Tag: Telangana Assembly Election 2023

  • ತೆಲಂಗಾಣದಲ್ಲಿ ಬಿಆರ್‌ಎಸ್‌-ಕಾಂಗ್ರೆಸ್‌ ನಡುವೆ ಟಫ್‌ ಫೈಟ್‌

    ತೆಲಂಗಾಣದಲ್ಲಿ ಬಿಆರ್‌ಎಸ್‌-ಕಾಂಗ್ರೆಸ್‌ ನಡುವೆ ಟಫ್‌ ಫೈಟ್‌

    ನವದೆಹಲಿ: ಪಂಚರಾಜ್ಯ ಚುನಾವಣೆ ಇಂದಿಗೆ ಮುಕ್ತಾಯವಾಗಿದ್ದು, ಚುನಾವಣೋತ್ತರ ಸಮೀಕ್ಷೆಗಳು ಪ್ರಕಟಗೊಳ್ಳುತ್ತಿವೆ. ತೆಲಂಗಾಣದಲ್ಲಿ ಅಚ್ಚರಿಯ ಫಲಿತಾಂಶದ ಸುಳಿವು ಸಿಕ್ಕಿದೆ. ಈ ಬಾರಿ ರಾಜ್ಯದಲ್ಲಿ ಆಡಳಿತಾರೂಢ ಬಿಆರ್‌ಎಸ್‌ಗೆ ಕಾಂಗ್ರೆಸ್‌ ತೀವ್ರ ಪೈಪೋಟಿ ನೀಡಿರುವುದು ಕಂಡುಬಂದಿದೆ.

    199 ವಿಧಾಸಭಾ ಕ್ಷೇತ್ರಗಳಲ್ಲಿರುವ 32.6 ದಶಲಕ್ಷ ಮತದಾರರು 2,290 ಅಭ್ಯರ್ಥಿಗಳ ಭವಿಷ್ಯ ಬರೆದಿದ್ದಾರೆ. ಈಗ ತೆಲಂಗಾಣ ಚುನಾವಣೋತ್ತರ ಸಮೀಕ್ಷೆಗಳು ಪ್ರಕಟವಾಗಿವೆ. ಇದನ್ನೂ ಓದಿ: ರಾಜಸ್ಥಾನದಲ್ಲಿ ಈ ಬಾರಿ ಬಿಜೆಪಿಗೆ ಸ್ಪಷ್ಟ ಬಹುಮತ

    ಜನ್‌ಕೀಬಾತ್‌: ಕಾಂಗ್ರೆಸ್‌ 48-64, ಬಿಆರ್‌ಎಸ್‌ 40-55, ಬಿಜಪಿ 7-13
    ಪೋಲ್‌ ಸ್ಟ್ರಾಟಜಿ ಗ್ರೂಪ್: ಕಾಂಗ್ರೆಸ್‌ 49-54, ಬಿಆರ್‌ಎಸ್‌ 53-58, ಬಿಜೆಪಿ 4-6
    ರಿಪಬ್ಲಿಕ್‌ ಟಿವಿ-ಸಿ ವೋಟರ್‌: ಕಾಂಗ್ರೆಸ್‌ 47-59, ಬಿಆರ್‌ಎಸ್‌ 48-60, ಬಿಜೆಪಿ 5

    ತೆಲಂಗಾಣದಲ್ಲಿ 2018 ರ ಚುನಾವಣೆಯಲ್ಲಿ ಬಿಆರ್‌ಎಸ್‌ 88 ಸೀಟ್‌ಗಳನ್ನು ಗೆದ್ದಿತ್ತು. ಕಾಂಗ್ರೆಸ್‌ 19, ಎಐಎಂಐಎಂ 7, ಟಿಡಿಪಿ 2 ಸ್ಥಾನಗಳನ್ನು ಗೆದ್ದಿದ್ದವು. ಬಿಜೆಪಿ ಒಂದು ಕ್ಷೇತ್ರದಲ್ಲಿ ಮಾತ್ರ ಜಯ ಸಾಧಿಸಿತ್ತು. ಇದನ್ನೂ ಓದಿ: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ಗೆ ಮುನ್ನಡೆ – ಬಿಜೆಪಿಯಿಂದ ಟಫ್‌ ಸ್ಪರ್ಧೆ

    ಆಂಧ್ರದಿಂದ ಬೇರ್ಪಟ್ಟು ಹೊಸ ರಾಜ್ಯವಾಗಿ ಉದಯವಾದ ನಂತರ ತೆಲಂಗಾಣದಲ್ಲಿ ಎರಡು ಬಾರಿ ಚುನಾವಣೆ ನಡೆದಿದೆ. ಎರಡು ಬಾರಿಯೂ ಕೆ.ಚಂದ್ರಶೇಖರ್‌ ರಾವ್‌ ನೇತೃತ್ವದ ಬಿಆರ್‌ಎಸ್‌ ಪಕ್ಷವು ಗೆಲುವು ಸಾಧಿಸಿ ಅಧಿಕಾರದ ಗದ್ದುಗೆ ಏರಿದೆ. ಈ ಬಾರಿ ಚುನಾವಣೆಯು ಕೆಸಿಆರ್‌ಗೆ ಸುಲಭದ ಹಾರಿಯಾಗಿ ಉಳಿದಿಲ್ಲವೆಂಬ ಸೂಚನೆಯನ್ನು ಸಮೀಕ್ಷೆಗಳು ಹೇಳುತ್ತಿವೆ.

  • Telangana Election 2023: ಸಾಮಾನ್ಯರಂತೆ ಸರತಿ ಸಾಲಿನಲ್ಲಿ ನಿಂತು ವೋಟ್‌ ಮಾಡಿದ ಸ್ಟಾರ್ಸ್‌

    Telangana Election 2023: ಸಾಮಾನ್ಯರಂತೆ ಸರತಿ ಸಾಲಿನಲ್ಲಿ ನಿಂತು ವೋಟ್‌ ಮಾಡಿದ ಸ್ಟಾರ್ಸ್‌

    ಹೈದರಾಬಾದ್‌: ಜಿದ್ದಾಜಿದ್ದಿ ಕಣವಾಗಿರುವ ತೆಲಂಗಾಣ ರಾಜ್ಯದಲ್ಲಿಂದು ಮತದಾನ (Telangana Assembly Election 2023) ನಡೆಯುತ್ತಿದೆ. ಬೆಳಗ್ಗೆ 7 ಗಂಟೆಯಿಂದಲೇ ಮತದಾನ ಆರಂಭಗೊಂಡಿದ್ದು, ಜನರು ತಮ್ಮ ಹಕ್ಕು ಚಲಾಯಿಸಲು ಉತ್ಸಾಹ ತೋರಿದ್ದಾರೆ.

    ಈ ನಡುವೆ ತೆಲುಗು ಚಿತ್ರರಂಗದ ಖ್ಯಾತ ನಟರಾದ ಅಲ್ಲು ಅರ್ಜುನ್‌ (Allu Arjun), ಜೂನಿಯರ್‌ ಎನ್‌ಟಿಆರ್‌ (Jr NTR) ಹಾಗೂ ಚಿರಂಜೀವಿ (Chiranjeevi) ಹೈದರಾಬಾದ್‌ನಲ್ಲಿ ತಮ್ಮ ಕುಟುಂಬಗಳೊಂದಿಗೆ ಬಂದು ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ. ಬೆಳ್ಳಂ ಬೆಳಗ್ಗೆಯೇ ಸಾಮಾನ್ಯರಂತೆ ಸರತಿ ಸಾಲಿನಲ್ಲಿ ನಿಂತು ವೋಟ್‌ ಮಾಡಿದ್ದಾರೆ. ಇದನ್ನೂ ಓದಿ: Telangana Poll: ಜಿದ್ದಾಜಿದ್ದಿ ಕಣ ತೆಲಂಗಾಣದಲ್ಲಿಂದು ಮತದಾನ – ದಾಖಲೆಯ ಮತದಾನಕ್ಕೆ ಮೋದಿ ಕರೆ

    ಅಲ್ಲು ಅರ್ಜುನ್‌ ತಾವೊಬ್ಬರೇ ಮತಗಟ್ಟೆಗೆ ಬಂದು ವೋಟ್‌ ಮಾಡಿದರು. ಜೂನಿಯರ್‌ ಎನ್‌ಟಿಆರ್‌ ಲಕ್ಷ್ಮಿ ಪ್ರಣತಿ, ತಾಯಿ ಶಾಲಿನಿ ನಂದಮೂರಿ ಅವರೊಂದಿಗೆ ಬಂದು ವೋಟ್‌ ಮಾಡಿದ್ರು. ಇನ್ನೂ ಮೆಗಾಸ್ಟಾರ್‌ ಚಿರಂಜೀವಿ ಸಹ ತಮ್ಮ ಕುಟುಂಬ ಸಮೇತರಾಗಿ ಬಂದು ವೋಟ್‌ ಮಾಡಿ ತನ್ಮ ಹಕ್ಕು ಚಲಾಯಿಸಿದರು. ಜೊತೆಗೆ ಪ್ರತಿಯೊಬ್ಬರು ಬಂದು ವೋಟ್‌ ಮಾಡುವಂತೆ ಮನವಿ ಮಾಡಿದರು. ಸದ್ಯ ಸ್ಟಾರ್ಸ್‌ಗಳು ವೋಟ್‌ ಮಾಡಿರುವ ಫೋಟೋ ವೀಡಿಯೋ ಜಾಲತಾಣದಲ್ಲಿ ಸಖತ್‌ ಸದ್ದು ಮಾಡುತ್ತಿದೆ. ಇದನ್ನೂ ಓದಿ: ಇತಿಹಾಸದಲ್ಲೇ ಗರಿಷ್ಠ ಬೆಲೆಗೆ ತಲುಪಿದ ಚಿನ್ನ – ಬರೋಬ್ಬರಿ 65,000ಕ್ಕೆ ಏರಿಕೆ

    ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸಗಡ, ಮಿಜೋರಾಂಗಳಲ್ಲಿ ಈಗಾಗಲೇ ನ.7ರಿಂದ ನವೆಂಬರ್ 25ರ ಒಳಗೆ ಮತದಾನ ಮುಕ್ತಾಯವಾಗಿದೆ. ತೆಲಂಗಾಣದಲ್ಲಿಂದು (ನ.30) 119 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಇದನ್ನೂ ಓದಿ:  Bigg Boss Kannada- ದೊಡ್ಡಪ್ಪನ ಮಾತು ಕೇಳಿ ತಾಳಿ ಕಟ್ಟಿದ್ದೆ: ವರ್ತೂರು ಸಂತೋಷ್

  • Telangana Poll: ಜಿದ್ದಾಜಿದ್ದಿ ಕಣ ತೆಲಂಗಾಣದಲ್ಲಿಂದು ಮತದಾನ – ದಾಖಲೆಯ ಮತದಾನಕ್ಕೆ ಮೋದಿ ಕರೆ

    Telangana Poll: ಜಿದ್ದಾಜಿದ್ದಿ ಕಣ ತೆಲಂಗಾಣದಲ್ಲಿಂದು ಮತದಾನ – ದಾಖಲೆಯ ಮತದಾನಕ್ಕೆ ಮೋದಿ ಕರೆ

    ಹೈದರಾಬಾದ್‌: ಜಿದ್ದಾಜಿದ್ದಿ ಕಣವಾಗಿರುವ ತೆಲಂಗಾಣ ರಾಜ್ಯದಲ್ಲಿಂದು ಮತದಾನ (Telangana Assembly Election 2023) ನಡೆಯುತ್ತಿದೆ. ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದ್ದು ಸಂಜೆ ವರೆಗೆ ಮತದಾನಕ್ಕೆ ಅವಕಾಶ ಸಿಗಲಿದೆ. 119 ವಿಧಾನಸಭಾ ಕ್ಷೇತ್ರಗಳಲ್ಲಿರುವ 32.6 ದಶಲಕ್ಷ ಮತದಾರರು 2,290 ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ (Narendra Modi), ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi), ಭಾರತ ರಾಷ್ಟ್ರ ಸಮಿತಿ ಮುಖ್ಯಸ್ಥ ಕೆ. ಚಂದ್ರಶೇಖರ ರಾವ್‌ ಸೇರಿ ಹಲವು ಪ್ರಭಾವಿ ನಾಯಕರು ಅಬ್ಬರದ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದರು. ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸಗಡ, ಮಿಜೋರಾಂಗಳಲ್ಲಿ ಈಗಾಗಲೇ ನ.7ರಿಂದ ನವೆಂಬರ್ 25ರ ಒಳಗೆ ಮತದಾನ ಮುಕ್ತಾಯವಾಗಿದೆ. ತೆಲಂಗಾಣದಲ್ಲಿಂದು (ನ.30) ಮತದಾನ ನಡೆಯಲಿದ್ದು, ಈ ಮೂಲಕ ಪಂಚರಾಜ್ಯ ಚುನಾವಣೆಗೆ (Five State Election) ತೆರೆ ಬೀಳಲಿದೆ. ಡಿಸೆಂಬರ್‌ 3 ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.

    ಈ ಸಂಬಂಧ ಮಾತನಾಡಿರುವ ತೆಲಂಗಾಣದ ಮುಖ್ಯ ಚುನಾವಣಾ ಅಧಿಕಾರಿ ವಿಕಾಸ್‌ ರಾಜ್, ರಾಜ್ಯದಲ್ಲಿ 106 ವಿಧಾನ ಸಭಾ ಕ್ಷೇತ್ರಗಳಲ್ಲಿಂದು (ನ.30) ಬೆಳಗ್ಗೆ 7 ರಿಂದ ಸಂಜೆ 5 ತನಕ ಮತ್ತು ನಕ್ಸಲ್ ಉಪಟಳ ಇರುವಂತಹ 13 ವಿಧಾನ ಸಭಾ ಕ್ಷೇತ್ರಗಳಲ್ಲಿ ಬೆಳಗ್ಗೆ 7 ಗಂಟೆಯಿಂದ ಸಂಜೆ 4 ಗಂಟೆ ತನಕ ಮತದಾನ ನಡೆಯಲಿದೆ. ಮತದಾನ ಪ್ರಕ್ರಿಯೆಯನ್ನು ವ್ಯವಸ್ಥಿತವಾಗಿ ನಡೆಸುವುದಕ್ಕೆ 2.5 ಲಕ್ಷಕ್ಕೂ ಹೆಚ್ಚು ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.

    ತೆಲಂಗಾಣದಲ್ಲಿ ಆಡಳಿತಾರೂಢ ಬಿಆರ್‌ಎಸ್ ಎಲ್ಲ 119 ಕ್ಷೇತ್ರಗಳಿಗೂ ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ. ಬಿಜೆಪಿ 111 ಕ್ಷೇತ್ರಗಳಲ್ಲಿ, ಪವನ್ ಕಲ್ಯಾಣ್ ನೇತೃತ್ವದ ಜನಸೇನಾ 8 ಕ್ಷೇತ್ರಗಳಲ್ಲಿ, ಕಾಂಗ್ರೆಸ್ ಪಕ್ಷ 118 ಮತ್ತು ಸಿಪಿಐ 1 ಕ್ಷೇತ್ರದಲ್ಲಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿವೆ. ಅಸಾದುದ್ದೀನ್ ಓವೈಸಿ ನೇತೃತ್ವದ ಎಐಎಂಐಎಂ ನಗರ ವ್ಯಾಪ್ತಿಯ 9 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

    ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳ ಪೈಕಿ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ (ಕೆಸಿಆರ್‌), ಅವರ ಪುತ್ರ ಕೆಟಿ ರಾಮರಾವ್‌, ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎ ರೇವಂತ ರೆಡ್ಡಿ, ಬಿಜೆಪಿ ಶಾಸಕರಾದ ಬಂಡಿ ಸಂಜಯ್ ಕುಮಾರ್, ಡಿ.ಅರವಿಂದ್ ಮತ್ತು ಇತರರು ಇದ್ದಾರೆ.