Tag: teaser

  • ಕುತೂಹಲ ಕೆರಳಿಸಿದ `ಕೆಂಡ’ ಟೀಸರ್

    ಕುತೂಹಲ ಕೆರಳಿಸಿದ `ಕೆಂಡ’ ಟೀಸರ್

    ಶೀರ್ಷಿಕೆಯಿಂದಲೇ ಕನ್ನಡ ಕಲಾಭಿಮಾನಿಗಳ ಕಣ್ಣಲ್ಲಿ ಕುತೂಹಲ ಹುಟ್ಟಿಸಿರುವ ಸಿನಿಮಾ `ಕೆಂಡ’. ಸಹದೇವ್ ಕೆಲವಡಿಯವರ ನಿರ್ದೇಶನದಲ್ಲಿ ರೂಪಾ ರಾವ್ ನಿರ್ಮಾಣದಲ್ಲಿ ತಯಾರಾಗುತ್ತಿರುವ ಈ ಚಿತ್ರ ಘೋಷಣೆಯಾದಾಗಿಂದಲೂ ಸ್ಯಾಂಡಲ್‍ವುಡ್ ಅಂಗಳದಲ್ಲಿ ಸದ್ದು ಮಾಡುತ್ತಲೇ ಇದೆ. ಮೊದಲು ಮೋಷನ್ ಪೋಸ್ಟರ್ ನಿಂದ ಸಿನಿಮಾ ಪ್ರೇಮಿಗಳ ಗಮನ ಸೆಳೆದ ಕೆಂಡ, ಅನಂತರ ಕ್ಯಾರೆಕ್ಟರ್ ಟೀಸರ್ ನಿಂದ ಮಗದಷ್ಟು ಪ್ರೇಕ್ಷಕರನ್ನ ತನ್ನತ್ತ ಸೆಳೆದುಕೊಂಡಿತ್ತು. ಇದೀಗ, `ಕೆಂಡ’ ಟೀಸರ್ ಕಣಕ್ಕಿಳಿದಿದೆ. ಮಾಸ್ ಸಿನಿಮಾ ಪ್ರೇಮಿಗಳ ಜೊತೆಗೆ ಸಿನಿಮಾ ಮಂದಿಯನ್ನೂ ಬೆರಗುಗೊಳಿಸುತ್ತಿದೆ.

    ಹೌದು, `ಕೆಂಡ’ದೊಳಗೆ ಗಂಭೀರ ಕಥೆ ಅಡಗಿರುವುದು ಒಂದು ನಿಮಿಷ 7 ಸೆಕೆಂಡ್ ಟೀಸರ್ ನಿಂದಲೇ ಗೊತ್ತಾಗುತ್ತಿದೆ. ಬಹುಕೋಟಿ ವೆಚ್ಚದ ಕಮರ್ಷಿಯಲ್ ಸಿನಿಮಾಗಳ ಅಬ್ಬರ- ಆರ್ಭಟದ ನಡುವೆ ಬೆಳ್ಳಿತೆರೆಗೆ ಕಿಚ್ಚು ಹಚ್ಚೋದಕ್ಕೆ ಭಿನ್ನ ಕಥಾನಕದ `ಕೆಂಡ ಸದ್ದಿಲ್ಲದೇ ತಯಾರಾಗಿದೆ. ರಂಗಭೂಮಿ ಪ್ರತಿಭೆಗಳಾದ ಸಚ್ಚಾ, ಶರತ್ ಗೌಡ, ಪ್ರಣವ್ ಶ್ರೀಧರ್, ಬಿ.ವಿ ಭರತ್ , ವಿನೋದ್ ರವೀಂದ್ರನ್, ಗೋಪಾಲ್ ಕೃಷ್ಣ ದೇಶ್‍ಪಾಂಡೆ ಸೇರಿದಂತೆ ಹಲವರು ಪಾತ್ರವರ್ಗದಲ್ಲಿದ್ದಾರೆ. ಬೆಂಗಳೂರಿನಂಥಾ ಮಹಾನಗರಿಯಲ್ಲಿ ನಾನಾ ನಿರಾಸೆಗೊಳಗಾದ ಯುವ ಸಮೂಹ,  ವ್ಯವಸ್ಥೆಯ ವಿಷವ್ಯೂಹಕ್ಕೆ ಸಿಲುಕಿ ಹೇಗೆ ನರಳುತ್ತಿದೆ ಎಂಬುದನ್ನು, ರಾಜಕೀಯ ಹಾಗೂ ಅಪರಾಧದ ತನಿಖೆ ಮೂಲಕ ಜಗತ್ತಿನ ಮುಂದೆ ಹರವಿಡಲು ಹೊರಟಿದ್ದಾರೆ ಯುವ ನಿರ್ದೇಶಕ ಸಹದೇವ್ ಕೆಲವಡಿಯವರು.

    ನಿರ್ದೇಶಕ ಸಹದೇವ್ ಕೆಲವಡಿಯವರು ವಿದೇಶಗಳಲ್ಲಿ ಸಿನಿಮಾ ಬಗ್ಗೆ ಅಧ್ಯಯನ ನಡೆಸಿ ಬಂದು, ತನ್ನ ಮಾತೃ ಭಾಷೆಯಲ್ಲಿಯೇ ಸಿನಿಮಾ ಮಾಡಬೇಕೆಂಬ ಬಯಕೆ ಹೊಂದಿದ್ದವರು . ಅದರ ಆರಂಭಿಕ ಹೆಜ್ಜೆಯಾಗಿ  ಅಮೇಯುಕ್ತಿ ಸ್ಟುಡಿಯೋಸ್ ಬ್ಯಾನರ್ ಹುಟ್ಟುಹಾಕಿದರು. ರೂಪಾ ರಾವ್ ನಿರ್ದೇಶನದ `ಗಂಟುಮೂಟೆ’ ಚಿತ್ರಕ್ಕೆ ಬಂಡವಾಳ ಹೂಡೋದ್ರ ಜೊತೆಗೆ ಸಿನಿಮಾಟೋಗ್ರಾಫರ್ ಆಗಿ ಕೆಲಸ ನಿರ್ವಹಿಸಿದರು. ಆ ಚಿತ್ರ ಇಬ್ಬರಿಗೂ ಹೆಸರು ತಂದುಕೊಟ್ಟಿತ್ತು. ಇದೀಗ  ಮತ್ತೊಮ್ಮೆ ಇವರಿಬ್ಬರು `ಕೆಂಡ’ ಸಿನಿಮಾಗಾಗಿ ಕೈ ಜೋಡಿಸಿದ್ದಾರೆ. ಈ  ಸಿನಿಮಾದ ಮೂಲಕ ಸಹದೇವ್ ಕೆಲವಡಿ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ.‌ಅಮೇಯುಕ್ತಿ ಬ್ಯಾನರ್ ಅಡಿಯಲ್ಲಿ `ಕೆಂಡ’ ತಯಾರಾಗಿದ್ದು,  ಈ ಭಾರಿ  ನಿರ್ಮಾಪಕಿಯಾಗಿ ರೂಪಾ ರಾವ್ ಸಾಥ್ ಕೊಟ್ಟಿದ್ದಾರೆ.

    ಸಿನಿಮಾ ನಿರ್ಮಾಣ ಸುಲಭದ ಕೆಲಸವಲ್ಲ. ಅದರಲ್ಲೂ ಗ್ಯಾಂಗ್‍ಸ್ಟರ್ ಮೂವೀ ನಿರ್ಮಾಣಕ್ಕೆ ಡಬ್ಬಲ್ ಗುಂಡಿಗೆ ಬೇಕು. ಆ ಎದೆಗಾರಿಕೆ ನಿರ್ಮಾಪಕಿ ರೂಪಾ ರಾವ್‍ಗೆ ಇರೋದ್ರಿಂದಲೇ `ಕೆಂಡ’ದಂತಹ ಗ್ಯಾಂಗ್‍ಸ್ಟರ್ ಸಿನಿಮಾಗೆ ಕೈ ಹಾಕಿದ್ದಾರೆ. ಈ ಸಿನಿಮಾ ಮೂಲಕ ಖ್ಯಾತ ಸಾಹಿತಿ ಜಯಂತ್ ಕಾಯ್ಕಿಣಿ ಅವರ ಪುತ್ರ ರಿತ್ವಿಕ್ ಕಾಯ್ಕಿಣಿ ಸಂಗೀತ ನಿರ್ದೇಶಕರಾಗುತ್ತಿದ್ದಾರೆ. ಕಥೆಯೊಂದಿಗೇ ಹೊಸೆದುಕೊಂಡಂಥಾ ಎರಡು ಹಾಡುಗಳಿಗೆ ಖುದ್ದು ಜಯಂತ್ ಕಾಯ್ಕಿಣಿ ಸಾಹಿತ್ಯ ಬರೆದಿದ್ದಾರೆ.

    ಆಸ್ಕರ್ ಪ್ರಶಸ್ತಿ ವಿಜೇತ ಎಲಿಫೆಂಟ್ ವಿಸ್ಪರ್ಸ್ ಚಿತ್ರದ ಭಾಗವಾಗಿದ್ದ ಶ್ರೇಯಾಂಕ್ ನಂಜಪ್ಪ ಕೆಂಡ ಚಿತ್ರಕ್ಕೆ ಶಬ್ಧ ಸಂಯೋಜನೆ ಮಾಡಿದ್ದಾರೆ. ಈಗಾಗಲೇ ಸದ್ದಿಲ್ಲದೇ ಶೂಟಿಂಗ್ ಮುಗಿಸಿ, ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ನಿರತವಾಗಿರೋ ಕೆಂಡ ಟೀಮ್, ಟೀಸರ್ ಬಿಟ್ಟು,  ಸಿನಿಮಾ ಪ್ರೇಮಿಗಳಲ್ಲಿ ಕುತೂಹಲ ಕೆರಳಿಸಿದೆ. ವಿಶೇಷ ಅಂದರೆ `ಕೆಂಡ’  ಹಲವಾರು ಅಂತಾರಾಷ್ಟ್ರೀಯ ಫಿಲಂ ಫೆಸ್ಟಿವಲ್ ಗಳಲ್ಲಿ ಮಿಂಚಲು ಅಣಿಗೊಳ್ಳುತ್ತಿದೆ.

  • ಪ್ರಜ್ವಲ್ ದೇವರಾಜ್ ನಟನೆಯ ‘ಮಾಫಿಯಾ’ ಸಿನಿಮಾದ ಟೀಸರ್ ರಿಲೀಸ್

    ಪ್ರಜ್ವಲ್ ದೇವರಾಜ್ ನಟನೆಯ ‘ಮಾಫಿಯಾ’ ಸಿನಿಮಾದ ಟೀಸರ್ ರಿಲೀಸ್

    ಬೆಂಗಳೂರು ಕುಮಾರ್ ಫಿಲಂಸ್ ಲಾಂಛನದಲ್ಲಿ ಕುಮಾರ್ ಬಿ ನಿರ್ಮಿಸಿರುವ, ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ (Prajwal Devaraj) ನಾಯಕರಾಗಿ, ಅದಿತಿ ಪ್ರಭುದೇವ ನಾಯಕಿಯಾಗಿ ನಟಿಸಿರುವ ಹಾಗೂ ಲೋಹಿತ್ ಹೆಚ್ ನಿರ್ದೇಶಿಸಿರುವ  ‘ಮಾಫಿಯಾ’ (Mafia) ಚಿತ್ರದ ಟೀಸರ್ (Teaser) ಇತ್ತೀಚಿಗೆ ಬಿಡುಗಡೆಯಾಯಿತು. ಬಿಗ್ ಬಾಸ್ ಖ್ಯಾತಿಯ ಪ್ರಶಾಂತ್ ಸಂಬರ್ಗಿ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ನಂತರ ಚಿತ್ರತಂಡದ ಸದಸ್ಯರು ಮಾಫಿಯಾ ಕುರಿತು ಮಾತನಾಡಿದರು.

    ಮೊದಲು ಮಾತನಾಡಿದ ನಿರ್ದೇಶಕ ಲೋಹಿತ್ (Lohit), ಈವರೆಗೂ ಯಾರು ತೋರಿಸಿರದ ಮಾಫಿಯಾ ಈ ಚಿತ್ರದಲ್ಲಿ ತೋರಿಸಿದ್ದೇವೆ. ಬೇರೆ ಬೇರೆ ಮಾರ್ಕೆಟ್ ಹೆಸರು ಕೇಳಿರುತ್ತೀರಾ.‌ ಆದರೆ ಇದೆ ಮೊದಲ ಬಾರಿಗೆ ರೆಡ್ ಮಾರ್ಕೆಟ್ ಪರಿಚಯಿಸಲಾಗಿದೆ. ಅದು ಏನೆಂಬುದನ್ನು ಚಿತ್ರದಲ್ಲೇ ನೋಡಬೇಕು ಎಂದರು.

    ಪ್ರಜ್ವಲ್ ದೇವರಾಜ್ ಅಭಿನಯದ 35 ನೇ ಚಿತ್ರವನ್ನು ನಿರ್ಮಿಸುತ್ತಿರುವುದು ಖುಷಿಯಾಗಿದೆ. ನಿರ್ದೇಶಕ ಲೋಹಿತ್ ಸೇರಿದಂತೆ ಚಿತ್ರತಂಡದ ಸಹಕಾರದಿಂದ “ಮಾಫಿಯಾ” ಚಿತ್ರ ಚೆನ್ನಾಗಿ ಮೂಡಿಬಂದಿದೆ.  ಜನವರಿಯಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ಯೋಜನೆಯಿದೆ ಎಂದರು ನಿರ್ಮಾಪಕ ಕುಮಾರ್ ಬಿ.

    ಸಿಕ್ಸರ್ ಚಿತ್ರದಿಂದ ನನ್ನ ಸಿನಿ ಜರ್ನಿ ಸಾಗಿಬಂದಿದೆ. ಮೂವತ್ತೈದು ಚಿತ್ರಗಳನ್ನು ಪೂರೈಸಲು ಸಹಕಾರ ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದ. ಇನ್ನು ಮಾಫಿಯಾ ಚಿತ್ರದ ಬಗ್ಗೆ ಹೇಳಬೇಕಾದರೆ, ಕುಮಾರ್ ಅವರು ಒಳ್ಳೆಯ ಚಿತ್ರ ನಿರ್ಮಾಣ ಮಾಡಿದ್ದಾರೆ. ನಿರ್ದೇಶಕ ಲೋಹಿತ್ ಅವರ ವಯಸ್ಸು ಚಿಕ್ಕದಾಗಿದ್ದರೂ ಕೆಲಸದಲ್ಲಿ ಅಸಾಧಾರಣ. ನಾನು, ಈವರೆಗೂ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ ಎಂದರು ನಾಯಕ ಪ್ರಜ್ವಲ್ ದೇವರಾಜ್.

    ಪಟಪಟ ಎಂದು ಮಾತನಾಡುವ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವುದಾಗಿ ನಾಯಕಿ ಅದಿತಿ ಪ್ರಭುದೇವ ಹೇಳಿದರು. ನಟ ಶೈನ್ ಶೆಟ್ಟಿ, ಸಾಹಸ ನಿರ್ದೇಶಕ ಜಾಲಿ ಬಾಸ್ಟಿನ್, ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಹಾಗೂ ಛಾಯಾಗ್ರಾಹಕ ಪಾಂಡಿಕುಮಾರ್ ಸೇರಿದಂತೆ ಅನೇಕರು “ಮಾಫಿಯಾ” ಚಿತ್ರದ ಬಗ್ಗೆ ಮಾತನಾಡಿದರು.

  • ಕಾಂತಾರ ಚಾಪ್ಟರ್ 1: ಟೀಸರ್ ಮೆಚ್ಚಿ ಹೊಗಳಿದ ದಕ್ಷಿಣದ ಸ್ಟಾರ್ಸ್

    ಕಾಂತಾರ ಚಾಪ್ಟರ್ 1: ಟೀಸರ್ ಮೆಚ್ಚಿ ಹೊಗಳಿದ ದಕ್ಷಿಣದ ಸ್ಟಾರ್ಸ್

    ಮೊನ್ನೆಯಷ್ಟೇ ರಿಲೀಸ್ ಆಗಿರುವ ಕಾಂತಾರ (Kantara) ಚಾಪ್ಟರ್ 1 ಸಿನಿಮಾದ ಟೀಸರ್ (Teaser) ಕೋಟಿ ಕೋಟಿ ವಿವ್ಸ್ಯೂ ಪಡೆಯುತ್ತಿದೆ. ಟೀಸರ್ ನೋಡಿದ ಭಾರತವೇ ಬೆಚ್ಚಿ ಬಿದ್ದಿದೆ. ಟೀಸರ್ ನಲ್ಲಿ ತೋರಿಸಲಾದ ಆಶಯ ಮತ್ತು ರಿಷಬ್ ಶೆಟ್ಟಿ ಕಂಡು ದಕ್ಷಿಣದ ಬಹುತೇಕ ಸ್ಟಾರ್ ನಟರು ಫಿದಾ ಆಗಿದ್ದಾರೆ. ಪ್ರಭಾಸ್, ಪೃಥ್ವಿರಾಜ್ ಸುಕುಮಾರನ್ ಸೇರಿದಂತೆ ಅನೇಕ ಕಲಾವಿದರು ಮೆಚ್ಚಿ ಶುಭ ಹಾರೈಸಿದ್ದಾರೆ.

    ಳೆದ ವರ್ಷ ಬಿಡುಗಡೆಯಾಗಿ  ಜಗತ್ತಿನಾದ್ಯಂತ ಮೆಚ್ಚುಗೆ ಪಡೆಯುವುದರ ಜೊತೆಗೆ ದೊಡ್ಡ ಯಶಸ್ಸು ಕಂಡ ‘ಕಾಂತಾರ’ ಚಿತ್ರವನ್ನು ನಿರ್ಮಿಸಿದ್ದ ಹೊಂಬಾಳೆ ಫಿಲಂಸ್, ಈಗ ಇನ್ನೊಂದು ಅಂಥದ್ದೇ ಪ್ರಯತ್ನದೊಂದಿಗೆ ವಾಪಸಾಗುತ್ತಿದೆ. ಹೊಂಬಾಳೆ ಫಿಲಂಸ್ ನಿರ್ಮಾಣದ ಮಹತ್ವಾಕಾಂಕ್ಷೆಯ ಮತ್ತು ಬಹುನಿರೀಕ್ಷಿತ ಚಿತ್ರವಾದ ‘ಕಾಂತಾರ – ಅಧ್ಯಾಯ 1’ ರ (Kantara Chapter 1) ಮೊದಲ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಜನರ ವೀಕ್ಷಣೆಗೆ ಸಾಕ್ಷಿಯಾಗಿತ್ತು.

    ‘ಕಾಂತಾರ’ ಜಗತ್ತನ್ನು ಪರಿಚಯಿಸುವ ಈ ಟೀಸರ್ ನಲ್ಲಿ ರಿಷಬ್ ಶೆಟ್ಟಿ (Rishabh Shetty) ಅವರ ಪಾತ್ರ ಮತ್ತು ವೇಷ ಗಮನ ಸೆಳೆಯುತ್ತಿದೆ. ಮೊದಲ ಭಾಗದ ಆ ಆರ್ಭಟ ಇಲ್ಲೂ ಮರುಕಳಿಸಿದ್ದು, ಈ ಮೂಲಕ ಹೊಸದೊಂದು ದಂತಕಥೆಯ ಸೃಷ್ಟಿಗೆ ಮುನ್ನುಡಿ ಬರೆದಿದೆ. ಅಷ್ಟೇ ಅಲ್ಲ, ರಿಷಭ್ ಶೆಟ್ಟಿ ಅವರ ಪಾತ್ರ ವೀಕ್ಷಕರಲ್ಲಿ ಹೊಸದೊಂದು ಕೌತುಕವನ್ನು ಹುಟ್ಟುಹಾಕಿದೆ.

    ಮೊದಲ ಭಾಗದ ಯಶಸ್ಸಿಗೆ ಕಾರಣವಾಗಿದ್ದ ಮತ್ತು ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿರುವ ಸಂಗೀತವು ಈ ಟೀಸರ್ ಮೂಲಕ ವಾಪಸ್ಸಾಗಿದೆ. ಈ ಟೀಸರ್ ನ ವೈಷಿಷ್ಟ್ಯವೆಂದರೆ, ಚಿತ್ರವು ಏಳು ಭಾಷೆಗಳಲ್ಲಿ ಮೂಡಿಬರುತ್ತಿದ್ದು, ಪ್ರತಿಯೊಂದು ಭಾಷೆಯ ಟೀಸರ್ ಒಂದೊಂದು ರಾಗದ ಮೂಲಕ ಅಂತ್ಯವಾಗಲಿದೆ.

     

    ‘ಕಾಂತಾರ’ ಚಿತ್ರವು ಕಳೆದ ವರ್ಷ ಜಗತ್ತಿನಾದ್ಯಂತ ಬಿಡುಗಡೆಯಾಗಿ ಅತ್ಯಂತ ಯಶಸ್ವಿಯಾಗಿತ್ತು. ಮನುಷ್ಯ ಮತ್ತು ಪ್ರಕೃತಿಯ ನಡುವಿನ ಸಂಬಂಧವನ್ನು, ಜನಪದ ಅಂಶಗಳನ್ನು ಬೆರೆಸಿ ಹೇಳಿದ ರೀತಿ ಪ್ರೇಕ್ಷಕರನ್ನು ಆಕರ್ಷಿಸಿತ್ತು. ಪ್ರತಿ ಕಥೆಯನ್ನೂ ವಿಶಿಷ್ಟ ರೀತಿಯಲ್ಲಿ ಕಟ್ಟಿಕೊಡಬೇಕು ಎಂಬ ಹೊಂಬಾಳೆ ಫಿಲಂಸ್ ನ ಬದ್ಧತೆ ‘ಕಾಂತಾರ – ಅಧ್ಯಾಯ 1’ ರಲ್ಲೂ ಮುಂದುವರೆದಿದ್ದು, ದೈವತ್ವದ ಹೊಸ ವ್ಯಾಖ್ಯಾನ ಈ ಚಿತ್ರದಲ್ಲಾಗಲಿದೆ

  • ‘ಕಾಂತಾರ ಚಾಪ್ಟರ್ 1’ರ ಟೀಸರ್ ಗೆ ಅದ್ಭುತ ಪ್ರತಿಕ್ರಿಯೆ

    ‘ಕಾಂತಾರ ಚಾಪ್ಟರ್ 1’ರ ಟೀಸರ್ ಗೆ ಅದ್ಭುತ ಪ್ರತಿಕ್ರಿಯೆ

    ಳೆದ ವರ್ಷ ಬಿಡುಗಡೆಯಾಗಿ  ಜಗತ್ತಿನಾದ್ಯಂತ ಮೆಚ್ಚುಗೆ ಪಡೆಯುವುದರ ಜೊತೆಗೆ ದೊಡ್ಡ ಯಶಸ್ಸು ಕಂಡ ‘ಕಾಂತಾರ’ ಚಿತ್ರವನ್ನು ನಿರ್ಮಿಸಿದ್ದ ಹೊಂಬಾಳೆ ಫಿಲಂಸ್, ಈಗ ಇನ್ನೊಂದು ಅಂಥದ್ದೇ ಪ್ರಯತ್ನದೊಂದಿಗೆ ವಾಪಸಾಗುತ್ತಿದೆ. ಹೊಂಬಾಳೆ ಫಿಲಂಸ್ ನಿರ್ಮಾಣದ ಮಹತ್ವಾಕಾಂಕ್ಷೆಯ ಮತ್ತು ಬಹುನಿರೀಕ್ಷಿತ ಚಿತ್ರವಾದ ‘ಕಾಂತಾರ – ಅಧ್ಯಾಯ 1’ ರ (Kantara Chapter 1) ಮೊದಲ ನೋಟ ಬಿಡುಗಡೆಯಾಗಿದ್ದು, ನೋಡುಗರನ್ನು ಮಂತ್ರಮುಗ್ಧರನ್ನಾಗಿಸಿದೆ.  ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಜನರು ವಿಶ್ಲೇಷಿಸಿದ್ದಾರೆ.

    ‘ಕಾಂತಾರ’ ಜಗತ್ತನ್ನು ಪರಿಚಯಿಸುವ ಈ ಟೀಸರ್ ನಲ್ಲಿ ರಿಷಬ್ ಶೆಟ್ಟಿ (Rishabh Shetty) ಅವರ ಪಾತ್ರ ಮತ್ತು ವೇಷ ಗಮನ ಸೆಳೆಯುತ್ತದೆ. ಮೊದಲ ಭಾಗದ ಆ ಆರ್ಭಟ ಇಲ್ಲೂ ಮರುಕಳಿಸಿದ್ದು, ಈ ಮೂಲಕ ಹೊಸದೊಂದು ದಂತಕಥೆಯ ಸೃಷ್ಟಿಗೆ ಮುನ್ನುಡಿ ಬರೆದಿದೆ. ಅಷ್ಟೇ ಅಲ್ಲ, ರಿಷಭ್ ಶೆಟ್ಟಿ ಅವರ ಪಾತ್ರ ವೀಕ್ಷಕರಲ್ಲಿ ಹೊಸದೊಂದು ಕೌತುಕವನ್ನು ಹುಟ್ಟುಹಾಕಿದೆ.

    ಮೊದಲ ಭಾಗದ ಯಶಸ್ಸಿಗೆ ಕಾರಣವಾಗಿದ್ದ ಮತ್ತು ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿರುವ ಸಂಗೀತವು ಈ ಟೀಸರ್ ಮೂಲಕ ವಾಪಸ್ಸಾಗಿದೆ. ಈ ಟೀಸರ್ ನ ವೈಷಿಷ್ಟ್ಯವೆಂದರೆ, ಚಿತ್ರವು ಏಳು ಭಾಷೆಗಳಲ್ಲಿ ಮೂಡಿಬರುತ್ತಿದ್ದು, ಪ್ರತಿಯೊಂದು ಭಾಷೆಯ ಟೀಸರ್ ಒಂದೊಂದು ರಾಗದ ಮೂಲಕ ಅಂತ್ಯವಾಗಲಿದೆ.

    ‘ಕಾಂತಾರ’ ಚಿತ್ರವು ಕಳೆದ ವರ್ಷ ಜಗತ್ತಿನಾದ್ಯಂತ ಬಿಡುಗಡೆಯಾಗಿ ಅತ್ಯಂತ ಯಶಸ್ವಿಯಾಗಿತ್ತು. ಮನುಷ್ಯ ಮತ್ತು ಪ್ರಕೃತಿಯ ನಡುವಿನ ಸಂಬಂಧವನ್ನು, ಜನಪದ ಅಂಶಗಳನ್ನು ಬೆರೆಸಿ ಹೇಳಿದ ರೀತಿ ಪ್ರೇಕ್ಷಕರನ್ನು ಆಕರ್ಷಿಸಿತ್ತು. ಪ್ರತಿ ಕಥೆಯನ್ನೂ ವಿಶಿಷ್ಟ ರೀತಿಯಲ್ಲಿ ಕಟ್ಟಿಕೊಡಬೇಕು ಎಂಬ ಹೊಂಬಾಳೆ ಫಿಲಂಸ್ ನ ಬದ್ಧತೆ ‘ಕಾಂತಾರ – ಅಧ್ಯಾಯ 1’ ರಲ್ಲೂ ಮುಂದುವರೆದಿದ್ದು, ದೈವತ್ವದ ಹೊಸ ವ್ಯಾಖ್ಯಾನ ಈ ಚಿತ್ರದಲ್ಲಾಗಲಿದೆ.

    ಕಳೆದ ವರ್ಷ ಹೊಂಬಾಳೆ ಫಿಲಂಸ್ ನಿರ್ಮಾಣದ ‘ಕೆಜಿಎಫ್ 2’ ಮತ್ತು ‘ಕಾಂತಾರ’ ಚಿತ್ರಗಳು ಜಾಗತಿಕವಾಗಿ 1600 ಕೋಟಿ ರೂ ಸಂಗ್ರಹಿಸಿತ್ತು. ಹೊಂಬಾಳೆಯ ಮುಂದಿನ ಬಿಡುಗಡೆಯಾದ ‘ಸಲಾರ್’ ಈ ವರ್ಷದ ಬ್ಲಾಕ್‌ಬಸ್ಟರ್ ಆಗುವ ಲಕ್ಷಣಗಳು ಈಗಾಗಲೇ ಗೋಚರಿಸಿವೆ. ಈ ಬಹುನಿರೀಕ್ಷಿತ ಚಿತ್ರದ ಟ್ರೇಲರ್ ಡಿ. 1ರಂದು ಬಿಡುಗಡೆಯಾಗಲಿದೆ.

    ‘ಕಾಂತಾರ -ಅಧ್ಯಾಯ 1’ ಚಿತ್ರವು ಬಹುನಿರೀಕ್ಷಿತ ಚಿತ್ರವಾಗಿದ್ದು ಮುಂದಿನ ವರ್ಷ ೭ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಡಿಸೆಂಬರ್ ಅಂತ್ಯಕ್ಕೆ ಚಿತ್ರೀಕರಣ ಪ್ರಾರಂಭವಾಗಲಿದ್ದು, ತಾರಾಬಳಗದ ಬಗ್ಗೆ ಸದ್ಯದಲ್ಲೇ ಹೆಚ್ಚಿನ ಮಾಹಿತಿ ಹೊರಬೀಳಲಿದೆ.

    ಕುಂದಾಪುರ ಸಮೀಪದ ಆನೆಗುಡ್ಡೆ ಶ್ರೀವಿನಾಯಕ ದೇವಸ್ಥಾನದಲ್ಲಿ ಈ ಚಿತ್ರದ  ಸರಳಪೂಜಾ ಸಮಾರಂಭ ನಡೆಯಿತು. ನಿರ್ಮಾಪಕ ವಿಜಯ್ ಕಿರಗಂದೂರ್ ಅವರ ಅಣ್ಣ ಮಂಜುನಾಥ್ ಅವರು ಚಿತ್ರದ ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರಿದರು. ರಿಷಭ್ ಶೆಟ್ಟಿ ಪುತ್ರಿ ರಾಧ್ಯ ಕ್ಯಾಮೆರಾ ಚಾಲನೆ ಮಾಡಿದರು. ಚಿತ್ರತಂಡದ ಸದಸ್ಯರು ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

  • ‘ಕಾಂತಾರ’ ಟೀಸರ್ ಕಲ್ಪನೆ: ಪೋಸ್ಟರ್ ನಲ್ಲಿವೆ ಕೌತುಕದ ಸಂಗತಿಗಳು

    ‘ಕಾಂತಾರ’ ಟೀಸರ್ ಕಲ್ಪನೆ: ಪೋಸ್ಟರ್ ನಲ್ಲಿವೆ ಕೌತುಕದ ಸಂಗತಿಗಳು

    ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸುತ್ತಿರುವ ‘ಕಾಂತಾರ ಚಾಪ್ಟರ್ 1’ರ (Kantara Chapter 1) ಟೀಸರ್ (Teaser) ಭಾರೀ ಸದ್ದು ಮಾಡುತ್ತಿದೆ. ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಮಿಲಿಯನ್ ಗಟ್ಟಲು ವ್ಯೂಸ್ ಪಡೆದುಕೊಳ್ಳುತ್ತಿದೆ. ಈ ಟೀಸರ್ ಅನ್ನು ಹಲವರು ಹಲವು ರೀತಿಯಲ್ಲಿ ವ್ಯಾಖ್ಯಾನಿಸಿದ್ದಾರೆ. ತಮ್ಮದೇ ಆದ ಕಲ್ಪನೆಯಲ್ಲಿ ಅದನ್ನು ವಿಶ್ಲೇಷಿಸಿದ್ದಾರೆ.

    ಮೇಲ್ನೋಟಕ್ಕೆ ರಿಷಬ್ (Rishabh Shetty) ಪಾತ್ರದ ಒಂದು ಕೈಯಲ್ಲಿ ಆಯುಧ ಹಿಡಿದುಕೊಂಡಿದ್ದರೆ ಮತ್ತೊಂದು ಕೈಯಲ್ಲಿ ತ್ರಿಶೂಲವಿದೆ. ಒಂದು ಫ್ರೇಮ್ ನ ಬೆಳಕಿನಲ್ಲಿ ಶಿವಲಿಂಗದ ಚಿತ್ರಣವನ್ನೂ ತೋರಿಸಲಾಗಿದೆ. ಪಂಜುರ್ಲಿ ದೈವ ಶಿವನ ಜೊತೆ ಇರುವಂಥದ್ದು. ಹಾಗಾಗಿ ಪಂಜುರ್ಲಿ ದೈವದ ಕಥೆಯನ್ನು ಈ ಸಿನಿಮಾದಲ್ಲಿ ತೋರಿಸಲು ಹೊರಟಿದ್ದಾರೆ ಎಂದು ಹೇಳಲಾಗುತ್ತಿದೆ.

    ಸಿನಿಮಾ ಸಂಸ್ಥೆಯೇ ಹೇಳಿಕೊಂಡಂತೆ, ‘ಪ್ರತಿ ಕ್ಷಣವೂ ದೈವಿಕ ಸ್ಪರ್ಶವನ್ನೂ ಅನುಭವಿಸುವ ಜೊತೆ ಇತಿಹಾಸದ ನಿಗೂಢ ಸತ್ಯವನ್ನು ಅನ್ವೇಷಿಸುವ ಪ್ರಯತ್ನವಿದು. ಹಿಂದೆಂದೂ ನೋಡದ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ನಿರೀಕ್ಷಿಸಿ, ಇದು ಬರಿ ಬೆಳಕಲ್ಲ, ದರ್ಶನ ಎಂದು ಬರೆದುಕೊಂಡಿತ್ತು. ಈ ಎಲ್ಲವನ್ನೂ ಗಮನಿಸಿ ಮತ್ತೊಂದು ದೃಷ್ಟಿ ಕೋನದಲ್ಲೂ ಈ ಟೀಸರ್ ಅನ್ನು ಬಣ್ಣಿಲಸಾಗುತ್ತಿದೆ.

    ಡೆಕ್ಸಟರ್ ಮಾರ್ಗನ್ ಎನ್ನುವವರು ತಮ್ಮ ಎಕ್ಸ್ ಖಾತೆಯಲ್ಲಿ ‘ಬೆಂಕಿಯು ಕಾನನ ಬೆಳಗಿಸಲಿಲ್ಲ. ಬದಲಾಗಿ ಬೆಂಕಿ ಮತ್ತಷ್ಟು ಕತ್ತಲೆ ತಂದಿಟ್ಟಿತ್ತು’ ಎನ್ನುತ್ತಲೇ ಬೆಂಕಿಯ ಉಂಗುರ ಕಪ್ಪು ಕುಳಿಯನ್ನು ಹೋಲುತ್ತದೆ. ಕಪ್ಪು ಕುಳಿ ಬೆಳಕನ್ನು ಒಳಗೊಂಡಂತೆ ಹೀರಿಕೊಳ್ಳುತ್ತದೆ. ಈ ವಿವರಣೆಯು ಜಗತ್ತಿನ ಮತ್ತೊಂದು ಹೆಬ್ಬಾಗಿಲು ಆಗಲಿದೆ ಎಂದು ವಿಶ್ಲೇಷಿಸಿದ್ದಾರೆ. ಇವರೇ ಮತ್ತೊಂದು ಕಡೆ ಬರೆದುಕೊಂಡಂತೆ ‘ನಾವು ರಿಂಗ್ ಆಫ್ ಫಯರ್ ಉನ್ನತ ಮಟ್ಟವನ್ನು ಕಂಡಿದ್ದೇವೆ. ಆದರೆ, ಕೆಳಗಿರುವ ಶಕ್ತಿಗಳಿಗೆ ಇನ್ನೂ ನಾವು ಸಾಕ್ಷಿಯಾಗಬೇಕಿದೆ’ ಎಂದು ಹೇಳುವ  ಮೂಲಕ ಹೊಸ ಚಿಂತನೆಗೆ ಹಚ್ಚಿದ್ದಾರೆ.

    ಪೋಸ್ಟರ್ (Poster) ಕೂಡ ಹತ್ತು ಹಲವು ಸಂಗತಿಯೊಂದಿಗೆ ಮಿಶ್ರಣಗೊಂಡಿದೆ. ಪೋಸ್ಟರ್ ನಲ್ಲಿ ಕಾಂತಾರದ ಉರಿಯುತ್ತಿರುವ ಬೆಂಕಿ ರಿಂಗ್ ಕಾಣಿಸಿಕೊಂಡಿದೆ. ಲಿಂಗವನ್ನು ಸುತ್ತಿಕೊಂಡ ಹಾವು, ದಾಳಿ ಕೋರರು, ತುಂಡರಿಸಿದ ಕಾಲು, ವರಹಾ, ಕೋಣ, ಸಾರಂಗ, ಹುಲಿ, ಕಾಳಿಂಗ ಸರ್ಪ ಹೀಗೆ ಹತ್ತಾರು ಸಂಗತಿಗಳಿವೆ.

  • ಮುಂದಿನ ತಿಂಗಳಿಂದ ‘ಕಾಂತಾರ’ ಶೂಟಿಂಗ್ : ರಿಷಬ್ ಶೆಟ್ಟಿ

    ಮುಂದಿನ ತಿಂಗಳಿಂದ ‘ಕಾಂತಾರ’ ಶೂಟಿಂಗ್ : ರಿಷಬ್ ಶೆಟ್ಟಿ

    ಇಂದು ಕಾಂತಾರ (Kantara Chapter 2) ಸಿನಿಮಾದ ಮುಹೂರ್ತ ಅತ್ಯಂತ ಸರಳವಾಗಿ ನಡೆದಿದೆ. ಜೊತೆಗೆ ಸಿನಿಮಾದ ಫಸ್ಟ್ ಲುಕ್ ಮತ್ತು ಟೀಸರ್ ಕೂಡ ಚಿತ್ರತಂಡ ಬಿಡುಗಡೆ ಮಾಡಿದೆ. ಎರಡಕ್ಕೂ ನೋಡುಗರಿಂದ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ಟೀಸರ್ (Teaser) ರಿಲೀಸ್ ಆದ ಕೆಲವೇ ಕೆಲವು ನಿಮಿಷಗಳಲ್ಲಿ ಲಕ್ಷ ಲಕ್ಷ ವಿವ್ಯೂ ಸಿಕ್ಕಿವೆ.

    ಉಡುಪಿಯ ಕುಂಭಾಸಿಯಲ್ಲಿ ಚಿತ್ರದ ಮುಹೂರ್ತ (Muhurta) ನಡೆದಿದ್ದು, ಈ ಸಂದರ್ಭದಲ್ಲಿ ರಿಷಬ್ (Rishabh Shetty) ಮಾತನಾಡಿದ್ದಾರೆ. ‘ನಿರ್ಮಾಪಕ ವಿಜಯ್ ಕಿರಗೊಂದೂರು ದೊಡ್ಡ ಶಕ್ತಿ. ಇಡೀ ದೇಶದಲ್ಲಿ ಅವರು ಒಂದು ಪವರ್ ಹೌಸ್. ಕಾಂತರಾ ಈ ಮಟ್ಟಕ್ಕೆ ಹೋಗಲು ಅವರ ಬೆಂಬಲ ಬಹಳ ದೊಡ್ಡದು. ಕಾಂತಾರ ಚಿತ್ರಕ್ಕೆ ಅವರು ಸಂಪೂರ್ಣವಾಗಿ ಬೆಂಬಲ ಕೊಟ್ಟಿದ್ದಾರೆ. ಇಡೀ ಚಿತ್ರಕ್ಕೆ ಅವರು ದೊಡ್ಡ ಕಾನ್ಫಿಡೆನ್ಸ್ ಅನ್ನು ತುಂಬಿದ್ದಾರೆ. ಒಂದು ಚಿತ್ರಕ್ಕೆ ನಾವು ಇಂತಿಷ್ಟು ಬಜೆಟ್ ನಿರ್ಧಾರ ಮಾಡಿರುತ್ತೇವೆ. ಅದು ಮುಂದೆ ಎಲ್ಲೋ ಹೋಗಿ ತಲುಪುತ್ತದೆ. ಕಾಂತಾರ ಮೊದಲ ಅಧ್ಯಾಯ ಕಥೆ ಅಪೇಕ್ಷೆ ಮಾಡುತ್ತದೆ ಅದಕ್ಕೆ ನಿರ್ಮಾಪಕರು ಪೂರ್ಣ ಸಹಕಾರ ಕೊಟ್ಟಿದ್ದಾರೆ ಎಂದು ಮಾತನಾಡಿದ್ದಾರೆ.

    ಎಂದಿನಂತೆ ಕಾಂತಾರ ಸಿನಿಮಾದಲ್ಲಿ ಕೆಲಸ ಮಾಡಿದ ಬಹುತೇಕ ತಾಂತ್ರಿಕ ವರ್ಗವೇ ಕಾಂತಾರ ಅಧ್ಯಾಯ 1ರಲ್ಲಿ ಮುಂದುವರೆಯಲಿದೆ. ಅಜನೀಶ್ ಲೋಕನಾಥ್ ಅವರೇ ಈ ಚಿತ್ರಕ್ಕೂ ಸಂಗೀತ ನೀಡಲಿದ್ದಾರೆ. ‘ತಾಂತ್ರಿಕವಾಗಿ ಯಾವುದೇ ಬದಲಾವಣೆಗಳನ್ನು ನಾವು ಮಾಡಿಕೊಂಡಿಲ್ಲ. ಕೆಲ ಹೊಸ ಕಲಾವಿದರು ಬರುತ್ತಾರೆ. ಮುಂದಿನ ತಿಂಗಳು ಶೂಟಿಂಗ್ ಮಾಡುವ ಆಲೋಚನೆ ಇದೆ. ಚಿತ್ರದ ಸ್ಕ್ರಿಪ್ಟ್ ವರ್ಕ್ ಕಂಪ್ಲೀಟ್ ಆಗಿದೆ’ ಎಂದಿದ್ದಾರೆ ರಿಷಬ್.

    ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸುತ್ತಿರುವ ಕಾಂತಾರ ಅಧ್ಯಾಯ 1 ಫಸ್ಟ್ ಲುಕ್ (First Look) ರಿಲಿಸ್ ಆಗಿದೆ. ಹೊಂಬಾಳೆ ಫಿಲ್ಮಸ್ ಲಾಂಛನದಲ್ಲಿ ಮೂಡಿ ಬರಲಿರುವ ಚಿತ್ರದ ಫಸ್ಟ್ ಲುಕ್ ಸಖತ್ ಕ್ಯೂರಿಯಾಸಿಟಿ ಮೂಡಿಸಿದೆ.

     

    ಅಘೋರಿ ಅವತಾರದಲ್ಲಿ ರಿಷಬ್ ಅಚ್ಚರಿ ಮೂಡಿಸುವಷ್ಟು ಕಂಡಿದ್ದಾರೆ. ಶಿವನ ಅವತಾರದ ಮತ್ತೊಂದು ರೂಪವಾಗಿ ರಿಷಬ್ ಬದಲಾಗಿದ್ದಾರೆ. ಒಂದು ಕೈಯಲ್ಲಿ ತ್ರಿಶೋಲ ಮತ್ತೊಂದು ಕೈಯಲ್ಲಿ ಜಮದಗ್ನಿ ಕೊಡಲಿಯನ್ನು ಹಿಡಿದುಕೊಂಡಿರುವ ಪೋಸ್ಟರ್ ನಾನಾ ಚರ್ಚೆಗಳನ್ನು ಹುಟ್ಟು ಹಾಕುವಂತಿದೆ.

  • ‘ಹರೋಮ್ ಹರ’ ಸಿನಿಮಾದ ಟೀಸರ್ ರಿಲೀಸ್ ಮಾಡಲಿದ್ದಾರೆ ಕಿಚ್ಚ

    ‘ಹರೋಮ್ ಹರ’ ಸಿನಿಮಾದ ಟೀಸರ್ ರಿಲೀಸ್ ಮಾಡಲಿದ್ದಾರೆ ಕಿಚ್ಚ

    ತೆಲುಗಿನ ಯುವ ನಟ ಸುಧೀರ್ ಬಾಬು (Sudhir Babu) ಚೊಚ್ಚಲ ಪ್ಯಾನ್ ಇಂಡಿಯಾ ಸಿನಿಮಾ ಹರೋಮ್ ಹರ (Harom Hara). ಫಸ್ಟ್ ಲುಕ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಈ ಚಿತ್ರದ ಟೀಸರ್ (Teaser) ಇಂದು ಪಂಚ ಭಾಷೆಯಲ್ಲಿ ಅನಾವರಣಗೊಳ್ತಿದೆ.

    ತೆಲುಗು, ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಹರೋಮ್ ಹರ ಟೀಸರ್ ಬಿಡುಗಡೆಗೆಯಾಗ್ತಿದ್ದು, ಈ ಐದು ಭಾಷೆಯ ಸೂಪರ್ ಸ್ಟಾರ್ಸ್ ಟೀಸರ್ ರಿಲೀಸ್ ಮಾಡಲಿದ್ದಾರೆ. ತೆಲುಗಿನಲ್ಲಿ ಪ್ರಭಾಸ್, ಕನ್ನಡದಲ್ಲಿ ಕಿಚ್ಚ ಸುದೀಪ್ (Sudeep), ಮಲಯಾಳಂನಲ್ಲಿ ಮಮ್ಮುಟ್ಟಿ, ತಮಿಳಿನಲ್ಲಿ ವಿಜಯ್ ಸೇತುಪತಿ ಹಾಗೂ ಹಿಂದಿ ಭಾಷೆಯಲ್ಲಿ ಟೈಗರ್ ಶ್ರಾಫ್ ಸುಧೀರ್ ಬಾಬು ಸಿನಿಮಾದ ಝಲಕ್ ರಿವೀಲ್ ಮಾಡಲಿದ್ದಾರೆ.

    ಸುಧೀರ್ ಬಾಬು ನಾಯಕನಾಗಿ ನಟಿಸುತ್ತಿದ್ದು, ಅವರಿಗೆ ಜೋಡಿಯಾಗಿ ಮಾಳವಿಕ ಶರ್ಮಾ ಸಾಥ್ ಕೊಟ್ಟಿದ್ದಾರೆ. ಪ್ರಮುಖ ಪಾತ್ರದಲ್ಲಿ ಸುನಿಲ್, ವಿಲನ್ ಆಗಿ‌ ಕನ್ನಡದ ನಟ ಅರ್ಜುನ್ ಗೌಡ ತೊಡೆತಟ್ಟಿದ್ದಾರೆ.

    ಹರೋಮ್ ಹರ, ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ಕೊನೆ ಹಂತದ ಶೂಟಿಂಗ್ ನಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. 1989ರಲ್ಲಿ ಚಿತ್ತೂರು ಜಿಲ್ಲೆಯ ಕುಪ್ಪಂನಲ್ಲಿ ನಡೆದ ಘಟನೆಯ ಸುತ್ತ ಕಥೆ ಸಾಗುತ್ತದೆ.

    ಜ್ಞಾನಸಾಗರ ದ್ವಾರಕಾ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು, ಬಹಳ ಅದ್ಧೂರಿಯಾಗಿ ಸುಮಂತ್ ಜಿ ನಾಯ್ಡು ನಿರ್ಮಾಣ ಮಾಡುತ್ತಿದ್ದಾರೆ.  ಚಿತ್ರಕ್ಕೆ ಚೈತಮ್ ಭಾರದ್ವಾಜ್ ಅವರ ಸಂಗೀತವಿದೆ ಮತ್ತು ಅರವಿಂದ್ ವಿಶ್ವನಾಥನ್ ಅವರ ಛಾಯಾಗ್ರಹಣವಿದೆ. ಶ್ರೀ ಸುಬ್ರಹ್ಮಣ್ಯೇಶ್ವರ ಸಿಮಿಮಾಸ್ ಬ್ಯಾನರ್ ನಡಿ ಹರೋಮ್ ಹರಾ ಸಿನಿಮಾ ತಯಾರಾಗುತ್ತಿದೆ.

  • ನ.29ಕ್ಕೆ ಪ್ರಜ್ವಲ್ ನಟನೆಯ ‘ಮಾಫಿಯಾ’ ಚಿತ್ರದ ಟೀಸರ್ ರಿಲೀಸ್

    ನ.29ಕ್ಕೆ ಪ್ರಜ್ವಲ್ ನಟನೆಯ ‘ಮಾಫಿಯಾ’ ಚಿತ್ರದ ಟೀಸರ್ ರಿಲೀಸ್

    ಪ್ರಜ್ವಲ್ ದೇವರಾಜ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ಇದೇ ನವೆಂಬರ್ 29ಕ್ಕೆ ಪ್ರಜ್ವಲ್ ನಟನೆಯ ಮಾಫಿಯಾ ಸಿನಿಮಾದ ಟೀಸರ್ (Teaser) ರಿಲೀಸ್ ಆಗಲಿದೆ. ಇದೊಂದು ವಿಭಿನ್ನ ಕಥಾ ಹಂದರ ಹೊಂದಿರುವ ಸಿನಿಮಾವಾಗಿದ್ದು, ಚಿತ್ರದ ಬಗ್ಗೆ ನಿರೀಕ್ಷೆ ಮೂಡಿಸಿದೆ. ಅದರ ಭಾಗವಾಗಿ ಟೀಸರ್ ರಿಲೀಸ್ ಮಾಡಲು ಚಿತ್ರತಂಡ ಸಿದ್ಧತೆ ಮಾಡಿಕೊಂಡಿದೆ.

    ಬೆಂಗಳೂರು ಕುಮಾರ್ ಫಿಲಂಸ್ ಲಾಂಛನದಲ್ಲಿ ಕುಮಾರ್. ಬಿ ನಿರ್ಮಿಸಿರುವ, ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ (Prajwal Devaraj) ನಾಯಕರಾಗಿ, ಅದಿತಿ ಪ್ರಭುದೇವ (Aditi Prabhudeva) ನಾಯಕಿಯಾಗಿ ನಟಿಸಿರುವ ಹಾಗೂ ಲೋಹಿತ್ ಹೆಚ್ ನಿರ್ದೇಶಿಸಿರುವ  ಮಾಫಿಯಾ (Mafia) ಚಿತ್ರಕ್ಕೆ ಸಾಧುಕೋಕಿಲ ಅವರ ಲೂಪ್ ಸ್ಟುಡಿಯೋದಲ್ಲಿ ಡಬ್ಬಿಂಗ್ (Dubbing) ಕಾರ್ಯ ಮುಕ್ತಾಯವಾಗಿದೆ.

    ಆಕ್ಷನ್ ಜಾನರ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಬೆಂಗಳೂರು, ಮೈಸೂರು ಹಾಗೂ ಹೈದರಾಬಾದ್ ನಲ್ಲಿ ಚಿತ್ರೀಕರಣ ನಡೆದಿದೆ. ಅಪಾರ ವೆಚ್ಚದಲ್ಲಿ ಅದ್ದೂರಿಯಾಗಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ಮೈನವಿರೇಳಿಸುವ ಐದು ಸಾಹಸ ಸನ್ನಿವೇಶಗಳಿವೆ.  ಈ ಚಿತ್ರಕ್ಕಾಗಿ ಪ್ರಜ್ವಲ್ ಅವರು ಸಾಕಷ್ಟು ಶ್ರಮವಹಿಸಿದ್ದಾರೆ.

     

    ಈ ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ. ಎಸ್ ಪಾಂಡಿಕುಮಾರ್ ಛಾಯಾಗ್ರಹಣವಿರುವ ಈ ಚಿತ್ರದ ತಾರಾಬಳಗದಲ್ಲಿ  ಪ್ರಜ್ವಲ್ ದೇವರಾಜ್, ಅದಿತಿ ಪ್ರಭುದೇವ, ದೇವರಾಜ್, ಸಾಧುಕೋಕಿಲ, ಶೈನ್ ಶೆಟ್ಟಿ, ವಿಜಯ್ ಚೆಂಡೂರ್, ವಾಸುಕಿ ವೈಭವ್ ಮುಂತಾದವರಿದ್ದಾರೆ.

  • ಧನ್ವೀರ್ ನಟನೆಯ ‘ಕೈವ’ ಚಿತ್ರದ ಟೀಸರ್ ರಿಲೀಸ್

    ಧನ್ವೀರ್ ನಟನೆಯ ‘ಕೈವ’ ಚಿತ್ರದ ಟೀಸರ್ ರಿಲೀಸ್

    ವೀಂದ್ರಕುಮಾರ್ ನಿರ್ಮಾಣದ, ಜಯತೀರ್ಥ (Jayathirtha) ನಿರ್ದೇಶನದ ಹಾಗೂ ಧನ್ವೀರ್ (Dhanveer) ನಾಯಕರಾಗಿ ನಟಿಸಿರುವ ‘ಕೈವ’ (Kaiva) ಚಿತ್ರದ ಆಕ್ಷನ್ ಟೀಸರ್ ದೀಪಾವಳಿ ಹಬ್ಬದ ಶುಭ ಸಂದರ್ಭದಲ್ಲಿ ಬಿಡುಗಡೆಯಾಗಿದೆ. ಅಭಿಷೇಕ್ ಅಂಬರೀಶ್ ಹಾಗೂ ದಿನಕರ್ ತೂಗುದೀಪ ಈ ಚಿತ್ರದ ಆಕ್ಷನ್ ಟೀಸರ್ (Teaser) ಬಿಡುಗಡೆ ಮಾಡಿ ಶುಭ ಕೋರಿದರು. ನಿರ್ದೇಶಕ ಮದಗಜ ಮಹೇಶ್ ಕುಮಾರ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

    ಕೈವ ಇದು ಒಬ್ಬ ವ್ಯಕ್ತಿಯ ಹೆಸರು. 1983 ರಲ್ಲಿ ಬೆಂಗಳೂರಿನ ತಿಗಳಪೇಟೆಯಲ್ಲಿ ನಡೆದ ನೈಜಘಟನೆ ಆಧರಿಸಿದ ಚಿತ್ರ. ಬೆಂಗಳೂರು ಕರಗದಲ್ಲಿ ಹುಟ್ಟಿದ ಪ್ರೇಮಕಥೆಯೇ ಚಿತ್ರದ ಪ್ರಮುಖ ಕಥಾವಸ್ತು. ನನಗೆ  ಮಾರ್ಚುರಿಯಲ್ಲಿ ಕೆಲಸ ಮಾಡುವವರಿಂದ ಈ ಕಥೆ ಸಿಕ್ಕಿತು. ಆನಂತರ ತಿಗಳರಪೇಟೆಗೆ ಹೋಗಿ ಅಲ್ಲಿ  ಈ ಘಟನೆ ಬಗ್ಗೆ ಕುಲಂಕುಶವಾಗಿ ತಿಳಿದುಕೊಂಡೆ. ಈ ಘಟನೆ ಕಂಡಿದ್ದ ಅನೇಕರು ಈಗಲೂ ಇದ್ದಾರೆ. ಇದೇ ಇಸವಿಯಲ್ಲಿ ನಡೆದ ಗಂಗಾರಾಮ್ ಕಟ್ಡಡದ ದುರಂತಕ್ಕು ಹಾಗೂ  ಈ ಚಿತ್ರದ ಕಥೆಗೂ ಸಂಬಂಧವಿದೆ. ಚಿತ್ರದ ನಾಯಕನಾಗಿ ಧನ್ವೀರ್ ಅಭಿನಯಿಸಿದ್ದಾರೆ. ನಾಯಕಿಯಾಗಿ ಮೇಘ ಶೆಟ್ಟಿ ನಟಿಸಿದ್ದಾರೆ. ದಿನಕರ್ ತೂಗುದೀಪ್ ಪ್ರಮುಖಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದಿನಕರ್ ತೂಗುದೀಪ, ರಾಘು ಶಿವಮೊಗ್ಗ ಸೇರಿದಂತೆ ಐದು ಜನ ನಿರ್ದೇಶಕರು ಈ ಚಿತ್ರದಲ್ಲಿ ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಶ್ವೇತಪ್ರಿಯ ಛಾಯಾಗ್ರಹಣ ಮಾಡಿದ್ದಾರೆ. ಮೈಸೂರಿನಲ್ಲಿ ನಲವತ್ತೆಂಟು ದಿನಗಳ ಚಿತ್ರೀಕರಣ ನಡೆದಿದೆ. ಕೆಲವು ಭಾಗಗಳನ್ನು ಬೆಂಗಳೂರಿನ ತಿಗಳರಪೇಟೆಯಲ್ಲಿ ಚಿತ್ರೀಕರಿಸಲಾಗಿದೆ. ಡಿಸೆಂಬರ್ ನಲ್ಲಿ ಚಿತ್ರ ತೆರೆಗೆ ಬರಲಿದೆ ಎಂದು ನಿರ್ದೇಶಕ ಜಯತೀರ್ಥ ತಿಳಿಸಿದರು.

    ಕೈವ ನನ್ನ ನಟನೆಯ ನಾಲ್ಕನೇ ಚಿತ್ರ ಎಂದು ಮಾತು ಆರಂಭಿಸಿದ ನಾಯಕ ಧನ್ವೀರ್, ಈ ಕಥೆ ಎಲ್ಲ ಕಡೆ ಸುತ್ತಿ ದ್ರೌಪದಿ ತಾಯಿ ಆಶೀರ್ವಾದದಿಂದ ನನ್ನ ಬಳಿ ಬಂತು. ಜಯತೀರ್ಥ ಅವರು ತುಂಬಾ ಅದ್ಛುತವಾಗಿ ನಿರ್ದೇಶನ ಮಾಡಿದ್ದಾರೆ. ಸಿನಿಮಾ ನೋಡಿದವರು ಚಿತ್ರ ಚೆನ್ನಾಗಿದೆ ಎನ್ನುತ್ತಿದ್ದಾರೆ. ನಿಮ್ಮ  ಪ್ರೋತ್ಸಾಹವಿರಲಿ ಎಂದರು.

    ದಿನಕರ್ ತೂಗುದೀಪ್ ರವರು ಮಾತನಾಡುತ್ತಾ, ನನಗೆ ಸಂಭಾಷಣೆಕಾರ ರಘು ನಿಡವಳ್ಳಿ,  ನಿರ್ದೇಶಕ ಜಯತೀರ್ಥ ಅವರು  ಭೇಟಿಯಾಗಬೇಕಂತೆ ಅಂದರು. ಆಗ ಜಯತೀರ್ಥ ಅವರು ಈ ಪಾತ್ರದ ಬಗ್ಗೆ ಹೇಳಿದರು. ನನ್ನ ಪಾತ್ರ ನೋಡಿದವರು ನಮ್ಮ ತಂದೆ ತೂಗುದೀಪ ಶ್ರೀನಿವಾಸ್ ಅವರ ಹಾಗೆ ಕಾಣುತ್ತಿರಾ ಎನ್ನುತ್ತಿದ್ದಾರೆ. ಅದು ನಮ್ಮ ತಂದೆಯವರ ಆಶೀರ್ವಾದ. ನಮ್ಮ ಅಮ್ಮ ಕೂಡ ನನ್ನ ಪಾತ್ರ ನೋಡಿ ಸಂತೋಷಪಟ್ಟರು ಎಂದು ತಿಳಿಸಿದರು.

    ನಾಯಕಿ ಮೇಘ ಶೆಟ್ಟಿ ತಮ್ಮ ಪಾತ್ರದ ಕುರಿತು ಮಾಹಿತಿ ನೀಡಿದರು. ನಟ ರಾಘು ಶಿವಮೊಗ್ಗ, ಸಂಭಾಷಣೆಕಾರ ರಘು ನಿಡವಳ್ಳಿ ಹಾಗೂ ಕಾರ್ಯಕಾರಿ ನಿರ್ಮಾಪಕರಾದ ಬಾಲಕೃಷ್ಣ ಹಾಗೂ ಕೃಷ್ಣ ಅವರು ಚಿತ್ರದ ಕುರಿತು ಮಾತನಾಡಿದರು.

  • ‘ಬೆಂಬಿಡದ ನಾವಿಕ’ ಚಿತ್ರದ ಟೀಸರ್ ಗೆ ಯೋಗರಾಜ್ ಭಟ್ ಧ್ವನಿ

    ‘ಬೆಂಬಿಡದ ನಾವಿಕ’ ಚಿತ್ರದ ಟೀಸರ್ ಗೆ ಯೋಗರಾಜ್ ಭಟ್ ಧ್ವನಿ

    ಹೊಸ ಯುವ ಪ್ರತಿಭೆಗಳೇ ಸೇರಿಕೊಂಡು ’ಬೆಂಬಿಡದ ನಾವಿಕ’ (Bembidada Naavika) ಚಿತ್ರವನ್ನು ಸಿದ್ದಗೊಳಿಸಿದ್ದಾರೆ. ಶ್ರೀ ಅಂಬಲವಾಡಿ ಮಹಾಕಾಳಿ ಕಂಬೈನ್ಸ್ ಅಡಿಯಲ್ಲಿ ಜಿ.ಮಹೇಶ್ ಬಂಡವಾಳ ಹೂಡಿದ್ದಾರೆ. ಸದ್ದು ಮಾಡದೆ ಪೂರ್ಣ ಕೆಲಸಗಳನ್ನು ಮುಗಿಸಿರುವ ತಂಡವು ಸುದ್ದಿ ಮಾಡುವ ಸಲುವಾಗಿ ಎರಡು ಹಾಡುಗಳು ಮತ್ತು ಯೋಗರಾಜ ಭಟ್ (Yogaraj Bhatt) ಹಿನ್ನಲೆ ಧ್ವನಿ ನೀಡಿರುವ ಟೀಸರ್ (Teaser) ಬಿಡುಗಡೆ ಕಾರ್ಯಕ್ರಮ ರೇಣುಕಾಂಬ ಥಿಯೇಟರ್‌ದಲ್ಲಿ ನಡೆಯಿತು. ಅದರಲ್ಲೂ ಕಥೆಯು ಇನ್‌ಫ್ಲುಯೆನ್ಸರ್ ಕುರಿತಾಗಿ ಇರುವುದರಿಂದ ಮಾಧ್ಯಮ ಮಿತ್ರರು  ’ಪ್ರತಿ ಹೆಜ್ಜೆಗೂ’ ಗೀತೆಯನ್ನು ಅನಾವರಣಗೊಳಿಸಿದ್ದು ವಿಶೇಷವಾಗಿತ್ತು.

    ಮಂಗಳೂರು ಉಡುಪಿ ನಡುವೆ ನಡೆಯುವ ಥ್ರಿಲ್ಲರ್ ಡ್ರಾಮಾ ಸನ್ನವೇಶಗಳನ್ನು ಒಳಗೊಂಡಿದೆ. ಮಹತ್ವಕಾಂಕ್ಷಿಯುಳ್ಳ ಇನ್‌ಫ್ಲುಯೆನ್ಸರ್ ಯುವಕನಿಗೆ ಇಂಟರ್‌ನೆಟ್ ಮೂಲಕ ಬರುವ ಕಷ್ಟಗಳು ಮತ್ತೆ ಅದರಿಂದ ಹೇಗೆ ಆತನ ಜೀವನ ಬದಲಾಗುತ್ತದೆ. ಎಲ್ಲರಿಗೂ ಗುರಿ ಇರುವಂತೆ ಈತನಿಗೂ ಒಂದಷ್ಟು ಚ್ಯಾಲೇಂಜಸ್ ಇರುತ್ತದೆ. ಪ್ರತಿ ಕ್ಷಣ ತುಂಬಾ ಮುಖ್ಯವಾಗಿರುತ್ತದೆ. ಅದು ನಮ್ಮನ್ನು ಯಾವ ರೀತಿಯಾದರೂ ಬದಲಾಯಿಸಬಹುದು ಎಂಬುದನ್ನು ಹೇಳಿದೆ.

     

    ನಾಗತಿಹಳ್ಳಿ ಚಂದ್ರಶೇಖರ್ ಒಡೆತನದ ’ಟೆಂಟ್‌ಹೌಸ್’ದಲ್ಲಿ ತರಬೇತಿ ಪಡೆದುಕೊಂಡಿರುವ ಶ್ರೀಯಾನ್ (Shriyan)ನಾಯಕ ಮತ್ತು ರಚಿಸಿ ನಿರ್ದೇಶನ ಮಾಡಿದ್ದಾರೆ. ಪ್ರಿಯದರ್ಶಿನಿ, ಐಶ್ವರ್ಯ ನಾಯಕಿಯರು. ಉಳಿದಂತೆ ದಿನೇಶ್‌ಮಂಗಳೂರು, ಬಲರಾಜವಾಡಿ, ವಿಕ್ರಂ, ರಜತ್ ಮುಂತಾದವರು ನಟಿಸಿದ್ದಾರೆ. ಸಂಗೀತ ಮುನ್ನ ಮೈಸೂರು, ಛಾಯಾಗ್ರಹಣ ಸತೀಶ್‌ ರಾಜೇಂದ್ರನ್, ಸಂಕಲನ ಸುನಿಲ್ ಅವರದಾಗಿದೆ. ಮಂಗಳೂರು, ಉಡುಪಿ, ಕಾಪು, ಮೈಸೂರು ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.