Tag: Telugu

  • ತಪ್ಪಾಯ್ತು ಕ್ಷಮಿಸಿ ಬಿಡಿ – ಕಣ್ಣೀರಿಟ್ಟು ಕ್ಷಮೆಯಾಚಿಸಿದ ನಟ ವಿಜಯ್ ರಂಗರಾಜು

    ತಪ್ಪಾಯ್ತು ಕ್ಷಮಿಸಿ ಬಿಡಿ – ಕಣ್ಣೀರಿಟ್ಟು ಕ್ಷಮೆಯಾಚಿಸಿದ ನಟ ವಿಜಯ್ ರಂಗರಾಜು

    ಬೆಂಗಳೂರು: ಸಾಹಸಿಂಹ ಡಾ. ವಿಷ್ಣುವರ್ಧನ್ ಅವರ ಬಗ್ಗೆ ಆಕ್ಷೇಪಾರ್ಹ ಮಾತುಗಳನ್ನಾಡಿದ್ದ ತೆಲುಗು ನಟ ವಿಜಯ್ ರಂಗರಾಜು ವಿರುದ್ಧ ಇಡೀ ಚಿತ್ರರಂಗ ಹಾಗೂ ಅಭಿಮಾನಿಗಳು ತಿರುಗಿ ಬಿದ್ದಿದ್ದಾರೆ. ಈ ಬೆನ್ನಲ್ಲೇ ನಟ ಪರಿಪರಿಯಾಗಿ ಕ್ಷಮೆಯಾಚಿಸಿದ್ದಾರೆ.

    ಈ ಸಂಬಂಧ ವೀಡಿಯೋ ಮಾಡಿರುವ ನಟ, ಕರ್ನಾಟಕದ ಜನತೆ, ಸುದೀಪ್, ಪುನೀತ್ ರಾಜ್ ಕುಮಾರ್ ಹಾಗೂ ಭಾರತಿ ವಿಷ್ಣುವರ್ಧನ್ ಬಳಿ ಕ್ಷಮೆಯಾಚಿಸಿದ್ದಾರೆ. ವೀಡಿಯೋದಲ್ಲಿಯೇ ಅಡ್ಡಬಿದ್ದು ನನ್ನಿಂದ ತಪ್ಪಾಗಿದೆ ಎಂದು ಅಲವತ್ತುಕೊಂಡಿದ್ದಾರೆ.

    ವೀಡಿಯೋದಲ್ಲಿ ಏನಿದೆ..?
    ಕರ್ನಾಟಕದ ಜನರು, ಕರ್ನಾಟಕದ ಮಕ್ಕಳಿಗೆ ನಮಸ್ಕಾರ. ವಿಜಯ್ ರಂಗರಾಜು ಮಾತಾಡ್ತಾ ಇದ್ದೀನಿ. ನಾನು ತುಂಬಾ ದೊಡ್ಡ ತಪ್ಪು ಮಾಡಿ, ಆ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿದ್ದೇನೆ. ಕೊರೊನಾದಿಂದಾಗಿ ಮಾಸ್ಕ್ ಹಾಕಿಕೊಂಡಿದ್ದೇನೆ. ನಿಮಗೆ ನನ್ನ ಮುಖ ತೋರಿಸಬಾರದು ಅಂತೇನೂ ಅಲ್ಲ. ಕೊರೊನಾದಿಂದಾಗಿ ನೋವು ಅನುಭವಿಸುತ್ತಿದ್ದೇನೆ. ನಾನು ದೊಡ್ಡ ಪಾಪ ಮಾಡಿದ್ದೇನೆ. ನಾನು ಇಂಡಸ್ಟ್ರಿಗೆ ಬಂದು ತುಂಬಾ ವರ್ಷ ಆಗಿದೆ. ಫೈಟರ್ ಆಗಿಯೇ ಬಂದೆ ನಾನು. ನಾನೇನೂ ದೊಡ್ಡ ನಟ ಅಲ್ಲ. ಕೆಲ ವ್ಯಾಪಾರಗಳನ್ನು ಮಾಡಿ ಎಲ್ಲಾ ಕಳೆದುಕೊಂಡೆ. ನಂತರ ಲಂಡನ್‍ಗೆ ಹೋಗಿ 5 ವರ್ಷ ಇದ್ದೆ. ತುಂಬಾ ಕಷ್ಟ ಪಟ್ಟಿದ್ದೇನೆ. ರಸ್ತೆಯಲ್ಲಿ ಕಸ ಗುಡಿಸಿದ್ದೇನೆ, ಟಾಯ್ಲೆಟ್ ತೊಳೆದಿದ್ದೇನೆ. ಆದರೆ ನನ್ನ ಕಷ್ಟ ಪರಿಹಾರ ಆಗ್ಲಿಲ್ಲ.

    ನಾನು ಆ ದಿನ, ‘ಅವರನ್ನು’ ಹಿಡಿದುಕೊಳ್ಳಲಿಲ್ಲ…ಅಷ್ಟು ದೊಡ್ಡ ವ್ಯಕ್ತಿಯನ್ನು ಹಿಡಿದುಕೊಂಡಿದ್ರೆ, ಅಲ್ಲಿ ಯುನಿಟ್‍ನವರು ನನ್ನನ್ನು ಸುಮ್ಮನೆ ಬಿಡ್ತಿದ್ರಾ..? ಆಗಲೇ ನನ್ನ ಅಲ್ಲಿದ್ದವರು ಸಾಯಿಸಿಬಿಡುತ್ತಿದ್ರು. ಆದರೆ ತುಂಬಾ ವರ್ಷಗಳ ನಂತರ, ಯಾಕಂದ್ರೆ ನಾನು ನಟಿಸಬೇಕಿದ್ದ ಶಾಟ್‍ನಲ್ಲಿ ನಟಿಸಿದ್ದ ಇನ್ನೊಬ್ಬ ಒಂದು ವಾರದ ನಂತರ ಸತ್ತು ಹೋಗಿದ್ದ. ಆ ಕೋಪ ಹಾಗೇ ಉಳಿದುಬಿಟ್ಟಿತ್ತು. ಏನೋ ಮಾತಿನ ಪ್ಲೋನಲ್ಲಿ ಆ ರೀತಿ ಹೇಳಿಬಿಟ್ಟೆ. ನನ್ನ ದಯಮಾಡಿ ಕ್ಷಮಿಸಿ, ನಿಮ್ಮ ಕಾಲು ಮುಟ್ಟಿ ಬೇಡಿಕೊಳ್ತಿದ್ದೇನೆ. ಪ್ರತಿಯೊಬ್ಬರಿಗೂ ಕಾಲಿಗೆ ಬಿದ್ದು ನಮಸ್ಕಾರ ಮಾಡ್ತಿದ್ದೀನಿ. ವಿಷ್ಣುವರ್ಧನ್ ಅಭಿಮಾನಿಗಳು ಹಾಗೂ ಭಾರತಿ ಅಮ್ಮನವರಿಗೂ ಕೂಡ ‘ಸಾರಿ’ ಕೇಳ್ತಿದ್ದೀನಿ. ಯಾಕಂದ್ರೆ ಇಂತಹ ದೊಡ್ಡ ಸುಳ್ಳು ಯಾರೂ ಹೇಳಬಾರದು. ಆದರೆ ನಾನು ಹೇಳಿದ್ದೀನಿ.. ಐ ಆಮ್ ಸಾರಿ, ನನ್ನ ಕ್ಷಮಿಸಿಬಿಡಿ… ನನ್ನ ಕ್ಷಮಿಸಿಬಿಡಿ..ನನ್ನ ಕ್ಷಮಿಸಿಬಿಡಿ.. ಸುದೀಪ್ ಅವರೇ, ರಾಜ್‍ಕುಮಾರ್ ಅವರ ಮಗ ಪುನೀತ್ ರಾಜ್‍ಕುಮಾರ್ ಅವರೇ ಎಲ್ಲಾ ದೊಡ್ಡವರು ನನ್ನ ಕ್ಷಮಿಸಿ. ನನ್ನ ಕ್ಷಮಿ ಸಿ ಎಂದು ಪರಿಪರಿಯಾಗಿ ಬೇಡಿಕೊಂಡಿದ್ದಾರೆ.

    ನಟ ಹೇಳಿದ್ದೇನು?
    ತೆಲುಗು ಚಿತ್ರರಂಗದ ನಟ ವಿಜಯ್ ರಂಗರಾಜು ಸಂದರ್ಶನವೊಂದರಲ್ಲಿ ನೀಡಿದ ಹೇಳಿಕೆ ವೈರಲ್ ಆಗಿದೆ. ಇದನ್ನು ಗಮನಿಸಿದ ಸ್ಯಾಂಡಲ್‍ವುಡ್ ತಾರೆಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ದಶಕಗಳ ಹಿಂದೆ ವಿಷ್ಣುವರ್ಧನ್ ಜೊತೆ ನಟಿಸಿದ್ದಾಗಿ ಹೇಳಿಕೊಂಡಿದ್ದು, ಇದೇ ವೇಳೆ ವಿಷ್ಣುವರ್ಧನ್ ಅವರ ನಡತೆ ಬಗ್ಗೆ ಆಕ್ಷೇಪಣೆಯ ಮಾತುಗಳನ್ನಾಡಿದ್ದಾರೆ. ಅಲ್ಲದೆ ಅಂದು ವಿಷ್ಣುವರ್ಧನ್ ಕಾಲರ್ ಹಿಡಿದು ಜಗಳ ಮಾಡಿದ್ದಾಗಿ ಸಹ ಹೇಳಿದ್ದಾರೆ. ಹೀಗಾಗಿ ಆಕ್ರೋಶ ಭುಗಿಲೆದ್ದಿದೆ.

    ವಿಷ್ಣುಸೇನೆ, ವಿಷ್ಟುವರ್ಧನ್ ಅಭಿಮಾನಿಗಳು ನಟನ ವಿರುದ್ಧ ಹಲವು ಕಡೆ ದೂರು ದಾಖಲಿಸಿದ್ದು, ಚಲನಚಿತ್ರ ವಾಣಿಜ್ಯ ಮಂಡಳಿ ಸಹ ದೂರು ದಾಖಲಿಸಿಕೊಂಡಿದೆ. ಅಲ್ಲದೆ ಸ್ಯಾಂಡಲ್‍ವುಡ್ ನಟರು ಸಹ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಬೆನ್ನಲ್ಲೇ ವಿಜಯ್ ಕ್ಷಮೆಯಾಚಿಸಿದ್ದಾರೆ.

  • ಅಯ್ಯಪ್ಪನುಂ ಕೊಶಿಯಮ್ ತೆಲುಗು ರಿಮೇಕ್‍ನಲ್ಲಿ ಸುದೀಪ್?

    ಅಯ್ಯಪ್ಪನುಂ ಕೊಶಿಯಮ್ ತೆಲುಗು ರಿಮೇಕ್‍ನಲ್ಲಿ ಸುದೀಪ್?

    – ಪವನ್ ಕಲ್ಯಾಣ್ ಜೊತೆಯಾಗಲಿದ್ದಾರಾ ಕಿಚ್ಚ?

    ಬೆಂಗಳೂರು: ಫ್ಯಾಂಟಮ್‍ನಲ್ಲಿ ಸಖತ್ ಬ್ಯುಸಿಯಾಗಿರುವ ಕಿಚ್ಚ ಸುದೀಪ್ ಇದೀಗ ತೆಲುಗಿನ ಮತ್ತೊಂದು ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಮಲಯಾಳಂನಲ್ಲಿ ಹೆಚ್ಚು ಪ್ರಶಂಸೆ ಪಡೆದಿರುವ ‘ಅಯ್ಯಪ್ಪನುಂ ಕೊಶಿಯಮ್’ ಸಿನಿಮಾ ತೆಲುಗಿಗೆ ರೀಮೇಕ್ ಆಗುತ್ತಿದ್ದು, ಈ ಚಿತ್ರದಲ್ಲಿ ಪವನ್ ಕಲ್ಯಾಣ್ ಅಭಿನಯಿಸುತ್ತಿದ್ದಾರೆ. ಇನ್ನೂ ಈ ಚಿತ್ರಕ್ಕೆ ಹೆಸರಿಟ್ಟಿಲ್ಲ, ಆಕ್ಷನ್ ಥ್ರಿಲ್ಲರ್ ಸಿನಿಮಾ ಇದಾಗಿದ್ದು, ಸಾಗರ್ ಕೆ ಚಂದ್ರ ನಿರ್ದೇಶಿಸುತ್ತಿದ್ದಾರೆ. ಸಿತಾರಾ ಎಂಟರ್‍ಟೈನ್ಮೆಂಟ್ ಬ್ಯಾನರ್ ಅಡಿ ಎಸ್.ನಾಗವಂಶಿ ಸಿನಿಮಾ ನಿರ್ಮಿಸುತ್ತಿದ್ದಾರೆ.

    ಅಯ್ಯಪ್ಪನುಂ ಕೊಶಿಯನ್ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿ ಅಯ್ಯಪ್ಪನ್ ನಯ್ಯರ್ ಪಾತ್ರವನ್ನು ಬಿಜು ಮೆನನ್ ನಿರ್ವಹಿಸಿದ್ದಾರೆ. ನಿವೃತ್ತ ಹವಾಲ್ದಾರ್ ಕೊಶಿ ಕುರಿಯನ್ ಪಾತ್ರವನ್ನು ಪೃಥ್ವಿರಾಜ್ ಸುಕುಮಾರನ್ ನಿಭಾಯಿಸಿದ್ದಾರೆ. ಇವರಿಬ್ಬರ ಮಧ್ಯೆ ನಡೆಯುವ ಅಹಂಕಾರದ ಸಂಘರ್ಷಗಳನ್ನು ಚಿತ್ರೀಕರಿಸಲಾಗಿದೆ. ಈ ಸಿನಿಮಾ ಇದೀಗ ತೆಲುಗಿನಲ್ಲಿ ರಿಮೇಕ್ ಮಾಡಲಾಗುತ್ತಿದ್ದು, ಪವನ್ ಕಲ್ಯಾಣ್ ಬಿಜು ಮೆನನ್ ಪಾತ್ರ ನಿರ್ವಹಿಸಿದರೆ, ಕಿಚ್ಚ ಸುದೀಪ್ ಪೃತ್ವಿ ರಾಜ್ ಸುಕುಮಾರನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಕುರಿತು ಚರ್ಚೆ ನಡೆಯುತ್ತಿದೆ.

    ಕೊಶಿ ಕುರಿಯನ್ ಪಾತ್ರದಲ್ಲಿ ಪೃಥ್ವಿರಾಜ್ ನಟಿಸಿದ್ದು, ಸುದೀಪ್ ಅವರ ಪರ್ಸನಾಲಿಟಿಗೆ ಈ ಪಾತ್ರ ಹೊಂದಿಕೆ ಆಗುತ್ತದೆ ಎಂಬುದು ಚಿತ್ರತಂಡದ ಮಾತು. ಇದರಿಂದ ಕಿಚ್ಚ ಸುದೀಪ್ ಸಹ ಸಂತಸಗೊಂಡಿದ್ದು, ಬೌಂಡ್ ಸ್ಕ್ರಿಪ್ಟ್‍ಗಾಗಿ ಮನವಿ ಮಾಡಿದ್ದಾರಂತೆ. ಹೀಗಾಗಿ ಸಿನಿಮಾ ಬಗ್ಗೆ ಹಾಗೂ ಕಿಚ್ಚ ಸುದೀಪ್ ನಟನೆ ಬಗ್ಗೆ ಕುತೂಹಲ ಮನೆ ಮಾಡಿದೆ. ಅಭಿಮಾನಿಗಳು ಸಹ ಅಷ್ಟೇ ಕಾತರದಿಂದ ಕಾಯುತ್ತಿದ್ದಾರೆ.

    ಈ ಚಿತ್ರದಲ್ಲಿ ಪವನ್ ಕಲ್ಯಾಣ್ ಹಾಗೂ ಕಿಚ್ಚು ಸುದೀಪ್ ಸರಿ ಸಮನಾಗಿ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಇನ್ನೂ ವಿಶೇಷ ಸಂಗತಿ ಎಂದರೆ ಅಯ್ಯಪ್ಪನುಂ ಕೊಶಿಯನ್ ಸಿನಿಮಾವನ್ನು ತೆಲುಗು ಮಾತ್ರವಲ್ಲ, ತಮಿಳು ಹಾಗೂ ಹಿಂದಿಯಲ್ಲಿ ಸಹ ರಿಮೇಕ್ ಮಾಡಲಾಗುತ್ತಿದೆ. ಹೀಗಾಗಿ ಈ ಸಿನಿಮಾ ಭಾರೀ ಸದು ಮಾಡುತ್ತಿದೆ. ಕಿಚ್ಚ ಸುದೀಪ್ ನಟಿಸುತ್ತಾರಾ ಕಾದು ನೋಡಬೇಕಿದೆ.

    ಲಾಕ್‍ಡೌನ್ ಬಳಿಕ ಚಿತ್ರೀಕರಣ ಬಿರುಸು ಪಡೆದುಕೊಂಡಿದ್ದು, ಕಿಚ್ಚ ಸಹ ಫ್ಯಾಂಟಮ್ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಪ್ರಸ್ತುತ ಹೈದರಾಬಾದ್‍ನಲ್ಲಿ ಶೂಟಿಂಗ್ ನಡೆಯುತ್ತಿದ್ದು, ಚಿತ್ರ ತಂಡ ಹೈದರಾಬಾದ್‍ನಲ್ಲಿ ಮೊಕ್ಕಾಂ ಹೂಡಿದೆ. ಫ್ಯಾಂಟಮ್ ಚಿತ್ರೀಕರಣದ ವೇಳೆಯೇ ಕಿಚ್ಚ ಸುದೀಪ್ ಅವರಿಗೆ ಈ ಆಫರ್ ಬಂದಿದ್ದು, ಒಂದು ವೇಳೆ ತೆಲುಗು ಸಿನಿಮಾದಲ್ಲಿ ಅಭಿನಯಿಸುವುದು ಖಾತ್ರಿಯಾದಲ್ಲಿ ಸುದೀಪ್ ಎರಡೂ ಸಿನಿಮಾಗಳಲ್ಲಿ ಬ್ಯುಸಿಯಾಗಲಿದ್ದಾರೆ.

  • ಟಾಲಿವುಡ್‍ನಲ್ಲಿ ನಾಗಭೈರವಿ ಅವತಾರ ತಾಳಿದ ಗಟ್ಟಿಮೇಳ ಖ್ಯಾತಿಯ ಅಶ್ವಿನಿ

    ಟಾಲಿವುಡ್‍ನಲ್ಲಿ ನಾಗಭೈರವಿ ಅವತಾರ ತಾಳಿದ ಗಟ್ಟಿಮೇಳ ಖ್ಯಾತಿಯ ಅಶ್ವಿನಿ

    ಬೆಂಗಳೂರು: ಗಟ್ಟಿಮೇಳ ಧಾರಾವಾಹಿ ಮೂಲಕ ಚಿರಪರಿಚಿತರಾಗಿರುವ ನಟಿ ಅಶ್ವಿನಿ ಇದೀಗ ಅವರ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದು, ನಾಗ ಭೈರವಿಯ ಅವತಾರ ತಾಳಿದ್ದಾರೆ.

    ನಟಿ ಅಶ್ವಿನಿ ಈ ಕುರಿತ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಅವರ ಅಭಿಮಾನಿಗಳು ಫಿದಾ ಆಗಿದ್ದಾರೆ. ಗಟ್ಟಿಮೇಳ ಧಾರಾವಾಹಿಯಲ್ಲಿ ನಟಿಸುತ್ತಲೇ ಮತ್ತೊಂದು ಧಾರಾವಾಹಿಯನ್ನು ಅಶ್ವಿನಿ ಒಪ್ಪಿಕೊಂಡರಾ ಎಂದು ಪ್ರಶ್ನಿಸಿದ್ದಾರೆ. ಈ ಪೋಸ್ಟರ್ ಗಳಲ್ಲಿ ಅಶ್ವಿನಿ ವಿಭಿನ್ನ ಲುಕ್‍ನಲ್ಲಿ ಕಾಣಿಸಿಕೊಂಡಿದ್ದು, ಫೋಟೋಗಳು ಸಖತ್ ವೈರಲ್ ಆಗಿವೆ.

    ಅಶ್ವಿನಿ ಪ್ರಸ್ತುತ ಗಟ್ಟಿಮೇಳ ಧಾರಾವಾಹಿಯಲ್ಲಿ ಆರತಿ ಪಾತ್ರ ನಿರ್ವಹಿಸುತ್ತಿದ್ದು, ಕನ್ನಡಿಗರ ಮನೆ ಮಾತಾಗಿದ್ದಾರೆ. ಇದಕ್ಕೂ ಮೊದಲು ರಾಧಾ ರಮಣ ಧಾರಾವಾಹಿಯಲ್ಲಿ ತೊದಲು ಮಾತನಾಡುವ ಮುಗ್ದ ಹುಡುಗಿಯ ಪಾತ್ರವನ್ನು ನಿರ್ವಹಿಸಿದ್ದರು. ಅದಾದ ಬಳಿಕ ಇದೀಗ ಗಟ್ಟಿಮೇಳ ಧಾರಾವಾಹಿಯಲ್ಲಿ ಮಿಂಚುತ್ತಿದ್ದಾರೆ. ಇದೀಗ ಮತ್ತೊಂದು ಪವರ್‍ಫುಲ್ ಪಾತ್ರದಲ್ಲಿ ಅಶ್ವಿನಿ ಕಾಣಿಸಿಕೊಳ್ಳುತ್ತಿದ್ದು, ನಾಗಭೈರವಿಯ ಅವತಾರ ತಾಳಿದ್ದಾರೆ. ಈ ಮೂಲಕ ಟಾಲಿವುಡ್‍ಗೆ ಕಾಲಿಟ್ಟಿದ್ದಾರೆ.

    ತೆಲುಗಿನ ‘ನಾಗಭೈರವಿ’ ಧಾರಾವಾಹಿಯಲ್ಲಿ ಅಶ್ವಿನಿ ಎರಡು ಶೇಡ್‍ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಾಗದೇವತೆ ಹಾಗೂ ಬುಡಕಟ್ಟು ಜನಾಂಗದ ಹುಡುಗಿಯಾಗಿ ಅಶ್ವಿನಿ ಬಣ್ಣ ಹಚ್ಚಿದ್ದಾರೆ. ಈ ಮೂಲಕ ವಿಭಿನ್ನ ಪಾತ್ರಗಳಲ್ಲಿ ಮಿಂಚಲಿದ್ದಾರೆ. ಲಾಕ್‍ಡೌನ್‍ಗೂ ಮುನ್ನವೇ ಅವರಿಗೆ ಈ ಆಫರ್ ಬಂದಿತ್ತು. ಹೀಗಾಗಿಯೇ ಅವರು 7 ಕೆ.ಜಿ. ತೂಕವನ್ನು ಸಹ ಇಳಿಸಿಕೊಂಡು ಸಣ್ಣಗಾಗಿದ್ದಾರೆ.

    ‘ನಾಗಭೈರವಿ’ಯಲ್ಲಿ ವಿಭಿನ್ನ ಎರಡು ಪಾತ್ರಗಳನ್ನು ನಿಭಾಯಿಸುತ್ತಿರುವುದರಿಂದ ಈ ಪ್ರಾಜೆಕ್ಟ್ ಮೂಲಕ ಬಣ್ಣದ ಬದುಕಿಗೆ ದೊಡ್ಡ ತಿರುವು ಸಿಗಲಿದೆ ಎಂಬುದು ಅಶ್ವಿನಿ ಅವರ ನಿರೀಕ್ಷೆ. ಈಗಾಗಲೇ ಸೀರಿಯಲ್ ಪ್ರೋಮೋಗಳು ರಿಲೀಸ್ ಆಗಿದ್ದು, ಅಶ್ವಿನಿ ತಮ್ಮ ವಿಶಿಷ್ಟ ಪಾತ್ರದಿಂದ ಗಮನಸೆಳೆದಿದ್ದಾರೆ. ಅಶ್ವಿನಿಯ ಪರ್ಫಾಮೆನ್ಸ್ ನೋಡಿ ಧಾರಾವಾಹಿ ತಂಡ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದೆಯಂತೆ.

    ಇನ್ನೂ ವಿಶೇಷವೆಂದರೆ ಈ ಧಾರಾವಾಹಿಯಲ್ಲಿ ಸಾಹಸ ದೃಶ್ಯಗಳಿದ್ದು, ನಟಿ ಅನುಷ್ಕಾ ಶೆಟ್ಟಿಗೆ ಸಾಹಸ ಹೇಳಿಕೊಟ್ಟ ಮಾಸ್ಟರ್, ಅಶ್ವಿನಿಗೆ ಫೈಟ್ ಹೇಳಿಕೊಟ್ಟಿದ್ದಾರೆ. ಈ ಪಾತ್ರ ತುಂಬಾ ಪರ್ಫಾಮೆನ್ಸ್ ಬೇಡುವುದರಿಂದ ಅಶ್ವಿನಿ ‘ನಾಗಭೈರವಿ’ ಸೀರಿಯಲ್ ಒಪ್ಪಿಕೊಂಡಿದ್ದಾರೆ. ‘ಗಟ್ಟಿಮೇಳ’ ಹಾಗೂ ‘ನಾಗಭೈರವಿ’ ಎರಡು ಧಾರಾವಾಹಿಗಳನ್ನು ಮಾಡುತ್ತಿರುವುದರಿಂದ ಅಶ್ವಿನಿ ಇನ್ನು ಫುಲ್ ಬ್ಯುಸಿಯಾಗಲಿದ್ದಾರೆ. ತುಂಬಾ ಶೇಡ್ ಹಾಗೂ ಫೈಟಿಂಗ್ ಸೀನ್‍ಗಳಿರುವುದರಿಂದ ಅಶ್ವಿನಿ ಈ ಧಾರಾವಾಹಿಗೆ ಹೆಚ್ಚು ಸಮಯ ನೀಡುತ್ತಿದ್ದಾರಂತೆ. ಅಲ್ಲದೆ ಇಂತಹ ವಿಭಿನ್ನ ಪಾತ್ರದ ಅವಕಾಶ ಸಿಕ್ಕಿದ್ದಕ್ಕೆ ಅಶ್ವಿನಿ ಫುಲ್ ಖುಷಿಯಾಗಿದ್ದಾರಂತೆ.

  • ತೆಲುಗು ಚಿತ್ರದ ಚಿತ್ರೀಕರಣಕ್ಕೆ ಮರಳಿದ ಬುಲ್ ಬುಲ್ ರಚಿತಾ ರಾಮ್

    ತೆಲುಗು ಚಿತ್ರದ ಚಿತ್ರೀಕರಣಕ್ಕೆ ಮರಳಿದ ಬುಲ್ ಬುಲ್ ರಚಿತಾ ರಾಮ್

    ಹೈದರಾಬಾದ್: ಕೊರೊನಾ ಭೀತಿ ನಡುವೆಯೂ ಕನ್ನಡದ ನಟಿ ರಚಿತಾ ರಾಮ್ ತೆಲುಗು ಸಿನಿಮಾವೊಂದರ ಚಿತ್ರೀಕರಣಕ್ಕೆಂದು ಹೈದಾರಾಬಾದ್‍ಗೆ ತೆರಳಿದ್ದಾರೆ.

    ಕೇಂದ್ರ ಸರ್ಕಾರ ಕೊರೊನಾ ಲಾಕ್‍ಡೌನ್ ಅನ್ನು ದಿನದಿಂದ ದಿನಕ್ಕೆ ಸಡಿಲಿಕೆ ಮಾಡುತ್ತಾ ಬರುತ್ತಿದೆ. ಈ ನಡುವೆ ಕೊರೊನಾ ಸೋಂಕಿತರ ಸಂಖ್ಯೆ ದೇಶದಲ್ಲಿ ಹೆಚ್ಚುತ್ತಲೆ ಇದೆ. ಇತ್ತೀಚೆಗಷ್ಟೇ ಸಿನಿಮಾ ಚಿತ್ರೀಕರಣಕ್ಕೂ ಸರ್ಕಾರ ಅನುಮತಿ ನೀಡಿದ್ದು, ಚಿತ್ರರಂಗದ ಚಟುವಟಿಕೆಗಳು ಗರಿಗೆದರಿವೆ. ಕಲಾವಿದರು ಶೂಟಿಂಗ್‍ಗೆ ಹೋಗುತ್ತಿದ್ದಾರೆ.

    ಸುಮಾರು ಮೂರು ತಿಂಗಳು ಚಿತ್ರದ ಶೂಟಿಂಗ್ ಇಲ್ಲದೇ ಮನೆಯಲ್ಲೇ ಕುಳಿತಿದ್ದ ರಚಿತಾ, ಸರ್ಕಾರ ಅನುಮತಿ ಕೊಟ್ಟ ಕೂಡಲೇ ‘ಸೂಪರ್ ಮಚ್ಚಿ’ ಸಿನಿಮಾದ ಶೂಟಿಂಗ್‍ಗೆ ಆಗಮಿಸಿದ್ದಾರೆ. ಶೂಟಿಂಗ್ ಸೆಟ್ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ ಶೂಟಿಂಗ್ ಮಾಡುತ್ತಿರುವ ಬಗ್ಗೆ ಚಿತ್ರತಂಡ ಹೇಳಿಕೊಂಡಿದೆ.

    ಈ ಸಿನಿಮಾ ರಚಿತಾ ರಾಮ್ ಅಭಿನಯದ ಮೊದಲ ಸಿನಿಮಾವಾಗಿದ್ದು, ಮೆಗಾ ಸ್ಟಾರ್ ಚಿರಂಜೀವಿ ಅಳಿಯ ಕಲ್ಯಾಣ್ ದೇವ್ ನಾಯಕನಾಗಿ ನಟಿಸುತ್ತಿದ್ದಾರೆ. ಜೊತೆಗೆ ಈ ಸಿನಿಮಾಗೆ ಪುಲಿ ವಾಸು ಅವರು ಆ್ಯಕ್ಷನ್ ಕಟ್ ಹೇಳುತ್ತಿದ್ದು, ಈ ಸಿನಿಮಾದಲ್ಲಿ ರಚಿತಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಈಗಾಗಲೇ ಅರ್ಧದಷ್ಟು ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ಲಾಕ್‍ಡೌನ್ ನಂತರ ಶೂಟಿಂಗ್ ನಿಲ್ಲಿಸಿತ್ತು. ಈಗ ಮತ್ತೆ ಆರಂಭಿಸಿದೆ.

    ‘ಸೂಪರ್ ಮಚ್ಚಿ’ ಸಿನಿಮಾದ ಶೂಟಿಂಗ್‍ಗಾಗಿ ಹೈದರಾಬಾದ್‍ಗೆ ಹೋಗಿರುವ ರಚಿತಾ, ಸರ್ಕಾರ ಹೇಳಿರುವ ನಿಯಮವನ್ನು ಪಾಲಿಸಿ ಮಾಸ್ಕ್, ಸಾನಿಟೈಜರ್, ಮತ್ತು ಕಡಿಮೆ ಸಿಬ್ಬಂದಿಯ ನೆರವಿನಿಂದ ಶೂಟಿಂಗ್ ಆರಂಭ ಮಾಡಿದ್ದಾರೆ. ರಶ್ಮಿಕಾ ಮಂದಣ್ಣ, ನಬಾ ನಟೇಶ್ ನಂತರ ರಚಿತಾ ಕೂಡ ಮೊದಲ ಬಾರಿಗೆ ತೆಲಗು ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾಗೆ ರಿಜ್ವಾನ್ ಅವರು ಬಂಡವಾಳ ಹೂಡಿದ್ದಾರೆ.

    ಈ ಚಿತ್ರದ ಜೊತೆಗೆ ರಚಿತಾ ರಾಮ್ ಅವರು ಸಾಲು ಸಾಲು ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಕನ್ನಡದಲ್ಲಿ ರಚಿತಾ ಏಕ್‍ಲವ್‍ಯಾ, 100, ಡಾಲಿ, ಏಪ್ರಿಲ್, ಸೀರೆ, ಲಿಲ್ಲಿ, ಸಂಜು ಅಲಿಯಾಸ್ ಸಂಜಯ್ ಎಂಬ ಸಿನಿಮಾಗಳನ್ನು ಮಾಡುತ್ತಿದ್ದಾರೆ ರಚಿತಾ ಕೊನೆಯ ಬಾರಿ ಶಿವಣ್ಣ ಅಭಿನಯದ ಆಯುಷ್ಮಾನ್ ಭವ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.

  • ತೆಲುಗು ನಾನಿ ಸಿನಿಮಾಗೆ ರಶ್ಮಿಕಾ ಬದಲಿಗೆ ಸಾಯಿ ಪಲ್ಲವಿ ಆಯ್ಕೆ?

    ತೆಲುಗು ನಾನಿ ಸಿನಿಮಾಗೆ ರಶ್ಮಿಕಾ ಬದಲಿಗೆ ಸಾಯಿ ಪಲ್ಲವಿ ಆಯ್ಕೆ?

    ಹೈದರಾಬಾದ್: ದಕ್ಷಿಣ ಭಾರತ ಖ್ಯಾತ ನಟಿ ಹಾಗೂ ಸೆನ್ಸೇಶನ್ ಕ್ವೀನ್ ಸಾಯಿ ಪಲ್ಲವಿ ತೆಲುಗು, ತಮಿಳು ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದು, ಸಾಲು ಸಾಲು ಸಿನಿಮಾಗಳಿಗೆ ಸಹಿ ಹಾಕಿರುವ ನಟಿ ಇದೀಗ ತೆಲುಗಿನ ಚಿತ್ರವೊಂದರಲ್ಲಿ ನಟಿಸಲು ಸಹ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

    ಈಗಾಗಲೇ ನಾಗಚೈತನ್ಯ ಜೊತೆ ನಟಿಸಿರುವ ಲವ್ ಸ್ಟೋರಿ ಸಿನಿಮಾ ಬಿಡುಗಡೆಗೆ ಎದುರು ನೋಡುತ್ತಿದ್ದು, ಇದೇ ಗ್ಯಾಪ್‍ನಲ್ಲಿ ತೆಲುಗು ನಟ ನಾನಿ ಅಭಿನಯದ ಶ್ಯಾಮ್ ಸಿಂಗ ರಾಯ್ ಸಿನಿಮಾದಲ್ಲಿ ನಟಿಸಲು ಸಜ್ಜಾಗುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಸಿನಿಮಾಗೆ ನಟಿ ರಶ್ಮಿಕಾ ಮಂದಣ್ಣ ಆಯ್ಕೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಇದೀಗ ನಾನಿ ಜೊತೆ ಸಾಯಿ ಪಲ್ಲವಿ ರೊಮ್ಯಾನ್ಸ್ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.

    ನಟಿ ಸಾಯಿ ಪಲ್ಲವಿ ಈಗಾಗಲೇ ನಾನಿ ಜೊತೆ ಎಂಸಿಎ ಸಿನಿಮಾದಲ್ಲಿ ನಟಿಸಿದ್ದು, ಇದೀಗ ಶ್ಯಾಮ್ ಸಿಂಗ ರಾಯ್ ಸಿನಿಮಾ ಮೂಲಕ ಎರಡನೇ ಬಾರಿ ನಾನಿ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ. ಟ್ಯಾಕ್ಸಿವಾಲಾ ಸಿನಿಮಾ ಖ್ಯಾತಿಯ ನಿರ್ದೇಶಕ ರಾಹುಲ್ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ವಿಜಯ್ ದೇವರಕೊಂಡ ಅಭಿನಯದ ಟ್ಯಾಕ್ಸಿವಾಲಾ ಸಿನಿಮಾ ಅಷ್ಟೇನು ಯಶಸ್ಸು ಕಾಣಲಿಲ್ಲ. ಇದೀಗ ನಾನಿ ಜೊತೆ ಶ್ಯಾಮ್ ಸಿಂಗ ರಾಯ್ ಸಿನಿಮಾ ಮಾಡುತ್ತಿದ್ದಾರೆ.

    ಅಂದುಕೊಂಡಂತೆ ಆಗಿದ್ದರೆ ಈ ವರ್ಷದ ಕೊನೆಯಲ್ಲಿ ಕ್ರಿಸ್‍ಮಸ್‍ಗೆ ಚಿತ್ರ ತೆರೆಗೆ ಬರಬೇಕಿತ್ತು ಆದರೆ ಕೊರೊನಾ ವೈರಸ್ ಲಾಕ್‍ಡೌನ್ ಹಿನ್ನೆಲೆ ಸಿನಿಮಾ ತೆರೆ ಕಾಣುವುದು ಇನ್ನೂ ತಡವಾಗಬಹುದು ಎಂದು ಅಂದಾಜಿಸಲಾಗಿದೆ.

    ಸಾಯಿ ಪಲ್ಲವಿ ಅಷ್ಟು ಸುಲಭವಾಗಿ ಸಿನಿಮಾಗಳನ್ನು ಒಪ್ಪಿಕೊಳ್ಳುವುದಿಲ್ಲ. ಚಿತ್ರದಲ್ಲಿ ತಮ್ಮದು ಪ್ರಮುಖ ಪಾತ್ರವಿದ್ದರೆ, ಇಲ್ಲವೇ ವಿಶೇಷ ಸಿನಿಮಾ ಆಗಿದ್ದರೆ ಮಾತ್ರ ಒಪ್ಪಿಕೊಳ್ಳುತ್ತಾರೆ. ಅಳೆದು ತೂಗಿ ಪಾತ್ರವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಸದ್ಯ ಸಾಯಿ ಪಲ್ಲವಿ ನಾಗ ಚೈತನ್ಯ ಜೊತೆ ಲವ್ ಸ್ಟೋರಿ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಅಲ್ಲದೆ ರಾಣಾ ದಗ್ಗುಬಾಟಿ ಜೊತೆ ವಿರಾಟಪರ್ವಂ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ. ಇದೀಗ ಮತ್ತೆ ನಾನಿ ಅಭಿನಯದ ಶ್ಯಾಮ್ ಸಿಂಗ ರಾಯ್ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಹೊರ ಬಿದ್ದಿದೆ. ಆದರೆ ಈ ಕುರಿತು ಸಿನಿಮಾ ತಂಡ ಅಧಿಕೃತವಾಗಿ ಹೇಳಿಕೆ ನೀಡಿಲ್ಲ.

  • ಹಸೆಮಣೆ ಏರಲು ಸಜ್ಜಾದ ‘ಮಹಾನಟಿ’ ಚೆಲುವೆ ಕೀರ್ತಿ ಸುರೇಶ್

    ಹಸೆಮಣೆ ಏರಲು ಸಜ್ಜಾದ ‘ಮಹಾನಟಿ’ ಚೆಲುವೆ ಕೀರ್ತಿ ಸುರೇಶ್

    ಹೈದರಾಬಾದ್: ತೆಲುಗು, ತಮಿಳು ಚಿತ್ರರಂಗದ ಖ್ಯಾತ ನಟಿ ಕೀರ್ತಿ ಸುರೇಶ್ ಅದ್ಭುತ ಅಭಿನಯ, ತಮ್ಮ ಸೌಂದರ್ಯದ ಮೂಲಕವೇ ಅಭಿಮಾನಿಗಳ ಮನ ಕದ್ದವರು. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿ ಇರುವ ನಟಿ ಸದ್ಯದಲ್ಲೇ ಮದುವೆ ಆಗಲು ಸಿದ್ಧರಾಗಿದ್ದಾರೆ.

    ಸೂಪರ್ ಹಿಟ್ ಸಿನಿಮಾಗಳ ಯಶಸ್ಸು, ಸಾಲು ಸಾಲು ಸಿನಿಮಾಗಳ ಆಫರ್ ಗಳು ಕೀರ್ತಿ ಅವರ ಕೈಯಲ್ಲಿದೆ. ಸಿನಿಮಾ ಬ್ಯುಸಿ ಶೆಡ್ಯೂಲ್ ನಡುವೆ ಇಷ್ಟು ಬೇಗ ಮದುವೆ ಆಗಲು ಕೀರ್ತಿ ನಿರ್ಧರಿಸಿದರಾ ಎಂದು ಅಭಿಮಾನಿಗಳಲ್ಲಿ ಪ್ರಶ್ನೆ ಹುಟ್ಟಿರೋದು ನಿಜ. ಆದರೆ ಪೋಷಕರು ಮದುವೆ ಮಾಡಿಸಲು ನಿರ್ಧರಿಸಿರುವುದರಿಂದ ಕೀರ್ತಿ ವಿವಾಹ ಆಗಲು ಒಪ್ಪಿದ್ದಾರೆ ಎನ್ನಲಾಗಿದೆ.

    ‘ಮಹಾನಟಿ’ ಸುಂದರಿಯ ಮದುವೆ ವಿಚಾರ ತಿಳಿಯುತ್ತಿದ್ದಂತೆ ಅಭಿಮಾನಿಗಳಲ್ಲಿ ಹಲವು ಪ್ರಶ್ನೆಗಳು ಹುಟ್ಟುಕೊಂಡಿದೆ. ಕೀರ್ತಿ ಅವರು ಮದುವೆ ಆಗುತ್ತಿರೋದು ಯಾರು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆಮಾಡಿದೆ. ಸದ್ಯ ಲಭ್ಯವಿರುವ ಮಾಹಿತಿ ಪ್ರಕಾರ ಕೀರ್ತಿ ಖ್ಯಾತ ಉದ್ಯಮಿಯೊಬ್ಬರನ್ನು ವರಿಸಲಿದ್ದಾರೆ. ಆದರೆ ಉದ್ಯಮಿ ಯಾರು ಎನ್ನುವುದು ಮಾತ್ರ ಇನ್ನೂ ರಿವೀಲ್ ಆಗಿಲ್ಲ.

    ಸಿನಿಮಾರಂಗದಲ್ಲಿ ಇರುವ ಮಂದಿ ಹೆಚ್ಚಾಗಿ ಲವ್ ಮ್ಯಾರೇಜ್ ಆಗುತ್ತಾರೆ. ಆದರೆ ಕೀರ್ತಿ ಅವರು ಅರೆಂಜ್ ಮ್ಯಾರೇಜ್ ಆಗಲು ನಿರ್ಧರಿಸಿದ್ದಾರೆ. ತಮ್ಮ ಪೋಷಕರು ಹುಡುಕುವ ಹುಡುಗನನ್ನೇ ಮದುವೆ ಆಗಲು ಕೀರ್ತಿ ಒಪ್ಪಿದ್ದಾರೆ. ಹೀಗಾಗಿ ಅವರ ತಂದೆ ಸುರೇಶ್ ಕುಮಾರ್ ಅವರು ಮುದ್ದು ಮಗಳಿಗೆ ಹುಡುಗನನ್ನು ಹುಡುಕಿದ್ದಾರೆ ಎನ್ನಲಾಗಿದೆ.

    ಸುರೇಶ್ ಕುಮಾರ್ ಅವರು ರಾಜಕೀಯ ವ್ಯಕ್ತಿಗಳ ಜೊತೆ ಉತ್ತಮ ಭಾಂದವ್ಯ ಹೊಂದಿದ್ದಾರೆ. ಆದ್ದರಿಂದ ರಾಜಕೀಯ ಹಿನ್ನೆಲೆ ಇರುವ ಪ್ರಭಾವಿ ಉದ್ಯಮಿಯ ಜೊತೆ ಮಗಳ ಮದುವೆ ಮಾಡಲು ತೀರ್ಮಾನಿಸಿದ್ದಾರೆ ಎಂದು ಹೇಳಲಾಗುತ್ತಿದೆ.

    ಕೀರ್ತಿ ಅವರು ಮದುವೆ ಆಗುತ್ತಿರುವ ಬಗ್ಗೆ ಅಧಿಕೃತ ಮಾಹಿತಿ ಇನ್ನು ಬಹಿರಂಗವಾಗಿಲ್ಲ. ಕೀತಿ ಆಗಲಿ, ಅವರ ಕುಟುಂಬಸ್ಥರಾಗಲಿ ಈ ಬಗ್ಗೆ ಬಹಿರಂಗವಾಗಿ ಮಾತನಾಡಿಲ್ಲ. ಆದರೆ ಮೂಲಗಳ ಪ್ರಕಾರ ಕೀರ್ತಿ ಮದುವೆ ಖ್ಯಾತ ಉದ್ಯಮಿ ಜೊತೆ ಮದುವೆ ಆಗಲು ಸಜ್ಜಾಗಿದ್ದಾರೆ ಎನ್ನಲಾಗಿದೆ.

    ತೆಲುಗು, ತಮಿಳು ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿಯಾಗಿರುವ ಕೀರ್ತಿ ಸುರೇಶ್ ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಅವರ ‘ಮಹಾನಟಿ’ ಸಿನಿಮಾಗೆ ರಾಷ್ಟ್ರಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಲಭಿಸಿದೆ. ಈ ಚಿತ್ರದಲ್ಲಿ ಖ್ಯಾತ ಮಲಯಾಳಂ ನಟ ದುಲ್ಕರ್ ಸಲ್ಮಾನ್ ಅವರು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಸದ್ಯ ಕೀರ್ತಿ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ‘ಅನ್ನಾತೆ’ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

  • ಬಾಕ್ಸರ್‌ಗಾಗಿ ತೆಲುಗಿಗೆ ಹೊರಟ ಉಪೇಂದ್ರ

    ಬಾಕ್ಸರ್‌ಗಾಗಿ ತೆಲುಗಿಗೆ ಹೊರಟ ಉಪೇಂದ್ರ

    ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಅವರು ಬಾಕ್ಸರ್ ಎಂಬ ತೆಲುಗಿನ ಚಿತ್ರಕ್ಕಾಗಿ ಟಾಲಿವುಡ್ ಮತ್ತೆ ರೀ ಎಂಟ್ರಿ ಕೊಡಲಿದ್ದಾರೆ ಎಂದು ಹೇಳಲಾಗುತ್ತಿದೆ.

    ಟಾಲಿವುಡ್‍ನಲ್ಲಿ ಈ ಹಿಂದೆ ಹಲವಾರು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದ ಉಪ್ಪಿ, 2015 ರಲ್ಲಿ ತೆರೆಕಂಡಿದ್ದ ಅಲ್ಲು ಅರ್ಜುನ್ ನಟನೆಯ ‘ಸನ್ ಆಫ್ ಸತ್ಯಮೂರ್ತಿ’ ಚಿತ್ರದಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದಾದ ನಂತರ ಯಾವುದೇ ತೆಲುಗು ಸಿನಿಮಾದಲ್ಲಿ ಕಾಣಿಸಿಕೊಂಡಿರಲಿಲ್ಲ. ಈಗ ವರುಣ್ ತೇಜ್ ಅಭಿನಯದ ಬಾಕ್ಸರ್ ಚಿತ್ರದಲ್ಲಿ ಉಪ್ಪಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತದೆ.

    ಕಬ್ಜ, ಬುದ್ಧಿವಂತ-2, ಹೋಂ ಮಿನಿಸ್ಟರ್ ಮತ್ತು ರವಿಚಂದ್ರ ಎಂಬ ಸಾಲು ಸಾಲು ಚಿತ್ರದಲ್ಲಿ ಬ್ಯುಸಿ ಇರುವ ಉಪ್ಪಿ, ತೆಲುಗಿನಲ್ಲಿ ಹೊಸ ನಿರ್ದೇಶಕ ಕಿರಣ್ ಕೊರ್ರಪಟ್ಟಿ ನಿರ್ದೇಶನದ ಬಾಕ್ಸರ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಬಗ್ಗೆ ಈಗಾಗಲೇ ಚಿತ್ರತಂಡ ಉಪೇಂದ್ರ ಅವರನ್ನು ಭೇಟಿಯಾಗಿ ಮಾತುಕತೆ ಮಾಡಿದೆ ಎಂದು ಹೇಳಲಾಗಿದೆ. ಎಲ್ಲ ಅಂದುಕೊಂಡಂತೆ ಅದರೆ ಉಪ್ಪಿ ತೆಲುಗಿನಲ್ಲಿ ಮತ್ತೆ ಅಭಿನಯಿಸಲಿದ್ದಾರೆ.

    ಈ ಬಾಕ್ಸರ್ ಚಿತ್ರಕ್ಕೆ ತೆಲುಗಿನ ವರುಣ್ ತೇಜ್ ನಾಯಕರಾಗಿದ್ದು, ಈ ಚಿತ್ರದಲ್ಲಿ ಅವರು ಕಿಕ್ ಬಾಕ್ಸರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ಬಹುಮುಖ್ಯವಾದ ಅತಿಥಿ ಪಾತ್ರವಿದ್ದು, ಅದಕ್ಕೆ ದಕ್ಷಿಣ ಭಾರತದಲ್ಲಿ ಸ್ಟಾರ್ ಹೀರೋ ಒಬ್ಬರ ಆಗತ್ಯವಿದೆ. ಈ ಕಾರಣಕ್ಕಾಗಿ ಚಿತ್ರತಂಡ ಉಪ್ಪಿ ಅವರನ್ನು ಸಂಪರ್ಕಿಸಿದೆ. ಉಪೇಂದ್ರ ಅವರು ಈ ಹಿಂದೆ ಸತ್ಯಂ, ಟಾಸ್, ಒಕೆ ಮಾಟಾ ಹೀಗೆ ಹಲವು ತೆಲಗು ಚಿತ್ರದಲ್ಲಿ ನಟಿಸಿದ್ದರು.

    ಸದ್ಯ ಉಪ್ಪಿ ಅವರು ಕಬ್ಜ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಆರ್.ಚಂದ್ರು ಇದಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ಈ ಮೂಲಕ ಐ ಲವ್ ಯು ಚಿತ್ರದ ಬಳಿಕ ಮತ್ತೆ ಉಪೇಂದ್ರ ಹಾಗೂ ಆರ್.ಚಂದ್ರು ಜೋಡಿ ಒಂದಾಗುತ್ತಿದೆ. ಚಿತ್ರ ಭೂಗತ ಲೋಕದ ಕಥೆಯನ್ನು ಒಳಗೊಂಡಿದೆ. ಬರೀ ಲಾಂಗು, ಮಚ್ಚು ಮಾತ್ರವಲ್ಲದೆ ಲವ್ ಹಾಗೂ ಸೆಂಟಿಮೆಂಟ್‍ಗಳನ್ನೂ ಒಳಗೊಂಡಿದೆಯಂತೆ. ಅಲ್ಲದೆ ಉಪೇಂದ್ರ ನಿರ್ದೇಶನದ ಓಂ ಚಿತ್ರಕ್ಕೆ ಇದನ್ನು ಹೋಲಿಸಲಾಗುತ್ತಿದೆ.

  • ರಶ್ಮಿಕಾ ವಿರುದ್ಧ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು

    ರಶ್ಮಿಕಾ ವಿರುದ್ಧ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು

    ಬೆಂಗಳೂರು: ನನಗೆ ಕನ್ನಡ ಮಾತನಾಡಲು ಕಷ್ಟ ಎಂದಿದ್ದ ಕಿರಿಕ್ ಬ್ಯೂಟಿ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ವಿರುದ್ಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಲಾಗಿದೆ.

    ಕನ್ನಡ ಮಾತನಾಡಲು ತುಂಬಾ ಕಷ್ಟ, ನನಗೆ ಕನ್ನಡ ಮಾತನಾಡಲು ಬರುವುದಿಲ್ಲ ಎಂದು ಸುಳ್ಳು ಹೇಳಿಕೆ ಕೊಟ್ಟಿದ್ದಾರೆಂದು ಕನ್ನಡ ಪರ ಹೋರಾಟಗಾರ ನಾಗೇಶ್ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ.

     

    ಕೆಲ ದಿನಗಳ ಹಿಂದೆ ತೆಲುಗು ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಕನ್ನಡ ಚಿತ್ರ ಕಿರಿಕ್ ಪಾರ್ಟಿ ಮೂಲಕ ಬೆಳ್ಳಿತೆರೆಗೆ ಬಂದು ತೆಲಗು ತಮಿಳಿನಲ್ಲಿ ಮಿಂಚುತ್ತಿರುವ ರಶ್ಮಿಕಾ ಮಂದಣ್ಣ ನನಗೆ ಕನ್ನಡ ಬರಲ್ಲ ಎಂದು ಹೇಳಿದ್ದಾರೆ. ಅದ್ದರಿಂದ ರಶ್ಮಿಕಾ ಸಿನಿಮಾಗಳನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಬಿಡಬಾರದೆಂದು ಫಿಲ್ಮ್ ಚೇಂಬರ್‍ ಗೆ ಮನವಿ ಮಾಡಿದ್ದಾರೆ.

    ಕನ್ನಡ ಸಿನಿಮಾಗಳ ಬಗ್ಗೆ ಮಾತನಾಡುವಾಗ ರಶ್ಮಿಕಾ ಆಂಗ್ಲ ಭಾಷೆ ಬಳಸುತ್ತಿದ್ದರು. ನನಗೆ ಕನ್ನಡ ಸರಿಯಾಗಿ ಉಚ್ಚರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಟಾಲಿವುಡ್‍ನಲ್ಲಿ ಒಂದು ಸಿನಿಮಾ ತೆರೆಕಾಣುವುದರೊಳಗೆ ಅವರು ಸ್ವಚ್ಛವಾಗಿ ತೆಲುಗು ಮಾತನಾಡಲು ಆರಂಭಿಸಿದ್ದರು. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಅಷ್ಟೇ ಅಲ್ಲ ರಶ್ಮಿಕಾ ಕನ್ನಡ ವಿರೋಧಿ ಎಂದು ಅನೇಕರು ಪೋಸ್ಟ್ ಹಾಕಿದ್ದಾರೆ.

  • ಐ ಲವ್ ಯೂ: ಕೆಜಿಎಫ್ ನಂತರ ಪರಭಾಷೆಯಲ್ಲೂ ಕನ್ನಡದ ಅಬ್ಬರ!

    ಐ ಲವ್ ಯೂ: ಕೆಜಿಎಫ್ ನಂತರ ಪರಭಾಷೆಯಲ್ಲೂ ಕನ್ನಡದ ಅಬ್ಬರ!

    ಬೆಂಗಳೂರು: ಯಶ್ ಅಭಿನಯದ ಕೆಜಿಎಫ್ ಚಿತ್ರ ಪರಭಾಷಾ ಚಿತ್ರರಂಗದ ಮಂದಿಯೂ ಕನ್ನಡ ಚಿತ್ರರಂಗದತ್ತ ಬೆರಗಿನಿಂದ ನೋಡುವಂತೆ ಮಾಡಿದೆ. ಹೀಗೆ ಪರಭಾಷೆಗಳಲ್ಲಿಯೂ ಹರಡಿಕೊಂಡಿರೋ ಕನ್ನಡ ಚಿತ್ರರಂಗದ ಘನತೆಯನ್ನು ಮುಂದುವರೆಸೋ ಇರಾದೆಯೊಂದಿಗೆ ಐ ಲವ್ ಯೂ ಚಿತ್ರ ಬಿಡುಗಡೆಗೆ ರೆಡಿಯಾಗಿದೆ. ಆರ್ ಚಂದ್ರು ಈ ದಿಸೆಯಲ್ಲಿ ಮಹತ್ವದ ಹೆಜ್ಜೆಯಿಟ್ಟಿದ್ದಾರೆ.

    ಯಾವುದೇ ಚಿತ್ರ ಒಂದು ಭಾಷೆಯಲ್ಲಿ ರೆಡಿಯಾಗೋದೇ ಕಷ್ಟ. ಅಂಥಾದ್ದರಲ್ಲಿ ಎರಡೆರಡು ಭಾಷೆಗಳಲ್ಲಿ ಕನ್ನಡ ಚಿತ್ರವನ್ನು ರೂಪುಗೊಳ್ಳುವಂತೆ ಮಾಡೋದು ನಿಜಕ್ಕೂ ಸಾಹಸ. ಅಂಥಾ ಸಾಹಸವನ್ನು ದೊಡ್ಡ ಮಟ್ಟದ ರಿಸ್ಕನ್ನು ಮೈ ಮೇಲೆಳೆದುಕೊಂಡೇ ಆರ್ ಚಂದ್ರು ಮಾಡಿ ಮುಗಿಸಿದ್ದಾರೆ. ಹೇಳಿ ಕೇಳಿ ಈ ಲವ್ ಯೂ ಚಿತ್ರಕ್ಕೆ ನಿರ್ಮಾಪಕರೂ ಅವರೇ. ಆದರೆ ಈ ಎರಡು ಜವಾಬ್ದಾರಿಗಳ ನಡುವೆಯೂ ಈ ಚಿತ್ರವನ್ನವರು ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಸಿದ್ಧಗೊಳಿಸಿದ್ದಾರೆ.

    https://www.youtube.com/watch?v=G8-2fTzXIbs

     

    ಈಗಾಗಲೇ ಈ ಚಿತ್ರ ತೆಲುಗಿನಲ್ಲಿಯೂ ಟಾಕ್ ಕ್ರಿಯೇಟ್ ಮಾಡಿದೆ. ಜೂನ್ 8ರಂದು ಐ ಲವ್ ಯೂ ಚಿತ್ರದ ತೆಲುಗು ಅವತರಣಿಕೆಯ ಆಡಿಯೋ ರಿಲೀಸ್ ಆಗಿದೆ. ವಿಶಾಖಪಟ್ಟಣಂನಲ್ಲಿ ನಡೆದ ಈ ಸಮಾರಂಭದಲ್ಲಿ ತೆಲುಗು ಮಾಧ್ಯಮ ಮಂದಿ ದೊಡ್ಡ ಸಂಖ್ಯೆಯಲ್ಲಿ ಹಾಜರಿದ್ದರು.

    ಒಟ್ಟಾರೆಯಾಗಿ ಕನ್ನಡ ಚಿತ್ರವೊಂದು ತೆಲುಗು ಭಾಷೆಯಲ್ಲಿಯೂ ಬಿಡುಗಡೆಯಾಗುತ್ತಿರೋದು ಮತ್ತು ಆ ಚಿತ್ರದ ಬಗ್ಗೆ ಪರಭಾಷಾ ಪ್ರೇಕ್ಷಕರೂ ಆಕರ್ಷಿತರಾಗಿರೋದು ನಿಜಕ್ಕೂ ಸಕಾರಾತ್ಮಕ ಬೆಳವಣಿಗೆ. ತೆಲುಗು ನಾಡಿನಲ್ಲಿ ಐ ಲವ್ ಯೂ ಬಗ್ಗೆ ಹುಟ್ಟಿಕೊಂಡಿರೋ ಹವಾ ನೋಡಿದರೆ ಅಲ್ಲಿಯೂ ಚಂದ್ರು ಮತ್ತು ಉಪ್ಪಿ ಜೋಡಿ ಜಯಭೇರಿ ಭಾರಿಸುವ ಲಕ್ಷಣಗಳೇ ದಟ್ಟವಾಗಿವೆ.