Tag: tech

  • ಐಫೋನ್‌ 17 ಬಿಡುಗಡೆ – ಯಾವ ದೇಶದಲ್ಲಿ ಎಷ್ಟು ದರ? ಕಡಿಮೆ ದರ ಎಲ್ಲಿ?

    ಐಫೋನ್‌ 17 ಬಿಡುಗಡೆ – ಯಾವ ದೇಶದಲ್ಲಿ ಎಷ್ಟು ದರ? ಕಡಿಮೆ ದರ ಎಲ್ಲಿ?

    ನವದೆಹಲಿ: ಆಪಲ್ (Apple) ಕಂಪನಿ 4 ಮಾದರಿಯ ಐಫೋನ್ (iPhone) ಬಿಡುಗಡೆ ಮಾಡಿದೆ. ಭಾರತದಲ್ಲಿ ಸೆ.12 ರಿಂದ ಬುಕ್ಕಿಂಗ್‌ ಮಾಡಬಹುದಾಗಿದ್ದು ಸೆ.19 ರಿಂದ ಐಫೋನ್‌ ವಿತರಣೆ ಮಾಡಲಾಗುವುದು ಎಂದು ಆಪಲ್‌ ಕಂಪನಿ ಹೇಳಿದೆ.

    ಯಾವ ದೇಶದಲ್ಲಿ ಎಷ್ಟು ದರ?
    ಐಫೋನ್‌ 17
    256 ಜಿಬಿ ಆಂತರಿಕ ಮೆಮೊರಿ/ 8 ಜಿಬಿ ರ‍್ಯಾಮ್‌
    ಭಾರತ: 82,900
    ಅಮೆರಿಕ: 799 ಡಾಲರ್‌
    ಜಪಾನ್‌ : 129,800 ಜಪಾನ್‌ ಯೆನ್‌
    ಯುಎಇ: 3,099 ದಿರ್ಹಮ್
    ಜರ್ಮನಿ: 949 ಯುರೋ
    ಯುಕೆ: 949 ಪೌಂಡ್‌

    ಐಫೋನ್‌ ಏರ್‌
    256 ಜಿಬಿ ಆಂತರಿಕ ಮೆಮೊರಿ/ 8 ಜಿಬಿ ರ‍್ಯಾಮ್‌
    ಭಾರತ: 1,19,990 ರೂ.
    ಅಮೆರಿಕ: 999 ಡಾಲರ್‌
    ಜಪಾನ್‌ : 1,59,800 ಜಪಾನ್‌ ಯೆನ್‌
    ಯುಎಇ: 3,499 ದಿರ್ಹಮ್
    ಜರ್ಮನಿ: 1,199 ಯುರೋ
    ಯುಕೆ: 999 ಪೌಂಡ್‌

    ಐಫೋನ್‌ 17 ಪ್ರೋ
    6.3 ಇಂಚಿನ ಸ್ಕ್ರೀನ್‌, 256 ಜಿಬಿ ಆಂತರಿಕ ಮೆಮೊರಿ/ 8 ಜಿಬಿ ರ‍್ಯಾಮ್‌
    ಭಾರತ: 1,34,990 ರೂ.
    ಅಮೆರಿಕ: 1,099 ಡಾಲರ್‌
    ಜಪಾನ್‌ : 1,79,800 ಜಪಾನ್‌ ಯೆನ್‌
    ಯುಎಇ: 4,299 ದಿರ್ಹಮ್
    ಜರ್ಮನಿ: 1299 ಯುರೋ
    ಯುಕೆ: 1,099 ಪೌಂಡ್‌

    ಐಫೋನ್‌ 17 ಪ್ರೋ ಮ್ಯಾಕ್ಸ್‌
    6.9 ಇಂಚಿನ ಸ್ಕ್ರೀನ್‌, 256 ಜಿಬಿ ಆಂತರಿಕ ಮೆಮೊರಿ/ 12 ಜಿಬಿ ರ‍್ಯಾಮ್‌
    ಭಾರತ: 1,49,990 ರೂ.
    ಅಮೆರಿಕ: 1,999 ಡಾಲರ್‌
    ಜಪಾನ್‌ : 1,94,800 ಜಪಾನ್‌ ಯೆನ್‌
    ಯುಎಇ: 4,699 ದಿರ್ಹಮ್
    ಜರ್ಮನಿ: 1,449 ಯುರೋ
    ಯುಕೆ: 1,199 ಪೌಂಡ್‌  ಇದನ್ನೂ ಓದಿ:  ಇದನ್ನೂ ಓದಿ: ಆಪಲ್‌ ಐಫೋನ್‌ 17, 17 ಪ್ರೋ, 17 ಮ್ಯಾಕ್ಸ್‌, ಐಫೋನ್‌ ಏರ್‌ ಬಿಡುಗಡೆ – ಗುಣ ವೈಶಿಷ್ಟ್ಯಗಳೇನು?  ಭಾರತದಲ್ಲಿ ದರ ಎಷ್ಟು?

    ಯಾವ ದೇಶದಲ್ಲಿ ಕಡಿಮೆ ದರ?
    ಈ ಮೇಲಿನ ದರ ನೋಡಿದರೆ ಐಫೋನ್‌ 17ಕ್ಕೆ ಭಾರತದಲ್ಲಿ 82,900 ರೂ. ದರ ಇದೆ. ಜಪಾನಿನ ದರಕ್ಕೆ ಹೋಲಿಕೆ ಮಾಡಿದರೆ 78,800 ರೂ, ಯುಎಇ ಅಂದಾಜು 75,000 ರೂ., ಜರ್ಮನಿಯಲ್ಲಿ ಅಂದಾಜು 98,000 ರೂ., ಯುನೈಟೆಡ್‌ ಕಿಂಗ್‌ಡಮ್‌ನಲ್ಲಿ ಅಂದಾಜು 1,14,000 ರೂ. ಆಗಲಿದೆ.

    ಐಫೋನ್‌ ಬೆಲೆ ಅಮೆರಿಕದಲ್ಲಿ ಕಡಿಮೆಯಿದೆ ಅಲ್ಲಿ ಅಂದಾಜು 70,432 ರೂ.ಗೆ ಐಫೋನ್‌ ಸಿಗುತ್ತಿದೆ. ಹೊಸ ಐಫೋನ್‌ ಪೈಕಿ ಇಸಿಮ್‌ ಮಾದರಿಯ ಫೋನ್‌ಗಳು ಅಮೆರಿಕದಲ್ಲಿ ಮಾತ್ರ ಲಭ್ಯವಿದೆ.

    ಬೆಲೆ ಏರಿಕೆಗೆ ಕಾರಣ ಏನು?
    ಭಾರತದಲ್ಲಿ ಐಫೋನ್‌ ಉತ್ಪಾದನೆಯಾದರೂ ಹಲವು ಬಿಡಿ ಭಾಗಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಅಬಕಾರಿ ಸುಂಕ ಪಾವತಿ ಮಾಡಿದ ಬಳಿಕ ವಸ್ತುಗಳು ಭಾರತಕ್ಕೆ ಆಮದು ಆಗುತ್ತಿದೆ. ಆಮದು ಮಾಡಿಕೊಳ್ಳುವ ವಸ್ತುಗಳಿಗೆ ತೆರಿಗೆ ಹಾಕುವುದರಿಂದ ಅದನ್ನು ಗ್ರಾಹಕರ ಮೇಲೆಯೇ ಹಾಕುತ್ತದೆ. ಫೋನ್‌ಗಳ ಮೇಲೆ ಶೇ.18 ಜಿಎಸ್‌ಟಿ ಇದೆ. ಅಬಕಾರಿ ಸುಂಕವನ್ನು ಕಂಪನಿಗಳು ಹಾಕುವ ಪರಿಣಾಮ ಫೋನ್‌ ಬೆಲೆ ಶೇ.35 ರಷ್ಟು ಹೆಚ್ಚಿರುತ್ತದೆ.

    ಅಮೆರಿಕ, ಜಪಾನ್‌, ಚೀನಾಗೆ ಹೋಲಿಸಿದರೆ ಭಾರತದಲ್ಲಿ ಐಫೋನ್‌ ಬಳಕೆ ಮಾಡುವವರ ಸಂಖ್ಯೆ ಬಹಳ ಕಡಿಮೆ. ಬೇಡಿಕೆ ಜಾಸ್ತಿ ಇದ್ದಾಗ ಫೋನ್‌ಗಳ ಬೆಲೆ ಕಡಿಮೆ ಇರುವುದು ಸಾಮಾನ್ಯ. ಭಾರತದಲ್ಲಿ ಬೇಡಿಕೆ ಕಡಿಮೆ ಇರುವುದರಿಂದ ಬೆಲೆ ಜಾಸ್ತಿ ಇದೆ.

    ಆಪಲ್‌ ಭಾರತದಲ್ಲಿ ವಿಶೇಷ ಮಾರುಕಟ್ಟೆ ತಂತ್ರವನ್ನು ಬಳಕೆ ಮಾಡುತ್ತಿದೆ. ಹೊಸ ಐಫೋನ್‌ ಬಿಡುಗಡೆ ಮಾಡುವ ಸಮಯದಲ್ಲಿ ಹಳೆಯ ಐಫೋನ್‌ ಬೆಲೆಗಳು ಭಾರೀ ಪ್ರಮಾಣದಲ್ಲಿ ಇಳಿಕೆ ಮಾಡುತ್ತದೆ. ಆದರೆ ಬೇರೆ ಕಂಪನಿಗಳ ಫೋನ್‌ ದರಗಳು ಇಳಿಕೆಯಾದರೂ ಅಷ್ಟೊಂದು ದರ ಇಳಿಕೆಯಾಗುವುದಿಲ್ಲ.

    ಡಾಲರ್‌ ಬೆಲೆ ಏರಿಕೆಯಾದಂತೆ ಇಲ್ಲೂ ವಸ್ತುಗಳ ಬೆಲೆ ಏರಿಕೆಯಾಗುತ್ತದೆ. ಈ ಕಾರಣದಿಂದ ಭಾರತದಲ್ಲೂ ಐಫೋನ್‌ ದರ ಹೆಚ್ಚಿರುತ್ತದೆ.

  • ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌25 ಆಲ್ಟ್ರಾ, ಎಸ್‌24 ಆಲ್ಟ್ರಾ, ಎಸ್‌23 ಆಲ್ಟ್ರಾ ಬೆಲೆ ದಿಢೀರ್‌ ಭಾರೀ ಇಳಿಕೆ

    ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌25 ಆಲ್ಟ್ರಾ, ಎಸ್‌24 ಆಲ್ಟ್ರಾ, ಎಸ್‌23 ಆಲ್ಟ್ರಾ ಬೆಲೆ ದಿಢೀರ್‌ ಭಾರೀ ಇಳಿಕೆ

    ನವದೆಹಲಿ: ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌25 ಆಲ್ಟ್ರಾ, ಎಸ್‌24 ಆಲ್ಟ್ರಾ, ಎಸ್‌23 ಆಲ್ಟ್ರಾ ಸ್ಮಾರ್ಟ್‌ಫೋನಿನ (Smartphone) ಬೆಲೆ ಭಾರೀ ಕಡಿತವಾಗಿದೆ.

    ಗೆಲಾಕ್ಸಿ ಎಸ್‌ 25 ಆಲ್ಟ್ರಾ (Samsung Galaxy S25 Ultra) 1,29,999 ರೂ. ದರದಲ್ಲಿ ಬಿಡುಗಡೆಯಾಗಿತ್ತು. ಆದರೆ ಈಗ ಈ ಫೋನ್‌ ಅಮೆಜಾನ್‌ ಇಂಡಿಯಾದಲ್ಲಿ ಹೆಚ್‌ಡಿಎಫ್‌ಸಿ ಕಾರ್ಡ್‌ ಮೂಲಕ 1,18,999 ರೂ.ಗೆ ಲಭ್ಯವಿದೆ. ಅಷ್ಟೇ ಅಲ್ಲದೇ ಹಳೆಯ ಫೋನ್‌ ನೀಡುವ ಮೂಲಕ ಮತ್ತಷ್ಟು ಕಡಿಮೆ ಬೆಲೆಗೆ ಖರೀದಿಸಬಹುದು. ಈ ಫೋನ್‌ 12 ಜಿಬಿ ರ‍್ಯಾಮ್‌, 256 ಜಿಬಿ ಆಂತರಿಕ ಮೆಮೊರಿ, ಸ್ನಾಪ್‌ಡ್ರಾಗನ್‌ 8 ಎಲೈಟ್‌ ಪ್ರೊಸೆಸರ್‌ ಹೊಂದಿದೆ. ಇದನ್ನೂ ಓದಿ: 25 ವರ್ಷದ ಬಳಿಕ ಪಾಕ್‌ ತೊರೆದ ಮೈಕ್ರೋಸಾಫ್ಟ್

     

    ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌ 24 ಆಲ್ಟ್ರಾ (8GB RAM + 256GB) ಫೋನ್‌ 1,29,999 ರೂ.ಗೆ ಬಿಡುಗಡೆಯಾಗಿತ್ತು. ಈಗ ಈ ಫೋನ್‌ ದರ 38% ಕಡಿಮೆಯಾಗಿದ್ದು 83,999 ರೂ.ಗೆ ಅಮೇಜಾನ್‌ನಲ್ಲಿ ಲಭ್ಯವಿದೆ. ಆಯ್ದ ಕ್ರೆಡಿಟ್‌ ಕಾರ್ಡ್‌ನಲ್ಲಿ 1,500 ರೂ. ಡಿಸ್ಕೌಂಟ್‌ ಇದೆ.

    ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌ 23 ಆಲ್ಟ್ರಾ (8GB RAM + 256GB ) ಫೋನ್‌ 1,24,999 ರೂ. ದರದಲ್ಲಿ ಬಿಡುಗಡೆಯಾಗಿತ್ತು. ಆದರೆ ಈಗ ಈ ಫೋನ್‌ 84,999 ರೂ.ಗೆ ಲಭ್ಯವಿದೆ.

  • 25 ವರ್ಷದ ಬಳಿಕ ಪಾಕ್‌ ತೊರೆದ ಮೈಕ್ರೋಸಾಫ್ಟ್‌

    25 ವರ್ಷದ ಬಳಿಕ ಪಾಕ್‌ ತೊರೆದ ಮೈಕ್ರೋಸಾಫ್ಟ್‌

    ಇಸ್ಲಾಮಾಬಾದ್‌: ಆರ್ಥಿಕ ಕುಸಿತದಲ್ಲಿರುವ (Economic Crisis) ಪಾಕಿಸ್ತಾನಕ್ಕೆ ಈ ಮೈಕ್ರೋಸಾಫ್ಟ್‌ (Microsoft) ದೊಡ್ಡ ಶಾಕ್‌ ನೀಡಿದೆ. 25 ವರ್ಷದ ಬಳಿಕ ಪಾಕಿಸ್ತಾನದಲ್ಲಿರುವ ತನ್ನ ಕಚೇರಿಯನ್ನು ಮುಚ್ಚಲು ಮೈಕ್ರೋಸಾಫ್ಟ್‌ ಮುಂದಾಗಿದೆ.

    2000ನೇ ಇಸ್ವಿಯಲ್ಲಿ ಮೈಕ್ರೋಸಾಫ್ಟ್‌ ಪಾಕಿಸ್ತಾನದಲ್ಲಿ (Pakistan) ತನ್ನ ಕಾರ್ಯಾಚರಣೆಯನ್ನು ಆರಂಭಿಸಿತ್ತು. ಮೈಕ್ರೋಸಾಫ್ಟ್ ಯಾವ ಕಾರಣಕ್ಕೆ ಈ ನಿರ್ಧಾರ ಕೈಗೊಂಡಿದೆ ಎನ್ನುವುದನ್ನು ಕಾರಣ ತಿಳಿಸದೇ ಇದ್ದರೂ ಆರ್ಥಿಕ ಪ್ರಕ್ಷುಬ್ಧತೆ ಮತ್ತು ಬದಲಾಗುತ್ತಿರುವ ರಾಜಕೀಯ ಕಾರಣದಿಂದ ಈ ನಿರ್ಧಾರ ಕೈಗೊಂಡಿದೆ ಎಂಬ ವಿಶ್ಲೇಷಣೆ ಕೇಳಿ ಬಂದಿದೆ.

    ವಿಶ್ವಾದ್ಯಂತ ಸುಮಾರು 9,100 ಉದ್ಯೋಗಗಳನ್ನು ಕಡಿತಗೊಳಿಸುವ ನಿರ್ಧಾರ ಕೈಗೊಂಡ ಬೆನ್ನಲ್ಲೇ ಮೈಕ್ರೋಸಾಫ್ಟ್‌ ಪಾಕ್‌ ತೊರೆಯುವ ಸುದ್ದಿ ಪ್ರಕಟವಾಗಿದೆ.

    ಪಾಕಿಸ್ತಾನದಲ್ಲಿ ಮೈಕ್ರೋಸಾಫ್ಟ್‌ ಹೂಡಿಕೆ ಮಾಡಲು ಮುಂದಾಗಿತ್ತು. ಆದರೆ ಇಮ್ರಾನ್ ಖಾನ್ ಪದಚ್ಯುತಗೊಳಿಸಿದ ನಂತರ ದೇಶದಲ್ಲಿನ ಅಸ್ಥಿರತೆಯಿಂದಾಗಿ ಮೈಕ್ರೋಸಾಫ್ಟ್ ತನ್ನ ವಿಸ್ತರಣೆಯನ್ನು ವಿಯೆಟ್ನಾಂಗೆ ಬದಲಾಯಿಸಿದೆ.  ಇದನ್ನೂ ಓದಿ9 ಸಾವಿರ ಉದ್ಯೋಗಿಗಳನ್ನು ಮನೆಗೆ ಕಳುಹಿಸಲು ಮುಂದಾದ ಮೈಕ್ರೋಸಾಫ್ಟ್‌ 

    ಪಾಕಿಸ್ತಾನದಲ್ಲಿ ಮೈಕ್ರೋಸಾಫ್ಟ್‌ ಸ್ಥಾಪಕ ಮುಖ್ಯಸ್ಥ ಜವಾದ್ ರೆಹಮಾನ್ ಲಿಕ್ಡ್‌ಇನ್‌ನಲ್ಲಿ ಈ ವಿಚಾರವನ್ನು ತಿಳಿಸಿದ್ದಾರೆ. ಮೈಕ್ರೋಸಾಫ್ಟ್ ಪಾಕಿಸ್ತಾನದಲ್ಲಿ ತನ್ನ ಕಾರ್ಯಾಚರಣೆಗಳನ್ನು ಅಧಿಕೃತವಾಗಿ ಮುಚ್ಚುತ್ತಿದೆ ಎನ್ನುವುದನ್ನು ನಾನು ತಿಳಿದುಕೊಂಡೆ. ಉಳಿದಿರುವ ಕೊನೆಯ ಕೆಲವು ಉದ್ಯೋಗಿಗಳಿಗೆ ಔಪಚಾರಿಕವಾಗಿ ತಿಳಿಸಲಾಯಿತು. ಒಂದು ಯುಗ ಕೊನೆಗೊಳ್ಳುತ್ತದೆ ಎಂದು ಬರೆದುಕೊಂಡಿದ್ದಾರೆ.

    ಮೈಕ್ರೋಸಾಫ್ಟ್ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವ ಸುದ್ದಿಗೆ ಪ್ರತಿಕ್ರಿಯಿಸಿದ ಮಾಜಿ ಅಧ್ಯಕ್ಷ ಆರಿಫ್ ಅಲ್ವಿ, ಮೈಕ್ರೋಸಾಫ್ಟ್ ನಿರ್ಧಾರವು ನಮ್ಮ ಆರ್ಥಿಕ ಭವಿಷ್ಯಕ್ಕೆ ಕಳವಳಕಾರಿ ಸಂಕೇತವಾಗಿದೆ. ಫೆಬ್ರವರಿ 2022 ರಲ್ಲಿ ಬಿಲ್ ಗೇಟ್ಸ್ ನನ್ನ ಕಚೇರಿಗೆ ಭೇಟಿ ನೀಡಿದ್ದನ್ನು ನಾನು ಸ್ಪಷ್ಟವಾಗಿ ನೆನಪಿಸಿಕೊಳ್ಳುತ್ತೇನೆ. ಪಾಕಿಸ್ತಾನದ ಜನರ ಪರವಾಗಿ, ನಮ್ಮ ದೇಶದಲ್ಲಿ ಪೋಲಿಯೊ ನಿರ್ಮೂಲನೆಗೆ ಅವರ ಗಮನಾರ್ಹ ಕೊಡುಗೆಗಳಿಗಾಗಿ ಅವರಿಗೆ ಹಿಲಾಲ್-ಎ-ಇಮ್ತಿಯಾಜ್ ಪ್ರಶಸ್ತಿಯನ್ನು ನೀಡುವ ಗೌರವ ನನಗೆ ಸಿಕ್ಕಿತು ಎಂದು ಬರೆದುಕೊಂಡಿದ್ದಾರೆ.

    ಪಾಕಿಸ್ತಾನ ಈಗ ಅನಿಶ್ಚಿತತೆಯ ಸುಳಿಯಲ್ಲಿ ಸಿಲುಕಿದೆ. ಹೆಚ್ಚುತ್ತಿರುವ ನಿರುದ್ಯೋಗವಿದೆ. ನಮ್ಮಲ್ಲಿನ ಪ್ರತಿಭಾವಂತರು ವಿದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಖರೀದಿಸುವ ಶಕ್ತಿ ಕಡಿಮೆಯಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

  • 9 ಸಾವಿರ ಉದ್ಯೋಗಿಗಳನ್ನು ಮನೆಗೆ ಕಳುಹಿಸಲು ಮುಂದಾದ ಮೈಕ್ರೋಸಾಫ್ಟ್‌

    9 ಸಾವಿರ ಉದ್ಯೋಗಿಗಳನ್ನು ಮನೆಗೆ ಕಳುಹಿಸಲು ಮುಂದಾದ ಮೈಕ್ರೋಸಾಫ್ಟ್‌

    ವಾಷಿಂಗ್ಟನ್‌: ಸಾಫ್ಟ್‌ವೇರ್‌ ದೈತ್ಯ ಮೈಕ್ರೋಸಾಫ್ಟ್‌ (Microsoft) 9 ಸಾವಿರ ಉದ್ಯೋಗಿಗಳನ್ನು ಮನೆಗೆ ಕಳುಹಿಸಲು ನಿರ್ಧರಿಸಿದೆ.

    2023 ರ ನಂತರದ ಅತಿದೊಡ್ಡ ಉದ್ಯೋಗ ಕಡಿತ (Job Cut) ಮಾಡಲು ಮೈಕ್ರೋಸಾಫ್ಟ್‌ ಮುಂದಾಗಿದೆ. ಒಟ್ಟು ಉದ್ಯೋಗಿಗಳ ಪೈಕಿ 4% ಅಥವಾ 9,100 ಜನರನ್ನು ವಜಾಗೊಳಿಸಲಾಗುವುದು ಎಂದು ಕಂಪನಿ ಹೇಳಿದೆ.

    ಜೂನ್ 2024 ರ ಹೊತ್ತಿಗೆ ವಿಶ್ವಾದ್ಯಂತ ಸುಮಾರು 2,28,000 ಉದ್ಯೋಗಿಗಳನ್ನು ಮೈಕ್ರೋಸಾಫ್ಟ್‌ ಹೊಂದಿತ್ತು. ಮೈಕ್ರೋಸಾಫ್ಟ್ ಮೇ ತಿಂಗಳಲ್ಲಿ 6,000 ಉದ್ಯೋಗಿಗಳನ್ನು ವಜಾಗೊಳಿಸಿತ್ತು. ಈ ಬಾರಿ ವಿಶೇಷವಾಗಿ ಮಾರಾಟ ವಿಭಾಗದಲ್ಲಿ ಉದ್ಯೋಗ ಕಡಿತಗೊಳಿಸಲು ಮುಂದಾಗಿದೆ. ಇದನ್ನೂ ಓದಿ: ಮೈಕ್ರೋಸಾಫ್ಟ್‌ ಹಿಂದಿಕ್ಕಿ ವಿಶ್ವದ ಮೌಲ್ಯಯುತ ಕಂಪನಿಯಾದ ಎನ್‌ವಿಡಿಯಾ

    ಆರ್ಥಿಕ ಅಸ್ಥಿರತೆಯಿಂದಾಗಿ ಕಳೆದ ವರ್ಷದಿಂದ ವೆಚ್ಚಕ್ಕೆ ಕಡಿವಾಣ ಹಾಕಲು ಮೈಕ್ರೋಸಾಫ್ಟ್‌ ಮುಂದಾಗುತ್ತಿದ್ದು ಅದರಲ್ಲಿ ನೌಕರರ ವಜಾಗೊಳಿಸುವ ಕ್ರಮವೂ ಸೇರಿದೆ. ಕಳೆದ ವರ್ಷವೂ ಇದೇ ರೀತಿಯಲ್ಲಿ ಉದ್ಯೋಗ ಕಡಿತ ಮಾಡಿತ್ತು. ಈ ಮೂಲಕ ಕಂಪನಿಯು ತನ್ನ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಪಡಿಸುವ ಪ್ರಯತ್ನಕ್ಕೆ ಕೈಹಾಕಿತ್ತು.

    ಕೃತಕ ಬುದ್ಧಿಮತ್ತೆಯಲ್ಲಿ (AI) ಭಾರಿ ಹೂಡಿಕೆ ಮಾಡುತ್ತಿರುವ ಬಿಗ್‌ ಟೆಕ್‌ ಕಂಪನಿಗಳು ಈಗ ಉದ್ಯೋಗ ಕಡಿತಕ್ಕೆ ಕೈಹಾಕಿವೆ. ಈ ವರ್ಷದ ಆರಂಭದಲ್ಲಿ ಫೇಸ್‌ಬುಕ್‌ ಮಾತೃಸಂಸ್ಥೆ ಮೆಟಾ 5% ಉದ್ಯೋಗ ಕಡಿತ ಮಾಡುವುದಾಗಿ ಘೋಷಿಸಿತ್ತು. ಗೂಗಲ್‌ ಕಳೆದ ವರ್ಷ ನೂರಾರು ಉದ್ಯೋಗಿಗಳನ್ನು ಮನೆಗೆ ಕಳುಹಿಸಿತ್ತು.

  • ಅಮೆರಿಕಕ್ಕೆ ಭಾರತದಿಂದ 5 ವಿಮಾನ ಭರ್ತಿ ಐಫೋನ್‌ ಕಳುಹಿಸಿದ ಆಪಲ್‌

    ಅಮೆರಿಕಕ್ಕೆ ಭಾರತದಿಂದ 5 ವಿಮಾನ ಭರ್ತಿ ಐಫೋನ್‌ ಕಳುಹಿಸಿದ ಆಪಲ್‌

    ನವದೆಹಲಿ: ಡೊನಾಲ್ಡ್‌ ಟ್ರಂಪ್‌ (Donald Trump) ವಿಧಿಸಿದ ತೆರಿಗೆ ಸುಂಕದಿಂದ ಪಾರಾಗಲು ಆಪಲ್‌ (Apple) ಕಂಪನಿ ಭಾರತದಿಂದ 5 ವಿಮಾನದಷ್ಟು ಐಫೋನ್‌ (iPhone) ಮತ್ತು ಇತರ ಉತ್ಪನ್ನಗಳನ್ನು ಅಮೆರಿಕಕ್ಕೆ (USA) ರಫ್ತು ಮಾಡಿದೆ.

    ಟ್ರಂಪ್‌ ತೆರಿಗೆ ಸಮರ ಆರಂಭಿಸಿದ್ದು ವಿದೇಶದಿಂದ ಅಮೆರಿಕಕ್ಕೆ ಆಮದಾಗುವ ವಸ್ತುಗಳ ಮೇಲಿದ್ದ ಸುಂಕವನ್ನು ಹೆಚ್ಚಿಸಿದ್ದಾರೆ. ಇದರಿಂದಾಗಿ ಅಮೆರಿಕದಲ್ಲಿ ವಿದೇಶದಿಂದ ಆಮದಾಗುವ ವಸ್ತುಗಳ ಬೆಲೆ ಏರಿಕೆಯಾಗಲಿದೆ.

    ವಸ್ತುಗಳ ಬೆಲೆ ಏರಿಕೆಯಿಂದ ಪಾರಾಗಲು ಆಪಲ್‌ ಕಂಪನಿ ಭಾರೀ ಪ್ರಮಾಣದಲ್ಲಿ ಐಫೋನ್‌ ಮತ್ತು ಇತರ ವಸ್ತುಗಳನ್ನು ಭಾರತದಿಂದ ರಫ್ತು ಮಾಡಿದೆ ಎಂದು ವರದಿಯಾಗಿದೆ.

    ಭಾರತದ ಮೇಲೆ ಟ್ರಂಪ್‌ 26% ಚೀನಾದ ಮೇಲೆ 52%, ತೈವಾನ್‌ ಮೇಲೆ 32%, ವಿಯೆಟ್ನಾಂ ಮೇಲೆ 46% ತೆರಿಗೆ ವಿಧಿಸಿದ್ದಾರೆ. ಐಫೋನ್‌ ಅಮೆರಿಕ ಕಂಪನಿಯಾದರೂ ಬಹುತೇಕ ಐಫೋನ್‌ಗಳು, ಅದರ ಬಿಡಿಭಾಗಗಳು ಭಾರತ, ವಿಯೆಟ್ನಾಂ, ತೈವಾನ್‌, ಚೀನಾದಲ್ಲಿ ತಯಾರಾಗುತ್ತವೆ. ಹೀಗಾಗಿ ಈ ದೇಶಗಳಿಂದ ರಫ್ತಾಗುವ ಐಫೋನ್‌ಗಳೂ ದುಬಾರಿ ಆಗಲಿವೆ. ಬೇರೆ ದೇಶಗಳಿಗೆ ಹೋಲಿಕೆ ಮಾಡಿದರೆ ಭಾರತದ ಮೇಲೆ ವಿಧಿಸಿದ ಸುಂಕ ಕಡಿಮೆಯಿದೆ. ಇದನ್ನೂ ಓದಿ: ಸುಂಕ ನೀತಿಗೆ ವ್ಯಾಪಕ ವಿರೋಧ, ಟ್ರಂಪ್‌ ವಿರುದ್ಧ ತಿರುಗಿಬಿದ್ದ ಜನ – ಅಮೆರಿಕದ 1,200 ಸ್ಥಳಗಳಲ್ಲಿ‌ ಬೃಹತ್‌ ಪ್ರತಿಭಟನೆ

    ಮಾರ್ಚ್ ಕೊನೆಯ ವಾರದಲ್ಲಿ ಆಪಲ್‌ ಐಫೋನ್‌ಗಳನ್ನು ರಫ್ತು ಮಾಡಿದೆ. ಏಪ್ರಿಲ್ 5 ರಿಂದ ಜಾರಿಗೆ ಬಂದ ಟ್ರಂಪ್ ಆಡಳಿತವು ವಿಧಿಸಿದ 10% ಪ್ರತಿ ತೆರಿಗೆ ಮೊದಲು ರಫ್ತಾಗಿದೆ.

    ಚೀನಾದ ಸರಕುಗಳ ಮೇಲೆ 54% ತೆರಿಗೆ ವಿಧಿಸಿದರೆ ಭಾರತದ ವಸ್ತುಗಳ ಮೇಲೆ 26% ತೆರಿಗೆ ವಿಧಿಸಲಾಗುತ್ತಿದೆ. ಈ ನಿರ್ಧಾರದಿಂದ ಭಾರತವು ಆಪಲ್‌ನ ದೊಡ್ಡ ಜಾಗತಿಕ ಉತ್ಪಾದನಾ ನೆಲೆಯಾಗಿ ಹೊರಹೊಮ್ಮುವ ಸಾಧ್ಯತೆಯಿದೆ. ಅಂದಾಜು ಅಮೆರಿಕಕ್ಕೆ 9 ಶತಕೋಟಿ ಡಾಲರ್‌ ಮೌಲ್ಯದ ಐಫೋನ್‌ಗಳನ್ನು ಭಾರತ ರಫ್ತು ಮಾಡುತ್ತಿದೆ.

    ಮುಂಬೈನಿಂದ ಅಮೆರಿಕಕ್ಕೆ ರತ್ನಗಳು ಮತ್ತು ಆಭರಣಗಳ ರಫ್ತು ಏಪ್ರಿಲ್ 1 ಮತ್ತು 4 ರ ನಡುವೆ ಆರು ಪಟ್ಟು ಹೆಚ್ಚಾಗಿ 344 ಮಿಲಿಯನ್‌ ಡಾಲರ್‌ಗೆ ಏರಿಕೆಯಾಗಿದೆ. ಒಂದು ವರ್ಷದ ಹಿಂದೆ ರಫ್ತು 61 ಮಿಲಿಯನ್ ಡಾಲರ್‌ ಆಗಿತ್ತು. ಇದನ್ನೂ ಓದಿ: ಏ.10ರಿಂದ ಅಮೆರಿಕದ ಸರಕುಗಳ ಮೇಲೆ 34% ಆಮದು ಸುಂಕ – ಚೀನಾ ಪ್ರತೀಕಾರದ ಸುಂಕಕ್ಕೆ ದೊಡ್ಡಣ್ಣ ಗರಂ

    ಫಾಕ್ಸ್‌ಕಾನ್‌ 2019ರಿಂದ ಆಪಲ್‌ ಐಫೋನ್‌ಗಳನ್ನು ಭಾರತದಲ್ಲಿ ತಯಾರಿಸುತ್ತಿದ್ದು, ತಮಿಳುನಾಡಿನಲ್ಲಿ ತನ್ನ ಘಟಕ ತೆರದಿದೆ. ಕರ್ನಾಟಕದ ಕೋಲಾರದ ನರಸಾಪುರ ಮತ್ತು ಬೆಂಗಳೂರಿನ ಪೀಣ್ಯದಲ್ಲಿ ವಿಸ್ಟ್ರಾನ್‌ ಕಂಪನಿ ಐಫೋನ್‌ ತಯಾರಿಸುತ್ತಿದೆ.

  • ಮೊದಲ ಬಾರಿಗೆ ಆಪಲ್‌ ಉತ್ಪನ್ನ ತಯಾರಿಸಲು ಚೀನಾ, ವಿಯೆಟ್ನಾಂಗೆ ಎಲೆಕ್ಟ್ರಾನಿಕ್‌ ಭಾಗಗಳು ರಫ್ತು!

    ಮೊದಲ ಬಾರಿಗೆ ಆಪಲ್‌ ಉತ್ಪನ್ನ ತಯಾರಿಸಲು ಚೀನಾ, ವಿಯೆಟ್ನಾಂಗೆ ಎಲೆಕ್ಟ್ರಾನಿಕ್‌ ಭಾಗಗಳು ರಫ್ತು!

    ನವದೆಹಲಿ: ಮೊದಲ ಬಾರಿಗೆ ಭಾರತ (India) ಮ್ಯಾಕ್‌ಬುಕ್‌, ಏರ್‌ಪಾಡ್‌, ವಾಚ್, ಪೆನ್ಸಿಲ್ ಮತ್ತು ಐಫೋನ್‌ಗಳಂತಹ ಆಪಲ್ (Apple) ಉತ್ಪನ್ನಗಳನ್ನು ತಯಾರಿಸಲು ಚೀನಾ (China) ಮತ್ತು ವಿಯೆಟ್ನಾಂಗೆ (Vietnam) ಎಲೆಕ್ಟ್ರಾನಿಕ್ ಭಾಗಗಳನ್ನು ರಫ್ತು ಮಾಡಲು ಆರಂಭಿಸಿದೆ.

    ಆಪಲ್ ಪೂರೈಕೆದಾರರಾದ ಮದರ್‌ಸನ್ ಗ್ರೂಪ್, ಜಬಿಲ್, ಆಕ್ವಸ್ ಮತ್ತು ಟಾಟಾ ಎಲೆಕ್ಟ್ರಾನಿಕ್ಸ್ ಭಾರತದಲ್ಲಿ ಐಪ್ಯಾಡ್‌ಗಳನ್ನು ಹೊರತುಪಡಿಸಿ ತನ್ನ ಎಲ್ಲಾ ಉತ್ಪನ್ನಗಳಿಗೆ ಈಗ ಭಾರತದಲ್ಲೇ ಎಲೆಕ್ಟ್ರಾನಿಕ್‌ ವಸ್ತುಗಳನ್ನು (Electronic Parts ) ತಯಾರಿಸಲು ಆರಂಭಿಸಿದೆ.

    ಇಲ್ಲಿಯವರೆಗೆ ಭಾರತ ಚೀನಾ ಮತ್ತು ವಿಯೆಟ್ನಾಂದಿಂದ ಎಲೆಕ್ಟ್ರಾನಿಕ್‌ ವಸ್ತುಗಳನ್ನು ಆಮದು ಮಾಡಿ ಬಳಿಕ ಜೋಡಣೆ ಮಾಡುತ್ತಿತ್ತು. ಆದರೆ ಈಗ ಎಲೆಕ್ಟ್ರಾನಿಕ್‌ ವಸ್ತುಗಳನ್ನು ರಫ್ತು ಮಾಡುವ ಬೆಳವಣಿಗೆಯಾಗಿದೆ.

    ಮೇಕ್‌ ಇನ್‌ ಇಂಡಿಯಾ ಯೋಜನೆಗಳಿಗೆ ಸರ್ಕಾರ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದು, 2030 ರ ವೇಳೆಗೆ ಭಾರತ 35-40 ಬಿಲಿಯನ್ ಡಾಲರ್‌ ಮೌಲ್ಯದ ಎಲೆಕ್ಟ್ರಾನಿಕ್ಸ್‌ ವಸ್ತುಗಳನ್ನು ರಫ್ತು ಮಾಡಬೇಕೆಂಬ ಗುರಿಯನ್ನು ಹಾಕಿಕೊಂಡಿದೆ. ಇದನ್ನೂ ಓದಿ: ಐಫೋನ್‌ 16ಇ ಬಿಡುಗಡೆ | ಬೆಲೆ ಎಷ್ಟು? ಬೇರೆ ದೇಶದಲ್ಲಿ ಎಷ್ಟು? ಭಾರತದಲ್ಲಿ ದುಬಾರಿ ಯಾಕೆ?

    ಮೆಕ್ಯಾನಿಕ್ಸ್ ಎಂಬುದು ಎಲೆಕ್ಟ್ರಾನಿಕ್ ಉತ್ಪನ್ನಗಳಲ್ಲಿ ಮದರ್‌ಬೋರ್ಡ್, ಕೇಂದ್ರ ಸಂಸ್ಕರಣಾ ಘಟಕ ಮತ್ತು ಇತರ ಉಪ-ಅಸೆಂಬ್ಲಿಗಳನ್ನು ಒಟ್ಟಿಗೆ ಹಿಡಿದಿಟ್ಟುಕೊಳ್ಳುವ ಘಟಕಗಳಾಗಿವೆ. ಈ ಘಟಕಗಳ ತಯಾರಿಕೆಯು ಸಂಕೀರ್ಣ ಎಂಜಿನಿಯರಿಂಗ್ ಅನ್ನು ಒಳಗೊಂಡಿರುತ್ತದೆ ಮತ್ತು ಹೈಟೆಕ್ ಯಂತ್ರಗಳ ಅಗತ್ಯವಿರುತ್ತದೆ.

    ಆಪಲ್ ಪ್ರಸ್ತುತ ಭಾರತದಲ್ಲಿ ಐಫೋನ್‌ಗಳನ್ನು ಮಾತ್ರ ತಯಾರಿಸುತ್ತದೆ ಮತ್ತು ಶೀಘ್ರದಲ್ಲೇ ಇಲ್ಲಿ ಏರ್‌ಪಾಡ್‌ಗಳ ಉತ್ಪಾದನೆಯನ್ನು ಪ್ರಾರಂಭಿಸಲಿದೆ.

    ಭಾರತದಲ್ಲಿ ತಯಾರಾದ ಆಪಲ್‌ ಐಫೋನ್‌ಗಳು ಈಗ ವಿದೇಶಗಳಿಗೂ ರಫ್ತು ಆಗುತ್ತಿದೆ. ಏಪ್ರಿಲ್‌ 2024 ರಿಂದ ಜನವರಿ 2025 ರ ಅವಧಿಯಲ್ಲಿ ಆಪಲ್‌ 1 ಲಕ್ಷ ಕೋಟಿ ರೂ. ಮೌಲ್ಯದ ಐಫೋನ್‌ಗಳನ್ನು ಮಾರಾಟ ಮಾಡಿತ್ತು. ಈ ಹಿಂದಿನ ಈ ಅವಧಿಯಲ್ಲಿ ಆಪಲ್‌ 76,000 ಕೋಟಿ ರೂ. ಮೌಲ್ಯದ ಫೋನ್‌ಗಳನ್ನು ರಫ್ತು ಮಾಡಿತ್ತು.

     

  • ಐಫೋನ್‌ 16ಇ ಬಿಡುಗಡೆ | ಬೆಲೆ ಎಷ್ಟು? ಬೇರೆ ದೇಶದಲ್ಲಿ ಎಷ್ಟು? ಭಾರತದಲ್ಲಿ ದುಬಾರಿ ಯಾಕೆ?

    ಐಫೋನ್‌ 16ಇ ಬಿಡುಗಡೆ | ಬೆಲೆ ಎಷ್ಟು? ಬೇರೆ ದೇಶದಲ್ಲಿ ಎಷ್ಟು? ಭಾರತದಲ್ಲಿ ದುಬಾರಿ ಯಾಕೆ?

    ನವದೆಹಲಿ: ಬಹು ನಿರೀಕ್ಷಿತ ಐಫೋನ್‌ 16ಇ ಫೋನನ್ನು ಆಪಲ್‌ (Apple) ಕಂಪನಿ ಬಿಡುಗಡೆ ಮಾಡಿದೆ. ಆದರೆ ಅಮೆರಿಕ, ಚೀನಾ, ಜಪಾನ್‌, ವಿಯೆಟ್ನಾಂಗೆ ಹೋಲಿಸಿದರೆ ಭಾರತದಲ್ಲಿ iPhone 16e ದರ ಜಾಸ್ತಿ ಇದೆ.

    ಕಪ್ಪು ಮತ್ತು ಬಿಳಿ ಬಣ್ಣದ ಫೋನ್‌ ಮೂರು ಆಂತರಿಕ ಮೆಮೋರಿಯಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಭಾರತದಲ್ಲಿ (India) 128 ಜಿಬಿಗೆ 59,900 ರೂ., 256 ಜಿಬಿಗೆ 69,900 ರೂ., 512 ಜಿಬಿಗೆ 89,000 ರೂ. ದರವನ್ನು ನಿಗದಿ ಮಾಡಲಾಗಿದೆ.‌ ಈಗ ಬಿಡುಗಡೆಯಾಗಿದ್ದರೂ ಫೆ. 28 ರಿಂದ ಈ ಫೋನಿನ ಮಾರಾಟ ಆರಂಭವಾಗಲಿದೆ.

    10 ವರ್ಷದ ಮೊದಲು ವಿಶ್ವದಲ್ಲಿ ಐಫೋನ್‌ಗಳು ಬಿಡುಗಡೆಯಾದ ಕೆಲ ತಿಂಗಳ ನಂತರ ಭಾರತದ ಮಾರುಕಟ್ಟೆಗೆ ಬಿಡುಗಡೆಯಾಗುತ್ತಿತ್ತು. ಆದರೆ ಈಗ ವಿಶ್ವದ ಮಾರುಕಟ್ಟೆಗೆ ಬಿಡುಗಡೆಯಾಗುವ ಸಮಯದಲ್ಲಿ ಭಾರತದಲ್ಲೂ ಬಿಡುಗಡೆಯಾಗುತ್ತಿದೆ. ಐಫೋನ್‌ 16ಇ ಫೋನನ್ನು ಭಾರತದಲ್ಲೇ ಜೋಡಣೆ ಮಾಡುತ್ತಿರುವ ಕಾರಣ ಯುಕೆ, ಯುಎಇಗೆ ಹೋಲಿಸಿದರೆ ಬೆಲೆ ಕಡಿಮೆಯಿದೆ.

    ಐಫೋನ್ 16, ಐಫೋನ್ 16 ಪ್ಲಸ್, ಐಫೋನ್ 16 ಪ್ರೊ, ಐಫೋನ್ 16 ಪ್ರೊ ಮ್ಯಾಕ್ಸ್ ಫೋನ್‌ಗಳನ್ನು ಭಾರತದಲ್ಲೇ ಜೋಡಣೆ ಮಾಡಲಾಗುತ್ತಿದ್ದು ಈ ಪಟ್ಟಿಗೆ ಹೊಸದಾಗಿ ಐಫೋನ್‌ 16ಇ ಸೇರ್ಪಡೆಯಾಗಿದೆ.

    16 ಜಿಬಿಗೆ ಎಲ್ಲಿಎಷ್ಟು ದರ?
    ಭಾರತ – 59,900 ರೂ.
    ಅಮೆರಿಕ – 599 ಡಾಲರ್‌(ಅಂದಾಜು 52,000 ರೂ.)
    ಚೀನಾ – 4,499 ಯುವಾನ್‌(ಅಂದಾಜು 53,570 ರೂ.)
    ಜಪಾನ್‌ – 99,800 ಯೆನ್‌(ಅಂದಾಜು 57,600 ರೂ.)
    ವಿಯೆಟ್ನಾಂ – 16,999,000 ಡಾಂಗ್‌ (ಅಂದಾಜು 57,800 ರೂ.)
    ಯುಎಇ – 2,599 ಯುಎಡಿ( ಅಂದಾಜು 61,500 ರೂ.)
    ಯುಕೆ – 599 ಪೌಂಡ್‌(65,500 ರೂ.)

    ಬೆಲೆ ಏರಿಕೆಗೆ ಕಾರಣ ಏನು?
    ಭಾರತದಲ್ಲಿ ಐಫೋನ್‌ ಉತ್ಪಾದನೆಯಾದರೂ ಹಲವು ಬಿಡಿ ಭಾಗಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಅಬಕಾರಿ ಸುಂಕ ಪಾವತಿ ಮಾಡಿದ ಬಳಿಕ ವಸ್ತುಗಳು ಭಾರತಕ್ಕೆ ಆಮದು ಆಗುತ್ತಿದೆ. ಆಮದು ಮಾಡಿಕೊಳ್ಳುವ ವಸ್ತುಗಳಿಗೆ ತೆರಿಗೆ ಹಾಕುವುದರಿಂದ ಅದನ್ನು ಗ್ರಾಹಕರ ಮೇಲೆಯೇ ಹಾಕುತ್ತದೆ. ಫೋನ್‌ಗಳ ಮೇಲೆ ಶೇ.18 ಜಿಎಸ್‌ಟಿ ಇದೆ. ಅಬಕಾರಿ ಸುಂಕವನ್ನು ಕಂಪನಿಗಳು ಹಾಕುವ ಪರಿಣಾಮ ಫೋನ್‌ ಬೆಲೆ ಶೇ.35 ರಷ್ಟು ಹೆಚ್ಚಿರುತ್ತದೆ.

    ಅಮೆರಿಕ, ಜಪಾನ್‌, ಚೀನಾಗೆ ಹೋಲಿಸಿದರೆ ಭಾರತದಲ್ಲಿ ಐಫೋನ್‌ ಬಳಕೆ ಮಾಡುವವರ ಸಂಖ್ಯೆ ಬಹಳ ಕಡಿಮೆ. ಬೇಡಿಕೆ ಜಾಸ್ತಿ ಇದ್ದಾಗ ಫೋನ್‌ಗಳ ಬೆಲೆ ಕಡಿಮೆ ಇರುವುದು ಸಾಮಾನ್ಯ. ಭಾರತದಲ್ಲಿ ಬೇಡಿಕೆ ಕಡಿಮೆ ಇರುವುದರಿಂದ ಬೆಲೆ ಜಾಸ್ತಿ ಇದೆ.

    ಆಪಲ್‌ ಭಾರತದಲ್ಲಿ ವಿಶೇಷ ಮಾರುಕಟ್ಟೆ ತಂತ್ರವನ್ನು ಬಳಕೆ ಮಾಡುತ್ತಿದೆ. ಹೊಸ ಐಫೋನ್‌ ಬಿಡುಗಡೆ ಮಾಡುವ ಸಮಯದಲ್ಲಿ ಹಳೆಯ ಐಫೋನ್‌ ಬೆಲೆಗಳು ಭಾರೀ ಪ್ರಮಾಣದಲ್ಲಿ ಇಳಿಕೆ ಮಾಡುತ್ತದೆ. ಆದರೆ ಬೇರೆ ಕಂಪನಿಗಳ ಫೋನ್‌ ದರಗಳು ಇಳಿಕೆಯಾದರೂ ಅಷ್ಟೊಂದು ದರ ಇಳಿಕೆಯಾಗುವುದಿಲ್ಲ.

    ಡಾಲರ್‌ ಬೆಲೆ ಏರಿಕೆಯಾದಂತೆ ಇಲ್ಲೂ ವಸ್ತುಗಳ ಬೆಲೆ ಏರಿಕೆಯಾಗುತ್ತದೆ. ಈ ಕಾರಣದಿಂದ ಭಾರತದಲ್ಲೂ ಐಫೋನ್‌ ದರ ಹೆಚ್ಚಿರುತ್ತದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಆರಂಭವಾಗಲಿದೆ ಮೊಬೈಲ್ ತಯಾರಿಕಾ ಘಟಕ, ಸಿಗಲಿದೆ 50 ಸಾವಿರ ಜನರಿಗೆ ಉದ್ಯೋಗ: ಅಶ್ವಿನಿ ವೈಷ್ಣವ್‌

    ಐಫೋನ್‌ 16ಇ ಗುಣವೈಶಿಷ್ಟ್ಯಗಳು:
    ಬಾಡಿ:
    146.7 x 71.5 x 7.8 mm, 167 ಗ್ರಾಂ, ನ್ಯಾನೋ ಸಿಮ್‌+ ಇ ಸಿಮ್‌

    ಡಿಸ್ಪ್ಲೇ:
    Super Retina XDR OLED, HDR10, 800 nits (HBM), 6.1 ಇಂಚಿನ ಸ್ಕ್ರೀನ್‌(1170 x 2532 ಪಿಕ್ಸೆಲ್‌, 457 ಪಿಪಿಐ)

    ಪ್ಲಾಟ್‌ಫಾರಂ:
    ಐಓಎಸ್‌ 18.4, ಆಪಲ್‌ ಎ18 ಚಿಪ್‌ಸೆಟ್‌, ಹೆಕ್ಸಾ ಕೋರ್‌(2×4.04 GHz + 4×2.20 GHz) , ಆಪಲ್‌ ಜಿಪಿಯು.

    ಮೆಮೋರಿ:
    ಹೆಚ್ಚುವರಿ ಕಾರ್ಡ್‌ ಬಳಸಿ ಮೆಮೋರಿ ವಿಸ್ತರಿಸಲು ಸಾಧ್ಯವಿಲ್ಲ, 128 ಜಿಬಿ 8ಜಿಬಿ ರಾಮ್‌, 256 ಜಿಬಿ 8 ಜಿಬಿ ರಾಮ್, 512 ಜಿಬಿ 8ಜಿಬಿ ರಾಮ್‌.

    ಕ್ಯಾಮೆರಾ
    ಹಿಂದುಗಡೆ- 48 MP, f/1.6, Dual-LED dual-tone flash,
    ಮುಂದುಗಡೆ – 12 MP,f/1.9
    ವಿಡಿಯೋ – 4K, 1080p, HDR

    ಬ್ಯಾಟರಿ – ಲಿಯಾನ್‌ 7.5W wireless (Qi), 30 ನಿಮಿಷದಲ್ಲಿ 50% ಚಾರ್ಜ್‌ ಮಾಡಬಹುದು.

     

  • ವಾಟ್ಸಪ್‌ಗೆ ಬಂದಿರುವ ಲಿಂಕ್‌ ಓಪನ್‌ ಮಾಡದೇ ಇದ್ರೂ ಫೋನ್‌ ಹ್ಯಾಕ್‌!

    ವಾಟ್ಸಪ್‌ಗೆ ಬಂದಿರುವ ಲಿಂಕ್‌ ಓಪನ್‌ ಮಾಡದೇ ಇದ್ರೂ ಫೋನ್‌ ಹ್ಯಾಕ್‌!

    ವಾಷಿಂಗ್ಟನ್‌: ವಾಟ್ಸಪ್‌ಗೆ (Whatsapp) ಬಂದಿರುವ ಲಿಂಕ್‌ ಓಪನ್‌ ಮಾಡದೇ ಇದ್ದರೂ ಇನ್ನು ಮುಂದೆ ನಿಮ್ಮ ಫೋನ್‌ (Phone) ಹ್ಯಾಕ್‌ (Hack) ಆಗಬಹುದು.

    ಹೌದು. ಇಲ್ಲಿಯವರೆಗೆ ವಾಟ್ಸಪ್‌ ಬಂದ ಲಿಂಕ್‌ ಓಪನ್‌ ಮಾಡಿದ್ದರೆ ಆಗ ಫೋನ್‌ಗಳು ಹ್ಯಾಕ್‌ ಆಗುತ್ತಿದ್ದವು. ಆದರೆ ಈಗ ಹ್ಯಾಕರ್‌ಗಳು ಇನ್ನು ಮುಂದೆ ಹೋಗಿದ್ದು ಲಿಂಕ್‌ ಓಪನ್‌ ಮಾಡದೇ ಹ್ಯಾಕ್‌ ಮಾಡಲು ಆರಂಭಿಸಿದ್ದಾರೆ.

    ಸುಮಾರು 12ಕ್ಕೂ ಹೆಚ್ಚು ದೇಶಗಳಲ್ಲಿ 90 ಜನರ ಮೊಬೈಲಿಗೆ ಸ್ಪೈವೇರ್ (Spyware) ಬಳಸಿ ಹ್ಯಾಕ್‌ ಮಾಡಿದ್ದಾರೆ ಎಂದು ವರದಿಯಾಗಿದೆ. ಇಸ್ರೇಲ್‌ (Israel) ಕಂಪನಿಯಾದ ಪ್ಯಾರಾಗಾನ್ ಸೊಲ್ಯೂಷನ್ಸ್ ಒಡೆತನದ ಹ್ಯಾಕಿಂಗ್ ಟೂಲ್‌ ಬಳಸಿ ಹ್ಯಾಕ್‌ ಮಾಡಲಾಗಿದೆ. ಇದನ್ನೂ ಓದಿ: ರಾಷ್ಟ್ರೀಯ ಹೆದ್ದಾರಿಗಳಲ್ಲಿ 3 ಸಾವಿರಕ್ಕೆ ವಾರ್ಷಿಕ, 30 ಸಾವಿರಕ್ಕೆ ಜೀವಿತಾವಧಿ ಟೋಲ್‌ ಪಾಸ್‌

    ಪ್ಯಾರಾಗಾನ್‌ನ ಸ್ಪೈವೇರ್ ಅನ್ನು  ಸರ್ಕಾರಗಳಿಗೆ ಮಾರಾಟ ಮಾಡಲಾಗುತ್ತದೆ. ಅಪರಾಧಿಗಳ ವಿರುದ್ಧ ಮತ್ತು ರಾಷ್ಟ್ರೀಯ ಭದ್ರತೆ ಸಂಬಂಧ ಪಟ್ಟ ಪ್ರಕರಣಗಳು ಬಂದಾಗ ಸರ್ಕಾರ ಈ ಸ್ಪೈವೇರ್‌ ಬಳಸಿ ಮಾಹಿತಿಗಳನ್ನು ಕಲೆ ಹಾಕುತ್ತವೆ.

    ಈ ಸ್ಪೈವೇರ್‌ ಪೀಡಿತ ಬಳಕೆದಾರರ ಸಾಧನಗಳು ಅಪಾಯಕ್ಕೆ ಸಿಲುಕಿರಬಹುದು ಎಂದು ವಾಟ್ಸಾಪ್ ದೃಢಪಡಿಸಿದೆ. ಸುಮಾರು 90 ಬಳಕೆದಾರರನ್ನು ಹ್ಯಾಕ್ ಮಾಡುವ ಪ್ರಯತ್ನವನ್ನು ಪತ್ತೆಹಚ್ಚಿರುವುದಾಗಿ ವಾಟ್ಸಾಪ್ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ.

    ನಿರ್ದಿಷ್ಟವಾಗಿ ಯಾರನ್ನು ಗುರಿಯಾಗಿಸಿ ಈ ಸ್ಪೈವೇರ್‌ ಬಿಡಲಾಗಿದೆ ಎಂದು ಹೇಳಲು ವಾಟ್ಸಪ್‌ ಅಧಿಕಾರಿಗಳು ನಿರಾಕರಿಸಿದ್ದಾರೆ. ಯುರೋಪಿನ ಹಲವಾರು ಜನ ಸೇರಿದಂತೆ 12 ಹೆಚ್ಚು ದೇಶಗಳ ಜನರನ್ನು ಗುರಿಯಾಗಿ ಈ ಸೈಬರ್‌ ದಾಳಿ ನಡೆದಿದೆ.

     

  • ಐಫೋನ್‌ನಿಂದ ಭಾರತದ ಕಾನೂನು ಉಲ್ಲಂಘನೆ – ಆಪಲ್‌ಗೆ ಸಿಸಿಐ ಬಿಸಿ

    ಐಫೋನ್‌ನಿಂದ ಭಾರತದ ಕಾನೂನು ಉಲ್ಲಂಘನೆ – ಆಪಲ್‌ಗೆ ಸಿಸಿಐ ಬಿಸಿ

    ನವದೆಹಲಿ: ಆಪಲ್‌ ಐಫೋನ್‌ (Apple iphone) ದೇಶದ ಸ್ಪರ್ಧಾ ಕಾನೂನುಗಳನ್ನು ಉಲ್ಲಂಘಿಸಿರುವುದು ಭಾರತೀಯ ಸ್ಪರ್ಧಾತ್ಮಕ ಆಯೋಗ(CCI)) ತನಿಖೆಯಲ್ಲಿ ದೃಢಪಟ್ಟಿದೆ ಎಂದು ವರದಿಯಾಗಿದೆ.

    ಸಿಸಿಐ ಕಳೆದ ವಾರ ಆಪಲ್ ಮತ್ತು ಆಪಲ್ ಇಂಟರ್‌ನ್ಯಾಶನಲ್ ಡಿಸ್ಟ್ರಿಬ್ಯೂಷನ್ ಲಿಮಿಟೆಡ್‌ನೊಂದಿಗೆ ತನ್ನ ಗೌಪ್ಯ ವರದಿಯನ್ನು ಹಂಚಿಕೊಂಡಿದ್ದು ಪ್ರತಿಕ್ರಿಯೆ ನೀಡಲು ಅವಕಾಶ ಮಾಡಿಕೊಟ್ಟಿದೆ ಎಂದು ಮಾಧ್ಯಮ ವರದಿ ತಿಳಿಸಿದೆ.

    ಇಲ್ಲಿಯವರೆಗೆ ಸಿಸಿಐ ಕಡೆಯಿಂದ ಅಧಿಕೃತವಾಗಿ ಐಫೋನ್‌ ಕಾನೂನು ಉಲ್ಲಂಘಿಸಿದ ಬಗ್ಗೆ ಯಾವುದೇ ವಿಚಾರ ಪ್ರಕಟವಾಗಿಲ್ಲ.

    ಐಫೋನ್‌ ಮೇಲಿರುವ ಆರೋಪ ಏನು?
    ಮುಖ್ಯವಾಗಿ ಡಿಜಿಟಲ್‌ ಕಂಟೆಂಟ್‌ಗೆ ಹಣ ಪಾವತಿಸಿ ಸೇವೆ ಪಡೆದುಕೊಳ್ಳುವ In-App Purchase (IAP) ವಿಷಯಯಕ್ಕೆ ಸಿಸಿಐ ತಕರಾರು ಎತ್ತಿದೆ. ಅಪ್ಲಿಕೇಶನ್‌ನಲ್ಲಿನ ಹೆಚ್ಚುವರಿ ವೈಶಿಷ್ಟ್ಯ ಅಥವಾ ಸೇವೆಯ ಖರೀದಿಗೆ 30% ವರೆಗೆ ಶುಲ್ಕ ಹೋಗುತ್ತಿದೆ. ಇದು ಭಾರತದ ಸ್ಪರ್ಧೆಯ ಕಾನೂನನ್ನು ಉಲ್ಲಂಘಿಸುತ್ತದೆ ಎಂದು ಪರಿಗಣಿಸಿದೆ.

    ಬಳಕೆದಾರರು ಅಪ್ಲಿಕೇಶನ್‌ ಖರೀದಿಯನ್ನು ಮಾಡಲು ನಿರ್ಧರಿಸಿದಾಗ ಈ ಆಪ್‌ ಏನನ್ನು ಒಳಗೊಂಡಿದೆ ಎಂಬುದರ ವಿವರವಾದ ವಿವರಣೆಯನ್ನು ಅವರಿಗೆ ನೀಡಲಾಗುತ್ತದೆ. ಈ ಹಂತದಲ್ಲಿ ಬಳಕೆದಾರರು ಖರೀದಿಯೊಂದಿಗೆ ಮುಂದುವರಿಯಬಹುದು ಅಥವಾ ಖರೀದಿಸದೆಯೇ ಅಪ್ಲಿಕೇಶನ್‌ಗೆ ಹಿಂತಿರುಗಬಹುದು. ಎಲ್ಲಾ ಪಾವತಿಗಳನ್ನು ಅಪ್ಲಿಕೇಶನ್ ಸ್ಟೋರ್‌ ಮೂಲಕವೇ ಮಾಡಲಾಗುತ್ತದೆ. IAP ಗೆ ಒಪ್ಪಿಗೆ ನೀಡಿದರೆ ಹೆಚ್ಚುವರಿ ವೈಶಿಷ್ಟ್ಯಗಳು, ವಿಷಯ ಅಥವಾ ಸೇವೆಗಳು ಸಿಗುತ್ತದೆ.

    2021 ರಲ್ಲಿ ಸಿಸಿಐ ತನಿಖೆ ಆರಂಭಿಸಿದಾಗ ಗ್ರಾಹಕರು ಡೌನ್‌ಲೋಡ್ ಮಾಡಲು ಮತ್ತು ಡಿಜಿಟಲ್ ವಿಷಯವನ್ನು ಖರೀದಿಸಲು ಸುರಕ್ಷಿತ ವೇದಿಕೆಯನ್ನು ಖಚಿತಪಡಿಸಿಕೊಳ್ಳಲು ಈ ಕ್ರಮಗಳನ್ನು ಜಾರಿಗೆ ತರಲಾಗಿದೆ ಎಂದು ಆಪಲ್‌ ಸಮರ್ಥನೆ ನೀಡಿತ್ತು. ಇದನ್ನೂ ಓದಿ: ಬೆಂಗಳೂರಿನ ಟೆಕ್ಕಿಗಳ Work Culture ಹೊಗಳಿದ ಅಮೆಜಾನ್‌ ಮಾಜಿ ಕಾರ್ಯನಿರ್ವಾಹಕ ಅಧಿಕಾರಿ

    ದಂಡ ವಿಧಿಸಿದ್ದ ಯುರೋಪಿಯನ್‌ ಯೂನಿಯನ್‌
    ಈ ಹಿಂದೆ ಐಫೋನ್‌ ಅಮೆರಿಕದ ಆಪಲ್‌ ಕಂಪನಿಗೆ ಯೂರೋಪಿಯನ್‌ ಯೂನಿಯನ್‌ನ (European Union) ಆಂಟಿಟ್ರಸ್ಟ್ ನಿಯಂತ್ರಕ ಭರ್ಜರಿ 1.84 ಬಿಲಿಯನ್‌ ಯುರೋ (ಅಂದಾಜು 16,584 ಕೋಟಿ ರೂ.) ದಂಡವನ್ನು ವಿಧಿಸಿತ್ತು.

    ಸ್ಪರ್ಧಾತ್ಮಕ ನಿಯಮ ಉಲ್ಲಂಘಿಸಿ ಆ್ಯಪಲ್‌ ತನ್ನ ಉತ್ಪನ್ನಗಳಲ್ಲಿ ಸಂಗೀತ ಸೇವೆ ನೀಡುವ ಹಲವು ಕಂಪನಿಗಳ ಆಪ್‌ಗಳ ಸೇವೆ ನಿರ್ಬಂಧ ಹೇರಿ ತಾನು ಸೂಚಿಸಿದ ಉತ್ಪನ್ನಗಳನ್ನು ಮಾತ್ರ ಗ್ರಾಹಕರು ಬಳಸುವಂತೆ ಮಾಡಿದೆ.ಇದು ಅನಾರೋಗ್ಯಕರ ಸ್ಪರ್ಧೆಗೆ ಉದಾಹರಣೆ ಎಂದು ಅಭಿಪ್ರಾಯಪಟ್ಟ ಒಕ್ಕೂಟ ಭಾರೀ ಪ್ರಮಾಣದ ದಂಡ ವಿಧಿಸಿತ್ತು.

    ಒಂದು ದಶಕದವರೆಗೆ, ಆಪ್ ಸ್ಟೋರ್ ಮೂಲಕ ಸಂಗೀತ ಸ್ಟ್ರೀಮಿಂಗ್ ಅಪ್ಲಿಕೇಶನ್‌ಗಳ ವಿತರಣೆಗಾಗಿ ಆಪಲ್ ಮಾರುಕಟ್ಟೆಯಲ್ಲಿ ತನ್ನ ಪ್ರಬಲ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿದೆ. ಯುರೋಪಿಯನ್‌ ಯೂನಿಯನ್‌ ಆಂಟಿಟ್ರಸ್ಟ್ ನಿಯಮಗಳ ಅಡಿಯಲ್ಲಿ ಈ ರೀತಿ ನಿರ್ಬಂಧ ಹೇರುವುದು ಕಾನೂನುಬಾಹಿರ ಎಂದು ಒಕ್ಕೂಟ ಹೇಳಿತ್ತು.

    ಐದು ವರ್ಷದ ಹಿಂದೆ ಡಿಜಿಟಲ್‌ ಮ್ಯೂಸಿಕ್‌ (Digital Music) ಸೇವೆ ನೀಡುವ ಸ್ಪಾಟಿಫೈ (Spotify) ನೀಡಿದ ದೂರಿನ ಬಗ್ಗೆ ಸುದೀರ್ಘ ವಿಚಾರಣೆ ನಡೆಸಿದ ಒಕ್ಕೂಟ ಈಗ ಅಂತಿಮ ನಿರ್ಧಾರ ಪ್ರಕಟಿಸಿತ್ತು.

    ಯಾವುದೇ ಕಂಪನಿಗೆ ಗ್ರಾಹಕರನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಗ್ರಾಹಕನಿಗೆ ಏನು ಬೇಕೋ ಅದನ್ನು ಪಡೆಯಲು ಸ್ವಾತಂತ್ರ್ಯ ನೀಡಬೇಕು. ಬೇರೆ ಸೇವೆ ಬಳಸಲು ಅವಕಾಶ ನೀಡದೇ ತಾನು ನೀಡಿದ್ದನ್ನೇ ಬಳಸಬೇಕು ಎಂಬ ನೀತಿಯನ್ನು ಅಳವಡಿಸಿದವರಿಗೆ ಈ ತೀರ್ಪು ಪ್ರಬಲ ಸಂದೇಶವನ್ನು ಕಳುಹಿಸಿದೆ ಎಂದು ಸ್ಪಾಟಿಫೈ ತೀರ್ಪನ್ನು ಸ್ವಾಗತಿಸಿ ಅಭಿಪ್ರಾಯ ವ್ಯಕ್ತಪಡಿಸಿತ್ತು.

     

  • ಜುಲೈ 3 ರಿಂದ ಜಿಯೋದಿಂದ ಹೊಸ ಅನ್‌ಲಿಮಿಟೆಡ್ ಪ್ಲಾನ್‌

    ಜುಲೈ 3 ರಿಂದ ಜಿಯೋದಿಂದ ಹೊಸ ಅನ್‌ಲಿಮಿಟೆಡ್ ಪ್ಲಾನ್‌

    ಮುಂಬೈ : ದೂರಸಂಪರ್ಕ ಕ್ಷೇತ್ರದ ಅತಿದೊಡ್ಡ ಕಂಪನಿ ರಿಲಯನ್ಸ್ ಜಿಯೋ (Reliance Jio) ಇನ್ಫೊಕಾಮ್ ಲಿಮಿಟೆಡ್, ಜುಲೈ 3 ರಿಂದ ಜಾರಿಗೆ ಬರುವಂತೆ ಹಲವು ಹೊಸ ಅನಿಯಮಿತ ಯೋಜನೆ (Unlimited Tariff) ಪ್ರಕಟಿಸಿದೆ.

    ಹೊಸ ಯೋಜನೆಗಳ ಮೂಲಕ ಕಡಿಮೆ ದರಕ್ಕೆ ಇಂಟರ್ನೆಟ್ ಸೇವೆ (Internet Service) ಒದಗಿಸುವ ತನ್ನ ಬದ್ಧತೆಯನ್ನು ಕಂಪನಿ ಮತ್ತೊಮ್ಮೆ ಸ್ಪಷ್ಟಪಡಿಸಿದೆ. ಭಾರತದಲ್ಲಿ (India) ತನ್ನ 5ಜಿ ಸಂಪರ್ಕವು ಬಹಳ ವೇಗವಾಗಿ ಬೆಳೆಯುತ್ತಿದ್ದು 85% ಪ್ರದೇಶಗಳಿಗೆ ತಲುಪಿದೆ ಎಂದು ತಿಳಿಸಿದೆ.

    ತಿಂಗಳ ಯೋಜನೆ 189 ರೂ.ಗೆ 2ಜಿಬಿ ಇದ್ದು ವಾರ್ಷಿಕ ಯೋಜನೆ 3,599 ರೂ. ದಿನಕ್ಕೆ 2.5 ಜಿಬಿ ಡೇಟಾ ಸಿಗಲಿದೆ. ದಿನಕ್ಕೆ 2 ಜಿಬಿ ಮತ್ತು ಅದಕ್ಕಿಂತ ಹೆಚ್ಚಿನ 5ಜಿ ಡೇಟಾದ ಎಲ್ಲಾ ಯೋಜನೆಗಳನ್ನೂ ಇದು ಒಳಗೊಂಡಿದೆ.

    ಅನಿಯಮಿತ 5ಜಿ ಡೇಟಾ ಸೇವೆಯು ದಿನಕ್ಕೆ 2 ಜಿಬಿ ಅಥವಾ ಅದಕ್ಕಿಂತ ಹೆಚ್ಚಿನದ್ದಕ್ಕೆ ಅನ್ವಯಿಸುತ್ತದೆ ಎಂದು ಕಂಪನಿ ತಿಳಿಸಿದೆ. ಇದನ್ನೂ ಓದಿ: ಡೇಟಾ ಟ್ರಾಫಿಕ್‌- ಚೀನಾ ಕಂಪನಿ ಹಿಂದಿಕ್ಕಿದ ರಿಲಯನ್ಸ್‌

    ಗರಿಷ್ಠ ಗುಣಮಟ್ಟದ, ಕೈಗೆಟಕುವ ಇಂಟರ್ನೆಟ್ ಸೌಲಭ್ಯವು ಡಿಜಿಟಲ್ ಇಂಡಿಯಾದ ಬೆನ್ನೆಲುಬಾಗಿದೆ. ಇದಕ್ಕೆ ಹೆಚ್ಚಿನ ಕೊಡುಗೆ ನೀಡುತ್ತಿರುವುದಕ್ಕೆ ಜಿಯೋ ಹೆಮ್ಮೆಪಡುತ್ತದೆ. ನಮ್ಮ ದೇಶ ಮತ್ತು ಗ್ರಾಹಕರು ಕಂಪನಿಯ ಆದ್ಯತೆಯಾಗಿದೆ. ಭಾರತಕ್ಕಾಗಿ ಹೂಡಿಕೆ ಮಾಡುವುದನ್ನು ಕಂಪನಿ ಮುಂದುವರಿಸಲಿದೆ ಎಂದು ರಿಲಯನ್ಸ್ ಜಿಯೋ ಅಧ್ಯಕ್ಷ ಆಕಾಶ್ ಎಂ. ಅಂಬಾನಿ (Akash Ambani) ಹೇಳಿದರು.

    ದೇಶದಲ್ಲಿ ಡೇಟಾ ಬಳಕೆ ಮತ್ತು ಸ್ಮಾರ್ಟ್‌ಫೋನ್ ಬಳಕೆ ಹೆಚ್ಚಿಸಲು ಜಿಯೋ ಕಂಪನಿಯು ಮಹತ್ವದ ಕೊಡುಗೆ ನೀಡುತ್ತಿದೆ. ಕಂಪನಿಯು ದೂರಸಂಪರ್ಕ ಕ್ಷೇತ್ರಕ್ಕೆ ಕಾಲಿಟ್ಟಿದ್ದರಿಂದ ಪ್ರತಿಸ್ಪರ್ಧಿ ಕಂಪನಿಗಳು ರಿಚಾರ್ಜ್ ದರ ತಗ್ಗಿಸುವಂತೆ ಮತ್ತು ಡೇಟಾ ಕೊಡುಗೆಯಲ್ಲಿ ಸುಧಾರಣೆ ತರುವಂತೆ ಆಗಿದೆ.

    ಎರಡು ಹೊಸ ಆ್ಯಪ್: ಜಿಯೋ ಕಂಪನಿಯು ತನ್ನ ಡಿಜಿಟಲ್ ಸೌಲಭ್ಯದ ವ್ಯಾಪ್ತಿಯನ್ನೂ ವಿಸ್ತರಿಸಿದೆ. ಜಿಯೋ ಸೇಫ್ (Jio Safe) ಮತ್ತು ಜಿಯೋ ಟ್ರಾನ್ಸ್‌ಲೇಟ್ (Jio Translate) ಎಂಬ ಎರಡು ಅಪ್ಲಿಕೇಷನ್‌ಗಳನ್ನು ಬಿಡುಗಡೆ ಮಾಡಿದೆ. ಜಿಯೋ ಸೇಫ್ ತಿಂಗಳ ದರ 199 ರೂ. ಇದ್ದು, ಸುರಕ್ಷಿತ ಕರೆ, ಮೆಸೇಜಿಂಗ್ ಮತ್ತು ಫೈಲ್ ಟ್ರಾನ್ಸ್‌ಫರ್ ಸೇವೆಯನ್ನು ಒದಗಿಸುತ್ತದೆ. ‌ಜಿಯೋ ಟ್ರಾನ್ಸ್‌ಲೇಟ್ ಆ್ಯಪ್‌ನಲ್ಲಿ ತಿಂಗಳಿಗೆ 99 ರೂ. ನೀಡಿದರೆ, ಕೃತಕ ಬಿದ್ದಿಮತ್ತೆಯಿಂದ ಚಾಲಿತ ಆ್ಯಪ್ ವಾಯ್ಸ್, ಕಾಲ್, ಮೆಸೇಜ್, ಟೆಕ್ಸ್ಟ್ ಮತ್ತು ಇಮೇಜ್‌ಗಳನ್ನು ಟ್ರಾನ್ಸ್‌ಲೇಟ್ ಮಾಡಬಲ್ಲದು. ಜಿಯೋ ಬಳಕೆದಾರರಿಗೆ ಒಂದು ವರ್ಷದವೆರೆಗೆ ಈ ಎರಡೂ ಆ್ಯಪ್‌ಗಳು ಉಚಿತವಾಗಿರಲಿವೆ.