Tag: Tejaswvi Surya

  • ತೇಜಸ್ವಿ ಆಡಿಯೋ – ಚಿಕ್ಕಮಗಳೂರು ಯುವ ಮೋರ್ಚಾ ಅಧ್ಯಕ್ಷನಿಗೆ ಕೊಕ್‌

    ತೇಜಸ್ವಿ ಆಡಿಯೋ – ಚಿಕ್ಕಮಗಳೂರು ಯುವ ಮೋರ್ಚಾ ಅಧ್ಯಕ್ಷನಿಗೆ ಕೊಕ್‌

    ಚಿಕ್ಕಮಗಳೂರು: ಸಂಸದ ತೇಜಸ್ವಿ ಸೂರ್ಯ ಜೊತೆಗಿನ ಆಡಿಯೋ ವೈರಲ್‌ ಆದ ಬೆನ್ನಲ್ಲೇ ಯುವ ಮೋರ್ಚಾ ಅಧ್ಯಕ್ಷ ಸ್ಥಾನದಲ್ಲಿದ್ದ ಸಂದೀಪ್‌ ಅವರಿಗೆ ಕೊಕ್‌ ನೀಡಲಾಗಿದೆ.

    ದಕ್ಷಿಣ ಕನ್ನಡದ ಬೆಳ್ಳಾರೆಯಲ್ಲಿ ಬಿಜೆಪಿ ಯುವ ನಾಯಕ ಪ್ರವೀಣ್‌ ನೆಟ್ಟಾರು ಅವರ ಹತ್ಯೆಯ ಬಳಿಕ ಅಧ್ಯಕ್ಷ ಸ್ಥಾನಕ್ಕೆ ಸಂದೀಪ್‌ ಅವರು ರಾಜೀನಾಮೆ ನೀಡಿದ್ದರು. ಈವರ ರಾಜೀನಾಮೆ ಬಳಿಕ ಹಲವು ಯುವ ಮೋರ್ಚಾ ಸದಸ್ಯರು ರಾಜೀನಾಮೆ ನೀಡತೊಡಗಿದರು. ಇದನ್ನೂ ಓದಿ: ಇದೊಂದು ಬಾರಿ ನನ್ನನ್ನು ಗೆಲ್ಲಿಸಿ – ಚುನಾವಣೆಗೂ ಮುನ್ನವೇ ಶ್ರೀರಾಮುಲುಗೆ ಢವಢವ

    ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ತೇಜಸ್ವಿ ಸೂರ್ಯ ಅವರು ಕರೆ ಮಾಡಿ ಸಂದೀಪ್‌ ಅವರ ಜೊತೆ ಮಾತನಾಡಿದ್ದರು. ಕರೆಯಲ್ಲಿ ಮಾತನಾಡುವಾಗ,”ಕಾಂಗ್ರೆಸ್ ಸರ್ಕಾರ ಇದ್ದಿದ್ರೆ ಕಲ್ಲು ಹೊಡೆಯಬಹುದಿತ್ತು” ಎಂದು ಹೇಳಿದ್ದರು.

    ಈ ಆಡಿಯೋ ತೇಜಸ್ವಿ ಸೂರ್ಯ ಮತ್ತು ಬಿಜೆಪಿಗೆ ಮುಜುಗರ ತಂದಿತ್ತು. ವಿಪಕ್ಷಗಳು ಟೀಕೆ ಮಾಡಿದ್ದರೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಈಗ ಸಂದೀಪ್ ಅವರಿಗೆ ಕೊಕ್ ನೀಡಿ ಸಂತೋಷ್ ಕೊಟ್ಯಾನ್ ಅವರನ್ನು ಜಿಲ್ಲಾಧ್ಯಕ್ಷ ಕಲ್ಮರುಡಪ್ಪ ನೇಮಕ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]