Tag: Tejasvi Surya

  • ಹಿಂದೆಂದೂ ಆಗದ ಅಭಿವೃದ್ಧಿ ಕಳೆದ 5 ವರ್ಷಗಳಲ್ಲಿ ಆಗಿದೆ: ತೇಜಸ್ವಿ ಸೂರ್ಯ

    ಹಿಂದೆಂದೂ ಆಗದ ಅಭಿವೃದ್ಧಿ ಕಳೆದ 5 ವರ್ಷಗಳಲ್ಲಿ ಆಗಿದೆ: ತೇಜಸ್ವಿ ಸೂರ್ಯ

    ಮಂಡ್ಯ: ಎಲ್ಲೆಲ್ಲಿ ಡಬಲ್ ಎಂಜಿನ್ ಸರ್ಕಾರ ಇದೆಯೋ ಅಲ್ಲೆಲ್ಲಾ ಅಭಿವೃದ್ಧಿ ಆಗಿದೆ. ಬೇರೆ ಸರ್ಕಾರಗಳಿರುವ ರಾಜ್ಯದಲ್ಲಿ ಕೇಂದ್ರದ ಯೋಜನೆಗಳು ತಲುಪಿಲ್ಲ. ಹಿಂದೆಂದೂ ಆಗದ ಅಭಿವೃದ್ಧಿ ಕಳೆದ 5 ವರ್ಷಗಳಲ್ಲಿ ಆಗಿದೆ ಎಂದು ಸಂಸದ ತೇಜಸ್ವಿ ಸೂರ್ಯ (Tejasvi Surya) ಹೇಳಿದ್ದಾರೆ.

    ಮಂಡ್ಯದಲ್ಲಿ (Mandya) ನಡೆದ ಬಿಜೆಪಿ (BJP) ಯುವ ಮೋರ್ಚಾ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಿಮ್ಮ ಧ್ವನಿ ಕಾಂಗ್ರೆಸ್ (Congress), ಜೆಡಿಎಸ್ ಅಡಿಪಾಯ ಅಲ್ಲಾಡುವಂತಿರಬೇಕು ಎಂದು ಕಾರ್ಯಕರ್ತರಿಗೆ ಹುರುಪು ತುಂಬಿದರು. ಇದನ್ನೂ ಓದಿ: ಬಿಜೆಪಿಯಿಂದ ಪ್ರಣಾಳಿಕೆ ರಚನಾ ಕಾರ್ಯ ಚುರುಕು; ಜನರಿಂದ ಸಲಹೆ ಸಂಗ್ರಹಕ್ಕೆ ಚಾಲನೆ

    ಕಳೆದ 70 ವರ್ಷಗಳಲ್ಲಿ ಆಗದ ಹೈವೇ, ರೈಲ್ವೆ ಅಭಿವೃದ್ಧಿ ಕೆಲಸ ಬಿಜೆಪಿ ಸರ್ಕಾರದಲ್ಲಿ ಆಗಿದೆ. ಕಾಂಗ್ರೆಸ್ ಆಡಳಿತದಲ್ಲಿ ಕಟ್ಟಿದ ಮೆಡಿಕಲ್ ಕಾಲೇಜುಗಳಿಗಿಂತ ಹೆಚ್ಚು ಕಾಲೇಜು ಮೋದಿ ಸರ್ಕಾರ ಮಾಡಿದೆ. ಬಿಜೆಪಿ ಸರ್ಕಾರದ ಅಭಿವೃದ್ಧಿ ಕೆಲಸಗಳು ಮನೆ ಮನಗಳಿಗೆ ತಲುಪಿಸಬೇಕು ಎಂದರು.

    ಹಳೇ ಮೈಸೂರಿನ ಜನರು ಬೆಂಗಳೂರಿಗೆ ಕೆಲಸಕ್ಕೆ ಬರುತ್ತಾರೆ. ಕಾರಣ ಇಲ್ಲಿಂದ ಗೆದ್ದವರು ಯುವಕರಿಗೆ ಉದ್ಯೋಗ ನೀಡುವ ಕೆಲಸ ಮಾಡಲಿಲ್ಲ. ಬೊಮ್ಮಾಯಿ ನೇತೃತ್ವದ ಸರ್ಕಾರ ಮೈಶುಗರ್ ಗೆ ಹಣ ನೀಡಿ ಕಾರ್ಖಾನೆ ಆರಂಭಿಸಿದೆ. ಕಣ್ಣು ಬಿಡದ ಬೆಕ್ಕಿನ ಮರಿಗಳು ಜೆಡಿಎಸ್, ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದು ಹೇಳುತ್ತಿದೆ. ಕಣ್ಣು ಬಿಡಿ. ಅಧಿಕಾರಕ್ಕೆ ಬರುವುದು ಬಿಜೆಪಿ ಪಕ್ಷ ಎಂದು ಅಜ್ಜಿ ಮತ್ತು ಬೆಕ್ಕಿನಮರಿಗಳ ಕಥೆ ಹೇಳಿ ಕಾಂಗ್ರೆಸ್ ಹಾಗೂ ಜೆಡಿಎಸ್ (JDS) ಪಕ್ಷಗಳನ್ನು ಅಣಕಿಸಿದರು. ಇದನ್ನೂ ಓದಿ: ನಾನು ಹುಟ್ಟಿರೋದೆ ಮಾಂಸ ತಿನ್ನೋ ಜಾತಿಯಲ್ಲಿ, ಆದ್ರೆ ಮಾಂಸ ತಿಂದು ದೇವಾಲಯಕ್ಕೆ ಹೋಗಿಲ್ಲ: ಸಿ.ಟಿ ರವಿ

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕರ್ನಾಟಕಕ್ಕೆ 100 ರೂ. ನೀಡಿದರೆ, ದೇಶಕ್ಕೆ ಕರ್ನಾಟಕ ಸಾವಿರ ರೂ. ನೀಡಲಿದೆ: ತೇಜಸ್ವಿ ಸೂರ್ಯ

    ಕರ್ನಾಟಕಕ್ಕೆ 100 ರೂ. ನೀಡಿದರೆ, ದೇಶಕ್ಕೆ ಕರ್ನಾಟಕ ಸಾವಿರ ರೂ. ನೀಡಲಿದೆ: ತೇಜಸ್ವಿ ಸೂರ್ಯ

    – ಕಾಂಗ್ರೆಸ್ ಕಂಬಿ ಇಲ್ಲದ ರೈಲು ಬಿಟ್ಟಿತ್ತು
    – 70 ವರ್ಷದಲ್ಲಿ ಆಗದ ಪ್ರಗತಿ 8 ವರ್ಷದಲ್ಲಿ ಆಗಿದೆ

    ನವದೆಹಲಿ: ಕರ್ನಾಟಕದ ಅಭಿವೃದ್ಧಿಗೆ ನೂರು ರೂಪಾಯಿ ನೀಡಿದರೆ, ದೇಶದ ಅಭಿವೃದ್ಧಿಗೆ ಕರ್ನಾಟಕ ಸಾವಿರ ರೂಪಾಯಿ ನೀಡಲಿದೆ. ಇದು ಕರ್ನಾಟಕದ ತಾಕತ್ತು ಎಂದು ಸಂಸದ ತೇಜಸ್ವಿ ಸೂರ್ಯ (Tejasvi Surya) ಹೇಳಿದ್ದಾರೆ. ಲೋಕಸಭೆಯಲ್ಲಿ (Lok Sabha) ಬಜೆಟ್ (Budget) ಮೇಲೆ ಮಾತನಾಡಿದ ಅವರು 70 ವರ್ಷದಲ್ಲಿ ಆಗದ ಅಭಿವೃದ್ಧಿ ಕಾರ್ಯಗಳು 8 ವರ್ಷದಲ್ಲಿ ಸಾಧ್ಯವಾಗಿವೆ ಎಂದು ಹೇಳಿದರು.

    ಸುದೀರ್ಘ ಭಾಷಣ ಮಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದಲ್ಲಿ ಪ್ರಗತಿ ಪರ ಬಜೆಟ್ ಮಂಡಿಸಲಾಗಿದೆ. ಅಮೃತ್ ಕಾಲದಲ್ಲಿ ದೇಶದ ಯುವಕರನ್ನು ದೃಷ್ಟಿಯಲ್ಲಿಟ್ಟುಕೊಂಡು ಯೋಜನೆಗಳನ್ನು ರೂಪಿಸಿದೆ. ಕಳೆದ 8-9 ವರ್ಷಗಳಿಂದ ಕರ್ನಾಟಕಕ್ಕೆ ಹಲವು ಯೋಜನೆಗಳು ಮೋದಿ ಸರ್ಕಾರದಿಂದ ಸಿಕ್ಕಿದೆ. ಅದಕ್ಕಾಗಿ ನಾನು ಕರ್ನಾಟಕದ (Karnataka) ಜನರ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

    ನರೇಂದ್ರ ಮೋದಿ ಅವರಿಂದ ಕರ್ನಾಟಕ ಸರ್ವಾಂಗೀಣ ಪ್ರಗತಿಯಾಗಿದೆ. ಕಳೆದ 8 ವರ್ಷದಲ್ಲಿ 4,000 ಕಿ.ಮೀಗೂ ಅಧಿಕ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಿದೆ. 1 ಲಕ್ಷ 16 ಸಾವಿರ ಕೋಟಿ ಯೋಜನೆಗಳನ್ನು ರಸ್ತೆಗೆ ನೀಡಿದೆ. ಬೆಂಗಳೂರಿನಿಂದ (Bengaluru) ಬೇರೆ ಬೇರೆ ರಾಜ್ಯಗಳ ಪ್ರಮುಖ ನಗರಗಳಿಗೆ ಸಂಪರ್ಕ ನೀಡಿದೆ. 70 ವರ್ಷದಲ್ಲಿ ಆಗದ ಅಭಿವೃದ್ಧಿ 8 ವರ್ಷದಲ್ಲಿ ಆಗಿದೆ. ಇದರಿಂದ ಕರ್ನಾಟಕ ಜನರಿಗೆ ದೊಡ್ಡ ಉಪಯೋಗವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಮೋದಿ ಸರ್ಕಾರದ ಅವಧಿಯಲ್ಲಿ ರೈಲ್ವೇ ವಲಯದಲ್ಲೂ ಸಾಕಷ್ಟು ಕ್ರಾಂತಿಯಾಗಿದೆ, ಯುಪಿಎ ಸರ್ಕಾರಕ್ಕಿಂತ ಎರಡು ಪಟ್ಟು ಡಬ್ಲಿಂಗ್ ಕೆಲಸ ನಮ್ಮ ಸರ್ಕಾರದಲ್ಲಿ ಆಗಿದೆ. ಈ ವರ್ಷ 7600 ಕೋಟಿ ರೂ. ಅನುದಾನ ಕರ್ನಾಟಕಕ್ಕೆ ನೀಡಿದೆ. 55 ರೈಲ್ವೆ ನಿಲ್ದಾಣಗಳನ್ನು ವಿಶ್ವ ದರ್ಜೆಗೆ ಏರಿಸಲಾಗುತ್ತಿದೆ. ಚಿಕ್ಕಮಗಳೂರಿಗೆ ಚುನಾವಣೆ ಸ್ಪರ್ಧಿಸಲು ಇಂದಿರಾಗಾಂಧಿ ಬಂದಾಗ ರೈಲ್ವೆ ಬ್ರಾಡ್‍ಗೇಜ್, ಡಬ್ಲಿಂಗ್ ಭರವಸೆ ನೀಡಿದ್ದರು. ಆದರೆ ಇಂದಿರಾ, ರಾಜೀವ್, ಸೋನಿಯಾ ಗಾಂಧಿ ಬಂದು ಹೋದರೂ ಅಭಿವೃದ್ಧಿಯಾಗಲಿಲ್ಲ. 30-40 ವರ್ಷ ಕಂಬಿನೇ ಇಲ್ಲದೇ ರೈಲು ಬಿಟ್ಟರು. ಆದರೆ ನಮ್ಮ ಸರ್ಕಾರದಲ್ಲಿ ಅತಿ ಹೆಚ್ಚು ರೈಲ್ವೆ ಯೋಜನೆಗಳನ್ನು ನೀಡಿದೆ ಎಂದು ತಿಳಿಸಿದರು.

    ಕಳೆದ 8 ವರ್ಷದಲ್ಲಿ ಉಡಾನ್ ಯೋಜನೆ ಅಡಿ ವಿಮಾನ ನಿಲ್ದಾಣಗಳನ್ನು ನಿರ್ಮಿಸಿದೆ. ಪ್ರತಿ 200-300 ಕಿ.ಮೀಗೆ ಒಂದರಂತೆ ಒಂಭತ್ತು ವಿಮಾನ ನಿಲ್ದಾಣಗಳನ್ನು ಮೋದಿ ಸರ್ಕಾರ ನೀಡಿದೆ. ಕರಾವಳಿ ಪ್ರದೇಶದಲ್ಲಿ ಬಂದರುಗಳನ್ನು ಅಭಿವೃದ್ಧಿ ಮಾಡಿದೆ. ಮಂಗಳೂರು ಬಂದರು ಅಭಿವೃದ್ಧಿಗೆ 3,500 ಕೋಟಿ ನೀಡಿದೆ. ಏಷ್ಯಾದಲ್ಲಿ ಅತಿ ದೊಡ್ಡದು ಎನಿಸಿಕೊಂಡಿರುವ ಐಎನ್‍ಎಸ್ ಕಂದಬ ನೌಕಾ ನೆಲೆ ಪುನರುಜ್ಜೀವನಕ್ಕೆ 12,000 ಕೋಟಿ ಅಭಿವೃದ್ಧಿಗೆ ನೀಡಿದೆ ಎಂದು ಹೇಳಿದರು.

    ನೀರಿನ ವಿಚಾರದಲ್ಲಿ ಮೋದಿ ಸರ್ಕಾರ ದೊಡ್ಡ ಕೊಡುಗೆ ನೀಡಿದೆ. ಆಲಮಟ್ಟಿ ಡ್ಯಾಂ ಮಟ್ಟ ಏರಿಸಲು ವಾಜಪೇಯಿ ಸರ್ಕಾರ ಅನುಮತಿ ನೀಡಿತ್ತು. ಈಗ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ನರೇಂದ್ರ ನೀಡಿದ್ದಾರೆ. ಮಹದಾಯಿ ಯೋಜನೆಗೆ ಡಿಪಿಆರ್‍ಗೆ ಅನುಮತಿ ನೀಡಿದೆ. ಜಲ ಜೀವನ್ ಮಿಷನ್ ನಡಿ ಮನೆ ಮನೆಗೂ ನೀರು ನೀಡುವ ಕೆಲಸ ಮಾಡುತ್ತಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ 24 ಲಕ್ಷ ಮನೆಗಳಿಗೆ ಮಾತ್ರ ನಲ್ಲಿಯಲ್ಲಿ ನೀರು ಬರುತ್ತಿತ್ತು. ಇಂದು 55 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ನಲ್ಲಿಯಿಂದ ನೀರು ಬರುತ್ತಿದೆ ಎಂದರು.

    ಬೆಂಗಳೂರಿಗೆ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಆದ್ಯತೆ ನೀಡಿದ್ದಾರೆ. ಸಬ್ ಅರ್ಬನ್ ರೈಲ್ವೆ ಯೋಜನೆ 40 ವರ್ಷದಿಂದ ಬಾಕಿ ಇತ್ತು. ಮೋದಿ ಅವರು 40 ತಿಂಗಳಲ್ಲಿ ಯೋಜನೆ ಪೂರ್ಣ ಮಾಡುವ ಆಶ್ವಾಸನೆ ನೀಡಿದ್ದರೆ ಅದಕ್ಕೆ ಹಣಕಾಸಿನ ನೆರವು ನೀಡಲಾಗುತ್ತಿದೆ. ಟ್ರಾಫಿಕ್ ಸಮಸ್ಯೆ ಸರಿ ಮಾಡಲು ಮೆಟ್ರೋಗೆ ಆದ್ಯತೆ ನೀಡಿದೆ. 8 ವರ್ಷದ ಹಿಂದೆ 8 ಕಿ.ಮೀ ಮೆಟ್ರೋ ಮಾರ್ಗ ಇತ್ತು. ಈಗ 56 ಕಿ.ಮೀ ಮಾರ್ಗ ಹೊಂದಿದೆ. ಶೀಘ್ರದಲ್ಲಿ ವಿಮಾನ ನಿಲ್ದಾಣಕ್ಕೂ ಸಂಪರ್ಕ ನೀಡಲಾಗುತ್ತಿದೆ ಎಂದು ಹೇಳಿದರು.

    ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ಮೋದಿ ಸರ್ಕಾರ ನೀಡಿದೆ. 17,000 ಕೋಟಿ ಬೆಂಗಳೂರು ಹೊರವಲಯದ ರಿಂಗ್ ರಸ್ತೆಗೆ ನೀಡಿದೆ. ಕೇವಲ ಬೆಂಗಳೂರು ಮಾತ್ರವಲ್ಲದೇ ಜಿಲ್ಲೆಗಳ ಅಭಿವೃದ್ಧಿಗಾಗಿ ಧಾರವಾಡಕ್ಕೆ ಐಐಟಿ, ರಾಯಚೂರಿಗೆ ಐಐಐಟಿ, ತುಮಕೂರಿಗೆ ಹೆಲಿಕಾಪ್ಟರ್ ಉತ್ಪಾದನಾ ಘಟಕ, ಟ್ವಾಯ್ ಕ್ಲಸ್ಟರ್, ಟೆಕ್ಸಟೈಲ್ ಕ್ಲಸ್ಟರ್‌ಗಳನ್ನು ನಮ್ಮ ಸರ್ಕಾರ ನೀಡಿದೆ. ದೇಶದ ಮೊಲದ ಸೆಮಿ ಕಂಡಕ್ಟರ್ ಫ್ಯಾಬ್ ಯುನಿಟ್ ಅನ್ನು ಮೈಸೂರಿಗೆ ನೀಡಿದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಸಿದ್ದರಾಮಯ್ಯ ಕೋಲಾರ ಅಖಾಡಕ್ಕೆ ಸಿದ್ದು ಆಪ್ತ ಅಹಿಂದ ಟೀಂ ಎಂಟ್ರಿ

    ಕಾನೂನು ಸುರಕ್ಷತೆಗಾಗಿ ಪಿಎಫ್‍ಐ ಅನ್ನು ಬ್ಯಾನ್ ಮಾಡುವ ಮೂಲಕ ರಾಜ್ಯದ ಜನರಿಗೆ ಸುರಕ್ಷತೆ ನೀಡಿದ್ದಾರೆ. ಮೋದಿ ಅವರ 5 ಟ್ರಿಲಿಯನ್ ಆರ್ಥಿಕತೆ ಗುರಿಗೆ ಕರ್ನಾಟಕ ಒಂದೇ 1 ಟ್ರಿಲಿಯನ್ ಕೊಡುಗೆ ನೀಡಲಿದೆ. ಕರ್ನಾಟಕದ ಅಭಿವೃದ್ಧಿಗೆ ನೂರು ರೂಪಾಯಿ ನೀಡಿದರೆ ಕರ್ನಾಟಕ ಒಂದು ಸಾವಿರ ಆದಾಯ ದೇಶಕ್ಕೆ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ತೇಜಸ್ವಿ ಸೂರ್ಯ ಕನ್ನಡದಲ್ಲೇ ಭಾಷಣ ಮಾಡಿದ್ದು ವಿಶೇಷವಾಗಿತ್ತು. ಇದನ್ನೂ ಓದಿ: ಟಿಕೆಟ್ ಹಂಚಿಕೆ ಸಿದ್ಧತೆಯಲ್ಲಿ ಕಾಂಗ್ರೆಸ್‌ಗೆ ಜಾತಿ ಸಮೀಕರಣದ ಹೊಸ ತಲೆನೋವು

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ತೇಜಸ್ವಿ ಸೂರ್ಯಗೆ ಅಮಾವಾಸ್ಯೆ ಎಂದು ಕರೆಯುತ್ತೇನೆ: ಸಿದ್ದರಾಮಯ್ಯ

    ತೇಜಸ್ವಿ ಸೂರ್ಯಗೆ ಅಮಾವಾಸ್ಯೆ ಎಂದು ಕರೆಯುತ್ತೇನೆ: ಸಿದ್ದರಾಮಯ್ಯ

    ಕಲಬುರಗಿ: ಬಿಜೆಪಿ ಸಂಸದ ತೇಜಸ್ವಿ ಸೂರ್ಯ (Tejasvi Surya) ಅಮಾವಾಸ್ಯೆ, ಅದಕ್ಕೆ ನಾನು ಅಮಾವಾಸ್ಯೆ ಎಂದು ಕರೆಯುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಆಕ್ರೋಶ ಹೊರಹಾಕಿದರು.

    ಕಲಬುರಗಿ (Kalaburagi) ಜಿಲ್ಲೆಯ ಚಿತಾಪುರ ತಾಲೂಕಿನಲ್ಲಿ ಹಮ್ಮಿಕೊಂಡಿದ್ದ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಅವರು, ರೈತರ ಸಾಲ ಮನ್ನಾ ಮಾಡುವುದರಿಂದ ದೇಶಕ್ಕೆ ನಷ್ಟ ಆಗುತ್ತದೆ. ಆರ್ಥಿಕ ಪರಿಸ್ಥಿತಿ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂಬ ಹೇಳಿಕೆಯನ್ನು ತೇಜಸ್ವಿ ಸೂರ್ಯ ಅವರು ನೀಡಿದ್ದು, ಈ ಮಾತನ್ನು ಯಾರು ಸಹ ಖಂಡಿಸಿಲ್ಲ ಎಂದು ಹೇಳಿದರು.

    ಕಾರ್ಪೊರೇಟ್‌ ವಲಯದ 14 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಿದ್ದಾರೆ. ಆದರೆ ರೈತರ ಸಾಲ ಮನ್ನಾ ಮಾಡಲು ಆಗುತ್ತಿಲ್ಲ ಬಿಜೆಪಿ (BJP) ಪಕ್ಷದವರಿಗೆ ಎಂದು ತೇಜಸ್ವಿ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಸಿದ್ದರಾಮಯ್ಯ ಹೊಸಪೇಟೆಯಿಂದ ಸ್ಪರ್ಧಿಸಿದ್ರೆ ಹೊಲ ಮಾರಿ ಕೋಟಿ ರೂ. ದೇಣಿಗೆ ನೀಡ್ತೀನೆಂದ ಅಭಿಮಾನಿ!

    ಓರ್ವ ಸಂಸದನಾಗಿ ಇಂತಹ ಹೇಳಿಕೆ ನೀಡುತ್ತಾನೆ ಎಂದರೆ, ಇದು ಬಿಜೆಪಿಯ (BJP) ಆಂತರಿಕ ಚಿಂತನೆ ಎಂದು ಏಕವಚನದಲ್ಲೇ ಕಿಡಿಕಾರಿದರು. ಇದನ್ನೂ ಓದಿ: ಹಸಿವಿನಿಂದ ಬಳಲಿದವರನ್ನು ರಕ್ಷಣೆ ಮಾಡಿದ್ದು ಸಿದ್ದರಾಮಯ್ಯ ಸರ್ಕಾರ: ಜಮೀರ್

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸಾರ್ವಜನಿಕ ಸ್ಥಳಗಳಲ್ಲಿ ಕಮಲ ಪೇಂಟಿಂಗ್ – ಸಂಸದ ತೇಜಸ್ವಿ ಸೂರ್ಯ ವಿರುದ್ಧ BBMP ಗರಂ

    ಸಾರ್ವಜನಿಕ ಸ್ಥಳಗಳಲ್ಲಿ ಕಮಲ ಪೇಂಟಿಂಗ್ – ಸಂಸದ ತೇಜಸ್ವಿ ಸೂರ್ಯ ವಿರುದ್ಧ BBMP ಗರಂ

    ಬೆಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿನ ಗೋಡೆಗಳ ಮೇಲೆ ಚಿತ್ರ ಬಿಡಿಸೋದು ಅಪರಾಧ ಎಂದು ಪರಿಗಣಿಸಿರುವ ಬಿಬಿಎಂಪಿ (BBMP), ಅಂಥವರ ವಿರುದ್ಧ ಸ್ವಯಂಪ್ರೇರಿತವಾಗಿ ಕೇಸ್ ದಾಖಲಿಸುವುದಾಗಿ ಎಚ್ಚರಿಕೆ ನೀಡಿದೆ.

    ಇದೀಗ ಸಂಸದ ತೇಜಸ್ವಿ ಸೂರ್ಯ (Tejasvi Sury) ಅವರು ಸಾರ್ವಜನಿಕ ಸ್ಥಳಗಳಲ್ಲಿ ಗೋಡೆಗಳ ಮೇಲೆ ಕಮಲ ಚಿತ್ರ ಪೇಯಿಂಟ್ (Painting) ಮಾಡಿದ್ದಾರೆ ಎನ್ನಲಾಗುತ್ತಿದ್ದು, ಸಂಸದರ ವಿರುದ್ಧ ಬಿಬಿಎಂಪಿ ಗರಂ ಆಗಿದೆ. ಇದನ್ನೂ ಓದಿ: ರಾಜ್ಯ ರಾಜಕೀಯ ಪ್ರವೇಶಿಸಲು ರೆಡಿಯಾಗಿದ್ದ ಸುಮಲತಾಗೆ ಬಿಗ್‌ ಶಾಕ್‌ – ಸಂಸದೆ ಸ್ಪರ್ಧೆಗೆ ರೈತ ಸಂಘದಿಂದ ವಿರೋಧ

    ಹೌದು, ಸಂಸದ ತೇಜಸ್ವಿ ಸೂರ್ಯ ಗೋಡೆಗಳ ಮೇಲೆ ಕಮಲ (Lotus) ಚಿತ್ರಕ್ಕೆ ಪೇಂಟಿಂಗ್ ಮಾಡಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಇದನ್ನೂ ಓದಿ: ವಿಡಿಯೋ ಕಾಲ್ ಮಾಡಿ ಹೆಂಡತಿ ತೋರಿಸದಿದ್ದಕ್ಕೆ ಸ್ನೇಹಿತನಿಗೆ ಚಾಕು ಇರಿತ

    ಜನವರಿ 31ರಂದು ವೀಡಿಯೋಗಳನ್ನ ತಮ್ಮ ಖಾತೆಯಲ್ಲಿ ಹಂಚಿಕೊಂಡಿರುವುದರ ಬಗ್ಗೆ ಚರ್ಚೆ ಶುರುವಾಗಿದೆ. ತೇಜಸ್ವಿ ಸೂರ್ಯ ಸಂಸದರಾಗಿ ಸಾರ್ವಜನಿಕ ಗೋಡೆಗಳಲ್ಲಿ ಪೇಂಟಿಂಗ್ ಮಾಡಿರೋದರ ಬಗ್ಗೆ ಸರಿ-ತಪ್ಪು ಚರ್ಚೆ ಶುರುವಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ಬಿಬಿಎಂಪಿ ಕೇಸ್ ಹಾಕುತ್ತಾ ಎನ್ನುವ ಪ್ರಶ್ನೆ ಎದ್ದಿದೆ.

    ದಾಳಿ ಮಾಡಿದಾಗ ಸರಿ ಇಲ್ಲ ಅಂತಾರೆ, ಈಗ ಸಿಬಿಐ ಪರವಾಗಿ ಮಾತನಾಡ್ತಾರೆ: ತೇಜಸ್ವಿ ಸೂರ್ಯ

    ಈ ಬಗ್ಗೆ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿರುವ ವಿಶೇಷ ಆಯುಕ್ತ ಜಯರಾಮ್ ರಾಯಪುರ, ದಕ್ಷಿಣ ವಲಯದಲ್ಲಿ ಗೋಡೆ ಮೇಲೆ ಕಮಲ ಚಿತ್ರ ಪೇಂಟಿಂಗ್ ಮಾಡಿರುವುದು ಬಿಬಿಎಂಪಿ ಗಮನಕ್ಕೆ ಬಂದಿದೆ. ಈ ಬಗ್ಗೆ ನಾವು ಸುಮೋಟೋ ಕೇಸ್ ದಾಖಲು ಮಾಡ್ತೀವಿ. ಯಾರೇ ಆಗ್ಲಿ ಈ ರೀತಿಯ ಕೃತ್ಯ ಮಾಡಿದ್ರೆ ಅದು ಅಫೇನ್ಸ್ ಆಗುತ್ತೆ. ಕೇಸ್ ದಾಖಲು ಮಾಡ್ತೀವಿ ಎಂದು ಎಚ್ಚರಿಕೆ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ತೇಜಸ್ವಿ ಸೂರ್ಯ ಫಸ್ಟ್‌ ರಿಯಾಕ್ಷನ್‌

    ತೇಜಸ್ವಿ ಸೂರ್ಯ ಫಸ್ಟ್‌ ರಿಯಾಕ್ಷನ್‌

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಫ್ಲೈಟ್‌ನಲ್ಲಿ ತೇಜಸ್ವಿ ಸೂರ್ಯ ಡೋರ್ ಓಪನ್ ಮಾಡಿಲ್ಲ: ಅಣ್ಣಾಮಲೈ ಸಮರ್ಥನೆ

    ಫ್ಲೈಟ್‌ನಲ್ಲಿ ತೇಜಸ್ವಿ ಸೂರ್ಯ ಡೋರ್ ಓಪನ್ ಮಾಡಿಲ್ಲ: ಅಣ್ಣಾಮಲೈ ಸಮರ್ಥನೆ

    ಚಿಕ್ಕಮಗಳೂರು: ತೇಜಸ್ವಿ ಸೂರ್ಯ (Tejasvi Surya) ವಿಮಾನದ ತುರ್ತು (Plane Door) ನಿರ್ಗಮನದ ಡೋರ್ ಓಪನ್ ಮಾಡಿಲ್ಲ. ಅದನ್ನ ರೊಟೇಟ್ ಮಾಡಿ ಓಪನ್ ಮಾಡ್ಬೇಕು. ಅವರು ಸಂಸದರು, ಬುದ್ಧಿವಂತರು, ಜವಾಬ್ದಾರಿ ಸ್ಥಾನದಲ್ಲಿದ್ದಾರೆ. ಅವರು ಡೋರ್ ಓಪನ್ ಮಾಡಿಲ್ಲ ಎಂದು ಸಂಸದ ತೇಜಸ್ವಿ ಸೂರ್ಯ ನಡೆಯನ್ನು ತಮಿಳುನಾಡು ಬಿಜೆಪಿ (BJP) ಅಧ್ಯಕ್ಷ ಅಣ್ಣಾಮಲೈ (Annamalai) ಸಮರ್ಥಿಸಿಕೊಂಡಿದ್ದಾರೆ.

    ಚಿಕ್ಕಮಗಳೂರು (Chikkamagaluru) ಉತ್ಸವದ ಹಿನ್ನೆಲೆ ಆಗಮಿಸಿದ್ದ ಅವರು ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ಸಂಸದ ತೇಜಸ್ವಿ ಸೂರ್ಯ ಅವರು ವಿಮಾನ ನಿಲ್ದಾಣದಲ್ಲಿ ವಿಮಾನದ ತುರ್ತು ನಿರ್ಗಮನದ ಬಾಗಿಲು ತೆರೆದಿದ್ದಾರೆಂಬ ಆರೋಪಕ್ಕೆ ಸಂಬಂಧಿಸಿದಂತೆ, ಅವರು ಡೋರ್ ಓಪನ್ ಮಾಡಿಲ್ಲ. ಅದನ್ನ ರೊಟೇಟ್ ಮಾಡಿ ಓಪನ್ ಮಾಡ್ಬೇಕು ಎಂದು ಸಮರ್ಥಿಸಿಕೊಂಡರು. ಇದನ್ನೂ ಓದಿ: ಬಜೆಟ್ ಅಧಿವೇಶನ ನಂತರ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ: ಎಸ್.ಆರ್ ಶ್ರೀನಿವಾಸ್

    ಅವರು ಕೂತಿದ್ದು ಎಮರ್ಜೆನ್ಸಿ ಎಕ್ಸಿಟ್ ಸೀಟಿನಲ್ಲಿ. ಎಟಿಆರ್ ಫ್ಲೈಟ್ ಸೀಟಲ್ಲಿ ಹ್ಯಾಂಡ್ ರೆಸ್ಟ್ ಇರಲ್ಲ. ಅಲ್ಲಿ ಎಕ್ಸಿಟ್ ಡೋರ್‌ನಲ್ಲಿ ಬೀಡಿಂಗ್ ಸ್ವಲ್ಪ ಓಪನ್ ಇತ್ತು. ಅದನ್ನ ಏರ್ ಹಾಸ್ಟೆಸ್ ಗಮನಕ್ಕೆ ತಂದರು. ಪೈಲೆಟ್ ಬಂದು ಡಿಬೋರ್ಡಿಂಗ್ ಮಾಡಿ, ಸರಿಯಾಗಿ ಫಿಟ್ ಮಾಡಿದ್ರು. ಅಲ್ಲಿ ತೇಜಸ್ವಿ ಇನ್ಸಿಡೆಂಟ್ ರಿಪೋರ್ಟ್ ಕೊಟ್ಟಿದ್ದಾರೆ ಎಂದರು.‌

    ತೇಜಸ್ವಿ ಸೂರ್ಯ ಡೋರ್‌ನ ಪುಲ್ ಮಾಡಿಲ್ಲ. ಫ್ಲೈಟ್ ಹೊರಟಿದ್ದು ತಡವಾಗಿದ್ದಕ್ಕೆ ಇತರೆ ಪ್ರಯಾಣಿಕರಿಗೆ ಕ್ಷಮೆ ಕೇಳಿದ್ದಾರೆ. ಇಂಡಿಗೋ ಅವರೇ ಕ್ಲಾರಿಫಿಕೇಶನ್ ಮಾಡಿ, ಇನ್ಸಿಡೆಂಟ್ ರಿಪೋರ್ಟ್ ಬಿಡುಗಡೆ ಮಾಡಿದ್ದಾರೆ. ಕರ್ನಾಟಕ ಕಾಂಗ್ರೆಸ್‌ಗೆ ಮಾತನಾಡಲು ಬೇರೆ ವಿಷಯ ಇಲ್ಲ. ಹಾಗಾಗಿ ಇಂತಹ ವಿಷಯವನ್ನ ಇಟ್ಟುಕೊಂಡು ಮಾತನಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಅಣ್ಣಾಮಲೈ ಕಿಡಿಕಾರಿದ್ದಾರೆ. ಇದನ್ನೂ ಓದಿ: ಬಿಜೆಪಿಗೇ ಪ್ರಧಾನಿಯೇ ಬಂಡವಾಳ, ಮೋದಿ ತೋರಿಸಿ ಮತ ಕೇಳ್ತಿದ್ದಾರೆ: ಸಿದ್ದರಾಮಯ್ಯ ಕಿಡಿ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ತೇಜಸ್ವಿ ಸೂರ್ಯ ಎಮರ್ಜೆನ್ಸಿ ಡೋರ್‌ ಓಪನ್‌ ಮಾಡಿಲ್ಲ

    ತೇಜಸ್ವಿ ಸೂರ್ಯ ಎಮರ್ಜೆನ್ಸಿ ಡೋರ್‌ ಓಪನ್‌ ಮಾಡಿಲ್ಲ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬೆಂಗಳೂರು ನಗರದ ಸಂಬಳದಾರರ ಮನೆ ಬಾಡಿಗೆ ಭತ್ಯೆ ಶೇ.50 ಹೆಚ್ಚಳಕ್ಕೆ ತೇಜಸ್ವಿ ಸೂರ್ಯ ಮನವಿ

    ಬೆಂಗಳೂರು ನಗರದ ಸಂಬಳದಾರರ ಮನೆ ಬಾಡಿಗೆ ಭತ್ಯೆ ಶೇ.50 ಹೆಚ್ಚಳಕ್ಕೆ ತೇಜಸ್ವಿ ಸೂರ್ಯ ಮನವಿ

    ಬೆಂಗಳೂರು: ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು(Bengaluru) ನಗರದ ಸಂಬಳದಾರರ ಮನೆ ಬಾಡಿಗೆ ಭತ್ಯೆಯನ್ನು(HRA) ಶೇ. 50ಕ್ಕೆ ಹೆಚ್ಚಳ ಮಾಡುವಂತೆ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ(Tejasvi Surya) ಮನವಿ ಮಾಡಿದ್ದಾರೆ.

    ಲೋಕಸಭೆಯ(Lok Sabha) ಶೂನ್ಯ ವೇಳೆಯಲ್ಲಿ ಸಾರ್ವಜನಿಕ ಹಿತಾಸಕ್ತಿ ವಿಷಯಗಳ ಮೇಲಿನ ಚರ್ಚೆ ಸಂದರ್ಭದಲ್ಲಿ ಮಾತನಾಡಿದ ಅವರು, ಆದಾಯ ತೆರಿಗೆ ನಿಯಮಾವಳಿಗಳಿಗೆ ಸೂಕ್ತ ತಿದ್ದುಪಡಿ ತಂದು ಪ್ರಸ್ತುತ ಶೇ. 40 ರಷ್ಟು ಇರುವ ಮನೆ ಬಾಡಿಗೆ ಭತ್ಯೆಯನ್ನು ಶೇ.50 ಕ್ಕೆ ಏರಿಸಬೇಕು. ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಇತರ ಸಮನಾದ ನಗರಗಳ ಪಟ್ಟಿಗೆ ಬೆಂಗಳೂರನ್ನು ಸೇರ್ಪಡೆಗೊಳಿಸುವ ಮೂಲಕ ಮಧ್ಯಮ ವರ್ಗದ ಸಂಬಳದಾರರ ಹಿತಾಸಕ್ತಿ ಕಾಯುವಂತೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಒತ್ತಾಯಿಸಿದ್ದಾರೆ.

    ತೇಜಸ್ವಿ ಸೂರ್ಯ ಮನವಿ ಏನು?
    ಬೆಂಗಳೂರು ಮಹಾನಗರವು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಅತ್ಯಂತ ಪ್ರಮುಖ ನಗರವಾಗಿದ್ದು, ಸಂಬಳದಾರ ವರ್ಗವು ಅತಿ ಹೆಚ್ಚು ವಾಸಿಸುವ ದೇಶದ ಮುಖ್ಯ ನಗರವಾಗಿದೆ . ದೆಹಲಿ, ಚೆನ್ನೈ, ಮುಂಬೈ ಮತ್ತು ಕೋಲ್ಕತ್ತಾ ಗಳ ಸಾಲಿಗೆ ಬೆಂಗಳೂರನ್ನು ಕೂಡ ಸೇರಿಸಿದಲ್ಲಿ, ನಗರದ ಮಧ್ಯಮ ವರ್ಗದ ಸಂಬಳದಾರ ವರ್ಗದ ಜನತೆಗೆ ಸಾಕಷ್ಟು ಅನುಕೂಲವಾಗಲಿದೆ.. ಆದಾಯ ತೆರಿಗೆ ನಿಯಮಾವಳಿಗಳನ್ನು ಪರಾಮರ್ಶಿಸುವ ಮೂಲಕ ಬೆಂಗಳೂರು ನಗರದ ಜನತೆಯ ಮನೆ ಬಾಡಿಗೆ ಭತ್ಯೆ ಹೆಚ್ಚಳಕ್ಕೆ ಮನವಿ ಮಾಡುತ್ತೇನೆ.

    ಬೆಂಗಳೂರು 1.18 ಕೋಟಿ ನಾಗರಿಕರನ್ನು ಹೊಂದಿದ್ದು ,ಕರ್ನಾಟಕದ ಜಿಡಿಪಿಗೆ ಶೇ.80 ರಷ್ಟು ಕೊಡುಗೆ ನೀಡುತ್ತಿದೆ. ಸಿಲಿಕಾನ್ ವ್ಯಾಲಿ ಎಂದಲೂ ಕರೆಯಲ್ಪಡುವ ಬೆಂಗಳೂರು ಅನೇಕ ಸ್ಟಾರ್ಟ್ – ಅಪ್ ಗಳ ತವರು. ಐಟಿ, ಐಟಿ ಸಂಬಂಧಿತ ಸೇವೆಗಳು, ಸಾಫ್ಟ್ ವೇರ್ ತಂತ್ರಜ್ಞಾನದ 66.80 ಬಿಲಿಯನ್ ಡಾಲರ್ ಅಥವಾ ಭಾರತದ ಶೇ.40 ರಷ್ಟು ಐಟಿ ರಪ್ತು ವಹಿವಾಟು ನಡೆಸುವ ಬಹು ಮುಖ್ಯ ನಗರವಾಗಿದೆ. ಬಯೋ ಟೆಕ್ನಾಲಜಿ ಗೆ ಸಂಬಂಧಿಸಿದ ಅತೀ ಹೆಚ್ಚಿನ ಸಂಸ್ಥೆಗಳು ಇರುವುದು ಬೆಂಗಳೂರಿನಲ್ಲಿ ಎನ್ನುವುದು ವಿಶೇಷ. ಇದನ್ನೂ ಓದಿ: ಭಾರತ, ಚೀನಾ ಸಂಘರ್ಷಕ್ಕೆ ಕಾರಣ ಏನು? ಅರುಣಾಚಲದ ಗಡಿಯಲ್ಲಿ ನಿಜವಾಗಿ ಏನಾಯ್ತು?

    ದೇಶದ ಶೇ.80 ರಷ್ಟು ಸೆಮಿ ಕಂಡಕ್ಟರ್ ಉದ್ಯಮವು ಬೆಂಗಳೂರು ಕೇಂದ್ರಿತವಾಗಿದೆ. 7,500 ಸ್ಟಾರ್ಟ್-ಅಪ್ ಗಳ ಕಾರ್ಯನಿರ್ವಹಣೆಯಿಂದ ಸ್ಟಾರ್ಟ್ ಅಪ್ ಕ್ಯಾಪಿಟಲ್ ಎಂದು ಕೂಡ ಪ್ರಾಮುಖ್ಯತೆ ಪಡೆದಿದೆ.

    ಬೆಂಗಳೂರು ಮತ್ತು ಇತರ ಬೆಳವಣಿಗೆ ಹೊಂದುತ್ತಿರುವ ನಗರಗಳಲ್ಲಿ ಮನೆ ಬಾಡಿಗೆ ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ, ಬೆಂಗಳೂರು ಮತ್ತು ಇಂತಹ ನಗರಗಳನ್ನು ಮಹಾ ನಗರಗಳ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿದಲ್ಲಿ ಮಧ್ಯಮ ವರ್ಗದ ಸಂಬಳದಾರ ವರ್ಗದ ಜನತೆಗೆ ಅನುಕೂಲವಾಗಲಿದೆ ಎಂದು ಸಂಸತ್ತಿನ ಗಮನ ಸೆಳೆದರು.

    Live Tv
    [brid partner=56869869 player=32851 video=960834 autoplay=true]

  • ಭಯೋತ್ಪಾದಕರ ಸಂಹಾರವಾಗುವತನಕ ನಾವು ವಿಶ್ರಮಿಸಲ್ಲ: ತೇಜಸ್ವಿ ಸೂರ್ಯ

    ಭಯೋತ್ಪಾದಕರ ಸಂಹಾರವಾಗುವತನಕ ನಾವು ವಿಶ್ರಮಿಸಲ್ಲ: ತೇಜಸ್ವಿ ಸೂರ್ಯ

    ಉಡುಪಿ: ಮಂಗಳೂರು (Mangaluru) ಕುಕ್ಕರ್ ಬಾಂಬ್ ಬ್ಲಾಸ್ಟ್ (Cooker Blast)ವಿಚಾರಕ್ಕೆ ಸಂಬಂಧಿಸಿದಂತೆ ಬ್ಲಾಸ್ಟ್ ಹಿಂದಿರುವವರನ್ನು ಕಾನೂನಾತ್ಮಕವಾಗಿ ಸಂಹಾರ ಮಾಡುತ್ತೇವೆ ಎಂದು ಸಂಸದ ಬಿಜೆಪಿ ಯುವಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ (Tejaswi Surya) ಹೇಳಿದ್ದಾರೆ.

    ಉಡುಪಿಯಲ್ಲಿ (Udupi) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಭಯೋತ್ಪಾದನಾ ಚಟುವಟಿಕೆ ಮಾಡಬೇಕು ಎಂಬುದು ಕೆಲವರ ಉದ್ದೇಶವಿದ್ದಂತಿದೆ. ಆರ್ಥಿಕ ಶಕ್ತಿಕೇಂದ್ರದಲ್ಲಿ ಕೋಮುಗಲಭೆ ಸೃಷ್ಟಿಸುವ ಷಡ್ಯಂತ್ರ ನಡೆದಿದೆ. ಕರ್ನಾಟಕದಲ್ಲಿ ಸರಣಿ ಕೊಲೆಗಳು ನಡೆದಿದ್ದವು, ಈಗ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕೆಡಿಸುವ ಕೆಲಸ ನಡೆಯುತ್ತಿದೆ. ಪಿಎಫ್‍ಐ ಬ್ಯಾನ್ ಮಾಡಿದಂತೆ ಭಯೋತ್ಪಾದಕರ ಬೇರು ಸಮೇತ ಕಿತ್ತು ಹಾಕುತ್ತೇವೆ ಎಂದಿದ್ದಾರೆ.

    ಭಯೋತ್ಪಾದನೆ ಸದೆಬಡಿಯುವ ತನಕ ನಾವು ವಿಶ್ರಮಿಸಲ್ಲ. ನಮ್ಮ ಸರ್ಕಾರಗಳು ವಿಶ್ರಮಿಸುವುದಿಲ್ಲ. ಈವರೆಗೆ ರಾಜ್ಯದಲ್ಲಿ ದೊಡ್ಡಮಟ್ಟದ ಚಟುವಟಿಕೆ ನಡೆದಿಲ್ಲ. ಈ ಒಂದು ಘಟನೆ ರಾಜ್ಯವನ್ನು ಎಚ್ಚರಿಸಲಿದೆ. ಕರಾವಳಿಯಲ್ಲೇ ಒಂದು ಎನ್‍ಐಎ ಆಫೀಸ್ ಬೇಕಾಗಿದೆ. ಕರ್ನಾಟಕ ಕರಾವಳಿ ವಿಚ್ಛಿದ್ರ ಶಕ್ತಿಗಳ ಕೇಂದ್ರವಾಗುತ್ತಿದೆ. ಕರಾವಳಿಯಲ್ಲಿ ಎನ್‍ಐಎ ಕ್ಯಾಂಪ್ ಆಫೀಸ್ ಸ್ಥಾಪನೆ ಮಾಡಬೇಕು ಎಂದು ತಿಳಿಸಿದ್ದಾರೆ.

    ಕೆಜೆಹಳ್ಳಿ ಡಿಜೆಹಳ್ಳಿ ಪ್ರಕರಣವಾದಾಗಲೇ ಗೃಹ ಸಚಿವ ಅಮಿತ್ ಶಾ (Amit Shah) ಜೊತೆ ಮಾತನಾಡಿದ್ದೆ. ಈಗ ಮತ್ತೆ ಕೇಂದ್ರ ಸರ್ಕಾರ ಜೊತೆ ಮಾತನಾಡುತ್ತೇನೆ. ಪೊಲೀಸ್ ಇಂಟೆಲಿಜನ್ಸ್ ಎನ್‍ಐಎ ಜೊತೆಯಾಗಿ ಕೆಲಸ ಮಾಡಿದರೆ ಇಂತಹ ಘಟನೆ ತಡೆಗಟ್ಟಬಹುದು. ರಾಜ್ಯದ ಜನರ ಜೀವ ಮತ್ತು ವಸ್ತುಗಳ ಸಂರಕ್ಷಣೆ ನಮ್ಮ ಕರ್ತವ್ಯ. ನಾವು ಓಟ್ ಬ್ಯಾಂಕ್‍ಗೆ ಮುಲಾಜು ಬಿದ್ದು ರಾಜಕೀಯ ಮಾಡಲ್ಲ. ರಾಷ್ಟ್ರೀಯ ರಾಜ್ಯದ ಸುರಕ್ಷತೆಗೆ ನಮ್ಮ ಆದ್ಯತೆಯಿದೆ. ದೇಶದ ಸುರಕ್ಷತೆ ವಿಚಾರದಲ್ಲಿ ಕಾಂಪ್ರಮೈಸ್ ಮಾಡಲ್ಲ ಎಂದು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • PFI ಬ್ಯಾನ್ ಮಾಡಿದ್ದಕ್ಕೆ ಕಾಂಗ್ರೆಸ್‍ನ ಕೆಲವರು ಒಂದೇ ಕಣ್ಣಿನಲ್ಲಿ ಅಳುತ್ತಿದ್ದಾರೆ: ತೇಜಸ್ವಿ ಸೂರ್ಯ

    PFI ಬ್ಯಾನ್ ಮಾಡಿದ್ದಕ್ಕೆ ಕಾಂಗ್ರೆಸ್‍ನ ಕೆಲವರು ಒಂದೇ ಕಣ್ಣಿನಲ್ಲಿ ಅಳುತ್ತಿದ್ದಾರೆ: ತೇಜಸ್ವಿ ಸೂರ್ಯ

    ಬೆಂಗಳೂರು/ಆನೇಕಲ್: ಪಿಎಫ್‍ಐ (PFI) ಕಾಂಗ್ರೆಸ್‍ನವರ (Congress) ಬ್ರದರ್ಸ್ ಇದ್ದಂತೆ, ಇದು ಕಾಂಗ್ರೆಸ್ ನವರೇ ಹೇಳಿಕೊಂಡಿರುವ ವಿಚಾರವಾಗಿದೆ. ಪಿಎಫ್‍ಐ ಬ್ಯಾನ್ ಮಾಡಿರುವುದಕ್ಕೆ ಕಾಂಗ್ರೆಸ್‍ನ ಕೆಲವರಿಗೆ ಒಂದೇ ಕಣ್ಣಿನಲ್ಲಿ ಅಳುವಂತಾಗಿದೆ ಎಂದು ಸಂಸದ ತೇಜಸ್ವಿ ಸೂರ್ಯ (Tejasvi Surya) ಹೇಳಿಕೆಯನ್ನು ನೀಡಿದ್ದಾರೆ.

    ಬೊಮ್ಮನಹಳ್ಳಿಯ ಬಂಡೇಪಾಳ್ಯದಲ್ಲಿ ಶಾಸಕ ಸತೀಶ್ ರೆಡ್ಡಿ (MLA Satish Reddy) ನೇತೃತ್ವದಲ್ಲಿ ಆಯೋಜನೆ ಮಾಡಿದ್ದ ಬೃಹತ್ ಆರೋಗ್ಯ ಶಿಬಿರದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಪಿಎಫ್‍ಐ ಸಂಘಟನೆ ಟೆರರಿಸ್ಟ್ ಆರ್ಗನೈಸೇಶನ್ ಅಂತ ಎಲ್ಲರಿಗೂ ಗೊತ್ತಿದೆ. ಎಂಟತ್ತು ವರ್ಷಗಳಿಂದ ಪಿಎಫ್‍ಐ ಬ್ಯಾನ್ ಮಾಡುವ ವಿಚಾರವಾಗಿ ಹಲವು ಚರ್ಚೆಗಳು ನಡೆದಿದ್ದು, ಕೇರಳ, ಗುಜರಾತ್, ಉತ್ತರ ಪ್ರದೇಶ, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಿಂದ ಸಾಕಷ್ಟು ದೂರುಗಳು ಕೇಳಿ ಬಂದಿವೆ. ಉಚ್ಚ ನ್ಯಾಯಾಲಯವು ಕೂಡ ಕೇಂದ್ರ ಸರ್ಕಾರಕ್ಕೆ ಟಿಪ್ಪಣಿಯನ್ನು ಸಲ್ಲಿಸಿದ್ದು, ಕೇಂದ್ರ ಸರ್ಕಾರ ಅಮಿತ್ ಶಾ (Amit Shah) ನೇತೃತ್ವದಲ್ಲಿ 26 ರಾಜ್ಯಗಳಲ್ಲಿ ಪಿಎಫ್‍ಐ ಬ್ಯಾನ್ ಮಾಡಲು ಹೊರಟಿದೆ. ಪಿಎಫ್‍ಐ ಬ್ಯಾನ್ ಒಂದೆಡೆಯಾದರೆ ಕೆಲವರಿಂದ ವಿರೋಧ ವ್ಯಕ್ತವಾಗುತ್ತಿದ್ದು, ಅದನ್ನು ಕಾಂಗ್ರೆಸ್‍ನವರು ಹೊರಗೆ ಹೇಳಿಕೊಳ್ಳಲಾಗದೆ. ಕಷ್ಟ ನೋವು ಅನುಭವಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ತಲುಪಿದೆ – ಪ್ರಹ್ಲಾದ್ ಜೋಶಿ

    ಕಾಂಗ್ರೆಸ್ ನಾಯಕರೇ ಪಿಎಫ್‍ಐನವರು ನಮ್ಮ ಬ್ರದರ್ಸ್ ಇದ್ದಂತೆ ಎಂದು ಹೇಳಿದ್ದಾರೆ. ಬ್ರದರ್ಸ್‍ಗೆ ನೋವಾದಾಗ ಒಂದೇ ಕಣ್ಣಿನಲ್ಲಿ ಅಳುತ್ತಿದ್ದಾರೆ. ರಾಷ್ಟ್ರದ ಸುರಕ್ಷತೆ ಮುಖ್ಯನೋ ಅಥವಾ ವೋಟ್ ಬ್ಯಾಕಿಂಗ್ ಮುಖ್ಯನೋ ಎಂದು ಕಾಂಗ್ರೆಸ್‍ನವರು ಅರ್ಥ ಮಾಡಿಕೊಳ್ಳಬೇಕಿದೆ. ರಾಹುಲ್ ಗಾಂಧಿಯವರು (Rahul Gandhi) ಕರ್ನಾಟಕಕ್ಕೆ ಭಾರತ್ ತೋಡೋ ಯಾತ್ರೆಯ ಮೂಲಕ ಬಂದಿದ್ದಾರೆ. ಅದು ತೋಡೋ ಯಾತ್ರೆ, ಅವರು ಕರೆಯುತ್ತಿರುವುದು ಜೋಡೋ ಯಾತ್ರೆ (Bharat Jodo Yatra) ಎಂದು, ಭಾರತವನ್ನು ಜೋಡೋ ಮಾಡುವುದಕ್ಕೆ ಮುಂಚೆ ಕರ್ನಾಟಕದಲ್ಲಿ ಡಿ.ಕೆ. ಶಿವಕುಮಾರ್ (D.K.Shivakumar) ಹಾಗೂ ಸಿದ್ದರಾಮಯ್ಯರನ್ನು (Siddaramaiah) ಜೋಡಣೆ ಮಾಡಲಿ ಹಾಗೂ ರಾಜಸ್ಥಾನದಲ್ಲಿ ಸಚಿನ್ ಪೈಲಟ್ (Sachin Pilot) ಮತ್ತೆ ಅಶೋಕ್ ಗೆಹ್ಲೋಟ್‍ರನ್ನು (Ashok Gehlot) ಜೋಡಣೆ ಮಾಡಲಿ, ಅದಾದ ಬಳಿಕ ಭಾರತ್ ಜೋಡೋ ಕಡೆ ಮುಂದಾಗಲಿ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ, ಇದು ಕಾಂಗ್ರೆಸ್‍ನ ಕೊನೆಯ ಯಾತ್ರೆ: ಆನಂದ್ ಸಿಂಗ್ ವ್ಯಂಗ್ಯ

    Live Tv
    [brid partner=56869869 player=32851 video=960834 autoplay=true]