ಯಂಗ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ನಟನೆಯ ಬ್ಯಾಡ್ ಮ್ಯಾನರ್ಸ್ ಚಿತ್ರದ ಟೀಸರ್ (Teaser) ಇದೇ ನವೆಂಬರ್ 12ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಖ್ಯಾತ ನಟ ದರ್ಶನ್ (Darshan) ಮತ್ತು ನಟಿ, ಸಂಸದೆ ಸುಮಲತಾ ಅಂಬರೀಶ್ (Sumalatha) ಅವರು ಟೀಸರ್ ಅನ್ನು ಬಿಡುಗಡೆ ಮಾಡಲಿದ್ದಾರೆ. ಇದು ಸೂರಿ ಸಿನಿಮಾವಾಗಿದ್ದರಿಂದ ಟೀಸರ್ ಬಗ್ಗೆ ಕುತೂಹಲ ಮೂಡಿದೆ.
ಭಾವ ತುಂಬಿದ ಹಾಡುಗಳ ಮೂಲಕ ಫೇಮಸ್ ಆಗಿದ್ದ ಜಯಂತ್ ಕಾಯ್ಕಿಣಿ, ಇದೀಗ ಅಭಿಷೇಕ್ ಅಂಬರೀಶ್ (Abhishek Ambarish) ನಟನೆಯ ‘ಬ್ಯಾಡ್ ಮ್ಯಾನರ್ಸ್’ (Bad Manners) ಸಿನಿಮಾಗಾಗಿ ಮಾಸ್ ಗೀತೆಯೊಂದನ್ನು ಬರೆದಿದ್ದಾರೆ. ‘ಓಗ.. ಓಗ..’ ಎಂದು ಶುರುವಾಗುವ ಗೀತೆಯಲ್ಲಿ ಕೇಳದೇ ಇರುವಂಥ ಹಲವು ಪದಗಳನ್ನು ಬಳಸಲಾಗಿದೆ. ಅವೆಲ್ಲವೂ ಗ್ರಿಬಿಶ್ ಪದಗಳಾಗಿವೆಯಂತೆ. ಹೀಗಾಗಿ ಹಾಡು ಹೊಸ ರೀತಿಯಲ್ಲೇ ಕೇಳಿಸುತ್ತದೆ.
ಚರಣ್ ರಾಜ್ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದ ಹಾಡಿಗೆ ಜಯಂತ್ ಕಾಯ್ಕಿಣಿ (Jayant Kaykini) ಸಾಹಿತ್ಯ ಬರೆದಿದ್ದರೆ, ಕಪಿಲ್ ಕಪಿಲನ್ ಹಾಡಿದ್ದಾರೆ. ಅಭಿಷೇಕ್ ಅಂಬರೀಶ್ ಸಖತ್ತಾಗಿಯೇ ಗೀತೆಗೆ ಸ್ಟೆಪ್ ಹಾಕಿದ್ದಾರೆ. ಸೂರಿ (Suri) ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬಂದಿದ್ದು, ಇದೇ ಮೊದಲ ಬಾರಿಗೆ ಅಭಿಷೇಕ್ ಮತ್ತು ಸೂರಿ ಈ ಸಿನಿಮಾದ ಮೂಲಕ ಒಂದಾಗಿದ್ದಾರೆ.
ಈ ಹಿಂದೆ ಯುಗಾದಿ ದಿನದಂದು ಪೆಪ್ಪಿ ಸಾಂಗ್‌ಗೆ ರಿಲೀಸ್ ಆಗಿತ್ತು. ಆ ಹಾಡಿಗೆ ಧನಂಜಯ್ ರಾಜನ್ ಬೊಂಬಾಟ್ ಲಿರಿಕ್ಸ್ ಬರೆದಿದ್ದರು. ಬಾಲಿವುಡ್ ಖ್ಯಾತ ಗಾಯಕಿ ಉಷಾ ಉತ್ತುಪ್ ಹಾಗೂ ಆಕಾಶ್ ಜಾಕೋಬ್ ವಾಯ್ಸ್‌ನಲ್ಲಿ ಸಾಂಗ್ ಸಖತ್ ಮಜವಾಗಿತ್ತು. ಚಿತ್ರದಲ್ಲಿ ಅಭಿ ಪಾತ್ರ ಪರಿಚಯಿಸುವ ಸಾಂಗ್ ಇದಾಗಿದೆ.
ಅಭಿಷೇಕ್- ರುದ್ರ ಎರಡನ್ನು ಸೇರಿಸಿ ಹಾಡಿನಲ್ಲಿ ರುದ್ರಾಭಿಷೇಕ ನಡೆಸಲಾಗಿದೆ. ಕೊಂಚ ಹಿಂದಿ, ಇಂಗ್ಲೀಷ್ ಪದಗಳನ್ನು ಹೆಚ್ಚೇ ಸೇರಿಸಿ ಸಾಲುಗಳನ್ನು ಪೋಣಿಸಲಾಗಿದೆ. `ಬ್ಯಾಡ್ ಮ್ಯಾನರ್ಸ್’ (Bad Manners) ಟೈಟಲ್ ಸಾಂಗ್‌ಗೆ ಧನಂಜಯ್ ಮಾಸ್ಟರ್ ಕೊರಿಯೋಗ್ರಫಿ ಮಾಡಿದ್ದಾರೆ. ಅಭಿಷೇಕ್ ಸಿಕ್ಕಾಪಟ್ಟೆ ಡ್ಯಾನ್ಸ್ ಪ್ರಾಕ್ಟೀಸ್ ಮಾಡಿ ಬಿಂದಾಸ್ ಸ್ಟೆಪ್ಸ್ ಹಾಕಿದ್ದಾರೆ. ಸಿಕ್ಕಾಪಟ್ಟೆ ಕಲರ್‌ಫುಲ್ ಆಗಿ ಸಾಂಗ್ ಶೂಟ್ ಮಾಡಿದ್ದಾರೆ.
ಭಾರತೀಯ ಸಿನಿಮಾ ರಂಗದ ಖ್ಯಾತ ನಟ ರಜನಿಕಾಂತ್ ಅವರ ಹುಟ್ಟು ಹಬ್ಬಕ್ಕೆ ಲಾಲ್ ಸಲಾಂ ಸಿನಿಮಾದ ಟೀಸರ್ ರಿಲೀಸ್ (Teaser) ಮಾಡಲು ಸರ್ವ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎನ್ನುವ ಮಾಹಿತಿ ಹೊರ ಬಿದ್ದಿದೆ. ಡಿಸೆಂಬರ್ 12ರಂದು ತಲೈವಾ ಹುಟ್ಟು ಹಬ್ಬ. ಅಂದೇ ರಜನಿಕಾಂತ್ ಪುತ್ರಿ ಐಶ್ವರ್ಯ (Aishwarya Rajinikanth) ನಿರ್ದೇಶನದ ಲಾಲ್ ಸಲಾಂ ಚಿತ್ರದ ಟೀಸರ್ ರಿಲೀಸ್ ಆಗಲಿದೆ ಎನ್ನಲಾಗುತ್ತಿದೆ.
ರಜನಿಕಾಂತ್ (Rajanikanth) ಸದ್ಯ ‘ಜೈಲರ್’ ಸಿನಿಮಾದ ಗೆಲುವಿನಲ್ಲಿದ್ದಾರೆ. ಇದರ ಜೊತೆ ಮಗಳು ಐಶ್ವರ್ಯ ನಿರ್ದೇಶನದ ‘ಲಾಲ್ ಸಲಾಂ’ (Lal Salam) ಚಿತ್ರದಲ್ಲಿ ಭಿನ್ನ ಪಾತ್ರದಲ್ಲಿ ನಟಿಸುವ ಮೂಲಕ ಚಿತ್ರತಂಡಕ್ಕೆ ಸಾಥ್ ನೀಡಿದ್ದಾರೆ. ಇತ್ತೀಚೆಗಷ್ಟೇ ಸಿನಿಮಾದಲ್ಲಿನ ತಲೈವಾ ಲುಕ್ ರಿವೀಲ್ ಆಗಿತ್ತು.
ಲೈಕಾ ಪ್ರೋಡಕ್ಷನ್ಸ್ ಅಡಿಯಲ್ಲಿ ‘ಲಾಲ್ ಸಲಾಂ’ ಸಿನಿಮಾವನ್ನ ಐಶ್ವರ್ಯ ರಜನಿಕಾಂತ್ ನಿರ್ದೇಶನ ಮಾಡಿದ್ದಾರೆ. ತಲೈವಾ ಅವರು ಕೀ ರೋಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಮೊಹಿದ್ದೀನ್ ಭಾಯ್ ಪಾತ್ರಕ್ಕೆ ತಲೈವಾ ಜೀವತುಂಬಿದ್ದಾರೆ. ಗಲಭೆ ಹಿನ್ನೆಲೆ, ಶೆರ್ವಾನಿಯಲ್ಲಿ ಸನ್ ಗ್ಲ್ಯಾಸ್ ಧರಿಸಿ ನಡೆದು ಬರುತ್ತಿರುವ ತಲೈವಾ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಮುಂಬೈನಲ್ಲಿ ಭರ್ಜರಿಯಾಗಿ ನಡೆದಿದೆ. ಸದ್ಯ ಸಿನಿಮಾದ ಪೋಸ್ಟರ್‌ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
1995ರಲ್ಲಿ ಬಂದಿದ್ದ ‘ಬಾಷಾ’ ಚಿತ್ರದಲ್ಲಿ ಜನಸ್ನೇಹಿ ಡಾನ್ ಆಗಿ ರಜನಿಕಾಂತ್ ಅಬ್ಬರಿಸಿದ್ದರು. ಅದೇ ಚಿತ್ರದ ಪಾತ್ರವನ್ನು ‘ಲಾಲ್ ಸಲಾಂ’ ಮೊಹಿದ್ದೀನ್ ಭಾಯ್ ನೆನಪಿಸುತ್ತಿರುವುದು ಸುಳ್ಳಲ್ಲ. ‘ಲಾಲ್ ಸಲಾಂ’ ಸ್ಪೋರ್ಟ್ಸ್ ಡ್ರಾಮಾ ಸಿನಿಮಾ ಆಗಿದ್ದು ಕ್ರಿಕೆಟ್ ಹಿನ್ನೆಲೆಯಲ್ಲಿ ಕಥೆ ಸಾಗಲಿದೆ. ವಿಷ್ಣು ವಿಶಾಲ್ ಹಾಗೂ ವಿಕ್ರಾಂತ್ ಲೀಡ್ ರೋಲ್‌ಗಳಲ್ಲಿ ನಟಿಸುತ್ತಿದ್ದಾರೆ. ಜೀವಿತಾ ರಾಜಶೇಖರ್ ನಾಯಕಿಯಾಗಿ ಮಿಂಚಲಿದ್ದಾರೆ. ವಿಷ್ಣು ರಂಗಸ್ವಾಮಿ ಛಾಯಾಗ್ರಹಣ- ಎಆರ್ ರೆಹಮಾನ್ ಸಂಗೀತ ಈ ಚಿತ್ರಕ್ಕಿದೆ. ರಜನಿಕಾಂತ್ ಕಾರಣಕ್ಕೆ ಈ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ.
ದಾಂಪತ್ಯ ಜೀವನದಲ್ಲಿ ಸೋತಿರೋ ಐಶ್ವರ್ಯಗೆ ಈ ಸಿನಿಮಾದಿಂದ ಬಿಗ್ ಬ್ರೇಕ್ ಬೇಕಾಗಿದೆ. ರಜನಿಕಾಂತ್ ಚಿತ್ರದಲ್ಲಿ ನಟಿಸುತ್ತಿರುವ ಕಾರಣ, ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಾಗಿದೆ. ರಿಲೀಸ್ ಬಳಿಕ ಸಿನಿಮಾಗೆ ಯಾವ ರೀತಿ ರೆಸ್ಪಾನ್ಸ್ ಸಿಗಲಿದೆ ಕಾದುನೋಡಬೇಕಿದೆ.
ತಾತ ಮೊಮ್ಮಗನ ಸುತ್ತ ನಡೆಯುವ ಕಥಾಹಂದರ ಇಟ್ಟುಕೊಂಡು ಅಶೋಕ್ ಕಡಬ ಅವರು ನಿರ್ದೇಶಿಸಿರುವ ಚಿತ್ರ “ಸತ್ಯಂ” (Satyam) ಇದೀಗ ಬಿಡುಗಡೆಯ ಹಂತಕ್ಕೆ ಬಂದಿದೆ. ಶ್ರೀ ಮಾತಾ ಕ್ರಿಯೇಶನ್ಸ್ ಮೂಲಕ ಮಾಂತೇಶ್ ವಿಕೆ. ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಆಧ್ಯಾತ್ಮಕ ಚಿಂತಕರಾದ ಜಂಬುನಾಥ್ ಸ್ವಾಮಿ ಅವರು ಈ ಚಿತ್ರದ ಟೀಸರ್ (Teaser) ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ನಿರ್ಮಾಪಕ ಮಾಂತೇಶ್. ವಿ.ಕೆ. ಮಾತನಾಡುತ್ತಾ, ನಮ್ಮ ಸಂಸ್ಥೆಯ ಎರಡನೇ ಚಿತ್ರವಿದು. ಈ ಹಿಂದೆ ಮಹಾಮಹಿಮ ಲಡ್ಡು ಮುತ್ಯ ಎಂಬ ಚಿತ್ರ ನಿರ್ಮಿಸಿದ್ದೆ. ಈ ಚಿತ್ರ ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಮೂಡಿಬಂದಿದೆ. ನಾನೊಬ್ಬ ಸಿವಿಲ್ ಕಾಂಟ್ರಾಕ್ಟರ್ ಆಗಿದ್ದರೂ ಸಿನಿಮಾ ಮೇಲೆ ತುಂಬಾ ಆಸಕ್ತಿ, ಪ್ರೀತಿಯಿದೆ. ನಮ್ಮ ಬ್ಯಾನರ್ ಮೂಲಕ ಸದಭಿರುಚಿಯ ಚಿತ್ರವನ್ನು ನೀಡುವುದು ನಮ್ಮ ಉದ್ದೇಶ. ಅಶೋಕ್ ಕಡಬ ಅವರು ಈ ಕಥೆ ತಂದಾಗ ವಿಶೇಷ ಅನಿಸಿತು. ಎರಡು ಕಾಲಘಟ್ಟಗಳಲ್ಲಿ ನಡೆಯೋ ಕಥೆಯಿದು. ಜಮೀನ್ದಾರ್ ಕುಟುಂಬದ ಎಳೆಯೊಂದಿಗೆ ಪ್ರಸ್ತುತ ಬದುಕಿನ ಕಥೆಯೂ ಬೆಸೆದುಕೊಂಡಿದೆ. ತಾತ ಮೊಮ್ಮಗನ ಕಥೆ ತುಂಬಾ ವಿಶೇಷವಾಗಿದೆ. ತಾತನಾಗಿ ಹಿರಿಯ ನಟ ಸುಮನ್ ಹಾಗೂ ಮೊಮ್ಮಗನಾಗಿ ಸಂತೋಷ್ ಅಭಿನಯಿಸಿದ್ದಾರೆ. ನಾಯಕಿಯಾಗಿ ರಂಜಿನಿ ರಾಘವನ್ ಉತ್ತಮ ಅಭಿನಯ ನೀಡಿದ್ದಾರೆ. ಇದೊಂದು ಫ್ಯಾಮಿಲಿ ಕಂಟೆಂಟ್ , ಥ್ರಿಲ್ಲರ್ ಚಿತ್ರ. ವಿಶೇಷವಾಗಿ ಆನೇಕಲ್ ಬಾಲರಾಜ್ ಅವರನ್ನು ನೆನಪಿಸಿಕೊಳ್ಳಬೇಕು, ಈ ಕಥೆಯನ್ನು ಕೇಳಿದ ಅವರು ಇದೊಂದು ಒಳ್ಳೆಯ ಕಥೆ. ನನ್ನ ಬೆಂಬಲ ಸದಾ ಇದೆ ಎಂದಿದ್ದರು. ಅವರ ಆಶೀರ್ವಾದ ಇದ್ದೇ ಇರುತ್ತೆ. ಅವರ ಮಗ ಸಂತೋಷ ನಾಯಕನಾಗಿ ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ. ಚಿತ್ರದ ವಿತರಣೆ ಹಕ್ಕನ್ನು ನಿರ್ಮಾಪಕ ಕೆ.ಎ. ಸುರೇಶ್ ವಹಿಸಿಕೊಂಡಿದ್ದಾರೆ. ಸದ್ಯದಲ್ಲೆ ಟ್ರೈಲರ್ , ಹಾಡುಗಳು ಬಿಡುಗಡೆ ಮಾಡಿ, ಡಿಸೆಂಬರ್ ವೇಳೆಗೆ ತೆರೆಗೆ ತರುವ ಪ್ಲಾನ್ ಇದೆ ಎಂದು ಹೇಳಿದರು.
ನಿರ್ದೇಶಕ ಅಶೋಕ್ ಕಡಬ ಮಾತನಾಡುತ್ತಾ ಇದೊಂದು ಫ್ಯಾಮಿಲಿ ಎಂಟೈನರ್. ಪಂಜುರ್ಲಿ ದೈವ ಆರಾಧಿಸುವ ರಾಜಮನೆತನದ ಕುಟುಂಬದಲ್ಲಿ ಒಂದು ಕಳಂಕ ನಡೆದಿರುತ್ತದೆ ಅದರಿಂದ ಸಾವು ನೋವುಗಳು ಆಗಿದ್ದು, ಅದರಲ್ಲಿ ಒಂದು ವಂಶದ ಕುಡಿ ಸುಮಾರು 40 ವರ್ಷದ ನಂತರ ಭೂತ ಕೋಲದ ಪೂಜೆಗೆಂದು ಆ ಊರಿಗೆ ಬಂದಾಗ ನಡೆಯುವ ಕಥೆಯಿದು. ಮೂರು ಶೇಡ್ ಗಳು ಇರುವ ಈ ಚಿತ್ರಕ್ಕೆ ದೊಡ್ಡ ಮಟ್ಟದ ಸೆಟ್ ಗಳನ್ನು ಹಾಕಿದ್ದೆವು. 2019ರಲ್ಲೇ ನಾವೀ ಕಥೆ ಮಾಡಿದ್ದೆವು, ಕಾಂತಾರ ಬರುವ ಮುಂಚೆಯೇ ಈ ಸಬ್ಜೆಕ್ಟ್ ರೆಡಿ ಇತ್ತು. ಈ ಚಿತ್ರದ ಟೀಸರ್ ನಲ್ಲಿ ಕಾಣುವ ಹುಲಿ ಉಗುರು ಒರಿಜಿನಲ್ ಅಲ್ಲ. ಕಾಸ್ಟ್ಯೂಮರ್ ಕೊಟ್ಟಿರುವ ಡುಪ್ಲಿಕೇಟ್ ಉಗುರು ಎಂದರು. ಹಾರರ್, ಸಸ್ಪೆನ್ಸ್ , ಲವ್ ಕಂಟೆಂಟ್ ಒಳಗೊಂಡ ಚಿತ್ರವನ್ನು ಕನ್ನಡ, ತೆಲುಗು ಭಾಷೆಯಲ್ಲಿ ಮಾಡಿದ್ದೇವೆ. ರವಿ ಬಸ್ರೂರು ಸಂಗೀತ ಅದ್ಭುತವಾಗಿ ಮ್ಯೂಸಿಕ್ ಮಾಡಿದ್ದಾರೆ. ಸಿನಿಟೆಕ್ ಸೂರಿ ಕ್ಯಾಮೆರಾ ವರ್ಕ್ ಚಿತ್ರಕ್ಕಿದೆ. ಕೆ. ವಿ. ರಾಜು ಅವರು ಒಂದಿಷ್ಟು ಚಿತ್ರಕಥೆ, ಸಂಭಾಷಣೆ ಬರೆದಿದ್ದು, ಅದನ್ನು ಕಿನ್ನಲ್ ರಾಜ್ ಪೂರ್ಣಗೊಳಿಸಿ, ಒಂದು ಹಾಡನ್ನೂ ಬರೆದಿದ್ದಾರೆ ಎಂದು ಮಾಹಿತಿ ನೀಡಿದರು.
ನಾಯಕ ಸಂತೋಷ್ ಬಾಲರಾಜ್ (Santhosh Balraj) ಮಾತನಾಡುತ್ತ ನಾನು ಈ ಹಿಂದೆ ಮಾಡಿದ ಕೆಂಪ, ಕರಿಯ-2, ಗಣಪ ಸಿನಿಮಾಗಳೇ ಒಂದಾದರೆ, ಇದು ಆ ಮೂರಕ್ಕಿಂತ ಡಿಫ್ರೆಂಟ್ ಆಗಿ ಮೂಡಿ ಬಂದಿರುವ ಚಿತ್ರ. ನನ್ನ ಪಾತ್ರದ ಹೆಸರು ಸತ್ಯ, ನನ್ನ ತಂದೆ ಬದುಕಿದ್ದರೆ ತುಂಬಾ ಇಷ್ಟಪಡುತ್ತಿದ್ದರು. ಆರಂಭದಲ್ಲಿ ಈ ಕಥೆಯನ್ನು ಒಪ್ಪಿ ಇದೊಂದು ಉತ್ತಮ ಚಿತ್ರವಾಗಿ ಮೂಡಿಬರುತ್ತೆ ಅಂದಿದ್ದರು. ನನಗೆ ದರ್ಶನ್ ಅವರ ಸಪೋರ್ಟ್ ಕೂಡ ತುಂಬಾ ಇದೆ. ಬಹಳ ಗ್ಯಾಪ್ ಆಗಿತ್ತು, ಇನ್ನಷ್ಟು ವಿಭಿನ್ನ ಚಿತ್ರಗಳ ಮೂಲಕ ನಿಮ್ಮ ಮುಂದೆ ಬರುತ್ತೇನೆ ಎಂದರು.
ನಾಯಕಿ ರಂಜಿನಿ ರಾಘವನ್ (Ranjani Raghavan) ಮಾತನಾಡುತ್ತ ಸತ್ಯಂ ಟೀಸರ್ ಗಾಗಿ ನಾನು ತುಂಬಾ ಕಾದಿದ್ದೆ. ಅಚಾನಕ್ಕಾಗಿ ನಾನೀ ಚಿತ್ರತಂಡಕ್ಕೆ ಸೇರ್ಪಡೆಯಾದೆ. ನನ್ನ ಪಾತ್ರ ಚಿತ್ರದ ಕಥೆಗೆ ಟರ್ನಿಂಗ್ ಪಾಯಿಂಟ್ ಆಗಿದ್ದು , ಕಥೆಯ ಜೊತೆಗೇ ಸಾಗುತ್ತೆ. ಸಂತೋಷ್ ಅವರ ಸಪೋರ್ಟ್ ಚೆನ್ನಾಗಿತ್ತು, ಚಿತ್ರದ ಹಾಡುಗಳು ಚೆನ್ನಾಗಿ ಬಂದಿದೆ ಎಂದರು. ನಂತರ ಸಾಹಿತಿ ಹಾಗೂ ಸಂಭಾಷಣೆಕಾರ ಕಿನ್ನಲ್ ರಾಜ್ , ಛಾಯಾಗ್ರಹಕ ಸಿನಿಟೆಕ್ ಸೂರಿ, ಮೊದಲ ಬಾರಿಗೆ ಬೇರೆ ಬ್ಯಾನರ್ ಚಿತ್ರವನ್ನು ವಿತರಣೆ ಮಾಡುತ್ತಿರುವ ಕೆ.ಎ. ಸುರೇಶ್ ಚಿತ್ರದ ಕುರಿತಂತೆ ಮಾತನಾಡಿದರು.
ಧಮಾಕ ಸಕ್ಸಸ್ ಬೆನ್ನಲ್ಲೇ ಮಾಸ್ ಮಹಾರಾಜ ಮತ್ತೊಮ್ಮೆ ಪೀಪಲ್ಸ್ ಮೀಡಿಯಾ ಫ್ಯಾಕ್ಟರಿ ಜೊತೆ ಕೈ ಜೋಡಿಸಿರುವುದು ಗೊತ್ತೇ ಇದೆ. ಛಾಯಾಗ್ರಹಕರಾಗಿದ್ದ ಕಾರ್ತಿಕ್ ಕಟ್ಟಿಮನೆ ಡೈರೆಕ್ಟರ್ ಕ್ಯಾಪ್ ತೊಟ್ಟು ಆಕ್ಷನ್ ಕಟ್ ಹೇಳ್ತಿರುವ ‘ಈಗಲ್’ ಸಿನಿಮಾದ ಸಣ್ಣ ಗ್ಲಿಂಪ್ಸ್ ಭಾರೀ ಸದ್ದು ಮಾಡಿತ್ತು. ಇದೀಗ ಈಗಲ್ ಟೀಸರ್ ಬಿಡುಗಡೆಯಾಗಿದ್ದು, ಭಾರೀ ಸದ್ದು ಮಾಡ್ತಿದೆ.
ಫಸ್ಟ್ ಗ್ಲಿಂಪ್ಸ್ ನಲ್ಲಿ ರವಿತೇಜ ಮುಖವನ್ನು ರಿವೀಲ್ ಮಾಡದೇ ಸಸ್ಪೆನ್ಸ್ ಕಾಯ್ದುಕೊಂಡಿದ್ದ ಚಿತ್ರತಂಡ ಕುತೂಹಲಕ್ಕೆ ಬ್ರೇಕ್ ಹಾಕಿದೆ. ಮಾಸ್ ಡೈಲಾಗ್ ಹೊಡೆಯುತ್ತಾ ರಗಡ್ ಲುಕ್ ನಲ್ಲಿ ಮಾಸ್ ಮಹಾರಾಜ ಎಂಟ್ರಿ ಕೊಟ್ಟಿದ್ದು, ಅನುಪಮಾ ಪರಮೇಶ್ವರನ್, ನವದೀಪ್, ಮಧುಬಾಲ, ಕಾವ್ಯ ಥಾಪರ್ ಟೀಸರ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಭಾರೀ ಬಜೆಟ್ ನಲ್ಲಿ ನಿರ್ಮಾಣವಾಗುತ್ತಿರುವ ಈಗಲ್ ಸಿನಿಮಾಗೆ ಕಾರ್ತಿಕ್ ಗಟ್ಟಿಮನ್ನಿ ನಿರ್ದೇಶನದ ಜೊತೆಗೆ ಸಂಕಲನ ಹಾಗೂ ಛಾಯಾಗ್ರಹಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಮಣಿಬಾಬು ಕರಣಂ ಸಂಭಾಷಣೆ, ದಾವ್ಜಂಡ್ ಟ್ಯೂನ್ ಚಿತ್ರಕ್ಕಿದೆ. ಹೈದ್ರಾಬಾದ್ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, 2024ರ ಜನವರಿ 13 ಸಂಕ್ರಾಂತಿ ಹಬ್ಬ ಸಿನಿಮಾ ತೆರೆಗೆ ಬರಲಿದೆ.
ಬಾಲಿವುಡ್ ಸ್ಟಾರ್ ಶಾರುಖ್ ಖಾನ್ (Shahrukh Khan) ಬ್ಯಾಕ್ ಟು ಬ್ಯಾಕ್ ಎರಡು ಗೆಲುವು ಕಂಡಿದ್ದಾರೆ. ಈ ವರ್ಷದಲ್ಲಿ ಪಠಾಣ್ ಮತ್ತು ಜವಾನ್ ಎರಡು ಬ್ಲಾಕ್‌ಬಸ್ಟರ್ ಹಿಟ್‌ಗಳನ್ನು ನೀಡಿದ್ದಾರೆ. ಮೇಲಾಗಿ ಆ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲೂ ಸಾವಿರಾರು ಕೋಟಿ ಕಮಾಯಿ ಮಾಡಿವೆ. ಈ ಎರಡು ಸಿನಿಮಾಗಳ ಬಳಿಕ ಮತ್ತೊಂದು ವಿಭಿನ್ನ ಅವತಾರದಲ್ಲಿ ಎದುರಾಗಿ ಮನರಂಜನೆ ನೀಡಲು ಶಾರುಖ್ ಖಾನ್ ಸಿದ್ಧರಾಗಿದ್ದಾರೆ. ರಾಜ್ ಕುಮಾರ್ ಹಿರಾನಿ ಸಾರಥ್ಯದ ಡಂಕಿ ಸಿನಿಮಾದ ಟೀಸರ್ ನಿನ್ನೆ ಕಿಂಗ್ ಖಾನ್ ಹುಟ್ಟುಹಬ್ಬಕ್ಕೆ ಬಿಡುಗಡೆಯಾಗಿತ್ತು. ಮಾಸ್ ಅವತಾರದಲ್ಲಿ ಅಬ್ಬರಿಸ್ತಿದ್ದ ಶಾರುಖ್ ಡಂಕಿ (Dunki) ಮೂಲಕ ಕ್ಲಾಸ್ ಅವತಾರದಲ್ಲಿ ದರ್ಶನ ಕೊಟ್ಟಿದ್ದು, ಟೀಸರ್ (Teaser) 4 ಕೋಟಿ ಮಿಲಿಯನ್ ಅಧಿಕ ವೀವ್ಸ್ ಕಂಡಿದೆ. ಈ ವರ್ಷದಲ್ಲಿ ಅತಿ ಹೆಚ್ಚು ವೀವ್ಸ್ ಕಂಡ ಟೀಸರ್ ಇದಾಗಿದೆ.
ನಿನ್ನೆ ಮುಂಬೈನಲ್ಲಿ ನಡೆದ ಡಂಕಿ ಸುದ್ದಿ ಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡಿರುವ ಶಾರುಖ್ ಖಾನ್, ಪಠಾಣ್ ಹಾಗೂ ಜವಾನ್ ಸಿನಿಮಾಗಿಂತ ಡಂಕಿ ಸಿನಿಮಾ ಅತಿ ಹೆಚ್ಚು ಮನರಂಜನೆ ನೀಡಲಿದೆ. ರಾಜ್ ಕುಮಾರ್ ಹಿರಾನಿ (Rajkumar Hirani) ಅವರೊಂದಿಗೆ ಕೆಲಸ ಮಾಡುವುದು ಅದ್ಭುತ ಅನುಭವಾಗಿದೆ. ಹಿರಾನಿ ಚಿತ್ರಗಳಲ್ಲಿ ಯಾವುದೇ ನಿರ್ದಿಷ್ಟ ನಟನಿಗಿಂತ ಕಥೆಯೇ ನಾಯಕತ್ವ ವಹಿಸುತ್ತದೆ. ಶೀಘ್ರದಲ್ಲೇ ಡ್ರಾಪ್ 2 ಮತ್ತು ಡ್ರಾಪ್ 3 ವಿಡಿಯೋ ರಿಲೀಸ್ ಮಾಡುವುದಾಗಿ ತಿಳಿಸಿದರು.
ರಾಜ್ಕುಮಾರ್ ಹಿರಾನಿ ಅವರು ‘ಡಂಕಿ’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಅವರ ಸಿನಿಮಾಗಳಲ್ಲಿ ಭಾವನೆಗಳಿಗೆ, ಹಾಸ್ಯಕ್ಕೆ ಹೆಚ್ಚು ಪ್ರಾಧಾನ್ಯತೆ ಇರುತ್ತದೆ. ಎಂತಹುದೇ ಮಾಸ್ ಹೀರೋ ಆದರೂ ಅವರಿಗೆ ಬೇರೆಯದೇ ಗೆಟಪ್ ನೀಡುತ್ತಾರೆ. ‘ಡಂಕಿ’ ಚಿತ್ರದಲ್ಲೂ ಅದು ಮುಂದುವರಿದಿದೆ. ಶಾರುಖ್ ಖಾನ್ ಅವರು ಕ್ಲಾಸ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಶಾರುಖ್ ಖಾನ್ ಜೊತೆ ಈ ಚಿತ್ರದಲ್ಲಿ ತಾಪ್ಸೀ ಪನ್ನು, ಬೋಮನ್ ಇರಾನಿ, ವಿಕ್ಕಿ ಕೌಶಲ್, ಅನಿಲ್ ಗ್ರೋವರ್, ವಿಕ್ರಮ್ ಕೊಚ್ಚರ್ ನಟಿಸಿದ್ದಾರೆ. ಪ್ರೀತಿ ಮತ್ತು ಸ್ನೇಹದ ಕಥೆಯಾಗಿರುವ ಡಂಕಿ ಸಿನಿಮಾವನ್ನು ಜಿಯೋ ಸ್ಟುಡಿಯೋಸ್, ರೆಡ್ ಚಿಲ್ಲೀಸ್ ಎಂಟರ್‌ಟೇನ್‌ಮೆಂಟ್ ಮತ್ತು ರಾಜ್‌ಕುಮಾರ್ ಹಿರಾನಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಗೌರಿ ಖಾನ್ ಹಾಗೂ ರಾಜ್‌ಕುಮಾರ್ ಹಿರಾನಿ ನಿರ್ಮಿಸಿದ್ದಾರೆ. ಅಭಿಜಾತ್ ಜೋಷಿ, ರಾಜ್‌ಕುಮಾರ್ ಹಿರಾನಿ ಮತ್ತು ಕನಿಕಾ ಧಿಲ್ಲೋನ್ ಕಥೆ ಬರೆದಿದ್ದಾರೆ. ಡಂಕಿ ಸಿನಿಮಾ ಕ್ರಿಸ್ಮಸ್ ಗೆ ವಿಶ್ವಾದ್ಯಂತ ರಿಲೀಸ್ ಆಗಲಿದೆ.
ಬಾಲಿವುಡ್ ಖ್ಯಾತ ನಟ ಶಾರುಖ್ ಖಾನ್ (Shahrukh Khan) ನಟನೆಯ ‘ಡಂಕಿ’ (Dunki) ಚಿತ್ರದ ಟೀಸರ್ (Teaser) ನಿನ್ನೆಯಷ್ಟೇ ಬಿಡುಗಡೆ ಆಗಿತ್ತು. ಟೀಸರ್ ಗೆ ಭಾರೀ ರೆಸ್ಪಾನ್ಸ್ ವ್ಯಕ್ತವಾಗಿದೆ. ಶಾರುಖ್ ಅಭಿಮಾನಿಗಳು ಟೀಸರ್ ನೋಡಿ ಕುಣಿದಿದ್ದಾರೆ. ಶಾರುಖ್ ಹೊಡೆದ ಡೈಲಾಗ್ ಗೆ ಸಿಳ್ಳೆ ಹಾಕಿದ್ದಾರೆ. ಸಂಗೀತ ಕೇಳಿ ಕುಣಿದಿದ್ದಾರೆ. ಒಟ್ಟಾರೆ ‘ಡಂಕಿ ಟೀಸರ್ ಗೆ ಬೆಂಕಿ’ ರೆಸ್ಪಾನ್ಸ್ ಸಿಕ್ಕಿದೆ. ಮತ್ತೆ ಶಾರುಖ್ ಗೆಲ್ಲೋದು ಗ್ಯಾರಂಟಿ ಅಂದಿದ್ದಾರೆ ಫ್ಯಾನ್ಸ್.
ಶಾರುಖ್ ಖಾನ್ ಜನ್ಮದಿನದ ಸಂಭ್ರಮದಂದು ಕಿಂಗ್ ಖಾನ್ ಹುಟ್ಟುಹಬ್ಬದ ಸ್ಪೆಷಲ್ ಆಗಿ ಡಂಕಿ ಸಿನಿಮಾದ ಟೀಸರ್ ಉಡುಗೊರೆಯಾಗಿ ಸಿಕ್ಕಿದೆ. ನಾಲ್ಕು ರಾಷ್ಟ್ರಪ್ರಶಸ್ತಿ ಗೆದ್ದಿರುವ ಸ್ಟಾರ್ ಡೈರೆಕ್ಟರ್ ರಾಜ್ ಕುಮಾರ್ (Rajkumar Hirani) ಹಿರಾನಿ ಡಂಕಿ ಸಿನಿಮಾದ ಸೂತ್ರಧಾರ. ಮುನ್ನಾ ಬಾಯ್ ಎಂಬಿಬಿಎಸ್, 3 ಈಡಿಯಟ್ಸ್, ಪಿಕೆ, ಸಂಜುನಂತಹ ಸೂಪರ್ ಡೂಪರ್ ಹಿಟ್ ಚಿತ್ರ ಕೊಟ್ಟಿರುವ ಹಿರಾನಿ, ಈ ಬಾರಿ ಐದು ಜನ ಸ್ನೇಹಿತರ ಕಥೆ ಹೇಳೋದಿಕ್ಕೆ ಬರ್ತಿದೆ. ಒಂದೊಳ್ಳೆ ಸಂದೇಶದ ಜೊತೆಗೆ ಮನರಂಜನಾತ್ಮಕ ಅಂಶಗಳನ್ನು ಬೆರೆಸಿ ಹೆಣೆದಿರುವ ಡಂಕಿ ಟೀಸರ್ ಗೆ ಅದ್ಭುತ ರೆಸ್ಪಾನ್ಸ್ ಸಿಕ್ತಿದೆ.
ಶಾರುಖ್ ಖಾನ್ ನಾಯಕನಾಗಿ ನಟಿಸಿದ್ದು, ಬೊಮನ್ ಇರಾನಿ, ತಾಪ್ಸೀ ಪನ್ನು, ವಿಕ್ಕಿ ಕೌಶಲ್, ಅನಿಲ್ ಗ್ರೋವರ್, ವಿಕ್ರಮ್ ಕೊಚ್ಚರ್ ತಾರಾಬಳಗದಲ್ಲಿದ್ದಾರೆ. ಪ್ರೀತಿ ಮತ್ತು ಸ್ನೇಹದ ಕಥೆಯಾಗಿರುವ ಡಂಕಿ ಸಿನಿಮಾವನ್ನು JIO ಸ್ಟುಡಿಯೋಸ್, ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಮತ್ತು ರಾಜ್‌ಕುಮಾರ್ ಹಿರಾನಿ ಫಿಲ್ಮ್ಸ್ ನಡಿ ರಾಜ್‌ಕುಮಾರ್ ಹಿರಾನಿ ಮತ್ತು ಗೌರಿ ಖಾನ್ ನಿರ್ಮಿಸಿದ್ದಾರೆ. ಅಭಿಜಾತ್ ಜೋಷಿ, ರಾಜ್‌ಕುಮಾರ್ ಹಿರಾನಿ ಮತ್ತು ಕನಿಕಾ ಧಿಲ್ಲೋನ್ ಕಥೆ ಬರೆದಿದ್ದಾರೆ. ಡಂಕಿ ಸಿನಿಮಾ ಕ್ರಿಸ್ಮಸ್ ಗೆ ವಿಶ್ವಾದ್ಯಂತ ರಿಲೀಸ್ ಆಗಲಿದೆ.
ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ (Shah Rukh Khan) ಗಿಂದು ಜನ್ಮದಿನದ (Birthday)ಸಂಭ್ರಮ. 58ನೇ ವಸಂತಕ್ಕೆ ಕಾಲಿಟ್ಟಿರುವ ಬಾದ್ ಷಾಗೆ ಶುಭಾಷಯಗಳ ಮಹಾಪೂರವೇ ಹರಿದುಬರ್ತಿದೆ. ಕಿಂಗ್ ಖಾನ್ ಹುಟ್ಟುಹಬ್ಬದ ಸ್ಪೆಷಲ್ ಆಗಿ ಡಂಕಿ (Dunki) ಸಿನಿಮಾದ ಟೀಸರ್ (Teaser) ಉಡುಗೊರೆಯಾಗಿ ಸಿಕ್ಕಿದೆ.
ನಾಲ್ಕು ರಾಷ್ಟ್ರಪ್ರಶಸ್ತಿ ಗೆದ್ದಿರುವ ಸ್ಟಾರ್ ಡೈರೆಕ್ಟರ್ ರಾಜ್ ಕುಮಾರ್ ಹಿರಾನಿ (Raj Kumar Hirani) ಡಂಕಿ ಸಿನಿಮಾದ ಸೂತ್ರಧಾರ. ಮುನ್ನಾ ಬಾಯ್ ಎಂಬಿಬಿಎಸ್, 3 ಈಡಿಯಟ್ಸ್, ಪಿಕೆ, ಸಂಜುನಂತಹ ಸೂಪರ್ ಡೂಪರ್ ಹಿಟ್ ಚಿತ್ರ ಕೊಟ್ಟಿರುವ ಹಿರಾನಿ, ಈ ಬಾರಿ ಐದು ಜನ ಸ್ನೇಹಿತರ ಕಥೆ ಹೇಳೋದಿಕ್ಕೆ ಬರ್ತಿದೆ. ಒಂದೊಳ್ಳೆ ಸಂದೇಶದ ಜೊತೆಗೆ ಮನರಂಜನಾತ್ಮಕ ಅಂಶಗಳನ್ನು ಬೆರೆಸಿ ಎಣೆದಿರುವ ಡಂಕಿ ಟೀಸರ್ ಗೆ ಅದ್ಭುತ ರೆಸ್ಪಾನ್ಸ್ ಸಿಕ್ತಿದೆ.
ಶಾರುಖ್ ಖಾನ್ ನಾಯಕನಾಗಿ ನಟಿಸಿದ್ದು, ಬೊಮನ್ ಇರಾನಿ, ತಾಪ್ಸೀ ಪನ್ನು, ವಿಕ್ಕಿ ಕೌಶಲ್, ಅನಿಲ್ ಗ್ರೋವರ್, ವಿಕ್ರಮ್ ಕೊಚ್ಚರ್ ತಾರಾಬಳಗದಲ್ಲಿದ್ದಾರೆ. ಪ್ರೀತಿ ಮತ್ತು ಸ್ನೇಹದ ಕಥೆಯಾಗಿರುವ ಡಂಕಿ ಸಿನಿಮಾವನ್ನು JIO ಸ್ಟುಡಿಯೋಸ್, ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಮತ್ತು ರಾಜ್‌ಕುಮಾರ್ ಹಿರಾನಿ ಫಿಲ್ಮ್ಸ್ ನಡಿ ರಾಜ್‌ಕುಮಾರ್ ಹಿರಾನಿ ಮತ್ತು ಗೌರಿ ಖಾನ್ ನಿರ್ಮಿಸಿದ್ದಾರೆ. ಅಭಿಜಾತ್ ಜೋಷಿ, ರಾಜ್‌ಕುಮಾರ್ ಹಿರಾನಿ ಮತ್ತು ಕನಿಕಾ ಧಿಲ್ಲೋನ್ ಕಥೆ ಬರೆದಿದ್ದಾರೆ. ಡಂಕಿ ಸಿನಿಮಾ ಕ್ರಿಸ್ಮಸ್ ಗೆ ವಿಶ್ವಾದ್ಯಂತ ರಿಲೀಸ್ ಆಗಲಿದೆ.
ಶಾರುಖ್ ಖಾನ್ ಹುಟ್ಟು ಹಬ್ಬವನ್ನು ಅವರ ಅಭಿಮಾನಿಗಳು ನಿನ್ನೆ ಮಧ್ಯರಾತ್ರಿಯಿಂದಲೇ ಆಚರಿಸುತ್ತಿದ್ದಾರೆ. ಶಾರುಖ್ ಮನೆ ಮುಂದೆ ಅಸಂಖ್ಯಾತ ಅಭಿಮಾನಿಗಳು ಜಮಾಯಿಸಿದ್ದಾರೆ. ಅಭಿಮಾನಿಗಳನ್ನು ನಿಯಂತ್ರಿಸುವುದಕ್ಕಾಗಿಯೇ ನಟನೆ ಮನೆಯ ಮುಂದೆ ಪೊಲೀಸ್ ಸರ್ಪಗಾವಲು ನಿಯೋಜನೆಯಾಗಿದೆ. ರಾತ್ರಿಯೇ ತಮ್ಮ ಮನೆಯ ಟೆರಸ್ ನಿಂದ ಅಭಿಮಾನಿಗಳತ್ತ ಕೈ ಬೀಸಿ ಧನ್ಯವಾದಗಳನ್ನು ಹೇಳಿದ್ದಾರೆ ಶಾರುಖ್. ಮತ್ತೆ ಬೆಳಗ್ಗೆ ಸಿಗುವುದಾಗಿ ತಿಳಿಸಿದ್ದಾರೆ.
ಸ್ಯಾಂಡಲ್‌ವುಡ್ ನಟ ಪ್ರವೀಣ್ ತೇಜ್ (Praveen Tej) ಜಿಗರ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಈಗಾಗಲೇ ತರಹೇವಾರಿ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸಿರುವ ಪ್ರವೀಣ್ ಈ ಬಾರಿ ಮಾಸ್ ಲುಕ್‌ನಲ್ಲಿ ಎಂಟ್ರಿ ಕೊಡುತ್ತಿದ್ದಾರೆ. ಅಂದಹಾಗೆ ಮೊದಲ ಬಾರಿಗೆ ಪ್ರವೀಣ್ ಆಕ್ಷನ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರುತ್ತಿದ್ದಾರೆ. ಈಗಾಗಲೇ ಸಿನಿಮಾದ ಮೊದಲ ಹಾಡನ್ನು ರಿಲೀಸ್ ಮಾಡಿದ್ದ ಸಿನಿಮಾತಂಡ ಇದೀಗ ಟೀಸರ್ (Teaser) ಮೂಲಕ ಎಂಟ್ರಿ ಕೊಟ್ಟಿದ್ದಾರೆ.
ಕರಾವಳಿ ಸುತ್ತ ಮುತ್ತ ಚಿತ್ರೀಕರಣಗೊಂಡಿರುವ ಜಿಗರ್ ಔಟ್ ಅಂಡ್ ಔಟ್ ಆಕ್ಷನ್ ಸಿನಿಮಾ. ರೊಮ್ಯಾಂಟಿಕ್ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಪ್ರವೀಣ್ ಜಿಗರ್ ನಲ್ಲಿ ಚಾಕು ಚುಚ್ಚಿ ರಕ್ತ ಹರಿಸಿದ್ದನ್ನು ನೋಡಿ ಪ್ರೇಕ್ಷಕರು ಅಚ್ಚರಿ ಪಟ್ಟಿದ್ದಾರೆ. ಅಂದಹಾಗೆ ಚಿತ್ರಕ್ಕೆ ಸೂರಿ ಕುಂದರ್ ಆಕ್ಷನ್ ಕಟ್ ಹೇಳಿದ್ದಾರೆ. ನಿರ್ದೇಶಕ ಸೂರಿ ಅವರಿಗೆ ಇದು ಮೊದಲ ಸಿನಿಮಾ.
ಈಗಾಗಲೇ ಸ್ಯಾಂಡಲ್‌ವುಡ್‌ನಲ್ಲಿ ಅನೇಕ ಸಿನಿಮಾಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ನಿರ್ದೇಶಕ ಸೂರಿ ಜಿಗರ್ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ತನ್ನ ಮೊದಲ ಸಿನಿಮಾದ ಮೇಲೆ ನಿರ್ದೇಶಕ ಸೂರಿ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಯು ಕೆ ಪ್ರೊಡಕ್ಷನ್ ಅಡಿಯಲ್ಲಿ ಸಿನಿಮಾ ನಿರ್ಮಾಣವಗಿದ್ದು ಪೂಜಾ ವಸಂತ್ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ ,
ಇನ್ನೂ ಈ ಸಿನಿಮಾದಲ್ಲಿ ಪ್ರವೀಣ್‌ಗೆ ನಾಯಕಿಯಾಗಿ ವಿಜಯ್ ಶ್ರೀ ಕಾಣಿಸಿಕೊಂಡಿದ್ದಾರೆ. ವಿಜಯ್ ಶ್ರೀ (Vijay Sri) ಅವರಿಗೂ ಇದು ಮೊದಲ ಸಿನಿಮಾವಾಗಿದೆ. ಚಿತ್ರಕ್ಕೆ ರಿತ್ವಿಕ್ ಮುರಳಿಧರ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಮಲ್ಫೆ, ಮರುವಂತೆ, ಮಂಗಳೂರು ಸುತ್ತಮುತ್ತ ಜಿಗರ್ ಸಿನಿಮಾವನ್ನು ಸೆರೆಹಿಡಿಯಲಾಗಿದೆ. ಸಂಪೂರ್ಣ ಸಿನಿಮಾ ಕೂಡ ಇದೇ ಬ್ಯಾಕ್‌ಡ್ರಾಪ್‌ನಲ್ಲಿ ಇರಲಿದೆ.
ಪ್ರವೀಣ್ ಮೊದಲ ಬಾರಿಗೆ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದು ಅಭಿಮಾನಿಗಳು ಹೇಗೆ ಸ್ವೀಕರಿಸುತ್ತಾರೆ ಎಂದು ಎದುರುನೋಡುತ್ತಿದ್ದಾರೆ. ಕೊನೆಯದಾಗಿ ಪ್ರವೀಣ್ ಹೊಂದಿಸಿ ಬರೆಯಿರಿ ಸಿನಿಮಾ ಮೂಲಕ ಸಿನಿಮಾ ಪ್ರೇಕ್ಷಕರ ಮುಂದೆ ಬಂದಿದ್ದರು. ಸದ್ಯ ಟೀಸರ್ ಮೂಲಕ ಅಭಿಮಾನಿಗಳ ಗಮನ ಸೆಳೆದಿರುವ ಜಿಗರ್ ಸಿನಿಮಾ ಹೇಗಿರಲಿದೆ ಎನ್ನುವ ಕುತೂಹಲ ಹೆಚ್ಚಿಸಿದೆ.
ನವೆಂಬರ್ (November) ಒಂದಕ್ಕೆ ಯಶ್ (Yash) ನಟನೆಯ ಹೊಸ ಸಿನಿಮಾದ (New Movie) ಅಪ್ ಡೇಟ್ ಸಿಗಲಿದೆ ಎನ್ನುವ ಮತ್ತೊಂದು ಸುದ್ದಿ ಗಾಂಧಿನಗರದ ಗಲ್ಲಿಗಲ್ಲಿಗಳಲ್ಲಿ ಕೇಳಿ ಬರುತ್ತಿದೆ. ಚಿತ್ರದ ಟೈಟಲ್ (Title) ಮತ್ತು ಟೀಸರ್ ಅನ್ನು ಏಕಕಾಲಕ್ಕೆ ರಿಲೀಸ್ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆಯಂತೆ. ಈ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ ನಿರ್ಮಾಣ ಮಾಡಲಿದ್ದು, ಕನ್ನಡ ರಾಜ್ಯೋತ್ಸವಕ್ಕೆ ಅಭಿಮಾನಿಗಳಿಗೆ ಭರ್ಜರಿ ಉಡುಗೊರೆ ಸಿಗಲಿದೆ.
ಯಶ್ ನಟನೆಯ ಹೊಸ ಸಿನಿಮಾದ ಅಪ್ ಡೇಟ್ ಬಗ್ಗೆ ಅಭಿಮಾನಿಗಳು ಹಲವು ತಿಂಗಳಿಂದ ಕಾಯುತ್ತಲೇ ಇದ್ದಾರೆ. ಈಗಾಗಲೇ ಹಲವು ವಿಷಯಗಳು ಗಾಂಧಿನಗರದಲ್ಲಿ ಹರಿದಾಡುತ್ತಿದ್ದರೂ, ಅವು ಯಾವವೂ ಅಧಿಕೃತ ಮಾಹಿತಿಯಲ್ಲ. ಇದೀಗ ಮತ್ತೊಂದು ಸುದ್ದಿ ಹರಿದಾಡುತ್ತಿದ್ದು, ನವೆಂಬರ್ 1ಕ್ಕೆ ಯಶ್ ನಟನೆಯ ಹೊಸ ಸಿನಿಮಾ ಘೋಷಣೆ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಅದಕ್ಕಾಗಿ ಸರ್ವ ಸಿದ್ಧತೆಯನ್ನು ಟೀಮ್ ಮಾಡಿಕೊಂಡಿದೆ.
ಅಧಿಕೃತ ಮಾಹಿತಿಯನ್ನು ಯಶ್ ಹಂಚಿಕೊಳ್ಳದೇ ಇದ್ದರೂ ಚಿತ್ರದ ನಿರ್ದೇಶಕರು, ನಿರ್ಮಾಣ ಸಂಸ್ಥೆ, ನಾಯಕಿಯ ಹೆಸರು ಎಲ್ಲವೂ ಒಂದೊಂದೆ ಆಚೆ ಬಂದಿವೆ. ಅವೆಲ್ಲವೂ ಎಷ್ಟು ನಿಜವೋ, ಸುಳ್ಳೋ ಗೊತ್ತಿಲ್ಲ. ಆದರೂ, ದಿನಕ್ಕೊಂದು ಮಾಹಿತಿಯಂತೂ ಸಿಗುತ್ತಿದೆ. ಅದನ್ನು ಓದಿಕೊಂಡು, ಕೇಳಿಕೊಂಡು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.
ಮೊನ್ನೆಯಷ್ಟೇ ಸಿನಿಮಾದ ನಾಯಕಿಯ ಹೆಸರು ಬಹಿರಂಗವಾಗಿತ್ತು. ಇದೀಗ ಸಿನಿಮಾದ ಶೂಟಿಂಗ್ ವಿವರಗಳು ಸಿಗುತ್ತಿವೆ. ಈಗಾಗಲೇ ಕಥೆ ಲಾಕ್ ಆಗಿದ್ದು, ಅಕ್ಟೋಬರ್ ನಲ್ಲಿ ಅಧಿಕೃತ ಘೋಷಣೆ ಮಾಡಿ, ಡಿಸೆಂಬರ್ 23ರಿಂದ ಚಿತ್ರೀಕರಣಕ್ಕೆ ಹೋಗಲು ಚಿತ್ರತಂಡ ರೆಡಿಯಾಗಿದೆ ಎನ್ನುವ ಮಾಹಿತಿ ಹರಿದಾಡುತ್ತಿದೆ. ಕೆಲ ದಿನಗಳ ಹಿಂದೆಯಷ್ಟೇ ಟ್ವಿಟರ್ ನಲ್ಲಿ ಈ ವಿಷಯ ಟ್ರೆಂಡಿಂಗ್ ನಲ್ಲಿಯೂ ಇತ್ತು.
ಈ ಚಿತ್ರಕ್ಕೆ ನಾಯಕಿಯಾಗಿ ಮಲಯಾಳಂ ನಟಿ ಸಂಯುಕ್ತಾ ಮೆನನ್ (Samyukta Menon) ಆಯ್ಕೆಯಾಗಿದ್ದಾರೆ ಎನ್ನಲಾಗುತ್ತಿದೆ. ಚಿತ್ರತಂಡದಿಂದ ಯಾವುದೇ ಮಾಹಿತಿ ಹೊರ ಬರದಿದ್ದರೂ, ಸಂಯುಕ್ತಾ ಹೆಸರು ಮಾತ್ರ ಜೋರಾಗಿ ಕೇಳಿ ಬರುತ್ತಿದೆ.
ಗೊಂಬೆಗಳ ಲವ್ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಭರವಸೆ ಮೂಡಿಸಿದ್ದ ನಟ ಅರುಣ್ ಕುಮಾರ್ (Arun Kumar) ಈಗ ನಿರ್ದೇಶನಕ್ಕಿಳಿದಿದ್ದಾರೆ. ಅವರ ಚೊಚ್ಚಲ ಹೆಜ್ಜೆಗೆ ‘ನೆಲ್ಸನ್’ (Nelson) ಎಂಬ ಶೀರ್ಷಿಕೆ ಇಡಲಾಗಿದ್ದು, ರಕ್ತದಲ್ಲಿ ನೆಂದ ದೇವರಕಾಡು ಎಂಬ ಅಡಿ ಬರಹ ಚಿತ್ರದ ಸಾರಂಶವನ್ನು ವಿವರಿಸ್ತಿದೆ. ಟೀಸರ್ ರಿಲೀಸ್ ಆಗಿದ್ದು, ನಿರೀಕ್ಷೆಯನ್ನು ಇಮ್ಮಡಿಗೊಳಿಸಿದೆ. ಸಖತ್ ಮಾಸ್ ಆಗಿ ಮೂಡಿಬಂದಿರುವ ನೆಲ್ಸನ್ ಟೀಸರ್ ನಲ್ಲಿ ಮರಿ ಟೈಗರ್ ವಿನೋದ್ ಪ್ರಭಾಕರ್ (Vinod Prabhakar) ಆಂಗ್ರಿ ಯಂಗ್ ಮ್ಯಾನ್ ಅವತಾರದಲ್ಲಿ ಅಬ್ಬರಿಸಿದ್ದಾರೆ. ಇಂದು ಎಂಎಂ ಲೆಗಸಿಯಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅವರು ಟೀಸರ್ ಲಾಂಚ್ ಮಾಡಿ ಇಡೀ ತಂಡಕ್ಕೆ ಶುಭಾಶಯ ತಿಳಿಸಿದರು. ಈ ವೇಳೆ ಇಡೀ ಚಿತ್ರತಂಡ ಭಾಗಿಯಾಗಿತ್ತು.
ಉಪೇಂದ್ರ ಮಾತನಾಡಿ, ಟೈಗರ್ ಹವಾ ಆಗಲೂ ಇತ್ತು ಈಗಲೂ ಇರುತ್ತೇ.. ಮುಂದೆಯೂ ಇರುತ್ತದೆ. ನಿಮ್ಮ ತಂದೆ ಸಿನಿಮಾಗೆ ಡೈಲಾಗ್ ಬರೆದಿದ್ದೆ. ಇವತ್ತು ನಿಮ್ಮ ಟೀಸರ್ ಲಾಂಚ್ ಮಾಡಲು ನಿಮ್ಮ ತಂದೆ ಆಶೀರ್ವಾದ ಮಾಡಿದ್ದಾರೆ. ಟೀಸರ್ ಬಗ್ಗೆ ಏನೂ ಹೇಳೋದು. ಎಲ್ಲವೂ ಎಕ್ಸ್ಟ್ರಾಡಿನರಿಯಾಗಿದೆ. ಮೇಕಿಂಗ್, ಗೆಟಪ್ ಸೂಪರ್. ಸಬ್ಜೆಕ್ಟ್ ಬೇರೆ ತರ ಇದೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ. ಈ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಲಿದೆ ಎಂದರು. ನಟ ವಿನೋದ್ ಪ್ರಭಾಕರ್ ಮಾತನಾಡಿ, ಉಪೇಂದ್ರ (Upendra) ಅಣ್ಣ ಟೀಸರ್ (Teaser) ನೋಡಿ ತುಂಬಾ ಖುಷಿಪಟ್ಟರು. ದರ್ಶನ್ ಸರ್ ಕೂಡ ಟೀಸರ್ ನೋಡಿದರು. ಈ ತರಹದ ಒಂದು ಸಿನಿಮಾ ಮಾಡಲು ಧೈರ್ಯ ಬೇಕು. ಶ್ರೀರಾಮ್ ಸರ್ ನಿಮಗೆ ಧನ್ಯವಾದ. ನಿಮ್ಮ ಮೇಲೆ ನಮಗೆ ಕಾನ್ಫಿಡೆನ್ಸ್ ಇದೆ. ಅರುಣ್ ಕುಮಾರ್ ಅವರು ಬಹಳಷ್ಟು ಫ್ಯಾಷನ್ ಇರುವ ವ್ಯಕ್ತಿ. ಭರತ್ ಸರ್ ವಂಡರ್ ಫುಲ್ ಮ್ಯೂಸಿಕ್. ಸಿನಿಮಾ ಬಗ್ಗೆ ಮುಂದೆ ಮಾತಾಡ್ತೀನಿ. ತೆರೆಹಿಂದೆ ಬಹಳಷ್ಟು ಜನ ಕೆಲಸ ಮಾಡಿದ್ದೀರಿ ಎಂದರು.
ನಿರ್ದೇಶಕ ಅರುಣ್ ಕುಮಾರ್ ಮಾತನಾಡಿ, ಲಾಕ್ ಡೌನ್ ಆದ್ಮೇಲೆ ಹಸಿವು, ಅಸಹಾಯಕ ಸಮಯದಲ್ಲಿ ನೆಲ್ಸನ್ ಹುಟ್ಟಿಕೊಂಡಿದ್ದು. ಬರೆಯುತ್ತಾ, ಬರೆಯುತ್ತಾ ತುಂಬಾ ಚೆನ್ನಾಗಿ ಕಥೆ ಬೆಳೆಯಿತು. ಮಲಯಾಳಂ, ತಮಿಳು ಇಂಡಸ್ಟ್ರೀಗೆ ಕಥೆ ತೆಗೆದುಕೊಂಡು. ಆದರೆ ನನಗೆ ತೃಪ್ತಿಯಾಗಲಿಲ್ಲ. ಇಲ್ಲೇ ಏನಾದರೂ ಆಗಬೇಕು ಅದಕ್ಕೆ ಬಂದೆ. ಸ್ನೇಹಿತರ ಮೂಲಕ ನಿರ್ಮಾಪಕರು ಸಿಕ್ಕಿದರು. ನಂಬಿಕೆ ಹುಟ್ಟಿಕೊಳ್ತು. ಇದುವರೆಗೆ ನನ್ನ ನಂಬಿದ್ದು ಶ್ರೀರಾಮ್ ಸರ್. ನಾನು ಟೀಂ ನನ್ನ ಬೆನ್ನೆಲುಬು ಆಗಿ ನಿಂತರು. ಸಿನಿಮಾ ಈ ಹಂತಕ್ಕೆ ಬರಲು ನನ್ನ ಟೆಕ್ನಿಕಲ್ ಟೀಂ ಬೆಂಬಲವಿದೆ. ವಿನೋದ್ ಸರ್ ಡೆಡಿಕೇಷನ್ ನೋಡಿ ಭಯ ಆಯಿತು. ವಿನೋದ್ ಸರ್ ಸಪೋರ್ಟ್ ತುಂಬಾ ದೊಡ್ಡದಿದೆ. 60 ರಿಂದ 90 ಒಳಗಡೆ ಚಾಮರಾಜನಗರದಲ್ಲಿ ನಡೆಯುವ ಕಥೆ ಇದು. ಸ್ಕ್ರೀನ್ ಪ್ಲೇ, ಕಥೆ ತುಂಬಾ ಸ್ಟ್ರಾಂಗ್ ಆಗಿದೆ ಎಂದರು.
ನಿರ್ಮಾಪಕ ಬಿ.ಎಂ.ಶ್ರೀರಾಮ್ (ಕೋಲಾರ) ಮಾತನಾಡಿ, ಉಪ್ಪಿ ಕಾರ್ಯಕ್ರಮಕ್ಕೆ ಬಂದಿದ್ದು ಬಹಳ ಖುಷಿ ಆಯ್ತು. ನಾವು ತುಂಬ ಬಡತನದಿಂದ ಮೇಲೆ ಬಂದವರು. ನಾವು ಈ ಮಟ್ಟದಲ್ಲಿ ಬೆಳೆಯಲು ಐದು ಜನರನ್ನು ಸ್ಫೂರ್ತಿಯಾಗಿ ತೆಗೆದುಕೊಂಡೆ. ಅದರಲ್ಲಿ ಉಪ್ಪಿ ಸರ್ ಕೂಡ ಒಬ್ಬರು. ತಂದೆ ತಾಯಿ ಆಶೀರ್ವಾದ ಮಾರ್ಗದರ್ಶನದಿಂದ ಈ ಮಟ್ಟಕ್ಕೆ ಇದ್ದೀವಿ. ಅರುಣ್ ಅವರನ್ನು ನನ್ನ ಸ್ನೇಹಿತರು ರೆಫರ್ ಮಾಡಿದ್ದರು. ಇದು ಚಾಮರಾಜನಗ ಆಚಾರ,ವಿಚಾರ ಅಂಶಗಳು ಇರುವುದರಿಂದ ಕಥೆ ಒಪ್ಪಿಕೊಂಡೆ. ವಿನೋದ್ ಸರ್ ಅಪ್ರೋಚ್ ಮಾಡಿದ್ವಿ. ಕಥೆ ಹೇಳಿದ್ವಿ ಒಪ್ಪಿಕೊಂಡರು. ಟೀಸರ್ ಮಾಡಿದ್ಮೇಲೆ ಅರುಣ್ ಟೀ ಮೇಲೆ ಭರವಸೆ ಹೆಚ್ಚಾಯ್ತು ಎಂದರು.
‘ನೆಲ್ಸನ್-ರಕ್ತದಲ್ಲಿ ನೆಂದ ದೇವರಕಾಡು’ ನೈಜ ಘಟನೆಯ ಕಥಾಹಂದರದ ಸಿನಿಮಾ. ಚಾಮರಾಜನಗರ ಜಿಲ್ಲೆಯಲ್ಲಿ 60ರಿಂದ 90ರ ದಶಕದಲ್ಲಿ ನಡೆಯುವ ಗ್ಯಾಗ್‌ಸ್ಟರ್ ಕಥೆ. ಅಲ್ಲಿನ ಭಾಷೆ, ಸಂಸ್ಕೃತಿ, ನೆಲ, ಜಲ, ಬುಡಕಟ್ಟು ಜನಾಂಗದ ಸಂಘರ್ಷ ಸೇರಿದಂತೆ ಒಂದಷ್ಟು ಅಂಶಗಳನ್ನು ಈ ಚಿತ್ರದಲ್ಲಿ ಅರುಣ್ ಕಟ್ಟಿಕೊಡಲಿದ್ದಾರೆ. ವಿಶೇಷ ಅಂದರೆ ವಿನೋದ್ ಪ್ರಭಾಕರ್ ಹಿಂದೆಂದೂ ಕಾಣದ ಅವತಾರದಲ್ಲಿ ‘ನೆಲ್ಸನ್-ರಕ್ತದಲ್ಲಿ ನೆಂದ ದೇವರಕಾಡು’ ಸಿನಿಮಾದಲ್ಲಿ ನಿಮಗೆ ಕಾಣಸಿಗ್ತಾರೆ. ಬಹಳ ಇಂಪ್ರೆಸ್ ಎನಿಸುವ ಟೀಸರ್ ಝಲಕ್ ನಲ್ಲಿ ಛಾಯಾಗ್ರಹಣ ಹಾಗೂ ಸಂಗೀತವೂ ಗಮನಸೆಳೆಯುತ್ತಿದೆ.
ಒಂದಷ್ಟು ಸಿನಿಮಾಗಳಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿರುವ ಅನುಭವವಿರುವ ಅರುಣ್ ಕುಮಾರ್ ಆ ಎಲ್ಲಾ ಕಲೆಯನ್ನು ‘ನೆಲ್ಸನ್-ರಕ್ತದಲ್ಲಿ ನೆಂದ ದೇವರಕಾಡು’ ಚಿತ್ರಕ್ಕೆ ಧಾರೆ ಎರೆದಿದ್ದಾರೆ. ಅವರ ಮೊದಲ ಕನಸಿಗೆ ದೀಪ ಫಿಲ್ಮ್ಸ್ ಬ್ಯಾನರ್ ನಲ್ಲಿ ಬಿ.ಎಮ್ ಶ್ರೀರಾಮ್ (ಕೋಲಾರ) ಹಣ ಹಾಕಿದ್ದಾರೆ. ಪ್ರಜ್ವಲ್ ಗೌಡ ಛಾಯಾಗ್ರಹಣ ಮತ್ತು ಭರತ್ ಬಿಜಿ ಸಂಗೀತ, ವಿಜಯ್ ರಾಜ್ ಸಂಕಲನ, ಹರಿ ಸಂಭಾಷಣೆ ‘ನೆಲ್ಸನ್-ರಕ್ತದಲ್ಲಿ ನೆಂದ ದೇವರಕಾಡು’ ಸಿನಿಮಾಗಿದೆ. ಆಕ್ಷನ್ ಟೀಸರ್ ಧಮಾಕ ಎಬ್ಬಿಸಿರುವ ಚಿತ್ರತಂಡ ನವೆಂಬರ್ ತಿಂಗಳಿಂದ ಶೂಟಿಂಗ್ ಅಖಾಡಕ್ಕೆ ಧುಮುಕಲಿದ್ದಾರೆ.