ಬೆಂಗಳೂರು: ನಟಿ ರಾಧಿಕಾ ಪಂಡಿತ್ ಮದುವೆ ಆದ ಬಳಿಕ ಅವರು ಅಭಿನಯಿಸಿದ್ದ ಯಾವುದೇ ಸಿನಿಮಾ ತೆರೆಕಾಣಲಿಲ್ಲ. ಆದರೆ ಇಂದು ರಾಧಿಕಾ ಅವರು ವೀಕೆಂಡ್ ಸ್ಪೆಷಲ್ ಆಗಿ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಲಿದ್ದಾರೆ.
ಹೌದು… ರಾಧಿಕಾ ಅವರು ಅಭಿನಯಿಸಿರುವ ‘ಆದಿಲಕ್ಷ್ಮಿ ಪುರಾಣ’ ಸಿನಿಮಾದ ಟೀಸರ್ ಇಂದು ಬಿಡುಗಡೆಯಾಗಲಿದೆ. ಈ ಬಗ್ಗೆ ರಾಧಿಕಾ ಅವರೇ ತಮ್ಮ ಇನ್ ಸ್ಟಾಗ್ರಾಂ ಮತ್ತು ಫೇಸ್ ಬುಕ್ ನಲ್ಲಿ ತಿಳಿಸಿದ್ದಾರೆ.
ರಾಧಿಕಾ ಅವರು ‘ಆದಿಲಕ್ಷ್ಮಿ ಪುರಾಣ’ ಸಿನಿಮಾದ ಪೋಸ್ಟರ್ ಹಾಕಿ, ಇಂದು ಸಂಜೆ 5 ಗಂಟೆಗೆ ಸಿನಿಮಾದ ಟೀಸರ್ ರಿಲೀಸ್ ಆಗುತ್ತದೆ ಎಂದು ತಿಳಿಸಿದ್ದಾರೆ. ಜೊತೆಗೆ ಇದು ವೀಕೆಂಡ್ ಸ್ಪೆಷಲ್ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.
ಮದುವೆ ಆದ ಬಳಿಕ ರಾಧಿಕಾ ಅವರ ಮೊದಲ ಸಿನಿಮಾ ಇದಾಗಿದ್ದು, ರಾಕ್ ಲೈನ್ ವೆಂಕಟೇಶ್ ನಿರ್ಮಾಣದಲ್ಲಿ ‘ಆದಿಲಕ್ಷ್ಮಿ ಪುರಾಣ’ ಸಿನಿಮಾ ಮೂಡಿ ಬರುತ್ತಿದೆ. ಈ ಸಿನಿಮಾದಲ್ಲಿ ರಂಗಿತಂರಂಗ ಖ್ಯಾತಿಯ ನಿರೂಪ್ ಭಂಡಾರಿಗೆ ನಾಯಕಿಯಾಗಿ ಸಿಂಡ್ರೆಲಾ ಕಾಣಿಸಿಕೊಳ್ಳಲಿದ್ದು, ನಿರೂಪ್ ಭಂಡಾರಿ ಮತ್ತು ರಾಧಿಕಾ ಪಂಡಿತ್ ಆದಿ ಮತ್ತು ಲಕ್ಷ್ಮಿಯರಾಗಿ ನಟಿಸಿದ್ದಾರೆ.
-ಕಂಸ-ಕೃಷ್ಣ ನಡುವಿನ ಧರ್ಮ-ಅಧರ್ಮದ ನಡುವಿನ ಕಾಳಗವೇ ಪೈಲ್ವಾನ್
-ಬಂದ ನೋಡಣ್ಣ ಪೈಲ್ವಾನ್
ಬೆಂಗಳೂರು: ಕಿಚ್ಚ ಸುದೀಪ್ ಅವರು ನಟಿಸಿದ ಬಹುನಿರೀಕ್ಷಿತ ‘ಪೈಲ್ವಾನ್’ ಚಿತ್ರದ ಟೀಸರ್ ಇಂದು 4.45ಗೆ ರಿಲೀಸ್ ಆಗಿದೆ. ಚಿತ್ರದ ಪೋಸ್ಟರ್ ಮೂಲಕವೇ ಹೆಚ್ಚು ಸದ್ದು ಮಾಡಿರುವ ಪೈಲ್ವಾನ್ ಚಿತ್ರದ ಟೀಸರ್ ರಿಲೀಸ್ ಆಗಿದ್ದು, ಟೀಸರ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಹಿನ್ನೆಲೆಯ ಧ್ವನಿಯಿ0ಂದ ಪ್ರಾರಂಭವಾಗುವ ಟೀಸರ್ ಇಬ್ಬರು ಪೈಲ್ವಾನ್ ರ ಕಥೆಯೊಂದಿಗೆ ಆರಂಭವಾಗುತ್ತದೆ. ಮೈಸೂರು ಅರಮನೆಯ ಗರಡಿ ಮನೆಯಿಂದ ಆರಂಭವಾಗುವ ದೃಶ್ಯಗಳು ಎರಡು ಜಟ್ಟಿಗಳು ಕುಸ್ತಿಗೆ ತಯಾರಾಗೋದನ್ನು ನಾವು ಕಾಣಬಹುದು. ಧರ್ಮದ ಪರವಾದ ಕೃಷ್ಣ ಪಾತ್ರದಲ್ಲಿ ಸುದೀಪ್ ಕಾಣಿಸಿದ್ದು, ಅಧರ್ಮದ ಕಂಸನ ವಿರುದ್ಧ ಹೋರಾಟವೇ ಚಿತ್ರದ ಕಥೆ ಎಂಬುದನ್ನು ಟೀಸರ್ ಹೇಳುತ್ತಿದೆ.
ಕಟ್ಟುಮಸ್ತಾದ ಕುಸ್ತಿಪಟುವಿನ ಪಾತ್ರದಲ್ಲಿ ಪೈಲ್ವಾನ್ ಚಿತ್ರದಲ್ಲಿ ಸುದೀಪ್ ಮೊದಲ ಬಾರಿಗೆ ಸಿಕ್ಸ್ ಪ್ಯಾಕ್ ಲುಕ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಇದುವರೆಗೂ ಯಾವ ಸಿನಿಮಾದಲ್ಲೂ ಸುದೀಪ್ ತಮ್ಮ ಶರ್ಟ್ ತೆಗೆದಿರಲಿಲ್ಲ. ಮೊದಲ ಬಾರಿಗೆ ಪೈಲ್ವಾನ್ ಚಿತ್ರಕ್ಕಾಗಿ ದೇಹವನ್ನು ಹುರಿಗೊಳಿಸಿಕೊಂಡಿರುವ ಕಿಚ್ಚನ ಹೊಸ ಲುಕ್‍ಗೆ ಅಭಿಮಾನಿಗಳು ಫಿದಾ ಆಗಿದ್ದರು. ರಣ ರಣ ಧೂಳಿನ ನಡುವೆ ಕುಸ್ತಿ ಅಖಾಡದಲ್ಲಿ ಸುದೀಪ್ ತೊಡೆ ತಟ್ಟಿದ್ದ ಒಂದು ಫೋಟೋ ಇದೊಂದು ಪಕ್ಕಾ ಮಾಸ್ ಸಿನಿಮಾ ಎಂಬುದನ್ನು ಸಾಬೀತು ಮಾಡಿತ್ತು.
ಗಜಕೇಸರಿ ಕೃಷ್ಣ ನಿರ್ದೇಶನದಲ್ಲಿ ಪೈಲ್ವಾನ್ ಮೂಡಿ ಬರುತ್ತಿದ್ದು, ಚಿತ್ರದ ಮೇಕಿಂಗ್ ನೋಡಿ ತೆಲುಗು, ತಮಿಳು, ಮಲೆಯಾಳಂ, ಪಂಜಾಬಿ, ಬೆಂಗಾಲಿ, ಮರಾಠಿ, ಭೋಜ್‍ಪುರಿ ವಿತರಕರು ಡಬ್ಬಿಂಗ್ ಮಾಡಲು ಮುಂದಾಗಿದ್ದಾರೆ. ಈಗಾಗಲೇ ಸುದೀಪ್ ಆಪ್ತ ರಿತೇಶ್ ದೇಶಮುಖ್ ಹಿಂದಿಯಲ್ಲಿ ಪೈಲ್ವಾನ್ ರಿಲೀಸ್ ಮಾಡಲು ಒಪ್ಪಿಕೊಂಡಿದ್ದಾರೆ. ಒಟ್ಟು 30ರಿಂದ 40 ಕೋಟಿ ರೂ. ಬಜೆಟ್ ನಲ್ಲಿ ಸಿನಿಮಾ ನಿರ್ಮಾಣವಾಗಿದೆ.
ಸಿನಿಮಾ ಸೆಟ್ಟೇರಿದಾಗಿನಿಂದಲೂ ಹಲವು ವಿಚಾರಗಳಿಂದಲೂ ಸುದ್ದಿಯಾಗುತ್ತಲೇ ಬಂದಿವೆ. ಶೂಟಿಂಗ್ ಸೆಟ್‍ನಲ್ಲಿ ಸುದೀಪ್ ಸಹ ಕಲಾವಿದರಿಂದ ತೆಗೆಸಿಕೊಂಡಿದ್ದ ಒಂದು ಫೋಟೋ ಸಿನಿಮಾದ ಬಗ್ಗೆ ಹಲವು ವಿಷಯಗಳನ್ನು ಹೊರಹಾಕಿತ್ತು. ಸುದೀಪ್ ಸೇರಿದಂತೆ ಇತರೆ ಕಲಾವಿದರು ಪೈಲ್ವಾನ್ ಪೋಸ್ ಕೊಟ್ಟಿದ್ದರೆ, ಹಿಂದೆ ಚಂದನವನದ ಹಳೆಯ ಸ್ಟಾರ್ ಗಳ ಫೋಟೋಗಳು ಕಂಡು ಬಂದಿದ್ದವು. ಇಲ್ಲಿ ಸುದೀಪ್ ಅಭಿಮಾನಿಯ ಪಾತ್ರದಲ್ಲಿ ಮಿಂಚಲಿದ್ದಾರೆ ಎಂಬ ವಿಚಾರ ಇದೂವರೆಗೂ ಹೊರ ಬಂದಿಲ್ಲ.
ಸಂಕ್ರಮಣಕ್ಕಾಗಿ ನಾಡಿನ ಜನತೆಯ ಮನ ಗೆಲ್ಲಲು ಅಖಾಡಕ್ಕೆ ಪೈಲ್ವಾನ್ ಎಂಟ್ರಿ ನೀಡಿದ್ದು, ನೋಡಿ ಎಂಜಾಯ್ ಮಾಡಿ.
A very happy Sankranthi to all u frnzz. Tnx for being in my life n thank u for being there for me. Wil do my best to keep ur faith in me intact. 🤗🤗✨#Pailwaanteaser Pailwaan | Pailwaan Kusthi Teaser Kannada Official 2019 | Kichcha Sudeep… https://t.co/jLtFcc5DDn via @YouTube
ಬೆಂಗಳೂರು: ಸ್ಯಾಂಡಲ್‍ವುಡ್ ಸ್ಟಾರ್ ನಟ ಕಿಚ್ಚ ಸುದೀಪ್ ಬೆಳ್ಳಂಬೆಳಗ್ಗೆ ತಮ್ಮ ಅಭಿಮಾನಿಗಳಿಗೆ ಟ್ವಿಟ್ಟರ್ ಮೂಲಕ ತಮ್ಮ ಬಹುನಿರೀಕ್ಷಿತ ಸಿನಿಮಾ ಪೈಲ್ವಾನ್ ಕುರಿತು ಸಿಹಿ ಸುದ್ದಿ ನೀಡಿದ್ದಾರೆ.
ಹೌದು, ಸುದೀಪ್ ಅಭಿನಯದ ಪೈಲ್ವಾನ್ ಚಿತ್ರ ಸ್ಯಾಂಡಲ್‍ವುಡ್‍ನಲ್ಲಿ ಹೊಸ ಕ್ರೇಜ್ ಹುಟ್ಟಿಸಿದೆ. ತನ್ನ ಮೊದಲ ಪೋಸ್ಟರ್ ಮೂಲಕವೇ ಸುದ್ದಿಯಲ್ಲಿದ್ದ ಪೈಲ್ವಾನ್ ಚಿತ್ರದ ಕುರಿತು ಈಗ ಕಿಚ್ಚ ಟ್ವೀಟ್ ಮಾಡಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ಹೇಳಿದ್ದಾರೆ.
ಪೋಸ್ಟ್‍ನಲ್ಲಿ, ಪೈಲ್ವಾನ್ ಚಿತ್ರದ ಮೊದಲ ಟೀಸರ್ ಕುರಿತು ತಿಳಿಸಲು ತುಂಬ ಖುಷಿಯಾಗುತ್ತಿದೆ. ಕನ್ನಡದಲ್ಲಿ ಮೂಡಿ ಬರುತ್ತಿರೋ ಪೈಲ್ವಾನ್ ಚಿತ್ರದ ಮೊದಲ ಟೀಸರ್ ಜನವರಿ 15ರಂದು ಸಂಜೆ 4.45ಕ್ಕೆ ಬಿಡುಗಡೆಯಾಗಲಿದೆ. ಪೈಲ್ವಾನ್‍ನ ಜಗತ್ತು ಹೇಗಿರುತ್ತೆ ಅಂತ ನೋಡಿ. ಪೈಲ್ವಾನ್ ಚಿತ್ರ ತಂಡಕ್ಕೆ ನಾನು ಶುಭಾಷಯ ತಿಳಿಸುತ್ತೇನೆ ಎಂದು ಚಿತ್ರದ ನಿರ್ದೇಶಕ ಗಜಕೇಸರಿ ಕೃಷ್ಣ, ಅರ್ಜುನ್ ಜನ್ಯ ಹಾಗೂ ಚಿತ್ರದ ಇತರೇ ಸದಸ್ಯರಿಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ.
ಕಟ್ಟುಮಸ್ತಾದ ಕುಸ್ತಿಪಟುವಿನ ಪಾತ್ರದಲ್ಲಿ ಪೈಲ್ವಾನ್ ಚಿತ್ರದಲ್ಲಿ ಸುದೀಪ್ ಮೊದಲ ಬಾರಿಗೆ ಸಿಕ್ಸ್ ಪ್ಯಾಕ್ ಲುಕ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಇದುವರೆಗೂ ಯಾವ ಸಿನಿಮಾದಲ್ಲೂ ಸುದೀಪ್ ತಮ್ಮ ಶರ್ಟ್ ತೆಗೆದಿರಲಿಲ್ಲ. ಮೊದಲ ಬಾರಿಗೆ ಪೈಲ್ವಾನ ಚಿತ್ರಕ್ಕಾಗಿ ದೇಹವನ್ನು ಹುರಿಗೊಳಿಸಿಕೊಂಡಿರುವ ಕಿಚ್ಚನ ಹೊಸ ಲುಕ್‍ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಗಜಕೇಸರಿ ಕೃಷ್ಣ ನಿರ್ದೇಶನದಲ್ಲಿ ಪೈಲ್ವಾನ್ ಮೂಡಿ ಬರುತ್ತಿದ್ದು, ಚಿತ್ರದ ಮೇಕಿಂಗ್ ನೋಡಿ ತೆಲುಗು, ತಮಿಳು, ಮಲೆಯಾಳಂ, ಪಂಜಾಬಿ, ಬೆಂಗಾಲಿ, ಮರಾಠಿ, ಭೋಜ್‍ಪುರಿ ವಿತರಕರು ಡಬ್ಬಿಂಗ್ ಮಾಡಲು ಮುಂದಾಗಿದ್ದಾರೆ. ಈಗಾಗಲೇ ಸುದೀಪ್ ಅಪ್ತ ರಿತೇಶ್ ದೇಶಮುಖ್ ಹಿಂದಿಯಲ್ಲಿ ಪೈಲ್ವಾನ್ ರಿಲೀಸ್ ಮಾಡಲು ಒಪ್ಪಿಕೊಂಡಿದ್ದಾರಂತೆ. ಒಟ್ಟು 30ರಿಂದ 40 ಕೋಟಿ ರೂ. ಬಜೆಟ್ ನಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ.
ಮೊದಲ ಪೋಸ್ಟರ್ ಮೂಲಕವೇ ಕ್ರೇಜ್ ಹುಟ್ಟಿಸಿದ್ದ ಪೈಲ್ವಾನ್ ಚಿತ್ರ, ಈಗ ಮೊದಲ ಟೀಸರ್ ಮೂಲಕ ಧೂಳೆಬ್ಬಿಸಲು ಸಜ್ಜಾಗಿದೆ. ಬೆಳ್ಳಂಬೆಳಗ್ಗೆ ಕಿಚ್ಚನ ಕೊಟ್ಟ ಸಿಹಿ ಸುದ್ದಿಗೆ ಅಭಿಮಾನಿಗಳಿಂದ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ.
Happy to announce the 1st official teaser, Kannada version to be released on Jan 15th at 4.45pm. Have a sneak peek into the world of #Pailwaan My best wshs to th entire team.@krisshdop@iswapnakrishna @ArjunjanyaAJ #PailwaanTeaserOn15th 🤗💫✨
ಬೆಂಗಳೂರು: ‘ದಿ ವಿಲನ್’ ಸಿನಿಮಾ ಚಿತ್ರತಂಡ ಸೋಮವಾರ ಸಂಜೆ 7 ಗಂಟೆಗೆ ಟೀಸರ್ ಬಿಡುಗಡೆ ಮಾಡಿದ್ದು, ಇದೀಗ ಯೂ ಟ್ಯೂಬ್ ನಲ್ಲಿ ನಂಬರ್ 1 ಟ್ರೆಂಡಿಂಗ್ ವಿಡಿಯೋವಾಗಿದೆ. ಟೀಸರ್ ಬಿಡುಗಡೆ ಸುದ್ದಿಗೋಷ್ಟಿಯಲ್ಲಿ `ಸಿನಿಮಾವನ್ನು ಸಿನಿಮಾದಂತೆ ನೋಡಿ’ ಎಂದು ಹೇಳುವ ಮೂಲಕ ಶಿವಣ್ಣ ಅವರು ಅಭಿಮಾನಿಗಳಿಗೆ ಖಡಕ್ ವಾರ್ನಿಂಗ್ ಮಾಡಿದ್ದಾರೆ.
ದಿ ವಿಲನ್ ಸಿನಿಮಾದ ಬಿಡುಗಡೆಗೆ ದಿನಗಣನೇ ಶುರುವಾಗಿದ್ದು, ರಿಲೀಸ್ ಮುನ್ನ ಚಿತ್ರತಂಡ ಸಿನಿಮಾದ ನಾಲ್ಕು ಟೀಸರ್‌ಗಳನ್ನು ನಿದೇರ್ಶಕ ಪ್ರೇಮ್ ಅವರು ಬಿಡುಗಡೆ ಮಾಡಿದ್ದಾರೆ. ಇದೀಗ ಈ ವಿಡಿಯೋ ಯೂಟ್ಯೂಬ್ ನಲ್ಲಿ ಸಖತ್ ಮಿಂಚುತ್ತಿದೆ.
ಹ್ಯಾಟ್ರಿಕ್ ಹೀರೋ ಶಿವಣ್ಣ ಮತ್ತು ಕಿಚ್ಚ ಸುದೀಪ್ ಅಭಿನಯದ ದಿ-ವಿಲನ್ ಸಿನಿಮಾದ ಟೀಸರ್ ಅನ್ನು ಬಿಡುಗಡೆ ಮಾಡುತ್ತಿದ್ದಂತೆ 8 ಲಕ್ಷದ 50 ಸಾವಿರಕ್ಕೂ ಅಧಿಕ ಹಿಟ್ಸ್ ಪಡೆದುಕೊಂಡಿದೆ. ಈ ವಿಡಿಯೋದಲ್ಲಿ ಶಿವಣ್ಣ ಅವರ ಡೈಲಾಗ್‍ಗಳಿಗೆ ಈಗಾಗಲೇ ಅಭಿಮಾನಿಗಳು ಫಿದಾ ಆಗಿದ್ದಾರೆ. ಅಷ್ಟೇ ಅಲ್ಲದೇ ದಿ ವಿಲನ್ ಸಿನಿಮಾದಲ್ಲಿ ಶಿವಣ್ಣ ಅವರ ಅಭಿನಯಕ್ಕೆ ಅಭಿಮಾನಿಗಳು ಮೆಚ್ಚುಗೆಯನ್ನು ಸೂಚಿಸಿದ್ದಾರೆ. ಸುದೀಪ್ ಅವರು ದಿ ವಿಲನ್ ಅಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರತಂಡ ಸಿನಿಮಾದ ಟೀಸರ್ ಅನ್ನು ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳಲ್ಲಿ ಕುತೂಹಲವನ್ನು ಮೂಡಿಸಿದೆ. ಅಕ್ಟೋಬರ್ 18 ರಂದು ದಿ ವಿಲನ್ ಸಿನಿಮಾ ತೆರೆ ಮೇಲೆ ಮಿಂಚಲು ಸಜ್ಜಾಗಿದೆ.
ಶಿವಣ್ಣ ವಾರ್ನಿಂಗ್:
ಸೋಮವಾರ ನಡೆದ ದಿ ವಿಲನ್ ಸಿನಿಮಾ ಸುದ್ದಿಗೋಷ್ಟಿಯಲ್ಲಿ ಅಭಿಮಾನಿಗಳಿಗೆ ಶಿವಣ್ಣ ಅವರು ವಾರ್ನಿಂಗ್ ಮಾಡಿದ್ದು, ಈ ತಿಂಗಳು 18 ಕ್ಕೆ ‘ದಿ ವಿಲನ್’ ಸಿನಿಮಾ ಬಿಡುಗಡೆಯಾಗುತ್ತಿರುವ ಹಿನ್ನೆಲೆ ಸಿನಿಮಾವನ್ನ ಸಿನಿಮಾ ಥರ ನೋಡಿ. ನಾವು ಇಂಡಸ್ಟ್ರಿಯಲ್ಲಿ ಎಲ್ಲರೂ ಒಂದೇ. ನಾನು ಸುದೀಪ್ ಇಬ್ಬರೂ ಒಟ್ಟಿಗೆ ಅಭಿನಯಿಸಿದ್ದೇವೆ. ನಾವು ಹೆಚ್ಚು ಅವರು ಕಮ್ಮಿ ಅಂತ ಜಗಳ ತೆಗೆಯಬೇಡಿ. ಅಭಿಮಾನಿಗಳಿಗೆ ಹೇಳುತ್ತಿದ್ದೇನೆ, ಯಾವುದೇ ಕಾರಣಕ್ಕೂ ಗಲಾಟೆಗೆ ಅವಕಾಶ ಕೊಡಬೇಡಿ. ನಾವು ಆ ಗಲಾಟೆ ಈ ಗಲಾಟೆ ಅಂತ ಸುದ್ದಿಗಳನ್ನು ಕೇಳಿ ಕೇಳಿ ರೋಸಿ ಹೋಗಿದ್ದೇವೆ. ಥಿಯೇಟರ್‌ಗೆ ಹೋಗಿ ನಿಮ್ಮ ಜೊತೆ ನಾನೇ ಬರುತ್ತೇನೆ ಸಿನಿಮಾವನ್ನ ಸಿನಿಮಾ ರೀತಿ ನೋಡಿ ಎಂದು ಖಡಕ್ ಸೂಚನೆ ನೀಡಿದರು.
ಕರಿಯ, ಎಕ್ಸ್ ಕ್ಯೂಸ್ ಮಿ, ಜೋಗಿ ಸಿಸಿಮಾಗಳಂತಹ ಸೂಪರ್ ಡೂಪರ್ ಹಿಟ್ ಕೊಟ್ಟಂತ ನಿರ್ದೇಶಕ ಪ್ರೇಮ್, ಶಿವಣ್ಣ ಹಾಗೂ ಕಿಚ್ಚ ಸುದೀಪ್‍ರನ್ನು ಹಾಕಿಕೊಂಡು ದಿ ವಿಲನ್ ಸಿನಿಮಾವನ್ನು ಮಾಡಿದ್ದು, ಜನರಲ್ಲಿ ಕುತೂಹಲದ ಮಳೆಯನ್ನೇ ಸುರಿಸುತ್ತಿತ್ತು. ದಿ ವಿಲನ್ ಸಿನಿಮಾಕ್ಕೆ ಜೋಗಿ ಪ್ರೇಮ್ ಆಕ್ಷನ್ ಕಟ್ ಹೇಳಿದ್ದು, ಸಿ.ಆರ್ ಮನೋಹರ್ ನಿರ್ಮಾಣ ಮಾಡಿದ್ದಾರೆ. ಸುದೀಪ್, ಶಿವಣ್ಣ, ಆಮಿ ಜಾಕ್ಸನ್ ಜೊತೆಯಲ್ಲಿ ಮಿಥುನ್ ಚಕ್ರವರ್ತಿ, ಶ್ರೀಕಾಂತ್ ಸೇರಿದಂತೆ ಹಲವರು ಸಿನಿಮಾದಲ್ಲಿ ಅಭಿನಯಿಸಿದ್ದಾರೆ.
ಮುಂಬೈ: ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಅಭಿನಯದ ಭಾರತ್ ಸಿನಿಮಾದ ಟೀಸರ್ ಅನ್ನು ಸ್ವಾಂತತ್ರ್ಯೋತ್ಸವ ದಿನದಂದೇ ಬಿಡುಗಡೆ ಮಾಡಲಾಗಿದೆ.
ಭಾರತ್ ಸಿನಿಮಾವು ಬಾಲಿವುಡ್‍ನ ಖ್ಯಾತ ನಿರ್ದೇಶಕರಾದ ಅಲಿ ಅಬ್ಬಾಸ್ ಜಾಫರ್ ನೇತೃತ್ವದಲ್ಲಿ ನಿರ್ಮಾಣಗೊಳ್ಳುತ್ತಿದ್ದು, ಚಿತ್ರದಲ್ಲಿ ಸಲ್ಮಾನ್ ಖಾನ್‍ರವರು ಮಾತೃ ದೇಶವನ್ನು ಹುಡುಕುತ್ತಾ ಪ್ರಯಾಣಿಸುವ ವ್ಯಕ್ತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಭಾರತ್ ಸಿನಿಮಾವು 2019ರ ಈದ್ ನಂದು ಬಿಡುಗಡೆಗೊಳ್ಳಲಿದೆ ಎಂದು ತಿಳಿದು ಬಂದಿದೆ.
ಖುದ್ದು ಸಲ್ಮಾನ್ ಖಾನ್‍ರವರು ಇಂದು ಭಾರತ್ ಸಿನಿಮಾದ ಟೀಸರ್ ಬಿಡುಗಡೆ ಮಾಡಿ, ತಮ್ಮ ಟ್ವಿಟ್ಟರ್ ನಲ್ಲಿ, ಕೆಲವು ಸಂಬಂಧಗಳು ರಕ್ತದಿಂದ ಬಂದಿದ್ದರೆ, ಇನ್ನೂ ಕೆಲವು ಮಣ್ಣಿನಿಂದ ಬಂದಿರುತ್ತವೆ, ಆದರೆ ನಾನೂ ಎರಡನ್ನೂ ಹೊಂದಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಭಾರತ್ ಸಿನಿಮಾದಲ್ಲಿ, ಮಾಜಿ ವಿಶ್ವಸುಂದರಿ ಕತ್ರಿನಾ ಕೈಫ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ದಿಶಾ ಪಟನಿ, ಸುನಿಲ್ ಗ್ರೋವರ್, ಆಸಿಫ್ ಶೇಕ್ ಮತ್ತು ಟಬೂ ಸಹ ಅಭಿನಯಿಸಿದ್ದಾರೆ. ಚಿತ್ರ ದಕ್ಷಿಣಯ ಕೊರಿಯಾದ ಒಡೇ ಟು ಮೈ ಫಾದರ್ ಚಿತ್ರದ ರಿಮೇಕ್ ಆಗಿದೆ. ಚಿತ್ರದಲ್ಲಿ 1940 ರಲ್ಲಿ ಭಾರತ ವಿಭಜನೆಯಲ್ಲಿ ನಡೆದ ಘಟನೆಯನ್ನು ಆಧರಿಸಿದ್ದು, 70ರ ದಶಕದ ಶೈಲಿಯಲ್ಲಿ ಚಿತ್ರ ತಯಾರಾಗುತ್ತಿದೆ ಎಂದು ಹೇಳಲಾಗಿದೆ.
ಸಲ್ಮಾನ್ ಖಾನ್ ಜೊತೆ ಮೂರನೇ ಬಾರಿ ಜಾಫರ್ ಚಿತ್ರಕ್ಕೆ ಕೈಜೋಡಿಸಿದ್ದು, ಈ ಮೊದಲು ಬಾಲಿವುಡ್‍ನಲ್ಲಿ ಸದ್ದು ಮಾಡಿದ್ದ ಸುಲ್ತಾನ್ ಹಾಗೂ ಟೈಗರ್ ಜಿಂದಾ ಹೈ ಚಿತ್ರದಲ್ಲಿ ಅಭಿನಯಿಸಿದ್ದರು.
ರಾಮನಗರ: ಬಹುನಿರೀಕ್ಷಿತ ಸ್ಯಾಂಡಲ್‍ವುಡ್‍ನ ಚಿತ್ರ ಸೀತಾರಾಮ ಕಲ್ಯಾಣ ಚಿತ್ರದ ಟೀಸರ್ ಮಂಗಳವಾರ ರಾಮನಗರದಲ್ಲಿ ನಾಡದೇವತೆ ಚಾಮುಂಡೇಶ್ವರಿ ಕರಗ ಮಹೋತ್ಸವದಲ್ಲಿ ಸಿಎಂ ಎಚ್.ಡಿ ಕುಮಾರಸ್ವಾಮಿಯವರು ಬಿಡುಗಡೆ ಮಾಡಿದರು.
ಈ ಟೀಸರ್ ನಲ್ಲಿ ಬರೀ ಆ್ಯಕ್ಷನ್ ಸೀನ್‍ಗಳೇ ಇದ್ದು, ಆ್ಯಕ್ಷನ್ ಸೀನ್ ಇಷ್ಟಪಡುವ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡಲಿದೆ ಎಂಬುದನ್ನು ಸಿನಿಮಾ ಟೀಸರ್ ಸಾಬೀತು ಮಾಡುತ್ತಿದೆ. ಈ ಟೀಸರ್ ಬಿಡುಗಡೆಯಾದ ಒಂದೇ ದಿನದಲ್ಲಿ 2ಲಕ್ಷಕ್ಕೂ ಹೆಚ್ಚು ವ್ಯೂ ಪಡೆದಿದ್ದು, ಯೂಟ್ಯೂಬ್‍ನಲ್ಲಿ ಟಾಪ್ 1 ಟ್ರೆಂಡಿಂಗ್‍ನಲ್ಲಿದೆ.
ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಸಿಎಂ ಎಚ್.ಡಿ ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ, ಶಾಸಕ ಮುನಿರತ್ನ, ನಿರ್ದೇಶಕ ಹರ್ಷ, ನಟ ನಿಖಿಲ್ ಕುಮಾರ್, ನಟಿ ರಚಿತಾ ರಾಮ್, ಹಾಸ್ಯನಟ ಚಿಕ್ಕಣ್ಣ, ಲಹರಿ ಮ್ಯೂಸಿಕ್‍ನ ವೇಲು ಜೊತೆಗೆ ಸೀತಾರಾಮ ಕಲ್ಯಾಣ ಚಿತ್ರತಂಡ ಕಾರ್ಯಕ್ರಮದಲ್ಲಿ ಭಾಗಿಯಾಗಿತ್ತು.
ಇದೇ ವೇಳೆ ಮಾತನಾಡಿದ ಸಿಎಂ ಎಚ್.ಡಿ ಕುಮಾರಸ್ವಾಮಿಯವರು ನಮ್ಮ ಕುಟುಂಬದವರೆಲ್ಲರೂ ರಾಜಕೀಯ ರಂಗದಲ್ಲೇ ಇದ್ದೇವೆ. ಆದರೆ ನನ್ನ ಮಗ ನಿಖಿಲ್‍ನ ಒಲವು ಸಿನಿಮಾ ರಂಗದ ಮೇಲಿದೆ. ಕುರುಕ್ಷೇತ್ರದಲ್ಲಿ ನಿಖಿಲ್ ಅದ್ಭುತವಾಗಿ ಅಭಿನಯ ಮಾಡಿದ್ದಾನೆ. ಯುದ್ಧದ ಸನ್ನಿವೇಶದಲ್ಲಿ ಅದ್ಭುತವಾಗಿ ಅಭಿನಯಿಸಿ ಅಭಿಮನ್ಯು ಪಾತ್ರಕ್ಕೆ ನ್ಯಾಯ ಒದಗಿಸಿದ್ದಾನೆ. ಈ ಚಿತ್ರದಲ್ಲೂ ಕೂಡಾ ಉತ್ತಮವಾಗಿ ನಿಖಿಲ್ ಅಭಿನಯಿಸಿದ್ದಾನೆ ಎಂದು ತಿಳಿಸಿದ್ದರು.
ರಾಜಕೀಯವಾಗಿ ವಿರೋಧಿಗಳು ಅಸೂಯೆಯಿಂದ ಮೂರ್ನಾಲ್ಕು ಜಿಲ್ಲೆಯ ಸಿಎಂ ಎಂದು ಲೇವಡಿ ಮಾಡ್ತಾರೆ. ಆದರೆ ನಾನು ಅಖಂಡ ಕರ್ನಾಟಕದ ಸಿಎಂ, ನನ್ನನ್ನ ಈ ಮಟ್ಟಕ್ಕೆ ಬೆಳೆಸಿದವರು, ನನಗೋಸ್ಕರ ದುಡಿಮೆ ಮಾಡಿದವರು ರಾಮನಗರದವರು ಎಂದು ತಿಳಿಸಿದರು. ಅಲ್ಲದೇ ಉತ್ತರ ಕರ್ನಾಟಕದ ಸಮಸ್ಯೆಗಳನ್ನು ಅರಿಯಲು ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಎರಡೆರಡು ದಿನಗಳ ವಾಸ್ತವ್ಯ ಹೂಡುತ್ತೇನೆ. ರಾಜ್ಯದ ರಾಜಕೀಯ ಸ್ಥಿರವಾದ ಬಳಿಕ ರಾಮನಗರದ ಪ್ರತಿಹಳ್ಳಿಗೂ ಸಹ ಬರುತ್ತೇನೆ ಎಂದು ತಿಳಿಸಿದರು.
ಹೈದರಾಬಾದ್: ಕಿರಿಕ್ ಪಾರ್ಟಿಯಲ್ಲಿ ಸಿನಿಮಾದಲ್ಲಿ ಟೀಚರ್ ಆಗಿ ಕನ್ನಡಿಗರ ಮನಗೆದ್ದ ರಶ್ಮಿಕಾ ಮಂದಣ್ಣ ನಟನೆಯ ತೆಲುಗು ಸಿನಿಮಾ `ಗೀತಾ ಗೋವಿಂದಂ’ ಟೀಸರ್ ರಿಲೀಸ್ ಆಗಿದೆ. ಸಿನಿಮಾದ ಟೀಸರ್ ಬಿಡುಗಡೆಯಾದ 7 ಗಂಟೆಯಲ್ಲಿ 14 ಲಕ್ಷ ವ್ಯೂ ಆಗಿದ್ದು, ನಂ.1 ಟ್ರೆಂಡಿಂಗ್ ನಲ್ಲಿದೆ. ಕನ್ನಡದ ವರನಟ ರಾಜ್ ಕುಮಾರ್ ಅವರ ಎಂದೆಂದೂ ನಿನ್ನನು ಮರೆತು ನಾನಿರಲಾರೆ… ಹಾಡಿನ ತೆಲುಗು ಟ್ಯೂನ್ ನೊಂದಿಗೆ ಟೀಸರ್ ಆರಂಭವಾಗುತ್ತದೆ.
ಬ್ಲಾಕ್ ಆಂಡ್ ವೈಟ್ ದೃಶ್ಯಗಳಿಂದ ಆರಂಭವಾಗುವ ದೃಶ್ಯಗಳಲ್ಲಿ ರಶ್ಮಿಕಾ ಮಂದಣ್ಣ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ರಶ್ಮಿಕಾ ಅವರಿಗೆ ಜೋಡಿಯಾಗಿರುವ ನಟ ವಿಜಯ್ ದೇವರಕೊಂಡ ಜೋಡಿ ಅಭಿಮಾನಿಗಳಿಗೆ ಇಷ್ಟವಾಗುತ್ತದೆ. ಅಪ್ಪಟ ಹಳ್ಳಿ ಯುವತಿಯ ದೃಶ್ಯದಲ್ಲಿ ಪತಿ, ಪತ್ನಿಯ ಪ್ರಣಯದ ದೃಶ್ಯಗಳು ಮೂಡಿ ಬಂದಿದೆ. ಆದರೆ ಮರುಕ್ಷಣದಲ್ಲಿ ಇದು ಹೀರೋ ಕನಸು ಮಾತ್ರ ಎಂಬುದನ್ನು ರಿವೀಲ್ ಮಾಡಲಾಗಿದೆ. ಇದರೊಂದಿಗೆ ರಶ್ಮಿಕಾ ಮಂದಣ್ಣ ಹೀರೋಗೆ ನೀಡುವ ಖಡಕ್ ವಾರ್ನಿಂಗ್ ನೋಡುಗರಿಗೆ ಇಷ್ಟವಾದರೆ, ಚಿತ್ರದ ನಾಯಕ ತನ್ನ ಪ್ರೇಯಸಿಯನ್ನು ಗೆಲ್ಲಲು ಪಡುವ ಪ್ರಯತ್ನ ನಗು ಮೂಡಿಸುತ್ತದೆ.
ರೊಮ್ಯಾಂಟಿಕ್, ಕಾಮಿಡಿ ಎಳೆಯೊಂದಿಗೆ ಯುವ ಮನಸ್ಸುಗಳ ಪ್ರೇಮ ಕಥೆಯನ್ನು ಚಿತ್ರ ಹೊಂದಿದೆ. ಮೇಡಂ ಮೇಡಂ ಎಂದು ರಶ್ಮಿಕಾ ಹಿಂದೆ ಸುತ್ತುವ ಪಾತ್ರದಲ್ಲಿ ವಿಜಯ್ ದೇವರಕೊಂಡ ಗಮನಸೆಳೆದರೆ, ಖಡಕ್ ಹುಡುಗಿಯ ಪಾತ್ರದಲ್ಲಿ ರಶ್ಮಿಕಾ ಮಿಂಚಿದ್ದಾರೆ. ಟಾಲಿವುಡ್ ನಲ್ಲಿ ಸಾಕಷ್ಟು ಅವಕಾಶ ಪಡೆದಿರುವ ರಶ್ಮಿಕಾ ಮಂದಣ್ಣ ಅವರಿಗೆ ಇದು ತೆಲುಗಿನ 2ನೇ ಸಿನಿಮಾ ಆಗಿದೆ. ಈ ಹಿಂದೆ ರಶ್ಮಿಕಾ ತೆಲುಗಿನ ಚಲೋ ಸಿನಿಮಾದ ಮೂಲಕ ಟಾಲಿವುಡ್ ನಲ್ಲಿ ಹೆಚ್ಚಿನ ಅಭಿಮಾನಿಗಳನ್ನು ಗಳಿಸಿದ್ದರು. ಜೊತೆಗೆ ಗಣೇಶ್ ಜೊತೆ ಚಮಕ್ ಚಿತ್ರದಲ್ಲೂ ಕಾಣಿಸಿಕೊಂಡಿದ್ದರು.
ಚಿತ್ರ ಪರಶುರಾಮ್ ನಿರ್ದೇಶನದಲ್ಲಿ ಮೂಡಿಬಂದಿದ್ದು, ಗೋಪಿ ಸುಂದರ್ ಸಂಗೀತ ನೀಡಿದ್ದಾರೆ. ಟೀಸರ್ ಮೂಲಕವೇ ಸಿನಿಮಾ ಸೂಪರ್ ಹಿಟ್ ಆಗುವ ಭರವಸೆ ಮೂಡಿಸಿದ್ದು, ಚಿತ್ರದ ಆಡಿಯೋ ಜುಲೈ 29ರಂದು ರಿಲೀಸ್ ಆಗಲಿದೆ.
ಬೆಂಗಳೂರು: 28ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಯೋಗಿ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ.
ಕುಟುಂಬದವರು ಮತ್ತು ಅಭಿಮಾನಿಗಳ ಜೊತೆ ಕೇಕ್ ಕತ್ತರಿಸಿ ಹುಟ್ಟು ಹಬ್ಬ ಆಚರಣೆ ಮಾಡಿದ ಯೋಗಿ ತಮ್ಮ ಹೆಸರನ್ನು ಯೋಗಿ ಪಲ್ಗುಣ್ ಎಂದು ಬದಲಾಯಿಸಿಕೊಂಡಿದ್ದಾರೆ.
ಲೂಸ್ ಮಾದ ಯೋಗಿ ಇನ್ನು ಮುಂದೆ ಸ್ಯಾಂಡಲ್‍ವುಡ್ ನ ಯೋಗಿ ಪಲ್ಗುಣ್ ಎಂದು ಕರೆಸಿಕೊಳ್ಳಲಿದ್ದಾರೆ. ಸಂಖ್ಯಾಶಾಸ್ತ್ರದ ಪ್ರಕಾರ ಈ ಹೆಸರು ಅದೃಷ್ಟ ತರುತ್ತದೆ ಎನ್ನುವ ಕಾರಣಕ್ಕಾಗಿ ಯೋಗಿ ಈ ಹೆಸರನ್ನು ಬದಲಾಯಿಸಿದ್ದಾರೆ ಎನ್ನಲಾಗಿದೆ.
ಯೋಗಿ ಹೊಸ ಹೆಸರು ಗಾಂಧೀನಗರದಲ್ಲಿ ಮತ್ತೆ ಲಕ್ ಬದಲಿಸುತ್ತಾ ಎಂಬುದು ನೋಡಬೇಕಿದೆ. ಸದ್ಯ ಯೋಗಿ ಹುಟ್ಟುಹಬ್ಬದ ಗಿಫ್ಟ್ ಆಗಿ ‘ಲಂಬೋದರ’ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಯೋಗಿ ಸ್ಕೂಲ್ ಹುಡುಗನಾಗಿ ಪೋಲಿ ಪಾತ್ರದಲ್ಲಿ ಕಾಣಿಸಿಕೊಂಡು ಕಮಾಲ್ ಮಾಡಲು ರೆಡಿಯಾಗಿದ್ದಾರೆ.
ಮುಂಬೈ: ಗೂಗಲ್ ಗರ್ಲ್, ಪಡ್ಡೆ ಹುಡುಗರ ರಾಣಿ ಸನ್ನಿ ಲಿಯೋನ್ ಜೀವನಾಧರಿತ ವೆಬ್ ಸಿರೀಸ್ ಕರೆನ್ಜಿತ್ ಕೌರ್ ಟೀಸರ್ ಬಿಡುಗಡೆ ಆಗಿದೆ.
ವೆಬ್ ಸಿರೀಸ್ ಟೀಸರ್‍ನ್ನು ಸನ್ನಿ ಲಿಯೋನ್ ತಮ್ಮ ಟ್ವಿಟ್ಟರ್‍ನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ತಾನೇಕೆ ಪೋರ್ನ್ ಸ್ಟಾರ್ ಆದೆ ಎಂಬುವುದನ್ನು ಆತ್ಮಕಥೆಯಲ್ಲಿ ಹೇಳುತ್ತೇನೆ. ಹಲವು ರಹಸ್ಯ ವಿಚಾರಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳಲಿದ್ದೇನೆ ಎಂದು ಸನ್ನಿ ಲಿಯೋನ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಸನ್ನಿಯ ಜೀವನ ಕಥೆಯ ಕುರಿತು ಬಾಲಿವುಡ್‍ನಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಇದನ್ನೂ ಓದಿ:ತಾನೇಕೆ ಪೋರ್ನ್ ಸ್ಟಾರ್ ಆದೆ, ಬಾಲಿವುಡ್ ಗೆ ಬಂದಿದ್ದು ಹೇಗೆ ಎಂಬ ರಹಸ್ಯ ರಿವೀಲ್ ಮಾಡಲಿದ್ದಾರೆ ಸನ್ನಿ ಲಿಯೋನ್
ಇಂದು ಟೀಸರ್ ಬಿಡುಗಡೆಗೊಂಡಿದ್ದು, 40 ಸೆಕೆಂಡ್ ಅವಧಿಯ ಈ ವಿಡಿಯೋ ಬಯೋಪಿಕ್ ಸುಳಿವು ನೀಡುತ್ತಿದೆ. ಟೀಸರ್‍ನಲ್ಲಿ ಮೊದಲಿಗೆ ಸನ್ನಿಯ ಬಾಲ್ಯದ ಫೋಟೋ ಬರುತ್ತದೆ. ನಂತರ ಜೀವನದ ಒಂದೊಂದೆ ಮಜಲುಗಳು ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟಗೊಂಡ ಲೇಖನಗಳ ತುಣುಕುಗಳನ್ನು ನೋಡಬಹುದು. ಕರೆನ್ಜಿತ್ ಕೌರ್ ನಿಂದ ಸನ್ನಿಯಾಗಿ ಬದಲಾದ ನನ್ನ ಜೀವನ ಇದೇ ಜುಲೈ 16ರಿಂದ ಎಲ್ಲರ ಮುಂದೆ ಬರಲಿದೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಹೊಸ ಪತಿಯ ಫೋಟೋ ಶೇರ್ ಮಾಡಿಕೊಂಡ ಸನ್ನಿ
ವೆಬ್ ಸಿರೀಸ್‍ನಲ್ಲಿ ತಮ್ಮ ಪಾತ್ರವನ್ನು ಸನ್ನಿ ಲಿಯೋನ್ ನಿರ್ವಹಿಸುತ್ತಿದ್ದಾರೆ. ಸನ್ನಿ ಜೀವನದ ಪ್ರಮುಖ ವ್ಯಕ್ತಿ ಪತಿ ಡೇನಿಯಲ್ ವೆಬರ್ ಪಾತ್ರವನ್ನು ದಕ್ಷಿಣ ಆಫ್ರಿಕಾದ ನಟ ಮಾರ್ಕ್ ಬಕನರ್ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತ ಸನ್ನಿ ಖಾಸಗಿ ಚಾನೆಲ್‍ನ ರಿಯಾಲಿಟಿ ಶೋನ ನಿರೂಪಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ತಮಿಳಿನ ‘ವೀರ ಮಹಾದೇವಿ’ ಎಂಬ ಐತಿಹಾಸಿಕ ಚಿತ್ರದಲ್ಲಿ ಸನ್ನಿ ಲಿಯೋನ್ ನಟಿಸುತ್ತಿದ್ದಾರೆ.