Tag: Television Association

  • ಅಪ್ಪು ಚಿತ್ರದ ದೃಶ್ಯಗಳನ್ನ ವೇದಿಕೆಯಲ್ಲಿ ಮರುಸೃಷ್ಟಿದ ಕಿರುತೆರೆ ಕಲಾವಿದರ ತಂಡ

    ಅಪ್ಪು ಚಿತ್ರದ ದೃಶ್ಯಗಳನ್ನ ವೇದಿಕೆಯಲ್ಲಿ ಮರುಸೃಷ್ಟಿದ ಕಿರುತೆರೆ ಕಲಾವಿದರ ತಂಡ

    -ಕಿರುತೆರೆ ಕಲಾವಿದರಿಂದ ಅಪ್ಪು ಅಮರ ಕಾರ್ಯಕ್ರಮ

    ಬೆಂಗಳೂರು: ದಿ. ನಟ ಪುನೀತ್ ರಾಜ್‍ಕುಮಾರ್ ಅವರಿಗೆ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ವತಿಯಿಂದ ಕಿರುತೆರೆ ಕಲಾವಿದರು, ತಂತ್ರಜ್ಞರು ಕಾರ್ಯಕ್ರಮವೊಂದನ್ನು ಆಯೋಜಸಿ ಅಪ್ಪುಗೆ ನಮನ ಸಲ್ಲಿಸಿದ್ದಾರೆ.

    ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ವತಿಯಿಂದ ಅಪ್ಪು ಅಮರ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ನ್ಯಾಷನಲ್ ಕಾಲೇಜ್‍ನ ಹೆಚ್.ಎನ್ ಕಲಾಕ್ಷೇತ್ರದಲ್ಲಿ ನಡೆಯುತ್ತಿರುವ ಕಾರ್ಯಕ್ರಮವನ್ನು ಕಿರುತೆರೆಯ ಕಲಾವಿದರು, ತಂತ್ರಜ್ಞಾನರು ಆಯೋಜಿಸಿದ್ದಾರೆ. ಬಾಲ ನಟನಾಗಿ ನಟಿಸಿದ ಪುನೀತ್  ರಾಜ್‍ಕುಮಾರ್ ಚಿತ್ರಗಳನ್ನ ದೃಶ್ಯಗಳನ್ನ ವೇದಿಕೆಯಲ್ಲಿ ಮರುಸೃಷ್ಟಿದ ಕಿರುತರೆ ಕಲಾವಿದರ ತಂಡ, ಬೆಟ್ಟದ ಹೂ, ಎರಡು ನಕ್ಷತ್ರ, ಭಕ್ತ ಪ್ರಹ್ಲಾದ ಸೇರಿದಂತೆ ವೇದಿಕೆ ಮೇಲೆ ಹಲವು ಚಿತ್ರಗಳ ದೃಶ್ಯಗಳಿಗೆ ನಟಿಸುವ ಮೂಲಕ ಅಪ್ಪುಗೆ ವಿಶೇಷ ನಮನ ಸಲ್ಲಿಸಲಾಗಿದೆ.

    ರಾಘವೇಂದ್ರ ರಾಜ್ ಕುಮಾರ್ ಸೇರಿದಂತೆ ದೊಡ್ಮನೆ ಸದಸ್ಯರು ಭಾಗಿ ಆಗಿದ್ದಾರೆ. ಲಕ್ಷ್ಮಿ, ಗೋವಿಂದ್ ರಾಜ್ ಕಿರುತೆರೆಯ ಬಹಳಷ್ಟು ಕಲಾವಿದರು, ತಂತ್ರಜ್ಞಾನರು, ಹಿರಿಯ ನಟಿ ಉಮಾಶ್ರೀ, ಆರ್. ಅಶೋಕ್ ಭಾಗಿ ಆಗಿದ್ದಾರೆ.

  • ಮಾರ್ಚ್ 19 ರಿಂದ 31ರವರೆಗೆ ಸೀರಿಯಲ್ ಶೂಟಿಂಗ್ ಬಂದ್

    ಮಾರ್ಚ್ 19 ರಿಂದ 31ರವರೆಗೆ ಸೀರಿಯಲ್ ಶೂಟಿಂಗ್ ಬಂದ್

    ಬೆಂಗಳೂರು: ದೇಶದೆಲ್ಲೆಡೆ ಕೊರೊನಾ ವೈರಸ್ ಜನರನ್ನು ಭಯಭೀತರನ್ನಾಗಿ ಮಾಡಿದೆ. ಈಗಾಗಲೇ ಜನರು ಮನೆಯಿಂದ ಹೊರಗಡೆ ಬರಲು ಭಯಪಡುತ್ತಿದ್ದಾರೆ. ಹೀಗಾಗಿ ಒಂದು ವಾರಗಳ ಕಾಲ ಸಿನಿಮಾ ಥಿಯೇಟರ್ ಮತ್ತು ಮಾಲ್‍ಗಳನ್ನು ಮುಚ್ಚುವಂತೆ ಸರ್ಕಾರ ಆದೇಶ ಹೊರಡಿಸಿದೆ. ಇದರ ಬೆನ್ನಲ್ಲೆ ಇದೀಗ ಕಿರುತೆರೆಯ ಲೋಕದಲ್ಲೂ ಕೊರೊನಾ ಭೀತಿ ಎದುರಾಗಿದೆ.

    ಸಿನಿಮಾ, ಧಾರಾವಾಹಿ ಮತ್ತು ಡಾಕ್ಯುಮೆಂಟರಿ ಚಿತ್ರೀಕರಣಕ್ಕೆ ಬ್ರೇಕ್ ಹಾಕುವ ತೀರ್ಮಾನಕ್ಕೆ ಟೆಲಿವಿಷನ್ ಅಸೋಷಿಯೇಷನ್ ಮತ್ತು ಸಾಕಷ್ಟು ಸಂಘಗಳು ಭಾನುವಾರ ಒಟ್ಟಿಗೆ ಸಭೆ ನಡೆಸಿ ತೀರ್ಮಾನಕ್ಕೆ ಬಂದಿದೆ.

    ಈ ಬಗ್ಗೆ ನಿರ್ಮಾಪಕರಿಗೆ ಮೂರು ದಿನಗಳ ಕಾಲಾವಕಾಶವನ್ನು ನೀಡಲು ಸಹ ಟೆಲಿವಿಷನ್ ಅಸೋಷಿಯೇಷನ್ ನಿರ್ಣಯ ತೆಗೆದುಕೊಂಡಿದೆ. ಭಾನುವಾರ ನಡೆದ ಮೀಟಿಂಗ್‍ನಲ್ಲಿ ಮಾರ್ಚ್ 19 ರಿಂದ ಮಾರ್ಚ್ 31ರ ವರೆಗೆ ಚಿತ್ರೀಕರಣವನ್ನು ಬಂದ್ ಮಾಡಲು ತೀರ್ಮಾನ ಕೈಗೊಂಡಿದ್ದಾರೆ.

    ಈಗಾಗಲೇ ಕಿರುತೆರೆ ಕಲಾವಿದರಿಗೆ ಮಾಹಿತಿ ತಿಳಿಸಿದ್ದೇವೆ. ನಮ್ಮ ಶೂಟಿಂಗ್‍ನಲ್ಲಿ 100 ಕಲಾವಿದರೂ ಒಂದೇ ಕಡೆ ಸೇರುವುದಿಲ್ಲ. ಆದರೂ ಯಾರಿಗಾದರೂ ಆರೋಗ್ಯ ಸಮಸ್ಯೆ ಕಂಡು ಬಂದರೆ ಶೂಟಿಂಗ್‍ಗೆ ಬರಬೇಡಿ ಎಂದು ತಿಳಿಸಿದ್ದೇವೆ. ಸೀರಿಯಲ್ ಪ್ರತಿದಿನ ಪ್ರಸಾರವಾಗಬೇಕು. ಹೀಗಾಗಿ ನಾವು ದಿನ ಶೂಟಿಂಗ್ ಮಾಡಬೇಕು. ಆದ್ದರಿಂದ ನಿರ್ಮಾಪಕರಿಗೆ ಮೂರು ದಿನಗಳ ಕಾಲಾವಕಾಶ ನೀಡಿದ್ದೇವೆ ಎಂದು ಟೆಲಿವಿಷನ್ ಅಸೋಷಿಯೇಷನ್ ಅಧ್ಯಕ್ಷರಾದ ರವಿಕಿರಣ್ ಮಾಹಿತಿ ನೀಡಿದರು.