Tag: Television Actor

  • ಅಡುಗೆ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ನಟ ಸಮೀರ್ ಶರ್ಮಾ ಮೃತದೇಹ ಪತ್ತೆ

    ಅಡುಗೆ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ನಟ ಸಮೀರ್ ಶರ್ಮಾ ಮೃತದೇಹ ಪತ್ತೆ

    – ಎರಡು ದಿನಗಳ ಹಿಂದೆಯೇ ಆತ್ಮಹತ್ಯೆ?

    ಮುಂಬೈ: ಕಿರುತೆರೆಯ ಪ್ರತಿಭಾನ್ವಿತ ನಟ ಸಮೀರ್ ಶರ್ಮಾ (44) ತಮ್ಮ ಮನೆಯಲ್ಲಿಯೇ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

    ಸಮೀರ್ ಶರ್ಮಾ ಮುಂಬೈನ ಪಶ್ಚಿಮ ಮಲಾಡ್‍ನ ರಸ್ತೆಯಲ್ಲಿರುವ ನೇಹಾ ಸಿಹೆಚ್‍ಎಸ್ ಬಿಲ್ಡಿಂಗ್‍ನ ಫ್ಲ್ಯಾಟ್ ನಲ್ಲಿ ವಾಸವಾಗಿದ್ದರು. ಆದರೆ ಬುಧವಾರ ರಾತ್ರಿ ಫ್ಲ್ಯಾಟ್‍ನ ಅಡುಗೆ ಮನೆಯಲ್ಲಿ ನೇಣು ಬಿಗಿದ ಸೀತಿಯಲ್ಲಿ ಪತ್ತೆಯಾಗಿದ್ದಾರೆ.

    ಸಮೀರ್ ಮನೆಯಿಂದ ದುರ್ವಾಸನೆ ಬಂದ ಹಿನ್ನೆಲೆ ನಿವಾಸಿಗಳು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಬಾಗಿಲು ಒಡೆದು ನೋಡಿದಾಗ ಸಮೀರ್ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಸಾವನ್ನಪ್ಪಿದ ಎರಡು ದಿನ ಮೇಲಾಗಿದ್ದರಿಂದ ಶವ ಕೊಳೆಯಲಾರಂಭಿಸಿತ್ತು.

    ಕಳೆದ ಫೆಬ್ರವರಿಯಲ್ಲಿ ಅವರು ಈ ಫ್ಲ್ಯಾಟನ್ನು ಬಾಡಿಗೆಗೆ ಪಡೆದಿದ್ದರು. ಸಮೀರ್ ದೇಹದ ಸ್ಥಿತಿಯನ್ನು ನೋಡಿದರೆ ಅವರು ಎರಡು ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.

    ಮೇಲ್ನೋಟಕ್ಕೆ ಆತ್ಮಹತ್ಯೆ ಎಂದು ತಿಳಿದು ಬಂದಿದೆ ಎಂದು ಪೊಲೀಸರು ಹೇಳಿದ್ದು, ಸಮೀರ್ ಮನೆಯಲ್ಲಿ ಯಾವುದೇ ಡೆತ್ ನೋಟ್ ಲಭ್ಯವಾಗಿಲ್ಲ. ನೆರೆಹೊರೆಯವರ ಪ್ರಕಾರ ಸಮೀರ್ ಕಳೆದ ಕೆಲ ದಿನಗಳಿಂದ ಒಂಟಿಯಾಗಿರುತ್ತಿದ್ದರು. ಹೊರಗಡೆ ಹೆಚ್ಚು ಕಾಣಿಸಿಕೊಳ್ಳುತ್ತಿರಲಿಲ್ಲ ಎಂದು ಹೇಳಿದ್ದಾರೆ.

    ಸದ್ಯಕ್ಕೆ ಪೊಲೀಸರು ಈ ಕುರಿತು ಪ್ರಕರಣ ದಾಖಲಿಕೊಂಡು ತನಿಖೆ ಮುಂದುವರಿಸಿದ್ದಾರೆ. ಸಮೀರ್ ಸೂಪರ್ ಹಿಟ್ ಧಾರಾವಾಹಿಗಳಾದ ‘ದಿಲ್ ಕ್ಯಾ ಚಾಹ್ತಾ’, ‘ಕಹಾನಿ ಘರ್ ಘರ್ ಕೀ’, ‘ಸಾಸ್ ಕಭೀ ಬಹು ಥೀ’ ಗಳಲ್ಲಿ ನಟಿಸಿದ್ದರು. ‘ಯೇ ರಿಶ್ತೆ ಹೈ ಪ್ಯಾರ್ ಕೇ’ ಧಾರಾವಾಹಿಯ ಶೌರ್ಯ ಪಾತ್ರ ಸಮೀರ್ ಗೆ ಹೆಚ್ಚು ಜನಪ್ರಿಯತೆ ತಂದು ಕೊಟ್ಟಿತ್ತು.

  • 7 ವರ್ಷದಿಂದ ನಟಿ ಮೇಲೆ ನಿರಂತರ ಅತ್ಯಾಚಾರ – ಕಿರುತೆರೆ ನಟ ಅರೆಸ್ಟ್

    7 ವರ್ಷದಿಂದ ನಟಿ ಮೇಲೆ ನಿರಂತರ ಅತ್ಯಾಚಾರ – ಕಿರುತೆರೆ ನಟ ಅರೆಸ್ಟ್

    – ಎಂಜಿನಿಯರಿಂಗ್ ಓದುತ್ತಿದ್ದಾಗ ಸಲುಗೆ
    – ಖಾಸಗಿ ಫೋಟೋ ಅಪ್ಲೋಡ್ ಮಾಡ್ತೀನಿ
    – ಮುಖಕ್ಕೆ ಆ್ಯಸಿಡ್ ಹಾಕ್ತೀನಿ
    – ಯುವತಿಗೆ ದೂರು ನೀಡದಂತೆ ಬೆದರಿಕೆ

    ಚಿಕ್ಕಬಳ್ಳಾಪುರ: 7 ವರ್ಷಗಳ ನಂತರ ಮೈಸೂರು ಮೂಲದ ನಟನ ವಿರುದ್ಧ ಬೆಂಗಳೂರಿನ ನಟಿ ಅತ್ಯಾಚಾರ ದೂರು ನೀಡಿದ್ದಾರೆ.

    ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಧಾರಾವಾಹಿಯಲ್ಲಿ ನಟಿಸಿರುವ ನಟಿ ಕಿರುತೆರೆಯಲ್ಲಿ ನಟ ಹಾಗೂ ಪ್ರೊಡೆಕ್ಷನ್ ಮ್ಯಾನೆಜರ್ ಆಗಿರುವ ತೇಜಸ್ ಗೌಡ ಅಲಿಯಾಸ್ ಅಭಿಗೌಡ ವಿರುದ್ಧ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

    ದೂರಿನಲ್ಲಿ ಏನಿದೆ?
    ತಾನು 2012ರಲ್ಲಿ ಚಿಕ್ಕಬಳ್ಳಾಪುರ ನಗರ ಹೊರವಲಯದ ಖಾಸಗಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ವ್ಯಾಸಂಗ ಮಾಡುತ್ತಿದ್ದಾಗ ತನ್ನ ಸಹಪಾಠಿಯಾಗಿದ್ದ ತೇಜಸ್ ಗೌಡ ತನ್ನನ್ನು ಪರಿಚಯ ಮಾಡಿಕೊಂಡು ಪ್ರೀತಿಸುವುದಾಗಿ ಸಲುಗೆಯಿಂದ ವರ್ತಿಸಿದ್ದ. ಆ ಸಮಯದಲ್ಲಿ ತನ್ನೊಂದಿಗೆ ತನ್ನ ಇಚ್ಛೆಗೆ ವಿರುದ್ಧವಾಗಿ ಅತ್ಯಾಚಾರ ಮಾಡಿದ್ದಾನೆ. ಇದನ್ನು ನಾನು ವಿರೋಧಿಸಿದ್ದಕ್ಕೆ, ನಿನ್ನನ್ನು ಮದುವೆಯಾಗುತ್ತೇನೆ ಎಂದು ನಂಬಿಸಿ ಮತ್ತೆ ಆನೇಕ ಬಾರಿ ಅತ್ಯಾಚಾರ ಎಸಗಿದ್ದಾನೆ.

    ಇದೇ ರೀತಿ ಅವಕಾಶ ಸಿಕ್ಕಾಗಲೆಲ್ಲಾ ನನ್ನ ಜೊತೆ ಅಭಿಗೌಡ ದೈಹಿಕ ಸಂಪರ್ಕ ಬೆಳೆಸುತ್ತಿದ್ದನು. ನಂತರ ಇಬ್ಬರು ಖಾಸಗಿ ವಾಹಿನಿಯಲ್ಲಿ ಕೆಲಸಕ್ಕೆ ಸೇರಿಕೊಂಡೆವು. ಆ ಸಮಯದಲ್ಲಿ ನನಗೆ ಬೇರೋಬ್ಬರ ಜೊತೆ ಸಂಬಂಧ ಇದೆ ಹೇಳಿ ತುಂಬಾ ಗಲಾಟೆ ನಡೆಸಿ ನನ್ನ ಮೇಲೆ ಹಲ್ಲೆ ನಡೆಸಿದ್ದ. ಆಗಲೂ ನಾನು ಆತನ ವಿರುದ್ಧ ದೂರು ನೀಡಿರಲಿಲ್ಲ. ಒಂದು ವಾರದ ನಂತರ ಅಂದರೆ ಡಿಸೆಂಬರ್ 2018ರಲ್ಲಿ ನಾನು ರೂಮಿನಲ್ಲಿದ್ದಾಗ ಮತ್ತೆ ಬಂದು ನಿನ್ನನ್ನು ಮದುವೆಯಾಗವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದ. ಇದರಿಂದ ನಾನು ಗರ್ಭಿಣಿಯಾದೆ.

    ನಾನು ಗರ್ಭಿಣಿಯಾಗಿದ್ದೇನೆ ಎಂಬ ವಿಷಯ ತೇಜಸ್‍ಗೆ ತಿಳಿಸಿದರೆ, ನೀನು ಯಾರೊಂದಿಗೋ ಇದ್ದು ಗರ್ಭಿಣಿಯಾಗಿದ್ದೀಯಾ. ನನ್ನ ಜೊತೆ ಯಾಕೆ ಹೇಳುತ್ತೀಯಾ ಎಂದು ಗಲಾಟೆ ಮಾಡಿ ಮಾತ್ರೆ ತಿನ್ನು ಸರಿ ಹೋಗುತ್ತೆ ಎಂದು ಹೇಳಿ ಬೈದಿದ್ದಾನೆ. ನಂತರ ನಾನು ಬೆಂಗಳೂರು ನಗರದ ಆಸ್ಪತ್ರೆಯೊಂದರಲ್ಲಿ ಗರ್ಭಪಾತ ಮಾಡಿಸಿಕೊಂಡಿರುತ್ತೇನೆ. ಇಷ್ಟೆಲ್ಲ ಆದರೂ ಅಭಿಗೌಡ ನನ್ನನ್ನು ಮದುವೆಯಾಗುತ್ತಾನೆ ಎಂದು ನಂಬಿ ಇಷ್ಟು ದಿನ ಸುಮ್ಮನಿದ್ದೆ. ಆದರೆ ಈಗ ಆತ ಬೇರೆ ಹುಡುಗಿಯನ್ನು ಮದುವೆಯಾಗುವುದಾಗಿ ತಿಳಿಸಿದ್ದಾನೆ.

    ಈ ಬಗ್ಗೆ ನಾನು ಗಲಾಟೆ ಮಾಡಿದ್ದಕ್ಕೆ ಏನ್ ಮಾಡಿಕೊಳ್ಳುತ್ತಿಯೋ ಮಾಡಿಕೋ. ಎಲ್ಲವನ್ನು ನಾನು ಎದುರಿಸುತ್ತೇನೆ. ನೀನೇನಾದರೂ ದೂರು ಕೊಟ್ಟರೆ ನಮ್ಮಿಬ್ಬರ ಖಾಸಗಿ ಫೋಟೋ ಹಾಗೂ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುತ್ತೇನೆ. ನೀನು ಸೀರಿಯಲ್‍ನಲ್ಲಿ ನಟಿಸೋಕೆ ಆಗದಂತೆ ಮುಖಕ್ಕೆ ಆ್ಯಸಿಡ್ ಹಾಕಿ ಸಾಯಿಸುತ್ತೇನೆ ಎಂದು ಹೆದರಿಸಿದ್ದಾನೆ. ಹೀಗಾಗಿ 2012ರಿಂದಲೂ ಮದುವೆಯಾಗುವುದಾಗಿ ನಂಬಿಸಿ ನಿರಂತರ ಅತ್ಯಾಚಾರ ಮಾಡಿ ಈಗ ನನಗೆ ಮೋಸ ಮಾಡಿ ಬೇರೆ ಹುಡುಗಿಯೊಂದಿಗೆ ಮದುವೆಯಾಗಲು ಮುಂದಾಗಿರುವ ಅಭಿಗೌಡ ವಿರುದ್ಧ ಕ್ರಮ ಕೈಗೊಳ್ಳಬೇಕು.

    ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಚಿಕ್ಕಬಳ್ಳಾಪುರ ನಗರ ಪೊಲೀಸರು ಆರೋಪಿ ತೇಜಸ್ ಗೌಡ ಅಲಿಯಾಸ್ ಅಭಿಗೌಡನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

  • ಸ್ನೇಹಿತೆಯನ್ನು ಅನುಚಿತವಾಗಿ ಮುಟ್ಟಿದ್ದ ವ್ಯಕ್ತಿ ಮೇಲೆ ಹಲ್ಲೆ- ಕಿರುತೆರೆ ನಟ ಅರೆಸ್ಟ್

    ಸ್ನೇಹಿತೆಯನ್ನು ಅನುಚಿತವಾಗಿ ಮುಟ್ಟಿದ್ದ ವ್ಯಕ್ತಿ ಮೇಲೆ ಹಲ್ಲೆ- ಕಿರುತೆರೆ ನಟ ಅರೆಸ್ಟ್

    ಮುಂಬೈ: ತನ್ನ ಸ್ನೇಹಿತೆಯನ್ನು ಅನುಚಿತವಾಗಿ ಸ್ಪರ್ಶಿಸಿದ ಸೆಲೂನ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಆರೋಪದ ಅಡಿ ಕಿರುತೆರೆ ನಟನನ್ನು ಪೊಲೀಸರು ಬಂಧಿಸಿದ್ದಾರೆ.

    ಅಭಿಮನ್ಯು ಚೌಧರಿ ಬಂಧನಕ್ಕೊಳಗಾದ ನಟ. ಹೆಡ್ ಮಸಾಜ್ ಮಾಡುವ ನೆಪದಲ್ಲಿ ಸೆಲೂನ್ ಸಿಬ್ಬಂದಿ ಅಭಿಮನ್ಯು ಗೆಳತಿಯನ್ನು ಅನುಚಿತವಾಗಿ ಸ್ಪರ್ಶಿಸಿದ್ದಾನೆ. ಈ ವಿಷಯವನ್ನು ಯುವತಿ ತನ್ನ ಗೆಳೆಯ ಅಭಿಮನ್ಯು ಬಳಿ ಹೇಳಿಕೊಂಡಿದ್ದಾಳೆ. ವಿಚಾರ ತಿಳಿದು ಕೋಪಗೊಂಡ ಅಭಿಮನ್ಯು ತನ್ನ ಸ್ನೇಹಿತನ ಜೊತೆ ಸೇರಿ ಸಿಬ್ಬಂದಿ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ.

    ನಾವು ಅಭಿಮನ್ಯು ಹಾಗೂ ಆತನ ಗೆಳೆಯನನ್ನು ಬಂಧಿಸಿದ್ದೇವೆ. ಅಲ್ಲದೆ ಇಬ್ಬರನ್ನು ಸೆಲೂನ್‍ಗೆ ಕರೆಸಿಕೊಂಡಿದ್ದ ಯುವತಿ ವಿರುದ್ಧ ಕೂಡ ಪ್ರಕರಣ ದಾಖಲಿಸಿಕೊಂಡಿದ್ದೇವೆ ಎಂದು ಮುಂಬೈನ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

    ಯುವತಿ ಮೇ 16ರಂದು ತನ್ನ ಗೆಳೆಯ ಅಭಿಮನ್ಯುನನ್ನು ಕರೆಸಿ ಸಿಬ್ಬಂದಿಯ ವರ್ತನೆಯ ಬಗ್ಗೆ ಹೇಳಿದ್ದಾಳೆ. ಆಗ ಅಭಿಮನ್ಯು ತನ್ನ ಗೆಳೆಯನ ಜೊತೆ ಸೇರಿ ಸಿಬ್ಬಂದಿಯನ್ನು ಥಳಿಸಿ, ಚಾಕುವಿನಿಂದ ಹಲ್ಲೆ ಮಾಡಿದ್ದಾನೆ.

    ಅಭಿಮನ್ಯು ಸಿಬ್ಬಂದಿ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೋ ಅಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ ಆಗಿದೆ. ಅಭಿಮನ್ಯು ಹಾಗೂ ಸಿಬ್ಬಂದಿಯ ಜಗಳದ ನಡುವೆ ಅಲ್ಲಿದ್ದ ಬೇರೆ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಅಭಿಮನ್ಯು ಗೆಳೆಯ ನೀಡಿದ ದೂರಿನ ಮೇರೆಗೆ ಪೊಲೀಸರು ಸೆಲೂನ್ ಸಿಬ್ಬಂದಿ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಕರಣ್ ಒಬೆರಾಯ್ ಅತ್ಯಾಚಾರ ಪ್ರಕರಣ – ದೂರು ಕೊಟ್ಟ ರೂಪದರ್ಶಿಗೆ ಚಾಕು ಇರಿತ

    ಕರಣ್ ಒಬೆರಾಯ್ ಅತ್ಯಾಚಾರ ಪ್ರಕರಣ – ದೂರು ಕೊಟ್ಟ ರೂಪದರ್ಶಿಗೆ ಚಾಕು ಇರಿತ

    ಮುಂಬೈ: ಕಿರುತೆರೆ ನಟ ಮತ್ತು ನಿರೂಪಕ ಕರಣ್ ಒಬೆರಾಯ್ ತನ್ನ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂದು ದೂರು ನೀಡಿದ್ದ ಮಾಡೆಲ್‍ಗೆ ಶನಿವಾರ ಬೆಳಗ್ಗೆ ಇಬ್ಬರು ಅಪರಿಚಿತರು ಚಾಕು ಹಾಕಿ ಪರಾರಿಯಾಗಿದ್ದಾರೆ.

    ಶನಿವಾರ ಬೆಳಗ್ಗೆ ವಾಕಿಂಗ್ ಎಂದು ಹೋಗಿದ್ದ 34 ವರ್ಷದ ಮಾಡೆಲ್‍ಗೆ ಬೈಕಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಕೈಯನ್ನು ಹರಿತವಾದ ಅಯುಧದಿಂದ ಇರಿದು ಆಸಿಡ್ ಹಾಕುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ.

    2017ರಲ್ಲಿ ನನ್ನ ಮೇಲೆ ಕರಣ್ ಅತ್ಯಾಚಾರ ಮಾಡಿದ್ದಾನೆ ಎಂದು ಮಾಡೆಲ್ ಮೇ 6 ರಂದು ದೂರು ನೀಡಿದ್ದಳು. ಈ ದೂರಿನ ಪ್ರಕಾರ ಕರಣ್ ಪೋಲಿಸರು ಬಂಧಿಸಿದ್ದು 14 ದಿನಗಳ ನ್ಯಾಯಾಂಗ ಬಂಧನದಲ್ಲಿದ್ದಾನೆ. ಈ ಪ್ರಕರಣ ಕೋರ್ಟ್‍ನಲ್ಲಿ ಇರುವಾಗಲೇ ಲೋಖಂಡ್ವಾಲಾ ರಸ್ತೆಯಲ್ಲಿ ಬೆಳಗ್ಗೆ 6.30ಕ್ಕೆ ವಾಕಿಂಗ್ ಹೋಗಿದ್ದ ಮಾಡೆಲ್ ಮೇಲೆ ಇಬ್ಬರು ಅಪರಿಚಿತ ದಾಳಿ ಮಾಡಿ ಚಾಕುವಿನಿಂದ ಇರಿದು ಹೋಗುವಾಗ ಒಂದು ಪತ್ರವನ್ನು ಎಸೆದು ಹೋಗಿದ್ದಾರೆ. ಇದನ್ನು ಓದಿ: ಅತ್ಯಾಚಾರ ಕೇಸ್‍ನಲ್ಲಿ ಕಿರುತೆರೆ ನಟ ಅರೆಸ್ಟ್

    ಈ ಸಮಯದಲ್ಲಿ ಮಾಡೆಲ್ ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ. ಇಬ್ಬರು ಮಹಿಳೆಯರು ಬಂದು ಸಹಾಯ ಮಾಡಿದ್ದಾರೆ. ನಂತರ ಒಶಿವಾರದ ಹಿರಿಯ ಪೊಲೀಸ್ ಅಧಿಕಾರಿ ಶೈಲೇಶ್ ಪಸಲ್ವಾರ್ ಅವರಿಗೆ ಮಾಡೆಲ್ ದೂರು ನೀಡಿದ್ದು ತನಿಖೆ ಮಾಡಲಾಗುತ್ತಿದೆ.

    ಏನಿದು ಪ್ರಕರಣ?
    ಕರಣ್ ಮಾಡೆಲ್‍ನನ್ನು ಮದುವೆ ಮಾಡಿಕೊಳ್ಳುವುದಾಗಿ ಹೇಳಿ ಅತ್ಯಾಚಾರವೆಸಗಿ ಮೋಸ ಮಾಡಿದ್ದ. ಕರಣ್ ಅತ್ಯಾಚಾರ ಮಾಡಿದಲ್ಲದೇ ವಿಡಿಯೋ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ. ಅಲ್ಲದೆ ಹಣ ನೀಡದಿದ್ದರೆ ವಿಡಿಯೋ ವೈರಲ್ ಮಾಡುವುದಾಗಿ ಮಾಡೆಲ್‍ಗೆ ಬೆದರಿಕೆ ಹಾಕಿದ್ದ. ಈ ಸಂಬಂಧ ಕರಣ್ 2017ರಲ್ಲಿ ಮುಂಬೈನ ಓಸ್ವಿಪುರದಲ್ಲಿ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಮಾಡೆಲ್ ದೂರು ನೀಡಿದ್ದಳು. ಈ ದೂರಿನ ಮೇರೆಗೆ ಓಸ್ವಿಪುರ ಠಾಣೆಯಲ್ಲಿ ಐಪಿಸಿ ಸೆಕ್ಷನ್ 376 ಹಾಗೂ 384 ರ ಆಡಿ ಪ್ರಕರಣ ದಾಖಲಾಗಿದ್ದು ಕರಣ್ ನನ್ನು ಪೊಲೀಸರು ಬಂಧಿಸಿದ್ದರು.

  • ಅತ್ಯಾಚಾರ ಕೇಸ್‍ನಲ್ಲಿ ಕಿರುತೆರೆ ನಟ ಅರೆಸ್ಟ್

    ಅತ್ಯಾಚಾರ ಕೇಸ್‍ನಲ್ಲಿ ಕಿರುತೆರೆ ನಟ ಅರೆಸ್ಟ್

    ಮುಂಬೈ: ಅತ್ಯಾಚಾರ ಮಾಡಿ ವಿಡಿಯೋ ಮಾಡಿದ ಕೇಸ್‍ನಲ್ಲಿ ಹಿಂದಿ ಕಿರುತೆರೆ ನಟ ಕರಣ್ ಒಬೆರಾಯ್‍ನನ್ನು ಮುಂಬೈನ ಓಸ್ವಿಪುರದ ಪೊಲೀಸರು ಬಂಧಿಸಿದ್ದಾರೆ.

    ಕರಣ್ ಮಾಡಲ್, ನಟಿಯನ್ನು ಮದುವೆ ಮಾಡಿಕೊಳ್ಳುವುದಾಗಿ ಹೇಳಿ ಅತ್ಯಾಚಾರವೆಸಗಿ ಮೋಸ ಮಾಡಿದ್ದ. ಕರಣ್ ಅತ್ಯಾಚಾರ ಮಾಡಿದಲ್ಲದೇ ವಿಡಿಯೋ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ. ಅಲ್ಲದೆ ಹಣ ನೀಡದಿದ್ದರೆ ವಿಡಿಯೋ ವೈರಲ್ ಮಾಡುವುದಾಗಿ ಮಾಡೆಲ್‍ಗೆ ಬೆದರಿಕೆ ಹಾಕಿದ್ದ.

    ಕರಣ್ 2017ರಲ್ಲಿ ಮುಂಬೈನ ಓಸ್ವಿಪುರದಲ್ಲಿ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಮಾಡೆಲ್ ದೂರು ನೀಡಿದ್ದಳು. ಈ ಸಂಬಂಧ ಓಸ್ವಿಪುರ ಠಾಣೆಯಲ್ಲಿ ಐಪಿಸಿ ಸೆಕ್ಷನ್ 376 ಹಾಗೂ 384 ಅಡಿ ಪ್ರಕರಣ ದಾಖಲಾಗಿದ್ದು, ಕರಣ್‍ನನ್ನು ಪೊಲೀಸರು ಬಂಧಿಸಿದ್ದಾರೆ.

    ಕರಣ್ ‘ಸ್ವಾಭಿಮಾನ’ ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದ. ಇದಾದ ಬಳಿಕ ಆತ ‘ಸಾಯಾ ಆಂಡ್ ಜಸ್ಸಿ ಜೈಸೇ ಕೋಹಿ ನಹೀ’ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ.

  • ಡೇಟಿಂಗ್ ವೆಬ್‍ಸೈಟ್‍ನಲ್ಲಿ ವಂಚಿಸುತ್ತಿದ್ದ ಕಿರುತೆರೆ ನಟ, ಪತ್ನಿ ಬಂಧನ!

    ಡೇಟಿಂಗ್ ವೆಬ್‍ಸೈಟ್‍ನಲ್ಲಿ ವಂಚಿಸುತ್ತಿದ್ದ ಕಿರುತೆರೆ ನಟ, ಪತ್ನಿ ಬಂಧನ!

    ಬೆಂಗಳೂರು: ಸಿಐಡಿ ಸೈಬರ್ ವಿಭಾಗದ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಡೇಟಿಂಗ್ ವೆಬ್‍ಸೈಟ್‍ನಲ್ಲಿ ವಂಚಿಸುತ್ತಿದ್ದ ಬೆಂಗಾಲಿ ಕಿರುತೆರೆ ನಟ ಹಾಗೂ ಆತನ ಪತ್ನಿಯನ್ನು ಬಂಧಿಸಿದ್ದಾರೆ.

    ಕುಶನ್ ಮಜುಮ್ದಾರ್ ಹಾಗೂ ಅರ್ಪಿತಾ ಮಜುಮ್ದಾರ್ ಬಂಧಿತ ಆರೋಪಿಗಳು. ಕುಶನ್ ಬೆಂಗಾಲಿಯ ಕುರುಕ್ಷೇತ್ರ ಸತಪಕ್ ಸೇರಿದಂತೆ ಅನೇಕ ಧಾರವಾಹಿಗಳಲ್ಲಿ ನಟಿಸಿದ್ದಾನೆ. ಇದೀಗ ಡೇಟಿಂಗ್ ವೆಬ್ ಸೈಟ್‍ನಲ್ಲಿ ನಕಲಿ ಖಾತೆ ತೆರೆದು ದಂಪರಿ ಬೆರೆಯವರನ್ನು ಪರಿಚಯ ಮಾಡುಕೊಂಡು ವಂಚಿಸಲು ಆರಂಭಿಸಿದ್ದರು.

    ಇದೇ ರೀತಿ ಬೆಂಗಳೂರಿನ ವ್ಯಕ್ತಿಯಿಂದ ಸುಮಾರು 60 ಲಕ್ಷ ಹಣ ವರ್ಗಾವಣೆ ಮಾಡಿಸಿಕೊಂಡಿದ್ದರು. ಅಮ್ಮನಿಗೆ ಹೃದಯ ಸಂಬಂಧಿ ಕಾಯಿಲೆ ಎಂದು ಹೇಳಿ ಹಣ ವರ್ಗಾವಣೆ ಮಾಡಿಸಿಕೊಂಡಿದ್ದರು ಎಂಬುದಾಗಿ ತಿಳಿದುಬಂದಿದೆ.

    ಸುಮಾರು 10 ವರ್ಷದಿಂದ ಇದೆ ರೀತಿಯ ಕೃತ್ಯಗಳಲ್ಲಿ ದಂಪತಿ ತೊಡಗಿದ್ದು, ಈ ಕುರಿತು ಸಿಐಡಿಯಲ್ಲಿ ದೂರು ದಾಖಲಾಗಿತ್ತು. ಸದ್ಯ ಪೊಲೀಸರು ಇಬ್ಬರನ್ನು ಬಂಧಿಸಿ 44 ಸಾವಿರ ಹಣ ವಶಪಡಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

  • ಕಿರುತೆರೆ ನಟ ಕಿರಣ್ ರಾಜ್ ವಿರುದ್ಧ ಮತ್ತೊಂದು ದೂರು ದಾಖಲು!

    ಕಿರುತೆರೆ ನಟ ಕಿರಣ್ ರಾಜ್ ವಿರುದ್ಧ ಮತ್ತೊಂದು ದೂರು ದಾಖಲು!

    ಬೆಂಗಳೂರು: ಕಿರುತೆರೆ ನಟ ಕಿರಣ್ ರಾಜ್ ವಿರುದ್ಧ ಇದೀಗ ಮತ್ತೊಂದು ದೂರು ದಾಖಲಾಗಿದೆ.

    ಈ ಹಿಂದೆ ಕಿರುಕುಳ ದೂರು ನೀಡಿದ್ದ ಯಾಸ್ಮಿನ್ ಅವರೇ ಇದೀಗ ಮತ್ತೊಂದು ದೂರು ದಾಖಲು ಮಾಡಿದ್ದಾರೆ. ಫಿಲ್ಮ್ ಇಂಡಸ್ಟ್ರಿಯಲ್ಲಿ ಒಳ್ಳೆಯ ಅವಕಾಶ ಕೊಡುಸ್ತೀನಿ ಎಂದು ಕಿರಣ್ ರಾಜ್ ಪಾಸ್ ಪೋರ್ಟ್ ಪಡೆದಿದ್ದನು. ಆದರೆ ಈಗ ಪಾಸ್ ಪೋರ್ಟ್ ನೀಡದೆ ಕಿರಣ್ ರಾಜ್ ಮತ್ತು ಆತನ ಕುಟುಂಬ ಕಿರುಕುಳ ನೀಡುತ್ತಿದ್ದಾರೆ ಎಂದು ಯಾಸ್ಮಿನ್ ಆರೋಪಿಸಿದ್ದಾರೆ.

    ಯಾಸ್ಮಿನ್ ವಿದೇಶಕ್ಕೆ ಚಿತ್ರೀಕರಣಕ್ಕೆಂದು ಹೋಗಬೇಕಿತ್ತು. ಹಾಗಾಗಿ ಕಿರಣ್ ಹತ್ತಿರ ತನ್ನ ಪಾಸ್ ಪೋರ್ಟ್ ಕೇಳಿದ್ದಾರೆ. ಆದರೆ ಕಿರಣ್ ಹಣದ ಬೇಡಿಕೆ ಇಟ್ಟು ಜೀವ ಬೆದರಿಕೆ ಹಾಕಿದ್ದಾನೆ. ಕಿರಣ್ ರಾಜ್ ಪಾಸ್ ಪೋರ್ಟ್ ಕೊಡದ ಹಿನ್ನಲೆಯಲ್ಲಿ ಕೆಲಸ ಕೈ ತಪ್ಪಿದೆ ಎಂದು ಯಾಸ್ಮಿನ್ ತಿಳಿಸಿದ್ದಾರೆ. ಇದನ್ನೂ ಓದಿ: ಕಿರುತೆರೆ ನಟ ಕಿರಣ್ ರಾಜ್ ವಿರುದ್ಧ ಎಫ್‍ಐಆರ್ ದಾಖಲು!

    ನನ್ನ ಮೇಲಿನ ದ್ವೇಷಕ್ಕೆ ನನಗೆ ಪಾಸ್‍ಪೋರ್ಟ್ ಅನ್ನು ಸರಿಯಾದ ಸಮಯಕ್ಕೆ ಕೊಡದೇ ನನ್ನ ಕೆಲಸಕ್ಕೆ, ಜೀವನದ ಅತಿ ಮುಖ್ಯವಾದ ಕೆಲಸಕ್ಕೆ ತೊಂದರೆ ಕೊಡಬೇಕೆಂದು ಹಾಗೂ ಮೋಸ ಮಾಡಬೇಕೆಂಬ ಉದ್ದೇಶದಿಂದ ಈ ರೀತಿ ಮಾಡುತ್ತಿದ್ದಾರೆ ಎಂದು ಯಾಸ್ಮಿನ್ ದೂರಿನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ರೂಪದರ್ಶಿಗೆ ವಂಚನೆ- ಕಿರುತೆರೆ ನಟ ಕಿರಣ್‍ರಾಜ್ ಅರೆಸ್ಟ್

    ಕಿರಣ್ ರಾಜ್ ವಿರುದ್ಧ 420, 506, 384 ಸೆಕ್ಷನ್ ಅಡಿಯಲ್ಲಿ ರಾಜಾರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.