`ಆರ್‌ಆರ್‌ಆರ್’ ಸೂಪರ್ ಸಕ್ಸಸ್ ಬಳಿಕ ಶಂಕರ್ ನಿರ್ದೇಶನದ `ಗೇಮ್ ಚೇಂಜರ್’ (Game Changer) ಸಿನಿಮಾದಲ್ಲಿ ರಾಮ್ ಚರಣ್ (Ram Charan) ಬ್ಯುಸಿಯಾಗಿದ್ದಾರೆ. `ಗೇಮ್ ಚೇಂಜರ್’ ಸಿನಿಮಾ ಬಳಿಕ ಕನ್ನಡದ ಸ್ಟಾರ್ ನಿರ್ದೇಶಕರ ಜೊತೆ ಸಿನಿಮಾ ರಾಮ್ ಚರಣ್ ಓಕೆ ಎಂದಿದ್ದಾರೆ ಎಂಬ ಲೇಟೆಸ್ಟ್ ಅಪ್‌ಡೇಡ್ ಸಿಕ್ಕಿದೆ.
RRR ಚಿತ್ರದ ನಾಟು ನಾಟು (Naatu Naatu) ಹಾಡಿಗೆ ಆಸ್ಕರ್ (Oscar) ಸಿಕ್ಕಿದ್ದಕ್ಕೆ ಸಂಭ್ರಮಾಚರಣೆ ಇನ್ನೂ ನಡೆಯುತ್ತಲೇ ಇದೆ. ಸಿನಿಮಾ ಸಕ್ಸಸ್ ನಡುವೆ ಹೊಸ ಸಿನಿಮಾಗಳತ್ತ ರಾಮ್ ಚರಣ್ ಗಮನ ಕೊಡುತ್ತಿದ್ದಾರೆ. ಇದನ್ನೂ ಓದಿ: ಶೋಭಿತಾ ಜೊತೆ ಡೇಟಿಂಗ್, ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ ನಾಗಚೈತನ್ಯ
ರಾಮ್ ಚರಣ್ ಅವರು ಸಿನಿಮಾ ಆಯ್ಕೆಯಲ್ಲಿ ಅವರು ಹೆಚ್ಚು ಚ್ಯೂಸಿ. ಕುಟುಂಬದ ಕಡೆ ಗಮನ ನೀಡುವ ಕಾರಣಕ್ಕೆ ಪ್ರತಿ ಸಿನಿಮಾ ಕೆಲಸಗಳ ಮಧ್ಯೆ ದೊಡ್ಡ ಬ್ರೇಕ್ ತೆಗೆದುಕೊಳ್ಳುತ್ತಾರೆ. ಸದ್ಯ ಅವರು 15ನೇ ಸಿನಿಮಾ `ಗೇಮ್ ಚೇಂಜರ್’ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಇದರ ಜೊತೆ ಜೊತೆಗೆ ಅವರು ಹೊಸ ಸಿನಿಮಾ ಕೂಡ ಒಪ್ಪಿಕೊಳ್ಳುತ್ತಿದ್ದಾರೆ. ರಾಮ್ ಚರಣ್ ಅವರು ಮುಂದಿನ ದಿನಗಳಲ್ಲಿ ಕೆಜಿಎಫ್ ಡೈರೆಕ್ಟರ್ ಪ್ರಶಾಂತ್ ನೀಲ್ (Prashanth Neel) ಹಾಗೂ ನರ್ತನ್ (Narthan) ಜೊತೆ ಕೆಲಸ ಮಾಡುತ್ತಾರೆ ಎನ್ನಲಾಗಿದೆ.
ನರ್ತನ್ ಹಾಗೂ ಪ್ರಶಾಂತ್ ನೀಲ್ ಅವರು ರಾಮ್ ಚರಣ್ ಬರ್ತಡೇ ಕಾಣಿಸಿಕೊಂಡಿದ್ದಾರೆ. ರಾಮ್ ಚರಣ್ ಆಯೋಜಿಸಿದ್ದ ಪಾರ್ಟಿಗೆ ಹಾಜರಿ ಹಾಕಿದವರಲ್ಲಿ ಬಹುತೇಕರು ರಾಮ್ ಚರಣ್ ಜೊತೆ ಕೆಲಸ ಮಾಡಿದವರೇ ಆಗಿದ್ದರು. ನರ್ತನ್ ಹಾಗೂ ಪ್ರಶಾಂತ್ ನೀಲ್ ಈವರೆಗೆ ರಾಮ್ ಚರಣ್ ಜೊತೆ ಕೆಲಸ ಮಾಡಿಲ್ಲ. ಆದರೆ ಈ ಪಾರ್ಟಿಗೆ ಅವರಿಗೆ ಆಹ್ವಾನ ಇತ್ತು. ಈ ಕಾರಣಕ್ಕೆ ಇಬ್ಬರೂ ಸಿನಿಮಾ ಮಾಡೋದು ಬಹುತೇಕ ಖಚಿತ ಎನ್ನಲಾಗುತ್ತಿದೆ.









ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಾರಾಯಣ ಹೃದಯಾಲಯ (Narayana Hrudayalaya) ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ನಿಧನರಾಗಿದ್ದಾರೆ. ಭಾನುವಾರ (ಫೆ.19) ನಂದಮೂರಿ ತಾರಕ ರತ್ನ ಅವರ ಪಾರ್ಥಿವ ಶರೀರವನ್ನು ರಂಗಾ ರೆಡ್ಡಿ ಜಿಲ್ಲೆಯ ಮೋಕಿಲಾಗೆ ರವಾನೆ ಮಾಡಲಾಗಿದೆ. ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ಸೋಮವಾರ (ಫೆ.20) ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬಳಿಕ ನಂದಮೂರಿ ತಾರಕ ರತ್ನ ಅಂತ್ಯಕ್ರಿಯೆ ನಡೆಯಲಿದೆ.
ತೆಲುಗು ಚಲನಚಿತ್ರ ವಾಣಿಜ್ಯ ಮಂಡಳಿಯ (Telagu Film Chamber) ಆವರಣದಲ್ಲಿ ನಂದಮೂರಿ ತಾರಕ ರತ್ನ ಅವರ ಪಾರ್ಥೀವ ಶರೀರ ಇರಿಸಲಾಗುವುದು. ಅಲ್ಲಿ ಸಾರ್ವಜನಿಕರು ಅಂತಿಮ ದರ್ಶನ ಪಡೆಯಬಹುದು. ಬೆಳಗ್ಗೆ 7 ಗಂಟೆಯಿಂದಲೇ ಅಂತಿಮ ದರ್ಶನಕ್ಕೆ ಅವಕಾಶ ಇರಲಿದೆ. ಅಂದು ಸಂಜೆ 5 ಗಂಟೆ ಸುಮಾರಿಗೆ ಹೈದರಾಬಾದ್‌ನ ಮಹಾಪ್ರಸ್ತಾನಂನಲ್ಲಿ ಅಂತ್ಯಕ್ರಿಯೆ ಮಾಡಲಾಗುವುದು.




















`ಸರ್ಕಾರು ವಾರಿ ಪಾಟ’ ಖ್ಯಾತಿಯ ಪರಶುರಾಮ್ ನಿರ್ದೇಶನದ ಚಿತ್ರದಲ್ಲಿ ನಾಗಚೈತನ್ಯ ಮತ್ತು ರಶ್ಮಿಕಾ ಡ್ಯುಯೇಟ್ ಹಾಡಲು ಸಜ್ಜಾಗಿದ್ದಾರೆ. ಚಿತ್ರದ ಮತ್ತೊಂದು ವಿಶೇಷ ಅಂದ್ರೆ, ಈ ಚಿತ್ರಕ್ಕೆ ನಾಗಚೈತನ್ಯ ತಾತ, ಅಕ್ಕಿನೇನಿ ನಾಗೇಶ್ವರ ರಾವ್ ಅವರೇ ಹಸರೇ ಇಡಲಿದ್ದಾರಂತೆ.