ಚೆನ್ನೈ: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (International Airport) ಇಂದು (ಆ.12) ಬೆಳಿಗ್ಗೆ ಕಾರ್ಗೋ ವಿಮಾನವೊಂದರ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೆಲಕಾಲ ಆತಂಕದ ವಾತಾವರಣ ಉಂಟಾಗಿತ್ತು. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ವರದಿಯಾಗಿಲ್ಲ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ, ಕೌಲಾಲಂಪುರ್‌ದಿಂದ ಚೆನ್ನೈಗೆ ಬರುತ್ತಿದ್ದ ಕಾರ್ಗೋ ವಿಮಾನವು (Cargo Flight) ಲ್ಯಾಂಡಿಂಗ್ ಆಗುತ್ತಿದ್ದಾಗ ಎಂಜಿನ್‌ನಿಂದ ಹೊಗೆ ಹಾಗೂ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ವಿಮಾನ ನಿಲ್ದಾಣದ ಅಗ್ನಿಶಾಮಕ ದಳ ಸ್ಥಳಕ್ಕೆ ದೌಡಾಯಿಸಿ, ಬೆಂಕಿಯನ್ನು ನಿಯಂತ್ರಣಕ್ಕೆ ತಂದಿತು. ಪ್ರಾಥಮಿಕ ತನಿಖೆಯಲ್ಲಿ ತಾಂತ್ರಿಕ ದೋಷವೇ ಈ ಘಟನೆಗೆ ಕಾರಣ ಎಂದು ಶಂಕಿಸಲಾಗಿದೆ.ಇದನ್ನೂ ಓದಿ: ಯಶವಂತ್ ವರ್ಮಾ ನಗದು ವಿವಾದ; ನ್ಯಾಯಾಧೀಶರ ವಿರುದ್ಧ ವಾಗ್ದಂಡನೆ ಪ್ರಸ್ತಾವನೆಗೆ ಲೋಕಸಭೆ ಸ್ಪೀಕರ್ ತ್ರಿಸದಸ್ಯ ಸಮಿತಿ ರಚನೆ
ವಿಮಾನದ ಸಿಬ್ಬಂದಿಯನ್ನು ಸುರಕ್ಷಿತವಾಗಿ ಹೊರತೆಗೆಯಲಾಗಿದ್ದು, ಈ ವೇಳೆ ಯಾವುದೇ ಪ್ರಯಾಣಿಕರು ಇರಲಿಲ್ಲ ಎಂದು ತಿಳಿದುಬಂದಿದೆ. ಚೆನ್ನೈ ವಿಮಾನ ನಿಲ್ದಾಣದಲ್ಲಿ ಸದ್ಯ ಎಂದಿನಂತೆ ವಿಮಾನಗಳು ಕಾರ್ಯಾಚರಣೆ ಮಾಡುತ್ತಿದ್ದು, ಈ ಘಟನೆಯಿಂದ ವಿಮಾನ ಹಾರಾಟದ ವೇಳಾಪಟ್ಟಿಯಲ್ಲಿ ಯಾವುದೇ ವ್ಯತ್ಯಯವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಂಚಿ: ಜಾರ್ಖಂಡ್‌ನ ದಿಯೋಘರ್ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊತ್ತೊಯ್ಯಬೇಕಿದ್ದ ವಿಮಾನದಲ್ಲಿ ತಾಂತ್ರಿಕ ದೋಷವನ್ನು (Technical Fault) ಕಂಡುಬಂದಿತು, ಪರಿಣಾಮ ಪ್ರಧಾನಿ ಮೋದಿ (Narendra Modi) ದೆಹಲಿಗೆ ಮರಳಲು ವಿಳಂಬವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಧಾನಿ ಮೋದಿಯವರು ಚುನಾವಣಾ ರಾಜ್ಯವಾದ ಜಾರ್ಖಂಡ್‌ನಲ್ಲಿ (Jharkhand) ತಮ್ಮ ಕಾರ್ಯಕ್ರಮಗಳನ್ನು ಮುಗಿಸಿ ದೆಹಲಿಗೆ ಮರಳಲು ವಿಮಾನ ನಿಲ್ದಾಣಕ್ಕೆ ಬಂದ ನಂತರ ಈ ಘಟನೆ ನಡೆದಿದೆ. ಸುರಕ್ಷತಾ ಕ್ರಮವಾಗಿ ತಾಂತ್ರಿಕ ತಂಡಗಳು ಸಮಸ್ಯೆಯನ್ನು ಗುರುತಿಸಿ, ಸರಿಪಡಿಸಿದ ನಂತರ ವಿಮಾನ ಟೇಕ್ ಆಫ್ ಆಗಿದೆ.
ಇದಕ್ಕೂ ಮುನ್ನ ಅವರು ಬುಡಕಟ್ಟು ವೀರ ಬಿರ್ಸಾ (Birsa Munda anniversary) ಮುಂಡಾ ಅವರನ್ನು ಗೌರವಿಸುವ ಜಂಜಾಟಿಯಾ ಗೌರವ್ ದಿವಸ್ ಆಚರಣೆಯ ಅಂಗವಾಗಿ ಜಾರ್ಖಂಡ್‌ನಲ್ಲಿ ಎರಡು ರ‍್ಯಾಲಿಗಳನ್ನುದ್ದೇಶಿಸಿ ಮಾತನಾಡಿದರು. ಬಿಜೆಪಿ ಅಭ್ಯರ್ಥಿಗಳ ಪರ ಮತ ಯಾಚಿಸಿದರು.
ಪ್ರತ್ಯೇಕ ಬೆಳವಣಿಗೆಯಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಜಾರ್ಖಂಡ್‌ಗೆ ಬಂದಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಹೆಲಿಕಾಪ್ಟರ್ ಹಾರಾಟವನ್ನು ಕೆಲ ಕಾಲ ಏರ್ ಟ್ರಾಫಿಕ್ ಕಂಟ್ರೋಲ್ ತಡೆ ಹಿಡಿಯಿತು. ಉದ್ದೇಶ ಪೂರ್ವಕವಾಗಿ ಇದನ್ನು ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದರು. ಆರೋಪದ ಒಂದು ಗಂಟೆಯ ಬಳಿಕ ಹಾರಾಟಕ್ಕೆ ಅನುಮತಿ ನೀಡಲಾಯಿತು.
ಮಹಾರಾಷ್ಟ್ರದ ಹಿಂಗೋಲಿ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರಕ್ಕೆ ತೆರಳಿದ್ದ ಗೃಹ ಸಚಿವ ಅಮಿತ್ ಶಾ ಹೆಲಿಕಾಪ್ಟರ್ ಅನ್ನು ಚುನಾವಣಾ ಆಯೋಗದ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ಈ ಬಗ್ಗೆ ಖುದ್ದು ಮಾಹಿತಿ ಹಂಚಿಕೊಂಡ ಅಮಿತ್ ಶಾ, ಬಿಜೆಪಿ ನ್ಯಾಯಯುತ ಚುನಾವಣೆ ಮತ್ತು ಆರೋಗ್ಯಕರ ಚುನಾವಣಾ ವ್ಯವಸ್ಥೆಯನ್ನು ನಂಬುತ್ತದೆ ಚುನಾವಣಾ ಆಯೋಗದ ಎಲ್ಲಾ ನಿಯಮಗಳನ್ನು ಅನುಸರಿಸುತ್ತದೆ ನಾವೆಲ್ಲರೂ ಆರೋಗ್ಯಕರ ಚುನಾವಣಾ ವ್ಯವಸ್ಥೆಗೆ ಕೊಡುಗೆ ನೀಡಬೇಕು ಭಾರತವನ್ನು ವಿಶ್ವದ ಪ್ರಬಲ ಪ್ರಜಾಪ್ರಭುತ್ವವಾಗಿ ಇರಿಸುವಲ್ಲಿ ನಮ್ಮ ಕರ್ತವ್ಯಗಳನ್ನು ನಿರ್ವಹಿಸಬೇಕು ಎಂದು ಹೇಳಿದ್ದಾರೆ.
ಬಿಜೆಪಿ ನಾಯಕರ ಹೆಲಿಕಾಪ್ಟರ್ ಅನ್ನು ಚುನಾವಣಾ ಆಯೋಗ ತಪಾಸಣೆಗೆ ಒಳಪಡಿಸುವುದಿಲ್ಲ ಎಂದು ಮಾಜಿ ಸಿಎಂ ಉದ್ಧವ್ ಠಾಕ್ರೆ ಆರೋಪಿಸಿದ್ದರು. ವಿಪಕ್ಷ ನಾಯಕರ ಹೆಲಿಕ್ಯಾಪ್ಟರ್ ತಪಾಸಣೆ ಮಾಡಲಾಗುತ್ತದೆ, ಪ್ರಧಾನಿ ಮೋದಿ ಸೇರಿ ಬಿಜೆಪಿ ನಾಯಕರ ಹೆಲಿಕ್ಯಾಪ್ಟರ್ ಶೋಧ ನಡೆಸುವುದಿಲ್ಲ, ಪ್ರಧಾನಿ ಮೋದಿಗಾಗಿ ವಿಪಕ್ಷ ನಾಯಕ ಹೆಲಿಕ್ಯಾಪ್ಟರ್ ಹಾರಾಟ ತಡೆ ಹಿಡಿಯಲಾಗುತ್ತಿದೆ ಎಂದು ಆರೋಪಿಸಿದ್ದರು, ಉದ್ಧವ್ ಠಾಕ್ರೆ ಆರೋಪದ ಬೆನ್ನಲೆ ಅಮಿತ್ ಶಾ ಪ್ರಯಾಣಿಸಿದ ಹೆಲಿಕಾಪ್ಟರ್ ತಪಾಸಣೆ ನಡೆದಿದೆ.
ಅಲ್ಲದೇ ಜಾರ್ಖಂಡ್‌ನ ಗೊಡ್ಡಾದಲ್ಲಿ ದಿಯೋಘರ್‌ನಿಂದ ಕೇವಲ 80 ಕಿ.ಮೀ ದೂರದಲ್ಲಿ, ರಾಹುಲ್ ಗಾಂಧಿ ಅವರ ಚಾಪರ್ ಏರ್ ಟ್ರಾಫಿಕ್ ಕಂಟ್ರೋಲ್‌ನಿಂದ (ಎಟಿಸಿ) ಅನುಮತಿ ಪಡೆಯಲು 45 ನಿಮಿಷಗಳ ವಿಳಂಬ ಎದುರಿಸಿದರು. ಇದು ವಿಪಕ್ಷ ನಾಯಕರ ಪ್ರಚಾರಕ್ಕೆ ಅಡ್ಡಿಪಡಿಸಲು ಉದ್ದೇಶಪೂರ್ವಕವಾಗಿ ಮಾಡಿರುವ ಪ್ಲ್ಯಾನ್ ಎಂದು ಕಾಂಗ್ರೆಸ್ ಆರೋಪಿಸಿತ್ತು.
ಅಲ್ಲದೇ ಜಾರ್ಖಂಡ್‌ನ ಗೊಡ್ಡಾದಲ್ಲಿ ದಿಯೋಘರ್‌ನಿಂದ ಕೇವಲ 80 ಕಿ.ಮೀ ದೂರದಲ್ಲಿ, ರಾಹುಲ್ ಗಾಂಧಿ ಅವರ ಚಾಪರ್ ಏರ್ ಟ್ರಾಫಿಕ್ ಕಂಟ್ರೋಲ್‌ನಿಂದ (ATC) ಅನುಮತಿ ಪಡೆಯಲು 45 ನಿಮಿಷಗಳ ವಿಳಂಬ ಎದುರಿಸಿದರು. ಇದು ವಿಪಕ್ಷ ನಾಯಕರ ಪ್ರಚಾರಕ್ಕೆ ಅಡ್ಡಿಪಡಿಸಲು ಉದ್ದೇಶಪೂರ್ವಕವಾಗಿ ಮಾಡಿರುವ ಪ್ಲ್ಯಾನ್ ಎಂದು ಕಾಂಗ್ರೆಸ್ ಆರೋಪಿಸಿತ್ತು. ಇದನ್ನೂ ಓದಿ: ಬಿಷ್ಣೋಯ್ ಗ್ಯಾಂಗ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ದೇಹವನ್ನು 35 ಪೀಸ್ ಮಾಡಿದ್ದ ಆರೋಪಿ ಅಫ್ತಾಬ್
ಕೋಲಾರ: ಭಾರತೀಯ ವಾಯಸೇನೆಗೆ (Indian Air Force) ಸೇರಿದ ಹೆಲಿಕಾಪ್ಟರ್‌ನಲ್ಲಿ ತಾಂತ್ರಿಕ ದೋಷ (Technical Fault) ಕಾಣಿಸಿಕೊಂಡ ಹಿನ್ನಲೆಯಲ್ಲಿ ಕೊಲಾರದಲ್ಲಿ ತುರ್ತು ಭೂಸ್ಪರ್ಶವಾಗಿದೆ.
ಕೋಲಾರ (Kolara) ಜಿಲ್ಲೆಯ ಬಂಗಾರಪೇಟೆ ತಾಲೂಕಿನ ದೊಡ್ಡೂರು ಕರಪನಹಳ್ಳಿಯ ಕೆರೆಯಲ್ಲಿ ತುರ್ತು ಭೂಸ್ಪರ್ಶವಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮೂವರು ವಾಯುಸೇನೆಯ ಪೈಲಟ್‌ಗಳು ತರಬೇತಿ ಪಡೆಯುತ್ತಿದ್ದರು ಎನ್ನಲಾಗಿದೆ. ಸುರಕ್ಷಿತವಾಗಿ ತುರ್ತು ಭೂಸ್ಪರ್ಶ ಮಾಡಿದ ಹಿನ್ನೆಲೆಯಲ್ಲಿ ಒರ್ವ ಮಹಿಳಾ ಪೈಲಟ್ ಸೇರಿದಂತೆ ಮೂವರು ಸೇಫ್ ಆಗಿದ್ದಾರೆ. ಇದನ್ನೂ ಓದಿ: ತೆಲಂಗಾಣ| 7ನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ – ಸಂತ್ರಸ್ತೆ ಕುಟುಂಬಸ್ಥರಿಂದ ಆರೋಪಿ ಮನೆ, ಕಾರಿಗೆ ಬೆಂಕಿ
ಕರಪನಹಳ್ಳಿ ಗ್ರಾಮದ ಬಳಿ ಇರುವ ಕೆರೆ ಅಂಗಳದಲ್ಲಿ ಸುರಕ್ಷಿತವಾಗಿ ಇಳಿದ ಹೆಲಿಕಾಪ್ಟರ್ ನೋಡಲು ಜನರು ನಾ ಮುಂದು ತಾ ಮುಂದು ಎಂದು ಮುಂದಾಗಿದ್ದು, ಸ್ಥಳದಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಬಂಗಾರಪೇಟೆ ಪೊಲೀಸರ ಜಮಾವಣೆಯಾಗಿದ್ದಾರೆ. ಸದ್ಯ ವಾಯು ಪಡೆಯ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಇದನ್ನೂ ಓದಿ: ಸಂಪುಟ ಪುನರ್‌ರಚನೆ – ಮತ್ತೆ ಡಿಸಿಎಂ ಆಗಿ ಉದಯನಿಧಿ ಸ್ಟಾಲಿನ್ ಪ್ರಮಾಣವಚನ ಸ್ವೀಕಾರ
ಬೆಂಗಳೂರಿನ ಯಲಹಂಕ ಏರ್ ಇಂಡಿಯಾಗೆ ಸೇರಿದ ಈ ಹೆಲಿಕಾಪ್ಟರ್ ತರಬೇತಿ ನಿಮಿತ್ತ ಕೋಲಾರದ ಕೆಜಿಎಫ್ ಹಾಗೂ ಬಂಗಾರಪೇಟೆ ಸುತ್ತಮುತ್ತ ಹಾರಾಟ ನಡೆಸುತಿತ್ತು ಎಂದು ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿದ್ದಾರೆ. ಯಲಹಂಕ ತಂತ್ರಜ್ಞರ ತಂಡ ಬಂದ ಬಳಿಕ ತಾಂತ್ರಿಕ ದೋಷ ಸರಿಪಡಿಸಲಿದ್ದಾರೆ. ಬಳಿಕ ಇಲ್ಲಿಂದ ಹೆಲಿಕಾಪ್ಟರ್ ವಾಪಸ್ ಆಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: Mysuru | ಅನುಮತಿ ಪಡೆಯದೇ ಪಾರ್ಟಿ – 8 ಯುವತಿಯರು ಸೇರಿ 64 ಮಂದಿ ವಿರುದ್ಧ ಕೇಸ್
ಇನ್ನೂ ಸ್ಥಳದಲ್ಲಿ ಹೆಲಿಕಾಪ್ಟರ್ ನೋಡಲು ನೂರಾರು ಸಂಖ್ಯೆಯ ಜನರು ಜಮಾಯಿಸಿದ್ದು, ಜನರನ್ನ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಬಂಗಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದ್ದು, ಸೇನಾ ಹೆಲಿಕಾಪ್ಟರ್ ಆಗಿರುವುದರಿಂದ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.
– ಧಗ ಧಗನೆ ಹೊತ್ತಿ ಉರಿದ ಲಘು ವಿಮಾನ, ಇಬ್ಬರೂ ಪೈಲಟ್ ಸೇಫ್
ಚಾಮರಾಜನಗರ: ತಾಲೂಕಿನ ಹೆಚ್.ಮೂಕಳ್ಳಿ ಬಳಿಯ ಭೋಗಪುರದ ಹೊರವಲಯದಲ್ಲಿ ಗುರುವಾರ ಮಧ್ಯಾಹ್ನ ಲಘು ವಿಮಾನ (Jet Crash) ಪತನಗೊಂಡು ಧಗ ಧಗನೆ ಹೊತ್ತಿ ಉರಿದಿತ್ತು. ಇದಕ್ಕೆ ತಾಂತ್ರಿಕ ದೋಷವೇ (Technical Fault) ಕಾರಣ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರಿನ HAL ನಿಂದ ಹೊರಟಿದ್ದ ಲಘು ವಿಮಾನದಲ್ಲಿ ಹಾರಾಟ ನಡೆಸುತ್ತಿದ್ದಾಗಲೇ ಬೆಂಕಿ ಹೊತ್ತಿಕೊಂಡಿತ್ತು. ವಿಮಾನ ಅಪಘಾತದ ಸುಳಿಗೆ ಸಿಲುಕುತ್ತಿದ್ದಂತೆ ಇಬ್ಬರು ಪೈಲಟ್‌ಗಳು ಪ್ಯಾರಾಚೂಟ್ ಮೂಲಕ ವಿಮಾನದಿಂದ ಹಾರಿ ಪ್ರಾಣ ಉಳಿಸಿಕೊಂಡಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಹೆಚ್‌ಎಎಲ್‌ನ ಸೇನಾ ಹೆಲಿಕಾಪ್ಟರ್‌ಗಳು ಪೈಲಟ್‌ಗಳಾದ ತೇಜ್ ಪಾಲ್ ಹಾಗೂ ಭೂಮಿಕಾ ಇಬ್ಬರನ್ನೂ ಏರ್‌ಲಿಫ್ಟ್ ಮೂಲಕ ರವಾನೆ ಮಾಡಿದ್ದರು. ಇಬ್ಬರಿಗೂ ಸಣ್ಣ ಪ್ರಮಾಣದ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ.
ವಿಂಗ್ ಕಮಾಂಡರ್ ತೇಜ್‌ಪಾಲ್ ತರಬೇತುದಾರರಾಗಿದ್ದು, ಭೂಮಿಕಾ ತರಬೇತಿ ಪಡೆಯುತ್ತಿದ್ದ ಪೈಲಟ್. ಮಧ್ಯಾಹ್ನ 12:20ರ ವೇಳೆಗೆ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಇದರಿಂದಾಗಿ ಬೆಂಕಿ ಹೊತ್ತಿಕೊಂಡು ವಿಮಾನ ಪತನಗೊಂಡಿದೆ. ವಿಷಯ ತಿಳಿಯುತ್ತಿದ್ದಂತೆ ತಕ್ಷಣವೇ ಬಂದು ಬೆಂಕಿ ನಂದಿಸುವ ಕೆಲಸ ಮಾಡಿದೆವು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಕಾತ್ಯಾಯಿನಿದೇವಿ ಹಾಗೂ ಅಗ್ನಿಶಾಮಕ ದಳ ಮುಖ್ಯ ಅಧಿಕಾರಿ ಜಯರಾಮ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಏರ್‌ಮಾರ್ಷಲ್ ಅಧಿಕಾರಿಗಳು, ಸ್ಥಳೀಯ ಪೊಲೀಸರಿಂದ ಮಾಹಿತಿ ಪಡೆದುಕೊಂಡರು. ಲಘು ವಿಮಾನ ದುರಂತ ನಡೆದ ಸ್ಥಳಕ್ಕೂ ಪೈಲಟ್ ಬಿದ್ದಿದ್ದ ಸ್ಥಳಕ್ಕೂ 2 ಕಿಮೀ ಅಂತರವಿತ್ತು ಎಂದು ಹೇಳಿದ್ದಾರೆ, ಈ ಬಗ್ಗೆ ತನಿಖೆ ಮುಂದುವರಿದೆ.