Tag: tejasvisurya

  • ಸ್ಕೈವಾಕ್‌  ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿ – ಡಿಕೆಶಿಗೆ ಸೂರ್ಯ ಪತ್ರ

    ಸ್ಕೈವಾಕ್‌ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿ – ಡಿಕೆಶಿಗೆ ಸೂರ್ಯ ಪತ್ರ

    ಬೆಂಗಳೂರು: ಕೈ  (Congress) ಸರ್ಕಾರದಿಂದ ನಗರದ ಅಭಿವೃದ್ಧಿಗಾಗಿ ದುಡ್ಡು ಬಿಡುಗಡೆ ಮಾಡುವಂತೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ (Tejasvi Surya)  ಡಿಸಿಎಂ ಡಿಕೆ.ಶಿವಕುಮರ್‌ಗೆ  (D.K. Shivakumar) ಪತ್ರ ಬರೆದಿದ್ದಾರೆ.

    ಕಾಂಗ್ರೆಸ್ ಸರ್ಕಾರದಲ್ಲಿ ಬೆಂಗಳೂರು ಅಭಿವೃದ್ಧಿಗೆ ದುಡ್ಡು ಬಿಡುಗಡೆ ಮಾಡುವಂತೆ ಬಿಜೆಪಿ ನಾಯಕರು ಒತ್ತಡ ನೀಡುತ್ತಿದ್ದಾರೆ. ಈ ಹಿಂದೆ ಇದೇ ವಿಚಾರವಾಗಿ ಶಾಸಕ ಮುನಿರತ್ನ ಮನವಿ ಮಾಡಿದ್ದರು. ಈಗ ತೇಜಸ್ವಿ ಸೂರ್ಯ ಡಿಕೆಶಿಗೆ ಪತ್ರ ಬರೆದಿದ್ದಾರೆ. ಇದನ್ನೂ ಓದಿ:  ಮುಸ್ಲಿಮರಿಗೆ ಉಡುಗೊರೆ, ರೈತರಿಗೆ ಗಾಯದ ಮೇಲೆ ಬರೆ: ಅಶೋಕ್‌ ಕಿಡಿ

    ನಗರದ ಸಂಚಾರ ದೃಷಿಯಿಂದ ಬಹುಮುಖ್ಯ ಪ್ರದೇಶವಾಗಿರುವ ಬನಶಂಕರಿಯಲ್ಲಿ ಬಿಎಂಟಿಸಿ ಬಸ್ ನಿಲ್ದಾಣ ಮತ್ತು ಮೆಟ್ರೋ ನಿಲ್ದಾಣಗಳ ನಡುವೆ ಸಾರ್ವಜನಿಕರ ಸಂಚಾರಕ್ಕೆ ಬಹಳ ತೊಂದರೆಯಾಗುತ್ತಿದೆ. ಇವುಗಳ ಮಧ್ಯೆ ದಿನನಿತ್ಯ ಸಂಚಾರ ಮಾಡುವ ಜನರಿಗಾಗಿ ಸ್ಕೈವಾಕ್‌ ನಿರ್ಮಾಣ ಮಾಡಬೇಕು. ಸ್ಕೈವಾಕ್‌ ನಿರ್ಮಾಣಕ್ಕೆ ಸರ್ಕಾರದಿಂದ ದುಡ್ಡು ಬಿಡುಗಡೆ ಮಾಡುವಂತೆ ಆಗ್ರಹಿಸಿದ್ದಾರೆ. ಇದನ್ನೂ ಓದಿ: ನಿಖಿಲ್ ಮಂಡ್ಯ ಕಣದಿಂದ ಹಿಂದೆ ಸರಿದಿದ್ದೇಕೆ?

    ಇದೇ ವಿಚಾರವನ್ನು ಹಲವಾರು ಬಾರಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ ಮತ್ತು ನಿಮ್ಮ ಗಮನಕ್ಕೂ ತಂದಿದ್ದೇನೆ. ಅದಕ್ಕೆ ತಾವು ಸಕಾರಾತ್ಮಕವಾಗಿ ಸ್ಪಂದಿಸಿದ್ದೀರಿ. ಸಾಕಷ್ಟು ಬಾರಿ ದೂರವಾಣಿ ಕರೆ ಮಾಡಿದ್ದೇನೆ. ಆದರೆ ಕಾಮಗಾರಿ ಬಗ್ಗೆ ಮಾತ್ರ ಇನ್ನೂ ಸ್ಪಷ್ಟನೆ ಇಲ್ಲ. ನಾವು ಅಲ್ಲಿ ಸ್ಕೈವಾಕ್‌ ನಿರ್ಮಿಸುವುದರಿಂದ 50 ಸಾವಿರ ಜನಕ್ಕೆ ಪ್ರಯೋಜನವಾಗಲಿದೆ. ಹೀಗಾಗಿ ಬಿಬಿಎಂಪಿ ಬಜೆಟ್‌ನಲ್ಲಿ ಅನುದಾನ ಮೀಸಲಿಡಿ ಎಂದು ಡಿಕೆ.ಶಿವಕುಮಾರ್ ಅವರಿಗೆ ತೇಜಸ್ವಿ ಸೂರ್ಯ ಪತ್ರ ಬರೆದಿದ್ದಾರೆ. ಇದನ್ನೂ ಓದಿ: ಬೇಸಿಗೆಗೂ ಮುನ್ನವೇ ಕುಡಿಯೋ ನೀರಿಗೆ ಹಾಹಾಕಾರ – ವಾಟರ್‌ ಟ್ಯಾಂಕರ್‌ ಮಾಲೀಕರಿಂದ ದುಪ್ಪಟ್ಟು ದರ ಸುಲಿಗೆ!

  • ತೇಜಸ್ವಿ ಸೂರ್ಯಗೆ ಹೂ ಕೊಡಲು ಬಂದ ಕೈ ಕಾರ್ಯಕರ್ತೆ ವಶಕ್ಕೆ

    ತೇಜಸ್ವಿ ಸೂರ್ಯಗೆ ಹೂ ಕೊಡಲು ಬಂದ ಕೈ ಕಾರ್ಯಕರ್ತೆ ವಶಕ್ಕೆ

    ಬೆಂಗಳೂರು: ಸಂಸದ ತೇಜಸ್ವಿಸೂರ್ಯ ಅವರಿಗೆ ಹೂ ನೀಡಲು ಬಂದ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

    ಕಲ್ಲು ಹೊಡೆಯುವುದು ಬೇಡ ನಾವು ಉಡುಗೊರೆಯಾಗಿ ಕಲ್ಲುಗಳನ್ನು ಹಾಗೂ ಹೂ ಕೊಡುತ್ತೇವೆ ಅಂತಾ ಕಾಂಗ್ರೆಸ್ ಕಾರ್ಯಕರ್ತರು ತೇಜಸ್ವಿ ಸೂರ್ಯ ನಿವಾಸದ ಬಳಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದರು. ಇದನ್ನೂ ಓದಿ: ಆರಗ ಮನೆಗೆ ನುಗ್ಗಿದ ABVP ಕಾರ್ಯಕರ್ತರಿಗೆ ಲಾಠಿ ಏಟು

    ಗಿರಿನಗರ ಸರ್ಕಲ್‍ನಿಂದ ತೇಜಸ್ವಿ ಸೂರ್ಯ ನಿವಾಸಕ್ಕೆ ರ್‍ಯಾಲಿ ನಡೆಸಲು ಪ್ಲ್ಯಾನ್ ಕೂಡ ಮಾಡಿದ್ದರು. ಹೀಗಾಗಿ ಕಾಂಗ್ರೆಸ್ ಕಾರ್ಯಕರ್ತರಿಂದ ಮುತ್ತಿಗೆ ಹಿನ್ನೆಲೆ ಇಂದು ತೇಜಸ್ವಿ ಸೂರ್ಯ ನಿವಾಸ ಬಳಿ ಭದ್ರತೆ ವಹಿಸಲಾಗಿತ್ತು. ಆದರೂ ಪೊಲೀಸ್ ಸರ್ಪಗಾವಲು ನಡುವೆಯೂ ತೇಜಸ್ವಿ ಸೂರ್ಯ ನಿವಾಸದ ಮುಂದೆ ಬಂದು, ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ಕಾಂಗ್ರೆಸ್ ಕಾರ್ಯಕರ್ತರು ಸೇರಿದ್ದರು. ಆದರೆ ಪ್ರತಿಭಟನೆ ಆರಂಭಕ್ಕೂ ಮುನ್ನವೇ ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಇದೇ ವೇಳೆ ದ್ವಿಚಕ್ರವಾಹನದಲ್ಲಿ ಪ್ರೆಸ್ ಅಂತಾ ಬೋರ್ಡ್ ಹಾಕಿಕೊಂಡು ಬಂದು ಕಲ್ಲು ಹೊಡೆಯೋದು ಬೇಡ ಹೂ ಕೊಡುತ್ತೇವೆ ಅಂತಾ ಹೂ ತಂದಿದ್ದ ಕಾಂಗ್ರೆಸ್ ಕಾರ್ಯಕರ್ತೆಯನ್ನು ಕೂಡ ಪೊಲೀಸರು ವಶಕ್ಕೆ ಪಡೆದುಕೊಂಡರು. ಇದನ್ನೂ ಓದಿ: ಬಚ್ಚನಕೇರಿ ಗ್ರಾಮದಲ್ಲಿ ಕಿತ್ತೂರು ಅರಮನೆ ನಿರ್ಮಾಣ – ಸ್ಥಳೀಯರಿಂದ ವಿರೋಧ

    ತೇಜಸ್ವಿ ಸೂರ್ಯ ಹೇಳಿದ್ದೇನು?
    ಬೆಳ್ಳಾರೆಯ ಬಿಜೆಪಿ ಕಾರ್ಯಕರ್ತ ಪ್ರವೀಣ್ ಹತ್ಯೆಯ ಬಳಿಕ ರಾಜ್ಯದಲ್ಲಿ ನಮ್ಮದೇ ಸರ್ಕಾರ ಇದ್ದರೂ ರಕ್ಷಣೆ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿ ಬಿಜೆಪಿ ಕಾರ್ಯಕರ್ತರು ಈಗ ಸಾಮೂಹಿಕ ರಾಜೀನಾಮೆ ನೀಡುತ್ತಿದ್ದಾರೆ.

    ಇದೇ ವಿಚಾರವಾಗಿ ರಾಜೀನಾಮೆ ವಾಪಸ್ ಪಡೆಯುವಂತೆ ಚಿಕ್ಕಮಗಳೂರಿನ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಸಂದೀಪ್‍ಗೆ ತೇಜಸ್ವಿ ಸೂರ್ಯ ಕರೆ ಮಾಡಿದ್ದರು. ಸರ್ಕಾರ ನಮ್ಮದೆ ಇದೆ. ಒಂದು ವೇಳೆ ಕಾಂಗ್ರೆಸ್ ಸರ್ಕಾರದಲ್ಲಿ ಹತ್ಯೆಯಾಗಿದ್ದರೆ ಕಲ್ಲು ಹೊಡೆಯಬಹುದಿತ್ತು ಎಂದು ಸಂದೀಪ್ ಜೊತೆ ಫೋನ್‍ನಲ್ಲಿ ತೇಜಸ್ವಿ ಸೂರ್ಯ ಮಾತನಾಡಿದ್ದರು. ಈ ಆಡಿಯೋ ವೈರಲ್ ಆಗಿತ್ತು. ಈ ಹೇಳಿಕೆ ಈಗ ಭಾರೀ ಚರ್ಚೆಗೆ ಕಾರಣವಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಇದೊಂದು ವ್ಯವಸ್ಥಿತ ಕೊಲೆಗಳ ಷಡ್ಯಂತ್ರ – 5 ಲಕ್ಷ ರೂ. ಚೆಕ್ ನೀಡಿದ ತೇಜಸ್ವಿ ಸೂರ್ಯ

    ಇದೊಂದು ವ್ಯವಸ್ಥಿತ ಕೊಲೆಗಳ ಷಡ್ಯಂತ್ರ – 5 ಲಕ್ಷ ರೂ. ಚೆಕ್ ನೀಡಿದ ತೇಜಸ್ವಿ ಸೂರ್ಯ

    ಶಿವಮೊಗ್ಗ: ಲೋಕಸಭಾ ಸದಸ್ಯ ತೇಜಸ್ವಿ ಸೂರ್ಯ ಹರ್ಷ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿ ಕುಟುಂಬಕ್ಕೆ ಬಿಜೆಪಿ ಯುವ ಮೋರ್ಚಾದ ವತಿಯಿಂದ 5 ಲಕ್ಷ ರೂ. ಚೆಕ್ ನೀಡಿದ್ದಾರೆ.

    ಹರ್ಷ ಮನೆಗೆ ಭೇಟಿ ನೀಡಿದ ನಂತರ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಹಾಗೂ ಯುವ ಘಟಕ ರಾಜ್ಯದ ತಂಡದವರೆಲ್ಲರು ಅವರ ಮನೆಗೆ ಭೇಟಿ ನೀಡಿದ್ದೇವೆ. ಹರ್ಷ ಹಿಂದುತ್ವಕ್ಕಾಗಿ ಬದುಕಿದ ಹುಡುಗನಾಗಿದ್ದನು. ಅವರನ್ನು ಅತ್ಯಂತ ಅಮಾನುಷವಾಗಿ ಬರ್ಬರವಾಗಿ ಕೊಲ್ಲಲಾಗಿದೆ. ದೇಶಕ್ಕಾಗಿ ಹೇಗೆ ಯೋಧರು ಹುತ್ಮಾತ್ಮರಾಗುತ್ತಾರೋ ಹಾಗೇ ನನ್ನ ಮಗ ಹುತಾತ್ಮ ನಾಗಿದ್ದಾನೆ ಅಂತ ಅವರ ತಾಯಿ ಹೇಳಿದರು ಎಂದರು. ಇದನ್ನೂ ಓದಿ: ನಟ ಚೇತನ್ ಕಾಣೆಯಾಗಿದ್ದಾರೆ ಎಂದು ಪತ್ನಿ ದೂರು

    ಪ್ರತಿ ಮನೆಯಲ್ಲಿಯೂ ಹರ್ಷ ನಂತ ಹಿಂದೂ ಹುಟ್ಟಬೇಕು ಅಂದಿದ್ದಾರೆ. ಫೇಸ್ ಬುಕ್ ಪೋಸ್ಟ್ ಮಾಡಿದ್ದಾಗ ಈ ರೀತಿ ಆಗುತ್ತದೆ ಅಂದರೆ ಐಸಿಸಿಗೂ ನಮಗೂ ಏನೂ ವ್ಯತ್ಯಾಸ ಇದೆ? ಹತ್ಯೆ ಮಾಡಿದ ರಾಕ್ಷಕರಿಗೆ ಒಂದು ಮಾತು ಹೇಳುತ್ತೇನೆ. ರಾಜ್ಯದಲ್ಲಿ ಹಿಂದೂತ್ವದ ಸರ್ಕಾರ ಇದ್ದು, ನಿಮ್ಮನ್ನು ಹುಡುಕಿ ಗಲ್ಲಿಗೇರಿಸಬೇಕು ಎಂದು ಮುಖ್ಯಮಂತ್ರಿ ಮತ್ತು ರಾಜ್ಯ ಸರ್ಕಾರದ ಮನವಿ ಮಾಡಿಕೊಳ್ಳುತ್ತೇನೆ. ಹಿಂದೂ ಹರ್ಷನ ಹತ್ಯೆ ಮರ್ಡರ್ ಅಲ್ಲ, ಭಯೋತ್ಪಾದಕ ಕೃತ್ಯ ಅಂತಾನೇ ಪ್ರಕರಣ ದಾಖಲಾಗಬೇಕು ಎಂದರು.  ಇದನ್ನೂ ಓದಿ: ಹಿಂದೂ ಕಾರ್ಯಕರ್ತ ಕೊಲೆ ಪ್ರಕರಣ – 7ನೇ ಆರೋಪಿ ಅರೆಸ್ಟ್‌

     

    ಈಗಾಗಲೇ ನಾಲ್ಕು ಜನ ಸುಪಾರಿ ಕಿಲ್ಲರ್‍ಗಳನ್ನು ಅರೆಸ್ಟ್ ಮಾಡಲಾಗಿದೆ. ರಾಜ್ಯದಲ್ಲಿ ಕೋಕಾ ಕಾಯ್ದೆ ಜಾರಿಗೊಳಿಸಬೇಕು. ಎಸ್‍ಡಿಪಿಐ, ಪಿಎಫ್‍ಐ, ಸಿಎಫ್‍ಐ ಸೇರಿದಂತೆ ಹಲವು ಮುಸ್ಲಿಂ ಸಂಘಟನೆಗಳನ್ನು ಬ್ಯಾನ್ ಮಾಡಬೇಕು. ಇವುಗಳನ್ನೂ ಬ್ಯಾನ್ ಮಾಡಲು ಕೇಂದ್ರ ಸರ್ಕಾರಕ್ಕೆ ದಾಖಲೆ ಸಮೇತ ಕರುಡು ಸಲ್ಲಿಕೆ ಮಾಡಬೇಕು. ಹಿಂದೂಗಳ ಹತ್ಯೆ ಕೇವಲ ಮರ್ಡರ್ ಅಲ್ಲ. ಅದೊಂದು ವ್ಯವಸ್ಥಿತ ಮರ್ಡರ್‍ಗಳ ಷಡ್ಯಂತ್ರ ಎಂದರು.