Tag: teaser

  • ಧಮ್ ಎಳೆದು, ಲಿಪ್ ಕಿಸ್ ಕೊಟ್ಟು ಕಣ್ಣೀರಿಟ್ಟ ರಚಿತಾ ರಾಮ್

    ಧಮ್ ಎಳೆದು, ಲಿಪ್ ಕಿಸ್ ಕೊಟ್ಟು ಕಣ್ಣೀರಿಟ್ಟ ರಚಿತಾ ರಾಮ್

    ಬೆಂಗಳೂರು: ಐ ಲವ್ ಯು ಸಿನಿಮಾದಲ್ಲಿ ಸಖತ್ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡು ಡಿಂಪಲ್ ಕ್ವೀನ್ ರಚಿತಾ ರಾಮ್ ಸಖತ್ ಸದ್ದು ಮಾಡಿದ್ದರು. ಈಗ ಮತ್ತೆ ತಮ್ಮ ಹೊಸ ಸಿನಿಮಾದಲ್ಲಿ ಹಿಂದೆಂದೂ ಕಾಣಿಸಿಕೊಳ್ಳ ಪಾತ್ರದಲ್ಲಿ ನಟಿಸಿ ಮತ್ತೆ ಎಲ್ಲೆಡೆ ಸುದ್ದಿಯಾಗಿದ್ದಾರೆ.

    ಹೌದು. ರಚಿತಾ ತಮ್ಮ ಹೊಸ ಚಿತ್ರ `ಏಕ್ ಲವ್ ಯಾ’ ಸಿನಿಮಾದಲ್ಲಿ ಮತ್ತೆ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಇಂದು ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಅದರಲ್ಲೂ ಬೋಲ್ಡ್ ಲುಕ್‌ನಲ್ಲಿ ಕಾಣಿಸಿಕೊಂಡ ರಚಿತಾ ಸಿಗರೇಟ್ ಸೇದಿ, ಹೀರೋಗೆ ಲಿಪ್ ಕಿಸ್ ಕೊಟ್ಟ ದೃಶ್ಯ ಎಲ್ಲೆಡೆ ಸಖತ್ ಸದ್ದು ಮಾಡುತ್ತಿದೆ.

    ರಚಿತಾ ರಾಮ್ ಸಿಗರೇಟ್ ಸೇದುವ ದೃಶ್ಯದ ಮೂಲಕ ಟೀಸರ್ ಆರಂಭವಾಗುತ್ತದೆ. ನಾಯಕ ರಾಣಾಗೆ ರಚಿತಾ ಲಿಪ್ ಕಿಸ್ ಮಾಡುವ ದೃಶ್ಯದೊಂದಿಗೆ ಟೀಸರ್ ಮುಗಿಯುತ್ತದೆ. 1 ನಿಮಿಷ 40 ಸೆಕೆಂಡ್‍ಗಳ ಟೀಸರ್ ನಲ್ಲಿ ರಾಣಾ ಆ್ಯಕ್ಷನ್ ಹಾಗೂ ರಚಿತಾ ಲುಕ್ ಎಲ್ಲರ ಗಮನ ಸೆಳೆದಿದೆ.

    `ಏಕ್ ಲವ್ ಯಾ’ ಚಿತ್ರಕ್ಕೆ ನಿರ್ದೇಶಕ ಪ್ರೇಮ್ ಆ್ಯಕ್ಷನ್ ಕಟ್ ಹೇಳಿದ್ದು, ನಟಿ ರಕ್ಷಿತಾ ಪ್ರೇಮ್ ನಿರ್ಮಾಣ ಮಾಡುತ್ತಿದ್ದು, ಅವರ ಸಹೋದರ ರಾಣಾ ನಾಯಕನಾಗಿ ಅಭಿನಯಿಸಿದ್ದಾರೆ. ಇತ್ತೀಚೆಗೆ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿ ಎಲ್ಲೆಡೆ ಸಾಕಷ್ಟು ಸದ್ದು ಮಾಡಿತ್ತು. ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಅವರ ಸಂಗೀತ ಸಂಯೋಜನೆಯಲ್ಲಿ ಚಿತ್ರದ ಹಾಡುಗಳು ಮೂಡಿಬಂದಿದ್ದು, ಟೀಸರ್ ಆರಂಭದಲ್ಲಿ ಪುಲ್ವಾಮಾದಲ್ಲಿ ಹುತಾತ್ಮರಾದ ಯೋಧರಿಗೆ ಗೌರವ ಅರ್ಪಿಸಲಾಗಿದೆ.

    ಐ ಲವ್ ಯು ಸಿನಿಮಾದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಜೊತೆ ನಟಿ ರಚಿತಾ ರಾಮ್ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಶಾಕ್ ನೀಡಿದ್ದರು. ನಂತರದ ದಿನಗಳಲ್ಲಿ ಸ್ವತಃ ರಚಿತಾ ಅವರೇ, ‘ಇನ್ನುಮುಂದೆ ಅಂಥ ದೃಶ್ಯಗಳಲ್ಲಿ ಕಾಣಿಸಿಕೊಳ್ಳಲ್ಲ’ ಎಂದು ಹೇಳಿಕೊಂಡಿದ್ದರು. ಈಗ ರಚಿತಾ ಬಿಂದಾಸ್ ಆಗಿ ಸಿಗರೇಟ್ ಸೇದುತ್ತಿರುವ ಫೊಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

    ಈ ಕುರಿತು ಪ್ರೇಮ್ ಸಹ ಖಚಿತಪಡಿಸಿದ್ದು, ಇದು ನಮ್ಮ ಏಕ್ ಲವ್ ಯಾ ಚಿತ್ರದ ಸ್ಟಿಲ್. ಹೇಗೆ ಹೊರಬಂತೋ ನಮಗೂ ಗೊತ್ತಿಲ್ಲ. ಈ ಚಿತ್ರದಲ್ಲಿ ರಚಿತಾ ರಾಮ್ ಸಿಗರೇಟ್ ಸೇದುವ ದೃಶ್ಯವಿದೆ. ಟೀಸರ್‍ನಲ್ಲಿ ಇನ್ನಷ್ಟು ಅಚ್ಚರಿಗಳು ಕಾದಿವೆ. ಹಿಂದೆಂದೂ ಕಾಣಿಸಿಕೊಳ್ಳದ ಪಾತ್ರದಲ್ಲಿ ರಚಿತಾ ಕಾಣಿಸಿಕೊಂಡಿದ್ದಾರೆ ಎಂದು ಹೇಳಿದ್ದರು.

  • ನನ್ನ ಗಮನಕ್ಕೆ ಬಾರದೇ ಎಡವಟ್ಟಾಗಿದೆ ಕ್ಷಮಿಸಿ: ವಿಜಯ್

    ನನ್ನ ಗಮನಕ್ಕೆ ಬಾರದೇ ಎಡವಟ್ಟಾಗಿದೆ ಕ್ಷಮಿಸಿ: ವಿಜಯ್

    ಬೆಂಗಳೂರು: ನಟ ದುನಿಯಾ ವಿಜಯ್ ತಮ್ಮ ಹುಟ್ಟುಹಬ್ಬದ ಸಂಭ್ರಮದ ವೇಳೆ ಕತ್ತಿಯಲ್ಲಿ ಕೇಕ್ ಕಟ್ ಮಾಡುವ ಮೂಲಕ ಹೊಸ ವಿವಾದವನ್ನು ತಮ್ಮ ಮೈಮೇಲೆ ಎಳೆದುಕೊಂಡಿದ್ದರು. ಇದೀಗ ಪಬ್ಲಿಕ್ ಟಿವಿಯಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ, ತಮ್ಮ ತಪ್ಪಿನ ಬಗ್ಗೆ ನಟ ವಿಜಯ್ ಒಪ್ಪಿಕೊಂಡಿದ್ದು, ಕ್ಷಮೆ ಕೇಳಿದ್ದಾರೆ.

    ಈ ಬಗ್ಗೆ ಮಾತನಾಡಿದ ದುನಿಯಾ ವಿಜಯ್, ಗುಂಪಿನಲ್ಲಿ ಸಾಕಷ್ಟು ಅಭಿಮಾನಿಗಳು ಬಂದಿದ್ದರು. ಈ ವೇಳೆ ನನ್ನ ಕೈಗೆ ಯಾರು ತಲ್ವಾರ್ ಕೊಟ್ರೋ ಗೊತ್ತಾಗಲಿಲ್ಲ. ಈ ವೇಳೆ ನನ್ನ ಗಮನಕ್ಕೆ ಬಾರದೇ ಎಡವಟ್ಟಾಗಿದೆ ಎಂದು ಕ್ಷಮೆ ಕೇಳಿದರು. ಇದನ್ನೂ ಓದಿ: ದುನಿಯಾ ವಿಜಿ 46ನೇ ಬರ್ತ್ ಡೇಯಲ್ಲಿ ಅವಾಂತರ- ತಲ್ವಾರ್‌ನಲ್ಲಿ ಕೇಕ್ ಕಟ್ ಮಾಡಿದ ನಟ

    ಭಾನುವಾರ ರಾತ್ರಿ ಕೇಕ್ ಕಟ್ ಮಾಡಿರುವ ವಿಡಿಯೋವನ್ನು ಗಿರಿನಗರ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. 5 ಇಂಚಿಗೂ ಉದ್ದದ ಕತ್ತಿ ಇದ್ದದ್ದು ಸಾಬೀತಾದರೆ ನಟ ದುನಿಯಾ ವಿಜಯ್ ಮೇಲೆ, ಆರ್ಮ್ಸ್ ಆ್ಯಕ್ಟ್ ಅಡಿ ಪೊಲೀಸರು ಕೇಸ್ ದಾಖಲಿಸಿಕೊಳ್ಳುವ ಸಾಧ್ಯತೆಯಿದೆ.

    ಇಂದು ದುನಿಯಾ ವಿಜಯ್ ತಮ್ಮ 46ನೇ ವರ್ಷದ ಹುಟ್ಟುಹಬ್ಬವನ್ನು ಅಭಿಮಾನಿಗಳ ಜೊತೆ ಆಚರಿಸಿಕೊಂಡರು. ಬೆಂಗಳೂರಿನ ತಮ್ಮ ನಿವಾಸದಲ್ಲಿ ಕುಟುಂಬಸ್ಥರು ಹಾಗೂ ಅಭಿಮಾನಿಗಳೊಂದಿಗೆ ಕತ್ತಿಯಲ್ಲಿ ಕೇಕ್ ಕಟ್ ಮಾಡಿ ಹುಟ್ಟುಹಬ್ಬವನ್ನು ಸೆಲಬ್ರೇಟ್ ಮಾಡಿಕೊಂಡರು. ಈ ವೇಳೆ ತಮ್ಮ ‘ಸಲಗ’ ಚಿತ್ರದ ಟೀಸರ್ ಬಿಡುಗಡೆ ಮಾಡಿದರು. ತಮ್ಮ ನೆಚ್ಚಿನ ನಟನಿಗೆ ವಿಶ್ ಮಾಡಲು ರಾಜ್ಯದ ಹಲವೆಡೆಯಿಂದ ಅಭಿಮಾನಿಗಳು ಬಂದಿದ್ದರು.

     

  • ಸ್ನೇಹದಲ್ಲಿ ಬದುಕೋದು ನನಗಿಷ್ಟ, ಇದು ಸಲಗದ ಬರ್ತ್ ಡೇ: ದುನಿಯಾ ವಿಜಿ

    ಸ್ನೇಹದಲ್ಲಿ ಬದುಕೋದು ನನಗಿಷ್ಟ, ಇದು ಸಲಗದ ಬರ್ತ್ ಡೇ: ದುನಿಯಾ ವಿಜಿ

    ಬೆಂಗಳೂರು: ಸ್ನೇಹದಲ್ಲಿ ಬದುಕೋದು ನನಗೆ ಇಷ್ಟ, ಇದು ಸಲಗದ ಹುಟ್ಟುಹಬ್ಬ ಎಂದು ನಟ ದುನಿಯಾ ವಿಜಯ್ ತಮ್ಮ ಹುಟ್ಟುಹಬ್ಬದ ಸಂಭ್ರಮದ ವೇಳೆ ಹೇಳಿದರು.

    ಇಂದು ದುನಿಯಾ ವಿಜಯ್ ತಮ್ಮ 46ನೇ ವರ್ಷದ ಹುಟ್ಟುಹಬ್ಬವನ್ನು ಅಭಿಮಾನಿಗಳ ಜೊತೆ ಆಚರಿಸಿಕೊಂಡರು. ಬೆಂಗಳೂರಿನ ತಮ್ಮ ನಿವಾಸದಲ್ಲಿ ಕುಟುಂಬಸ್ಥರು ಹಾಗೂ ಅಭಿಮಾನಿಗಳೊಂದಿಗೆ ಕತ್ತಿಯಲ್ಲಿ ಕೇಕ್ ಕಟ್ ಮಾಡಿ ಹುಟ್ಟುಹಬ್ಬವನ್ನು ಸೆಲಬ್ರೇಟ್ ಮಾಡಿಕೊಂಡರು. ಈ ವೇಳೆ ತಮ್ಮ ‘ಸಲಗ’ ಚಿತ್ರದ ಟೀಸರ್ ಬಿಡುಗಡೆ ಮಾಡಿದರು. ತಮ್ಮ ನೆಚ್ಚಿನ ನಟನಿಗೆ ವಿಶ್ ಮಾಡಲು ರಾಜ್ಯದ ಹಲವಡೆಯಿಂದ ಅಭಿಮಾನಿಗಳು ಬಂದಿದ್ದರು.

    ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ದುನಿಯಾ ವಿಜಯ್, ತುಂಬಾ ಖುಷಿಯಾಗುತ್ತಿದೆ. ಇದು ನನ್ನ ಬರ್ತ್ ಡೇ ಅನ್ನೋದಕ್ಕಿಂತ ಸಲಗ ಚಿತ್ರ ತಂಡದ ಹುಟ್ಟುಹಬ್ಬ. ಸ್ನೇಹದಲ್ಲಿ ಬದುಕುವುದು ನನಗೆ ಇಷ್ಟ. ಇದು ಸಲಗದ ಹುಟ್ಟುಹಬ್ಬ. ಚಿತ್ರದ ನಿರ್ದೇಶಕನಾದ ಮೇಲೆ ಮೊದಲ ಹುಟ್ಟುಹಬ್ಬ ಇದು. ಹೀಗಾಗಿ ಸಲಗದ ಹುಟ್ಟುಹಬ್ಬವಿದು ಎಂದರು.

    ಫೆಬ್ರವರಿ 14ಕ್ಕೆ ಮತ್ತೊಂದು ಸಾಂಗ್ ಟ್ರೈಲರ್ ಬಿಡುತ್ತೇವೆ. ನಮ್ಮ ಚಿತ್ರ ತಂಡವೇ ನನಗೆ ಬಲ ತಂದು ಕೊಟ್ಟಿದೆ. ಆ್ಯಕ್ಟಿಂಗ್, ಡೈರಕ್ಷನ್ ನಲ್ಲಿ ಎಂಜಾಯ್ ಮಾಡುತ್ತೇನೆ. ಹೀಗಾಗಿ ಈ ಬರ್ತ್ ಡೇ ತುಂಬಾ ಖುಷಿಯಾಗುತ್ತಿದೆ ಎಂದು ಸಂತಸದಿಂದ ಹೇಳಿದರು.

    ಈ ಬಾರಿ ತಲ್ವಾರ್ ನಲ್ಲಿ ಕೇಕ್ ಕತ್ತರಿಸೋ ಮೂಲಕ ದುನಿಯಾ ವಿಜಿ ಬರ್ತ್ ಡೇಯನ್ನ ವಿಶೇಷವಾಗಿ ಆಚರಿಸಿಕೊಂಡಿದ್ದು, ಈ ಮೂಲಕ ತಮ್ಮ ಬರ್ತ್ ಡೇ ಸೆಲಬ್ರೇಷನ್ ವೇಳೆ ಎಡವಟ್ಟು ಮಾಡಿಕೊಂಡಿದ್ದಾರೆ. ಯಾವುದೇ ಆಯುಧಗಳನ್ನು ಸಾರ್ವಜನಿಕವಾಗಿ ಬಳಸುವಂತಿಲ್ಲ, ಪ್ರದರ್ಶಿಸುವಂತಿಲ್ಲ. ಇದು ಆರ್ಮ್ಸ್ ಆ್ಯಕ್ಟ್ ಅಡಿ ಅಪರಾಧವಾಗುತ್ತದೆ. ಆದರೆ ಹುಟ್ಟುಹಬ್ಬದ ಸಂಭ್ರಮದ ವೇಳೆ ಈ ಎಡವಟ್ಟು ನಡೆದಿದ್ದು, ಹೊಸ ವಿವಾದವನ್ನು ತನ್ನ ಮೈಮೇಲೆ ಎಳೆದುಕೊಂಡಿದ್ದಾರೆ.

  • ಕರ್ಮದ ಬಗ್ಗೆ ಎಚ್ಚರಿಕೆ ನೀಡ್ತಿದೆ ‘ಕಾಲಾಂತಕ’

    ಕರ್ಮದ ಬಗ್ಗೆ ಎಚ್ಚರಿಕೆ ನೀಡ್ತಿದೆ ‘ಕಾಲಾಂತಕ’

    ಪ್ರಯೋಗಾತ್ಮಕ ಮತ್ತು ವಿಭಿನ್ನ ಕಥಾ ವಸ್ತು ಹೊಂದಿರುವ ಸಿನಿಮಾ ‘ಕಾಲಾಂತಕ’. ಮಾರ್ಕಂಡೇಯನ ಪುರಾಣದಲ್ಲಿ ಶಿವನನ್ನು ಕಾಲಾಂತಕ ಎಂಬ ಹೆಸರಿನಿಂದ ಕರೆಯುತ್ತಾರೆ. ಇದೋಗ ಅದೇ ಹೆಸರಿನಲ್ಲಿ ಸಿನಿಮಾವೊಂದು ಸದ್ದು ಮಾಡಿದ್ದು, ಕುತೂಹಲ ಹುಟ್ಟಿಸಿದೆ. ಸದ್ಯ ‘ಕಲಾಂತಕ’ ಸಿನಿಮಾದ ಟೀಸರ್ ರಿಲೀಸ್ ಮಾಡಿರುವ ಚಿತ್ರತಂಡ ಮನುಷ್ಯನ ಪಾಪ ಪ್ರಜ್ಞೆಯನ್ನು ನೆನಪಿಸುತ್ತಿದೆ.

    ಆ ಕತ್ತಲ ರಾತ್ರಿ, ಜೋರು ಸುಳಿವ ಮಳೆಯಲ್ಲಿ ಪಾದದ ಗುರುತು ಕಾಣಲ್ಲ. ಆದ್ರೆ ಮಾಡಿದ ಪಾಪ ಕಾಡದೆ ಬಿಡಲ್ಲ. ದೇಹ ಮತ್ತು ದ್ವೇಷ ಎರಡು ಭಿನ್ನವಾಗಿರುತ್ತೆ ಎಂಬ ವಿಷಯವನ್ನ ಸಿನಿಮಾದ ಟೀಸರ್ ನಲ್ಲಿ ತೋರಿಸಲಾಗಿದೆ. ಸಿನಿಮಾ ಟೀಸರ್ ನೋಡಿದಾಗಿನಿಂದ ಮುಂದಿನ ಅಪ್ ಡೇಟ್ ಗಾಗಿ ಕಾಯುವಂತ ಕುತೂಹಲ ಹುಟ್ಟಿದೆ.

    ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ‘ಕಾಲಾಂತಕ’ ಚಿತ್ರ, ಈಗಾಗಲೇ ಸದ್ದಿಲ್ಲದೆ ಚಿತ್ರೀಕರಣವನ್ನು ಪೂರ್ಣಗೊಳಿಸಿ, ರಿಲೀಸ್‍ಗೆ ರೆಡಿಯಾಗಿದೆ. ಈ ಹಿಂದೆ ‘ಜ್ವಲಂತಂ’ ಎನ್ನುವ ಹೆಸರಿನ ಚಿತ್ರವನ್ನು ನಿರ್ದೇಶಿಸಿದ್ದ ಅಂಬರೀಶ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ.

    ಚಿಕ್ಕಮಗಳೂರು, ಬೆಂಗಳೂರು ಸುತ್ತಮುತ್ತ ಸೇರಿದಂತೆ ಸುಮಾರು 40 ದಿನಗಳ ಕಾಲ ಸಿನಿಮಾವನ್ನು ಚಿತ್ರೀಕರಿಸಲಾಗಿದೆ. ಸದ್ಯ ಟೀಸರ್ ಮೂಲಕ ಸದ್ದು ಮಾಡುತ್ತಿರುವ ‘ಕಾಲಾಂತರ’ದಲ್ಲಿ ಯಶ್ವಂತ್ ಶೆಟ್ಟಿ, ಕಾರ್ತಿಕ್ ಸಾಮಗ, ಸುಶ್ಮಿತಾ ಜೋಷಿ, ಶ್ರೀಧರ್, ಧಮೇಂದ್ರ ಅರಸ್, ಪ್ರಕಾಶ್, ಕಡ್ಡಿಪುಡಿ ಚಂದ್ರು ಅನೇಕರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಹಾಲೇಶ್ ಛಾಯಾಗ್ರಹಣ, ಹರೀಶ್ ಕೊಮ್ಮೆ ,ಫಿನ್ನಿ ಕುರಿಯನ್ ಸಂಗೀತ ಸಂಯೋಜಿಸಿದ್ದಾರೆ. ಭಾಸ್ಕರ್ ಮೂವೀ ಲೈನ್ಸ್ ಬ್ಯಾನರ್‍ನಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ಕೆಜಿಎಫ್ ಸಿನಿಮಾದ ಜೂನಿಯರ್ ಯಶ್ ತಾಯಿ ಪಾತ್ರ ಮಾಡಿದ್ದ ಅರ್ಚನಾ ಜೋಯಿಸ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

  • ಟೀಸರ್‌ನೊಂದಿಗೆ ಬಂದ ‘ಪಾಪ್ ಕಾರ್ನ್ ಮಂಕಿ ಟೈಗರ್’- ಡಾಲಿ ಅವತಾರಕ್ಕೆ ಪ್ರೇಕ್ಷಕ ಫಿದಾ!

    ಟೀಸರ್‌ನೊಂದಿಗೆ ಬಂದ ‘ಪಾಪ್ ಕಾರ್ನ್ ಮಂಕಿ ಟೈಗರ್’- ಡಾಲಿ ಅವತಾರಕ್ಕೆ ಪ್ರೇಕ್ಷಕ ಫಿದಾ!

    ಟಗರು ಖ್ಯಾತಿಯ ಡಾಲಿ ಧನಂಜಯ್ ಅಭಿನಯದ ‘ಪಾಪ್ ಕಾರ್ನ್ ಮಂಕಿ ಟೈಗರ್’ ಚಿತ್ರದ ಮಾಸ್ ಟೀಸರ್ ರಿಲೀಸ್ ಆಗಿದೆ. ಸ್ಯಾಂಡಲ್‍ವುಡ್ ನಲ್ಲಿ ಬಾರಿ ನಿರೀಕ್ಷೆಯನ್ನು ಹುಟ್ಟು ಹಾಕಿರುವ ಸಿನಿಮಾಗಳಲ್ಲಿ ಈ ಚಿತ್ರವೂ ಕೂಡ ಒಂದು. ದುನಿಯಾ ಸೂರಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರದಲ್ಲಿ ಡಾಲಿ ಧನಂಜಯ್ ನಾನಾ ಅವತಾರಗಳಲ್ಲಿ ಮಾಸ್ ಲುಕ್ ನಲ್ಲಿ ಕಾಣಸಿಕೊಂಡಿದ್ದಾರೆ. ಟೀಸರ್ ಸಖತ್ ಥ್ರಿಲ್ಲ್ ಆಗಿದ್ದು, ಸುಕ್ಕಾ ಸೂರಿ ಮತ್ತೊಮ್ಮೆ ಈ ಚಿತ್ರದ ಮೂಲಕ ಸಿನಿ ಪ್ರೇಕ್ಷಕರಿಗೆ ಭರ್ಜರಿ ಬೋಜನ ನೀಡೋದು ಪಕ್ಕಾ ಅನ್ನಿಸ್ತಾಯಿದೆ.

    ಪಿಆರ್ ಕೆ ಯುಟ್ಯೂಬ್ ಚಾನೆಲ್ ನಲ್ಲಿ ಚಿತ್ರದ ಟೀಸರ್ ರಿಲೀಸ್ ಆಗಿದ್ದು, ಕೆಲವೇ ಗಂಟೆಗಳಲ್ಲಿ ಲಕ್ಕಕ್ಕೂ ಹೆಚ್ಚು ವೀವ್ಸ್ ಪಡೆದುಕೊಂಡಿದ್ದು ಮೆಚ್ಚುಗೆಗೆ ಪಾತ್ರವಾಗಿದೆ. ಮಾಸ್ ಚಿತ್ರಗಳಿಗೆ ಹೇಳಿ ಮಾಡಿಸಿದ ಸಂಗೀತ ನಿರ್ದೇಶಕ ಚರಣ್ ರಾಜ್ ಬ್ಯಾಗ್ರೌಂಡ್ ಸ್ಕೋರ್ ಮತ್ತೊಮ್ಮೆ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಟಗರು ಚಿತ್ರದಲ್ಲಿ ಸೂರಿ ಚರಣ್ ರಾಜ್ ಕಾಂಬಿನೇಷನ್ ಸಖತ್ ಸೌಂಡ್ ಮಾಡಿತ್ತು. ಈ ಚಿತ್ರದಲ್ಲೂ ಒಂದಾಗಿರುವ ಇವ್ರ ಕಾಂಬಿನೇಷನ್ ಮತ್ತೊಂದು ಸೂಪರ್ ಹಿಟ್ ಆಲ್ಬಂ ನೀಡೋದ್ರಲ್ಲಿ ಅನುಮಾನವೇ ಇಲ್ಲ.

    ಸುದೀರ್.ಕೆ.ಎಂ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಶೇಖರ್ ಕ್ಯಾಮೆರಾ ಕೈ ಚಳಕ ಚಿತ್ರಕ್ಕಿದೆ. ಧನಂಜಯ್ ಗೆ ಜೋಡಿಯಾಗಿ ನಿವೇದಿತಾ ಸ್ಕ್ರೀನ್ ಶೇರ್ ಮಾಡಿದ್ದು, ಅಮೃತ ಅಯ್ಯಂಗಾರ್, ಸುಧಿ, ಸಪ್ತಮಿ ಚಿತ್ರದ ತಾರಾ ಬಳಗದಲ್ಲಿದ್ದಾರೆ.

    ಪೋಸ್ಟರ್ ಹಾಗೂ ಟೈಟಲ್ ಮೂಲಕ ಕ್ಯೂರಿಯಾಸಿಟಿ ಬಿಲ್ಡ್ ಮಾಡಿದ್ದ ಪಾಪ್ ಕಾರ್ನ್ ಮಂಕಿ ಟೈಗರ್ ಟೀಸರ್ ಮೂಲಕ ಡಾಲಿ ಹಾಗೂ ನಿರ್ದೇಶಕ ಸೂರಿ ಅಭಿಮಾನಿಗಳಲ್ಲಿ ಸಂತಸ ಹೆಚ್ಚು ಮಾಡಿದೆ. ಪೋಸ್ಟ್ ಪ್ರೋಡಕ್ಷನ್ ಕೆಲಸದಲ್ಲಿ ಬ್ಯುಸಿ ಇರೋ ಚಿತ್ರತಂಡ ಸದ್ಯದಲ್ಲೇ ಚಿತ್ರಮಂದಿರಕ್ಕೆ ಬರಲಿದೆ.

  • ಯಶ್ ಫ್ಯಾನ್ಸ್‌ಗೆ ನಿರಾಸೆ, ಹುಟ್ಟುಹಬ್ಬಕ್ಕಿಲ್ಲ ಟೀಸರ್ – ನಿರ್ದೇಶಕ ಕ್ಷಮೆ

    ಯಶ್ ಫ್ಯಾನ್ಸ್‌ಗೆ ನಿರಾಸೆ, ಹುಟ್ಟುಹಬ್ಬಕ್ಕಿಲ್ಲ ಟೀಸರ್ – ನಿರ್ದೇಶಕ ಕ್ಷಮೆ

    – ಚಿತ್ರದ ಸೆಕೆಂಡ್ ಲುಕ್ ಪೋಸ್ಟರ್ ರಿಲೀಸ್

    ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್ ಚಾಪ್ಟರ್ 2’ ಸಿನಿಮಾಗೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಯಶ್ ಬರ್ತ್ ಡೇ ದಿನದಂದು ಚಿತ್ರದ ಟೀಸರ್ ರಿಲೀಸ್ ಮಾಡುವುದಾಗಿ ಚಿತ್ರತಂಡ ತಿಳಿಸಿತ್ತು. ಆದರೆ ಇದೀಗ ನಿರ್ದೇಶಕ ಪ್ರಶಾಂತ್ ನೀಲ್, ಯಶ್ ಹುಟ್ಟುಹಬ್ಬಕ್ಕೆ ‘ಕೆಜಿಎಫ್ 2’ ಚಿತ್ರದ ಟೀಸರ್ ಬಿಡುಗಡೆಯಾಗುತ್ತಿಲ್ಲ ಎಂದು ತಿಳಿಸಿದ್ದಾರೆ.

    ಜನವರಿ 8 ರಂದು ಯಶ್ ಹುಟ್ಟುಹಬ್ಬವಿದೆ. ಈ ಹಿನ್ನೆಲೆಯಲ್ಲಿ ಅಂದು ‘ಕೆಜಿಎಫ್ 2’ ಸಿನಿಮಾದ ಟೀಸರ್ ರಿಲೀಸ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿತ್ತು. ಆದರೆ ಕಾರಣಾಂತರದಿಂದ ಜನವರಿ 8 ರಂದು ಟೀಸರ್ ಬಿಡುಗಡೆ ಮಾಡಲು ಸಾಧ್ಯವಿಲ್ಲ, ಹೀಗಾಗಿ ಕ್ಷಮಿಸಿ ಎಂದು ಪ್ರಶಾಂತ್ ನೀಲ್ ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ದಾರೆ.

    “ಯಶ್ ಅವರ ಹುಟ್ಟುಹಬ್ಬಕ್ಕೆ ‘ಕೆಜಿಎಫ್ 2’ ಸಿನಿಮಾದ ಟೀಸರ್ ಬಿಡುಗಡೆಯಾಗುತ್ತಿಲ್ಲ. ಯಾಕೆಂದರೆ ಇಂದಿನವರೆಗೂ ಸಿನಿಮಾ ಶೂಟಿಂಗ್ ನಡೆದಿದೆ. ನಾವೆಲ್ಲರೂ ಶೂಟಿಂಗ್ ಮುಗಿಸಿ ಜನವರಿ 7 ರಂದು ವಾಪಸ್ ಬರುತ್ತೇವೆ. ಈ ಸಿನಿಮಾದ ಬಗ್ಗೆ ನೀವೆಲ್ಲರೂ ತುಂಬಾ ನಿರೀಕ್ಷೆ ಇಟ್ಟುಕೊಂಡಿದ್ದೀರಾ. ಹೀಗಾಗಿ ಸಿನಿಮಾ ಔಟ್ ಕಮ್ ಬಗ್ಗೆ ನಾವು ರಾಜಿ ಆಗುವುದಿಲ್ಲ. ನಿಮಗೆ ಅತ್ಯುತ್ತಮವಾದುದ್ದನ್ನು ನೀಡಲು ನಾವು ಮುಂದಾಗಿದ್ದೇವೆ. ದಯವಿಟ್ಟು ಕ್ಷಮಿಸಿ” ಎಂದು ನಿರ್ದೇಶಕ ಟ್ಟಿಟ್ಟರಿನಲ್ಲಿ ಬರೆದುಕೊಂಡಿದ್ದಾರೆ.

    ಅಷ್ಟೇ ಅಲ್ಲದೇ ಯಶ್ ಹುಟ್ಟುಹಬ್ಬದ ದಿನ ಟೀಸರ್ ಬದಲು ಸಿನಿಮಾದ ಎರಡನೇ ಪೋಸ್ಟರ್ ರಿಲೀಸ್ ಮಾಡುವುದಾಗಿ ತಿಳಿಸಿದ್ದಾರೆ. ಈ ಮೂಲಕ ಯಶ್ ಬರ್ತ್ ಡೇಗೆ ಟೀಸರ್ ನೋಡೋಣ ಎಂದು ಕಾಯುತ್ತಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಸದ್ಯಕ್ಕೆ ಆಂಧ್ರಪ್ರದೇಶದಲ್ಲಿ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಇತ್ತೀಚೆಗಷ್ಟೆ ನಟ ಯಶ್ ಕೂಡ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ.

  • ಗಮನ ಸೆಳೆಯುತ್ತಿದೆ ‘ಫೋರ್ ವಾಲ್ಸ್’ ಫಸ್ಟ್ ಲುಕ್- ‘ಮಂತ್ರಂ’ ನಿರ್ದೇಶಕನ 2ನೇ ಪ್ರಯತ್ನ

    ಗಮನ ಸೆಳೆಯುತ್ತಿದೆ ‘ಫೋರ್ ವಾಲ್ಸ್’ ಫಸ್ಟ್ ಲುಕ್- ‘ಮಂತ್ರಂ’ ನಿರ್ದೇಶಕನ 2ನೇ ಪ್ರಯತ್ನ

    ‘ಮಂತ್ರಂ’ ಚಿತ್ರದ ಮೂಲಕ ಖ್ಯಾತಿಗಳಿಸಿದ ನಿರ್ದೇಶಕ ಸಂಗಮೇಶ್ ಎಸ್ ಸಜ್ಜನ್ ಎರಡುವರೆ ವರ್ಷದ ನಂತರ ಮತ್ತೆ ನಿರ್ದೇಶನಕ್ಕೆ ಮರಳಿದ್ದಾರೆ. ಎರಡನೇ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಕೂಡ ಮಾಡಿದ್ದಾರೆ. ಚಿತ್ರದ ಟೈಟಲ್ ವಿಭಿನ್ನವಾಗಿದ್ದು ಫಸ್ಟ್ ಲುಕ್ ಪೋಸ್ಟರ್ ಎಲ್ಲೆಡೆ ಮೆಚ್ಚುಗೆ ಪಡೆದುಕೊಂಡಿದೆ.

    ‘ಮಂತ್ರಂ’ ಸಿನಿಮಾದಿಂದ ಖ್ಯಾತಿ ಸಿಕ್ಕಿದರು ಮತ್ತೊಂದು ಹೊಸ ಪ್ರಯತ್ನಕ್ಕೆ ಸಮಯ ತೆಗೆದುಕೊಂಡು ಸಕಲ ಸಿದ್ಧತೆಯೊಂದಿಗೆ ಮತ್ತೆ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ ಸಂಗಮೇಶ್ ಎಸ್ ಸಜ್ಜನ. ಉತ್ತರ ಕರ್ನಾಟಕ ಮೂಲದವರಾದ ಸಂಗಮೇಶ್ ಎಸ್ ಸಜ್ಜನ ಮೂಲತಃ ರಂಗಭೂಮಿ ಕಲಾವಿದರು. ಹಲವಾರು ರಂಗ ನಾಟಕ, ಬೀದಿ ನಾಟಕಗಳನ್ನ ನಿರ್ದೇಶಿಸಿ ಅನುಭವ ಇರುವ ಇವರು, ಸಿನಿಮಾ ನಿರ್ದೇಶಕನಾಗಿ ಹೆಸರು ಮಾಡುತ್ತಿದ್ದಾರೆ.

    ಇದೀಗ ಇವರ ಎರಡನೇ ಚಿತ್ರ ‘ಫೋರ್ ವಾಲ್ಸ್ & ಟೂ ನೈಟೀಸ್’ ಚಿತ್ರದ ಪಸ್ಟ್ ಲುಕ್ ಪೋಸ್ಟರ್ ಎಲ್ಲರ ಗಮನ ಸೆಳೆದಿದೆ. ಅಂದ್ಹಾಗೆ ಇದು ಕುಟುಂಬ ಸಮೇತ ಕುಳಿತು ನೋಡಬಹುದಾದ ಚಿತ್ರವಾಗಿದ್ದು, ತಂದೆ ಹಾಗೂ ಮಕ್ಕಳ ಕಥೆ ಚಿತ್ರದಲ್ಲಿದೆಯಂತೆ. ಅಚ್ಯುತ್ ಕುಮಾರ್, ದತ್ತಣ್ಣ, ನೀನಾಸಂ ಭಾಸ್ಕರ್, ಜಾನ್ಹವಿ ಜೋಶಿ, ಶ್ರೇಯಾ ಶೆಟ್ಟಿ, ಆಂಚಲ್, ರಘು ರಾಮಪ್ಪ ಚಿತ್ರದ ತಾರಾ ಬಳಗದಲ್ಲಿದ್ದಾರೆ. ನಾಯಕಿ ಪಾತ್ರದಲ್ಲಿ ಡಾ.ಪವಿತ್ರ ನಟಿಸುತ್ತಿದ್ದು, ಸಿನಿಮಾ ಇವರ ಹೊಸ ಪ್ರಯತ್ನ.

    ತೆಲುಗಿನ ರುದ್ರಮ್ಮದೇವಿ, ಗರುಡವೇಗ ಚಿತ್ರಗಳಿಗೆ ಸಿನಿಮಾಟೋಗ್ರಾಫರ್ ಆಗಿ ಖ್ಯಾತಿಗಳಿಸಿರುವ ವಿಡಿಆರ್ ಈ ಚಿತ್ರಕ್ಕೆ ಸಿನಿಮಾಟೋಗ್ರಾಫರ್ ಆಗಿರೋದು ವಿಶೇಷ. ಇನ್ನೂ ಚಿತ್ರಕ್ಕೆ ಆನಂದ ರಾಜಾ ವಿಕ್ರಮ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.

    ಎಸ್.ವಿ. ಪಿಕ್ಚರ್ಸ್ ಬ್ಯಾನರ್ ಅಡಿ ಚಿತ್ರ ನಿರ್ಮಾಣವಾಗುತ್ತಿದ್ದು, ಟಿ.ವಿಶ್ವನಾಥ್ ನಾಯಕ್ ‘ಪೋರ್ ವಾಲ್ಸ್’ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಸದ್ಯ ಶೇಕಡಾ ಎಂಬತ್ತು ಭಾಗ ಶೂಟಿಂಗ್ ಕಂಪ್ಲೀಟ್ ಮಾಡಿರೋ ‘ಫೋರ್ ವಾಲ್ಸ್’ ಚಿತ್ರತಂಡ ಸದ್ಯದಲ್ಲೇ ಟೀಸರ್ ಬಿಡುಗಡೆ ಮಾಡಲಿದೆ.

  • ಇದು ಕಾರ್ಪೋರೇಟ್ ಮಂದಿಯ ಕನಸಿನ ಮೋಕ್ಷಾ!

    ಇದು ಕಾರ್ಪೋರೇಟ್ ಮಂದಿಯ ಕನಸಿನ ಮೋಕ್ಷಾ!

    ಮೋಕ್ಷ, ಸ್ಯಾಂಡಲ್‍ವುಡ್ ನಲ್ಲಿ ಟೈಟಲ್ ಮೂಲಕವೇ ಕ್ಯೂರಿಯಾಸಿಟಿ ಮೂಡಿಸ್ತಿರೋ ಸಿನಿಮಾ. ಕಾರ್ಪೊರೇಟ್ ಕಂಪೆನಿಗಳಲ್ಲಿ ಜಾಹೀರಾತುಗಳನ್ನು ರೂಪಿಸುತ್ತಾ ಆ ವಲಯದಲ್ಲಿ ಭಾರೀ ಜನಪ್ರಿಯತೆ ಹೊಂದಿರುವ ಕ್ರಿಯಾಶೀಲ ತಂಡವೊಂದು ಮೋಕ್ಷ ಚಿತ್ರದ ಮೂಲಕ ಗಾಂಧಿನಗರಕ್ಕೆ ಎಂಟ್ರಿ ಕೊಟ್ಟಿದೆ. ಸದ್ಯ ಈ ಚಿತ್ರದ ಟೀಸರ್ ರಿಲೀಸ್ ಆಗ್ತಿದ್ದು, ಸಿನಿಮಾ ಮೇಲಿನ ನಿರೀಕ್ಷೆಯನ್ನ ಡಬ್ಬಲ್ ಮಾಡಿದೆ.

    ರವಿಶಂಕರ್ ವಾಯ್ಸ್ ನಲ್ಲಿ ಮೂಡಿ ಬಂದಿರೋ ಟೀಸರ್ ನಲ್ಲಿ ಸಿನಿಮಾದ ಸ್ವಲ್ಪವೂ ಇಂಟು ಬಿಟ್ಟು ಕೊಟ್ಟಿಲ್ಲ. ಭಾರೀ ಡೈಲಾಗ್ ನಿಂದಲ್ಲೇ ಶುರುವಾಗೋ ಟೀಸರ್ ನಲ್ಲಿ ಯಾರದ್ದು ಮುಖ ರಿವೀಲ್ ಮಾಡಿಲ್ಲ. ಇದು ಸಿನಿಪ್ರೇಕ್ಷಕರಿಗೆ ಸಿನಿಮಾದ ಮೇಲಿನ ಕಾತುರ ಹೆಚ್ಚಾಗುವಂತೆ ಮಾಡಿದೆ.

    ಅಂದಹಾಗೇ ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾವಾಗಿದ್ದು, ಸಮರ್ಥ್ ನಾಯಕ್ ಈ ಚಿತ್ರದ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ಮೋಹನ್ ಧನರಾಜ್ ಹೀರೋ ಆಗಿ ಬಣ್ಣ ಹಚ್ಚಿದ್ರೆ, ಮೋಹನ್‍ಗೆ ಜೋಡಿಯಾಗಿ ಆರಾಧ್ಯ ಲಕ್ಷ್ಮಣ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನು, ಮೋಕ್ಷ ಚಿತ್ರಕ್ಕೆ ಗುರುಪ್ರಶಾಂತ್ ರೈ, ಜೋನ್ ಜೋಸೆಫ್ ಹಾಗೂ ಕಿರಣ್ ಹಂಪಾಪುರ್ ಛಾಯಾಗ್ರಹಣವಿದೆ.

  • ಆನೆಗೊಂದಿ ಉತ್ಸವ: ನಿಸರ್ಗ ದೃಶ್ಯಗಳನ್ನೊಳಗೊಂಡ ಟೀಸರ್ ಬಿಡುಗಡೆ

    ಆನೆಗೊಂದಿ ಉತ್ಸವ: ನಿಸರ್ಗ ದೃಶ್ಯಗಳನ್ನೊಳಗೊಂಡ ಟೀಸರ್ ಬಿಡುಗಡೆ

    ಕೊಪ್ಪಳ: ಗಂಗಾವತಿ ತಾಲೂಕಿನ ಐತಿಹಾಸಿಕ ಹಾಗೂ ಧಾರ್ಮಿಕ ತಾಣವಾದ ಆನೆಗೊಂದಿಯಲ್ಲಿ ಕೊಪ್ಪಳ ಜಿಲ್ಲಾಡಳಿತದಿಂದ ಜನವರಿ 9 ಹಾಗೂ 10ರಂದು ನಡೆಸಲು ಉದ್ದೇಶಿಸಿರುವ ಆನೆಗೊಂದಿ ಉತ್ಸವ-20ರ ಟೀಸರ್ ಅನ್ನು ಜಿಲ್ಲಾಡಳಿತ ಬಿಡುಗಡೆ ಮಾಡಿದೆ.

    ವಿಜಯನಗರ ಸಾಮ್ರಾಜ್ಯದ ಮೊದಲ ರಾಜ್ಯಧಾನಿ ಎಂದು ಗುರುತಿಸಿಕೊಂಡಿರುವ, ಶಿಲಾಯುಗದ ಇತಿಹಾಸ ಹೊಂದಿದ ಹಾಗೂ ಪೌರಾಣಿಕೆ ಹಿನ್ನೆಲೆಯ ಆನೆಗೊಂದಿ ಹಾಗೂ ಸುತ್ತಲಿನ ಐತಿಹಾಸಕ ಸ್ಮಾರಕಗಳನ್ನು ಟೀಸರ್ ನಲ್ಲಿ ಸೇರಿಸಲಾಗಿದೆ. ಜೊತೆಗೆ ಸಣಾಪುರದ ಕಲ್ಲಿನನ ಸೇತುವೆ, ಬೋಟಿಂಗ್, ಐತಿಹಾಸಿಕ ಪ್ರಸಿದ್ಧ ಅಂಜನಾದ್ರಿ ಬೆಟ್ಟ, ತುಂಗಭದ್ರಾ ನದಿ ಸೇರಿದಂತೆ ಇನ್ನಿತರ ದೃಶ್ಯ ಹೀಗೆ ಚಿತ್ರಿಸಲಾಗಿದೆ.

    ಉತ್ಸವದ ಅಂಗವಾಗಿ ನಡೆಯುವ ಕಾರ್ಯಕ್ರಮಗಳ ಮಾಹಿತಿಯನ್ನೂ ಇದರಲ್ಲಿ ನೀಡಲಾಗಿದೆ. ನಾಡಿನ ಅನೇಕ ಕಲಾವಿದರು, ಕಲಾತಂಡಗಳು ಉತ್ಸವಕ್ಕೆ ಮೆರಗು ತರಲಿವೆ. ಅಷ್ಟೇ ಅಲ್ಲದೆ ಉತ್ಸವದಲ್ಲಿ ಸಾಂಪ್ರದಾಯಿಕ ಸ್ಪರ್ಧೆಗಳಾದ ಹಗ್ಗ ಜಗ್ಗಾಟ, ಕಬಡ್ಡಿ, ಮಲ್ಲಗಂಬ, ಕುಸ್ತಿ, ಕಲ್ಲುಗುಂಡು ಎತ್ತುವುದು, ಸಂಗ್ರಾಣಿ ಕಲ್ಲು ಎತ್ತುವುದು ಸೇರಿದಂತೆ ಅನೇಕ ಕ್ರೀಡೆಗಳು ನಡೆಯಲಿವೆ.

  • 24ರಂದು ಬಿಡುಗಡೆಯಾಗಲಿದೆ ‘ಮೋಕ್ಷ’ ಟೀಸರ್!

    24ರಂದು ಬಿಡುಗಡೆಯಾಗಲಿದೆ ‘ಮೋಕ್ಷ’ ಟೀಸರ್!

    ಬೇರೆಬೇರೆ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುವ ಕ್ರಿಯೇಟಿವ್ ಮನಸುಗಳೇ ಆಗಾಗ ತಾಜಾ ಅನುಭೂತಿ ತುಂಬುವಂಥಾ ಸಿನಿಮಾಗಳನ್ನು ರೂಪಿಸಿ ಪ್ರೇಕ್ಷಕರ ಮುಂದೆ ಅನಾವರಣಗೊಳಿಸುತ್ತಾ ಬರುತ್ತಿವೆ. ಇದೀಗ ಕಾರ್ಪೊರೇಟ್ ಕಂಪೆನಿಗಳ ಜಾಹೀರಾತುಗಳನ್ನು ರೂಪಿಸುತ್ತಾ ಆ ವಲಯದಲ್ಲಿ ಭಾರೀ ಜನಪ್ರಿಯತೆ, ಬೇಡಿಕೆ ಹೊಂದಿರುವ ಕ್ರಿಯಾಶೀಲ ತಂಡವೊಂದು ಮೋಕ್ಷ ಎಂಬ ಚಿತ್ರದ ಮೂಲಕ ಆಗಮಿಸಿದೆ.

    ಈಗಾಗಲೇ ಒಂದಷ್ಟು ಬಗೆಯಲ್ಲಿ ಸುದ್ದಿ ಕೇಂದ್ರದಲ್ಲಿರುವ ಈ ಸಿನಿಮಾದ ಟೀಸರ್ ಇದೇ ತಿಂಗಳ 24ರಂದು ಬಿಡುಗಡೆಯಾಗಲಿದೆ. ಇದು ಸಸ್ಪೆನ್ಸ್ ಥ್ರಿಲ್ಲರ್ ಕಥಾನಕವನ್ನೊಳಗೊಂಡಿರುವ ಚಿತ್ರ. ಹಾಗೆಂದಾಕ್ಷಣ ಇದು ಈಜಾನರಿಗೊಳಪಡುವ ಸಿದ್ಧಸೂತ್ರದ ಚಿತ್ರ ಎಂದುಕೊಳ್ಳಬೇಕಿಲ್ಲ. ಹೊಸ ತಂಡವೆಂದ ಮೇಲೆ ಇಲ್ಲಿ ಹೊಸತನ ಇದ್ದೇ ಇರುತ್ತದೆ. ಅಂಥಾದ್ದೊಂದು ಸ್ಪಷ್ಟ ವಿಚಾರಗಳೇ ಚಿತ್ರತಂಡದ ಕಡೆಯಿಂದ ಹೊರಬೀಳುತ್ತಿವೆ.

    ಅಂದಹಾಗೆ ಇದು ಸಮರ್ಥ್ ನಾಯಕ್ ನಿರ್ದೇಶನದಲ್ಲಿ ಮೂಡಿಬಂದಿರುವ ಮೊದಲ ಚಿತ್ರ. ಅವರು ಕಾರ್ಪೋರೇಟ್ ವಲಯದಲ್ಲಿ ಕ್ರಿಯಾಶೀಲವಾದ, ಅದ್ದೂರಿ ಜಾಹೀರಾತುಗಳನ್ನು ನಿರ್ದೇಶನ ಮಾಡುವ ಮೂಲಕ ಸೈ ಅನ್ನಿಸಿಕೊಂಡಿರುವವರು. ಹೀಗೆ ಕಾರ್ಪೊರೇಟ್ ವಲಯದಲ್ಲಿ ಚೆಂದದ ಜಾಹೀರಾತುಗಳನ್ನು ನಿರ್ದೇಶನ ಮಾಡುತ್ತಲೇ ಸಮರ್ಥವಾದೊಂದು ತಂಡವನ್ನು ಸಮರ್ಥ್ ಕಟ್ಟಿದ್ದರು. ಅದರ ತುಂಬಾ ಸಿನಿಮಾ ಧ್ಯಾನಹೊಂದಿದ್ದವರೇ ತುಂಬಿಕೊಂಡಿದ್ದರು. ಈ ಕಾರಣದಿಂದಲೇ ಕಾರ್ಪೋರೇಟ್ ಜಾಹೀರಾತನ್ನು ತಾವುಗುರಿ ಸೇರುವ ಹೆಜ್ಜೆಯೆಂದೇ ಪರಿಗಣಿಸಿ ಆ ಕ್ರೇತದಲ್ಲಿ ತನ್ನನ್ನು ತಾನು ಪ್ರೂವ್‍ಮಾಡಿಕೊಂಡಿರುವ ಈ ತಂಡವೀಗ ಮೋಕ್ಷ ಎಂಬ ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣಮಾಡಿದೆ. ಇಲ್ಲಿ ಕಥೆಗೇ ಚಿತ್ರತಂಡ ನಾಯಕನ ಸ್ತಾನವನ್ನು ಕೊಟ್ಟಿದೆ. ಮೋಹನ್ ಧನರಾಜ್‍ಮತ್ತು ಆರಾಧ್ಯ ಲಕ್ಷ್ಮಣ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಇದೇ 24ರಂದುಮೋಕ್ಷದ ಟೀಸರ್ ಲಾಂಚ್ ಆಗಲಿದೆ.