿ ಚಾರ್ಮಿ ಮತ್ತು ಪುರಿ ಜಗನ್ನಾಥ್ ಮಧ್ಯೆ ಅತೀವ ಬಾಂಧವ್ಯ ಇದೆ ಎಂದು ನಂಬಲಾಗಿದೆ.  ಇದನ್ನೂ ಓದಿ: ಪೃಥ್ವಿ ಅಂಬರ್ ಮತ್ತು ಪ್ರಮೋದ್ ಕಾಂಬಿನೇಷನ್ ಚಿತ್ರಕ್ಕೆ ಚಾಲನೆ

    ಸದ್ಯ ಆಕಾಶ ನಟನೆಯ ಹೊಸ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಈ ಸಂದರ್ಭದಲ್ಲಿ ಮಾತನಾಡಿರುವ ಅವರು, ‘ನನ್ನ ತಾಯಿ ತುಂಬಾ ಒಳ್ಳೆಯವರು. ಅಪ್ಪನ ಕಷ್ಟದ ದಿನಗಳಿಂದ ಅವರ ಜೊತೆಯೇ ನಿಂತಿದ್ದಾರೆ. ಇವತ್ತು ಅಪ್ಪ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿರುವುದಕ್ಕೆ ಅಮ್ಮನೂ ಕಾರಣನಾಗಿದ್ದಾರೆ. ಅವರಿಬ್ಬರೂ ದೂರವಾಗುವ ಪ್ರಶ್ನೆಯೇ ಇಲ್ಲ. ಯಾರಿಂದಲೂ ಅವರನ್ನು ಬೇರ್ಪಡಿಸಲು ಸಾಧ್ಯವಿಲ್ಲ ಎಂದು ಪರೋಕ್ಷವಾಗಿ ಚಾರ್ಮಿಗೆ ಎಚ್ಚರಿಕೆ ಕೊಟ್ಟಿದ್ದಾರೆ.

    ಪ್ರಕಾಶ್ ಆಡಿದ ಮಾತೂ ಕೂಡ ತೆಲುಗು ಸಿನಿಮಾ ರಂಗದಲ್ಲಿ ಸಂಚಲನ ಮೂಡಿಸಿದೆ. ಒಳ್ಳೆಯ ಪತ್ನಿಯನ್ನು ದೂರ ಮಾಡುವುದು ಸರಿ ಅಲ್ಲ ಎಂದು ಚಾರ್ಮಿಗೆ ಸೋಷಿಯಲ್ ಮೀಡಿಯಾದಲ್ಲಿ ಕಿವಿಮಾತು ಹೇಳುವಂತಹ ಕಾಮೆಂಟ್ಸ್ ಕೂಡ ಬಂದಿದೆ. ಆದರೆ, ಈ ಕುರಿತು ಚಾರ್ಮಿ ಆಗಲಿ, ಪುರಿ ಜಗನ್ನಾಥ್ ಆಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ತಮ್ಮ ಮಧ್ಯೆ ಇರುವ ಬಾಂಧವ್ಯದ ಕುರಿತು ಅವರು ಎಲ್ಲಿಯೂ ಮಾತನಾಡಿಲ್ಲ.

    Live Tv

  • ಬಾಹುಬಲಿ ಪ್ರಭಾಸ್‌ಗೆ ಕೊನೆಗೂ ಕೂಡಿ ಬಂತು ಕಂಕಣ ಭಾಗ್ಯ: ಹುಡುಗಿ ಯಾರು?

    ಬಾಹುಬಲಿ ಪ್ರಭಾಸ್‌ಗೆ ಕೊನೆಗೂ ಕೂಡಿ ಬಂತು ಕಂಕಣ ಭಾಗ್ಯ: ಹುಡುಗಿ ಯಾರು?

    ತೆಲುಗಿನ ಖ್ಯಾತ ನಟ, ಸದ್ಯ ಕನ್ನಡದ ನಿರ್ದೇಶಕ ಪ್ರಶಾಂತ್ ನೀಲ್ ಜೊತೆ ಸಲಾರ್ ಸಿನಿಮಾ ಮಾಡುತ್ತಿರುವ ಪ್ರಭಾಸ್ ಮದುವೆ ಬಗ್ಗೆ ಹಲವು ವರ್ಷಗಳಿಂದ ಇಡೀ ತೆಲುಗು ಇಂಡಸ್ಟ್ರಿ ತಲೆ ಕೆಡಿಸಿಕೊಂಡಿತ್ತು. ಪ್ರಭಾಸ್ ಎಲ್ಲಿಗೆ ಹೋಗಲಿ ಮದುವೆ ಬಗ್ಗೆ ಪ್ರಸ್ತಾಪವಾಗುತ್ತಿತ್ತು. ಯಾಕೆ ಜನರು ತನ್ನ ಮದುವೆಯ ಬಗ್ಗೆ ಇಷ್ಟೊಂದು ತಲೆ ಕೆಡಿಸಿಕೊಂಡಿದ್ದಾರೆ ಎಂದು ಸ್ವತಃ ಪ್ರಭಾಸ್ ಹೇಳಿಕೆ ನೀಡಿದ್ದರು. ಕೊನೆಗೂ ಈಗ ಅವರ ಮದುವೆಯ ಬಗ್ಗೆ ಸಿಹಿ ಸುದ್ದಿ ಸಿಕ್ಕಿದೆ. ಸದ್ಯದಲ್ಲೇ ಪ್ರಭಾಸ್ ಮದುವೆ ಆಗಲಿದ್ದಾರೆ ಎಂದು ಕುಟುಂಬದ ಸದಸ್ಯರು ಹೇಳಿಕೊಂಡಿದ್ದಾರೆ.

    ಪ್ರಭಾಸ್ ಪಾಲಕರು ಈಗಾಗಲೇ ಹುಡುಗಿಯನ್ನು ಗೊತ್ತು ಮಾಡಿದ್ದು, ಮನೆಯವರು ಆಯ್ಕೆ ಮಾಡಿದ ಹುಡುಗಿಯನ್ನೇ ಅವರು ಮದುವೆ ಆಗಲಿದ್ದಾರಂತೆ. ಹುಡುಗಿ ಸಿನಿಮಾ ರಂಗದವರು ಅಲ್ಲ ಎನ್ನುವ ಸುಳಿವನ್ನೂ ಅವರು ನೀಡಿದ್ದಾರೆ. ಹಾಗಾಗಿ ಪ್ರಭಾಸ್ ಮತ್ತು ಹಲವು ನಟಿಯರ ಸಂಬಂಧದ ಬಗೆಗಿನ ಗಾಸಿಪ್ ಗೂ ಕೂಡ ಅವರು ತೆರೆ ಎಳೆದಿದ್ದಾರೆ. ಸಿನಿಮಾ ರಂಗಕ್ಕೆ ಸಂಬಂಧವೇ ಪಡದ ಹುಡುಗಿಯೊಂದಿಗೆ ಪ್ರಭಾಸ್ ಸಪ್ತಪದಿ ತುಳಿಯಲಿದ್ದಾರೆ. ಇದನ್ನೂ ಓದಿ: ನಾಲ್ಕು ಕೈ- ನಾಲ್ಕು ಕಾಲು ಇರುವ ಮಗುವಿನ ಶಸ್ತ್ರ ಚಿಕಿತ್ಸೆಗೆ ನೆರವಾದ ಸೋನು ಸೂದ್

    ಪ್ರಭಾಸ್ ಮತ್ತು ಹಲವು ನಟಿಯರ ಲವ್ವಿ ಡವ್ವಿ ಕಥೆಗಳು ತೆಲುಗು ಸಿನಿಮಾ ರಂಗದಲ್ಲಿ ಹರಿದಾಡುತ್ತಿದ್ದವು. ಅದರಲ್ಲೂ ಅನುಷ್ಕಾ ಜೊತೆ ಪ್ರಭಾಸ್ ಮದುವೆ ಆಗಲಿದ್ದಾರೆ ಎನ್ನುವ ಗಾಸಿಪ್ ಕೂಡ ಇತ್ತು. ಸಿನಿಮಾ ರಂಗದವರನ್ನೇ ಪ್ರಭಾಸ್ ಮದುವೆ ಆಗಲಿದ್ದಾರೆ ಎಂದು ಹೇಳಲಾಗಿತ್ತು. ಇದೆಲ್ಲ ಪ್ರಶ್ನೆಗೂ ಉತ್ತರ ಸಿಕ್ಕಿದ್ದು, ಈ ವರ್ಷದ ಒಳಗೆ ಪ್ರಭಾಸ್ ಹೊಸ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಸ್ವತಃ ಪ್ರಭಾಸ್ ಅಭಿಮಾನಿಗಳ ಸಂಘದ ಅಧ್ಯಕ್ಷ ಕೂಡ ಇದನ್ನು ಖಚಿತ ಪಡಿಸಿದ್ದಾರೆ.

  • ರಾಮಚರಣ್ ಒಪ್ಪಿದರೆ ಈಗಲೂ ಡೇಟಿಂಗ್ ಗೆ ರೆಡಿ ಎಂದ ಮಾಜಿ ವಿಶ್ವಸುಂದರಿ ಮಾನುಷಿ ಚಿಲ್ಲರ್

    ರಾಮಚರಣ್ ಒಪ್ಪಿದರೆ ಈಗಲೂ ಡೇಟಿಂಗ್ ಗೆ ರೆಡಿ ಎಂದ ಮಾಜಿ ವಿಶ್ವಸುಂದರಿ ಮಾನುಷಿ ಚಿಲ್ಲರ್

    ಸಾಮ್ರಾಟ್ ಪೃಥ್ವಿರಾಜ್ ಸಿನಿಮಾ ಮೂಲಕ ಬಾಲಿವುಡ್ ಪ್ರವೇಶ ಮಾಡಿರುವ ಮಾಜಿ ವಿಶ್ವಸುಂದರಿ ಮಾನುಷಿ ಚಿಲ್ಲರ್ ಗಮನ ಸೆಳೆಯುವಂತಹ ಮಾತುಗಳನ್ನು ಆಡಿದ್ದಾರೆ. ಅವರ ಆ ಮಾತು ತೆಲುಗು ಸಿನಿಮಾ ರಂಗದಲ್ಲಿ ಭಾರೀ ಸದ್ದು ಮಾಡುತ್ತಿದೆ. ಸ್ಟಾರ್ ನಟ ರಾಮಚರಣ್ ತೇಜ ಹೆಂಡತಿಯು ತಲೆ ಕೆಡಿಸಿಕೊಂಡು ಕೂರುವಂತಾಗಿದೆ. ಇದನ್ನೂ ಓದಿ : ನಿತ್ಯಾನಂದ ಕುರಿತು ಸಾಕ್ಷ್ಯಚಿತ್ರ : ದೇವಮಾನವನ ನಿಜಬಣ್ಣ ಬಟಾಬಯಲು

    ಅಕ್ಷಯ್ ಕುಮಾರ್ ಮುಖ್ಯಭೂಮಿಕೆಯ ಸಾಮ್ರಾಟ್ ಪೃಥ್ವಿರಾಜ್ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿರುವ ಮಾನಷಿ ಚಿಲ್ಲರ್, ಇದೀಗ ಆ ಸಿನಿಮಾ ಪ್ರಚಾರದ ಬ್ಯುಸಿಯಲ್ಲಿದ್ದಾರೆ. ಇಂದು ರಿಲೀಸ್ ಆಗಿರುವ ಸಿನಿಮಾದ ಬಗ್ಗೆ ಒಳ್ಳೆಯ ಮಾತು ಕೇಳಿ ಬರುತ್ತಿದೆ. ಈ ಸಂದರ್ಭದಲ್ಲಿ ಮಾನಷಿ ಆಡಿದ ಮಾತು ಕೂಡ ವೈರಲ್ ಆಗಿದೆ. ಇದನ್ನೂ ಓದಿ : ಉಪೇಂದ್ರ ನಿರ್ದೇಶಿಸಿ, ನಟಿಸಲಿರುವ ಸಿನಿಮಾಗೆ ಮುಹೂರ್ತ : ಹಣೆ ಮೇಲೆ ಟೈಟಲ್ ಹಾಕಿಕೊಂಡು ಬಂದ ಚಿತ್ರತಂಡ

    ಮಾನಷಿ ಚಿಲ್ಲರ್ ಆರ್.ಆರ್.ಆರ್ ಸಿನಿಮಾ ನೋಡಿದಾಗ ರಾಮ್ ಚರಣ್ ಬಗ್ಗೆ ವಿಪರೀತ ಲವ್ ಆಯಿತಂತೆ. ಅವರ ದೊಡ್ಡ ಅಭಿಮಾನಿಯಾಗಿ ಅವರು ಬದಲಾದರಂತೆ. ರಾಮ್ ಚರಣ್ ತೇಜ ಅವರಿಗೆ ಮದುವೆ ಆಗದೇ ಇದ್ದರೆ, ನಾನು ಅವರನ್ನು ಡೇಟಿಗೆ ಕರೆಯುತ್ತಿದ್ದೆ ಎಂದು ಹೇಳಿಕೆ ನೀಡಿದ್ದಾರೆ. ಅವರಿಗೆ ಮದುವೆಯಾದರೂ ಪರವಾಗಿಲ್ಲ. ಈಗಲೂ ಅವರು ಒಪ್ಪಿದರೆ ನಾನು ರೆಡಿ ಎಂದು ಹೇಳಿದ್ದಾರೆ. ಈ ಮಾತು ರಾಮ್ ಚರಣ್ ಅಭಿಮಾನಿಗಳನ್ನು ಖುಷಿಗೊಳಿಸಿದೆ.

  • ಸರಾಯಿ ಜೊತೆ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ನಟಿ

    ಸರಾಯಿ ಜೊತೆ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ನಟಿ

    ಟಿಯರ ಆತ್ಮಹತ್ಯೆಯ ಸರಣಿ ಮತ್ತೆ ಮುಂದುವರೆದಿದ್ದು, ಇದೀಗ ಕೋಲ್ಕತ್ತಾದಿಂದ ತೆಲುಗು ಸಿನಿಮಾ ರಂಗಕ್ಕೆ ಶಿಫ್ಟ್ ಆಗಿದೆ. ಹದಿನೈದು ದಿನಗಳಲ್ಲಿ ಪಶ್ಚಿಮ ಬಂಗಾಳದ ನಾಲ್ವರು ನಟಿಯರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸರಣಿ ಸಾವು ಪೊಲೀಸ್ ಅಧಿಕಾರಿಗಳನ್ನೂ ನಿದ್ದೆಗೆಡಿಸಿತ್ತು. ತನಿಖೆಗೂ ಆದೇಶ ಮಾಡಲಾಗಿದೆ. ಇದನ್ನೂ ಓದಿ: ಸಿಧು ಮೂಸೆ ವಾಲಾ ಹತ್ಯೆ: ತನಿಖೆ ವೇಳೆ ಶಾಕಿಂಗ್ ವಿಚಾರ ಬಯಲು

    ಈ ಪ್ರಕರಣಗಳು ಸದ್ದು ಮಾಡುತ್ತಿರುವ ಬೆನ್ನಲ್ಲೇ ಟಾಲಿವುಡ್ ನಲ್ಲೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ವರದಿಯಾಗಿದೆ. ತೆಲುಗಿನ ಕಿರುತೆರೆಯ ಹೆಸರಾಂತ ನಟ ಮೈಥಿಲಿ, ಭಾರೀ ಪ್ರಮಾಣದ ಮದ್ಯದ ಜೊತೆ ನಿದ್ದೆ ಮಾತ್ರೆ ಬೆರೆಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತೀವ್ರ ಅಸ್ವಸ್ಥಗೊಂಡಿರುವ ನಟಿಯನ್ನು ಹೈದರಾಬಾದ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ವಿಜಯ್ ದೇವರಕೊಂಡ ಚಿತ್ರಕ್ಕೆ ಜೋಡಿಯಾಗಿ ಕರಾವಳಿ ನಟಿ ಫಿಕ್ಸ್

    ಮೈಥಿಲಿ ರೆಡ್ಡಿ ಆತ್ಮಹತ್ಯೆಗೆ ಕೌಟುಂಬಿಕ ಕಲಹವೇ ಕಾರಣ ಎನ್ನಲಾಗುತ್ತಿದೆ. ಪತಿಯು ಬೇರೆ ಹುಡುಗಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರು ಎನ್ನುವ ಕಾರಣಕ್ಕಾಗಿ ಕುಟುಂಬದಲ್ಲಿ ಗಲಾಟೆಗಳು ನಡೆಯುತ್ತಿದ್ದವು ಎಂದು ಹೇಳಲಾಗಿದ್ದು, ಈ ಸಂಬಂಧ ಎರಡು ಬಾರಿ ಮೈಥಿಲಿ ಅವರು ಗಂಡನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇದನ್ನೂ ಓದಿ:ಕಿಯಾರಾಗೆ ಸಿದ್ಧಾರ್ಥ್ ಮಲ್ಹೋತ್ರಾ ಕ್ಲಾಸ್: ಅಷ್ಟಕ್ಕೂ ಆಗಿದ್ದೇನು?

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಗುಟ್ಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಈ ಆತ್ಮಹತ್ಯೆಯ ಯತ್ನಕ್ಕೆ ನಿಜವಾದ ಕಾರಣ ಏನು ಅನ್ನುವ ಕುರಿತು ತನಿಖೆ ನಡೆಸಲಾಗುತ್ತಿದೆ. ಅಂದಹಾಗೆ ಪತಿ ಶ್ರೀಧರ್ ರೆಡ್ಡಿ ಕೂಡ ಟಿವಿ ಕಾರ್ಯಕ್ರಮವೊಂದರ ನಿರ್ದೇಶಕ ಎನ್ನಲಾಗುತ್ತಿದೆ.

  • ಪ್ರಶಾಂತ್ ನೀಲ್ ಕನ್ನಡಕ್ಕೆ ಸಿಗುವುದು ಅನುಮಾನ?: ತೆಲುಗಿನ ಮತ್ತೊಬ್ಬ ಸ್ಟಾರ್ ನಟನಿಗೆ 6ನೇ ಸಿನಿಮಾ

    ಪ್ರಶಾಂತ್ ನೀಲ್ ಕನ್ನಡಕ್ಕೆ ಸಿಗುವುದು ಅನುಮಾನ?: ತೆಲುಗಿನ ಮತ್ತೊಬ್ಬ ಸ್ಟಾರ್ ನಟನಿಗೆ 6ನೇ ಸಿನಿಮಾ

    ಕೆಜಿಎಫ್ ಸಿನಿಮಾದ ನಂತರ ಪ್ರಶಾಂತ್ ನೀಲ್ ಭಾರತೀಯ ಸಿನಿಮಾ ರಂಗದ ಬಹುಬೇಡಿಕೆಯ ನಿರ್ದೇಶಕರಾಗುತ್ತಿದ್ದಾರೆ. ಇದರ ಜೊತೆಗೆ ಅವರು ಕನ್ನಡ ಸಿನಿಮಾಗಳಿಗೆ ಸಿಗುವುದು ಅನುಮಾನ ಎನ್ನುವಂತಹ ಸುದ್ದಿಗಳು ತೆಲುಗು ಸಿನಿಮಾ ರಂಗದಿಂದ ಕೇಳಿ ಬರುತ್ತಿವೆ. ಸಿಕ್ಕಿರುವ ಮಾಹಿತಿ ಪ್ರಕಾರ ಅವರು ಇನ್ನೂ ಆರೇಳು ವರ್ಷಗಳ ಕಾಲ ಕನ್ನಡ ಸಿನಿಮಾವನ್ನೇ ಮಾಡುವುದಿಲ್ಲ ಎನ್ನುವುದು ಆಘಾತಕಾರಿ ಬೆಳವಣಿಗೆ. ಇದನ್ನೂ ಓದಿ : ‘ಕಾಳಿ’ ಟೈಟಲ್ ಧ್ರುವ ಸರ್ಜಾಗಾ? ಅಥವಾ ಅಭಿಷೇಕ್ ಅಂಬರೀಶ್ ಗಾ?

    ಸದ್ಯ ತೆಲುಗಿನ ಸಲಾರ್ ಸಿನಿಮಾಗೆ ಪ್ರಶಾಂತ್ ನೀಲ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರಕ್ಕೆ ಪ್ರಭಾಸ್ ನಾಯಕನಾದರೆ, ಕನ್ನಡದ್ದೇ ಆದ ಹೊಂಬಾಳೆ ಫಿಲ್ಮ್ಸ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಅಷ್ಟರ ಮಟ್ಟಿಗೆ ಪ್ರಶಾಂತ್ ನೀಲ್ ಕನ್ನಡದವರೊಂದಿಗೆ ಕೆಲಸ ಮಾಡುತ್ತಿದ್ದಾರೆ. ಈ ಸಿನಿಮಾ ಮುಗಿಯುತ್ತಿದ್ದಂತೆಯೇ ಜ್ಯೂನಿಯರ್ ಎನ್.ಟಿ.ಆರ್ ಗಾಗಿ ಪ್ರಶಾಂತ್ ನೀಲ್ ಚಿತ್ರ ಮಾಡಲಿದ್ದಾರೆ. ಈ ಸಿನಿಮಾವನ್ನು ತೆಲುಗಿನ ಸಂಸ್ಥೆಯೇ ನಿರ್ಮಾಣ ಮಾಡುತ್ತಿದೆ. ಈ ಎರಡೂ ಚಿತ್ರಗಳ ನಂತರ ಅವರು ಕನ್ನಡ ಸಿನಿಮಾ ಮಾಡಲಿದ್ದಾರೆ ಎನ್ನುವ ಮಾಹಿತಿ ಇತ್ತು. ಅದಕ್ಕೂ ಇದೀಗ ಕಲ್ಲು ಬಿದ್ದಿದೆ. ಇದನ್ನೂ ಓದಿ: ಬ್ರ್ಯಾಂಡ್ ಬೆಂಗಳೂರು ಹೆಸರು ಉಳಿಸಿ – ಪ್ರಧಾನಿಗೆ ನಟ ಅನಿರುದ್ಧ್ ಪತ್ರ

    ಇದೀಗ ತೆಲುಗಿನಲ್ಲಿ ಭಾರೀ ಸುದ್ದಿ ಆಗಿದ್ದು ಪ್ರಶಾಂತ್ ನೀಲ್, ತೆಲುಗಿನ ಮತ್ತೊಬ್ಬ ಸ್ಟಾರ್ ನಟನಿಗೆ ಸಿನಿಮಾ ಮಾಡಲಿದ್ದಾರೆ ಎನ್ನುವುದು. ಜ್ಯೂನಿಯರ್ ಎನ್.ಟಿ.ಆರ್ ಚಿತ್ರ ಮುಗಿಯುತ್ತಿದ್ದಂತೆಯೇ ನಾನಿಗಾಗಿ ಅವರು ಸಿನಿಮಾ ಮಾಡಲಿದ್ದಾರಂತೆ. ಇದು ನಿಜವೋ, ಸುಳ್ಳೋ ಗೊತ್ತಿಲ್ಲ. ಆದರೆ, ತೆಲುಗು ಸಿನಿಮಾ ರಂಗದಲ್ಲಿ ಮಾತ್ರ ಈ ಸುದ್ದಿ ಭಾರೀ ಗಿರಿಕಿಯಂತೂ ಹೊಡೆಯುತ್ತಿದೆ. ಇದನ್ನೂ ಓದಿ: ಚೇತನಾ ರಾಜ್ ಸಾವಿನ ಬೆನ್ನಲ್ಲೇ ಬಾಡಿ ಶೇಮಿಂಗ್ ಬಗ್ಗೆ ವಿನಯಾ ಪ್ರಸಾದ್ ಪುತ್ರಿ ಖಡಕ್ ಮಾತು

    ಜ್ಯೂನಿಯರ್ ಎನ್.ಟಿ.ಆರ್ ಸಿನಿಮಾದ ನಂತರ ಪ್ರಶಾಂತ್ ನೀಲ್ ಅವರು ಮತ್ತೆರಡು ಕನ್ನಡ ಸಿನಿಮಾಗಳನ್ನು ಮಾಡಲಿದ್ದಾರೆ ಎನ್ನುವ ಸುದ್ದಿಯಿತ್ತು. ಒಂದು ಸಿನಿಮಾವನ್ನು ಶ್ರೀಮುರುಳಿಗೆ ಮಾಡಿದರೆ, ಮತ್ತೊಂದು ಸಿನಿಮಾವನ್ನು ಯಶ್ ಗಾಗಿಯೇ ನಿರ್ದೇಶನ ಮಾಡಲಿದ್ದಾರೆ ಎನ್ನುವ ಮಾಹಿತಿ ಇತ್ತು. ಆದರೆ, ಈ ನಡುವೆ ನಾನಿ ಅವರ ಸಿನಿಮಾ ಸೇರ್ಪಡೆಗೊಂಡಿದೆ. ಸುದ್ದಿಗಳು ಏನೇ ಹರಿದಾಡಿದರೂ, ನಿಜ ಏನು ಅನ್ನುವ ಕುರಿತು ಪ್ರಶಾಂತ್ ನೀಲ್ ಅವರೇ ಉತ್ತರಿಸಬೇಕು.

  • ತೆಲುಗಿನ ಖ್ಯಾತ ನಟನಿಗೆ ಬೆವರಳಿಸಿದ ಕನ್ನಡಿಗರು: ಕೊನೆಗೂ ಕ್ಷಮೆ ಕೇಳಿದ ನಟ

    ತೆಲುಗಿನ ಖ್ಯಾತ ನಟನಿಗೆ ಬೆವರಳಿಸಿದ ಕನ್ನಡಿಗರು: ಕೊನೆಗೂ ಕ್ಷಮೆ ಕೇಳಿದ ನಟ

    ಕ್ಷಿಣದ ಬಹುತೇಕ ಸಿನಿಮಾಗಳು ಬೇರೆ ಬೇರೆ ಭಾಷೆಗಳಿಗೆ ಡಬ್ ಆಗಿ ರಿಲೀಸ್ ಆಗುತ್ತಿವೆ. ಆರ್.ಆರ್.ಆರ್, ಪುಷ್ಪಾ, ಕೆಜಿಎಫ್ 2 ಸಿನಿಮಾ ಸೇರಿದಂತೆ ಹಲವು ಚಿತ್ರಗಳು ಬೇರೆ ಬೇರೆ ಭಾಷೆಗೆ ಡಬ್ ಆಗಿ, ಸಖತ್ ಕಮಾಯಿ ಮಾಡುತ್ತಿವೆ. ಈ ನಡುವೆ ತೆಲುಗಿನ ನ್ಯಾಚುರಲ್ ಸ್ಟಾರ್ ಎಂದೇ ಖ್ಯಾತರಾಗಿರುವ ನಾನಿ ನಟನೆಯ ಸಿನಿಮಾವೊಂದು ತೆರೆಗೆ ಬರುತ್ತಿದೆ. ಈ ಸಿನಿಮಾದ ಕುರಿತು ಮೊನ್ನೆಯಷ್ಟೇ ಪ್ರೆಸ್ ಮೀಟ್ ಕೂಡ ಆಗಿದೆ. ಇದನ್ನೂ ಓದಿ : ಕನ್ನಡ ಚಿತ್ರರಂಗವನ್ನು ರಾಷ್ಟ್ರಮಟ್ಟಕ್ಕೆ ತಗೆದುಕೊಂಡು ಹೋದ ಮೊದಲಿಗರಾರು? ಹೀಗಿದೆ ನಟ ಜಗ್ಗೇಶ್ ಉತ್ತರ

    ಸದ್ಯ ನಾನಿ ನಟನೆಯ ‘ಅಂತೆ ಸುಂದರಾನಿಕಿ’ ಸಿನಿಮಾ ಹಲವು ಭಾಷೆಗಳಿಗೆ ಡಬ್ ಆಗಿ ರಿಲೀಸ್ ಆಗುತ್ತಿದೆ. ಈ ಸಂದರ್ಭದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ‘ಎಲ್ಲ ಭಾಷೆಗೂ ನಿಮ್ಮ ಸಿನಿಮಾ ಡಬ್ ಆಗಿದೆ. ಕನ್ನಡಕ್ಕೆ ಯಾಕೆ ಡಬ್ ಆಗಿಲ್ಲ’ ಎಂಬ ಪ್ರಶ್ನೆಯೊಂದು ಎದುರಾಯಿತು. ಈ ಪ್ರಶ್ನೆಗೆ ಧೈರ್ಯದಿಂದಲೇ ಉತ್ತರಿಸಿದ ನಾನಿ, ‘ಕನ್ನಡಿಗರಿಗೆ ತೆಲುಗು ತುಂಬಾ ಚೆನ್ನಾಗಿ ಬರುತ್ತದೆ. ಅವರು ಅದೇ ಭಾಷೆಯಲ್ಲೇ ಸಿನಿಮಾ ನೋಡುತ್ತಾರೆ. ಕನ್ನಡಕ್ಕೆ ಈ ಸಿನಿಮಾವನ್ನು ಡಬ್ ಮಾಡುವುದರ ಅವಶ್ಯಕತೆ ಇಲ್ಲ’ ಎಂದು ಉತ್ತರ ಕೊಟ್ಟಿದ್ದರು. ಇದನ್ನೂ ಓದಿ :  ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ನಿರ್ದೇಶಕನ ವಿರುದ್ಧ ಕಿಡಿಕಾರಿದ ಸಿಖ್ ಸಂಘ

    ನಾನಿ ಈ ಉತ್ತರಕ್ಕೆ ಕನ್ನಡಿಗರ ಗರಂ ಆಗಿದ್ದರು. ‘ಬೈಕಾಟ್ ಅಂತೆ ಸುಂದರಾನಿಕಿ’ ಎನ್ನುವ ಹ್ಯಾಶ್ ಟ್ಯಾಗ್ ಅಡಿಯಲ್ಲಿ ಸಿನಿಮಾವನ್ನು ಬೈಕಾಟ್ ಮಾಡುವುದಾಗಿ ಕೆಲವು ಕನ್ನಡಿಗರು ಹೇಳಿದ್ದರು. ಇದರಿಂದ ಎಚ್ಚೆತ್ತುಕೊಂಡಿರುವ ನಾನಿ, ಕನ್ನಡಿಗರಿಗೆ ಕ್ಷಮೆ ಕೇಳಿದ್ದಾರೆ. ನನಗೆ ಕನ್ನಡದ ಬಗ್ಗೆ ಅಪಾರ ಗೌರವವಿದೆ. ಭಾಷೆಗೆ ನಾನು ಅವಹೇಳನ ಮಾಡಿಲ್ಲ. ಕನ್ನಡಿಗರಿಗೆ ತೆಲುಗು ಚೆನ್ನಾಗಿ ಗೊತ್ತಿದೆ ಎಂದು ಹೆಮ್ಮೆಯಿಂದ ಹೇಳಿದ್ದೆ. ಅದನ್ನು ಅಪಾರ್ಥ ಮಾಡಿಕೊಳ್ಳಲಾಗಿದೆ ಎಂದಿದ್ದಾರೆ. ಇದನ್ನೂ ಓದಿ : ನಟಿ ಮಂದನಾ ಕರೀಮಿಗೆ ಮೋಸ ಮಾಡಿದ್ರಾ ನಿರ್ದೇಶಕ ಅನುರಾಗ್ ಕಶ್ಯಪ್?

    ಅಪಾಲಜಿ ಕೇಳಿದ ವಿಷಯವನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದಾರೆ. ಕನ್ನಡಿಗರ ಬಗ್ಗೆ ತಮಗೆ ಅಪಾರ ಗೌರವ ಇರುವುದಾಗಿಯೂ ನಾನಿ ಹೇಳಿದ್ದಾರೆ. ಕನ್ನಡಿಗರ ಎಲ್ಲ ಭಾಷೆಯನ್ನೂ ಪ್ರೀತಿಸುತ್ತಾರೆ. ನನ್ನ ಮಾತಿನಿಂದ ಬೇಸರವಾಗಿದ್ದರೆ ಕ್ಷಮೆ ಕೇಳುತ್ತೇನೆ ಎಂದು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ ನಾನಿ.

  • RRR ದಾಖಲೆ ಸರಿಗಟ್ಟಿದ ರಾಕಿಭಾಯ್: ಟಿಕೆಟ್ ಬುಕ್ಕಿಂಗ್‌ನಲ್ಲಿ ಗಳಿಸಿದ್ದೆಷ್ಟು ಕೋಟಿ ಗೊತ್ತಾ?

    RRR ದಾಖಲೆ ಸರಿಗಟ್ಟಿದ ರಾಕಿಭಾಯ್: ಟಿಕೆಟ್ ಬುಕ್ಕಿಂಗ್‌ನಲ್ಲಿ ಗಳಿಸಿದ್ದೆಷ್ಟು ಕೋಟಿ ಗೊತ್ತಾ?

    ರಾಕಿಂಗ್ ಸ್ಟಾರ್ ಯಶ್ ನಟನೆಯ ‘ಕೆಜಿಎಫ್-2’ ಸಿನಿಮಾ ವಿಶ್ವದಾದ್ಯಂತ ತೆರೆಕಂಡಿದ್ದು, ಚಿತ್ರವೂ ಈಗಾಗಲೇ ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಬರೆಯಲು ಸಜ್ಜಾಗಿದೆ. ಚಿತವ್ರು ರಿಲೀಸ್‌ಗೂ ಮುನ್ನವೇ 20 ಕೋಟಿ ಮೌಲ್ಯದ ಟಿಕೆಟ್ ಮಾರಾಟವಾಗಿದ್ದು, ರಾಜಮೌಳಿ ನಿರ್ದೇಶನ ಆರ್‌ಆರ್‌ಆರ್ ಸಿನಿಮಾದ ದಾಖಲೆಯನ್ನೂ ಸರಿಗಟ್ಟಿದೆ.

    kgf

    ಮಧ್ಯರಾತ್ರಿಯಿಂದಲೇ ತೆರೆಗೆ ಬಂದ ಕೆಜಿಎಫ್-2ಗೆ ಎಲ್ಲ ಭಾಷೆಗಳಲ್ಲಿಯೂ ಭರ್ಜರಿ ಓಪನಿಂಗ್ ಸಿಕ್ಕಿದ್ದು, ಕನ್ನಡ ಮಾತ್ರವಲ್ಲದೆ ಹಿಂದಿ, ತೆಲುಗು, ತಮಿಳು, ಮಲಯಾಳಂ ಸಿನಿಮಾ ರಂಗಗಳಲ್ಲೂ ಚಿತ್ರಕ್ಕೆ ಪ್ರಶಂಸೆ ವ್ಯಕ್ತವಾಗಿದೆ. ಅಲ್ಲದೆ, ಕೋವಿಡ್ ನಂತರ ಬಿಡುಗಡೆಯಾದ ಹಿಂದಿ ಚಲನಚಿತ್ರಗಳನ್ನೂ ಕೆಜಿಎಫ್-2 ಹಿಂದಿಕ್ಕಿರುವುದು ಮತ್ತೊಂದು ವಿಶೇಷ. ಇದನ್ನೂ ಓದಿ: ಕೆಜಿಎಫ್ 2 : ಈ ಎಲ್ಲ ಸೆಲೆಬ್ರಿಟಿಗಳು ಮಧ್ಯೆ ರಾತ್ರಿಯೇ ಸಿನಿಮಾ ನೋಡಿದ್ರು

    rrr - kgf

    ಮಧ್ಯರಾತ್ರಿಯಿಂದಲೇ ಶೋ ನೋಡಿ ಬಂದವರು ರಾಕಿಭಾಯ್‌ಯನ್ನು ಹೊಗಳುತ್ತಿದ್ದಾರೆ. ಅನೇಕ ಮಹಿಳಾ ಅಭಿಮಾನಿಗಳು, ಮಕ್ಕಳು ಫಿದಾ ಆಗಿದ್ದು, ರಾಕಿಭಾಯ್‌ಗಾಗಿ ಥಿಯೇಟರ್ ಮುಂದೆಯೇ ಸ್ಟೆಪ್ ಹಾಕುತ್ತಿದ್ದಾರೆ. 5 ಭಾಷೆಗಳಲ್ಲಿ ಸುಮಾರು 70 ದೇಶಗಳಲ್ಲಿ ಕೆಜಿಎಫ್-2 ಬಿಡುಗಡೆಯಾಗಿದ್ದು, ಉತ್ತರ ಭಾರತದಲ್ಲಿ ಕೂಡ ಕೆಜಿಎಫ್-2 ಹವಾ ಆರಂಭವಾಗಿದೆ. ಇದನ್ನೂ ಓದಿ: ಕೆಜಿಎಫ್ 2: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪಾತ್ರದಲ್ಲಿ ರವೀನಾ ಟಂಡನ್?

    kgf 2

    ಈಗಾಗಲೇ ಟಿಕೆಟ್ ಬುಕ್ಕಿಂಗ್ ಆದಾಯದಲ್ಲಿ ಕನ್ನಡದಲ್ಲಿ 4.90 ಕೋಟಿ, ಹಿಂದಿಯಲ್ಲಿ 11.40 ಕೋಟಿ, ಮಲಯಾಳಂನಲ್ಲಿ 1.90 ಕೋಟಿ, ತೆಲುಗಿನಲ್ಲಿ 5 ಲಕ್ಷ, ತಮಿಳಿನಲ್ಲಿ 2 ಕೋಟಿಗೆ ಸೇರಿ 20.25 ಕೋಟಿ ರೂ.ಗೆ ಮುಂಗಡ ಟಿಕೆಟ್ ಮಾರಾಟವಾಗಿದೆ. ಸದ್ಯ ಕೆಜಿಎಫ್‌ಗೆ ಸವಾಲೊಡ್ಡಲು ಸಿದ್ಧವಾಗಿದ್ದ ಶಾಹಿದ್ ಕಪೂರ್ ನಟನೆಯ `ಜೆರ್ಸಿ’ ಚಿತ್ರವು ಕಾಪಿರೈಟ್ ಸಮಸ್ಯೆ ಎದುರಿಸುತ್ತಿದ್ದು, ಚಿತ್ರ ಬಿಡುಗಡೆಯನ್ನು ಮುಂದೂಡಲಾಗಿದೆ.