Tag: Telugu

  • ತೆಲುಗು ಸೂಪರ್ ಸ್ಟಾರ್ ಕೃಷ್ಣ ಮಾಡಿದ ದಾಖಲೆಗಳು ಯಾವವು?

    ತೆಲುಗು ಸೂಪರ್ ಸ್ಟಾರ್ ಕೃಷ್ಣ ಮಾಡಿದ ದಾಖಲೆಗಳು ಯಾವವು?

    ತೆಲುಗಿನ ಸೂಪರ್ ಸ್ಟಾರ್ ಕೃಷ್ಣ ಅವರು ಸಿನಿಮಾ ರಂಗದಲ್ಲಿ ಮಾಡಿದ ದಾಖಲೆಗಳನ್ನೂ ಈವರೆಗೂ ಯಾರೂ ಮುರಿಯುವುದಕ್ಕೆ ಸಾಧ್ಯವಾಗಿಲ್ಲ. ಅಲ್ಲದೇ, ತೆಲುಗು ಸಿನಿಮಾ ರಂಗದಲ್ಲಿ ಅವರು ಹಲವು ಮೊದಲುಗಳಿಗೆ ಕಾರಣವೂ ಆಗಿದ್ದಾರೆ. ಕೇವಲ ನಟರಾಗಿ ಮಾತ್ರವಲ್ಲ, ನಿರ್ದೇಶಕರಾಗಿ, ನಿರ್ಮಾಪಕರಾಗಿ, ರಾಜಕಾರಣಿಯಾಗಿ ಸ್ಟುಡಿಯೋ ಮಾಲೀಕರು ಆಗಿ ಹತ್ತು ಹಲವು ದಾಖಲೆಗಳನ್ನು ಬರೆದಿದ್ದಾರೆ. ಆ ದಾಖಲೆಗಳು ಇವತ್ತಿಗೂ ಹಾಗೆಯೇ ಉಳಿದಿವೆ.

    ತೆಲುಗಿನ ಮೊದಲ ಸಿನಿಮಾ ಸ್ಕೋಪ್ ಚಿತ್ರ ಅಲ್ಲೂರಿ ಸೀತಾರಾಮ ರಾಜು ಸಿನಿಮಾದ ಹೀರೋ ಇವರಾಗಿದ್ದಾರೆ. ಒಂದೇ ವರ್ಷದಲ್ಲಿ ಇವರು 18 ಸಿನಿಮಾಗಳು ಬಿಡುಗಡೆಯಾಗಿವೆ. ಈ ದಾಖಲೆಯನ್ನು ಈವರೆಗೂ ಯಾರೂ ಮುರಿಯುವುದಕ್ಕೆ ಸಾಧ್ಯವಾಗಿಲ್ಲ. 1972ರಲ್ಲಿ ಈ ದಾಖಲೆಯಾಗಿದ್ದು, ಈವರೆಗೂ ಅಷ್ಟೊಂದು ಸಿನಿಮಾಗಳು ಯಾವ ನಟರು ಮಾಡಿಲ್ಲ. ಇದನ್ನೂ ಓದಿ:`ಬನಾರಸ್’ ಚಿತ್ರದ ಬೆನ್ನಲ್ಲೇ ಝೈದ್ ಖಾನ್‌ಗೆ ಬಂತು ಬಿಗ್ ಆಫರ್

    ಟಾಲಿವುಡ್ ನ ಮೊದಲ ಕೌಬಾಯ್ ಆಗಿ ಕೃಷ್ಣ ನಟಿಸಿದ್ದಾರೆ. ತೆಲುಗಿನ ಮೊದಲ 70 ಎಂಎಂ ಚಿತ್ರಕ್ಕೆ ಕೃಷ್ಣ ಅವರೇ ಹೀರೋ. ಮೊದಲ ಈಸ್ಟ್ ಮನ್ ಕಲರ್ ಸಿನಿಮಾದಲ್ಲಿ ನಟಿಸಿದ ಹೆಗ್ಗಳಿಕೆಯೂ ಇವರದ್ದು. ತೆಲುಗಿನ ಮೊದಲ ಡಿಟಿಎಸ್ ಎಫೆಕ್ಟ್ ಸಿನಿಮಾ ವೀರ ಲೇವರ ಚಿತ್ರದಲ್ಲೂ ಇವರು ನಾಯಕ ನಟರಾಗಿ ಕಾಣಿಸಿಕೊಂಡಿದ್ದಾರೆ. ಪದ್ಮಾಲಯ ಸ್ಟುಡಿಯೋಸ್ ಸ್ಥಾಪಿಸುವ ಮೂಲಕ ಸಿನಿಮಾ ರಂಗಕ್ಕೆ ಅತ್ಯುತ್ತಮ ಸಿನಿಮಾಗಳನ್ನು ನೀಡಿದ್ದಾರೆ.

    ವಿಜಯ ನಿರ್ಮಲಾ ಜೊತೆ 48 ಸಿನಿಮಾಗಳಲ್ಲಿ ನಟಿಸಿದ ಹೆಗ್ಗಳಿಕೆ ಇವರದ್ದು. ವಿಜಯಾ ನಿರ್ಮಾಲ ಇವರ ಮೊದಲ ಪತ್ನಿ ಕೂಡ ಆಗಿದ್ದಾರೆ. ನಟಿ ಜಯಪ್ರದಾ ಜೊತೆಗೆ 47 ಸಿನಿಮಾಗಳನ್ನು ಮಾಡಿದ ದಾಖಲೆಯೂ ಇವರ ಜೊತೆಗಿದೆ. 55 ವರ್ಷಗಳ ಕಾಲ ಸಿನಿಮಾ ರಂಗದಲ್ಲೇ ತಮ್ಮನ್ನು ತಾವು ತೊಡಗಿಸಿಕೊಂಡ ಅಪರೂಪದ ನಟ. 350ಕ್ಕೂ ಅಧಿಕ ಚಿತ್ರಗಳಲ್ಲಿ ಕೃಷ್ಣ ನಟಿಸಿದ್ದಾರೆ.

    ಗೂಢಚಾರಿ 116, ಪ್ರೈವೆಟ್ ಮಾಸ್ಟರ್, ಮಂಚಿ ಕುಟುಂಬಂ, ಮೋಸಗಾಡಿಕಿ ಮೋಸಗಾಳ್ಳು,ನಂಬರ್ 1, ಸಿಂಹಾಸನಂ, ರಾಮ್ ರಾಬರ್ಟ್ ರಹೀಂ, ಅಲ್ಲೂರಿ ಸೀತಾರಾಮ ರಾಜು ಹೀಗೆ ಸಾಕಷ್ಟು ಚಿತ್ರಗಳು ಸೂಪರ್ ಹಿಟ್ ಸಾಲಿನಲ್ಲಿ ಕಾಣಿಸಿಕೊಳ್ಳುತ್ತವೆ.

    Live Tv
    [brid partner=56869869 player=32851 video=960834 autoplay=true]

  • ಒಂದೂವರೆ ತಿಂಗಳ ಅಂತರದಲ್ಲಿ ತಂದೆ-ತಾಯಿ ಕಳೆದುಕೊಂಡ ಸೂಪರ್ ಸ್ಟಾರ್

    ಒಂದೂವರೆ ತಿಂಗಳ ಅಂತರದಲ್ಲಿ ತಂದೆ-ತಾಯಿ ಕಳೆದುಕೊಂಡ ಸೂಪರ್ ಸ್ಟಾರ್

    ತೆಲುಗಿನ ಸೂಪರ್ ಸ್ಟಾರ್ ಮಹೇಶ್ ಬಾಬು ಕೇವಲ ಒಂದೂವರೆ ತಿಂಗಳ ಅಂತರದಲ್ಲಿ ತಂದೆ ಮತ್ತು ತಾಯಿಯನ್ನು ಕಳೆದುಕೊಂಡಿದ್ದಾರೆ. ಒಂದೂವರೆ ತಿಂಗಳ ಹಿಂದೆಯಷ್ಟೇ ತಾಯಿ ಇಂದಿರಾ ದೇವಿಯನ್ನು ಮಹೇಶ್ ಬಾಬು ಕಳೆದುಕೊಂಡಿದ್ದರು. ಆ ದುಃಖದಲ್ಲೇ ಇನ್ನೂ ಇರುವಾಗ ಇದೀಗ ತಂದೆ ಕೃಷ್ಣ ಅವರನ್ನೂ ಕಳೆದುಕೊಂಡಿದ್ದಾರೆ. ನಿಜಕ್ಕೂ ಇದು ಆ ಕುಟುಂಬಕ್ಕೆ ಅರಗಿಸಿಕೊಳ್ಳಲಾಗದ ಸಂಗತಿ.

    ಕೃಷ್ಣ ಅವರಿಗೆ ಇಂದಿರಾ ದೇವಿ ಎರಡನೇ ಹೆಂಡತಿ. ಈ ದಂಪತಿಯ ಪುತ್ರ ತೆಲುಗಿನ ಸೂಪರ್ ಸ್ಟಾರ್ ಮಹೇಶ್ ಬಾಬು. ತಂದೆಯ ನೆರಳಿನಲ್ಲೇ ಬೆಳೆದು ಸೂಪರ್ ಸ್ಟಾರ್ ಆಗಿ ಮಿಂಚುತ್ತಿದ್ದಾರೆ ಮಹೇಶ್ ಬಾಬು. ತಂದೆ ತಾಯಿಯ ನೆಚ್ಚಿನ ಮಗನಾಗಿದ್ದ ಮಹೇಶ್ ಬಾಬು, ಅಪ್ಪನನ್ನು ನೆನಪಿಸುವಂತಹ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಅಪ್ಪ ಅಮ್ಮನನ್ನು ಉಳಿಸಿಕೊಳ್ಳಲು ಸಾಕಷ್ಟು ಕಷ್ಟ ಪಟ್ಟರು ಆದರೆ, ವಿಧಿಯಾಟ ಬೇರೆಯೇ ಆಗಿತ್ತು. ಹಾಗಾಗಿ ಇಬ್ಬರನ್ನೂ ಒಂದೂವರೆ ತಿಂಗಳ ಅಂತರದಲ್ಲಿ ಕಳೆದುಕೊಂಡಿದ್ದಾರೆ. ಇದನ್ನೂ ಓದಿ: ಮಗನ ಮುದ್ದಾದ ಫೋಟೋ ಹಂಚಿಕೊಂಡ ನಿಖಿಲ್ ಕುಮಾರಸ್ವಾಮಿ

    ಮಹೇಶ್ ಬಾಬು ಕುಟುಂಬದಲ್ಲಿ ಈ ವರ್ಷ ಸೂತಕದ ವರ್ಷವೆಂದೇ ಹೇಳಬಹುದು. ಜನವರಿಯಲ್ಲಿ ಕೃಷ್ಣ ಅವರ ಹಿರಿಯ ಮಗ ರಮೇಶ್ ಬಾಬು ನಿಧನಹೊಂದಿದ್ದರೆ, ಎರಡು ತಿಂಗಳ ಹಿಂದೆಯಷ್ಟೇ ಕೃಷ್ಣ ಅವರ ಎರಡನೇ ಪತ್ನಿ ಇಂದಿರಾ ದೇವಿ ಇಹಲೋಕ ತ್ಯಜಿಸಿದ್ದಾರೆ. ಮೊದಲನೇ ಹೆಂಡತಿ  ವಿಜಯ ನಿರ್ಮಲಾ ನಾಲ್ಕು ವರ್ಷಗಳ ಹಿಂದೆ ಬಾರದ ಲೋಕಕ್ಕೆ ಹೋಗಿದ್ದಾರೆ. ಇದೀಗ ಕೃಷ್ಣ ಕೂಡ ಕಣ್ಮರೆಯಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬಾಂಡ್ ಆಫ್ ತೆಲುಗು ಸಿನಿಮಾ ಸೂಪರ್ ಸ್ಟಾರ್ ಕೃಷ್ಣ ಜೀವನ ಚರಿತ್ರೆ

    ಬಾಂಡ್ ಆಫ್ ತೆಲುಗು ಸಿನಿಮಾ ಸೂಪರ್ ಸ್ಟಾರ್ ಕೃಷ್ಣ ಜೀವನ ಚರಿತ್ರೆ

    ತೆಲುಗು ಸಿನಿಮಾ ರಂಗದ ‘ಬಾಂಡ್ ಆಫ್ ತೆಲುಗು ಸಿನಿಮಾ’ ಎಂದೇ ಖ್ಯಾತರಾಗಿದ್ದ ಸೂಪರ್ ಸ್ಟಾರ್ ಕೃಷ್ಣ ನಿಧನರಾಗಿದ್ದಾರೆ. ತೆಲುಗಿನ ಪ್ರಿನ್ಸಿ ಮಹೇಶ್ ಬಾಬು ಅವರು ತಂದೆಯೂ ಆಗಿರುವ ಇವರು, ತೆಲುಗಿನಲ್ಲಿ ಸಾಕಷ್ಟು ಬಾಂಡ್ ಸಿನಿಮಾಗಳಲ್ಲಿ ನಟಿಸಿದ್ದಾರೆ. 70, 80ರ ದಶಕದಲ್ಲಿ ಸ್ಟಾರ್ ನಟರಾಗಿ ಮಿಂಚಿದ್ದ ಕೃಷ್ಣ ಅವರ ಪೂರ್ಣ ಹೆಸರು ಘಟ್ಟಮನೇನಿ ಶಿವರಾಮಕೃಷ್ಣಮೂರ್ತಿ. ಹುಟ್ಟಿದ್ದ 1942 ಮೇ 31 ರಂದು. ತೆನಾಲಿ ಬುರ್ರಿಪಾಳ್ಯದಲ್ಲಿ ಇವರು ಹುಟ್ಟಿದ್ದು.

    LIVE Krishna Dies, Telugu Superstar Mahesh Babu Father Passes Away at 79

    1964ರಲ್ಲಿ ತೆರೆಕಂಡ ತೇನ ಮನಸಲು ಸಿನಿಮಾ ಮೂಲಕ ಸಾಕಷ್ಟು ಹೆಸರು ಮಾಡಿದ್ದ ಇವರು ಬಿಎಸ್ಸಿ ಪದವಿಧರರಾಗಿದ್ದರೂ, ಬಣ್ಣದ ಮೇಲಿನ ಪ್ರೀತಿಯಿಂದಾಗಿ ನಾಟಕ ಪ್ರಪಂಚಕ್ಕೆ ಕಾಲಿಟ್ಟರು. ಕೇವಲ ಸಿನಿಮಾಗಳಲ್ಲಿ ನಟಿಸುವುದು ಮಾತ್ರವಲ್ಲ 16 ಚಿತ್ರಗಳನ್ನು ನಿರ್ದೇಶನ ಕೂಡ ಮಾಡಿದ್ದಾರೆ. 350ಕ್ಕೂ ಅಧಿಕ ಸಿನಿಮಾಗಳಲ್ಲಿ ನಟರಾಗಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಗೂಡಚಾರಿ 116, ಮೋಸಗಾಡು, ಪಂದಂಡಿ ಕಾಪುರಂ, ಮಂಚಿ ಕುಟುಂಬಂ ಸೇರಿದಂತೆ ಹಲವಾರು ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ಇದನ್ನೂ ಓದಿ: ಮಗನ ಮುದ್ದಾದ ಫೋಟೋ ಹಂಚಿಕೊಂಡ ನಿಖಿಲ್ ಕುಮಾರಸ್ವಾಮಿ

    ಸಿನಿಮಾ, ನಾಟಕಗಳಲ್ಲಿ ಮಾತ್ರವಲ್ಲ, ರಾಜಕಾರಣದಲ್ಲೂ ತಮ್ಮದೇ ಆದ ಛಾಪು ಮೂಡಿಸಿದವರು ಕೃಷ್ಣ. ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಂಡು ಲೋಕಸಭಾ ಸದಸ್ಯರಾಗಿಯೂ ಜನಪರ ಕೆಲಸಗಳನ್ನೂ ಮಾಡಿದ್ದಾರೆ. ಇವರ ಸೇವೆಗೆ ಪದ್ಮಭೂಷಣ ಪ್ರಶಸ್ತಿ ಸೇರಿದಂತೆ ಹಲವು ಪುರಸ್ಕಾರಗಳು ಸಂದಿವೆ. ಇತ್ತೀಚಿನ ದಿನಗಳಲ್ಲಿ ಸಿನಿಮಾ ರಂಗದಿಂದ ದೂರವಿದ್ದರೂ, ಇವರ ಪುತ್ರ ಮಹೇಶ್ ಬಾಬು ತೆಲುಗು ಸಿನಿಮಾ ರಂಗದ ಸೂಪರ್ ಸ್ಟಾರ್ ಆಗಿ ಮಿಂಚುತ್ತಿದ್ದಾರೆ.

    साउथ स्टार महेश बाबू के पिता को आया हार्ट अटैक, 2 महीने पहले हुआ था मां का निधन - telugu superstar Mahesh babu father krishna suffers cardiac arrest puts on ventilator indira

    ಮಹೇಶ್ ಬಾಬು ಕುಟುಂಬದಲ್ಲಿ ಈ ವರ್ಷ ಸೂತಕದ ವರ್ಷವೆಂದೇ ಹೇಳಬಹುದು. ಜನವರಿಯಲ್ಲಿ ಕೃಷ್ಣ ಅವರ ಹಿರಿಯ ಮಗ ರಮೇಶ್ ಬಾಬು ನಿಧನಹೊಂದಿದ್ದರೆ, ಎರಡು ತಿಂಗಳ ಹಿಂದೆಯಷ್ಟೇ ಕೃಷ್ಣ ಅವರ ಎರಡನೇ ಪತ್ನಿ ಇಂದಿರಾ ದೇವಿ ಇಹಲೋಕ ತ್ಯಜಿಸಿದ್ದಾರೆ. ಮೊದಲನೇ ಹೆಂಡತಿ  ವಿಜಯ ನಿರ್ಮಲಾ ನಾಲ್ಕು ವರ್ಷಗಳ ಹಿಂದೆ ಬಾರದ ಲೋಕಕ್ಕೆ ಹೋಗಿದ್ದಾರೆ. ಇದೀಗ ಕೃಷ್ಣ ಕೂಡ ಕಣ್ಮರೆಯಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ತೆಲುಗು ನಿರ್ದೇಶಕ ಕಾರ್ತಿಕ್ ಅದ್ವೈತ್ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟ ಶಿವಣ್ಣ

    ತೆಲುಗು ನಿರ್ದೇಶಕ ಕಾರ್ತಿಕ್ ಅದ್ವೈತ್ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟ ಶಿವಣ್ಣ

    ಹ್ಯಾಟ್ರಿಕ್ ಹೀರೋ, ಅಭಿಮಾನಿಗಳ ಪ್ರೀತಿಯ ಶಿವಣ್ಣ (Shivaraj Kumar) ಸ್ಯಾಂಡಲ್ ವುಡ್ ಬ್ಯುಸಿಯೆಸ್ಟ್ ನಟ. ಸದ್ಯ ಶಿವಣ್ಣ 125ನೇ ಸಿನಿಮಾ ‘ವೇದ’ ಡಿಸೆಂಬರ್ ನಲ್ಲಿ ತೆರೆ ಕಾಣಲು ಸಜ್ಜಾಗಿ ನಿಂತಿದೆ. ಘೋಸ್ಟ್, ನೀ ಸಿಗೋವರೆಗೂ, ಫಾರ್ಟಿಫೈವ್, ಕರಟಕ ದಮನಕ ಸಿನಿಮಾಗಳಲ್ಲೂ ಬ್ಯುಸಿಯಾಗಿದ್ದಾರೆ. ಇದರ ನಡುವೆ ಮತ್ತೊಂದು ಹೊಸ ಚಿತ್ರಕ್ಕೆ ಶಿವಣ್ಣ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ತೆಲುಗು ನಿರ್ದೇಶಕರೊಬ್ಬರು ಹೇಳಿರೋ ಕಥೆ ಕೇಳಿ ಇಂಪ್ರೆಸ್ ಆಗಿರೋ ಶಿವಣ್ಣ ಅವರೊಂದಿಗೆ ಸಿನಿಮಾ ಮಾಡಲು ರೆಡಿಯಾಗಿದ್ದಾರೆ.

    ಅಂದ್ಹಾಗೆ ಶಿವರಾಜ್ ಕುಮಾರ್ ಗೆ ಆಕ್ಷನ್ ಕಟ್ ಹೇಳ್ತಿರೋ ನಿರ್ದೇಶಕ ತೆಲುಗಿನ ಕಾರ್ತಿಕ್ ಅದ್ವೈತ್ (Karthik Advaith). ತಮಿಳಿನಲ್ಲಿ ವಿಕ್ರಂ ಪ್ರಭು ಅಭಿನಯದ ‘ಪಾಯುಮ್ ಒಲಿ ನೀ ಎನಕ್ಕು’ ಚಿತ್ರ ನಿರ್ದೇಶಿಸಿದ್ದಾರೆ. ಇದೀಗ ಸ್ಯಾಂಡಲ್ ವುಡ್ ಅಂಗಳಕ್ಕೆ ಎಂಟ್ರಿ ಕೊಡ್ತಿರೋ ಇವರಿಗೆ ನಿರ್ದೇಶಕನಾಗಿ ಇದು ಎರಡನೇ ಸಿನಿಮಾ. ಇದನ್ನೂ ಓದಿ:ಜ್ಯೂ.ಎನ್‌ಟಿಆರ್ ಭೇಟಿ ಮಾಡಿ ಕಣ್ಣೀರಿಟ್ಟ ಜಪಾನ್ ಫ್ಯಾನ್ಸ್

    ಇದೊಂದು ಆಕ್ಷನ್ ಥ್ರಿಲ್ಲರ್ ಸಿನಿಮಾವಾಗಿದ್ದು, ಶಿವಣ್ಣ ಡಿಫ್ರೆಂಟ್ ಲುಕ್ ನಲ್ಲಿ, ಡಿಫ್ರೆಂಟ್ ರೋಲ್ ನಲ್ಲಿ ಕಾಣಸಿಗಲಿದ್ದಾರೆ. ಸಿನಿಮಾ ಕಥೆ ಕೇಳಿ ಶಿವಣ್ಣ ಕೂಡ ಎಕ್ಸೈಟ್ ಆಗಿದ್ದಾರೆ. ಸ್ಕ್ರಿಪ್ಟ್ ಕೆಲಸಗಳು ಮುಗಿದಿದ್ದು ಪ್ರಿಪ್ರೊಡಕ್ಷನ್ ಕೆಲಸದಲ್ಲಿ ಸಿನಿಮಾ ತಂಡ ಬ್ಯುಸಿಯಾಗಿದೆ. ಮುಂದಿನ ವರ್ಷದಿಂದ ಚಿತ್ರೀಕರಣ ಆರಂಭವಾಗಲಿದೆ. ಬಹಳ ದೊಡ್ಡ ಮೊತ್ತದಲ್ಲಿ ಸಿನಿಮಾ ನಿರ್ಮಾಣ ಮಾಡಲು ಪ್ಲ್ಯಾನ್ ಮಾಡಿಕೊಳ್ಳಲಾಗಿದೆ.  ಚಿತ್ರದ ಟೈಟಲ್, ನಾಯಕಿ, ತಾರಾಬಳಗ, ತಾಂತ್ರಿಕ ವರ್ಗ ಇದೆಲ್ಲದರ ಬಗ್ಗೆ ಮುಂಬರುವ ದಿನಗಳಲ್ಲಿ ಮಾಹಿತಿ ಹಂಚಿಕೊಳ್ಳೊದಾಗಿ ನಿರ್ದೇಶಕ ಕಾರ್ತಿಕ್ ಅದ್ವೈತ್  ತಿಳಿಸಿದ್ದಾರೆ.

    ಶಿವಣ್ಣ ಅಭಿನಯದ‌ ‘ಕಿಲ್ಲಿಂಗ್ ವೀರಪ್ಪನ್’ ಚಿತ್ರಕ್ಕೆ ಕಾರ್ಯಕಾರಿ ನಿರ್ಮಾಪಕರಾಗಿದ್ದ ಹಾಗೂ ತೆಲುಗಿನಲ್ಲಿ ‘ಆಫೀಸರ್’, ‘ಗುಡ್ ಲಕ್ ಸಖಿ’ ಸಿನಿಮಾ ನಿರ್ಮಿಸಿರುವ  ನಿರ್ಮಾಪಕ ಸುಧೀರ್ ಚಂದ್ರ ಪಡಿರಿ  ‘ಸುಧೀರ್ ಚಂದ್ರ ಫಿಲಂ ಕಂಪನಿ’ ಬ್ಯಾನರ್ ನಡಿ  ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ರಿಷಬ್ ಶೆಟ್ಟಿಗೆ ತೆಲುಗಿನಿಂದ ಭಾರೀ ಆಫರ್: ಸಣ್ಣದೊಂದು ಬ್ರೇಕ್ ಕೇಳಿದ ನಟ

    ರಿಷಬ್ ಶೆಟ್ಟಿಗೆ ತೆಲುಗಿನಿಂದ ಭಾರೀ ಆಫರ್: ಸಣ್ಣದೊಂದು ಬ್ರೇಕ್ ಕೇಳಿದ ನಟ

    ಕಾಂತಾರ (Kantara) ಸಕ್ಸಸ್ ಬೆನ್ನೆಲ್ಲೇ ನಟ, ನಿರ್ದೇಶಕ ರಿಷಬ್ ಶೆಟ್ಟಿ (Rishabh Shetty) ಅವರಿಗೆ ಅವಕಾಶಗಳ ಮೇಲೆ ಅವಕಾಶಗಳು ಸಿಗುತ್ತಿವೆ. ಹಾಗಂತ ರಿಷಬ್ ಏನೂ ಖಾಲಿ ಕುಳಿತಿರಲಿಲ್ಲ. ಒಂದು ಸಿನಿಮಾದ ನಿರ್ದೇಶನ, ಎರಡು ಸಿನಿಮಾಗಳಲ್ಲಿ ನಾಯಕರಾಗಿ ನಟಿಸಬೇಕಿತ್ತು. ಈ ನಡುವೆಯೇ ತೆಲುಗು ಸಿನಿಮಾ ರಂಗದಿಂದ ಶೆಟ್ಟರಿಗೆ ಭರ್ಜರ್ ಆಫರ್ ಬಂದಿದೆ. ಅದನ್ನು ರಿಷಬ್ ಒಪ್ಪಿಕೊಂಡಿದ್ದಾರೆ ಎಂದು ಸ್ವತಃ ನಿರ್ಮಾಪಕರಿಗೆ ಹೇಳಿದ್ದಾರೆ.

    ಕಾಂತಾರ ಸಿನಿಮಾವನ್ನು ತೆಲುಗಿನಲ್ಲಿ ವಿತರಿಸಿದವರು ತೆಲುಗಿನ ಖ್ಯಾತ ನಟ ಅಲ್ಲು ಅರ್ಜುನ್ (Allu Arjun) ಅವರ ತಂದೆ ಅಲ್ಲು ಅರವಿಂದ್ (Allu Arvind). ಇವರ ಗೀತಾ ಆರ್ಟ್ಸ್ (Geetha Arts) ಪ್ರೊಡಕ್ಷನ್ ಹೌಸ್ ಹಿಟ್ ಸಿನಿಮಾಗಳನ್ನು ಕೊಟ್ಟಿದೆ. ತೆಲುಗು ಸಿನಿಮಾ ರಂಗಕ್ಕೆ ಸಾಕಷ್ಟು ಸಿನಿಮಾಗಳನ್ನು ನೀಡಿದ ಹೆಗ್ಗಳಿಕೆಯೂ ಇದೆ. ಈಗ ಅದೇ ಬ್ಯಾನರ್ ನಲ್ಲೇ ರಿಷಬ್ ಅವರಿಗೆ ಆಫರ್ ಹೋಗಿದ್ದು, ಈ ಅವಕಾಶವನ್ನು ರಿಷಬ್ ಒಪ್ಪಿಕೊಂಡಿದ್ದಾರೆ ಎಂದಿದ್ದಾರೆ ಅಲ್ಲು ಅರವಿಂದ್ ತಿಳಿಸಿದ್ದಾರೆ. ಇದನ್ನೂ ಓದಿ:ಕೈಲಾಗದವರು, ಗೆಲ್ಲಲಾರದವರು ನನ್ನ ಪೌರತ್ವ ಕೇಳ್ತಾರೆ : ನಟ ಚೇತನ್

    ತೆಲುಗಿನಲ್ಲಿ ಕಾಂತಾರ ಸಿನಿಮಾದ ಸಕ್ಸಸ್ ಮೀಟ್ ಆಯೋಜನೆ ಮಾಡಿದ್ದರು ಅರವಿಂದ್. ಈ ಸಕ್ಸಸ್ ಮೀಟ್ ನಲ್ಲಿ ರಿಷಬ್ ಶೆಟ್ಟಿ, ಸಪ್ತಮಿ ಗೌಡ ಸೇರಿದಂತೆ ಸಿನಿಮಾ ತಂಡದ ಹಲವರು ಸದಸ್ಯರಿದ್ದರು. ಇದೇ ಸಮಯದಲ್ಲೇ ತಮ್ಮ ಬ್ಯಾನರ್ ಮೂಲಕ ರಿಷಬ್ ಅವರು ಸಿನಿಮಾ ಮಾಡಲಿದ್ದಾರೆ ಎಂದು ಅರವಿಂದ್ ಘೋಷಣೆ ಮಾಡಿದರು. ಅದಕ್ಕೆ ರಿಷಬ್ ಕೂಡ ಒಪ್ಪಿಗೆ ಸೂಚಿಸಿದರು. ಇದಕ್ಕೂ ಮೊದಲು ತಮಗೆ ಸಣ್ಣದೊಂದು ಬ್ರೇಕ್ ಬೇಕಿರುವ ವಿಚಾರವನ್ನೂ ರಿಷಬ್ ಹಂಚಿಕೊಂಡರು.

    Live Tv
    [brid partner=56869869 player=32851 video=960834 autoplay=true]

  • ಡಾಲಿ ಧನಂಜಯ್ ಹೊಸ ಸಿನಿಮಾಗೆ ತಮಿಳು ನಟಿ ಪ್ರಿಯಾ ಭವಾನಿ ಶಂಕರ್ ನಾಯಕಿ

    ಡಾಲಿ ಧನಂಜಯ್ ಹೊಸ ಸಿನಿಮಾಗೆ ತಮಿಳು ನಟಿ ಪ್ರಿಯಾ ಭವಾನಿ ಶಂಕರ್ ನಾಯಕಿ

    ಡಾಲಿ ಧನಂಜಯ್, ಸತ್ಯ ದೇವ್ (Satya Dev) ನಟನೆಯ ಕನ್ನಡ (Kannada) ಹಾಗೂ ತೆಲುಗು ಭಾಷೆಯಲ್ಲಿ ನಿರ್ಮಾಣವಾಗುತ್ತಿರುವ ಚಿತ್ರ ಸಿನಿ ಪ್ರಿಯರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಈ ಚಿತ್ರ ಧನಂಜಯ್ ಹಾಗೂ ತೆಲುಗು (Telugu) ನಟ ಸತ್ಯದೇವ್ ಇಬ್ಬರ ಸಿನಿ ಕೆರಿಯರ್ ನ 26ನೇ ಸಿನಿಮಾವಾಗಿದ್ದು, ಸದ್ಯದಲ್ಲೇ ಸಿನಿಮಾ ಟೈಟಲ್ ರಿವೀಲ್ ಆಗಲಿದೆ. ಚಿತ್ರೀಕರಣದಲ್ಲಿ ನಿರತವಾಗಿರುವ ಚಿತ್ರತಂಡದಿಂದ ಲೇಟೆಸ್ಟ್ ಅಪ್ ಡೇಟ್ ಹೊರಬಿದ್ದಿದ್ದು, ಚಿತ್ರತಂಡವನ್ನು ತಮಿಳು ನಟಿ ಪ್ರಿಯಾ ಭವಾನಿ ಶಂಕರ್ ಸೇರಿಕೊಂಡಿದ್ದಾರೆ.

    ಹೌದು, ಧನಂಜಯ್ (Dali Dhananjay), ಸತ್ಯದೇವ್ ಸಿನಿಮಾಗೆ ನಾಯಕಿಯರ ಹುಡುಕಾಟದಲ್ಲಿ ಚಿತ್ರತಂಡವಿತ್ತು ಇದೀಗ ಪ್ರಿಯಾ ಭವಾನಿ ಶಂಕರ್ (Priya Bhavani Shankar) ಈ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ‘ಓಹ್ ಮನಪೆಣ್ಣೆ’, ‘ಬ್ಲಡ್ ಮನಿ’, ‘ತಿರುಚಿತ್ರಬಾಲಂ’ ಸಿನಿಮಾಗಳ ಮೂಲಕ ಖ್ಯಾತಿ ಗಳಿಸಿರುವ ಪ್ರಿಯಾ ಭವಾನಿ ಶಂಕರ್ ಗಿದು ತೆಲುಗಿನಲ್ಲಿ ಮೊದಲ ಸಿನಿಮಾವಾಗಿದೆ. ಚಿತ್ರದಲ್ಲಿ ಫ್ಯಾಶನ್ ಡಿಸೈನರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ ಪ್ರಿಯಾ. ಚಿತ್ರದ ಇನೊಬ್ಬ ನಟಿಯನ್ನು ಸದ್ಯದಲ್ಲೇ ಪರಿಚಯಿಸಲಿದೆ ಚಿತ್ರತಂಡ.

    ತೆಲುಗಿನಲ್ಲಿ ಪೆಂಗ್ವಿನ್ ಸಿನಿಮಾ ನಿರ್ದೇಶಿಸಿದ್ದ ಈಶ್ವರ್ ಕಾರ್ತಿಕ್ ಡಾಲಿ-ಸತ್ಯದೇವ್ ಬಣ್ಣ ಹಚ್ಚಿರುವ 26ನೇ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದಾರೆ.  ಕ್ರೈಮ್ ಆಕ್ಷನ್ ಎಂಟಟೈನರ್ ಕಥಾಹಂದರ ಒಳಗೊಂಡಿದ್ದು, ಓಲ್ಡ್ ಟೌನ್ ಪಿಕ್ಚರ್ಸ್ ಸಂಸ್ಥೆಯಡಿ ಬಾಲ ಸುಂದರಂ ಮತ್ತು ದಿನೇಶ್ ಸುಂದರಂ ನಿರ್ಮಾಣ ಮಾಡುತ್ತಿರುವ ಮೊದಲ ಸಿನಿಮಾ ಇದಾಗಿದೆ.  ಇದನ್ನೂ ಓದಿ:ನಯನತಾರಾ- ವಿಘ್ನೇಶ್ ಶಿವನ್ ಬಾಡಿಗೆ ತಾಯ್ತನದ ಕೇಸ್‌ಗೆ ಬಿಗ್ ಟ್ವಿಸ್ಟ್

    ಟಗರು ಸಿನಿಮಾ ಖ್ಯಾತಿಯ ಚರಣ್ ರಾಜ್ ಸಂಗೀತ, ಮಣಿಕಂಠನ್ ಕೃಷ್ಣಮಾಚಾರಿ ಛಾಯಾಗ್ರಹಣ, ಅನಿಲ್ ಕ್ರಿಶ್ ಸಂಕಲನ, ಸುಬ್ಬು ಸಾಹಸ ಚಿತ್ರಕ್ಕಿದೆ. ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಸಿನಿಮಾತಂಡ ಸದ್ಯದಲ್ಲೇ ಸಿನಿಮಾ ಟೈಟಲ್ ರಿವೀಲ್ ಮಾಡಲಿದೆ.

    Live Tv
    [brid partner=56869869 player=32851 video=960834 autoplay=true]

  • ತಮಿಳು, ತೆಲುಗಿನಲ್ಲಿ ಇಂದು ‘ಕಾಂತಾರ’ದ ಅಬ್ಬರ: ಬಾಲಿವುಡ್ ಈಗಾಗಲೇ ಫಿದಾ

    ತಮಿಳು, ತೆಲುಗಿನಲ್ಲಿ ಇಂದು ‘ಕಾಂತಾರ’ದ ಅಬ್ಬರ: ಬಾಲಿವುಡ್ ಈಗಾಗಲೇ ಫಿದಾ

    ರಿಷಬ್ ಶೆಟ್ಟಿ (Rishabh Shetty) ನಿರ್ದೇಶಿಸಿ, ನಟಿಸಿರುವ ಕಾಂತಾರ (Kantara) ಸಿನಿಮಾ ಇಂದಿನಿಂದ ತಮಿಳು ಮತ್ತು ತೆಲುಗಿನಲ್ಲಿ ಪ್ರದರ್ಶನ ಕಾಣುತ್ತಿದೆ. ನೂರಾರು ಚಿತ್ರಮಂದಿರಗಳಲ್ಲಿ ರಿಲೀಸ್ (Release) ಆಗಿರುವ ಚಿತ್ರವನ್ನು ಕಣ್ತುಂಬಿಕೊಳ್ಳಲು ತೆಲುಗು ಹಾಗೂ ತಮಿಳು ಪ್ರೇಕ್ಷಕರು ತುದಿಗಾಲಲ್ಲಿ ಕಾಯುತ್ತಿದ್ದರು. ಎರಡೂ ಸಿನಿಮಾ ರಂಗದ ಅನೇಕ ಕಲಾವಿದರು ಚಿತ್ರದ ಬಗ್ಗೆ ಮೆಚ್ಚುಗೆ ಸೂಚಿಸಿದ್ದರಿಂದ ಸಹಜವಾಗಿಯೇ ಸಿನಿಮಾದ ಬಗ್ಗೆ ಕ್ರೇಜ್ ಕ್ರಿಯೇಟ್ ಆಗಿತ್ತು. ಇಂದು ಕುತೂಹಲಕ್ಕೆ ತೆರೆ ಬಿದ್ದಿದೆ.

    ಕನ್ನಡದಲ್ಲಿ ಕಾಂತಾರ ನಿರೀಕ್ಷೆಗೂ ಮೀರಿ ಯಶಸ್ಸು ಗಳಿಸಿದೆ. ಸಿನಿಮಾ ಬಿಡುಗಡೆಯಾಗಿ ಎರಡು ವಾರಗಳು ಕಳೆಯುತ್ತಿದ್ದರೂ, ಇವತ್ತಿಗೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಸದ್ಯದಲ್ಲೇ ನೂರು ಕೋಟಿ ಕ್ಲಬ್ ಸೇರುವ ಸಿನಿಮಾವಾಗಿಯೂ ಹೊರ ಹೊಮ್ಮಲಿದೆ. ಈ ಹೊತ್ತಿನಲ್ಲಿ ನಿನ್ನೆ ಹಿಂದಿಯಲ್ಲಿ (Hindi), ಇಂದು ತಮಿಳು ಮತ್ತು ತೆಲುಗಿನಲ್ಲಿ ಈ ಸಿನಿಮಾ ರಿಲೀಸ್ ಆಗಿದೆ. ತಮಿಳು ಮತ್ತು ತೆಲುಗಿಗಿಂತ ಹಿಂದಿಯಲ್ಲೇ ಅಧಿಕ ಸಂಖ್ಯೆಯಲ್ಲಿ ಚಿತ್ರಮಂದಿರಗಳು ಸಿಕ್ಕಿವೆ. ಇದನ್ನೂ ಓದಿ:ಬಿಗ್ ಬಾಸ್ ಮನೆಯಲ್ಲಿ ರೂಪೇಶ್ ರಾಜಣ್ಣ ಮೇಲೆ ಪ್ರಶಾಂತ್ ಸಂಬರ್ಗಿ ವಾಗ್ದಾಳಿ

    ತನ್ನ ಇಡೀ ಟೀಮ್ ಕಟ್ಟಿಕೊಂಡು ರಿಷಬ್ ಶೆಟ್ಟಿ ಬಾಲಿವುಡ್ ಮತ್ತು ತೆಲುಗು ಸಿನಿಮಾ ರಂಗದಲ್ಲಿ ಭರ್ಜರಿ ಪ್ರಚಾರ ನಡೆಸಿದ್ದಾರೆ. ಈಗಾಗಲೇ ಭಾರತೀಯ ಸಿನಿಮಾ ರಂಗದ ಬಹುತೇಕ ನಟರು ಕಾಂತಾರದ ಬಗ್ಗೆ ಮಾತನಾಡುತ್ತಿರುವುದರಿಂದ ದಕ್ಷಿಣದ ಅಷ್ಟೂ ಭಾಷೆಗಳಲ್ಲೂ ಸಿನಿಮಾ ಗೆಲ್ಲಲಿದೆ ಎನ್ನುವುದು ಸದ್ಯಕ್ಕಿರುವ ಲೆಕ್ಕಾಚಾರ. ಅದರಲ್ಲೂ ಮಲಯಾಳಂನಲ್ಲಿ ದೈವಾರಾಧನೆ, ಭೂತಕೋಲ ಸೇರಿದಂತೆ ಇತರ ಆಚರಣೆಗಳು ಇರುವುದರಿಂದ ಅಲ್ಲಿಗೆ ಈ ಸಿನಿಮಾ ಇನ್ನೂ ಹತ್ತಿರವಾಗಲಿದೆ.

    ನಿರ್ಮಾಪಕ ವಿಜಯ್ ಕಿರಗಂದೂರು (Vijay Kiraganduru) ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂನಲ್ಲಿ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಹಿಂದಿಯಲ್ಲೂ ಚಿತ್ರ ಮಾಡುವ ಇಂಗಿತವನ್ನು ವ್ಯಕ್ತ ಪಡಿಸಿದ್ದಾರೆ. ಈ ಎಲ್ಲ ಸಿನಿಮಾಗಳಿಗೆ ಕೆಜಿಎಫ್ ಯಶಸ್ಸು ಮುನ್ನುಡಿ ಬರೆದಿತ್ತು. ಕಾಂತಾರದ ಮೂಲಕ ಆ ನಂಬಿಕೆ ಇನ್ನಷ್ಟು ಗಟ್ಟಿಯಾಗಲಿದೆ.

    Live Tv
    [brid partner=56869869 player=32851 video=960834 autoplay=true]

  • ತುಳು ಭಾಷೆಯಲ್ಲೂ ಬರಲಿದೆ ‘ಕಾಂತಾರ’: ಶೆಟ್ರೇ ಉಡಲ್ ಗೆಂದಿಯರ್

    ತುಳು ಭಾಷೆಯಲ್ಲೂ ಬರಲಿದೆ ‘ಕಾಂತಾರ’: ಶೆಟ್ರೇ ಉಡಲ್ ಗೆಂದಿಯರ್

    ನ್ನಡದಲ್ಲಿ ಸೂಪರ್ ಹಿಟ್ ಆಗಿ, ಸದ್ಯ ಹಿಂದಿಯಲ್ಲಿ (Hindi) ಬಿಡುಗಡೆ ಆಗಿರುವ, ನಾಳೆ ತಮಿಳು ಮತ್ತು ತೆಲುಗಿನಲ್ಲೂ ಅಬ್ಬರಿಸಲಿರುವ ಕಾಂತಾರ (Kantara) ಸಿನಿಮಾ ತುಳು ಭಾಷೆಗೂ ಡಬ್ ಆಗಲಿದೆ. ಇಂಥದ್ದೊಂದು ಖುಷಿ ಸಂಗತಿಯನ್ನು ಕೊಡಲು ಚಿತ್ರತಂಡ ನಿರ್ಧರಿಸಿದೆ. ಕರಾವಳಿಯ ಭಾಷೆ, ಆಚಾರ ವಿಚಾರ, ಅಲ್ಲಿನ ಸಂಸ್ಕೃತಿಯನ್ನು ಈ ಸಿನಿಮಾದ ಮೂಲಕ ಎಳೆ ಎಳೆಯಾಗಿ ಬಿಚ್ಚಿಡಲಾಗಿದೆ. ಅಲ್ಲದೇ ಕೆಲ ಕಡೆ ತುಳು (Tulu) ಭಾಷೆಯನ್ನೂ ಬಳಸಲಾಗಿದೆ. ಹೀಗಾಗಿ ಕಾಂತಾರ ಮುಂದಿನ ದಿನಗಳಲ್ಲಿ ತುಳು ಭಾಷೆಯಲ್ಲೇ ನೋಡಬಹುದಾಗಿದೆ.

    ಕನ್ನಡದಲ್ಲಿ ಕಾಂತಾರ ನಿರೀಕ್ಷೆಗೂ ಮೀರಿ ಯಶಸ್ಸು ಗಳಿಸಿದೆ. ಸಿನಿಮಾ ಬಿಡುಗಡೆಯಾಗಿ ಎರಡು ವಾರಗಳು ಕಳೆಯುತ್ತಿದ್ದರೂ, ಇವತ್ತಿಗೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಸದ್ಯದಲ್ಲೇ ನೂರು ಕೋಟಿ ಕ್ಲಬ್ ಸೇರುವ ಸಿನಿಮಾವಾಗಿಯೂ ಹೊರ ಹೊಮ್ಮಲಿದೆ. ಈ ಹೊತ್ತಿನಲ್ಲಿ ಇಂದು ಹಿಂದಿಯಲ್ಲಿ, ನಾಳೆ ತಮಿಳು ಮತ್ತು ತೆಲುಗಿನಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿದೆ. ತಮಿಳು ಮತ್ತು ತೆಲುಗಿಗಿಂತ ಹಿಂದಿಯಲ್ಲೇ ಅಧಿಕ ಸಂಖ್ಯೆಯಲ್ಲಿ ಚಿತ್ರಮಂದಿರಗಳು ಸಿಕ್ಕಿವೆ. ಇದನ್ನೂ ಓದಿ:ಮೊನ್ನೆ ತುಟಿ, ಈಗ ಮಚ್ಚೆ ನೋಡಿ ಭವಿಷ್ಯ ಹೇಳಿದ ಆರ್ಯವರ್ಧನ್ ಗುರೂಜಿ

    ತನ್ನ ಇಡೀ ಟೀಮ್ ಕಟ್ಟಿಕೊಂಡು ರಿಷಬ್ ಶೆಟ್ಟಿ (Rishabh Shetty) ಬಾಲಿವುಡ್ ಮತ್ತು ತೆಲುಗು ಸಿನಿಮಾ ರಂಗದಲ್ಲಿ ಭರ್ಜರಿ ಪ್ರಚಾರ ನಡೆಸಿದ್ದಾರೆ. ಈಗಾಗಲೇ ಭಾರತೀಯ ಸಿನಿಮಾ ರಂಗದ ಬಹುತೇಕ ನಟರು ಕಾಂತಾರದ ಬಗ್ಗೆ ಮಾತನಾಡುತ್ತಿರುವುದರಿಂದ ದಕ್ಷಿಣದ ಅಷ್ಟೂ ಭಾಷೆಗಳಲ್ಲೂ ಸಿನಿಮಾ ಗೆಲ್ಲಲಿದೆ ಎನ್ನುವುದು ಸದ್ಯಕ್ಕಿರುವ ಲೆಕ್ಕಾಚಾರ. ಅದರಲ್ಲೂ ಮಲಯಾಳಂನಲ್ಲಿ ದೈವಾರಾಧನೆ, ಭೂತಕೋಲ ಸೇರಿದಂತೆ ಇತರ ಆಚರಣೆಗಳು ಇರುವುದರಿಂದ ಅಲ್ಲಿಗೆ ಈ ಸಿನಿಮಾ ಇನ್ನೂ ಹತ್ತಿರವಾಗಲಿದೆ.

    ನಿರ್ಮಾಪಕ ವಿಜಯ್ ಕಿರಗಂದೂರು (Vijay Kiraganduru) ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂನಲ್ಲಿ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಹಿಂದಿಯಲ್ಲೂ ಚಿತ್ರ ಮಾಡುವ ಇಂಗಿತವನ್ನು ವ್ಯಕ್ತ ಪಡಿಸಿದ್ದಾರೆ. ಈ ಎಲ್ಲ ಸಿನಿಮಾಗಳಿಗೆ ಕೆಜಿಎಫ್ ಯಶಸ್ಸು ಮುನ್ನುಡಿ ಬರೆದಿತ್ತು. ಕಾಂತಾರದ ಮೂಲಕ ಆ ನಂಬಿಕೆ ಇನ್ನಷ್ಟು ಗಟ್ಟಿಯಾಗಲಿದೆ.

    Live Tv
    [brid partner=56869869 player=32851 video=960834 autoplay=true]

  • ಕಾಂತಾರ: ಬಾಲಿವುಡ್‌ನಲ್ಲಿ ಧೂಳ್, ತಮಿಳಿನ ಟ್ರೇಲರ್‌ಗೂ ಸಖತ್ ರೆಸ್ಪಾನ್ಸ್

    ಕಾಂತಾರ: ಬಾಲಿವುಡ್‌ನಲ್ಲಿ ಧೂಳ್, ತಮಿಳಿನ ಟ್ರೇಲರ್‌ಗೂ ಸಖತ್ ರೆಸ್ಪಾನ್ಸ್

    ರಿಷಬ್ ಶೆಟ್ಟಿ (Rishabh Shetty) ನಿರ್ದೇಶಿಸಿ, ನಟಿಸಿರುವ ‘ಕಾಂತಾರ’ (Kantara) ಸಿನಿಮಾ ಇಂದಿನಿಂದ ಹಿಂದಿಯಲ್ಲಿ (Hindi) ರಿಲೀಸ್ ಆಗಿದೆ. ನಾಳೆ ತೆಲುಗು ಮತ್ತು ತಮಿಳಿನಲ್ಲೂ ಬಿಡುಗಡೆ ಆಗಲಿದೆ. ಅದಕ್ಕೂ ಮುನ್ನ ತಮಿಳಿನಲ್ಲಿ ಟ್ರೇಲರ್ ರಿಲೀಸ್ ಆಗಿದ್ದು, ಸಖತ್ ರೆಸ್ಪಾನ್ಸ್ ಸಿಕ್ಕಿದೆ. ಹಿಂದಿಯಲ್ಲಿ 2500ಕ್ಕೂ ಹೆಚ್ಚು ಥಿಯೇಟರ್ ನಲ್ಲಿ ಕಾಂತಾರ ಪ್ರದರ್ಶನ ಕಾಣುತ್ತಿದ್ದು, ತೆಲುಗು ಮತ್ತು ತಮಿಳಿನಲ್ಲೂ ನೂರಾರು ಚಿತ್ರಮಂದಿರಗಳು ಕಾಂತಾರಗಾಗಿ ಕಾಯುತ್ತಿವೆ.

    ಕೆಜಿಎಫ್ ನಂತರ ಕನ್ನಡ ಮತ್ತೊಂದು ಸಿನಿಮಾ ಈ ಪ್ರಮಾಣದ ಸಂಖ್ಯೆಯಲ್ಲಿ ರಿಲೀಸ್ ಆಗುತ್ತಿರುವುದು ಸಹಜವಾಗಿಯೇ ಬಿಟೌನ್ ನಿದ್ದೆ ಕೆಡಿಸಿದೆ. ಸತತ ಸೋಲಿನಿಂದ ಕಂಗೆಟ್ಟಿರುವ ಬಾಲಿವುಡ್ (Bollywood), ದಕ್ಷಿಣದ ಸಿನಿಮಾಗಳ ಆರ್ಭಟಕ್ಕೆ ಸುಸ್ತಾಗಿದೆ. ಈಗಾಗಲೇ ಕೆಜಿಎಫ್ ಸಿನಿಮಾದ ಮೂಲಕ ಗೆಲುವಿನ ರುಚಿಕಂಡಿರುವ ಹೊಂಬಾಳೆ ಫಿಲ್ಮಸ್, ಕಾಂತಾರದ ಮೂಲಕ ಮತ್ತೊಂದು ಗೆಲುವಿಗೆ ಸಿದ್ಧತೆ ಮಾಡಿಕೊಂಡಿದೆ. ಇದನ್ನೂ ಓದಿ:ಟ್ರೋಲಿಗರಿಗೆ ಖಡಕ್ ಉತ್ತರ ಕೊಟ್ಟ ಜಾಹ್ನವಿ ಕಪೂರ್

    ಕನ್ನಡದಲ್ಲಿ ಕಾಂತಾರ ನಿರೀಕ್ಷೆಗೂ ಮೀರಿ ಯಶಸ್ಸು ಗಳಿಸಿದೆ. ಸಿನಿಮಾ ಬಿಡುಗಡೆಯಾಗಿ ಎರಡು ವಾರಗಳು ಕಳೆಯುತ್ತಿದ್ದರೂ, ಇವತ್ತಿಗೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಸದ್ಯದಲ್ಲೇ ನೂರು ಕೋಟಿ ಕ್ಲಬ್ ಸೇರುವ ಸಿನಿಮಾವಾಗಿಯೂ ಹೊರ ಹೊಮ್ಮಲಿದೆ. ಈ ಹೊತ್ತಿನಲ್ಲಿ ಇಂದು ಹಿಂದಿಯಲ್ಲಿ, ನಾಳೆ ತಮಿಳು ಮತ್ತು ತೆಲುಗಿನಲ್ಲಿ ಈ ಸಿನಿಮಾ ರಿಲೀಸ್ (Release) ಆಗುತ್ತಿದೆ. ತಮಿಳು ಮತ್ತು ತೆಲುಗಿಗಿಂತ ಹಿಂದಿಯಲ್ಲೇ ಅಧಿಕ ಸಂಖ್ಯೆಯಲ್ಲಿ ಚಿತ್ರಮಂದಿರಗಳು ಸಿಕ್ಕಿವೆ.

    ತನ್ನ ಇಡೀ ಟೀಮ್ ಕಟ್ಟಿಕೊಂಡು ರಿಷಬ್ ಶೆಟ್ಟಿ ಬಾಲಿವುಡ್ ಮತ್ತು ತೆಲುಗು ಸಿನಿಮಾ ರಂಗದಲ್ಲಿ ಭರ್ಜರಿ ಪ್ರಚಾರ ನಡೆಸಿದ್ದಾರೆ. ಈಗಾಗಲೇ ಭಾರತೀಯ ಸಿನಿಮಾ ರಂಗದ ಬಹುತೇಕ ನಟರು ಕಾಂತಾರದ ಬಗ್ಗೆ ಮಾತನಾಡುತ್ತಿರುವುದರಿಂದ ದಕ್ಷಿಣದ ಅಷ್ಟೂ ಭಾಷೆಗಳಲ್ಲೂ ಸಿನಿಮಾ ಗೆಲ್ಲಲಿದೆ ಎನ್ನುವುದು ಸದ್ಯಕ್ಕಿರುವ ಲೆಕ್ಕಾಚಾರ. ಅದರಲ್ಲೂ ಮಲಯಾಳಂನಲ್ಲಿ ದೈವಾರಾಧನೆ, ಭೂತಕೋಲ ಸೇರಿದಂತೆ ಇತರ ಆಚರಣೆಗಳು ಇರುವುದರಿಂದ ಅಲ್ಲಿಗೆ ಈ ಸಿನಿಮಾ ಇನ್ನೂ ಹತ್ತಿರವಾಗಲಿದೆ.

    ನಿರ್ಮಾಪಕ ವಿಜಯ್ ಕಿರಗಂದೂರು ಕನ್ನಡ, ತೆಲುಗು (Telugu), ತಮಿಳು (Tamil) ಮತ್ತು ಮಲಯಾಳಂನಲ್ಲಿ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಹಿಂದಿಯಲ್ಲೂ ಚಿತ್ರ ಮಾಡುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಈ ಎಲ್ಲ ಸಿನಿಮಾಗಳಿಗೆ ಕೆಜಿಎಫ್ ಯಶಸ್ಸು ಮುನ್ನುಡಿ ಬರೆದಿತ್ತು. ಕಾಂತಾರದ ಮೂಲಕ ಆ ನಂಬಿಕೆ ಇನ್ನಷ್ಟು ಗಟ್ಟಿಯಾಗಲಿದೆ.

    Live Tv
    [brid partner=56869869 player=32851 video=960834 autoplay=true]

  • ಕನ್ನಡದ ಜೊತೆ ತೆಲುಗಿನಲ್ಲೂ ಬರಲಿದೆ ಡಾಲಿ ಧನಂಜಯ್ ನಟನೆಯ 26ನೇ ಸಿನಿಮಾ

    ಕನ್ನಡದ ಜೊತೆ ತೆಲುಗಿನಲ್ಲೂ ಬರಲಿದೆ ಡಾಲಿ ಧನಂಜಯ್ ನಟನೆಯ 26ನೇ ಸಿನಿಮಾ

    ಡಾಲಿ ಧನಂಜಯ್ (Dhananjay) ಈಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೇ ಡಾಲಿ ನಟನೆಯ ಮಾನ್ಸೂನ್ ರಾಗ ರಿಲೀಸ್ ಆಗಿದ್ದು, ಸದ್ಯ ತೋತಾಪುರಿ, ಹೆಡ್ ಬುಷ್, ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ ಸಿನಿಮಾಗಳ ರಿಲೀಸ್ ಗೆ ಎದುರು ನೋಡ್ತಿದ್ದಾರೆ. ಇದರ ಜೊತೆಗೆ ಹೊಯ್ಸಳ, ಪ್ಯಾನ್ ಇಂಡಿಯಾ ಸಿನಿಮಾ ಪುಷ್ಪ-2 ಚಿತ್ರದಲ್ಲಿಯೂ ಅಭಿನಯಿಸುತ್ತಿರುವ ಧನಂಜಯ್ ಅಕೌಂಟ್ ಗೆ ಹೊಸ ಸಿನಿಮಾ ಸೇರ್ಪಡೆಯಾಗಿದೆ.

    ಪುಷ್ಪ ಸಿನಿಮಾ ಮೂಲಕ ತೆಲುಗು ಸಿನಿಲೋಕಕ್ಕೂ ಪರಿಚಿತರಾದ ಡಾಲಿ ಈಗ ಬಹುಭಾಷಾ ನಟ. ಹೀಗಾಗಿ ಧನಂಜಯ್ ಗೆ ಬೇಡಿಕೆ ಹೆಚ್ಚಿದ್ದು, ಇದೀಗ ಕನ್ನಡ ಹಾಗೂ ತೆಲುಗು ಎರಡು ಭಾಷೆ ಚಿತ್ರಕ್ಕೆ ನಟರಾಕ್ಷಸ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇದು ಡಾಲಿ ಧನಂಜಯ್ ನಟಿಸಲಿರುವ 26ನೇ ಸಿನಿಮಾ. ಈ ಚಿತ್ರದಲ್ಲಿ ಧನಂಜಯ್ ಜೊತೆಗೆ ತೆಲುಗಿನ ಪ್ರತಿಭಾನ್ವಿತ ನಟ ಸತ್ಯದೇವ್ (Satyadev) ಕೂಡ ಮುಖ್ಯಭೂಮಿಕೆಯಲ್ಲಿ ಬಣ್ಣ ಹಚ್ಚಿದ್ದಾರೆ. ವಿಶೇಷ ಅಂದರೆ ಇದು ಸತ್ಯದೇವ್ ನಟಿಸುತ್ತಿರುವ 26ನೇ ಸಿನಿಮಾ ಕೂಡ ಹೌದು. ಇದನ್ನೂ ಓದಿ:ಕಾಸ್ಟಿಂಗ್ ಕೌಚ್ ಬಗ್ಗೆ ಕರಾಳ ಅನುಭವ ಬಿಚ್ಚಿಟ್ಟ ನಟಿ ಶಮಾ ಸಿಕಂದರ್

    ಈ ಹಿಂದೆ ತೆಲುಗಿನಲ್ಲಿ (Telugu) ಪೆಂಗ್ವಿನ್ ಸಿನಿಮಾ ಮಾಡಿದ್ದ ಈಶ್ವರ್ ಕಾರ್ತಿಕ್ (Ishwar Karthik) ಡಾಲಿ-ಸತ್ಯದೇವ್ ಬಣ್ಣ ಹಚ್ಚಿರುವ 26ನೇ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದಾರೆ. ಕ್ರೈಮ್  ಕಥೆಯನ್ನೊಳಗೊಂಡ ಈ ಚಿತ್ರವನ್ನು ಓಲ್ಡ್‌ ಟೌನ್ ಪಿಕ್ಚರ್ಸ್ ಸಂಸ್ಥೆಯಡಿ  ಬಾಲ ಸುಂದರಂ ಮತ್ತು ದಿನೇಶ್ ಸುಂದರಂ ನಿರ್ಮಾಣ ಮಾಡುತ್ತಿದ್ದಾರೆ. ಟಗರು ಸಿನಿಮಾ ಖ್ಯಾತಿಯ ಚರಣ್ ರಾಜ್ ಸಂಗೀತ, ಮಣಿಕಂಠನ್ ಕೃಷ್ಣಮಾಚಾರಿ ಛಾಯಾಗ್ರಹಣ, ಅನಿಲ್ ಕ್ರಿಶ್ ಸಂಕಲನ ಸಿನಿಮಾಕ್ಕಿದ್ದು, ಶೀಘ್ರದಲ್ಲೇ ಟೈಟಲ್ ರಿವೀಲ್ ಮಾಡಲು ಚಿತ್ರತಂಡ ಪ್ಲಾನ್ ಹಾಕಿಕೊಂಡಿದೆ.

    Live Tv
    [brid partner=56869869 player=32851 video=960834 autoplay=true]