ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮಧ್ಯಾಹ್ನದ ಮನರಂಜನೆಯಾಗಿ ಆರಂಭವಾದ ‘ಸುವರ್ಣ ಗೃಹಮಂತ್ರಿ’ ಎಂಬ ಹೊಸ ಬಗೆಯ ರಿಯಾಲಿಟಿ ಶೋ ಈಗಾಗಲೇ ಪ್ರೇಕ್ಷಕರ ಮನಗೆದ್ದು ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಆದರೆ ಇದೀಗ ಮತ್ತಷ್ಟು ಮೆರುಗು ನೀಡಲು ಇದೇ ಮೊದಲ ಬಾರಿಗೆ ಸುವರ್ಣ ವಾಹಿನಿಯ ಮೂಲಕ ಖ್ಯಾತ ನಟ ರವಿಶಂಕರ್ ಕಿರುತೆರೆಗೆ ಪದಾರ್ಪಣೆ ಮಾಡಿದ್ದಾರೆ. ಇನ್ಮುಂದೆ ‘ಸುವರ್ಣ ಗೃಹಮಂತ್ರಿ’ ಕಾರ್ಯಕ್ರಮದ ನಿರೂಪಣೆಯ ಜವಾಬ್ದಾರಿಯನ್ನು ನಟ ರವಿಶಂಕರ್ (Ravi Shankar) ಹೊರಲಿದ್ದಾರೆ. ವರ್ಷಗಳ ಬಳಿಕ ನಟ ರವಿ ಶಂಕರ್ ಅವರನ್ನು ಗೃಹಮಂತ್ರಿ ಪ್ರೋಮೋದಲ್ಲಿ ನೋಡಿದ ವೀಕ್ಷಕರು ಸಾಮಾಜಿಕ ಜಾಲತಾಣದಲ್ಲಿ ಸಂತಸವನ್ನು ವ್ಯಕ್ತ ಪಡಿಸಿದ್ದು, ‘ಸುವರ್ಣ ಗೃಹಮಂತ್ರಿ’ಯ ಸಂಚಿಕೆಯಲ್ಲಿ ರವಿಶಂಕರ್ ರವರ ನಿರೂಪಣೆಯನ್ನು ನೋಡಲು ಕಾತುರತೆಯಿಂದ ಕಾಯುತ್ತಿದ್ದಾರೆ.
ಸಾಮಾನ್ಯವಾಗಿ ಮನೆಯಲ್ಲಿ ಕೆಲಸ ಮಾಡೋ ಗೃಹಿಣಿಯರನ್ನು, ಹೆಣ್ಮಕ್ಕಳನ್ನು ಯಾರೂ ಗುರುತಿಸುವುದಿಲ್ಲ, ಮನೆ ಮಂದಿಯನ್ನು ಅವ್ರು ಎಷ್ಟೇ ಚೆನ್ನಾಗಿ ನೋಡ್ಕೊಂಡ್ರು ‘ಥ್ಯಾಂಕ್ ಯು’ ಅಂತನೂ ಹೇಳಲ್ಲ. ಅಂತಹ ಮನೆ ಬೆಳಗೋ ಗೃಹಿಣಿಯರನ್ನು ಗುರುತಿಸಿ, ಗಂಡ-ಹೆಂಡ್ತಿಯ ಅನ್ಯೂನ್ಯತೆಯ ಬಗ್ಗೆ ತಿಳಿದು, ಅವರಿಗೆ ಸನ್ಮಾನಿಸಿ, ಮಾತುಕತೆ ನಡೆಸಿ ಆಟದ ಜೊತೆ ರೇಷ್ಮೆ ಜೊತೆ ಮತ್ತಷ್ಟು ಬೆಲೆಬಾಳುವ ಬಹುಮಾನಗಳನ್ನು ನೀಡುವುದೇ “ಸುವರ್ಣ ಗೃಹಮಂತ್ರಿ” ಕಾರ್ಯಕ್ರಮದ ಶೈಲಿಯಾಗಿದೆ.
ಕರ್ನಾಟಕದ ಗೃಹಿಣಿಯರಿಗಾಗಿಯೇ ಸಿದ್ಧವಾಗಿರೋ ಈ ಕಾರ್ಯಕ್ರಮದಲ್ಲಿ ಇನ್ಮುಂದೆ ನಟ ರವಿಶಂಕರ್ ರವರು ಅಣ್ಣನ ಸ್ಥಾನದಲ್ಲಿ ನಿಂತು ತವರು ಮನೆ ಉಡುಗೊರೆಯಾಗಿ ರೇಷ್ಮೆ ಸೀರೆಯನ್ನು ಕೊಟ್ಟು ಮನೆ ಗೃಹಿಣಿಯನ್ನು ಹಾರೈಸಿ, ರಾಣಿ ಸೀಟಿನಲ್ಲಿ ಕೂರಿಸಿ ಗೌರವಿಸಲಿದ್ದಾರೆ. ಅಷ್ಟೇ ಅಲ್ಲದೆ ಅವರ ಮನೆಗೆ ಬಂದಿರುವ ಆಪ್ತ ಸಂಬಂಧಿಕರಿಗೆ ಹಾಗೂ ಸ್ನೇಹಿತರಿಗೂ ಆಟವನ್ನು ಆಡಿಸಿ ಬಹುಮಾನಗಳನ್ನು ನೀಡಲಿದ್ದಾರೆ. ಇದೇ ಸೋಮವಾರದಿಂದ ಶನಿವಾರ ಮಧ್ಯಾಹ್ನ 1 ಗಂಟೆಗೆ ಈ ಸಂಚಿಕೆಗಳು ಪ್ರಸಾರವಾಗಲಿವೆ.
ಅಭಿಮಾನಿಗಳನ್ನು ಸದಾ ರಂಜಿಸುತ್ತಾ, ಮನೆಮಾತಾಗಿದ್ದ ಕಿರುತೆರೆಯ (Television) ಕಲಾವಿದ ನಾಪತ್ತೆಯಾಗಿದ್ದಾನೆ (Missing). ತನ್ನ ಮಗನನ್ನು ಹುಡುಕಿಕೊಡುವಂತೆ ಅವರ ಕುಟುಂಬ ಪೊಲೀಸ್ ಇಲಾಖೆಗೆ ಮನವಿ ಮಾಡಿಕೊಂಡಿದೆ. ತನ್ನ ಮಗ ಕಾಣೆಯಾಗಿರೋದಕ್ಕೆ ಉದ್ದೇಶಿತ ಕೈವಾಡದ ಶಂಕೆಯನ್ನು ಅವರು ವ್ಯಕ್ತ ಪಡಿಸಿದ್ದಾರೆ.
ಚಿತ್ರೀಕರಣಕ್ಕೆ ತೆರಳುತ್ತೇನೆಂದು ಮನೆಯಲ್ಲಿ ಹೇಳಿ ಮನೆಯಿಂದ ಹೊರಟ ತಾರಕ್ ಮೆಹ್ತಾ ಚಶ್ಮಾ ಧಾರಾವಾಹಿ ಖ್ಯಾತಿಯ ನಟ ಗುರುಚರಣ್ ಸಿಂಗ್ (Gurucharan) ನಾಪತ್ತೆಯಾಗಿದ್ದಾರೆ. ದೆಹಲಿಯಿಂದ ಮುಂಬೈಗೆ ತೆರಳಿದ್ದ ಅವರು ಏರ್ಪೋರ್ಟ್ನಿಂದ ಕಾಣೆಯಾಗಿದ್ದಾರೆ ಎಂದು ಅವರ ತಂದೆ ಹರ್ಜಿತ್ ಸಿಂಗ್ ದೂರು ದಾಖಲಿಸಿದ್ದಾರೆ.
ಐವತ್ತರ ವಯಸ್ಸಿನ ನಟ ಮುಂಬೈ ತಲುಪಿಲ್ಲ ಎಂದು ಗೊತ್ತಾಗುತ್ತಿದ್ದಂತೆಯೇ ಕುಟುಂಬಸ್ಥರು ಅವರ ಮೊಬೈಲ್ ಗೆ ಕಾಲ್ ಮಾಡಿದರೂ, ಸ್ವಿಚ್ ಆಫ್ ಬಂದಿರೋದು ಆತಂಕಕ್ಕೆ ಕಾರಣವಾಗಿದೆ. ದೆಹಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ನಾಪತ್ತೆಯಾದ ನಟನಿಗಾಗಿ ಹುಡುಕಾಟ ಆರಂಭಿಸಿದ್ದಾರೆ.
ಎರಡು ಭಾಗವಾಗಿ ಮೂಡಿ ಬಂದಿರುವ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ನಾಳೆ ಜೀ ಕನ್ನಡ ವಾಹಿನಿಯಲ್ಲಿ (Television) ಪ್ರಸಾರವಾಗಲಿದೆ. ಸಂಜೆ 7.30ಕ್ಕೆ ಪಾರ್ಟ್ ಎ ಅನ್ನು ಪ್ರಸಾರ ಮಾಡುವುದಾಗಿ ವಾಹಿನಿಯು ಪ್ರೊಮೋ ರಿಲೀಸ್ ಮಾಡಿದೆ. ಕಿರುತೆರೆಯಲ್ಲಿ ನೋಡಲು ಕಾಯುತ್ತಿದ್ದವರಿಗೆ ಸಹಜವಾಗಿಯೇ ಖುಷಿ ಆಗಿದೆ.
ರಕ್ಷಿತ್ ಶೆಟ್ಟಿ ನಟಿಸಿರುವ ಸಪ್ತ ಸಾಗರದಾಚೆ ಎಲ್ಲೋ ಪಾರ್ಟ್ ಬಿ ಒಟಿಟಿಯಲ್ಲಿ (OTT) ಲಭ್ಯವಿದೆ. ಜನವರಿ 25ರ ಮಧ್ಯರಾತ್ರಿಯಿಂದಲೇ ಅಮೆಜಾನ್ ಪ್ರೈಂ ವಿಡಿಯೋದಲ್ಲಿ ಚಿತ್ರವನ್ನು ಸ್ಟ್ರೀಮಿಂಗ್ ಮಾಡಲಾಗುತ್ತಿದೆ. ಈ ಸಿನಿಮಾದ ಎ ಮತ್ತು ಬಿ ಪಾರ್ಟ್ ಎರಡನ್ನೂ ಪ್ರೇಕ್ಷಕರು ಒಪ್ಪಿಕೊಂಡಿದ್ದರು. ಬಾಕ್ಸ್ ಆಫೀಸಿನಲ್ಲೂ ಗೆದ್ದಿದ್ದವು. ಹಾಗಾಗಿ ಕಿರುತೆರೆಯಲ್ಲಿ ಚಿತ್ರವನ್ನು ಪ್ರೇಕ್ಷಕರು ಹೇಗೆ ತಗೆದುಕೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.
ಕೇವಲ ಪ್ರೇಕ್ಷಕರು ಮಾತ್ರವಲ್ಲ, ಸೆಲೆಬ್ರಿಟಿಗಳು ಈ ಸಿನಿಮಾವನ್ನು ಒಪ್ಪಿಕೊಂಡಿದ್ದರು. ಹೆಸರಾಂತ ನಟ ಪ್ರಕಾಶ್ ರಾಜ್ (Prakash Raj), ತಾವು ಮೆಚ್ಚಿದ ಸಿನಿಮಾಗಳ ಬಗ್ಗೆ ಆಗಾಗ್ಗೆ ಬರೆಯುತ್ತಲೇ ಇರುತ್ತಾರೆ. ರಕ್ಷಿತ್ ಶೆಟ್ಟಿ ನಟನೆಯ ‘ಸಪ್ತಸಾಗರದಾಚೆ ಎಲ್ಲೋ’ ಸಿನಿಮಾ ನೋಡಿ ಸಂಭ್ರಮಿಸಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಸಿನಿಮಾ ಬಗ್ಗೆ, ‘ಸಪ್ತ ಸಾಗರದಾಚೆ ಎಲ್ಲೋ.. ಆಹಾ.. ಒಂದು ಸುಂದರ ದೃಶ್ಯಕಾವ್ಯ ಅನುಭವ. ಡೋಂಟ್ ಮಿಸ್’ ಎಂದು ಬರೆದುಕೊಂಡಿದ್ದರು.
ರಕ್ಷಿತ್ ಶೆಟ್ಟಿ, ನಿರ್ದೇಶಕ ಹೇಮಂತ್ ರಾವ್, ಚೈತ್ರಾ ಆಚಾರ್ಯ, ರುಕ್ಮಿಣಿ, ಚರಣ್ ರಾಜ್ ಹೀಗೆ ಸಿನಿಮಾದ ಕಲಾವಿದರು ಮತ್ತು ತಂತ್ರಜ್ಞರಿಗೆ ತಮ್ಮ ಬರಹವನ್ನು ಟ್ಯಾಗ್ ಮಾಡಿದ್ದರು. ಇಡೀ ತಂಡಕ್ಕೆ ಇಂಥದ್ದೊಂದು ಸಿನಿಮಾ ಕೊಟ್ಟಿದ್ದಕ್ಕೆ ಧನ್ಯವಾದಗಳನ್ನೂ ಪ್ರಕಾಶ್ ರಾಜ್ ಅರ್ಪಿಸಿದ್ದರು.
ಕೇವಲ ಕನ್ನಡದಲ್ಲಿ ಮಾತ್ರವಲ್ಲ, ‘ಸಪ್ತಸಾಗರದಾಚೆ ಎಲ್ಲೋ’ (Sapta Sagaradacche Yello) ತೆಲುಗು ನೆಲದಲ್ಲೂ ಸದ್ದು ಮಾಡಿತ್ತು. ಸ್ಯಾಂಡಲ್‌ವುಡ್‌ನಲ್ಲಿ ಕಮಾಲ್ ಮಾಡಿದ ಈ ಸಿನಿಮಾ, ಈಗ ತೆಲುಗಿನಲ್ಲೂ (Tollywood) ಅತ್ಯುತ್ತಮ ಪ್ರತಿಕ್ರಿಯೆಯನ್ನು ಕಂಡಿತ್ತು. ದೃಶ್ಯ ಕಾವ್ಯಕ್ಕೆ ಕನ್ನಡಿಗರು ಫಿದಾ ಆಗಿದ್ದರು. ಮನು- ಪ್ರಿಯಾ ಜೋಡಿಯ ಪ್ರೇಮ್ ಕಹಾನಿ ನೋಡಿ ಪ್ರೇಕ್ಷಕರು ಚಪ್ಪಾಳೆ ತಟ್ಟಿದ್ದರು.
‘ಕವಲುದಾರಿ’ ಖ್ಯಾತಿಯ ಹೇಮಂತ್ ನಿರ್ದೇಶನದಲ್ಲಿ ರಕ್ಷಿತ್ ಶೆಟ್ಟಿ, ರುಕ್ಮಿಣಿ ವಸಂತ್, ಅಚ್ಯುತ್ ಕುಮಾರ್, ಪವಿತ್ರಾ ಲೋಕೇಶ್, ರಮೇಶ್ ಇಂದಿರಾ, ಅವಿನಾಶ್ ಸೇರಿದಂತೆ ಹಲವರು ನಟಿಸಿದ್ದಾರೆ. ರಕ್ಷಿತ್ ಶೆಟ್ಟಿ ನಿರ್ಮಾಣ ಮಾಡಿದ್ದಾರೆ.
ಹಿಂದಿ ಕಿರುತೆರೆಯ ಸ್ಟಾರ್ ಸಿಸ್ಟರ್ಸ್ ಎಂದು ಖ್ಯಾತರಾಗಿದ್ದ ಡಾಲಿ ಸೋಹಿ (Dolly Sohi) ಮತ್ತು ಅಮನ್ ದೀಪ್ ಸೋಹಿ (Aman Deep Sohi) ಕೆಲವೇ ಗಂಟೆಗಳ ಅಂತರದಲ್ಲಿ ಮೃತಪಟ್ಟಿದ್ದಾರೆ (Death). ಈ ಸುದ್ದಿ ಹಿಂದಿ ಕಿರುತೆರೆ ಲೋಕಕ್ಕೆ ಶಾಕ್ ನೀಡಿದೆ. ಅಮನ್ ದೀಪ್ ಅವರು ಜಾಂಡಿಸ್ ನಿಂದ ಬಳಲುತ್ತಿದ್ದರೆ, ಡಾಲಿ ಸೋಹಿ ಕ್ಯಾನ್ಸರ್ ನಿಂದ ಬಳಲುತ್ತಿದ್ದರು.
ಹಲವು ದಿನಗಳಿಂದ ಜಾಂಡಿಸ್ ಗಾಗಿ ಅಮನ್ ದೀಪ್ ಚಿಕಿತ್ಸೆ ಪಡೆಯುತ್ತಿದ್ದರು, ಕೊನೆಗೂ ಅವರಿಗೆ ಚಿಕಿತ್ಸೆ ಫಲಕಾರಿಯಾಗಿಲ್ಲ. ಈ ಸುದ್ದಿ ಅವರ ಕುಟುಂಬಕ್ಕೆ ಆಘಾತ ಮೂಡಿಸಿತ್ತು. ನಿನ್ನೆ ಅಮನ್ ದೀಪ್ ನಿಧನರಾದ ಸುದ್ದಿಯನ್ನು ಅವರ ಸಹೋದರ ಬಹಿರಂಗ ಪಡಿಸಿದ್ದರು. ಇದಾದ ಕೆಲವೇ ಗಂಟೆಗಳಲ್ಲೇ ಡಾಲಿ ಕೂಡ ನಿಧನರಾಗಿದ್ದಾರೆ.
2023ರಲ್ಲಿ ಡಾಲಿ ಗರ್ಭಕಂಠ ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದರು. ಅಂದಿನಿಂದ ನಿಯಮಿತವಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಅಷ್ಟೇ ಅವರ ಆರೋಗ್ಯ ಹದಗೆಟ್ಟಿರಲಿಲ್ಲ ಎಂದು ಅವರ ಸಹೋದರ ತಿಳಿಸಿದ್ದಾರೆ. ಇಂದು ಇಬ್ಬರೂ ಸಹೋದರಿಯರ ಅಂತ್ಯಕ್ರಿಯೆ ನಡೆಯಲಿದೆ.
ಕಲಾಶ್, ಸಿಂಧೂರ್ ಕಿ ಕಿಮತ್ ಸೇರಿದಂತೆ ಸಾಕಷ್ಟು ಧಾರಾವಾಹಿಗಳಲ್ಲಿ ಈ ಸಹೋದರಿಯರು ನಟಿಸಿದ್ದಾರೆ. ಕಿರುತೆರೆಯಲ್ಲೇ ಹೆಚ್ಚೆಚ್ಚು ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಕಿರುತೆರೆಯ ಅನೇಕರು ಈ ಜೋಡಿ ಸಾವಿಗೆ ಕಂಬನಿ ಮಿಡಿದಿದ್ದಾರೆ.
ಟಿಪಿಎಲ್ 3ನೇ (TPL) ಸೀಸನ್‌ಗೆ ಅಧಿಕೃತ ಚಾಲನೆ ಸಿಕ್ಕಿದೆ. ಹುಬ್ಬಳ್ಳಿ ಕೆ.ಎಸ್.ಸಿ.ಎ ಮೈದಾನದಲ್ಲಿ ನಿನ್ನೆಯಿಂದ ಪಂದ್ಯಾವಳಿಗಳು ಪ್ರಾರಂಭವಾಗಿವೆ. ಕಲಾವಿದರು ಮತ್ತು ತಂತ್ರಜ್ಞರ ಬದುಕಿಗೆ ಆಸರೆಯಾಗುವ ಉದ್ದೇಶದಿಂದ ಓ1 ಕ್ರಿಕೆಟ್ ಅಕಾಡೆಮಿಯ ಬಿಆರ್ ಸುನಿಲ್ ಕುಮಾರ್ ಕಳೆದ ಎರಡು ವರ್ಷಗಳಿಂದ ಟೆಲಿವಿಷನ್ ಪ್ರೀಮಿಯರ್ ಲೀಗ್ (Television Premier League) ನಡೆಸುತ್ತಾ ಬಂದಿದ್ದು, ಈಗಾಗಲೇ ಯಶಸ್ವಿಯಾಗಿ 2 ಸೀಸನ್ ಮುಕ್ತಾಯಗೊಂಡಿದೆ. ನಿನ್ನೆಯಿಂದ 3ನೇ ಸೀಸನ್ ಶುರುವಾಗಿದ್ದು, ಮಾರ್ಚ್ 3 ರವರೆಗೆ ಟೆಲಿವಿಷನ್ ಪ್ರೀಮಿಯರ್ ಲೀಗ್ ನಡೆಯಲಿದೆ.
ಹುಬ್ಬಳ್ಳಿಯ ರಾಜನಗರದ ಕೆ.ಎಸ್.ಸಿ.ಎ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿದ್ದು, ಮೊದಲ ದಿನ ನಡೆದ ಪಂದ್ಯದಲ್ಲಿ ಅಶ್ವಸೂರ್ಯ ರೈಡರ್ಸ್ ಹಾಗೂ ಜಿಎಲ್ ಆರ್ ವಾರಿಯರ್ಸ್ ಹಾಗೂ ರಾಸು ವಾರಿಯರ್ ತಂಡಗಳು ಜಯಗಳಿಸಿವೆ.
ಯಾವ ಯಾವ ತಂಡಗಳು ಭಾಗಿ?
ಅಶ್ವಸೂರ್ಯ ರೈಡರ್ಸ್, ಗೋಲ್ಡನ್ ಈಗಲ್, ಕೆಕೆಆರ್ ಮೀಡಿಯಾ ಹೌಸ್, ಬಯೋಟಾಪ್ ಲೈಫ್ ಸೆವಿಯರ್, ಎವಿಆರ್ ಟಸ್ಕರ್ಸ್, ರಾಸು ವಾರಿಯರ್, ಭಜರಂಗಿ ಬಾಯ್ಸ್, ದಿ ಬುಲ್ ಸ್ಕ್ವಾಡ್, ಇನ್ಸೇನ್ ಕ್ರಿಕೆಟ್ ಟೀಂ, ಜಿಎಲ್ಆರ್ ವಾರಿಯರ್ಸ್ ಸೇರಿದಂತೆ ಒಟ್ಟು 10 ಟೀಮ್ ಗಳು ಭಾಗವಹಿಸಿದ್ದು, 170 ಸೆಲೆಬ್ರಿಟಿಗಳು ಈ ಕಾರ್ಯಕ್ರಮಕ್ಕೆ ಸಾಥ್ ಕೊಟ್ಟಿದ್ದಾರೆ. ಈ 10 ತಂಡಗಳಿಗೂ ಅಂಬಾಸಿಡರ್ ಹಾಗೂ ಓನರ್‌ಗಳಿದ್ದಾರೆ. ಎವಿಆರ್ ಗ್ರೂಪ್ಸ್ ಹೆಚ್ ವೆಂಕಟೇಶ್ ರೆಡ್ಡಿ ಹಾಗೂ ಅರವಿಂದ್ ವೆಂಕಟೇಶ್ ರೆಡ್ಡಿ ಟೈಟಲ್ ಸ್ಪಾನ್ಸರ್ ಮಾಡಿದ್ದಾರೆ.
ಅಶ್ವಸೂರ್ಯ ರೈಡರ್ಸ್ ತಂಡಕ್ಕೆ ಹರ್ಷ ಸಿಎಂ ಗೌಡ ನಾಯಕ. ರಂಜಿತ್ ಕುಮಾರ್ ಎಸ್ ಓನರ್, ಜಿಎಲ್‌ಆರ್ ವಾರಿಯರ್ಸ್ ಟೀಂಗೆ ಲೂಸ್ ಮಾದ ಯೋಗಿ (Loose Madha Yogi) ನಾಯಕನಾದರೆ ರಾಜೇಶ್ ಎಲ್ ಓನರ್ ಆಗಿದ್ದಾರೆ. ಇನ್ಸೇನ್ ಕ್ರಿಕೆಟ್ ಟೀಂಗೆ ರವಿಶಂಕರ್ ಗೌಡ ನಾಯಕ-ಫೈಜಾನ್ ಖಾನ್ ಓನರ್, ದಿ ಬುಲ್ ಸ್ಕ್ವಾಡ್ ತಂಡಕ್ಕೆ ಶರತ್ ಪದ್ಮನಾಭ್ ನಾಯಕನಾದರೆ ಮೋನಿಶ್ ಓನರ್ ಆಗಿದ್ದಾರೆ. ಭಜರಂಗಿ ಬಾಯ್ಸ್ ಟೀಂಗೆ ಸಾಗರ್ ಬಿಳಿಗೌಡ ನಾಯಕನಾಗಿದ್ದು, ಸ್ವಸ್ತಿಕ್ ಆರ್ಯ ಓನರ್ ಆಗಿದ್ದಾರೆ.
ರಾಸು ವಾರಿಯರ್ಸ್ ಟೀಂಗೆ ದೀಕ್ಷಿತ್ ಶೆಟ್ಟಿ (Dheekshith Shetty) ನಾಯಕ-ರಘು ಭಟ್ ಹಾಗೂ ಸುಗುಣ ಓನರ್, ಎವಿಆರ್ ತಂಡಕ್ಕೆ ಚೇತನ್ ಸೂರ್ಯ ನಾಯಕ – ಅರವಿಂದ್ ವೆಂಕಟ್ ರೆಡ್ಡಿ ಓನರ್, ಬಯೋಟಾಪ್ ಲೈಫ್ ಸೆವಿಯರ್ ಅಲಕಾ ನಂದ ಶ್ರೀನಿವಾಸ್ ನಾಯಕ-ವಿಶ್ವನಾಥ್, ಪ್ರಸನ್ನ ಓನರ್, ಕೆಕೆಆರ್ ಮೀಡಿಯಾ ಹೌಸ್ ಗೆ ಅರುಣ್ ರಾಮ್ ಗೌಡ ನಾಯಕ-ಲಕ್ಷ್ಮಿಕಾಂತ್ ರೆಡ್ಡಿ ಓನರ್, ಗೋಲ್ಡನ್ ಈಗಲ್ ವಿಹಾನ್ ನಾಯಕ-ಕುಶಾಲ್ ಗೌಡ ಒಡೆತನದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಟಿಪಿಎಲ್ ರಾಯಭಾರಿಯಾಗಿ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ (Ragini Dwivedi) ಇದ್ದು, ಪ್ರಮುಖ ನಟರಾದ ಲೂಸ್ ಮಾದ ಯೋಗಿ, ರವಿಶಂಕರ್ ಗೌಡ ಟಿಪಿಎಲ್ 3ನಲ್ಲಿ ಆಡುತ್ತಿರುವುದು ವಿಶೇಷ.
ಕಲಾವಿದರು ಮತ್ತು ತಂತ್ರಜ್ಞರ ಬದುಕಿಗೆ ಆಸರೆಯಾಗುವ ಉದ್ದೇಶದಿಂದ N1 ಕ್ರಿಕೆಟ್ ಅಕಾಡೆಮಿಯ ಬಿಆರ್ ಸುನಿಲ್ ಕುಮಾರ್ ಕಳೆದ ಎರಡು ವರ್ಷಗಳಿಂದ ಟೆಲಿವಿಷನ್ (Television) ಪ್ರೀಮಿಯರ್ ಲೀಗ್ (Premier League) ನಡೆಸುತ್ತಾ ಬಂದಿದ್ದಾರೆ. ಈಗಾಗಲೇ ಯಶಸ್ವಿಯಾಗಿ 2 ಸೀಸನ್ ಮುಕ್ತಾಯಗೊಂಡಿದ್ದು, ಇದೀಗ ಟಿಪಿಎಲ್ ಮೂರನೇ ಸೀಸನ್ ಆರಂಭಕ್ಕೆ ದಿನಗಣನೆ ಶುರುವಾಗಿದೆ. ವಾಣಿಜ್ಯ ನಗರಿ ಹುಬ್ಬಳ್ಳಿ ಕಿರುತೆರೆ ಕಲಾವಿದರ ಕ್ರಿಕೆಟ್ (Cricket) ಪಂದ್ಯಾವಳಿಗೆ ಸಾಕ್ಷಿಯಾಗಲಿದೆ. ಹುಬ್ಬಳ್ಳಿ ಕೆ.ಎಸ್.ಸಿ.ಎ ಮೈದಾನದಲ್ಲಿ ಫೆಬ್ರವರಿ 28 ರಿಂದ ಮಾರ್ಚ್ 3 ರವರೆಗೆ ಟೆಲಿವಿಷನ್ ಪ್ರೀಮಿಯರ್ ಲೀಗ್ ನಡೆಯಲಿದೆ. ಕಿರುತೆರೆಯ ಕಲಾವಿದರು ಪಂದ್ಯಾವಳಿಯಲ್ಲಿ ಭಾಗಿಯಾಗಲಿದ್ದಾರೆ. ಈ ಹಿನ್ನೆಲೆ ಬೆಂಗಳೂರಿನ ಪ್ರತಿಷ್ಟಿತ ಹೋಟೆಲ್ ನಲ್ಲಿ ಜೆರ್ಸಿ ಹಾಗೂ ಟ್ರೋಫಿ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ನಟ ಶ್ರೀಮುರಳಿ, ನೆನಪಿರಲಿ ಪ್ರೇಮ್, ತಿಲಕ್, ಸಚಿವ ಸಂತೋಷ್ ಲಾಡ್ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ಹನುಮಂತರಾಯಪ್ಪ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕಲಾವಿದರಿಗೆ ಶುಭ ಕೋರಿದರು.
ಈ ವೇಳೆ ಮಾತನಾಡಿದ ಶ್ರೀಮುರಳಿ, ಯಾವುದೇ ಇವೆಂಟ್ ಚೆನ್ನಾಗಿ ಆಗಬೇಕು ಎಂದರೆ ಪಾಸಿಟಿವ್ ಮೈಂಡ್ ಸೆಟ್, ಒಳ್ಳೆಯ ಜನ ಹಾಗೂ ಒಂದೇ ರೀತಿ ಯೋಚಿಸುವುದು ಮುಖ್ಯ. ಎಲ್ಲದಕ್ಕಿಂತ ಹೆಚ್ಚಾಗಿ ನಮ್ಮ ಅಪ್ಪು ಮಾವ ನೆರಳಲ್ಲಿ ಪ್ರೀತಿಯಲ್ಲಿ ಕಾರ್ಯಕ್ರಮ ನಡೆಯುತ್ತಿರುವುದು ಖುಷಿಯಾಗುತ್ತದೆ. ಅಪ್ಪು ಮಾವನಿಗೆ ಒಂದು ಆಸೆ ಇತ್ತು. ಎಲ್ಲರೂ ಜೊತೆಗೂಡಬೇಕು. ಬರೀ ಇಂಡಿಯಾ ಅಲ್ಲ. ವರ್ಲ್ಡ್ ವೈಡ್ ಹೋಗಬೇಕು ಎಂಬ ಕನಸು ಕಟ್ಟಿಕೊಂಡಿದ್ದರು. ಆದರೆ ಎಲ್ಲರ ಟೈಮ್ ಸೆಟ್ ಆಗುವುದಿಲ್ಲ. ಎಲ್ಲಾ ಟೆಲಿವಿಷನ್ ಕಲಾವಿದರಿಗೂ ನನ್ನದೊಂದು ಗೌರವ. ಎಲ್ಲರೂ ಚೆನ್ನಾಗಿ ಆಡಿ. ಯಾರಾದ್ರೂ ಗೆಲ್ಲಲಿ ಭಾಗವಹಿಸುವುದು ಮುಖ್ಯ. ನನಗೆ ಕ್ರಿಕೆಟ್ ಎಂದರೆ ಇಷ್ಟ. ಆದರೆ ನನಗೆ ಆಡಲು ಬರುವುದಿಲ್ಲ ಎಂದರು.
ಸಚಿವ ಸಂತೋಷ್ ಲಾಡ್ ಮಾತನಾಡಿ, ವಿಶೇಷವಾದ ಆಹ್ವಾನ ನೀಡಿದ ಸುನಿಲ್ ಅವರಿಗೆ ಧನ್ಯವಾದ. ಟಿಲಿವಿಷನ್ ಪ್ರೀಮಿಯರ್ ಲೀಗ್ ಸತತ ಮೂರನೇ ಬಾರಿಗೆ ನಡೆಯುತ್ತಿದೆ. ನನ್ನ ಅದೃಷ್ಟ ನಾನು ಈ ಬಾರಿ ಹುಬ್ಬಳ್ಳಿ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದೇನೆ. ಅಲ್ಲಿ ನಡೆಯುತ್ತಿದೆ. ನಿಮ್ಮೆಲ್ಲರಿಗೆ ಉತ್ತರ ಕರ್ನಾಟಕ ನಮ್ಮ ಟ್ವಿನ್ಸ್ ಸಿಟಿಗೆ ಸ್ವಾಗತಿಸ್ತೇನೆ,. ಕ್ರಿಕೆಟ್ ನಿಂದ ಇತ್ತೀಚೆಗೆ ಯುವ ಜನತೆಗೆ ಸಾಕಷ್ಟು ಅವಕಾಶ ಸಿಗುತ್ತಿದೆ. ನೀವು ಪ್ರಮೋಟ್ ಮಾಡ್ತಿರುವುದರಿಂದ ಈ ಕ್ರಿಕೆಟ್ ಮತ್ತಷ್ಟು ಬೆಳೆಯಲಿ. ಕ್ರಿಕೆಟ್ ನಲ್ಲಿ ಭಾಗವಹಿಸುತ್ತಿರುವ ನಿಮ್ಮೆಲ್ಲರಿಗೆ ಒಳ್ಳೆದಾಗಲಿ ಎಂದು ತಿಳಿಸಿದರು.
ನೆನಪಿರಲಿ ಪ್ರೇಮ್ ಮಾತನಾಡಿ, ಇಲ್ಲಿರುವ ಎಲ್ಲರೂ ನನ್ನ ಆತ್ಮೀಯ ಸ್ನೇಹಿತರು. ಎಲ್ಲರೂ ಸೇರಿ ಕ್ರಿಕೆಟ್ ಆಡುತ್ತಿರುವುದು ಬಹಳ ಖುಷಿ ವಿಚಾರ. ಕ್ರಿಕೆಟ್ ಅಂದರೆ ಬರೀ ಆಟವಲ್ಲ. ಎಲ್ಲರೂ ಒಂದು ಕಡೆ ಸೇರಿಸುವ ಆಟವಾಗಿದೆ. ಕೆಲಸ ಮಾಡಿ ಮನೆಗೆ ಹೋಗುತ್ತೇವೆ, ನಮ್ಮದೇ ಲೈಫ್ ನಲ್ಲಿ ಕಳೆದು ಹೋಗುತ್ತೇವೆ. ಎಲ್ಲಾ ಸ್ನೇಹಿತರು ಒಂದು ಕಡೆ ಸೇರುವುದು ಕಷ್ಟ. ಆದ್ರೆ ಇಲ್ಲಿ ಕ್ರಿಕೆಟ್ ಮಾಡುತ್ತಿದೆ. ಬಹಳ ಸಂತೋಷ ವಿಚಾರ. ನನಗೂ ಟೆಲಿವಿಷನ್ ಗೂ ಅವಿನಾಭಾವ ಸಂಬಂಧವಿದೆ. ನಾನು ಇಲ್ಲಿ ಗೆಸ್ಟ್ ಆಗಿ ಬಂದಿಲ್ಲ. ಸ್ನೇಹಿತನಾಗಿ ಬಂದಿದ್ದೇನೆ. ಎಲ್ಲಾ ತಂಡಕ್ಕೂ ಒಳ್ಳೆದಾಗಲಿ ಎಂದರು.
ಹುಬ್ಬಳ್ಳಿಯ ರಾಜನಗರದ ಕೆಎಸ್ಸಿಎ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿವೆ. 12 ಓವರ್ ಗಳ ಪಂದ್ಯದಲ್ಲಿ 10 ತಂಡಗಳು ಭಾಗವಹಿಸಲಿವೆ. ಐಪಿಎಲ್ ನಂತೆ ಬಿಡ್ಡಿಂಗ್ ಮಾಡಿ ಆಟಗಾರರ ಆಯ್ಕೆ ಮಾಡಲಾಗಿದೆ. ಟಿಪಿಎಲ್ ರಾಯಭಾರಿಯಾಗಿ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಇದ್ದು, ಪ್ರಮುಖ ನಟರಾದ ಲೂಸ್ ಮಾದ ಯೋಗಿ, ರವಿಶಂಕರ್ ಗೌಡ ಟಿಪಿಎಲ್ 3 ನಲ್ಲಿ ಆಡುತ್ತಿರುವುದು ವಿಶೇಷ..
ಯಾವ ಯಾವ ತಂಡಗಳು ಭಾಗಿ?
ಅಶ್ವಸೂರ್ಯ ರೈಡರ್ಸ್, ಗೋಲ್ಡನ್ ಈಗಲ್, ಕೆಕೆಆರ್ ಮೀಡಿಯಾ ಹೌಸ್, ಬಯೋಟಾಪ್ ಲೈಫ್ ಸೆವಿಯರ್, AVR ಟಸ್ಕರ್ಸ್, ರಾಸು ವಾರಿಯರ್, ಭಜರಂಗಿ ಬಾಯ್ಸ್, ದಿ ಬುಲ್ ಸ್ಕ್ವಾಡ್, ಇನ್ಸೇನ್ ಕ್ರಿಕೆಟ್ ಟೀಂ, ಜಿಎಲ್ಆರ್ ವಾರಿಯರ್ಸ್ ಸೇರಿದಂತೆ ಒಟ್ಟು 10 ಟೀಮ್ ಗಳು ಭಾಗವಹಿಸಲಿದ್ದು, 170 ಸೆಲೆಬ್ರಿಟಿಗಳು ಈ ಕಾರ್ಯಕ್ರಮಕ್ಕೆ ಸಾಥ್ ಕೊಡಲಿದ್ದಾರೆ. ಈ 10 ತಂಡಗಳಿಗೂ ಅಂಬಾಸಿಡರ್ ಹಾಗೂ ಓನರ್ಗಳಿರಲಿದ್ದಾರೆ. ಎವಿಆರ್ ಗ್ರೂಪ್ಸ್ ನ ಹೆಚ್ ವೆಂಕಟೇಶ್ ರೆಡ್ಡಿ ಹಾಗೂ ಅರವಿಂದ್ ವೆಂಕಟೇಶ್ ರೆಡ್ಡಿ ಟೈಟಲ್ ಸ್ಪಾನ್ಸರ್ ಮಾಡಿದ್ದಾರೆ.
ಎನ್ 1 ಕ್ರಿಕೆಟ್ ಅಕಾಡೆಮಿ ಕಳೆದೆರೆಡು ವರ್ಷಗಳಿಂದ ಆಯೋಜಿಸಿಕೊಂಡು ಬರುತ್ತಿರುವ ಟೆಲಿವಿಷನ್ ಪ್ರೀಮಿಯರ್(Television) ಲೀಗ್-ಟಿಪಿಎಲ್ ಮತ್ತೆ ಶುರುವಾಗುತ್ತಿದೆ. ಈಗಾಗಲೇ ಯಶಸ್ವಿಯಾಗಿ ಎರಡು ಸೀಸನ್ ಮುಗಿದಿದ್ದು, ಮೂರನೇ ಸೀಸನ್ ಜನವರಿ ತಿಂಗಳಲ್ಲಿ ಆರಂಭವಾಗಲಿದೆ. ಅದಕ್ಕೂ ಮುನ್ನ ತಂಡಗಳ ಆಯ್ಕೆ ಪ್ರಕ್ರಿಯೆ ನಡೆಸಲಾಗಿದೆ. ಇಂದು ನೆಲಮಂಗಲ ಸಮೀಪದ ಆದಿತ್ಯ ಗ್ಲೋಬಲ್ ಕ್ರಿಕೆಟ್ (Cricket) ಸ್ಟೇಡಿಯಂನಲ್ಲಿ ಟಿಪಿಎಲ್ ಸೀಸನ್-3 ಫ್ಲೇಯರ್ಸ್ ಗಳ ಆಯ್ಕೆ ಮಾಡಲಾಯಿತು. ಬರೋಬ್ಬರಿ 100ಕ್ಕೂ ಹೆಚ್ಚು ಕಲಾವಿದರು ಆಟಗಾರರ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರು.
ಈ ಬಗ್ಗೆ ಮಾತನಾಡಿ ಟಿಪಿಎಲ್ ಆಯೋಜಕರಾದ ಸುನಿಲ್ ಕುಮಾರ್ ಬಿ ಆರ್, ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗಿಯಾಗುತ್ತಿರುವ ಎಲ್ಲರಿಗೂ ಒಳ್ಳೆಯದಾಗಲಿ. ಸೆಲೆಬ್ರಿಟಿಗಳ ಸಪೋರ್ಟ್ ಇಲ್ಲದೇ ಏನೂ ಆಗುವುದಿಲ್ಲ. ನಾವು ಕರೆ ಮಾಡಿದ ತಕ್ಷಣ ರೆಸ್ಪಾನ್ಸ್ ಮಾಡುತ್ತಾರೆ. ಅವರ ಬೆಂಬಲದಿಂದ ಪಂದ್ಯಾವಳಿ ಅಚ್ಚುಕಟ್ಟಾಗಿ ನಡೆಯುತ್ತಿದೆ. ಕ್ಯಾಪ್ಟನ್, ಓನರ್ಸ್ ಹಾಗೂ ಮಾಧ್ಯಮದವರು ಎಲ್ಲರು ಬೆಂಬಲಿಸುತ್ತಿದ್ದಾರೆ ಎಂದರು.
ಈ ಬಾರಿಯ ಟೆಲಿವಿಷನ್ ಪ್ರೀಮಿಯರ್ ಲೀಗ್ ಸೀಸನ್-3ನಲ್ಲಿ ಮಾಧ್ಯಮದವರಿಗೂ ಅವಕಾಶ ನೀಡಲಾಗಿದೆ. ಜೆರ್ಸಿ, ತಂಡಗಳು, ಆಟಗಾರರು, ಮತ್ತಿತರ ಅಪ್ ಡೇಟ್ ಬಗ್ಗೆ ಒಂದೊಂದಾಗಿ ತಿಳಿಸಲಾಗುತ್ತದೆ. ವಿಶೇಷ ಎಂದರೆ ಮ್ಯಾನ್ ಆಫ್ ದಿ ಸೀರಿಸ್ ಪಟ್ಟ ಪಡೆದವರಿಗೆ ಕಾರು, ಆರೆಂಜ್ ಕ್ಯಾಪ್ ಹೋಲ್ಡರ್(Batsman), ಪರ್ಪಲ್ ಕ್ಯಾಪ್ ಹೋಲ್ಡರ್(Bowler) ಪಡೆದವರಿಗೆ ಬೈಕ್ ಕೊಡಲಾಗುತ್ತದೆ ಎಂದು ಪಂದ್ಯಾವಳಿ ಆಯೋಜಕ ಸುನಿಲ್ ಕುಮಾರ್ ಬಿ.ಆರ್. ತಿಳಿಸಿದ್ದಾರೆ.
ಎರಡು ದಿನಗಳ ಹಿಂದೆಯಷ್ಟೇ ಹಿಂದಿ (Hindi) ಕಿರುತೆರೆಯು ನಟ, ಮಾಡೆಲ್ ಆದಿತ್ಯ ಸಿಂಗ್ ರಜಪೂತ್ ರನ್ನು ಕಳೆದುಕೊಂಡಿದೆ. ಅಗಲಿಕೆಯ ನೋವು ಇನ್ನೂ ಆರದ ಮುನ್ನವೇ ಮತ್ತೋರ್ವ ನಟನನ್ನು ಹಿಂದಿ ಕಿರುತೆರೆ ಕಳೆದುಕೊಂಡಿದೆ. ಹಲವಾರು ಧಾರಾವಾಹಿಗಳ ಮೂಲಕ ಫೇಮಸ್ ಆಗಿದ್ದ ನಿತೇಶ್ ಪಾಂಡೆ (Nitesh Pandey) ಹೃದಯಾಘಾತದಿಂದ (Heart Attack) ನಿಧನರಾಗಿದ್ದಾರೆ (Death). ಕಿರುತೆರೆ ಮಾತ್ರವಲ್ಲ, ಹಿರಿತೆರೆಯಲ್ಲೂ ನಿತೇಶ್ ಕೆಲಸ ಮಾಡಿದ್ದರು.
ಪ್ಯಾರ್ ಕ ದರ್ದ್ ಹೈ ಮೀಟಾ ಮೀಟಾ ಪ್ಯಾರಾ ಪ್ಯಾರಾ ಧಾರಾವಾಹಿಯ ಮೂಲಕ ಫೇಮಸ್ ಆಗಿದ್ದ ನೀತೇಶ್ ಸದ್ಯ ಅನುಪಮಾ ಹೆಸರಿನ ಹಿಂದಿ ಧಾರಾವಾಹಿಯಲ್ಲಿ ನಟಿಸುತ್ತಿದ್ದರು. ಈ ಧಾರಾವಾಹಿಯಲ್ಲಿ ಅವರು ಧೀರಜ್ ಕಪೂರ್ ಹೆಸರಿನ ಪಾತ್ರವನ್ನು ನಿರ್ವಹಿಸುತ್ತಿದ್ದರು. 1995ರಲ್ಲಿ ಬಣ್ಣದ ಲೋಕಕ್ಕೆ ಕಾಲಿಟ್ಟ ಇವರು, ಅಲ್ಲಿಂದ ಈವರೆಗೂ ಸತತ ಒಂದಿಲ್ಲೊಂದು ಧಾರಾವಾಹಿಯಲ್ಲಿ ನಟಿಸುತ್ತಲೇ ಬಂದಿದ್ದಾರೆ. ಇದನ್ನೂ ಓದಿ:‘ರಾನಿ’ ಸಿನಿಮಾ ಸೆಟ್ ನಲ್ಲಿ ನಿರ್ದೇಶಕರ ಹುಟ್ಟುಹಬ್ಬ
51ರ ವಯಸ್ಸಿನ ನಿತೇಶ್ ಗೆ ಪತ್ನಿ, ಒಬ್ಬರು ಸಹೋದರಿ ಹಾಗೂ ತಂದೆ ತಾಯಿಯನ್ನು ಅಗಲಿದ್ದಾರೆ. ಮೃತದೇಹವನ್ನು ತರಲು ನಿರ್ಮಾಪಕ ಹಾಗೂ ನಿತೇಶ್ ಭಾವ ಸಿದ್ಧಾರ್ಥ್ ನಗರ್ ಆಸ್ಪತ್ರೆಗೆ ತೆರಳಿದ್ದಾರೆ. ಎರಡು ದಿನಗಳ ಹಿಂದೆ ಆದಿತ್ಯ ಸಿಂಗ್ ರಜಪೂತ್, ನಿನ್ನೆಯಷ್ಟೇ ರಸ್ತೆ ಅಪಘಾತದಲ್ಲಿ ವೈಭವಿ ಉಪಾಧ್ಯಾಯ, ಇಂದು ನಿತೇಶ್ ಕಿರುತೆರೆಯನ್ನು (Television) ಅಗಲಿದ್ದಾರೆ.
ಭೋಜಪುರಿ ನಟಿ (Bhojapuri Actress) ಆಕಾಂಕ್ಷಾ ದುಬೆ (Akanksha Dubey) ಅವರು ಭಾನುವಾರದಂದು (ಮಾ.26) ವಾರಣಾಸಿ (Varanasi) ಹೋಟೆಲ್‌ವೊಂದರಲ್ಲಿ ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾರೆ. ಹೋಟೆಲ್ ಕೋಣೆಯಲ್ಲಿ ನೇಣು ಬಿಗಿದುಕೊಂಡಿರುವ ಸ್ಥಿತಿಯಲ್ಲಿ ನಟಿ ಶವ ಪತ್ತೆಯಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಸಾಕಷ್ಟು ಭೋಜಪುರಿ ಆಲ್ಬಂ ಹಾಡುಗಳಲ್ಲಿ ಆಕಾಂಕ್ಷಾ ಕಾಣಿಸಿಕೊಂಡಿದ್ದಾರೆ. ಕಿರುತೆರೆಯ ಕೆಲವು ಸೀರಿಯಲ್‌ಗಳಲ್ಲಿ ಕೂಡ ಆಕಾಂಕ್ಷಾ ನಟಿಸಿದ್ದಾರೆ. 25 ವರ್ಷದ ಯುವ ನಟಿ ಇದೀಗ ಆತ್ಮಹತ್ಯೆಗೆ ಶರಣಾಗಿರೋದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಇದನ್ನೂ ಓದಿ: ಪಿಂಕ್ ಕಲರ್ ಡ್ರೆಸ್‌ನಲ್ಲಿ ದೀಪಿಕಾ ದಾಸ್ ಮಿಂಚಿಂಗ್
ಬೆಳಿಗ್ಗೆ 7:45ಕ್ಕೆ (ಮಾ.26) ಆಕಾಂಕ್ಷಾ ನಟಿಸಿರುವ ಹೊಸ ಆಲ್ಬಂ ಸಾಂಗ್‌ವೊಂದು ರಿಲೀಸ್ ಆಗಿದೆ. ಭಾನುವಾರದಂದೇ ಆಕಾಂಕ್ಷಾ ಉಳಿದುಕೊಂಡಿದ್ದ ಹೋಟೆಲ್‌ನಲ್ಲಿ ನೇಣಿಗೆ ಶರಣಾಗಿದ್ದಾರೆ. ಈ ಘಟನೆಯ ಬಗ್ಗೆ ಪೊಲೀಸರು ನಟಿಯ ಮನೆಯವರಿಗೆ ಮಾಹಿತಿ ನೀಡಿದ್ದಾರೆ. ಮೇಲ್ನೋಟಕ್ಕೆ ಇದೊಂದು ಆತ್ಮಹತ್ಯೆಯಂತೆ ಕಂಡರೂ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
ಆಕಾಂಕ್ಷಾ ಸಿನಿಮಾ ಶೂಟಿಂಗ್‌ಗಾಗಿ ವಾರಣಾಸಿಗೆ ಬಂದಿದ್ದರು ಎನ್ನಲಾಗಿದೆ. ಒಂದು ದಿನದ ಹಿಂದೆ, ಶನಿವಾರ ರಾತ್ರಿ, ಆಕಾಂಕ್ಷಾ ತನ್ನ ಇನ್ಸ್ಟಾಗ್ರಾಂ ಅಕೌಂಟ್‌ನಲ್ಲಿ ತನ್ನ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಸುಮಾರು ಒಂದು ತಿಂಗಳ ಹಿಂದೆ, ಪ್ರೇಮಿಗಳ ದಿನದಂದು ಸೋಷಿಯಲ್ ಮೀಡಿಯಾದಲ್ಲಿ ನಟಿ ತನ್ನ ರಿಲೇಷನ್‌ಶಿಪ್ ಅಧಿಕೃತಗೊಳಿಸಿ ಸುದ್ದಿ ಮಾಡಿದರು. ಇದೀಗ ನಟಿಯ ಸಾವು ನಿಜಕ್ಕೂ ಕೊಲೆಯೋ ಅಥವಾ ಆತ್ಮಹತ್ಮೆನ ಎಂಬ ಅನುಮಾನ ಉಂಟಾಗಿದೆ. ತನಿಖೆ ಬಳಿಕ ಅಸಲಿ ವಿಚಾರ ಹೊರಬರಲಿದೆ.
ಕರ್ನಾಟಕ ಕಿರುತೆರೆಯ ಕಲಾವಿದರು ಹಾಗೂ ತಂತ್ರಜ್ಞರ ಮಾತೃಸಂಸ್ಥೆ ಕರ್ನಾಟಕ ಟೆಲಿವಿಷನ್ (Television) ಅಸೋಷಿಯೇಷನ್ (Association) (KTVA) ಮೊನ್ನೆಯಷ್ಟೇ ಚುನಾವಣೆ ನಡೆದಿದ್ದು, ಕನ್ನಡದ ಹೆಸರಾಂತ ನಿರ್ದೇಶಕ ಹಾಗೂ ನಿರ್ಮಾಪಕ ರವಿ ಆರ್ ಗರಣಿ (Ravi Garani) ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಖ್ಯಾತ ನಟ ಸೃಜನ್ ಲೋಕೇಶ್ (Srujan Lokesh) ಕಾರ್ಯದರ್ಶಿ, ನಿರ್ಮಾಪಕ ಭಾಸ್ಕರ್ ಎಸ್.ಎಸ್. ಖಜಾಂಚಿಯಾಗಿ ಆಯ್ಕೆಯಾಗಿದ್ದಾರೆ. ಇದನ್ನೂ ಓದಿ: ಧನಂಜಯ ನಟನೆಯ 25ನೇ ಸಿನಿಮಾ ಟ್ರೈಲರ್ ರಿಲೀಸ್ ಡೇಟ್ ಫಿಕ್ಸ್
ಕಾರ್ಯಕಾರಿ ಸಮಿತಿಗೆ ಕಲಾವಿದರಾದ ಗಿರಿಜಾ ಲೋಕೇಶ್, ವೀಣಾ ಸುಂದರ್, ಗಣೇಶ್ ರಾವ್ ಕೆಸರ್ಕರ್, ಸುನೇತ್ರಾ ಪಂಡಿತ್, ರಾಮಸ್ವಾಮಿ ಗೌಡ ಎನ್.ಟಿ, ವಸಂತ್ ಕುಮಾರ್ ವಿ, ನಿರ್ಮಾಪಕಿ ಭಾವನಾ ಬೆಳಗೆರೆ, ನಿರ್ದೇಶಕ ಸತೀಶ್ ಕೃಷ್ಣ, ಬರಹಗಾರ ಕೇಶವಚಂದ್ರ, ಛಾಯಾಗ್ರಾಹಕರಾದ ಬೆಟ್ಟೇ ಗೌಡ ಕೆ.ಟಿ. ನಿರ್ಮಾಣ ನಿರ್ವಾಹಕ ಪರಯ್ಯ ಆರ್ ಮತ್ತು ಹರ್ಷ ವಿಶ್ವನಾಥ್, ಯೂನಿಟ್ ಮಾಲೀಕ ಸೆಲ್ವಂ, ಸಂಕಲನಕಾರ ಕೃಷ್ಣ ಅರಸ್ ಕೆ.ಸಿ, ಪ್ರಸಾಧನ ಕಲಾವಿದ ನಾಗರಾಜು ಪಿ. ಧ್ವನಿಗ್ರಾಹಕ ಕಲಾವಿದ ಸಾಗರ್ ಬಿ.ಕೆ, ಬೆಳಕು ಸಹಾಯಕರಾದ ಶ್ರೀನಿವಾಸ್ ಪಿ.ವಿ, ವಸ್ತ್ರವಿನ್ಯಾಸ ಮತ್ತು ಕಲಾವಿನ್ಯಾಸ ವೀರೇಂದ್ರ ಡಿ.ಸಿ , ವಾಹನ ಚಾಲಕರಾದ ತಿಮ್ಮರಾಜು, ನಿರ್ಮಾಣ ಸಹಾಯಕರಾದ ವೀರೇಂದ್ರ ಪಿಕೆ. ಈ ಬಾರಿ ಆಯ್ಕೆಯಾಗಿರುತ್ತಾರೆ. ಇದನ್ನೂ ಓದಿ: ಕ್ರಿಕೆಟರ್ ಶುಭಮನ್ ಗಿಲ್ ಬಗ್ಗೆ ಕೇಳಿದ್ದಕ್ಕೆ ನಾಚಿ ನೀರಾದ ರಶ್ಮಿಕಾ ಮಂದಣ್ಣ
ಆಯ್ಕೆಯಾದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಅವಧಿ ಮೂರು ವರ್ಷಗಳದ್ದಾಗಿದ್ದು 2023 ರಿಂದ 2025 ರವರೆಗೂ ಕಾಲಾವಧಿಯದ್ದಾಗಿದೆ. ಕರ್ನಾಟಕ ಟೆಲಿವಿಷನ್ ಅಸೋಷಿಯೇಷನ್ ಕಟ್ಟುವಲ್ಲಿ ರವಿ ಆರ್ ಗರಣಿ ಅವರದ್ದು ಸಾಕಷ್ಟು ಶ್ರಮವಿದೆ. ಹಲವು ವರ್ಷಗಳಿಂದ ಅವರು ಈ ಸಂಘಟನೆಯೊಂದಿಗೆ ಸಕ್ರಿಯರಾಗಿದ್ದಾರೆ. ಇದೀಗ ಅಧ್ಯಕ್ಷರಾಗುವ ಮೂಲಕ ಸಂಘದ ಸಾರಥ್ಯವಹಿಸಿದ್ದಾರೆ. ಇದನ್ನೂ ಓದಿ: ʻಒಲವ ಘಮವುʼ ಆಲ್ಬಂ ಸಾಂಗ್‌ಗೆ ಧ್ರುವ ಸರ್ಜಾ ಮೆಚ್ಚುಗೆ
ಈ ಹಿಂದೆ ಬಿ.ಸುರೇಶ್, ಎಸ್.ವಿ.ಶಿವಕುಮಾರ್, ರವಿಕಿರಣ್ ಸೇರಿದಂತೆ ಕಿರುತೆರೆಯ ಖ್ಯಾತನಾಮರು ಅಸೋಷಿಯೇಷನ್ ಅಧ್ಯಕ್ಷರಾಗಿ ಉದ್ಯಮಕ್ಕೆ ಸಂಬಂಧಿಸಿದಂತೆ ಸಾಕಷ್ಟು ಕೆಲಸ ಮಾಡಿದ್ದಾರೆ. ಉದ್ಯಮದ ಅನೇಕ ಬಿಕ್ಕಟ್ಟುಗಳನ್ನು ಪರಿಹರಿಸಿದ್ದಾರೆ. ಕಲಾವಿದರ, ತಂತ್ರಜ್ಞರ ಕಷ್ಟಕ್ಕೂ ಸ್ಪಂದಿಸಿದ್ದಾರೆ. ಹೀಗಾಗಿ ಕರ್ನಾಟಕ ಟೆಲಿವಿಷನ್ ಅಸೋಷಿಯೇಷನ್ ಕಿರುತೆರೆಯ ಜಗತ್ತಿನ ಪ್ರತಿಷ್ಠಿತ ಸಂಸ್ಥೆಯಾಗಿದೆ.