Tag: Tekki

  • ಐಷಾರಾಮಿ ಮನೆಯಲ್ಲಿ ಕೆಲಸಕ್ಕೆ ಸೇರಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕದ್ದಳು

    ಐಷಾರಾಮಿ ಮನೆಯಲ್ಲಿ ಕೆಲಸಕ್ಕೆ ಸೇರಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕದ್ದಳು

    ಬೆಂಗಳೂರು: ಐಷಾರಾಮಿ ಮನೆಯಲ್ಲಿ ಕೆಲಸಕ್ಕೆಂದು ಸೇರಿ ಮಹಿಳೆಯೊಬ್ಬಳು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ್ದಾಳೆ. ಈ ಹಿನ್ನೆಲೆ ಪೊಲೀಸರು ಆಕೆಯನ್ನು ಬಂಧಿಸಿರುವ ಘಟನೆ ಬೆಂಗಳೂರಿನ ಮಾರತಳ್ಳಿಯಲ್ಲಿ ನಡೆದಿದೆ.

    ಬೆಂಗಳೂರಿನ ಮಾರತಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಅಪಾಟ್ರ್ಮೆಂಟ್‍ನಲ್ಲಿ ಘಟನೆ ನಡೆದಿದ್ದು, ಆರೋಪಿ ಸುಮಾ(40) ಬಂಧಿಸಿದ್ದಾರೆ. ಸುಮಾ ಮೂಲತಃ ಶಿವಮೊಗ್ಗ ಮಹಿಳೆಯಾಗಿದ್ದು, ಮುಂಬೈ ಮೂಲದ ಟೆಕ್ಕಿಯ ವಿಲ್ಲಾದಲ್ಲಿ ಚೋರಿ ಕೃತ್ಯ ನಡೆಸಿದ್ದಾಳೆ.

    ನಡೆದಿದ್ದೇನು?
    ಪ್ರತಿಷ್ಠಿತ ಏರಿಯಾಗಳ ಟೆಕ್ಕಿಯ ವಿಲ್ಲಾದಲ್ಲಿ ಸುಮಾ ಕೆಲಸ ಮಾಡುತ್ತಿದ್ದಳು. ಸುಮಾ ಟೆಪ್ರವರಿ ಕೆಲಸಗಾರರನ್ನು ಹುಡುಕಿದ ಮನೆಗೆ ಹೋಗಿದ್ದಳು. ಕೆಲಸ ಬಿಟ್ಟು ಹೋಗುವಾಗ ಮನೆಯಲ್ಲಿದ್ದ ವಜ್ರ, ಚಿನ್ನಾಭರಣ ಕದ್ದಿದ್ದ ಕಳ್ಳಿ. ಕೆಲದಿನಗಳ ಬಳಿಕ ಮುಂಬೈಗೆ ತೆರಳಲು ನಿರ್ಧಾರ ಮಾಡಿದ್ದ ಟೆಕ್ಕಿ ಲಾಕರ್‌ನಲ್ಲಿದ್ದ ಆಭರಣ ಇಡಲು ಹೋದಾಗ ಕಳ್ಳತನ ಕೃತ್ಯ ಬಯಲಾಗಿದೆ. ಇದನ್ನೂ ಓದಿ: ಬೆಂ.ನ.ಜಿಲ್ಲೆಗೆ ಕೆ.ಸಿ.ವ್ಯಾಲಿ ನೀರು: ಒತ್ತುವರಿಯಾಗಿದ್ದ ರಾಜಕಾಲುವೆ, ಖಾಸಗಿ ಬಡಾವಣೆ ತೆರವು 

    CRIME 2

    ಬಳಿಕ ಟೆಕ್ಕಿ ಮಾರತ್ ಹಳ್ಳಿ ಪೊಲೀಸರಿಗೆ ದೂರು ಕೊಟ್ಟಿದ್ದು, ದೂರು ಸಂಬಂಧ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಈ ಕಾರ್ಯಚರಣೆ ವೇಳೆ ಮಾರತ್ ಹಳ್ಳಿ ಪೊಲೀಸರಿಂದ ಆರೋಪಿತೆ ಸುಮಾಳನ್ನು ಬಂಧನವಾಗಿದೆ. ಬಂಧಿತಳಿಂದ 35 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ವಜ್ರಾಭರಣ ವಶಕ್ಕೆ ತೆಗೆದುಕೊಳ್ಳಲಾಗಿದೆ.

  • ಬೆಂಗಳೂರಿನಲ್ಲಿ ಟೆಕ್ಕಿಯಿಂದಲೇ ಟೆಕ್ಕಿ ಕಿಡ್ನಾಪ್- 5 ಕೋಟಿ ಡೀಲ್

    ಬೆಂಗಳೂರಿನಲ್ಲಿ ಟೆಕ್ಕಿಯಿಂದಲೇ ಟೆಕ್ಕಿ ಕಿಡ್ನಾಪ್- 5 ಕೋಟಿ ಡೀಲ್

    ಬೆಂಗಳೂರು: ಹಣಕ್ಕಾಗಿ ಟೆಕ್ಕಿಯಿಂದಲೇ ಟೆಕ್ಕಿಯನ್ನು ಕಿಡ್ನಾಪ್ ಮಾಡಿದ ಪ್ರಕರಣ ಆಗಸ್ಟ್ 25ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಅಪಹರಣ ಪ್ರಕರಣವನ್ನು ಇದೀಗ ಬೆಂಗಳೂರು ಪೊಲೀಸರು ಬೇಧಿಸಿದ್ದಾರೆ.

    ಬೆಂಗಳೂರಿನಲ್ಲಿ ಆಗಸ್ಟ್ 25ರಂದು ಟೆಕ್ಕಿ ವಿನೀತ್ ಕಿಡ್ನಾಪ್ ಆಗಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಪೊಲೀಸರು ತನಿಖೆ ಮುಂದುವರಿಸುತ್ತಿದ್ದಂತೆ ಸ್ನೇಹಿತನಾಗಿದ್ದ ಇನ್ನೋರ್ವ ಟೆಕ್ಕಿ ಎಡ್ವಿನ್ ಪ್ರಶಾಂತ್ ಎಂಬಾತ ಹಣದ ಆಸೆಗಾಗಿ ಕಿಡ್ನಾಪ್ ಮಾಡಿರುವ ಬಗ್ಗೆ ತಿಳಿದುಬಂದಿದೆ. ವಿನೀತ್ ಹಾಗೂ ಎಡ್ವಿನ್ ಪ್ರಶಾಂತ್ ಇಬ್ಬರು ಕೂಡ ಸ್ನೇಹಿತರಾಗಿದ್ದರು. ಜೊತೆಗೆ ಒಂದು ವ್ಯವಹಾರ ಆರಂಭಿಸಿದ್ದರು. ಇದರಲ್ಲಿ ಬಂದ ಹಣದಲ್ಲಿ 10 ಲಕ್ಷ ರೂ.ವನ್ನು ವಿನೀತ್, ಎಡ್ವಿನ್‍ಗೆ ಕೊಡಬೇಕಿತ್ತು. ಆ.25ಕ್ಕೆ ವಿನೀತ್‍ಗೆ 5 ಕೋಟಿ ಜಮೆ ಬಗ್ಗೆ ಸುಳಿವು ಪಡೆದ ಎಡ್ವಿನ್ ಮತ್ತು ಆತನ ಸಹಚರರು ಪ್ಲಾನ್ ಮಾಡಿ 5 ಕೋಟಿ ದೋಚಲು ವಿನೀತ್‍ನನ್ನು ಕಿಡ್ನಾಪ್ ಮಾಡಿದ್ದಾರೆ. ಇದನ್ನೂ ಓದಿ: ಮನೆಯ ಮೇಲ್ಛಾವಣಿ ಕುಸಿತ- ಅವಶೇಷಗಳಡಿಯಿಂದ ವೃದ್ಧೆಯ ರಕ್ಷಣೆ

    ವಿನೀತ್‍ನನ್ನು ಬೆಂಗಳೂರಿನಲ್ಲಿ ಕಿಡ್ನಾಪ್ ಮಾಡಿ ಕಾರಿನಲ್ಲಿ ಚೆನ್ನೈಗೆ ತಲುಪಿದ್ದರು. ತನಿಖೆ ವೇಳೆ ಕಾರಿನ ಫಾಸ್ಟಾಗ್ ಮೂಲಕ ಕೇಸ್ ಸುಳಿವು ಪತ್ತೆ ಹಚ್ಚಿದ ಪೊಲೀಸರು, ಕೃತ್ಯಕ್ಕೆ ಬಳಸಿದ್ದ ಕಾರ್ ಮಾಲೀಕನಿಂದ ಮಾಹಿತಿ ಕಲೆಹಾಕಿದ್ದಾರೆ. ಕಿಡ್ನಾಪ್ ಬಳಿಕ ಕಾರು ಚೆನೈಗೆ ಹೊಗಿರೋದು ಕನ್ಫರ್ಮ್ ಮಾಡಿಕೊಂಡು ಟೋಲ್‍ನಲ್ಲಿ ಫಾಸ್ಟಾಗ್ ಆಪರೇಟ್ ಆದಾಗ ಈ ಕೇಸ್ ಬಗ್ಗೆ ಮಾಹಿತಿ ಸಿಕ್ಕಿದೆ. ಬಳಿಕ ಸಂತ್ರಸ್ತ ವಿನೀತ್ ಕಡೆಯವರ ಮೂಲಕ ಪೊಲೀಸರು ಜೊತೆ ಸೇರಿ ಆರೋಪಿಗಳಿಗೆ ಹಣ ವರ್ಗಾವಣೆ ಮಾಡಲು ಮುಂದಾಗಿದ್ದಾರೆ. ಹಣ ಜಮೆಯಾದ ಬಳಿಕ ಕಾರ್ಡ್ ಸ್ವೈಪ್ ಮಾಡಿ ಆರೋಪಿಗಳು ಹಣ ತೆಗೆದಿದ್ದಾರೆ. ಇದನ್ನು ಆಧರಿಸಿ ಕಾರ್ಡ್ ಸ್ವೈಪ್ ಆದ ಜಾಗದ ಮಾಹಿತಿಯನ್ನು ಪೊಲೀಸರು ಪಡೆದಿದ್ದರು. ಇದನ್ನೂ ಓದಿ: ಭೋಜನ ಕೂಟದಲ್ಲೂ ಆಪರೇಷನ್ ಹಸ್ತದ ಬಗ್ಗೆ ಎಚ್ಚರಿಕೆ ನೀಡಿದ ಬಿಎಸ್‍ವೈ

    ಆರೋಪಿಗಳು ಹಣ ತೆಗೆದ ಬಳಿಕ ಪ್ರತಿ 5 ಗಂಟೆಗಳಿಗೊಮ್ಮೆ 50 ಕಿ.ಮೀ ವ್ಯಾಪ್ತಿಯಿಂದ ಫೋನ್ ಕರೆ ಮಾಡುತ್ತಿದ್ದರು. ಬಳಿಕ ಫೋನ್ ಸ್ವಿಚ್ ಆಫ್ ಮಾಡುತ್ತಿದ್ದರು. ಹೀಗೆ ಪ್ರತಿ ಬಾರಿ ಯಾವ ಕಡೆಗಳಿಂದ ಕರೆ ಬರುತ್ತಿದೆ ಅನ್ನೋದರ ಮ್ಯಾಪಿಂಗ್ ಮಾಡಿ ನಂತರ ಪೊಲೀಸರು, ಸಿನೆಮಾ ಸ್ಟೈಲ್‍ನಲ್ಲಿ ಆಪರೇಶನ್‍ಗಿಳಿದಿದ್ದಾರೆ. ಸದ್ಯ ಕೋರಮಂಗಲ ಪೊಲೀಸರಿಂದ ಎಡ್ವಿನ್ ಪ್ರಶಾಂತ್, ಸಂತೋಷ್ ಹಾಗೂ ಅರಿವೇಗಲನ್ ಎಂಬ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ತಲೆಮರೆಸಿಕೊಂಡಿರುವ ಉಳಿದ ಆರೋಪಿಗಳಿಗೆ ಬಲೆಬೀಸಲು ಮುಂದಾಗಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ಸಿಗೆ ಹೆಚ್‍ಡಿಕೆ ಟಕ್ಕರ್ – ಸಿ.ಎಂ ಇಬ್ರಾಹಿಂ ಜೆಡಿಎಸ್ ಸೇರೋದು ಪಕ್ಕಾ!

  • ಮದುವೆಯಾದ 2 ದಿನಕ್ಕೆ ಕೊರೊನಾ ಸೋಂಕಿನಿಂದ ಟೆಕ್ಕಿ ಸಾವು

    ಮದುವೆಯಾದ 2 ದಿನಕ್ಕೆ ಕೊರೊನಾ ಸೋಂಕಿನಿಂದ ಟೆಕ್ಕಿ ಸಾವು

    – ಸಮಾರಂಭಕ್ಕೆ ಹಾಜರಾಗಿದ್ದ 95 ಮಂದಿಗೆ ಪಾಸಿಟಿವ್
    – ಸೋಂಕಿನ ಲಕ್ಷಣ ಕಂಡು ಬಂದರೂ ನಿರ್ಲಕ್ಷ್ಯ

    ಪಾಟ್ನಾ: ಕೊರೊನಾ ವೈರಸ್ ಮದುವೆ ಮಾಡಿಕೊಳ್ಳುತ್ತಿರುವ ಕುಟುಂಬಗಳಲ್ಲಿ ತೀವ್ರ ದುಃಖಕ್ಕೆ ಕಾರಣವಾಗುತ್ತಿದೆ. ಮದುವೆ ಸಮಾರಂಭದಲ್ಲಿ ಭಾಗವಹಿಸಲು 50 ಮಂದಿಗೆ ಮಾತ್ರ ಅವಕಾಶ ನೀಡಿದ್ದರೂ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇದರ ನಡುವೆಯೇ ಮದುವೆಯಾದ ಎರಡು ದಿನದಲ್ಲೇ ವರ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ ಘಟನೆ ಬಿಹಾರದ ಪಾಟ್ನಾ ಗ್ರಾಮಾಂತರ ಪ್ರದೇಶದ ಪಾಲಿಗಂಜ್ ಗ್ರಾಮದಲ್ಲಿ ನಡೆದಿದೆ.

    ಪಾಲಿಗಂಜ್ ಗ್ರಾಮದ 30 ವರ್ಷದ ಟೆಕ್ಕಿ ಸಾವನ್ನಪ್ಪಿದ್ದು, ಮದುವೆ ಹಿನ್ನೆಲೆಯಲ್ಲಿ ಗುರುಗ್ರಾಮದಿಂದ ಜೂನ್ 12 ರಂದು ತನ್ನ ಸ್ವಗ್ರಾಮಕ್ಕೆ ವಾಪಸ್ ಆಗಿದ್ದ. ಜೂನ್ 15 ರಂದು ಟೆಕ್ಕಿ ವಿವಾಹ ಕುಟುಂಬಸ್ಥರು ನಿಗದಿ ಪಡಿಸಿದ್ದ ಯುವತಿಯೊಂದಿಗೆ ಜರುಗಿತ್ತು. ಆದರೆ ಮದುವೆಯಾದ 2 ದಿನಕ್ಕೆ (ಜೂನ್ 17) ಆತನ ಆರೋಗ್ಯದಲ್ಲಿ ಏರುಪೇರು ಕಂಡಬಂದ ಹಿನ್ನೆಲೆಯಲ್ಲಿ ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ನಡೆಸಲಾಗಿತ್ತು. ಆದರೆ ಆಸ್ಪತ್ರೆಗೆ ಕರೆಕೊಂಡು ಹೋಗುವ ಮಾರ್ಗ ನಡುವೆ ಆತ ಸಾವನ್ನಪ್ಪಿದ್ದ.

    ವಿವಾಹ ಸಮಾರಂಭದಲ್ಲಿ ಭಾಗವಹಿಸಲು ಕೇವಲ 50 ಮಂದಿಗೆ ಮಾತ್ರ ಅವಕಾಶ ಎಂದು ಸರ್ಕಾರ ನಿಯಂತ್ರಣ ವಿಧಿಸಿದ್ದರು ಲಾಕ್‍ಡೌನ್ ನಿಯಮಗಳನ್ನು ಉಲ್ಲಂಘಿಸಿ ಹೆಚ್ಚು ಮಂದಿ ಹಾಜರಾಗಿದ್ದರು. ಯುವಕ ಸಾವನ್ನಪ್ಪಿದ ಕಾರಣ ಸಮಾರಂಭಕ್ಕೆ ಹಾಜರಾಗಿದ್ದ ಅಷ್ಟು ಮಂದಿಗೆ ಕೊರೊನಾ ಟೆಸ್ಟ್ ನಡೆಸಿದ ಪರಿಣಾಮ 95 ಜನರಿಗೆ ಸೋಂಕು ದೃಢವಾಗಿತ್ತು. ಆದರೆ ವಧುವಿನ ವರದಿ ಮಾತ್ರ ನೆಗೆಟಿವ್ ಬಂದಿದೆ. ಆರೋಗ್ಯ ಇಲಾಖೆ ಅಧಿಕಾರಿಗಳು ಎಲ್ಲರನ್ನು ಕ್ವಾರಂಟೈನ್ ಮಾಡಿದ್ದ ಪರಿಣಾಮ ಹೆಚ್ಚು ಜನರಿಗೆ ಸೋಂಕು ಹರಡುವುದನ್ನು ತಪ್ಪಿಸಿದ್ದಾರೆ ಎಂಬ ಮಾಹಿತಿ ಲಭಿಸಿದೆ.

    ಘಟನೆ ಕುರಿತು ಮಾಹಿತಿ ನೀಡಿರುವ ಪಟ್ನಾ ಡಿಎಂ ಕುಮಾರ್ ರವಿ, ಟೆಕ್ಕಿ ಸಾವನ್ನಪ್ಪಿದ ಬಳಿಕ ಘಟನೆ ಕುರಿತು ಸ್ಥಳೀಯರು ಕರೆ ಮಾಡಿ ಮಾಹಿತಿ ನೀಡಿದ್ದರು. ಗುರುಗ್ರಾಮದಿಂದ ವಾಪಸ್ ಆಗಿದ್ದ ಆತನಿಗೆ ಕೊರೊನಾ ಲಕ್ಷಣಗಳಿದ್ದರೂ ಕೂಡ ಕುಟುಂಬ ಸದಸ್ಯರು ನಿರ್ಲಕ್ಷ್ಯ ವಹಿಸಿ ಮದುವೆ ಕಾರ್ಯ ಮಾಡಿದ್ದರು. ಆದರೆ ಆತ ತೀರ ಅಸ್ವಸ್ತನಾದ ಸಮಯದಲ್ಲಿ ಪಾಟ್ನಾ ಏಮ್ಸ್ ಆಸ್ಪತ್ರೆಗೆ ಕರೆತಂದಿದ್ದರು. ಆದರೆ ಆಸ್ಪತ್ರೆ ಕರೆತರುವ ಮುನ್ನವೇ ಆತ ಸಾವನ್ನಪ್ಪಿದ. ಆತನ ಕುಟುಂಬಸ್ಥರು ಅಧಿಕಾರಿಗಳಿಗೆ ಯಾವುದೇ ಮಾಹಿತಿ ನೀಡದೆ ಅಂತ್ಯ ಕ್ರಿಯೆಯನ್ನು ನಡೆದಿದ್ದರು ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.

    ವಧು-ವರ ಇಬ್ಬರ ಪೋಷಕರು ಶಿಕ್ಷಕರಾಗಿದ್ದು, ವಧು ಸಿವಿಲ್ ಎಂಜಿನಿಯರ್ ಆಗಿದ್ದಾರೆ. ಮದುವೆ ಕಾರ್ಯಕ್ರಮಗಳು ಜೂನ್ 8 ರಂದು ಆರಂಭವಾಗಿದ್ದು, ವರನಿಗೆ ಕೊರೊನಾ ಲಕ್ಷಣಗಳು ಕಾಣಿಸಿಕೊಂಡ ಬಳಿಕ ಆತನನ್ನು ಆಸ್ಪತ್ರೆಗೆ ಕಳುಹಿಸುವ ಬದಲು ಕ್ವಾರಂಟೈನ್ ಮಾಡಲಾಗಿತ್ತು. ಮದುವೆ ಮುನ್ನ ದಿನವೂ ಆತ ಕುಸಿದು ಬಿದ್ದಿದ್ದ. ವಧು-ವರ ಕುಟುಂಬ ಸದಸ್ಯರು ಶಿಕ್ಷಿತರಾಗಿದ್ದರೂ ಕೊರೊನಾ ಲಕ್ಷಣ ಕುರಿತು ನಿರ್ಲಕ್ಷ್ಯ ವಹಿಸಿದ್ದು ಘಟನೆಗೆ ಕಾರಣವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

  • ಸ್ವದೇಶದಲ್ಲಿ ಅಂತ್ಯಕ್ರಿಯೆಗೆ ಪೋಷಕರ ಪಟ್ಟು – 59 ದಿನಗಳ ನಂತ್ರ ದೇಶಕ್ಕೆ ಆಗಮಿಸಲಿರೋ ಟೆಕ್ಕಿ ಶವ

    ಸ್ವದೇಶದಲ್ಲಿ ಅಂತ್ಯಕ್ರಿಯೆಗೆ ಪೋಷಕರ ಪಟ್ಟು – 59 ದಿನಗಳ ನಂತ್ರ ದೇಶಕ್ಕೆ ಆಗಮಿಸಲಿರೋ ಟೆಕ್ಕಿ ಶವ

    ಹುಬ್ಬಳ್ಳಿ: ಸ್ವದೇಶದಲ್ಲಿ ಅಂತ್ಯಕ್ರಿಯೆಗೆ ಮಾಡಬೇಕೆಂದು ಪೋಷಕರ ಮನವಿ ಮಾಡಿಕೊಂಡಿದ್ದರಿಂದ 59 ದಿನಗಳ ಹಿಂದೆ ಲಂಡನ್‍ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಹುಬ್ಬಳ್ಳಿಯ ಲಿಂಗರಾಜ ನಗರದ ಎಂಜಿನಿಯರ್ ಶವ ಇಂದು ಬೆಂಗಳೂರಿಗೆ ಬರಲಿದೆ.

    ಶಿವರಾಜ ಪಾಟೀಲ ಆತ್ಮಹತ್ಯೆ ಮಾಡಿಕೊಂಡ ಟೆಕ್ಕಿ. ಈ ವಿಷಯವನ್ನು ಕೇಂದ್ರ ಸಂಸದೀಯ ಸಚಿವ ಹಾಗೂ ಸಂಸದ ಪ್ರಹ್ಲಾದ್ ಜೋಶಿ ಅವರು ಶನಿವಾರ ಖಚಿತಪಡಿಸಿದ್ದಾರೆ.

    ಮಾರ್ಚ್ 13 ರಂದು ಆತ್ಮಹತ್ಯೆ ಮಾಡಿಕೊಂಡ ಶಿವರಾಜ ಅಂತ್ಯ ಸಂಸ್ಕಾರವನ್ನು ಭಾರತದಲ್ಲೇ ನಡೆಸಬೇಕೆಂದು ಪಾಲಕರು ಪಟ್ಟು ಹಿಡಿದಿದ್ದರು. ಹೀಗಾಗಿ 59 ದಿನಗಳಿಂದಲೂ ಶವದ ಅಂತ್ಯಸಂಸ್ಕಾರ ನಡೆಸದೆ ಲಂಡನ್ ಆಸ್ಪತ್ರೆಯೊಂದರಲ್ಲಿ ಇರಿಸಲಾಗಿತ್ತು.

    ಈ ಕುರಿತು ಶಿವರಾಜ ತಂದೆ, ತಾಯಿ 15 ದಿನಗಳ ಹಿಂದೆಯಷ್ಟೇ ತಮ್ಮ ಮಗನ ಶವವನ್ನು ದೇಶಕ್ಕೆ ತರಲು ಸಹಾಯ ಮಾಡುವಂತೆ ಕೇಂದ್ರ ಸಚಿವ ಜೋಶಿ ಅವರಿಗೆ ಮನವಿ ಮಾಡಿಕೊಂಡಿದ್ದರು. ಇದಕ್ಕೆ ಸ್ಪಂದಿಸಿದ ಸಚಿವರು, ಈ ನಿಟ್ಟಿನಲ್ಲಿ ನೆರವು ನೀಡಿದ್ದರು. ಭಾರತ ಸರ್ಕಾರ ಮನವಿ ಮಾಡಿದ ಹಿನ್ನೆಲೆಯಲ್ಲಿ ಬ್ರಿಟನ್ ಸರ್ಕಾರ ಒಪ್ಪಿಗೆ ನೀಡಿ ಶವದ ಜೊತೆ ಪತ್ನಿ, ಮಗು ಬರಲು ಒಪ್ಪಿಗೆ ನೀಡಿದೆ.

    ಕಳೆದ ಎರಡ್ಮೂರು ದಿನಗಳಿಂದ ಸ್ವಲ್ಪ ಮಟ್ಟಿನ ಲಾಕ್‍ಡೌನ್ ತೆರವುಗೊಂಡು ವಿಮಾನಯಾನ ಆರಂಭಗೊಂಡಿದೆ. ಇಂದು ಲಂಡನ್‍ನಿಂದ ಬೆಂಗಳೂರಿಗೆ ವಿಮಾನವೊಂದು ಬರುತ್ತಿದೆ. ಅದೇ ವಿಮಾನದಲ್ಲಿ ಟೆಕ್ಕಿ ಶಿವರಾಜ ಪಾಟೀಲ ಶವ ಹಾಗೂ ಪತ್ನಿ, ಮಗು ಬರುವ ಸಾಧ್ಯತೆ ಇದೆ ಎಂದು ಸಚಿವ ಜೋಶಿ ತಿಳಿಸಿದರು.