Tag: Technical Problem

  • ಗೃಹಲಕ್ಷ್ಮಿ ನೋಂದಣಿಗೆ ಸರ್ವರ್ ಇದ್ದರೂ ನಾನಾ ಸಮಸ್ಯೆ – ಮಹಿಳೆಯರ ಪರದಾಟ

    ಗೃಹಲಕ್ಷ್ಮಿ ನೋಂದಣಿಗೆ ಸರ್ವರ್ ಇದ್ದರೂ ನಾನಾ ಸಮಸ್ಯೆ – ಮಹಿಳೆಯರ ಪರದಾಟ

    ರಾಯಚೂರು: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ (Gruhalakshmi Scheme) ನೋಂದಣಿಗೆ (Registration) ನಾನಾ ತಾಂತ್ರಿಕ ಸಮಸ್ಯೆಗಳು (Technical Problem) ಎದುರಾಗಿವೆ. ಹೀಗಾಗಿ ರಾಯಚೂರಿನಲ್ಲಿ (Raichur) ಮಹಿಳೆಯರು ಹಾಗೂ ಸಾರ್ವಜನಿಕರು ಪರದಾಟ ನಡೆಸಿದ್ದಾರೆ.

    ಬೆಳಗ್ಗೆಯಿಂದ ಸಂಜೆಯವರೆಗೆ ಕಾದು ನಿಂತರೂ ನೋಂದಣಿ ಮಾಡಿಸಲು ಆಗದೆ ಮಹಿಳೆಯರು ಮನೆಗಳಿಗೆ ಮರಳಿದ್ದಾರೆ. ಇಲ್ಲಿನ ಕರ್ನಾಟಕ ಒನ್ ಸೇರಿದಂತೆ ನೋಂದಣಿ ಕೇಂದ್ರಗಳಲ್ಲಿ ಸರ್ವರ್ ಸಮಸ್ಯೆಯ ಜೊತೆಗೆ ಪಡಿತರ ಚೀಟಿ ಕೆವೈಸಿ ಸಮಸ್ಯೆ, ಮನೆ ಯಜಮಾನಿ ಮೊಬೈಲ್ ಸಂಖ್ಯೆ ಜೋಡಣೆ, ಒಟಿಪಿ ಬಾರದೆ ಇರುವುದು ಸೇರಿದಂತೆ ನಾನಾ ಸಮಸ್ಯೆಗಳಿಂದ ನೋಂದಣಿ ಮಾಡಿಸಲು ಆಗುತ್ತಿಲ್ಲ. ಸರ್ವರ್ ಸರಿಹೋದರು ನೋಂದಣಿ ಕಾರ್ಯ ಪೂರ್ಣಗೊಳ್ಳುತ್ತಿಲ್ಲ. ಇದನ್ನೂ ಓದಿ: ಕಾಂಗ್ರೆಸ್‍ಗೆ ಜಂಪ್ ಆಗ್ತಾರಾ ಬಾಂಬೆ ಫ್ರೆಂಡ್ಸ್? – ಬಿಜೆಪಿ ಸ್ಥಳೀಯ ನಾಯಕರ ವಿರುದ್ಧ ಎಸ್‍ಟಿಎಸ್ ಕೆಂಡ

    ಕರ್ನಾಟಕ ಒನ್ ಸೆಂಟರ್‌ನಲ್ಲಿ ಬೆಳಗ್ಗೆಯಿಂದ ಕೇವಲ 30 ನೋಂದಣಿಯಾಗಿದೆ. ಹೀಗಾಗಿ ಮಹಿಳೆಯರು ಪ್ರತಿದಿನ ಬಿಸಿಲಲ್ಲೇ ಗಂಟೆಗಟ್ಟಲೆ ಕಾಯುತ್ತಾ ನಿಲ್ಲಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇನ್ನೂ ನಗರಸಭೆ ಆವರಣದಲ್ಲಿ ತೆರೆಯಲಾಗಿದ್ದ ಮೂರು ನೋಂದಣಿ ಕೇಂದ್ರಗಳನ್ನು ತಾಂತ್ರಿಕ ಸಮಸ್ಯೆಗಳಿಂದ ಬಂದ್ ಮಾಡಲಾಗಿದೆ. ಇದನ್ನೂ ಓದಿ:  ಉಡುಪಿ ಕಾಲೇಜಿನ ವೀಡಿಯೋ ಪ್ರಕರಣ- ಗುಜರಾತ್ FSLಗೆ ರವಾನೆ ಸಾಧ್ಯತೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನೆಲಮಂಗಲ ಫ್ಲೈಓವರ್ ದುರಸ್ತಿ ಕಾರ್ಯ ಪೂರ್ಣ – ಒಂದು ವಾರದಲ್ಲಿ ಸಂಚಾರಕ್ಕೆ ಮುಕ್ತ

    ನೆಲಮಂಗಲ ಫ್ಲೈಓವರ್ ದುರಸ್ತಿ ಕಾರ್ಯ ಪೂರ್ಣ – ಒಂದು ವಾರದಲ್ಲಿ ಸಂಚಾರಕ್ಕೆ ಮುಕ್ತ

    ಬೆಂಗಳೂರು: ಕಳೆದ ಇಪ್ಪತ್ತು ದಿನದ ಹಿಂದೆ ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ಬಂದ್ ಆಗಿದ್ದ ನೆಲಮಂಗಲ, ಬೆಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿಯ ಫ್ಲೈ ಓವರ್ ರಸ್ತೆಯು ಇನ್ನೂ ಒಂದು ವಾರದಲ್ಲಿ ಸಂಚಾರಕ್ಕೆ ಮುಕ್ತವಾಗಲಿದೆ.

    ನಾಗಸಂದ್ರ, ದಾಸರಹಳ್ಳಿಯ ನಡುವಿನ ಫ್ಲೈ ಓವರ್ ರಸ್ತೆಯ ಒಂದು ಪಿಲ್ಲರ್ ನಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆ ಕೆಲಸವನ್ನು ಆರಂಭ ಮಾಡಲಾಗಿತ್ತು. ಕಾರ್ಯ ಪೂರ್ಣಗೊಂಡಿದ್ದು, ಈ ಫ್ಲೈಓವರ್ ನಲ್ಲಿ ಬರುವ ಎಲ್ಲಾ ಪಿಲ್ಲರ್ ಗಳಲ್ಲಿ ಮುಂದೆ ಯಾವುದೇ ಸಮಸ್ಯೆ ಎದುರಾಗದಂತೆ ಇಂದು ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸೈನ್ಸ್ ತಂಡ ಪರಿಶೀಲನೆ ನಡೆಸಿದ್ದಾರೆ. ಹೀಗಾಗಿ ಎಲ್ಲಾ ಕೆಲಸ ಪೂರ್ಣಗೊಂಡಿದ್ದು, ಸುಗಮ ಸಂಚಾರಕ್ಕೆ ಇನ್ನೂ ಒಂದು ವಾರ ಕಾಲಾವಧಿ ಕಾಯಲೇಬೇಕಿದೆ.

    ಫ್ಲೈ ಓವರ್ ಕೆಲಸ ಸಂಪೂಣವಾಗಿ ಮುಗಿದಿದ್ದು, ದೆಹಲಿಯಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್ ತಂಡ ಬಂದು ಪರಿಶೀಲನೆ ನಡೆಸಿದ ನಂತರ ಸಂಚಾರಕ್ಕೆ ಅವಕಾಶ ನೀಡಲಾಗುತ್ತದೆ ಎನ್ನಲಾಗಿದೆ. ಇನ್ನೂ ಈ ರಸ್ತೆಯನ್ನು ಟೋಲ್ ಕಂಪನಿಯ ನಿರ್ವಹಣೆ ಹಾಗೂ ಬಿಬಿಎಂಪಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಬೆಂಗಳೂರು ಟ್ರಾಫಿಕ್ ಪೊಲೀಸರಿಗೂ ಮಾಹಿತಿಯನ್ನು ರವಾನೆ ಮಾಡಲಾಗಿದೆ. ಇದನ್ನೂ ಓದಿ: ಕ್ಯೂನಲ್ಲಿ ನಿಂತೆ 16 ಸಾವಿರ ರೂಪಾಯಿ ಸಂಪಾದಿಸುತ್ತಾನೆ

    ನೆಲಮಂಗಲ ಬೆಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿಯ ಫ್ಲೈ ಓವರ್ ರಸ್ತೆಯಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿತ್ತು. ಅಧಿಕಾರಿಗಳ ಸಮಯ ಪ್ರಜ್ಞೆಯಿಂದ ಇಪ್ಪತ್ತು ದಿನದ ಹಿಂದೆ ಗೊರಗುಂಟೆಪಾಳ್ಯ, ನಾಗಸಂದ್ರ ನಡುವಿನ ಎರಡು ಬದಿಯ ಫ್ಲೈ ಓವರ್ ರಸ್ತೆಯನ್ನು ಬಂದ್ ಮಾಡಲಾಗಿತ್ತು. ಇದನ್ನೂ ಓದಿ: ಯೋಗಿ ಆದಿತ್ಯನಾಥ್ ವಿರುದ್ಧ ಆಕ್ಷೇಪಾರ್ಹ ಪೋಸ್ಟ್ – 17ರ ಹುಡುಗ ಅರೆಸ್ಟ್

  • ಇವಿಎಂ ಕೆಟ್ಟರೂ ಅವಧಿ ವಿಸ್ತರಿಸದ ಉಡುಪಿ ಜಿಲ್ಲಾಡಳಿತ: ಮತದಾರರ ಹಿಡಿಶಾಪ

    ಇವಿಎಂ ಕೆಟ್ಟರೂ ಅವಧಿ ವಿಸ್ತರಿಸದ ಉಡುಪಿ ಜಿಲ್ಲಾಡಳಿತ: ಮತದಾರರ ಹಿಡಿಶಾಪ

    ಉಡುಪಿ: ನಗರದ ಎರಡು ಕಡೆ ಮತಯಂತ್ರ ಕೈಕೊಟ್ಟಿದ್ದರೂ, ಮತದಾನದ ಅವಧಿಯನ್ನು ವಿಸ್ತರಿಸದ ಜಿಲ್ಲಾಡಳಿತದ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಕೊಡವೂರಿನ ಎರಡು ಮತಯಂತ್ರಗಳು ಕೈಕೊಟ್ಟ ಪರಿಣಾಮ, ಎರಡು ಗಂಟೆ ಮತದಾನ ಸ್ಥಗಿತವಾಗಿತ್ತು. ಆದರೆ ಜಿಲ್ಲಾಡಳಿತ 2 ಗಂಟೆಗಳ ಅವಧಿಯನ್ನು ವಿಸ್ತರಣೆ ಮಾಡದೇ, 5 ಗಂಟೆಗೆ ಮತದಾನ ಮುಕ್ತಾಯವಾಗುತ್ತದೆ ಎಂದು ತಿಳಿಸಿದೆ.

    ಜಿಲ್ಲಾಡಳಿತದ ಕ್ರಮಕ್ಕೆ ಅಸಮಾಧಾನಗೊಂಡ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಈ ಕುರಿತು ಕೊಡವೂರಿನ ಕಾಂಗ್ರೆಸ್ ಅಭ್ಯರ್ಥಿ ಮೀನಾಕ್ಷಿ ಮಾಧವ ಬನ್ನಂಜೆ ಮಾತನಾಡಿ, ಮತಯಂತ್ರದ ದೋಷದಿಂದ ಎರಡು ಗಂಟೆ ಮತದಾನ ವಿಳಂಬವಾಗಿದೆ. ಹೀಗಾಗಿ ಹೆಚ್ಚುವರಿ 2 ಗಂಟೆಗಳ ಮತದಾನಕ್ಕೆ ಜಿಲ್ಲಾಡಳಿತ ಅವಕಾಶಮಾಡಿಕೊಡಬೇಕು. ಒಂದೊಂದು ಮತವೂ ಅಮೂಲ್ಯವಾಗಿದೆ ಎಂದು ಹೇಳಿದರು.

    ಕಳೆದ ಬಾರಿಯೂ ಮತಗಟ್ಟೆಯಲ್ಲಿ ಮತಯಂತ್ರ ಕೆಟ್ಟಿತ್ತು. ಅಧಿಕಾರಿಗಳಿಗೆ ಚುನಾವಣೆ ಬಗ್ಗೆ ಗಂಭೀರತೆ ಇಲ್ಲ. ನಮ್ಮೂರಿನಿಂದ ಮದುವೆಗೆ ಹೊರಟ 60 ಜನ ವೋಟ್ ಹಾಕಲು ಬಂದಿದ್ದರು. ಮತಯಂತ್ರ ಕೆಟ್ಟಿದ್ದಕ್ಕೆ ಅವರು ವಾಪಾಸ್ಸು ಹೋದರು ಮತ್ತೆ ಅವರು ಬರುವುದಿಲ್ಲವೆಂದು ಬಿಜೆಪಿ ಅಭ್ಯರ್ಥಿ ವಿಜಯ್ ತಮ್ಮ ಬೇಸರವನ್ನು ವ್ಯಕ್ತಪಡಿಸಿದರು.

    ಈ ಕುರಿತು ಪ್ರತಿಕ್ರಿಯಿಸಿರುವ ಉಡುಪಿ ತಹಶೀಲ್ದಾರ್ ಪ್ರದೀಪ್ ಕುರುಡೇಕರ್, ಎರಡು ಕಡೆ ಮತಯಂತ್ರ ದೋಷ ಕಂಡುಬಂದಿದೆ. ಈಗಾಗಲೇ ನಮ್ಮ ಸಿಬ್ಬಂದಿ ದೋಷ ಸರಿಪಡಿಸಿದ್ದಾರೆ. ಅಲ್ಲದೇ ಬೇರೆ ಮತಯಂತ್ರವನ್ನು ಹಾಕಿದ್ದಾರೆ. ಎರಡು ಮತಗಟ್ಟೆಗಳಲ್ಲಿ ಟೋಕನ್ ವ್ಯವಸ್ಥೆ ಮಾಡಿಕೊಟ್ಟಿದ್ದೇವೆ. ಮತದಾರರು 5 ಗಂಟೆಯ ಒಳಗೆ ಟೋಕನ್ ಪಡೆದುಕೊಳ್ಳಬೇಕು. ಟೋಕನ್ ಪಡೆದುಕೊಂಡ ಮತದಾರರಿಗೆ ಮತದಾನಕ್ಕೆ ಅವಕಾಶಮಾಡಿಕೊಡುತ್ತೇವೆ. ಯಾವುದೇ ಕಾರಣಕ್ಕೂ ಮತದಾನದ ಅವಧಿಯನ್ನು ವಿಸ್ತರಣೆ ಮಾಡಲು ಸಾಧ್ಯವಿಲ್ಲ. ಮತದಾನ ಮಾಡುವುದು ಎಲ್ಲರ ಹಕ್ಕು ಮತ್ತು ಕರ್ತವ್ಯ. ಮತಯಂತ್ರ ದೋಷದಿಂದಾಗಿ ಉಂಟಾದ ಸಮಸ್ಯೆಗೆ ಮತದಾರರು ಸಹಕರಿಸಬೇಕೆಂದು ವಿನಂತಿಸಿಕೊಂಡರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv