Tag: teen

  • ಮಾಲ್‌ನಲ್ಲಿ ಚಾಕಲೇಟ್ ಕದ್ದ ವೀಡಿಯೋ ವೈರಲ್ ಆಗಿದ್ದಕ್ಕೆ ಮನನೊಂದು ಯುವತಿ ಆತ್ಮಹತ್ಯೆ

    ಮಾಲ್‌ನಲ್ಲಿ ಚಾಕಲೇಟ್ ಕದ್ದ ವೀಡಿಯೋ ವೈರಲ್ ಆಗಿದ್ದಕ್ಕೆ ಮನನೊಂದು ಯುವತಿ ಆತ್ಮಹತ್ಯೆ

    ಕೋಲ್ಕತ್ತಾ: ಕಾಲೇಜು ಯುವತಿಯೊಬ್ಬಳು (Teen) ಮಾಲ್‌ವೊಂದರಲ್ಲಿ (Mall) ಚಾಕಲೇಟ್ (Chocolate) ಕದ್ದಿರುವ ವೀಡಿಯೋ ವೈರಲ್ ಆಗಿರುವುದಕ್ಕೆ ಮನನೊಂದು ಆತ್ಮಹತ್ಯೆಗೆ (Suicide) ಶರಣಾಗಿರುವ ದಾರುಣ ಘಟನೆ ಪಶ್ಚಿಮ ಬಂಗಾಳದ (West Bengal) ಅಲಿಪುರ್‌ದವಾರ್ ಜಿಲ್ಲೆಯಲ್ಲಿ ನಡೆದಿದೆ.

    ವರದಿಗಳ ಪ್ರಕಾರ ಯುವತಿ ಜೈಗಾಂವ್‌ನ ಶಾಪಿಂಗ್ ಮಾಲ್‌ನಲ್ಲಿ ಚಾಕಲೇಟ್ ಕದ್ದಿದ್ದಾಳೆ. ಯುವತಿಯ ಗಮನಕ್ಕೆ ಬಾರದಂತೆ ಅದರ ವೀಡಿಯೋವನ್ನು ಅಲ್ಲಿ ಕೆಲಸ ಮಾಡುವವರು ಚಿತ್ರೀಕರಿಸಿದ್ದಾರೆ. ಯುವತಿ ಚಾಕಲೇಟ್ ಕದ್ದ ಬಳಿಕ ಅಂಗಡಿ ಮಾಲೀಕರ ಕೈಯಲ್ಲಿ ಆಕೆ ಸಿಕ್ಕಿ ಬಿದ್ದಿದ್ದಾಳೆ. ಈ ವೇಳೆ ಆಕೆ ಕ್ಷಮೆಯನ್ನೂ ಕೇಳಿದ್ದಾಳೆ.

    ಬಳಿಕ ಆಕೆ ಚಾಕಲೇಟ್ ಕದ್ದಿರುವ ವೀಡಿಯೋವನ್ನು ಚಿತ್ರೀಕರಿಸಿರುವ ವಿಚಾರ ತಿಳಿದು, ಅದನ್ನು ಎಲ್ಲಿಯೂ ಹಂಚಿಕೊಳ್ಳದAತೆ ಮನವಿ ಮಾಡಿಕೊಂಡಿದ್ದಾಳೆ. ಆದರೆ ಬಳಿಕ ವೀಡಿಯೋ ಸ್ಥಳೀಯವಾಗಿ ವೈರಲ್ ಆಗಿದೆ. ಇದರಿಂದ ಮನನೊಂದ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಇದನ್ನೂ ಓದಿ: ಬ್ರೇಕಪ್ ಮಾಡಿದಳೆಂದು ಗರ್ಲ್‍ಫ್ರೆಂಡ್ ಕೊಲೆಗೈದ ವಿವಾಹಿತ!

    ಈ ಬಗ್ಗೆ ಕಂಬನಿ ಹಾಕಿರುವ ಯುವತಿಯ ಕುಟುಂಬ, ಆಕೆ ತಪ್ಪು ಮಾಡಿದ್ದಾಳೆ ನಿಜ. ಆದರೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಬಳಿಕ ಅವಳು ಚಾಕಲೇಟ್‌ಗೆ ಪಾವತಿಯನ್ನೂ ಮಾಡಿದ್ದಾಳೆ. ಇದಾದ ಬಳಿಕವೂ ಆಕೆಯನ್ನು ನಿಂದಿಸಿದ್ದಾರೆ. ಇಷ್ಟು ಮಾತ್ರವಲ್ಲದೇ ಆಕೆಯ ವೀಡಿಯೋವನ್ನು ವೈರಲ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

    ಘಟನೆಯ ಬಳಿಕ ಆಕೆ ತುಂಬಾ ಒತ್ತಡದಲ್ಲಿದ್ದಳು. ಇದರಿಂದ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆ ವೀಡಿಯೋವನ್ನು ಏಕೆ ವೈರಲ್ ಮಾಡಬೇಕಿತ್ತು? ಆತ್ಮಹತ್ಯೆ ಮಾಡಿಕೊಂಡಿರುವ ಮಗಳನ್ನು ಮತ್ತೆ ಬದುಕಿಸಲು ಸಾಧ್ಯವೆ? ಈ ಬಗ್ಗೆ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

    ಘಟನೆಯ ಬಳಿಕ ಕ್ರೋಧಗೊಂಡ ಜನರು ಸೋಮವಾರ ಶಾಪಿಂಗ್ ಮಾಲ್ ಮುಂದೆ ಜಮಾಯಿಸಿ, ಪ್ರತಿಭಟನೆ ನಡೆಸಿದ್ದಾರೆ. ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ನಡೆಸುತ್ತಿದ್ದಾರೆ. ಆದರೆ ಇಲ್ಲಿಯವರೆಗೆ ಯಾರನ್ನೂ ಬಂಧಿಸಲಾಗಿಲ್ಲ. ಘಟನೆಯ ಬಗ್ಗೆ ಶಾಪಿಂಗ್ ಮಾಲ್‌ನ ಅಧಿಕಾರಿಗಳೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದನ್ನೂ ಓದಿ: ಕಣ್ಣಾಮುಚ್ಚಾಲೆ ಆಡುವಾಗ ತಲೆಗೆ ಲಿಫ್ಟ್ ಬಡಿದು ಬಾಲಕಿ ಸಾವು

    Live Tv
    [brid partner=56869869 player=32851 video=960834 autoplay=true]

  • ಯುವತಿಯ ಸ್ಕೂಟಿ ನಿಲ್ಲಿಸಿ ಚೇಡಿಸಲು ಮುಂದಾಗಿದ್ದ ಯುವಕನ ಸ್ಥಿತಿ ಹಿಂಗಾಯ್ತು!

    ಯುವತಿಯ ಸ್ಕೂಟಿ ನಿಲ್ಲಿಸಿ ಚೇಡಿಸಲು ಮುಂದಾಗಿದ್ದ ಯುವಕನ ಸ್ಥಿತಿ ಹಿಂಗಾಯ್ತು!

    ಶ್ರೀನಗರ: ಯುವತಿಯೊಬ್ಬಳ ಸ್ಕೂಟಿ ತಡೆದು ಚೇಡಿಸಲು ಮುಂದಾಗಿದ್ದ ಘಟನೆಯೊಂದು ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ನಡೆದಿದೆ. ಯುವಕ ರಸ್ತೆಯಲ್ಲಿ ಬರುತ್ತಿದ್ದ ಯುವತಿಯ ಸ್ಕೂಟಿಯನ್ನು ತಡೆಯಲು ಮುಂದಾಗಿದ್ದಾನೆ. ಸ್ಕೂಟಿಯ ನಿಯಂತ್ರಣ ಕಳೆದುಕೊಂಡ ಯುವತಿ ನೇರವಾಗಿ ಎದುರಿಗೆ ನಿಂತಿದ್ದ ಯುವಕನಿಗೆ ಗುದ್ದು ಅನತಿ ದೂರದಲ್ಲಿ ಸ್ಕೂಟಿ ಬಿದ್ದಿದೆ.

    ಜಮ್ಮು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ನಡೆದಿದ್ದು, ಈ ಎಲ್ಲ ದೃಶ್ಯಗಳು ರಸ್ತೆ ಬದಿಯ ಮನೆಯೊಂದರ ಸಿಸಿಟಿವಿಯಲ್ಲಿ ಸೆರೆಯಾಗಿವೆ. ಬೈಕಿನಲ್ಲಿ ಬಂದ ಮೂವರು ಯುವತಿಗೆ ಕಿರು ಕುಳ ನೀಡಲು ಮುಂದಾಗಿದ್ರು, ಆದರೆ ಸ್ಕೂಟಿ ಯುವಕನಿಗೆ ಗುದ್ದಿದೆ. ಫಾರುಖ್ (19), ಅಝರ್ ವನಿ (18) ಮತ್ತು ನಯೀಮ್ ಇಕ್ಬಾಲ್ (19) ಯುವತಿಗೆ ಕಿರುಕುಳ ನೀಡಲು ಮುಂದಾಗಿದ್ದ ಯುವಕರು.

    ವಿಡಿಯೋದಲ್ಲಿ ಏನಿದೆ?: ಶಾಲೆಯಿಂದ ಮನೆಯತ್ತ ಹೊರಟ್ಟಿದ್ದ ಯುವತಿಯನ್ನು ನಡು ರಸ್ತೆಯಲ್ಲಿ ತಡೆಯಲು ಯುವಕರು ಮುಂದಾಗಿದ್ದರು. ಸ್ಕೂಟಿ ಕಾಣಿಸುತ್ತಿದ್ದಂತೆ ಬೈಕಿನಿಂದ ಒಬ್ಬ ಸ್ಕೂಟಿ ನಿಲ್ಲಿಸಲು ಮುಂದಾಗಿದ್ದಾನೆ. ಯುವಕರನ್ನು ನೋಡಿ ಭಯಬೀತಳಾದ ಸ್ಕೂಟಿ ಯುವತಿಯ ನಿಯಂತ್ರಣ ತಪ್ಪಿದೆ. ನೇರವಾಗಿ ರಸ್ತೆ ಮಧ್ಯಭಾಗದಲ್ಲಿ ನಿಂತಿದ್ದ ಯುವಕನಿಗೆ ಸ್ಕೂಟಿ ಡಿಕ್ಕಿಯಾಗಿದೆ. ಸ್ವಲ್ಪ ದೂರದಲ್ಲಿ ಹೋಗಿ ಯುವತಿಯೂ ಸಹ ಬಿದ್ದಿದ್ದಾಳೆ. ಸ್ಕೂಟಿ ಡಿಕ್ಕಿಯಾಗಿದ್ದರಿಂದ ಯುವಕ ಪ್ರಜ್ಞೆ ಕಳೆದುಕೊಂಡಿದ್ದಾನೆ. ಘಟನೆಯಲ್ಲಿ ಯುವತಿಗೂ ಸಣ್ಣಪುಟ್ಟ ಗಾಯಗಳಾಗಿವೆ ಎಂದು ವರದಿಯಾಗಿದೆ.

    ಪೊಲೀಸರು ಘಟನೆ ಸಂಬಂಧ ಮೂವರು ಯುವಕರನ್ನು ಬಂಧಿಸಿದ್ದಾರೆ. ಘಟನೆ ವೇಳೆ ಯುವಕರು ಬಳಸಿದ್ದ ಬೈಕ್ ನ್ನು ಸಹ ಪೊಲೀಸರು ವಶಪಡಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಘಟನೆಯಲ್ಲಿ ಗಾಯಗೊಂಡಿದ್ದ ಯುವಕನನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.