Tag: Tejaswini Anant Kumar

  • ಬಿಜೆಪಿ, ಆರ್‌ಎಸ್‌ಎಸ್‌ ಕನಸು ನನಸಾಗಿದೆ: ತೇಜಸ್ವಿನಿ ಅನಂತ್ ಕುಮಾರ್

    ಬಿಜೆಪಿ, ಆರ್‌ಎಸ್‌ಎಸ್‌ ಕನಸು ನನಸಾಗಿದೆ: ತೇಜಸ್ವಿನಿ ಅನಂತ್ ಕುಮಾರ್

    ಬೆಂಗಳೂರು: ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಕನಸು ನನಸಾಗಿದೆ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷೆ ತೇಜಸ್ವಿನಿ ಅನಂತ್ ಕುಮಾರ್ ಹೇಳಿದ್ದಾರೆ.

    ಅಯೋಧ್ಯೆ ತೀರ್ಪು ವಿಚಾರವಾಗಿ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷೆ ತೇಜಸ್ವಿನಿ ಅನಂತ್ ಕುಮಾರ್ ಹರ್ಷ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಶಿವಗಂಗೆಯಲ್ಲಿ ಮಾತನಾಡಿದ ತೇಜಸ್ವಿನಿ ಅನಂತ್ ಕುಮಾರ್, ಅಂದು ಎಲ್.ಕೆ. ಅಡ್ವಾಣೆ ನೇತೃತ್ವದಲ್ಲಿ ರಾಮ ರಥಯಾತ್ರೆ ಮಾಡಿದ್ದು ಇಂದು ಸಾರ್ಥಕವಾಯ್ತು ಎಂದು ಹೇಳಿದರು.

    ಅಡ್ವಾಣಿ ಜೊತೆ ಅನಂತ್ ಕುಮಾರ್ ಕೂಡ ರಥಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಸುಪ್ರೀಂ ಕೋರ್ಟ್ ತೀರ್ಪಿನಿಂದಾಗಿ ಭಾರತೀಯ ಜನತಾ ಪಕ್ಷ ಮತ್ತು ಸಂಘ ಪರಿವಾರದ ಕನಸು ನನಸಾಗಿದೆ. ಆದ್ದರಿಂದ ಅಯೋಧ್ಯೆ ತೀರ್ಪು ಸ್ವಾಗತಾರ್ಹ ಎಂದು ಹೇಳಿದರು. ಉಪ ಚುನಾವಣೆಯ ವೇಳೆ ನಾನು ರಾಜಕೀಯದ ಬಗ್ಗೆ ಮಾತನಾಡಲಾರೆ. ಉಪ ಚುನಾವಣೆ ಸ್ಪರ್ಧೆ ಬಗ್ಗೆಯೂ ನಾನು ಏನು ಉತ್ತರಿಸಲಾರೆ ಎಂದು ತಿಳಿಸಿದರು.

  • ಬೆಂಗಳೂರು ದಕ್ಷಿಣದಲ್ಲಿ ಬಿಜೆಪಿ ಗೆಲುವು: ತೇಜಸ್ವಿನಿ ಅನಂತ್‍ಕುಮಾರ್

    ಬೆಂಗಳೂರು ದಕ್ಷಿಣದಲ್ಲಿ ಬಿಜೆಪಿ ಗೆಲುವು: ತೇಜಸ್ವಿನಿ ಅನಂತ್‍ಕುಮಾರ್

    ಬೆಂಗಳೂರು: ಈ ಬಾರಿಯೂ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ದಾಖಲಿಸಲಿದೆ ಎಂದು ದಿ.ಅನಂತ್‍ಕುಮಾರ್ ಪತ್ನಿ ತೇಜಸ್ವಿನಿ ಅನಂತಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    1991ರಲ್ಲಿ ಅನಂತ್‍ಕುಮಾರ್ ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಬಿಜೆಪಿ ಬಾವುಟವನ್ನು ಹಾರಿಸಿದ್ದರು. 1996ರಿಂದ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಅನಂತ್‍ಕುಮಾರ್ ತಮ್ಮ ಪರಿಶ್ರಮ ಮತ್ತು ಸ್ವಚ್ಛ ಆಡಳಿತದಿಂದಾಗಿ 6 ಬಾರಿ ಕ್ಷೇತ್ರದಲ್ಲಿ ಜಯ ಸಾಧಿಸಿದ್ದರು. ಸದ್ಯ ಸ್ಪರ್ಧೆ ಮಾಡಿರುವ ತೇಜಸ್ವಿ ಸೂರ್ಯ ಅವರಿಗೆ ಒಳ್ಳೆಯದಾಗಲಿ ಎಂದು ಶುಭಕೋರಿ ತೇಜಸ್ವಿನಿ ಅನಂತ್ ಕುಮಾರ್ ಟ್ವೀಟ್ ಮಾಡಿದ್ದಾರೆ.

    ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ, ಅನಂತ್ ಕುಮಾರ್ ಜೀ ಮತ್ತು ನೀವು ನನ್ನ ಜೀವನದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ವ್ಯಕ್ತಿಗಳು. ನಿಮ್ಮ ಪ್ರೀತಿ ಮತ್ತು ಆಶೀರ್ವಾದಕ್ಕೆ ನಾನು ಆಭಾರಿಯಾಗಿದ್ದೇನೆ. ಅನಂತ್ ಕುಮಾರ್ ಕಾರ್ಯಶೈಲಿಯಿಂದ ಪ್ರೇರಿತಗೊಂಡ ವ್ಯಕ್ತಿ ನಾನಾಗಿದ್ದು, ಒಳ್ಳೆಯ ಕೆಲಸ ಮಾಡುವ ಶಕ್ತಿಯನ್ನು ದೇವರು ನನಗೆ ಕರುಣಿಸಲಿ ಎಂದು ಪ್ರಾರ್ಥಿಸಿಕೊಳ್ಳುತ್ತೇನೆ ಎಂದು ಬರೆದು ಟ್ವೀಟ್ ಮಾಡಿದ್ದಾರೆ.

    ಚುನಾವಣೆ ಘೋಷಣೆಯಾದಾಗ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ತೇಜಸ್ವಿನಿ ಅನಂತ್‍ಕುಮಾರ್ ಸ್ಪರ್ಧೆ ಮಾಡಲಿದ್ದಾರೆ ಎಂಬ ಮಾತುಗಳು ಬಲವಾಗಿ ಕೇಳಿ ಬಂದಿದ್ದವು. ಆದ್ರೆ ಕೊನೆ ಕ್ಷಣದಲ್ಲಿ ಬಿಜೆಪಿ ಯುವ ನಾಯಕನಾಗಿರುವ ತೇಜಸ್ವಿ ಸೂರ್ಯರಿಗೆ ಟಿಕೆಟ್ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದರು. ಕಾಂಗ್ರೆಸ್‍ನಿಂದ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ಕಣದಲ್ಲಿದ್ದಾರೆ.

  • ತೇಜಸ್ವಿನಿ ಅನಂತ್‍ಕುಮಾರ್ ಟಿಕೆಟ್ ಕೈತಪ್ಪಿದಕ್ಕೆ ಕಾರಣವೇನು ಎಂಬುವುದು ಗೊತ್ತಾಗಬೇಕು: ವಿ ಸೋಮಣ್ಣ

    ತೇಜಸ್ವಿನಿ ಅನಂತ್‍ಕುಮಾರ್ ಟಿಕೆಟ್ ಕೈತಪ್ಪಿದಕ್ಕೆ ಕಾರಣವೇನು ಎಂಬುವುದು ಗೊತ್ತಾಗಬೇಕು: ವಿ ಸೋಮಣ್ಣ

    ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ತೇಜಸ್ವಿನಿ ಅನಂತ್‍ಕುಮಾರ್ ಅವರಿಗೆ ಟಿಕೆಟ್ ಕೈ ತಪ್ಪಿದ ಹಿಂದಿನ ಕಾರಣವೇನು ಎಂಬುವುದು ಗೊತ್ತಾಗಬೇಕಿದೆ ಎಂದು ಪಕ್ಷದ ಮುಖಂಡ ವಿ ಸೋಮಣ್ಣ ಹೇಳಿದ್ದಾರೆ.

    ಬಸವನಗುಡಿಯ ತೇಜಸ್ವಿನಿ ಅನಂತಕುಮಾರ್ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ ಬಳಿಕ ಶಾಸಕ ವಿ.ಸೋಮಣ್ಣ ಮಾಧ್ಯಮಗಳೊಂದಿಗೆ ಮಾತನಾಡಿದರು. ಇದೊಂದು ದುರ್ದೈವದ ಸಂಗತಿ. ಹೀಗೆ ಆಗಬಾರದಿತ್ತು, ವಿಧಿ ಇದು ಅಷ್ಟೇ. ತೇಜಸ್ವಿನಿ ಅವರು ಯಾವುದೇ ತಪ್ಪು ಮಾಡಿಲ್ಲ. ಅಂತಹವರಿಗೆ ಹೀಗೆ ಮಾಡಿದ್ದು ಸರಿಯಿಲ್ಲ. ಏನಾಗಿದೆ ಎಂಬುವುದು ನಾಲ್ಕು ಗೋಡೆ ಮಧ್ಯೆಯಾದರು ನಮಗೆ ಗೊತ್ತಾಗಬೇಕು. ರವಿಸುಬ್ರಮಣ್ಯ, ಪಕ್ಷದ ನೇತಾರರು ಕಾಲ್ ಮಾಡಿದ್ದರು. ಅವರಿಗೆ ಸ್ಪಷ್ಟವಾಗಿ ಹೇಳಿದ್ದೀನಿ, ಇದರಲ್ಲಿ ನಮ್ಮ ಭವಿಷ್ಯವೂ ಆಡಗಿದೆ. ಹಾಗಾಗಿ ಟಿಕೆಟ್ ಕಡೇ ಕ್ಷಣದಲ್ಲಿ ಕೈ ತಪ್ಪಿದ್ದು ಹೇಗೆ, ಏಕೆ? ಯಾರು ಕಾರಣ? ಎಲ್ಲವೂ ಗೊತ್ತಾಗಬೇಕಿದೆ ಎಂದರು.

    ತೇಜಸ್ವಿನಿ ಅನಂತಕುಮಾರ್ ಅವರಿಗೆ ಟಿಕೆಟ್ ತಪ್ಪಿದ ಹಿಂದಿನ ಸತ್ಯವೇನು ಎಂದು ತಿಳಿಸುವಂತೆ ಶಾಸಕ ರವಿಸುಬ್ರಮಣ್ಯಗೆ ಕೇಳಿದ್ದೇನೆ. ಇದರ ಹಿಂದೆ ಶಾಸಕ ರವಿಸುಬ್ರಮಣ್ಯ ಪಾತ್ರ ದೊಡ್ಡದಿದೆ. ಇದಲ್ಲದೆ ಬಿಜೆಪಿ ಹಿರಿಯ ನಾಯಕರೊಂದಿಗೆ ಇನ್ನು ಮೂರು ದಿನದ ಒಳಗೆ ಸಭೆ ನಡೆಸಲು ಸೂಚಿಸಿದ್ದೇನೆ. ಆ ಬಳಿಕ ಹೈಕಮಾಂಡ್ ನಿರ್ಧಾರದ ಬಗ್ಗೆ ಸ್ಪಷ್ಟತೆ ಸಿಗಲಿದೆ ಎಂದು ಹೇಳಿದರು.

    ಈಗಾಗಲೇ ರವಿಸುಬ್ರಮಣ್ಯ ಅವರು ಶಾಸಕರಾಗಿದ್ದಾರೆ ಅವರ ಅಣ್ಣನ ಮಗನಿಗೆ ಲೋಕಸಭಾ ಚುನಾವಣೆಗೆ ಟಿಕೆಟ್ ನೀಡಿದ್ದಾರೆ. ತೇಜಸ್ವಿ ಸೂರ್ಯ ಇನ್ನೂ ಯುವಕ, ಅನುಭವದ ಅವಶ್ಯಕತೆಯಿದೆ. ಅನಂತ್‍ಕುಮಾರ್ ರಾಷ್ಟ್ರ ರಾಜಕಾರಣದಲ್ಲಿ ಅಜಾತಶತ್ರು. ಅಂತಹ ವ್ಯಕ್ತಿಯ ಪತ್ನಿಗೆ ಅನ್ಯಾಯವಾಗಿದ್ದು ತಮಗೆ ನೋವಾಗಿದೆ ಎಂದರು. ಅಲ್ಲದೇ ಈಗಲೇ ಟೇಕನ್ ಫಾರ್ ಗ್ರ್ಯಾಂಟ್ ಪಾಲಿಸಿ ಆದರೆ ನಮ್ಮ ಭವಿಷ್ಯಕ್ಕೂ ಕುತ್ತು ಬರುತ್ತೆ ಎಂದರು.

    ನಾವು ಪಕ್ಷ ಶಿಸ್ತಿನ ಸಿಪಾಯಿಗಳು, ಪಕ್ಷ ಏನು ನಿರ್ಧಾರ ಕೈಗೊಂಡರು ಸಮ್ಮತಿ. ಗೊತ್ತಿದ್ದು ತಪ್ಪು ಆದ್ರೆ ಮಾತ್ರ ವಿವರಣೆ ಕೇಳುತ್ತೆವೆ. ಬೇರೆ ಯಾವ ಕುಟುಂಬಕ್ಕೂ ಇಂತಹ ಸ್ಥಿತಿ ಉಂಟಾಗಬಾರದು. ಮನಸ್ಸಿನಲ್ಲಿ ಏನಿದೆ ಎಂಬುದನ್ನು ಹೇಳಿದ್ದೇನೆ. ದಿಢೀರ್ ಬೆಳವಣಿಗೆ ಒಪ್ಪಿಕೊಳ್ಳಲು ವಿವರಣೆ ಹೇಳಿದ್ದೇನೆ. ಪಕ್ಷವೇ ನಮಗೇ ತಾಯಿ. ನಮ್ಮ ಮನಸ್ಸಿನ ಭಾರವನ್ನಷ್ಟೇ ಕಡಿಮೆ ಮಾಡಿಕೊಳ್ಳಲು ಯತ್ನಿಸುತ್ತಿದ್ದೇವೆ ಎಂದರು.

    ಇದಕ್ಕೂ ಮುನ್ನ ತೇಜಸ್ವಿನಿ ಅನಂತ್‍ಕುಮಾರ್ ನಿವಾಸಕ್ಕೆ ಶಾಸಕ ರಾಮದಾಸ್ ಭೇಟಿ ನೀಡಿ ಮಾತುಕತೆ ನಡೆಸಿದರು.