ಕನ್ನಡ ಕಿರುತೆರೆ ನಂಬರ್ ಒನ್ ಶೋಗಳಲ್ಲಿ ಒಂದಾಗಿರುವ `ನಾಗಿಣಿ 2′ ತ್ರಿಶೂಲ್ ಅಲಿಯಾಸ್ ನಿನಾದ್ ಹರಿತ್ಸ ಇತ್ತೀಚೆಗಷ್ಟೇ ಬಹುಕಾಲದ ಗೆಳತಿ ರಮ್ಯಾ ಜೊತೆ ಹಸೆಮಣೆ ಏರಿದ್ದರು. ಇದೀಗ ಪತ್ನಿಯ ಜೊತೆ ನಟ ನಿನಾದ್ ಚೆಂದದ ಫೋಟೋಶೂಟ್‌ನಲ್ಲಿ ಮಿಂಚಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಟಿವಿ ಪರದೆಯಲ್ಲಿ ನಿನಾದ್ ಮತ್ತು ನಮೃತಾ ಗೌಡ ಲವ್ ಸ್ಟೋರಿ ನೋಡಿ ಇಷ್ಟಪಟ್ಟಿದ್ದ ಅಭಿಮಾನಿಗಳಿಗೆ, ತನ್ನ ನಿಜ ಜೀವನದ ಸಂಗಾತಿಯನ್ನು ಪರಿಚಯಿಸಿದ್ದಾರೆ. ತಮ್ಮ ಕಾಮನ್ ಫ್ರೆಂಡ್ ಮೂಲಕ ಪರಿಚಯವಾಗಿರುವ ರಮ್ಯಾ ಜೊತೆ ಫ್ರೆಂಡ್‌ಶಿಪ್ ನಂತರ ಪ್ರೇಮಾಂಕುರವಾಗಿ ಇದೀಗ ಸತಿ ಪತಿಗಳಾಗಿ ಜೀವನ ನಡೆಸುತ್ತಿದ್ದಾರೆ.
ನಿನಾದ್ ಮತ್ತು ರಮ್ಯಾ ಈ ವರ್ಷ ಫೆಬ್ರವರಿಯಲ್ಲಿ ಗುರು ಹಿರಿಯರ ಸಮ್ಮುಖದಲ್ಲಿ ಶಾಸ್ತ್ರದ ಪ್ರಕಾರ ನಿಶ್ಚತಾರ್ಥವಾಗಿದ್ದರು. ಕೆಲ ದಿನಗಳ ಹಿಂದಷ್ಟೇ ಈ ಜೋಡಿ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇತ್ತೀಚೆಗಷ್ಟೇ ಆರತಕ್ಷತೆ ಕೂಡ ಅದ್ದೂರಿಯಾಗಿ ನೆರವೇರಿತ್ತು. ಇದೀಗ ನಟ ನಿನಾದ್ ಪತ್ನಿ ರಮ್ಯಾ ಜೊತೆ ಚೆಂದದ ಫೋಟೋಶೂಟ್‌ನಲ್ಲಿ ಮಿಂಚಿದ್ದಾರೆ. ಇದನ್ನೂ ಓದಿ: ಕೆಜಿಎಫ್ 2 ಪ್ರದರ್ಶನಕ್ಕೆ ತಡೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾ
ಇನ್ನು ನವ ಜೋಡಿಗೆ ಅಭಿಮಾನಿಗಳು, ಆಪ್ತರು ಸೋಷಿಯಲ್ ಮೀಡಿಯಾದಲ್ಲಿ ಶುಭ ಹಾರೈಸುತ್ತಿದ್ದಾರೆ.
ಫ್ಯಾಟ್ ಸರ್ಜರಿಗೆ ಒಳಗಾಗಿ ಪ್ರಾಣ ಬಿಟ್ಟ ಕಿರುತೆರೆ ನಟಿ ಚೇತನಾ ರಾಜ್, ಆ ಚಿಕಿತ್ಸೆಗಾಗಿ ಒಂದು ಲಕ್ಷ, ಅರವತ್ತು ಸಾವಿರ ರೂಪಾಯಿಗಳನ್ನು ಖರ್ಚು ಮಾಡಿರುವುದಾಗಿ ಅವರ ದೊಡ್ಡಪ್ಪ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಚಿಕಿತ್ಸೆಗೆ ಒಳಗಾಗುವ ಮುನ್ನ ಆ ಖಾಸಗಿ ಆಸ್ಪತ್ರೆಯು 90 ಸಾವಿರ ರೂಪಾಯಿಗಳನ್ನು ಕಟ್ಟಿಸಿಕೊಂಡಿತ್ತಂತೆ. ಆನಂತರ ಮತ್ತಷ್ಟು ಹಣವನ್ನು ಅವರ ಕುಟುಂಬ ಪಾವತಿಸಿದೆ. ಇದನ್ನೂ ಓದಿ: ಫ್ಯಾಟ್ ಸರ್ಜರಿ ಎಫೆಕ್ಟ್ – ಕಿರುತೆರೆ ನಟಿ ಚೇತನಾ ರಾಜ್ ಸಾವು
ಈ ಕುರಿತು ಮಾಧ್ಯಮಗಳ ಜತೆ ಮಾತನಾಡಿರುವ ಚೇತನಾ ದೊಡ್ಡಪ್ಪ, ‘ಚೇತನಾ ರಾಜ್ ಈ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿಗಳನ್ನು ಕೂಡಿಸಿಟ್ಟಿದ್ದರು. ಚಿಕಿತ್ಸೆಗೂ ಮುನ್ನ 90 ಸಾವಿರ ರೂಪಾಯಿಗಳನ್ನು ಪಾವತಿಸಿದ್ದಾರೆ. ಆನಂತರ ಅವರ ಕುಟುಂಬ ಮತ್ತಷ್ಟು ಹಣವನ್ನು ಪಾವತಿಸಿದೆ. ಅವಳನ್ನು ಬೇರೆ ಆಸ್ಪತ್ರೆಗೆ ಸೇರಿಸುವ ಮುನ್ನವೂ ತಾವು ಫ್ಯಾಟ್ ಸರ್ಜರಿಗೆ ಒಳಗಾಗಿದ್ದ ಆಸ್ಪತ್ರೆಗೆ ಹಣ ನೀಡಿರುವುದಾಗಿ ತಿಳಿಸಿದ್ದಾರೆ.
ಈ ಕುರಿತು ಚೇತನಾ ರಾಜ್ ಅವರ ತಾಯಿಯೂ ಕೂಡ ಆಸ್ಪತ್ರೆಯ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದು, ‘ಮಗಳಿಂದ ಲಕ್ಷಾಂತರ ರೂಪಾಯಿ ಕಿತ್ತುಕೊಂಡು, ಬದುಕಿಸಲಿಲ್ಲ. ದುಡ್ಡಿನ ಜೊತೆ ಮಗಳನ್ನೂ ಅವರು ಕಸಿದುಕೊಂಡರು ಎಂದು ಆರೋಪ ಮಾಡಿದ್ದಾರೆ. ಅಲ್ಲದೇ, ಮಗಳ ಸಾವಿಗೆ ಆಸ್ಪತ್ರೆಯೇ ಕಾರಣವೆಂದು ದೂರು ಕೂಡ ದಾಖಲಿಸಿದ್ದಾರೆ. ಇದನ್ನೂ ಓದಿ: ರಾಖಿ ಸಾವಂತ್ ಹೊಸ ಬಾಯ್‌ಫ್ರೆಂಡ್ ಮೈಸೂರಿನವನು : ಗೆಳೆಯ ಕೊಟ್ಟ ದುಬಾರಿ ಉಡುಗೊರೆ
ಈ ಕುರಿತು ಆಸ್ಪತ್ರೆಯು ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಚೇತನಾ ರಾಜ್ ಅವರ ಮರಣೋತ್ತರ ಪರೀಕ್ಷೆ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ನಡೆಯುತ್ತಿದ್ದು, ಆನಂತರ ಚೇತನಾ ರಾಜ್ ಸಾವಿನ ಹಲವು ವಿಚಾರಗಳು ತಿಳಿಯಲಿವೆ. ಈಗಾಗಲೇ ದೂರು ಸ್ವೀಕರಿಸಿರುವ ಪೊಲೀಸ್ ಅಧಿಕಾರಿಗಳು ಪ್ರಾಥಮಿಕ ತನಿಖೆ ಆರಂಭಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಬಹುತೇಕರು ಸೌಂದರ್ಯದ ಹಿಂದೆ ಬಿದ್ದು ನಾನಾ ರೀತಿಯ ಅಪಾಯಗಳನ್ನು ತಂದುಕೊಳ್ಳುತ್ತಿದ್ದಾರೆ. ಅದರಲ್ಲೂ ತೆಳ್ಳಗಾಗುವ ನಿಟ್ಟಿನಲ್ಲಿ ಸಾಕಷ್ಟು ಕಲಾವಿದೆಯರು ನಾನಾ ರೀತಿಯ ಮಾರ್ಗಗಳನ್ನು ಕಂಡುಕೊಂಡಿದ್ದಾರೆ. ವೈಜ್ಞಾನಿಕವಾಗಿ ಅವುಗಳು ಸರಿಯಾದ ಕ್ರಮವಲ್ಲ ಎಂದು ಗೊತ್ತಿದ್ದರೂ, ತಾವು ನೋಡುಗರ ಮುಂದೆ ಸುಂದರವಾಗಿ ಕಾಣಬೇಕು ಎನ್ನುವ ದೃಷ್ಟಿಯಿಂದ ಶಾರ್ಟ್ ಕಟ್ ವಿಧಾನವನ್ನು ಅನುಸರಿಸುತ್ತಿದ್ದಾರೆ. ಹೀಗಾಗಿ ಜೀವಕ್ಕೆ ಅಪಾಯ ಆಗುವಂತ ಚಿಕಿತ್ಸೆಗೂ ಅನೇಕರು ಮುಂದಾಗುತ್ತಾರೆ. ಇಂತಹ ಮಾರ್ಗ ಅನುಸರಿಸಿದ ಕಿರುತೆರೆ ನಟಿ ಚೇತನಾ ರಾಜ್ ಪ್ರಾಣ ಬಿಟ್ಟಿದ್ದಾರೆ.
ಯೋಗ, ವ್ಯಾಯಾಮ, ಆಹಾರ ಕ್ರಮಗಳ ಮೂಲಕ ತೂಕ ಇಳಿಸಿಕೊಳ್ಳಲು ತುಂಬಾ ಸಮಯ ಬೇಕಾಗುವುದರಿಂದ ಚಿಕಿತ್ಸೆ ಮೂಲಕ ತೂಕ ಇಳಿಸಿಕೊಳ್ಳಲು ಮುಂದಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಲಿಪೊಸಕ್ಷನ್ ಸೇರಿದಂತೆ ಅನೇಕ ಚಿಕಿತ್ಸೆ ವಿಧಾನಗಳ ಮೂಲಕ ವೇಟ್ ಲಾಸ್ ಮಾಡಿಸಿಕೊಳ್ಳುವವರ ಸಂಖ್ಯೆಯೂ ಹೆಚ್ಚಾಗಿದೆ ಎನ್ನುತ್ತಿದೆ ವೈದ್ಯ ಅಂಕಿ ಅಂಶ. ಇದನ್ನೂ ಓದಿ: ಫ್ಯಾಟ್ ಸರ್ಜರಿ ಎಫೆಕ್ಟ್ – ಕಿರುತೆರೆ ನಟಿ ಚೇತನಾ ರಾಜ್ ಸಾವು
ವ್ಯಾಯಾಮ ಮತ್ತು ಆಹಾರ ಕ್ರಮದಿಂದ ದೇಹದ ಬೊಜ್ಜನ್ನು ಕರಗಿಸಬಹುದಾಗಿದ್ದರೂ, ಅದು ಸುಲಭವಾಗಿ ಕರಗುವುದಿಲ್ಲ ಎಂಬ ಕಾರಣಕ್ಕಾಗಿ ಲಿಪೋಸಕ್ಷನ್ ರೀತಿಯ ಚಿಕಿತ್ಸೆಗಳು ಇಂದು ಜನಪ್ರಿಯವಾಗಿವೆ. ಇಂತಹ ಚಿಕಿತ್ಸೆ ಪಡೆಯುವ ಮುನ್ನ ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ತಗೆದುಕೊಳ್ಳಲೇಬೇಕು ಎನ್ನುತ್ತಾರೆ ವೈದ್ಯರು.
ಲಿಪೊಸಕ್ಷನ್ ಚಿಕಿತ್ಸೆ ಪಡೆಯುತ್ತಿದ್ದಂತೆಯೇ ನಾವು ಅಂದುಕೊಂಡಷ್ಟು ತೂಕ ಇಳಿಯುತ್ತದೆ ಎನ್ನುವುದು ತಪ್ಪು. ವ್ಯಕ್ತಿಯಿಂದ ವ್ಯಕ್ತಿಗೆ ಕೊಬ್ಬು ಕಡಿಮೆ ಆಗುತ್ತದೆ ಎನ್ನುವುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ಯಾವ ವ್ಯಕ್ತಿಗೆ ಎಷ್ಟು ತೂಕ ಕಡಿಮೆ ಮಾಡಿಕೊಳ್ಳಬೇಕು ಎನ್ನುವುದನ್ನು ವೈದ್ಯರು ನಿರ್ಧರಿಸುತ್ತಾರೆ. ತೂಕ ಇಳಿಸಿಕೊಳ್ಳುವಾಗಿ ಇಂತಿಷ್ಟೇ ತೂಕ ಕಡಿಮೆ ಮಾಡಬೇಕು ಎಂದು ವೈದ್ಯರನ್ನು ಪೋರ್ಸ್ ಮಾಡಬೇಡಿ. ಇದನ್ನೂ ಓದಿ: ರಾಖಿ ಸಾವಂತ್ ಹೊಸ ಬಾಯ್‌ಫ್ರೆಂಡ್ ಮೈಸೂರಿನವನು : ಗೆಳೆಯ ಕೊಟ್ಟ ದುಬಾರಿ ಉಡುಗೊರೆ
ಈ ರೀತಿಯ ಚಿಕಿತ್ಸೆಯಿಂದ ಮ್ಯಾಕ್ಸಿಮಮ್, ಐದಾರು ಕೇಜಿ ತೂಕ ಕಡಿಮೆ ಮಾಡಿಸಿಕೊಳ್ಳಬಹುದು. ಇದಕ್ಕಿಂತ ಜಾಸ್ತಿ ತೂಕ ಕಡಿಮೆ ಮಾಡಿಸಿಕೊಳ್ಳಲು ಮುಂದಾದರೆ, ಅಪಾಯ ಕಟ್ಟಿಟ್ಟ ಬುತ್ತಿ. ಈ ಸಮಯದಲ್ಲಿ ಸಾವೂ ಸಂಭವಿಸಬಹುದು ಎನ್ನುತ್ತಾರೆ ವೈದ್ಯರು. ಚಿಕಿತ್ಸೆ ಸಮಯದಲ್ಲಿ ಅಥವಾ ಚಿಕಿತ್ಸೆಯ ನಂತರವೂ ಆರೋಗ್ಯದಲ್ಲಿ ಏರುಪೇರಾಗಬಹುದು. ಹಾಗಾಗಿ ಯಶಸ್ಸಿ ಚಿಕಿತ್ಸೆ ನಂತರ ನಿರಂತರವಾಗಿ ವ್ಯಾಯಾಮ ಮತ್ತು ಆಹಾರದ ಕ್ರಮವನ್ನು ಪಾಲಿಸಲೇಬೇಕು. ಮತ್ತು ನುರಿತ ವೈದ್ಯರಿಂದಲೇ ಇಂತಹ ಚಿಕಿತ್ಸೆಯನ್ನು ಪಡೆಯಬೇಕು.
ಇಂತಹ ಚಿಕಿತ್ಸೆಗೆ ಒಳಗಾಗುವ ಮುನ್ನ ಮಾನಸಿಕವಾಗಿ ವ್ಯಕ್ತಿಯು ಸದೃಢವಾಗಿರಬೇಕು ಮತ್ತು ಚಿಕಿತ್ಸೆಯ ಮುನ್ನ ವೈದ್ಯರು ಹೇಳಿದ ಸಲಹೆಗಳನ್ನು ಚಾಚೂ ತಪ್ಪದೇ ಪಾಲಿಸಿರಬೇಕು. ಚಿಕಿತ್ಸೆಗೆ ಭಾಗಿಯಾಗುವಾಗ ಒಬ್ಬರೇ ಹೋಗಬೇಡಿ, ನಿಮ್ಮ ಕುಟುಂಬದವರಿಗೂ ಮಾಹಿತಿ ತಿಳಿಸಿ. ಮತ್ತು ಮತ್ತೊಬ್ಬ ವೈದ್ಯರ ಸಲಹೆಯನ್ನೂ ಪಡೆಯಬೇಕು.
ಬಂಗಾಳಿ ಕಿರುತೆರೆಯಲ್ಲಿ ಸಾಕಷ್ಟು ಸೀರಿಯಲ್ ಮೂಲಕ ಅಪಾರ ಅಭಿಮಾನಿಗಳ ಬಳಗ ಹೊಂದಿರೋ ನಟಿ ಪಲ್ಲವಿ ಡೇ ಸಾವನ್ನಪ್ಪಿದ್ದಾರೆ. ಕೋಲ್ಕತ್ತಾದ ಗರ್ಫಾದ ತಮ್ಮ ನಿವಾಸದಲ್ಲಿ ನಟಿ ಪಲ್ಲಿವಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ʻಮೊನ್ ಮನೆ ನಾʼ ಸೀರಿಯಲ್‌ನ ಜನಪ್ರಿಯ ನಟಿ ಪಲ್ಲವಿ ಡೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಂದು ಬೆಳಿಗ್ಗೆ ನೇಣು ಬಿಗಿದ ಸ್ಥಿತಿ ಶವ ಪತ್ತೆಯಾಗಿದ್ದು, ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದು ಪಲ್ಲವಿ ನೇಣು ಹಾಕಿಕೊಂಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ನಟಿಯ ಸಾವಿಗೆ ಕಾರಣವೇನು ಎಂಬುದು ತಿಳಿದು ಬಂದಿಲ್ಲ. ನಟಿ ಅಸಹಜ ಸಾವಿಗೆ ಬಂಗಾಳದ ಪೊಲೀಸರು ಪ್ರಕರಣ ದಾಖಾಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಇದನ್ನೂ ಓದಿ: ಫಿಲ್ಮ್ ಚೇಂಬರ್ ಚುನಾವಣೆ: ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ಸಾ.ರಾ ಗೋವಿಂದ್
ಬಂಗಾಳಿಯ `ಮೊನ್ ಮನೆ ನಾ’ ಸೇರಿದಂತೆ ಸಾಕಷ್ಟು ಸೀರಿಯಲ್‌ನಲ್ಲಿ ನಟಿಸಿದ್ದ ಪಲ್ಲವಿ ಸಾವು ಕುಟುಂಬಸ್ಥರಿಗೆ ಆಘಾತವುಂಟು ಮಾಡಿದೆ. 20ನೇ ವಯಸ್ಸಿಗೆ ಇಹಲೋಕ ತ್ಯಜಿಸಿರುವ ನಟಿ ಪಲ್ಲವಿ ಸಾವಿಗೆ ಸಹಕಲಾವಿದರು, ಸ್ನೇಹಿತರು, ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.
ರಮೇಶ್ ಅರವಿಂದ್ ನಡೆಸಿಕೊಡುತ್ತಿದ್ದ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮತ್ತು ಟಿಕ್ ಟಾಕ್, ಸಂಗೀತದ ಮೂಲಕ ಫೇಮಸ್ ಆಗಿದ್ದ ಲೈನ್ ಮನ್ ತಿಮ್ಮಣ್ಣ ಭೀಮಪ್ಪ ಗುರಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಂದುಕೊಂಡಂತೆ ಆಗಿದ್ದರೆ, ಇಂದು ಅವರ ಹೊಸ ಮನೆ ಗೃಹಪ್ರವೇಶ ಆಗಬೇಕಿತ್ತು. ಅದಕ್ಕೂ ಎರಡು ದಿನ ಮುನ್ನವೇ ಅನುಮಾನಾಸ್ಪದವಾಗಿ 27 ವರ್ಷದ ತಿಮ್ಮಣ್ಣನ ಮೃತದೇಹ ಸಿಕ್ಕಿದೆ.
ಬಾಗಲಕೋಟೆ ಜಿಲ್ಲೆ ಬೀಳಗಿ ತಾಲ್ಲೂಕಿನ ಅಮಲಝರಿ ಗ್ರಾಮದಲ್ಲಿ ಈ ದುರಂತ ನಡೆದಿದ್ದು, ಸಾಲದ ಹೊರೆಯಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆಂದು ಶಂಕಿಸಲಾಗಿದೆ. ಅಮಲಝರಿ ಗ್ರಾಮದ ಹೊರವಲಯದಲ್ಲಿರುವ ಮುಧೋಳ ತಾಲೂಕಿನ ಮಂಟೂರು ಗ್ರಾಮ ವ್ಯಾಪ್ತಿಯ ತೋಟದ ಮನೆಯಲ್ಲಿ ಈ ಘಟನೆ ನಡೆದಿದ್ದು, ಮೂಲತಃ ಅಮಲಝರಿ ಗ್ರಾಮದ ತಿಮ್ಮಣ್ಣ ಎಸ್ಸೆಸ್ಸೆಲ್ಸಿವರೆಗೂ ವ್ಯಾಸಂಗ ಮಾಡಿದ್ರಲ್ಲದೇ, ಈ ಹಿಂದೆ ನಟ ರಮೇಶ್ ಅರವಿಂದ್ ನಡೆಸಿಕೊಟ್ಟಿದ್ದ ಕನ್ನಡದ ಕೊಟ್ಯಾದಿಪತಿ ಸೀಜನ್ 3 ರಲ್ಲಿ ಭಾಗವಹಿಸಿ 6.40 ಲಕ್ಷ ರೂ ಗೆದ್ದಿದ್ದರು. ಇದನ್ನೂ ಓದಿ : ಶತ್ರುಘ್ನಾ ಸಿನ್ಹಾ ಮೇಲೆ ಲೈಂಗಿಕ ಹಗರಣ ದಂಧೆ ಆರೋಪ : ನಟಿ ವಿರುದ್ಧ ತಿರುಗಿ ಬಿದ್ದ ಸಿನ್ಹಾ ಕುಟುಂಬ
ಹಾಸ್ಯ, ಸಂಗೀತದ ಮೂಲಕ ರಂಜಿಸಿ ಟಿಕ್‌ಟಾಕ್‌ನಲ್ಲಿ ಅಭಿಮಾನಿಗಳನ್ನ ಸಹ ಹೊಂದಿದ್ದರು. ಖೋ ಖೋ ಕ್ರೀಡಾಪಟು ಸಹ ಆಗಿದ್ದಂತಹ ತಿಮ್ಮಣ್ಣ ಗ್ರಾಮದ ಮಕ್ಕಳಿಗೆ ತರಬೇತಿ ಕೊಡ್ತಿದ್ದರು ಎನ್ನಲಾಗಿದೆ. ಇನ್ನು ಅನಾರೋಗ್ಯದಿಂದ ಬಳಲುತ್ತಿದ್ದ ತಂದೆ ಚಿಕಿತ್ಸೆಗಾಗಿ ಮತ್ತು ಹೊಸ ಕಟ್ಟಿಸುವ ಸಲುವಾಗಿ 16 ಲಕ್ಷ ಸಾಲ ಮಾಡಿಕೊಂಡಿದ್ರಂತೆ. ಹೀಗಾಗಿ ಸಾಲ ತೀರಿಸಲಾಗದೇ ಮೂರು ದಿನಗಳ ಹಿಂದೆ ತಿಮ್ಮಣ್ಣ ಆತ್ಮಹತ್ಯೆ ಮಾಡಿಕೊಂಡಿದ್ದು, ತಡವಾಗಿ ಪ್ರಕರಣ ಬೆಳಕಿಗೆ ಬಂದಿದೆ. ಇದನ್ನೂ ಓದಿ : ಸ್ಟಾರ್ ನಟಿ ಪೂಜಾ ಹೆಗಡೆ ನಿದ್ದೆಗೆಡಿಸಿದ ಸಾಲು ಸಾಲು ಸೋಲು
ದುರ್ದೈವದ ಸಂಗತಿ ಅಂದ್ರೆ ತಿಮ್ಮಣ್ಣ ತಾನು ದುಡಿದು, ಸಾಲ ಮಾಡಿ ನಿರ್ಮಿಸಿದ್ದ ಹೊಸ ಮನೆ ಗೃಹ ಪ್ರವೇಶ ಇವತ್ತು ನಡೆಯಬೇಕಿತ್ತು. ಮನೆ ಗೃಹಪ್ರವೇಶಕ್ಕಾಗಿ ಬಬಲಾದಿ ಸ್ವಾಮೀಜಿಗೂ ಸಹ ಆವ್ಹಾನಿಸಲಾಗಿತ್ತಂತೆ. ಆದ್ರೆ ಹೊಸಮನೆ ಪ್ರವೇಶಕ್ಕೂ ಮುನ್ನವೇ ತಿಮ್ಮಣ್ಣ ಆತ್ಮಹತ್ಯೆಗೆ ಶರಣಾಗಿದ್ದು ಅವ್ರ ಕುಟುಂಬಸ್ಥರಲ್ಲಿ ದುಃಖ ಮಡುಗಟ್ಟುವಂತೆ ಮಾಡಿದೆ. ಇನ್ನು ಸರ್ಕಾರಿ ನೌಕರಿಯಲ್ಲಿದ್ದ ತಿಮ್ಮಣ್ಣಗೆ, ಒಳ್ಳೆ ಸ್ಯಾಲರಿ ಇತ್ತು. ನೌಕರಿ ಮೇಲೆ 16 ಲಕ್ಷ ಸಾಲ ಮಾಡಿ ಒಟ್ಟು 18 ಲಕ್ಷ ವೆಚ್ಚದಲ್ಲಿ ಮನೆ ನಿರ್ಮಿಸಿದ್ದ. ಆತನಿಗೆ ಯಾವುದೇ ದುಡ್ಡಿನ ಸಮಸ್ಯೆ ಇರಲಿಲ್ಲ. ಇದನ್ನೂ ಓದಿ : ಪ್ರಶಾಂತ್ ನೀಲ್ ಭಾರತೀಯ ಸಿನಿಮಾ ರಂಗದ ವೀರಪ್ಪನ್ : ಆರ್.ಜಿ.ವಿ
ಆತ್ಮಹತ್ಯೆ ಮಾಡಿಕೊಳ್ಳುವ ದಿನ ಅಂದ್ರೆ ನಿನ್ನೆ ರಾತ್ರಿ 10 ಗಂಟೆಗೆ ಅಮಲಝರಿ ಗ್ರಾಮದ ಸ್ನೇಹಿತನ ಪಾನ್ ಶಾಪ್‌ಗೆ ಹೋಗಿ ಮನೆ ಓಪನಿಂಗ್ ಬಗ್ಗೆ ಚರ್ಚಿಸಿದ್ದನಂತೆ. ಹೀಗಾಗಿ ತಿಮ್ಮಣ್ಣ ಆತ್ಮಹತ್ಯೆಯ ಘಟನೆ ಆತನ ಸ್ನೇಹಿತರು, ಸಂಬಂಧಿಕರಲ್ಲಿ ಆಶ್ಚರ್ಯ ತರಿಸಿದೆ. ಗೃಹ ಪ್ರವೇಶಕ್ಕೆ ಅನೇಕ ಸ್ನೇಹಿತರನ್ನು ಆಹ್ವಾನಿಸಿದ್ದ ತಿಮ್ಮಣ್ಣ ಈ ರೀತಿ ಆತ್ಮಹತ್ಯೆ ಮಾಡಿಕೊಳ್ಳುವಂತಹ ವ್ಯಕ್ತಿಯಲ್ಲ ಎನ್ನುತ್ತಿದ್ದಾರೆ ಅವರ ಸ್ನೇಹಿತರು.
ಕಿರುತೆರೆಯಲ್ಲಿ ಸಾಕಷ್ಟು ಸೀರಿಯಲ್ ಮೂಲಕ ಮನೆಮಾತಾದ ಮುದ್ದು ಮುಖದ ನಟಿ ರಶ್ಮಿ ಜಯರಾಜ್ ಮತ್ತೆ ಸುದ್ದಿಯಲ್ಲಿದ್ದಾರೆ. ತಮ್ಮ ಅಭಿಮಾನಿಗಳಿಗೆ ತಾವು ತಾಯಿಯಾಗುತ್ತಿರುವ ಸಂತಸದ ಸುದ್ದಿಯನ್ನು ಬೇಬಿ ಶವರ್ ಫೋಟೋಶೂಟ್ ಮೂಲಕ ಹಂಚಿಕೊಂಡಿದ್ದಾರೆ. ಸದ್ಯ ಈ ಫೋಟೋಶೂಟ್‌ಗಳು ವೈರಲ್ ಆಗುತ್ತಿದೆ.
ಕನ್ನಡ ಮತ್ತು ತಮಿಳು ಕಿರುತೆರೆಯಲ್ಲಿ ಗಮನ ಸೆಳೆದ ನಟಿ ರಶ್ಮಿ ಜಯರಾಜ್ ಕಳೆದ ವರ್ಷ ಫೆಬ್ರವರಿಯಲ್ಲಿ ಹಸೆಮಣೆ ಏರಿದ್ದರು. ರಿಚು ಎಂಬುವವರ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಸಾಮಾಜಿಕ ಜಾಲತಾಣದಲ್ಲಿ ಚೆಂದದ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿದ್ದಾರೆ. ಆರೇಂಜ್ ಕಲರ್ ಫೋಟೋಶೂಟ್‌ನಲ್ಲಿ ತುಂಬಾ ಮುದ್ದಾಗಿ ಕಾಣಿಸಿಕೊಂಡಿದ್ದಾರೆ.
ಅಂದಹಾಗೆ, ಕಿರುತೆರೆಯ `ಮದು ಮಗಳು’, `ಜಸ್ಟ್ ಮಾತ್ ಮಾತಲ್ಲಿ’, `ನೀ ಹಚ್ಚಿದ ಕುಂಕುಮ’, `ವಿಧಿ’, ತಮಿಳಿನ `ನಾಮ್ ಇರುವರ್ ನಮಕ್ಕು ಇರುವರ್’ ಸೀರಿಯಲ್‌ಗಳಲ್ಲಿ ಪ್ರಮುಖ ಪಾತ್ರಕ್ಕೆ ಜೀವ ತುಂಬಿದ್ದಾರೆ. ತಮಿಳಿನ ಈ ಸೀರಿಯಲ್ ಮೂಲಕ ನಟಿ ರಶ್ಮಿ ತಮಿಳಿನ ಪ್ರೇಕ್ಷಕರಿಗೂ ಹತ್ತಿರವಾಗಿದ್ದರು. ಸದ್ಯ ಬೇಬಿ ಬಂಪ್ ಫೋಟೋಶೂಟ್ ಮೂಲಕ ನಟಿ ರಶ್ಮಿ ಗಮನ ಸೆಳೆಯುತ್ತಿದ್ದಾರೆ.
ಶುಭ ವಿವಾಹ, ಜೀವನ ಚೈತ್ರ, ಲಕ್ಷ್ಮೀ ಬಾರಮ್ಮ ಸೇರಿದಂತೆ ಹತ್ತಾರು ಧಾರಾವಾಹಿಗಳಲ್ಲಿ ನಟಿಸಿರುವ ರಶ್ಮಿ ಪ್ರಭಾಕರ್ ಇಂದು ಬೆಂಗಳೂರಿನಲ್ಲಿ ನಿಖಿಲ್ ಅವರ ಜತೆ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಜೋಡಿಯ ವಿವಾಹ ಮಹೋತ್ಸವ ಬೆಂಗಳೂರಿನ ಬಸವನಗುಡಿಯಲ್ಲಿ ನೆರವೇರಿತು. ಹೊಸ ಜೋಡಿಗೆ ಶುಭ ಹಾರೈಸಲು ಕಿರುತೆರೆಯ ಅನೇಕ ಕಲಾವಿದರು ಆಗಮಿಸಿದ್ದರು. ಇದನ್ನೂ ಓದಿ : ಮಂದಣ್ಣಗಾಗಿ ಮುಂಬೈನಲ್ಲಿ ಮುಗಿಬಿದ್ದ ಫ್ಯಾನ್ಸ್ : ಬಾಲಿವುಡ್ ನಲ್ಲೂ ರಶ್ಮಿಕಾ ಹವಾ
ರಶ್ಮಿ ಪ್ರಭಾಕರ್ ಮಹಾಭಾರತ, ದರ್ಪಣ, ಮನಸೆಲ್ಲ ನೀನೇ ಶುಭಾ ವಿವಾಹ ಹಾಗೂ ತೆಲುಗಿನಲ್ಲಿ ಪೌರ್ಣಿಮಿ, ಕಾವ್ಯಾಂಜಲಿ ಸೇರಿದಂತೆ ಹತ್ತಾರು ಧಾರಾವಾಹಿಗಳಲ್ಲಿ ನಟಿಸಿದ್ದರೆ ನಿಖಿಲ್ ಕೂಡ ಈ ಹಿಂದೆ ಮಾಧ್ಯಮ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದದ್ರು. ಇದೀಗ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗಿ ಆಗಿದ್ದಾರೆ. ಮೂರು ವರ್ಷಗಳಿಂದ ಸ್ನೇಹಿತರಾಗಿದ್ದವರು ಇಂದು ಸತಿಪತಿಗಳಾಗಿದ್ದಾರೆ ನಿಖಿಲ್ ಮತ್ತು ರಶ್ಮಿ. ಇದನ್ನೂ ಓದಿ : ಬಾಲಿವುಡ್ ಎಂದರೆ ಭಾರತೀಯ ಸಿನಿಮಾರಂಗವಲ್ಲ: ಮೆಗಾಸ್ಟಾರ್ ಚಿರಂಜೀವಿಗೂ ಆಗಿತ್ತು ಅವಮಾನ
ನವೆಂಬರ್ ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿಯ ವಿವಾಹ ಅಂದುಕೊಂಡಂತೆ ಆಗಿದ್ದರೆ ಈ ಹಿಂದೆಯೇ ನಡೆಯಬೇಕಿತ್ತು. ಕೊರೊನಾ ಹಾವಳಿ ಕಾರಣದಿಂದಾಗಿ ಮುಂದೂಡಲಾಗಿತ್ತು. ಈಗ ಎರಡೂ ಕುಟುಂಬಗಳ ಹಿರಿಯರ ಸಮ್ಮುಖದಲ್ಲಿ ಸಪ್ತಪದಿ ತುಳಿದ್ದಾರೆ ಈ ಜೋಡಿ. ಇದನ್ನೂ ಓದಿ : ಕೆಜಿಎಫ್ 2 : ಗೋವಾದಲ್ಲಿ ಸಕ್ಸಸ್ ಪಾರ್ಟಿ
ಈ ಜೋಡಿಯ ಮದುವೆಗೆ ಬಂದಿದ್ದ ಕಿರುತೆರೆಯ ಕಲಾವಿದರು ಮತ್ತು ತಂತ್ರಜ್ಞರು ನವದಂಪತಿಗಳಿಗೆ ಶುಭ ಹಾರೈಸಿದ್ದಲ್ಲದೇ, ಮದುವೆಯ ನಂತರವೂ ಧಾರಾವಾಹಿ ಕ್ಷೇತ್ರದಲ್ಲಿಯೇ ರಶ್ಮಿ ಉಳಿದುಕೊಳ್ಳಲಿ ಎಂದು ಆಶಿಸಿದ್ದಾರೆ.
ಕಿರಣ್ ರಾಜ್ ಅಭಿನಯದ ” ಕನ್ನಡತಿ” ಕೂಡ ಒಂದು. ಇಲ್ಲಿ ಅಪಾರ ಮೆಚ್ಚುಗೆ ಪಡೆದಿರುವ ಈ ಧಾರಾವಾಹಿ ಈಗ ಹಿಂದಿಗೆ ಡಬ್ ಆಗಲಿದೆ. “ಅಜ್ನಾಬಿ ಬನೇ ಹಮ್ ಸಫರ್” ಎಂಬ ಹೆಸರಿನಲ್ಲಿ Colors rishtey uk ವಾಹಿನಿಯಲ್ಲಿ ಶೀಘ್ರದಲ್ಲೇ ಆರಂಭವಾಗಲಿದೆ. ಇದನ್ನೂ ಓದಿ : ಕೆಜಿಎಫ್ 2 : ಕಿಚ್ಚ ಸುದೀಪ್ ಮತ್ತು ಯಶ್ ಮಧ್ಯೆ ತಂದಿಡುತ್ತಿದೆ ವೈರಲ್ ವಿಡಿಯೋ
ಲಾಕ್ ಡೌನ್ ಸಮಯದಲ್ಲಿ ಅಲ್ಲಿನ ಎಷ್ಟೋ ಧಾರಾವಾಹಿ ಹಾಗೂ ರಿಯಾಲಿಟಿ ಶೋಗಳು ಇಲ್ಲಿ ಡಬ್ ಆಗಿ ಪ್ರಸಾರವಾಗಲು ಆರಂಭವಾದವು. ಆಗ ನಿಜಕ್ಕೂ ಹೀಗೆ ಆದರೆ ಮುಂದೇನು? ಎಂದು ಕೆಲವರಿಗೆ ಅನಿಸಿದು ಸಹಜ. ಈಗ ಇಲ್ಲಿನ ಜನಪ್ರಿಯ ಧಾರಾವಾಹಿ “ಕನ್ನಡತಿ” ಆ ಭಾಷೆಗೆ ಡಬ್ ಆಗಿ ಪ್ರಸಾರವಾಗುತ್ತಿರುವುದು ನಿಜಕ್ಕೂ ಹೆಮ್ಮೆ. ಮರಾಠಿಯಲ್ಲೂ ಕೂಡ ಈ ಧಾರಾವಾಹಿ ರಿಮೇಕ್ ಆಗಿದೆ. ನಟ ಕಿರಣ್ ರಾಜ್ ಗೆ ಅಪಾರ ಅಭಿಮಾನಿಗಳನ್ನು ತಂದು ಕೊಟ್ಟ ಧಾರಾವಾಹಿ “ಕನ್ನಡತಿ”. ಅದರಲ್ಲೂ ಯುವಪೀಳಿಗೆಯವರಿಗಂತೂ ಕಿರಣ್ ರಾಜ್ ಕಂಡರೆ ಅಪಾರ ಅಭಿಮಾನ. ಅಂತಹ ಮನಮೋಹಕ ನಟ ಕಿರಣ್ ರಾಜ್. ಇವರ ನಟನೆಯ ಧಾರಾವಾಹಿಯೊಂದು ಹಿಂದಿಗೆ ಡಬ್ ಆಗುತ್ತಿರುವುದು ಕಿರಣ್ ರಾಜ್ ಅವರಿಗೂ ಖುಷಿ ತಂದಿದೆಯಂತೆ. ಇದನ್ನೂ ಓದಿ : ಕೆಜಿಎಫ್-2 ಸಿನಿಮಾ ವೀಕ್ಷಣೆ ವೇಳೆ ಹಾರಿದ ಗುಂಡು- ಯುವಕನ ಹೊಟ್ಟೆಗೆ ಗಾಯ
ಹಾಗೆ ನೋಡಿದರೆ ಕಿರಣ್ ರಾಜ್ ಅವರಿಗೆ ಹಿಂದಿ ಕಿರುತೆರೆ ಹೊಸದೇನಲ್ಲ. ಈ ಹಿಂದೆ ಕೂಡ ಹಿಂದಿ ಕಲರ್ಸ್ ವಾಹಿನಿಯ ಸಾಕಷ್ಟು ಧಾರಾವಾಹಿ ಹಾಗೂ ರಿಯಾಲಿಟಿ ಶೋಗಳಲ್ಲಿ ಕಿರಣ್ ರಾಜ್ ಅಭಿನಯಿಸಿದ್ದಾರೆ. ಕಿರುತೆರೆಯಷ್ಟೇ ಹಿರಿತೆರೆಯಲ್ಲೂ ಬ್ಯುಸಿಯಾಗಿರುವ ಕಿರಣ್ ರಾಜ್ ಅಭಿನಯದ ಬಹು ನಿರೀಕ್ಷಿತ ” ಬಡ್ಡೀಸ್” ಚಿತ್ರದ ಟೀಸರ್ ಏಪ್ರಿಲ್ 25 ರಂದು ಬಿಡುಗಡೆಯಾಗಲಿದೆ.
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಇಂದಿನಿಂದ ‘ರಾಜಿ’ ಹೆಸರಿನ ಹೊಸ ಧಾರಾವಾಹಿ ಶುರುವಾಗಲಿದೆ. ಕರ್ಣ ಮತ್ತು ರಾಜೇಶ್ವರಿಯ ಪ್ರೀತಿ ಮತ್ತು ಸ್ನೇಹದ ಕುರಿತಾದ ಈ ಧಾರಾವಾಹಿ ಉತ್ತಮ ಕತೆ ಮತ್ತು ಕಲಾವಿದರಿಂದಾಗಿ ಕನ್ನಡ ಕಿರುತೆರೆ ವೀಕ್ಷಕರಲ್ಲಿ ಈಗಾಗಲೇ ಕುತೂಹಲ ಮೂಡಿಸಿದೆ. ಇದನ್ನೂ ಓದಿ : ಪುನೀತ್ ಬ್ಯಾನರ್ ಗಾಗಿ ನಡೆಯಿತು ಮಾರಾಮಾರಿ : ರಾಡ್ ಹಿಡಿದುಕೊಂಡು ಗಲಾಟೆ
ತಂದೆ ತಾಯಿ ಇಲ್ಲದ ಮುಗ್ಧ ಹುಡುಗಿ ರಾಜಿಯನ್ನು ಭಾಸ್ಕರ್ ಮತ್ತು ಸರಸ್ವತಿ ಶಾನುಭೋಗ ದಂಪತಿ ತಮ್ಮ ಮನೆಯಲ್ಲೇ ಬೆಳಸಿರುತ್ತಾರೆ. ಭಾಸ್ಕರ್ ಶಾನುಭೋಗ ರಾಜಿಯನ್ನು ತಮ್ಮ ಮನೆ ಮಗಳಂತೆ ಕಂಡರೂ, ಸರಸ್ವತಿ ಮತ್ತು ಶಾನುಭೋಗರ ಕಿರಿ ಮಗ ಕರ್ಣನನ್ನು ಹೊರತುಪಡಿಸಿ ಅವರ ಕುಟುಂಬದವರಿಗೆ ರಾಜಿ ಮನೆಕೆಲಸದಾಕೆ ಮಾತ್ರ. ಭಾಸ್ಕರ್ ಶಾನುಭೋಗರ ಮೂವರು ಗಂಡು ಮಕ್ಕಳು ಮತ್ತು ಒಬ್ಬ ಮಗಳ ಪೈಕಿ, ಮೊದಲನೆಯವನು ರವೀಶ್, ಮೃದು ಸ್ವಭಾವದ ಇವನಿಗೆ ತನ್ನ ಹೆಂಡತಿ ಶಾಂಭವಿ ಹೇಳಿದ್ದೆ ವೇದವಾಕ್ಯ. ಇನ್ನು ಎರಡನೇ ಮಗ ಉದಯ್ ಶಾಂಭವಿ ಅತ್ತಿಗೆ ತರಾನೇ ಸದಾ ತಂದೆಯ ಆಸ್ತಿ ಕಬಳಿಸುವ ಹೊಂಚು ಹಾಕುತ್ತಿರುತ್ತಾನೆ. ಉದಯ್ ಪತ್ನಿ ದೇವಕಿ ಶಾಂಭವಿ ಕೇಡಿತನದಲ್ಲಿ ಭಾಗಿಯಾಗಿದ್ರೂ ತನ್ನ ಮಂದ ಬುದ್ಧಿಯಿಂದಾಗಿ ಒಂದಿಲ್ಲೊಂದು ಎಡವಟ್ಟು ಮಾಡಿಕೊಳ್ಳುತ್ತಿರುತ್ತಾಳೆ ಹೀಗಾಗಿ ದೇವಕಿ ಇದ್ದ ಕಡೆ ಕಾಮಿಡಿ ಇರಲಿದೆ. ಶಂಕರ್ ಭಾಸ್ಕರ್ ಶಾನುಭೋಗರ ಮಗಳು ರೇಣು ಆಗಾಗ ತಂದೆಯ ಆಸ್ತಿಯಲ್ಲಿ ತನ್ನ ಪಾಲಿನ ಬಗ್ಗೆ ತಕರಾರು ಮಾಡುತ್ತಿರುತ್ತಾಳೆ, ರೇಣು ಪತಿ ಮನೋಜ್ ಆರ್ಥಿಕವಾಗಿ ಶ್ರೀಮಂತನಲ್ಲದಿದ್ದರೂ, ಒಳ್ಳೆಯ ಮನಸಿನವನಾಗಿರುತ್ತಾನೆ. ಇದನ್ನೂ ಓದಿ : ಕೆಜಿಎಫ್ 2 : ನಾಲ್ಕೇ ದಿನಕ್ಕೆ 550 ಕೋಟಿ ಬಾಚಿದ ರಾಕಿಭಾಯ್
ಸಾನ್ವಿ, ವಿರಾಟ್ ಮತ್ತು ಲಚ್ಚಜ್ಜಿಯ ಪಾತ್ರಗಳು, ‘ರಾಜಿ’ ಧಾರಾವಹಿಯ ಕತೆಯ ತಿರುವಿಗೆ ಕಾರಣವಾಗುತ್ತವೆ. ಭಾಸ್ಕರ್ ಶಾನುಭೋಗರ ಕಿರಿಯ ಮಗ ಕರ್ಣ ಲಂಡನ್ನಿಗೆ ತನ್ನ ವಿದ್ಯಾಭ್ಯಾಸಕ್ಕಾಗಿ ಹೋಗಿರುತ್ತಾನೆ. ಕರ್ಣ ಮತ್ತು ರಾಜಿ ಬಾಲ್ಯದ ಗೆಳೆಯರು, ಕರ್ಣನಿಗೆ ಇದು ಸ್ನೇಹವಾಗಿದ್ದರೂ ರಾಜಿಗೆ ಕರ್ಣನ ಬಗ್ಗೆ ಸ್ನೇಹಕ್ಕೂ ಮಿಗಿಲಾದ ಭಾವವಿರುತ್ತದೆ. ಇವರಿಬ್ಬರ ಸ್ನೇಹ, ಪ್ರೀತಿಯಾಗಿ ಬದಲಾಗುತ್ತಾ ಅನ್ನೋದೆ ‘ರಾಜಿ’ ಧಾರಾವಾಹಿಯ ಕಥಾಹಂದರ. ಇದನ್ನೂ ಓದಿ : ಕ್ಷಮಿಸಿ ಬಿಡು ಬಸವಣ್ಣ : ವಿಡಿಯೋ ರಿಲೀಸ್ ಮಾಡಿದ ಹಂಸಲೇಖ
ರಾಜಿಯ ಪಾತ್ರದಲ್ಲಿ ಸೌಂದರ್ಯ ಕಾಣಿಸಿಕೊಳ್ಳಲಿದ್ದಾರೆ, ಇನ್ನು ಕಾರ್ತಿಕ್ ಕರ್ಣನ ಪಾತ್ರದಲ್ಲಿದ್ದಾರೆ. ಹಿರಿಯ ನಟರಾದ ಮುಖ್ಯಮಂತ್ರಿ ಚಂದ್ರು ಮತ್ತು ವೈಜಯಂತಿ ಕಾಶಿ, ಭಾಸ್ಕರ್ ಮತ್ತು ಸರಸ್ವತಿ ಶಾನುಭೋಗರ ಪಾತ್ರವಹಿಸಿದ್ದಾರೆ. ನಿನಾಸಂ ಅಶ್ವಥ್ ರಾಜಿಯ ತಂದೆ ವೀರೇಶ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಉಳಿದಂತೆ, ನಧಾಫ್ , ರಜನಿ, ಛಾಯಾ, ದಿನೇಶ್, ಸುಧಾ ಹೆಗ್ಡೆ, ಶಿಲ್ಪಾ, ಅಮೃತಾ ನಾಯ್ಕ್, ವಿನಾಯಕ ಮತ್ತು ಸಂದೀಪ್ ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ‘ರಾಜಿ’ಯ ಶೀರ್ಷಿಕೆ ಗೀತೆ ಸುಮಧುರವಾಗಿದ್ದು, ಸಾಮಾಜಿಕ ತಾಣದಲ್ಲಿ ಬಹಳಷ್ಟು ಸದ್ದು ಮಾಡಿದೆ. ಶಾನುಭೋಗ ಮನೆತನದ ಪ್ರೀತಿಯ ಆಸ್ತಿ ‘ರಾಜಿ’, ಏಪ್ರಿಲ್ 18ರಿಂದ ಸಂಜೆ 7.30ಕ್ಕೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.
ಕಿರುತೆರೆ ನಟಿ, ನಿರೂಪಕಿ ಅನುಪಮಾ ಗೌಡ ಮಾದರಿಯ ಕೆಲಸ ಮಾಡುವ ಮೂಲಕ ಇತರರಿಗೆ ಪ್ರೇರಣೆಯಾಗಿದ್ದಾರೆ. ವರ್ಷಗಳಿಂದ ಬೆಳೆಸಿದ್ದ ತಲೆಗೂದಲನ್ನು ಕ್ಯಾನ್ಸರ್ ರೋಗಿಗಳಿಗೆ ದಾನ ಮಾಡುವ ಮೂಲಕ ಅವರ ಮುಖದಲ್ಲಿ ಮಂದಹಾಸ ಮೂಡಿಸಿದ್ದಾರೆ. ಈ ಕುರಿತು ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದು, ‘ನನ್ನ ವೃತ್ತಿ ಜೀವನದಲ್ಲಿ ಉದ್ದನೆಯ ಜಡೆ ನನ್ನ ಆತ್ಮವಿಶ್ವಾಸದ ಕುರುಹು ಆಗಿತ್ತು. ಈ ತಲೆಗೂದಲನ್ನು ಪ್ರೀತಿಯಿಂದ ಪೋಷಣೆ ಮಾಡುತ್ತಾ ಬಂದಿದ್ದೆ. ಇದೀಗ ಅನೇಕರಿಗೆ ಈ ತಲೆಗೂದಲಿನ ಅವಶ್ಯಕತೆ ಇರುವುದು ಕಂಡು ಬಂತು. ಹಾಗಾಗಿ ನಾನು ಅವುಗಳನ್ನು ಕತ್ತರಿಸಿ, ಅಗತ್ಯವಿದ್ದರಿಗೆ ಕೊಡಲು ಮುಂದಾಗಿದ್ದೇನೆ. ಈ ಕೆಲಸ ಮಾಡಲು ನನಗೆ ಹೆಮ್ಮೆ ಅನಿಸುತ್ತಿದೆ’ ಎಂದು ಅವರು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ : ‘ಸಲಾರ್’ ಸಿನಿಮಾದಲ್ಲಿ ‘ಉಗ್ರಂ’ ಛಾಯೆ ಇದೆ: ಪ್ರಶಾಂತ್ ನೀಲ್
ತಾವು ತಲೆಗೂದಲನ್ನು ಕಟ್ ಮಾಡಿಸಿದ್ದರ ಫೋಟೋವನ್ನೂ ಕೂಡ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದು, ಇದೊಂದು ಚಿಕ್ಕ ಕೆಲಸವಾದರೂ, ತಲೆಗೂದಲು ಅವಶ್ಯವಿದ್ದವರ ಮುಖದಲ್ಲಿ ನಗು ನೋಡಿದಾಗ ಒಂದು ರೀತಿ ಸಾರ್ಥಕ ಭಾವ ಮೂಡುತ್ತದೆ ಎಂದೂ ಅವರು ಬರೆದುಕೊಂಡಿದ್ದಾರೆ. ತಾವು ಇಂಥದ್ದೊಂದು ಪೋಸ್ಟ್ ಹಾಕುತ್ತಿರುವುದು ಕೇವಲ ಬೇರೆಯವರಿಗೂ ಪ್ರೇರಣೆ ಆಗಲಿ ಎನ್ನುವ ಕಾರಣಕ್ಕಾಗಿಯೇ ಹೊರತು, ಯಾವುದೇ ಪ್ರಚಾರಕ್ಕಾಗಿ ಅಲ್ಲ’ ಎನ್ನುವುದನ್ನು ಅವರು ಸ್ಪಷ್ಟ ಪಡಿಸಿದ್ದಾರೆ. ಇದನ್ನೂ ಓದಿ : EXCLUSIVE INTERVIEW: ಗೆಲ್ಲಲು ಹೊರಟವನಿಗೆ ಸೋಲು ದೊಡ್ಡದಾಗಬಾರದು: ಯಶ್
ಹಳ್ಳಿ ದುನಿಯಾ ಶೋ ಮೂಲಕ ಟಿವಿ ರಂಗಕ್ಕೆ ಎಂಟ್ರಿ ಕೊಟ್ಟ ಅನುಪಮಾ ಗೌಡ, ಆ ನಂತರ ಧಾರಾವಾಹಿಗಳಲ್ಲಿ ನಟಿಸಿದರು. ನಂತರ ನಿರೂಪಣೆಯತ್ತ ಮುಖ ಮಾಡಿದರು. ಈಗ ಅನುಪಮಾ ಗೌಡ ಸ್ಟಾರ್ ನಿರೂಪಕಿ ಮತ್ತು ಬೇಡಿಕೆಯ ನಿರೂಪಕಿಯಾಗಿ ಬೆಳೆದಿದ್ದಾರೆ. ಕಷ್ಟದ ದಿನಗಳನ್ನು ಎದುರಿಸಿ ಇದೀಗ ತಮ್ಮಿಷ್ಟದಂತೆ ಬದುಕುವಷ್ಟು ಅನುಪಮಾ ಗೌಡ ವೃತ್ತಿ ಬದುಕನ್ನು ಕಟ್ಟಿಕೊಂಡಿದ್ದಾರೆ.
ಈ ಹಿಂದೆ ಅನೇಕ ತಾರೆಯರು ಕ್ಯಾನ್ಸರ್ ರೋಗಿಗಳಿಗಾಗಿಯೇ ತಮ್ಮ ತಲೆಗೂದಲನ್ನು ದಾನ ಮಾಡಿದ್ದಾರೆ. ಈ ಹಿಂದೆ ಕಾರುಣ್ಯ ರಾಮ್, ಕಾವ್ಯ ಶಾಸ್ತ್ರಿ ಸೇರಿದಂತೆ ಹಲವು ನಟಿಯರು ಇಂತಹ ಕೆಲಸ ಮಾಡುವ ಮೂಲಕ ಮಾದರಿಯಾಗಿದ್ದರು.