Tag: Telugu

  • ಮದುವೆಗೂ ಮುನ್ನ ಸೆಕ್ಸ್ ಮಾಡಿ, ಗಂಡನ್ನ ಟೆಸ್ಟ್ ಮಾಡಿ ಎಂದ ನಟಿ ಶ್ರೀ ರಾಪಕಾ

    ಮದುವೆಗೂ ಮುನ್ನ ಸೆಕ್ಸ್ ಮಾಡಿ, ಗಂಡನ್ನ ಟೆಸ್ಟ್ ಮಾಡಿ ಎಂದ ನಟಿ ಶ್ರೀ ರಾಪಕಾ

    ಬಾಲಿವುಡ್ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ ವಯಸ್ಕರ ಸಿನಿಮಾದಲ್ಲಿ ನಟಿಸುವ ಮೂಲಕ ಸಖತ್ ಫೇಮಸ್ ಆಗಿದ್ದ ನಟಿ ಶ್ರೀ ರಾಪಕಾ (Shree Rapaka), ಆಗಾಗ್ಗೆ ವಿವಾದಿತ (Controversial) ಮಾತುಗಳನ್ನು ಆಡದೇ ಇದ್ದರೆ ನಿದ್ದೆ ಬರುವುದಿಲ್ಲ ಅನಿಸುತ್ತದೆ. ಆಗಾಗ್ಗೆ ಅವರು ಅಂತಹ ಮಾತುಗಳನ್ನು ಆಡುವ ಮೂಲಕ ಸುದ್ದಿಯಾಗುತ್ತಲೇ ಇರುತ್ತಾರೆ.

    ಇದೀಗ ವಾಹಿನಿಯೊಂದರ ಸಂದರ್ಶನದಲ್ಲಿ ನಾಲಿಗೆ ಹರಿಬಿಟ್ಟಿರುವ ಶ್ರೀ ರಾಪಕಾ, ತಮ್ಮ ಗೆಳತಿಯ ಜೀವನದಲ್ಲಿ ನಡೆದಿರುವ ಘಟನೆಯನ್ನು ತೆಗೆದುಕೊಂಡು ಸಾರ್ವಜನಿಕವಾಗಿ ಹೇಳಿಕೆಯೊಂದನ್ನು ನೀಡಿದ್ದಾರೆ. ಅದು ಪರ ಮತ್ತು ವಿರೋಧದ ಚರ್ಚೆಗೆ ಕಾರಣವಾಗಿದೆ. ರಾಪಕಾ ಬಗ್ಗೆ ನೆಗೆಟಿವ್ ಕಾಮೆಂಟ್ ಗಳನ್ನು ಹಾಕಲಾಗುತ್ತಿದೆ.

    ಮದುವೆಯ ಮುನ್ನ ಸೆಕ್ಸ್ ಮಾಡುವುದು ತಪ್ಪು ಅಲ್ಲ ಎಂದಿರುವ ನಟಿ, ತಮ್ಮ ಭಾವಿ ಪತಿಯ ಜೊತೆ ದಯವಿಟ್ಟು ಸೆಕ್ಸ್ ಮಾಡಿ, ಅವನು ಗಂಡು ಹೌದೋ ಅಥವಾ ಅಲ್ಲವೋ ಎನ್ನುವುದನ್ನು ಟೆಸ್ಟ್ ಮಾಡಿ ಎಂದಿದ್ದಾರೆ. ಈ ಮಾತುಗಳು ಸಖತ್ ವೈರಲ್ ಕೂಡ ಆಗಿವೆ. ನಟಿ ಯಾಕೆ ಹಾಗೆ ಹೇಳಿದರು ಎನ್ನುವುದಕ್ಕೂ ಕಾರಣವೂ ಇದೆ.

    ತನ್ನ ಸ್ನೇಹಿತೆಯೊಬ್ಬರು ವೈದ್ಯರೊಬ್ಬರನ್ನು ಮದುವೆಯಾಗಿದ್ದರು. ತುಂಬಾ ಕನಸು ಕಟ್ಟಿಕೊಂಡು ಹೊಸ ಜೀವನಕ್ಕೆ ಕಾಲಿಟ್ಟಿದ್ದರಂತೆ. ಆದರೆ, ಫಸ್ಟ್ ನೈಟ್ ದಿನ ಅವನು ಸಲಿಂಗಿ ಎಂದು ಗೊತ್ತಾಗಿ, ಅವಳ ಕನಸಿನ ಸೌಧವೇ ಮುರಿದು ಬಿದ್ದಿತ್ತು ಎಂದು ಹೇಳಿಕೊಂಡಿದ್ದಾರೆ. ಹಾಗಾಗಿ ಮದುವೆಯ ಮುನ್ನ ಸೆಕ್ಸ್ ಮಾಡಿ ಗಂಡನ್ನ ಟೆಸ್ಟ್ ಮಾಡಿ ಎಂದಿದ್ದಾರೆ ನಟಿ.

    ರಾಪಕಾ ಆಡಿದ ಮಾತುಗಳು ಅನೇಕರ ಕಣ್ಣು ಕೆಂಪಾಗಿಸಿವೆ. ಗೆಳತಿಯ ಬದುಕಿನಲ್ಲಿ ನಡೆದದ್ದು, ಎಲ್ಲರಿಗೂ ಅನ್ವಯಿಸಲ್ಲ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಒಬ್ಬ ನಟಿಯಾಗಿ ಜವಾಬ್ದಾರಿಯುತ ಮಾತುಗಳನ್ನು ಆಡಿ ಎಂದೂ ಸಲಹೆ ನೀಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Salaar Teaser ಔಟ್: ಅದ್ದೂರಿ ಮೇಕಿಂಗ್, ಬ್ರಿಲಿಯಂಟ್ ಕಾಂಬಿನೇಷನ್

    Salaar Teaser ಔಟ್: ಅದ್ದೂರಿ ಮೇಕಿಂಗ್, ಬ್ರಿಲಿಯಂಟ್ ಕಾಂಬಿನೇಷನ್

    ತೆಲುಗಿನ ಖ್ಯಾತ ನಟ ಪ್ರಭಾಸ್ (Prabhas) ಮತ್ತು ಕನ್ನಡದ ಪ್ರತಿಭಾವಂತ ನಿರ್ದೇಶಕ ಪ್ರಶಾಂತ್ ನೀಲ್ (Prashanth Neel) ಕಾಂಬಿನೇಷನ್ ನ ನಿರೀಕ್ಷಿತ ‘ಸಲಾರ್’ (Salaar Teaser) ಸಿನಿಮಾದ ಟೀಸರ್ ಇಂದು (ಗುರುವಾರ) ಬೆಳಗ್ಗಿನ ಜಾವ 5.12ಕ್ಕೆ ರಿಲೀಸ್ ಆಗಿದೆ. ಟೀಸರ್ ತುಂಬಾ ಪ್ರಶಾಂತ್ ನೀಲ್ ಮೇಕಿಂಗ್ ಮತ್ತು ಪ್ರಭಾಸ್ ಅವರ ಅಬ್ಬರ ತುಂಬಿ ತುಳುಕಾಡುತ್ತಿದೆ. ಅದ್ದೂರಿಯಾಗಿ ಮೂಡಿ ಬಂದಿರುವ ಟೀಸರ್ ನಲ್ಲಿ ಹತ್ತು ಹಲವು ಕುತೂಹಲದ ಅಂಶಗಳಿವೆ. ಮತ್ತೆ ಪ್ರಶಾಂತ್ ಕತ್ತಲು ಬೆಳಕಿನ ಆಟವಾಡಿದ್ದಾರೆ.

    ಸಲಾರ್ ಸಿನಿಮಾದ ಸ್ಟಿಲ್ ಮತ್ತು ಕೆಲ ಮೇಕಿಂಗ್ ವಿಡಿಯೋಗಳನ್ನು ನೋಡಿದಾಗ ಮತ್ತೆ ಕೆಜಿಎಫ್ (KGF) ವಾತಾವರಣವನ್ನೇ ಪ್ರಶಾಂತ್ ನೀಲ್ ನೆನಪಿಸಿದ್ದಾರೆ ಅನಿಸಿತ್ತು. ಕೊಂಚ ಅದೇ ಹೋಲಿಕೆ ಎನ್ನುವಂತೆ ಕಂಡರೂ, ಕೆಜಿಎಫ್ ಗಿಂತಲೂ ಭಿನ್ನವಾದ ಆಲೋಚನೆಯಲ್ಲಿ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ ಅನಿಸುತ್ತಿದೆ ಈ ಟೀಸರ್.

    ಪ್ರಶಾಂತ್ ಬ್ರಿಲಿಯಂಟ್ ಡೈರೆಕ್ಟರ್. ಎರಡು ಮಾತೇ ಇಲ್ಲ. ಪ್ರಭಾಸ್ ಕೂಡ ಪ್ರತಿಭಾವಂತ ನಟ. ಇಂತಹ ಕಾಂಬಿನೇಷನ್ ಇದ್ದರೆ ಜಗತ್ತೇ ಮೆಚ್ಚುವಂತಹ ಸಿನಿಮಾ ಮಾಡಬಹುದು ಎನ್ನುವುದಕ್ಕೆ ಸಲಾರ್ ಟೀಸರ್ ಇಂಬುಕೊಡುತ್ತದೆ. ಚಿತ್ರದ ಮೇಲೆ ಸಾಕಷ್ಟು ಭರವಸೆಯನ್ನೂ ಮೂಡಿಸುತ್ತದೆ. ಟೀಸರ್ ನ ಒಂದೊಂದು ಫ್ರೇಮ್ ಕೂಡ ಅಳೆದು ತೂಗಿ ಮಾಡಿದಂತಿದೆ. ಇದನ್ನೂ ಓದಿ: ಸೆನ್ಸೇಷನಲ್ ಡೈರೆಕ್ಟರ್ ಜೊತೆ ಕೈ ಜೋಡಿಸಿದ ಲೈಕಾ ಪ್ರೊಡಕ್ಷನ್

    ಹೊಂಬಾಳೆ ಬ್ಯಾನರ್ (Hombale Films) ನಲ್ಲಿ ಮೂಡಿ ಬಂದಿರುವ ಸಲಾರ್ ಸಿನಿಮಾಗೆ ಅಂದಾಜು ಇನ್ನೂರು ಕೋಟಿ ಖರ್ಚು ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಕೆಜಿಎಫ್ 1 ಮತ್ತು 2 ಸಿನಿಮಾಗೆ ಮಾಡಿದ ಖರ್ಚನ್ನು ಸಲಾರ್ ಒಂದಕ್ಕೆ ಸುರಿದಿದ್ದಾರೆ ಎನ್ನುವ ಮಾಹಿತಿಯೂ ಇದೆ. ಅದರಲ್ಲೂ ಒಂದಷ್ಟು ದೃಶ್ಯಗಳಿಗೆ ಕೋಟಿ ಕೋಟಿ ಖರ್ಚು ಮಾಡಿದ್ದಾರೆ ಎಂದು ಪ್ರಶಾಂತ್ ಬಳಗ ಹೇಳಿಕೊಳ್ಳುತ್ತಿದೆ. ಅಲ್ಲಿಗೆ ಸಲಾರ್ ಭಾರೀ ಬಜೆಟ್ ಸಿನಿಮಾಗಳಲ್ಲಿ ಒಂದಾಗಲಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಧ್ಯದ ಬೆರಳ ಮೇಲೆ ನಾಯಕಿ : ಥೂ.. ಅಸಹ್ಯ ಎಂದ ದೇವರಕೊಂಡ ಫ್ಯಾನ್ಸ್

    ಮಧ್ಯದ ಬೆರಳ ಮೇಲೆ ನಾಯಕಿ : ಥೂ.. ಅಸಹ್ಯ ಎಂದ ದೇವರಕೊಂಡ ಫ್ಯಾನ್ಸ್

    ಸಿನಿಮಾ ರಂಗದ ಮೇಲೆ  ಅಸಹ್ಯ ಹುಟ್ಟಿಸುವಂತಹ ಅನೇಕ ಸಂಗತಿಗಳು ಜರುಗುತ್ತಿವೆ. ಈ ಕಾರಣದಿಂದಾಗಿಯೇ ಸಿನಿಮಾ ರಂಗದ ಮೇಲೆ ಅನೇಕರು ನೇರವಾಗಿ ಸಿಡಿದೆದ್ದಿದ್ದಾರೆ. ಪ್ರತಿಭಟನೆ ಒಂದು ಕಡೆಯಾದರೆ, ಕಾನೂನು ಮೂಲಕ ಉತ್ತರ ಕೊಡುವ ಪ್ರಯತ್ನವನ್ನೂ ಹಲವರು ಮಾಡುತ್ತಿದ್ದಾರೆ. ಈ ನಡುವೆ ತೆಲುಗು ಚಿತ್ರೋದ್ಯಮದಲ್ಲಿ ಮತ್ತೊಂದು ಅಸಹ್ಯದ ಸಂಗತಿಯೊಂದು ನಡೆದು ಬಿಟ್ಟಿದೆ.

    ವಿಜಯ್ ದೇವರಕೊಂಡ ನಟನೆಯ ಮೊದಲ ಸಿನಿಮಾ ಅರ್ಜುನ್ ರೆಡ್ಡಿಯಲ್ಲಿ ಸೆಕ್ಸ್ ಅನ್ನು ವೈಭವೀಕರಿಸುವ ಕೆಲಸವನ್ನು ನಿರ್ದೇಶಕರು ಮಾಡಿದ್ದರು. ನಾಯಕ ವಿಜಯ್, ತನ್ನ ಸಹಪಾಠಿ ಜೊತೆ ಸೆಕ್ಸ್  (Sex) ಮಾಡುವಂತಹ ಸನ್ನಿವೇಶವನ್ನೂ ಸಿನಿಮಾದಲ್ಲಿ ತೋರಿಸುವ ಮೂಲಕ ಈ ಸಿನಿಮಾ ಬೋಲ್ಡ್ ಎಂದು ತೋರಿಸುವ ಪ್ರಯತ್ನಕ್ಕೆ ನಿರ್ದೇಶಕರು ಕೈ ಹಾಕಿದ್ದರು. ಈ ಸನ್ನಿವೇಶ ಕೂಡ ಕೆಲವರ ಕಂಗಣ್ಣಿಗೆ ಗುರಿಯಾಗಿತ್ತು. ಇದೀಗ ವಿಜಯ್ ಸಹೋದರ ಆನಂದ್ ದೇವರಕೊಂಡ (Anand Devarakonda) ಸಿನಿಮಾದ ಪೋಸ್ಟರ್ (Poster) ಕೂಡ ವಿವಾದಕ್ಕೆ (Controversy)  ಕಾರಣವಾಗಿದೆ. ಇದನ್ನೂ ಓದಿ:‘ಎಮರ್ಜೆನ್ಸಿ’ ನಂತರದ ಸಿನಿಮಾ ಸುಳಿವು ಕೊಟ್ಟ ಕಂಗನಾ ರಣಾವತ್

    ವಿಜಯ್ ದೇವರಕೊಂಡ ಸಹೋದರ ಆನಂದ್ ದೇವರಕೊಂಡ ನಟನೆಯ ‘ಬೇಬಿ’ (Baby) ಸಿನಿಮಾದ ಪೋಸ್ಟರ್‌ವೊಂದು ರಿಲೀಸ್ ಆಗಿದ್ದು, ಈ ಪೋಸ್ಟರ್‌ನಲ್ಲಿ ನಾಯಕನ ನಡು ಬೆರಳ ಮೇಲೆ ನಾಯಕಿಯನ್ನು ನಿಲ್ಲಿಸಲಾಗಿದೆ. ಈ ಪೋಸ್ಟರ್ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದೆ. ಸಿನಿಮಾ ಟೀಮ್ ಈ ಪೋಸ್ಟರ್ ಮೂಲಕ ಏನನ್ನೋ ಹೇಳಲು ಹೊರಟಿದೆ ಎಂದು ಹಲವರು ಪ್ರಶ್ನೆ ಮಾಡಿದ್ದಾರೆ.

    ಸಾಮಾನ್ಯವಾಗಿ ಮಧ್ಯದ ಬೆರಳನ್ನು ತೋರಿಸುವುದು ಕೆಟ್ಟ ಸೂಚನೆಯನ್ನು ತೋರಿಸುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಕಾನೂನಿನಲ್ಲಿ ಇದಕ್ಕೂ ಶಿಕ್ಷೆಯಿದೆ. ಇಷ್ಟೆಲ್ಲ ಗೊತ್ತಿದ್ದರೂ, ನಾಯಕಿಯ ಫೋಟೋವನ್ನು ಎಡಿಟ್ ಮಾಡಿ, ಮಧ್ಯದ ಬೆರಳ ಮೇಲೆ ನಿಲ್ಲಿಸಲಾಗಿದೆ. ಈ ಕುರಿತು ನಾಯಕಿ ವೈಷ್ಣವಿ ಚೈತನ್ಯ (Vaishnavi Chaitanya) ಯಾವುದೇ ಮಾತುಗಳನ್ನು ಆಡದೇ ಇರುವುದು ಅಚ್ಚರಿ ಕೂಡ ತಂದಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ತೆಲುಗು ಚಿತ್ರೋದ್ಯಮದಲ್ಲಿ ಡ್ರಗ್ಸ್ : ಕೇಳಿ ಬಂತು ಮತ್ತೋರ್ವ ನಟಿ ಹೆಸರು

    ತೆಲುಗು ಚಿತ್ರೋದ್ಯಮದಲ್ಲಿ ಡ್ರಗ್ಸ್ : ಕೇಳಿ ಬಂತು ಮತ್ತೋರ್ವ ನಟಿ ಹೆಸರು

    ತೆಲುಗು (Telugu) ಚಿತ್ರೋದ್ಯಮದಲ್ಲಿ ಡ್ರಗ್ಸ್ ಪ್ರಕರಣ ಸಾಕಷ್ಟು ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿದೆ. ಸೂಪರ್ ಹಿಟ್ ಸಿನಿಮಾ ‘ಕಬಾಲಿ’ (Kabali) ನಿರ್ಮಾಪಕ ಕೆ.ಪಿ ಚೌಧರಿ (Kp Chowdary) ಡ್ರಗ್ಸ್ ಕೇಸ್‌ನಲ್ಲಿ ಅರೆಸ್ಟ್ ಆದ ನಂತರ ದಿನಕ್ಕೊಬ್ಬರ ಹೆಸರು ಆಚೆ ಬರುತ್ತಿದೆ. ಚೌಧರಿ ವಿಚಾರಣೆ ಸಂದರ್ಭದಲ್ಲಿ ಅನೇಕರ ಹೆಸರನ್ನು ಬಾಯ್ಬಿಟ್ಟಿದ್ದಾರೆ ಎಂದು ಹೇಳಲಾಗುತ್ತಿದ್ದು, ತೆಲುಗಿನ ಖ್ಯಾತ ನಟಿ ಸುರೇಖಾ ವಾಣಿ (Surekha Vani) ಹೆಸರು ಇದೀಗ ವೈರಲ್ ಆಗಿದೆ.

    ತೆಲುಗಿನ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದವರು ಸುರೇಖಾ ವಾಣಿ. ಸಾಕಷ್ಟು ಹಿಟ್ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ಇವರು ಅರೆಸ್ಟ್ ಆಗಿರುವ ಕೆ.ಪಿ ಚೌಧರಿಗೆ ಆಪ್ತರು ಎಂದು ಹೇಳಲಾಗುತ್ತಿದೆ.  ಆಪ್ತವಾಗಿರುವ ಫೋಟೋವನ್ನು ಈ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ಚೌಧರಿ ಶೇರ್ ಮಾಡಿಕೊಂಡಿದ್ದರು. ಆ ಫೋಟೋ ಇದೀಗ ಸುರೇಖಾ ವಾಣಿಗೆ ಮುಳುವಾಗಿದೆ.

    ಈ ಕುರಿತು ವಿಡಿಯೋವೊಂದನ್ನು ಮಾಡಿರುವ ಸುರೇಖಾ ವಾಣಿ, ‘ನನ್ನ ಹೆಸರು ಸುಖಾಸುಮ್ಮನೆ ಡ್ರಗ್ಸ್ ಕೇಸ್ ನಲ್ಲಿ ಕೇಳಿ ಬರುತ್ತಿದೆ. ಫೋಟೋ ವೈರಲ್ ಮಾಡಲಾಗುತ್ತಿದೆ. ಒಬ್ಬ ವ್ಯಕ್ತಿಯ ಜೊತೆ ಆಪ್ತವಾಗಿ ಇದ್ದೇವೆ ಅಂದರೆ, ನಾವೂ ಡ್ರಗ್ಸ್ ತಗೆದುಕೊಳ್ಳುತ್ತೇವೆ ಎಂಬರ್ಥವಲ್ಲ. ನನಗೂ ಅದಕ್ಕೂ ಸಂಬಂಧವಿಲ್ಲ. ನನ್ನ ಹೆಸರು ಹಾಳು ಮಾಡಬೇಡಿ’ ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.

    ಎರಡು ದಿನಗಳ ಹಿಂದೆಯಷ್ಟೇ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ತೆಲುಗು ನಟಿ ಅಶು ರೆಡ್ಡಿ (Ashu Reddy) ಹೆಸರು ಕೇಳಿ ಬಂದಿತ್ತು. ಇಷ್ಟು ದಿನ ಗ್ಲ್ಯಾಮರಸ್ ಫೋಟೋ ಮೂಲಕ ಗಮನ ಸೆಳೆಯುತ್ತಿದ್ದ ಅವರು ಈಗ ಡ್ರಗ್ ಕೇಸ್ ಮೂಲಕ ಸುದ್ದಿ ಆಗಿದ್ದಾರೆ. ನಿರ್ಮಾಪಕ ಕೆಪಿ ಚೌಧರಿ ಅವರು ಅಶು ರೆಡ್ಡಿ ಜೊತೆ ಅವರು ನೂರಾರು ಬಾರಿ ಫೋನ್ ಮೂಲಕ ಮಾತನಾಡಿದ್ದರು ಎನ್ನುವ ವಿಚಾರ ರಿವೀಲ್ ಆಗಿದೆ. ಡ್ರಗ್ ಮಾರಾಟ ಮಾಡುವ ವ್ಯಕ್ತಿಯ ಜೊತೆ ಇಷ್ಟೊಂದು ದೂರವಾಣಿ ಕರೆ ಏಕೆ ಎನ್ನುವ ಪ್ರಶ್ನೆ ಪೊಲೀಸರಲ್ಲಿ ಮೂಡಿದೆ.  ಇದನ್ನೂ ಓದಿ:‘ಕಬಾಲಿ’ ನಿರ್ಮಾಪಕ ಅರೆಸ್ಟ್ ಬೆನ್ನಲ್ಲೇ ಡ್ರಗ್ಸ್ ಪ್ರಕರಣದಲ್ಲಿ ನಟಿ ಅಶು ರೆಡ್ಡಿ ಹೆಸರು

    ಅಶು ರೆಡ್ಡಿ ಅವರು ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದಾರೆ. ತೆಲುಗಿನ ಬಿಗ್ ಬಾಸ್‌ನಲ್ಲಿ (Bigg Boss Telagu) ಗಮನ ಸೆಳೆದ ಅಶು ರೆಡ್ಡಿಗೆ ಟಿವಿ ಶೋ ಮೂಲಕ ಜನಪ್ರಿಯತೆ ಪಡೆದರು. ಈಗ ಅವರ ಹೆಸರು ಡ್ರಗ್ಸ್ ಕೇಸ್‌ನಲ್ಲಿ ಅವರ ಹೆಸರು ಕೇಳಿ ಬಂದಿದೆ. ಕಬಾಲಿ ನಿರ್ಮಾಪಕ ಅವರು ನೇರವಾಗಿ ಅಶು ರೆಡ್ಡಿ ಬಗ್ಗೆ ಆರೋಪ ಮಾಡಿಲ್ಲ. ಇವರ ಮಧ್ಯೆ ಲಿಂಕ್ ಇರೋದು ವಿಚಾರಣೆ ವೇಳೆ ಗೊತ್ತಾಗಿದೆ. ಅವರ ಬಳಿ ಇದ್ದ ಮೂರು ಮೊಬೈಲ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಕೆಪಿ ಚೌಧರಿ ಅವರ ಒಂದು ಮೊಬೈಲ್‌ನಿಂದ ಅಶು ರೆಡ್ಡಿಗೆ ನೂರಾರು ಬಾರಿ ಫೋನ್ ಕಾಲ್ ಹೋಗಿದೆ. ಇದು ಏಕೆ ಎಂಬ ಪ್ರಶ್ನೆ ಮೂಡಿದೆ.

     

    ಈ ಬಗ್ಗೆ ಅಶು ರೆಡ್ಡಿ ಸಾಮಾಜಿಕ ಜಾಲತಾಣದಲ್ಲಿ ಕಿಡಿ ಕಾರಿದ್ದಾರೆ. ಇದೆಲ್ಲಾ ಸುಳ್ಳು ಸುದ್ದಿ ಎಂದು ಹೇಳಿದ್ದಾರೆ. ಅನಾವಶ್ಯಕವಾಗಿ ಈ ಪ್ರಕರಣದಲ್ಲಿ ತನ್ನ ಹೆಸರನ್ನು ಎಳೆದು ತರಲಾಗುತ್ತಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಪೋಸ್ಟ್ ಶೇರ್ ಮಾಡಿ ಕಾಮೆಂಟ್ ಸೆಕ್ಷನ್ ಆಫ್ ಮಾಡಿದ್ದಾರೆ. ಇದು ಸ್ಪಷ್ಟತೆ ಎಂದು ಅಶು ರೆಡ್ಡಿ ಹೇಳಿದ್ದಾರೆ.

  • ನಟಿ ಜಯವಾಣಿ ಬೆತ್ತಲೆ ಫೋಟೋ: ದುರುಳರ ಹೆಡೆಮುರಿ ಕಟ್ಟಲು ಸಜ್ಜು

    ನಟಿ ಜಯವಾಣಿ ಬೆತ್ತಲೆ ಫೋಟೋ: ದುರುಳರ ಹೆಡೆಮುರಿ ಕಟ್ಟಲು ಸಜ್ಜು

    ಟಿ ಜಯವಾಣಿ (Jayavani) ಅವರ ಬೆತ್ತಲೇ ಫೋಟೋಗಳು ಟ್ವಿಟರ್ ನಲ್ಲಿ ಭಾರೀ ಸದ್ದು ಮಾಡಿದ್ದವು. ಜಯವಾಣಿ ಅವರ ಹೆಸರಿನಲ್ಲೇ ಇದ್ದ ಟ್ವಿಟರ್ (Twitter) ಖಾತೆಯಿಂದ ಅವು ಹಂಚಲ್ಪಟ್ಟಿದ್ದವು. ಆ ಫೋಟೋಗಳು ವೈರಲ್ ಆಗುತ್ತಿದ್ದಂತೆಯೇ ನಟಿ ಜಯವಾಣಿ ಅವುಗಳ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ಅಲ್ಲದೇ, ಕಿಡಿಗೇಡಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.

    ತೆಲುಗಿನ (Telugu) ಖ್ಯಾತ ಪೋಷಕ ನಟಿಯಾಗಿರುವ (Actress) ಜಯವಾಣಿ, ವಿಕ್ರಮಾರ್ಕುಡು ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಅವರು ನಟನೆಯಿಂದ ದೂರ ಉಳಿದರೂ, ಸಿನಿಮಾ ಸಂಬಂಧಿ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಮೂವಿ ಕಲಾವಿದರ ಸಂಘದ ಕಾರ್ಯಕಾರಿಣಿ ಸದಸ್ಯೆಯಾಗಿ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಕೂಡ. ಇದನ್ನೂ ಓದಿ:‘ಭರ್ಜರಿ ಬ್ಯಾಚುಲರ್ಸ್’ ಜೊತೆ ಬರುತ್ತಿದ್ದಾರೆ ರವಿಚಂದ್ರನ್, ರಚಿತಾ‌ ರಾಮ್

    ಇಂತಹ ನಟಿಯ ಹೆಸರಿನಲ್ಲೇ ಟ್ವಿಟರ್ ಖಾತೆ ಇದೆ. ಅದು ಬ್ಲೂಟಿಕ್ ಇರುವುದರಿಂದ ಜಯವಾಣಿ ಅವರೇ ಈ ಖಾತೆಯಲ್ಲಿ ಫೋಟೋ ಹಂಚಿಕೊಳ್ಳುತ್ತಾರೆ ಎಂದು ಹೇಳಲಾಗಿತ್ತು. ಆ ಖಾತೆಯಿಂದಲೇ ಅವರ ಬೆತ್ತಲೆ ಫೋಟೋಗಳು ಅಪ್ ಲೋಡ್ ಆಗಿದ್ದವು. ಸಾಕಷ್ಟು ಜನರು ಆ ಫೋಟೋಗಳ ಬಗ್ಗೆ ಮಾತಾಡೋಕೆ ಶುರು ಮಾಡಿದ್ದರು. ಇದರಿಂದಾಗಿ ನಟಿ ಸಂಕಷ್ಟಕ್ಕೆ ಸಿಲುಕಿದ್ದರು.

    ಈ ಕುರಿತು ಜಯವಾಣಿಯೇ ಸ್ಪಷ್ಟನೆ ಕೊಟ್ಟಿದ್ದಾರೆ. ‘ನಾನು ಟ್ವಿಟರ್ ಖಾತೆಯನ್ನು ಹೊಂದಿಲ್ಲ. ಯಾರೋ ಕಿಡಿಗೇಡಿಗಳು ನನ್ನ ಹೆಸರಿನಲ್ಲಿ ಶುರು ಮಾಡಿದ್ದಾರೆ. ಜೊತೆಗೆ ಎಡಿಟ್ ಫೋಟೋಗಳನ್ನು ಅದರಲ್ಲಿ ಹಾಕಿ, ನನ್ನ ಹೆಸರಿಗೆ ಕಳಂಕ ತಂದಿದ್ದಾರೆ. ಅವರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳುವೆ’ ಎಂದು ಎಚ್ಚರಿಕೆ ಕೂಡ ಕೊಟ್ಟಿದ್ದಾರೆ.

    ಬೆತ್ತಲೆ ಫೋಟೋಗಳು (Nude Photo) ತಮ್ಮದಲ್ಲ ಎಂದು ಹೇಳಿಕೊಂಡಿರುವ ಜಯವಾಣಿ, ಕೂಡಲೇ ಅಕೌಂಡ್ ಡಿಲಿಟ್ ಮಾಡದೇ ಇದ್ದರೆ ಕಾನೂನು ಕ್ರಮ ತೆಗೆದುಕೊಳ್ಳುವ ಎಚ್ಚರಿಕೆಯನ್ನೂ ಕೊಟ್ಟಿದ್ದಾರೆ. ಯಾರೂ ಆ ಫೋಟೋಗಳನ್ನು ನಂಬಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

  • ‘ಭೀಮ’ನಾದ ಗೋಪಿಚಂದ್: ಎ.ಹರ್ಷ ನಿರ್ದೇಶನದ ತೆಲುಗು ಚಿತ್ರ

    ‘ಭೀಮ’ನಾದ ಗೋಪಿಚಂದ್: ಎ.ಹರ್ಷ ನಿರ್ದೇಶನದ ತೆಲುಗು ಚಿತ್ರ

    ತೆಲುಗಿನ (Telugu) ಮ್ಯಾಚೋ ಸ್ಟಾರ್ ಖ್ಯಾತಿಯ ಗೋಪಿಚಂದ್ ಹಾಗೂ ಕನ್ನಡ ಎ.ಹರ್ಷ (A. Harsha) ಕಾಂಬೋದ ಸಿನಿಮಾಗೆ ಟೈಟಲ್ ಫಿಕ್ಸ್ ಆಗಿದೆ. ಗೋಪಿಚಂದ್ (Gopichand) ಜನ್ಮದಿನದ ಪ್ರಯುಕ್ತ ಫಸ್ಟ್ (First Look) ಹಾಗೂ ಟೈಟಲ್ ನ್ನು ಚಿತ್ರತಂಡ ರಿವೀಲ್ ಮಾಡಿದೆ.

    ಭೀಮನಾಗಿ (Bhima) ಮ್ಯಾಚೋ ಸ್ಟಾರ್ ಎಂಟ್ರಿ ಕೊಟ್ಟಿದ್ದು, ಪೊಲೀಸ್ ಖದರ್‌ನಲ್ಲಿ ಪ್ರತ್ಯಕ್ಷರಾಗಿದ್ದಾರೆ. ಮುಖದ ಮೇಲೆ ಗಾಯದ ಗುರುತು, ಉಗ್ರ ರೂಪಿಯಾಗಿ ತೀಕ್ಷ ನೋಟದ ಗೋಪಿಚಂದ್ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:ಶರ್ವಾನಂದ್ ರಿಸೆಪ್ಷನ್ ಸಂಭ್ರಮದಲ್ಲಿ ಸಿನಿ ತಾರೆಯರ ದಂಡು

    ಭಜರಂಗಿ, ವಜ್ರಕಾಯ, ವೇದ ಸೇರಿದಂತೆ ಹಲವು ಸೂಪರ್ ಹಿಟ್ ಚಿತ್ರ ನಿರ್ದೇಶಿಸಿರುವ ಎ.ಹರ್ಷಗೆ ಇದು ಮೊದಲ ಸಿನಿಮಾ. ಭೀಮ ಕೌಟುಂಬಿಕ ಹಾಗೂ ಆಕ್ಷನ್ ಎಂಟರ್ ಟೈನರ್ ಕಥಾಹಂದರ ಹೊಂದಿದೆ.‌  ಕೆ.ಕೆ.ರಾಧಾ ಮೋಹನ್ ಶ್ರೀ ಸತ್ಯ ಸಾಯಿ ಆರ್ಟ್ಸ್ ಪ್ರೊಡಕ್ಷನ್ ನಡಿ ಬಹಳ ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದಾರೆ.

    ಅಂದಹಾಗೇ ಭೀಮ ಶ್ರೀ ಸತ್ಯ ಸಾಯಿ ಆರ್ಟ್ಸ್ ಬ್ಯಾನರ್ ನಡಿ ನಿರ್ಮಾಣವಾಗುತ್ತಿರುವ 14ನೇ ಸಿನಿಮಾ. ಸ್ವಾಮಿ.ಜೆ ಛಾಯಾಗ್ರಹಣ, ಕೆಜಿಎಫ್ ಖ್ಯಾತಿಯ ರವಿ ಬಸ್ರೂರ್ ಸಂಗೀತ, ಅಜ್ಜು ಮಹಂಕಾಳಿ ಸಂಭಾಷಣೆ, ವೆಂಕಟ್ ಹಾಗೂ ರವಿವರ್ಮಾ ಸ್ಟಂಟ್ ಚಿತ್ರಕ್ಕಿದೆ. ಹೈದರಾಬಾದ್ ನ ಅಲ್ಯೂಮಿನಿಯಂ ಫ್ಯಾಕ್ಟರ್ ಯಲ್ಲಿ ಹೈವೋಲ್ಟೇಜ್ ಆಕ್ಷನ್ ದೃಶ್ಯಗಳ ಚಿತ್ರೀಕರಣ ಭರದಿಂದ ಸಾಗುತ್ತಿದೆ. ನಾಯಕಿ ಹಾಗೂ ಉಳಿದ ತಾರಾಬಳಗ ಅಪ್ ಡೇಟ್ ಶೀಘ್ರದಲ್ಲೇ ರಿವೀಲ್ ಮಾಡಿದೆ ಭೀಮ ಚಿತ್ರತಂಡ.

  • ‘ಮೇಮ್ ಫೇಮಸ್’ ಮೆಚ್ಚಿದ ರಾಜಮೌಳಿ : ಲಹರಿ ಫಿಲ್ಮ್ಸ್ ನಿರ್ಮಾಣದ ತೆಲುಗಿನ 2ನೇ ಚಿತ್ರವೂ ಹಿಟ್

    ‘ಮೇಮ್ ಫೇಮಸ್’ ಮೆಚ್ಚಿದ ರಾಜಮೌಳಿ : ಲಹರಿ ಫಿಲ್ಮ್ಸ್ ನಿರ್ಮಾಣದ ತೆಲುಗಿನ 2ನೇ ಚಿತ್ರವೂ ಹಿಟ್

    ನ್ನಡದ ಹೆಸರಾಂತ ಲಹರಿ ಸಂಸ್ಥೆಯ ಲಹರಿ ಫಿಲ್ಮ್ಸ್ (Lahari Films)  ಹಾಗೂ ಚಾಯ್ ಬಿಸ್ಕೆಟ್ ಫಿಲ್ಮ್ಸ್ ಜಂಟಿಯಾಗಿ ನಿರ್ಮಾಣ ಮಾಡಿದ್ದ ತೆಲುಗಿನ (Telugu) ‘ಮೇಮ್ ಫೇಮಸ್’ (Meme Famous) ಸಿನಿಮಾ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಬಾಹುಬಲಿ ಖ್ಯಾತಿಯ ರಾಜಮೌಳಿ (Rajamouli), ಖ್ಯಾತನಟ ಮಹೇಶ್ ಬಾಬು, ರಾಜಮೌಳಿ ಪುತ್ರ ಎಸ್.ಎಸ್ ಕಾರ್ತೀಕೇಯ ಕೂಡ ಸಿನಿಮಾ ಮೆಚ್ಚಿ ಮಾತನಾಡಿದ್ದಾರೆ.

    ‘ತುಂಬಾ ದಿನಗಳ ನಂತರ ಥಿಯೇಟರ್‍ ಹೋಗಿ ಸಿನಿಮಾವೊಂದನ್ನು ಎಂಜಾಯ್ ಮಾಡಿದೆ. ಪ್ರತಿಭಾವಂತ ಟೀಮ್ ಸೇರಿಕೊಂಡು ಮಾಡಿರುವ ಸಿನಿಮಾ ಮೇಮ್ ಫೇಮಸ್. ಸಹಜ ಅಭಿನಯ, ಹೊಸದಾದ ನಿರೂಪಣೆ. ಸಖತ್ ಮನರಂಜನೆಯನ್ನು ಈ ಸಿನಿಮಾ ನೀಡಿದೆ. ಈ ಸಿನಿಮಾದ ನಟ ಹಾಗೂ ನಿರ್ದೇಶಕರಿಗೆ ಉತ್ತಮ ಭವಿಷ್ಯವಿದೆ. ಅದರಲ್ಲೂ ಅಂಜಿ ಮಾಮಾ ತುಂಬಾ ಕಾಡುತ್ತಾನೆ’ ಎಂದು ರಾಜಮೌಳಿ ಟ್ವೀಟ್ ಮಾಡಿದೆ.

    ಸ್ಟಾರ್ ನಟ ಮಹೇಶ್ ಬಾಬು (Mahesh Babu) ಕೂಡ ಸಿನಿಮಾ ಬಗ್ಗೆ ಮೆಚ್ಚಿ ಟ್ವೀಟ್ ಮಾಡಿದ್ದು, ‘ಈಗ ತಾನೆ ಮೇಮ್ ಫೇಮಸ್ ಸಿನಿಮಾ ನೋಡಿದೆ. ಪ್ರತಿಭಾವಂತ ಪಡೆಯೇ ಸಿನಿಮಾದಲ್ಲಿದೆ. ಬರಹಗಾರರು, ನಿರ್ದೇಶಕ, ನಟ ಎಲ್ಲರೂ ಮೆಚ್ಚುವಂತಹ ಕೆಲಸ ಮಾಡಿದ್ದಾರೆ. ಹಿನ್ನೆಲೆ ಸಂಗೀತ, ದೃಶ್ಯ ಎಲ್ಲವೂ ಸಿನಿಮಾಗೆ ಮತ್ತಷ್ಟು ಶಕ್ತಿ ತುಂಬಿವೆ. ಪ್ರತಿಭಾವಂತರೇ ಈ ಸಿನಿಮಾಗಾಗಿ ಒಂದಾಗಿದ್ದಾರೆ’ ಎಂದು ಬರೆದಿದ್ದಾರೆ. ಇದನ್ನೂ ಓದಿ:ಸರಕಾರದ ಮುಂದೆ ಹಳೆ ಬೇಡಿಕೆ ಇಟ್ಟ ರಿಷಬ್ ಶೆಟ್ಟಿ

    ಯೂಟ್ಯೂಬ್ ಮೂಲಕ ಮನೆಮಾತಾಗಿದ್ದ ಸುಮತ್ ಪ್ರಭಾಸ್ ನಟನೆಯ ಸಿನಿಮಾ ಇದಾಗಿದ್ದು, ಕನ್ನಡದ ಹೆಸರಾಂತ ಸಂಗೀತ ಸಂಸ್ಥೆ ಲಹರಿ ಸಂಸ್ಥೆಯ ಚಂದ್ರು ಮನೋಹರನ್ (Chandru Manoharan) ಹಾಗೂ ಚಾಯ್ ಬಿಸ್ಕೆಟ್ ಫಿಲ್ಮ್ಸ್ ಜೊತೆಯಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಲಹರಿ ಫಿಲ್ಮಸ್ ನಿಂದ ಮೂಡಿ ಬರುತ್ತಿರುವ ತೆಲುಗಿನ ಎರಡನೇ ಸಿನಿಮಾವಾಗಿದೆ. ಈ ಹಿಂದೆ ‘ರೈಟರ್ ಪದ್ಮಭೂಷಣ್’ ಸಿನಿಮಾವನ್ನು ಲಹರಿ ಸಂಸ್ಥೆ ತೆಲುಗಿನಲ್ಲಿ ನಿರ್ಮಾಣವಾಗಿತ್ತು. ಹತ್ತು ದಿನದಲ್ಲಿ ಈ ಸಿನಿಮಾ 10.1 ಕೋಟಿ ರೂಪಾಯಿ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿ ಅಚ್ಚರಿ ಮೂಡಿಸಿತ್ತು.

    ಮೂರು ದಿನಗಳ ಹಿಂದೆ ರಿಲೀಸ್ ಆಗಿರುವ ‘ಮೇಮ್ ಫೇಮಸ್’ ಸಿನಿಮಾ ಕೂಡ ತೆಲುಗು ಚಿತ್ರೋದ್ಯಮದಲ್ಲಿ ಭಾರೀ ಸದ್ದು ಮಾಡುತ್ತಿದೆ. ಬಿಡುಗಡೆಯಾದ ಮೂರೇ ದಿನಕ್ಕೆ 3.1 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಹಾಗಾಗಿ ತೆಲುಗು ಚಿತ್ರೋದ್ಯಮ ಅನೇಕರು ಸಿನಿಮಾ ಮೆಚ್ಚಿ ಮಾತನಾಡುತ್ತಾರೆ. ಸೋಷಿಯಲ್ ಮೀಡಿಯಾಗಳಲ್ಲಿ ಚಿತ್ರತಂಡದ ಬಗ್ಗೆ ಅಭಿಮಾನದ ನುಡಿಗಳನ್ನು ಬರೆಯುತ್ತಿದ್ದಾರೆ.

  • ನಟಿ ಶ್ರೀಲೀಲಾಗೆ ಕೆನ್ನೆಗೆ ಬಾರಿಸಿದ ಬಾಲಯ್ಯ: ಏನಿದು ಗುಸು ಗುಸು?

    ನಟಿ ಶ್ರೀಲೀಲಾಗೆ ಕೆನ್ನೆಗೆ ಬಾರಿಸಿದ ಬಾಲಯ್ಯ: ಏನಿದು ಗುಸು ಗುಸು?

    ತೆಲುಗಿನ (Telugu) ಖ್ಯಾತ ನಟ ಬಾಲಯ್ಯ ನಟನೆಯ ಹೊಸ ಸಿನಿಮಾದಲ್ಲಿ ಕನ್ನಡತಿ ಶ್ರೀಲೀಲಾ (Srileela) ಪಾತ್ರ ಮಾಡುತ್ತಿದ್ದಾರೆ. ಈಗಾಗಲೇ ಚಿತ್ರೀಕರಣದಲ್ಲೂ ಅವರು ಪಾಲ್ಗೊಂಡಿದ್ದಾರೆ. ಶೂಟಿಂಗ್ ಸಂದರ್ಭದಲ್ಲಿ ಶ್ರೀಲೀಲಾಗೆ ಬಾಲಯ್ಯ ಕೆನ್ನೆಗೆ ಬಾರಿಸಿದರು ಎನ್ನುವ ಸುದ್ದಿ ಸಖತ್ ಚರ್ಚೆಗೆ ಕಾರಣವಾಗಿದೆ.

    ಬಾಲಯ್ಯ (Balayya) ಸಖತ್ ಕೋಪಿಷ್ಠ ಎನ್ನುವುದು ಪದೇ ಪದೇ ಸಾಬೀತಾಗಿದೆ. ಚಿತ್ರೀಕರಣದ ಸ್ಥಳದಲ್ಲಿ ಬಾಲಯ್ಯ ಯಾವತ್ತಿಗೂ ಗರಂ ಆಗಿರುತ್ತಾರೆ ಎನ್ನುವುದು ಹಲವು ಘಟನೆಗಳು ನೆನಪಿಸುತ್ತವೆ. ಆದರೆ, ಅವರು ಈವರೆಗೂ ನಟಿಯರ ಮೇಲೆ ಕೈ ಮಾಡಿರಲಿಲ್ಲ. ಇದೇ ಮೊದಲ ಬಾರಿಗೆ ನಟಿಯೊಬ್ಬರ ಮೇಲೆ ಬಾಲಯ್ಯ ಕೈ ಮಾಡಿದ್ದಾರೆ ಎನ್ನುವುದು ಹಾಟ್ ಟಾಪಿಕ್. ಇದನ್ನೂ ಓದಿ:‘RRR’ ರೈಟರ್ ವಿಜೇಂದ್ರ ಪ್ರಸಾದ್‌ ಜೊತೆ ಕೇದರನಾಥ್‌ಗೆ ಕಂಗನಾ ಭೇಟಿ

    ಶೂಟಿಂಗ್ ಸ್ಥಳದಲ್ಲಿ ಇದ್ದವರ ಮಾಹಿತಿ ಪ್ರಕಾರ, ಅದು ಕೋಪದಿಂದ ಹೊಡೆದ ಘಟನೆಯಲ್ಲವಂತೆ. ಅಂಥದ್ದೊಂದು ದೃಶ್ಯ ಸಿನಿಮಾದಲ್ಲಿತ್ತು ಎಂದು ಹೇಳಲಾಗುತ್ತಿದೆ. ಬಾಲಯ್ಯ ಕುಟುಂಬದ ಸೊಸೆಯಾಗಿ ಶ್ರೀಲೀಲಾ ನಟಿಸುತ್ತಿದ್ದಾರೆ. ಸೊಸೆಯನ್ನು ಹೊಡೆಯುವಂತಹ ಸನ್ನಿವೇಶ ಅದಾಗಿತ್ತು ಎಂದು ಹೇಳಲಾಗುತ್ತಿದೆ.

    ಅಷ್ಟಕ್ಕೂ ಶ್ರೀಲೀಲಾ ಅವರೇ ದೃಶ್ಯ ನೈಜವಾಗಿ ಬರಲಿ ಎನ್ನುವ ಕಾರಣಕ್ಕಾಗಿ ಜೋರಾಗಿ ಕೆನ್ನೆಗೆ ಬಾರಿಸಿ ಎಂದು ಬಾಲಯ್ಯನವರನ್ನು ಕೇಳಿಕೊಂಡಿದ್ದರು ಎಂದು ಹೇಳಲಾಗುತ್ತಿದೆ. ಇದರಲ್ಲಿ ಯಾವುದು ನಿಜವೋ ಯಾವುದು ಸುಳ್ಳು ಎನ್ನುವುದನ್ನು ಅವರೇ ಸ್ಪಷ್ಟ ಪಡಿಸಬೇಕು.

  • ಜಗ್ಗೇಶ್ ನಟನೆಯ ‘ಸರ್ವರ್ ಸೋಮಣ್ಣ’ ನಿರ್ದೇಶಕ ಕೆ.ವಾಸು ನಿಧನ

    ಜಗ್ಗೇಶ್ ನಟನೆಯ ‘ಸರ್ವರ್ ಸೋಮಣ್ಣ’ ನಿರ್ದೇಶಕ ಕೆ.ವಾಸು ನಿಧನ

    ತೆಲುಗಿನ ಖ್ಯಾತ ನಟ ಚಿರಂಜೀವಿ ಅವರನ್ನು ಸಿನಿಮಾ ರಂಗಕ್ಕೆ ಪರಿಚಯಿಸಿದ ಹಾಗೂ ಕನ್ನಡದಲ್ಲಿ ಜಗ್ಗೇಶ್ ನಟನೆಯ ಸರ್ವರ ಸೋಮಣ್ಣ ಚಿತ್ರವನ್ನು ನಿರ್ದೇಶನ ಮಾಡಿದ್ದ ಖ್ಯಾತ ದಕ್ಷಿಣ ಭಾರತದ ಸಿನಿಮಾ ನಿರ್ದೇಶಕ ಕೆ.ವಾಸು (K.Vasu) ನಿಧನರಾಗಿದ್ದಾರೆ (Passed Away). ಹಲವು ವರ್ಷಗಳಿಂದ ಅವರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು.

    ಕೆಲ ದಿನಗಳಿಂದ ಅವರು ಆರೋಗ್ಯ ತೀರಾ ಹದಗೆಟ್ಟಿದ್ದರಿಂದ ಕಿಮ್ಸ್ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಅಲ್ಲದೇ, ಕಳೆದ ಕೆಲ ತಿಂಗಳಿಂದ ಅವರಿಗೆ ಡಯಾಲಿಸಸ್ ಕೂಡ ಮಾಡಿಸಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಸಂಜೆ ಹೈದರಾಬಾದ್ (Hyderabad) ನ ಫಿಲ್ಮ್ ನಗರದಲ್ಲಿರುವ ಅವರ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ:ಹುಟ್ಟುಹಬ್ಬದ ಸಂಭ್ರಮದಲ್ಲಿ ‘ಹೊಯ್ಸಳ’ ಬಲಿ- ಫ್ಯಾನ್ಸ್‌ಗೆ ಸಿಕ್ತು ಸಿಹಿಸುದ್ದಿ

    ಕೆ.ವಾಸು ನಿಧನಕ್ಕೆ ಚಿರಂಜೀವಿ ಸೇರಿದಂತೆ ಹಲವರು ಸಂತಾಪ ವ್ಯಕ್ತಪಡಿಸಿದ್ದಾರೆ. ಈ ಕುರಿತಾಗಿ ಚಿರಂಜೀವಿ ಟ್ವೀಟ್ ಕೂಡ ಮಾಡಿದ್ದಾರೆ. ಕೆ.ವಾಸು ನಿರ್ದೇಶನದ ಪ್ರಣಾಮ್ ಖರೀದು ಚಿತ್ರದ ಮೂಲಕ ತಾವು ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದ್ದನ್ನೂ ಚಿರಂಜೀವಿ ನೆನಪಿಸಿಕೊಂಡಿದ್ದಾರೆ. ಅಲ್ಲದೇ ವಾಸು ಜೊತೆಗಿನ ಒಡನಾಟವನ್ನೂ ಅವರು ಹಂಚಿಕೊಂಡಿದ್ದಾರೆ.

    22ನೇ ವಯಸ್ಸಿಗೆ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದ್ದ ಕೆ.ವಾಸು, ಸಹಾಯಕ ನಿರ್ದೇಶಕರಾಗಿ, ನಿರ್ದೇಶಕರಾಗಿ ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ. ಕೊತ್ತಲ ರಾಯುಡು, ಶ್ರೀ ಶಿರಡಿ ಸಾಯಿಬಾಬಾ ಮಹಾತ್ಯಮ್, ಸರ್ವರ್ ಸೋಮಣ್ಣ ಹೀಗೆ ಸಾಕಷ್ಟು ಹಿಟ್ ಚಿತ್ರಗಳನ್ನು ಅವರು ನೀಡಿದ್ದಾರೆ.

  • ಆ ತೆಲುಗು ನಟ ಕೊಟ್ಟ ಹಿಂಸೆ ನೆನಪಿಸಿಕೊಂಡ ನಟಿ ಹನ್ಸಿಕಾ

    ಆ ತೆಲುಗು ನಟ ಕೊಟ್ಟ ಹಿಂಸೆ ನೆನಪಿಸಿಕೊಂಡ ನಟಿ ಹನ್ಸಿಕಾ

    ಕ್ಷಿಣದ ಖ್ಯಾತ ನಟಿ ಹನ್ಸಿಕಾ ಮೊಟ್ವಾಣಿ (Hansika Motwani) ತಮ್ಮ ಜೀವನದಲ್ಲಿ ನಡೆದ ಕಹಿ ಘಟನೆಯನ್ನು ಹಂಚಿಕೊಂಡಿದ್ದಾರೆ. ತಮ್ಮ ಸಿನಿ ಕೆರಿಯರ್ ಆರಂಭದ ದಿನಗಳಲ್ಲಿ ನಡೆದ ಆ ಘಟನೆಯ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ಆ ನಟನಿಂದಾಗಿ ಸಾಕಷ್ಟು ಹಿಂಸೆ ಮತ್ತು ಅವಮಾನವನ್ನು ಎದುರಿಸಬೇಕಾಯಿತು ಅಂದಿದ್ದಾರೆ.

    ಅದು ನನ್ನ ಸಿನಿಮಾ ರಂಗದ ಆರಂಭದ ದಿನಗಳು. ಸಿನಿಮಾ ರಂಗದಲ್ಲೇ ನೆಲೆಯೂರಬೇಕು ಎಂದು ಬಂದವಳಿಗೆ ಸಾಕಷ್ಟು ಅವಮಾನಗಳು ಆಗಿವೆ. ಅದರಲ್ಲೂ ಆ ನಟನೊಬ್ಬ ಆತನೊಂದಿಗೆ ಡೇಟ್ ಮಾಡುವಂತೆ ಸಾಕಷ್ಟು ತೊಂದರೆ ಕೊಟ್ಟ. ನಾನು ಒಪ್ಪದೇ ಇದ್ದಾಗ ಅವಮಾನಿಸಿದ. ಆ ನೋವಿನಿಂದ ಆಚೆ ಬರುವುದಕ್ಕೆ ಸಾಕಷ್ಟು ಕಷ್ಟಪಟ್ಟೆ ಎಂದಿದ್ದಾರೆ ಹನ್ಸಿಕಾ. ಆದರೆ, ಆ ನಟ ಯಾರು ಎನ್ನುವುದನ್ನು ಅವರು ಹೇಳಿಲ್ಲ. ಇದನ್ನೂ ಓದಿ:ಕನ್ನಡದ ‘ಅಮೃತವರ್ಷಿಣಿ’ ಖ್ಯಾತಿಯ ನಟ ಶರತ್ ಬಾಬು ನಿಧನ

    ದೇಶಮುದುರು ಚಿತ್ರದ ಮೂಲಕ ಟಾಲಿವುಡ್ ಗೆ ಎಂಟ್ರಿ ಕೊಟ್ಟ ಹನ್ಸಿಕಾ, ಆನಂತರ ತಮಿಳು, ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಚಿತ್ರಗಳಲ್ಲಿ ನಟಿಸಿದ್ದಾರೆ. ಹನ್ಸಿಕಾ ಬಾಲನಟಿಯಾಗಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದರೂ, ನಾಯಕಿಯಾಗಿ ನೆಲೆಯೂರಲು ಸಾಕಷ್ಟು ಕಷ್ಟ ಪಟ್ಟಿದ್ದಾರೆ. ಸಿನಿಮಾಗಳ ಹಿಟ್ ನಂತರ ತೆಲುಗು (Telugu), ತಮಿಳು ಹಾಗೂ ಕನ್ನಡ ಸಿನಿಮಾಗಳ ಸೂಪರ್ ಸ್ಟಾರ್ ಗಳ ಜೊತೆಯೇ ತೆರೆ ಹಂಚಿಕೊಂಡಿದ್ದಾರೆ.

    ತಮಿಳು (Tamil) ಸಿನಿಮಾ ರಂಗದಲ್ಲಿ ಹನ್ಸಿಕಾಗೆ ತನ್ನದೇ ಅಭಿಮಾನಿ ಬಳಗವಿದ್ದು, ಅವಳಿಗಾಗಿ ದೇವಸ್ಥಾನವನ್ನೂ ಕಟ್ಟಿದ್ದರು. ಅಲ್ಲದೇ, ಹನ್ಸಿಕಾ ಹೆಸರಿನಲ್ಲಿ ಸಾಕಷ್ಟು ಸಮಾಜಮುಖಿ ಕೆಲಸಗಳನ್ನೂ ಅವರ ಅಭಿಮಾನಿಗಳು ಮಾಡಿದ್ದಾರೆ.