Tag: Tejas

  • ಮಿಗ್ 29 ಬದಲಿಸಲು ಮಲೇಷ್ಯಾದ ಮೊದಲ ಆಯ್ಕೆ ಭಾರತದ ತೇಜಸ್

    ಮಿಗ್ 29 ಬದಲಿಸಲು ಮಲೇಷ್ಯಾದ ಮೊದಲ ಆಯ್ಕೆ ಭಾರತದ ತೇಜಸ್

    ನವದೆಹಲಿ: ಭಾರತದ ಸಿಂಗಲ್ ಎಂಜಿನ್ ಫೈಟರ್ ಜೆಟ್ ತೇಜಸ್ ಮಲೇಷ್ಯಾದ ಮೊದಲ ಆದ್ಯತೆಯಾಗಿದ್ದು, ಅದು ತನ್ನ ಹಳೆಯ ಮಿಗ್-29 ಅನ್ನು ಬದಲಿಸಲು ಯೋಜಿಸುತ್ತಿದೆ ಎಂದು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್(ಹೆಚ್‌ಎಎಲ್)ನ ಅಧ್ಯಕ್ಷ ಆರ್. ಮಾಧವನ್ ತಿಳಿಸಿದ್ದಾರೆ.

    ಈ ಬಗ್ಗೆ ಮಾಹಿತಿ ನೀಡಿದ ಮಾಧವನ್, ಮಲೇಷ್ಯಾದೊಂದಿಗಿನ ಒಪ್ಪಂದದ ಬಗ್ಗೆ ನನಗೆ ವಿಶ್ವಾಸವಿದೆ. ಇದರ ಬಗೆಗಿನ ಮಾತುಕತೆ ಬಹುತೇಕ ಅಂತಿಮ ಹಂತದಲ್ಲಿದೆ. ರಷ್ಯಾವನ್ನು ಹೊರತುಪಡಿಸಿ ಮಲೇಷ್ಯಾದ ಎಸ್‌ಯು-30 ವಿಮಾನಗಳಿಗೆ ಬೆಂಬಲವನ್ನು ನೀಡುತ್ತಿರುವ ಏಕೈಕ ದೇಶವೆಂದರೆ ಅದು ಭಾರತ ಮಾತ್ರ ಎಂದು ಹೇಳಿದ್ದಾರೆ. ಇದನ್ನೂ ಓದಿ: ಶಾಲೆಯಲ್ಲಿ ಕಂಪ್ಯೂಟರ್‌ ಕಳವು- ತಾಕತ್ತಿದ್ರೆ ನಮ್ಮನ್ನ ಹಿಡೀರಿ ಎಂದು ನಂಬರ್ ಬರೆದಿಟ್ಟ ಕಳ್ಳರು

    Fighter jet

    ರಷ್ಯಾ ಉಕ್ರೇನ್ ಮೇಲೆ ನಡೆಸುತ್ತಿರುವ ದಾಳಿಯ ಪ್ರತೀಕಾರವಾಗಿ ಪಾಶ್ಚಿಮಾತ್ಯ ರಾಷ್ಟ್ರಗಳು ರಷ್ಯಾ ವಿರುದ್ಧ ನಿರ್ಬಂಧಗಳನ್ನು ವಿಧಿಸಿವೆ. ಹೀಗಾಗಿ ಮಲೇಷ್ಯಾ ತನ್ನ ಸುಖೋಯ್ -30 ಯುದ್ಧವಿಮಾನಗಳಿಗೆ ಬಿಡಿಭಾಗಗಳನ್ನು ಸಂಗ್ರಹಿಸುವಲ್ಲಿ ತೊಂದರೆಯನ್ನು ಎದುರಿಸುತ್ತಿದೆ. ಇದೀಗ ಭಾರತ ಪ್ಯಾಕೇಜ್‌ನ ಭಾಗವಾಗಿ ಮಲೇಷ್ಯಾಗೆ ರಷ್ಯಾ ಮೂಲದ ಎಸ್‌ಯು-30 ಯುದ್ಧವಿಮಾನಗಳಿಗೆ ನಿರ್ವಹಣೆ, ದುರಸ್ತಿ ಹಾಗೂ ಪರೀಕ್ಷೆಯ ಸೌಲಭ್ಯವನ್ನು ಒದಗಿಸಲು ಮುಂದಾಗಿದೆ. ಈ ಹಿನ್ನೆಲೆ ಕೌಲಾಲಂಪುರದ ತಂಡ ಶೀಘ್ರವೇ ಭಾರತಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ.

    ತೇಜಸ್‌ಗೇಕೆ ಮೊದಲ ಆದ್ಯತೆ?
    ಮಲೇಷ್ಯಾ ಸರ್ಕಾರ ಈಗಾಗಲೇ ಚೀನಾದ ಜೆಎಫ್-17, ದಕ್ಷಿಣ ಕೊರಿಯಾದ ಎಫ್‌ಎ-50, ರಷ್ಯಾದ ಎಂಐಜಿ-35 ಹಾಗೂ ಯಾಕ್-130 ಜೆಟ್‌ಗಳನ್ನು ನೋಡಿದೆ. ಆದರೂ ಮಲೇಷ್ಯಾ ಭಾರತದ ತೇಜಸ್‌ಅನ್ನೇ ಉತ್ತಮ ವಿಮಾನ ಎಂದು ಬಣ್ಣಿಸಿದೆ ಎಂದು ಮಾಧವನ್ ತಿಳಿಸಿದ್ದಾರೆ.

    ಚೀನಾದ ಜೆಎಫ್-17 ಅಗ್ಗವಾಗಿದ್ದರೂ ತೇಜಸ್‌ನ ಎಂಕೆ-ಐಎ ವೇರಿಯಂಟ್‌ನೊಂದಿಗೆ ಹೊಂದಿಕೆಯಾಗುವುದಿಲ್ಲ ಎಂಬುದು ತಿಳಿದುಬಂದಿದೆ. ಹೀಗಾಗಿ ಎಸ್‌ಯು-30ಯ ಸೌಲಭ್ಯವನ್ನು ಅಭಿವೃದ್ಧಿಪಡಿಸುವ ಅವಕಾಶ ಭಾರತಕ್ಕೆ ಲಭಿಸಿದೆ. ಇದನ್ನೂ ಓದಿ: ಹಿಟ್‌ಮ್ಯಾನ್ ರೋಹಿತ್ ಶರ್ಮಾ ಕೋವಿಡ್‌ನಿಂದ ಗುಣಮುಖ – T20ಗೆ ಲಭ್ಯ

    ತೇಜಸ್ ವಿಶೇಷತೆ:
    ಏರೋನಾಟಿಕಲ್ ಡೆವಲಪ್‌ಮೆಂಟ್ ಏಜೆನ್ಸಿ(ಎಡಿಎ) ವಿನ್ಯಾಸಗೊಳಿಸಿರುವ ತೇಜಸ್ ಅನ್ನು ಬೆಂಗಳೂರು ಮೂಲದ ಹೆಚ್‌ಎಎಲ್ ತಯಾರಿಸಿದೆ. ಇದು ಲೈಟ್ ಕಾಂಬ್ಯಾಟ್ ಏರ್‌ಕ್ರಾಫ್ಟ್(ಎಲ್‌ಸಿಎ) ಕಾರ್ಯವನ್ನು ಆಧರಿಸಿದ್ದು, ಇದು ಅಪಾಯಕಾರಿ ಪ್ರದೇಶಗಳಲ್ಲಿಯೂ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ.

    Live Tv
    [brid partner=56869869 player=32851 video=960834 autoplay=true]

  • ಪೈಲಟ್ ಲುಕ್‍ನಲ್ಲಿ ಕಾಣಿಸಿಕೊಂಡ ಗ್ಲಾಮರ್ ಚೆಲುವೆ ಕಂಗನಾ

    ಪೈಲಟ್ ಲುಕ್‍ನಲ್ಲಿ ಕಾಣಿಸಿಕೊಂಡ ಗ್ಲಾಮರ್ ಚೆಲುವೆ ಕಂಗನಾ

    ಮುಂಬೈ: ಬಾಲಿವುಡ್‍ನಲ್ಲಿ ಒಂದಲ್ಲಾ ಒಂದು ವಿವಾದದ ಮೂಲಕ ಸದ್ದು ಮಾಡುವ ನಟಿ ಕಂಗನಾ ರಣಾವತ್ ವಾಯುಸೇನೆ ಸಮವಸ್ತ್ರದಲ್ಲಿ ಮಿಂಚುತ್ತಿರುವ ಫೋಟೋ ವೈರಲ್ ಆಗುತ್ತಿದೆ.

    ಇತ್ತೀಚೆಗಷ್ಟೇ ಯೂರೋಪ್‍ನಲ್ಲಿ ಧಾಕಡ್ ಸಿನಿಮಾದ ಶೂಟಿಂಗ್ ಮುಗಿಸಿ, ಅದೇ ಖುಷಿಯಲ್ಲಿ ಸಣ್ಣದೊಂದು ಪಾರ್ಟಿ ಮಾಡಿ ಕೆಲವೊಂದು ಹಾಟ್ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದ ಕಂಗನಾ, ಇದರ ಬೆನ್ನೆಲ್ಲೇ ಮತ್ತೊಂದು ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಇನ್ನೂ ಈ ಸಿನಿಮಾದ ಚಿತ್ರೀಕರಣ ವೇಳೆ ಕಂಗನಾ ವಾಯುಸೇನೆ ಸಮವಸ್ತ್ರದಲ್ಲಿರುವ ಫೋಟೋವನ್ನು ಆಗಸ್ಟ್ 21ರಂದು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

     

    View this post on Instagram

     

    A post shared by Kangana Ranaut (@kanganaranaut)

    ಹೌದು, ಸದಾ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಜೊತೆ ಗ್ಲಾಮರ್ ಲುಕ್‍ನಲ್ಲಿ ಮಿಂಚುತ್ತಿದ್ದ ಕಂಗನಾ ಇದೇ ಮೊದಲ ಬಾರಿಗೆ ತೇಜಸ್ ಸಿನಿಮಾದಲ್ಲಿ ವಾಯು ಸೇನೆಯ ಪೈಲಟ್ ಆಗಿ ಬಣ್ಣಹಚ್ಚುತ್ತಿದ್ದಾರೆ. ಸದ್ಯ ಈ ಸಿನಿಮಾಕ್ಕಾಗಿ ಕಂಗನಾ ಸಿಕ್ಕಾಪಟ್ಟೆ ತಯಾರಿ ನಡೆಸಿದ್ದು, ಚಿತ್ರೀಕರಣದ ವೇಳೆ ಸೆರೆಹಿಡಿಯಲಾದ ಫೋಟೋವೊಂದನ್ನು ಅಭಿಮಾನಿಗಳೊಂದಿಗೆ ಶೇರ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ:ಇನ್‍ಸ್ಟಾಗ್ರಾಂ ಖಾತೆ ಹ್ಯಾಕ್ – ಅಂತರಾಷ್ಟ್ರೀಯ ಷಡ್ಯಂತ್ರ ಎಂದ ಕಂಗನಾ

     

    View this post on Instagram

     

    A post shared by Kangana Ranaut (@kanganaranaut)

    ಫೋಟೋದಲ್ಲಿ ಕಂಗನಾ ವಾಯು ಸೇನೆಯ ಪೈಲಟ್ ಆಗಿ ಖಡಕ್ ಲುಕ್‍ನಲ್ಲಿ ಕಾಣಿಸಿಕೊಂಡಿದ್ದು, ಫೋಟೋ ಜೊತೆಗೆ ನನ್ನ ಮುಂದಿನ ಮಿಷನ್ ತೇಜಸ್ ಇಂದಿನಿಂದ ಆರಂಭವಾಗುತ್ತಿದೆ. ಚಿತ್ರತಂಡಕ್ಕೆ ಧನ್ಯವಾದ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಯುರೋಪ್‍ನಲ್ಲಿ ಕಂಗನಾ ಹಾಟ್ ಪೋಸ್ – ಅಭಿಮಾನಿಗಳು ಕ್ಲೀನ್ ಬೋಲ್ಡ್

  • ಯುದ್ಧ ವಿಮಾನ ತೇಜಸ್‍ನಲ್ಲಿ ರಾಜನಾಥ್ ಸಿಂಗ್ ಹಾರಾಟ

    ಯುದ್ಧ ವಿಮಾನ ತೇಜಸ್‍ನಲ್ಲಿ ರಾಜನಾಥ್ ಸಿಂಗ್ ಹಾರಾಟ

    ಬೆಂಗಳೂರು: ದೇಶೀಯ ನಿರ್ಮಿತ ಹಗುರ ಯುದ್ಧ ವಿಮಾನ ತೇಜಸ್‍ನಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇದೇ ಮೊದಲ ಬಾರಿಗೆ ಹಾರಾಟ ನಡಸಿದ್ದಾರೆ.

    ಎಚ್‍ಎಎಲ್ ವಿಮಾನ ನಿಲ್ದಾಣಕ್ಕೆ ಬಂದ ರಾಜನಾಥ್ ಸಿಂಗ್ ಅವರು ಯುದ್ಧ ವಿಮಾನದ ಪೈಲಟ್ ಧಿರಿಸಿನಲ್ಲಿ ತೇಜಸ್‍ನ ಕೋ-ಪೈಲಟ್ ಸ್ಥಾನದಲ್ಲಿ ಕುಳಿತರು. ಹಾರಾಟಕ್ಕೂ ಮುನ್ನ ಸಂತಸದಿಂದ ಜನರತ್ತ ಕೈ ಬೀಸಿದರು. ಹಲವು ಪರೀಕ್ಷೆಗಳಲ್ಲಿ ಯಶಸ್ವಿಯಾಗಿರುವ ಶಸ್ತ್ರ ಸಜ್ಜಿತ ತೇಜಸ್ ವಾಯುಪಡೆ ಕಾರ್ಯಾಚರಣೆಗಳಲ್ಲಿ ಸೇರ್ಪಡೆಯಾಗಲು ಸಜ್ಜಾಗಿದೆ. ಇತ್ತೀಚಿಗಷ್ಟೆ ಈ ವಿಮಾನವು ‘ಅರೆಸ್ಟ್ ಲ್ಯಾಂಡಿಂಗ್’ ಪರೀಕ್ಷೆಯಲ್ಲಿ ಯಶಸ್ವಿಯಾಗಿದೆ.

    ಯುದ್ಧ ವಿಮಾನ ತೇಜಸ್ ನಲ್ಲಿ ಹಾರಾಟ ನಡೆಸಿದ ಮೊದಲ ರಕ್ಷಣಾ ಸಚಿವ ಎಂಬ ಹೆಗ್ಗಳಿಕೆಗೆ ರಾಜನಾಥ್ ಸಿಂಗ್ ಪಾತ್ರರಾದರು. ಎರಡು ಆಸನಗಳ ಸಾಮರ್ಥ್ಯ ಹೊಂದಿರುವ ತೇಜಸ್ ನಲ್ಲಿ ರಾಜನಾಥ್ ಸಿಂಗ್ ಅವರಿಗೆ ಏರ್ ವೈಸ್ ಮಾರ್ಷಲ್, ಪ್ರೊಜೆಕ್ಟ್ ಡೈರೆಕ್ಟರ್ ಎನ್.ತಿವಾರಿ ಸಾಥ್ ನೀಡಿದರು.

    2018 ಜೂನ್ ನಲ್ಲಿ 18 ತೇಜಸ್ ಯುದ್ಧವಿಮಾನಗಳು ಭಾರತೀಯ ವಾಯುಸೇನೆಗೆ ಸೇರ್ಪಡೆಗೊಂಡಿವೆ. 2013ರಲ್ಲಿ ತೇಜಸ್ ಯುದ್ಧ ವಿಮಾನಗಳಿಗೆ ಪರೀಕ್ಷಾರ್ಥವಾಗಿ ಹಾರಾಟ ನಡೆಸಲು ಅನುಮತಿ ನೀಡಲಾಗಿತ್ತು. ಭಾರತೀಯ ವಾಯುಸೇನೆ ಸದ್ಯ ಎರಡು ಸ್ಕಾಡ್ರನ್ ಗಳ 18 ಯುದ್ಧ ವಿಮಾನಗಳನ್ನು ಹೊಂದಿದ್ದು, ಹೆಚ್ಚು ಸ್ಕಾಡ್ರನ್ ವುಳ್ಳ ಮಾರ್ಕ್-1 ವರ್ಷನ್ ನ 83 ಯುದ್ಧ ವಿಮಾನಗಳನ್ನ ಹೊಂದುವ ಮೂಲಕ ಐಎಎಫ್ ತನ್ನ ಬಲವನ್ನು ಹೆಚ್ಚಿಸಿಕೊಳ್ಳಲಿದೆ. 83 ತೇಜಸ್ ಯುದ್ಧ ವಿಮಾನಗಳ ತಯಾರಿಕೆಗೆ 50 ಸಾವಿರ ಕೋಟಿ ರೂ. ವೆಚ್ಚವಾಗಲಿದೆ.

    2019ರ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದಲ್ಲಿ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ತೇಜಸ್ ನಲ್ಲಿ ಹಾರಾಟ ನಡೆಸಿದ್ದರು.

  • ಗಾಳಿಯಲ್ಲಿರುವಾಗಲೇ ನೆಲಕ್ಕುರುಳಿದ ತೇಜಸ್‍ನ 1,200 ಲೀಟರ್ ಇಂಧನ ಟ್ಯಾಂಕರ್

    ಗಾಳಿಯಲ್ಲಿರುವಾಗಲೇ ನೆಲಕ್ಕುರುಳಿದ ತೇಜಸ್‍ನ 1,200 ಲೀಟರ್ ಇಂಧನ ಟ್ಯಾಂಕರ್

    ಚೆನ್ನೈ: ಭಾರತೀಯ ವಾಯುಸೇನೆಯ ತೇಜಸ್ ಯುದ್ಧ ವಿಮಾನದ ಹೆಚ್ಚುವರಿ ಇಂಧನ ಟ್ಯಾಂಕರ್ ವಿಮಾನ ಹಾರಾಟ ನಡೆಸುತ್ತಿದ್ದ ವೇಳೆಯೇ ನೆಲಕ್ಕುರುಳಿದ ಘಟನೆ ತಮಿಳುನಾಡಿನ ಕೊಯಮತ್ತೂರು ಬಳಿ ನಡೆದಿದೆ.

    ದಿನಚರಿಯಂತೆ ಇಂದು ಬೆಳಗ್ಗೆ ವಿಮಾನ ಹಾರಾಟ ನಡೆಸಿತ್ತು. ಈ ಸಮಯದಲ್ಲಿ ಏಕಾಏಕಿ ವಿಮಾನ ಹೆಚ್ಚುವರಿ 1200 ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕರ್ ನೆಲಕ್ಕಪ್ಪಳಿಸಿದೆ. ಘಟನೆ ಬಳಿಕ ಜೇಟ್ ಫೈಲಟ್ ವಿಮಾನವನ್ನು ಯಶಸ್ವಿಯಾಗಿ ಸುಲೂರ್ ವಾಯುನೆಲೆಯಲ್ಲಿ ಲ್ಯಾಂಡ್ ಮಾಡಿದ್ದಾರೆ.

    ಘಟನೆ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ವಾಯುಸೇನೆಯ ಹಿರಿಯ ಅಧಿಕಾರಿಯೊಬ್ಬರು, ಘಟನೆ ಹೇಗಾಯಿತು ಎಂಬ ಬಗ್ಗೆ ಮಾಹಿತಿ ಇಲ್ಲ. ಆದರೆ ವಿಮಾನ ಯಶಸ್ವಿಯಾಗಿ ಲ್ಯಾಂಡ್ ಆಗಿದೆ. ಘಟನೆ ಬಗ್ಗೆ ತನಿಖೆಗೆ ಆದೇಶ ನೀಡಿದ್ದೇವೆ ಎಂದು ತಿಳಿಸಿದ್ದಾರೆ. ಇಂಧನ ಟ್ಯಾಂಕರ್ ನೆಲಕ್ಕುರುಳಿದ ಪರಿಣಾಮ ಸ್ಥಳದಲ್ಲಿ ಸುಮಾರು 3 ಅಡಿಗಿಂತಲೂ ಹೆಚ್ಚು ಭೂಮಿ ಕುಸಿತವಾಗಿದ್ದು, ಕೂಡಲೇ ಬೆಂಕಿ ಹೊತ್ತಿಕೊಂಡಿದೆ. ಆದರೆ ಬಯಲು ಪ್ರದೇಶದಲ್ಲಿ ಬಿದ್ದ ಪರಿಣಾಮ ಸಂಭವಿಸಬಹುದಾಗಿದ್ದ ಬಹುದೊಡ್ಡ ಅವಘಡ ತಪ್ಪಿದೆ.

    ಅಂದಹಾಗೇ ತೇಜಸ್ ಭಾರತದ ಮೊದಲ ಯುದ್ಧ ವಿಮಾನವಾಗಿದ್ದು, ಇಲ್ಲಿಯೇ ಅಭಿವೃದ್ಧಿ ಪಡಿಸಲಾಗಿತ್ತು. ಗಾಳಿಯಲ್ಲಿಯೇ ಇಂಧನವನ್ನು ತುಂಬಿಸಿಕೊಳ್ಳುವ ಸಾಮರ್ಥ್ಯವನ್ನು ತೇಜಸ್ ಹೊಂದಿದ್ದು, ಕಳೆದ ವರ್ಷವಷ್ಟೇ ಈ ಪರೀಕ್ಷೆಯಲ್ಲಿ ಯಶಸ್ವಿಯಾಗಿತ್ತು. ಘಟನೆ ನಡೆದ ಕೂಡಲೇ ಪೈಲಟ್ ಸಮಯ ಪ್ರಜ್ಞೆ ಮೆರೆದಿದ್ದು, ಸ್ಥಳೀಯ ವಾಯುನೆಲೆಯಲ್ಲಿ ಲ್ಯಾಂಡ್ ಮಾಡಲು ಯಶಸ್ವಿಯಾಗಿದ್ದಾರೆ. ಆದರೆ ಇಂಧನ ಟ್ಯಾಂಕರ್ ಬೀಳಲು ಕಾರಣವೆಂಬುವುದು ತಿಳಿದು ಬಂದಿಲ್ಲ. ತನಿಖೆಯ ಬಳಿಕ ಘಟನೆ ಕಾರಣ ತಿಳಿದು ಬರಲಿದೆ.

  • ದೇಶಿಯ ಯುದ್ಧ ವಿಮಾನ ತೇಜಸ್ ಏರಿದ ಪಿವಿ ಸಿಂಧು

    ದೇಶಿಯ ಯುದ್ಧ ವಿಮಾನ ತೇಜಸ್ ಏರಿದ ಪಿವಿ ಸಿಂಧು

    ಬೆಂಗಳೂರು: ಏರೋ ಇಂಡಿಯಾ 2019 ಪ್ರಯುಕ್ತ ಇಂದು ಶನಿವಾರ ನಡೆದ ಪ್ರದರ್ಶನದಲ್ಲಿ ಬ್ಯಾಡ್ಮಿಂಟನ್ ಸ್ಟಾರ್ ಪಿವಿ ಸಿಂಧು ಅವರು ತೇಜಸ್ ನಲ್ಲಿ ಹಾರಾಟ ನಡೆಸಿದರು. ಈ ಮೂಲಕ ಮೇಡ್ ಇನ್ ಇಂಡಿಯಾ ಯೋಜನೆ ಮೂಲಕ ನಿರ್ಮಿಸಲಾಗಿದ್ದ ತೇಜಸ್ ವಿಮಾನಕ್ಕೆ ಮಹಿಳಾ ಕೋ ಪೈಲಟ್ ಎಂಬ ಹೆಗ್ಗಳಿಕೆ ಪಡೆದರು.

    ಸುಮಾರು 25 ನಿಮಿಷ ಆಗಸದಲ್ಲಿ ವಿಮಾನದಲ್ಲಿ ಸುತ್ತಾಡಿದ ಸಿಂಧು ರೋಮಾಂಚನಗೊಂಡಿದ್ದರು. ವಿಮಾನ ಹಾರಾಟ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಸಿಂಧು, ತೇಜಸ್ ನಿಜವಾದ ಹೀರೋ ಆಗಿದ್ದು, ಹಾರಾಟ ನಡೆಸಲು ನನಗೆ ಅವಕಾಶ ಲಭಿಸಿದ್ದು ಸೌಭಾಗ್ಯ ಎಂದು ಹೇಳಿದ್ದಾರೆ.

    ಕ್ರೀಡಾಪಟುಗಳಲ್ಲಿ ಮೊದಲ ಬಾರಿಗೆ ವಿಮಾನ ಹಾರಾಟ ನಡೆಸಿದ ಗೌರಕ್ಕೆ ಸಿಂಧು ಪಾತ್ರರಾಗಿದ್ದು, ಇದಕ್ಕೆ ಅವಕಾಶ ನೀಡಿದ ಡಿಆರ್‍ಡಿಒ ಗೆ ಋಣಿಯಾಗಿದ್ದೇನೆ ಎಂದು ಸಿಂಧು ಹೇಳಿದ್ದಾರೆ. ವಿಂಗ್ ಕಮಾಂಡರ್ ಸಿದ್ದಾರ್ಥ್ ಅವರೊಂದಿಗೆ ಸಿಂಧು ವಿಮಾನ ಹಾರಾಟ ನಡೆಸಿದ್ದರು.

    ಮೇಡ್ ಇನ್ ಇಂಡಿಯಾ ಯೋಜನೆಯ ಭಾಗವಾಗಿ ರಾಜ್ಯ ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಸಂಸ್ಥೆ ತೇಜಸ್ ವಿಮಾನವನ್ನು ನಿರ್ಮಿಸಿದೆ. ತೇಜಸ್ ಮಲ್ಟಿರೋಲ್ ಲೈಟ್ ಫೈಟರ್ ಜೇಟ್ ಆಗಿದ್ದು, ಪ್ರಥಮ ಸ್ವದೇಶಿ ನಿರ್ಮಿತ ಲಘು ಯುದ್ಧ ವಿಮಾನ ಎಂಬ ಹೆಗ್ಗಳಿಕೆಯನ್ನು ತೇಜಸ್ ಪಡೆದಿದೆ. ಏರ್ ಶೋ ಭಾಗವಾಗಿ ಭಾರತ ಭೂಸೇನಾ ಮುಖ್ಯಸ್ಥರಾದ ಬಿಪಿನ್ ರಾವತ್ ಕೂಡ ತೇಜಸ್ ವಿಮಾನದಲ್ಲಿ ಹಾರಾಟ ನಡೆಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv