Tag: tehishildar

  • ತಹಶೀಲ್ದಾರ್ ವರ್ಗಾವಣೆ ವಿಚಾರಕ್ಕೆ ಕಿತ್ತಾಟ- ಏಯ್ ಹೋಯ್ ಎಂದು ಅಶೋಕ್, ಅಶ್ವತ್ಥನಾರಾಯಣ್  ಮಾತಿನ ಚಕಮಕಿ..!

    ತಹಶೀಲ್ದಾರ್ ವರ್ಗಾವಣೆ ವಿಚಾರಕ್ಕೆ ಕಿತ್ತಾಟ- ಏಯ್ ಹೋಯ್ ಎಂದು ಅಶೋಕ್, ಅಶ್ವತ್ಥನಾರಾಯಣ್ ಮಾತಿನ ಚಕಮಕಿ..!

    ಬೆಂಗಳೂರು: ಒಂದೇ ಒಂದು ವಿಚಾರಕ್ಕೆ ಬಿಜೆಪಿಯ ಇಬ್ಬರು ಬೆಂಗಳೂರು ಸಚಿವರ ನಡುವೆ ಮಾತಿನ ಚಕಮಕಿ ನಡೆದಿದೆ. ವಿಧಾನಸಭೆಯ ಮೊಗಸಾಲೆಯಲ್ಲಿನ ಸಚಿವರ ವಿಶ್ರಾಂತಿ ಕೊಠಡಿಯಲ್ಲಿ ಬೆಂಗಳೂರು ಗದ್ದುಗೆಗಾಗಿ ವಾಕ್ಸಮರ ನಡೆದಿದೆ.

    ಬೆಂಗಳೂರು ಅಭಿವೃದ್ಧಿ ಖಾತೆಗಾಗಿ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಕಾಲದಿಂದಲೂ ಇಬ್ಬರ ನಡುವೆ ಪೈಪೋಟಿ ಇತ್ತು. ಈಗ ಆ ಇಬ್ಬರು ಸಚಿವರ ನಡುವೆ ಮಹಾಕದನ ನಡೆದಿದೆ. ಆರ್.ಅಶೋಕ್ ವರ್ಸಸ್ ಅಶ್ವಥ್ ನಾರಾಯಣ್ ನಡುವೆ ಏರುಧ್ವನಿಯಲ್ಲಿ ಮಾತಿನ ಚಕಮಕಿ ನಡೆದಿದೆ. ಇಬ್ಬರ ನಡುವಿನ ಮಾತಿನ ಚಕಮಕಿ ಕಂಡು ಕೆಲ ಶಾಸಕರು, ಆಪ್ತ ಶಾಸಕರು ಅವಕ್ಕಾಗಿದ್ದಾರೆ. ಇದನ್ನೂ ಓದಿ: ಬಿಜೆಪಿಯ ಫ್ಯಾಮಿಲಿ ಪಾಲಿಟಿಕ್ಸ್‌ಗೆ ಬೀಳುತ್ತಾ ಬ್ರೇಕ್..?

    ರಾಮನಗರ ಜಿಲ್ಲೆಯ ತಹಶೀಲ್ದಾರ್ ವರ್ಗಾವಣೆಗೆ ಸಂಬಂಧಪಟ್ಟಂತೆ ಸಚಿವರಿಬ್ಬರ ನಡುವೆ ಮನಸ್ತಾಪ ಇತ್ತು ಎನ್ನಲಾಗಿದೆ. ಜಿಲ್ಲೆಯ ಒಂದು ತಾಲೂಕಿನ ತಹಶೀಲ್ದಾರ್ ವರ್ಗಾವಣೆ ಮಾಡಲು ಅಶ್ವಥ್ ನಾರಾಯಣ್ ಬಿಗಿಪಟ್ಟು ಹಿಡಿದಿದ್ದಾರೆ. ಆದರೆ ತಹಶೀಲ್ದಾರ್ ವರ್ಗಾವಣೆ ಮಾಡದೇ ಅಶೋಕ್ ಇನ್ನೊಂದು ಪಟ್ಟು ಹಿಡಿದಿದ್ದಾರೆ. ಈ ಬಗ್ಗೆ ಮೂರು ಬಾರಿ ಹೇಳಿದ್ರೂ ತಹಶೀಲ್ದಾರ್ ವರ್ಗಾವಣೆ ಮಾಡಿಲ್ಲ ಎಂದು ಅಶ್ವಥ್ ನಾರಾಯಣ್ ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ಬಿಜೆಪಿಯ ಫ್ಯಾಮಿಲಿ ಪಾಲಿಟಿಕ್ಸ್‌ಗೆ ಬೀಳುತ್ತಾ ಬ್ರೇಕ್..?

    ಆತ ಬಿಜೆಪಿ ಪಕ್ಷದ ಹಿರಿಯ ನಾಯಕರೊಬ್ಬರು ಹಾಕಿಸಿರುವ ತಹಶೀಲ್ದಾರ್, ವರ್ಗಾವಣೆ ಸಾಧ್ಯವಿಲ್ಲ ಅಂತಾ ಅಶೋಕ್ ಹೇಳುತ್ತಿದ್ದಾರಂತೆ. ಆ ವರ್ಗಾವಣೆ ಕಾರಣಕ್ಕಾಗಿ ಇಬ್ಬರು ಸಚಿವರ ನಡುವೆ ವಾಕ್ಸಮರ ನಡೆದಿದೆ. ನಾನು ರಾಮನಗರ ಜಿಲ್ಲೆ ಉಸ್ತುವಾರಿ ಸಚಿವ, ನಾನು ಕೇಳಿದ್ರೂ ವರ್ಗಾವಣೆ ಮಾಡಲ್ಲ ಅಂದ್ರೆ ಹೇಗೆ…? ರಾಮನಗರ ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಹೇಗೆ ಅಂತಾ ಅಶ್ವಥ್ ನಾರಾಯಣ್ ಸಿಟ್ಟು ಪ್ರದರ್ಶನ ಮಾಡಿದ್ದಾರೆ. ಒಟ್ಟಿನಲ್ಲಿ ಒಂದು ವರ್ಗಾವಣೆಗಾಗಿ ಇಬ್ಬರು ಸಚಿವರಿಂದಲೇ ವಾಕ್ಸಮರಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಟೆನ್ಶನ್ ಆಗಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

  • ನೆಲಮಂಗಲದಲ್ಲಿ ಕುರಿ- ಮೇಕೆ ಸಂತೆಗೆ ದಾಳಿ ವೇಳೆ ಮಾನವೀಯತೆ ಮೆರೆದ ತಹಶೀಲ್ದಾರ್

    ನೆಲಮಂಗಲದಲ್ಲಿ ಕುರಿ- ಮೇಕೆ ಸಂತೆಗೆ ದಾಳಿ ವೇಳೆ ಮಾನವೀಯತೆ ಮೆರೆದ ತಹಶೀಲ್ದಾರ್

    ನೆಲಮಂಗಲ: ಅನ್‍ಲಾಕ್ ಆದ ಬಳಿಕ ಇದೇ ಮೊದಲ ಬಾರಿಗೆ ಬೆಂಗಳೂರು ಹೊರವಲಯ ನೆಲಮಂಗಲ ನಗರದಲ್ಲಿ ಕುರಿ ಮೇಕೆ ಸಂತೆಯಲ್ಲಿ ಬಿಂದಾಸ್ ವ್ಯಾಪಾರ ವಹಿವಾಟು ಜೋರಾಗಿ ನಡೆಯುತ್ತಿತ್ತು. ಈ ಬಗ್ಗೆ ಪಬ್ಲಿಕ್ ಟಿವಿಯಲ್ಲಿ ವರದಿ ಪ್ರಸಾರದ ಬಳಿಕ ಗಮನವರಿಸಿದ ನೆಲಮಂಗಲ ತಹಶೀಲ್ದಾರ್ ಮಂಜುನಾಥ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

    ಜನರಲ್ಲಿ ಕೊರೋನ ನಿಯಮ ಬಗ್ಗೆ ಜಾಗೃತಿ ಮೂಡಿಸಿ, ಕೊರೋನಾ ನಿಯಮಗಳನ್ನ ಪಾಲಿಸದ ಜನರಲ್ಲಿ ಜಾಗೃತಿ ಮೂಡಿಸಿ ವಾರ್ನ್ ಮಾಡಿದ್ದಾರೆ. ಜೊತೆಗೆ ಈ ವೇಳೆ ಮಾನವೀಯತೆ ಮೆರೆದ ನೆಲಮಂಗಲ ತಹಶಿಲ್ದಾರ್ ಮಂಜುನಾಥ್, ಸಂತೆ ಸ್ಥಳದಲ್ಲಿ ಭಿಕ್ಷೆ ಬೇಡುತ್ತಿದ್ದ ವೃದ್ಧೆಯ ನೆರವಿಗೆ ಮುಂದಾದರು. ಇದನ್ನೂ ಓದಿ: ನಮ್ಮ ತಂದೆಯ ಸಾವನ್ನು ರಾಜಕೀಯ ಮಾಡಬೇಡಿ: ಅಭಿಷೇಕ್ ಅಂಬರೀಶ್

    ಆ ವೃದ್ಧೆಗೆ ಮಕ್ಕಳು ಇಲ್ಲ, ಯಾರೂ ಇಲ್ಲ. ಊಟಕ್ಕೆ ತೊಂದರೆ ಸ್ವಾಮಿ ಎಂದು ತಹಶೀಲ್ದಾರ್ ಬಳಿ ವೃದ್ಧೆ ತನ್ನ ನೋವನ್ನ ವ್ಯಕ್ತಪಡಿಸಿದರು. ಈ ವೇಳೆ ಆಕೆಯ ನೆರವಿಗೆ ನಿಂತ ತಹಶೀಲ್ದಾರ್, ತಮ್ಮ ವಾಹನದಲ್ಲಿ ಕೂರಿಸಿ ಕಚೇರಿಗೆ ಕರೆದೊಯ್ಯುವ ಮೂಲಕ ನೆರವಿಗೆ ಮುಂದಾದ ಘಟನೆ ನಡೆಯಿತು. ರೇಷನ್ ಕಾರ್ಡ್, ವೃದ್ಧ್ಯಾಪ್ಯ ವೇತನ ಹಾಗೂ ಇನ್ನಿತರ ನೆರವು ನೀಡುವ ಬಗ್ಗೆ ಮಾಹಿತಿ ನೀಡಿದಾಗ ತಹಶೀಲ್ದಾರ್ ನೆರವಿಗೆ ವೃದ್ಧೆ ಕೈಮುಗಿದು ಹರಸಿದ್ದಾರೆ. ತಹಶೀಲ್ದಾರ್ ಅವರ ಈ ಕಾರ್ಯಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಅಂಬರೀಶ್ ಹೆಸರು ಹೇಳಲು ಯೋಗ್ಯತೆ ಇಲ್ಲದವರು ಅವ್ರ ಹೆಸರು ಬಳಸ್ತಿದ್ದೀರಿ: ಸುಮಲತಾ ಕಿಡಿ

  • ಮಂಡ್ಯದಲ್ಲಿ ಮಗಳ ಅದ್ಧೂರಿ ಮದ್ವೆ- ತಹಶೀಲ್ದಾರ್ ದಾಳಿ, ವಾಗ್ವಾದ, ಕಾರು ಸೀಜ್

    ಮಂಡ್ಯದಲ್ಲಿ ಮಗಳ ಅದ್ಧೂರಿ ಮದ್ವೆ- ತಹಶೀಲ್ದಾರ್ ದಾಳಿ, ವಾಗ್ವಾದ, ಕಾರು ಸೀಜ್

    ಮಂಡ್ಯ: ಲಾಕ್‍ಡೌನ್ ನಿಯಮ ಮೀರಿ ಅದ್ಧೂರಿಯಾಗಿ ಆಯೋಜನೆ ಮಾಡಿರುವ ಮದುವೆ ಕಾರ್ಯಕ್ರಮಕ್ಕೆ ತಹಶೀಲ್ದಾರ್ ದಾಳಿ ನಡೆಸಿದ ಘಟನೆ ಮಂಡ್ಯದಲ್ಲಿ ನಡೆದಿದೆ.

    ಮಂಡ್ಯ ತಾಲೂಕಿನ ಬಿ.ಹೊಸೂರು ಗ್ರಾಮದ ಹೊರ ಹೊಲಯದಲ್ಲಿರುವ ಅಂಬೆಗಾಲು ಕೃಷ್ಣ ದೇವಾಲಯದಲ್ಲಿ ಈ ಘಟನೆ ನಡೆದಿದೆ. ಮದುವೆ ಕಾರ್ಯಕ್ರಮದ ಮೇಲೆ ದಾಳಿ ಮಾಡಿದ ತಹಶೀಲ್ದಾರ್ ಮೇಲೆ ವಧು-ವರನ ಕುಟುಂಬಸ್ಥರು ಹಲ್ಲೆ ಯತ್ನ, ಅಸಭ್ಯವಾಗಿ ವರ್ತಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

    ಗ್ರಾ.ಪಂ ಸದಸ್ಯ ಮಹೇಶ್ ಎಂಬವರ ಮಗಳ ಮದುವೆಗೆ ಯಾವುದೇ ಅನುಮತಿ ಪಡೆಯದೆ ಲಾಕ್‍ಡೌನ್ ನಿಯಮ ಮೀರಿ ಕಾರ್ಯಕ್ರಮ ನಡೆಸಲಾಗುತ್ತಿತ್ತು. ಈ ಮದುವೆ ಕಾರ್ಯಕ್ರಮದಲ್ಲಿ ಸುಮಾರು 300ಕ್ಕೂ ಹೆಚ್ಚು ಜನರು ಭಾಗಿಯಾಗಿದ್ದರು. ಈ ವಿಚಾರ ತಿಳಿದು ಅಧಿಕಾರಿಗಳು ಮಂಡ್ಯ ತಹಶಿಲ್ದಾರ್ ಚಂದ್ರಶೇಖರ್ ಶಂಗಾಳಿ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ.

    ದಾಳಿ ವೇಳೆ ಅಧಿಕಾರಿಗಳು ಮದುವೆ ನಿಲ್ಲಿಸುವಂತೆ ಕುಟುಂಬಸ್ಥರಿಗೆ ಸೂಚನೆ ನೀಡಿದ್ದರು. ಈ ವೇಳೆ ಅಧಿಕಾರಿಗಳು ಕುಟುಂಬಸ್ಥರ ನಡುವೆ ಮಾತಿನ ಚಕಮಕಿ ನಡೆದಿದೆ. ವಾಗ್ವಾದದ ನಡುವೆ ತಹಶೀಲ್ದಾರ್ ಚಂದ್ರಶೇಖರ್ ಶಂಗಾಳಿ ಮೇಲೆ ಹಲ್ಲೆ ನಡೆಸಲು ಯತ್ನಿಸಲಾಗಿದೆ.

    ಅಧಿಕಾರಿಗಳು 3 ಕಾರುಗಳನ್ನ ಸೀಜ್ ಮಾಡಿದ್ದಾರೆ. ಅಲ್ಲದೆ ಪ್ರಕೃತಿ ವಿಕೋಪ ತಡೆ ಕಾಯ್ದೆ, ಸಾಂಕ್ರಾಮಿಕ ರೋಗಗಳ ಕಾಯ್ದೆ ಹಾಗೂ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಕಾಯ್ದೆ ಅಡಿ ದೂರು ದಾಖಲಾಗಿದೆ. ಈ ಸಂಬಂಧ ಕೆರಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಸರ್ಕಾರಿ ಗೃಹ ಕಚೇರಿಯಲ್ಲಿ ತಹಶೀಲ್ದಾರ್ ಪತ್ನಿ ಆತ್ಮಹತ್ಯೆ

    ಸರ್ಕಾರಿ ಗೃಹ ಕಚೇರಿಯಲ್ಲಿ ತಹಶೀಲ್ದಾರ್ ಪತ್ನಿ ಆತ್ಮಹತ್ಯೆ

    ಬಳ್ಳಾರಿ: ಗಣಿ ನಾಡು ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಹಶೀಲ್ದಾರ್ ಗೃಹ ಕಚೇರಿಯಲ್ಲಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಸಿರಗುಪ್ಪ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಸಿರಗುಪ್ಪ ತಹಶೀಲ್ದಾರ್ ಆಗಿದ್ದ ಸತೀಶ್ ಬಿ. ಕೂಡ್ಲಿಗಿ ಅವರ ಪತ್ನಿ ಶಂಕ್ರಮ್ಮ ಆತ್ಮಹತ್ಯೆ ಮಾಡಿಕೊಂಡವರು.

    ತಹಶೀಲ್ದಾರ್ ಸರ್ಕಾರಿ ಗೃಹ ಕಚೇರಿಯಲ್ಲಿ ನೇಣು ಬಿಗಿದುಕೊಂಡು ಶಂಕ್ರಮ್ಮ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸತೀಶ್ ಬಿ. ಕೂಡ್ಲಿಗಿ ಅವರು ಗ್ರಾಮ ಪಂಚಾಯ್ತಿ ಚುನಾವಣೆ ಕರ್ತವ್ಯದ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲಾಧಿಕಾರಿಗಳ ಕಚೇರಿಗೆ ವರ್ಗಾವಣೆಯಾಗಿದ್ದರು. ಆದರೆ ಸರ್ಕಾರಿ ನಿವಾಸವನ್ನು ಖಾಲಿ ಮಾಡಿರಲಿಲ್ಲ. ಹೀಗಾಗಿ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಮನೆಯಲ್ಲಿ ಇರುವ ಫ್ಯಾನ್ ಗೆ ಪತ್ನಿ ಶಂಕ್ರಮ್ಮಾ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಶಂಕ್ರಮ್ಮ ಅವರ ಆತ್ಮಹತ್ಯೆಗೆ ಕೌಟುಂಬಿಕ ಕಲಹವೇ ಕಾರಣ ಎಂದು ಹೇಳಲಾಗುತ್ತಿದೆ. ಕಳೆದ ಎರಡು ಮೂರು ವರ್ಷಗಳಿಂದ ಪತಿ ಪತ್ನಿ ನಡುವೆ ಆಗಾಗ ಜಗಳವಾಗುತ್ತಿದ್ದು, ಕಳೆದ ನಾಲ್ಕು ದಿನಗಳ ಹಿಂದೆಯೂ ಮನೆಯಲ್ಲಿ ಇಬ್ಬರು ಜಗಳ ಮಾಡಿಕೊಂಡಿದ್ದರು ಎನ್ನಲಾಗುತ್ತಿದೆ.

    ಈ ಸಂಬಂಧ ಸಿರಗುಪ್ಪಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕೋವಿಡ್ ನಿರ್ವಹಣೆಗೆ ಸರ್ಕಾರ ನೀಡಿದ್ದ ಲಕ್ಷ, ಲಕ್ಷ ಹಣವನ್ನೇ ಎಗರಿಸಿದ ಖದೀಮರು

    ಕೋವಿಡ್ ನಿರ್ವಹಣೆಗೆ ಸರ್ಕಾರ ನೀಡಿದ್ದ ಲಕ್ಷ, ಲಕ್ಷ ಹಣವನ್ನೇ ಎಗರಿಸಿದ ಖದೀಮರು

    – ತಹಶೀಲ್ದಾರ್ ಸಹಿ, ಮೊಹರು ನಕಲಿಸಿ ಹಣ ಲಪಟಾಯಿಸಿದ್ರು

    ಯಾದಗಿರಿ: ಸರ್ಕಾರ ಕೋವಿಡ್ ನಿರ್ವಹಣೆಯಲ್ಲಿ ವಿಫಲವಾಗಿದೆ ಅನ್ನೋ ಆರೋಪ ರಾಜ್ಯದಲ್ಲಿ ಎದ್ದಿರುವ ಬೆನ್ನಲ್ಲೇ ಸುರಪುರದಲ್ಲಿ ಕೋವಿಡ್ ನಿರ್ವಹಣೆಗಾಗಿ ಸರ್ಕಾರ ನೀಡಿದ್ದ ಲಕ್ಷ- ಲಕ್ಷ ಹಣವನ್ನೇ ಎಗರಿಸಲಾಗಿದೆ. ಕೋವಿಡ್ ಹಣಕ್ಕೆ ಕನ್ನ ಹಾಕಿರುವ ಖದೀಮರು, ನಕಲಿ ಸಹಿ ಮಾಡಿ ಅರ್ಧ ಕೋಟಿಗಿಂತ ಅಧಿಕ ಹಣ ಲೂಟಿ ಮಾಡಿದ್ದಾರೆ.

    ಯಾದಗಿರಿ ಜಿಲ್ಲೆಯ ಸುರಪುರ ತಹಶೀಲ್ದಾರ್ ನಿಂಗಣ್ಣ ಬಿರಾದರ ಸಹಿ ಮತ್ತು ಮೊಹರು ನಕಲು ಮಾಡಿ, ಸುರಪುರ ಪಟ್ಟಣದ ಎಕ್ಸಿಸ್ ಬ್ಯಾಂಕ್ ನಲ್ಲಿರುವ ತಹಶೀಲ್ದಾರ್ ಅವರ ಸರ್ಕಾರಿ ಖಾತೆಯಿಂದ 75,59,900 ರೂ. ಹಣ ದೋಚಲಾಗಿದೆ. ಶ್ರೀ ಮಹಾಲಕ್ಷ್ಮಿ ಎಂಟರ್ ಪ್ರೈಸಸ್ ಹೆಸರಿನ ಖಾತೆಗೆ ಚೆಕ್ ಹಣ ವರ್ಗಾವಣೆಗೊಂಡಿದೆ. ಶ್ರೀ ಮಹಾಲಕ್ಷ್ಮಿ ಎಂಟರ್ ಪ್ರೈಸಸ್ ಮಾಲೀಕೆ ಲಕ್ಷ್ಮೀ ಗಂಡ ರಾಜು ಕಟ್ಟಿಮನಿ ಎಂಬವರ ಖಾತೆಗೆ ಸಂಪೂರ್ಣ ಹಣ ವರ್ಗಾವಣೆಗೊಂಡಿದೆ. ಲಕ್ಷ್ಮೀ ಪತಿ ರಾಜು ಕಟ್ಟಿಮನಿ ತಹಶೀಲ್ದಾರ್ ಅವರ ಸಹಿ ಮತ್ತು ಮೊಹರು ನಕಲು ಮಾಡಿ ಹಣವನ್ನು ಲಪಟಾಯಿಸಿದ್ದಾರೆ.

    ವಂಚನೆಯಾದ ಬಗ್ಗೆ ತಹಶೀಲ್ದಾರ್ ಅವರು ಸುರಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ನೈಸರ್ಗಿಕ ವಿಕೋಪದಡಿ ಸರ್ಕಾರದಿಂದ ತಹಶೀಲ್ದಾರ್ ಖಾತೆಗೆ ಕೋಟ್ಯಂತರ ರೂ. ಹಣ ಜಮಾ ಆಗಿತ್ತು, ನೈಸರ್ಗಿಕ ವಿಕೋಪ ಹಾಗೂ ಕೋವಿಡ್ ನಿರ್ವಹಣೆಗೆ ತಹಶೀಲ್ದಾರ್ ಖಾತೆಗೆ ಜಿಲ್ಲಾಡಳಿತದಿಂದಲ್ಲೂ ಸಹ ಲಕ್ಷಾಂತರ ರೂಪಾಯಿ ಜಮಾ ಮಾಡಲಾಗಿತ್ತು.

    ಕಳೆದ ಹಲವು ದಿನಗಳ ಹಿಂದೆ ತಹಶೀಲ್ದಾರ್ ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟು, ಆಸ್ಪತ್ರೆ ಸೇರಿದ್ದರು. ಈ ವೇಳೆ ಅವರ ಸಹಿ ಮತ್ತು ಮೊಹರು ನಕಲು ಮಾಡಿ ಹಣವನ್ನು ದೋಚಲಾಗಿದೆ.

  • ಕ್ವಾರಂಟೈನ್‍ನಲ್ಲಿದ್ದ ವೈದ್ಯರಿಗೆ ಮನೆ ಖಾಲಿ ಮಾಡುವಂತೆ ಒತ್ತಡ

    ಕ್ವಾರಂಟೈನ್‍ನಲ್ಲಿದ್ದ ವೈದ್ಯರಿಗೆ ಮನೆ ಖಾಲಿ ಮಾಡುವಂತೆ ಒತ್ತಡ

    ಶಿವಮೊಗ್ಗ: ಕ್ವಾರಂಟೈನ್ ನಲ್ಲಿದ್ದ ವೈದ್ಯರಿಗೆ ಮನೆಯನ್ನು ಖಾಲಿ ಮಾಡುವಂತೆ ಮಾಲೀಕ ಒತ್ತಡ ಹೇರಿದ್ದು, ಈ ಹಿನ್ನೆಲೆಯಲ್ಲಿ ವೈದ್ಯರು ತಹಶೀಲ್ದಾರ್ ಗೆ ದೂರು ನೀಡಿದ್ದಾರೆ.

    ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಕೊರೊನಾ ಸೋಂಕಿತ ವ್ಯಕ್ತಿಗೆ ಚಿಕಿತ್ಸೆ ನೀಡಿದ್ದ ಕಾರಣಕ್ಕೆ ಖಾಸಗಿ ವೈದ್ಯರೊಬ್ಬರು ಸ್ವಯಂ ಹೋಂ ಕ್ವಾರಂಟೈನ್‍ಗೆ ಒಳಗಾಗಿದ್ದರು. ಕಳೆದ ಎರಡು ದಿನದ ಹಿಂದೆ ತೀರ್ಥಹಳ್ಳಿ ಮೂಲದ ವ್ಯಕ್ತಿಯೊಬ್ಬರಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿತ್ತು. ಕೊರೊನಾ ಸೋಂಕು ಕಾಣಿಸಿಕೊಂಡ ವ್ಯಕ್ತಿ ಪಾಸಿಟಿವ್ ದೃಢವಾಗುವ ಎರಡು ದಿನದ ಹಿಂದೆ ಖಾಸಗಿ ವೈದ್ಯರೊಬ್ಬರ ಬಳಿ ಶೀತ, ಕೆಮ್ಮು ಹಾಗೂ ಜ್ವರಕ್ಕೆ ಚಿಕಿತ್ಸೆ ಪಡೆದುಕೊಂಡಿದ್ದರು.

    ಇತ್ತ ಚಿಕಿತ್ಸೆ ನೀಡಿದ್ದ ವ್ಯಕ್ತಿಗೆ ಪಾಸಿಟಿವ್ ಪತ್ತೆಯಾದ ಕಾರಣಕ್ಕೆ ವೈದ್ಯ ಹಾಗೂ ಲ್ಯಾಬ್ ಟೆಕ್ನೀಷಿಯನ್ ಇಬ್ಬರು ಹೋಂ ಕ್ವಾರಂಟೈನ್ ಗೆ ಒಳಗಾಗಿದ್ದಾರೆ. ಖಾಸಗಿ ವೈದ್ಯರ ಮನೆಯಲ್ಲಿ ಚಿಕ್ಕ ಮಗು ಹಾಗೂ ವಯಸ್ಸಾದವರು ಇದ್ದಾರೆ. ಹೀಗಾಗಿ ವೈದ್ಯ ಲ್ಯಾಬ್ ಟೆಕ್ನೀಷಿಯನ್ ಬಾಡಿಗೆಗೆ ಇದ್ದ ಮನೆಯಲ್ಲಿಯೇ ಇಬ್ಬರು ಹೋಂ ಕ್ವಾರಂಟೈನ್ ಗೆ ಒಳಗಾಗಿದ್ದರು. ಈ ವಿಷಯ ತಿಳಿಯುತ್ತಿದ್ದಂತೆ ಮನೆಯ ಮಾಲೀಕ ನೀವು ನಮ್ಮ ಮನೆಯಲ್ಲಿ ಇರಬೇಡಿ. ಬೇರೆ ಎಲ್ಲಾದರೂ ಹೋಗಿ ಎಂದು ಒತ್ತಡ ಹಾಕಿದ್ದಾರೆ ಎಂದು ವೈದ್ಯ ಆರೋಪಿಸಿದ್ದಾರೆ.

    ಇದನ್ನೇ ಅವಮಾನ ಎಂದು ಭಾವಿಸಿದ ವೈದ್ಯ ಹಾಗೂ ಲ್ಯಾಬ್ ಟೆಕ್ನೀಷಿಯನ್ ತಹಶೀಲ್ದಾರ್ ಅವರಿಗೆ ಈ ಬಗ್ಗೆ ದೂರು ನೀಡಿದ್ದಾರೆ. ಅಲ್ಲದೇ ಖಾಸಗಿ ವೈದ್ಯ ಈ ಬಗ್ಗೆ ವೈದ್ಯಕೀಯ ಸಂಘಕ್ಕೆ ಕೂಡ ದೂರು ಸಲ್ಲಿಸಿದ್ದಾರೆ. ಖಾಸಗಿ ವೈದ್ಯರಿಗೂ ಮನೆ ಮಾಲೀಕರಿಗೂ ಸಂಬಂಧ ಇಲ್ಲ. ಮನೆಯನ್ನು ಬಾಡಿಗೆ ಪಡೆದಿದ್ದು ಲ್ಯಾಬ್ ಟೆಕ್ನೀಷಿಯನ್. ಆದರೆ ತನ್ನ ಮನೆಯಲ್ಲಿ ಸಣ್ಣ ಮಗು ವಯಸ್ಸಾದವರು ಇದ್ದಾರೆ ಎನ್ನುವ ಕಾರಣಕ್ಕೆ ಸ್ನೇಹಿತ ಬಾಡಿಗೆ ಪಡೆದಿದ್ದ ಮನೆಯಲ್ಲಿ ಕ್ವಾರಂಟೈನ್ ನಲ್ಲಿ ಇದ್ದದ್ದು ಎಷ್ಟು ಸರಿ. ಮನೆಯ ಮಾಲೀಕರಿಗೆ ಆತಂಕ ಆಗುವುದಿಲ್ಲವೇ. ಈ ಬಗ್ಗೆ ತಾಲೂಕು ಆಡಳಿತಕ್ಕೆ ತಿಳಿಸಿದ್ದರೆ ಕ್ವಾರಂಟೈನ್ ವ್ಯವಸ್ಥೆ ಮಾಡುತ್ತಿತ್ತು.

    ನಂತರ ತಹಶೀಲ್ದಾರ್ ಅವರು ಖಾಸಗಿ ವೈದ್ಯ ಹಾಗೂ ಮನೆ ಮಾಲೀಕರ ನಡುವೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಿದ್ದಾರೆ. ಅಲ್ಲದೇ ಖಾಸಗಿ ವೈದ್ಯ ಮತ್ತು ಲ್ಯಾಬ್ ಟೆಕ್ನೀಷಿಯನ್ ಗೆ ಬೇರೆಡೆ ಕ್ವಾರಂಟೈನ್ ವ್ಯವಸ್ಥೆ ಕಲ್ಪಿಸಿದ್ದಾರೆ.

  • ಪುಟ್ಟ ಮಕ್ಕಳೊಂದಿಗೆ ಹೊಲದಲ್ಲೇ ರಾತ್ರಿ ಕಳೆದ ಪ್ರವಾಸಿ ಕಾರ್ಮಿಕ ಕುಟುಂಬ

    ಪುಟ್ಟ ಮಕ್ಕಳೊಂದಿಗೆ ಹೊಲದಲ್ಲೇ ರಾತ್ರಿ ಕಳೆದ ಪ್ರವಾಸಿ ಕಾರ್ಮಿಕ ಕುಟುಂಬ

    – ಅಮಾನವೀಯತೆ ಪ್ರದರ್ಶಿಸಿದ ತಹಶೀಲ್ದಾರ್

    ಯಾದಗಿರಿ: ಮಹಾರಾಷ್ಟ್ರದಿಂದ ಬಂದ ಕೂಲಿ ಕಾರ್ಮಿಕನ ಕುಟುಂಬವೊಂದನ್ನು ಕ್ವಾರೆಂಟೈನ್ ಮಾಡದೆ, ಸುರಪುರ ತಹಶೀಲ್ದಾರ್ ನಿಂಗಣ್ಣ ಉದ್ಧಟತನ ತೋರಿದ್ದಾರೆ. ಪರಿಣಾಮ ಅತ್ತ ಊರಿಗೂ ಹೋಗದೆ ಇತ್ತ ಕ್ವಾರೆಂಟೈನ್ ಆಗದೇ ಕುಟುಂಬ ಜಮೀನೊಂದರಲ್ಲಿ ಇಡೀ ರಾತ್ರಿ ಕಳೆದ ಅಮಾನವೀಯ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಶೇಖಾಪುರದಲ್ಲಿ ನಡೆದಿದೆ.

    ಗುರುವಾರ ಮಹಾರಾಷ್ಟ್ರದಿಂದ ಬಂದ ಕೂಲಿ ಕಾರ್ಮಿಕ ಕುಟುಂಬವೊಂದು ಶೇಖಾಪುರ ಗ್ರಾಮಕ್ಕೆ ಬಂದಿದೆ. ಕುಟುಂಬದ ಸದಸ್ಯರು ಗ್ರಾಮಕ್ಕೆ ಬರುವುದಕ್ಕೆ ಗ್ರಾಮಸ್ಥರ ವಿರೋಧ ವ್ಯಕ್ತವಾಗಿದೆ. ಹೀಗಾಗಿ ಕಾರ್ಮಿಕ ಕುಟುಂಬ ತಹಶೀಲ್ದಾರ್ ನಿಂಗಣ್ಣನ್ನು ಭೇಟಿ ಮಾಡಿದೆ. ಸಂಜೆಯವರೆಗೆ ಕುಟುಂಬದ ಸದಸ್ಯರನ್ನು ತನ್ನ ಕಚೇರಿಯಲ್ಲಿ ಕಾಯಿಸಿದ ನಿಂಗಣ್ಣ ಬಳಿಕ ನಿಮಗೆ ಕ್ವಾರೆಂಟೈನ್ ಮಾಡಲು ಜಾಗವಿಲ್ಲ. ನಿಮ್ಮ ದಾರಿ ನೀವು ನೋಡಿ ಕೊಳ್ಳಿ ಅಂತ ಅಮಾನವೀಯತೆ ಪ್ರದರ್ಶನ ಮಾಡಿದ್ದಾರೆ.

    ಇದರಿಂದ ಬೇರೆ ದಾರಿಯಿಲ್ಲದೆ ಕಾರ್ಮಿಕರ ಕುಟುಂಬ ಚಿಕ್ಕ ಮಕ್ಕಳ ಜೊತೆಗೆ ಶಾಖಾಪುರ ಗ್ರಾಮದ ಸಮೀಪದ ಜಮೀನಿನಲ್ಲಿ ರಾತ್ರಿ ಕಳೆದಿದೆ. ಇದು ತಾಲೂಕಿನ ಪ್ರಜ್ಞಾವಂತ ನಾಗರಿಕ ಆಕ್ರೋಶಕ್ಕೆ ಕಾರಣವಾಗಿದೆ. ಸುರಪುರ ತಹಶೀಲ್ದಾರ್ ನಿಂಗಣ್ಣ ಉದ್ಧಟತನ ಇದೇ ಮೊದಲೇನಲ್ಲ, ಹಲವಾರು ಬಾರಿ ಈ ರೀತಿಯ ವರ್ತನೆ ತೋರಿದ್ದಾರೆ.

    ಸುರಪುರ ತಾಲೂಕಿನಲ್ಲಿ ಆರಂಭಿಸಿರುವ ಕ್ವಾರೆಂಟೈನ್ ಕೇಂದ್ರಗಳಲ್ಲಿ ಊಟವಿಲ್ಲದೆ ಜನ ಪರದಾಡುತ್ತಿದ್ದರು. ಈ ಬಗ್ಗೆ ತಹಶೀಲ್ದಾರ್ ಮಾತ್ರ ತಲೆ ಕೆಡಿಸಿಕೊಳ್ಳುತ್ತಿಲ್ಲ. ಇಂತಹ ಅಮಾನವೀಯ ತಹಶೀಲ್ದಾರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

  • ಪಡಿತರ ಅಕ್ಕಿ ದಂಧೆಕೋರರ ಬೆನ್ನಿಗೆ ನಿಂತ್ರಾ ಅಧಿಕಾರಿಗಳು?

    ಪಡಿತರ ಅಕ್ಕಿ ದಂಧೆಕೋರರ ಬೆನ್ನಿಗೆ ನಿಂತ್ರಾ ಅಧಿಕಾರಿಗಳು?

    – ಅನಾಮಿಕರು ಅಕ್ಕಿ ಸಂಗ್ರಹಿಸಿದ್ದಾರೆಂದು ಎಫ್‍ಐಆರ್

    ದಾವಣಗೆರೆ: ಪಡಿತರ ಅಕ್ಕಿ ದಂಧೆಕೋರರ ಬೆನ್ನಿಗೆ ಅಧಿಕಾರಿಗಳು ನಿಂತ್ರಾ ಅನ್ನೋ ಪ್ರಶ್ನೆಯೊಂದು ಮೂಡಿದೆ. ಪಡಿತರ ಅಕ್ಕಿ ಅಕ್ರಮ ದಾಸ್ತಾನು ಮೇಲೆ ದಾಳಿ ಮಾಡಿ ನಕಲಿ ಎಫ್‍ಐಆರ್ ಹಾಕಿದ್ದಾರೆಂಬ ಆರೋಪವೊಂದು ಅಧಿಕಾರಿಗಳ ವಿರುದ್ಧ ಕೇಳಿಬರುತ್ತಿದೆ.

     

    ದಾವಣಗೆರೆ ನಗರದ ಕೆ.ಆರ್ ರಸ್ತೆ ಬಳಿಯ ಗೋದಾಮಿನಲ್ಲಿ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಲಾಗಿದೆ. ಈ ವಿಚಾರ ತಿಳಿದ ಆಹಾರ ನಿರೀಕ್ಷಕ ರವಿ ಶಿವಮೂರ್ತಿ ಹಿಪ್ಪರಗಿ ಹಾಗೂ ತಹಶೀಲ್ದಾರ್ ಗಿರೀಶ್ ನೇತೃತ್ವದಲ್ಲಿ ದಾಳಿ ನಡೆದು ಸುಮಾರು 250 ಪ್ಯಾಕೇಟ್ ಪಡಿತರ ಅಕ್ಕಿ ವಶಕ್ಕೆ ಪಡೆದುಕೊಂಡಿದ್ದಾರೆ.

    ಗೋದಾಮಿನಲ್ಲಿ ಬೃಹತ್ ಪ್ರಮಾಣದ ಅಕ್ಕಿ ಸಿಕ್ಕರೂ ನಕಲಿ ಎಫ್‍ಐಆರ್ ದಾಖಲು ಮಾಡಿದ್ದಾರೆ. ಅಲ್ಲದೆ ಅನಾಮಿಕರು ಅಕ್ಕಿ ಸಂಗ್ರಹಿಸಿದ್ದಾರೆಂದು ಎಫ್‍ಐಆರ್ ದಾಖಲು ಮಾಡಿದ್ದಾರೆ. ಈ ಮೂಲಕ ಪಡಿತರ ಅಕ್ಕಿ ದಂಧೆಕೋರರಿಗೆ ಅಧಿಕಾರಿಗಲೇ ಸಾಥ್ ಕೊಡ್ತಿದ್ದಾರಾ ಎಂಬ ಅನುಮಾನವೊಂದು ಮೂಡಿದೆ.

    ಗೋದಾಮಿನ ಮಾಲೀಕನ ವಿರುದ್ಧ ಎಫ್‍ಐಆರ್ ಮಾಡೋದು ಬಿಟ್ಟು ಯಾರೋ ಅನಾಮಿಕ ಅಂತ ಎಫ್‍ಐಆರ್ ಮಾಡಿದ್ದಾರೆ. ಅಜಾದ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

    ತನಿಖೆ ನಡೆಸಿ ದಂಧೆಕೋರರ ವಿರುದ್ಧ ಎಫ್‍ಐಆರ್ ಮಾಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದು, ದಂಧೆಕೋರರ ಜೊತೆ ಶಾಮೀಲಾಗಿ ತಹಶೀಲ್ದಾರ್ ಅವರೇ ಡಮ್ಮಿ ಎಫ್‍ಐಆರ್ ಮಾಡಿದ್ರಾ?, ಅಲ್ಲದೆ ಡಮ್ಮಿ ಎಫ್‍ಐಆರ್ ಹಾಕಿ ಪ್ರಕರಣ ಮುಚ್ಚಿ ಹಾಕಲು ಯತ್ನ ನಡೀತಾ ಎಂಬ ಪ್ರಶ್ನೆಗಳು ಮೂಡಿವೆ.