Tag: Tejasvi Surya

  • BJP ಸ್ಥಿರ ಸರ್ಕಾರದಿಂದ ದೇಶದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಾಗಿದೆ – ತೇಜಸ್ವಿ ಸೂರ್ಯ

    BJP ಸ್ಥಿರ ಸರ್ಕಾರದಿಂದ ದೇಶದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಾಗಿದೆ – ತೇಜಸ್ವಿ ಸೂರ್ಯ

    – 2014, 2019ರ ಲೋಕಸಭೆ ಚುನಾವಣೆಗಳಿಂದ ದೇಶದಲ್ಲಿ ಸ್ಥಿರ ಸರ್ಕಾರ ಸ್ಥಾಪನೆ
    – 2009ಕ್ಕೆ ಹೋಲಿಸಿದ್ರೆ 12% ಯುವ ಮತದಾರರ ಸಂಖ್ಯೆ ಹೆಚ್ಚಳ

    ಬೆಂಗಳೂರು: ಬಿಜೆಪಿ (BJP) ನೇತೃತ್ವದ ಸ್ಥಿರ ಕೇಂದ್ರ ಸರ್ಕಾರದಿಂದ ದೇಶದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಾಗಿದೆ ಎಂದು ಸಂಸದ ತೇಜಸ್ವಿ ಸೂರ್ಯ (Tejasvi Surya) ಶ್ಲಾಘಿಸಿದರು.

    ಮಲ್ಲೇಶ್ವರದ ಬಿಜೆಪಿ (BJP) ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿಂದು ʻಲೋಕಸಭಾ ಕ್ಷೇತ್ರಗಳ ಮತದಾರರ ಚೇತನ ಮಹಾ ಅಭಿಯಾನʼ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2014 ಮತ್ತು 2019ರ ಚುನಾವಣೆಗಳು ದೇಶಕ್ಕೆ ಸ್ಥಿರ ಸರ್ಕಾರ ನೀಡಿವೆ. 2009ರ ಚುನಾವಣೆಗೆ ಹೋಲಿಸಿದ್ರೆ ಸುಮಾರು 12% ಯುವ ಮತದಾರರು ಹೆಚ್ಚುವರಿಯಾಗಿ ಮತದಾನ ಮಾಡಿದ್ದರು. ಅವರು ಬಿಜೆಪಿ, ಮೋದಿಜಿ (Narendra Modi) ಅವರಿಗೆ ಮಾಡಿದ ಆಶೀರ್ವಾದದಿಂದ 34 ವರ್ಷದ ಬಳಿಕ ಈ ದೇಶದಲ್ಲಿ ಸ್ಥಿರ, ಸದೃಢ ಸರ್ಕಾರ ಬಂತು ಎಂದು ವಿಶ್ಲೇಷಿಸಿದರು.  

    ಸ್ಥಿರ, ಸದೃಢ ಸರ್ಕಾರದ ಫಲವಾಗಿ ಕಳೆದ 9 ವರ್ಷಗಳಲ್ಲಿ ದೇಶದಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಾಗಿದೆ ಎಂದ ಅವರು, ಮುಂದಿನ ಕೆಲವು ತಿಂಗಳಿನಲ್ಲಿ ಮತದಾರರ ಪಟ್ಟಿಯನ್ನು ಚುನಾವಣಾ ಆಯೋಗ ಪರಿಷ್ಕರಿಸಲಿದ್ದು, ಅದಕ್ಕೆ ಬಿಜೆಪಿ ಸಹಕಾರ ಕೊಡಲಿದೆ ಎಂದರು. ಇದನ್ನೂ ಓದಿ: ಮಾರ್ಗ ಮಧ್ಯೆ ಕೈಕೊಟ್ಟ ಅಂಬುಲೆನ್ಸ್ – ಆನೆ ದಾಳಿಯಿಂದ ಗಾಯಗೊಂಡಿದ್ದ ಶಾರ್ಪ್ ಶೂಟರ್ ಅರಣ್ಯ ಸಿಬ್ಬಂದಿ ಸಾವು

    50 ಕೋಟಿ ಬಡಜನರ ಜನ್‍ಧನ್ ಬ್ಯಾಂಕ್ ಖಾತೆ ತೆರೆಯಲು ಮತದಾರರು ನೆರವಾಗಿದ್ದಾರೆ. 29 ಲಕ್ಷ ಡಿಬಿಟಿ ಹಣ ವರ್ಗಾವಣೆ ಆಗಿದೆ. 4.5 ಕೋಟಿ ಬಡಜನರಿಗೆ ಮನೆಗಳ ನಿರ್ಮಾಣವಾಗಿದೆ. ದೇಶದ ಹಳ್ಳಿಗಳಲ್ಲಿ ಸ್ವಚ್ಛ ಭಾರತ್ ಮಿಷನ್‌ ಅಡಿಯಲ್ಲಿ 11 ಕೋಟಿ ಶೌಚಾಲಯ ನಿರ್ಮಾಣ ಮಾಡಿಸಲು ಮತದಾರರು ತಮ್ಮ ಮತದ ಮೂಲಕ ಅವಕಾಶ ಕೊಟ್ಟಿದ್ದಾರೆ. 23 ಕೋಟಿ ಬಡ ಕುಟುಂಬಗಳಿಗೆ ಆಯುಷ್ಮಾನ್ ವಿಮೆ ಲಭಿಸಿದೆ. 20 ಕೋಟಿ ಎಸ್ಸಿ, ಎಸ್ಟಿ, ಒಬಿಸಿ ಮಹಿಳೆಯರಿಗೆ ಮುದ್ರಾ ಯೋಜನೆಯಡಿ ಸಾಲ ಲಭಿಸಿದೆ ಎಂದು ವಿವರಿಸಿದರು.

    ಒಂದು ಮತದ ಫಲವಾಗಿ ಭಾರತ ಚಂದ್ರಯಾನ-3 (Chandrayaan-3) ಮಾಡಿ ದೇಶದ, ವಿಶ್ವದ ದಕ್ಷಿಣ ಧ್ರುವಕ್ಕೆ ತೆರಳಿದ ಮೊದಲ ದೇಶ ಎಂಬ ಕೀರ್ತಿಯನ್ನ ತನ್ನದಾಗಿಸಿಕೊಂಡಿದೆ. ಪಾಕಿಸ್ತಾನದ ಒಳಗೆ ನುಗ್ಗಿ ಸರ್ಜಿಕಲ್ ಸ್ಟ್ರೈಕ್ ಮಾಡುವ ಶಕ್ತಿ ದೇಶಕ್ಕೆ ಸಿಕ್ಕಿದೆ. 500 ವರ್ಷಗಳಿಂದ ಜನರು ಕಾಯುತ್ತಿದ್ದ ಶ್ರೀರಾಮಮಂದಿರದ ನಿರ್ಮಾಣ ಆಗಿದೆ. ಆರ್ಟಿಕಲ್ 370 ರದ್ದು ಮಾಡುವ ಮೂಲಕ ಮತ್ತು ಭಾರತ ಸಂವಿಧಾನವನ್ನ ಜಮ್ಮುಕಾಶ್ಮೀರಕ್ಕೆ ಅನುಷ್ಠಾನಕ್ಕೆ ತರುವ ಕೆಲಸ ಮಾಡಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಅಮೆಜಾನ್ ಮ್ಯಾನೇಜರ್ ಹತ್ಯೆ ಕೇಸ್; ಪೊಲೀಸರನ್ನೇ ಬೆಚ್ಚಿ ಬೀಳಿಸಿದ್ದ 18ರ ಯುವಕನ `ಮಾಯಾ ಗ್ಯಾಂಗ್’

    ಈ ಅಭಿವೃದ್ಧಿಗೆ ದೇಶದ ಮತದಾರರು ಕಾರಣ. ಸದೃಢ ಸರ್ಕಾರ ನೀಡಿದ ಮತದಾರರನ್ನ ನಾನು ಅಭಿನಂದಿಸುತ್ತೇನೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜನರನ್ನು ಮತದಾನಕ್ಕೆ ಸಜ್ಜುಗೊಳಿಸುವ ಉದ್ದೇಶದಿಂದ ಅಭಿಯಾನ ನಡೆಯಲಿದೆ. ಅಭಿಯಾನದ ಯಶಸ್ಸಿಗೆ ತಂಡ ರಚಿಸಿದ್ದು, ಪಿ.ರಾಜೀವ್, ಅರವಿಂದ ಬೆಲ್ಲದ್‌, ವಿವೇಕ್ ರೆಡ್ಡಿ, ಲೋಕೇಶ್ ಹಾಗೂ ನಾನು ರಾಜ್ಯ ಸಂಚಾಲನಾ ಸಮಿತಿಯಲ್ಲಿ ಇದ್ದೇವೆ. ಇದೇ ರೀತಿಯ ತಂಡಗಳನ್ನ ಜಿಲ್ಲೆ, ವಿಧಾನಸಭಾ ಕ್ಷೇತ್ರ ಮಟ್ಟದಲ್ಲಿ ರಚನೆಯಾಗಿವೆ ಎಂದು ವಿವರಿಸಿದರು.

    ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಡಿ.ವಿ.ಸದಾನಂದಗೌಡ, ಮಾಜಿ ಡಿಸಿಎಂ ಗೋವಿಂದ ಕಾರಜೋಳ, ಕೇಂದ್ರ ಸಚಿವ ನಾರಾಯಣಸ್ವಾಮಿ, ರಾಜ್ಯ ಉಪಾಧ್ಯಕ್ಷರಾದ ನಿರ್ಮಲ್‍ಕುಮಾರ್ ಸುರಾಣ, ಮಾಲೀಕಯ್ಯ ಗುತ್ತೇದಾರ, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಜಿ.ವಿ ರಾಜೇಶ್, ಮಾಜಿ ಸಚಿವರಾದ ಬಿ.ಶ್ರೀರಾಮುಲು, ಡಾ.ಸಿ.ಎನ್ ಅಶ್ವಥ್‌ ನಾರಾಯಣ್‌ ಪ್ರಮುಖರು ಭಾಗವಹಿಸಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹೆಚ್.ಡಿ.ದೇವೇಗೌಡರ ಭೇಟಿಯಾದ ತೇಜಸ್ವಿ ಸೂರ್ಯ

    ಹೆಚ್.ಡಿ.ದೇವೇಗೌಡರ ಭೇಟಿಯಾದ ತೇಜಸ್ವಿ ಸೂರ್ಯ

    – ತೇಜಸ್ವಿ ಸೂರ್ಯರ ನಮೋ ವಿದ್ಯಾನಿಧಿಯ 1ಂ ಸಾವಿರ ರೂ. ವಿದ್ಯಾರ್ಥಿವೇತನ ವಿತರಣೆ ಮಾಡಿದ ಹೆಚ್‍ಡಿಡಿ

    ಬೆಂಗಳೂರು: ಸಂಸದ ತೇಜಸ್ವಿ ಸೂರ್ಯ (Tejasvi Surya) ಅವರ ನಮೋ ವಿದ್ಯಾನಿಧಿ (Namo Vidyanidhi Scholarship) ಕಾರ್ಯಕ್ರಮದ ಅಡಿಯಲ್ಲಿ ಮಕ್ಕಳಿಗೆ ತಲಾ 10 ಸಾವಿರ ರೂ. ಶಿಷ್ಯವೇತನವನ್ನು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ (H.D Deve Gowda) ಬುಧವಾರ ವಿತರಿಸಿದರು.

    ನಗರದ ಆಟೋ ರಿಕ್ಷಾ ಚಾಲಕರ ಮಕ್ಕಳು ಸೇರಿದಂತೆ ಸುಮಾರು 10 ಮಕ್ಕಳಿಗೆ ವಿದ್ಯಾರ್ಥಿ ವೇತನದ ಚೆಕ್‍ನ್ನು ದೇವೇಗೌಡರು ಹಸ್ತಾಂತರಿಸಿದರು. ಆರ್ಥಿಕವಾಗಿ ಹಿಂದುಳಿದ ವರ್ಗದ ಸುಮಾರು 10,000 ಪ್ರತಿಭಾವಂತ ಮಕ್ಕಳಿಗೆ ತಲಾ 10,000 ರೂ.ಗಳ ವಿದ್ಯಾರ್ಥಿವೇತನವನ್ನು ನೀಡಲು ಸಂಸದ ಗುರಿಯನ್ನು ಹೊಂದಿದ್ದರು. ನೇರವಾಗಿ ಮಕ್ಕಳು ವ್ಯಾಸಂಗ ಮಾಡುತ್ತಿರುವ ಆಯಾ ಶಾಲೆಗಳಿಗೆ ಪಾವತಿಸಲಾಗಿದೆ. ಪ್ರಸ್ತುತ ಬೆಂಗಳೂರು ದಕ್ಷಿಣದಲ್ಲಿ 1,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾರ್ಥಿವೇತನ ಕಾರ್ಯಕ್ರಮದಿಂದ ಪ್ರಯೋಜನ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಅಧಿಕಾರಿಗಳ ಸಭೆಯಲ್ಲಿ ಸುರ್ಜೇವಾಲ ಭಾಗಿ ವಿವಾದ : ಕಾಂಗ್ರೆಸ್ ವಿರುದ್ಧ ಫೀಲ್ಡಿಗಿಳಿದ ವಿಪಕ್ಷಗಳು

    ದೇವೇಗೌಡರಂತಹ ಮೇರು ವ್ಯಕ್ತಿಯಿಂದ ಅನೇಕ ಹಿಂದುಳಿದ ವಿದ್ಯಾರ್ಥಿಗಳಿಗೆ ಚೆಕ್‍ಗಳನ್ನು ಸ್ವೀಕರಿಸುವುದು ಆಹ್ಲಾದಕರ ಅನುಭವವಾಗಿದೆ. ದೇವೇಗೌಡರು ತಮ್ಮ ರಾಜಕೀಯದಲ್ಲಿ ಯಾವಾಗಲೂ ರಾಷ್ಟ್ರೀಯ ಹಿತಾಸಕ್ತಿಗಳನ್ನು ಪ್ರಮುಖವಾಗಿ ಇರಿಸಿದ್ದಾರೆ. ಅವರು ಮಕ್ಕಳಿಗೆ ಚೆಕ್‍ಗಳನ್ನು ನೀಡಲು ಒಪ್ಪಿಕೊಂಡಿದ್ದಕ್ಕಾಗಿ ನಾನು ಅವರಿಗೆ ಕೃತಜ್ಞನಾಗಿದ್ದೇನೆ. ವಿದ್ಯಾರ್ಥಿಗಳು ಚೆನ್ನಾಗಿ ಅಧ್ಯಯನ ಮಾಡಲು ಮತ್ತು ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತೊಡಗಬೇಕು ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.

    ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ 9 ವರ್ಷಗಳ ಸೇವಾ ಅವಧಿಯಲ್ಲಿ ಮಾಡಿದ ಕಾರ್ಯಗಳು ಮತ್ತು 2019 ರಿಂದ ಬೆಂಗಳೂರು ದಕ್ಷಿಣದಲ್ಲಿ ಮಾಡಿದ ಸಾಧನೆಗಳ ವರದಿಯನ್ನು ಸಂಸದ ಸೂರ್ಯ ಮಂಡಿಸಿದರು. ಬಿಜೆಪಿಯ ಮಹಾ ಜನ ಸಂಪರ್ಕ ಅಭಿಯಾನದ ಭಾಗವಾಗಿ ಈ ಭೇಟಿಯಾಗಿದೆ. ಇದರಲ್ಲಿ ಬಿಜೆಪಿಯ ಪ್ರತಿಯೊಬ್ಬ ಸಂಸದರು ಅವರ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಗಣ್ಯ ವ್ಯಕ್ತಿಗಳನ್ನು ಭೇಟಿ ಮಾಡಿ ಕಳೆದ 9 ವರ್ಷಗಳಲ್ಲಿ ನರೇಂದ್ರ ಮೋದಿ ಕೇಂದ್ರ ಸರ್ಕಾರದ ಸಾಧನೆಗಳ ಬಗ್ಗೆ ಚರ್ಚಿಸಲಾಗುತ್ತದೆ ಎಂದು ಅವರು ತಿಳಿಸಿದರು.

    ಅಲ್ಲದೇ ಎನ್‍ಆರ್ ಕಾಲೋನಿಯಲ್ಲಿರುವ ಶ್ರೀ ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್‍ನ ಠೇವಣಿದಾರರ ಹಿತಾಸಕ್ತಿ ಕಾಪಾಡಲು ಕೇಂದ್ರ ತಂದಿರುವ ಸುಧಾರಣೆಗಳ ಬಗ್ಗೆ ವಿವರಿಸಿದರು. ಸ್ಥಗಿತಗೊಂಡಿರುವ ರಿಯಲ್ ಎಸ್ಟೇಟ್ ಯೋಜನೆಗಳನ್ನು ಪೂರ್ಣಗೊಳಿಸಲು, ವಿಶೇಷವಾಗಿ ಕನಕಪುರ ರಸ್ತೆಯಲ್ಲಿರುವ ಮಂತ್ರಿ ಸೆರಿನಿಟಿ ಯೋಜನೆಯನ್ನು ಪೂರ್ಣಗೊಳಿಸಲು ಕೇಂದ್ರ ಸ್ವಾ ನಿಧಿಯ ಮಧ್ಯಸ್ಥಿಕೆಗಳ ಬಗ್ಗೆ ಚರ್ಚೆ ಮಾಡಿದರು.

    ನಗರಕ್ಕೆ ಕೇಂದ್ರದ ಕೊಡುಗೆ, ವಿಶೇಷವಾಗಿ ಉಪನಗರ ರೈಲ್ವೆ ಯೋಜನೆ, ನಮ್ಮ ಮೆಟ್ರೋ ನಿರ್ಮಾಣ, ಆಯುಷ್ಮಾನ್ ಭಾರತ್ ಯೋಜನೆ ಮತ್ತು ಪ್ರಧಾನ ಮಂತ್ರಿ ಆವಾಸ್ ಯೋಜನೆ (ಪಿಎಂ ವಸತಿ ಯೋಜನೆ) ಕುರಿತು ಚರ್ಚಿಸಿದರು. ಜನೌಷಧಿ ಕೇಂದ್ರಗಳ ಸಂಖ್ಯೆಗೆ ಸಂಬಂಧಿಸಿದಂತೆ ಮತ್ತೊಂದು ಮೈಲಿಗಲ್ಲು ಸಾಧಿಸಲಾಗಿದೆ. 2019 ರಲ್ಲಿ 14 ರಿಂದ, ಬೆಂಗಳೂರು ದಕ್ಷಿಣವು ಈಗ 100 ಕ್ಕೂ ಹೆಚ್ಚು ಜನೌಷಧಿ ಮಳಿಗೆಗಳನ್ನು ಹೊಂದಿದೆ. ಈ ಮಳಿಗೆಗಳು ಜನರಿಗೆ ಸುಮಾರು 50-90% ಕಡಿಮೆ ವೆಚ್ಚದಲ್ಲಿ ಜೆನೆರಿಕ್ ಔಷಧಿಗಳನ್ನು ಒದಗಿಸುತ್ತವೆ. ಅವರ ಮಾಸಿಕ ಬಿಲ್‍ಗಳಲ್ಲಿ ಸಾಕಷ್ಟು ಉಳಿತಾಯಕ್ಕೆ ಕಾರಣವಾಗುತ್ತಿವೆ ಎಂದಿದ್ದಾರೆ.

    ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ಜಯನಗರದ ಕೆಎಸ್‍ಆರ್‍ಟಿಸಿ ಆಸ್ಪತ್ರೆಯಲ್ಲಿ ಉಚಿತ ಡಯಾಲಿಸಿಸ್ ಕೇಂದ್ರವನ್ನು ಸ್ಥಾಪಿಸಲಾಗಿದೆ. ಮುಂಬರುವ ವರ್ಷಗಳಲ್ಲಿ ಬೆಂಗಳೂರನ್ನು ವಿಶ್ವ ದರ್ಜೆಯ ಮೂಲಸೌಕರ್ಯಗಳೊಂದಿಗೆ ಜಾಗತಿಕ ನಗರವನ್ನಾಗಿ ಮಾಡುವ ಕುರಿತು ನಾನು ಮಾಜಿ ಪ್ರಧಾನಿಯವರ ಮಾರ್ಗದರ್ಶನವನ್ನು ಕೋರಿದ್ದೇನೆ. ನನ್ನಂತಹ ಯುವಕರನ್ನು ಭೇಟಿ ಮಾಡಲು ಮತ್ತು ಮಾರ್ಗದರ್ಶನ ನೀಡಲು ಸ್ವಲ್ಪ ಸಮಯವನ್ನು ಮೀಸಲಿಟ್ಟಿದ್ದಕ್ಕಾಗಿ ನಾನು ಅವರಿಗೆ ಕೃತಜ್ಞನಾಗಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ: ಕೇಂದ್ರ ಸರ್ಕಾರ ಎಷ್ಟೇ ಷಡ್ಯಂತ್ರ ಮಾಡಿದರೂ ಅಕ್ಕಿ ಗ್ಯಾರಂಟಿ: ಸಿದ್ದರಾಮಯ್ಯ

  • ಸೋತಿರೋದಕ್ಕೆ ಕುಂಟು ನೆಪ ಹೇಳೋದು ಸರಿಯಲ್ಲ: ಕೈ ನಾಯಕರಿಗೆ ಸೂರ್ಯ ತಿರುಗೇಟು

    ಸೋತಿರೋದಕ್ಕೆ ಕುಂಟು ನೆಪ ಹೇಳೋದು ಸರಿಯಲ್ಲ: ಕೈ ನಾಯಕರಿಗೆ ಸೂರ್ಯ ತಿರುಗೇಟು

    ಬೆಂಗಳೂರು: ಬೇರೆ ಬೇರೆ ಕಡೆ ಗೆದ್ದಾಗ, ಚುನಾವಣಾ ಆಯೋಗ ಸರಿಯಿದೆ. ಸೋತಾಗ ಸರಿಯಿಲ್ಲ ಅಂತಾರೆ. ಆದರೆ ಸೋತಿರೋದಕ್ಕೆ ಕುಂಟು ನೆಪ ಹೇಳೋದು ಸರಿಯಲ್ಲ ಎಂದು ಸಂಸದ ತೇಜಸ್ವಿ ಸೂರ್ಯ (Tejasvi Surya) ಕಿಡಿಕಾರಿದರು.

    ಭಾರೀ ಹೈಡ್ರಾಮಾದ ಬಳಿಕ ಜಯನಗರ ಗೊಂದಲಕ್ಕೆ ತೆರೆ ಬಿದ್ದಿದೆ. ಜಯನಗರ (Jayanagar Constituency) ದಲ್ಲಿ ಬಿಜೆಪಿ (BJP) ಅಭ್ಯರ್ಥಿ ರಾಮಮೂರ್ತಿ (Ramamurthy) ಗೆಲುವು ತನ್ನದಾಗಿಸಿಕೊಂಡಿದ್ದಾರೆ. ಆದರೆ ಬಿಜೆಪಿಯವರು ಮೋಸ ಮಾಡಿ ಗೆದ್ದಿದ್ದಾರೆ. ಇದಕ್ಕೆ ಸಂಸದ ತೇಜಸ್ವಿ ಸೂರ್ಯನೇ ನೇರ ಕಾರಣ ಎಂಬ ರಾಮಲಿಂಗರೆಡ್ಡಿ ಆರೋಪ ಮಾಡಿದ್ದರು. ಈ ವಿಚಾರಕ್ಕೆ ಸಂಬಂಧಿಸಿ ತೇಜಸ್ವಿ ಸೂರ್ಯ ತಿರುಗೇಟು ನೀಡಿದರು.

    ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿ, ಒಂದೇ ಸಲ ಮರು ಮತ ಎಣಿಕೆಯಾಗಿದೆ. ನಮ್ಮ ಅಭ್ಯರ್ಥಿ ಕರೆ ಮಾಡಿದ ಮೇಲೆ ಅಲ್ಲಿಗೆ ಹೋಗಿದ್ದೆವು. ನಾವು ಹೋಗುವುದಕ್ಕಿಂತ ಮುಂಚೆ ರಾಮಲಿಂಗಾರೆಡ್ಡಿ ಅವ್ರು ಹೋಗಿದ್ದರು. ಕಾಂಗ್ರೆಸ್ ಅಭ್ಯರ್ಥಿ ಗೆಲುವು ಅಂತ ಚುನಾವಣಾ ಅಧಿಕಾರಿಗಳು ಘೋಷಣೆಯೇ ಮಾಡಿರಲಿಲ್ಲ. ಆಗ್ಲೇ ಗೆದ್ರು ಅಂತ ಅವರು ಸಂಭ್ರಮ ಮಾಡಿದ್ದರು ಎಂದು ವಾಗ್ದಾಳಿ ನಡೆಸಿದರು.

    ತಪ್ಪಾಗಿರೋ, ಅಸಿಂಧುಗೊಂಡಿರೋ ಮತಗಳನ್ನ ಪರಿಶೀಲನೆ ಆಗಿದೆ. ಆಗ 16 ಮತಗಳ ಅಂತರದ ಮುನ್ನಡೆಯಲ್ಲಿ ನಮ್ಮ ಅಭ್ಯರ್ಥಿ ಇದ್ದರು. ರಾಮಲಿಂಗರೆಡ್ಡಿ, ಅವ್ರ ಮಗ, ಅವ್ರ ಬೆಂಬಲಿಗರು ಫಲಿತಾಂಶ ಘೋಷಣೆ ಮಾಡಬೇಡಿ ಅಂತ ದಬಾಯಿಸಿದರು. ಆದರೆ ನಾವು ಮರು ಮತ ಎಣಿಕೆಯಲ್ಲಿ 16 ಮತಗಳ ಅಂತರದಿಂದ ಗೆದ್ದಿದ್ದೇವೆ. ಆದರೆ ಅನೌನ್ಸ್ ಮಾಡೋಕೆ ಬಿಡ್ತಿಲ್ಲ ಅಂತ ನಮ್ ಅಭ್ಯರ್ಥಿಗಳು ಕರೆ ಮಾಡಿದ್ದರು ಎಂದು ಹೇಳಿದರು.

    ಪ್ರತಿಯೊಂದು ಮತಗಳನ್ನು ಪರಿಶೀಲನೆ ಮಾಡಿರುವುದು ವೀಡಿಯೋ ರೆಕಾರ್ಡ್ ಆಗಿದೆ. ಸೋತಿರೋದನ್ನ ನಾವು ಒಪ್ಪಿಕೊಂಡಿದ್ದೇವೆ. ಸೋತಿರೋದಕ್ಕೆ ಕುಂಟು ನೆಪ ಹೇಳೋದು ಸರಿಯಲ್ಲ. ಬೇರೆ ಬೇರೆ ಕಡೆ ಗೆದ್ದಾಗ, ಚುನಾವಣಾ ಆಯೋಗ ಸರಿಯಿದೆ. ಸೋತಾಗ ಸರಿಯಿಲ್ಲ ಅಂತಾರೆ ಎಂದು ಗುಡುಗಿದರು. ಇದನ್ನೂ ಓದಿ: CBI ನಿರ್ದೇಶಕರಾಗಿ ಕರ್ನಾಟಕದ ಡಿಜಿಪಿ ಪ್ರವೀಣ್‌ ಸೂದ್‌ ನೇಮಕ

    ನಾನು ಚುನಾವಣಾ ಅಧಿಕಾರಿ ವೀಕ್ಷಕರ ಜೊತೆ ಹೊರಗಡೆ ಹೋಗಿಲ್ಲ. ಸಾರ್ವಜನಿಕವಾಗಿ ತೋರಿಸಲಿ ಹೊರಗಡೆ ಹೋಗಿರೋದನ್ನ ಕಾನೂನು ಹೋರಾಟಕ್ಕೆ ಹೋಗಲಿ ಎಂದು ಸವಾಲು ಹಾಕಿದರು. ಇದನ್ನೂ ಓದಿ: ಹೈಡ್ರಾಮಾ ಬಳಿಕ ಜಯನಗರದಲ್ಲಿ ಬಿಜೆಪಿ ಗೆಲುವು- ಸೌಮ್ಯಾ ರೆಡ್ಡಿ ಕಣ್ಣೀರು

  • ಬಜರಂಗದಳ ನಿಷೇಧ ಭರವಸೆ – ಪ್ರೊಫೈಲ್ ಫೋಟೋ ಬದಲಿಸಿದ BJP ನಾಯಕರು

    ಬಜರಂಗದಳ ನಿಷೇಧ ಭರವಸೆ – ಪ್ರೊಫೈಲ್ ಫೋಟೋ ಬದಲಿಸಿದ BJP ನಾಯಕರು

    ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ (Karnataka Election 2023) ಇನ್ನೇನು ಕೆಲವೇ ದಿನಗಳು ಬಾಕಿಯಿದ್ದು, ಕಾಂಗ್ರೆಸ್‌ ಪಕ್ಷ ಮಂಗಳವಾರ ತನ್ನ ಪ್ರಣಾಳಿಕೆಯನ್ನ ಬಿಡುಗಡೆಗೊಳಿಸಿದೆ.

    ಎಸ್ಸಿ ಸಮುದಾಯಕ್ಕೆ ಶೇ. 15 ರಿಂದ 17ಕ್ಕೆ, ಎಸ್ಟಿ ಸಮುದಾಯಕ್ಕೆ ಶೇ. 3 ರಿಂದ 7ಕ್ಕೆ, ಅಲ್ಪಸಂಖ್ಯಾತರಿಗೆ ಶೇ. 4ರ ಮರುಸ್ಥಾಪನೆ, ಲಿಂಗಾಯತ, ಒಕ್ಕಲಿಗ ಮತ್ತಿತರ ಸಮುದಾಯಗಳ ಆಶೋತ್ತರಗಳನ್ನು ಈಡೇರಿಸಲು ಮೀಸಲಾತಿಯನ್ನು ಶೇ. 50ರಿಂದ 75ರ ವರೆಗೆ ಹೆಚ್ಚಿಸಲು ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಇದರ ಜೊತೆಗೆ ಬಜರಂಗದಳವನ್ನು (Bajrang Dal) ನಿಷೇಧಿಸುತ್ತೇವೆ ಎಂದು ಕಾಂಗ್ರೆಸ್ (Congress) ತನ್ನ ಚುನಾವಣಾ (Election) ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದೆ. ಇದನ್ನೂ ಓದಿ: ಮೀಸಲಾತಿ ಶೇ.75ರವರೆಗೆ ಹೆಚ್ಚಳ, NEP ರದ್ದು, ಭಜರಂಗದಳ ನಿಷೇಧ- ಕಾಂಗ್ರೆಸ್‍ನಿಂದ ಪ್ರಣಾಳಿಕೆ ರಿಲೀಸ್

    ಕಾಂಗ್ರೆಸ್‌ ಬಜರಂಗದಳ ನಿಷೇಧ ಭರವಸೆಗೆ ಬಿಜೆಪಿ ನಾಯಕರು ಸಿಡಿದೆದ್ದಿದ್ದಾರೆ. ತಮ್ಮ ಪ್ರೊಫೈಲ್ ಫೋಟೋ, ವಾಟ್ಸಪ್, ಫೇಸ್‌ಬುಕ್ ಸ್ಟೇಟಸ್‌ಗಳಲ್ಲಿ ನಾನೊಬ್ಬ ಭಜರಂಗಿ ಅಂತಾ ಘೋಷಣೆ ಮಾಡ್ಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಭರವಸೆ ವಿರುದ್ಧ ಡಿಜಿಟಲ್ ಅಭಿಯಾನ ಕೈಗೊಂಡಿದ್ದು, ಬಜರಂಗದಳ ನಿಷೇಧ ಭರವಸೆಯನ್ನೇ ಚುನಾವಣಾ ಪ್ರಚಾರಕ್ಕೆ ಅಸ್ತ್ರ ಮಾಡಿಕೊಂಡಿದೆ ಅನ್ನೋದು ತಿಳಿದುಬಂದಿದೆ. ಇದನ್ನೂ ಓದಿ: ಯುಗಾದಿ, ಗಣೇಶ ಚತುರ್ಥಿ, ದೀಪಾವಳಿಗೆ ಉಚಿತ ಗ್ಯಾಸ್, ಅರ್ಧ ಲೀ. ಉಚಿತ ನಂದಿನಿ ಹಾಲು: ಬಿಜೆಪಿಯಿಂದ ಪ್ರಣಾಳಿಕೆ ರಿಲೀಸ್

    ಕಡೇ 7 ದಿನದ ಆಟದಲ್ಲಿ ಜೈ ಭಜರಂಗಿ‌ ಕ್ಯಾಂಪೇನ್:
    ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನೂ 7 ದಿನಗಳ ಬಾಕಿಯಿರುವ ಹೊತ್ತಿನಲ್ಲೇ ರಾಜ್ಯಾದ್ಯಂತ ʻಜೈ ಭಜರಂಗಿ‌ ಕ್ಯಾಂಪೇನ್ʼ ಶುರುವಾಗಿದೆ. ಬಜರಂಗದಳವನ್ನ ʻನಾನೊಬ್ಬ ಭಜರಂಗಿʼ ಎಂದು ತಿರುಗಿಸಿದೆ. ಇನ್ನೂ ಬಿಜೆಪಿ ಹೈಕಮಾಂಡ್‌ ಸಹ ಎಲ್ಲ ನಾಯಕರಿಗೂ ಖಡಕ್‌ ಸೂಚನೆ ಕೊಟ್ಟಿದ್ದು, ಕಾಂಗ್ರೆಸ್ ಟಾರ್ಗೆಟ್ ಮಾಡಿ‌ ಕಡೇ 7 ದಿನದ ಪ್ರಚಾರ ಮಾಡಲು ಸೂಚನೆ ನೀಡಿದೆ ಎನ್ನಲಾಗಿದೆ. ಇದನ್ನೂ ಓದಿ: ಕಾಂಗ್ರೆಸ್ಸಿಗರು ವೋಟ್‌ ಕೇಳೋಕೆ ಬಂದ್ರೆ ʻನಾಯಿ ಬಿಡ್ತೀವಿʼ ಭಜರಂಗದಳ ಎಚ್ಚರಿಕೆ

    ಈ ಹಿಂದೆ ನಮಗೂ ಬಜರಂಗದಳಕ್ಕೂ ಸಂಬಂಧವೇ ಇಲ್ಲ ಎಂದು ಬಿಜೆಪಿಗರು ಹೇಳಿದ್ದರು. ಆದರೀಗ ಕಾಂಗ್ರೆಸ್ ಕೊಟ್ಟ ಬಜರಂಗದಳ ನಿಷೇಧ ಭರವಸೆಯ ಬ್ರಹ್ಮಾಸ್ತ್ರದಿಂದ ರಾಜಕೀಯ ತಿರುವು ಸಿಗುತ್ತಾ? ಅನ್ನೋದನ್ನ ಕಾದುನೋಡಬೇಕಿದೆ.

  • ತಮಿಳುನಾಡಿನ ಮುಂದಿನ ಮುಖ್ಯಮಂತ್ರಿ ಅಣ್ಣಾಮಲೈ ಎಂದ ತೇಜಸ್ವಿ ಸೂರ್ಯ

    ತಮಿಳುನಾಡಿನ ಮುಂದಿನ ಮುಖ್ಯಮಂತ್ರಿ ಅಣ್ಣಾಮಲೈ ಎಂದ ತೇಜಸ್ವಿ ಸೂರ್ಯ

    ಬೆಂಗಳೂರು: ರಾಜ್ಯ ಬಿಜೆಪಿ (BJP) ಸಹ ಚುನಾವಣಾ ಉಸ್ತುವಾರಿ ಅಣ್ಣಾಮಲೈ (K Annamalai) ಅವರನ್ನು ಸಂಸದ ತೇಜಸ್ವಿ ಸೂರ್ಯ (Tejasvi Surya) ತಮಿಳುನಾಡಿನ (Tamil Nadu) ಮುಂದಿನ ಮುಖ್ಯಮಂತ್ರಿ (CM) ಎಂದು ಪರಿಚಯಿಸಿ ಕುತೂಹಲ ಮೂಡಿಸಿದ್ದಾರೆ.

    ಬೆಂಗಳೂರಿನಲ್ಲಿ (Bengaluru) ಮಾತನಾಡಿದ ತೇಜಸ್ವಿ ಸೂರ್ಯ, ವರುಣ ಮತ್ತು ಚಾಮರಾಜನಗರ ಕ್ಷೇತ್ರಗಳಿಗೆ ನರೇಂದ್ರ ಮೋದಿ ಅವರು ಸೋಮಣ್ಣ ಎಂಬ ಸರ್ಜಿಕಲ್ ಸ್ಟ್ರೈಕ್ ಅಸ್ತ್ರವನ್ನು ಬಳಸಿದ್ದಾರೆ. ಎರಡು ಕ್ಷೇತ್ರಗಳಲ್ಲೂ ಗೆದ್ದುಕೊಂಡು ಬರುತ್ತೇವೆ. ಚಾಮರಾಜನಗರ ಮತ್ತು ಮೈಸೂರಿನಲ್ಲಿ 8 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆದ್ದುಕೊಂಡು ಬರುತ್ತೇವೆ. ಇಲ್ಲಿ ಗೋವಿಂದರಾಜನಗರ ಮತ್ತು ವಿಜಯನಗರ ಎರಡು ಕ್ಷೇತ್ರಗಳನ್ನು ಗೆದ್ದುಕೊಂಡು ಬರುತ್ತೇವೆ. ಸೋಮಣ್ಣ ಅವರ ಪ್ರಭಾವದಿಂದ 10-12 ಕ್ಷೇತ್ರ ಗೆಲ್ಲಿಸಿಕೊಂಡು ಬರುತ್ತೇವೆ. ಗೋವಿಂದರಾಜನಗರದಲ್ಲಿ ನಾನು ಸೋಮಣ್ಣ ಅವರು ಜೋಡೆತ್ತುಗಳಾಗಿ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.

    ಇದೇ ವೇಳೆ ಸೂರ್ಯ ಅಣ್ಣಾಮಲೈ ಅವರಿಗೆ ಮಾತನಾಡಲು ಅವಕಾಶ ಮಾಡಿಕೊಡಲು ಮುಂದಾದಾಗ ತಮಿಳುನಾಡಿನ ಮುಂದಿನ ಮುಖ್ಯಮಂತ್ರಿ ಮುಂದಿನ ವಿಚಾರವನ್ನು ಮಾತನಾಡುತ್ತಾರೆ ಎಂದು ಹೇಳಿ ಮೈಕ್ ಅನ್ನು ಅವರ ಕೈಗೆ ನೀಡಿದ್ದಾರೆ. ಇದನ್ನೂ ಓದಿ: ನನ್ನ ರೋಡ್ ಶೋ ಮುಂದೆ ಬಿಜೆಪಿ, ಕಾಂಗ್ರೆಸ್‌ನದ್ದು ಏನೇನು ಅಲ್ಲ: ಹೆಚ್‌ಡಿಕೆ ವ್ಯಂಗ್ಯ

    ಈ ವೇಳೆ ಮಾತನಾಡಿದ ಅಣ್ಣಾಮಲೈ, ಕರ್ನಾಟಕ ಪೊಲಿಟಿಕಲ್ ಚಿತ್ರಣವನ್ನು ಬದಲಾವಣೆ ಮಾಡಲಿಕ್ಕೆ ಸೋಮಣ್ಣನವರು ಹೊರಟಿದ್ದಾರೆ. ಸರ್ಜಿಕಲ್ ಸ್ಟ್ರೈಕ್ ಮಾಡಲು ಅವರು ಮುಂದಾಗಿದ್ದಾರೆ. ಚಾಮರಾಜನಗರ, ವರುಣಾದಲ್ಲಿ ಬದಲಾವಣೆ ಮಾಡುತ್ತಾರೆ ಎಂದು ಹೇಳಿದರು.

    ಮಾಜಿ ಸಿಎಂ ಸಿದ್ದರಾಮಯ್ಯರನ್ನು ಗೇಲಿ ಮಾಡಿದ ಅಣ್ಣಾಮಲೈ, ಸಿದ್ದರಾಮಯ್ಯ ಸಾಹೇಬ್ರು ನಾಮಿನೇಷನ್ ಮಾಡಿ ನಾನು ಪ್ರಚಾರ ಮಾಡಲ್ಲ ಅಂದಿದ್ದರು. ಆದರೆ ಈಗ ಅವರು ವರುಣಾ ಬಿಟ್ಟು ಹೊರಗಡೆ ಬರುತ್ತಲೇ ಇಲ್ಲ ಎಂದು ವ್ಯಂಗ್ಯವಾಡಿದರು. ನಾವು ಸೋಮಣ್ಣ ಅವರನ್ನು ಗೋವಿಂದರಾಜನಗರದಲ್ಲಿ ಗೆಲ್ಲಿಸಿಕೊಂಡು ಬರೋಣ ಎಂದು ಹೇಳಿದರು. ಇದನ್ನೂ ಓದಿ: ಬಿಎಸ್‌ವೈ ಭೇಟಿ ಮಾಡಿದ ಬಿಎಲ್ ಸಂತೋಷ್ – ಕುತೂಹಲ ಮೂಡಿಸಿದ ನಾಯಕರ ಭೇಟಿ

  • ದೇವೇಗೌಡ್ರು ಅಡುಗೆ ಮನೆಯಲ್ಲಿ ಅರ್ಧ ಗಂಟೆ ಕುಳಿತರೆ ಜೆಡಿಎಸ್ ಟಿಕೆಟ್ ಹಂಚಿಕೆ ಮುಗಿಯುತ್ತೆ: ತೇಜಸ್ವಿ ಸೂರ್ಯ ವ್ಯಂಗ್ಯ

    ದೇವೇಗೌಡ್ರು ಅಡುಗೆ ಮನೆಯಲ್ಲಿ ಅರ್ಧ ಗಂಟೆ ಕುಳಿತರೆ ಜೆಡಿಎಸ್ ಟಿಕೆಟ್ ಹಂಚಿಕೆ ಮುಗಿಯುತ್ತೆ: ತೇಜಸ್ವಿ ಸೂರ್ಯ ವ್ಯಂಗ್ಯ

    ಬೀದರ್: ಜೆಡಿಎಸ್‍ನಲ್ಲಿ (JDS) ಟಿಕೆಟ್ ಹಂಚುವುದು ಬಹಳ ಸುಲಭ. ದೇವೇಗೌಡ್ರು (H.D.Deve Gowda) ಅಡುಗೆ ಮನೆಯಲ್ಲಿ ಕುಳಿತುಕೊಂಡು ಚರ್ಚಿಸಿದರೆ ಅರ್ಧ ಗಂಟೆಯಲ್ಲಿ ಎಲ್ಲಾ ಮುಗಿದು ಹೋಗುತ್ತದೆ ಎಂದು ಜೆಡಿಎಸ್ ವಿರುದ್ಧ ಬಿಜೆಪಿ (BJP) ರಾಷ್ಟ್ರೀಯ ಯುವ ಮೋರ್ಚಾದ ಅಧ್ಯಕ್ಷ ತೇಜಸ್ವಿ ಸೂರ್ಯ (Tejasvi Surya) ಬೀದರ್‌ನಲ್ಲಿ (Bidar) ಲೇವಡಿ ಮಾಡಿದ್ದಾರೆ.

    ಯುವ ಮೋರ್ಚಾ ಸಮಾವೇಶದಲ್ಲಿ ಮಾತನಾಡಿದ ಅವರು ಜೆಡಿಎಸ್‍ನಲ್ಲಿ ಸೊಸೆಗೆ ಟಿಕೆಟ್ ಕೊಡಬೇಕಾ, ಮಗನಿಗೆ ಕೊಡಬೇಕಾ? ಮಗಳಿಗೆ ಕೊಡಬೇಕಾ ಅಥವಾ ಅಳಿಯನಿಗೆ ಕೊಡಬೇಕಾ ಎಂದು ಅಡುಗೆ ಮಾಡತ್ತಾ ಮಾಡತ್ತಾ ಟಿಕೆಟ್ ಹಂಚಿಕೆ ಮುಗಿದು ಹೋಗುತ್ತದೆ. ಆದರೂ ಹಾಸನ ಟಿಕೆಟ್ ಹಂಚಿಕೆ ಇನ್ನೂ ಮುಗಿಯುತ್ತಿಲ್ಲ. ಹಾಸನದಲ್ಲಿ ಸೊಸೆಗೆ ಕೊಡಬೇಕೋ, ಇಲ್ಲಾ ಮಗನಿಗೆ ಕೊಡಬೇಕಾ ಎಂಬ ಗಲಾಟೆ ಇನ್ನೂ ತಣ್ಣಗಾಗಿಲ್ಲ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಹಿಂದೂಗಳ ಭಾವನೆಗೆ ಧಕ್ಕೆ ಆರೋಪ: ಶಾಸಕ ಡಾ.ಶಿವರಾಜ್ ಪಾಟೀಲ್ ವಿರುದ್ಧ ಜೆಡಿಎಸ್ ದೂರು

    ಕಾಂಗ್ರೆಸ್‍ನಲ್ಲಿ ಎರಡು, ಮೂರು ಬಣಗಳು ಕುಳಿತು ಟಿಕೆಟ್ ಫೈನಲ್ ಮಾಡುತ್ತವೆ. ಈ ರೀತಿ ಬೇಕಾದವರಿಗೆ ಟಿಕೆಟ್ ಕೊಟ್ಟು ಇಂದು ರಸ್ತೆ ರಸ್ತೆಯಲ್ಲಿ ಬಂಡಾಯ ಅಭ್ಯರ್ಥಿಗಳು ಹೊಡೆದಾಡುತ್ತಿದ್ದಾರೆ. ಆದರೆ ಬಿಜೆಪಿಯಲ್ಲಿ ಮನೆಯಲ್ಲಿ ಕುಳಿತುಕೊಂಡು ಟಿಕೆಟ್ ಫೈನಲ್ ಮಾಡುವ ಸಂಪ್ರದಾಯ ಇಲ್ಲ. ರಾಜ್ಯ ಹಾಗೂ ಕೇಂದ್ರದ ನಾಯಕರು ಕಾರ್ಯಕರ್ತರ ಅಭಿಪ್ರಾಯ ಸಂಗ್ರಹ ಮಾಡಿ ಟಿಕೆಟ್ ಕೊಡತ್ತಾರೆ ಎಂದು ಟಾಂಗ್ ಕೊಟ್ಟಿದ್ದಾರೆ.

    ನಟ ಸುದೀಪ್ (Sudeep) ಬಿಜೆಪಿ ಬೆಂಬಲ ವಿಚಾರವಾಗಿ ಮಾತನಾಡಿ, ಬಿಜೆಪಿಗೆ ಬೆಂಬಲ ನೀಡಿದ್ದಕ್ಕಾಗಿ ಜೆಡಿಎಸ್ ಹಾಗೂ ಕಾಂಗ್ರೆಸ್‍ನವರು ಅವರನ್ನು ವಿಲನ್ ಮಾಡಿದ್ದಾರೆ. ಕಳೆದ ಬಾರಿ ಚುನಾವಣೆಯಲ್ಲಿ ಸುದೀಪ್ ಕಾಂಗ್ರೆಸ್ ಪರ ಪ್ರಚಾರ ಮಾಡಿದ್ದರು. ಆಗ ಅವರು ಬಹಳ ಸಜ್ಜನ ಹಾಗೂ ಒಳ್ಳೆಯ ವ್ಯಕ್ತಿಯಾಗಿದ್ದರು. ಮೋದಿ (Narendra Modi) ಹಾಗೂ ಬೊಮ್ಮಾಯಿ (Basavaraj Bommai) ಸಂಬಂಧದಿಂದ ಪಕ್ಷಕ್ಕೆ ಬೆಂಬಲ ನೀಡಿದರೆ ಒಳ್ಳೆಯ ವ್ಯಕ್ತಿ ಅಲ್ಲ. ಅವರ ಸಿನಿಮಾ ಬ್ಯಾನ್ ಮಾಡಬೇಕು. ಸುದೀಪ್ ಇಡಿ, ಸಿಬಿಐನ ಭಯದಲ್ಲಿ ಬಿಜೆಪಿಗೆ ಬೆಂಬಲ ನೀಡುತ್ತಿದ್ದಾರೆ ಎಂದು ಕಾಂಗ್ರೆಸ್ ಸುಳ್ಳಿನ ರಾಜಕೀಯ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಗುಜರಾತ್ ನಾಯಕರನ್ನು ಮೆಚ್ಚಿಸಲು KMF ಮುಗಿಸುವ ಹುನ್ನಾರ: ಹೆಚ್ಡಿಕೆ ವಾಗ್ದಾಳಿ

  • ರಾಹುಲ್ ಗಾಂಧಿ ಸಂಸದ ಸ್ಥಾನ ಅನರ್ಹಕ್ಕೆ ಅಮೆರಿಕ, ಜರ್ಮನಿ ಸ್ಪಂದನೆ ಅನಗತ್ಯ: ಕೇಂದ್ರ ಸಚಿವ ಜೈಶಂಕರ್

    ರಾಹುಲ್ ಗಾಂಧಿ ಸಂಸದ ಸ್ಥಾನ ಅನರ್ಹಕ್ಕೆ ಅಮೆರಿಕ, ಜರ್ಮನಿ ಸ್ಪಂದನೆ ಅನಗತ್ಯ: ಕೇಂದ್ರ ಸಚಿವ ಜೈಶಂಕರ್

    ಬೆಂಗಳೂರು: ರಾಹುಲ್ ಗಾಂಧಿ (Rahul Gandhi) ಸಂಸದ ಸ್ಥಾನದಿಂದ ಅನರ್ಹಗೊಂಡ ವಿಚಾರಕ್ಕೆ ಅಮೆರಿಕ (America) ಹಾಗೂ ಜರ್ಮನಿ (Germany) ನೀಡಿರುವ ಪ್ರತಿಕ್ರಿಯೆಗೆ ವಿದೇಶಾಂಗ ಸಚಿವ ಡಾ.ಎಸ್ ಜೈಶಂಕರ್ (S.Jaishankar) ಕಿಡಿಕಾರಿದ್ದಾರೆ.

    ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ (Tejasvi Surya) ಹಾಗೂ ಬೆಂಗಳೂರು (Bengaluru) ಕೇಂದ್ರ ಸಂಸದ ಪಿ.ಸಿ ಮೋಹನ್ ನೇತೃತ್ವದಲ್ಲಿ ಕಬ್ಬನ್ ಪಾರ್ಕ್ ನಲ್ಲಿ 500 ಕ್ಕಿಂತಲೂ ಅಧಿಕ ಯುವ ಮತದಾರರು ಹಾಗೂ ಸಾರ್ವಜನಿಕರೊಂದಿಗೆ ಆಯೋಜನೆಗೊಂಡಿದ್ದ Meet and Greet ಸಂವಾದದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಇದೇ ಸಂದರ್ಭದಲ್ಲಿ ಪಶ್ಚಿಮದ ರಾಷ್ಟ್ರಗಳು ತಮ್ಮ ಹಿತಾಸಕ್ತಿಗೆ ಅನುಗುಣವಾದ ಅಭಿಪ್ರಾಯಗಳನ್ನು ಇತರ ದೇಶಗಳ ಮೇಲೆ ಹೇರುವುದನ್ನು ನಿಲ್ಲಿಸಬೇಕು ಎಂದು ಕಟುವಾಗಿ ಟೀಕಿಸಿದ್ದಾರೆ. ಇದನ್ನೂ ಓದಿ: ರಾಷ್ಟ್ರೀಯ ಹೆದ್ದಾರಿಯಲ್ಲೇ ಬಿಜೆಪಿ ಮುಖಂಡನ ಗುಂಡಿಕ್ಕಿ ಹತ್ಯೆ

    ಪಾಶ್ಚಿಮಾತ್ಯ ರಾಷ್ಟ್ರಗಳು ಹಿಂದಿನಿಂದಲೂ ಬೇರೆ ದೇಶಗಳ ಸಾರ್ವಭೌಮತ್ವ, ಸಾಂವಿಧಾನಿಕ ಅಧಿಕಾರಗಳ ಕುರಿತಾದ ಆಂತರಿಕ ವಿಷಯಗಳ ಮೇಲೆ ತಮ್ಮ ಅಭಿಪ್ರಾಯವೇ ಶ್ರೇಷ್ಠ ಎಂಬ ಮನಸ್ಥಿತಿಯಿಂದ ಹೊರಬಂದಿಲ್ಲ. ಇದೇ ಪರಿಸ್ಥಿತಿ ಮುಂದುವರೆದರೆ ಬೇರೆ ರಾಷ್ಟ್ರಗಳೂ ಕೂಡ ಪಶ್ಚಿಮದ ದೇಶಗಳ ಕುರಿತಾಗಿ ಸಮಾನ ದೃಷ್ಟಿಕೋನದಿಂದ ಪ್ರತಿಕ್ರಿಯೆ ನೀಡಲು ಆರಂಭಿಸುವುದು ಸಾಮಾನ್ಯ. ಹಿಂದೆಂದಿಗಿಂತಲೂ ಪ್ರಸ್ತುತ ಸಂದರ್ಭದಲ್ಲಿ ಇಂತಹ ಮನಸ್ಥಿತಿಯನ್ನು ವಿಶ್ವದಾದ್ಯಂತ ನಾವು ಕಾಣಬಹುದು ಎಂದಿದ್ದಾರೆ.

    ನಮ್ಮಲ್ಲಿಯೇ ಇರುವ ಕೆಲವರು ಪಶ್ಚಿಮದ ರಾಷ್ಟ್ರಗಳಿಗೆ ತೆರಳಿ ಭಾರತದ ಕುರಿತಾಗಿ ಅವಮಾನಕರ ಅಭಿಪ್ರಾಯಗಳನ್ನು ವಿವರಿಸಿ, ಆಹ್ವಾನ ನೀಡಿರುವುದರ ಪರಿಣಾಮದಿಂದ ಮಾತ್ರ ಇಂತಹ ಹೇಳಿಕೆಗಳು ಹೊರಬರಲು ಸಾಧ್ಯ. ಈ ರೀತಿಯ ಮನಸ್ಥಿತಿ ಇರುವ ದೇಶದ ಒಳಗಿನ ಹಾಗೂ ಹೊರಗಿನ ಇಬ್ಬರ ಮೂಲ ಸಮಸ್ಯೆಯನ್ನು ಪರಿಹರಿಸುವ ಕಾರ್ಯ ನಡೆಯಲೇಬೇಕಿದೆ ಎಂದಿದ್ದಾರೆ.

    ಉಚಿತ ಕೊಡುಗೆಗಳ ಕುರಿತಾಗಿ, ಇತ್ತೀಚೆಗೆ ಉಚಿತ ಕೊಡುಗೆಗಳನ್ನು ನೀಡುವ ಪರಿಪಾಠ ದೆಹಲಿಯಿಂದ ಶುರುವಾಗಿ ದೇಶದ ಇತರ ಭಾಗಗಳಿಗೂ ಹಬ್ಬುತ್ತಿರುವ ಕ್ರಮ ಆತಂಕಕಾರಿ. ಅಂತಹ ಸರ್ಕಾರಗಳಿಗೆ ಸಂಪನ್ಮೂಲ ಕ್ರೋಢೀಕರಣ ದೊಡ್ಡ ಸಮಸ್ಯೆ ಆಗುತ್ತದೆ. ತಾತ್ಕಾಲಿಕ ರಾಜಕೀಯ ಲಾಭದ ಸಲುವಾಗಿ ಮಾಡುವ ಇಂತಹ ಯೋಜನೆಗಳಿಗೆ ಯಾರೋ ಒಬ್ಬರು ಬೆಲೆ ತೆರಬೇಕಾಗುತ್ತದೆ. ಒಂದೆಡೆ ಉಚಿತ ನೀಡುವಾಗ ಬೇರೆ ಕಡೆಯಿಂದ ಕ್ರೋಢೀಕರಣ ಮಾಡಲೇಬೇಕು. ಜವಾಬ್ದಾರಿ ರಹಿತ ಇಂತಹ ಉಚಿತ ಕೊಡುಗೆಗಳ ಕಾರ್ಯಕ್ರಮಗಳಿಂದ ದೇಶದ ಬೊಕ್ಕಸಕ್ಕೆ ಉಂಟಾಗುವ ಅಪಾರ ಹಾನಿ ಎಂದಿದ್ದಾರೆ.

    ಪ್ರಸ್ತುತ ಜಿ 20 ಆತಿಥೇಯ ರಾಷ್ಟ್ರವಾಗಿರುವ ಭಾರತವು, ಇದುವರೆಗೆ ಜಿ 20 ಸದಸ್ಯ ರಾಷ್ಟ್ರವಲ್ಲದ ದೇಶಗಳನ್ನು ಸಂಪರ್ಕಿಸಿ, ಅವುಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಕಾರ್ಯಯೋಜನೆ ಹಮ್ಮಿಕೊಂಡಿರುವುದು ಶ್ಲಾಘನೀಯ. ಮುಂಚೆ ಇಂತಹ ಅತೀ ದೊಡ್ಡ ಸಮಾವೇಶಗಳನ್ನು ಆಯ್ದ ಕೇವಲ 2-3 ನಗರಗಳಲ್ಲಿ ಮಾತ್ರ ಹಮ್ಮಿಕೊಳ್ಳಲಾಗಿತ್ತು. ಆದರೆ, ಈ ಬಾರಿ ದೇಶದ 60 ಇತರ ನಗರಗಳಲ್ಲಿ ಸಮಾವೇಶ ಆಯೋಜಿಸಿ ಇತರ ರಾಜ್ಯಗಳಿಗೂ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದ್ದಾರೆ.

    ಭಾರತದ ಅಭಿವೃದ್ಧಿಗೆ ಪ್ರತೀ ರಾಜ್ಯ, ನಗರಗಳು ಕೂಡ ಗಣನೀಯ ಕೊಡುಗೆ ನೀಡುತ್ತಿವೆ. ಜಾಗತಿಕ ವಿದ್ಯಮಾನಗಳನ್ನು ಇತರ ನಗರಗಳಿಗೂ ಪರಿಚಯಿಸುವ ಉದ್ದೇಶದಿಂದ ಈ ರೀತಿ ಎಲ್ಲೆಡೆ ಜಿ 20 ಸಮಾವೇಶಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಜಿ 20 ಸಮಾವೇಶಕ್ಕೆ ಜಗತ್ತಿನ ವಿವಿಧೆಡೆಯಿಂದ ಆಗಮಿಸುವ 200ಕ್ಕಿಂತಲೂ ಅಧಿಕ ಅಗ್ರಗಣ್ಯ ವ್ಯಕ್ತಿಗಳಿಗೆ ಈ ದೇಶದ ವೈವಿಧ್ಯಮಯ ಸಂಸ್ಕೃತಿ, ಆಚಾರ, ವಿಚಾರ, ಅಡುಗೆ, ತಿನಿಸುಗಳ ಬಗ್ಗೆ ಅರಿವು ಮೂಡಿಸುವುದು ಇದರ ಹಿಂದಿನ ಉದ್ದೇಶವಾಗಿದೆ. ಭಾರತ (India) ವಿಶ್ವಕ್ಕೆ ತೆರೆದುಕೊಳ್ಳುವುದು ಹಾಗೂ ವಿಶ್ವವು ಭಾರತವನ್ನು ಅರ್ಥೈಸಿಕೊಳ್ಳುವುದು ಇದರಿಂದ ಸಾಧ್ಯವಾಗಲಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯನವರನ್ನು ಸೋಲಿಸಲು ಯಾವ ಲೀಡರ್‌ಗಳಿಂದಲೂ ಸಾಧ್ಯವಿಲ್ಲ, ಜನರೇ ಸೋಲಿಸಬೇಕು: ಸತೀಶ್ ಜಾರಕಿಹೊಳಿ

  • ಬಸವರಾಜ ಬೊಮ್ಮಾಯಿ ಮತ್ತೊಮ್ಮೆ ಸಿಎಂ ಆಗೋದು ಪಕ್ಕಾ : ತೇಜಸ್ವಿ ಸೂರ್ಯ

    ಬಸವರಾಜ ಬೊಮ್ಮಾಯಿ ಮತ್ತೊಮ್ಮೆ ಸಿಎಂ ಆಗೋದು ಪಕ್ಕಾ : ತೇಜಸ್ವಿ ಸೂರ್ಯ

    ಯಾದಗಿರಿ: ಬಸವರಾಜ ಬೊಮ್ಮಾಯಿ (Basavaraj Bommai) ಅವರು ಹೇಳಿರುವುದು ನೂರಕ್ಕೆ ನೂರು ಸತ್ಯ. ಬಿಜೆಪಿ (BJP) ಸಂಪೂರ್ಣ ಬಹುಮತ ಬರುವುದರಲ್ಲಿ ಸಂಶಯವಿಲ್ಲ. ನಾವೇ ಅಧಿಕಾರಕ್ಕೆ ಬಂದು ಅವರೇ ಮುಖ್ಯಮಂತ್ರಿ ಆಗುತ್ತಾರೆ ಎಂದು ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ (Tejasvi Surya) ಹೇಳಿದರು.

    ಬಿಜೆಪಿ ಯುವ ಸಮಾವೇಶದಲ್ಲಿ ಮಾತನಾಡಿದ ಅವರು, ಮತ್ತೊಮ್ಮೆ ನಾನೇ ಸಿಎಂ ಎಂಬ ಬೊಮ್ಮಾಯಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಕೇಂದ್ರ ಹಾಗೂ ರಾಜ್ಯದ ಬೊಮ್ಮಾಯಿ, ಯಡಿಯೂರಪ್ಪ ನೇತೃತ್ವದ ಸರ್ಕಾರ ಮಾಡಿರುವ ಅಭಿವೃದ್ಧಿ ಕೆಲಸಗಳು ನಮ್ಮ ಕೈ ಹಿಡಿಯುತ್ತವೆ. ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ಸೌಲಭ್ಯ ಪಡೆದ ನೇರವಾದ ಲಾಭಾರ್ಥಿಗಳಿದ್ದಾರೆ. ಸರ್ಕಾರದ ಯೋಜನೆಗಳಲ್ಲಿ ಲಾಭ ಪಡೆದಿರುವಂತ ವ್ಯಕ್ತಿಗಳು ನಮ್ಮ ಜೊತೆಗಿದ್ದಾರೆ. ಹೀಗಾಗಿ ನಮ್ಮ ಸರ್ಕಾರ ಬಹುಮತದಿಂದ ಅಧಿಕಾರಕ್ಕೆ ಬರುತ್ತದೆ. ಇದರಿಂದಾಗಿ ಬೊಮ್ಮಾಯಿ ಅವರೇ ಮತ್ತೊಮ್ಮೆ ಸಿಎಂ ಆಗುತ್ತಾರೆ ಎಂದು ಹೇಳಿದರು.

    ಕಲಬುರಗಿಯಿಂದ ಬರುವಾಗ ಜೆಡಿಎಸ್‌ನ ಸಾಕಷ್ಟು ಫೋಸ್ಟರ್‌ಗಳನ್ನು ನೋಡಿದೆ. ಜೆಡಿಎಸ್‌ನ ಪಂಚರತ್ನ ಯಾತ್ರೆಗೆ ಪಂಕ್ಚರ್ ಯಾತ್ರೆ ಎಂದು ಗೊತ್ತಾಯ್ತು. ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ (JDS) ನಾಣ್ಯ ಚಲಾವಣೆ ಆಗ್ತಾಯಿಲ್ಲ, ಇಲ್ಲಿ ಬಂದಿದಿಯಾ ಅಂತ ನಮ್ ಕಾರ್ಯಕರ್ತರನ್ನ ಕೇಳಿದೆ. ಚುನಾವಣೆ ಬರ್ತಾಯಿದ್ದ ಹಾಗೆ ಜೆಡಿಎಸ್‌ನವರು ಕಾಣ್ತಾ ಇದ್ದಾರೆ. ಇವರಿಗೆ ಪಂಚ ವರ್ಷ ಇರಲಿಲ್ಲ, ಹೀಗಾಗಿ ಜೆಟಿಎಸ್‌ನವ್ರು ಪಂಚ ವರ್ಷದ ಕೊನೆಯಲ್ಲಿ ಪಂಚರತ್ನ ಅಂತ ಬಂದಿದ್ದಾರೆ ಎಂದು ವ್ಯಂಗ್ಯವಾಡಿದರು.

    ರಾಹುಲ್ ಗಾಂಧಿಗೆ ಶಿಕ್ಷೆ ಪ್ರಕಟ ಸ್ವಾಗತ: ಪ್ರಧಾನಿ ಮೋದಿಗೆ (Narendra Modi) ನಿಂದನೆ ಆರೋಪದಲ್ಲಿ ರಾಹುಲ್ ಗಾಂಧಿಗೆ (Rahul Gandhi) ಸೂರತ್ ಕೋರ್ಟ್ ಕೊಟ್ಟಿರುವ ತೀರ್ಪನ್ನು ನಾನು ಸ್ವಾಗತಿಸುತ್ತೇನೆ. ರಾಹುಲ್ ಗಾಂಧಿ ಇಂದಿನ ಕೇಸ್ ಸೇರಿ ಎರಡು ಪ್ರಕರಣಗಳಲ್ಲಿ ಬೇಲ್ ಮೇಲೆ ಹೊರಗಿದ್ದಾರೆ. ನ್ಯಾಷನಲ್ ಹೆರಾಲ್ಡ್ ಭ್ರಷ್ಟಾಚಾರದ ಆರೋಪದಲ್ಲಿ ಕೇಸ್ ನಡೆಯುತ್ತಿದೆ. ಅದರಲ್ಲೂ ಬೇಲ್ ತೆಗೆದುಕೊಂಡಿದ್ದಾರೆ. ಈಗ ಮೋದಿ ಅವರ ವಿರುದ್ಧ ಹಗುರವಾಗಿ, ಅವಮಾನವಾಗುವಂತೆ ಮಾತನಾಡಿದ್ದಕ್ಕೆ ಸೂರತ್ ಕೋರ್ಟ್ ಶಿಕ್ಷೆ ಕೊಟ್ಟಿದೆ. ಅಲ್ಲೂ ಕೂಡಾ ಬೇಲ್ ತೆಗೆದುಕೊಂಡಿದ್ದಾರೆ. ಈ ದೇಶದ ಪ್ರಧಾನಿ ಆಗಬೇಕೆಂದು ಕನಸು ಕಂಡಿರುವ ರಾಷ್ಟ್ರೀಯ ನಾಯಕರಾದ ರಾಹುಲ್ ಗಾಂಧಿಗೆ ಯಾವ ರೀತಿ ಮಾತಾಡಬೇಕು? ಹೇಗೆ ವರ್ತನೆ ಮಾಡಬೇಕು? ಎನ್ನುವುದನ್ನು ಈಗಲಾದರೂ ಕಲಿಬೇಕು. ಆದರೆ ರಾಹುಲ್ ಗಾಂಧಿ ಅವ್ರು ಅದನ್ನ ಮತ್ತೆ ಮತ್ತೆ ಪುನರಾವರ್ತನೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

    ಮೋದಿ ಅವರ ಕುರಿತಾಗಿ ವೈಯಕ್ತಿಕ ಟೀಕೆಗಳನ್ನು ಮಾಡುವುದು ಕಾಂಗ್ರೆಸ್ ಪಾರ್ಟಿಗೆ ಹೊಸದಲ್ಲ. ಮೋದಿ ಗುಜರಾತ್ ಮುಖ್ಯಮಂತ್ರಿ ಆಗಿದ್ದಾಗ ಅವರನ್ನು ಸೋನಿಯಾ ಗಾಂಧಿ, ರವಿಶಂಕರ್ ಅಯ್ಯರ್ ಅವಾಚ್ಯ ಶಬ್ದದಿಂದ ನಿಂದಿಸಿದ್ದರು. ಅದೇ ಚಾಳಿ ಮುಂದುವರಿಸಿ ವೈಯಕ್ತಿಕ ಟೀಕೆ ಮಾಡುತ್ತಿದ್ದ ರಾಹುಲ್ ಗಾಂಧಿ 2019ರಲ್ಲಿ ಮಾತನಾಡಿದ್ದ ಪ್ರಕರಣಕ್ಕೆ ಕೋರ್ಟ್ ಗುರುವಾರ ಶಿಕ್ಷೆ ಕೊಟ್ಟಿದೆ. ಈಗಲಾದ್ರೂ ಪಶ್ಚಾತ್ತಾಪ ಪಟ್ಟು, ಸಾರ್ವಜನಿಕ ಜೀವನದಲ್ಲಿ ಇರಬೇಕಾದ ಸಭ್ಯತೆಯನ್ನ ಕಲಿಯಬೇಕು ಎಂದರು. ಇದನ್ನೂ ಓದಿ: ಮುಸ್ಲಿಂ ಅಭ್ಯರ್ಥಿ ಹಾಕದಿದ್ರೆ ನೋಟಾಗೆ ಮತ – ನಾಯಕರಿಗೆ ಮಹಿಳೆಯರಿಂದ ವಾರ್ನಿಂಗ್‌

    ರಾಹುಲ್ ಗಾಂಧಿ ಈ ರೀತಿ ಹೇಳಿಕೆ ಕೊಡುವುದರಿಂದ ಮೋದಿ ಅವರ ಬಗ್ಗೆ ಕೆಟ್ಟದಾಗಿ ಮಾತಾಡುವುದರಿಂದ, ಜನ ಅವರ ಮೇಲೆ ಇಟ್ಟಿರುವ ಪ್ರೀತಿ ವಿಶ್ವಾಸ ಕಡಿಮೆ ಆಗುವುದಿಲ್ಲ. ಅದು ಮತ್ತಷ್ಟು ಗಟ್ಟಿಯಾಗುತ್ತಾ ಹೋಗುತ್ತದೆ. ಮೋದಿ ಅವರ ಮಾತಿನಲ್ಲೇ ಹೇಳುವುದಾದರೇ ನಮ್ಮ ಕಮಲ ಅರಳುವುದು ಕಾಂಗ್ರೆಸ್‌ನವರು ಎರಚುವ ಕೆಸರಿನಲ್ಲಿ ಎಂದು ಹೇಳಿದರು. ಆದ್ದರಿಂದ ಅವರು ಮೋದಿ ಅವರ ಮೇಲೆ ಎಷ್ಟೇ ಕೆಟ್ಟ ಶಬ್ದಗಳನ್ನ ಬಳಸಿದ್ರೂ, ಜನರ ಪ್ರೀತಿ ವಿಶ್ವಾಸ ಅಷ್ಟೇ ಗಟ್ಟಿಯಾಗುತ್ತಾ ಹೋಗುತ್ತದೆ. ಹೀಗಾಗಿ ಕೋರ್ಟ್ ಕೊಟ್ಟಿರುವ ತೀರ್ಪನ್ನ ಸ್ವಾಗತಿಸುತ್ತೇನೆ. ಇನ್ಮೇಲಾದ್ರೂ ರಾಹುಲ್ ಗಾಂಧಿ ಅವ್ರು ತಮ್ಮ ಸ್ಥಾನಕ್ಕೆ ತಕ್ಕಂತೆ ಇರಲಿ ಎಂದು ಸಲಹೆ ನೀಡಿದರು. ಇದನ್ನೂ ಓದಿ: ಆಟವಾಡುತ್ತಾ ಉಂಗುರ ನುಂಗಿದ 8 ತಿಂಗಳ ಮಗು ಸಾವು

  • ಮೋದಿ ಯುವಜನರನ್ನ ಸ್ವಾವಲಂಬಿಗಳಾಗಿ ಮಾಡಿದ್ರೆ, ಕಾಂಗ್ರೆಸ್‌ 3 ಸಾವಿರ ಕೊಡ್ತೀನಿ ಅಂತಿದೆ – ತೇಜಸ್ವಿ‌ ಸೂರ್ಯ

    ಮೋದಿ ಯುವಜನರನ್ನ ಸ್ವಾವಲಂಬಿಗಳಾಗಿ ಮಾಡಿದ್ರೆ, ಕಾಂಗ್ರೆಸ್‌ 3 ಸಾವಿರ ಕೊಡ್ತೀನಿ ಅಂತಿದೆ – ತೇಜಸ್ವಿ‌ ಸೂರ್ಯ

    ಬೆಂಗಳೂರು: `ಯುವಕ್ರಾಂತಿ’ ಸಮಾವೇಶದಲ್ಲಿ ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ (Rahul Gandhi) 2 ವರ್ಷಗಳವರೆಗೆ ಪ್ರತಿ ತಿಂಗಳು ನಿರುದ್ಯೋಗಿ (Unemployment) ಪದವೀಧರರಿಗೆ 3 ಸಾವಿರ ರೂ. ಹಾಗೂ ನಿರುದ್ಯೋಗಿ ಡಿಪ್ಲೊಮಾ ಪದವೀಧರರಿಗೆ 1,500 ರೂ. ನಿರುದ್ಯೋಗ ಭತ್ಯೆ ನೀಡುವ `ಯುವನಿಧಿ’ (YuvaNidhi) ಯೋಜನೆಯನ್ನ ಘೋಷಣೆ ಮಾಡಿದ್ದಾರೆ.

    ಕಾಂಗ್ರೆಸ್ ಘೋಷಣೆ ಮಾಡಿರುವ 4ನೇ ಗ್ಯಾರಂಟಿಗೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ (Tejasvi_Surya) ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ನಿರುದ್ಯೋಗಿಗಳಿಗೆ ಪ್ರತಿ ತಿಂಗಳು 3 ಸಾವಿರ ರೂ. ಭತ್ಯೆ.: ಕಾಂಗ್ರೆಸ್‌ 4ನೇ ಗ್ಯಾರಂಟಿ ಘೋಷಣೆ

    `ಒಂದೆಡೆ ಪ್ರಧಾನಿ ನರೇಂದ್ರ ಮೋದಿ (NarendraModi) ಅವರು, ಸ್ಟಾರ್ಟ್ಅಪ್, ಡಿಜಿಟಲ್ ಇಂಡಿಯಾ (Digital India), ಮುದ್ರಾ ಮತ್ತು ಇನ್ನಿತರ ಯೋಜನೆಗಳಿಂದ ಯುವಜನರನ್ನು ಸ್ವಾವಲಂಭಿಗಳಾಗಿ ಮಾಡಲು ಪ್ರಯತ್ನಿಸುತ್ತಿದ್ದರೇ, ಇನ್ನೊಂದೆಡೆ ರಾಹುಲ್‌ಗಾಂಧಿ ಅವರು 3 ಸಾವಿರ ರೂ. ಭತ್ಯೆ ಕೊಡುವ ಮಹಾನ್ ಯೋಜನೆಯನ್ನು ಕರ್ನಾಟಕದ ಯುವಜನತೆಗೆ ಘೋಷಿಸುತ್ತಿರುವುದು ವಿಪರ್ಯಾಸ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ಇಂದಿನ ಆಶಾದಾಯಿ ಯುವ ಪೀಳಿಗೆಯಿಂದ ಕಾಂಗ್ರೆಸ್ ಪಕ್ಷ ಎಷ್ಟು ದೂರ ಸರಿದಿದೆ ಎಂಬುದಕ್ಕೆ ಇದು ನಿದರ್ಶನ. ದೇಶದ ಆಶಾದಾಯಕ, ಭರವಸೆಯ ಯುವಜನತೆಗೆ ನಿರುದ್ಯೋಗಿ ಕಾಂಗ್ರೆಸ್ ಪಕ್ಷವು ಮಾಡುತ್ತಿರುವ ದ್ರೋಹ ಅಕ್ಷಮ್ಯ ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ 10 ಲಕ್ಷ ಯುವಕರಿಗೆ ಉದ್ಯೋಗ – ರಾಹುಲ್ ಗಾಂಧಿ ಭರವಸೆ

    ಈಗಾಗಲೇ ಪ್ರತಿ ತಿಂಗಳು ಕುಟುಂಬಕ್ಕೆ 10 ಕೆಜಿ ಅಕ್ಕಿ ಉಚಿತ, 200 ಯೂನಿಟ್ ವಿದ್ಯುತ್ ಉಚಿತ, ಕುಟುಂಬದ ಓರ್ವ ಮಹಿಳೆಗೆ 2 ಸಾವಿರ ರೂ. ನೀಡುವುದಾಗಿ ಘೋಷಿಸಿರುವ ಕಾಂಗ್ರೆಸ್ ತನ್ನ 4ನೇ ಗ್ಯಾರಂಟಿಯಾಗಿ `ಯುವನಿಧಿ’ ಯೋಜನೆಯನ್ನ ಘೋಷಣೆ ಮಾಡಿದೆ.

  • ಅಭಿವೃದ್ಧಿ ಅಂದ್ರೆ ಬೊಜ್ಜು ಕಡಿಮೆ ಮಾಡಿಕೊಳ್ಳಲು ಭಾರತ್ ಜೋಡೋ ಹೆಸರಲ್ಲಿ ವಾಕಿಂಗ್ ಮಾಡಿದಂತಲ್ಲ: ತೇಜಸ್ವಿ

    ಅಭಿವೃದ್ಧಿ ಅಂದ್ರೆ ಬೊಜ್ಜು ಕಡಿಮೆ ಮಾಡಿಕೊಳ್ಳಲು ಭಾರತ್ ಜೋಡೋ ಹೆಸರಲ್ಲಿ ವಾಕಿಂಗ್ ಮಾಡಿದಂತಲ್ಲ: ತೇಜಸ್ವಿ

    ಶಿವಮೊಗ್ಗ: ಅಭಿವೃದ್ಧಿ ಅಂದ್ರೆ ಬೊಜ್ಜು ಕಡಿಮೆ ಮಾಡಿಕೊಳ್ಳಲು ಭಾರತ್ ಜೋಡೋ ಹೆಸರಲ್ಲಿ ವಾಕಿಂಗ್ ಮಾಡಿದಂತಲ್ಲ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿಕೆ ನೀಡಿದರು.

    ಶಿವಮೊಗ್ಗದಲ್ಲಿ ನಡೆದ ಯುವ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ತೇಜಸ್ವಿಸೂರ್ಯ (Tejasvi Surya), ಕಾಂಗ್ರೆಸ್ ಶಂಕುಸ್ಥಾಪನೆ ಮಾಡಿದ್ದ ಒಂದೇ ಒಂದು ಯೋಜನೆಗಳು ಅವರು ಈವರೆಗೂ ಉದ್ಘಾಟಿಸಿಲ್ಲ. ಅಭಿವೃದ್ಧಿ ಎಂದರೆ ಬೊಜ್ಜು ಕಡಿಮೆ ಮಾಡಿಕೊಳ್ಳಲು ಭಾರತ್ ಜೋಡೋ (Bharat Jodo Yatra) ಹೆಸರಿನಲ್ಲಿ ವಾಕಿಂಗ್ ಮಾಡಿದ ಹಾಗಲ್ಲ. ಅಭಿವೃದ್ಧಿ ಎಂದರೆ ಪ್ರಧಾನಿ ಮೋದಿ ಮಾಡುತ್ತಿರುವುದಾಗಿದೆ ಎಂದರು. ಇದನ್ನೂ ಓದಿ: Infosys ಅಧ್ಯಕ್ಷ ಸ್ಥಾನಕ್ಕೆ ಮೋಹಿತ್ ಜೋಶಿ ರಾಜೀನಾಮೆ

    ನಮ್ಮ ಅನೇಕ ಕಾರ್ಯಕರ್ತರ ಹತ್ಯೆ ಹಾಗೂ ಅವರ ಮೇಲೆ ಹಲ್ಲೆಗಳು ನಡೆದಿವೆ. 738 ಪುಟಗಳ ವರದಿ ಸಿದ್ಧಪಡಿಸಿ ಹರ್ಷ ಹತ್ಯೆ ಮಾಡಿದವರು ಜೈಲಿನಿಂದ ಹೊರಗೆ ಬರಬಾರದೆಂದು ಕೆಲಸ ಮಾಡಿದ್ದೇವೆ. ಅದೇ ಕಾಂಗ್ರೆಸ್ ಅಧಿಕಾರದಲ್ಲಿದ್ದಿದ್ದರೆ ಹರ್ಷ ಹತ್ಯೆ ಮಾಡಿದವರು ಈವರೆಗೆ ಹೊರಗೆ ಬರುತ್ತಿದ್ದರು. ಇವಿಎಂ ಯಂತ್ರ ಸರಿಯಿಲ್ಲ ಎಂದು ಈಗ ಕಾಂಗ್ರೆಸ್‍ನವರು ಶುರು ಮಾಡಿಕೊಂಡಿದ್ದಾರೆ. ಆದರೆ ಅವರ ಸೋಲಾಗುತ್ತಿರುವುದು ಇವಿಎಂ (EVM) ಮಿಷನ್ ನಿಂದಲ್ಲ ಅವರ ಕಾರ್ಯಕರ್ತರಿಂದಾಗಿ ಅವರ ಸೋಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.

    ಶಿವಮೊಗ್ಗಕ್ಕೆ (Shivamogga) ಬಂದಾಗಲೆಲ್ಲಾ ಖುಷಿಯಾಗುತ್ತೆ. ಇಲ್ಲಿನ ಯುವ ಮೋರ್ಚಾ ಸಂಘಟನೆ ಸಧೃಢವಾಗಿದೆ. ಕಾಂಗ್ರೆಸ್ (Congress) ಹಾಗೂ ಜೆಡಿಎಸ್ (JDS) ಪಕ್ಷಗಳ ಕಚೇರಿಗಳಿಗೆ ಈಗ ಸುಣ್ಣ, ಬಣ್ಣ ಬಳಿಯುತ್ತಿದ್ದಾರೆ. ಚುನಾವಣೆ ಹತ್ತಿರ ಬರುತ್ತಿದ್ದಂತೆ ಬ್ಯಾನರ್, ಬಂಟಿಂಗ್ಸ್ ಹಾಕಿಸುತ್ತಿದ್ದಾರೆ. ಚುನಾವಣೆ ಬಂದಾಗ ಪಂಚರತ್ನ ಯಾತ್ರೆ ಬರುವ ಪಕ್ಷ ನಮ್ಮದಲ್ಲ. ನಮ್ಮದು ಪಂಚ ವರ್ಷಗಳು ಕೂಡ ಸಧೃಢ ಎಂಬುದನ್ನು ತೋರಿಸಿ ಕೊಟ್ಟಿದೆ. ಕೋವಿಡ್ ಇರಲಿ ಬಿಡಲಿ ನಮ್ಮ ಕಚೇರಿ ಎಲ್ಲರಿಗೂ ತೆರದಿದೆ ಎಂದು ಹೇಳಿದರು. ಇದನ್ನೂ ಓದಿ: ಧಾರವಾಡ ಜಿಲ್ಲಾಡಳಿತದಿಂದ ಪ್ರಧಾನಿ ಮೋದಿಗೆ ತೊಟ್ಟಿಲು ಗಿಫ್ಟ್