Tag: Telephone

  • ಫ್ರಾನ್ಸ್ ಅಧ್ಯಕ್ಷರೊಂದಿಗೆ ಪ್ರಧಾನಿ ಮೋದಿ ದೂರವಾಣಿ ಮಾತುಕತೆ

    ಫ್ರಾನ್ಸ್ ಅಧ್ಯಕ್ಷರೊಂದಿಗೆ ಪ್ರಧಾನಿ ಮೋದಿ ದೂರವಾಣಿ ಮಾತುಕತೆ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ಫ್ರಾನ್ಸ್ ಗಣರಾಜ್ಯದ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರಾನ್ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದರು.

    ಅಫ್ಘಾನಿಸ್ತಾನದ ಇತ್ತೀಚಿನ ಬೆಳವಣಿಗೆಗಳು ಸೇರಿದಂತೆ ಪ್ರಾದೇಶಿಕ ವಿಷಯಗಳ ಬಗ್ಗೆ ಉಭಯ ನಾಯಕರು ಚರ್ಚಿಸಿದರು. ಈ ನಿಟ್ಟಿನಲ್ಲಿ ಭಯೋತ್ಪಾದನೆ, ಮಾದಕ ದ್ರವ್ಯಗಳು, ಅಕ್ರಮ ಶಸ್ತ್ರಾಸ್ತ್ರಗಳು ಮತ್ತು ಮಾನವ ಕಳ್ಳಸಾಗಾಣಿಕೆ ಬಗ್ಗೆ ಉಭಯ ನಾಯಕರೂ ಪರಸ್ಪರ ಕಳವಳ ವ್ಯಕ್ತಪಡಿಸಿದರು. ಜೊತೆಗೆ ಮಾನವ ಹಕ್ಕುಗಳು, ಮಹಿಳೆಯರು ಮತ್ತು ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸಬೇಕಾದ ಅಗತ್ಯದ ಬಗ್ಗೆ ಸಹ ಚರ್ಚೆ ನಡೆಸಿದರು. ಇದನ್ನೂ ಓದಿ: ಮೈಸೂರು ಅರಮನೆಗೆ ಸೇರಿದ 4 ಆನೆಗಳು ಗುಜರಾತಿಗೆ ಶಿಫ್ಟ್

    ಇಂಡೋ-ಪೆಸಿಫಿಕ್ ವಲಯದಲ್ಲಿ ದ್ವಿಪಕ್ಷೀಯ ಸಹಯೋಗ ಹೆಚ್ಚುತ್ತಿದೆ. ಈ ಪ್ರದೇಶದಲ್ಲಿ ಸ್ಥಿರತೆ ಮತ್ತು ಭದ್ರತೆಯನ್ನು ಉತ್ತೇಜಿಸುವಲ್ಲಿ ಭಾರತ-ಫ್ರಾನ್ಸ್ ಪಾಲುದಾರಿಕೆ ವಹಿಸುವ ಪ್ರಮುಖ ಪಾತ್ರವನ್ನು ಉಭಯ ನಾಯಕರು ಪರಿಶೀಲಿಸಿದರು.

    ಉಭಯ ದೇಶಗಳು ಆಳವಾಗಿ ಆದರಿಸುವ ಭಾರತ-ಫ್ರಾನ್ಸ್ ವ್ಯೂಹಾತ್ಮಕ ಪಾಲುದಾರಿಕೆಯ ಸ್ಫೂರ್ತಿಯೊಂದಿಗೆ ನಿಕಟ ಮತ್ತು ನಿಯಮಿತ ಸಮಾಲೋಚನೆಗಳನ್ನು ಮುಂದುವರಿಸಲು ನಾಯಕರು ಪರಸ್ಪರ ಸಮ್ಮತಿಸಿದರು.

  • ಸಿಎಂ ಬಿಎಸ್‍ವೈಗೆ ಪ್ರಧಾನಿ ಮೋದಿ ಕರೆ – ಕೊರೊನಾ ನಿಯಂತ್ರಣದ ಕ್ರಮಗಳ ಬಗ್ಗೆ ಮೆಚ್ಚುಗೆ

    ಸಿಎಂ ಬಿಎಸ್‍ವೈಗೆ ಪ್ರಧಾನಿ ಮೋದಿ ಕರೆ – ಕೊರೊನಾ ನಿಯಂತ್ರಣದ ಕ್ರಮಗಳ ಬಗ್ಗೆ ಮೆಚ್ಚುಗೆ

    ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೇ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪರವರಿಗೆ ಕರೆ ಮಾಡಿ ಪರಿಸ್ಥಿತಿ ಕುರಿತಂತೆ ಮಾಹಿತಿ ಪಡೆದಿದ್ದಾರೆ.

    ರಾಜ್ಯದ ಕೆಲವು ಭಾಗಗಳಲ್ಲಿ ಕೊರೊನಾ ಕಫ್ರ್ಯೂ ಸೇರಿದಂತೆ ಕೈಗೊಂಡಿರುವ ಕೆಲ ಕ್ರಮಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಬಿಎಸ್‍ವೈಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಮೈಕ್ರೋ ಕಂಟೈನ್ಮೆಂಟ್ ಝೋನ್ ಬಗ್ಗೆ ನಿಗಾ ವಹಿಸಬೇಕು ಹಾಗೂ ಮೈಕ್ರೋ ಕಂಟೈನ್ಮೆಂಟ್ ಝೋನ್‍ನಲ್ಲಿ ಅಗತ್ಯ ಟೆಸ್ಟಿಂಗ್, ಟ್ರೇಸಿಂಗ್ ಹೆಚ್ಚಳ ಮಾಡಬೇಕೆಂದು ಬಿಎಸ್‍ವೈಗೆ, ಪ್ರಧಾನಿ ನರೇಂದ್ರ ಮೋದಿ ಸೂಚಿಸಿದ್ದಾರೆ ಎನ್ನಲಾಗಿದೆ.

    ಈ ವಿಚಾರವಾಗಿ ಮುಖ್ಯಮಂತ್ರಿ ಬಿಎಸ್‍ವೈ ತಮ್ಮ ಟ್ವಿಟ್ಟರ್ ಖಾತೆಯಲ್ಲಿ, ಸನ್ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರಮೋದಿರವರೊಂದಿಗೆ ಇಂದು ಮಾತನಾಡಿ ರಾಜ್ಯದಲ್ಲಿ ಕೋವಿಡ್ ನಿಯಂತ್ರಣದ ನಿಟ್ಟಿನಲ್ಲಿ ತೆಗೆದುಕೊಳ್ಳಲಾಗುತ್ತಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಯಿತು. ರಾಜ್ಯದ ಕ್ರಮಗಳ ಬಗ್ಗೆ ಪ್ರಧಾನಿಗಳು ಮೆಚ್ಚುಗೆ ವ್ಯಕ್ತಪಡಿಸಿ, ಮೈಕ್ರೋಕಂಟೈನ್ಮೆಂಟ್ ಬಗ್ಗೆ ಹೆಚ್ಚಿನ ಗಮನ ನೀಡುವಂತೆ ಸಲಹೆ ನೀಡಿದ್ದಾರೆ ಎಂದು ಟ್ವೀಟ್ ಮಾಡುವ ಮೂಲಕ ತಿಳಿಸಿದ್ದಾರೆ.

  • ಪ್ರತಿನಿತ್ಯ 15 ನಿಮಿಷ ಫೋನಿನಲ್ಲಿ ಕನ್ನಡ ಕಲಿಯಿರಿ – ಯುವಾ ಬ್ರಿಗೇಡಿನಿಂದ ಕನ್ನಡ ಸುಗಂಧ

    ಪ್ರತಿನಿತ್ಯ 15 ನಿಮಿಷ ಫೋನಿನಲ್ಲಿ ಕನ್ನಡ ಕಲಿಯಿರಿ – ಯುವಾ ಬ್ರಿಗೇಡಿನಿಂದ ಕನ್ನಡ ಸುಗಂಧ

    ಬೆಂಗಳೂರು: ಯುವಾ ಬ್ರಿಗೇಡ್ ಸಂಘಟನೆ ಈಗ ಕನ್ನಡ ಗೊತ್ತಿಲ್ಲದವರಿಗೆ ಕನ್ನಡ ಕಲಿಸಲು ಮುಂದಾಗಿದೆ.

    ‘ಕನ್ನಡ ಸುಗಂಧ’ ಹೆಸರಿನಲ್ಲಿ ಪ್ರತಿನಿತ್ಯ ಪ್ರತಿನಿತ್ಯ 15 ನಿಮಿಷಗಳ ಕಾಲ ಪೋನಿನ ಮೂಲಕ ಕನ್ನಡ ಕಲಿಸುವ ಪ್ರಯತ್ನ ಮಾಡಲಾಗುವುದು ಎಂದು ಯುವಾ ಬ್ರಿಗೇಡ್ ತಿಳಿಸಿದೆ.

    ಈ ಸಂಬಂಧ ಟ್ವೀಟ್ ಮಾಡಿರುವ ಸಂಘಟನೆ, ಯುವಾ ಬ್ರಿಗೇಡಿನ ವತಿಯಿಂದ ಕನ್ಮಡಿಗರಲ್ಲದ ಹೊರರಾಜ್ಯದವರಿಗೆ ಕನ್ನಡ ಕಲಿಸುವ ವಿನೂತನ ಪ್ರಯತ್ನ. ಪ್ರತಿನಿತ್ಯ 15 ನಿಮಿಷಗಳ ಕಾಲ ಪೋನಿನ ಮೂಲಕ ಕನ್ನಡ ಕಲಿಸುವ ಪ್ರಯತ್ನ ಮಾಡಲಾಗುವುದು. ಆಸಕ್ತರು ನಮ್ಮನ್ನು ಸಂಪರ್ಕಿಸಿ ನೊಂದಾಯಿಸಿಕೊಳ್ಳಿ. ಹೊರನಾಡಿನಿಂದ ಬಂದ ನಿಮ್ಮ ಬಂಧುಗಳಿಗೂ ತಿಳಿಸಿ. ಹೆಚ್ಚಿನ ವಿವರಕ್ಕೆ 80730 22138 ನಂಬರ್ ಸಂಪರ್ಕಿಸಿ ಎಂದು ಮನವಿ ಮಾಡಿಕೊಂಡಿದೆ. ಇದನ್ನೂ ಓದಿ: ಸೂಲಿಬೆಲೆಯಿಂದ #GramSvarga ಚಾಲೆಂಜ್- ನಾವು ರೆಡಿ ಅಂದ್ರು ಪ್ರತಾಪ್ ಸಿಂಹ, ತೇಜಸ್ವಿ ಸೂರ್ಯ

     

  • ಈದ್ ಸಂಭ್ರಮ- ಜಮ್ಮು ಕಾಶ್ಮೀರದಲ್ಲಿ ವಿಶೇಷ ಟೆಲಿಫೋನ್ ವ್ಯವಸ್ಥೆ

    ಈದ್ ಸಂಭ್ರಮ- ಜಮ್ಮು ಕಾಶ್ಮೀರದಲ್ಲಿ ವಿಶೇಷ ಟೆಲಿಫೋನ್ ವ್ಯವಸ್ಥೆ

    ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಸಾರ್ವಜನಿಕರು ತಮ್ಮ ಪ್ರೀತಿ ಪಾತ್ರರೊಂದಿಗೆ ಮಾತನಾಡಲು ಹಾಗೂ ಸಹಾಯ ಮಾಡಲು 300 ವಿಶೇಷ ಟೆಲಿಫೋನ್ ಬೂತ್‍ಗಳನ್ನು ತೆರೆಯಲಾಗಿದೆ.

    ಈ ಕುರಿತು ಜಮ್ಮು ಕಾಶ್ಮೀರದ ಆಡಳಿತ ಮಂಡಳಿ ಮಾಹಿತಿ ನೀಡಿದೆ. ಜಮ್ಮು ಕಾಶ್ಮೀರದ ವಿದ್ಯಾರ್ಥಿಗಳು ಅವರ ಕುಟುಂಬಸ್ಥರೊಂದಿಗೆ ಮಾತನಾಡಲು ಅಲಿಘಢ ಹಾಗೂ ನವದೆಹಲಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಸಂಪರ್ಕಾಧಿಕಾರಿಗಳನ್ನು ಸಹ ಸಕ್ರಿಯಗೊಳಿಸಲಾಗಿದೆ ಎಂದು ತಿಳಿಸಿದೆ.

    ಜಮ್ಮು ಕಾಶ್ಮೀರ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರ ನಿರ್ದೇಶನದ ಮೇರೆಗೆ ಸಲಹಾ ಸಮಿತಿಯು ಟೆಲಿಫೋನ್ ಬೂತ್‍ಗಳನ್ನು ಸ್ಥಾಪಿಸಿದೆ. ಈ ಮೂಲಕ ರಾಜ್ಯದ ಹೊರಗಿರುವ ವಿದ್ಯಾರ್ಥಿಗಳು ಈದ್ ಹಬ್ಬದ ಆಚರಣೆಗೆ ತಮ್ಮ ಮನೆಗೆ ತೆರಳಲು ಸಹಾಯ ಮಾಡಲಾಗಿದೆ ಎಂದು ಸತ್ಯಪಾಲ್ ತಿಳಿಸಿದ್ದಾರೆ.

    ಅಲ್ಲದೆ, ಈ ಸಂದರ್ಭದಲ್ಲಿ ಮನೆಗೆ ಹೋಗಲು ಸಾಧ್ಯವಾಗದ ರಾಜ್ಯದ ವಿದ್ಯಾರ್ಥಿಗಳಿಗೆ ಇನ್ನೊಂದು ಕೊಡುಗೆ ನೀಡಿದೆ. ವಿದ್ಯಾರ್ಥಿಗಳೊಂದಿಗೆ ಈದ್ ಹಬ್ಬ ಆಚರಿಸಲು ಸಂಪರ್ಕಾಧಿಕಾರಿಗಳಿಗೆ ತಲಾ 1 ಲಕ್ಷ ರೂ.ಗಳನ್ನು ಶುಕ್ರವಾರವಷ್ಟೇ ರಾಜ್ಯಪಾಲರು ಘೋಷಿಸಿದ್ದರು.

    ಇದೀಗ ವಿದ್ಯಾರ್ಥಿಗಳು ತಮ್ಮ ಕುಟುಂಬಗಳೊಂದಿಗೆ ಮಾತನಾಡಲು ಹಾಗೂ ಮನೆಗೆ ತೆರಳಲು ಪ್ರತಿ ಉಪ ಆಯುಕ್ತರ ಕಚೇರಿಯಲ್ಲಿ ಟೆಲಿಫೋನ್ ಬೂತ್‍ಗಳನ್ನು ಸ್ಥಾಪಿಸುವಂತೆ ನಿರ್ದೇಶನ ನೀಡಿದ್ದಾರೆ. ಹೀಗಾಗಿ ಒಟ್ಟು 300 ವಿಶೇಷ ಟೆಲಿಫೋನ್ ಬೂತ್‍ಗಳನ್ನು ತೆರೆಯಲಾಗಿದೆ. ಈ ಮೂಲಕ ಜನರು ತಮ್ಮ ಪ್ರೀತಿ ಪಾತ್ರರೊಂದಿಗೆ ಮಾತನಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

  • ದೋಸ್ತಿ ಸರ್ಕಾರದ ವಿರುದ್ಧ ಹೊಸ ಬಾಂಬ್ ಸಿಡಿಸಿದ ಶೋಭಾ ಕರಂದ್ಲಾಜೆ

    ದೋಸ್ತಿ ಸರ್ಕಾರದ ವಿರುದ್ಧ ಹೊಸ ಬಾಂಬ್ ಸಿಡಿಸಿದ ಶೋಭಾ ಕರಂದ್ಲಾಜೆ

    ಬೆಂಗಳೂರು: ರಹೀಂ ಖಾನ್ ಅವರಿಗೆ ಸಂಸದೆ ಶೋಭಾ ಕರಂದ್ಲಾಜೆ ಅವರು ದೂರವಾಣಿ ಕರೆ ಮಾಡಿದ್ದರು ಎಂಬ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರ ಆರೋಪಕ್ಕೆ ತಿರುಗೇಟು ನೀಡಿರುವ ಅವರು ಮೈತ್ರಿ ಸರ್ಕಾರ ವಿರುದ್ಧ ದೂರವಾಣಿ ಕದ್ದಾಲಿಕೆ ಮಾಡುತ್ತಿದ್ದಾರೆ ಎಂದು ಬಾಂಬ್ ಸಿಡಿಸಿದ್ದಾರೆ.

    ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಹೀಂಖಾನ್ ಯಾರು ಎಂದು ಈಶ್ವರ್ ಖಂಡ್ರೆ ಹೇಳಬೇಕು. ಅವರಿಗೂ ಬಿಜೆಪಿಗೂ ಏನು ಸಂಬಂಧ ಹೇಳಿ. ನಮ್ಮ ಸ್ಪೀಕರ್ ಇದ್ದ ಸಂದರ್ಭದಲ್ಲಿ ಅವರತ್ತ ಪೇಪರ್ ಎಸೆದ ಸಂದರ್ಭದಲ್ಲಿ ಅವರನ್ನ ನಾನು ನೋಡಿದ್ದೆ ಅಷ್ಟೇ. ಮಾತನಾಡುವ ಮುನ್ನ ನಾಲಿಗೆ ಬಿಗಿ ಹಿಡಿದು ಮಾತಾಡಬೇಕು ಎಂದು ಎಚ್ಚರಿಕೆ ನೀಡಿದರು.

    ಸುಖಾ ಸುಮ್ಮನೆ ಆರೋಪ ಮಾಡಿ ಜನರ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಈ ಕೆಲಸವನ್ನು ಬಿಟ್ಟು ನಿಜವಾದ ಸಂಗತಿಗಳ ಬಗ್ಗೆ ಹೇಳಬೇಕು. ನಾನು ಅವರೊಂದಿಗೆ ಮಾತನಾಡಿದಲ್ಲಿ ಆ ಆಡಿಯೋ ಬಿಡುಗಡೆ ಮಾಡಿ. ಸರ್ಕಾರ ಉರುಳುತ್ತೆ ಎಂದು ತಿಳಿದ ಕೂಡಲೇ ಮೈತ್ರಿ ಸರ್ಕಾರ ದೂರವಾಣಿ ಕದ್ದಾಲಿಕೆ ಮಾಡುವ ಕಾರ್ಯ ಮಾಡುತ್ತಿದೆ. ಆದ್ದರಿಂದಲೇ ಇಂತಹ ಸುಳ್ಳು ಆರೋಪಗಳನ್ನು ಮಾಡುತ್ತಿದೆ. ಈಗ ಇಡಿ ಒಬ್ಬ ಖಾನ್ ನನ್ನು ಬಂಧಿಸಿ ತನಿಖೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಯಾವ ಯಾವ ಖಾನ್ ಗಳು ಒಳಗೆ ಹೋಗುತ್ತಾರೆ, ಯಾವ ಅಧಿಕಾರಿಗಳು, ರಾಜಕಾರಣಿಗಳು ಯಾವ ಖಾನ್‍ಗಳ ಜೊತೆ ಸಂಬಂಧ ಇದೆ ಎಂಬುವುದು ಗೊತ್ತಾಗುತ್ತದೆ ಎಂದರು.

    ಸದ್ಯ ನಿಮ್ಮದೇ ಸರ್ಕಾರ ಇರುವುದರಿಂದ ನಿಮ್ಮ ಬಳಿಯೇ ಗುಪ್ತಚರ ಇಲಾಖೆ ಇದೆ. ಇದನ್ನು ಬಳಸಿಕೊಂಡು ಒಮ್ಮೆ ಚೆಕ್ ಮಾಡಿಕೊಳ್ಳಿ. ಸುಖಾ ಸುಮ್ಮನೆ ಆರೋಪ ಮಾಡುತ್ತಿರುವ ಈಶ್ವರ್ ಖಂಡ್ರೆ ಅವರ ನಡೆಯೇ ಮೈತ್ರಿ ಸರ್ಕಾರ ಉರುಳಲಿದೆ ಎಂಬುವುದಕ್ಕೆ ತಾಜಾ ಉದಾಹರಣೆ ಆಗಿದೆ ಎಂದರು. ಅಲ್ಲದೇ ವಿಧಾನಸಭಾ ಮಂಡಲದಲ್ಲಿ ಕಾಲಹರಣ ಮಾಡಲಾಗುತ್ತಿದೆ. ಸ್ಪೀಕರ್ ಅವರ ನೇತೃತ್ವದಲ್ಲಿ ಇದು ನಡೆಯುತ್ತಿದ್ದು, ಮೈತ್ರಿ ಸರ್ಕಾರ ಬಹುಮತ ಸಾಬೀತು ಪಡಿಸಲು ಸಾಧ್ಯವಿಲ್ಲ ಎಂದರು.