Tag: teaser

  • ವಿಲನ್ ಟೀಸರ್ ಸೂಪರ್ ಹಿಟ್- ಅರ್ಧಗಂಟೆಯಲ್ಲಿ ಲಕ್ಷ ವ್ಯೂ

    ವಿಲನ್ ಟೀಸರ್ ಸೂಪರ್ ಹಿಟ್- ಅರ್ಧಗಂಟೆಯಲ್ಲಿ ಲಕ್ಷ ವ್ಯೂ

    ಬೆಂಗಳೂರು: ಬಹುನಿರೀಕ್ಷಿತ `ದಿ ವಿಲನ್’ ಚಿತ್ರದ 2 ಟೀಸರ್ ರಿಲೀಸ್ ಆಗಿದೆ. ಮುಖ್ಯಮಂತ್ರಿ ಕುಮಾರಸ್ವಾಮಿಯವರು ‘ದಿ ವಿಲನ್’ ಟೀಸರ್ ಬಿಡುಗಡೆ ಮಾಡಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವಣ್ಣ ಪಾತ್ರ ಪರಿಚಯದ ಒಂದು ಟೀಸರ್ ಹಾಗೂ ಸುದೀಪ್ ಪಾತ್ರ ಪರಿಚಯದ ಇನ್ನೊಂದು ಟೀಸರ್ ರಿಲೀಸ್ ಆಗಿದೆ.

    ಅನೆಬಂತೊಂದಾನೆ ಅನ್ನುವ ಧ್ವನಿಯಲ್ಲಿ ಕಿಚ್ಚ ಡೈಲಾಗ್ ಅಬ್ಬರಿಸಿ ಬೊಬ್ಬಿರೆದ್ರೆ, ಶಿವರಾಜ್‍ಕುಮಾರ್ ನಾನ್ ಸೈಲೆಂಟಾಗಿದ್ರೆ ರಾಮಾ, ವೈಲೆಂಟಾದ್ರೆ ರಾವಣ ಎಂಬುದಾಗಿ ಡೈಲಾಗ್ ಹೊಡೆದಿದ್ದಾರೆ. ಇಬ್ಬರ ಪಾತ್ರದಲ್ಲೂ ಸಖತ್ ಕ್ಯೂರಿಯಾಸಿಟಿ ಸೃಷ್ಟಿಸಿದ್ದಾರೆ ನಿರ್ದೇಶಕ ಪ್ರೇಮ್.

    ವಿಲನ್ ಟೀಸರ್ ಅರ್ಧಗಂಟೆಯಲ್ಲೇ ಲಕ್ಷ ವೀವರ್ಸ್ ದಾಟಿದೆ. ಗಂಟೆ ಗಂಟೆಗೂ ವೀವ್ಸ್ ದ್ವಿಗುಣಗೊಳ್ಳುತ್ತಲೇ ಇದೆ. ಅಂದಹಾಗೆ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರು ನಗರದ ಜಿ ಟಿ ಮಾಲ್‍ನಲ್ಲಿ `ದಿ ವಿಲನ್’ ಚಿತ್ರದ ಎರಡೂ ಟೀಸರ್ ಅಧಿಕೃತವಾಗಿ ರಿಲೀಸ್ ಮಾಡಿದ್ದಾರೆ.

    ಶೂಟಿಂಗ್ ನಿಮಿತ್ತ ಸರ್ಬಿಯ ದೇಶಕ್ಕೆ ತೆರಳಿರುವ ನಟ ಸುದೀಪ್ ಟ್ವಿಟ್ಟರ್ ಲೈವ್ ಮುಖೇನ ತಂಡಕ್ಕೆ ಶುಭ ಕೋರಿದರು. ಇನ್ನು `ದಿ ವಿಲನ್’ ಚಿತ್ರಕ್ಕೆ ಟೈಮೆಕ್ಸ್ ವಾಚ್ ಕಂಪೆನಿ ಪ್ರಾಯೋಜಕತ್ವ ನೀಡಿದೆ. ದಕ್ಷಿಣ ಭಾರತದಲ್ಲೇ ಕನ್ನಡ ಚಿತ್ರಕ್ಕೆ ಮೊದಲ ಬಾರಿಗ ಪ್ರಾಯೋಜಕತ್ವ ನೀಡಿದೆ. ಕಾರ್ಯಕ್ರಮದಲ್ಲಿ ಸಿಎಂ ಕುಮಾರಸ್ವಾಮಿ, ಶಿವರಾಜ್ ಕುಮಾರ್, ನಿರ್ದೇಶಕ ಪ್ರೇಮ್ ಅವರಿಗೆ ಟೈಮೆಕ್ಸ್ ಕಂಪೆನಿ ಮಾಲೀಕರು ವಾಚ್ ಕಟ್ಟಿದರು. ಅಲ್ಲದೇ `ದಿ ವಿಲನ್’ ಡೈರಿ ಡೇ ಐಸ್ ಕ್ರೀಂ ಬಿಡುಗಡೆ ಮಾಡಿದರು.

    ಧನ ಸಹಾಯ: ಒಂದು ಟಿಕೆಟ್‍ಗೆ 500 ರೂ. ಪಡೆದು ಟೀಸರ್ ತೋರಿಸಿರುವ ಪ್ರೇಮ್, ಟಿಕೆಟ್‍ನಿಂದ ಬಂದಂತಹ ಹಣವನ್ನು ಆರ್ಥಿಕ ಸಂಕಷ್ಟದಲ್ಲಿ ಬಳಲುತ್ತಿರುವ ಕನ್ನಡದ ನಿರ್ದೇಶಕರಿಗೆ ವಿತರಿಸಿದ್ದಾರೆ. ಚಿತ್ರಕ್ಕೆ ಜೋಗಿ ಪ್ರೇಮ್ ನಿರ್ದೇಶನವಿದ್ದು, ಕಿಚ್ಚ ಸುದೀಪ್, ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್, ಏಮಿಜಾಕ್ಸನ್, ಮಿಥುನ್ ಚಕ್ರವರ್ತಿ ಸೇರಿದಂತೆ ಅತೀ ದೊಡ್ಡತಾರಾಗಣ ಈ ಸಿನಿಮಾದಲ್ಲಿದೆ. ಕಾರ್ಯಕ್ರಮದಲ್ಲಿ ಸಂಗ್ರಹವಾದ ಹಣವನ್ನು ಸಿಎಂ ಕುಮಾರಸ್ವಾಮಿ ಅವರಿಂದ ನಿರ್ದೇಶಕರಾದ ಬೂದಾಳ್ ಕೃಷ್ಣಮೂರ್ತಿ, ಹಿರೇಮಠ್, ಆನಂದ್ ಪಿ ರಾಜು, ಎ.ಟಿ.ರಘು ಅವರಿಗೆ ಸಹಾಯಧನ ವಿತರಣೆ ಮಾಡಿದರು.

     

  • ಈ ವಾರ ಬರಲಿದೆ ವಿಲನ್ ಟೀಸರ್!

    ಈ ವಾರ ಬರಲಿದೆ ವಿಲನ್ ಟೀಸರ್!

    – ಟೀಸರ್ ಬಿಡುಗಡೆ ಸಮಾರಂಭಕ್ಕೆ 500 ರೂ. ಟಿಕೆಟ್!

    ಬೆಂಗಳೂರು: ಕಿಚ್ಚ ಸುದೀಪ್ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜೊತೆಯಾಗಿ ನಟಿಸಿರೋ ಕಾರಣಕ್ಕೇ ಎಲ್ಲರ ಗಮನ ಸೆಳೆದಿದ್ದ ಚಿತ್ರ ದಿ ವಿಲನ್. ಆದರೆ ನಿರ್ದೇಶಕ ಪ್ರೇಮ್ ಅದೇಕೋ ಮಾಮೂಲಿನಂತೆ ಈ ಚಿತ್ರದ ಕೆಲಸ ಕಾರ್ಯಗಳನ್ನು ನಿಧಾನ ಮಾಡಿದ್ದರೂ ಆರಂಭಿಕ ಕ್ಯೂರಿಯಾಸಿಟಿಯನ್ನೇ ಕಾಯ್ದುಕೊಂಡಿರೋದು ಈ ಚಿತ್ರದ ವಿಶೇಷ!

    ಯಾಕೆ ಇನ್ನೂ ಬಿಡುಗಡೆಯ ದಿನಾಂಕ ನಿಗದಿಯಾಗಿಲ್ಲ ಎಂಬಂಥಾ ಪ್ರಶ್ನೆಗಳ ಹೊರತಾಗಿ ಮತ್ಯಾವ ಸದ್ದೂ ಇರದಿದ್ದ ಈ ಚಿತ್ರದ ಕಡೆಯಿಂದ ಹೊಸಾ ಸುದ್ದಿಯೊಂದು ಹೊರ ಬಿದ್ದಿದೆ. ನಿರ್ದೇಶಕ ಪ್ರೇಮ್ ಅವರು ಇದೇ ತಿಂಗಳ 28ರಂದು ವಿಶೇಷವಾದೊಂದು ಟೀಸರ್ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ.

    ಪೋಸ್ಟರ್‍ಗಳಲ್ಲಿ ಸುದೀಪ್ ಹಾಗೂ ಶಿವರಾಜ್ ಕುಮಾರ್ ಅವರುಗಳ ನ್ಯೂ ಲುಕ್ ಅಭಿಮಾನಗಳನ್ನು ಸೆಳೆದುಕೊಂಡಿತ್ತು. ತಡವಾದರೂ ಏನೋ ಕಮಾಲ್ ಮಾಡೋ ಪ್ರೇಮ್ ಈಗ ಬಿಡುಗಡೆಯಾಗಲಿರೋ ಟೀಸರ್‍ನಲ್ಲಿಯೂ ಹೊಸತೇನನ್ನೋ ಇಟ್ಟಿರುತ್ತಾರೆಂಬ ವಿಶ್ವಾಸ ಪ್ರೇಕ್ಷಕರಲ್ಲಿ ಇದ್ದೇ ಇದೆ. ಈ ಟೀಸರ್ ಬಿಡುಗಡೆಯ ವಿಚಾರದಲ್ಲಿಯೂ ಪ್ರೇಮ್ ವಿಶೇಷವಾದೊಂದು ವಿಚಾರ ಜಾಹೀರು ಮಾಡಿದ್ದಾರೆ. ಮೊದಲ ಸಲ ಟೀಸರ್ ಬಿಡುಗಡೆ ಸಮಾರಂಭಕ್ಕೆ ಟಿಕೆಟ್ ವ್ಯವಸ್ಥೆ ಮಾಡಿದ್ದಾರೆ. ಅದರ ಬೆಲೆ 500 ರೂಪಾಯಿಯಂತೆ. ಚಿತ್ರ ನಿರ್ದೇಶಕರಲ್ಲಿ ಅನೇಕರು ಸಂಕಷ್ಟದಲ್ಲಿರುತ್ತಾರಾದ್ದರಿಂದ ಈ ಟಿಕೇಟಿನ ಕಾಸನ್ನು ಅಂಥವರ ಕಷ್ಟಗಳಿಗೆ ಸಹಾಯವಾಗುವಂತೆ ವಿನಿಯೋಗಿಸಲು ಪ್ರೇಮ್ ನಿರ್ಧರಿಸಿದ್ದಾರೆ. ಈ ಟೀಸರ್ ಅನಾವರಣ ಕಾರ್ಯಕ್ರಮ ಜೂ.28ರಂದು ಸಂಜೆ 7 ಘಂಟೆಗೆ ಮಾಗಡಿ ರಸ್ತೆಯ ಜಿಟಿ ವಲ್ರ್ಡ್ ಮಾಲ್‍ನಲ್ಲಿ ನಡೆಯಲಿದೆ.

    ಇದೇ ಹೊತ್ತಿನಲ್ಲಿ ಬಾಕಿ ಉಳಿದಿರುವ ಚಿತ್ರೀಕರಣವನ್ನೂ ಕಂಪ್ಲೀಟು ಮಾಡಿಕೊಳ್ಳಲೂ ತಯಾರಿ ಆರಂಭಿಸಿದ್ದಾರಂತೆ. ಇದೇ ವೇಗದಲ್ಲಿ ಪ್ರೇಮ್ ಮುಂದುವರೆದರೆ ಇನ್ನು ಕೆಲ ದಿನಗಳಲ್ಲಿಯೇ ಈ ಚಿತ್ರ ತೆರೆ ಕಾಣುವ ದಿನಾಂಕವೂ ನಿಗದಿಯಾಗಬಹುದು.

  • ನಂದೆ ಮೊದಲನೆಯದಲ್ಲ, ನಂದೆ ಕೊನೆಯದಲ್ಲ- ದಿಗಂತ್ ಜೀವನದ ಪ್ರೇಮ ಕಥೆ ನೋಡಿ

    ನಂದೆ ಮೊದಲನೆಯದಲ್ಲ, ನಂದೆ ಕೊನೆಯದಲ್ಲ- ದಿಗಂತ್ ಜೀವನದ ಪ್ರೇಮ ಕಥೆ ನೋಡಿ

    ಬೆಂಗಳೂರು: ನಟ ದೂದ್‍ಪೇಡ ದಿಗಂತ್ ‘ಕಥೆಯೊಂದು ಶುರುವಾಗಿದೆ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು, ಒಂದೇ ದಿನಕ್ಕೆ 1 ಲಕ್ಷಕ್ಕೂ ಹೆಚ್ಚು ವ್ಯೂ ಬಂದಿದೆ.

    ಕಥೆಯೊಂದು ಶುರುವಾಗಿ ಚಿತ್ರದಲ್ಲಿ ನಟ ದಿಗಂತ್ ಯುವ ರೆಸಾರ್ಟ್ ಮಾಲೀಕನಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ದಿಂಗತ್ ತರುಣ್ ಆಗಿ ಕಾಣಿಸಿಕೊಂಡಿದ್ದು, ಜೀವನದಲ್ಲಿ ಸಾಕಷ್ಟು ಕಷ್ಟದ ಸಮಯಗಳನ್ನು ಎದುರಿಸುತ್ತಿರುತ್ತಾರೆ.

    ಈ ಚಿತ್ರದಲ್ಲಿ ದಿಗಂತ್ ನಿರಾಸೆ, ಸೋಲು ಹಾಗೂ ಕಷ್ಟಗಳಿಂದ ಹತಾಶರಾಗಿರುತ್ತಾರೆ. ನಂತರ ರೆಸಾರ್ಟ್‍ಗೆ ಅತಿಥಿಯಾಗಿ ಬಂದ ನಟಿ ಜೊತೆ ಹೆಚ್ಚು ಸಮಯ ಕಳೆಯುತ್ತಾರೆ. ಅಲ್ಲಿಂದ ಚಿತ್ರದಲ್ಲಿ ಇಬ್ಬರ ಪ್ರೇಮಕಥೆ ಶುರುವಾಗುತ್ತದೆ.

    ಈ ಚಿತ್ರದ ಚಿತ್ರೀಕರಣವನ್ನು ಕಾರವಾರ ಹಾಗೂ ಪಾಂಡಿಚೇರಿಯಲ್ಲಿ ಚಿತ್ರೀಕರಿಸಲಾಗಿದೆ. ಈ ಚಿತ್ರದಲ್ಲಿ ಕೇವಲ 7 ಪಾತ್ರಗಳು ಮಾತ್ರ ಕಾಣಿಸಿಕೊಂಡಿದ್ದಾರೆ. ವಿಶೇಷವೆಂದರೆ ಈ ಚಿತ್ರವನ್ನು 30 ದಿನಗಳಲ್ಲಿ ಚಿತ್ರಿಕರಿಸಲಾಗಿದೆ. ಜಾಹೀರಾತು ನಿರ್ದೇಶಕರಾಗಿದ್ದ ಸೀನಾ ಅವರು ಈ ಚಿತ್ರವನ್ನು 30 ದಿನದಲ್ಲಿ ಚಿತ್ರೀಕರಣ ಮಾಡಿ ಮುಗಿಸಿದ್ದಾರೆ.

    ಈ ಚಿತ್ರ ಫಸ್ಟ್ ಲುಕ್‍ನಿಂದಲೇ ಎಲ್ಲರ ಗಮನ ಸೆಳೆದಿದ್ದು, ನಟ ದಿಗಂತ್ ವಿಭಿನ್ನ ಪಾತ್ರದಲ್ಲಿ ಮಿಂಚಿದ್ದಾರೆ. ಇನ್ನೂ ಈ ಚಿತ್ರದಲ್ಲಿ ‘ಒಂದು ಮೊಟ್ಟೆಯ ಕಥೆ’ ಚಿತ್ರದ ಖ್ಯಾತ ನಟಿ ಶ್ರೇಯಾ ಅಂಚನ್ ಕೂಡ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.

    ಕಥೆಯೊಂದು ಶುರುವಾಗಿದೆ ಚಿತ್ರ ಲವ್‍ಸ್ಟೋರಿ ಚಿತ್ರವಾಗಿದ್ದು, ದಿಗಂತ್‍ಗೆ ನಾಯಕಿಯಾಗಿ ಖ್ಯಾತ ತಮಿಳು ನಟಿ ಪೂಜಾ ದೇವರೈಯಾ ಕಾಣಿಸಿಕೊಂಡಿದ್ದಾರೆ. ಇನ್ನೂ ಈ ಚಿತ್ರವನ್ನು ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಹಾಗೂ ಪುಶ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಿಸಿದ್ದಾರೆ. ಈ ಚಿತ್ರವನ್ನು ಜಾಹೀರಾತು ನಿರ್ದೇಶಕರಾದ ಸೀನಾ ಹೆಗಡೆ ಮೊದಲ ಬಾರಿಗೆ ಸಿನಿಮಾ ನಿರ್ದೇಶನ ಮಾಡಿ ಸ್ಯಾಂಡಲ್‍ವುಡ್‍ನಲ್ಲಿ ಪರಿಚಯವಾಗುತ್ತಿದ್ದಾರೆ.

  • ಪ್ರಿಯಾ ವಾರಿಯರ್ `ಒರು ಅಡರ್ ಲವ್’ ಸಾಂಗ್ ಟೀಸರ್ ವೈರಲ್

    ಪ್ರಿಯಾ ವಾರಿಯರ್ `ಒರು ಅಡರ್ ಲವ್’ ಸಾಂಗ್ ಟೀಸರ್ ವೈರಲ್

    ತಿರುವನಂತಪುರಂ: ಕಣ್ ಸನ್ನೆಯ ಮೂಲಕ ಲಕ್ಷಾಂತರ ಅಭಿಮಾನಿಗಳನ್ನು ಪಡೆದ ಪ್ರಿಯಾ ವಾರಿಯರ್ ನಟನೆಯ ಒರು ಅಡರ್ ಲವ್ ಸಿನಿಮಾ ಸಾಂಗ್ ಟೀಸರ್ ಎಲ್ಲೆಡೆ ವೈರಲ್ ಆಗಿದೆ.

    ಚಿತ್ರದ `ಮೂನ್ನಲೇ ಪೊನ್ನಲೇ’ ಹಾಡಿನ ಟೀಸರ್ ಬಿಡುಗಡೆಯಾಗಿದ್ದು, ನೋಡುಗರ ಹೈಸ್ಕೂಲ್ ಪ್ರೀತಿಯ ನೆನಪಿನ ಸುರುಳಿಯಲ್ಲಿ ಸುತ್ತುವಂತೆ ಮಾಡುವಂತಿದೆ. ಸದ್ಯ ಬಿಡುಗಡೆಯಾಗಿರುವ ಹಾಡು ತಮಿಳು ಭಾಷೆಯಲ್ಲಿ ಮೂಡಿ ಬಂದಿದೆ. ಮೆ 16ರಂದು ಅಪ್ಲೋಡ್ ಆಗಿರುವ ಯೂಟ್ಯೂಬ್ ವಿಡಿಯೋ 8 ಲಕ್ಷಕ್ಕೂ ಅಧಿಕ ವ್ಯೂ ಕಂಡಿದೆ. ಈ ಹಾಡಿನಲ್ಲಿ ಪ್ರಿಯಾ ವಾರಿಯರ್ ಜೊತೆ ನಟ ರೋಷನ್ ಮತ್ತೊಮ್ಮೆ ಮೋಡಿ ಮಾಡಿದ್ದಾರೆ.

    ಸಂಪೂರ್ಣ ಕಾಲಿವುಡ್ ಸಿನಿಮಾ ಶೈಲಿಯಲ್ಲಿ ಮೂಡಿಬಂದಿರುವ ಹಾಡಿನ ಪ್ರತಿ ಸನ್ನಿವೇಶವೂ ಹೊಸತನದಿಂದ ಕೂಡಿದೆ. ಹಾಡಿನ ಸಾಹಿತ್ಯವೂ ಸರಳವಾಗಿದ್ದು, ಚಿತ್ರದ ಕಥೆಗೆ ಪೂರಕವಾಗಿ ಮೂಡಿ ಬಂದಿದೆ ಎಂದು ನಿರ್ದೇಶಕ ಸಹಾನ್ ರಹಮಾನ್ ತಿಳಿಸಿದ್ದಾರೆ.

    ಚಿತ್ರದಲ್ಲಿ ಹಲವು ಪ್ರಮುಖ ಪಾತ್ರಗಳಿದ್ದು, ಪ್ರಿಯಾ ವಾರಿಯರ್ ಹಾಗೂ ರೋಷನ್ ರ ಹಾಡಿನ ಒಂದು ಭಾಗದ ವಿಡಿಯೋವನ್ನು ಈ ಹಿಂದೆ ಚಿತ್ರ ತಂಡ ಬಿಡುಗಡೆ ಮಾಡಿತ್ತು. ಈ ಹಾಡಿನಲ್ಲಿ ತಮ್ಮ ಕಣ್ ಸನ್ನೆಯ ಮೂಲಕ ಸಿನಿಮಾ ಪ್ರೇಮಿಗಳ ಮನಗೆದ್ದಿದ್ದರು. ಅಲ್ಲದೇ ಬಾಲಿವುಡ್ ರಿಷಿ ಕಪೂರ್, ಟಾಲಿವುಡ್ ಅಲ್ಲು ಅರ್ಜುನ್, ಸಿದ್ದಾರ್ಥ್, ಸೇರಿದಂತೆ ಹಲವು ನಟ ನಟಿಯರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಪ್ರಿಯಾ ವಾರಿಯರ್ ಗೆ ಶುಭಕೋರಿದ್ದರು.

    ಒರು ಅಡರ್ ಲವ್ ಚಿತ್ರದ ಹಾಡು ವೈರಲ್ ಆ ಬಳಿಕ ಪ್ರಿಯಾ ವಾರಿಯರ್ ಹಾಗೂ ರೋಷನ್ ಜೋಡಿಗೂ ಹೆಚ್ಚು ಮೆಚ್ಚುಗೆ ವ್ಯಕ್ತವಾಗಿತ್ತು. ಅಲ್ಲದೇ ಕೆಲ ಸಂಸ್ಥೆಗಳು ತಮ್ಮ ಉತ್ಪನ್ನಗಳ ಮಾರಾಟ ರಾಯಭಾರಿಗಳಾಗಿ ಈ ಜೋಡಿ ಕಾಣಿಸಿಕೊಂಡಿತ್ತು. ಕನ್ನಡ ಚಿತ್ರ ಸೇರಿದಂತೆ ಹಲವು ಸಿನಿಮಾ ರಂಗಗಳಿಂದ ಹೆಚ್ಚಿನ ಆಫರ್ ಗಳು ಬಂದಿದ್ದವು. ಆದರೆ ಒರು ಅಡರ್ ಲವ್ ಸಿನಿಮಾ ಮುಕ್ತಾಯ ವರೆಗೂ ತಾನು ಯಾವುದೇ ಇತರೇ ಸಿನಿಮಾಗಳಿಗೆ ಸಹಿ ಮಾಡುವುದಿಲ್ಲ ಎಂದು ಪ್ರಿಯಾ ವಾರಿಯರ್ ತಿಳಿಸಿದ್ದರು.

  • ತಾಯಂದಿರ ದಿನದಂದು ಭಾವನಾತ್ಮಕ ಟೀಸರ್ ರಿಲೀಸ್ ಮಾಡಿದ ಸರ್ಜಾ ಬ್ರದರ್ಸ್!

    ತಾಯಂದಿರ ದಿನದಂದು ಭಾವನಾತ್ಮಕ ಟೀಸರ್ ರಿಲೀಸ್ ಮಾಡಿದ ಸರ್ಜಾ ಬ್ರದರ್ಸ್!

    ಬೆಂಗಳೂರು: ಇಂದು ವಿಶ್ವದೆಲ್ಲೆಡೆ ತಾಯಂದಿರ ದಿನವನ್ನು ಆಚರಿಸಲಾಗುತ್ತಿದೆ. ಈ ದಿನದಂದು ಧ್ರುವ ಸರ್ಜಾ ಹಾಗೂ ಚಿರಂಜೀವಿ ಸರ್ಜಾ ‘ಅಮ್ಮ ಐ ಲವ್ ಯು’ ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದಾರೆ.

    ಅಮ್ಮ ಐ ಲವ್ ಯು ಚಿತ್ರದ ಟೀಸರ್ ಎರಡು ನಿಮಿಷವಿದ್ದು, ಈ ಟೀಸರ್ ನೋಡಿದ ಪ್ರತಿಯೊಬ್ಬರಿಗೂ ತನ್ನ ತಾಯಿಯ ಮೇಲಿರುವ ಪ್ರೀತಿ ಇನ್ನಷ್ಟು ಹೆಚ್ಚಾಗುತ್ತದೆ. ಪ್ರತಿದಿನ ಎಲ್ಲರ ಜೀವನದಲ್ಲಿ ತಾಯಿಯ ಜೊತೆ ನಡೆಯುವ ಸಂಭಾಷಣೆಗಳನ್ನು ಟೀಸರ್ ನಲ್ಲಿ ತೋರಿಸಲಾಗಿದೆ.

    ಅಮ್ಮ ಐ ಲವ್ ಯು ಚಿತ್ರದಲ್ಲಿ ಚಿರಂಜೀವಿ ಸರ್ಜಾ ನಾಯಕರಾಗಿ ನಟಿಸುತ್ತಿದ್ದಾರೆ. ಈ ಚಿತ್ರದ ಟೀಸರ್ ಗೆ ಧ್ರುವ ಸರ್ಜಾ ತಮ್ಮ ಧ್ವನಿಯನ್ನು ನೀಡಿದ್ದಾರೆ. ಟೀಸರ್ ನಲ್ಲಿ ತಾಯಿಯ ಬಗ್ಗೆ ಹೇಳಲಾಗಿದ್ದು, ತಾಯಿ ನಮಗಾಗಿ ಏನೇನು ಮಾಡುತ್ತಾರೆಂಬುದು ಟೀಸರ್ ನಲ್ಲಿ ಹೇಳಿದ್ದಾರೆ.

    ನಮ್ಮ ಬೇಕಾಗಿರುವ ಚಿಕ್ಕಚಿಕ್ಕ ವಸ್ತುಗಳ ಬಗ್ಗೆ ತಾಯಿಯ ಹತ್ತಿರ ಕೇಳುತ್ತೇವೆ. ಆದರೆ ತಂದೆ ಇದ್ದರೆ ತಾಯಿ ಎಲ್ಲಿ ಎಂದು ಕೇಳುತ್ತೇವೆ. ನಮಗೆ ಬೇಕಾಗಿರುವ ತಿಂಡಿಯನ್ನು ಕೇಳಿದರೆ, ಅವಳಿಗೆ ಏನು ಬೇಕೋ ಅದನ್ನು ಬಿಟ್ಟು, ನಮಗೇನು ಬೇಕೋ ಅದನ್ನು, ಯಾವಾಗ ಬೇಕಾದ್ರೂ ಮಾಡಿಕೊಡುತ್ತಾರೆ ಎಂದು ಟೀಸರ್ ನಲ್ಲಿ ತಿಳಿಸಿದ್ದಾರೆ.

    ಸ್ವೀಪರ್, ಕ್ಲೀನರ್, ಕೀಪರ್, ಶೇಫ್, ವೇಟರ್, ಟೀಚರ್, ಸಂಸ್ಥಾಪಕಿ, ಡೆಕೋರೇಟರ್, ಸ್ಟೋರಿ ರೈಟರ್, ಸಿಂಗರ್, ಆ್ಯಕ್ಟರ್, ಸರ್ಪೋಟರ್, ಮೋಟಿವೇಟರ್ ಎಲ್ಲರಿಗೂ ತಮ್ಮ ಅಮ್ಮ ಆಗಿರುತ್ತಾರೆ. ನಮಗೆ ಏನೇ ಆಗಬೇಕಾದರೂ ನಮಗೆ ನಮ್ಮ ಅಮ್ಮಾನೇ ಆಗಬೇಕು. ತಂದೆ ಆಗಲೂ ಕೆಲವು ಕ್ಷಣ ಸಾಕು, ಆದರೆ ತಾಯಿ ಆಗಲು ಜೀವನಪೂರ್ತಿ ಬೇಕು ಎಂದು ಟೀಸರ್ ನಲ್ಲಿ ತೋರಿಸಿದ್ದಾರೆ.

    ಎಂ ಚೈತನ್ಯ ಈ ಸಿನಿಮಾದ ನಿರ್ದೇಶಕರಾಗಿದ್ದು, ಚಿತ್ರತಂಡ ಈ ಟೀಸರ್ ನನ್ನು ಎಲ್ಲ ತಾಯಂದರಿಗೆ ಅರ್ಪಿಸಿದ್ದಾರೆ. ಈ ಚಿತ್ರ ದ್ವಾರಕೀಶ್ ಬ್ಯಾನರ್ ನಲ್ಲಿ ನಿರ್ಮಾಣವಾಗಿದೆ. ಚಿತ್ರೀಕರಣ ಮುಗಿಸಿ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ.

    https://www.youtube.com/watch?v=SuX3BBVjPbk

  • ‘ಕೆಲವು ದಿನಗಳ ನಂತರ’ ಮಗು ಜೊತೆ ಬಂದ ಶುಭಾ ಪೂಂಜಾ…!!

    ‘ಕೆಲವು ದಿನಗಳ ನಂತರ’ ಮಗು ಜೊತೆ ಬಂದ ಶುಭಾ ಪೂಂಜಾ…!!

    ಬೆಂಗಳೂರು: ಮೊಗ್ಗಿನ ಮನಸ್ಸಿನ ಸುಂದರಿ ಶುಭಾ ಪೂಂಜಾ ‘ಕೆಲವು ದಿನಗಳ ನಂತರ’ ಎಂಬ ವಿಭಿನ್ನ ಕಥಾ ಹಂದರವುಳ್ಳ ಸಿನಿಮಾದ ಮೂಲಕ ಅಭಿಮಾನಿಗಳನ್ನು ರಂಜಿಸಲು ಬರುತ್ತಿದ್ದಾರೆ. ಇತ್ತೀಚೆಗೆ ತೆರೆಕಂಡ ಗೂಗಲ್ ಚಿತ್ರದಲ್ಲಿ ಗೃಹಿಣಿ ಪಾತ್ರದಲ್ಲಿ ನಟಿಸುವ ಮೂಲಕ ಮೆಚ್ಚುಗೆಯನ್ನು ಪಡೆದುಕೊಂಡಿದ್ದರು.

    ಇಂದಿನ ಯುವ ಜನತೆಯ ಸಮಸ್ಯೆಯ ಕುರಿತು “ಕೆಲವು ದಿನಗಳ ನಂತರ” ಎಂಬ ತಯಾರಾಗುತ್ತಿದ್ದು, ಇದೊಂದು ಕಾಮಿಡಿ ಮತ್ತು ಸಸ್ಪೆನ್ಸ್ ಸಿನಿಮಾವಾಗಿದೆ. ಕೆಲವು ದಿನಗಳ ನಂತರ ಸಿನಿಮಾದ ಚಿತ್ರತಂಡ ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದು, ಟೀಸರ್ ಸಾಕಷ್ಟು ಭರವಸೆಯನ್ನು ಮೂಡಿಸಿದೆ. ಅಷ್ಟೇ ಅಲ್ಲದೇ ಟೀಸರ್ ನಲ್ಲಿ ಸೌಂಡ್ ಎಫೆಕ್ಟ್ ಉತ್ತವಾಗಿದ್ದು, ಸಿನಿಮಾ ಸಸ್ಪೆನ್ಸ್ ನಿಂದ ಕೂಡಿದೆ ಅಂತಾ ಚಿತ್ರತಂಡ ತಿಳಿಸಿದೆ. ಈ ಸಿನಿಮಾದ ವಿಶೇಷತೆ ಎಂದರೆ 6 ತಿಂಗಳ ಮಗುವನ್ನು ಕಂಪ್ಯೂಟರ್ ಗ್ರಾಫಿಕ್ಸ್ ನ ಮೂಲಕ ತಯಾರಿಸಲಾಗಿದೆ.

    ಕೆಲವು ದಿನಗಳ ನಂತರ ಚಿತ್ರತಂಡದಲ್ಲಿ ಸಾಕಷ್ಟು ಹಾಸ್ಯ ಕಲಾವಿದರನ್ನು ಮತ್ತು ಯುವ ಪ್ರತಿಭೆಗಳನ್ನು ಒಳಗೊಂಡಿದೆ. ಕಲಾವಿದರನ್ನು ನೋಡಿದ್ರೆ ಸಿನಿಮಾ ಫುಲ್ ಕಾಮಿಡಿ ಇದೆ ಅಂತಾ ತಿಳಿದ್ರೆ ತಪ್ಪಾಗುತ್ತದೆ. ಟೀಸರ್ ನಲ್ಲಿ ಹಾರರ್ ಸಿನಿ ಶೈಲಿಯಲ್ಲಿ ಮೂಡಿಬಂದಿದ್ದು ಕುತೂಹಲವನ್ನು ಹುಟ್ಟುಹಾಕಿದೆ. ಚಿತ್ರದಲ್ಲಿ ಗ್ರಾಫಿಕ್ಸ್ ಮೂಲಕ 6 ತಿಂಗಳ ಮಗುವನ್ನು ಸಹ ಸೃಷ್ಟಿಸಲಾಗಿದೆ. ಕಥೆ ಮಗುವಿನ ಸುತ್ತ ಕೇಂದ್ರಿಕೃತವಾಗಿರುವ ಸಾಧ್ಯತೆಗಳಿವೆ. ಚಿತ್ರತಂಡ ಟೀಸರ್ ನಲ್ಲಿ ಎಲ್ಲಿಯೂ ಪಾತ್ರಗಳ ಪರಿಚಯ ಮತ್ತು ಕಥೆಯನ್ನು ಸಹ ಬಿಟ್ಟುಕೊಟ್ಟಿಲ್ಲ.

    ಕೆಲವು ದಿನಗಳ ನಂತರ ಮುತ್ತುರಾಜ್ ಹೆಚ್.ಪಿ ಅವರು ನಿರ್ಮಾಣದಲ್ಲಿ ಮೂಡಿ ಬರುತ್ತಿದೆ. ಶ್ರೀನಿ ರವರ ನಿರ್ದೇಶನವನ್ನು ಚಿತ್ರ ಹೊಂದಿದೆ. ಶುಭಾ ಪೂಂಜಾ, ಮಜಾ ಟಾಕೀಸ್ ಖ್ಯಾತಿಯ ಪವನ್, ಕಾಮಿಡಿ ಕಿಲಾಡಿ ಲೋಕೇಶ್, ದ್ರವ್ಯ ಶೆಟ್ಟಿ, ಜಗದೀಶ್, ಸೋನು ಪಾಟೀಲ್ ಮತ್ತು ಶರಣಯ್ಯ ಮುಂತಾದ ತಾರಾಬಳಗ ಈ ಸಿನಿಮಾದಲ್ಲಿ ಕಾಣಬಹುದಾಗಿದೆ. ಸದ್ಯಕ್ಕೆ ಈ ಚಿತ್ರತಂಡ ಶೂಟಿಂಗ್ ಮುಗಿಸಿ, ಆಡಿಯೋ ರಿಲೀಸ್ ಮಾಡುವ ಹಂತದಲ್ಲಿದೆ. ಮೇ ಕೊನೆವಾರದಲ್ಲಿ ಚಿತ್ರಮಂದಿರಗಳಿಗೆ ಲಗ್ಗೆ ಇಡುವ ಸಾಧ್ಯತೆಗಳಿವೆ. ಒಟ್ಟಿನಲ್ಲಿ ಟೀಸರ್ ಮೂಲಕ ಗಾಂಧಿನಗರದಲ್ಲಿ ಗುರುತಿಸಿಕೊಂಡಿರುವ ‘ಕೆಲವು ದಿನಗಳ ನಂತರ’ ರಿಲೀಸ್ ಆದ್ಮೇಲೆ ನೋಡುಗರ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ.

  • ಯುಗಾದಿ ಹಬ್ಬಕ್ಕೆ ಪ್ರೇಕ್ಷಕರಿಗೆ ಉಡುಗೊರೆ ಕೊಟ್ಟ ‘ಅಂಬಿ ನಿಂಗ್ ವಯಸ್ಸಾಯ್ತೋ’ ಚಿತ್ರತಂಡ

    ಯುಗಾದಿ ಹಬ್ಬಕ್ಕೆ ಪ್ರೇಕ್ಷಕರಿಗೆ ಉಡುಗೊರೆ ಕೊಟ್ಟ ‘ಅಂಬಿ ನಿಂಗ್ ವಯಸ್ಸಾಯ್ತೋ’ ಚಿತ್ರತಂಡ

    ಬೆಂಗಳೂರು: ರೆಬಲ್ ಸ್ಟಾರ್ ಅಂಬರೀಶ್ ನಟನೆಯ `ಅಂಬಿ ನಿಂಗ್ ವಯಸ್ಸಾಯ್ತೋ’ ಚಿತ್ರದ ಹೊಸ ಟೀಸರ್ ಚಿತ್ರತಂಡ ಯುಗಾದಿ ಹಬ್ಬದ ಪ್ರಯುಕ್ತವಾಗಿ ರಿಲೀಸ್ ಮಾಡಿದೆ.

    ಈ ಮೊದಲು ಟೈಟಲ್ ಟೀಸರ್ ರನ್ನ ಚಿತ್ರತಂಡ ರಿಲೀಸ್ ಮಾಡಿ ಪ್ರಶಂಸೆಗೆ ಪಾತ್ರವಾಗಿತ್ತು. ಈಗ ಹೊಸ ಸಂವತ್ಸರ ಸೂಚಕ ಯುಗಾದಿ ಹಬ್ಬದ ಉಡುಗರೆ ರೂಪದಲ್ಲಿ ಮಗದೊಂದು ಟೀಸರ್ ನ ಚಿತ್ರತಂಡ ಲಾಂಚ್ ಮಾಡಿದೆ.

    ಕೆಲದಿನಗಳ ಹಿಂದೆ ರೆಬಲ್ ಸ್ಟಾರ್ ಅಂಬರೀಶ್ ಹಾಗೂ ಕಿಚ್ಚ ಸುದೀಪ್ ಒಟ್ಟಿಗೆ ನಟಿಸುತ್ತಿರುವ `ಅಂಬಿ ನಿಂಗ್ ವಯಸ್ಸಾಯ್ತೋ’..! ಸಿನಿಮಾದ ಟೈಟಲ್ ಟೀಸರ್ ರಿಲೀಸ್ ಆಗಿತ್ತು. ಅಂಬರೀಶ್‍ರವರ ಕಂಚಿನ ಕಂಠದಲ್ಲಿ ಈ ಟೈಟಲ್ ಟೀಸರ್ ಹೊರ ಬಂದಿದ್ದು, ಅಂಬಿ ಅಭಿಮಾನಿಗಳಿಗೆ ಪತ್ರ ಬರೆಯುವ ಮೂಲಕ ಈ ಚಿತ್ರದ ಕಿರುನೋಟವನ್ನ ಹೇಳಲಾಗಿತ್ತು.

    ಎಲ್ಲರಿಗೂ ನಮಸ್ಕಾರ, ಇದೇನಪ್ಪಾ ಅಂಬರೀಷ್ ನಮಸ್ಕಾರ ಹೇಳ್ತಿದ್ದಾರೆ, ಅವರಿಗೆ ವಯಸ್ಸಾಯ್ತು ಅಂದ್ಕೋಬೇಡಿ ಅಂತ ಟೀಸರ್ ಶುರುವಾಗಿ, ಅಂಬಿ ಅವರ ಸಿನಿಮಾ ಎಂಟ್ರಿ, ಮದುವೆ, ಮಗ, ರೆಬೆಲ್ ಸ್ಟಾರ್ ಬಿರುದು, ನಂತರ ರಾಜಕೀಯ ಹೀಗೆ ಸಾಕಷ್ಟು ವಿಷಯಗಳ ಬಗ್ಗೆ ಹೇಳ್ತಾ ಹೋಗ್ತಾರೆ.

    ಕೊನೆಗೆ ಇಷ್ಟೊತ್ತು ಅಮರನಾಥನಾಗಿ ಮಾತನಾಡಿದೆ, ಈಗ ನಿಮ್ಮ ಪ್ರೀತಿಯ ಅಂಬಿಯಾಗಿ ಹೇಳ್ತಿದ್ದೀನಿ, ಕೇಳಿ. ಥಿಯೇಟರ್ ಗೆ ಬಂದು ಆಶೀರ್ವಾದ ಮಾಡಿ ಅಂತ ತಮ್ಮದೇ ಖಡಕ್ ಸ್ಟೈಲ್‍ನಲ್ಲಿ ಹೇಳಿದ್ದಾರೆ.

    ಸದ್ಯ ಬಿಡುಗಡೆಗೊಂಡ ಟೀಸರ್ ಅಲ್ಲಿ ಅಂಬರೀಶ್‍ರವರ ಲುಕ್ ಬಿಂಬಿಸುತ್ತಿದೆ. ಜಾಕ್ ಮಂಜು ನಿರ್ಮಾಣದಲ್ಲಿ ಗುರುದತ್ತ್ ಗಾನಿಗ ಕಲ್ಪನೆಯಲ್ಲಿ ಚಿತ್ರ ಮೂಡಿಬರುತ್ತಿದ್ದು, ಚಿತ್ರದ ಶೂಟಿಂಗ್ ಪ್ರಗತಿಯಲ್ಲಿದೆ.

  • ತಮಿಳುನಾಡಿನಲ್ಲೂ ಮೋಡಿ ಮಾಡಿತು ಕೆಜಿಎಫ್ ಟೀಸರ್!

    ತಮಿಳುನಾಡಿನಲ್ಲೂ ಮೋಡಿ ಮಾಡಿತು ಕೆಜಿಎಫ್ ಟೀಸರ್!

    ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬಕ್ಕೆ ಕೆಜಿಎಫ್‍ನ ಚಿಕ್ಕದೊಂದು ಟೀಸರ್ ರಿಲೀಸ್ ಆಗಿತ್ತು. ಈ ಟೀಸರ್ ಬರೀ ಕರ್ನಾಟಕದಲ್ಲದೇ ತಮಿಳುನಾಡಿನಾದ್ಯಂತ ಸುದ್ದಿಯಾಗಿದ್ದು ಅಲ್ಲೂ ಚಿತ್ರಪ್ರೇಮಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಕೆಜಿಎಫ್ ಕರ್ನಾಟಕನಲ್ಲಿ ತಲ್ಲಣ ಎಬ್ಬಿಸೋದು ಸಾಮಾನ್ಯ. ಆದರೆ ಹೊರರಾಜ್ಯದಲ್ಲೂ ಸಂಭ್ರಮಿಸುವಂತೆ ಮಾಡುತ್ತೆ ಎಂದರೆ ಅದೆಷ್ಟು ನಿರೀಕ್ಷೆ ಹುಟ್ಟಿಸಿರಬಹುದು. ಪರಭಾಷೆಯ ಸಿನಿಮಾಗಳು ಕರ್ನಾಟಕದಲ್ಲಿ ರಾರಾಜಿಸೋದು ನೋಡಿದ್ದೇವೆ. ಆದರೆ ಪಕ್ಕದ ರಾಜ್ಯದಲ್ಲಿ ಅದೂ ಟೀಸರ್ ಒಂದಕ್ಕೆ ಉತ್ತಮ ಪ್ರತಿಕ್ರಿಯೆ ಸಿಗೋದನ್ನು ನೋಡುವ ಭಾಗ್ಯ ಕನ್ನಡಿಗರದ್ದಾಗಿದೆ.

    ತಮಿಳುನಾಡಿನಲ್ಲಿ ಕನ್ನಡ ಚಿತ್ರವೊಂದನ್ನು ಇಷ್ಟರ ಮಟ್ಟಿಗೆ ಪ್ರೀತಿಸುತ್ತಿರುವುದು ಉತ್ತಮ ಬೆಳವಣಿಗೆ. ಕೆಜಿಎಫ್ ತಮಿಳಿನಲ್ಲೂ ರಿಲೀಸ್ ಆಗುತ್ತಿರೋದರಿಂದ ಚಿತ್ರದ ಮೇಲೆ ಕಾಲಿವುಡ್ ಚಿತ್ರಪ್ರೇಮಿಗಳು ಆರಾಮಾಗಿ ನಿರೀಕ್ಷೆ ಇಟ್ಟುಕೊಳ್ಳಬಹುದು. ಒಂದ್ ಸಿನಿಮಾ ರಿಲೀಸ್ ಆದಮೇಲೆ ಹೊರರಾಜ್ಯದಲ್ಲೂ ಸಂಭ್ರಮಿಸೋದನ್ನು ನೋಡಿದ್ದೀವಿ. ಆದರೆ ಟೀಸರ್‍ಗೆ ಕ್ಲೀನ್ ಬೋಲ್ಡ್ ಆಗಿದ್ದು ಹೊಸದು.

    70, 80 ರ ದಶಕವನ್ನು ಕನ್ನಡ ಸಿನಿಮಾ ಇಂಡಸ್ಟ್ರಿಯ ಸುವರ್ಣಯುಗ ಎಂದು ಕರೆಯಲಾಗುತ್ತಿತ್ತು. ಆ ಕಾಲ ಮತ್ತೆ ಮರುಕಳಿಸುತ್ತಾ ಎನ್ನುವ ಸೂಚನೆ ಈ ವರ್ಷ ಸೂಚಿಸುತ್ತಿದೆ. ಕೆಜಿಎಫ್ ಚಿತ್ರವೊಂದೇ ಅಲ್ಲದೆ ಕುರುಕ್ಷೇತ್ರ, ದಿ ವಿಲನ್ ಚಿತ್ರಗಳೂ ಪರಭಾಷಿಗರನ್ನು ಸ್ಯಾಂಡಲ್‍ವುಡ್ ನತ್ತ ಆಕರ್ಷಿಸುತ್ತಿದೆ.

  • 17 ಸಾವಿರ ವರ್ಷಗಳ ಯುದ್ಧದ ಇತಿಹಾಸ, ನೆನಪಿನಲ್ಲಿ ಉಳಿಯೋದು ಇಬ್ಬರೇ- ‘ಕೆಜಿಎಫ್’ ಟೀಸರ್‍ನಿಂದ ‘ರಾಮಾಚಾರಿ’ ಮತ್ತೆ ಕಿಂಗ್!

    17 ಸಾವಿರ ವರ್ಷಗಳ ಯುದ್ಧದ ಇತಿಹಾಸ, ನೆನಪಿನಲ್ಲಿ ಉಳಿಯೋದು ಇಬ್ಬರೇ- ‘ಕೆಜಿಎಫ್’ ಟೀಸರ್‍ನಿಂದ ‘ರಾಮಾಚಾರಿ’ ಮತ್ತೆ ಕಿಂಗ್!

    ಬೆಂಗಳೂರು: ಕಳೆದ ಒಂದು ವರ್ಷದಿಂದ ಕಾಯುತ್ತಿದ್ದ ಯಶ್ ಅಭಿಮಾನಿಗಳಿಗೆ ಒಂದೇ ದಿನ ಎರಡೆರಡು ಉಡುಗೊರೆ ಭರ್ಜರಿಯಾಗಿ ಸಿಕ್ಕಿದೆ. ಒಂದು ಕಡೆ ರಾಕಿಂಗ್ ಸ್ಟಾರ್ ಹುಟ್ಟುಹಬ್ಬದ ಸಂಭ್ರಮವಾದರೆ, ಇನ್ನೊಂದು ಕಡೆ ಕೆಜಿಎಫ್ ಟೀಸರ್ ಬಿಡುಗಡೆಯಾಗಿದೆ. “17 ಸಾವಿರ ವರ್ಷಗಳ ಯುದ್ಧದ ಇತಿಹಾಸ, ಅದರಲ್ಲಿ ಕದನಗಳು ಎಷ್ಟೋ ನಡೆದಿವೆ. ಎಷ್ಟೋ ನೆತ್ತರು ಹರಿದಿದೆ. ಆದ್ರೆ ನಮ್ಮ ನೆನಪಲ್ಲಿ ಉಳಿಯೋದು.. ಇಬ್ಬರೇ. ಭಯ ಹುಟ್ಟಿಸಿದವನು, ಭಯ ಸಾಯಿಸಿದವನು. ಇವನು ಅವೆರಡನ್ನು ಮಾಡಿದ್ದ” ಎಂಬ ಹಿನ್ನೆಲೆ ಧ್ವನಿಯಲ್ಲಿ ಟೀಸರ್ ನೋಡಬಹದು.

    ಯಶ್ ವ್ರತ್ತಿ ಬದುಕಿನಲ್ಲಿ ಕೆಜಿಎಫ್ ಇನ್ನೊಂದು ಮೈಲುಗಲ್ಲಾಗುವುದಲ್ಲಿ ಅನುಮಾನವೇ ಇಲ್ಲ. ಟೀಸರ್‍ನ ಪ್ರತಿ ದೃಶ್ಯ ಇದಕ್ಕೆ ಸಾಕ್ಷಿಯಾಗುತ್ತದೆ. ಸಂಗೀತ, ಕ್ಯಾಮೆರಾ ಕೆಲಸ, ಅದ್ಧೂರಿ ಸೆಟ್, ಲೋಕೇಶನ್ ಹೀಗೆ ಪ್ರತಿಯೊಂದನ್ನು ಅಳೆದು ತೂಗಿ ಎಲ್ಲಾ ಪಕ್ಕಾ ಮಾಡಿಕೊಂಡೇ ನಿರ್ದೇಶಕ ಪ್ರಶಾಂತ್ ನೀಲ್ ಅಖಾಡಕ್ಕೆ ಇಳಿದಿದ್ದಾರೆ. ಇಲ್ಲಿವೆರೆಗೆ ಯಶ್ ಮಾಡದ ಪಾತ್ರವನ್ನು ಕೊಟ್ಟು ಹೊಸ ಇತಿಹಾಸಕ್ಕೆ ಮುನ್ನುಡಿ ಬರೆದಿದ್ದಾರೆ. ಬರೀ ಯಶ್ ಸಿನಿ ಜರ್ನಿಗೆ ಮಾತ್ರ ಅಲ್ಲ, ಕನ್ನಡ ಚಿತ್ರರಂಗದಲ್ಲಿಯೇ ಇದು ನಯಾ ಯುಗ ಆರಂಭಿಸಲಿದೆ ಅನ್ನೋದ್ರಲ್ಲಿ ಅನುಮಾನವಿಲ್ಲ.

    ಯಶ್ ಇಂದು 32ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಆರಾಧ್ಯದೈವದ ಹುಟ್ಟುಹಬ್ಬವನ್ನು ಆಚರಿಸಲು ರಾತ್ರಿಯಿಂದಲೇ ಸಾವಿರಾರು ಅಭಿಮಾನಿಗಳು ಹೊಸಕೆರೆಹಳ್ಳಿಯಲ್ಲಿರುವ ಯಶ್ ಮನೆ ಮುಂದೆ ಜಮಾಯಿಸಿದ್ದರು. ದಾರಿ ಉದ್ದಕ್ಕೂ ಯಶ್‍ಗೆ ಶುಭಾಶಯ ಕೋರುವ ಕಟೌಟ್‍ಗಳು ರಾರಾಜಿಸುತ್ತಿವೆ. ಯಶ್ ಮನೆ ಸಂಪೂರ್ಣವಾಗಿ ಕಲರ್ ಕಲರ್ ಲೈಟ್‍ಗಳಿಂದ ಜಗಮಗಿಸುತ್ತಿದೆ. ಪೊಲೀಸ್ ಬಂದೋಬಸ್ತ್‍ನಲ್ಲಿ ಅಭಿಮಾನಿಗಳು ಯಶ್ ಕೈ ಕುಲುಕಿ ಸಂಭ್ರಮಪಟ್ಟಿದ್ದಾರೆ. ಕೇಕ್ ಕತ್ತರಿಸಿ ಸಿಹಿ ಹಂಚಿದ್ದಾರೆ.

    ಇದೇ ಸಮಯದಲ್ಲಿ ಹೊಂಬಾಳೆ ಪ್ರೊಡಕ್ಷನ್ ನಿರ್ಮಾಣದ ಕೆಜಿಎಫ್ ಟೀಸರ್ ರಿಲೀಸ್ ಮಾಡಲಾಯಿತು. ಪ್ರಶಾಂತ್ ನೀಲ್ ನಿರ್ದೇಶನದ ಈ ಸಿನಿಮಾ ಕಳೆದ ವರ್ಷ ಕೊನೆಯಲ್ಲಿ ಬಿಡುಗಡೆಯಾಗಬೇಕಿತ್ತು. ಆದರೆ ಈ ಸಿನಿಮಾದ ಎರಡು ಭಾಗ ಮೂರು ತಿಂಗಳ ಅಂತರದಲ್ಲಿ ಬಿಡುಗಡೆಯಾಗುತ್ತಿವೆ. ದೊಡ್ಡ ಕ್ಯಾನ್ವಾಸ್‍ನ ಕಥೆ ಬೇರೆ ಇದೆ. ಈ ಸಿನಿಮಾಕ್ಕೆ ಚಿನ್ನದ ಗಣಿ ಸೆಟ್ ಕೂಡ ಹಾಕಲಾಗಿದೆ. ಇದೆಲ್ಲಾ ಸೇರಿಕೊಂಡು ಇಷ್ಟು ತಡವಾಗಿದೆ. ಇನ್ನೇನು ಕೆಲವು ತಿಂಗಳಲ್ಲಿ ಕೆಜಿಎಫ್ ನಿಮ್ಮ ಮುಂದೆ ಹಾಜರಾಗಲಿದೆ.

    ರಾಕಿಂಗ್ ಸ್ಟಾರ್ ಯಶ್ ಇಂದು ಕೇವಲ ನಟನಾಗಿ ಮಾತ್ರ ಹೆಸರು ಮಾಡಿಲ್ಲ. ಯಶೋಮಾರ್ಗದ ಮೂಲಕ ಸಮಾಜ ಸೇವೆ ಮಾಡುತ್ತಿದ್ದಾರೆ. ಅದರಿಂದ ಸಾವಿರಾರು ಜನರಿಗೆ ನೆರವಿನ ಹಸ್ತ ಚಾಚಿದ್ದಾರೆ. ಅದರಲ್ಲೂ ರೈತರಿಗೆ ನೀರು ಕೊಡಿಸುವ ಪ್ರಯತ್ನಕ್ಕೆ ಹೊರಟಿದ್ದಾರೆ. ಇಂತಹ ಕನ್ನಡದ ಹುಡುಗ ಸದಾ ಇದೇ ರೀತಿ ಸಿನಿಮಾಗಳನ್ನು ಮಾಡುತ್ತಾ, ಜನರನ್ನು ರಂಜಿಸಲಿ ಎಂಬದು ಪಬ್ಲಿಕ್ ಟಿವಿಯ ಆಶಯವಾಗಿದೆ.

  • ಸ್ಯಾಂಡಲ್ ವುಡ್ ನ ಲಕ್ಕಿ ಸ್ಟಾರ್‍ಗೆ ಬರ್ತ್ ಡೇ ಸಂಭ್ರಮ- ರಾಕಿಂಗ್ ಸ್ಟಾರ್ ಹುಟ್ಟುಹಬ್ಬಕ್ಕೆ KGF ಟೀಸರ್ ರಿಲೀಸ್

    ಸ್ಯಾಂಡಲ್ ವುಡ್ ನ ಲಕ್ಕಿ ಸ್ಟಾರ್‍ಗೆ ಬರ್ತ್ ಡೇ ಸಂಭ್ರಮ- ರಾಕಿಂಗ್ ಸ್ಟಾರ್ ಹುಟ್ಟುಹಬ್ಬಕ್ಕೆ KGF ಟೀಸರ್ ರಿಲೀಸ್

    ಬೆಂಗಳೂರು: ಅಭಿಮಾನಿಗಳ ಮೊಗ್ಗಿನ ಮನಸ್ಸಿನ ಪ್ರೀತಿಯ ನಾಯಕ. ಉತ್ತಮ ಕೆಲಸ ಮಾಡುವ ಸಮಾಜ ಸೇವಕ. ಕಷ್ಟಪಟ್ಟು ಇಂಡಸ್ಟ್ರೀಯಲ್ಲಿ ರಾಕಿಂಗ್ ಸ್ಟಾರ್ ಆಗಿ ಗುರುತಿಸಿಕೊಂಡಿರುವ ಸಿನಿ ಪ್ರೇಕ್ಷಕರ ಆರಾಧಕ, ರಾಕಿಂಗ್ ಸ್ಟಾರ್ ಯಶ್‍ಗೆ ಇಂದು ಹುಟ್ಟುಹಬ್ಬದ ಸಂಭ್ರಮ.

    ಗಾಂಧಿನಗರದ ಪಾಲಿನ ಲಕ್ಕಿ ಸ್ಟಾರ್. ಅಭಿಮಾನಿಗಳ ಪಾಲಿನ ಪ್ರೀತಿಯ ರಾಕಿಂಗ್ ಸ್ಟಾರ್. ಯಶೋಮಾರ್ಗದ ಮೂಲಕ ಸಮಾಜ ಮುಖಿ ಕೆಲಸಗಳನ್ನು ಮಾಡಿ ಯಶಸ್ಸನ್ನುಗಳಿಸಿಕೊಂಡ ಜನಸೇವಕ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.

    ಯಶ್ ಹುಟ್ಟುಹಬ್ಬಕ್ಕೆ ನೆಚ್ಚಿನ ನಟನ ದರ್ಶನ ಪಡೆಯಲು ಬಂದಿದ್ದ ಅಭಿಮಾನಿಗಳು ಏನು ಕಮ್ಮಿ ಇರಲಿಲ್ಲ. ಈ ದಿನಕ್ಕೋಸ್ಕರ ಕಾದು ಕುಳಿತಿದ್ದ ಯಶ್ ಫ್ಯಾನ್ಸ್. ಭಾನುವಾರ ಸಂಜೆಯಿಂದಲ್ಲೇ ಕತ್ರಿಗುಪ್ಪೆ ನಿವಾಸದ ಬಳಿ ಜಮಾಯಿಸಿದ್ದರು. ರಾಜ್ಯದ ಮೂಲೆ ಮೂಲೆಯಿಂದ ಬಂದ ಅಭಿಮಾನಿಗಳು ಯಶ್‍ರನ್ನು ನೋಡಿ ಪ್ರೀತಿಯಿಂದ ವಿಶ್ ಮಾಡಿ, ಕೇಕ್ ಕತ್ತರಿಸಿ ಖುಷಿಪಟ್ಟರು.

    ಅಭಿಮಾನಿಗಳ ಅಭಿಮಾನದ ಜಾತ್ರೆ ನಡುವೆ, ಪ್ರೀತಿಯಿಂದ ಅಭಿಮಾನಿಗಳು ತಂದಿದ್ದ ಕೇಕ್‍ನ್ನು ಯಶ್ ಕಟ್ ಮಾಡಿದ್ದರು. ಅಷ್ಟೇ ಅಲ್ಲ ಸೆಲ್ಫಿಗೂ ಫೋಸ್ ಕೊಟ್ಟರು. ಸದ್ಯ ಪೋಸ್ಟರ್ ಮತ್ತು ಫೋಟೋಗಳ ಮೂಲಕ ಸಿಕ್ಕಾಪಟ್ಟೆ ಸದ್ದು ಮಾಡ್ತಿರುವ ಕೆ.ಜಿ.ಎಫ್ ಸಿನಿಮಾ ಬಿಡುಗಡೆಯನ್ನ ಯಶ್ ಎದುರು ನೋಡುತ್ತಿದ್ದಾರೆ.

    ಚಿತ್ರ ನಾಲ್ಕು ಭಾಷೆಗಳಲ್ಲಿ ಬಿಡುಗಡೆಗೆ ಸಜ್ಜಾಗಿದ್ದು, ಯಶ್ ಗೆ ಬರ್ತ್ ಡೇ ಗಿಫ್ಟ್ ಆಗಿ ಕೆಜಿಎಫ್ ಟೀಂ ಟೀಸರ್ ರೀಲಿಸ್ ಮಾಡಿದೆ. ಗಡ್ಡ ಬಿಟ್ಟು ಖೈದಿಯ ಲುಕ್ ನಲ್ಲಿ ಯಶ್ ಕಮಾಲ್ ಮಾಡುತ್ತಿದ್ದಾರೆ. ಅದೇನೆ ಇದ್ದರೂ ಹುಟ್ಟುಹಬ್ಬದ ಖುಷಿಯಲ್ಲಿರುವ ಯಶ್ ಮತ್ತು ಯಶ್ ಫ್ಯಾನ್ಸ್ ಮುಖದಲ್ಲಿನ ಮಂದಹಾಸ, ಸದಾ ಕಾಲ ಹೀಗೆ ಇರಲಿ ಎನ್ನುವುದು ಎಲ್ಲರ ಆಶಯ.