Tag: Tejasvi Surya

  • ಕಾರಿಲ್ಲ ಅಂದ್ರೆ ಹೆಣ್ಣು ಕೊಡಲ್ಲ ಅಂತ ಟನಲ್ ರಸ್ತೆ ಮಾಡೋಕೆ ಡಿಕೆಶಿ ಹೊರಟಿದ್ದಾರೆ: ತೇಜಸ್ವಿ ಸೂರ್ಯ ವಾಗ್ದಾಳಿ

    ಕಾರಿಲ್ಲ ಅಂದ್ರೆ ಹೆಣ್ಣು ಕೊಡಲ್ಲ ಅಂತ ಟನಲ್ ರಸ್ತೆ ಮಾಡೋಕೆ ಡಿಕೆಶಿ ಹೊರಟಿದ್ದಾರೆ: ತೇಜಸ್ವಿ ಸೂರ್ಯ ವಾಗ್ದಾಳಿ

    ಬೆಂಗಳೂರು: ಕಾರಿಲ್ಲ ಅಂದ್ರೆ ಹೆಣ್ಣು ಕೊಡಲ್ಲ ಅಂತ ಟನಲ್ ರಸ್ತೆ ಮಾಡುವುದಕ್ಕೆ ಡಿ.ಕೆ.ಶಿವಕುಮಾರ್ ಅವರು ಹೊರಟಿದ್ದಾರೆ ಎಂದು ಸಂಸದ ತೇಜಸ್ವಿ ಸೂರ್ಯ ಟಾಂಗ್ ಕೊಟ್ಟರು.

    ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ ಟನಲ್ ಯೋಜನೆ ಮಾಡ್ತಿಲ್ಲ. ಕಾರು ಇಲ್ಲ ಎಂದರೆ ಹೆಣ್ಣು ಕೊಡಲ್ಲ ಅಂತ ಡಿಕೆಶಿ ಹೇಳಿದ್ದಾರೆ. ಎಲ್ಲಾರೂ ಕಾರು ಬಳಸುತ್ತಾರೆ, ಕಾರ್ ಇಲ್ಲ ಅಂದರೆ ಹೆಣ್ಣು ಕೊಡಲ್ಲ ಎಂದಿದ್ದಾರೆ. ಈಗ ಅರ್ಥ ಆಯ್ತು, ಟನಲ್ ಮಾಡ್ತಾ ಇರೋದು ಟ್ರಾಫಿಕ್ ಕಡಿಮೆ ಮಾಡೋಕೆ ಅಲ್ಲ. ಬದಲಾಗಿ ಸಾಮಾಜಿಕ ಪಿಡುಗು ದೂರ ಮಾಡೋಕೆ. ಹೆಣ್ಣು ಕೊಡದೇ ಇರೋದನ್ನ ತಪ್ಪಿಸೋಕೆ ಈ ಯೋಜನೆ ತರ್ತಿದ್ದಾರಾ ಎಂದು ಪ್ರಶ್ನಿಸಿದ್ದಾರೆ.

    ಟನಲ್ ರಸ್ತೆಯಲ್ಲಿ 4 ಲೇನ್ ರಸ್ತೆ ಇರುತ್ತೆ. ಎಕ್ಸಿಟ್ ಜಾಗದಲ್ಲಿ 4 ಲೇನ್‌ನ ಟ್ರಾಫಿಕ್ ಬಂದು ಸೇರೋದು 2 ಲೇನ್ ರಸ್ತೆಗೆ. ಆಗ ಎಕ್ಸಿಟ್ ಜಾಗದಲ್ಲಿ ಅಲ್ಲೊಂದು ಹೊಸ ಟ್ರಾಫಿಕ್ ಜಾಮ್ ಆಗುತ್ತೆ. ಈ ಥರ 22 ಕಡೆ ಎಕ್ಸಿಟ್‌ಗಳು ಟನಲ್ ರೋಡ್‌ಗಿದೆ. ಯೋಜನೆಗೆ ಪರಿಸರದ ಅಧ್ಯಯನ ಮಾಡಿಲ್ಲ. ಲಾಲ್‌ಬಾಗ್‌ನ ಹಳೇ ಶಿಲೆಗೆ ಈ ಯೋಜನೆ ಮಾರಕ. ಟನಲ್ ರಸ್ತೆಗೆ ಪರ್ಯಾಯ ಪರಿಹಾರ ಕೊಡಲಿಲ್ಲ ಅಂತ ಡಿಕೆಶಿ ಹೇಳಿದ್ದಾರೆ. ಅದು ಸುಳ್ಳು, ನಾವು ಐದು ಪರ್ಯಾಯ ಪರಿಹಾರ ಕೊಟ್ಟಿದ್ದೀವಿ. ಅರ್ಧ ಮುಗಿದ ಕಾಮಗಾರಿಗಳನ್ನು ಮುಗಿಸಿ ಅಂದಿದ್ದೇವೆ. ಸಾರ್ವಜನಿಕ ಸಂಚಾರ ವ್ಯವಸ್ಥೆಗೆ ಆದ್ಯೆತೆಗೆ ಕೊಡಿ ಅಂದಿದ್ದೇವೆ. ಹೆಚ್ಚು ಕಾರುಗಳನ್ನು ಸಾಗಿಸುವ ಯೋಜನೆಗಿಂತ ಹೆಚ್ಚು ಜನರನ್ನು ಸಾಗಿಸುವ ಯೋಜನೆ ಮಾಡಿ ಅಂದಿದ್ದೇವೆ. ರೈಲು ಆಧಾರಿತ ಸಂಚಾರ ವ್ಯವಸ್ಥೆ ಮಾಡಿ ಅಂದಿದ್ದೇವೆ, ಸಬರ್ಬನ್, ಮೆಟ್ರೋ, ಟ್ರಾಂಗಳು ನಗರಕ್ಕೆ ಬೇಕಿವೆ ಎಂದು ಒತ್ತಾಯಿಸಿದರು.

    ಬೆಂಗಳೂರಿನಲ್ಲಿ 300 ಕಿಮೀವರೆಗೆ ಮೆಟ್ರೋ ಜಾಲ ಅಭಿವೃದ್ಧಿ ಪಡಿಸಲಿ. ಆಗ ಸಂಚಾರ ಸಮಸ್ಯೆ ಕಡಿಮೆ ಆಗಲಿದೆ. ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಟಿಕೆಟ್ ದರ ಗಗನ ಮುಟ್ಟಿದೆ. ಮೆಟ್ರೋ ಟಿಕೆಟ್ ದರ ಇಳಿಸಲು ಆಗ್ರಹಿಸಿದ್ದೇವೆ. ಮೆಟ್ರೋದಲ್ಲಿ ಹೋಗೋಕ್ಕಿಂತ ಬೈಕ್, ಕಾರುಗಳಲ್ಲಿ ಕರ್ಚು ಕಮ್ಮಿ ಆಗುತ್ತೆ. ಮೆಟ್ರೋ ಟಿಕೆಟ್ ದರ ಜನ ಕಾರು ಬಿಟ್ಟು ಮೆಟ್ರೋ ಹತ್ತುವ ಹಾಗಿರಬೇಕು ಎಂದು ತಿಳಿಸಿದರು.

    ಉಗ್ರರ ದಾಳಿಗಿಂತ ಹೆಚ್ಚು ಬೆಂಗಳೂರಿನಲ್ಲಿ ನಿತ್ಯ ರಸ್ತೆ ಅವಘಡಗಳಿಂದ ಜನರು ಸಾವನ್ನಪ್ಪುತ್ತಿದ್ದಾರೆ. ಬೆಂಗಳೂರಿನಲ್ಲಿ 317 ಕಿ.ಮೀ. ಮೆಟ್ರೋ ಸಂಚಾರ ಮಾಡಿ. ಮೂರು ನಿಮಿಷಗಳಿಗೊಮ್ಮೆ ಮೆಟ್ರೋ ಓಡಾಡುವ ರೀತಿಯಲ್ಲಿ ಮಾಡಿ. ಮೆಟ್ರೋ ದರವನ್ನು ಶೀಘ್ರದಲ್ಲೇ ಇಳಿಸಿ ಎಂದು ಕೇಳಿದ್ದೇನೆ. ದಿನಕ್ಕೆ ಹತ್ತು ಲಕ್ಷ ಜನರು ಮೆಟ್ರೋದಲ್ಲಿ ಓಡಾಡ್ತಿದ್ದಾರೆ. 45 ಲಕ್ಷ ಜನರು ಬಸ್ಸುಗಳಲ್ಲಿ ಓಡಾಡ್ತಿದ್ದಾರೆ. ಅದಕ್ಕಾಗಿ 55 ಲಕ್ಷ ಜನರು ಓಡಾಡಲು ಮೆಟ್ರೋ ವಿಸ್ತರಣೆ ಹಾಗೂ ದರ ಇಳಿಸಿ ಎಂದಿದ್ದೇವೆ. ಆದರೆ ಡಿಕೆ ಶಿವಕುಮಾರ್ ಮಾತ್ರ, ಕಾರಿಲ್ಲ ಅಂದರೆ ಹೆಣ್ಣು ಕೊಡಲ್ಲ ಅಂತ ಟನಲ್ ಮಾಡೋದಾಗಿ ಹೇಳಿದ್ದಾರೆ.

    ಬೆಂಗಳೂರು ಬಿಎಂಟಿಸಿ ಬಸ್‌ಗಳಲ್ಲಿ 45 ಲಕ್ಷ ಜನ ನಿತ್ಯ ಓಡಾಡ್ತಿದ್ದಾರೆ. 300 ಕಿಮೀ ಮೆಟ್ರೋ ಸಂಪರ್ಕ ಪೂರ್ಣವಾದರೆ ಹಾಗೂ ಸಬರ್ಬನ್ ಬಂದರೆ ನಿತ್ಯ 50 ಲಕ್ಷ ಜನ ಓಡಾಡ್ತಾರೆ. ಬಹುತೇಕ ಸಂಚಾರ ಸಮಸ್ಯೆ ಬಗೆಹರಿಯುತ್ತೆ ಇದರಿಂದ. ಟನಲ್ ಯೋಜನೆಗೆ ಕೇಂದ್ರದಿಂದ ಅನುದಾನ ತನ್ನಿ ಅಂತಾರೆ ನಮಗೆ. ನಾವು ಟನಲ್ ಯೋಜನೆಗೆ ಕೇಂದ್ರದಿಂದ ಅನುದಾನ ಕೇಳಲ್ಲ. ನಾವು ಅನುದಾನ ಕೇಳೋದು ಸಬರ್ಬನ್ ರೈಲು ಯೋಜನೆಗೆ ಅನುದಾನ ತರ್ತೇವೆ ಎಂದು ಡಿಕೆಶಿಗೆ ತೇಜಸ್ವಿ ಸೂರ್ಯ ಟಾಂಗ್ ಕೊಟ್ಟರು.

    ಗಾಜಾ ಸ್ಟ್ರಿಪ್‌ನಲ್ಲಿ ಬಾಂಬ್ ಹಾಕಿದಂತೆ ಆಗಿದೆ ನಮ್ಮ ಬೆಂಗಳೂರಿನ ಟ್ರಾಫಿಕ್. ಪ್ರಪಂಚದ ವಿವಿಧ ನಗರಗಳಲ್ಲಿ ಮಾಡಿದಂತೆ ಬೆಂಗಳೂರಲ್ಲಿ ಟ್ರಾಂ ಸಾರಿಗೆ ಮಾಡಿ. ಗುಂಡಿ ಮುಚ್ಚಲು ಕೇಂದ್ರದಿಂದ ಫಂಡಿಂಗ್ ಏನು ಬೇಕಿಲ್ಲ, ಇವರೇ ಮುಚ್ಚಬಹುದು. ಒಳ್ಳೆಯ ರಸ್ತೆ, ಒಳ್ಳೆಯ ಫುಟ್‌ಪಾತ್‌ಗಳನ್ನು ಮಾಡಿ. ದೇಶದ ಎಷ್ಟೋ ನಗರಗಳಲ್ಲಿ ಟನಲ್ ಮಾಡೋಕೆ ಹೋಗಿ ಕೈಬಿಟ್ಟಿದ್ದಾರೆ. ಹೆಬ್ಬಾಳ ಮೇಲ್ಸುತುವೆ ಉದ್ಘಾಟನೆ ಮಾಡಿದ್ರಲ್ಲ ಡಿಕೆಶಿ ಜಾವಾ ಬೈಕ್‌ನಲ್ಲಿ. ಅದರಿಂದ ಟ್ರಾಫಿಕ್ ಕಡಿಮೆ ಆಯ್ತಾ? ಹೆಬ್ಬಾಳದಿಂದ ಬ್ಯಾಪ್ಟಿಸ್ಟ್ ಆಸ್ಪತ್ರೆ ವರೆಗೆ ಬಂದು ಟ್ರಾಫಿಕ್ ನಿಂತುಕೊಳ್ತು ಎಂದರು.

    ಕಾರಿಲ್ಲ ಅಂದ್ರೆ ಹೆಣ್ಣು ಕೊಡ್ತಿಲ್ಲ ಅಂತ ಟನಲ್ ರಸ್ತೆ ಮಾಡಲು ಡಿಕೆಶಿ ಹೊರಟಿದ್ದಾರೆ. ಕಾರಿಲ್ಲದಿದ್ರೂ ಹೆಣ್ಣು ಕೊಡ್ತಾರೆ, ಕೊಟ್ಟಿದ್ದಾರೆ. ಬಸ್‌ನಲ್ಲಿ ಓಡಾಡೋರಿಗೂ, ಮೆಟ್ರೋದಲ್ಲಿ ಓಡಾಡೋರಿಗೂ ಹೆಣ್ಣು ಕೊಟ್ಟಿದ್ದಾರೆ. ಡಿಕೆಶಿ ಅವರು ಕಾರಿಲ್ಲದಿದ್ರೆ ಹೆಣ್ಣು ಕೊಡಲ್ಲ ಅನ್ನೋ ಭಾವನೆಯಿಂದ ಹೊರಗೆ ಬರಬೇಕು. ಕಾರುಗಳಿಗಾಗಿ ಟನಲ್ ಯೋಜನೆ ಮಾಡೋದು ಬೇಡ. ಇಷ್ಟು ಹೇಳಿದ ಮೇಲೂ ಟನಲ್ ಯೋಜನೆ ಮಾಡ್ತೀವಿ ಅಂತ ಹೋದರೆ ನಾವು ವಿರೋಧ ಮಾಡ್ತೀವಿ. ಕಾನೂನು ಹೋರಾಟ ಮಾಡ್ತೀವಿ, ಜನಾಂದೋಲನ ಮಾಡ್ತೀವಿ ಎಂದು ಎಚ್ಚರಿಸಿದರು.

    ಟನಲ್ ರಸ್ತೆ ಯೋಜನೆಗೆ ಸರ್ಕಾರ ಹಟ ಹಿಡಿದಿದೆ. ಸರ್ಕಾರದ ನಡೆ ಜನರಿಗೆ ಅನುಮಾನ ಮೂಡಿಸಿದೆ. ನಿನ್ನೆ ಡಿಸಿಎಂಗೆ ಒಂದೂಕಾಲು ಗಂಟೆ ಟನಲ್ ಯೋಜನೆ ಯಾಕೆ ಬೇಡ ಅಂತ ವಿವರಿಸಿದೆ. ಪರ್ಯಾಯ ಏನು ಅಂತ ಹೇಳಿದೆ. ಆದರೂ ಅವರು ನಾನೇನೂ ಪರ್ಯಾಯ ಪರಿಹಾರ ಹೇಳಲಿಲ್ಲ ಅಂದಿದ್ದಾರೆ. ನನಗೆ ಇನ್ನೇನು ಪರ್ಯಾಯ ಕೊಡಬೇಕೋ ಗೊತ್ತಾಗ್ತಿಲ್ಲ ಎಂದು ಬೇಸರಿಸಿದರು.

  • ಬೆಂಗಳೂರು ಟನಲ್ ರಸ್ತೆ ವಿವಾದ; ಡಿಕೆಶಿ ಭೇಟಿಯಾದ ತೇಜಸ್ವಿ ಸೂರ್ಯ

    ಬೆಂಗಳೂರು ಟನಲ್ ರಸ್ತೆ ವಿವಾದ; ಡಿಕೆಶಿ ಭೇಟಿಯಾದ ತೇಜಸ್ವಿ ಸೂರ್ಯ

    – ಡಿಸಿಎಂ ನಿವಾಸದಲ್ಲಿ 1 ಗಂಟೆಗೂ ಹೆಚ್ಚು ಸಮಯ ಚರ್ಚಿಸಿದ ಸಂಸದ

    ಬೆಂಗಳೂರು: ಬೆಂಗಳೂರು ಟನಲ್ ರಸ್ತೆ ವಿವಾದಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಿ.ಕೆ.ಶಿವಕುಮಾರ್ ಭೇಟಿಯಾಗಿ ಸಂಸದ ತೇಜಸ್ವಿ ಸೂರ್ಯ ಚರ್ಚೆ ನಡೆಸಿದ್ದಾರೆ.

    ಡಿಕೆಶಿ ಅವರ ಸದಾಶಿವನಗರ ನಿವಾಸಕ್ಕೆ ಇಂದು ಬೆಳಗ್ಗೆ ಭೇಟಿ ನೀಡಿದ ತೇಜಸ್ವಿ ಸೂರ್ಯ 1 ಗಂಟೆಗೂ ಹೆಚ್ಚು ಸಮಯ ಚರ್ಚೆ ಮಾಡಿದ್ದಾರೆ.

    ಬಳಿಕ ಸುದ್ದಿಗಾರರೊಂದಿಗೆ ಸಂಸದ ಮಾತನಾಡಿ, ಡಿಸಿಎಂ ಡಿಕೆಶಿ ಅವರ ಜೊತೆ 1 ಗಂಟೆಗೂ ಹೆಚ್ಚು ಕಾಲ ಚರ್ಚೆ ಆಯ್ತು. ಬೆಂಗಳೂರು ಟ್ರಾಫಿಕ್ ಸಮಸ್ಯೆ ಪರಿಹಾರದ ಬಗ್ಗೆ ಸುದೀರ್ಘ ಚರ್ಚೆ ಆಯ್ತು. ಬಹಳ ಶಾಂತವಾಗಿ ನಾನು ಕೊಟ್ಟ ಪ್ರೆಸೆಂಟೇಷನನ್ನ ಕೇಳಿದ್ರು. ಬೆಂಗಳೂರಿಗೆ ಮೆಟ್ರೋ ಬರೋದರಲ್ಲಿ ಅವರ ಪಾತ್ರ ಏನು ಎಂಬುದನ್ನ ಡಿ.ಕೆ.ಶಿವಕುಮಾರ್ ಅವರು ನನಗೆ ತಿಳಿಸಿದರು. ಎಸ್.ಎಂ.ಕೃಷ್ಣ ಅವಧಿಯಲ್ಲಿ ಅನಂತ್ ಕುಮಾರ್ ಅವರು ಬೇರೆ ದೇಶದ ವ್ಯವಸ್ಥೆ ಎಲ್ಲಾ ನೋಡಿ ಹೇಗೆ ವರದಿ ಕೊಟ್ರು ಅಂತ ಹೇಳಿದರು ಎಂದರು.

    ಟನಲ್ ರಸ್ತೆ ಕೇವಲ 30-35 ಕಿ.ಮೀ.ಗೆ 47 ಸಾವಿರ ಕೋಟಿ ಖರ್ಚು ಮಾಡುವ ಬದಲು ಬಸ್ಸು ಬೇರೆ ಬೇರೆ ಇನ್ಫಾಟ್ರಕ್ಚರ್ ಅಭಿವೃದ್ಧಿಗೆ ಬಳಸಬಹುದು. ಇವತ್ತು ಟನಲ್ ರೋಡ್‌ನ ಎಲ್ಲಾ ಸಮಸ್ಯೆ ಬಗ್ಗೆ ನಾನು ತಿಳಿಸಿದ್ದೇನೆ. ಎಲ್ಲವನ್ನೂ ಅವರು ಕೇಳಿದ್ದಾರೆ. ಅವರು ಏನೂ ತೀರ್ಮಾನ ಮಾಡ್ತಾರೆ ನೋಡಬೇಕು. ಚೀನಾ ಸೇರಿದಂತೆ ಬೇರೆ ಬೇರೆ ಕಡೆ ಫ್ಲೈಓವರ್ ಕೆಡವಿರುವ ಘಟನೆ ನಡೆದಿದೆ. ಟನಲ್ ಕೂಡ ಮಾಡದೆ ನಿಲ್ಲಿಸಿದ ಬೆಳವಣಿಗೆಯೂ ಆಗಿದೆ. ಟನಲ್ ರೋಡ್‌ನ ಕೈಬಿಡಿ, ಜಿದ್ದಿಗೆ ತಗೊಂಡು ಮಾಡೋದಲ್ಲ. ಸಬ್‌ಅರ್ಬನ್ ರೈಲು ಹಾಗೂ ಮೆಟ್ರೋ ರೈಲಿಗೆ ಹೆಚ್ಚಿನ ಆದ್ಯತೆ ಕೊಡಬೇಕು. ಟನಲ್‌ಗಿಂತ ಕಡಿಮೆ ವೆಚ್ಚದಲ್ಲಿ ಆಗುತ್ತದೆ ಎಂದು ಸಂಸದ ಸಲಹೆ ನೀಡಿದರು.

  • ಟನಲ್ ರೋಡ್ ಯೋಜನೆ ಬೇಡ: ತೇಜಸ್ವಿ ಸೂರ್ಯ

    ಟನಲ್ ರೋಡ್ ಯೋಜನೆ ಬೇಡ: ತೇಜಸ್ವಿ ಸೂರ್ಯ

    – ಅರ್ಧ ಗಂಟೆ ಸಮಯ ಕೊಟ್ಟರೆ ವಿವರಿಸುತ್ತೇನೆ ಎಂದ ಬಿಜೆಪಿ ಸಂಸದ

    ಬೆಂಗಳೂರು: ಟನಲ್ ರೋಡ್ ಯೋಜನೆಗೆ ಸಂಸದ ತೇಜಸ್ವಿ ಸೂರ್ಯ ವಿರೋಧ ವ್ಯಕ್ತಪಡಿಸಿದ್ದಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಸಿಎಂ ಸಿದ್ದರಾಮಯ್ಯ ಅವರು ಬಿಜೆಪಿ ಸಂಸದನನ್ನು ಖಾಲಿ ಡಬ್ಬ, ಅಮಾವಸ್ಯೆ ಎಂದು ಟೀಕಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸಂಸದ ತೇಜಸ್ವಿ ಸೂರ್ಯ, ಅವರು ಹಿರಿಯ ರಾಜಕಾರಣಿ. ಅನುಭವ ಇದ್ದವ್ರು. ವೈಯಕ್ತಿಕ ಟೀಕೆ ಮಾಡೋದಿಲ್ಲ ಎಂದರು.

    ಡಿಸಿಎಂ ಅವರನ್ನು ಭೇಟಿ ಮಾಡಲು ಅವರ ಕಚೇರಿಗೆ ಸಮಯ ಕೇಳಿದ್ದೇನೆ. ಅರ್ಧ ಗಂಟೆ ಸಮಯ ಕೊಟ್ಟರೆ ಟನಲ್ ಯೋಜನೆ ಯಾಕೆ ಬೇಡ? ಇದರಿಂದ ಏನು ಸಮಸ್ಯೆ ಆಗುತ್ತದೆ ಎನ್ನುವುದನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ವಿವರಿಸುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ಬೆಂಗಳೂರು ಟನಲ್ ವಿರುದ್ಧ ಹೈಕೋರ್ಟ್ ಮೊರೆ – ತೇಜಸ್ವಿ ಸೂರ್ಯ, ಪ್ರಕಾಶ್ ಬೆಳವಾಡಿ ಅರ್ಜಿ

    ಈ‌ ಯೋಜನೆಯ ಬಗ್ಗೆ ಡಿಸಿಎಂ ಅವರಿಗೆ ಅಧಿಕಾರಿಗಳು ಸರಿಯಾದ ಮಾಹಿತಿ ನೀಡಿಲ್ಲ ಅನಿಸುತ್ತೆ. ಈ ಯೋಜನೆಯಿಂದ ಸ್ಯಾಂಕಿ ಕೆರೆ, ಲಾಲ್ ಬಾಗ್ ಪ್ರದೇಶಕ್ಕೆ ಹಾನಿಯಾಗಲಿದೆ. ಮಾಡೇ ಮಾಡ್ತೀನಿ ಅಂತ ಜಿದ್ದಿಗೆ ಬೀಳೋದು ತಪ್ಪು. ಟನಲ್ ಯೋಜನೆ ಬೇಡ ಅಂತ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನ ಲೇಖಕ, ನಟ ಪ್ರಕಾಶ್ ಬೆಳವಾಡಿ ಸಲ್ಲಿಸಿದ್ದಾರೆ. ಇದರ ವಿಚಾರಣೆ ಮಂಗಳವಾರ ಬರಲಿದ್ದು, ನಾನೇ ವಾದ ಮಂಡಿಸಲಿದ್ದೇನೆ ಎಂದು ಹೇಳಿದರು.

  • ಬೆಂಗಳೂರು ಟನಲ್ ವಿರುದ್ಧ ಹೈಕೋರ್ಟ್ ಮೊರೆ – ತೇಜಸ್ವಿ ಸೂರ್ಯ, ಪ್ರಕಾಶ್ ಬೆಳವಾಡಿ ಅರ್ಜಿ

    ಬೆಂಗಳೂರು ಟನಲ್ ವಿರುದ್ಧ ಹೈಕೋರ್ಟ್ ಮೊರೆ – ತೇಜಸ್ವಿ ಸೂರ್ಯ, ಪ್ರಕಾಶ್ ಬೆಳವಾಡಿ ಅರ್ಜಿ

    – ಹೈಕೋರ್ಟ್‌ನಲ್ಲಿ ತೇಜಸ್ವಿ ಸೂರ್ಯ ವಾದ ಮಂಡನೆ

    ಬೆಂಗಳೂರು: ಸುರಂಗ ಮಾರ್ಗ (Bengaluru Tunnel Road) ವಿವಾದ ಈಗ ಹೈಕೋರ್ಟ್ ಅಂಗಳ ತಲುಪಿದೆ. ಟನಲ್ ರಸ್ತೆ ಯೋಜನೆ ವಿರೋಧಿಸಿ ಸಂಸದ ತೇಜಸ್ವಿ ಸೂರ್ಯ (Tejasvi Surya), ನಟ ಪ್ರಕಾಶ್ ಬೆಳವಾಡಿ ಅರ್ಜಿ ಸಲ್ಲಿಸಿದ್ದಾರೆ.

    ಯೋಜನೆಗೆ ಪರಿಸರ ಪರಿಣಾಮ ಮೌಲ್ಯಮಾಪನವನ್ನು ನಡೆಸದಿರುವುದು, ಬೆಂಗಳೂರು ಮಹಾನಗರ ಭೂ ಸಾರಿಗೆ ಪ್ರಾಧಿಕಾರದೊಂದಿಗೆ ಸಮಾಲೋಚಿಸದಿರುವುದು ಮತ್ತು ವಿವರವಾದ ಯೋಜನಾ ವರದಿ, ವಿಶೇಷವಾಗಿ ಐತಿಹಾಸಿಕ ಲಾಲ್‌ಬಾಗ್ ಬಂಡೆಯ ಕೆಳಗೆ ಹಾದುಹೋಗುವ ಸುರಂಗದ ಜೋಡಣೆಯ ಬಗ್ಗೆ ಇರುವ ಕಳವಳಗಳನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ. ಇದನ್ನೂ ಓದಿ: ಕನ್ನೇರಿ ಶ್ರೀಗಳು ಆಡಿರುವ ಶಬ್ದಗಳು ಖಂಡನೀಯ, ಕ್ಷಮೆ ಕೇಳಬೇಕು – ಎಂ.ಬಿ ಪಾಟೀಲ್ ಆಗ್ರಹ

    ಹೈಕೋರ್ಟ್‌ನಲ್ಲಿ ಖುದ್ದು ವಾದ ಮಂಡನೆ ಮಾಡಿದ ವಕೀಲರೂ ಆಗಿರುವ ತೇಜಸ್ವಿ ಸೂರ್ಯ, ಯೋಜನೆಯಿಂದ ಸುಮಾರು 6.5 ಎಕರೆ ಲಾಲ್‌ಬಾಗ್ ಭೂಮಿಗೆ ಪರಿಣಾಮ ಬೀರಬಹುದು. ರಾಷ್ಟ್ರೀಯ ಭೂವೈಜ್ಞಾನಿಕ ಸ್ಮಾರಕ ಎಂದು ಗುರುತಿಸಲ್ಪಟ್ಟಿರುವ 3,000 ಮಿಲಿಯನ್ ವರ್ಷಗಳಷ್ಟು ಹಳೆಯದಾದ ಲಾಲ್‌ಬಾಗ್ ಬಂಡೆಗೆ ಈ ಯೋಜನೆಯಿಂದ ಮಾರಕ ಆಗುತ್ತೆ. ತೋಡುವ ಸುರಂಗದಿಂದಾಗಿ ಈ ಬಂಡೆಯು ಗಂಭೀರ ಅಪಾಯವನ್ನು ಎದುರಿಸುತ್ತದೆ. ಹಲವು ಮರಗಳಿಗೂ ಕೊಡಲಿ ಬೀಳಲಿದೆ ಎಂದು ತಿಳಿಸಿದರು.

    ಯೋಜನೆಯೊಂದಿಗೆ ಸಂಬಂಧಿಸಿದ ಮರಗಳನ್ನು ಕಡಿಯುವ ಪ್ರಸ್ತಾವನೆಯ ಬಗ್ಗೆ ಮಾಹಿತಿ ನೀಡುವಂತೆ ರಾಜ್ಯ ಸರ್ಕಾರದ ಪರವಾಗಿ ಹಾಜರಾಗಿದ್ದ ಹೆಚ್ಚುವರಿ ಸರ್ಕಾರಿ ವಕೀಲರಿಗೆ ಕೋರ್ಟ್ ಸೂಚನೆ ನೀಡಿದೆ. ಪರಿಸರ ಪರಿಣಾಮ ಮೌಲ್ಯಮಾಪನದ ಕುರಿತು ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಇಲಾಖೆಯಿಂದಲೂ ಅಭಿಪ್ರಾಯ ಕೇಳಿದ ಕೋರ್ಟ್, ನಂತರ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 28ರಂದು ಮುಂದೂಡಿದೆ. ಇದನ್ನೂ ಓದಿ: ಚಾಮುಂಡಿ ತಾಯಿಯ ಕ್ಷಮೆ ಕೇಳು: ಪ್ರತಾಪ್‌ ಸಿಂಹಗೆ ಪ್ರದೀಪ್‌ ಈಶ್ವರ್‌ ಆಗ್ರಹ

  • ಜಯನಗರಕ್ಕೆ ಶೀಘ್ರದಲ್ಲೇ ಪೈಪ್‌ಲೈನ್ ಅನಿಲ ಲಭ್ಯ- ಗೇಲ್ PNG ಯೋಜನೆಗೆ ತೇಜಸ್ವಿ ಸೂರ್ಯ ಚಾಲನೆ

    ಜಯನಗರಕ್ಕೆ ಶೀಘ್ರದಲ್ಲೇ ಪೈಪ್‌ಲೈನ್ ಅನಿಲ ಲಭ್ಯ- ಗೇಲ್ PNG ಯೋಜನೆಗೆ ತೇಜಸ್ವಿ ಸೂರ್ಯ ಚಾಲನೆ

    ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ (Tejasvi Surya) ಭಾನುವಾರ ಜೆ.ಪಿ. ನಗರ 1ನೇ ಹಂತದಲ್ಲಿರುವ ಎಸ್‌ಬಿಐ ಕಾಲೋನಿಯಲ್ಲಿ ಪೈಪ್‌ಲೈನ್ ಅನಿಲ (PNG) ಕಾಮಗಾರಿಗೆ ಚಾಲನೆ ನೀಡಿದರು.

    ನಗರದ ಮನೆಗಳಿಗೆ ಸ್ವಚ್ಛ, ಸುರಕ್ಷಿತ ಮತ್ತು ಹೆಚ್ಚು ವೆಚ್ಚ-ಪರಿಣಾಮಕಾರಿ ಶಕ್ತಿಯನ್ನು ಒದಗಿಸುವ ದಿಕ್ಕಿನಲ್ಲಿ ಈ ಯೋಜನೆಯು ಒಂದು ಮಹತ್ವದ ಹೆಜ್ಜೆಯಾಗಿದೆ. ಈ ಸಂದರ್ಭದಲ್ಲಿ ಪಿಎನ್‌ಜಿಯ ಆರ್ಥಿಕ ಪ್ರಯೋಜನಗಳನ್ನು ವಿವರಿಸಿದ ಸಂಸದ ಸೂರ್ಯ ಅವರು, ಕುಟುಂಬಗಳು ಪ್ರತಿ ಸಿಲಿಂಡರ್ ಮೇಲೆ ಸರಾಸರಿ 200 ರಿಂದ 300 ರೂ. ಉಳಿತಾಯವನ್ನು ಮಾಡಬಹುದಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಡಿಸಿಎಂ ಅವರೇ ರೈತರ ಮುಂದೆ ತೊಡೆ ತಟ್ಟುತ್ತಿದ್ದೀರಿ, ನಿಮ್ಮ ತೊಡೆ ಮುರಿಯುವ ಕಾಲ ದೂರವಿಲ್ಲ: ನಿಖಿಲ್

    ಪಿಎನ್‌ಜಿ ಸಾಂಪ್ರದಾಯಿಕ ಎಲ್‌ಪಿಜಿಗಿಂತ ಹೆಚ್ಚು ಸುರಕ್ಷಿತ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸರ್ಕಾರವು ಬೆಂಗಳೂರಿನಲ್ಲಿ ಶೇ.100 ರಷ್ಟು ಪಿಎನ್‌ಜಿ ವ್ಯಾಪ್ತಿಯನ್ನು ಒದಗಿಸಲು ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.

    ಬೆಂಗಳೂರು ದಕ್ಷಿಣದಲ್ಲಿ ಇಲ್ಲಿಯವರೆಗೆ ಬೊಮ್ಮನಹಳ್ಳಿ ಮತ್ತು ಬಿಟಿಎಂ ವಿಧಾನಸಭಾ ಕ್ಷೇತ್ರದ ನಿವಾಸಿಗಳು ಪೈಪ್‌ಲೈನ್ ಅನಿಲ ಸಂಪರ್ಕವನ್ನು ಪಡೆಯುತ್ತಿದ್ದು, ಎಸ್‌ಬಿಐ ಲೇಔಟ್‌ನಲ್ಲಿ ಪಿಎನ್‌ಜಿ ಯೋಜನೆಗೆ ಅಂದಾಜು 1.5 ರಿಂದ 2 ಕೋಟಿ ರೂ. ವೆಚ್ಚವಾಗಲಿದೆ. ಸಂಪೂರ್ಣ ವ್ಯವಸ್ಥೆಯನ್ನು ಗೇಲ್ (GAIL) ಒದಗಿಸಲಿದೆ. ಇದನ್ನೂ ಓದಿ: ರಾಯಚೂರು | ಜಾತಿಗಣತಿ ಸಮೀಕ್ಷಾ ಕಾರ್ಯಕ್ಕೆ ನಿರ್ಲಕ್ಷ್ಯ ತೋರಿದ ಅಧಿಕಾರಿ ಅಮಾನತು

  • ನಿಮ್ಮ ಮಾಹಿತಿ ಸುರಕ್ಷಿತವಾಗಿರಲ್ಲ: ಜಾತಿಗಣತಿ ಬಹಿಷ್ಕಾರಕ್ಕೆ ತೇಜಸ್ವಿ ಸೂರ್ಯ ಕರೆ

    ನಿಮ್ಮ ಮಾಹಿತಿ ಸುರಕ್ಷಿತವಾಗಿರಲ್ಲ: ಜಾತಿಗಣತಿ ಬಹಿಷ್ಕಾರಕ್ಕೆ ತೇಜಸ್ವಿ ಸೂರ್ಯ ಕರೆ

    – ನನಗೆ ಸರ್ಕಾರದ ಮೇಲೆ ನಂಬಿಕೆ ಇಲ್ಲ, ನಾನು ಕೂಡ ಜಾತಿಗಣತಿಯಲ್ಲಿ ಪಾಲ್ಗೊಳ್ಳಲ್ಲ: ಬಿಜೆಪಿ ಸಂಸದ

    ಬೆಂಗಳೂರು: ನಿಮ್ಮ ಮಾಹಿತಿ ಸುರಕ್ಷಿತವಾಗಿರಲ್ಲ. ಹಾಗಾಗಿ, ಜಾತಿಗಣತಿ ಬಹಿಷ್ಕರಿಸಿ ಎಂದು ಜನತೆಗೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ (Tejasvi Surya) ಕರೆ ಕೊಟ್ಟಿದ್ದಾರೆ.

    ಜಾತಿಗಣತಿ (Caste Census) ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಜಾತಿಗಣತಿಯಲ್ಲಿ ಪಾಲ್ಗೊಳ್ಳಲ್ಲ. ನಂಗೆ ನನ್ನ ಮಾಹಿತಿ ಸುರಕ್ಷಿತವಾಗಿರುತ್ತೆ ಅನ್ನೋ ನಂಬಿಕೆ ಇಲ್ಲ. ಹೀಗಾಗಿ, ಸರ್ಕಾರದ ಮೇಲೆ ನಂಬಿಕೆ ಇರದೇ ಇರೋದ್ರಿಂದ ಇದರಲ್ಲಿ ಪಾಲ್ಗೊಳ್ಳಲ್ಲ. ನಿಮ್ಮ ಮಾಹಿತಿ ಸುರಕ್ಷಿತವಾಗಿರಲ್ಲ. ಜಾತಿ ಜಾತಿ ಮಧ್ಯೆ ಗಲಾಟೆ ತರಲು ಮಾತ್ರ ಇದನ್ನು ಮಾಡುತ್ತಿದ್ದಾರೆ. ದಯವಿಟ್ಟು ನೀವು ಇದರಲ್ಲಿ ಪಾಲ್ಗೊಳ್ಳಬೇಡಿ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸಮೀಕ್ಷೆಗೆ ಸಿದ್ಧತೆ ಸರಿಯಾಗಿ ಮಾಡದೇ ಸರ್ಕಾರದಿಂದ ಗೊಂದಲ: ನಿಖಿಲ್

    ಬೆಂಗಳೂರು ರಸ್ತೆ ಗುಂಡಿ ವಿಚಾರವಾಗಿ ಮಾತನಾಡಿ, ದೆಹಲಿಯಲ್ಲಿ ಗುಂಡಿ ಇದ್ಯೋ ಇಲ್ವೋ ಯಾಕೆ ಬೇಕು? ಬೆಂಗಳೂರು ಸರಿ ಮಾಡ್ಸಿ ಮೊದಲು. ದೆಹಲಿಯಲ್ಲಿ ಅದ್ಭುತ ಮೆಟ್ರೋ ಕನೆಕ್ಟಿವಿಟಿ ಇದೆ. ಬೆಂಗಳೂರಿನಲ್ಲಿ ಯಾಕಿಲ್ಲ? ಹೋಲಿಕೆ ಮಾಡೋದು ಯಾಕೆ? ಏಳು ಕಿಮೀ ನಡೆದುಕೊಂಡು ಹೋಗಿದ್ದೀನಿ. 100 ಮೀಟರ್‌ಗೊಂದು ರಾಶಿ ರಾಶಿ ಗುಂಡಿಗಳು ಇವೆ. ಅಧಿಕಾರಿಗಳು ನಮ್ ಮಾತು ಕೇಳೋದಾ? ಸಿಎಂ ಡಿಸಿಎಂ ಮಾತು ಕೇಳ್ತಾರಾ ಎಂದು ಪ್ರಶ್ನಿಸಿದ್ದಾರೆ.

    ರಸ್ತೆ ಗುಂಡಿ ಮುಚ್ಚಿಸೋದು ದೊಡ್ಡ ದುಡ್ಡು ಕೊಡೋ ಕಾಮಧೇನು. ಈ ವಿಚಾರದಲ್ಲಿ ದೊಡ್ಡ ಸ್ಕ್ಯಾಮ್ ಇದೆ. ಎರಡು ಮೂರು ಮಳೆ ಬಂದ್ರೆ ರಸ್ತೆ ಕಿತ್ತೋಗುತ್ತೆ. ಜಿಬಿಐ ಹಳೆ ವೈನ್ ಹೊಸ ಬಾಟಲ್ ನಲ್ಲಿ ಹಾಕಿದ್ದಾರೆ. ಕಾಂಟ್ರ್ಯಾಕ್ಟರ್, ಅಧಿಕಾರಿಗಳು, ರಾಜಕೀಯ ನಾಯಕರು ಇವರೆಲ್ಲರೂ ಈ ಸ್ಕ್ಯಾಮ್‌ನಲ್ಲಿ ಭಾಗಿದಾರರು. ಕೆಟ್ಟದನ್ನು ಮಾತ್ರ ಹೋಲಿಕೆ ಮಾಡೋದು ಅಧಿಕಾರನಾ? 100 ಕಿಮೀ ಫ್ಲೈಓವರ್ ಅಂತಾರೆ. ಮೊದಲು 100 ಮೀಟರ್ ಗುಂಡಿಯಿಲ್ಲದ ರಸ್ತೆ ಕೊಡಿ ಸ್ವಾಮಿ. ರಸ್ತೆ ಹಾಕಿದ್ರೆ ಬೇರೆ ಕಡೆ ಎಂಟತ್ತು ವರ್ಷ ಬಾಳಿಕೆ ಬರುತ್ತೆ. ನಮ್ಮಲ್ಲಿ ಯಾಕೆ ತಿಂಗಳು ಬಾಳಿಕೆ ಬರುತ್ತೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ನಾನು ಬಸವ ಧರ್ಮದ ಪರ ಇರೋನು, ಧರ್ಮದ ಕಾಲಮ್‌ನಲ್ಲಿ ಲಿಂಗಾಯತ ಧರ್ಮ ಅಂತನೇ ಬರೆಸ್ತೀನಿ: ಎಂ.ಬಿ ಪಾಟೀಲ್‌

    ಬೆಂಗಳೂರು-ಮುಂಬೈ ಪ್ರಮುಖ ವ್ಯಾಪಾರದ ಹಬ್ ಆಗಲಿದೆ. ಇದುವರೆಗೆ ಒಂದು ಟ್ರೈನ್ ಇತ್ತು. ಬಹಳ ದೀರ್ಘಕಾಲದ ಪ್ರಯಾಣ. ಹೀಗಾಗಿ, ಸೂಪರ್ ಫಾಸ್ಟ್ ಟ್ರೈನ್‌ಗೆ ನಾಲ್ಕು ವರ್ಷದಿಂದ ಶ್ರಮ ಪಡುತ್ತಿದ್ದೆ. ಮೂರು ನಾಲ್ಕು ವಾರಗಳಲ್ಲಿ ಸೂಪರ್ ಫಾಸ್ಟ್ ಟ್ರೈನ್ ಓಡಾಡಲಿದೆ. ಟೈಂಟೇಬಲ್ ಫಿಕ್ಸ್ ಆಗಲಿದೆ. ಜರ್ನಿ ಅವರ್‌ನ್ನು ಸಂಪೂರ್ಣ ಕಡಿತ ಮಾಡುವ ಉದ್ದೇಶದಿಂದ ಇದನ್ನು ಮಾಡಲಾಗಿದೆ ಎಂದು ತಿಳಿಸಿದ್ದಾರೆ.

  • ಬೆಂಗಳೂರು-ಮುಂಬೈ ನಡುವೆ ಹೊಸ ಸೂಪರ್‌ಫಾಸ್ಟ್ ರೈಲು ಘೋಷಣೆ, 30 ವರ್ಷದ ಬೇಡಿಕೆ ಈಡೇರಿಕೆ: ತೇಜಸ್ವಿ ಸೂರ್ಯ

    ಬೆಂಗಳೂರು-ಮುಂಬೈ ನಡುವೆ ಹೊಸ ಸೂಪರ್‌ಫಾಸ್ಟ್ ರೈಲು ಘೋಷಣೆ, 30 ವರ್ಷದ ಬೇಡಿಕೆ ಈಡೇರಿಕೆ: ತೇಜಸ್ವಿ ಸೂರ್ಯ

    ಬೆಂಗಳೂರು: ಬೆಂಗಳೂರು ಮತ್ತು ಮುಂಬೈ ನಡುವೆ ಹೊಸ ಸೂಪರ್‌ಫಾಸ್ಟ್ ರೈಲಿಗೆ (Bengaluru-Mumbai Superfast Train) ಕೇಂದ್ರ ರೈಲ್ವೆ ಸಚಿವಾಲಯ ಅನುಮೋದನೆ ನೀಡಿದೆ ಎಂದು ಸಂಸದ ತೇಜಸ್ವಿ ಸೂರ್ಯ (Tejasvi Surya) ಮಾಹಿತಿ ನೀಡಿದ್ದಾರೆ. ಈ ಅನುಮೋದನೆಯಿಂದ ಎರಡೂ ನಗರಗಳ ನಾಗರಿಕರ 30 ವರ್ಷಗಳ ಬೇಡಿಕೆಯನ್ನು ಈಡೇರಿಸಲಾಗಿದೆ ಎಂದು ಸಂಭ್ರಮಿಸಿದ್ದಾರೆ.

    ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Ashwini Vaishnav) ಅವರು ‘ಬೆಂಗಳೂರು ಮತ್ತು ಮುಂಬೈ ನಡುವೆ ನಾವು ಶೀಘ್ರದಲ್ಲೇ ಸೂಪರ್‌ಫಾಸ್ಟ್ ರೈಲನ್ನು ಪ್ರಾರಂಭಿಸಲಿದ್ದೇವೆ ಎಂದು ಘೋಷಣೆ ಮಾಡಿದ್ದಾರೆ. ಎರಡೂ ನಗರಗಳು ಪ್ರಮುಖ ಆರ್ಥಿಕ ಕೇಂದ್ರಗಳಾಗಿದ್ದು, ಅವುಗಳ ನಿಲ್ದಾಣಗಳಲ್ಲಿನ ಸಾಮರ್ಥ್ಯದ ವಿಸ್ತರಣೆಯಿಂದಾಗಿ ಇದು ಈಗ ಸಾಧ್ಯವಾಗಿದೆ’ ಎಂದಿದ್ದಾರೆ ಎಂದು ತೇಜಸ್ವಿ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಗಡಿ ಜಿಲ್ಲೆ ಬೀದರ್‌ನಲ್ಲಿ ಧಾರಾಕಾರ ಮಳೆಗೆ ಭಾರೀ ಅವಾಂತರ – ರಸ್ತೆ ಸಂಚಾರ ಬಂದ್‌

    ಬೆಂಗಳೂರು ಮತ್ತು ಮುಂಬೈ ಭಾರತದ ಎರಡು ಪ್ರಮುಖ ಆರ್ಥಿಕ ಕೇಂದ್ರಗಳಾಗಿದ್ದರೂ, ಈ ಎರಡೂ ನಗರಗಳು ಕೇವಲ ಒಂದೇ ಒಂದು ರೈಲಿನಿಂದ ಸಂಪರ್ಕ ಹೊಂದಿದ್ದವು. ಆ ರೈಲು ಉದ್ಯಾನ ಎಕ್ಸ್‌ಪ್ರೆಸ್ ಆಗಿದ್ದು, ಈ ಪ್ರಯಾಣವನ್ನು ಪೂರ್ಣಗೊಳಿಸಲು 24 ಗಂಟೆಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತಿತ್ತು. ಇದು 30 ವರ್ಷಗಳಿಂದ ಬಾಕಿ ಉಳಿದಿದ್ದ ಬೇಡಿಕೆಯಾಗಿದೆ. ಕಳೆದ ಮೂರು ದಶಕಗಳಲ್ಲಿ ಎರಡೂ ನಗರಗಳ ಬೆಳವಣಿಗೆಯ ಹೊರತಾಗಿಯೂ, ಬೆಂಗಳೂರು ಮತ್ತು ಮುಂಬೈ ನಡುವೆ ಕೇವಲ ಒಂದು ಸೂಪರ್‌ಫಾಸ್ಟ್ ರೈಲು ಮಾತ್ರ ಇತ್ತು. ಕಳೆದ ವರ್ಷವೊಂದರಲ್ಲೇ 26 ಲಕ್ಷಕ್ಕೂ ಹೆಚ್ಚು ಜನರು ಈ ಎರಡು ನಗರಗಳ ನಡುವೆ ವಿಮಾನದಲ್ಲಿ ಪ್ರಯಾಣಿಸಿದ್ದಾರೆ. ಈ ಹೊಸ ಸೇವೆಯು ಲಕ್ಷಾಂತರ ನಾಗರಿಕರಿಗೆ ಪ್ರಯಾಣವನ್ನು ಹೆಚ್ಚು ಕೈಗೆಟುಕುವ ದರದಲ್ಲಿ ಅನುಕೂಲಕರವಾಗಿಸಲಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ನಿಯಂತ್ರಣ ತಪ್ಪಿ ಡಿವೈಡರ್‌ಗೆ ಥಾರ್ ಡಿಕ್ಕಿ – ಐವರು ದುರ್ಮರಣ, ಓರ್ವ ಗಂಭೀರ

    ಈ ವಿಷಯದ ಕುರಿತಾಗಿ ಕಳೆದ ನಾಲ್ಕು ವರ್ಷಗಳಿಂದ ಸಂಸತ್ತಿನಲ್ಲಿ, ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸಭೆಗಳಲ್ಲಿ ಮತ್ತು ಹಿರಿಯ ರೈಲ್ವೆ ಅಧಿಕಾರಿಗಳೊಂದಿಗೆ ನಿರಂತರ ಪ್ರಯತ್ನದ ಫಲವಾಗಿದೆ. ಈ ಹೊಸ ರೈಲು ಪ್ರಯಾಣದ ದಟ್ಟಣೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ ಮತ್ತು ವಿಮಾನ ಹಾಗೂ ಬಸ್‌ಗಳಿಗೆ ಆರಾಮದಾಯಕವಾದ ಪರ್ಯಾಯವನ್ನು ಒದಗಿಸುತ್ತದೆ. ಅಲ್ಲದೆ, ಇದು ಎರಡು ಮಹಾನಗರಗಳ ನಡುವಿನ ಆರ್ಥಿಕ ಮತ್ತು ಸಾಮಾಜಿಕ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುತ್ತದೆ. ಕರ್ನಾಟಕದ ಜನತೆ ಮತ್ತು ಕನ್ನಡಿಗರ ಪರವಾಗಿ, ಈ ಬಹುಕಾಲದ ಕನಸನ್ನು ನನಸಾಗಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ತೇಜಸ್ವಿ ಸೂರ್ಯ ಕೃತಜ್ಞತೆಯನ್ನು ಸಲ್ಲಿಸಿದ್ದು, ಈ ಕಾರ್ಯಕ್ಕೆ ಬೆಂಬಲ ನೀಡಿದ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೂ ಧನ್ಯವಾದ ತಿಳಿಸಿದ್ದಾರೆ.‌ ಇದನ್ನೂ ಓದಿ: ಬುರುಡೆ ದೆಹಲಿಗೆ ಎತ್ತಿಕೊಂಡು ಹೋಗಿದ್ದು, ಸುಪ್ರೀಂ ಕೋರ್ಟ್‌ಗೆ ಹೋಗಿದ್ದು ಎಲ್ಲಾ ಗೊತ್ತು: ಡಿಕೆಶಿ ಬಾಂಬ್‌

  • ಸುಳ್ಳು ಸುದ್ದಿ ಹರಿಬಿಟ್ಟ ಆರೋಪ – ತೇಜಸ್ವಿ ಸೂರ್ಯ ವಿರುದ್ಧ ಪ್ರಕರಣ ರದ್ದುಗೊಳಿಸಿದ ಸುಪ್ರೀಂ

    ಸುಳ್ಳು ಸುದ್ದಿ ಹರಿಬಿಟ್ಟ ಆರೋಪ – ತೇಜಸ್ವಿ ಸೂರ್ಯ ವಿರುದ್ಧ ಪ್ರಕರಣ ರದ್ದುಗೊಳಿಸಿದ ಸುಪ್ರೀಂ

    – ರಾಜಕೀಯ ಕೋರ್ಟ್‌ನ ಹೊರಗೆ ನಡೆಯಲಿ ಎಂದು ಟೀಕೆ

    ನವದೆಹಲಿ: ಹಾವೇರಿಯ ರೈತ ರುದ್ರಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸುಳ್ಳು ಸುದ್ದಿ ಹರಿಬಿಟ್ಟ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ (Tejasvi Surya) ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣ ರದ್ದತಿ ಪ್ರಶ್ನಿಸಿ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ (Supreme Court) ವಜಾಗೊಳಿಸಿದೆ.

    ಪ್ರಕರಣವನ್ನು ರಾಜಕೀಯಗೊಳಿಸಬಾರದು ಎಂದು ತಿಳಿಸಿರುವ ಸಿಜೆಐ ಬಿಆರ್ ಗವಾಯಿ ಇಂತಹ ಸಮರ ನ್ಯಾಯಾಲಯದ ಹೊರಗೆ ನಡೆಯಲಿ ಎಂದು ಆಕ್ಷೇಪ ಹೊರ ಹಾಕಿದರು, ಬಳಿಕ ಅರ್ಜಿ ವಜಾ ಮಾಡಿದರು. ಇದನ್ನೂ ಓದಿ: ಜಯಮೃತ್ಯುಂಜಯ ಶ್ರೀಗಳಿಗೆ ವಿಷಪ್ರಾಶನ ಪ್ರಯತ್ನ ನಡೆದಿದೆ: ಬೆಲ್ಲದ್‌ ಗಂಭೀರ ಆರೋಪ

    ವಕ್ಫ್ ಆಸ್ತಿ ಅಂತ ಪಹಣಿಯಲ್ಲಿ ನಮೂದಾದ ಹಿನ್ನೆಲೆ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಸುಳ್ಳು ಸುದ್ದಿ ಪೋಸ್ಟ್ ಮಾಡಿದ್ದಾರೆಂಬ ಆರೋಪದಲ್ಲಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಹಾವೇರಿಯ ಸಿಇಎನ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು. ಇದನ್ನೂ ಓದಿ: ಹಾಸನ – ಸೋಲಾಪುರ ರೈಲಿನಲ್ಲಿ ಕಾಣಿಸಿಕೊಂಡ ದಟ್ಟ ಹೊಗೆ

    ಪ್ರಕರಣ ರದ್ದು ಕೋರಿ ಸಂಸದ ತೇಜಸ್ವಿ ಸೂರ್ಯ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ಬಳಿಕ ಹೈಕೋರ್ಟ್ ಪ್ರಕರಣವನ್ನು ರದ್ದು ಮಾಡಿತ್ತು. ಹೈಕೋರ್ಟ್ ಆದೇಶವನ್ನು ಪ್ರಶ್ನೆ ಮಾಡಿ ಹಾವೇರಿಯ ಸಿಇಎನ್ ಪೊಲೀಸ್ ತನಿಖಾಧಿಕಾರಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಇದನ್ನೂ ಓದಿ: ಒಡಿಶಾ ಹೋಟೆಲ್‌ನಲ್ಲಿ ಯುವತಿ ಮೇಲೆ ಅತ್ಯಾಚಾರ – ಕಾಂಗ್ರೆಸ್ ಸ್ಟೂಡೆಂಟ್ ಲೀಡರ್ ಅರೆಸ್ಟ್

  • ಕಾಗಕ್ಕ, ಗುಬ್ಬಕ್ಕ ಕತೆ ಬಿಟ್ಟು ಸೀರಿಯಸ್ ರಾಜಕೀಯ ಮಾಡ್ರಿ – ಪ್ರಿಯಾಂಕ್ ಖರ್ಗೆ ವಿರುದ್ಧ ತೇಜಸ್ವಿ ಸೂರ್ಯ ಕಿಡಿ

    ಕಾಗಕ್ಕ, ಗುಬ್ಬಕ್ಕ ಕತೆ ಬಿಟ್ಟು ಸೀರಿಯಸ್ ರಾಜಕೀಯ ಮಾಡ್ರಿ – ಪ್ರಿಯಾಂಕ್ ಖರ್ಗೆ ವಿರುದ್ಧ ತೇಜಸ್ವಿ ಸೂರ್ಯ ಕಿಡಿ

     – ದೇವಸ್ಥಾನದಂತೆ ಮಸೀದಿ, ಚರ್ಚ್‍ಗಳನ್ನು ಮುಜರಾಯಿಗೆ ಪಡೆಯುವ ಧೈರ್ಯ ಇದೆಯೇ?

    ಚಿಕ್ಕಮಗಳೂರು: ಕಾಗಕ್ಕ, ಗುಬ್ಬಕ್ಕ ಕತೆ ಬಿಟ್ಟು ಈಗಲಾದ್ರೂ ಸೀರಿಯಸ್ ರಾಜಕೀಯ ಮಾಡ್ರಿ ಎಂದು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ವಿರುದ್ಧ ಸಂಸದ ತೇಜಸ್ವಿ ಸೂರ್ಯ (Tejasvi Surya) ವಾಗ್ದಾಳಿ ನಡೆಸಿದ್ದಾರೆ.

    ಚಿಕ್ಕಮಗಳೂರಿನಲ್ಲಿ (Chikkamagaluru) ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ, ತಮ್ಮ ವಿರುದ್ಧ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದ ಪ್ರಿಯಾಂಕ್ ಖರ್ಗೆ ಅವರಿಗೆ ತಿರುಗೇಟು ನೀಡಿದರು. ಈಗಾದ್ರೂ ಸ್ವಲ್ಪ ಸೀರಿಯಸ್ ವಿಚಾರಗಳ ಕುರಿತು ರಾಜಕಾರಣ ಮಾಡಿ. ಕಾಗಕ್ಕ-ಗುಬ್ಬಕ್ಕನ ಕತೆ ಇಟ್ಕೊಂಡು ರಾಜಕೀಯ ಮಾಡಿದರೆ, ನಿಮ್ಮ ಸ್ಥಾನಕ್ಕೆ ಘನತೆ ಬರೋದಿಲ್ಲ. ವಿರೋಧ ಮಾಡುವುದಾದರೆ ಸೀರಿಯಸ್ ವಿಷಯಗಳನ್ನು ಚರ್ಚೆ ಮಾಡೋಣ. ರಾಜ್ಯದ ಅಭಿವೃದ್ಧಿ ಬಗ್ಗೆ ಮಾತನಾಡೋಣ. ನಿಮ್ಮ ಐಟಿ-ಬಿಟಿ ಇಲಾಖೆಯಲ್ಲಿ ಆಗಬೇಕಿರೋ ಕೆಲಸಗಳ ಬಗ್ಗೆ ಚರ್ಚೆ ಮಾಡೋಣ ಎಂದಿದ್ದಾರೆ. ಇದನ್ನೂ ಓದಿ: ಡಿಕೆಶಿಗೆ ಶಾಸಕರ ಬೆಂಬಲ ಇಲ್ಲ | ಸಿಎಂ ಶಾಲಲ್ಲಿ ಅಲ್ಲ ಡೈರೆಕ್ಟಾಗಿ ಹೊಡೆದಿದ್ದಾರೆ: ಸಿ.ಟಿ ರವಿ

    ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನವನ್ನು ಮುಜರಾಯಿ ಇಲಾಖೆ ವಶಕ್ಕೆ ಪಡೆಯುವ ವಿಚಾರವಾಗಿ, ಭಕ್ತರು ಕೋಟ್ಯಂತರ ರೂ. ಹಣ ಹಾಕುವ ದೇವಾಲಯಗಳ ಮೇಲೆ ಕಣ್ಣಿಟ್ಟು, ವಶಕ್ಕೆ ಪಡೆಯುತ್ತಿರೋದು ಅಕ್ಷಮ್ಯ. ಸರ್ಕಾರದ ನಡೆಯನ್ನು ಕೋರ್ಟಿನಲ್ಲಿ ಪ್ರಶ್ನಿಸಿ ಹೋರಾಟ ಮಾಡುತ್ತೇವೆ. ಇವರಿಗೆ ಇವರ ಸರ್ಕಾರ, ಇಲಾಖೆಗಳನ್ನೇ ನಡೆಸಲು ಆಗುತ್ತಿಲ್ಲ, ಹಗರಣಗಳು ನಡೆಯುತ್ತಿವೆ. ಇದೇ ರೀತಿ ಆರೋಪವಿರುವ ಮಸೀದಿ-ಚರ್ಚ್‍ಗಳನ್ನ ತೆಗೆದುಕೊಳ್ಳುವ ಧೈರ್ಯ ಇದೆಯೇ ಎಂದು ಪ್ರಶ್ನಿಸಿದ್ದಾರೆ.

    ಹಿಂದೂ ದೇವಾಲಯಗಳು ಹಿಂದೂಗಳ ಆಸ್ತಿ, ನಿಮ್ಮ ಸರ್ಕಾರದ ಆಸ್ತಿ ಅಲ್ಲ. ನಿಮ್ಮ ಸರ್ಕಾರದಲ್ಲಿ ನಿಮಗೆ ಭ್ರಷ್ಟಾಚಾರ ನಿಲ್ಲಿಸಲು ಆಗುತ್ತಿಲ್ಲ. ಯಾವ ನಂಬಿಕೆಯಿಂದ ನಿಮ್ಮ ಕೈಗೆ ನಮ್ಮ ದೇವಸ್ಥಾನ ಕೊಡುವುದು? ಸರ್ಕಾರವೇನು ಸಾಚಾನ, ಆರೋಪ ಭ್ರಷ್ಟಾಚಾರ ಇಲ್ಲದೇ ನಡೆಸಿಕೊಂಡು ಹೋಗುತ್ತಿದ್ದಾರಾ? ಇವರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ, ಪಕ್ಕದ ತಟ್ಟೆಯನ್ನು ನೋಡುತ್ತಿದ್ದಾರೆ. ದೇವಸ್ಥಾನದ ತಟ್ಟೆಗೆ ಆಸೆ ಇಟ್ಕೊಂಡು ನೋಡ್ತಿದ್ದಾರೆ. ನಾಳೆಯೇ ಅಲ್ಲಿ ಆರತಿಗೊಂದು, ದೃಷ್ಟಿಗೊಂದು ರೇಟು ಅಂತ ಬೋರ್ಡ್ ಹಾಕ್ತಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

  • ಮೆಟ್ರೋ ದರ ಏರಿಕೆ| ನೀವಿಷ್ಟು ಪ್ರಬಲರಾಗಿದ್ದರೂ ನಿಮಗೆ ವರದಿ ಸಿಗುತ್ತಿಲ್ಲವೇ? – ಬಿಎಂಆರ್‌ಸಿಎಲ್‌ಗೆ ಹೈಕೋರ್ಟ್‌ ನೋಟಿಸ್‌ ಜಾರಿ

    ಮೆಟ್ರೋ ದರ ಏರಿಕೆ| ನೀವಿಷ್ಟು ಪ್ರಬಲರಾಗಿದ್ದರೂ ನಿಮಗೆ ವರದಿ ಸಿಗುತ್ತಿಲ್ಲವೇ? – ಬಿಎಂಆರ್‌ಸಿಎಲ್‌ಗೆ ಹೈಕೋರ್ಟ್‌ ನೋಟಿಸ್‌ ಜಾರಿ

    – 2 ವಾರಗಳಲ್ಲಿ ಉತ್ತರಿಸುವಂತೆ ಸೂಚನೆ
    – ಕರ್ನಾಟಕ ಸರ್ಕಾರ ವರದಿಯನ್ನು ರಹಸ್ಯವಾಗಿ ಇಡೋದು ಯಾಕೆ – ತೇಜಸ್ವಿ ಪ್ರಶ್ನೆ

    ಬೆಂಗಳೂರು: ನಮ್ಮ ಮೆಟ್ರೋ ದರ (Namma Metro Fare) ನಿಗದಿ ಸಂಬಂಧ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್‌ಗೆ (BMRCL) ಹೈಕೋರ್ಟ್‌ ನೋಟಿಸ್‌ ಜಾರಿ ಮಾಡಿ 2 ವಾರದಲ್ಲಿ ಉತ್ತರಿಸುವಂತೆ ಸೂಚಿಸಿದೆ.

    ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ (Tejasvi Surya) ಅವರು ಶುಲ್ಕ ನಿಗದಿ ಸಮಿತಿ (FFC) ವರದಿಯನ್ನು ಬಹಿರಂಗ ಪಡಿಸುವಂತೆ ಕೋರಿ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ಇಂದು ನ್ಯಾ.ಸುನಿಲ್ ದತ್ ಯಾದವ್ ಅವರ ಏಕಸದಸ್ಯ ಪೀಠದಲ್ಲಿ ನಡೆಯಿತು.

    ವಿಚಾರಣೆ ವೇಳೆ, ನೀವಿಷ್ಟು ಪ್ರಬಲರಾಗಿದ್ದೂ ನಿಮಗೆ ವರದಿ ಸಿಗುತ್ತಿಲ್ಲವೇ ಎಂದು ನ್ಯಾಯಮೂರ್ತಿಗಳು ತೇಜಸ್ವಿ ಸೂರ್ಯ ಪರ ವಕೀಲರಿಗೆ ಪ್ರಶ್ನಿಸಿದರು.  ಇದನ್ನೂ ಓದಿ: ಕೋವಿಡ್ಲಸಿಕೆ ಹೃದಯಾಘಾತಕ್ಕೆ ನೇರ ಕಾರಣ ಅಲ್ಲ: ದಿನೇಶ್ಗುಂಡೂರಾವ್ಸ್ಪಷ್ಟನೆ

    ಡಿಸೆಂಬರ್ ತಿಂಗಳಲ್ಲೇ ದರ ನಿಗದಿ ಸಮಿತಿ ವರದಿ ನೀಡಿದ್ದರೂ ಬಿಎಂಆರ್‌ಸಿಎಲ್‌ ವರದಿ ನೀಡುತ್ತಿಲ್ಲ. ಮಾಹಿತಿ ಹಕ್ಕಿನಡಿ ಅರ್ಜಿ ಸಲ್ಲಿಸಿದ್ದರೂ ಸಮಿತಿ ವರದಿ ಬಹಿರಂಗಪಡಿಸಿಲ್ಲ ಎಂದು ವಕೀಲರು ಉತ್ತರಿಸಿದರು. ಕೊನೆಗೆ ಬಿಎಂಆರ್‌ಸಿಎಲ್‌ಗೆ ನೋಟಿಸ್‌ ಜಾರಿ ಮಾಡಿದ ಕೋರ್ಟ್‌ ಅರ್ಜಿ ವಿಚಾರಣೆಯನ್ನು 2 ವಾರ ಮುಂದೂಡಿಕೆ ಮಾಡಿತು.

    ಅರ್ಜಿಯಲ್ಲಿ ಏನಿತ್ತು?
    ದರ ನಿಗದಿ ಸಮಿತಿಯ ತಜ್ಞರು ವಿದೇಶಿ ಪ್ರವಾಸವನ್ನು ಕೈಗೊಂಡು ಅಲ್ಲಿನ ಮೆಟ್ರೋ ದರವನ್ನು ಪರಿಶೀಲಿಸಿದ ಬಳಿಕ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿದ್ದರು. ಈ ವರದಿಯ ನಂತರ ಬಿಎಂಆರ್‌ಸಿಎಲ್ 130% ರವರೆಗೆ ಮೆಟ್ರೋ ರೈಲು ಟಿಕೆಟ್ ದರವನ್ನು ಏರಿಕೆ ಮಾಡಿದೆ.

    ದರ ಏರಿಕೆ ಬಳಿಕ ಮೆಟ್ರೋ ರೈಲು ಪ್ರಯಾಣಿಕರ ಸಂಖ್ಯೆ ಕುಸಿದಿದೆ. ದರ ನಿಗದಿ ಸಮಿತಿ ವರದಿಯನ್ನು ನೀಡುವಂತೆ ಬಿಎಂಆರ್‌ಸಿಎಲ್‌ ಅನ್ನು ಕೇಳಿದ್ದರೂ ನೀಡಿಲ್ಲ. ಅಂತಿಮವಾಗಿ ಮಾಹಿತಿ ಹಕ್ಕು ಕಾಯ್ದೆಯ (RTI Act) ಅಡಿ ಪ್ರಶ್ನಿಸಿದ್ದರೂ ಉತ್ತರ ನೀಡಿಲ್ಲ. ಹೀಗಾಗಿ ದರ ನಿಗದಿ ಸಮಿತಿಯ ವರದಿಯನ್ನು ಬಹಿರಂಗ ಪಡಿಸಬೇಕೆಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು. ಇದನ್ನೂ ಓದಿ: ಒಂದೂವರೆ ತಿಂಗಳ ಗಂಡು ಮಗುವನ್ನು ನೀರಿನ ಹಂಡೆಯಲ್ಲಿ ಮುಳುಗಿಸಿ ಕೊಂದ ಪಾಪಿ ತಾಯಿ

     

    ತೇಜಸ್ವಿ ಕಿಡಿ:
    ಶುಲ್ಕ ನಿಗದಿ ಸಮಿತಿ (FFC) ವರದಿಯನ್ನು ಬಿಎಂಆರ್‌ಸಿಎಲ್ ಮತ್ತು ಕರ್ನಾಟಕ ಸರ್ಕಾರ ರಹಸ್ಯವಾಗಿಡುವುದು ಆಕ್ರೋಶದ ಸಂಗತಿ. ಬೆಂಗಳೂರು ಮೆಟ್ರೋ ಈಗ ಭಾರತದಲ್ಲಿ ಅತ್ಯಂತ ದುಬಾರಿಯಾಗಿದ್ದು ಅನೇಕ ಮಧ್ಯಮ ವರ್ಗದ ಪ್ರಯಾಣಿಕರಿಗೆ ಇದು ಕೈಗೆಟುಕುವಂತಿಲ್ಲ.

    ದೆಹಲಿ ಸೇರಿದಂತೆ ದೇಶದ ಇತರ ಪ್ರತಿಯೊಂದು ಮೆಟ್ರೋ ವ್ಯವಸ್ಥೆಯು ತನ್ನ ಶುಲ್ಕ ನಿಗದಿ ಸಮಿತಿಯ ವರದಿಗಳನ್ನು ಸಾರ್ವಜನಿಕಗೊಳಿಸಿರುವಾಗ ಬಿಎಂಆರ್‌ಸಿಎಲ್‌ ಯಾಕೆ ಈ ವರದಿಯನ್ನು ಬಹಿರಂಗ ಪಡಿಸುತ್ತಿಲ್ಲ. ಸರ್ಕಾರ ಏನನ್ನು ಮರೆಮಾಡಲು ಪ್ರಯತ್ನಿಸುತ್ತಿದೆ?

    ಮೂರು ತಿಂಗಳಿನಿಂದ ಪದೇ ಪದೇ ಮನವಿ ಮಾಡಲಾಗಿತ್ತು. ನಂತರ ಆರ್‌ಟಿಐ ಅರ್ಜಿಗಳ ಹೊರತಾಗಿಯೂ ವರದಿಯನ್ನು ರಹಸ್ಯವಾಗಿಡಲಾಗಿದೆ. ಇಲ್ಲಿ ಯಾವುದೇ ರಾಷ್ಟ್ರೀಯ ಭದ್ರತಾ ಕಾಳಜಿ ಇಲ್ಲ. ಹಾಗಾದರೆ ಇಷ್ಟೊಂದು ಗೌಪ್ಯತೆ ಏಕೆ? ಸಿಎಂ ಸಿದ್ದರಾಮಯ್ಯನವರು ಈ ವರದಿಯನ್ನು ಬಿಡುಗಡೆ ಮಾಡಲು ನಿರಾಕರಿಸುತ್ತಿರುವುದು ಏಕೆ ಎಂದು ಪ್ರಶ್ನಿಸಿದ್ದಾರೆ.