ಬೆಂಗಳೂರು: ರಾಜ್ಯದಲ್ಲಿ ಕಡ್ಡಾಯ ಮಾಸ್ಕ್ ನಿಯಮ ಕೈ ಬಿಡುವ ವಿಚಾರವಾಗಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ತಾಂತ್ರಿಕ ಸಲಹಾ ಸಮಿತಿ ಜೊತೆ ಸಭೆ ಮಾಡಿ ನಿರ್ಧಾರ ಮಾಡಲಾಗುತ್ತದೆ ಅಂತ ಆರೋಗ್ಯ ಸಚಿವ ಕೆ. ಸುಧಾಕರ್ ತಿಳಿಸಿದ್ದಾರೆ.
ಸಿಎಂ ಹಾಗೂ ತಾಂತ್ರಿಕ ಸಲಹಾ ಸಮಿತಿ ಸರಿ ಅಂದರೆ ಮಾಸ್ಕ್ ಕೈ ಬಿಡುವ ಬಗ್ಗೆ ನಾವು ಆದೇಶ ಹೊರಡಿಸ್ತೀವಿ ಅಂತ ತಿಳಿಸಿದರು. ಈಗಾಗಲೇ 90% ಜನರು ಮಾಸ್ಕ್ ತೆಗೆದು ಓಡಾಡುತ್ತಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಅಘೋಷಿತ ನಿಯಮ ಸಡಿಲಿಕೆ ಆಗಿದೆ. ಆದರೂ ಇನ್ನು ಅನೇಕ ದೇಶಗಳಲ್ಲಿ 4ನೇ ಅಲೆ ಬಂದಿದೆ. ಹೀಗಾಗಿ ನಾವು ಎಚ್ಚರಿಕೆಯಿಂದ ಇದ್ದೇವೆ ಎಂದರು. ಇದನ್ನೂ ಓದಿ:ಎಸ್‌ಎಸ್‌ಎಲ್‌ಸಿ, ಪಿಯಸಿ ಎಕ್ಸಾಂ ಕೆಲಸ ಮಾಡೋ ಶಿಕ್ಷಕರಿಗೆ ಹಿಜಬ್ ನಿಷೇಧ
ತಾಂತ್ರಿಕ ಸಲಹಾ ಸಮಿತಿ, ಸಿಎಂ ಜೊತೆ ಚರ್ಚೆ ಮಾಡಿ ಮಾಸ್ಕ್ ನಿಯಮದ ಬಗ್ಗೆ ನಿರ್ಧಾರ ಮಾಡುತ್ತೇವೆ. ಈಗ ಮಾಸ್ಕ್ ಹಾಕದವರಿಗೂ ದಂಡ ಹಾಕುತ್ತಿಲ್ಲ. ಶೀಘ್ರವೇ ಸಿಎಂ ಜೊತೆ ಮಾತನಾಡಿ ಮಾಸ್ಕ್ ತೆಗೆಯೋ ಬಗ್ಗೆ ಆದೇಶ ಹೊರಡಿಸುವ ಬಗ್ಗೆ ನಿರ್ಧಾರ ಮಾಡಲಾಗುತ್ತದೆ ಎಂದು ಹೇಳಿದರು.
– ಓಮಿಕ್ರಾನ್ ಬಗ್ಗೆ ತಾಂತ್ರಿಕ ಸಲಹಾ ಸಮಿತಿ ಶಿಫಾರಸು
– ಸಾರ್ವಜನಿಕ ಸ್ಥಳಗಳ ಬಳಕೆಗೂ 2 ಡೋಸ್ ಲಸಿಕೆ ಕಡ್ಡಾಯ ಮಾಡಿ
ಬೆಂಗಳೂರು: ಓಮಿಕ್ರಾನ್ ವೈರಸ್ ಭೀತಿ ಜಗತ್ತನ್ನು ಹಿಂಡಿ ಹಿಪ್ಪೆ ಮಾಡಿದೆ. ಡೆಲ್ಟಾ ಅಬ್ಬರಕ್ಕೆ ಮರಣಮೃದಂಗ ಬಾರಿಸಬಾರದು ಎಂದು ಎಲ್ಲ ದೇಶಗಳು, ಎಲ್ಲ ರಾಜ್ಯಗಳು ಕಟ್ಟೆಚ್ಚರ ವಹಿಸುತ್ತಿದ್ದು, ಹತ್ತು ಹಲವು ರೀತಿಯಲ್ಲಿ ಕೋವಿಡ್ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುತ್ತಿವೆ.
ಓಮಿಕ್ರಾನ್ ಕುರಿತು ರಾಜ್ಯದಲ್ಲಿಯೂ ಈಗಾಗಲೇ ಹಲವು ಮಾರ್ಗಸೂಚಿ ಜಾರಿಯಾಗಿವೆ. ಆದರೂ ಎರಡನೇ ಡೋಸ್ ಲಸಿಕೆ ಪಡೆಯಲು ಜನ ಹಿಂದೇಟು ಹಾಕಿದ್ದಾರೆ. ಹೀಗಾಗಿ ಎಲ್ಲರೂ ಲಸಿಕೆ ಪಡೆಯುವಂತೆ ಮಾಡಲು ಕಠಿಣ ನಿಯಮಗಳನ್ನು ಜಾರಿ ಮಾಡಿ ಎಂದು ತಾಂತ್ರಿಕ ಸಲಹಾ ಸಮಿತಿ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. ಲಸಿಕೆ ಪಡೆಯದಿದ್ದರೆ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಬೇಡಿ. ಸಿಂಗಾಪುರ ಮಾದರಿಯಲ್ಲಿ ಲಸಿಕೆ ಪಡೆಯದವರಿಗೆ ಸರ್ಕಾರಿ ಸೌಲಭ್ಯ ಕೊಡ್ಬೇಡಿ. ಅಷ್ಟೇ ಅಲ್ಲ, ಲಸಿಕೆ ಪಡೆಯದವರ ವಾಹನಗಳಿಗೆ ಪೆಟ್ರೋಲ್, ಡೀಸೆಲ್ ಸಹ ಹಾಕದಿರುವ ರೀತಿಯ ಟಫ್ ರೂಲ್ಸ್ ತನ್ನಿ. ಆಗ ಮಾತ್ರ ಶೇಕಡಾ 100ರಷ್ಟು ವ್ಯಾಕ್ಸಿನೇಷನ್ ಟಾರ್ಗೆಟ್ ಮುಟ್ಟಲು ಸಾಧ್ಯ ಎಂದು ಸರ್ಕಾರಕ್ಕೆ ತಾಂತ್ರಿಕ ಸಲಹಾ ಸಮಿತಿ ಶಿಫಾರಸು ಮಾಡಿದೆ. ಇದನ್ನೂ ಓದಿ: ಫೇಮಸ್ ಆಯ್ತು ಅಗರವಾಲ್ ಮೀಮ್ಸ್
ಸರ್ಕಾರಿ ಸೌಲಭ್ಯಗಳನ್ನು ಕಡಿತ ಮಾಡಲು ಕಷ್ಟಸಾಧ್ಯ ಎಂದು ಆರೋಗ್ಯ ಸಚಿವರು ಸ್ಪಷ್ಟವಾಗಿ ಹೇಳಿದ್ದಾರೆ. ಇನ್ನುಳಿದಂತೆ, ಮಾಲ್‍ಗಳು, ಸಾರ್ವಜನಿಕ ಸ್ಥಳಗಳಲ್ಲಿ ಓಡಾಟಕ್ಕೆ ತಡೆಯಾಕುವ ಬಗ್ಗೆ ಸಿಎಂ ಬೊಮ್ಮಾಯಿ ಜೊತೆ ಚರ್ಚಿಸೋದಾಗಿಯೂ ಸುಧಾಕರ್ ಅವರು ತಿಳಿಸಿದ್ದಾರೆ. ಇಂದು ಆರೋಗ್ಯ ಮಂತ್ರಿಗಳು ಎರಡೆರೆಡು ಸಭೆ ನಡೆಸಿದ್ರು. ಮುಂಬೈನಲ್ಲಿಯೂ ಇದೇ ಮಾದರಿಯ ರೂಲ್ಸ್ ಜಾರಿಗೆ ಚಿಂತನೆ ನಡೆದಿದೆ.
ತಾಂತ್ರಿಕ ಸಲಹಾ ಸಮಿತಿ ಶಿಫಾರಸ್ಸು ಏನು?
* ಎಲ್ಲರಿಗೂ ಡಬಲ್ ಡೋಸ್ ಲಸಿಕೆ ಕಡ್ಡಾಯ ಮಾಡಬೇಕು.
* ಸರ್ಕಾರಿ ಸೌಲಭ್ಯ ಪಡೆಯಲು ಲಸಿಕೆ ಕಡ್ಡಾಯ ಮಾಡಿ.
* ಲಸಿಕೆ ಪಡೆಯದಿದ್ರೆ ಪಡಿತರ, ಅಡುಗೆ ಅನಿಲ ವಿತರಣೆ ಬೇಡ.
* ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆಯನ್ನು ನೀಡಬೇಡಿ/ವೆಚ್ಚ ಭರಿಸಬೇಡಿ.
* ನೀರು, ವಿದ್ಯುತ್‍ನಂತಹ ಮೂಲ ಸೌಲಭ್ಯ ಕಡಿತಗೊಳಿಸಿ.
* ಬಿಎಂಟಿಸಿ, ಕೆಎಸ್‍ಆರ್‍ಟಿಸಿ, ಮೆಟ್ರೋ ಬಳಕೆಗೆ ಲಸಿಕೆ ಕಡ್ಡಾಯ ಮಾಡಿ.
* ವೇತನ, ಪಿಂಚಣಿ ಪಡೆಯಲು 2 ಡೋಸ್ ಕಡ್ಡಾಯ ಮಾಡಿ.
* ವ್ಯಾಕ್ಸಿನ್ ಪಡೆದಿಲ್ಲ ಅಂದ್ರೆ ಬಂಕ್‍ಗಳಲ್ಲಿ ಪೆಟ್ರೋಲ್, ಡೀಸೆಲ್ ಹಾಕಲು ಬಿಡಬೇಡಿ
* ಸಾರ್ವಜನಿಕ ಸ್ಥಳಗಳ ಬಳಕೆಗೂ 2 ಡೋಸ್ ಲಸಿಕೆ ಕಡ್ಡಾಯ ಮಾಡಿ.
* ಲಸಿಕೆ ಪಡೆದಿಲ್ಲ ಅಂದ್ರೆ ಹೊಟೇಲ್, ಮಾಲ್‍ಗಳಲ್ಲಿ ಓಡಾಡಲು ಬಿಡಬೇಡಿ.
ಈ ಸಲಹೆಗಳಿಗೆ ಸರ್ಕಾರದ ಒಪ್ಪಿಗೆ!
* ವಿದೇಶದಿಂದ ಬರುವ ಎಲ್ಲರಿಗೂ ಆರ್‍ಟಿಪಿಸಿಆರ್ ಟೆಸ್ಟ್ ಕಡ್ಡಾಯ.
* ನೆಗೆಟಿವ್ ಬಂದಲ್ಲಿ ಮನೆಯಲ್ಲಿ ಒಂದು ವಾರ ಕ್ವಾರಂಟೇನ್ ಕಡ್ಡಾಯ.
* ರೋಗ ಲಕ್ಷಣ ಇದ್ದಲ್ಲಿ 5ನೇ ದಿನ, ಇಲ್ಲದಿದ್ದಲ್ಲಿ 7ನೇ ದಿನ ಕೋವಿಡ್ ಟೆಸ್ಟ್.
* ವಿದೇಶದಿಂದ ಬಂದವರು ಏಳು ದಿನಗಳವರೆಗೂ ಹೊರಗೆ ಓಡಾಡುವಂತಿಲ್ಲ.
* ಕ್ವಾರಂಟೇನ್‍ನಲ್ಲಿರುವವರ ಮೇಲೆ ನಿಗಾ ಇಡಲು ಕ್ವಾರಂಟೇನ್ ಆ್ಯಪ್.
* ಕ್ವಾರಂಟೇನ್‍ನಲ್ಲಿರುವವರ ಆರೋಗ್ಯ ಗಮನಿಸಲು ಟೆಲಿ ಕೌನ್ಸೆಲಿಂಗ್ ವ್ಯವಸ್ಥೆ.
* 14 ದಿನದ ಹಿಂದೆ ಬಂದವರಿಗೆ ಮತ್ತೆ ಆರ್‍ಟಿಪಿಸಿಆರ್ ಟೆಸ್ಟ್‍ಗೆ ಶಿಫಾರಸ್ಸು.
* ಬಿಎಂಸಿ ವೈದ್ಯ ಡಾ.ರವಿ ನೇತೃತ್ವದಲ್ಲಿ ಕೋವಿಡ್ ಚಿಕಿತ್ಸೆ ಪ್ರೊಟೋಕಾಲ್ ಸಮಿತಿ.