Tag: teenager

  • ಖಾಸಗಿ ಫೋಟೋಗಳನ್ನು ವೈರಲ್ ಮಾಡುವುದಾಗಿ ಅಪ್ರಾಪ್ತೆಗೆ ಕಿರುಕುಳ ನೀಡುತ್ತಿದ್ದ ಯುವಕ ಅರೆಸ್ಟ್

    ಖಾಸಗಿ ಫೋಟೋಗಳನ್ನು ವೈರಲ್ ಮಾಡುವುದಾಗಿ ಅಪ್ರಾಪ್ತೆಗೆ ಕಿರುಕುಳ ನೀಡುತ್ತಿದ್ದ ಯುವಕ ಅರೆಸ್ಟ್

    ಮುಂಬೈ: ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿದ್ದ ಅಪ್ರಾಪ್ತೆಗೆ ಕಿರುಕುಳ ನೀಡುತ್ತಿದ್ದ ಆರೋಪದ ಮೇರೆಗೆ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

    ಯಶ್ ಭಂಡಾರೆ(19) ಬಂಧಿತ ಆರೋಪಿ. ಯಶ್ ಮುಂಬೈನ ಚೆಂಬೂರ್ ಪ್ರದೇಶದ ನಿವಾಸಿ. ಈತ ಅಪ್ರಾಪ್ತೆಗೆ ಇನ್‍ಸ್ಟಾಗ್ರಾಮ್‍ನಲ್ಲಿ ಪರಿಚಯವಾಗಿದ್ದ. ಪರಿಚಯದ ಮೂಲಕವೇ ಬಾಲಕಿಯ ಖಾಸಗಿ ಫೋಟೋಗಳನ್ನು ಪಡೆದುಕೊಂಡಿದ್ದ. ನಂತರ ಇನ್‍ಸ್ಟಾಗ್ರಾಮ್‍ನಲ್ಲಿ ನಕಲಿ ಖಾತೆ ಮಾಡಿ ಫೋಟೋಗಳನ್ನು ಶೇರ್ ಮಾಡುವುದಾಗಿ ಬೆದರಿಸಿ ಆಕೆಗೆ ಕಿರುಕುಳ ನೀಡುತ್ತಿದ್ದ.

    ಈ ಕುರಿತು ಬಾಲಕಿಯು ತನ್ನ ತಾಯಿಗೆ ತಿಳಿಸಿದ್ದಾಳೆ. ಬಾಲಕಿಯ ತಾಯಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸೈಬರ್ ಪೊಲೀಸ್ ಠಾಣೆಯಲ್ಲಿ ಯುವಕನ ವಿರುದ್ಧ ದೂರು ದಾಖಲಿಸಿದ್ದಾರೆ. ಪೊಲೀಸರು ತಂತ್ರಜ್ಞಾನದ ಸಹಾಯದಿಂದ ಯಶ್ ಮುಂಬೈನಲ್ಲಿರುವುದನ್ನು ಪತ್ತೆ ಹಚ್ಚಿದ್ದಾರೆ. ನಂತರ ಪೊಲೀಸರ ತಂಡವೊಂದು ಮುಂಬೈಗೆ ತೆರಳಿ ಯಶ್‍ನನ್ನು ಬಂಧಿಸಿದೆ. ಇದನ್ನೂ ಓದಿ: ಯಾರನ್ನಾದರೂ ಮುಟ್ಟಲಿ ನೋಡೋಣ, ನಾವು ಪಾದಯಾತ್ರೆ ಮಾಡಿಯೇ ಮಾಡುತ್ತೇವೆ: ಡಿಕೆಶಿ

    ಯಶ್ ಭಂಡಾರೆ ವಿರುದ್ಧ ಭಾರತೀಯ ದಂಡ ಸಂಹಿತೆ, ಲೈಂಗಿಕ ಅಪರಾಧಗಳಿಂದ ಮಕ್ಕಳ ತಡೆಗಟ್ಟುವಿಕೆ ಕಾಯ್ದೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.  ಇದನ್ನೂ ಓದಿ: ಅಂಡರ್‌ಗ್ರೌಂಡ್‌ನಲ್ಲಿ ಕಂತೆ ಕಂತೆ ನೋಟು ಬಚ್ಚಿಟ್ಟಿದ್ದ ಉದ್ಯಮಿ – ಇವನ ಆಸ್ತಿ ಬಗ್ಗೆ ಮಾಹಿತಿ ನೀಡಿದ್ರೆ 10,000 ಬಹುಮಾನ

  • ಅಪ್ರಾಪ್ತೆ ಕೂಡಿ ಹಾಕಿ 13 ತಿಂಗಳು ಸಾಮೂಹಿಕ ಅತ್ಯಾಚಾರ ಎಸಗಿ ವಿಕೃತಿ

    ಅಪ್ರಾಪ್ತೆ ಕೂಡಿ ಹಾಕಿ 13 ತಿಂಗಳು ಸಾಮೂಹಿಕ ಅತ್ಯಾಚಾರ ಎಸಗಿ ವಿಕೃತಿ

    – ಅಜ್ಞಾತ ಸ್ಥಳದಲ್ಲಿ ಬಾಲಕಿಯ ಬಂಧನ
    – ಕೆಲಸ ಕೊಡಿಸುವುದಾಗಿ ಬೇರೆ ಪುರುಷರಿಗೆ ಮಾರಾಟ

    ಲಕ್ನೋ: ಮನೆ ಸಹಾಯಕಳಾಗಿ ಕೆಲಸ ಕೊಡಿಸುವ ಆಮಿಷವೊಡ್ಡಿ 16 ವರ್ಷದ ಬಾಲಕಿಯನ್ನು ವಿವಿಧ ಪುರುಷರಿಗೆ ಮಾರಾಟ ಮಾಡಲಾಗಿದ್ದು, ಆಕೆಯನ್ನು ಸೆರೆಯಲ್ಲಿರಿಸಿ 13 ತಿಂಗಳು ನಿರಂತರ ಅತ್ಯಾಚಾರ ನಡೆಸಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

    ಬಾಲಕಿ ಸರೆಯಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಲಕ್ನೋದ ಮಹಾನಗರ ಪ್ರದೇಶದಲ್ಲಿ ಘಟನೆ ನಡೆದಿದೆ. ಬಾಲಕಿಯನ್ನು ಕೂಡಿ ಹಾಕಿ, ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಉಪ್ರಾತಾ ಕುಮಾರ್ (57), ಜೀತು ಕಶ್ಯಪ್(38), ಅಜಯ್ ಕುಮಾರ್ (47) ಹಾಗೂ ವರುಣ್ ತಿವಾರಿ(38)ಯನ್ನು ಬಂಧಿಸಿದ್ದೇವೆ. ಇತರ ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.

    ಘಟನೆ ಹೇಗೆ ನಡೆಯಿತು?
    ಬಾಲಕಿ ಮೂಲತಃ ನೇಪಾಳದವಳಾಗಿದ್ದು, ಕೆಲ ವರ್ಷಗಳ ಹಿಂದೆ ಕೆಲಸ ಅರಸಿ ಲಕ್ನೋಗೆ ಬಂದಿದ್ದಾಳೆ. ಬಾಲಕಿ ಪೋಷಕರು ಕಳೆದ ಐದು ವರ್ಷಗಳಿಂದ ಕಾರ್ಮಿಕರಾಗಿ ಕೆಲಸ ಮಾಡಿಕೊಂಡು ನಗರದಲ್ಲಿ ವಾಸವಿದ್ದಾರೆ. ನೇಪಾಳ ಮೂಲದ ಹಾಗೂ ಲಕ್ನೋದಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿರುವ ಉಪ್ರೆತಾ ಕುಮಾರ್ (57) ಮನೆ ಸಹಾಯಕಳಾಗಿ ಕೆಲಸ ಕೊಡಿಸುವ ಆಮಿಷವೊಡ್ಡಿ ಬಾಲಕಿಯನ್ನು ಕರೆದೊಯ್ದಿದ್ದಾನೆ. ಮನೆಯೊಂದಕ್ಕೆ ಬಾಲಕಿಯನ್ನು ಕರೆದೊಯ್ದು, ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಬಳಿಕ ಬಾಲಕಿಯನ್ನು ಬೇರೊಬ್ಬ ಪುರುಷರಿಗೆ ಮಾರಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    5 ತಿಂಗಳ ಗರ್ಭಿಣಿ: ಕೆಲ ದಿನಗಳ ಹಿಂದೆ ಬಾಲಕಿ ಸೆರೆಯಿಂದ ತಪ್ಪಿಸಿಕೊಂಡು ಬರುವಲ್ಲಿ ಯಶಸ್ವಿಯಾಗಿದ್ದು, ಬಳಿಕ ಪೋಷಕರ ಮನೆಗೆ ತೆರಳಿದ್ದಾಳೆ. ಹೊಟ್ಟೆ ನೋಯುತ್ತಿದೆ ಎಂದು ಈ ವೇಳೆ ತಿಳಿಸಿದ್ದಾಳೆ. ತಕ್ಷಣವೇ ತಾಯಿ ಆಸ್ಪತ್ರೆಗೆ ಕರೆದೊಯ್ದಿದ್ದು, ಬಾಲಕಿ 5 ತಿಂಗಳ ಗರ್ಭಿಣಿಯಾಗಿರುವುದಾಗಿ ವೈದ್ಯರು ಖಚಿತಪಡಿಸಿದ್ದಾರೆ. ಬಳಿಕ ಘಟನೆ ಕುರಿತು ಬಾಲಕಿ ತನ್ನ ತಾಯಿಯ ಬಳಿ ವಿವರಿಸಿದ್ದಾಳೆ. ನಂತರ ಪೊಲೀಸರಿಗೆ ದೂರು ನೀಡಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿಗಳನ್ನು ಬಂಧಿಸಿದ್ದಾರೆ.

     

  • ಅಸಾರಾಂಗೆ ಜೀವವಾಧಿ ಶಿಕ್ಷೆ, ನನಗೆ ನ್ಯಾಯ ಸಿಕ್ತು: ಸಂತ್ರಸ್ತೆಯ ತಂದೆ

    ಅಸಾರಾಂಗೆ ಜೀವವಾಧಿ ಶಿಕ್ಷೆ, ನನಗೆ ನ್ಯಾಯ ಸಿಕ್ತು: ಸಂತ್ರಸ್ತೆಯ ತಂದೆ

    ಜೈಪುರ: ಅಪ್ರಾಪ್ತ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪುಗೆ ಜೀವವಾಧಿ ಶಿಕ್ಷೆ ಪ್ರಕಟವಾಗುತ್ತಿದಂತೆ ಸಂತ್ರಸ್ತ ಬಾಲಕಿಯ ತಂದೆ ತನಗೆ ನ್ಯಾಯ ದೊರಕಿದೆ ಎಂದು ಹೇಳಿದ್ದಾರೆ.

    ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣವನ್ನು ಸತತ ಐದು ವರ್ಷ ವಿಚಾರಣೆ ನಡೆಸಿದ ನ್ಯಾಯಾಲಯ ಇಂದು ಅಸಾರಾಂ ಬಾಪು ಹಾಗೂ ಪ್ರಕರಣದ ಇತರೇ ಆರೋಪಿಗಳಾದ ಶಿಲ್ಪಿ ಹಾಗೂ ಶರದ್ ತಪ್ಪಿಸ್ಥರು ಎಂದು ತೀರ್ಪು ನೀಡಿತ್ತು. ಬಳಿಕ ಪ್ರಮುಖ ಆರೋಪಿ ಅಸಾರಾಂ ಬಾಪು ಗೆ ಪೋಸ್ಕೋ ಕಾಯ್ದೆ ಅಡಿ ಅತಿ ಹೆಚ್ಚಿನ ಶಿಕ್ಷೆಯಾದ ಜೀವವಾಧಿ ಶಿಕ್ಷೆ ನೀಡಿದೆ. ಪ್ರಕರಣದ ಮತ್ತಿಬ್ಬರು ಅಪರಾಧಿಗಳಿಗೆ ತಲಾ 20 ವರ್ಷ ಜೈಲು ಶಿಕ್ಷೆ ವಿಧಿಸಿದೆ.

    ಈ ವೇಳೆ ಪ್ರತಿಕ್ರಿಯೆ ನೀಡಿದ ಸಂತ್ರಸ್ಥೆಯ ತಂದೆ ನಮಗೆ ನ್ಯಾಯ ಸಿಕ್ಕಿದೆ. ಆರೋಪಿಗಳ ವಿರುದ್ಧ ಹೋರಾಟ ನಡೆಸಲು ಸಹಾಯ ಮಾಡಿದ ಎಲ್ಲರಿಗೂ ಋಣಿಯಾಗಿದ್ದೇನೆ. ಅಪರಾಧಿಗಳಿಗೆ ತಕ್ಕ ಶಿಕ್ಷೆ ಲಭಿಸಿದೆ. ಅಲ್ಲದೇ ಕೊಲೆ ಹಾಗೂ ಅಪಹರಣ ಪ್ರಕರಣಗಳಿಗೆ ಸಂಬಂಧಿಸಿದಂತೆ ಹೋರಾಟ ನಡೆಸುತ್ತಿರುವ ಇತರರಿಗೆ ನ್ಯಾಯ ದೊರೆಯುವ ವಿಶ್ವಾಸವಿದೆ. ತಮ್ಮ ಹೋರಾಟವನ್ನು ಮುಂದುವರೆಸುವುದಾಗಿ ಹೇಳಿದ್ದಾರೆ.

    ಈ ಹಿಂದೆ ಪ್ರಕರಣದ ವಿಚಾರಣೆ ವೇಳೆ 9 ಸಾಕ್ಷಿಗಳ ಮೇಲೆ ಹಲ್ಲೆ ನಡೆಸಲಾಗಿತ್ತು. ಈ ದಾಳಿಯಲ್ಲಿ ಮೂವರು ಸಾಕ್ಷಿಗಳು ಸಾವನ್ನಪ್ಪಿದರು. ಅಲ್ಲದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಅಸಾರಾಂ 12 ಬಾರಿ ಜಾಮೀನು ನೀಡುವಂತೆ ನ್ಯಾಯಾಲಯಕ್ಕೆ ತನ್ನ ವಕೀಲರ ಮೂಲಕ ಮನವಿ ಸಲ್ಲಿಸಿದ್ದ.

    ಸದ್ಯ ನ್ಯಾಯಾಲಯದ ತೀರ್ಪಿನ ಕುರಿತು ಪ್ರತಿಕ್ರಿಯೆ ನೀಡಿದ ಅಸಾರಾಂ ಪರ ವಕ್ತಾರ ನೀಲಂ ದುಬೇ, ಕೋರ್ಟ್ ತೀರ್ಪಿನ ಆದೇಶ ಪ್ರತಿ ಲಭಿಸಿದ ಬಳಿಕ ಮುಂದಿನ ಹೆಜ್ಜೆಯ ಕುರಿತು ತಿಳಿಸುತ್ತೆವೆ. ನಮಗೇ ನ್ಯಾಯಾಂಗ ಮೇಲೆ ನಂಬಿಕೆ ಇದೆ ಎಂದು ತಿಳಿಸಿದ್ದಾರೆ.

  • ಅಪ್ರಾಪ್ತೆ ಮೇಲೆ ಅತ್ಯಾಚಾರ ಪ್ರಕರಣ- ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪು ದೋಷಿ

    ಅಪ್ರಾಪ್ತೆ ಮೇಲೆ ಅತ್ಯಾಚಾರ ಪ್ರಕರಣ- ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪು ದೋಷಿ

    ಜೈಪುರ: 16 ವರ್ಷದ ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪು ದೋಷಿ ಎಂದು ಜೋಧ್‍ಪುರ ಕೋರ್ಟ್ ಮಹತ್ವದ ತೀರ್ಪು ನೀಡಿದೆ.

    ಐದು ವರ್ಷದ ಹಿಂದಿನ ಪ್ರಕರಣವನ್ನು ವಿಚಾರಣೆ ನಡೆಸಿದ್ದ ನ್ಯಾಯಾಧೀಶ ಮಧುಸೂದನ್ ಶರ್ಮಾ ಅವರು ಅಸಾರಾಂ ಬಾಪು, ಶಿಲ್ಪಿ ಹಾಗೂ ಶರದ್ ತಪ್ಪಿತಸ್ಥರು ಎಂದು ತೀರ್ಪು ನೀಡಿದ್ದಾರೆ. ಇನ್ನಿಬ್ಬರು ಆರೋಪಿಗಳಾದ ಶಿವ, ಪ್ರಕಾಶ್ ರನ್ನು ಖುಲಾಸೆಗೊಳಿಸಲಾಗಿದೆ. ಸದ್ಯ ದೇವಮಾನವನಿಗೆ ಜೀವವಾಧಿ ಶಿಕ್ಷೆ ಹಾಗೂ ಇನ್ನಿಬ್ಬರು ಅಪರಾಧಿಗಳಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

    ಕೇಸ್ ಹಿಸ್ಟರಿ:
    2013ರ ಆಗಸ್ಟ್ 15ರಂದು ಅಸಾರಾಂ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಛಿಂದ್ವಾರದಲ್ಲಿರುವ ಅಸಾರಾಂ ಆಶ್ರಮದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಉತ್ತರಪ್ರದೇಶದ ಷಹಜಹಾನ್‍ಪುರದ ಬಾಲಕಿ ದೂರು ನೀಡಿದ್ದಳು. ದೂರು ಆಧರಿಸಿ 2013ರ ಸೆಪ್ಟೆಂಬರ್ 1ರಂದು ಇಂದೋರ್‍ನಲ್ಲಿ ಅಸಾರಾಂ ನನ್ನು ಬಂಧಿಸಿ ಜೋಧಪುರಕ್ಕೆ ಕರೆತರಲಾಗಿತ್ತು. 2013ರ ಸೆಪ್ಟೆಂಬರ್ 2ರಿಂದ ಅಸಾರಾಂ ನ್ಯಾಯಾಂಗ ವಶದಲ್ಲಿದ್ದನು. ಪ್ರಕರಣಗಳ ಕುರಿತ ಅಂತಿಮ ವಿಚಾರಣೆಯನ್ನು ಏಪ್ರಿಲ್ 7ರಂದು ಪೂರ್ಣಗೊಳಿಸಿದ್ದ ನ್ಯಾಯಾಲಯ ಇಂದಿಗೆ ಆದೇಶ ಕಾಯ್ದಿರಿಸಿತ್ತು.

    ಸದ್ಯ ಬಾಬಾ ವಿರುದ್ಧ ತೀರ್ಪು ಬಂದಿರುವ ಹಿನ್ನೆಲೆಯಲ್ಲಿ ರಾಜಸ್ಥಾನ ಹಾಗೂ ಹರ್ಯಾಣ ಸಹಿತ ಮೂರು ರಾಜ್ಯಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗಬಹುದೆಂಬ ಅನುಮಾನದಿಂದ ಏಪ್ರಿಲ್ 30ರವರೆಗೆ ಜೋಧ್‍ಪುರದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

  • ತಮಾಷೆಗಾಗಿ ಅಪ್ರಾಪ್ತೆಯನ್ನು ಕಿಡ್ನ್ಯಾಪ್ ಮಾಡಿ, ಸಾಮೂಹಿಕ ಅತ್ಯಾಚಾರವೆಸಗಿ ಕೊಲೆಗೈದ್ರು!

    ತಮಾಷೆಗಾಗಿ ಅಪ್ರಾಪ್ತೆಯನ್ನು ಕಿಡ್ನ್ಯಾಪ್ ಮಾಡಿ, ಸಾಮೂಹಿಕ ಅತ್ಯಾಚಾರವೆಸಗಿ ಕೊಲೆಗೈದ್ರು!

    ಲಕ್ನೋ: ಉತ್ತರಪ್ರದೇಶದ ಬುಲಂದರ್ ಶಹರ್ ನಲ್ಲಿ ಜ. 2ರಂದು ನಡೆದ ಅಪಹರಣ ಮತ್ತು ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

    ಬಂಧಿತರನ್ನು ಜುಲ್ಫೀಕರ್ ಅಬ್ಬಸಿ ಹಾಗೂ ದಿಲ್ ಶದ್ ಎಂದು ಗುರುತಿಸಲಾಗಿದ್ದು, ಇವರಿಬ್ಬರೂ ಬುಲಂದರ್ ಶಹರ್ ನ ಸಿಕಂದ್ರಾಬಾದ್ ನಿವಾಸಿಗಳು ಎನ್ನಲಾಗಿದೆ. ಇನ್ನು ಘಟನೆಗೆ ಸಂಬಂಧಿಸಿದಂತೆ ಇನ್ನೊಬ್ಬ ಆರೋಪಿ ಇಸ್ರೈಲಿ ತಲೆ ಮರೆಸಿಕೊಂಡಿದ್ದು, ಪೊಲೀಸರು ಆತನಿಗಾಗಿ ಬಲೆ ಬೀಸಿದ್ದಾರೆ.

    ಆರೋಪಿಗಳು ಮೊದಲು ಸಿನಿಮಾ ನೋಡಿದ್ದಾರೆ. ನಂತರ ಮದ್ಯಪಾನ ಸೇವಿಸಿ, ಬಳಿಕ ಬುಲಂದರ್ ಶಹರ್ ರಾಷ್ಟ್ರೀಯ ಹೆದ್ದಾರಿ 91ರಲ್ಲಿ 16 ವರ್ಷದ ಬಾಲಕಿಯನ್ನು ಅಪಹರಿಸಿ, ಸಾಮೂಹಿಕ ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾರೆ. ಆರೋಪಿಗಳು ತಮಾಷೆಗಾಗಿ ಈ ಕೃತ್ಯ ಎಸಗಿದ್ದಾರೆಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

    ಬಾಲಕಿ ಟ್ಯೂಷನ್ ನಿಂದ ಮನೆಗೆ ಹಿಂದಿರುಗುತ್ತಿದ್ದ ಸಂದರ್ಭದಲ್ಲಿ ಆರೋಪಿಗಳು ಆಕೆಯನ್ನು ರಾಷ್ಟ್ರೀಯ ಹೆದ್ದಾರಿಯಲ್ಲಿ ತಮ್ಮ ಕಾರಿನೊಳಗೆ ಬಲವಂತವಾಗಿ ಎಳೆದುಕೊಂಡಿದ್ದಾರೆ. ಬಳಿಕೆ ಆಕೆಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರವೆಸಗಿದ್ದಾರೆ. ಅಲ್ಲದೇ ಕತ್ತು ಹಿಸುಕಿ ಕೊಲೆಗೈದಿದ್ದಾರೆ. ನಂತ್ರ ಶವವನನ್ನು ಗ್ರೇಟರ್ ನೋಯ್ಡಾದಲ್ಲಿರೋ ಬಿಲ್ ಅಕ್ಬರ್ ಪುರ್ ಗ್ರಾಮದಲ್ಲಿನ ಕಾಲುವೆಗೆ ಎಸೆದಿದ್ದಾರೆ ಎಂದು ಅವರು ವಿವರಿಸಿದ್ದಾರೆ.

    ಸದ್ಯ ಆರೋಪಿಗಳು ಕೃತ್ಯಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಬಾಲಕಿಯನ್ನು ಕಿಡ್ನಾಪ್ ಮಾಡಿ, ಸಾಮೂಹಿಕ ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾರೆ ಎಂದು ಹೇಳಿದಾಗ ಪೊಲೀಸರು ಇದೊಂದು ಲವ್ ಕೇಸ್ ಎಂದು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲು ನಿರಾಕರಿಸಿದ್ದರು ಎಂದು ಪೋಷಕರು ಆರೋಪಿಸಿದ್ದಾರೆ.

  • ಎದೆಗೆ ಕ್ರಿಕೆಟ್ ಬಾಲ್ ತಾಗಿ 17ರ ಬಾಲಕ ಸಾವು!

    ಎದೆಗೆ ಕ್ರಿಕೆಟ್ ಬಾಲ್ ತಾಗಿ 17ರ ಬಾಲಕ ಸಾವು!

    ಢಾಕಾ: ಆಟವಾಡುತ್ತಿದ್ದ ಸಂದರ್ಭದಲ್ಲಿ ಕ್ರಿಕೆಟ್ ಬಾಲ್ ತಾಗಿ 17 ವರ್ಷದ ಬಾಲಕನೊಬ್ಬ ಗಂಭೀರ ಗಾಯಗೊಂಡು ಮೃತಪಟ್ಟ ಘಟನೆ ಶನಿವಾರ ಬಾಂಗ್ಲಾದೇಶದಲ್ಲಿ ನಡೆದಿದೆ.

    ರಫಿಕುಲ್ ಇಸ್ಲಾಂ ಮೃತ ದುರ್ದೈವಿ ಬಾಲಕ. ಆಟವಾಡುತ್ತಿದ್ದ ವೇಳೆ ಎದೆಗೆ ಬಾಲ್ ಬಡಿದು ರಫಿಕುಲ್ ಮೃತಪಟ್ಟಿದ್ದಾನೆ ಎಂದು ಸ್ಥಳಿಯ ಪೊಲೀಸ್ ಅಧಿಕಾರಿ ಎನಾಮುಲ್ ಹಕ್ ತಿಳಿಸಿದ್ದಾರೆ.

    ಶುಕ್ರವಾರ ಬಾಲಕರ ಗುಂಪೊಂದು ಬಾಂಗ್ಲಾ ರಾಜಧಾನಿಯ ಬಲುರ್ ಮತ್ ಮೈದಾನದಲ್ಲಿ ಕ್ರಿಕೆಟ್ ಆಟವಾಡುತ್ತಿತ್ತು. ಈ ಆಟದಲ್ಲಿ ರಫಿಕುಲ್ ಅಂಪೈರ್ ಆಗಿದ್ದನು. ಅಂತೆಯೇ ಗುಂಪು ಆಟವಾಡುತ್ತಿದ್ದ ಸಂದರ್ಭದಲ್ಲಿ ಬಾಲೊಂದು ನೇರವಾಗಿ ರಫಿಕುಲ್ ಎದೆಗೆ ಬಂದು ಬಡಿದಿದೆ. ಪರಿಣಾಮ ರಫಿಕುಲ್ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ. ಕೂಡಲೇ ಬಾಲಕರ ಗುಂಪು ಆತನನ್ನು ಢಾಕಾದ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ದಾಖಲಿಸಿದ್ದರು. ಆದ್ರೆ ಶನಿವಾರ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

    ಕಡು ಬಡತನದ ಕುಟುಂಬದಲ್ಲಿ ಹುಟ್ಟಿದ ರಫಿಕುಲ್ ತಂದೆ-ತಾಯಿ ಕೂಲಿ ಕೆಸಕ್ಕೆ ಹೋಗಿ ಜೀವನ ನಡೆಸುತ್ತಿದ್ದಾರೆ. ಇದೀಗ ಮಗನನ್ನು ಕಳೆದುಕೊಂಡ ಬಡ ಕುಟುಂಬ ದುಃಖದಲ್ಲಿ ಮುಳುಗಿದೆ.

  • ಪೋಷಕರು ಮನೆಯಿಂದ ಹೊರಹಾಕಿದ್ದರಿಂದ ನಡುರಸ್ತೆಯಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಅಪ್ರಾಪ್ತೆ!

    ಪೋಷಕರು ಮನೆಯಿಂದ ಹೊರಹಾಕಿದ್ದರಿಂದ ನಡುರಸ್ತೆಯಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಅಪ್ರಾಪ್ತೆ!

    ರಾಂಚಿ: ಅಪ್ರಾಪ್ತೆಯೊಬ್ಬಳು ನಡುರಸ್ತೆಯಲ್ಲೇ ಮಗುವಿಗೆ ಜನ್ಮ ನೀಡಿದ ಮನಕಲಕುವ ಘಟನೆಯೊಂದು ಜಾರ್ಖಂಡ್ ನ ಖರ್ಸವನ್ ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ 17 ವರ್ಷದ ಹುಡುಗಿಯೊಬ್ಬಳು ತನ್ನದೇ ಗ್ರಾಮದ ವ್ಯಕ್ತಿ ಜೊತೆ ಸಂಬಂಧ ಹೊಂದಿದ್ದಳು. ಅಲ್ಲದೇ ಆ ವ್ಯಕ್ತಿಯಿಂದಾಗಿ ಆಕೆ ಗರ್ಭ ಧರಿಸಿದ್ದಳು. ಈ ವಿಚಾರ ಹುಡುಗಿಯ ಪೋಷಕರಿಗೆ ತಿಳಿದು, ನಮ್ಮ ಮರ್ಯಾದೆ ಹಾಳಾಗುತ್ತೆ ಅಂತ ಹೇಳಿ ಮನೆಯಿಂದ ಹೊರ ಹಾಕಿದ್ದರು. ಹೀಗಾಗಿ ಮನೆ, ಹೆತ್ತವರಿಂದ ದೂರವಾಗಿ ರಸ್ತೆ ಬದಿಯಲ್ಲೇ ವಾಸಿಸುತ್ತಿದ್ದಳು.

    ಕಳೆದ ನಾಲ್ಕು ತಿಂಗಳಿನಿಂದ ಈಕೆ ಬೀದಿ ಬೀದಿ ಅಲೆದಾಡುತ್ತಿರುವುದನ್ನು ನೋಡಿದ್ದೇವೆ ಅಂತ ಸ್ಥಳಿಯರು ಇದೀಗ ಹೇಳುತ್ತಿದ್ದಾರೆ. ಈಕೆ ಕಳೆದ ಕೆಲ ದಿನಗಳ ಹಿಂದೆ ಹೊಟ್ಟೆನೋವಿನಿಂದ ಬಳಲುತ್ತಿದ್ದು, ಸ್ಥಳೀಯ ಆಸ್ಪತ್ರೆಗೆ ತೆರಳಿದ್ದಳು. ಆದ್ರೆ ಆಕೆಯ ಜೊತೆ ಯಾರು ಇಲ್ಲವೆಂದು ಹೇಳಿ ಆಸ್ಪತ್ರೆ ಸಿಬ್ಬಂದಿ ಆಕೆಯನ್ನು ದಾಖಲು ಮಾಡಿಕೊಂಡಿರಲಿಲ್ಲ ಎನ್ನಲಾಗಿದೆ. ಹೀಗಾಗಿ ಆಕೆ ಮರುದಿನ ಮುಂಜಾನೆ ಸುಮಾರು 5 ಗಂಟೆ ಸುಮಾರಿಗೆ ಆಸ್ಪತ್ರೆಯಿಂದ 30 ಮೀಟರ್ ದೂರದಲ್ಲಿ ರಸ್ತೆಯಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಇದನ್ನು ಗಮನಿಸಿದ ಸ್ಥಳೀಯ ಮಹಿಳೆಯರು ಸ್ಥಳಕ್ಕೆ ದೌಡಾಯಿಸಿ ತಾಯಿ-ಮಗುವನ್ನು ರಕ್ತದ ಮಡುವಿನಿಂದ ರಕ್ಷಿಸಿದ್ದಾರೆ.

    ಸ್ಥಳೀಯ ನಿವಾಸಿ 50 ವರ್ಷದ ಓಂ ಪ್ರಕಾಶ್ ಶರ್ಮಾ ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿ, ನಾನು ಮುಂಜಾನೆ ಈ ರಸ್ತೆಯಲ್ಲಿ ಬರುತ್ತಿರುವಾಗ ಮಗು ಮತ್ತು ತಾಯಿ ಅಳುತ್ತಿರೋದನ್ನು ಗಮನಿಸಿದೆ. ಕೂಡಲೇ ಆ ರಸ್ತೆಯಲ್ಲಿ ವಾಹನಗಳು ಬರದಂದೆ ತಡೆದೆ. ಹೀಗೆ ಯಾವುದೇ ಅನಾಹುತವಾಗದಂತೆ ತಾಯಿ-ಮಗುವನ್ನು ರಕ್ಷಿಸಿದೆ. ಅಲ್ಲದೇ ಅಲ್ಲೇ ಇದ್ದ ಆಸ್ಪತ್ರೆಗೆ ತೆರಳಿ ತಾಯಿ-ಮಗುವನ್ನು ರಕ್ಷಿಸುವಂತೆ ಕೇಳಿಕೊಂಡೆ. ಆದ್ರೆ ಇದನ್ನು ಆಸ್ಪತ್ರೆ ಸಿಬ್ಬಂದಿ ತಿರಸ್ಕರಿಸಿದ್ದಾರೆ. ಅಲ್ಲದೇ ಆಕೆಯ ಜೊತೆ ಯಾರೊಬ್ಬರೂ ಇಲ್ಲ. ಹೀಗಾಗಿ ನಾವು ಆಕೆಯನ್ನು ಆಸ್ಪತ್ರೆಯಲ್ಲಿ ದಾಖಲಿಸಿಕೊಳ್ಳುವುದಿಲ್ಲ ಅಂತ ಹೇಳಿದ್ದಾರೆ. ಆ ಬಳಿಕ ಪೊಲೀಸರಿಗೆ ಮಾಹಿತಿ ರವಾನಿಸಿರುವುದಾಗಿ ಅವರು ಹೇಳಿದ್ರು. ಪೊಲೀಸರಿಗೆ ಮಾಹಿತಿ ನಿಡಿದ ಬಳಿಕ ಓಂ ಪ್ರಕಾಶ್ ಆಟೋ ವ್ಯವಸ್ಥೆ ಮಾಡಿ ಸ್ಥಳೀಯ ಮಹಿಳೆಯರು ಸೇರಿ ಅದೇ ಆಸ್ಪತ್ರೆಗೆ ಬಾಣಂತಿಯನ್ನು ದಾಖಲಿಸಿದರು.

    ಆಸ್ಪತ್ರೆಯ ವೈದ್ಯ ಡಾ.ಲಲಿತ್ ಕಶ್ಯಪ್, ಹುಡುಗಿಯ ಆರೋಪವನ್ನು ತಳ್ಳಿ ಹಾಕಿದ್ದು, ಆಸ್ಪತ್ರೆಯಲ್ಲಿ ಹುಡುಗಿ ಬಂದ ವೇಳೆ ಇಬ್ಬರು ನರ್ಸ್ ಗಳು ಮಾತ್ರ ಇದ್ದರು. ಅವರಿಬ್ಬರೂ ಬ್ಯುಸಿಯಾಗಿದ್ದರು. ಹೀಗಾಗಿ ಸ್ವಲ್ಪ ಸಮಯ ಕಾಯುವಂತೆ ಹೇಳಲಾಗಿತ್ತು. ಆದ್ರೆ ಆಕೆ ಆಸ್ಪತ್ರೆಯಿಂದ ಹೊರಹೋಗಿದ್ದಾಳೆ ಅಂತ ಅವರು ಹೇಳಿದ್ದಾರೆ.

    ಸದ್ಯ ತಾಯಿ-ಮಗುವನ್ನು ಜಾರ್ಖಂಡ್ ನ ಮಹಿಳಾ ಸುರಕ್ಷಾ ಗೃಹಕ್ಕೆ ಕರೆದೊಯ್ಯಲಾಗಿದ್ದು, ತಾಯಿ-ಮಗು ಆರೋಗ್ಯವಾಗಿದ್ದಾರೆ ಅಂತ ಅಲ್ಲಿನ ಮುಖ್ಯಸ್ಥ ಡಾ. ಲಖಿಂದ್ರ ಹನ್ಸದ್ ಹೇಳಿದ್ದಾರೆ.

  • 15ರ ಮಗಳ ಮೇಲೆ ಪೊಲೀಸಪ್ಪನಿಂದ ಲೈಂಗಿಕ ದೌರ್ಜನ್ಯ- ಶಾಕ್ ನಿಂದ ತಂದೆ ಸಾವು!

    15ರ ಮಗಳ ಮೇಲೆ ಪೊಲೀಸಪ್ಪನಿಂದ ಲೈಂಗಿಕ ದೌರ್ಜನ್ಯ- ಶಾಕ್ ನಿಂದ ತಂದೆ ಸಾವು!

    ಲಕ್ನೋ: ಪೊಲೀಸ್ ಪೇದೆಯೊಬ್ಬ ಅಪ್ತಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಘಟನೆಯೊಂದು ಉತ್ತರಪ್ರದೇಶದ ರೆಟೋ ಪ್ರದೇಶದಲ್ಲಿ ನಡೆದಿರುವ ಬಗ್ಗೆ ಇಂದು ಬೆಳಕಿಗೆ ಬಂದಿದೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪೊಲೀಸ್ ಧರಮ್(38) ನನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ ಕೆಲಸದಿಂದ ವಜಾ ಮಾಡಲಾಗಿದೆ.

    ಏನಿದು ಪ್ರಕರಣ?: ಶುಕ್ರವಾರ ರಾತ್ರಿ 15 ವರ್ಷದ ಬಾಲಕಿ ಮನೆಯಿಂದ ಹೊರಗಡೆ ಹೊಗಿದ್ದ ವೇಳೆ ಪೊಲೀಸಪ್ಪ ಲೈಂಗಿಕ ಕಿರುಕುಳ ನೀಡಿದ್ದಾನೆ. ಈ ವೇಳೆ ಬಾಲಕಿ ಕಿರುಚಿಕೊಂಡಿದ್ದಾಳೆ. ಬಾಲಕಿಯ ಧ್ವನಿ ಕೇಳುತ್ತಿದ್ದಂತೆಯೇ ಸಾರ್ವಜನಿಕರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಸಾರ್ವಜನಿಕರು ಜಮಾಯಿಸುತ್ತಿದ್ದಂತೆಯೇ ಇತ್ತ ಪೊಲೀಸಪ್ಪ ಅಲ್ಲಿಂದ ಕಾಲ್ಕಿತ್ತಿದ್ದಾನೆ ಅಂತ ಎಎಸ್‍ಪಿ ಮಾಧ್ಯಮಕ್ಕೆ ತಿಳಿಸಿದ್ದಾರೆ.

    ಈ ಘಟನೆಯ ಬಳಿಕ ಬಾಲಕಿಯ ತಂದೆ ಮೃತಪಟ್ಟಿದ್ದಾರೆ. ತನ್ನ ಮಗಳ ಮೇಲಿನ ಲೈಂಗಿಕ ದೌರ್ಜನ್ಯದ ಸುದ್ದಿ ತಿಳಿದು ಅವರು ಮೃತಪಟ್ಟಿದ್ದಾರೆ ಅಂತ ಕುಟುಂಬ ಆರೋಪಿಸುತ್ತಿದೆ.ಸದ್ಯ ಬಾಲಕಿಯ ಪೋಷಕರು ಪೊಲೀಸಪ್ಪನ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ.