Tag: Telugu Titans

  • PKL 10: ಪ್ರೊ ಕಬಡ್ಡಿ ಲೀಗ್: ಗುಜರಾತ್ ಜೈಂಟ್ಸ್‌ಗೆ ಭರ್ಜರಿ ಜಯ

    PKL 10: ಪ್ರೊ ಕಬಡ್ಡಿ ಲೀಗ್: ಗುಜರಾತ್ ಜೈಂಟ್ಸ್‌ಗೆ ಭರ್ಜರಿ ಜಯ

    ಅಹಮದಾಬಾದ್: ಇಲ್ಲಿನ ಟ್ರಾನ್ಸ್‌ಸ್ಟೇಡಿಯಾ ಅರೆನಾ ಸ್ಟೇಡಿಯಂನಲ್ಲಿ ನಡೆದ ಪ್ರೊ ಕಬಡ್ಡಿ (Kabaddi) ಲೀಗ್‍ನ 10ನೇ ಸೀಸನ್‍ನ ಉದ್ಘಾಟನಾ ಪಂದ್ಯದಲ್ಲಿ ತೆಲುಗು ಟೈಟಾನ್ಸ್ (Telugu Titans) ವಿರುದ್ಧ ಗುಜರಾತ್ ಜೈಂಟ್ಸ್ (Gujarat Giants) ಭರ್ಜರಿ ಗೆಲುವು ಸಾಧಿಸಿತು.

    ಗುಜರಾತ್ ತಂಡದ ರೈಡರ್ ಸೋನು ಜಗ್ಲಾನ್ ಉತ್ತಮ ಪ್ರದರ್ಶನ ನೀಡಿದ್ದು, ಒಟ್ಟು 11 ಬಾರಿ ದಾಳಿ ಮಾಡಿ 11 ಪಾಯಿಂಟ್ಸ್ ತಂದುಕೊಟ್ಟು ಯಶಸ್ವಿಯಾದರು. ರಾಕೇಶ್ ಸುಂಗ್ರೋಯಾ 5 ರೈಡ್‍ಗಳಲ್ಲಿ 5 ಅಂಕಗಳಿಸಿದರು. ಈ ಮೂಲಕ ಆತಿಥೇಯ ಗುಜರಾತ್ ಜೈಂಟ್ಸ್ ತಂಡವು ತೆಲುಗು ಟೈಟಾನ್ಸ್ ವಿರುದ್ಧ 38-32 ಅಂಕಗಳ ಅಂತರದಿಂದ ಭರ್ಜರಿ ಗೆಲುವು ದಾಖಲಿಸಿತು. ಇದನ್ನೂ ಓದಿ: WPL 2024 ಹರಾಜಿಗೆ 165 ಪ್ಲೇಯರ್ಸ್‌ ನೋಂದಣಿ – ಯಾರಾಗ್ತಾರೆ ಈ ಬಾರಿಯ ಟಾಪ್‌ ಪ್ಲೇಯರ್‌?

    ತೆಲುಗು ಟೈಟಾನ್ಸ್ ತಂಡದ ಸ್ಟಾರ್ ರೈಡರ್ ಪವನ್ ಸೆಹ್ರಾವತ್ ಈ ಪಂದ್ಯದಲ್ಲಿ ಸೂಪರ್ 10 ಪಡೆದರು. ಪಂದ್ಯದ ನಿರ್ಣಾಯಕ ಘಟ್ಟಗಳಲ್ಲಿ ತೆಲುಗು ಟೈಟಾನ್ಸ್ ಎಡವಿದ ಕಾರಣ ಗೆಲುವಿಗೆ ಆ ಅಂಕಗಳು ಸಾಕಾಗಲಿಲ್ಲ. ಇದನ್ನೂ ಓದಿ: T20I ಕ್ರಿಕೆಟ್‌ನಲ್ಲಿ ಪಾಕ್‌ ದಾಖಲೆ ನುಚ್ಚುನೂರು – ಟೀಂ ಇಂಡಿಯಾ ಯುವಪಡೆಗೆ ಮೆಚ್ಚುಗೆ

  • ಗೂಳಿಗಳ ಗುದ್ದಿಗೆ ಟೈಟಾನ್ಸ್ ಪಲ್ಟಿ

    ಗೂಳಿಗಳ ಗುದ್ದಿಗೆ ಟೈಟಾನ್ಸ್ ಪಲ್ಟಿ

    ಬೆಂಗಳೂರು: ಪ್ರೊ ಕಬಡ್ಡಿ 9ನೇ ಸೀಸನ್‍ನಲ್ಲಿ (Pro Kabaddi Season 9)  ಅತಿಥೇಯ ಬೆಂಗಳೂರು ಬುಲ್ಸ್ (Bengaluru Bulls)  ತಂಡ ತೆಲುಗು ತೈಟಾನ್ಸ್ (Telugu Titans) ವಿರುದ್ಧ 34-29 ಅಂಕಗಳ ಅಂತರದಿಂದ ಗೆದ್ದು ಶುಭಾರಂಭ ಕಂಡಿದೆ.

    ರೈಡ್ ಮತ್ತು ಟೇಕಲ್‍ಗಳ ಮೂಲಕ ಮಿಂಚಿದ ಬೆಂಗಳೂರು ಬುಲ್ಸ್ ಆಟಗಾರರು ಅಂತಿಮವಾಗಿ 5 ಅಂಕಗಳ ಜಯ ಸಾಧಿಸಿದರು. ಮೊದಲಾರ್ಧದಲ್ಲಿ 17-17 ಅಂಕಗಳ ಸಮಬಲ ಸಾಧಿಸಿದ ಎರಡು ತಂಡಗಳು, ದ್ವಿತೀಯಾರ್ಧದಲ್ಲಿ ರೋಚಕ ಹೋರಾಟ ನಡೆಸಿದವು. ಇದನ್ನೂ ಓದಿ: ಇಂದಿನಿಂದ ಬೆಂಗ್ಳೂರಲ್ಲಿ ಪ್ರೊ ಕಬಡ್ಡಿ ಮೇನಿಯಾ – ತ್ರಿಬಲ್ ಹೆಡ್ಡರ್ ಮೂಲಕ ಆರಂಭ

    ಬೆಂಗಳೂರು ಬುಲ್ಸ್ ಒಟ್ಟು 15 ರೈಡ್, 12 ಟೇಕಲ್, 4 ಅಲೌಟ್ ಮತ್ತು ಇತರ 3 ಅಂಕಗಳಿಂದ 34 ಅಂಕ ಗಳಿಸಿತು. ಅತ್ತ ಉತ್ತಮ ಹೋರಾಟ ನೀಡಿದ ತೆಲುಗು ಟೈಟಾನ್ಸ್ 18 ರೈಡ್, 7 ಟೇಕಲ್, 2 ಅಲೌಟ್, 2 ಇತರ ಅಂಕ ಸಹಿತ 29 ಅಂಕ ಕಲೆ ಹಾಕಿ 5 ಅಂಕಗಳಿಂದ ಸೋಲುಂಡಿತು. ಇದನ್ನೂ ಓದಿ: ಮೂವತ್ತರ ಹರೆಯದಲ್ಲೇ ಬದುಕಿನ ಜರ್ನಿ ನಿಲ್ಲಿಸಿದ WWE ಸೂಪರ್ ಸ್ಟಾರ್ ಸಾರಾ ಲೀ

    ಬೆಂಗಳೂರು ಪರ ನೀರಜ್ ನರ್ವಾಲ್ 7 ಮತ್ತು ಭರತ್ ಮತ್ತು ವಿಕಾಸ್ ಖಂಡೋಲ ತಲಾ 5 ಅಂಕ ಕಲೆಹಾಕಿ ಗೆಲುವಿನ ರೂವಾರಿಯಾದರು. ಟೈಟಾನ್ಸ್ ಪರ ರಜನೀಶ್ ಮತ್ತು ವಿನಯ್ ತಲಾ 7 ಅಂಕ ಕಲೆ ಹಾಕಿ ಮಿಂಚಿದರು.

    Live Tv
    [brid partner=56869869 player=32851 video=960834 autoplay=true]

  • ಟೈಟಾನ್ಸ್ ವಿರುದ್ಧದ ಪಂದ್ಯವನ್ನು ಕಡೆಯ ನಿಮಿಷದ ಹೋರಾಟದಲ್ಲಿ ಟೈ ಮಾಡಿಕೊಂಡ ಬುಲ್ಸ್

    ಟೈಟಾನ್ಸ್ ವಿರುದ್ಧದ ಪಂದ್ಯವನ್ನು ಕಡೆಯ ನಿಮಿಷದ ಹೋರಾಟದಲ್ಲಿ ಟೈ ಮಾಡಿಕೊಂಡ ಬುಲ್ಸ್

    ಬೆಂಗಳೂರು: ಬೆಂಗಳೂರು ಬುಲ್ಸ್ ಮತ್ತು ತೆಲುಗು ಟೈಟಾನ್ಸ್ ನಡುವಿನ ರೋಚಕ ಕಾದಾಟದಲ್ಲಿ ಕಡೆಯ ನಿಮಿಷ ಬೆಂಗಳೂರಿನ ನಾಯಕ ಪವನ್ ಶೆರವತ್, ಟೈಟಾನ್ಸ್ ನಾಯಕ ರೋಹಿತ್ ಕುಮಾರ್ ಅವರನ್ನು ಹಿಡಿಯುವ ಮೂಲಕ ಪಂದ್ಯವನ್ನು 34-34 ಅಂಕಗಳಿಂದ ಟೈ ಗೊಳಿಸಲು ಯಶಸ್ವಿಯಾದರು.

    ಎರಡು ತಂಡಗಳು ಕೂಡ ಆರಂಭದಿಂದಲೂ ಸಮಬಲದ ಹೋರಾಟ ಸಾಧಿಸುತ್ತ ಮುನ್ನುಗ್ಗಿದವು. ಒಂದು ಹಂತದಲ್ಲಿ ಬೆಂಗಳೂರು ಮುನ್ನಡೆ ಕಾಯ್ದುಕೊಂಡಿದ್ದರೂ ಕೂಡ ಅದನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅಂತಿಮ 3 ನಿಮಿಷದ ಆಟದಲ್ಲಿ ಟೈಟಾನ್ಸ್ ಮುನ್ನಡೆ ಸಾಧಿಸಿತು. ಆದರೆ ಕಡೆಯ 1 ನಿಮಿಷದಲ್ಲಿ ಪಂದ್ಯ ರೋಚಕ ಹಂತಕ್ಕೆ ಸಾಗಿ ಅಂತಿಮವಾಗಿ 34-34 ಅಂಗಳಿಂದ ಸಮಬಲ ಸಾಧಿಸಿತು. ಇದನ್ನೂ ಓದಿ: ಟೀಂ ಇಂಡಿಯಾ ಸಾರಥ್ಯ ಹಿಡಿದ ಕನ್ನಡಿಗರಿವರು

    ಬೆಂಗಳೂರು ಪರ ಚಂದ್ರನ್ ರಂಜಿತ್ 3 ರೈಡ್, 6 ಬೋನಸ್ ಪಾಯಿಂಟ್ ಸೇರಿ ಒಟ್ಟು 9 ಅಂಕಗಳಿಸಿದರೆ, ಟೈಟಾನ್ಸ್ ಪರ ಅಂಕಿತ್ ಬೇನಿವಾಲ್ 10 ರೈಡ್ ಪಾಯಿಂಟ್ ಗಳಿಸಿ ಮಿಂಚಿದರು. ಆದರೆ ಜಿದ್ದಾಜಿದ್ದಿನ ಕಾದಾಟ ಕೊನೆಗೆ ಸಮಬಲ ಸಾಧಿಸಿ ಅಭಿಮಾನಿಗಳಿಗೆ ಕಬಡ್ಡಿ ರಸದೌತಣವನ್ನು ಉಣಬಡಿಸಿತು. ಈ ಮೂಲಕ ದಿನದ ಎರಡು ಪಂದ್ಯಗಳು ಟೈನಲ್ಲಿ ಅಂತ್ಯವಾಯಿತು. ಈ ಮೊದಲು ಯುಮುಂಬಾ ಮತ್ತು ಯುಪಿ ಯೋಧ ನಡುವಿನ ಪಂದ್ಯ ಕೂಡ 28-28 ಅಂಕಗಳಿಂದ ಟೈ ಆಗಿತ್ತು. ಇದನ್ನೂ ಓದಿ: ದಕ್ಷಿಣ ಆಫ್ರಿಕಾದಲ್ಲಿ ಅದ್ದೂರಿಯಾಗಿ ಹೊಸ ವರ್ಷ ಆಚರಿಸಿದ ವಿರಾಟ್ ಕೊಹ್ಲಿ ದಂಪತಿ

    ಬೆಂಗಳೂರು ತಂಡ 21 ರೈಡ್, 13 ಟೇಕಲ್ ಪಾಯಿಂಟ್‍ಗಳಿಂದ 34 ಅಂಕ ಗಳಿಸಿದರೆ, ಟೈಟಾನ್ಸ್ 19 ರೈಡ್, 1 ಸೂಪರ್ ರೈಡ್, 11 ಟೇಕಲ್ ಮತ್ತು 4 ಆಲ್‍ಔಟ್ ಪಾಯಿಂಟ್‍ನಿಂದ ಒಟ್ಟು 34 ಅಂಕ ಗಳಿಸಿತು.