Tag: television

  • ಲೈವ್ ನ್ಯೂಸ್ ನಡೆಯುತ್ತಿದ್ದಾಗ ಆ್ಯಂಕರ್ ಮೇಲೆ ಬಂದು ಕುಳಿತ ಪಕ್ಷಿ – ವಿಡಿಯೋ ವೈರಲ್

    ಲೈವ್ ನ್ಯೂಸ್ ನಡೆಯುತ್ತಿದ್ದಾಗ ಆ್ಯಂಕರ್ ಮೇಲೆ ಬಂದು ಕುಳಿತ ಪಕ್ಷಿ – ವಿಡಿಯೋ ವೈರಲ್

    ಕ್ಯಾಲಿಫೋರ್ನಿಯಾ: ಟಿವಿ ವಾಹಿನಿಯ ನೇರ ಪ್ರಸಾರದಲ್ಲಿ ತಮಾಷೆಯ ಸಂಗತಿಯೊಂದು ನಡೆದಿದ್ದು, ಪಕ್ಷಿಯೊಂದು ನೇರಪ್ರಸಾರದ ವೇಳೆ ನಿರೂಪಕಿಯ ತಲೆಯ ಮೇಲೆ ಬಂದು ಕುಳಿತುಕೊಂಡಿದೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೋ ಮೃಗಾಲಯದ ಪಕ್ಷಿ ಇದಾಗಿದೆ. ಕಾರ್ಯಕ್ರಮಕ್ಕಾಗಿ ಪಕ್ಷಿಯನ್ನ ಸೆಟ್‍ಗೆ ತರಲಾಗಿತ್ತು. ಇಲ್ಲಿನ ಕೆಎಫ್‍ಎಂಬಿ ಟಿವಿಯಲ್ಲಿ ಬೆಳಗಿನ ಸುದ್ದಿ ಪ್ರಸಾರವಾಗುತ್ತಿತ್ತು. ಅಂದು “ಝೂ ಡೇ” ಎಂಬ ಕಾರ್ಯಕ್ರಮ ನಡೆಯುತ್ತಿತ್ತು. ನಿರೂಪಕರಾದ ನಿಚೆಲ್ ಮೆಡೆನಾ ಹಾಗೂ ಎರಿಕ್ ಕಹ್ನೆಟ್ ಸುದ್ದಿ ಓದುತ್ತಿದ್ದರು.

    ಇಬ್ಬರು ನಿರೂಪಕರು ಕಾರ್ಯಕ್ರಮದ ಮಧ್ಯೆ ಬ್ರೇಕ್ ತೆಗೆದುಳ್ಳಲು ಮುಂದಾಗುತ್ತಿದ್ದರು. ಈ ಸಂದರ್ಭದಲ್ಲಿ ಸ್ಕಾರ್ಲೆಟ್ ಹಕ್ಕಿ ಬಂದು ನಿರೂಪಕಿ ನಿಚೆಲ್ ತಲೆ ಮೇಲೆ ಕುಳಿತುಕೊಂಡಿದೆ. ಹಕ್ಕಿಯ ಅನಿರೀಕ್ಷಿತ ಪ್ರವೇಶದಿಂದ ಅಚ್ಚರಿಯಾದರೂ ಅವರು ಭಯಪಡಲಿಲ್ಲ. ಆದರೆ ಪಕ್ಕದಲ್ಲಿ ಕುಳಿತಿದ್ದ ಸಹ ನಿರೂಪಕ ಎರಿಕ್ ಕಹ್ನೆಟ್ ನಗು ತಡೆಯಲು ಸಾಧ್ಯವಾಗದೆ ಜೋರಾಗಿ ನಕ್ಕಿದ್ದಾರೆ. ಬಳಿಕ ಕೆಲವು ಸೆಂಕೆಡ್ ಆದ ನಂತರ ಆ ಪಕ್ಷಿ ಎರಿಕ್ ಕಹ್ನೆಟ್ ತಲೆ ಮೇಲೂ ಹಾರಿದೆ.

    ಈ ವಿಡಿಯೋವನ್ನು ಎರಿಕ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ವೈರಲ್ ಆಗಿದೆ.

     

  • ಪಾಕಿಸ್ತಾನ ಟಿವಿ ಆ್ಯಂಕರ್ ಗಳ ಫೈಟಿಂಗ್ -ವಿಡಿಯೋ ವೈರಲ್

    ಪಾಕಿಸ್ತಾನ ಟಿವಿ ಆ್ಯಂಕರ್ ಗಳ ಫೈಟಿಂಗ್ -ವಿಡಿಯೋ ವೈರಲ್

    ಕರಾಚಿ: ಪಾಕಿಸ್ತಾನದ ಮೂಲದ ಖಾಸಗಿ ಮಾಧ್ಯಮದ ನಿರೂಪಕರಿಬ್ಬರು ಪರಸ್ಪರ ಜಗಳ ಮಾಡಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಮೂಲಗಳ ಪ್ರಕಾರ ಲಾಹೋರ್ ಮೂಲದ ಖಾಸಗಿ ಮಾಧ್ಯಮದ ಆ್ಯಂಕರ್ ಗಳಾಗಿದ್ದು, ಪರಸ್ಪರ ಆಕ್ರೋಶ ವ್ಯಕ್ತಪಡಿಸಿ ಜಗಳವಾಡಿದ್ದಾರೆ.

    ವಿಡಿಯೋದಲ್ಲಿರುವ ಮಹಿಳಾ ನಿರೂಪಕಿ ಮೂರ್ಖ ಎಂಬ ಪದವನ್ನ ಬಳಕೆ ಮಾಡುತ್ತಾಳೆ. ಇದರಿಂದ ಆಕ್ರೋಶಗೊಂಡ ನಿರೂಪಕ ಇಂತಹವರ ಜೊತೆ ನಾನು ಹೇಗೆ ಬುಲೆಟಿನ್ ಮಾಡಲಿ. ಈಕೆ ನನ್ನೊಂದಿಗೆ ಸರಿಯಾಗಿ ಮಾತನಾಡುವುದೇ ಇಲ್ಲ ಎಂದು  ದೂರುತ್ತಾನೆ.

    ನಿರೂಪಕರ ನಡುವಿನ ಈ ಬಿಸಿ ಜಗಳದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಒಂದು ಲಕ್ಷಕ್ಕೂ ಅಧಿಕ ಜನರು ನೋಡಿದ್ದಾರೆ. ಈ ಹಿಂದೆಯೂ ಆನ್ ಸ್ಕ್ರೀನ್ ನಲ್ಲಿ ನಿರೂಪಕರ ನಡುವಿನ ಜಗಳ ಹೆಚ್ಚು ವೈರಲ್ ಆಗಿತ್ತು.

    ಕಳೆದ ಕೆಲ ದಿನಗಳ ಹಿಂದೆ ಪಾಕಿಸ್ತಾನ ನಿರೂಪಕಿಯೊಬ್ಬರು ತಮ್ಮ ಮಗಳನ್ನು ಕುರಿಸಿಕೊಂಡು ಸುದ್ದಿ ಓದುವ ಮೂಲಕ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ಹಿಂಸಾಚಾರದ ವಿರುದ್ಧ ಪ್ರತಿಭಟನೆ ನಡೆಸಿದ್ದರು.

    https://www.youtube.com/watch?time_continue=17&v=cmNaKHppdGA