Tag: Teju Belawadi

  • ರಿಷಬ್ ಶೆಟ್ಟಿ  ನಿರ್ಮಾಣದ ‘ಲಾಫಿಂಗ್ ಬುದ್ಧ’ ಶೂಟಿಂಗ್ ಮುಕ್ತಾಯ

    ರಿಷಬ್ ಶೆಟ್ಟಿ ನಿರ್ಮಾಣದ ‘ಲಾಫಿಂಗ್ ಬುದ್ಧ’ ಶೂಟಿಂಗ್ ಮುಕ್ತಾಯ

    ಖ್ಯಾತ ನಟ, ನಿರ್ದೇಶಕ ರಿಷಬ್ ಶೆಟ್ಟಿ (Rishabh Shetty) ತಮ್ಮ ರಿಷಬ್ ಶೆಟ್ಟಿ ಫಿಲಂಸ್ ಲಾಂಛನದಲ್ಲಿ ನಿರ್ಮಿಸುತ್ತಿರುವ ‘ಲಾಫಿಂಗ್ ಬುದ್ದ’ (Laughing Buddha) ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಒಂದು ಕಡೆ ರಿಷಬ್ ಶೆಟ್ಟಿ ತಮ್ಮ ನಿರ್ದೇಶನದ ಕಾಂತಾರ ಸಿನಿಮಾದ ಚಿತ್ರೀಕರಣಕ್ಕೆ ರೆಡಿ ಆಗುತ್ತಿದ್ದರೆ, ಮತ್ತೊಂದು ಕಡೆ ತಮ್ಮದೇ ನಿರ್ಮಾಣದ ಲಾಫಿಂಗ್ ಬುದ್ದ ಚಿತ್ರೀಕರಣ ಕಂಪ್ಲೀಟ್ ಮಾಡಿದ್ದಾರೆ.

    ಭದ್ರಾವತಿ, ಕಾರ್ಗಲ್ ಹಾಗೂ ಬೆಂಗಳೂರಿನಲ್ಲಿ ಚಿತ್ರೀಕರಣವಾಗಿದೆ. ಭದ್ರಾವತಿಯ ಚಂಡಿಕಾ ದುರ್ಗ ದೇವಸ್ಥಾನದಲ್ಲಿ ಚಿತ್ರೀಕರಣ ಆರಂಭವಾಗಿತ್ತು. ಇತ್ತೀಚೆಗೆ ಬೆಂಗಳೂರಿನಲ್ಲಿ ಚಿತ್ರೀಕರಣ ಮುಕ್ತಾಯವಾಗಿದೆ. ಪೋಸ್ಟ್ ಪ್ರೊಡಕ್ಷನ್ ವರ್ಕ್ ಆರಂಭವಾಗಿದೆ. ಇದನ್ನೂ ಓದಿ:ರಾಘವ್ ಲಾರೆನ್ಸ್-ಕಂಗನಾ ನಟನೆಯ ‘ಚಂದ್ರಮುಖಿ 2’ ಎಂಟ್ರಿಗೆ ಮುಹೂರ್ತ ಫಿಕ್ಸ್

    ಕಾಂತಾರ 2 RISHAB SHETTY

    ಕಾಮಿಡಿ ಹಾಗೂ ಡ್ರಾಮಾ ಜಾನರ್ ನ ಈ ಚಿತ್ರವನ್ನು ಎಂ.ಭರತ್ ರಾಜ್ ನಿರ್ದೇಶಿಸಿದ್ದಾರೆ (M. Bharat Raj) . ಪ್ರಮೋದ್ ಶೆಟ್ಟಿ ಹಾಗೂ ತೇಜು ಬೆಳವಾಡಿ (Teju Belawadi) ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ಎಂ.ಭರತ್ ರಾಜ್ ನಿರ್ದೇಶಿಸುತ್ತಿರುವ ಈ ಚಿತ್ರದ ಮುಖ್ಯಪಾತ್ರದಲ್ಲಿ ಪ್ರಮೋದ್ ಶೆಟ್ಟಿ ಹಾಗೂ ತೇಜು ಬೆಳವಾಡಿ ನಟಿಸುತ್ತಿದ್ದಾರೆ.

    ವಿಷ್ಣುವಿಜಯ್ ಸಂಗೀತ ನಿರ್ದೇಶನ, ಚಂದ್ರಶೇಖರ್ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನ ‘ಲಾಫಿಂಗ್ ಬುದ್ದ’ ಚಿತ್ರಕ್ಕಿದೆ. ಇದೊಂದು ಹೊಸ ಬಗೆಯ ಕಥೆಯನ್ನು ಹೊಂದಿರುವ ಸಿನಿಮಾವಾಗಿದ್ದು, ಇದೇ ಮೊದಲ ಬಾರಿಗೆ ಪ್ರಮೋದ್ (Pramod Shetty) ಈ ಸಿನಿಮಾದ ಮೂಲಕ ನಾಯಕರಾಗುತ್ತಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗಂಟುಮೂಟೆ ಟ್ರೇಲರ್‌ಗೆ ಕಿಚ್ಚನ ಮೆಚ್ಚುಗೆ!

    ಗಂಟುಮೂಟೆ ಟ್ರೇಲರ್‌ಗೆ ಕಿಚ್ಚನ ಮೆಚ್ಚುಗೆ!

    ಬೆಂಗಳೂರು: ರೂಪಾ ರಾವ್ ನಿರ್ದೇಶನದಲ್ಲಿ ಮೂಡಿ ಬಂದಿರೋ ಗಂಟುಮೂಟೆ ಚಿತ್ರವೀಗ ಚರ್ಚೆಯ ಕೇಂದ್ರಬಿಂದುವಾಗಿ ಬದಲಾಗಿದೆ. ಕನ್ನಡದಲ್ಲಿ ಮಹಿಳಾ ನಿರ್ದೇಶಕಿಯರ ಕೊರತೆ ಕಾಡುತ್ತಿರೋ ಕಾಲದಲ್ಲಿಯೇ ಹೊಸ ಬಗೆಯ ಕಥೆಯೊಂದಿಗೆ ಎಂಟ್ರಿ ಕೊಟ್ಟಿರೋ ರೂಪಾ ರಾವ್ ಪಾಲಿಗಿದು ಆರಂಭಿಕ ಹೆಜ್ಜೆಯಾದರೂ ಭರ್ಜರಿಯಾಗಿಯೇ ಸದ್ದು ಮಾಡಿದ್ದಾರೆ. ಇತ್ತೀಚೆಗಷ್ಟೇ ಈ ಚಿತ್ರದ ಟ್ರೇಲರ್ ಲಾಂಚ್ ಆಗಿತ್ತು. ಇದಕ್ಕೆ ವ್ಯಾಪಕ ಸದಭಿಪ್ರಾಯ ಮೂಡಿಕೊಂಡಿರೋ ವಾತಾವರಣದಲ್ಲಿಯೇ ಕಿಚ್ಚ ಸುದೀಪ್ ಕೂಡಾ ಈ ಟ್ರೇಲರನ್ನು ಮೆಚ್ಚಿಕೊಂಡಿದ್ದಾರೆ.

    ಗಂಟುಮೂಟೆ ಟ್ರೇಲರ್ ಬಗ್ಗೆ ಸುದೀಪ್ ಟ್ವೀಟ್ ಮಾಡೋ ಮೂಲಕ ಒಳ್ಳೆ ಮಾತುಗಳನ್ನಾಡಿದ್ದಾರೆ. ಈ ಸಣ್ಣ ಟ್ರೇಲರ್ ಸಾವಿರ ಮಾತುಗಳನ್ನಾಡುತ್ತಿದೆ. ಇದುವೇ ಈ ಚಿತ್ರ ಅದ್ಭುತ ಚಿಂತನೆಯೊಂದಿಗೆ ಮೂಡಿ ಬಂದಿರೋ ಸೂಚನೆಗಳನ್ನೂ ನೀಡುವಂತಿದೆ ಅಂದಿರೋ ಸುದೀಪ್ ಇಡೀ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಖುದ್ದು ಸುದೀಪ್ ಅವರೇ ಈ ರೀತಿ ಮೆಚ್ಚಿಕೊಂಡು ಮಾತಾಡಿರೋದರಿಂದ ಗಂಟುಮೂಟೆಯತ್ತ ಅಗಾಧ ಪ್ರಮಾಣದಲ್ಲಿ ಪ್ರೇಕ್ಷಕರು ಚಿತ್ತ ನೆಟ್ಟಿದ್ದಾರೆ. ರೂಪಾ ರಾವ್ ಸೇರಿದಂತೆ ಚಿತ್ರತಂಡಕ್ಕೆ ಹೊಸ ಹುರುಪೂ ಸಿಕ್ಕಂತಾಗಿದೆ.

    ಗಂಟುಮೂಟೆ ಟ್ರೇಲರ್ ಹೀಗೆ ಎಲ್ಲ ದಿಕ್ಕಿನಿಂದಲೂ ಒಳ್ಳೆ ಪ್ರತಿಕ್ರಿಯೆ ಪಡೆದುಕೊಳ್ಳುವಂತೆಯೇ ಮೂಡಿ ಬಂದಿದೆ. ತೊಂಬತ್ತರ ದಶಕದ ಹೈಸ್ಕೂಲು ಪ್ರೇಮದ ಕಥೆ ಹೇಳೋ ಈ ಸಿನಿಮಾ ಈಗಾಗಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಹೆಸರು ಮಾಡಿದೆ. ಬಿಡುಗಡೆಗೂ ಮುನ್ನವೇ ವಿದೇಶಗಳಲ್ಲಿಯೂ ಕನ್ನಡದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿದಿದೆ. ಹಾಗೆಂದಾಕ್ಷಣ ಇದೇನು ಆರ್ಟ್ ಮೂವಿ ಅಂದುಕೊಳ್ಳಬೇಕಿಲ್ಲ. ಪಕ್ಕಾ ಕಮರ್ಶಿಯಲ್ ಅಂಶಗಳೊಂದಿಗೆ ಅಪರೂಪದ ಕಥೆಯ ಜೊತೆಗೇ ರೂಪಾ ಈ ಚಿತ್ರವನ್ನು ರೂಪಿಸಿದ್ದಾರಂತೆ.

    https://www.facebook.com/publictv/videos/742395332886864/?v=742395332886864

  • ಟ್ರೇಲರ್ ಮೂಲಕ ಬಿಚ್ಚಿಕೊಂಡಿತು ಹೈಸ್ಕೂಲು ಪ್ರೇಮದ ‘ಗಂಟುಮೂಟೆ’!

    ಟ್ರೇಲರ್ ಮೂಲಕ ಬಿಚ್ಚಿಕೊಂಡಿತು ಹೈಸ್ಕೂಲು ಪ್ರೇಮದ ‘ಗಂಟುಮೂಟೆ’!

    ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಇದೀಗ ಚಾಲ್ತಿಯಲ್ಲಿರುವ ಹೊಸಾ ಅಲೆಯ ಚಿತ್ರಗಳ ಸಾಲಿಗೆ ಸೇರ್ಪಡೆಯಾಗುವಂಥಾ ಗಂಟುಮೂಟೆಯೀಗ ಎಲ್ಲೆಡೆ ಸದ್ದು ಮಾಡುತ್ತಿದೆ. ಈಗಾಗಲೇ ಹೈಸ್ಕೂಲು ಪ್ರೇಮದ, ಹದಿಹರೆಯದ ಆವೇಗದ ಕಥೆಯ ಸುಳಿವಿನೊಂದಿಗೆ ಈ ಚಿತ್ರ ಜೋರಾಗಿಯೇ ಸದ್ದು ಮಾಡುತ್ತಿದೆ. ಇದೀಗ ರೂಪಾ ರಾವ್ ನಿರ್ದೇಶನ ಮಾಡಿರೋ ‘ಗಂಟುಮೂಟೆ’ಯ ಟ್ರೇಲರ್ ಬಿಡುಗಡೆಯಾಗಿದೆ.

    ಸಾಮಾನ್ಯವಾಗಿ ಪ್ರೇಮ ಕಥೆಗಳು ಹುಡುಗಕನ ದೃಷ್ಟಿಕೋನದಿಂದಲೇ ಬಿಚ್ಚಿಕೊಳ್ಳುತ್ತವೆ. ಆದರೆ ಹದಿಹರೆಯದ ಪುಳಕ, ತಲ್ಲಣಗಳ ಕಥೆ ಹೊಂದಿರೋ ಗಂಟುಮೂಟೆಯ ಕಥೆ ಹುಡುಗಿಯೊಬ್ಬಳ ಬಿಂದುವಿನಿಂದ ತೆರೆದುಕೊಳ್ಳುತ್ತದೆ. ನಿರ್ದೇಶಕಿ ರೂಪಾ ರಾವ್ ಈ ಹಿಂದೆಯೇ ಇಂಥಾ ಹಿಂಟ್ ಕೊಟ್ಟಿದ್ದರು. ಈ ಟ್ರೇಲರ್ ಮೂಲಕ ಅದು ಪರಿಣಾಮಕಾರಿಯಾಗಿಯೇ ಜಾಹೀರಾಗಿದೆ. ತುಸು ಬೋಲ್ಡ್ ಆಗಿಯೇ ಹೆಣ್ಣೊಬ್ಬಳ ಕೇಂದ್ರದಿಂದ ಪ್ರೇಮಕಥಾನಕದ ಗುಟ್ಟು ಬಿಟ್ಟುಕೊಡುವಂತಿರೋ ಈ ಸಿನಿಮಾದ ಟ್ರೇಲರ್ ಪರಿಣಾಮಕಾರಿಯಾದ ಹಿಒನ್ನೆಲೆ ಧ್ವನಿ, ಅದರಲ್ಲಿ ಕೇಳಿ ಬಂದಿರೋ ವಿಚಾರಗಳು ಮತ್ತು ಅದಕ್ಕೆ ಪೂರಕವಾದ ದೃಷ್ಯಾವಳಿಗಳಿಂದಲೇ ಭರವಸೆ ಮೂಡಿಸಿದೆ.

    ಗಂಟುಮೂಟೆ ರೂಪಾ ರಾವ್ ನಿರ್ದೇಶನದಲ್ಲಿ ಮೂಡಿ ಬಂದಿರೋ ಮೊದಲ ಚಿತ್ರ. ಈಗಾಗಲೇ ಹಲವಾರು ವೆಬ್ ಸೀರೀಸ್ ಮೂಲಕ ಬೇರೆ ಭಾಷೆಗಳಲ್ಲಿಯೂ ಹೆಸರು ಮಾಡಿರೋ ಅವರೀಗ ಈ ಚಿತ್ರದ ಮೂಲಕ ಹೈಸ್ಕೂಲು ಮನೋಲೋಕದ ಭಿನ್ನ ಪದರುಗಳನ್ನು ಪ್ರೇಕ್ಷಕರ ಮುಂದೆ ಅನಾವರಣಗೊಳಿಸಲು ಮುಂದಾಗಿದ್ದಾರೆ. ಈಗ ಬಂದಿರೋ ಟ್ರೇಲರ್ ಈ ಕಥೆ ಬೇರೆಯದ್ದೇ ಜಾಡಿನದ್ದೆಂಬುದನ್ನು ಜಾಹೀರು ಮಾಡುವಂತಿದೆ. ಈಗಾಗಲೇ ಟಂತಾರಾಷ್ಟ್ರೀಯ ಮಟ್ಟದಲ್ಲಿಯೂ ಗುರುತು ಮೂಡಿಸಿ ಟಾಕ್ ಕ್ರಿಯೇಟ್ ಮಾಡಿರೋ ಗಂಟುಮೂಟೆಯೀಗ ಟ್ರೇಲರ್ ಮೂಲಕ ನಿರ್ಣಾಯಕವಾಗಿಯೇ ಸದ್ದು ಮಾಡುತ್ತಿದೆ.

    https://www.facebook.com/publictv/videos/742395332886864/