Tag: Tejasvi Surya

  • ದಾನಿಗಳು 1.12 ಲಕ್ಷ ಎಕರೆ ಭೂಮಿಯನ್ನ ವಕ್ಫ್‌ಗೆ ದಾನ ಮಾಡಿದ್ದಾರೆ: ಜಮೀರ್

    ದಾನಿಗಳು 1.12 ಲಕ್ಷ ಎಕರೆ ಭೂಮಿಯನ್ನ ವಕ್ಫ್‌ಗೆ ದಾನ ಮಾಡಿದ್ದಾರೆ: ಜಮೀರ್

    – ತೇಜಸ್ವಿ ಸೂರ್ಯ ಬುದ್ಧಿವಂತ ಅಂದುಕೊಂಡಿದ್ದೆ

    ಬೆಂಗಳೂರು: ಅನೇಕ ದಿನಗಳಿಂದ ವಕ್ಫ್ ಅದಾಲತ್ (Waqf Adalat) ಮಾಡಿದ್ದೆ. ಸರ್ಕಾರದ ಒಂದು ಇಂಚು ಜಾಗವನ್ನ ನಾವು ಪಡೆದಿಲ್ಲ. ದಾನಿಗಳು 1.12 ಲಕ್ಷ ಎಕರೆ ವಕ್ಫ್‌ಗೆ ದಾನ ಮಾಡಿದ್ದಾರೆ. ಇದರಲ್ಲಿ ಉಳಿದಿರೋದು ಕೇವಲ 23 ಸಾವಿರ ಎಕರೆ. ಹೀಗಾಗಿ ಈ ಜಾಗ ಉಳಿದುಕೊಳ್ಳಲು ವಕ್ಫ್ ಅದಾಲತ್ ಮಾಡಿದ್ದೇನೆ ಎಂದು ಸಚಿವ ಜಮೀರ್ ಅಹ್ಮದ್ (Zameer Ahmed Khan) ಹೇಳಿದ್ದಾರೆ.

    ವಿಜಯಪುರ (Vijayapura) ರೈತರಿಗೆ ವಕ್ಫ್ ಬೋರ್ಡ್ ನೋಟಿಸ್ ವಿಚಾರ ವಿವಾದ ದೊಡ್ಡದಾಗುತ್ತಲೇ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ನಾನು ತೇಜಸ್ವಿಸೂರ್ಯ ಅವರನ್ನು ಬುದ್ಧಿವಂತ ಅಂದುಕೊಂಡಿದ್ದೆ. ನಾನು ರೈತರ ಮಗ. ಅವರಿಗೆ ಎಷ್ಟು ಕಾಳಜಿ ಇದೆಯೋ ನಮಗೂ ಹೆಚ್ಚು ಕಾಳಜಿ ಇದೆ. ನಾವು ರೈತರ ಮಕ್ಕಳು. ನಾವು ರೈತರ ಒಂದು ಇಂಚು ಜಾಗ ಪಡೆಯಲ್ಲ ಎಂದರು. ಇದನ್ನೂ ಓದಿ: ಭರ್ತಿಯಾದ ಕೆರೆಕಟ್ಟೆಗಳಿಂದ ಅವಾಂತರ – ಕೈಗೆಬಂದ ತುತ್ತು ಬಾಯಿಗೆ ಬಾರದ ಸ್ಥಿತಿಯಲ್ಲಿ ಚಿತ್ರದುರ್ಗ ರೈತರು

    ವಿಜಯಪುರದಲ್ಲಿ ನಡೆದ ಮೀಟಿಂಗ್‌ಗೆ ಯತ್ನಾಳ್ ಅವರನ್ನು ಕರೆದಿದ್ದೆ. ಯತ್ನಾಳ್ ಅವರು ಬಂದಿಲ್ಲ. ಅನ್ಯಾಯ ಆಗಿದ್ದರೆ ಅವರು ಸಭೆಗೆ ಬರಬೇಕಿತ್ತು. ಆದರೆ ಬಂದಿರಲಿಲ್ಲ. ವಿಜಯಪುರದಲ್ಲಿ ಅದಾಲತ್ ಮಾಡಿದ್ದು ವಕ್ಫ್ನ ಆಸ್ತಿ ದಾಖಲಾತಿ ಮಾಡಬೇಕು ಅಂತ. 1,200 ಎಕರೆ ರೈತರ ಜಮೀನು ತೆಗೆದುಕೊಳ್ಳುತ್ತಿದ್ದಾರೆ ಎಂದು ಆರೋಪ ಮಾಡುತ್ತಾರೆ. ತೇಜಸ್ವಿಸೂರ್ಯ ಮಾಹಿತಿ ತೆಗೆದುಕೊಂಡು ಆರೋಪ ಮಾಡಬೇಕು ಎಂದು ಕಿಡಿಕಾರಿದರು. ಇದನ್ನೂ ಓದಿ: ದರ್ಶನ್‌ಗೆ ಇವತ್ತೂ ಸಿಗಲಿಲ್ಲ ಜಾಮೀನು – ಮಂಗಳವಾರಕ್ಕೆ ವಿಚಾರಣೆ ಮುಂದೂಡಿಕೆ

    ಯತ್ನಾಳ್ ಮತ್ತು ತೇಜಸ್ವಿಸೂರ್ಯ ವಕ್ಫ್ ಆಸ್ತಿ ಬಗ್ಗೆ ಮಾತಾಡೋದು ಬಿಡಲಿ. ಮುಜರಾಯಿಯಲ್ಲಿ ಒಟ್ಟು 36 ಸಾವಿರ ಎಕರೆ ಇದೆ. ಇದರಲ್ಲಿ ಸುಮಾರು 740 ಎಕರೆ ಒತ್ತುವರಿ ಆಗಿದೆ. ಇದರ ಬಗ್ಗೆ ಯತ್ನಾಳ್, ತೇಜಸ್ವಿಸೂರ್ಯ ಮಾತನಾಡಲಿ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಸಿದ್ದರಾಮಯ್ಯ ಕಟ್ಟಾ ಬೆಂಬಲಿಗ, ಮುಡಾ ಮಾಜಿ ಆಯುಕ್ತ ಡಿ.ಬಿ ನಟೇಶ್ ಮನೆ ಮೇಲೂ ಇಡಿ ದಾಳಿ!

  • ತೇಜಸ್ವಿ ಸೂರ್ಯ ಈಗ ಐರನ್ ಮ್ಯಾನ್ – 70.3 ರೇಸ್‌ನಲ್ಲಿ ವಿಜೇತರಾದ ಪ್ರಥಮ ಜನಪ್ರತಿನಿಧಿ!

    ತೇಜಸ್ವಿ ಸೂರ್ಯ ಈಗ ಐರನ್ ಮ್ಯಾನ್ – 70.3 ರೇಸ್‌ನಲ್ಲಿ ವಿಜೇತರಾದ ಪ್ರಥಮ ಜನಪ್ರತಿನಿಧಿ!

    ಬೆಂಗಳೂರು: ಗೋವಾದಲ್ಲಿಂದು ನಡೆದ ವಾಕಿಂಗ್, ಸ್ವಿಮ್ಮಿಂಗ್ ಹಾಗೂ ಸೈಕಲ್ ಮೂರು ರೀತಿಯ ಸ್ಪರ್ಧೆಯಲ್ಲಿ ಭಾಗವಹಿಸಿದ ಸಂಸದ ತೇಜಸ್ವಿ ಸೂರ್ಯ (Tejasvi Surya) ಅವರು 1,900 ಮೀ ಈಜು, 90 ಕಿಮೀ ಸೈಕ್ಲಿಂಗ್ ಮತ್ತು 21.1 ಕಿಮೀ ಓಟ ಮೂರು ವಿಭಾಗಗಳಲ್ಲಿ ಭಾಗಿಯಾಗಿ 8 ಗಂಟೆ, 27 ನಿಮಿಷ ಮತ್ತು 32 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿದರು. ಈ‌ ಮೂಲಕ ಐರನ್ ಮ್ಯಾನ್ 70.3 ರೇಸ್‌ನಲ್ಲಿ (Ironman Race) ವಿಜೇತರಾದ ಪ್ರಥಮ ಜನಪ್ರತಿನಿಧಿ ಎಂಬ ಹೆಗ್ಗಳಿಕೆಗೆ ಸಂಸದ ತೇಜಸ್ವಿ ಸೂರ್ಯ ಭಾಜನರಾದ್ರು.

    ಈ ಸಂಸತವನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡ ಸಂಸದರು, ಗೋವಾ (Goa) ಐರನ್‌ಮ್ಯಾನ್ ಸ್ಪರ್ಧೆ ಕ್ರೀಡೆಗೆ ಹೆಸರುವಾಸಿಯಾಗಿದ್ದು, 50ಕ್ಕೂ ಹೆಚ್ಚು ದೇಶಗಳ ಕ್ರೀಡಾಪಟುಗಳು ಈ ರೇಸ್‌ನಲ್ಲಿ ಪಾಲ್ಗೊಂಡಿರುವುದು ವಿಶೇಷ ಎಂದರು. ಇದನ್ನೂ ಓದಿ: ಯೂಟ್ಯೂಬ್‌ನಲ್ಲಿ ಸಕ್ರಿಯವಾಗಿದ್ದ ಕೇರಳ ದಂಪತಿ ಮನೆಯಲ್ಲಿ ಶವವಾಗಿ ಪತ್ತೆ; ಕಾರಣ ನಿಗೂಢ

    ಈ ಸ್ಪರ್ಧೆಯಲ್ಲಿ ಭಾಗವಹಿಸುವುದು ಕಠಿಣ ಸವಾಲಾಗಿದ್ದು, ಕಳೆದ 4 ತಿಂಗಳಿಂದ ಫಿಟ್‌ನೆಸ್ ಅನ್ನು ಸುಧಾರಿಸಲು ಕಠಿಣವಾಗಿ ತರಬೇತಿ ಪಡೆದಿದ್ದು, ಪ್ರಸ್ತುತ ಈ ಸವಾಲನ್ನು ಪೂರ್ಣಗೊಳಿಸಿದ್ದಕ್ಕಾಗಿ ನನಗೆ ಅತ್ಯಂತ ಸಂತೋಷವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಫಿಟ್ ಇಂಡಿಯಾ ಉಪಕ್ರಮವು ಇಂತಹ ಸವಾಲನ್ನು ತೆಗೆದುಕೊಳ್ಳಲು ಪ್ರೇರಕವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಆರಂಭಿಸಿದ ʻಫಿಟ್‌ ಇಂಡಿಯಾ‌ʼ ಅಭಿಯಾನ ನನ್ನ ಇಂದಿನ ಅಭಿಯಾನಕ್ಕೆ ಸ್ಫೂರ್ತಿಯಾಗಿದೆ ಎಂದು ಶ್ಲಾಘಿಸಿದ್ರು. ಇದನ್ನೂ ಓದಿ:  ವಕ್ಫ್‌ ಆಸ್ತಿ ವಿವಾದ | 1964-1974ರ ದಾಖಲೆ ಪರಿಶೀಲಿಸಿ ಕ್ರಮವಹಿಸಲು ಟಾಸ್ಕ್ ಫೋರ್ಸ್ ರಚನೆ

    ಇದೇ ಸಂದರ್ಭದಲ್ಲಿ, ನನ್ನ ದೈಹಿಕ ಸಾಮರ್ಥ್ಯವು ದೇಶದ ಅಭ್ಯುದಯಕ್ಕೆ ಸಹಕಾರಿಯಾಗಲಿದೆ ಎಂಬ ವಿಶ್ವಾಸ ಮೂಡಿದೆ. ದೊಡ್ಡ ಮಹತ್ವಾಕಾಂಕ್ಷೆಗಳನ್ನು ಬೆನ್ನಟ್ಟುತ್ತಿರುವ ಭಾರತವು ಯುವ ರಾಷ್ಟ್ರವಾಗಿ ರೂಪುಗೊಳಿಸುವಲ್ಲಿ ನಮ್ಮ ದೈಹಿಕ ಸಾಮರ್ಥ್ಯ ಪೋಷಿಸುವಲ್ಲಿ ಹೆಚ್ಚಿನ ಉತ್ತೇಜನ ದೊರಕಿದ್ದು, ಭಾರತವನ್ನು ಆರೋಗ್ಯಕರ ರಾಷ್ಟ್ರವಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಈ ಮೂಲಕ ನಮ್ಮ ದೈಹಿಕ ಸಾಮರ್ಥ್ಯವನ್ನು ಸ್ಥಿರವಾಗಿಸಿಕೊಳ್ಳುವ ಮೂಲಕ ಯಾವುದೇ ಉದ್ಯಮದಲ್ಲಿ ಯಶಸ್ಸಿನ ಸಾಧ್ಯತೆಗಳನ್ನು ಸುಧಾರಿಸಬಹುದಾಗಿದೆ‌.‌ #FitIndia ಅಭಿಯಾನವು ಕ್ರೀಡಾ ಸ್ಫೂರ್ತಿ, ಜಾಗೃತಿಯನ್ನು ಹೆಚ್ಚಿಸುವಲ್ಲಿ ಮತ್ತು ಹೆಚ್ಚಿನ ಜನರನ್ನು ಫಿಟ್‌ನೆಸ್ ದಿನಚರಿಗೆ ತರುವಲ್ಲಿ ಸಹಕಾರಿಯಾಗಿದೆ. ಅದು ನಮ್ಮ ರಾಷ್ಟ್ರಕ್ಕೆ ಮೂಲಭೂತವಾಗಿ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

  • ಹೊನವಾಡದಲ್ಲಿ 11 ಎಕರೆ ಮಾತ್ರ ವಕ್ಫ್ ಜಾಗ, ಗೆಜೆಟ್ ನೋಟಿಫಿಕೇಷನ್‌ನಲ್ಲಿ ತಪ್ಪಾಗಿ ನಮೂದಾಗಿದೆ: ಎಂ.ಬಿ ಪಾಟೀಲ್‌

    ಹೊನವಾಡದಲ್ಲಿ 11 ಎಕರೆ ಮಾತ್ರ ವಕ್ಫ್ ಜಾಗ, ಗೆಜೆಟ್ ನೋಟಿಫಿಕೇಷನ್‌ನಲ್ಲಿ ತಪ್ಪಾಗಿ ನಮೂದಾಗಿದೆ: ಎಂ.ಬಿ ಪಾಟೀಲ್‌

    – ಇದ್ಯಾವುದು ವಕ್ಫ್‌ ಜಮೀನಲ್ಲ, ರೈತರ ಜಮೀನು ಎಂದ ಸಚಿವ

    ಬೆಂಗಳೂರು: ಗೆಜೆಟ್ ನೋಟಿಫಿಕೇಷನ್‌ನಲ್ಲಿ ತಪ್ಪಾಗಿ ನಮೂದು ಆಗಿದೆ. ಇದು ಯಾವುದು ವಕ್ಫ್ ಜಮೀನಲ್ಲ. ರೈತರ ಜಮೀನು ಎಂದು ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ.

    ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಮಟ್ಟದಲ್ಲಿ, ರಾಜ್ಯ ಮಟ್ಟದಲ್ಲಿ ಬಹಳಷ್ಟು ಚರ್ಚೆ ಆಗುತ್ತಿದೆ. ವಕ್ಫ್ ಬೋರ್ಡ್ ನೋಟಿಸ್ ಕೊಟ್ಟಿದ್ದಾರೆ. ತಹಶೀಲ್ದಾರ್ ಜೊತೆ ರೈತರ ಜೊತೆಗೆ ಚರ್ಚೆ ಮಾಡಿ, ರೈತರ ಒಂದಿಂಚು ಜಮೀನು ತಪ್ಪಾಗಿ ವಕ್ಫ್‌ಗೆ ಹೋಗುವುದಿಲ್ಲ ಎಂದು ಟ್ವೀಟ್ ಮಾಡಿದ್ದೆ. ಇದಾದ ಮೇಲೆ ತೇಜಸ್ವಿ ಸೂರ್ಯ ಕೂಡ ಹೋಗಿದ್ದಾರೆ. ರಾಷ್ಟ್ರೀಯ ಮಟ್ಟದಲ್ಲಿ ಇದು ದೊಡ್ಡ ಸುದ್ದಿ ಆಗಿದೆ ಎಂದರು. ಇದನ್ನೂ ಓದಿ: ಆತುರದಲ್ಲಿ ಬಿಪಿಎಲ್ ಕಾರ್ಡ್‌ಗೆ ಆಹಾರ ಇಲಾಖೆ ಕೊಕ್ಕೆ- ತೆರಿಗೆ ಕಟ್ಟದಿದ್ದರೂ, ಆದಾಯ ಇಲ್ಲದಿದ್ದರೂ ರದ್ದು

    ವಕ್ಫ್ ಆಸ್ತಿಗಳು 1974, 1978 ಗೆಜೆಟ್ ನೋಟಿಫಿಕೇಷನ್ ಆಗಿದೆ. 2016ರಲ್ಲೂ ಗೆಜೆಟ್ ನೋಟಿಫಿಕೇಷನ್ ಆಗಿದೆ. ಇದು ಮೂರನೇ ಬಾರಿಗೆ ನೋಟಿಫಿಕೇಷನ್ ಆಗಿದೆ. ಗೆಜೆಟ್ ನೋಟಿಫಿಕೇಷನ್‌ನಲ್ಲಿ ತಪ್ಪಾಗಿ ನಮೂದು ಆಗಿದೆ. ಇದು ಯಾವುದು ವಕ್ಫ್ ಜಮೀನಲ್ಲ. ರೈತರ ಜಮೀನು ಎಂದು ಹೇಳಿದರು.

    ವಿಜಯಪುರದಲ್ಲಿ ಎಲ್ಲಾ ದಾಖಲಾತಿಗಳನ್ನು ಪರಿಶೀಲನೆ ಮಾಡಿ, ರೆವೆನ್ಯೂ ರೆಕಾರ್ಡ್ಸ್ ತೆಗೆದುಕೊಂಡು ನಾನೇ ಖುದ್ದಾಗಿ ಬಗೆಹರಿಸುತ್ತೇನೆ. ಮುಂದಿನ ದಿನಗಳಲ್ಲಿ ನಾನೇ ಸಭೆ ಮಾಡುತ್ತೇನೆ. ಹೊನ್ನಾವಡದಲ್ಲಿ 11 ಎಕರೆ ಮಾತ್ರ ವಕ್ಫ್ ಜಾಗ ಇದೆ. ಯಾವುದೇ ಕಾರಣಕ್ಕೂ ಒಂದೇ ಒಂದು ಇಂಚು ತಪ್ಪಾಗಿ ರೈತರ ಜಮೀನನ್ನು ನೀಡುವುದಿಲ್ಲ ಎಂದರು. ಇದನ್ನೂ ಓದಿ: ಸತೀಶ್ ಸೈಲ್‌ಗೆ 6 ಕೇಸ್‌ನಲ್ಲಿ 7 ವರ್ಷ ಜೈಲು – ಕೋರ್ಟ್ ಆದೇಶ ಕೇಳಿ ನನಗೆ ಶಾಕ್ ಆಗಿದೆ: ಡಿಕೆಶಿ

    ತೇಜಸ್ವಿ ಸೂರ್ಯ ಆಗಲಿ ಯಾರೇ ಆಗಲಿ ರಾಜಕೀಯ ಮಾಡಬೇಡಿ. ಯತ್ನಾಳ್ ಅವರಿಗೂ ರಾಜಕೀಯ ಮಾಡಬೇಡಿ ಎಂದು ಹೇಳುತ್ತೇನೆ. ಯತ್ನಾಳ್ ಅವರು ಶೋ ಮಾಡಿದ್ದಾರೆ. ಕೆಲವರು ವೈಭವಿಕರಿಸಿದ್ದಾರೆ, ಇದು ರಾಷ್ಟ್ರೀಯ ಮಾಧ್ಯಮಗಳಲ್ಲಿ ಬಂದಿದೆ. ವಕ್ಫ್ ಆಸ್ತಿ ಇದ್ರೆ ಜಮೀರ್ ಅಹಮದ್ ತೆಗೆದುಕೊಳ್ಳಲಿ ನಾನು ಡಾಕ್ಯೂಮೆಂಟ್ ಕೊಡುತ್ತೇನೆ. ಗೆಜೆಟ್ ನೋಟಿಫಿಕೇಷನ್‌ನಲ್ಲಿ ಆಗಿರೋ ಎಡವಟ್ಟಿಗೆ ಈ ರೀತಿ ಆಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಶಿಗ್ಗಾಂವಿಯಲ್ಲಿ ಅಜ್ಜಂಪೀರ್ ಖಾದ್ರಿ ಬಂಡಾಯ ಶಮನವಾಗಿದೆ- ಡಿಕೆಶಿ

    ಜಿಲ್ಲಾ ಉಸ್ತುವಾರಿ ಸಚಿವನಾಗಿ ನಾನು ಹೇಳುತ್ತೇನೆ ರೈತರದ್ದು ಆಗಲಿ ಅಥವಾ ಖಾಸಗಿ ಅವರದ್ದು ಆಗಲಿ, ಅದು ವಕ್ಫ್ ಬೋರ್ಡ್ದು ಆಗದೇ ಇದ್ದರೆ ಒಂದೇ ಒಂದು ಇಂಚು ಭೂಮಿ ಕೊಡುವುದಿಲ್ಲ. ಊರು ಅಂದ ಮೇಲೆ ಕಾಂಗ್ರೆಸ್ ಮತ್ತು ಬಿಜೆಪಿ ಎಂದು ಇದ್ದೇ ಇರುತ್ತೆ. ಏನು ಬೇಕಾದರೂ ಮಾಡಲಿ, ನಾನು ರೈತರ ಜೊತೆ ಮೀಟಿಂಗ್ ಮಾಡಿ ಮಾತಾಡಿದ್ದೇನೆ. 19 ನೇ ತಾರೀಕಿನಿಂದಲೇ ರೈತರ ಜೊತೆ ಸಭೆ ಮಾಡಿದ್ದೇನೆ. ಅಲ್ಲಿ ತಪ್ಪಾಗಿ ನಮೂದಾಗಿರೋದು ಗೊತ್ತಾಯಿತು. ಆಗ ತಹಶೀಲ್ದಾರ್‌ಗೆ ಪರಿಶೀಲನೆ ಮಾಡುವುದಕ್ಕೆ ಹೇಳಿದ್ದೇನೆ. ತೇಜಸ್ವಿ ಸೂರ್ಯ ಇವಾಗ ಬಂದಿದ್ದಾರೆ ಅಷ್ಟೇ ಎಂದು ಹರಿಯಾಯ್ದರು. ಇದನ್ನೂ ಓದಿ: ನ.15 ರೊಳಗೆ ರಾಜಕಾಲುವೆ ಒತ್ತುವರಿ ತೆರವುಗೊಳಿಸಿ: ಬಿಬಿಎಂಪಿ ಆಯುಕ್ತರ ಸೂಚನೆ

  • Nagamangala Violence | ಹಿಂದೂಗಳ ಮೇಲೆ ಹಾಕಿರೋ ಕೇಸ್ ವಾಪಸ್ ಪಡೆಯದೇ ಹೋದ್ರೆ ಹಳ್ಳಿ ಹಳ್ಳಿಗಳಲ್ಲಿ ಪ್ರತಿಭಟನೆ- ತೇಜಸ್ವಿಸೂರ್ಯ

    Nagamangala Violence | ಹಿಂದೂಗಳ ಮೇಲೆ ಹಾಕಿರೋ ಕೇಸ್ ವಾಪಸ್ ಪಡೆಯದೇ ಹೋದ್ರೆ ಹಳ್ಳಿ ಹಳ್ಳಿಗಳಲ್ಲಿ ಪ್ರತಿಭಟನೆ- ತೇಜಸ್ವಿಸೂರ್ಯ

    ಬೆಂಗಳೂರು : ನಾಗಮಂಗಲ ಗಲಭೆ ಕೇಸ್‌ನಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ದಾಖಲಾಗಿರೋ ಕೇಸ್ ಸರ್ಕಾರ ಕೈ ಬಿಡಬೇಕು. ಇಲ್ಲದೆ ಹೋದರೆ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಹಳ್ಳಿ ಹಳ್ಳಿಗಳಲ್ಲಿ ಬಿಜೆಪಿ ಯುವ ಮೋರ್ಚಾ ಹೋರಾಟ ಮಾಡುತ್ತದೆ ಎಂದು ಸಂಸದ, ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿಸೂರ್ಯ (Tejasvi Surya) ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

    ಬಿಜೆಪಿ (BJP) ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾಗಮಂಗಲದಲ್ಲಿ ನಿನ್ನೆ ಕೋಮುಗಲಭೆ ನಡೆದಿದೆ. ಕಾಂಗ್ರೆಸ್ (Congress) ಸರ್ಕಾರ ಬಂದಾಗ ರಾಜ್ಯದಲ್ಲಿ ಟಿಪ್ಪು, ಔರಂಗಜೇಬನ ಸಂತತಿ ಹುಟ್ಟುತ್ತೆ. ಎಲ್ಲಿಲ್ಲದವರು ಹೊರಗೆ ಬರ್ತಾರೆ. ನಿನ್ನೆ ಗೃಹ ಸಚಿವರು ಇದೊಂದು ಸಣ್ಣ ಘಟನೆ ಎಂದು ಹೇಳಿದ್ದಾರೆ. ಪರಮೇಶ್ವರ್ ಅವರಿಗೆ ಕೇಳುತ್ತೇನೆ ನಿಮ್ಮ ಮನೆ ರಸ್ತೆಯಲ್ಲಿ ಯಾರಾದರು ಗಣೇಶ ಕೂರಿಸಿ ಅಲ್ಲಿ ಕಲ್ಲು ಹೊಡೆದರೆ, ಬೆಂಕಿ ಹಚ್ಚಿದರೆ, ನಿಮ್ಮ ಮನೆಗೆ ಕಲ್ಲು ತೂರಾಟ ಮಾಡಿದರೆ. ಅದನ್ನ ಸಣ್ಣ ಘಟನೆ ಅಂತೀರಾ ಎಂದು ಪ್ರಶ್ನಿಸಿದರು. ನಿಮ್ಮ ಮನೆಗೆ ಬೆಂಕಿ ಬೀಳೋವರೆಗೂ ಘಟನೆ ಬಗ್ಗೆ ಗೊತ್ತಾಗಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಸಿಬಿಐ ಪಂಜರದ ಗಿಳಿಯಾಗಬಾರದು, ಜಾಮೀನು ಸಿಕ್ಕರೂ ಸಿಎಂ ಕಚೇರಿ ಪ್ರವೇಶಿಸುವಂತಿಲ್ಲ: ಸುಪ್ರೀಂ ಹೇಳಿದ್ದೇನು?

    ಸಂಪೂರ್ಣ ಘಟನೆಯಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ಕೇಸ್ ಹಾಕಿದ್ದಾರೆ. ಕರ್ನಾಟಕದಲ್ಲಿ ಸಂವಿಧಾನದ ಪ್ರಕಾರ ಕಾನೂನು ನಡೆಯುತ್ತಿದೆಯಾ? ಅಥವಾ ಷರಿಯಾ ಪ್ರಕಾರ ಕಾನೂನು ನಡೆಯುತ್ತಿಯಾ? ಗಣೇಶ ಕೂರಿಸೋಕು ಕರ್ನಾಟಕದಲ್ಲಿ ಸಾಧ್ಯವಿಲ್ಲವಾ? ಎಂದು ಸರ್ಕಾರದ ವಿರುದ್ಧ ಪ್ರಶ್ನೆ ಎತ್ತಿದ್ದಾರೆ.

    ಒಂದು ಸಮುದಾಯದ ಪರ ತುಷ್ಟೀಕರಣ ನೀತಿ ಮಾಡಿ ಗಣೇಶ ಕೂರಿಸಿದರೆ ನೀವು ಬೆಂಕಿ ಹಾಕಿಸಿ, ಕಲ್ಲು ಹೊಡೆಸುತ್ತಿದ್ದೀರಾ. ಇದು ಓಲೈಕೆ ರಾಜಕಾರಣ ಅಲ್ಲವಾ ಅಂತ ಪ್ರಶ್ನೆ ಮಾಡಿದರು. ಮೊನ್ನೆ ಉತ್ತಮ ಶಿಕ್ಷಕ ಪ್ರಶಸ್ತಿಯನ್ನ ಎಸ್‌ಡಿಪಿಐ ಅವರು ವಿರೋಧ ಮಾಡಿದ್ರು ಅಂತ ಉಡುಪಿಯಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿ ರದ್ದು ಮಾಡಿದೆ ಈ ಸರ್ಕಾರ.ಈ ಸರ್ಕಾರ ಎಸ್‌ಡಿಪಿಐ, ಪಿಎಫ್‌ಐ ಸಂಘಟನೆಗಳಿಗೆ ಶರಣಾಗಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: MUDA Scam |ಸಿಎಂ ಪತ್ನಿ ಕೇಳಿದ್ದು 13 ಸೈಟ್ – ಪ್ರಾಧಿಕಾರ ಕೊಟ್ಟಿದ್ದು 14 ಸೈಟ್!

    ರಾಜ್ಯದ ಜನತೆ ಧೈರ್ಯವಾಗಿ ಗಣೇಶ ಹಬ್ಬ ಹಿಂದೂ ಹಬ್ಬ ಮಾಡಿ. ಬಿಜೆಪಿ ನಿಮ್ಮ ಜೊತೆ ಇರುತ್ತದೆ ಎಂದು ಕರೆ ನೀಡಿದರು. ಪರಮೇಶ್ವರ್ (G Parameshwar) ಮತ್ತು ಸಿಎಂಗೆ ಮನವಿ ಮಾಡುತ್ತೇನೆ. ನಿನ್ನೆ ನಾಗಮಂಗಲದಲ್ಲಿ ಯಾರು ಟೆರೆರಿಸ್ಟ್ಗಳು ಬೆಂಕಿ ಹಾಕಿದ್ರೋ ಅವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಹಿಂದೂ ಯುವಕರ ಮೇಲೆ ಹಾಕಿರೋ ಕೇಸ್ ವಾಪಸ್ ಪಡೆಯಬೇಕು. ಪಿಎಫ್‌ಐ ಕೈ ಬಿಡಬೇಕು. ಇದೇ ರೀತಿ ಅಮಾಯಕರ ಮೇಲೆ ಕ್ರಮಕ್ಕೆ ಮುಂದಾದ್ರೆ ನಾವು ಹಳ್ಳಿ ಹಳ್ಳಿಯಲ್ಲಿ ಹೋರಾಟ ಮಾಡುತ್ತೇವೆ. ಕೂಡಲೇ ಹಿಂದೂಗಳ ಮೇಲೆ ಹಾಕಿರೋ ಕೇಸ್ ವಾಪಸ್ ಪಡೆಯುವಂತೆ ಸರ್ಕಾರವನ್ನು ಆಗ್ರಹಿಸಿದರು. ಇದನ್ನೂ ಓದಿ: ಜಾಮೀನು ಅರ್ಜಿಯನ್ನು ಹಿಂದಕ್ಕೆ ಪಡೆದ ಪವಿತ್ರಾ ಗೌಡ

  • ಹಿಂದೂಗಳ ಮೇಲೆ ಕೇಸ್ | ಕರ್ನಾಟಕ, ಬಾಂಗ್ಲಾ ಸರ್ಕಾರಕ್ಕೂ ವ್ಯತ್ಯಾಸ ಏನು?: ತೇಜಸ್ವಿ ಸೂರ್ಯ ಕಿಡಿ

    ಹಿಂದೂಗಳ ಮೇಲೆ ಕೇಸ್ | ಕರ್ನಾಟಕ, ಬಾಂಗ್ಲಾ ಸರ್ಕಾರಕ್ಕೂ ವ್ಯತ್ಯಾಸ ಏನು?: ತೇಜಸ್ವಿ ಸೂರ್ಯ ಕಿಡಿ

    – ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಟಿಪ್ಪು, ಔರಂಗಜೇಬನ ಸಂತತಿ ಜನನ
    – ಈ ಸರ್ಕಾರ ಎಸ್‍ಡಿಪಿಐ, ಪಿಎಫ್‍ಐಗೆ ಶರಣಾಗಿದೆ

    ಬೆಂಗಳೂರು: ಕಾಂಗ್ರೆಸ್ ಸರ್ಕಾರ ಬಂದಾಗ ಟಿಪ್ಪು, ಔರಂಗಜೇಬನ ಸಂತತಿ ಹುಟ್ಟುತ್ತದೆ ಎಂದು ಸಂಸದ ತೇಜಸ್ವಿ ಸೂರ್ಯ (Tejasvi Surya) ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

    ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾಗಮಂಗಲ ಗಲಭೆಯನ್ನು (Nagamangala Riot) ಗೃಹ ಸಚಿವ ಪರಮೇಶ್ವರ್ ಸಣ್ಣ ಘಟನೆ ಎಂದು ಹೇಳುತ್ತಾರೆ. ನಿಮ್ಮ ಮನೆ ರೋಡ್‍ನಲ್ಲಿ ಯಾರಾದ್ರೂ ಗಣೇಶ ಕೂರಿಸಿದಾಗ ಅಲ್ಲಿ ಯಾರಾದ್ರೂ ಕಲ್ಲು ಹೊಡೆದ್ರೆ, ಬೆಂಕಿ ಹಾಕಿದ್ರೆ ಸಣ್ಣ ಘಟನೆ ಎಂದು ಹೇಳುತ್ತೀರಾ? ನಿಮ್ಮ ಮನೆಗೆ ಬೆಂಕಿ ಬೀಳುವವರೆಗೂ ನಿಮಗೆ ಘಟನೆ ಬಗ್ಗೆ ಗೊತ್ತಾಗೊದಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

    ಹಿಂದೂ ಕಾರ್ಯಕರ್ತರ ಮೇಲೆ ಕೇಸ್ ಹಾಕಿದ್ದಾರೆ. ಕರ್ನಾಟಕದಲ್ಲಿ ಸಂವಿಧಾನದ ಪ್ರಕಾರ ಕಾನೂನು ನಡೆಯುತ್ತಿದೆಯಾ? ಷರಿಯಾ ಪ್ರಕಾರ ಕಾನೂನು ನಡೆಯುತ್ತಿದೆಯಾ? ಗಣೇಶ ಕೂರಿಸೋಕು ಕರ್ನಾಟಕದಲ್ಲಿ ಸಾಧ್ಯವಿಲ್ಲವಾ? ಬಾಂಗ್ಲಾ ಸರ್ಕಾರ, ಕರ್ನಾಟಕ ಸರ್ಕಾರಕ್ಕೆ ಇರೋ ವ್ಯತ್ಯಾಸ ಏನು? ನೀವು ತುಷ್ಟೀಕರಣ ನೀತಿ ಮಾಡಿ, ಗಣೇಶ ಕೂರಿಸಿದರೆ ನೀವು ಬೆಂಕಿ ಹಾಕಿಸಿ ಕಲ್ಲು ಹೊಡೆಸುತ್ತಿದ್ದೀರಿ ಎಂದು ಕಟುವಾಗಿ ಟೀಕಿಸಿದ್ದಾರೆ. ಇದನ್ನೂ ಓದಿ: ನಾಗಮಂಗಲದ ಕೃತ್ಯದ ಹಿಂದೆ ಕಾಂಗ್ರೆಸ್, ಪೊಲೀಸರ ಲೋಪ ಮುಚ್ಚಿ ಹಾಕಲು ಸಿಕ್ಕ ಸಿಕ್ಕವರು ಅರೆಸ್ಟ್: ಹೆಚ್‌ಡಿಕೆ

    ಬೆಂಕಿ ಹಾಕಿದ ಟೆರರಿಸ್ಟ್ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಹಿಂದೂ ಯುವಕರ ಮೇಲೆ ಹಾಕಿರುವ ಕೇಸ್ ವಾಪಸ್ ಪಡೆಯಬೇಕು. ಇದೇ ರೀತಿ ಅಮಾಯಕರ ಮೇಲೆ ಕ್ರಮಕ್ಕೆ ಮುಂದಾದ್ರೆ ಬಿಜೆಪಿ ಹಳ್ಳಿ ಹಳ್ಳಿಯಲ್ಲಿ ಹೋರಾಟ ಮಾಡಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

    ಹಿಜಾಬ್ ವಿವಾದ ಸೃಷ್ಟಿಸಿದ್ದ ಕಾಲೇಜಿನ ವಿದ್ಯಾರ್ಥಿಗಳ ನಡೆ ಖಂಡಿಸಿದ್ದ ಶಿಕ್ಷಕರಿಗೆ ಘೋಷಿಸಿದ್ದ ಪ್ರಶಸ್ತಿಯನ್ನು ಎಸ್‍ಡಿಪಿಐ ವಿರೋಧ ಮಾಡಿದ್ದಕ್ಕೆ ಪ್ರಶಸ್ತಿಯನ್ನು ರದ್ದು ಮಾಡಿದ್ದಾರೆ. ಈ ಸರ್ಕಾರ ಎಸ್‍ಡಿಪಿಐ, ಪಿಎಫ್‍ಐ ಸಂಘಟನೆಗಳಿಗೆ ಶರಣಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ನಾಗಮಂಗಲ ಗಲಭೆ | ಎಲ್ಲರನ್ನೂ A1 ಮಾಡಲು ಅಗುತ್ತಾ?: ಬಿಜೆಪಿ ನಾಯಕರಿಗೆ ಚಲುವರಾಯಸ್ವಾಮಿ ತಿರುಗೇಟು

  • ದಕ್ಷಿಣದಲ್ಲಿ ಸೂರ್ಯ ಶೈನ್- ಸೌಮ್ಯಾಗೆ ಸೋಲು

    ದಕ್ಷಿಣದಲ್ಲಿ ಸೂರ್ಯ ಶೈನ್- ಸೌಮ್ಯಾಗೆ ಸೋಲು

    ಬೆಂಗಳೂರು: ಲೋಕಸಭಾ ಚುನಾವಣೆಯ ಬೆಂಗಳೂರು ದಕ್ಷಿಣ (Bengaluru South) ಕ್ಷೇತ್ರದ ಫಲಿತಾಂಶ ಹೊರಬಿದ್ದಿದ್ದು, ಹಾಲಿ ಸಂಸದರಾಗಿರುವ ತೇಜಸ್ವಿ ಸೂರ್ಯ ಅವರು ಮತ್ತೊಮ್ಮೆ ಗೆದ್ದು ಬೀಗಿದ್ದಾರೆ.

    ತೇಜಸ್ವಿ ಸೂರ್ಯ ಅವರು ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ (Sowmya Reddy) ವಿರುದ್ಧ 2,77,083 ಮತಗಳ ಅಂತರದಿಂದ ಅಭೂತಪೂರ್ವ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಸೂರ್ಯ ಅವರು ಎರಡನೇ ಬಾರಿಗೆ ಸಂಸತ್ ಪ್ರವೇಶ ಮಾಡಲಿದ್ದಾರೆ.

    ಈ ಬಾರಿಯ ಚುನಾವಣೆಯಲ್ಲಿ ತೇಜಸ್ವಿ ಸೂರ್ಯ (Tejasvi Surya) ಅವರಿಗೆ 7,50,830 ಮತಗಳು ಬಿದ್ದಿದೆ. ವಿಧಾನಸಭೆ ಸೋಲಿನ ಬಳಿಕ ಲೋಕಸಭೆಯಲ್ಲಿ ಗೆಲುವಿನ ನಿರೀಕ್ಷೆಯಲಿದ್ದ ಸೌಮ್ಯಾ ರೆಡ್ಡಿಯವರು 4,73,747 ಮತಗಳನ್ನು ಪಡೆಯುವ ಮೂಲಕ ಮತ್ತೊಮ್ಮೆ ಸೋಲಿನ ರುಚಿ ಕಂಡಿದ್ದಾರೆ. ಇನ್ನು 7830 ಮತಗಳು ನೋಟಾ ಚಲಾವಣೆಯಾಗಿದೆ.

    ಕಳೆದ ಮೂರು ದಶಕಗಳಿಂದ ಈ ಕ್ಷೇತ್ರ ಬಿಜೆಪಿಯ ಭದ್ರಕೋಟೆಯಾಗಿ ಉಳಿದಿದೆ. ಮುಖ್ಯವಾಗಿ ಇದು ದಿ. ಅನಂತ್ ಕುಮಾರ್ ಅವರ ಭದ್ರಕೋಟೆಯಾಗಿತ್ತು. 2019ರ ಚುನಾವಣೆಯಲ್ಲಿ ತೇಜಸ್ವಿ ಸೂರ್ಯ ಅವರಿಗೆ 7,39,229 ಮತಗಳು ಬಿದ್ದಿದ್ದರೆ, ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಬಿ.ಕೆ ಹರಿಪ್ರಸಾದ್ ಅವರು 4,08,037 ಮತಗಳನ್ನು ಪಡೆದು 3 ಲಕ್ಷಕ್ಕೂ ಅಧಿಕ ಮತಗಳ ಅಂತರದ ಸೋಲು ಅನುಭವಿಸಿದ್ದರು.

  • ಕಾಂಗ್ರೆಸ್‌ಗೆ ವಿರುದ್ಧವಾದ ಆದೇಶ ಬಂದ್ರೆ ಎಕ್ಸಿಟ್ ಪೋಲ್, ಇವಿಎಂ ಮೇಲೆ ನಂಬಿಕೆ ಇರಲ್ಲ: ತೇಜಸ್ವಿ ಸೂರ್ಯ

    ಕಾಂಗ್ರೆಸ್‌ಗೆ ವಿರುದ್ಧವಾದ ಆದೇಶ ಬಂದ್ರೆ ಎಕ್ಸಿಟ್ ಪೋಲ್, ಇವಿಎಂ ಮೇಲೆ ನಂಬಿಕೆ ಇರಲ್ಲ: ತೇಜಸ್ವಿ ಸೂರ್ಯ

    – ಮೋದಿ 3ನೇ ಬಾರಿ ಪ್ರಧಾನಿ ಆಗ್ತಾರೆ ಎಂದ ಸಂಸದ

    ರಾಮನಗರ: ಕಾಂಗ್ರೆಸ್‌ಗೆ ವಿರುದ್ಧವಾದ ಜನಾದೇಶ ಬಂದ್ರೆ ಅವರಿಗೆ ಎಕ್ಸಿಟ್ ಪೋಲ್ ಅಥವಾ ಇವಿಎಂ (Exit Poll And EVM) ಮೇಲೆ ನಂಬಿಕೆ ಇರಲ್ಲ. ಅವರ ಹೇಳಿಕೆಗಳಿಗೆ ನಾವೇನು ತಲೆ ಕೆಡಿಸಿಕೊಳ್ಳಲ್ಲ ಎಂದು ಸಂಸದ ತೇಜಸ್ವಿ ಸೂರ್ಯ (Tejasvi Surya) ತಿರುಗೇಟು ನೀಡಿದ್ದಾರೆ.

    ಲೋಕಸಭಾ ಚುನಾವಣೆಯ (Lok Sabha Elections) ಎಕ್ಸಿಟ್ ಪೋಲ್ ಸಮೀಕ್ಷೆಗಳ ಕುರಿತು `ಪಬ್ಲಿಕ್ ಟಿವಿ’ ಜೊತೆಗೆ ರಾಮನಗರದಲ್ಲಿ ಮಾತನಾಡಿದ ಅವರು, ಪ್ರಾರಂಭದಲ್ಲೇ ನರೇಂದ್ರ ಮೋದಿ `ಅಪ್ ಕಿ ಬಾರ್ ಚಾರ್ ಸೌ ಪಾರ್’ ಅಂತ ಹೇಳಿದ್ದರು. ಚುನಾವಣೋತ್ತರ ಸಮೀಕ್ಷೆಗಳನ್ನ ನೋಡಿದ್ರೆ ಆ ಘೋಷಣೆಗೆ ಜನ ಸ್ಪಂದಿಸಿದ್ದಾರೆ ಅನ್ನಿಸುತ್ತಿದೆ. ಕಳೆದ 10 ವರ್ಷಗಳಲ್ಲಿ ದೇಶ ಸಾಕಷ್ಟು ಪ್ರಗತಿ ಕಂಡಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ದೇಶದಲ್ಲಿ ಟೆರರಿಸಂ, ನಕ್ಸಲಿಸಂ ಬಂದ್ ಆಗಿದೆ, ಆರ್ಥಿಕತೆ ಗಟ್ಟಿಯಾಗಿದೆ. ಅಭಿವೃದ್ಧಿ ಕೆಲಸಗಳು ಜನರ ಅನುಭವಕ್ಕೆ ಬಂದಿವೆ. ಹಾಗಾಗಿ ಜನ ನರೇಂದ್ರ ಮೋದಿಗೆ ಕಮಿಟ್ ಆಗಿ ವೋಟ್ ಮಾಡಿದ್ದಾರೆ. 2014ರಲ್ಲಿ ಎನ್‌ಡಿಎ ಪರವಾಗಿ ಎಷ್ಟು ಎಕ್ಸಿಟ್ ಪೋಲ್ ಕೊಟ್ಟಿದ್ದ ವರದಿಗಿಂತ ಹೆಚ್ಚು ಸ್ಥಾನ ಬಂದಿತ್ತು. ಈಗಲೂ ಎಕ್ಸಿಟ್ ಪೋಲ್ ಕೊಟ್ಟಿರೋ ಸಂಖ್ಯೆಗಿಂತ ಬಿಜೆಪಿ 30 ಸ್ಥಾನಗಳು ಹೆಚ್ಚು ಬರಲಿದೆ. 3ನೇ ಬಾರಿಗೆ ನರೇಂದ್ರ ಮೋದಿ ದೇಶದ ಪ್ರಧಾನಿ ಆಗ್ರಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮೋದಿ ಮತ್ತೊಮ್ಮೆ ಪ್ರಧಾನಿಯಾಗ್ತಾರೆ- ಭವಿಷ್ಯ ನುಡಿದ ಕಾಲ ಭೈರವೇಶ್ವರನ ಶ್ವಾನ

    ಎಕ್ಸಿಟ್ ಪೋಲ್ ಬಗ್ಗೆ ನಂಬಿಕೆ ಇಲ್ಲ ಎಂಬ ಕಾಂಗ್ರೆಸ್ ನಾಯಕರ (Congress Leader) ಹೇಳಿಕೆಗೆ ಪ್ರತಿಕ್ರಿಯಿಸಿ, ಕಾಂಗ್ರೆಸ್ಸಿಗರು ಹಿಂದೆ ವಿಧಾನಸಭಾ ಚುನಾವಣೆಯಲ್ಲಿ ಎಕ್ಸಿಟ್ ಪೋಲ್ ನಂಬಿದ್ದರು. ಈಗ ಎಕ್ಸಿಟ್ ಪೋಲ್ ನಂಬಲ್ಲ ಅಂತಾರೆ. ಅವರ ವಿರುದ್ಧವಾದ ಆದೇಶ ಬಂದ್ರೆ ಅವರಿಗೆ ಎಕ್ಸಿಟ್ ಪೋಲ್ ಮೇಲೆ, ಇವಿಎಂ ಮೇಲೆ ನಂಬಿಕೆ ಬರಲ್ಲ. ಹಾಗಾಗಿ ಅವರ ಹೇಳಿಕೆಗೆ ತಲೆಕೆಡಿಸಿಕೊಳ್ಳಲ್ಲ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ವೈದ್ಯಕೀಯ, ಎಂಜಿನಿಯರಿಂಗ್ – ಒಟ್ಟಿಗೇ ಕೌನ್ಸೆಲಿಂಗ್; ನೀಟ್ ಫಲಿತಾಂಶದ ನಂತರ ದಿನಾಂಕ ನಿಗದಿ – ಕೆಇಎ

    ರಾಜ್ಯದಲ್ಲಿ ಮೈತ್ರಿ ಸಕ್ಸಸ್ ಆಗಿದೆ, ಹಾಗಾಗಿ ಹೆಚ್ಚು ಸ್ಥಾನ ನಮಗೆ ಸಿಗಲಿದೆ. ಗ್ಯಾರಂಟಿ ಯೋಜನೆಗಳಿಂದ ಆಗ್ತಿರೋ ಆರ್ಥಿಕ ಸಂಕಷ್ಟವನ್ನ ಜನ ನೋಡಿದ್ದಾರೆ. ಅಲ್ಲದೇ ಕಾಂಗ್ರೆಸ್ ನಾಯಕರ ದೇಶ ವಿಭಜನೆ ಹೇಳಿಕೆಗಳನ್ನು ಗಮನಿಸಿದ್ದಾರೆ. ಈ ಎಲ್ಲ ಬೆಳವಣಿಗೆಗಳಿಂದ ರಾಜ್ಯದಲ್ಲೂ ಜನ ಕಾಂಗ್ರೆಸ್ ತಿರಸ್ಕರಿಸಿ ಮೋದಿಗೆ ಬೆಂಬಲ ನೀಡಿದ್ದಾರೆ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.

  • ಕಾಂಗ್ರೆಸ್‌ನವ್ರಿಗೆ ಚೊಂಬು ಈಗಲೇ ಫಲಿತಾಂಶದ ರೂಪದಲ್ಲಿ ಕಾಣ್ತಿದೆ: ಅಮಿತ್ ಶಾ ತಿರುಗೇಟು

    ಕಾಂಗ್ರೆಸ್‌ನವ್ರಿಗೆ ಚೊಂಬು ಈಗಲೇ ಫಲಿತಾಂಶದ ರೂಪದಲ್ಲಿ ಕಾಣ್ತಿದೆ: ಅಮಿತ್ ಶಾ ತಿರುಗೇಟು

    – ಬೆಂಗಳೂರು ದಕ್ಷಿಣದಲ್ಲಿ ತೇಜಸ್ವಿ ಸೂರ್ಯ ಪರ ಅಮಿತ್ ಶಾ ಅಬ್ಬರದ ಪ್ರಚಾರ

    ಬೆಂಗಳೂರು: ದಕ್ಷಿಣ ಲೋಕಸಭೆ ಕ್ಷೇತ್ರದಲ್ಲಿ ಮಂಗಳವಾರ ಬಿಜೆಪಿಯ ಚಾಣಕ್ಯ, ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಭರ್ಜರಿ ರೋಡ್ ಶೋ ನಡೆಸಿದರು. ರಾತ್ರಿ 9 ಗಂಟೆಗೆ ಬೊಮ್ಮನಹಳ್ಳಿ ವೃತ್ತದಲ್ಲಿರುವ ಸ್ವಾಮಿ ವಿವೇಕಾನಂದರ ಪ್ರತಿಮೆಗೆ ಕೈಮುಗಿದ ಅಮಿತ್ ಶಾ ಪ್ರಚಾರ ವಾಹನ ಹತ್ತಿ ರೋಡ್ ಶೋ ನಡೆಸಿದರು.

    ಬೊಮ್ಮನಹಳ್ಳಿ ಸರ್ಕಲ್‌ನಿಂದ ಸೈಂಟ್ ಫ್ರ‍್ಯಾನ್ಸಿಸ್ ಶಾಲೆವರೆಗೆ ಎರಡುಕಾಲು ಕಿ.ಮೀವರೆಗೆ ರ‍್ಯಾಲಿ ಸಾಗಿತು. ರಸ್ತೆಯ ಇಕ್ಕೆಲಗಳಲ್ಲಿ ಜನ, ಕಾರ್ಯಕರ್ತರು ನೆರೆದಿದ್ದರು. ರೋಡ್ ಶೋ ವೇಳೆ ಅಮಿತ್ ಶಾ ವಾಹನದತ್ತ ಹೂಮಳೆಯನ್ನೇ ಕಾರ್ಯಕರ್ತರು ಸುರಿಸಿದರು. ಅಮಿತ್ ಶಾರನ್ನು ಲೇಸರ್ ಲೈಟ್ ಬರಹದ ಮೂಲಕ ಸ್ವಾಗತ ಕೋರಿದ್ದು, ಸಾಂಸ್ಕೃತಿಕ ಕಲಾತಂಡಗಳ ನೃತ್ಯ ಗಮನ ಸೆಳೆಯಿತು.

    ಈ ವೇಳೆ ‘ಪಬ್ಲಿಕ್ ಟಿವಿ’ ಜೊತೆ ಅಮಿತ್ ಶಾ ಮಾತನಾಡಿ, ಈ ಸಲ ಬಿಜೆಪಿ ಜೆಡಿಎಸ್ ಎಲ್ಲ ಕ್ಷೇತ್ರ ಗೆಲ್ತೇವೆ ಎಂದರು. ಕಾಂಗ್ರೆಸ್‌ನಿಂದ ಗೋಬ್ಯಾಕ್ ಅಮಿತ್ ಶಾ, ಇಂದಿನ ಪ್ರತಿಭಟನೆ ವಿಚಾರವಾಗಿ ಪ್ರತಿಕ್ರಿಯಿಸಿ, ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಮಾತಾಡುವ ಅವಕಾಶ ಇದೆ. ಅವರೂ ಮಾತಾಡ್ತಿದ್ದಾರೆ, ಮಾತಾಡಲಿ ಎಂದು ಹೇಳಿದರು.

    ಚೊಂಬು ವಾರ್ ಕುರಿತು ಮಾತನಾಡಿ, ಆ ಚೊಂಬು ಅವರಿಗೆ ಈಗಲೇ ಫಲಿತಾಂಶದ ರೂಪದಲ್ಲಿ ಕಾಣ್ತಿದೆ. ಅವರಿಗೆ ಒಂದೂ ಸ್ಥಾನ ಗೆಲ್ಲುವ ವಿಶ್ವಾಸ ಇಲ್ಲ. ಅವರು ತೋರಿಸ್ತಿರುವ ಖಾಲಿ ಚೊಂಬು ಫಲಿತಾಂಶ ದಿನ ಅವರ ಪರಿಸ್ಥಿತಿ ಏನಿರುತ್ತೆ ಅಂತ ಈಗಲೇ ತೋರಿಸ್ತಿದೆ ಎಂದು ಕಾಂಗ್ರೆಸ್‌ಗೆ ತಿರುಗೇಟು ನೀಡಿದರು.

    ನೇಹಾ ಹಿರೇಮಠ್ ಪ್ರಕರಣದಲ್ಲಿ ಬಿಜೆಪಿ ಲಾಭ ಮಾಡ್ಕೊಳ್ಳಲು ಹವಣಿಸ್ತಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ಗರಂ ಆದ ಅಮಿತ್ ಶಾ, ನೋಡಿ.. ಘಟನೆ ಆಗಿದೆ ತಾನೇ? ಕೊಲೆ ಆಗಿದೆ ತಾನೇ? ಇದರ ವಿರುದ್ಧ ದನಿ ಎತ್ತೋದು ಪ್ರತಿಪಕ್ಷವಾದ ನಮ್ಮ ಕೆಲಸ ಅಲ್ವಾ? ಇದನ್ನು ನಾವು ಖಂಡಿಸಬಾರದಾ? ಏನ್ ಮಾತಾಡ್ತಿದ್ದಾರೆ ಅವರು ಎಂದು ಕಿಡಿಕಾರಿದರು.

    ರೋಡ್ ಶೋನಲ್ಲಿ ಅಮಿತ್ ಶಾ ಅವರಿಗೆ ಅಭ್ಯರ್ಥಿ ತೇಜಸ್ವಿ ಸೂರ್ಯ, ಮಾಜಿ ಸಿಎಂ ಯಡಿಯೂರಪ್ಪ, ಪ್ರತಿಪಕ್ಷ ನಾಯಕ ಆರ್ ಅಶೋಕ್, ಶಾಸಕರಾದ ಸತೀಶ್ ರೆಡ್ಡಿ, ರವಿಸುಬ್ರಹ್ಮಣ್ಯ, ಸಿ ಕೆ ರಾಮಮೂರ್ತಿ ಸಾಥ್ ನೀಡಿದರು.

  • ರಾಜ್ಯದ ಜನಕ್ಕೆ ಚೊಂಬು ಕೊಟ್ಟಿದ್ದು ಕಾಂಗ್ರೆಸ್: ಅಣ್ಣಾಮಲೈ

    ರಾಜ್ಯದ ಜನಕ್ಕೆ ಚೊಂಬು ಕೊಟ್ಟಿದ್ದು ಕಾಂಗ್ರೆಸ್: ಅಣ್ಣಾಮಲೈ

    – ಯುಪಿಎ ಇದ್ದಾಗ 8%, ಮೋದಿ ಬಂದ ಮೇಲೆ 38% ಅನುದಾನ ಹೆಚ್ಚಳ
    – ಕಾವೇರಿ ವಿವಾದದ ರಾಜಕೀಯ ಮಾಡುತ್ತಿರುವುದು ಕಾಂಗ್ರೆಸ್

    ಬೆಂಗಳೂರು: ರಾಜ್ಯದ ಜನಕ್ಕೆ ಕಾಂಗ್ರೆಸ್ ಚೊಂಬು ಕೊಟ್ಟಿದ್ದು, ಅದಕ್ಕೇ ಈ ರೀತಿ ಸುಳ್ಳು ಜಾಹೀರಾತು ಕೊಡುತ್ತಿದೆ ಎಂದು ತಮಿಳುನಾಡಿನ ಬಿಜೆಪಿ (BJP) ರಾಜ್ಯಾಧ್ಯಕ್ಷ ಅಣ್ಣಾಮಲೈ (K. Annamalai) ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ನಗರದಲ್ಲಿ `ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ಯುಪಿಎ ಸರ್ಕಾರ ಇದ್ದಾಗ 19,500 ಕೋಟಿ ರೂ. ಬರ ನಷ್ಟಕ್ಕೆ, 1500 ಸಾವಿರ ಕೋಟಿ ರೂ. ಅಷ್ಟೇ ಪರಿಹಾರ ಬಂದಿತ್ತು. ಅದು ಕೇವಲ 8% ಮಾತ್ರ ಅನುದಾನ, ಆದರೆ ಎನ್‍ಡಿಎ ಸರ್ಕಾರ ಬಂದ ನಂತರ 7000 ಕೋಟಿ ರೂ. ಪ್ರಕೃತಿ ವಿಕೋಪ ಪರಿಹಾರ ಬಂದಿದೆ, ಇದು 38% ಅನುದಾನ ಸಿಕ್ಕಿದೆ ಎಂದು ಅವರು ತಿಳಿಸಿದ್ದಾರೆ.

    2023-24ರಲ್ಲಿ ಕರ್ನಾಟಕ ಸರ್ಕಾರ 18 ಸಾವಿರ ಕೋಟಿ ಬರ ಪರಿಹಾರ ಕೇಳಿದೆ, ಇದು ಸರಿನಾ? ತಮಿಳುನಾಡು ಸರ್ಕಾರ ಬಾಯಿಗೆ ಬಂದಷ್ಟು ಬರ ಪರಿಹಾರ ಕೇಳ್ತಿದೆ. ತಮಿಳುನಾಡು 37 ಸಾವಿರ ಕೋಟಿ ರೂ. ಬರ ಪರಿಹಾರ ಕೇಳ್ತಿದೆ ಇದು ಸರಿನಾ? ಅನುದಾನದಲ್ಲಿ ಕೇಂದ್ರ ತಾರತಮ್ಯ ಮಾಡಿಲ್ಲ. ಕರ್ನಾಟಕದ ಜನಕ್ಕೆ ಚೊಂಬು ಕೊಟ್ಟಿದ್ದು ಕಾಂಗ್ರೆಸ್ ಸರ್ಕಾರ ಎಂದು ಕಿಡಿಕಾರಿದ್ದಾರೆ.

    ಕಾಂಗ್ರೆಸ್ (Congress) ಯಾವಾಗಲೂ ಕಾವೇರಿ ನದಿ ನೀರಿನ ವಿಚಾರದಲ್ಲಿ ರಾಜಕೀಯ ಮಾಡುತ್ತಾ ಬರುತ್ತಿದೆ. ಬಿಜೆಪಿ ಅವಧಿಯಲ್ಲಿ ಕಾವೇರಿ ರಾಜಕಾರಣ ಇರಲಿಲ್ಲ. ಎರಡೂ ರಾಜ್ಯಗಳ ಜನ ಅಣ್ಣತಮ್ಮಂದಿರ ಹಾಗೆ ಇದ್ದೆವು. ಕಾಂಗ್ರೆಸ್ ಅಧಿಕಾರಕ್ಕೆ ಬಂದಮೇಲೆ ಕಾವೇರಿ ಸಮಸ್ಯೆ ಶುರು ಮಾಡಿದರು ಎಂದು ಆರೋಪಿಸಿದ್ದಾರೆ.

    ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ತೇಜಸ್ವಿ ಸೂರ್ಯ (Tejasvi Surya) ಪರ ಜಯನಗರ ವಿಧಾನಸಭಾ ಕ್ಷೇತ್ರ, ಬೈರಸಂದ್ರ, ಸಿದ್ದಾಪುರ, ಲಾಲ್ ಬಾಗ್ ಸುತ್ತಮುತ್ತ ರೋಡ್ ಶೋ ಮೂಲಕ ಪ್ರಚಾರ ನಡೆಸಿದರು. ತಮಿಳು ಮತದಾರರು ಬಿಜೆಪಿಗೆ ಮತ ನೀಡುವಂತೆ ತಮಿಳಿನಲ್ಲಿ ಭಾಷಣ ಮಾಡಿ ಮತ ಯಾಚಿಸಿದರು.

    ಈ ವೇಳೆ, ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ ಜನ ಯಾವಾಗಲೂ ಮೋದಿ ಪರ ಇರ್ತಾರೆ. ಕಳೆದ ಎರಡು ಬಾರಿ ಬಿಜೆಪಿಗೆ ದೊಡ್ಡ ಬೆಂಬಲ ಸಿಕ್ಕಿದೆ. ಈ ಬಾರಿ 28 ಲೋಕಸಭಾ ಕ್ಷೇತ್ರಗಳಲ್ಲಿಯೂ ಗೆಲ್ಲಲಿದ್ದೇವೆ. ಅಲ್ಲದೇ ತಮಿಳುನಾಡಿನಲ್ಲಿ ಕಳೆದ ಸಲಕ್ಕಿಂತ 8% ರಷ್ಟು ಹೆಚ್ಚುವರಿ ಮತಗಳು ನಮಗೆ ಸಿಗಲಿದೆ ಎಂದು ಅವರು ಹೇಳಿದ್ದಾರೆ.

  • Bengaluru South Lok Sabha 2024: ಪ್ರತಿಷ್ಠೆಯ ಕಣವನ್ನು ಮತ್ತೆ ಗೆಲ್ಲುತ್ತಾ ಬಿಜೆಪಿ?- ‘ಕೈ’ ವಶಕ್ಕೆ ತಂತ್ರವೇನು?

    Bengaluru South Lok Sabha 2024: ಪ್ರತಿಷ್ಠೆಯ ಕಣವನ್ನು ಮತ್ತೆ ಗೆಲ್ಲುತ್ತಾ ಬಿಜೆಪಿ?- ‘ಕೈ’ ವಶಕ್ಕೆ ತಂತ್ರವೇನು?

    – ತೇಜಸ್ವಿ ಸೂರ್ಯ V/S ಸೌಮ್ಯಾ ರೆಡ್ಡಿ
    – ಬಿಜೆಪಿ ಭದ್ರಕೋಟೆಯಲ್ಲಿ ಜಯದ ಪತಾಕೆ ಹಾರಿಸೋದ್ಯಾರು?

    ಬೆಂಗಳೂರು ದಕ್ಷಿಣ (Bengaluru South) ಕ್ಷೇತ್ರವೆಂದರೆ ಅದು ಬಿಜೆಪಿ ಭದ್ರಕೋಟೆ. 1991 ರಿಂದ ಸತತವಾಗಿ ಬಿಜೆಪಿ ಗೆದ್ದು ಅಧಿಪತ್ಯ ಸ್ಥಾಪಿಸಿದೆ. 2024 ರ ಲೋಕಸಭಾ ಚುನಾವಣೆಗೆ ಕ್ಷೇತ್ರವನ್ನು ಬಿಜೆಪಿ ಪ್ರತಿಷ್ಠೆಯಾಗಿ ಪರಿಗಣಿಸಿದೆ. ಹೇಗಾದರು ಮಾಡಿ ಕ್ಷೇತ್ರವನ್ನು ವಶಕ್ಕೆ ಪಡೆಯಬೇಕು ಎಂದು ಆಡಳಿತಾರೂಢ ಕಾಂಗ್ರೆಸ್ ತಂತ್ರ ರೂಪಿಸುತ್ತಿದೆ.

    ಕಾಂಗ್ರೆಸ್‌ಗೆ (Congress) ಈ ಕ್ಷೇತ್ರದಲ್ಲಿ ಅಸ್ತಿತ್ವ ಇಲ್ಲ. ಚುನಾವಣಾ ಇತಿಹಾಸ ಗಮನಿಸಿದರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದಿರುವುದು ಎರಡೇ ಬಾರಿ. ಆದರೆ ಬಿಜೆಪಿ (BJP) ಭದ್ರ ಬುನಾದಿ ಹಾಕಿಕೊಂಡಿದೆ. ಸತತ ಆರು ಬಾರಿ ಅನಂತ್ ಕುಮಾರ್ ಅವರು ಈ ಕ್ಷೇತ್ರದಲ್ಲಿ ಜಯ ಸಾಧಿಸಿದ್ದಾರೆ. ಇನ್ನು ಕಳೆದ ಚುನಾವಣೆಯಲ್ಲಿ ತೇಜಸ್ವಿ ಸೂರ್ಯ (Tejasvi Surya) ತಮ್ಮ ರಾಜಕೀಯ ಜೀವನದ ಚೊಚ್ಚಲ ಗೆಲುವಿನೊಂದಿಗೆ ಪಾರ್ಲಿಮೆಂಟ್ ಮೆಟ್ಟಿಲೇರಿದ್ದಾರೆ. ಇದನ್ನೂ ಓದಿ: Bengaluru North Lok Sabha 2024: ಬಿಜೆಪಿ ಗೆಲುವಿನ ಓಟಕ್ಕೆ ಬ್ರೇಕ್‌ ಹಾಕುತ್ತಾ ಕಾಂಗ್ರೆಸ್‌?

    ಕ್ಷೇತ್ರ ಪರಿಚಯ
    ಒಕ್ಕಲಿಗರ ಪ್ರಾಬಲ್ಯವಿರುವ ಬೆಂಗಳೂರು ದಕ್ಷಿಣ ಕ್ಷೇತ್ರವು ಸ್ವಾತಂತ್ರ್ಯ ನಂತರ ಮೈಸೂರು ರಾಜ್ಯಕ್ಕೆ ಸೇರಿತ್ತು. ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಟಿ.ಮಾದಯ್ಯಗೌಡ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಕ್ಷೇತ್ರದಿಂದ ಮೊದಲ ಲೋಕಸಭಾ ಚುನಾವಣೆಯಲ್ಲಿ (Lok Sabha Election) ಗೆದ್ದರು. ಅದಾದ ಬಳಿಕ ಬೆಂಗಳೂರು ಉತ್ತರ ಮತ್ತು ದಕ್ಷಿಣ ಕ್ಷೇತ್ರವನ್ನು ಕ್ಷೇತ್ರವಾಗಿ ಮಾಡಲು ವಿಲೀನಗೊಳಿಸಲಾಯಿತು. ಹೆಚ್.ಸಿ.ದಾಸಪ್ಪ 1957 ರಿಂದ 1962 ರ ವರೆಗೆ ಈ ಕ್ಷೇತ್ರದಿಂದ ಚುನಾಯಿತರಾದರು. ನೆಹರೂ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿಯೂ ಸೇವೆ ಸಲ್ಲಿಸಿದರು. ನಂತರ ಮಾಜಿ ಸಿಎಂ ಕೆಂಗಲ್ ಹನುಮಂತಯ್ಯ ಈ ಕ್ಷೇತ್ರದಲ್ಲಿ ಸತತ ಮೂರು ಬಾರಿ ಗೆದ್ದಿದ್ದರು.

    ತುರ್ತು ಪರಿಸ್ಥಿತಿ ಮತ್ತು ದೇಶಾದ್ಯಂತ ಕ್ಷೇತ್ರಗಳ ಮರುವಿಂಗಡಣೆಯ ನಂತರ, ಈ ಲೋಕಸಭಾ ಸ್ಥಾನವು 1977 ರಲ್ಲಿ ಬೆಂಗಳೂರು ದಕ್ಷಿಣವಾಗಿ ಅಸ್ತಿತ್ವಕ್ಕೆ ಬಂದಿತು. ಅಂದಿನಿಂದ ಈ ಕ್ಷೇತ್ರದಲ್ಲಿ 12 ಚುನಾವಣೆಗಳು ನಡೆದಿವೆ. ಬಿಜೆಪಿ 8 ಬಾರಿ, ಜನತಾ ಪಕ್ಷ 3 ಬಾರಿ ಮತ್ತು ಕಾಂಗ್ರೆಸ್ ಕೇವಲ ಒಂದು ಬಾರಿ ಗೆದ್ದಿದೆ. ಬಿಜೆಪಿ ನಾಯಕ ಅನಂತ್ ಕುಮಾರ್ ಈ ಕ್ಷೇತ್ರದಿಂದ ಸತತ 6 ಬಾರಿ ಗೆದ್ದಿದ್ದಾರೆ. ಇದನ್ನೂ ಓದಿ: Bagalkot Lok Sabha 2024: ಚಾಲುಕ್ಯರ ನಾಡಲ್ಲಿ ಬಾವುಟ ಹಾರಿಸೋದ್ಯಾರು?

    ವಿಧಾನಸಭಾ ಕ್ಷೇತ್ರಗಳೆಷ್ಟು?
    ಈ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳು ಒಳಪಡುತ್ತವೆ. ಗೋವಿಂದರಾಜನಗರ, ವಿಜಯನಗರ, ಚಿಕ್ಕಪೇಟೆ, ಬಸವನಗುಡಿ, ಪದ್ಮನಾಭನಗರ, ಬಿಟಿಎಂ ಲೇಔಟ್, ಜಯನಗರ, ಬೊಮ್ಮನಹಳ್ಳಿ. ಒಟ್ಟು ಕ್ಷೇತ್ರಗಳ ಪೈಕಿ ಮೂರರಲ್ಲಿ ಮಾತ್ರ ಕಾಂಗ್ರೆಸ್ ಶಾಸಕರಿದ್ದಾರೆ. ಇನ್ನುಳಿದ ಐದು ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರು ಗೆದ್ದಿದ್ದಾರೆ.

    ಮತದಾರರ ಸಂಖ್ಯೆ ಎಷ್ಟು?
    ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಒಟ್ಟು 23,17,472 ಮತದಾರರು ಇದ್ದಾರೆ. ಅವರ ಪೈಕಿ ಪುರುಷರು 11,95,285 ಹಾಗೂ ಮಹಿಳಾ ಮತದಾರರು 11,21,788 ಇದ್ದಾರೆ. ತೃತೀಯಲಿಂಗಿ ಮತದಾರರು 399 ಇದ್ದಾರೆ. ಇದನ್ನೂ ಓದಿ: Dakshina Kannada Lok Sabha 2024: ಬಿಜೆಪಿ ಭದ್ರಕೋಟೆ ಭೇದಿಸುತ್ತಾ ಕಾಂಗ್ರೆಸ್?‌

    ಕಳೆದ ಚುನಾವಣೆಯಲ್ಲಿ ಏನಾಗಿತ್ತು?
    2019 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ತೇಜಸ್ವಿ ಸೂರ್ಯ ಗೆಲುವು ಸಾಧಿಸಿದರು. ಇವರ ವಿರುದ್ಧ ಸ್ಪರ್ಧಿಸಿದ್ದ ಕಾಂಗ್ರೆಸ್‌ನ ಬಿ.ಕೆ.ಹರಿಪ್ರಸಾದ್ ಸೋಲನುಭವಿಸಿದರು. 3,31,192 ಮತಗಳ ಅಂತರದಿಂದ ಬಿಜೆಪಿ ಗೆದ್ದಿತ್ತು.

    ತೇಜಸ್ವಿ ಸೂರ್ಯಗೆ ಮತ್ತೆ ಟಿಕೆಟ್
    ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಸತತ ಗೆಲುವಿನ ಓಟ ಮುಂದುವರಿಸಲು ಬಿಜೆಪಿ ಶತಪ್ರಯತ್ನ ಮಾಡುತ್ತಿದೆ. ಹೀಗಾಗಿ ಎರಡನೇ ಬಾರಿಗೆ ತೇಜಸ್ವಿ ಸೂರ್ಯಗೆ ಟಿಕೆಟ್ ಕೊಟ್ಟಿದೆ. 2019 ರಲ್ಲಿ ಗೆದ್ದು ಮೊದಲ ಬಾರಿಗೆ ಸಂಸದರಾಗಿದ್ದ ಸೂರ್ಯಗೆ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ಜವಾಬ್ದಾರಿಯನ್ನು ವಹಿಸಲಾಗಿತ್ತು. ಯುವ ಸಮುದಾಯವನ್ನು ಮುಖ್ಯವಾಹಿನಿಗೆ ತಂದು ಬೆಳೆಸುವ ನಿಟ್ಟಿನಲ್ಲಿ ಬಿಜೆಪಿ ನಾನಾ ತಂತ್ರಗಳನ್ನು ರೂಪಿಸುತ್ತಿದೆ. ಕಳೆದ 32 ವರ್ಷಗಳಿಂದ ಕ್ಷೇತ್ರದಲ್ಲಿ ವಿಜಯ ಸಾಧಿಸಿರುವ ಬಿಜೆಪಿ ಮತ್ತೊಮ್ಮೆ ಗೆಲ್ಲುವ ನಿರೀಕ್ಷೆಯಲ್ಲಿದೆ. ಇದನ್ನೂ ಓದಿ: Chamarajanagara Lok Sabha 2024: ಕಾಂಗ್ರೆಸ್ ಕೋಟೆಗೆ ಎಂಟ್ರಿ ಕೊಟ್ಟಿರೋ ಬಿಜೆಪಿ ಮತ್ತೆ ಸಿಂಹಾಸನ ಏರುತ್ತಾ?

    ಕಾಂಗ್ರೆಸ್‌ನಿಂದ ಸೌಮ್ಯಾ ರೆಡ್ಡಿಗೆ ಮಣೆ
    ಬೆಂಗಳೂರು ವ್ಯಾಪ್ತಿಯಲ್ಲಿ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಅವರು ತಮ್ಮದೇ ಆದ ಹಿಡಿತವನ್ನ ಹೊಂದಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡ ಪುತ್ರಿಯನ್ನು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಸುವ ನಿಟ್ಟಿನಲ್ಲಿ ತಯಾರಿ ನಡೆಸಿದ್ದರು. ಈ ಸಂಬಂಧ ಹೈಕಮಾಂಡ್ ನಾಯಕರ ಜೊತೆಯೂ ಚರ್ಚೆ ನಡೆಸಿದ್ದರು. ಅದಕ್ಕೆ ಈಗ ಫಲ ಸಿಕ್ಕಿದೆ. ನಿರೀಕ್ಷೆಯಂತೆ ಸೌಮ್ಯಾ ರೆಡ್ಡಿಗೆ (Sowmya Reddy) ಕಾಂಗ್ರೆಸ್ ಟಿಕೆಟ್ ನೀಡಿದೆ. ಪ್ರತಿಷ್ಠಿತ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ-ಕಾಂಗ್ರೆಸ್ ಪಕ್ಷಗಳ ಮಧ್ಯೆ ನೇರ ಹಣಾಹಣೆ ಏರ್ಪಡಲಿದೆ.

    ಜಾತಿವಾರು ಲೆಕ್ಕಾಚಾರ
    ಒಕ್ಕಲಿಗ- 3,21,000
    ಲಿಂಗಾಯತ- 34,000
    ಬ್ರಾಹ್ಮಣ- 1,81,000
    ಮುಸ್ಲಿಂ- 1,58,000