Tag: Telugu cinema

  • ಅತ್ತೆಯ ಕಣ್ಣುಗಳನ್ನು ದಾನ ಮಾಡಿದ ಮೆಗಾಸ್ಟಾರ್‌ ಚಿರಂಜೀವಿ

    ಅತ್ತೆಯ ಕಣ್ಣುಗಳನ್ನು ದಾನ ಮಾಡಿದ ಮೆಗಾಸ್ಟಾರ್‌ ಚಿರಂಜೀವಿ

    ತೆಲುಗು ನಟ ಪದ್ಮಶ್ರೀ ಅಲ್ಲು ರಾಮಲಿಂಗಯ್ಯ ಅವರ ಪತ್ನಿ ಮತ್ತು ಜನಪ್ರಿಯ ನಟ ಅಲ್ಲು ಅರ್ಜುನ್ (Allu Arjun) ಅವರ ಅಜ್ಜಿ ಮೌಂಟ್ ಅಲ್ಲು ಕನಕರತ್ನಂ (94) ಆ.30 ರಂದು ನಿಧನರಾದರು. ಅವರ ಕೊನೆ ಆಸೆಯಂತೆ ಕಣ್ಣುಗಳನ್ನು ದಾನ ಮಾಡಲಾಗಿದ್ದು, ಇದಕ್ಕೆ ಅಳಿಯ ಮೆಗಾಸ್ಟಾರ್‌ ಚಿರಂಜೀವಿ (Chiranjeevi) ಸಕಲ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.

    ಅತ್ತೆಯ ನಿಧನಕ್ಕೆ ಸಂತಾಪ ಸೂಚಿಸಿರುವ ಚಿರಂಜೀವಿಯವರು, ಅಲ್ಲು ರಾಮಲಿಂಗಯ್ಯ ಅವರ ಪತ್ನಿ ಕನಕರತ್ನಮ್ಮ ಅವರ ನಿಧನವು ಅತ್ಯಂತ ದುಃಖಕರ ವಿಚಾರವಾಗಿದೆ. ಅವರು ನಮ್ಮ ಕುಟುಂಬಗಳಿಗೆ ತೋರಿಸಿದ ಪ್ರೀತಿ, ಧೈರ್ಯ ಮತ್ತು ಜೀವನ ಮೌಲ್ಯಗಳು ನಮಗೆ ಶಾಶ್ವತವಾಗಿ ಸ್ಫೂರ್ತಿಯಾಗಿರುತ್ತವೆ. ಅವರ ಪವಿತ್ರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಅನುಶ್ರೀ ಕಲ್ಯಾಣದಲ್ಲಿ ರಾರಾಜಿಸಿದ ಅಪ್ಪು ಫೋಟೋ

    ಅಜ್ಜಿ ನಿಧನರಾದಾ ಸಮಯದಲ್ಲಿ ಅಲ್ಲು ಅರ್ಜುನ್ ಮುಂಬೈನಲ್ಲಿದ್ದರು. ಈ ಸುದ್ದಿ ಕೇಳಿದ ನಂತರ ಅವರು ಮನೆಗೆ ವಾಪಸ್‌ ಆಗಿದ್ದಾರೆ. ಇನ್ನೂ ರಾಮ್ ಚರಣ್ ಕೂಡ ಸಿನಿಮಾ ಚಿತ್ರೀಕರಣಕ್ಕಾಗಿ ಮೈಸೂರಿಗೆ ಬಂದಿದ್ದರು. ಇಲ್ಲಿಂದ ವಾಪಸ್‌ ಹೈದರಾಬಾದ್‌ಗೆ ತೆರಳಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಏಕಾಂಗಿ ನಿರೂಪಣೆ ಬಳಿಕ ಹೊಸ ಮನ್ವಂತರಕ್ಕೆ ಕಾಲಿಟ್ಟ ಆ್ಯಂಕರ್ ಅನುಶ್ರೀ

  • ಮೆಗಾಸ್ಟಾರ್‌ಗೆ 70ರ ಸಂಭ್ರಮ: ರಾಮ್‌ ಚರಣ್ ಸೆಲಬ್ರೇಷನ್

    ಮೆಗಾಸ್ಟಾರ್‌ಗೆ 70ರ ಸಂಭ್ರಮ: ರಾಮ್‌ ಚರಣ್ ಸೆಲಬ್ರೇಷನ್

    ಮೆಗಾಸ್ಟಾರ್ ಚಿರಂಜೀವಿಗೆ (Chiranjeevi) ಇಂದು (ಆ.22) ಹುಟ್ಟುಹಬ್ಬದ ಸಂಭ್ರಮ. 70ನೇ ವರ್ಷಕ್ಕೆ ಕಾಲಿಟ್ಟ ನಟ ಚಿರಂಜೀವಿಗೆ ಪುತ್ರ ರಾಮ್‌ ಚರಣ್ (Ram Charan) ತೇಜ ಹಾಗೂ ಕುಟುಂಬಸ್ಥರು ಕೇಕ್ ತಿನ್ನಿಸಿ ಸಂಭ್ರಮಿಸಿದ್ದಾರೆ. ಅಯ್ಯಪ್ಪ ಮಾಲಾಧಾರಿಯಾಗಿರುವ ರಾಮ್‌ಚರಣ್ ತೇಜ ತಂದೆ ಚಿರಂಜೀವಿ ಅವರ ಹುಟ್ಟುಹಬ್ಬಕ್ಕೆ ಶುಭಾಶಯಗಳನ್ನ ಕೋರಿದ್ದಾರೆ.

    `ಇದು ಕೇವಲ ನಿಮ್ಮ ಬರ್ತ್ಡೇ ಅಲ್ಲ, ಸೆಲಬ್ರೇಷನ್, ನನ್ನ ಹೀರೋ ನೀವು, ನನ್ನ ಪ್ರತಿ ಹೆಜ್ಜೆಯಲ್ಲೂ ಸ್ಫೂರ್ತಿ ತುಂಬಿದವರು. ನನ್ನ ಮಾರ್ಗದರ್ಶಕರು, ನನ್ನ ಯಶಸ್ಸಿನ ಹಾದಿ ಎಲ್ಲ ನಿಮ್ಮಿಂದ ಬಂದಿರುವ ಕೊಡುಗೆ’ ಎಂದು ಅಪ್ಪನನ್ನ ಬಣ್ಣಿಸಿದ್ದಾರೆ ನಟ ರಾಮ್‌ ಚರಣ್. ಇದನ್ನೂ ಓದಿ: ಬಾಲಿವುಡ್‌ನಲ್ಲೂ ಜೂ.ಎನ್‌ಟಿಆರ್‌ಗೆ ಸೋಲು

    ಚಿರಂಜೀವಿ ಅಭಿನಯದ ವಿಶ್ವಂಭರ ಸಿನಿಮಾದ ಗ್ಲಿಂಪ್ಸ್ ಚಿರಂಜೀವಿ ಹುಟ್ಟುಹಬ್ಬಕ್ಕೆ ರಿಲೀಸ್ ಆಗಿದೆ. ಸದ್ಯ ರಾಮ್‌ ಚರಣ್ ಪೆದ್ದಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ತಂದೆಯ ಹುಟ್ಟುಹಬ್ಬವನ್ನ ಆಚರಿಸಿದ್ದಾರೆ.

  • ರಾಜಮೌಳಿ ಸಿನಿಮಾ ರಿಜೆಕ್ಟ್ ಮಾಡಿದ ನಟ ವಿಕ್ರಂ – ಕಾರಣ ಏನ್ ಗೊತ್ತಾ?

    ರಾಜಮೌಳಿ ಸಿನಿಮಾ ರಿಜೆಕ್ಟ್ ಮಾಡಿದ ನಟ ವಿಕ್ರಂ – ಕಾರಣ ಏನ್ ಗೊತ್ತಾ?

    ಎಸ್‌ಎಸ್ ರಾಜಮೌಳಿ ಹಾಗೂ ಮಹೇಶ್‌ಬಾಬು (Mahesh Babu) ಕಾಂಬಿನೇಷನ್‌ನ ಎಸ್‌ಎಸ್‌ಎಂಬಿ29 ಸಿನಿಮಾದ ಪ್ರೀ ಪ್ರೊಡಕ್ಷನ್ ಕೆಲಸವು ಭರ್ಜರಿಯಾಗಿ ಸಾಗಿವೆ. ಸಿನಿಮಾಗೆ ಪಾತ್ರಗಳ ಆಯ್ಕೆ ಕೂಡಾ ಅಷ್ಟೇ ಬಿರುಸಿನಿಂದ ಸಾಗಿದೆ. ಮಹೇಶ್ ಬಾಬು ಅವರ ತಂದೆ ಪಾತ್ರಕ್ಕಾಗಿ ಚಿತ್ರತಂಡ ತಮಿಳು ನಟ ಚಿಯಾನ್ ವಿಕ್ರಂ ಅವರನ್ನ ಆಯ್ಕೆ ಮಾಡಿಕೊಂಡಿತ್ತು. ಈ ಸಿನಿಮಾದಲ್ಲಿ ನಟಿಸುವಂತೆ ಚಿಯಾನ್ ವಿಕ್ರಂ (Chiyaan Vikram) ಅವರನ್ನು ಕೇಳಿದಾಗ ಅವರು ನಟಿಸುವುದಿಲ್ಲ ಎಂದು ಹೇಳಿದ್ದಾರಂತೆ.

    ತಮಿಳು ನಟ ಚಿಯಾನ್ ವಿಕ್ರಂ ಯಾಕೆ ನಟಿಸುವುದಿಲ್ಲ ಅನ್ನೋದಕ್ಕೆ ಕಾರಣ ಕೂಡಾ ಇದೆ. ಹೌದು, ವೀರ ಧೀರ ಸೂರನ್ ಸಿನಿಮಾದ ನಟ ವಿಕ್ರಂ ಎರಡು ಸಿನಿಮಾಗಳ ನಟನೆಯಲ್ಲಿ ಬ್ಯುಸಿಯಾಗಿದ್ದಾರೆ. ಹೀಗಾಗಿ ರಾಜಮೌಳಿ ಸಿನಿಮಾದಲ್ಲಿ ನಟಿಸಲು ಡೇಟ್ ಕ್ಲ್ಯಾಶ್ ಆಗುವ ಕಾರಣದಿಂದ ಮಹೇಶ್ ಬಾಬು ತಂದೆ ಪಾತ್ರದಲ್ಲಿ ನಟಿಸೋಕೆ ಸಾಧ್ಯವಾಗುವುದಿಲ್ಲ ಎಂದು ನಟ ವಿಕ್ರಂ ಹೇಳಿದ್ದಾರಂತೆ. ಹೀಗಾಗಿ ಚಿತ್ರತಂಡ ಮಾಧವನ್ ಅವರನ್ನ ಸೂಪರ್ ಸ್ಟಾರ್ ತಂದೆ ಪಾತ್ರದಲ್ಲಿ ನಟಿಸುವಂತೆ ಅಪ್ರೋಚ್ ಮಾಡಿದೆ ಎನ್ನಲಾಗ್ತಿದೆ. ಇದನ್ನೂ ಓದಿ: `ಕಾಮದ ಬಣ್ಣ ಕೆಂಪು’ ಎಂದ ಯೋಗರಾಜ್ ಭಟ್

    ಇನ್ನು ಎಸ್‌ಎಸ್‌ಎಂಬಿ29 ಹೆಸರಿನ ಸಿನಿಮಾದ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಆರ್‌ಆರ್‌ಆರ್ ಸಿನಿಮಾ ಬಳಿಕ ನಿರ್ದೇಶಕ ರಾಜಮೌಳಿ ಕೈಗೆತ್ತಿಕೊಂಡಿರುವ ಸಿನಿಮಾ ಇದಾಗಿದೆ. ಹೀಗಾಗಿ ಈ ಚಿತ್ರದ ಮೇಲೆ ಭಾರೀ ನಿರೀಕ್ಷೆಗಳಿವೆ. ಇದನ್ನೂ ಓದಿ: ಬಹುಭಾಷಾ ನಟ ಆಂಧ್ರ, ತಮಿಳುನಾಡಿನಲ್ಲೇಕೆ ಹೋರಾಡುತ್ತಿಲ್ಲ: ಪ್ರಕಾಶ್ ರೈಗೆ ಕುಟುಕಿದ ಎಂಬಿ ಪಾಟೀಲ್‌

    ಜೊತೆಗೆ ರಾಜಮೌಳಿ ಹಾಗೂ ಮಹೇಶ್ ಬಾಬು ಕಾಂಬಿನೇಷನ್ ಮೊದಲ ಬಾರಿಗೆ ಒಂದಾಗ್ತಿದೆ. ಇನ್ನು ಈ ಸಿನಿಮಾದಲ್ಲಿ ಮಹೇಶ್ ಬಾಬು ಜೊತೆಗೆ ಪ್ರಿಯಾಂಕ ಚೋಪ್ರಾ ಮುಖ್ಯ ಪಾತ್ರದಲ್ಲಿ ನಟಿಸಲಿದ್ದು, ಈ ಭಾಗದ ಕೆಲ ಸಾಹಸ ದೃಶ್ಯಗಳನ್ನ ಕೀನ್ಯಾದಲ್ಲಿ ಶೂಟಿಂಗ್ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆಯಂತೆ. ಇದನ್ನೂ ಓದಿ: ಕೇಂದ್ರದ ಮಾಜಿ ಸಚಿವೆ ಸ್ಮೃತಿ ಇರಾನಿಯ ಸೀರಿಯಲ್ ಫಸ್ಟ್ ಲುಕ್ ಔಟ್

    ಅಂದಹಾಗೆ ಚಿಯಾನ್ ವಿಕ್ರಂ ರಿಜೆಕ್ಟ್ ಮಾಡಿದ ನಂತರ ಆರ್.ಮಾಧವನ್ ಅವರನ್ನ ಈ ಪಾತ್ರಕ್ಕಾಗಿ ನಿರ್ದೇಶಕರು ಆಯ್ಕೆ ಮಾಡಿಕೊಂಡಿದ್ದಾರಂತೆ. ಇನ್ನು ಚಿತ್ರತಂಡ ಈ ಬಗ್ಗೆ ಅಧಿಕೃತವಾಗಿ ಹೇಳಿಕೊಂಡಿಲ್ಲ. ಈ ಬಗ್ಗೆ ನಿರ್ದೇಶಕರಾಗಲಿ ಅಥವಾ ಚಿತ್ರತಂಡವಾಗಲಿ ಅಧಿಕೃತವಾಗಿ ಮಾಹಿತಿ ನೀಡಬೇಕಿದೆ. ಮಾಧವನ್ ಇಂತಹ ಪಾತ್ರಗಳಿಗೆ ನ್ಯಾಯ ಒದಗಿಸುತ್ತಾರೆ ಎನ್ನುವ ನಿರ್ಧಾರ ನಿರ್ದೇಶಕರದ್ದಾಗಿದೆ. ಈ ಸಿನಿಮಾ ಬಗ್ಗೆ ಮತ್ತಷ್ಟು ಮಾಹಿತಿಯನ್ನ ಚಿತ್ರತಂಡವೇ ಹೇಳಬೇಕಿದೆ.

  • ಕೊನೆಗೂ ಪವನ್ ಕಲ್ಯಾಣ್ ಸಿನಿಮಾ ರಿಲೀಸ್ ಡೇಟ್ ಫಿಕ್ಸ್

    ಕೊನೆಗೂ ಪವನ್ ಕಲ್ಯಾಣ್ ಸಿನಿಮಾ ರಿಲೀಸ್ ಡೇಟ್ ಫಿಕ್ಸ್

    ತೆಲುಗು ಚಿತ್ರರಂಗದ ಪವರ್ ಸ್ಟಾರ್ ಪವನ್ ಕಲ್ಯಾಣ್ (Pavan Kalyan) ಉಪಮುಖ್ಯಮಂತ್ರಿ ಗದ್ದುಗೇರಿದ ಮೇಲೆ ರಾಜಕೀಯದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಅವರು ಬಹಳ ದಿನಗಳ ಬಳಿಕ ಸಿನಿಮಾ ಕಡೆ ಮುಖ ಮಾಡಿದ್ದಾರೆ. ಇದೀಗ ಪವನ್ ಕಲ್ಯಾಣ್ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಅವರು ನಟಿಸಿರುವ ಬಹುನಿರೀಕ್ಷಿತ ಸಿನಿಮಾ `ಹರಿ ಹರ ವೀರ ಮಲ್ಲು’ (Hari Hara Veera Mallu) ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರದ ರಿಲೀಸ್ ಡೇಟ್ ಕೂಡಾ ಘೋಷಣೆಯಾಗಿದೆ.

    ಹರಿ ಹರ ವೀರ ಮಲ್ಲು ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸ ಭರದಿಂದ ಸಾಗುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಹಾಡುಗಳು ಸಿನಿಪ್ರಿಯರಿಗೆ ಇಷ್ಟವಾಗಿವೆ. ಬಿಗ್ ಬಜೆಟ್‌ನಲ್ಲಿ ತಯಾರಾಗಿರುವ ಹರಿ ಹರ ವೀರ ಮಲ್ಲು ಸಿನಿಮಾ ಜುಲೈ 24ರಂದು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಬಿಡುಗಡೆಯಾಗಲಿದೆ. ಇದನ್ನೂ ಓದಿ: ಅತಂತ್ರ ಸ್ಥಿತಿಯಲ್ಲಿ ಥಗ್ ಲೈಫ್ ಕರ್ನಾಟಕ ವಿತರಕ

    ಹರಿ ಹರ ವೀರ ಮಲ್ಲುವಾಗಿ ಪವನ್ ಕಲ್ಯಾಣ್ ಸಿನಿಮಾದಲ್ಲಿ ಅಬ್ಬರಿಸಿದ್ದಾರೆ. 17ನೇ ಶತಮಾನದಲ್ಲಿ ಮೊಘಲ್ ಸಾಮ್ರಾಜ್ಯದ ವಿರುದ್ಧ ಹೋರಾಡಿದ ನಾಯಕನಾಗಿ ಪವರ್ ಸ್ಟಾರ್ ಮಿಂಚಿದ್ದಾರೆ. 300 ವರ್ಷಗಳ ಹಿಂದಿನ ಕಾಲಘಟ್ಟವನ್ನು ಕಟ್ಟಿಕೊಡಲು ಚಿತ್ರತಂಡ ಬಹಳ ಶ್ರಮಿಸಿದೆ. ವೀರಮಲ್ಲು ಆಗಿ ಪವನ್ ಕಲ್ಯಾಣ್ ಲುಕ್ ಭರವಸೆ ಮೂಡಿಸಿದೆ. ಜ್ಯೋತಿ ಕೃಷ್ಣ ಮತ್ತು ಕ್ರಿಶ್ ಜಗರ್ಲಮುಡಿ ನಿರ್ದೇಶನದಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಚಿತ್ರ ಮೂಡಿಬರಲಿದೆ. ಇದನ್ನೂ ಓದಿ: 2025 ವಿಶ್ವ ಪ್ಯಾರಾ ಅಥ್ಲೆಟಿಕ್ಸ್‌ನ ಬ್ರ್ಯಾಂಡ್ ಅಂಬಾಸಿಡರ್ ಆಗಿ ಕಂಗನಾ ರಣಾವತ್‌ ನೇಮಕ

    ಚಿತ್ರದಲ್ಲಿ ನಿಧಿ ಅಗರ್ವಾಲ್ ನಾಯಕಿಯಾಗಿ ಮಿಂಚಿದ್ದಾರೆ. ಇನ್ನುಳಿದಂತೆ ಬಾಬಿ ಡಿಯೋಲ್, ನರ್ಗೀಸ್ ಫಕ್ರಿ, ಆದಿತ್ಯಾ ಮೆನನ್, ಶುಭಲೇಖ ಸುಧಾಕರ್ ತಾರಾಗಣದಲ್ಲಿದ್ದಾರೆ. ಚಿತ್ರದಲ್ಲಿ ರೋಚಕ ಯುದ್ಧದ ಸನ್ನಿವೇಶಗಳಿವೆ. ಮೆಗಾ ಸೂರ್ಯ ಪ್ರೊಡಕ್ಷನ್ಸ್ ಬ್ಯಾನರ್‌ನಡಿಯಲ್ಲಿ ಎ. ದಯಾಕರ್ ರಾವ್ ಈ ಚಿತ್ರವನ್ನು ನಿರ್ಮಿಸಿದ್ದು, ಎ.ಎಂ ರತ್ನಂ ಪ್ರಸ್ತುತಪಡಿಸುತ್ತಿದ್ದಾರೆ. ಆಸ್ಕರ್ ಪ್ರಶಸ್ತಿ ವಿಜೇತ ಎಂ.ಎಂ ಕೀರವಾಣಿ ಸಂಗೀತ ನಿರ್ದೇಶನ, ಮನೋಜ್ ಪರಮಹಂಸ ಛಾಯಾಗ್ರಹಣ ಚಿತ್ರಕ್ಕಿದೆ.

  • ಚಾಮುಂಡಿ ತಾಯಿ ಕಾಪಾಡಮ್ಮ – `ದಿ ರಾಜಾ ಸಾಬ್’ ಚಿತ್ರದಲ್ಲಿ ಪ್ರಭಾಸ್‌ ಘರ್ಜನೆ

    ಚಾಮುಂಡಿ ತಾಯಿ ಕಾಪಾಡಮ್ಮ – `ದಿ ರಾಜಾ ಸಾಬ್’ ಚಿತ್ರದಲ್ಲಿ ಪ್ರಭಾಸ್‌ ಘರ್ಜನೆ

    ಬಾಹುಬಲಿ (Bahubali) ಚಿತ್ರದ ಯಶಸ್ಸಿನ ಬಳಿಕ ಪ್ರಭಾಸ್‌ಗೆ (Prabhas) ಯಾವ ಚಿತ್ರವೂ ಕೈ ಹಿಡಿಯುತ್ತಿಲ್ಲ. ನಿರೀಕ್ಷೆಯಂತೆ ಚಿತ್ರಗಳು ಹಿಟ್ ಆಗುತ್ತಿಲ್ಲ. ಹೀಗಾಗಿ ಪ್ರಭಾಸ್ ಹೊಸ ಹೊಸ ಪ್ರಯೋಗಕ್ಕೆ ಅಣಿಯಾಗುತ್ತಿದ್ದಾರೆ. ಪ್ರಯೋಗದ ಇನ್ನೊಂದು ಭಾಗವೇ `ದಿ ರಾಜಾ ಸಾಬ್’ (The Raja Saab). ಇದೀಗ ಪ್ರಭಾಸ್ ಅಭಿನಯದ ರಾಜಾಸಾಬ್ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು, ಪ್ರಭಾಸ್ ಕರಿಯರ್‌ನ ವಿಭಿನ್ನ ಚಿತ್ರ ಅನ್ನೋದಾಗಿ ಟೀಸರ್ ಸುಳಿವು ನೀಡುತ್ತಿದೆ.

    ಪ್ರಭಾಸ್ ಹಾಗೂ ಸಂಜಯ್ ದತ್ (Sanjay Datt) ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ `ದಿ ರಾಜಾ ಸಾಬ್’ ಹಾರರ್, ಫ್ಯಾಂಟಸಿ ಕಥೆಯ ಚಿತ್ರ. ಸ್ಟಾರ್ ನಟರು ಆಕ್ಷನ್ ಸಿನಿಮಾಗಳಿಗೆ ಪಟ್ಟು ಹಿಡಿದು ಕುಳಿತಿರುವ ವೇಳೆ ಪ್ರಭಾಸ್ ಇಂಥದ್ದೊಂದು ವಿಭಿನ್ನ ಪ್ರಾಜೆಕ್ಟ್ ಒಪ್ಪಿಕೊಂಡಿದ್ದು ವಿಶೇಷ. ಈ ಮೂಲಕ ಹೊಸ ಪ್ರಯೋಗಕ್ಕೆ ಪ್ರಭಾಸ್ ಮುಂದಾದಂತೆ ಕಾಣುತ್ತಿದೆ. ಇದನ್ನೂ ಓದಿ: ಶೂಟಿಂಗ್ ಮುಗಿಸಿದ ಸತೀಶ್ ನೀನಾಸಂ, ಸಪ್ತಮಿ ನಟನೆಯ ʻದಿ ರೈಸ್ ಆಫ್ ಅಶೋಕʼ

    `ದಿ ರಾಜ ಸಾಬ್’ ಚಿತ್ರದಲ್ಲಿ ಪ್ರಭಾಸ್ ಜೊತೆ ಮಾಳವಿಕಾ, ನಿಧಿ ಅಗರ್‌ವಾಲ್, ರಿದ್ದಿ ಕುಮಾರ್ ಅಭಿನಯಿಸಿದ್ದಾರೆ. ಬಂಗಲೆಯೊಂದರಲ್ಲಿ ನಡೆಯುವ ಫ್ಯಾಂಟಸಿ ಕಥೆಯಾಗಿದ್ದು, ಸತ್ತು ಹೋಗಿರೋ ರಾಜ ಹಾಗೂ ಆತನ ತೀರದ ಆಸೆಯಿಂದ ಬಂಗಲೆಗೆ ಬರುವವರಿಗೆ ಕಾಟ ಕೊಡುವ ಕಥೆಯನ್ನ ಟೀಸರ್ ಬಿಚ್ಚಿಟ್ಟಿದೆ. ಟೀಸರ್‌ನ ಕೊನೆಯಲ್ಲಿ ಪ್ರಭಾಸ್‌, ಚಾಮುಂಡಿ ತಾಯಿ ಕಾಪಾಡಮ್ಮ ಎಂದು ಬೇಡಿಕೊಂಡಿದ್ದಾರೆ. ಇದನ್ನೂ ಓದಿ: ಏರ್ ಇಂಡಿಯಾಗೆ ದೇವರೇ ದಿಕ್ಕು – ರವೀನಾ ಟಂಡನ್

    ಮಾರುತಿ ನಿರ್ದೇಶಿಸಿರುವ ಈ ಚಿತ್ರವು ಅನೇಕ ವರ್ಷಗಳಿಂದ ಕುಂಟುತ್ತಾ, ತೆವಳುತ್ತಾ ಶೂಟಿಂಗ್ ಮುಗಿಸಿದ್ದು, ಇದೀಗ ಡಿಸೆಂಬರ್ 5ಕ್ಕೆ ರಿಲೀಸ್ ಘೋಷಿಸಿದೆ. ವಿಶೇಷ ಅಂದ್ರೆ 5 ಭಾಷೆಯಲ್ಲಿ ಚಿತ್ರ ತಯಾರಾಗಿದ್ದು, ಕನ್ನಡದಲ್ಲೂ ಟೀಸರ್ ರಿಲೀಸ್ ಆಗಿದೆ.

  • ಬಾಲಯ್ಯ ಜನ್ಮದಿನಕ್ಕೆ `ಅಖಂಡ-2′ ಟೀಸರ್ ರಿಲೀಸ್ – ಮಾಸ್ ಅವತಾರದಲ್ಲಿ ಅಬ್ಬರಿಸಿದ ನಂದಮೂರಿ ಬಾಲಕೃಷ್ಣ

    ಬಾಲಯ್ಯ ಜನ್ಮದಿನಕ್ಕೆ `ಅಖಂಡ-2′ ಟೀಸರ್ ರಿಲೀಸ್ – ಮಾಸ್ ಅವತಾರದಲ್ಲಿ ಅಬ್ಬರಿಸಿದ ನಂದಮೂರಿ ಬಾಲಕೃಷ್ಣ

    ‘ಗಾಡ್ ಆಫ್ ಮಾಸ್’ ನಂದಮೂರಿ ಬಾಲಕೃಷ್ಣ (Nandamuri Balakrishna) ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಬಾಲಯ್ಯ ಜನ್ಮದಿನಕ್ಕೆ ಅವರು ನಟಿಸುತ್ತಿರುವ ಬಹುನಿರೀಕ್ಷಿತ ಸಿನಿಮಾ ‘ಅಖಂಡ-2’ (Akhanda-2) ಟೀಸರ್ ಬಿಡುಗಡೆ ಮಾಡಲಾಗಿದೆ. ನಂದಿ ಮುಖ ಇರುವ ತ್ರಿಶೂಲ ಹಿಡಿದು ಮಾಸ್ ಅವತಾರದಲ್ಲಿ ಬಾಲಯ್ಯ ಎಂಟ್ರಿ ಕೊಟ್ಟಿದ್ದಾರೆ.

    ಹಿಮದಿಂದ ಆವೃತವಾದ ಕೈಲಾಸಂ, ಭರ್ಜರಿ ಆಕ್ಷನ್ಸ್, ಎಸ್ ಥಮನ್ ಮ್ಯೂಸಿಕ್ ‘ಅಖಂಡ-2’ ಟೀಸರ್‌ನ ಹೈಲೆಟ್ಸ್ ಆಗಿದೆ. ಸಾಧು ಗೆಟಪ್‌ನಲ್ಲಿ ಎಂಟ್ರಿ ಕೊಡುವ ಬಾಲಯ್ಯ ದುಷ್ಟರನ್ನು ಸಂಹಾರ ಮಾಡುವ ರೀತಿಯೂ ಅಭಿಮಾನಿಗಳಿಗೆ ಸಖತ್ ಕಿಕ್ ನೀಡುತ್ತದೆ. ಇದನ್ನೂ ಓದಿ:

    ಬಾಲಕೃಷ್ಣ ನಟನೆಯ `ಅಖಂಡ’ ಸಿನಿಮಾ 2021ರಲ್ಲಿ ಬಿಡುಗಡೆ ಆಗಿತ್ತು. ಈ ಚಿತ್ರದಲ್ಲಿ ಬಾಲಯ್ಯ (Balayya) ಅಘೋರಿಯ ಪಾತ್ರದಲ್ಲಿ ನಟಿಸಿದ್ದರು. ಇದೀಗ ಅದೇ ಸಿನಿಮಾದ ಎರಡನೇ ಭಾಗವೇ ‘ಅಖಂಡ-2′ ಆಗಿದೆ. `ಅಖಂಡ’ ಸಿನಿಮಾ ನಿರ್ದೇಶನ ಮಾಡಿದ್ದ ಬೊಯಪಾಟಿ ಶ್ರೀನು ಅವರೇ `ಅಖಂಡ-2′ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ. `ಅಖಂಡ-2′ ಸಿನಿಮಾದಲ್ಲಿಯೂ ಬಾಲಕೃಷ್ಣ ಅವರು ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ:

    ಬೊಯಪಾಟಿ ಶ್ರೀನು ಹಾಗೂ ಬಾಲಕೃಷ್ಣ ಕಾಂಬಿನೇಷನ್‌ನ ನಾಲ್ಕನೇ ಸಿನಿಮಾ ಇದಾಗಿದೆ. ಈ ಹಿಂದೆ ಬಂದಿದ್ದ ಸಿಂಹ, ಲೆಜೆಂಡ್ ಹಾಗೂ 2021ರಲ್ಲಿ ಬಿಡುಗಡೆ ಆಗಿದ್ದ ಅಖಂಡ ಸಿನಿಮಾಗಳು ಭಾರಿ ಯಶಸ್ಸುಗಳಿಸಿವೆ. ಇದೀಗ `ಅಖಂಡ-2’ರ ನಿರ್ದೇಶನದಲ್ಲಿ ಬೊಯಪಾಟಿ ತೊಡಗಿದ್ದಾರೆ. ಪ್ರತಿಷ್ಠಿತ 14 ರೀಲ್ಸ್ ಪ್ಲಸ್ ಬ್ಯಾನರ್ ಅಡಿಯಲ್ಲಿ ರಾಮ್ ಅಚಂತ ಮತ್ತು ಗೋಪಿಚಂದ್ ಅಚಂತ ನಿರ್ಮಿಸಿರುವ ಈ ಚಿತ್ರವನ್ನು ಎಂ ತೇಜಸ್ವಿನಿ ನಂದಮೂರಿ ಪ್ರಸ್ತುತಪಡಿಸಿದ್ದಾರೆ.

    ಅಖಂಡ-2 ಸಿನಿಮಾದ ಚಿತ್ರೀಕರಣ ಸದ್ಯ ಜಾರ್ಜಿಯಾದ ಗ್ರ‍್ಯಾಂಡ್ ಲೊಕೇಲ್ಸ್‌ನಲ್ಲಿ ನಡೆಯುತ್ತಿದೆ. ದಸರಾ ವಿಶೇಷ ದಿನವಾದ ಸೆ. 25ರಂದು ಚಿತ್ರ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಬಿಡುಗಡೆಯಾಗಲಿದೆ. ಬಾಲಯ್ಯಗೆ ಜೋಡಿಯಾಗಿ ಸಂಯುಕ್ತಾ ನಟಿಸುತ್ತಿದ್ದು, ಆದಿ ಪಿನಿಸೆಟ್ಟಿ ಖಳನಾಯಕನಾಗಿ ತೊಡೆ ತಟ್ಟಿದ್ದಾರೆ. ಇದನ್ನೂ ಓದಿ:

    ಹೈಬಜೆಟ್‌ನಲ್ಲಿ ನಿರ್ಮಾಣವಾಗುತ್ತಿರುವ ಅಖಂಡ-2 ಸಿನಿಮಾಗೆ ಎಸ್ ಥಮನ್ ಸಂಗೀತ ನಿರ್ದೇಶನ, ಸಿ ರಾಮಪ್ರಸಾದ್, ಸಂತೋಷ್ ಡಿ ಡೆಟಕೆ ಛಾಯಾಗ್ರಹಣ, ಎ.ಎಸ್ ಪ್ರಕಾಶ್ ಕಲಾ ನಿರ್ದೇಶನ, ತಮ್ಮಿರಾಜು ಸಂಕಲನ, ರಾಮ್-ಲಕ್ಷ್ಮಣ್‌ ಫೈಟ್ ಚಿತ್ರಕ್ಕಿರಲಿದೆ.

  • ನಿರ್ದೇಶಕರಿಗೆ ನಾನು ಸಂಪೂರ್ಣ ಶರಣಾಗ್ತೇನೆ – ಕೇತಿಕಾ ಶರ್ಮಾ ಹೀಗೆ ಹೇಳಿದ್ದೇಕೆ ಗೊತ್ತಾ?

    ನಿರ್ದೇಶಕರಿಗೆ ನಾನು ಸಂಪೂರ್ಣ ಶರಣಾಗ್ತೇನೆ – ಕೇತಿಕಾ ಶರ್ಮಾ ಹೀಗೆ ಹೇಳಿದ್ದೇಕೆ ಗೊತ್ತಾ?

    ನಾನು ನಿರ್ದೇಶಕರಿಗೆ ಸಂಪೂರ್ಣ ಶರಣಾಗುತ್ತೇನೆ, ಅವರು ಹೇಳಿದಂತೆಯೇ ಕೇಳುತ್ತೇನೆ ಎಂದು ತೆಲಗು ನಟಿ (Telugu Actress) ಕೇತಿಕಾ ಶರ್ಮಾ (Ketika Sharma) ಹೇಳಿದ್ದಾರೆ. ‘ಸಿಂಗಲ್’ ಚಿತ್ರದ ಪ್ರಚಾರದಲ್ಲಿ ತೊಡಗಿದ್ದಾಗ ಮಾಧ್ಯಮಗಳು ಅವರ `ಅಧಿ ಧಾ ಸರ್ಪ್ರೈಸ್ʼ (Adhi Dha Surprisu) ಐಟಂ ಸಾಂಗ್‌ನಲ್ಲಿನ ಡ್ಯಾನ್ಸ್‌ ವಿವಾದದ ಬಗ್ಗೆ ಕೇಳಿದ ಪ್ರಶ್ನೆಗೆ ಈ ಉತ್ತರ ನೀಡಿದ್ದಾರೆ.

    ನನಗೆ ನನ್ನ ಡ್ಯಾನ್ಸ್‌ ಬಗ್ಗೆ ಗೊತ್ತಿಲ್ಲ.. ಆದ್ರೆ ನಿರ್ದೇಶಕರು ಹೇಳಿದ್ದನ್ನು ಮಾಡುವುದು ನನ್ನ ಕೆಲಸ. ಚಿತ್ರೀಕರಣದ ಸಮಯದಲ್ಲಿ ಅವರಿಗೆ ನಾನು ಸಂಪೂರ್ಣವಾಗಿ ಶರಣಾಗುತ್ತೇನೆ. ಅವರು ಹೇಳಿದಂತೆ ಮಾಡುವುದನ್ನು ಬಿಟ್ಟು ಬೇರೆ ಯಾವುದರ ಬಗ್ಗೆಯೂ ಯೋಚಿಸುವುದಿಲ್ಲ. ಪ್ರೇಕ್ಷಕರಿಗೆ ಸಿನಿಮಾ ಇಷ್ಟವಾದರೆ ಇಷ್ಟಪಡುತ್ತಾರೆ. ಇಷ್ಟವಾಗದಿದ್ದರೆ ಟೀಕಿಸುತ್ತಾರೆ ಎಂದು ನನಗೆ ತಿಳಿದಿದೆ. ಆ ಐಟಂ ಸಾಂಗ್‌ಗೆ ಸಿಕ್ಕ ಮಿಶ್ರ ಪ್ರತಿಕ್ರಿಯೆ ಮತ್ತು ವಿವಾದದ ಬಗ್ಗೆ ನನಗೆ ತಿಳಿದಿದೆ. ನಟಿಯಾಗಿ ನನ್ನ ಆಸೆ ವಿಭಿನ್ನ ಪಾತ್ರಗಳನ್ನು ಮಾಡುವುದು. ವಿಶೇಷ ಪಾತ್ರಗಳಲ್ಲಿ ನಟಿಸುವುದು ಯಾವುದೇ ತಪ್ಪಿಲ್ಲ. ಗ್ಲಾಮರ್‌ ಆಗಿ ಕಾಣಿಸಿಕೊಳ್ಳುವುದನ್ನು ತಪ್ಪಾಗಿ ಅರ್ಥೈಸಬಾರದು. ಅದು ಕೂಡ ನಟನೆಯ ಒಂದು ಭಾಗ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಸದಾ ಬಿಕಿನಿಯಲ್ಲಿ ಕಾಣಿಸಿಕೊಳ್ತಿದ್ದ ದಿವ್ಯ ಭಾರತಿ ಸ್ಯಾರಿಯಲ್ಲಿ ಹಾಟ್‌ ಆಗಿ ಕಾಣಿಸಿಕೊಂಡಿದ್ದು ಹೀಗೆ!

    ‘ರಾಬಿನ್ ಹುಡ್’ ಚಿತ್ರದ `ಅಧಿ ಧಾ ಸರ್ಪ್ರೈಸ್’ ಹಾಡಿಗೆ ಮನಮೋಹಕವಾಗಿ ಸೊಂಟ ಬಳುಕಿಸಿದ್ದ ಕೇತಿಕಾ ವಿರುದ್ಧ ಅಶ್ಲೀಲವಾಗಿ ನೃತ್ಯ ಮಾಡಿದ್ದಾರೆ ಎಂದು ಪ್ರೇಕ್ಷಕರು ಆಕ್ರೋಶ ಹೊರಹಾಕಿದ್ದರು. ಇದರ ಬೆನ್ನಲ್ಲೇ ಮಹಿಳಾ ಆಯೋಗ ಸ್ವಯಂಪ್ರೇರಿತವಾಗಿ ನಿರ್ಮಾಪಕರಿಗೆ ನೋಟಿಸ್ ನೀಡಿತ್ತು. ಇದಾದ ಬಳಿಕ ಹಾಡಿನಿಂದ ಆ ಡ್ಯಾನ್ಸ್‌ ದೃಶ್ಯವನ್ನು ತೆಗೆಯಲಾಗಿತ್ತು.

    ದೆಹಲಿಯ ಸುಂದರಿ ಕೇತಿಕಾ ಶರ್ಮಾ ನಿರ್ದೇಶಕ ಪುರಿ ಜಗನ್ನಾಥ್ ಅವರ ಪುತ್ರ ಆಕಾಶ್ ಪುರಿ ಜೊತೆ ‘ರೊಮ್ಯಾಂಟಿಕ್’ ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ್ದರು. ಆ ಚಿತ್ರದಲ್ಲಿ ಅವರ ಗ್ಲಾಮರ್‌ಗೆ ನೂರಕ್ಕೆ ನೂರು ಅಂಕ ಸಿಕ್ಕರೂ, ಚಿತ್ರ ಯಶಸ್ವಿಯಾಗಿರಲಿಲ್ಲ. ಅದಾದ ನಂತರ, ಅವರು ನಾಗ ಶೌರ್ಯ ಜೊತೆ ‘ಲಕ್ಷ್ಯ’, ವೈಷ್ಣವ್ ತೇಜ್ ಜೊತೆ ‘ರಂಗ ರಂಗ ವೈಭವಂಗ’ ಮತ್ತು ಸಾಯಿ ಧರಮ್ ತೇಜ್ ಜೊತೆ ‘ಬ್ರೋ’ ಚಿತ್ರಗಳಲ್ಲಿ ನಟಿಸಿದ್ದರು. ಈ ಯಾವ ಚಿತ್ರಗಳೂ ಹಿಟ್ ಆಗಲಿಲ್ಲ. ಇದರಿಂದಾಗಿ ಐಟಂ ಸಾಂಗ್‌ಗಳಲ್ಲಿ ಹೆಜ್ಜೆ ಹಾಕಲು ಆರಂಭಿಸಿದ್ದಾರೆ. ಅದರಲ್ಲೂ ಅವರ ಅದೃಷ್ಟ ಅಷ್ಟಾಗಿ ಕುಲಾಯಿಸಿಲ್ಲ.

    ‘ರಾಬಿನ್ ಹುಡ್’ ಚಿತ್ರದಲ್ಲಿನ ಅವರ ಡ್ಯಾನ್ಸ್‌ಗಾಗಿ ಪ್ರೇಕ್ಷಕರು ಹೊಗಳಿದರೂ, ಅವರ ವಿವಾದಾತ್ಮಕ ಸ್ಟೆಪ್ಸ್‌ನಿಂದ ಅದೆಲ್ಲ ವ್ಯರ್ಥವಾದಂತಾಗಿದೆ. ಇದನ್ನೂ ಓದಿ: ಅಯ್ಯೋ ನನಗೆ ಹೊಟ್ಟೆ ಬಂದಿದೆ ಎಂದಿದ್ದ ನಟಿ ರಿತಿಕಾ ಸಿಂಗ್ ಸೊಂಟ ಬಳ್ಳಿಯಂತಾಗಿದ್ದು ಹೇಗೆ ಗೊತ್ತಾ?

  • 100 ಕೋಟಿ ಕ್ಲಬ್‌ಗೆ `ಹಿಟ್-3′ ಮೂವಿ – ಮೊದಲ ಬಾರಿಗೆ ನಾನಿ ಚಿತ್ರ ಭರ್ಜರಿ ಕಲೆಕ್ಷನ್‌

    100 ಕೋಟಿ ಕ್ಲಬ್‌ಗೆ `ಹಿಟ್-3′ ಮೂವಿ – ಮೊದಲ ಬಾರಿಗೆ ನಾನಿ ಚಿತ್ರ ಭರ್ಜರಿ ಕಲೆಕ್ಷನ್‌

    ತೆಲುಗು ಆಕ್ಷನ್ ಥ್ರಿಲ್ಲರ್ ʻಹಿಟ್- 3ʼ ಸಿನಿಮಾ (HIT 3 Cinema) ತೆರೆಕಂಡು ಭರ್ಜರಿ ಕಲೆಕ್ಷನ್‌ ಮಾಡುತ್ತಿದೆ. ನಾನಿ (Nani) ನಿರ್ಮಿಸಿ ನಟಿಸಿರುವ ಈ ಸಿನಿಮಾ ಕೇವಲ ನಾಲ್ಕೇ ದಿನಗಳಲ್ಲಿ ನೂರು ಕೋಟಿ ಕ್ಲಬ್‌ ಸೇರಿದೆ.

    ʻಕೆಜಿಎಫ್‌ʼ ನಟಿ ಶ್ರೀನಿಧಿ ಶೆಟ್ಟಿ (Srinidhi Shetty) ನಾಯಕಿಯಾಗಿ ಮಿಂಚುತ್ತಿರುವ ಈ ಸಿನಿಮಾ ಭಾರತ ಮಾತ್ರವಲ್ಲದೇ ವಿದೇಶಗಳಲ್ಲೂ ಭರ್ಜರಿ ಕಲೆಕ್ಷನ್‌ ಮಾಡುತ್ತಿದೆ. ಕೇವಲ 4 ದಿನಗಳಲ್ಲಿ ನೂರು ಕೋಟಿ ಬಾಚಿಕೊಂಡಿದೆ. ಸರಿಪೋದ ಶನಿವಾರಂ, ದಸರಾ ಬಳಿಕ ನಾನಿ ಕೆರಿಯರ್‌ನಲ್ಲೇ ಅತಿಹೆಚ್ಚು ಕಲೆಕ್ಷನ್‌ ಮಾಡಿದ 3ನೇ ಸಿನಿಮಾ ಇದಾಗಿದೆ ಈ ಕುರಿತು ನಿರ್ಮಾಪಕರು ಅಧಿಕೃತ ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಸೋನು ನಿಗಮ್‌ಗೆ ಫಿಲ್ಮ್ಂ ಚೇಂಬರ್ ಶಾಕ್ – ಸ್ಯಾಂಡಲ್‌ವುಡ್‌ನಿಂದ ಗಾಯಕನಿಗೆ ಅಸಹಕಾರ

    ಐಪಿಎಲ್ ಅಬ್ಬರದ ನಡುವೆಯೂ ವೀಕೆಂಡ್ ಟಾರ್ಗೆಟ್ ಮಾಡಿ ಮೇ 1ರಂದು ʻಹಿಟ್- 3ʼ ಸಿನಿಮಾ ಬಿಡುಗಡೆ ಮಾಡಲಾಗಿತ್ತು. ಶೈಲೇಶ್ ಕೋಲನು ನಿರ್ದೇಶನದ ಸಿನಿಮಾ ಭರ್ಜರಿ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದ್ದು, ವೈಲೆನ್ಸ್ ಅತಿಯಾಯಿತು ಎನ್ನುವ ಆರೋಪದ ನಡುವೆಯೂ ಅಭಿಮಾನಿಗಳು ಸಿನಿಮಾ ನೋಡಲು ಮುಗಿಬಿದ್ದಿದ್ದಾರೆ. ಇದನ್ನೂ ಓದಿ: `ಹೌಸ್‌ ಅರೆಸ್ಟ್‌’ ಶೋನಲ್ಲಿ ಸೆಕ್ಸ್‌ ಪೊಸಿಷನ್‌ಗೆ ಒತ್ತಾಯ – ನಟ ಅಜಾಜ್ ಖಾನ್‌ಗೆ ಸಮನ್ಸ್

    ʻದಸರಾʼ, ʻಹಾಯ್ ನಾನ್ನʼ, ʻಶನಿವಾರಂ ಸರಿಪೋದʼ ಹೀಗೆ ಬ್ಯಾಕ್‌ ಟು ಬ್ಯಾಕ್ ಹಿಟ್ ಸಿನಿಮಾಗಳಲ್ಲಿ ನಟಿಸಿ ಗೆದ್ದಿದ್ದ ನಾನಿ ಇಡೀಗ ಹಿಟ್‌-3ನಲ್ಲೂ ಅದೇ ಖದರ್‌ ಮೇಂಟೇನ್‌ ಮಾಡಿದ್ದಾರೆ. ಅಲ್ಲದೇ ನಾನಿ ಕೆರಿಯರ್‌ನಲ್ಲೇ ಅತಿಹೆಚ್ಚು ಕಲೆಕ್ಷನ್‌ ಮಾಡಿರುವ ಸಿನಿಮಾ ಸಹ ಇದಾಗಿದೆ. ಇನ್ನು ತಮಿಳಿನ ‘ರೆಟ್ರೋ’ ಹಾಗೂ ಬಾಲಿವುಡ್‌ನ ‘ರೈಡ್‌-2’ ಸಿನಿಮಾ ಗಳಿಕೆಯನ್ನು ಕೂಡ ‘ಹಿಟ್- 3’ ಸಿನಿಮಾ ಹಿಂದಿಕ್ಕಿದೆ.

    ರೊಮ್ಯಾಂಟಿಕ್, ಕ್ಲಾಸ್, ಕಾಮೆಡಿ ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರ ಮನ ಗೆದ್ದವರು ನಾನಿ. ಆದರೆ ಇತ್ತೀಚೆಗೆ ಮಾಸ್ ಇಮೇಜ್ ಬೆಳೆಸಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಸೋನು ನಿಗಮ್ ಮಾಡಿದ್ದು ಕ್ಷಮಿಸುವಂತಹ ಅಪರಾಧ ಅಲ್ಲ- ಶಮಿತಾ ಮಲ್ನಾಡ್

  • ದುಲ್ಕರ್ ಸಲ್ಮಾನ್ ಚಿತ್ರಕ್ಕೆ ‘ಲಕ್ಕಿ ಬಾಸ್ಕರ್’  ಟೈಟಲ್ ಫಿಕ್ಸ್

    ದುಲ್ಕರ್ ಸಲ್ಮಾನ್ ಚಿತ್ರಕ್ಕೆ ‘ಲಕ್ಕಿ ಬಾಸ್ಕರ್’ ಟೈಟಲ್ ಫಿಕ್ಸ್

    ಲಯಾಳಂ, ಹಿಂದಿ ಸಿನಿಮಾಗಳ ನಂತರ ದುಲ್ಕರ್ ಸಲ್ಮಾನ್ (Dulquer Salmaan) ತೆಲುಗಿನಲ್ಲೂ ತಮ್ಮ ಛಾಪು ಮೂಡಿಸುತ್ತಿದ್ದಾರೆ. ಈಗಾಗಲೇ ತೆಲುಗಿನಲ್ಲಿ ಅವರು ಎರಡು ಚಿತ್ರಗಳು ರಿಲೀಸ್ ಆಗಿದ್ದು, ಮೂರನೇ ಸಿನಿಮಾ ರೆಡಿ ಆಗುತ್ತಿದೆ. ಈ ಚಿತ್ರಕ್ಕೆ ಕ್ಯಾಚಿ ಟೈಟಲ್ ಹುಡುಕಿದೆ ಚಿತ್ರತಂಡ. ವೆಂಕಿ ಅಟ್ಲೂರಿ (Venky Atluri)ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರಕ್ಕೆ ‘ಲಕ್ಕಿ ಬಾಸ್ಕರ್’ (Lucky Baskar) ಎಂದು ಹೆಸರಿಡಲಾಗಿದೆ.

    ತೆಲುಗು ಚಿತ್ರೋದ್ಯಮದಲ್ಲಿ ದುಲ್ಕರ್ ಸಲ್ಮಾನ್ ಗೆ ತನ್ನದೇ ಆದ ಅಭಿಮಾನಿ ವರ್ಗವಿದೆ. ‘ಮಹಾನಟಿ’ ಮತ್ತು ಸೀತಾ ರಾಮಂ ಸಿನಿಮಾದ ನಂತರ ತೆಲುಗಿನಲ್ಲೂ ಸಾಕಷ್ಟು ಬೇಡಿಕೆಯ ನಟರಾಗಿ ತಮ್ಮ ಸ್ಥಾನವನ್ನು ಕಾಪಾಡಿಕೊಂಡು ಬಂದಿದ್ದಾರೆ ದುಲ್ಕರ್. ಹಾಗಾಗಿ ಹೊಸ ಸಿನಿಮಾದ ಟೈಟಲ್ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

     

    ಟೈಟಲ್ ಅನಾವರಣದ ಜೊತೆಗೆ ಸಿನಿಮಾದ ಪೋಸ್ಟರ್ ಕೂಡ ರಿಲೀಸ್ ಮಾಡಲಾಗಿದ್ದು, ನೂರು ರೂಪಾಯಿ ನೋಟಿನ ಹಿಂದೆ ಅರೆಬರೆಯಾಗಿ ಕಾಣುವ ದುಲ್ಕರ್ ಎಲ್ಲರಿಗೂ ಇಷ್ಟವಾಗುತ್ತಾರೆ. ಸಿನಿಮಾ ಕಥೆ ಹಾಗೂ ತಾರಾಗಣದ ಬಗ್ಗೆ ಯಾವುದೇ ಮಾಹಿತಿ ನೀಡದೇ ಇದ್ದರೂ, ದುಲ್ಕರ್ ಬಗ್ಗೆ ಆಗಾಗ್ಗೆ ಅಪ್ ಡೇಟ್ ನೀಡುತ್ತಲೇ ಇರುತ್ತದೆ ಚಿತ್ರತಂಡ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ತೆಲುಗಿನ ಮಹೇಶ್ ಬಾಬುಗೆ ತಂದೆಯಾಗಿ ನಟಿಸ್ತಾರಾ ರಿಯಲ್ ಸ್ಟಾರ್ ಉಪೇಂದ್ರ

    ತೆಲುಗಿನ ಮಹೇಶ್ ಬಾಬುಗೆ ತಂದೆಯಾಗಿ ನಟಿಸ್ತಾರಾ ರಿಯಲ್ ಸ್ಟಾರ್ ಉಪೇಂದ್ರ

    ವಿಚಿತ್ರ ಆದರೂ ಸತ್ಯ ಎನ್ನುವಂತಹ ಸುದ್ದಿಯಿಂದ ತೆಲುಗು ಸಿನಿಮಾ ರಂಗದಿಂದ ಬಂದಿದೆ. ಈಗಾಗಲೇ ಕನ್ನಡ ರಿಯಲ್ ಸ್ಟಾರ್ ಉಪೇಂದ್ರ ಅವರು ಹೀರೋ ಆಗಿ ತೆಲುಗು ಸಿನಿಮಾಗಳನ್ನು ಮಾಡಿದ್ದಾರೆ. ವಿಲನ್ ರೀತಿಯ ಪಾತ್ರಗಳನ್ನೂ ಪೋಷಿಸಿದ್ದಾರೆ. ಇದೇ ಮೊದಲ ಬಾರಿಗೆ ತಂದೆಯ ಪಾತ್ರವನ್ನು ಮಾಡಲಿದ್ದಾರೆ ಎನ್ನುವ ಸುದ್ದಿ ಬಂದಿದೆ. ಈ ಸುದ್ದಿ ಅಚ್ಚರಿಯನ್ನೂ ಮೂಡಿಸಿದೆ. ನಿಜಕ್ಕೂ ಇದರ ಹಿಂದಿನ ಮರ್ಮವೇನು ಎನ್ನುವ ಹುಡುಕಾಟ ಕೂಡ ನಡೆದಿದೆ.

    ಸದ್ಯ ರಿಯಲ್ ಸ್ಟಾರ್ ಕನ್ನಡದಲ್ಲಿ ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅದರಲ್ಲೂ ಕಬ್ಜ ಹೆಸರಿನ ಸಿನಿಮಾದಲ್ಲಿ ರಿಯಲ್ ಸ್ಟಾರ್ ಸುದೀಪ್ ಜೊತೆ ತೆರೆ ಹಂಚಿಕೊಂಡಿದ್ದಾರೆ. ಈ ಸಿನಿಮಾ ಏಳು ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಜೊತೆಗೆ ತಮ್ಮದೇ ನಿರ್ದೇಶನದ ಯುಐ ಸಿನಿಮಾದಲ್ಲೂ ಉಪ್ಪಿ ಬ್ಯುಸಿಯಾಗಿದ್ದರೆ, ಮತ್ತೆರಡು ಸಿನಿಮಾಗಳನ್ನೂ ಅವರು ನಾಯಕನಾಗಿ ಒಪ್ಪಿಕೊಂಡಿದ್ದಾರೆ. ಈ ನಡುವೆ ತಂದೆಯ ಪಾತ್ರವನ್ನು ಅವರು ಮಾಡಲು ಸಾಧ್ಯವಾ ಎನ್ನುವುದು ಹಲವರ ಪ್ರಶ್ನೆ. ಇದನ್ನೂ ಓದಿ : ಬಾಲಿವುಡ್ ನಲ್ಲಿ ಕನ್ನಡದ ರಂಗಿತರಂಗ ಸಿನಿಮಾ ರಿಮೇಕ್

    ಮಹೇಶ್ ಬಾಬು ಅವರ ಹೊಸ ಸಿನಿಮಾದಲ್ಲಿ ತಂದೆಯಾಗಿ ನಟಿಸುವಂತೆ ಆಫರ್ ಬಂದಿರುವುದು ಸತ್ಯ ಎಂದು ಹೇಳಲಾಗುತ್ತಿದೆ. ಆದರೆ, ಈ ಪಾತ್ರವನ್ನು ಉಪೇಂದ್ರ ಒಪ್ಪಿಕೊಂಡಿದ್ದಾರೋ ಇಲ್ಲವೋ ಸಸ್ಪೆನ್ಸ್. ಹಲವು ಸಿನಿಮಾಗಳಲ್ಲಿ ಅವರು ಬ್ಯುಸಿ ಇರುವುದರಿಂದ ಪಾತ್ರವನ್ನು ಒಪ್ಪಿಕೊಳ್ಳದೇ ಇರಬಹುದು ಎನ್ನಲಾಗುತ್ತದೆ. ಜೊತೆಗೆ ಸಾಕಷ್ಟು ಪ್ರಯೋಗಗಳನ್ನು ಮಾಡುವ ಉಪ್ಪಿ, ಮನಸ್ಸು ಮಾಡಿ ತಂದೆಯ ಪಾತ್ರವನ್ನು ಮಾಡಲೂಬಹುದು ಎನ್ನುವ ಮಾತೂ ಕೂಡ ಹರಿದಾಡುತ್ತಿದೆ. ಆದರೆ, ಇನ್ನೂ ಯಾವುದೂ ನಿಕ್ಕಿಯಾಗಿಲ್ಲ.

    Live Tv
    [brid partner=56869869 player=32851 video=960834 autoplay=true]