Tag: teenage

  • ಅಪ್ರಾಪ್ತ ಸ್ನೇಹಿತರ ನಡುವೆ ಜಗಳ- ದವಡೆಗೆ ಚಾಕು ಹಾಕಿ ಹಲ್ಲೆ

    ಅಪ್ರಾಪ್ತ ಸ್ನೇಹಿತರ ನಡುವೆ ಜಗಳ- ದವಡೆಗೆ ಚಾಕು ಹಾಕಿ ಹಲ್ಲೆ

    ರಾಯಚೂರು: ನಗರದ ಜಹಿರಾಬಾದ್‍ನಲ್ಲಿ ಇಬ್ಬರು ಅಪ್ರಾಪ್ತರ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿ ಚಾಕು ಹಾಕುವ ಹಂತಕ್ಕೆ ತಿರುಗಿದ ಘಟನೆ ನಡೆದಿದೆ.

    ಮಾತಿಗೆ ಮಾತು ಬೆಳೆದು ಸ್ನೇಹಿತ ಎನ್ನುವುದನ್ನೇ ಮರೆತು ದವಡೆಗೆ ಚಾಕು ಹಾಕಿದ್ದಾನೆ. ರಾತ್ರಿ ವೇಳೆ ಕ್ಷುಲ್ಲಕ ಕಾರಣಕ್ಕೆ ಇಬ್ಬರ ನಡುವೆ ಶುರುವಾದ ಜಗಳ ಚಾಕು ಹಾಕುವ ಹಂತಕ್ಕೆ ತಿರುಗಿದೆ. ಹಲ್ಲೆಗೊಳಗಾದ 17 ವರ್ಷದ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದು, ರಾಯಚೂರಿನ ರಿಮ್ಸ್ ಆಸ್ಪತ್ರೆ (RIIMS Hospital) ಗೆ ದಾಖಲಾಗಿದ್ದಾನೆ.

    ಶಸ್ತ್ರಚಿಕಿತ್ಸೆ ಮೂಲಕ ವೈದ್ಯರು ಚಾಕು ಹೊರ ತೆಗೆದಿದ್ದಾರೆ. ಶಸ್ತ್ರಚಿಕಿತ್ಸೆ ಬಳಿಕ ಯುವಕ ಚೇತರಿಸಿಕೊಳ್ಳುತ್ತಿದ್ದಾನೆ. ಘಟನೆ ಹಿನ್ನೆಲೆ ಸದರಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಫೋನಲ್ಲಿ ಮಾತನಾಡುತ್ತಿದ್ದ ವಿವಾಹಿತೆಯ ಮೇಲೆ ಅತ್ಯಾಚಾರ ಯತ್ನ – ಆರೋಪಿಗಳಿಗಾಗಿ ಪೊಲೀಸರ ಶೋಧ

     

  • 50 ಸಾವಿರ ವಿದ್ಯುತ್ ಬಿಲ್ ಕಟ್ಟಲು ತನ್ನಿಬ್ಬರು ಅಪ್ರಾಪ್ತೆಯರನ್ನು ವೇಶ್ಯಾವಾಟಿಕೆಗೆ ದೂಡಿದ ತಾಯಿ!

    50 ಸಾವಿರ ವಿದ್ಯುತ್ ಬಿಲ್ ಕಟ್ಟಲು ತನ್ನಿಬ್ಬರು ಅಪ್ರಾಪ್ತೆಯರನ್ನು ವೇಶ್ಯಾವಾಟಿಕೆಗೆ ದೂಡಿದ ತಾಯಿ!

    ಮುಂಬೈ: ತನ್ನಿಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳನ್ನು ಸ್ವತಃ ತಾಯಿಯೇ ವೇಶ್ಯಾವಾಟಿಕೆ ದಂಧೆಗೆ ದೂಡಿದ ಪ್ರಕರಣವೊಂದನ್ನು ಮುಂಬೈನ ಖೆರ್ ವಾಡಿ ಪೊಲೀಸರು ಬೇಧಿಸಿದ್ದಾರೆ.

    ಇಲ್ಲಿನ ಎಸ್‍ಆರ್ ಎ ಕಟ್ಟಡದ ನಿವಾಸಿಯಾಗಿರೋ ಮಹಿಳೆ, ಸುಮಾರು 50,000 ವಿದ್ಯುತ್ ಬಿಲ್ ಕಟ್ಟಲು ಸಾಧ್ಯವಾಗದೇ ತನ್ನ ಇಬ್ಬರು ಹೆಣ್ಣು ಮಕ್ಕಳನ್ನು ವೇಶ್ಯಾವಾಟಿಕೆ ಅಡ್ಡೆಗೆ ದೂಡಲು ಪ್ರಯತ್ನಿಸಿದ್ದಾಳೆ. ಸದ್ಯ ಈಕೆ ಪೊಲೀಸರ ಅತಿಥಿಯಾಗಿದ್ದಾಳೆ.

    ಘಟನೆಯ ವಿವರ:
    ಖೆರ್ ವಾಡಿ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಜಗದೀಶ್ ಎಂಬವರಿಗೆ ಬಾಂದ್ರಾದಲ್ಲಿ ಮಹಿಳೆಯೊಬ್ಬರು ವೇಶ್ಯಾವಾಟಿಕೆ ನಡೆಸುತ್ತಿರುವ ಬಗ್ಗೆ ಮಾಹಿತಿ ತಿಳಿಯುತ್ತದೆ. ಈ ವಿಚಾರ ತಿಳಿದ ಕೂಡಲೇ ಪ್ರಕರಣವನ್ನು ಬೇಧಿಸಲು 11 ಮಂದಿ ಸಿಬ್ಬಂದಿಯ ತಂಡವೊಂದನ್ನು ರಚಿಸಿದ್ದಾರೆ. ಹೀಗಾಗಿ ಸೋಮವಾರ ಮಾಹಿತಿ ನೀಡಿದ ವ್ಯಕ್ತಿ ಸೇರಿ 12 ಜನರ ತಂಡ ಮಹಿಳೆಗೆ ಕರೆ ಮಾಡಿ 4 ಹೆಣ್ಣು ಮಕ್ಕಳನ್ನು ಸಪ್ಲೈ ಮಾಡುವಂತೆ ಹೇಳಿದ್ದಾರೆ. ಈ ವೇಳೆ ಮಹಿಳೆ 4 ಮಂದಿಗೆ 50,000 ಕೊಡುವಂತೆ ಕೇಳಿದ್ದಾಳೆ. ಪೊಲೀಸರಿಗೆ ಮಾಹಿತಿ ನೀಡಿದ ವ್ಯಕ್ತಿಯೇ ಈ ಕುರಿತು ಮಹಿಳೆ ಜೊತೆ ಮಾತುಕತೆ ನಡೆಸಿ 40,000 ಕೊಡುವುದಾಗಿ ಒಪ್ಪಿದ್ದಾರೆ.

     

    ಇತ್ತ ಸಾಯಿ ಪ್ರಸಾದ್ ಹೊಟೇಲಿನಲ್ಲಿ ತನ್ನನ್ನು ಭೇಟಿಯಾಗುವಂತೆ ಮಹಿಳೆ ವ್ಯಕ್ತಿಗೆ ತಿಳಿಸಿದ್ದಾಳೆ. ಮೊದಲೇ ಪ್ಲಾನ್ ಮಾಡಿದಂತೆ ಪೊಲೀಸರ ತಂಡ ಸಮವಸ್ತ್ರ ಧರಿಸದೇ ಸಾಮಾನ್ಯ ಉಡುಪಿನಲ್ಲಿ ಬಂದು ಹೊಟೇಲಿನಲ್ಲಿ ಮಹಿಳೆಗಾಗಿ ಕಾದು ಕುಳಿತಿದ್ದರು. ಇಬ್ಬರು ಯುವತಿಯರ ಜೊತೆ ಮಹಿಳೆ ಬಂದೇ ಬಿಟ್ಟಳು. ಹಾಗೆಯೇ ವ್ಯಕ್ತಿ ಜೊತೆ ಅವರನ್ನು ಕರೆದುಕೊಂಡು ಹೋಗುವಂತೆ ಸೂಚಿಸಿದ್ದಾಳೆ.

    ಇದೇ ವೇಳೆ ಮಹಿಳೆ ಮುಂಚಿತವಾಗಿ ವ್ಯಕ್ತಿಯಲ್ಲಿ 10,000 ಕೊಡುವಂತೆ ಕೇಳಿದ್ದಾಳೆ. ಈ ಸಂದರ್ಭದಲ್ಲಿ ಸಾಮಾನ್ಯ ಧಿರಿಸಿನಲ್ಲಿ ಬಂದು ಕಾದು ಕುಳಿತಿದ್ದ ತಂಡ ಮಹಿಳೆಯನ್ನು ಹಿಡಿದಿದ್ದಾರೆ. ಹಾಗೆಯೇ ಮಹಿಳೆಯ ಜೊತೆ ಇದ್ದ ಇಬ್ಬರು ಹೆಣ್ಣು ಮಕ್ಕಳನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದಾರೆ.

    ಇಬ್ಬರು ಹೆಣ್ಣು ಮಕ್ಕಳ ವಯಸ್ಸು 15 ಮತ್ತು 19 ಆಗಿತ್ತು. ಈ ವೇಳೆ ಅದರಲ್ಲಿ ಓರ್ವ ಹೆಣ್ಣು ಮಗಳು ಸತ್ಯ ಬಾಯ್ಬಿಟ್ಟಿದ್ದಾಳೆ. 50,000 ಕರೆಂಟ್ ಬಿಲ್ ಕಟ್ಟಲು ಸಾಧ್ಯವಾಗದಿದ್ದರಿಂದ ತಾಯಿ ಈ ಕೆಲಸಕ್ಕೆ ನಮ್ಮನ್ನು ತಳ್ಳಿರುವುದಾಗಿ ಹೇಳಿದ್ದಾಳೆ. ಇತ್ತ ಹೆಣ್ಮಕ್ಕಳ ತಾಯಿ ಮಾತ್ರ ತನ್ನ ಮೇಲಿನ ಆರೋಪವನ್ನು ತಳ್ಳಿ ಹಾಕಿದ್ದಾಳೆ. ಹೆಣ್ಣು ಮಕ್ಕಳನ್ನು ಈ ಕೆಲಸಕ್ಕೆ ದೂಡಬೇಡ ಅಂತ ನಾನು ಅನೇಕ ಬಾರಿಗೆ ಪತ್ನಿಗೆ ಹೇಳಿದ್ದೆ. ಆದ್ರೆ ಆಕೆ ನನ್ನ ಮಾತು ಕೇಳಲಿಲ್ಲ ಅಂತ ಹೆಣ್ಣು ಮಕ್ಕಳ ತಂದೆ ತಿಳಿಸಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

    ಸದ್ಯ ಆರೋಪಿ ಮಹಿಳೆ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

  • ಕೋಲಾರದಲ್ಲಿ ಅಪ್ರಾಪ್ತ ಮಗಳ ಮೇಲೆ ತಂದೆಯಿಂದಲೇ ನಿರಂತರ ಅತ್ಯಾಚಾರ

    ಕೋಲಾರದಲ್ಲಿ ಅಪ್ರಾಪ್ತ ಮಗಳ ಮೇಲೆ ತಂದೆಯಿಂದಲೇ ನಿರಂತರ ಅತ್ಯಾಚಾರ

    ಕೋಲಾರ: ತಂದೆಯೇ ತನ್ನ ಅಪ್ರಾಪ್ತ ಮಗಳ ಮೇಲೆ ನಿರಂತರವಾಗಿ ಅತ್ಯಾಚಾರವೆಸಗಿರುವ ಅಮಾನವೀಯ ಘಟನೆಯೊಂದು ಕೋಲಾರದಲ್ಲಿ ಬೆಳಕಿಗೆ ಬಂದಿದೆ.

    ಬಂಗಾರಪೇಟೆ ತಾಲೂಕು ಬೇತಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು. 36 ವರ್ಷದ ತಂದೆ ಆರೋಪಿ ಭಾಸ್ಕರ್‍ನನ್ನ ಪೊಲೀಸರು ಬಂಧಿಸಿ ಪ್ರಕರಣ ದಾಖಲು ಮಾಡಿದ್ದಾರೆ.

    ತನ್ನ 14 ವರ್ಷದ ಮಗಳ ಮೇಲೆ ಕಳೆದ ಆರು ತಿಂಗಳಿಂದ ಮೂರ್ನಾಲ್ಕು ಬಾರಿ ತನ್ನ ಮುಂದೆ ಅತ್ಯಾಚಾರ ಮಾಡಿದ್ದಾನೆ. ಜೊತೆಗೆ ಭಾನುವಾರ ಕೂಡ ಅತ್ಯಾಚಾರಕ್ಕೆ ಯತ್ನಿಸಿದ, ಹಾಗಾಗಿ ಮನನೊಂದು ದೂರು ನೀಡಿದ್ದೇನೆ ಎಂದು ಬಾಲಕಿ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ.

    ನನಗೆ ಇಂತಹ ನೀಚ ಗಂಡ ಬೇಡ, ಮಕ್ಕಳು ಮಾತ್ರ ಸಾಕು ಎಂದು ಪೊಲೀಸರಿಗೆ ನೀಡಿರುವ ನೀಡಿರುವ ದೂರಿನಲ್ಲಿ ನೊಂದ ತಾಯಿ ನೋವಿನಿಂದ ಹೇಳಿಕೊಂಡಿದ್ದಾರೆ.

    ಬೇತಮಂಗಲ ಪೊಲೀಸರು ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.

  • 14 ವರ್ಷಕ್ಕೆ ತಾಯಿಯಾದ ಬಾಲಕಿ: ಇಬ್ಬರು ಆರೋಪಿಗಳ ಬಂಧನ

    14 ವರ್ಷಕ್ಕೆ ತಾಯಿಯಾದ ಬಾಲಕಿ: ಇಬ್ಬರು ಆರೋಪಿಗಳ ಬಂಧನ

    ರಾಯಚೂರು: ಮಾನ್ವಿ ತಾಲೂಕಿನ ಸಿರವಾರ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮವೊಂದರಲ್ಲಿ 14 ವರ್ಷದ ಬಾಲಕಿ ಕಾಮುಕರ ಕಾಟಕ್ಕೆ ಏನೂ ಅರಿಯದ ವಯಸ್ಸಿನಲ್ಲಿ ತಾಯಿಯಾಗಿದ್ದಾಳೆ.

    ಬಾಲಕಿಗೆ ಎಂಟು ತಿಂಗಳು ತುಂಬಿದಾಗ ಆಕೆಯ ಮೇಲೆ ನಿರಂತರ ಅತ್ಯಾಚಾರ ನಡೆದಿರುವುದು ಬಯಲಾಗಿದೆ. ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಹೆರಿಗೆಯಾಗಿದ್ದು ಗಂಡು ಮಗು ಜನಿಸಿದೆ. ಬಾಲಕಿ ಹಾಗೂ ಶಿಶು ಆರೋಗ್ಯವಾಗಿದ್ದಾರೆ. ಆದ್ರೆ ಈಗ ಬಾಲಕಿಯ ಪೋಷಕರು ಮಗಳು ಬೇಕಿಲ್ಲ, ಮೊಮ್ಮಗನೂ ಬೇಕಿಲ್ಲ ಅಂತ ದೂರವಿಟ್ಟಿದ್ದಾರೆ. ಬಾಲಕಿ ಮಾತ್ರ ತನ್ನ ಮಗು ಬೇಕು ಅಂತ ಹಂಬಲಿಸುತ್ತಿದ್ದಾಳೆ.

    ಶಿಶು ಅಭಿವೃದ್ಧಿ ಯೋಜನೆ ಹಾಗೂ ಮಕ್ಕಳ ರಕ್ಷಣಾ ಸಮಿತಿ ಅಧಿಕಾರಿಗಳು ತಾಯಿ ಮಗುವನ್ನ ರಾಯಚೂರಿನ ಬಾಲಮಂದಿರಕ್ಕೆ ಸೇರಿಸಿದ್ದಾರೆ. ರಾಯಚೂರಿನಲ್ಲಿ ತಾಯಿ-ಮಕ್ಕಳ ಆರೈಕೆ ಕೇಂದ್ರವಿಲ್ಲದ ಕಾರಣ ಬಳ್ಳಾರಿ ಅಥವಾ ಬಾಗಲಕೋಟಿಗೆ ಬಾಲಕಿ ಹಾಗೂ ಶಿಶುವನ್ನ ಕಳುಹಿಸುವುದಾಗಿ ಮಕ್ಕಳ ರಕ್ಷಣಾ ಸಮಿತಿ ಅಧ್ಯಕ್ಷೆ ಡಾ.ಜಯಶ್ರಿ ಚನ್ನಾಳ ಹೇಳಿದ್ದಾರೆ.

    ಮದುವೆಯಾಗುವುದಾಗಿ ಪುಸಲಾಯಿಸಿ ಗ್ರಾಮದ ವಿರೇಶ್ ಹಾಗೂ ಶಿವರಾಜ್ ಎಂಬವರು ಕಳೆದ ಒಂದು ವರ್ಷದಿಂದ ನಿರಂತರವಾಗಿ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾರೆ. ಬಾಲಕಿ ಗರ್ಭಿಣಿಯಾದಾಗಲೇ ಅತ್ಯಾಚಾರ ನಡೆದಿರುವುದು ಬೆಳಕಿಗೆ ಬಂದಿದೆ. ಬಾಲಕಿಯ ಗರ್ಭ ತೆಗೆಸಲು ಪೋಷಕರು ಪ್ರಯತ್ನಿಸಿದಾಗ ಎಂಟು ತಿಂಗಳು ತುಂಬಿರುವುದು ತಾಯಿ ಜೀವಕ್ಕೆ ಕುತ್ತು ತರಬಹುದು ಅಂತ ಹೆದರಿ ಸುಮ್ಮನಾಗಿದ್ದಾರೆ.

    ಇಬ್ಬರು ಆರೋಪಿಗಳ ವಿರುದ್ಧ ಏಪ್ರಿಲ್ 2 ರಂದು ಸಿರವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.